೧೯೯೪

ಪ್ರಮುಖ ಘಟನೆಗಳು

ಜನನ

ನಿಧನ

ಎಂ.ಆರ್.ವಿಠಲ್

ಎಂ. ಆರ್. ವಿಠಲ್ (ಜುಲೈ ೧೯, ೧೯೦೮ - ಅಕ್ಟೋಬರ್ ೧೨, ೧೯೯೪) ಪ್ರಖ್ಯಾತ ಚಲನಚಿತ್ರ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ.

ಐಶ್ವರ್ಯಾ ರೈ

ಐಶ್ವರ್ಯಾ ರೈ (ಜನನ: ನವೆಂಬರ್ ೧, ೧೯೭೩) ಭಾರತೀಯ ಸಿನೆಮಾ ನಟಿ ಮತ್ತು ಮಾಡೆಲ್. ೧೯೯೪ ರಲ್ಲಿ ಭಾರತ ಸುಂದರಿ ಸ್ಪರ್ಧೆಯನ್ನು ಗೆದ್ದ ನಂತರ ಅದೇ ವರ್ಷ ವಿಶ್ವಸುಂದರಿ ಸ್ಪರ್ಧೆಯನ್ನು ಗೆದ್ದರು.

ಕುವೆಂಪು

ಕುವೆಂಪು, ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ ೨೯, ೧೯೦೪ - ನವೆಂಬರ್ ೧೧, ೧೯೯೪), ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು

ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ 'ಯುಗದ ಕವಿ ಜಗದ ಕವಿ' ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು. ಕನ್ನಡದ ಎರಡನೆಯ 'ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿಯನ್ನೂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು. ಕರ್ನಾಟಕ ಸರ್ಕಾರ ಕೊಡಮಾಡುವ ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಪಂಪ ಪ್ರಶಸ್ತಿಗಳನ್ನು ಮೊದಲ ಬಾರಿಗೆ ಪಡೆದವರು.

ಗಿರೀಶ್ ಕಾರ್ನಾಡ್

ಗಿರೀಶ್ ಕಾರ್ನಾಡ್ (೧೯ ಮೇ ೧೯೩೮ - ೧೦ ಜೂನ್ ೨೦೧೯) ಭಾರತದ ನಾಟಕಕಾರರು, ಲೇಖಕರು, ರಂಗಕರ್ಮಿ, ಸಿನಿಮಾನಟ,ನಿರ್ದೇಶಕ, ಚಿಂತಕ ಹಾಗೂ ಹೋರಾಟಗಾರರು. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಅವರು ತಮ್ಮ ಸಾಹಿತ್ಯ ಮತ್ತು ಇತರ ಕೃತಿಗಳನ್ನು ರಚಿಸಿದ್ದಾರೆ.

ಜನವರಿ ೧

ಜನವರಿ ೧ - ವರ್ಷದ ಹಾಗು ಜನವರಿ ತಿಂಗಳಿನ ಮೊದಲ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೬೪ ದಿನಗಳು(ಅಧಿಕ ವರ್ಷದಲ್ಲಿ ೩೬೫ ದಿನಗಳು) ಇರುತ್ತವೆ.

ವರ್ಷದ ಮೊದಲ ದಿನವಾಗಿ ಬಹುತೇಕ ದೇಶಗಳಲ್ಲಿ ಆಚರಿಸಲ್ಪಡುತ್ತದೆ.

ಟೆಂಪ್ಲೇಟು:ಜನವರಿ ೨೦೧೯

ಜಯಂತಿ

ಕನ್ನಡ ಮಾಸಪತ್ರಿಕೆ ಜಯಂತಿ ಕುರಿತಾದ ಮಾಹಿತಿಗೆ ಈ ಲೇಖನ ನೋಡಿ.

ಕನ್ನಡ ಚಿತ್ರರಂಗದ ಪ್ರಮುಖ ನಾಯಕಿಯರಲ್ಲಿ ಒಬ್ಬರು.

೧೯೬೮ರಲ್ಲಿ ತೆರೆ ಕಂಡ ವೈ,ಅರ್,ಸ್ವಾಮಿ ನಿರ್ದೇಶನದ "ಜೇನು ಗೂಡು " ಚಿತ್ರದ ಮೂಲಕ ಚಿತ್ರ ರಂಗ ಪ್ರವೇಶಿಸಿದ ಜಯಂತಿಯವರ ಮೂಲ ಹೆಸರು"ಕಮಲ ಕುಮಾರಿ.ಅದಕ್ಕಿಂತ ಮುನ್ನ "ಜಗದೇಕ ವೀರನ ಕಥೆ "ಚಿತ್ರದಲ್ಲಿ ಸಣ್ಣ ಪಾತ್ರ ವೊಂದರಲ್ಲಿ ಅಭಿನಯಿಸಿದ್ದಾರೆ.ಒಟ್ಟು ಆರು ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ ಜಯಂತಿ ಕನ್ನಡದ ೧೯೦ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.ನಿರ್ಮಾಪಕಿಯೂ ನಿರ್ದೇಶಕಿಯೂ ಆಗಿರುವ ಇವರು ೧೯೬೫ರ "ಮಿಸ್ ಲೀಲಾವತಿ" ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಬಂದಿದೆ."ಎರಡು ಮುಖ"(೧೯೬೯),ಮನಸ್ಸಿನಂತೆ ಮಾಂಗಲ್ಯ"(೧೯೭೬),"ಧರ್ಮ ದಾರಿ ತಪ್ಪಿತು"(೧೯೮೧),ಮಸಣದ ಹೂವು (೧೯೮೫),"ಆನಂದ್ "(೧೯೮೬) ಚಿತ್ರಗಳ ಅಭಿನಯಕ್ಕಾಗಿ ಐದು ಬಾರಿ ರಾಜ್ಯ ಪ್ರಶಸ್ತಿ ಗಳಿಸಿದ್ದಾರೆ.ಎಡಕಲ್ಲು ಗುಡ್ಡದ ಮೇಲೆ ಚಿತ್ರದಲ್ಲಿ ಜಯಂತಿಯವರು ಕಾಮತೃಷೆಯಿಂದ ಬಳಲುವ ಹೆಣ್ಣಾಗಿ ಮೊದಲ ಭಾರಿಗೆ ವಿಶಿಷ್ಟ ಅಭಿನಯ ನೀಡಿದ್ದಾರೆ.

ಜೈಲ್ ಸಿಂಗ್

ಗ್ಯಾನಿ ಜೈಲ್ ಸಿಂಗ್ ( ಮೇ ೦೫, ೧೯೧೬ - ಡಿಸೆಂಬರ್ ೨೫,೧೯೯೪) ಭಾರತದ ರಾಷ್ಟ್ರಪತಿಗಳಲ್ಲೊಬ್ಬರು.

ಇವರು ೧೯೮೨ - ೧೯೮೭ ಅವಧಿಯಲ್ಲಿ ಭಾರತದ ರಾಷ್ಟ್ರಪತಿಗಳಾಗಿದ್ದರು.

ದಪ್ಪಗಿನ ಅಕ್ಷರ

ದೇವಿಕಾ ರಾಣಿ

ದೇವಿಕಾ ರಾಣಿ (ಮಾರ್ಚ್ ೩೦, ೧೯೦೮ – ಮಾರ್ಚ್ ೯, ೧೯೯೪¬) ಭಾರತೀಯ ಚಿತ್ರರಂಗದ ಪ್ರತಿಷ್ಟಿತ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಮೊಟ್ಟಮೊದಲು ಸ್ವೀಕರಿಸಿದ ಕೀರ್ತಿವಂತರು. ಅವರು ಮಹಾನ್ ಕಲಾವಿದೆಯಾಗಿ ಹಾಗೂ ತಮ್ಮ 'ಮುಂಬಯಿ ಟಾಕೀಸ್' ಚಿತ್ರ ನಿರ್ಮಾಣ ಸಂಸ್ಥೆಯ ಮೂಲಕ ನಿರ್ಮಿಸಿದ ಶ್ರೇಷ್ಠ ಚಿತ್ರಗಳಿಂದ ಭಾರತದಲ್ಲಷ್ಟೇ ಅಲ್ಲದೆ ಹೊರ ದೇಶಗಳಲ್ಲೂ ಪ್ರಸಿದ್ಧಿ ಪಡೆದವರು. .

ಯು.ಆರ್.ಅನಂತಮೂರ್ತಿ

ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಅವರು ಚಿಂತಕರೂ ವಿಮರ್ಶಕರೂ ಆಗಿ ಪ್ರಸಿದ್ಧರಾಗಿದ್ದವರು. ಇಂಗ್ಲೀಷ್ ಪ್ರಾಧ್ಯಾಪಕರಾಗಿ ವೃತ್ತಿಜೀವನ ಪ್ರಾರಂಭಿಸಿದ ಅವರು ಅನಂತರ ಶಿಕ್ಷಣ ಸೇರಿದಂತೆ ಮುಂತಾದ ಕ್ಷೇತ್ರಗಳಲ್ಲಿ ಅನೇಕ ಮುಖ್ಯ ಹುದ್ದೆಗಳನ್ನು ನಿರ್ವಹಿಸಿದರು. ಇವರ ಸಮಗ್ರ ಸಾಹಿತ್ಯಕ್ಕಾಗಿ ೧೯೯೪ರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದರು.

ರವಿಚಂದ್ರನ್

ವೀರಾಸ್ವಾಮಿ ರವಿಚಂದ್ರನ್ ಕನ್ನಡ ಚಿತ್ರರಂಗದಲ್ಲಿ ವಿ.ರವಿಚಂದ್ರನ್ ಎನ್ನುವ ಹೆಸರಿನಲ್ಲಿ ಪ್ರಸಿದ್ಧರು. ಕನ್ನಡ ಚಿತ್ರರಂಗಕ್ಕೆ ಶ್ರೀಮಂತಿಕೆ ಮತ್ತು ಬೆಳ್ಳಿಪರದೆಗೆ ಹೊಸರಂಗು ತಂದ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಅನೇಕ ರೀಮೇಕ್ ಸಿನಿಮಾಗಳನ್ನು ಕನ್ನಡಕ್ಕೆ ತಂದರೂ ಮೂಲಸಿನಿಮಾದ ಛಾಯೆ ಇರದ ತಮ್ಮದೇ ಆದ ಶೈಲಿಯಲ್ಲಿ ಕನ್ನಡ ಸೊಗಡಿನ ಸೂಪರ್ ಹಿಟ್ ಗಳನ್ನು ನೀಡಿದ್ದಾರೆ.

ರಾಜ್‌ಕುಮಾರ್

ಡಾ. ರಾಜ್‌ಕುಮಾರ್ ಪ್ರಸಿದ್ದ ಚಲನಚಿತ್ರ ನಟರು. ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು. ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ.

ವನಿತಾ ವಾಸು

ವನಿತಾ ವಾಸು ಕನ್ನಡ ಚಿತ್ರರಂಗ ಮತ್ತು ಕಿರುತೆರೆಯ ಜನಪ್ರಿಯ ಅಭಿನೇತ್ರಿ. ೧೯೮೦ರ ದಶಕದ ಕೊನೆಯಿಂದ ೧೯೯೦ರ ದಶಕದ ಮಧ್ಯದವರೆಗೆ ಮೋಹಕ ಪಾತ್ರಗಳಿಗೆ ಹೆಸರಾಗಿದ್ದ ಮೋಹಕ ತಾರೆ. ಆಗಂತುಕ(೧೯೮೭) ಚಿತ್ರದಲ್ಲಿ ನಾಯಕಿಯಾಗಿ ಚಿತ್ರ ಜೀವನ ಪ್ರಾರಂಭಿಸಿದ ವನಿತಾ ಕಾಡಿನ ಬೆಂಕಿ(೧೯೮೮), ತರ್ಕ(೧೯೮೯), ಗೋಲ್‍ಮಾಲ್ ರಾಧಾಕೃಷ್ಣ(೧೯೯೦), ಕಾಲಚಕ್ರ(೧೯೯೧) ಮತ್ತು ನಾಗಮಂಡಲ(೧೯೯೭)ಗಳಂತಹ ವಿಭಿನ್ನ ಚಿತ್ರಗಳಲ್ಲಿನ ವೈವಿಧ್ಯಮಯ ಪಾತ್ರಗಳನ್ನು ಸಮರ್ಥವಾಗಿ ಪೋಷಿಸಿ ಸಿನಿರಸಿಕರ ಮೆಚ್ಚುಗೆ ಗಳಿಸಿದ್ದಾರೆ. ಕಿರುತೆರೆ ಧಾರಾವಾಹಿಗಳಲ್ಲೂ ಅಭಿನಯಿಸಿರುವ ವನಿತಾ ಮನೆಯೊಂದು ಮೂರು ಬಾಗಿಲು ಧಾರಾವಾಹಿಯ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದಾರೆ.

ವಿಜಯ್

ವಿಜಯ್ ಎಂಬ ಹೆಸರಿನಿಂದ ಪ್ರಸಿದ್ಧರಾದ ಬಿ. ವಿಜಯಾ ರೆಡ್ಡಿ- ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕರಲ್ಲೊಬ್ಬರು. ವಿ. ಸೋಮಶೇಖರ್ ಜೊತೆ ಸೇರಿ ಚಿತ್ರ ನಿರ್ಮಾಣ ಸಂಸ್ಥೆ ತೆರೆದ ವಿಜಯ್

ಮಯೂರ (ಚಲನಚಿತ್ರ) ಸೇರಿದಂತೆ ಸಾಹಸ ಪ್ರಧಾನ ಮತ್ತು ಐತಿಹಾಸಿಕ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಕನ್ನಡ ಚಲನಚಿತ್ರಗಳೊಂದಿಗೆ ತೆಲುಗು ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ.

ವಿನಯಾ ಪ್ರಸಾದ್

ವಿನಯಾ ಪ್ರಸಾದ್ ( ಇವರ ಹೆಸರು ವಿನಯಾ ಪ್ರಕಾಶ್ ಎಂದೂ ಕೆಲವೆಡೆ ಬಳಕೆಯಲ್ಲಿದೆ) ದಕ್ಷಿಣ ಭಾರತದ ಜನಪ್ರಿಯ ಚಿತ್ರನಟಿ. ಇವರು ದೂರದರ್ಶನ ವಾಹಿನಿಗಳಲ್ಲಿಯೂ ನಟಿಸುತ್ತಾರೆ. ೧೯೮೮ ರಲ್ಲಿ ಜಿ.ವಿ. ಅಯ್ಯರ್ ರವರ ಮಧ್ವಾಚಾರ್ಯ ಚಿತ್ರದಲ್ಲಿ ಒಂದು ಸಣ್ಣ ಪಾತ್ರದೊಂದಿಗೆ ಚಿತ್ರರಂಗ ಪ್ರವೇಶಿಸಿದರು.ಮುಂದೆ ಅನಂತನಾಗ್ ಎದುರಿಗೆ 'ಗಣೇಶನ ಮದುವೆ' ಚಿತ್ರದಲ್ಲಿ ನಾಯಕಿ ಆದರು. ಚಿತ್ರವು ಯಶಸ್ವಿ ಅಯಿತು . ಮುಂದೆ ಅವರು ಕನ್ನಡ, ತೆಲುಗು,ತಮಿಳು ಮತ್ತು ಮಲಯಾಳಂ ಭಾಷೆಗಳ ೬೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು. ಅವರ ಪ್ರಮುಖ ಕನ್ನಡ ಚಿತ್ರಗಳಲ್ಲಿ ನೀನು ನಕ್ಕರೆ ಹಾಲು ಸಕ್ಕರೆ, ಗಣೇಶನ ಮದುವೆ, ಗೌರಿ ಗಣೇಶ , ಮೈಸೂರು ಜಾಣ ಮತ್ತು ಸೂರ್ಯೋದಯ ಸೇರಿವೆ. ಆತಂಕ ( ೧೯೯೩) ಮತ್ತು ಬಣ್ಣದ ಹೆಜ್ಜೆ (೨೦೦೧) ಚಿತ್ರಗಳಲ್ಲಿ ಅವರ ನಟನೆಗಾಗಿ ಕರ್ನಾಟಕ ರಾಜ್ಯದ ಉತ್ತಮನಟಿ ಪ್ರಶಸ್ತಿಗಳು ದೊರಕಿವೆ. ನಾಯಕಿಯಾಗಿ ಯಶಸ್ವೀ ವೃತ್ತಿಯ ನಂತರ ಅವರ ಚಾರಿತ್ರ್ಯಪಾತ್ರಗಳನ್ನು ದಕ್ಷಿಣ ಭಾರತದ ಭಾಷೆಯ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು ಬೇಡಿಕೆಯಲ್ಲಿರುವ ನಟಿಯಾಗಿದ್ದಾರೆ. ಅವರು ಉತ್ತಮ ಗಾಯಕಿಯೂ ಅಲ್ಲದೆ ನೃತ್ಯಗ್ರಾಮದಲ್ಲಿ ವಸಂತಹಬ್ಬ ಮತ್ತು ಮೈಸೂರು ದಸರಾದಂಥ ಕಾರ್ಯಕ್ರಮಗಳನ್ನು ನಡೆಸಿಯೂ ಕೊಡುತ್ತಾರೆ.

ಇವರು ಉಡುಪಿ ಯಲ್ಲಿ ಹುಟ್ಟಿ ಬೆಳೆದವರು. ಈಗ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

ಶಿವಕುಮಾರ್ ಶರ್ಮಾ

ಪಂಡಿತ್ ಶಿವಕುಮಾರ್ ಶರ್ಮಾ(ಜನನ:ಜನವರಿ ೧೩,೧೯೩೮) ಇವರು ಹಿಂದುಸ್ತಾನಿ ಸಂಗೀತ ಶೈಲಿಯ ಸಂತೂರ್ ವಾದ್ಯದ ವಾದಕರು. ಸಂತೂರ್ ಇದು ಕಾಶ್ಮೀರ ಕೊಳ್ಳದ ಒಂದು ಜಾನಪದ ವಾದ್ಯ, ಇದನ್ನು ಕೆತ್ತಿದ ಕಟ್ಟಿಗೆಯ ತುಂಡುಗಳಿಂದ ನುಡಿಸಲಾಗುತ್ತದೆ.

ಸುರೇಶ್ ಹೆಬ್ಳೀಕರ್

ಸುರೇಶ ಹೆಬ್ಳೀಕರ ಒಬ್ಬ ಕನ್ನಡ ಚಿತ್ರನಿರ್ಮಾಪಕರು , ನಿರ್ದೇಶಕರು ಮತ್ತು ನಟರು. ಅವರು ಪರಿಸರವಾದಿಯೂ ಹೌದು. ಅವರು ಅನೇಕ ಗಮನಾರ್ಹ ಕನ್ನಡ ಚಿತ್ರಗಳನ್ನು ನಿರ್ಮಿಸಿದ್ದು ಅವುಗಳಲ್ಲಿ 'ಕಾಡಿನ ಬೆಂಕಿ' ಚಿತ್ರವು ರಾಷ್ಟ್ರ ಮಟ್ಟದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನೂ , 'ಉಷಾ ಕಿರಣ' ಚಿತ್ರವು ಫಿಲ್ಮ್ ಫೇರ್ ಪ್ರಶಸ್ತಿಯನ್ನೂ ಗೆದ್ದಿವೆ. ಭಾವುಕ ಪ್ರಣಯ ಚಿತ್ರಿತವಾಗಿರುವ ಅಸಾಮಾನ್ಯ ಕಥಾಹಂದರವನ್ನು ಅವರ ಚಿತ್ರಗಳು ಹೊಂದಿರುತ್ತವೆ. ಇದಕ್ಕೆ ಅವರ ರಮ್ಯತೆಯುಳ್ಳ ಬಾಲ್ಯ ಕಾರಣ ಎನ್ನಲಾಗಿದೆ.

ಅವರ ಚಿತ್ರಕತೆಗಳಲ್ಲಿ ಮನೋವಿಕಾರ ಸಮಸ್ಯೆಗಳು ಮತ್ತು ವೈಜ್ಞಾನಿಕ ಮನೋಭಾವ ಎದ್ದು ಕಾಣುತ್ತಿದ್ದು ಅದಕ್ಕೆ ಮನೋವಿಶ್ಲೇಷಕರೂ ನಿರ್ಮಾಪಕರೂ ಆದ ಡಾ. ಅಶೋಕ್ ಪೈ ಅವರೊಂದಿಗಿನ ತಮ್ಮ ಸಹವಾಸ ಕಾರಣ ಎಂದು ಹೆಬ್ಳಿಕರ್ ವಿನಯದಿಂದ ಹೇಳುತ್ತಾರೆ. ಅವರು ಸ್ವತಃ ಪರಿಸರವಾದಿಯಾಗಿದ್ದು , ಅವರ ಚಿತ್ರಗಳು ನಿಸರ್ಗ ಮತ್ತು ಅದರ ಸಂರಕ್ಷಣೆ ಯನ್ನು ಚಿತ್ರಿಸುತ್ತವೆ .

ಹಂಸಲೇಖ

ಹಂಸಲೇಖ (ಜನನ: ಜೂನ್ ೨೩, ೧೯೫೧) ಅವರು ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಇವರ ಮೂಲ ಹೆಸರು "ಗಂಗರಾಜು". ೧೯೭೩ ರಲ್ಲಿ "ತ್ರಿವೇಣಿ" ಚಿತ್ರದ "ನೀನಾ ಭಗವಂತ" ಹಾಡಿನ ಮೂಲಕ ಗೀತ ರಚನೆಕಾರರಾಗಿ ಚಿತ್ರರಂಗವನ್ನು ಪ್ರವೇಶಿಸಿದ ಇವರು ಇದುವರೆಗೆ ಸಂಗೀತ , ಸಾಹಿತ್ಯ ಒದಗಿಸಿರುವ ಚಿತ್ರಗಳು ಮುನ್ನೂರಕ್ಕೂ ಹೆಚ್ಚು. ಕನ್ನಡ ಮಾತ್ರವಲ್ಲದೆತಮಿಳು, ತೆಲುಗು, ಮಲೆಯಾಳಂ ಭಾಷಾ ಚಿತ್ರಗಳಿಗೂ ಸಂಗೀತ ನೀಡಿದ್ದಾರೆ.

೧೯೯೧

೧೯೯೧ ಗ್ರೆಗೋರಿಯನ್ ಪಂಚಾಂಗದಲ್ಲಿ ೨೦ನೇ ಶತಮಾನದ ೯೧ನೇ ವರ್ಷ.

ಇತರ ಭಾಷೆಗಳು

This page is based on a Wikipedia article written by authors (here).
Text is available under the CC BY-SA 3.0 license; additional terms may apply.
Images, videos and audio are available under their respective licenses.