ಆಲೂರು ವೆಂಕಟರಾಯರು

ಆಲೂರು ವೆಂಕಟರಾಯರು ಕನ್ನಡ ಸಾಹಿತ್ಯಲೋಕದ ಪ್ರಮುಖರಲ್ಲೊಬ್ಬರು. ಕನ್ನಡ ಸಾಹಿತ್ಯ, ಪತ್ರಿಕೋದ್ಯಮ, ಸಾಂಸ್ಕೃತಿಕ ವಲಯದಲ್ಲಿ ನೀಡಿರುವ ಕಾಯಕಲ್ಪದಿಂದಾಗಿ ಕನ್ನಡ ಕುಲಪುರೋಹಿತರು ಎಂದು ಗೌರವಾನ್ವಿತ ಸ್ಥಾನ ಪಡೆದವರಾಗಿದ್ದಾರೆ.

ಉತ್ತರ ಕೊರಿಯಾ

ಪೂರ್ವ ಏಶಿಯಾದ ಕೊರಿಯ ಪರ್ಯಾಯ ದ್ವೀಪದ ಉತ್ತರ ಭಾಗದಲ್ಲಿರುವ ಉತ್ತರ ಕೊರಿಯ (ಪ್ರಜಾತಾಂತ್ರಿಕ ಕೊರಿಯಾ ಜನ ಗಣತಂತ್ರ ) ಪೂರ್ವ ಏಷಿಯಾದ ಪ್ರಮುಖ ದೇಶಗಳಲ್ಲಿ ಒಂದು.

ಕರ್ನಾಟಕ ಸಂಗೀತ

ಕರ್ನಾಟಕ ಸಂಗೀತ (ಸಂಸ್ಕೃತ: कर्णाटक संगीतम्) ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತ. ಭಾರತದ ಶಾಸ್ತ್ರೀಯ ಸಂಗೀತದ ಇನ್ನೊಂದು ಮುಖ್ಯ ಪದ್ಧತಿಯಾದ ಹಿಂದುಸ್ತಾನಿ ಸಂಗೀತದಿಂದ ಇದರ ಮುಖ್ಯ ವ್ಯತ್ಯಾಸವೆಂದರೆ ವ್ಯವಸ್ಥಿತ ರಚನೆಗಳ ಹೆಚ್ಚಿನ ಪ್ರಾಮುಖ್ಯತೆ ಮತ್ತು ಇನ್ನೂ ಬಿಗಿಯಾದ ನಿಯಮಗಳ ಅಸ್ತಿತ್ವ. ಕರ್ನಾಟಕ ಸಂಗೀತ ಹೆಚ್ಚು-ಕಡಿಮೆ ಸಂಪೂರ್ಣವಾಗಿ ಭಕ್ತಿಪ್ರಧಾನವಾದದ್ದು. ರಚನೆಗಳು ಸಾಮಾನ್ಯವಾಗಿ ಹಿಂದೂ ದೇವ-ದೇವತೆಗಳನ್ನು ಕುರಿತವು. ಜಾತ್ಯತೀತ ರಚನೆಗಳು ಸಾಮಾನ್ಯವಾಗಿ ಹಾಸ್ಯಪ್ರಧಾನ, ಮಕ್ಕಳ ಹಾಡುಗಳು, ಇಲ್ಲವೇ ಚಿತ್ರಗೀತೆಗಳು.

ಗಂಗೂಬಾಯಿ ಹಾನಗಲ್

(೧೯೧೩, ಮಾರ್ಚ್, ೫-೨೦೦೯, ಜುಲೈ, ೨೧)

ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಜಾನ್ ಟ್ರಂಪ್ ರವರು 1946 ರ ಜೂನ್ 14 ರಂದು ಜನಿಸಿದರು,ಇವರು ಅಮೆರಿಕದ ಪ್ರಭಾವಿ ಉದ್ಯಮಿ ಹಾಗೂ ೨೦೧೬ರ ಅಮೇರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿರುವ ಅಭ್ಯರ್ಥಿ. ೨೦೧೭ರ ಜನವರಿ ೨೦ರಂದು ಅಮೇರಿಕದ ೪೫ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇವರು ಲೇಖಕರಾಗಿ ಮತ್ತು ಮಾಧ್ಯಮ ಲೋಕದ ಖ್ಯಾತಿಯನ್ನು ಪಡೆದ್ದಿದ್ದರು.ಅವರು ಟ್ರಂಪ್ ಸಂಸ್ಥೆಯ ಅಧ್ಯಕ್ಷ ಮತ್ತು ಟ್ರಂಪ್ ಎಂಟರ್ಟೈನ್ಮೆಂಟ್ ರೆಸಾರ್ಟ್ಸ್ ನ ಸ್ಥಾಪಕರಾಗಿದ್ದರು.ಟ್ರಂಪ್ ವೃತ್ತಿಜೀವನದಲ್ಲಿ, ಮುದ್ರೆಹಾಕುವುದರಲ್ಲಿ ಅವರ ಪ್ರಯತ್ನಗಳು, ಜೀವನ, ಮತ್ತು ನೇರ್ ನುಡಿಗಳು ಅವರನ್ನು ಬಹಳ ವರ್ಷಗಳ ಕಾಲ ಒಬ್ಬ ಖ್ಯಾತ ವ್ಯಕ್ತಿಯನ್ನಾಗಿ ಮಾಡಿತು. ಎನ್ಬಿಸಿ ರಿಯಾಲಿಟಿ ಶೋನಲ್ಲಿ ಅವರು ಕಂಡ ಜನಪ್ರಿಯತೆ ಅವರನ್ನು ಇನ್ನು ಉತ್ತುಂಗಕ್ಕೆ ಯೇರಿಸಿತು.

ಧಾರವಾಡ

ಧಾರವಾಡ ಕರ್ನಾಟಕ ರಾಜ್ಯದ ಒಂದು ಜಿಲ್ಲೆ; ಧಾರವಾಡ ನಗರ ಈ ಜಿಲ್ಲೆಯ ಕೇಂದ್ರಸ್ಥಳ. ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರಗಳು.ಕರ್ನಾಟಕದಲ್ಲಿ ಬೆಂಗಳೂರಿನ ನಂತರ ಎರಡನೇ ಅತಿ ದೊಡ್ಡ ನಗರ ಎಂದರೆ ಹುಬ್ಬಳ್ಳಿ-ಧಾರವಾಡ ನಗರ, ಹುಬ್ಬಳ್ಳಿ ವಾಣಿಜ್ಯ ನಗರವಾದರೆ ಧಾರವಾಡ ಶೈಕ್ಷಣಿಕ ಜಿಲ್ಲೆ, ಧಾರವಾಡ ಅತಿ ತಂಪು ವಾತಾವರಣ ಹೊಂದಿರುವ ನಗರ, ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಆಕಾಶವಾಣಿ, ಕಾನೂನು ವಿಶ್ವವಿದ್ಯಾಲಯ, ಹೈಕೋರ್ಟ್, ನೈರುತ್ಯ ರೈಲ್ವೆ ಘಟಕ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ಐ ಐ ಟಿ ,ಮುಂತಾದವುಗಳ ಆಗರ ಧಾರವಾಡ, ಧಾರವಾಡ’ದ ಮೂಲ ರೂಪ ‘ದಾರವಾಡ’. ಬಹಳಷ್ಟು ಚರ್ಚಿತವಾಗಿರುವ ಧಾರವಾಡ ಗ್ರಾಮದ ನಿಪ್ಪತ್ತಿಯು ಸಹ ವ್ಯಕ್ತಿನಾಮದ್ದಾಗಿರುವ ಸಾಧ್ಯತೆ ಹೆಚ್ಚಿದೆ. ಧಾರವಾಡ ಜಿಲ್ಲಾ ಗೆಝೆಟಿಯರ್‍ದಲ್ಲಿ ವಿಜಯನಗರದ ರಾಮರಾಜನ ಕಾಲದ ಧಾರರಾವ್ ಎಂಬುವನು ೧೪೦೩ರಲ್ಲಿ ಕೋಟೆ ಕಟ್ಟಿಸಿದ್ದರ ನಿಮಿತ್ತ ಈ ಊರಿಗೆ ಧಾರವಾಡ ಎಂಬ ಹೆಸರು ಬಂದಿತೆಂದು ತಿಳಿಸುತ್ತದೆ. ಆದರೆ ಕ್ರಿ.ಶ.೧೧೧೭ ಧಾರವಾಡ ಶಾಸನದಲ್ಲಿಯೇ ‘ದಾರವಾಡ’ ಎಂಬ ಹೆಸರು ಬಳಕೆಗೊಂಡಿದೆ.

ಬೆಳಗಾವಿ

ಬೆಳಗಾವಿ ಉತ್ತರ ಕರ್ನಾಟಕದಲ್ಲಿ ಇರುವ ನಗರ ಮತ್ತು ಜಿಲ್ಲೆ. ಕರ್ನಾಟಕದ ಅತೀ ದೊಡ್ಡ ಜಿಲ್ಲೆ ಹಾಗು ಪ್ರಮುಖ ನಗರಗಳಲ್ಲೊಂದು. ರಾಜ್ಯದ ಎರಡನೇ ರಾಜಧಾನಿ ಎಂದು ನೇಮಿಸಲ್ಪಟ್ಟ ಮಹಾನಗರ (ಅಂಗೀಕಾರವಾಗಿಲ್ಲ). ಇಂಡಾಲ್ (ಭಾರತೀಯ ಅಲ್ಯೂಮಿನಿಯಮ್ ಕಂಪನಿ) ಬೆಳಗಾವಿಯಲ್ಲಿದೆ. ಇದಲ್ಲದೆ ಭಾರತೀಯ ಸೇನಾ ಪಡೆಗಳಿಗೆ ಸಂಬಂಧಪಟ್ಟ ಕೆಲವು ತರಬೇತಿ ಶಿಬಿರಗಳು ಮತ್ತು ಭಾರತೀಯ ವಾಯುಸೇನೆಯ ಒಂದು ವಿಮಾನ ನಿಲ್ದಾಣ ಬೆಳಗಾವಿಯಲ್ಲಿವೆ.

ಮಹಾತ್ಮ ಗಾಂಧಿ

ಮೋಹನ್‌ದಾಸ್ ಕರಮ್‌ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮)(2nd October 1869 ) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು. ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.

ಮಾರ್ಚ್

ಮಾರ್ಚ್ - ಗ್ರೆಗೋರಿಯನ್ ಕ್ಯಾಲೆಂಡರ್‌ನ ಮೂರನೆಯ ತಿಂಗಳು. ಇದರಲ್ಲಿ ಮೂವತ್ತೊಂದು ದಿನಗಳು ಇರುತ್ತವೆ.

ಸವಾಯಿ ಗಂಧರ್ವ

ಹುಬ್ಬಳ್ಳಿಗೆ ೧೨ ಮೈಲಿದೂರದಲ್ಲಿರುವ,'ಕುಂದಗೋಳ','ಜಮಖಂಡಿ ಸಂಸ್ಥಾನ'ಕ್ಕೆ ಸೇರಿತ್ತು. ಅಲ್ಲಿನ ಆಡಳಿತ ಭಾಷೆ ಮರಾಠಿ. ಇಂತಹ ಪರಿಸರದಲ್ಲಿ ಹಿಂದೂಸ್ತಾನೀ ಸಂಗೀತದಲ್ಲಿ ದೇಶದ ಮನೆಮಾತಾಗಿ ಪ್ರಸಿದ್ಧರಾಗಿದ್ದ, ಸವಾಯಿ ಗಂಧರ್ವರು,'ಜನಿಸಿದರು. ಅವರ ಬಾಲ್ಯದ ಹೆಸರು, 'ರಾಮಚಂದ್ರ ಗಣೇಶ ಕುಂದಗೋಳಕರ್', ಎಂದು. ಅವರ ತಂದೆ, 'ಗಣೇಶರಾವ್' ಹತ್ತಿರದ ’ಸಂಶಿ’ಊರಿನಲ್ಲಿ ಜನಿಸಿದವರು. ತಾಯಿ, ಧಾರವಾಡದ ಹತ್ತಿರದ ’ಅಮ್ಮಿನಹಾಳ್’ನವರು. ಜನವರಿ, ೧೯, ೧೮೮೬ ರಲ್ಲಿ ಜನಿಸಿದರು. 'ಗಣೇಶರಾವ್', 'ಬೆನಕನ ಹಳ್ಳಿ'ಯ 'ನಾಡಿಗೇರ ರಂಗನಗೌಡರ ಬಳಿ' 'ಕಾರಕೂನಿಕೆ' ಮಾಡುತ್ತಿದ್ದರು. ಅವರಿಗೂ ಬಾಲ್ಯದಿಂದಲೂ ಸಂಗೀತದಲ್ಲಿ ಆಸಕ್ತಿ. ಬಾಲ್ಯದ ದಿನಗಳಲ್ಲಿ ರಾಮಚಂದ್ರ ಗಣೇಶರು, ಸ್ವಾಗತ ಗೀತೆ, ಪಲ್ಲಕ್ಕಿ ಸೇವೆಯ ಸಮಯದಲ್ಲಿ ಭಜನೆ ಹಾಡು, ಮುಂತಾದವುಗಳನ್ನು ಹಾಡುತ್ತಿದ್ದರು.

ಹುಬ್ಬಳ್ಳಿ

ಹುಬ್ಬಳ್ಳಿ(ಗಂಡು ಮೆಟ್ಟಿದ ನಾಡು) ಕರ್ನಾಟಕದ ಉತ್ತರ ಭಾಗದಲ್ಲಿರುವ ಪ್ರಮುಖ ವಾಣಿಜ್ಯ ನಗರ.ಬೆಂಗಳೂರಿನ ನಂತರ ಕರ್ನಾಟಕದ ಎರಡನೇ ಅತಿ ದೊಡ್ಡ ನಗರ ಹುಬ್ಬಳ್ಳಿ-ಧಾರವಾಡ, ನಗರವು ಧಾರವಾಡ ಜಿಲ್ಲೆಯಲ್ಲಿದೆ. ಬೆಂಗಳೂರು - ಪುಣೆ ರಾಷ್ಟ್ರೀಯ ಹೆದ್ದಾರಿ- 4 ರಲ್ಲಿ, ಬೆಂಗಳೂರಿನಿಂದ ಸುಮಾರು 410 ಕಿ.ಮೀ ಹಾಗೂ ಪುಣೆಯಿಂದ ಸುಮಾರು 430 ಕಿ.ಮೀ ದೂರದಲ್ಲಿದೆ. 2011ರ ಭಾರತದ ಜನಗಣತಿಯ ಪ್ರಕಾರ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಜನಸಂಖ್ಯೆ 943,788.ಅದರಲ್ಲಿ 474,518 ಪುರುಷರು ಮತ್ತು 469,270 ಮಹಿಳೆಯರಿದ್ದಾರೆ.

ಇನ್ನೊಂದು ಭಾಷೆಯಲ್ಲಿ ಓದು