೧೭೭೧

ವರ್ಷ ೧೭೭೧ (MDCCLXXI) ಗ್ರೆಗೋರಿಯನ್ ಪಂಚಾಂಗಮಂಗಳವಾರ ಆರಂಭವಾದ ಸಾಮಾನ್ಯ ವರ್ಷವಾಗಿತ್ತು.

ಶತಮಾನಗಳು: ೧೭ನೇ ಶತಮಾನ - ೧೮ನೇ ಶತಮಾನ - ೧೯ನೇ ಶತಮಾನ
ದಶಕಗಳು: ೧೭೪೦ರ ೧೭೫೦ರ ೧೭೬೦ರ  - ೧೭೭೦ರ -  ೧೭೮೦ರ  ೧೭೯೦ರ  ೧೮೦೦ರ
ವರ್ಷಗಳು: ೧೭೬೮ ೧೭೬೯ ೧೭೭೦ - ೧೭೭೧ - ೧೭೭೨ ೧೭೭೩ ೧೭೭೪
೧೭೭೧ ಇತರ ಪಂಚಾಂಗಗಳಲ್ಲಿ
ಗ್ರೆಗೋರಿಯನ್ ಪಂಚಾಂಗ 1771
MDCCLXXI
ಆಬ್ ಊರ್ಬೆ ಕೋಂಡಿಟಾ 2524
ಆರ್ಮೀನಿಯಾದ ಪಂಚಾಂಗ 1220
ԹՎ ՌՄԻ
ಬಹಾಈ ಪಂಚಾಂಗ -73 – -72
ಬರ್ಬರ್ ಪಂಚಾಂಗ 2721
ಬೌದ್ಧ ಪಂಚಾಂಗ 2315
ಬರ್ಮಾದ ಪಂಚಾಂಗ 1133
ಬಿಜಾಂಟೀನದ ಪಂಚಾಂಗ 7279 – 7280
ಈಜಿಪ್ಟ್ ಮೂಲದ ಕ್ರೈಸ್ತರ ಪಂಚಾಂಗ 1487 – 1488
ಈಥಿಯೋಪಿಯಾದ ಪಂಚಾಂಗ 1763 – 1764
ಯಹೂದೀ ಪಂಚಾಂಗ 5531 – 5532
ಹಿಂದು ಪಂಚಾಂಗಗಳು
 - ವಿಕ್ರಮ ಶಕೆ 1826 – 1827
 - ಶಾಲಿವಾಹನ ಶಕೆ 1693 – 1694
 - ಕಲಿಯುಗ 4872 – 4873
ಹಾಲಸೀನ್ ಪಂಚಾಂಗ 11771
ಇರಾನ್‌‌ನ ಪಂಚಾಂಗ 1149 – 1150
ಇಸ್ಲಾಮ್ ಪಂಚಾಂಗ 1184 – 1185
ಕೊರಿಯಾದ ಪಂಚಾಂಗ 4104
ಥೈಲ್ಯಾಂಡ್‌‌ನ ಸೌರಮಾನ ಪಂಚಾಂಗ 2314
ಆಂತರಿಕ ವ್ಯಕ್ತಿತ್ವ ಅಸ್ವಸ್ಥತೆ

ಆಂತರಿಕ ವ್ಯಕ್ತಿತ್ವ ಅಸ್ವಸ್ಥತೆ (ಬಿಪಿಡಿ ) ಇದು ಒಬ್ಬ ವ್ಯಕ್ತಿಯಲ್ಲಿನ ವ್ಯಕ್ತಿತ್ವ ಕ್ರಿಯೆಯ ಒಂದು ದೀರ್ಘ ಅವಧಿಯ ಅಸ್ತವ್ಯಸ್ಥತೆಯ ಒಂದು ವ್ಯಕ್ತಿತ್ವದ ಅಸ್ವಸ್ಥತೆ (ಸಾಮಾನ್ಯವಾಗಿ ಹದಿನೆಂಟು ವರ್ಷ ವಯಸ್ಸಿನ ನಂತರ ಕಂಡುಬರುವ ಅಸ್ವಸ್ಥತೆ, ಆದಾಗ್ಯೂ ಇದು ಚಿಕ್ಕ ಮಕ್ಕಳಲ್ಲಿಯೂ ಕೂಡ ಕಂಡುಬರುತ್ತದೆ), ಇದು ವ್ಯಕ್ತಿಯ ಲಹರಿಯ ಆಳ ಮತ್ತು ಬದಲಾವಣೆಗಳ ಮೂಲಕ ಗುಣಲಕ್ಷಣಗಳನ್ನು ವರ್ಣಿಸಲ್ಪಡುತ್ತದೆ.

ಈ ಅಸ್ವಸ್ಥತೆಯು ಲಹರಿಯಲ್ಲಿನ ಅಸ್ಥಿರತೆಯ ಅಸಾಮಾನ್ಯವಾದ ಹಂತಗಳು; ಕಪ್ಪು ಮತ್ತು ಬಿಳುಪು ಆಲೋಚನೆ; ಅಥವಾ ಬೇರ್ಪಡುವಿಕೆ ಮುಂತಾದವುಗಳನ್ನು ಒಳಗೊಳ್ಳುತ್ತದೆ; ಈ ಅಸ್ವಸ್ಥತೆಯು ಅನೇಕ ವೇಳೆ ತನ್ನಷ್ಟಕ್ಕೇ ತಾನೇ ಆದರ್ಶೀಕರಣ ಮತ್ತು ಅಪಮೌಲ್ಯೀಕರಣ ಹಂತಗಳಲ್ಲಿ ವ್ಯಕ್ತವಾಗಲ್ಪಡುತ್ತದೆ, ಅದೇ ರೀತಿಯಾಗಿ ಅಸ್ತವ್ಯಸ್ತವಾಗಿರುವ ಮತ್ತು ಅಸ್ಥಿರವಾದ ಪರಸ್ಪರ ಸಂಬಂಧಗಳಲ್ಲಿ, ಸ್ವಯಂ-ಚಿತ್ರಣಗಳಲ್ಲಿ, ಸ್ವವ್ಯಕ್ತಿತ್ವಗಳಲ್ಲಿ, ಮತ್ತು ನಡುವಳಿಕೆಗಳಲ್ಲಿಯೂ ಕೂಡ ಗೋಚರವಾಗುತ್ತದೆ; ಹಾಗೆಯೇ ಒಬ್ಬ ವ್ಯಕ್ತಿಯ ಸ್ವಯಂ ಗ್ರಹಿಕೆಗಳಲ್ಲಿಯೂ ಕೂಡ ಭಂಗವನ್ನುಂಟುಮಾಡುತ್ತದೆ. ತೀವ್ರವಾದ ದೃಷ್ಟಾಂತಗಳಲ್ಲಿ, ಸ್ವಯಂ ಗ್ರಹಿಕೆಯಲ್ಲಿ ಈ ಅಡ್ಡಿಪಡಿಸುವಿಕೆಯು ವಿಘಟನೆಯ ಅವಧಿಗಳಿಗೆ ಕಾರಣವಾಗುತ್ತವೆ.

ಬಿಪಿಡಿ ವಿಭಜನೆಯು ಇತರರನ್ನು ಆದರ್ಶೀಕರಿಸುವ ಮತ್ತು ದೆವ್ವದಂತೆ ನಿರೂಪಿಸುವ ಹಂತಗಳ ನಡುವಣ ಬದಲಾವಣೆಯನ್ನು ಒಳಗೊಳ್ಳುತ್ತದೆ. ಲಹರಿಯ ಅಡ್ಡಿಪಡಿಸುವಿಕೆಗಳ ಜೊತೆ ಸಂಯೋಜನಗೊಳ್ಳಲ್ಪಟ್ಟ ಇದು, ಕುಟುಂಬ, ಗೆಳೆಯರು ಮತ್ತು ಸಹ-ಕೆಲಸಗಾರರ ಜೊತೆಗಿನ ಸಂಬಂಧವನ್ನು ಶಿಥಿಲಗೊಳಿಸಬಹುದು (ನಾಶಮಾಡಬಹುದು). ಬಿಪಿಡಿ ಅಡ್ಡಿಪಡಿಸುವಿಕೆಗಳೂ ಕೂಡ ಸ್ವಯಂ-ಹಾನಿಯನ್ನೂ ಕೂಡ ಒಳಗೊಂಡಿರುತ್ತವೆ. ಚಿಕಿತ್ಸೆಯ ಅನುಪಸ್ಥಿತಿಯಲ್ಲಿ, ಇದರ ಲಕ್ಷಣಗಳು ಇನ್ನೂ ಹೆಚ್ಚಾಗಬಹುದು, (ತೀವ್ರವಾದ ದೃಷ್ಟಾಂತಗಳಲ್ಲಿ) ಇದು ಆತ್ಮಹತ್ಯೆ ಪ್ರಯತ್ನಕ್ಕೂ ಕಾರಣವಾಗಬಹುದು.

ಜಗತ್ತಿನಾದ್ಯಂತ ವೈದ್ಯರುಗಳಲ್ಲಿ ಮತ್ತು ರೋಗಿಗಳಲ್ಲಿ ಶಬ್ದಗಳ ಪರಿಭಾಷೆ ಮತ್ತು ಬಾರ್ಡರ್‌ಲೈನ್ ಎಂಬ ಶಬ್ದದ ಬಳಕೆಯ ಬಗ್ಗೆ ನಿರಂತರವಾದ ಚರ್ಚೆಯು ನಡೆಯುತ್ತಿದೆ, ಮತ್ತು ಕೆಲವರು ಈ ಅಸ್ವಸ್ಥತೆಯು ಬೇರೆ ಹೆಸರನ್ನು ನೀಡಲ್ಪಡಬೇಕು ಎಂಬುದನ್ನೂ ಕೂಡ ಸೂಚಿಸಿದರು. ಐಸಿಡಿ-೧೦ ಕೈಪಿಡಿಯು ಈ ಅಸ್ವಸ್ಥತೆಗೆ ಒಂದು ಪರ್ಯಾಯವಾದ ವ್ಯಾಖ್ಯಾನ ಮತ್ತು ಪರಿಭಾಷಿಕ ಶಬ್ದವನ್ನು ಹೊಂದಿದೆ, ಅದು ಈ ಅಸ್ವಸ್ಥತೆಯನ್ನು ಭಾವನಾತ್ಮಕವಾಗಿ ಅಸ್ಥಿರವಾದ ವ್ಯಕ್ತಿತ್ವ ಅಸ್ವಸ್ಥತೆ ಎಂದು ವ್ಯಾಖ್ಯಾನಿಸುತ್ತದೆ.

ಬಿಪಿಡಿಯ ರೋಗನಿದಾನವು ಮನುಷ್ಯರನ್ನು ವರ್ಣಿಸುತ್ತದೆ ಮತ್ತು ನಿಕೃಷ್ಟಾರ್ಥಕ ಮತ್ತು ಭೇದಾತ್ಮಕ ಪದ್ಧತಿಗಳನ್ನು ಬೆಂಬಲಿಸುತ್ತದೆ ಎಂಬುದರ ಬಗ್ಗೆ ಅಲ್ಲಿ ಸಂಬಂಧಿತವಾದ ಕಾಳಜಿಯಿದೆ. ಇದು ಆಂತರಿಕ ವ್ಯಕ್ತಿತ್ವ ಅಸ್ವಸ್ಥತೆಯಿಂದ ಬಳಲುತ್ತಿರುವ ರೋಗಿಗಳಲ್ಲಿ ಮತ್ತು ಅವರ ಕುಟುಂಬಗಳಲ್ಲಿ ನಿರ್ದಿಷ್ಟವಾದ ರೋಗನಿದಾನಗಳು, ಪರಿಣಾಮಕಾರಿಯಾದ ಚಿಕಿತ್ಸೆಗಳು, ಮತ್ತು ನಿಖರವಾದ ಮಾಹಿತಿಗಳ ಕೊರತೆಯಿದೆ ಎಂಬ ಭಾವನೆ ಬರುವುದು ಸರ್ವೇ ಸಾಮಾನ್ಯವಾಗಿದೆ. ಇದು ನಿಜವೆಂದು ತಿಳಿಯುವುದಕ್ಕೆ ಇರುವ ಪ್ರಮುಖವಾದ ಸಾಕ್ಷ್ಯವೆಂದರೆ ಈ ಅಸ್ವಸ್ಥತೆಯು ಈ ರೋಗದಿಂದ ಬಳಲುತ್ತಿರುವ ಕುಟುಂಬಗಳಲ್ಲಿ ತನ್ನ ಉಗಮವನ್ನು ಪಡೆಯುತ್ತದೆ ಮತ್ತು ನಿರ್ದಿಷ್ಟವಾಗಿ ಆಕ್ಸಿಸ್ II ಸೇರಿಕೊಳ್ಳುವುದರ ಬದಲಾಗಿ ಇದು ಆಕ್ಸಿಸ್ IV ಅಂಶಗಳ ಜೊತೆ ಸಂಬಂಧವನ್ನು ಹೊಂದಿದೆ. ಭಾವನಾತ್ಮಕ, ಹಾಗೆಯೇ ಚಿಕಿತ್ಸಕ ಪರಿಹಾರವು, ಬಿಪಿಡಿಯು ಬಾಲ್ಯಾವಸ್ಥೆಯಲ್ಲಿ ದೈಹಿಕ ಆಘಾತ ಘಟನೆಗಳಿಗೆ ಮತ್ತು ದೈಹಿಕ ಆಘಾತ-ನಂತರದ ಒತ್ತಡ ಅಸ್ವಸ್ಥತೆಗಳಿಗೆ (ಪಿಟಿಎಸ್‌ಡಿ) ಸಂಬಂಧಿತವಾಗಿದೆ ಎನ್ನುವುದರ ಮೂಲಕ ಪಡೆಯಬಹುದಾಗಿದೆ, ಮತ್ತು ಇದರ ಬಗ್ಗೆ ಇನ್ನೂ ಹೆಚ್ಚು ತಿಳಿಯಲ್ಪಟ್ಟಿದೆ.

ಕಾಮಾಟಿಪುರ, ಮುಂಬೈ

'ಕಾಮಾಟಿ ಪುರ'ವೆಂದು (Marathi: कामाठीपुरा) ರೂಢಿಯಲ್ಲಿರುವ ಈ ಪರಿಸರ, ಮುಂಬಯಿನಗರದ ಅತಿ ಹಳೆಯ ಪ್ರದೇಶಗಳಲ್ಲೊಂದು. ಇದು ಏಶ್ಯಾ ಖಂಡದ ಅತಿ ಹೆಚ್ಚು ಸೆಕ್ಸ್ ವರ್ಕರ್ಸ್ ವಾಸಿಸುವ ಜಾಗವೆಂದು ಗುರುತಿಸಲ್ಪಟ್ಟಿದೆ. ಸನ್. ೧೭೯೫ ರಲ್ಲಿ ಮೊಟ್ಟಮೊದಲು ವೇಶ್ಯಾ ಚಟುವಟಿಕೆಗಳು ಈ ವಲಯದಲ್ಲಿ ಆರಂಭವಾದವು. ಮಹಾನಗರದ ಕಾಸ್ವೇಗಳು ನಿರ್ಮಾಣವಾದ ನಂತರ,ಮುಂಬಯಿಗೆ ಸೇರಿದ ೭ ದ್ವೀಪಗಳ ಸ್ಥಳಗಳೂ ಒಟ್ಟಾಗಿ ಸೇರಿದವು. ಈ ಪ್ರದೇಶಕ್ಕೆ ಹಿಂದಿನಿಂದ 'ಲಾಲ್ ಬಝಾರ್' ಎಂಬ ಹೆಸರಿತ್ತು. ಆಂಧ್ರಪ್ರದೇಶದಿಂದ ವಲಸೆ ಬಂದು ಮುಂಬಯಿನಲ್ಲಿ ನೆಲೆಸಿದ 'ಕಾಮಾಟೀಸ್ ವರ್ಗದ ಜನ', ಮೊದಮೊದಲು ಕಟ್ಟಡ ನಿರ್ಮಾಣ ಕಾರ್ಯದಲ್ಲಿ 'ದಿನ ಗೂಲಿಕೆಲಸ 'ನಿರ್ವಹಿಸುತ್ತಿದ್ದರು. ಸನ್.೧೮೮೦ ರಲ್ಲಿ ಬ್ರಿಟಿಷ್ ಸೈನ್ಯದಲ್ಲಿ ನೌಕರಿಸೇವೆಯಲ್ಲಿದ್ದ ಪೇದೆಗಳು ಇಲ್ಲಿ ಬಂದು ತಮ್ಮ ಕಾಮಕ್ರಿಯೆಯನ್ನು ತೃಪ್ತಿಗೊಳಿಸಿಕೊಂಡು ಹೋಗುತ್ತಿದ್ದರು. ಸನ್. ೧೯೯೦ ಯ ಬಳಿಕ 'ಏಡ್ಸ್ ರೋಗ' ಹೆಚ್ಚಾಗಿ ಹಬ್ಬಿದ ಮೇಲೆ ಪೋಲೀಸರ ಕಾರ್ಯಾಚರಣೆಗಳ ಸಹಾಯದಿಂದ ಸ್ಥಿತಿಯನ್ನು ನಿಯಂತ್ರಿಸಲು ಕೆಲಸ ಮಾಡಲಾಯಿತು. ಸ್ವಲ್ಪ ಸಮಯದ ಬಳಿಕ ಸೆಕ್ಸ್ ವರ್ಕರ್ಸ್ ಗಳು ಕಡಿಮೆಯಾದಹಾಗೆ ಕಂಡಿತು. ಸನ್. ೧೯೯೨ ರಲ್ಲಿ ಬಾಂಬೆ ಮುನಿಸಿಪಲ್ ಕಾರ್ಪೊರೇಷನ್ (BMC)ಸುಮಾರು ೫೦ ಸಾವಿರ ಸೆಕ್ಸ್ ವರ್ಕರ್ಸ್ ಇರುವುದಾಗಿ ದಾಖಲಿಸಿತ್ತು. ಸನ್. ೨೦೦೯ ರಲ್ಲಿ ಅದು ಇಳಿದು ಕೇವಲ ೧,೬೦೦ ಆಗಿದೆ. ಇನ್ನೂ ಕೆಲವು ಜನ ಮಹಾರಾಷ್ಟ್ರದ ಹಲವು ಪ್ರದೇಶಗಳಿಗೆ ಹೋಗಿ ನೆಲೆಸಿರುವುದಾಗಿ ತಿಳಿದುಬಂತು.

ಗ್ಲ್ಯಾಸ್ಗೋ

ಗ್ಲ್ಯಾಸ್ಗೋ (pronounced /ˈɡlæzɡoʊ/ (GLAZ-goh);ಸ್ಕಾಟ್ಸ್:Glesgaಸ್ಕಾಟಿಷ್ ಗಾಯೆಲಿಕ್:Glaschu) ಇದು ಸ್ಕಾಟ್‌ಲೆಂಡ್‌ನ ಅತಿದೊಡ್ಡ ನಗರವಾಗಿದೆ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ಮೂರನೆಯ ಅತಿ ಜನಪ್ರಿಯ ನಗರವಾಗಿದೆ. ಈ ನಗರವು ದೇಶದ ಪಶ್ಚಿಮ ಕೇಂದ್ರ ತಗ್ಗುಪ್ರದೇಶದಲ್ಲಿನ ಕ್ಲೈಡ್ ನದಿಯ ಮೇಲೆ ನಿರ್ಮಿಸಲ್ಪಟ್ಟಿದೆ. ಗ್ಲ್ಯಾಸ್ಗೋ ನಗರದ ಒಬ್ಬ ಪ್ರಜೆಯನ್ನು ಗ್ಲ್ಯಾಸ್ವಿಜನ್ ಎಂದು ಕರೆಯುತ್ತಾರೆ, ಇದು ಸ್ಥಳೀಯ ಆಡುಭಾಷೆಯ ಒಂದು ಹೆಸರು ಕೂಡ ಆಗಿದೆ.

ಗ್ಲ್ಯಾಸ್ಗೋ ಇದು ಗ್ಲ್ಯಾಸ್ಗೋ ಬಿಷಪ್‌ನ ಅಧಿಪತ್ಯದ ಮಧ್ಯಯುಗದಿಂದ ಮತ್ತು 15 ನೇ ಶತಮಾನದಲ್ಲಿ ಗ್ಲ್ಯಾಸ್ಗೋ ವಿಶ್ವವಿದ್ಯಾಲಯದ ಸ್ಥಾಪನೆಯ ನಂತರ ಬೆಳೆಯಲ್ಪಟ್ಟಿತು, ಅದು ಕಾಲಾನಂತರದಲ್ಲಿ ಅಂದರೆ ೧೮ ನೇ ಶತಮಾನದಲ್ಲಿ ಸ್ಕಾಟ್‌ಲೆಂಡ್ ಜನರ ಜ್ಞಾನೋದಯದ ಒಂದು ಪ್ರಮುಖ ಕೇಂದ್ರವಾಯಿತು. ೧೮ ನೆಯ ಶತಮಾನದಿಂದ ಈ ನಗರವೂ ಕೂಡ ಬ್ರಿಟಿಷ್ ಉತ್ತರ ಅಮೇರಿಕಾ ಮತ್ತು ಬ್ರಿಟಿಷ್ ವೆಸ್ಟ್ ಇಂಡೀಸ್ ಜೊತೆಗಿನ ಅಟ್ಲಾಂಟಿಕ್ ಸಾಗರದಾಚೆಯ ವ್ಯಾಪಾರಗಳಿಗೆ ಬ್ರಿಟನ್‌ನ ಪ್ರಮುಖ ಕೇಂದ್ರ ಸ್ಥಾನವಾಗಿ ಬೆಳೆಯಲ್ಪಟ್ಟಿತು. ಕೈಗಾರಿಕಾ ಕ್ರಾಂತಿಯ ಜೊತೆ, ಗ್ಲ್ಯಾಸ್ಗೋ ನಗರ ಮತ್ತು ಸುತ್ತುವರಿ ಪ್ರದೇಶಗಳು ಭಾರವಾದ ತಂತ್ರಗಾರಿಕೆಗಳಲ್ಲಿ, ಅದರಲ್ಲೂ ಮುಖ್ಯವಾಗಿ ಹಡಗು ತಯಾರಿಕೆ ಮತ್ತು ನೌಕಾ ಸಂಬಂಧಿತ ಎಂಜಿನಿಯರಿಂಗ್ ಉದ್ಯಮಗಳ ಜಗತ್ತಿನ ಸರ್ವಶ್ರೇಷ್ಠ ಕೇಂದ್ರವಾಗಿ ಬದಲಾಯಿಸಲ್ಪಟ್ಟಿತು, ಅದು ಹಲವಾರು ಹೊಸರೀತಿಯ ಮತ್ತು ಜನಪ್ರಿಯ ನೌಕೆಗಳನ್ನು ನಿರ್ಮಿಸಿತು. ಗ್ಲ್ಯಾಸ್ಗೋವು ನಂತರದ ಹೆಚ್ಚಿನ ವಿಕ್ಟೋರಿಯಾ ಯುಗಕ್ಕೆ ಮತ್ತು ಎಡ್ವರ್ಡಿಯಾ ಅವಧಿಗಳ ಬ್ರಿಟಿಷ್ ಅಧಿಪತ್ಯದ "ಎರಡನೆಯ ನಗರ" ಎಂದು ಕರೆಯಲ್ಪಟ್ಟಿತು. ಪ್ರಸ್ತುತದಲ್ಲಿ ಇದು ಯುರೋಪಿನ ಅತ್ಯುತ್ತಮ ಇಪ್ಪತ್ತು ಹಣಕಾಸಿನ ಕೇಂದ್ರಗಳಲ್ಲಿ ಒಂದಾಗಿದೆ ಮತ್ತು ಸ್ಕಾಟ್‌ಲೆಂಡ‌ನ ಹಲವಾರು ಪ್ರಧಾನ ವ್ಯವಹಾರಗಳಿಗೆ ಮೂಲ ಮನೆಯಾಗಿದೆ. ಗ್ಲ್ಯಾಸ್ಗೋವು ಜಗತ್ತಿನ ಅತಿ ಹೆಚ್ಚು ವಾಸಯೋಗ್ಯವಾದ ನಗರಗಳಲ್ಲಿ ೫೭ ನೇ ಶ್ರೇಣಿಯನ್ನು ಹೊಂದಿದೆ.೧೯ ನೇ ಶತಮಾನದ ಕೊನೆಯಲ್ಲಿ ಮತ್ತು ೨೦ ನೆಯ ಶತಮಾನದ ಪ್ರಾರಂಭದಲ್ಲಿ ಗ್ಲ್ಯಾಸ್ಗೋದಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನಸಂಖ್ಯೆಯು ಕಂಡುಬಂದಿತು , ಮತ್ತು ಯುರೋಪಿನಲ್ಲಿ ಲಂಡನ್, ಪ್ಯಾರಿಸ್ ಮತ್ತು ಬರ್ಲಿನ್ ನಗರಗಳ ನಂತರದ ನಾಲ್ಕನೆಯ ಅತಿ ದೊಡ್ಡ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ೧೯೬೦ ರ ದಶಕದಲ್ಲಿ, ಅನುಕ್ರಮದ ಸೀಮೆ (ಗಡಿ)ಯ ಬದಲಾವಣೆಗಳನ್ನು ಅನುಸರಿಸಿ, ಹೊಸ ನಗರ ಮತ್ತು ಹೊರವಲಯ ಮತ್ತು ಉಪನಗರಗಳಿಗೆ ದೊಡ್ದ-ಪ್ರಮಾಣದ ಪ್ರತಿಷ್ಠಾಪಿಸುವಿಕೆಯು ಗ್ರೇಟರ್ ಗ್ಲ್ಯಾಸ್ಗೋ ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ೧,೧೯೯,೬೨೯ ಜನಸಂಖ್ಯೆಯ ಜೊತೆ, ಗ್ಲ್ಯಾಸ್ಗೋ ನಗರದ ಏಕತಾ ಅಧಿಕಾರಿ ಪ್ರದೇಶದ ಪ್ರಸ್ತುತ ಜನಸಂಖ್ಯೆಯನ್ನು ೫೮೦,೬೯೦ ಗೆ ಕಡಿಮೆಯಾಗುವಂತೆ ಮಾಡಿತು. ನಗರ ಹಾಗೂ ಉಪನಗರಗಳ ಸರಮಾಲೆಯನ್ನು ಸುತ್ತುವರೆದಿರುವ ಪೂರ್ತಿ ಪ್ರದೇಶವು ಸ್ಕಾಟ್‌ಲೆಂಡ್‌ನ ಜನಸಂಖ್ಯೆಯ ಸರಿಸುಮಾರು ೨.೩ ಮಿಲಿಯನ್ ಜನರನ್ನು ಒಳಗೊಳ್ಳುತ್ತದೆ.

ಛಾಯಚಿತ್ರದ ಇತಿಹಾಸ

ಛಾಯಚಿತ್ರದ ಇತಿಹಾಸವು ಎರಡು ನಿರ್ಣಾಯಕ ತತ್ವಗಳನ್ನು ಪತ್ತೆಹಚ್ಚುವ ಮೂಲಕ ದೂರಸ್ಥ ಪ್ರಾಚೀನತೆಗಳಲ್ಲಿ ಮೂಲಗಳನ್ನು ಹೊಂದಿದೆ, ಕ್ಯಾಮೆರಾ ಅಬ್ಸ್ಕ್ಯೂರಾ ಇಮೇಜ್ ಪ್ರೊಜೆಕ್ಷನ್ ಮತ್ತು ಕೆಲವು ವಸ್ತುಗಳನ್ನು ಬೆಳಕಿಗೆ ಒಡ್ಡಿಕೊಳ್ಳುವುದರ ಮೂಲಕ ಗೋಚರವಾಗುವಂತೆ ಬದಲಾಯಿಸಲ್ಪಡುತ್ತದೆ ಎಂಬ ಅಂಶವನ್ನು ವೀಕ್ಷಿಸುವ ಮೂಲಕ ಕಂಡುಹಿಡಿದಿದೆ. ಟುರಿನ್ ಶ್ರೌಡ್ನಲ್ಲಿ ಬಳಸುವ ಅತ್ಯಂತ ಅನಿರ್ದಿಷ್ಟ ಪ್ರಕ್ರಿಯೆಯಲ್ಲದೆ ೧೮ನೇ ಶತಮಾನಕ್ಕೆ ಮುಂಚಿನ ಬೆಳಕು ಸೂಕ್ಷ್ಮ ವಸ್ತುಗಳನ್ನು ಹೊಂದಿರುವ ಚಿತ್ರಗಳನ್ನು ಸೆರೆಹಿಡಿಯುವ ಕಲ್ಪನೆಯೂ ಇಲ್ಲ ಎಂದು ಸೂಚಿಸುವ ಯಾವುದೇ ಕಲಾಕೃತಿಗಳು ಅಥವಾ ವಿವರಣೆಗಳು ಇಲ್ಲ. ೧೭೧೭ ರ ಹೊತ್ತಿಗೆ ಜೋಹಾನ್ ಹೆನ್ರಿಚ್ ಶುಲ್ಜ್ ಕಟ್-ಔಟ್ ಅಕ್ಷರಗಳನ್ನು ಒಂದು ಬೆಳಕಿನ-ಸೂಕ್ಷ್ಮ ಸಿಮೆಂಟು ಬಾಟಲಿಯ ಮೇಲೆ ವಶಪಡಿಸಿಕೊಂಡರು, ಆದರೆ ಫಲಿತಾಂಶಗಳನ್ನು ಬಾಳಿಕೆ ಬರುವಂತೆ ಮಾಡಲು ಅವರು ಎಂದಿಗೂ ಯೋಚಿಸಲಿಲ್ಲ. ಸುಮಾರು 1800 ರಲ್ಲಿ ಥಾಮಸ್ ವೆಡ್ವುಡ್ ಅವರು ವಿಶ್ವಾಸಾರ್ಹವಾಗಿ ದಾಖಲಿಸಲ್ಪಟ್ಟರು, ಆದರೂ ಶಾಶ್ವತ ರೂಪದಲ್ಲಿ ಕ್ಯಾಮೆರಾ ಚಿತ್ರಗಳನ್ನು ತೆಗೆಯಲು ಪ್ರಯತ್ನ ವಿಫಲವಾಯಿತು. ಅವರ ಪ್ರಯೋಗಗಳು ವಿವರವಾದ ಫೋಟೊಗ್ರಾಮ್ಗಳನ್ನು ಉತ್ಪಾದಿಸಿದವು, ಆದರೆ ವೆಡ್ಜ್ವುಡ್ ಮತ್ತು ಅವರ ಸಹವರ್ತಿ ಹಂಫ್ರಿ ಡೇವಿ ಈ ಚಿತ್ರಗಳನ್ನು ಸರಿಪಡಿಸಲು ಯಾವುದೇ ರೀತಿಯಲ್ಲಿ ಕಂಡುಬಂದಿಲ್ಲ.

೧೮೨೦ರ ದಶಕದ ಮಧ್ಯಭಾಗದಲ್ಲಿ, ಕ್ಯಾಮೆರಾದಿಂದ ವಶಪಡಿಸಿಕೊಂಡಿರುವ ಚಿತ್ರವನ್ನು ನಿಕಫೋರ್ ನೀಪ್ಸೆ ಮೊದಲಿಗೆ ನಿರ್ವಹಿಸುತ್ತಾನೆ, ಆದರೆ ಕನಿಷ್ಟ ಎಂಟು ಗಂಟೆಗಳ ಅಥವಾ ಕ್ಯಾಮರಾದಲ್ಲಿ ಹಲವಾರು ದಿನಗಳವರೆಗೆ ಒಡ್ಡುವಿಕೆಯ ಅಗತ್ಯವಿತ್ತು ಮತ್ತು ಆರಂಭಿಕ ಫಲಿತಾಂಶಗಳು ತುಂಬಾ ಕಚ್ಚಾವಾಗಿವೆ. ನೀಪೆಸ್ನ ಸಹವರ್ತಿ ಲೂಯಿಸ್ ಡಾಗೆರೆ ಡಾಗರೂಟೈಪ್ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಿದರು, ಇದು ಸಾರ್ವಜನಿಕವಾಗಿ ಘೋಷಿಸಲ್ಪಟ್ಟ ಮತ್ತು ವಾಣಿಜ್ಯಿಕವಾಗಿ ಕಾರ್ಯಸಾಧ್ಯವಾದ ಛಾಯಾಗ್ರಹಣದ ಪ್ರಕ್ರಿಯೆಯಾಗಿದೆ. ಡಾಗೆರೊಟೈಪ್ ಕ್ಯಾಮೆರಾದಲ್ಲಿ ಮಾನ್ಯತೆಯ ನಿಮಿಷಗಳು ಮಾತ್ರ ಬೇಕಾಗುತ್ತದೆ, ಮತ್ತು ಸ್ಪಷ್ಟ, ಉತ್ತಮವಾಗಿ ವಿವರವಾದ ಫಲಿತಾಂಶಗಳನ್ನು ತಯಾರಿಸಲಾಗುತ್ತದೆ. ವಿವರಗಳನ್ನು 1839 ರಲ್ಲಿ ಪ್ರಪಂಚಕ್ಕೆ ಉಡುಗೊರೆಯಾಗಿ ಪರಿಚಯಿಸಲಾಯಿತು, ಪ್ರಾಯೋಗಿಕ ಛಾಯಾಗ್ರಹಣದ ಜನ್ಮ ವರ್ಷವಾಗಿ ಸಾಮಾನ್ಯವಾಗಿ ಸ್ವೀಕರಿಸಲ್ಪಟ್ಟ ದಿನಾಂಕ. ಲೋಹ-ಆಧರಿತ ಡಾಗೆರೋಟೈಪ್ ಪ್ರಕ್ರಿಯೆಯು ವಿಲಿಯಂ ಹೆನ್ರಿ ಫಾಕ್ಸ್ ಟಾಲ್ಬಾಟ್ ಕಂಡುಹಿಡಿದ ಕಾಗದ-ಆಧಾರಿತ ಕ್ಯಾಲೋಟೈಪ್ ಋಣಾತ್ಮಕ ಮತ್ತು ಉಪ್ಪಿನ ಮುದ್ರಣ ಪ್ರಕ್ರಿಯೆಗಳಿಂದ ಸ್ವಲ್ಪ ಸ್ಪರ್ಧೆಯನ್ನು ಹೊಂದಿತ್ತು. ತರುವಾಯದ ನಾವೀನ್ಯತೆಗಳು ಛಾಯಚಿತ್ರವನ್ನು ಸುಲಭವಾಗಿ ಮತ್ತು ಬಹುಮುಖವಾಗಿ ಮಾಡಿತು. ಹೊಸ ವಸ್ತುಗಳು ನಿಮಿಷಗಳವರೆಗೆ ಸೆಕೆಂಡುಗಳವರೆಗೆ ಅಗತ್ಯವಾದ ಕ್ಯಾಮರಾ ಮಾನ್ಯತೆ ಸಮಯವನ್ನು ಕಡಿಮೆ ಮಾಡುತ್ತವೆ, ಮತ್ತು ಅಂತಿಮವಾಗಿ ಎರಡನೆಯ ಒಂದು ಸಣ್ಣ ಭಾಗಕ್ಕೆ ಕಡಿಮೆಯಾಗುತ್ತವೆ; ಹೊಸ ಛಾಯಾಗ್ರಹಣದ ಮಾಧ್ಯಮವು ಹೆಚ್ಚು ಆರ್ಥಿಕ, ಸೂಕ್ಷ್ಮ ಅಥವಾ ಅನುಕೂಲಕರವಾಗಿದ್ದು, ಹವ್ಯಾಸಿಗಳಿಂದ ಸಾಂದರ್ಭಿಕ ಬಳಕೆಗಾಗಿ ರೋಲ್ ಚಲನಚಿತ್ರಗಳು ಸೇರಿವೆ. 20 ನೇ ಶತಮಾನದ ಮಧ್ಯಭಾಗದಲ್ಲಿ, ಹವ್ಯಾಸಿಗಳು ನೈಸರ್ಗಿಕ ಬಣ್ಣ ಮತ್ತು ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಚಿತ್ರಗಳನ್ನು ತೆಗೆದುಕೊಳ್ಳಲು ಸಾಧ್ಯವಾಯಿತು.

1990 ರ ದಶಕದಲ್ಲಿ ಕಂಪ್ಯೂಟರ್ ಆಧಾರಿತ ವಿದ್ಯುನ್ಮಾನ ಡಿಜಿಟಲ್ ಕ್ಯಾಮೆರಾಗಳ ವಾಣಿಜ್ಯ ಪರಿಚಯ ಶೀಘ್ರದಲ್ಲೇ ಛಾಯಚಿತ್ರವನ್ನು ಕ್ರಾಂತಿಗೊಳಿಸಿತು. 21 ನೇ ಶತಮಾನದ ಮೊದಲ ದಶಕದಲ್ಲಿ, ಹೊಸ ತಂತ್ರಜ್ಞಾನದ ಪ್ರಾಯೋಗಿಕ ಪ್ರಯೋಜನಗಳನ್ನು ವ್ಯಾಪಕವಾಗಿ ಪ್ರಶಂಸಿಸಲಾಯಿತು ಮತ್ತು ಮಧ್ಯಮ ಬೆಲೆಯ ಡಿಜಿಟಲ್ ಕ್ಯಾಮೆರಾಗಳ ಚಿತ್ರದ ಗುಣಮಟ್ಟವು ನಿರಂತರವಾಗಿ ಸುಧಾರಣೆಯಾಗಿರುವುದರಿಂದ ಸಾಂಪ್ರದಾಯಿಕ ಚಲನಚಿತ್ರ-ಆಧಾರಿತ ದ್ಯುತಿರಾಸಾಯನಿಕ ವಿಧಾನಗಳು ಹೆಚ್ಚು ಅಂಚಿನಲ್ಲಿವೆ. ವಿಶೇಷವಾಗಿ ಕ್ಯಾಮೆರಾಗಳು ಸ್ಮಾರ್ಟ್ಫೋನ್ನಲ್ಲಿ ಗುಣಮಟ್ಟದ ವೈಶಿಷ್ಟ್ಯವಾಗಿರುವುದರಿಂದ, ಚಿತ್ರಗಳನ್ನು ತೆಗೆಯುವುದು (ಮತ್ತು ಅವುಗಳನ್ನು ಆನ್ಲೈನ್ನಲ್ಲಿ ತಕ್ಷಣ ಪ್ರಕಟಿಸುವುದು) ಪ್ರಪಂಚದಾದ್ಯಂತ ಸರ್ವತ್ರ ದೈನಂದಿನ ಅಭ್ಯಾಸವಾಗಿದೆ.

ಜೇನ್ ಆಸ್ಟಿನ್

ಜೇನ್ ಆಸ್ಟಿನ್(೧೬ ಡಿಸೆಂಬರ್ ೧೭೭೫-೧೮ ಜುಲೈ ೧೮೧೭)ರವರು ಆಂಗ್ಲ ಕಾದಂಬರಿಗಾರ್ತಿ. ಆಕೆಯ ಪ್ರಣಯಭರಿತ ಕಾದಂಬರಿಗಳು ಆಕೆಯನ್ನು ಇಂಗ್ಲೀಷ್ ಸಾಹಿತ್ಯದ ಶ್ರೇಷ್ಠ ಕಾದಂಬರಿಗಾರ್ತಿಯನ್ನಾಗಿಸಿದೆ. ಅವರ ಕಾದಂಬರಿಗಳಲ್ಲಿನ ವಾಸ್ತವಿಕತೆ, ವ್ಯಂಗ್ಯ, ಸಾಮಾಜಿಕ ವಿವರಣೆ ಅವರನ್ನು ಉತ್ತಮ ವಿದ್ವಾಂಸರೊಂದಿಗೆ ಸೇರಿಸಲಾಗುತ್ತದೆ.

ಆಸ್ಟಿನ್ ರವರು ತಮ್ಮ ಇಡೀ ಜೀವನವನ್ನು ತಮ್ಮ ಕುಟುಂಬದವರೊಂದಿಗೆ ಕಳೆದರು. ಆಕೆಯ ಮೊದಲ ಗುರು ಆಕೆಯ ತಂದೆ. ಆಕೆಯ ಅಣ್ಣಂದಿರು ಮತ್ತು ಸ್ವಪ್ರಯತ್ನ ಆಕೆಯ ವಿದ್ಯಭ್ಯಾಸದಲ್ಲಿ ಪ್ರಮುಖ ಪಾತ್ರವಹಿಸಿದ್ದೆ. ಆಕೆಯ ಕುಟುಂಬದವರ ಸಹಕಾರ ಆಕೆಯನ್ನು ಒರ್ವ ಒಳ್ಳೆಯ ಬರಹಗಾರ್ತಿಯನ್ನಾಗಿಸಿತು. ಆಕೆಯ ಕಲಾತ್ಮಕ ಶಿಷ್ಯವೃತ್ತಿ ಹದಿಮೂರರಿಂದ ಮೂವತ್ತರವರೆಗೆ ಮುಂದುವರಿಯಿತು. ಈ ಅವಧಿಯಲ್ಲಿ ಅವರು ವಿವಿಧ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನೇ ತೊಡಗಿಸಿಕೊಂಡರು. ೧೮೧೧ರಿಂದ ೧೮೧೬ರರವರೆಗೆ ಪ್ರಕಟಗೊಂಡ ಆಕೆಯ ಕಾದಂಬರಿಗಳಾದ Sense and Sensibility (೧೮೧೧), Pride and Prejudice (೧೮೧೩),Mansfield Park (೧೮೧೪), Emma (೧೮೧೬). ಆಕೆಯನ್ನು ಒಬ್ಬ ಉತ್ತಮ ಲೇಖಕಿಯ ಸ್ಥಾನ ತಂದುಕೊಟ್ಟಿತು. Northanger Abbey ಮತ್ತು Persuasion ಕಾದಂಬರಿಗಳು ಆಕೆಯ ಮರಣಾನಂತರ ಪ್ರಕಟಗೊಂಡವು. Sanditon ಕಾದಂಬರಿಯನ್ನು ಬರೆಯಲು ಆರಂಭಿಸಿದರೂ, ಅದನ್ನು ಮುಗಿಸುವ ಮುನ್ನವೆ ಆಕೆ ಇಹಲೋಕ ತ್ಯಜಿಸಿದರು.

ಆಸ್ಟಿನ್ ರ ಕಾದಂಬರಿಗಳಲ್ಲಿ ೧೮ ಮತ್ತು ೧೯ನೇ ಶತಮಾನದ ಜೀವನ ಶೈಲಿ, ಸಾಮಾಜಿಕ ವ್ಯವಸ್ಥೆಗಳನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಆಕೆಯ ಕಾದಂಬರಿಗಳು ಹಾಸ್ಯಭರಿತವಾಗಿದ್ದರೂ ಮಹಿಳೆ ವಿವಾಹದ ಚೌಕಟ್ಟಿನಲ್ಲಿ ಯಾವ ರೀತಿಯಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸುರಕ್ಷಿತಳು ಎಂಬುದಕ್ಕೆ ಒತ್ತು ನೀಡಿದ್ದಾರೆ. ಆಕೆಯ ಕಾದಂಬರಿಗಳು ಅನಾಮಿಕವಾಗಿ ಪ್ರಕಟಗೊಂಡರೂ, ಆಕೆಗೆ ಪ್ರಖ್ಯಾತಿಯನ್ನು ತಂದುಕೊಟ್ಟಿತ್ತು. ೧೮೬೯ರಲ್ಲಿ ಆಕೆಯ ಸೋದರಳಿಯ ಬರೆದ A Memoir of Jane Austen ಆಕೆಗೆ ಮಾನ್ಯತೆ ತಂದುಕೊಟ್ಟಿತಲ್ಲದೆ ಆಕೆಯನ್ನು ಇಂಗ್ಲೀಷ್ ಸಾಹಿತ್ಯದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರನ್ನಾಗಿಸಿತು. ೨೦ನೇ ಶತಮಾನದಲ್ಲಿ ಆಕೆಯ ಕಾದಂಬರಿಗಳಿಗೆ ಅಭಿಮಾನಿಗಳ ದಂಡು ಬೆಳೆಯಿತು.

ಡ್ಯಾನ್ಯೂಬ್‌

ಡ್ಯಾನ್ಯೂಬ್‌‌‌ (English pronunciation: /ˈdænjuːb/ DAN-ewb) ಎಂಬುದು ವೋಲ್ಗಾ ನಂತರದ ಯುರೋಪ್‌‌‌‌ನ ಎರಡನೇ ಅತಿ ಉದ್ದದ ನದಿಯಾಗಿದೆ. ಒಂದು ಅಂತರರಾಷ್ಟ್ರೀಯ ಜಲಮಾರ್ಗವಾಗಿ ವರ್ಗೀಕರಿಸಲ್ಪಟ್ಟಿರುವುದಕ್ಕೆ ಸಂಬಂಧಿಸಿದಂತೆ ಇದು ಗಮನಾರ್ಹವಾಗಿದೆ.

ಸಾಕಷ್ಟು ಸಣ್ಣದಾಗಿರುವ ಬ್ರಿಗ್ಯಾಚ್‌ ಮತ್ತು ಬ್ರೆಗ್‌‌ ಎಂಬ ನದಿಗಳಾಗಿ ಜರ್ಮನಿಯಲ್ಲಿನ ಕಪ್ಪು ಅರಣ್ಯದಲ್ಲಿ ಹುಟ್ಟುವ ಈ ನದಿಯು ಹುಟ್ಟುತ್ತದೆ ಮತ್ತು ಡೊನೌಸ್ಕಿಂಜೆನ್‌ ಎಂಬ ಜರ್ಮನ್‌ ಪಟ್ಟಣದಲ್ಲಿ ಆ ಪುಟ್ಟ ನದಿಗಳು ಸೇರಿಕೊಳ್ಳುತ್ತವೆ. ಅದಾದ ನಂತರ ಈ ನದಿಯು ಡ್ಯಾನ್ಯೂಬ್‌ ಎಂದು ಕರೆಸಿಕೊಳ್ಳುತ್ತದೆ ಹಾಗೂ ಸುಮಾರು ೨೮೫೦ ಕಿ.ಮೀ.ಗಳಷ್ಟಿರುವ (೧೭೭೧ ಮೈಲುಗಳು) ಒಂದು ಅಂತರದವರೆಗೆ ಆಗ್ನೇಯದ ಕಡೆಗೆ ಹರಿಯುತ್ತದೆ; ರೊಮೇನಿಯಾ ಮತ್ತು ಉಕ್ರೇನ್‌‌‌‌ನಲ್ಲಿರುವ ಡ್ಯಾನ್ಯೂಬ್‌‌‌ ನದೀ ಮುಖಜ ಭೂಮಿಯ ಮಾರ್ಗವಾಗಿ ಕಪ್ಪು ಸಮುದ್ರದೊಳಗೆ ಈ ನದಿಯು ಸೇರಿಕೊಳ್ಳುವುದಕ್ಕೆ ಮುಂಚಿತವಾಗಿ, ಯುರೋಪಿನ ಮಧ್ಯಭಾಗದ ಮತ್ತು ಪೂರ್ವದ ನಾಲ್ಕು ರಾಜಧಾನಿಗಳ ಮೂಲಕ ಹಾದುಹೋಗುತ್ತದೆ.

ದೀರ್ಘಕಾಲದಿಂದ ಇರುವ ರೋಮನ್‌ ಸಾಮ್ರಾಜ್ಯದ ಸೀಮಾರೇಖೆಗಳ ಪೈಕಿ ಒಂದೆಂಬಂತೆ ಇತಿಹಾಸದಲ್ಲಿ ದಾಖಲಿಸಲ್ಪಟ್ಟಿರುವ ಈ ನದಿಯು ಈ ಹತ್ತು ದೇಶಗಳ ಮೂಲಕ ಅಥವಾ ಅವುಗಳ ಭಾಗವಾಗಿ ಹರಿಯುತ್ತದೆ: ಜರ್ಮನಿ (೭.೫%), ಆಸ್ಟ್ರಿಯಾ (೧೦.೩%), ಸ್ಲೋವಾಕಿಯಾ (೫.೮%), ಹಂಗರಿ (೧೧.೭%), ಕ್ರೊಯೇಷಿಯಾ (೪.೫%), ಸರ್ಬಿಯಾ (೧೦.೩%), ಬಲ್ಗೇರಿಯಾ (೫.೨%), ಮಾಲ್ಡೋವಾ (೧.೬%), ಉಕ್ರೇನ್‌ (೩.೮%) ಮತ್ತು ರೊಮೇನಿಯಾ (೨೮.೯%). (ಇಲ್ಲಿ ನೀಡಲಾಗಿರುವ ಶೇಕಡಾವಾರು ಪ್ರಮಾಣಗಳು, ಒಟ್ಟು ಡ್ಯಾನ್ಯೂಬ್‌‌‌ ಜಲಾನಯನ ಭೂಮಿಯ ವಿಸ್ತೀರ್ಣವನ್ನು ಪ್ರತಿಬಿಂಬಿಸುತ್ತವೆ.)

ನಿರ್ಣಾಯಕ ಚಿಂತನೆ

ನಿರ್ಣಾಯಕ ಚಿಂತನೆ , ಅದರ ವಿಶಾಲವಾದ ಅರ್ಥದಲ್ಲಿ "ಯಾವುದನ್ನು ನಂಬಬೇಕು ಅಥವಾ ಯಾವುದನ್ನು ಮಾಡಬೇಕು ಎಂಬುದಕ್ಕೆ ಸಂಬಂಧಪಟ್ಟ ನಿರ್ಣಾಯಕ ನಿರ್ಧಾರ" ಎಂಬುದಾಗಿ ವರ್ಣಿಸಲ್ಪಟ್ಟಿದೆ.

ವಿಲಿಯಮ್ ಹಾರ್ನ್ ಬಿ

(೧೧ ಮಾರ್ಚ್, ೧೭೨೩, ಮರಣ : ೧೮ ನವೆಂಬರ್, ೧೮೦೩)

ವಿಶ್ವಕೋಶಗಳು

ವಿಶ್ವಕೋಶ ಲೋಕಜ್ಞಾನದ ಎಲ್ಲಾ ವಿಷಯಗಳನ್ನು ವ್ಯವಸ್ಥಿತವಾಗಿ ನಿರೂಪಿಸುವ ಗ್ರಂಥವಾಗಿದೆ.

ಶವಪರೀಕ್ಷೆ

ಮರಣೋತ್ತರ ಪರೀಕ್ಷೆ' , ಮೃತದೇಹ ಪರೀಕ್ಷೆ' (ಮುಖ್ಯವಾಗಿ ಮನುಷ್ಯೇತರ ದೇಹಗಳು), ಆಟೊಪ್ಸಿಯಾ ಕಾಡವೆರುಮ್ , ಅಥವಾ ಒಬ್‍ಡಕ್ಷನ್ ಎಂದು ಕೂಡ ಕರೆಯಲ್ಪಡುವ ಒಂದು ಶವಪರೀಕ್ಷೆ- ಎಂದರೆ, ಸಾವಿಗೆ ಕಾರಣ ಮತ್ತು ಸಾವು ಸಂಭವಿಸಿದ ರೀತಿಯನ್ನು ನಿರ್ಧರಿಸಲು ಮತ್ತು ಇದ್ದಿರಬಹುದಾದ ಯಾವುದೇ ಕಾಯಿಲೆ ಅಥವಾ ಗಾಯವನ್ನು ಮೌಲ್ಯೀಕರಿಸಲು ಒಂದು ಹೆಣದ ಸಂಪೂರ್ಣ ಪರೀಕ್ಷೆಯನ್ನೊಳಗೊಂಡಿರುವ ಒಂದು ವೈದ್ಯಕೀಯ ವಿಧಾನ. ಇದನ್ನು ಪೆಥಾಲೊಜಿಸ್ಟ್ ಎಂದು ಕರೆಯಲಾಗುವ ಒಬ್ಬ ವಿಶೇಷ ವೈದ್ಯರು ನಿರ್ವಹಿಸುತ್ತಾರೆ.

ಶವಪರೀಕ್ಷೆಗಳನ್ನು ಕಾನೂನು ಅಗತ್ಯಕ್ಕಾಗಿ ಅಥವಾ ವೈದ್ಯಕೀಯ ಉದ್ದೇಶಗಳಿಗಾಗಿ ಮಾಡಲಾಗುತ್ತದೆ. ಉದಾಹರಣೆಗೆ, ಒಂದು ಸಾವಿಗೆ ಅಪರಾಧ ಕಾರಣವಾಗಿದ್ದರೆ ವೈದ್ಯಕೀಯ ಶವಪರೀಕ್ಷೆ ನಡೆಸಲಾಗುವುದು, ಹಾಗೂ ಒಂದು ವೈದ್ಯಕೀಯ ಅಥವಾ ಶೈಕ್ಷಣಿಕ ಶವಪರೀಕ್ಷೆಯನ್ನು ಸಾವಿಗೆ ವೈದ್ಯಕೀಯ ಕಾರಣಗಳನ್ನು ಕಂಡುಹಿಡಿಯಲು ನಡೆಸಲಾಗುವುದು ಹಾಗೂ ಇದನ್ನು ಅಪರಿಚಿತ ಸಾವು ಅಥವಾ ಸಂಶೊಧನೆ ಉದ್ದೇಶಗಳಿಗಾಗಿ ನಡೆಸಲಾಗುವುದು. ಶವಪರೀಕ್ಷೆಗಳನ್ನು ಇನ್ನೂ ಮುಂದೆ ವರ್ಗೀಕರಿಸಿ ಕೇವಲ ಬಾಹ್ಯ ಪರೀಕ್ಷೆ ಸಾಕಾಗುವಂತಹ ಪರೀಕ್ಷೆಗಳು ಮತ್ತು ದೇಹವನ್ನು ಛೇದಿಸಿ ಆಂತರಿಕ ಪರೀಕ್ಷೆ ಮಾಡುವಂತಹ ಪರೀಕ್ಷೆಗಳು ಎಂದು ವರ್ಗೀಕರಣ ಮಾಡಬಹುದು. ಕೆಲವು ಪ್ರಕರಣಗಳಲ್ಲಿ ಆಂತರಿಕ ಶವಪರೀಕ್ಷೆ ಮಾಡುವುದಕ್ಕೆ ಮೃತವ್ಯಕ್ತಿಯ ಹತ್ತಿರದ ಸಂಬಂಧಿಗಳ ಅನುಮತಿ ಬೇಕಾಗುತ್ತದೆ. ಆಂತರಿಕ ಶವಪರೀಕ್ಷೆ ಮಾಡಿದ ನಂತರ ಶವಕ್ಕೆ ಹೊಲಿಗೆ ಹಾಕುವ ಮೂಲಕ ಅದರ ಪೂರ್ವಸ್ಥಿತಿಗೆ ತರಲಾಗುವುದು.

ಹೇಬಿಯಸ್ ಕಾರ್ಪಸ್

ಹೇಬಿಯಸ್ ಕಾರ್ಪಸ್ (ಆಸಾಮಿ ಹಾಜರಿ ಹುಕುಂ) pronounced /ˌheɪbiːəs ˈkɔrpəs/ಎಂಬುದು, ಲ್ಯಾಟಿನ್ : “(We command) that you have the body”) ಇದು ಒಂದು ರಿಟ್‌ ಅರ್ಜಿ ಅಥವಾ ಕಾನೂನು ಪ್ರಕ್ರಿಯೆಯಾಗಿದ್ದು. ಇದರಿಂದ ವ್ಯಕ್ತಿಯೊಬ್ಬನು ಅನ್ಯಾಯಕ್ಕೆ ಅಥವಾ ಇನ್ನೊಬ್ಬ ವ್ಯಕ್ತಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಲು ಅಥವಾ ಅದರಿಂದ ಹೊರಬರಲು ಇದನ್ನು ಬಳಸಿಕೊಳ್ಳಬಹುದಾಗಿದೆ. ನ್ಯಾಯ ವ್ಯವಸ್ಥೆಯಿಂದ ಅಥವಾ ವ್ಯಕ್ತಿಗಳಿಂದ ಕಷ್ಟಕ್ಕೀಡಾಗುವುದನ್ನು ಈ ಹೇಬಿಯಸ್ ಕಾರ್ಪಸ್ ದಾವೆಯು ತಪ್ಪಿಸುತ್ತದೆ. ಮೂಲದಲ್ಲಿ ಇದು ಇಂಗ್ಲಿಷ್ ಕಾನೂನು ಒಂದು ಸೌಲಭ್ಯವಾಗಿದೆ. ರಾಜ್ಯ ಕಾನೂನು ಕ್ರಮಗಳಿಂದ ವ್ಯಕ್ತಿಗತ ಮೌಲ್ಯಗಳನ್ನು ರಕ್ಷಿಸುವ ಉದ್ದೇಶದಿಂದ ಹೇಬಿಯಸ್ ಕಾರ್ಪಸ್ ದಾವೆಯು ಐತಿಹಾಸಿಕವಾಗಿ ಬಹುಮುಖ್ಯವಾದ ಕಾನೂನಾತ್ಮಕ ಸಾಧನವಾಗಿದೆ. ಒಬ್ಬನನ್ನು ಬಂಧನದಲ್ಲಿಟ್ಟಿರುವುದು ನ್ಯಾಯ ವಿಹಿತವೊ ಅಲ್ಲವೊ ಎಂಬುದನ್ನು ವಿಚಾರಣೆ ಮಾಡುವುದಕ್ಕಾಗಿ ನ್ಯಾಯಾಧಿಪತಿಯ ಮುಂದೆ ವ್ಯಕ್ತಿಯನ್ನು ಸಾಕ್ಷಾತ್ತಾಗಿ ಹಾಜರು ಮಾಡಬೇಕೆಂದು ಕೊಟ್ಟ ಆಜ್ಞೆ.

ಹೇಬಿಯಸ್ ಕಾರ್ಪಸ್‌ ಆಡ್‍ ಸಬ್‌ಜಿಸೆಂಡಿಯಮ್‌ ದಾವೆಯು ಕೂಡಾ "ದಿ ಗ್ರೇಟ್ ರಿಟ್" ಆಗಿದೆ. ನ್ಯಾಯಾಲಯದ ಆದೇಶದ ಬೆಂಬಲವಿರುವ ಸಮನ್ಸ್ ಆಗಿದ್ದು,ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗುವ ಮುನ್ನ ಜೈಲಿನ ಅಧಿಕಾರಿಯು ಖೈದಿಯು ಬಯಸುವ ಮತ್ತು ವ್ಯಕ್ತಿಯನ್ನು ವಿಚಾರಿಸುವ ಕಾನೂನಾತ್ಮಕ ಅಧಿಕಾರವನ್ನು ಜೈಲು ಅಧಿಕಾರಿಯು ಹೊಂದಿದ್ದಲ್ಲಿ ಪುರಾವೆಯ ಜೊತೆಗೆ ನ್ಯಾಯಾಲಯಕ್ಕೆ ವಿಚಾರಣೆಯ ಅಧಿಕಾರವನ್ನು ನೀಡಲಾಗುತ್ತದೆ. ಇಲ್ಲದಿದ್ದಲ್ಲಿ ಸೆರೆಯಿಂದ ಬಿಡಿಸಲ್ಪಡುತ್ತಾನೆ. ಅಪರಾಧಿ ಅಥವಾ (ಅಪರಾಧಿ ಮಾತನಾಡಲು ಅಸಾಧ್ಯವಾದ ಸಂದರ್ಭದಲ್ಲಿ) ಅವನ ಪರ ವ್ಯಕ್ತಿ ನ್ಯಾಯಾಲಯಕ್ಕೆ, ನ್ಯಾಯಮೂರ್ತಿಗೆ ಹೇಬಿಯಸ್ ಕಾರ್ಪಸ್‌ ಆಡ್‍ ಸಬ್‌ಜಿಸೆಂಡಿಯಮ್ ‌ ದಾವೆಯನ್ನು ಸಲ್ಲಿಸಬಹುದು.

ಹೇಬಿಯಸ್ ಕಾರ್ಪಸ್ ದಾವೆ ಹಾಕುವ ಹಕ್ಕನ್ನು, ಸಂಬಂಧಪಟ್ಟ ವ್ಯಕ್ತಿಯ ಸ್ವಾತಂತ್ರ್ಯಕ್ಕಿರುವ ಉತ್ತಮವಾದ ರಕ್ಷಣೆ ಎಂದು ಬಹುಕಾಲದಿಂದ ತಿಳಿಯಲಾಗಿದೆ. ಬ್ರಿಟಿಷ್ ನ್ಯಾಯಾಧೀಶ ಅಲ್ಬೆರ್ಟ್ ವೆನ್ ಡೈಸಿ ಬರೆಯುವಂತೆ ಹೇಬಿಯಸ್ ಕಾರ್ಪಸ್ ಕಾಯ್ದೆಯು, "ಯಾವುದೇ ಸಿದ್ಧಾಂತಗಳನ್ನು ನಿರ್ಧರಿಸದೇ, ಯಾವುದೇ ಹಕ್ಕನ್ನು ವಿವರಿಸದಿರುವ ಆದರೆ ವೈಯಕ್ತಿಕ ಸ್ವಾತಂತ್ರ್ಯವನ್ನು ಗೌರವಿಸುವ ನೂರಾರು ಸಾಂವಿಧಾನಿಕ ಅನುಬಂಧಗಳ ಪ್ರಾಯೋಗಿಕ ಉದ್ದೇಶವಾಗಿದೆ." ಬಹಳಷ್ಟು ದೇಶಗಳಲ್ಲಿ, ತುರ್ತು ಪರಿಸ್ಥಿತಿಯಲ್ಲಿ ಹೇಬಿಯಸ್ ಕಾರ್ಪಸ್ ಪ್ರಕ್ರಿಯೆಯನ್ನು ರದ್ದುಗೊಳಿಸಲಾಗಿದೆ. ಬಹಳಷ್ಟು ಸಿವಿಲ್ ನ್ಯಾಯದಾನವನ್ನು, ಕೆಲವೊಂದು ಸಂದರ್ಭಗಳನ್ನು ಹೊರತುಪಡಿಸಿ, ಹೇಬಿಯಸ್ ಕಾರ್ಪಸ್ ಎಂದು ಕರೆಯಲಾಗುವುದಿಲ್ಲ. ಹೇಬಿಯಸ್ ಕಾರ್ಪಸ್ ದಾವೆಯನ್ನು "ಅಸಾಮಾನ್ಯ", "ಸಾಮಾನ್ಯ ಕಾನೂನು", ಅಥವಾ "ವಿಶೇಷ ದಾವೆ" ಎಂದು ಕರೆಯಲಾಗಿದೆ. ಸಾಮ್ರಾಜ್ಯದಲ್ಲಿನ ಸಾಮಾಜದ ಮತ್ತು ಕೆಳಹಂತ ನ್ಯಾಯಾಲಯವನ್ನು ಮುಖ್ಯ ನ್ಯಾಯಾಲಯಗಳು ನಿಯಂತ್ರಿಸಲು ನ್ಯಾಯಾಲಯಗಳು ಐತಿಹಾಸಿಕವಾಗಿ ಆಚರಣೆಗೆ ತಂದ ಕಾನೂನು ಎಂದೂ ಕೂಡಾ ಹೇಬಿಯಸ್ ಕಾರ್ಪಸ್ ದಾವೆಯನ್ನು ಕರೆಯಲಾಗುತ್ತದೆ. ಬಹುಸಾಮಾನ್ಯವಾದ ಇತರ ವಿಶೇಷ ದಾವೆಗಳೆಂದರೆ : ಕೊ ವಾರೆಂಟೊ , ಪ್ರೊಹಿಬಿಷಿಯೊ , ಮ್ಯಾಂಡಮಸ್ , ಪ್ರೊಸೆಡೆಂಟೊ ಮತ್ತು ಸರ್ಚಿಯೋರರಿ . ಮೂಲ 13 ಅಮೆರಿಕನ್ ಕಾಲೊನಿಗಳು ಸ್ವಾತಂತ್ರ್ಯವನ್ನು ಘೋಷಿಸಿದಾಗ ಮತ್ತು ಸಂವಿಧಾನವು ಪ್ರಜಾಪ್ರಭುತ್ವದ ಹಿನ್ನೆಲೆಯಲ್ಲಿ ರೂಪುಗೊಂಡಾಗ ವ್ಯಕ್ತಿಗಳು ಸ್ವತಂತ್ರರಾದರು. ನಂತರ ಯಾವುದೇ ವ್ಯಕ್ತಿಯು ಈ ರೀತಿಯ ದಾವೆಯನ್ನು ಹಾಕುವ ಅಧಿಕಾರವನ್ನು ಪಡೆದುಕೊಂಡನು.

ಈ ದಾವೆಯ ಕಾನೂನು ಪ್ರಕ್ರಿಯೆಯು ಸರಳ ಸಿವಿಲ್ ಅಥವಾ ಕ್ರಿಮಿನಲ್ ಅಲ್ಲ. ಯಾಕೆಂದರೆ ಅವರು ಹಕ್ಕು ಇಲ್ಲದ ಪೂರ್ವಯೋಜಿತ ಸ್ಥಿತಿ. ಪ್ರತಿಕ್ರಿಯಿಸುವ ಅಧಿಕಾರಿಯು ತನ್ನ ಅಧಿಕಾರವನ್ನು ಚಲಾಯಿಸುವ ಅಥವಾ ಚಲಾಯಿಸದಿರುವ ಹಕ್ಕನ್ನು ಹೊಂದಿರುತ್ತಾನೆ. ಕೇವಲ ಆಸಕ್ತಿಯುತ ಪಕ್ಷ ಎಂದಲ್ಲದೇ ನ್ಯಾಯಾಲಯವು ಕಕ್ಷಿದಾರನಿಗಾಗಿಯೇ (ಅವನು ಯಾವ ವ್ಯಕ್ತಿಯೇ ಆಗಿರಲಿ) ತೀರ್ಮಾನಿಸಬೇಕಾಗುತ್ತದೆ. ಆರೋಪಿಯು ಒದಗಿಸುವ ದಾಖಲೆಪತ್ರಗಳ ಆಧಾರದಮೇಲೆ ಸಿವಿಲ್ ಪ್ರಕ್ರಿಯೆಯಿಂದ ವ್ಯತ್ಯಾಸಕ್ಕೊಳಪಡುತ್ತದೆ.

೧೭೬೯

ವರ್ಷ ೧೭೬೯ (MDCCLXIX) ಗ್ರೆಗೋರಿಯನ್ ಪಂಚಾಂಗದ ಭಾನುವಾರ ಆರಂಭವಾದ ಸಾಮಾನ್ಯ ವರ್ಷವಾಗಿತ್ತು.

೧೭೭೦

ವರ್ಷ ೧೭೭೦ (MDCCLXX) ಗ್ರೆಗೋರಿಯನ್ ಪಂಚಾಂಗದ ಸೋಮವಾರ ಆರಂಭವಾದ ಸಾಮಾನ್ಯ ವರ್ಷವಾಗಿತ್ತು.

೧೭೭೨

ವರ್ಷ ೧೭೭೨ (MDCCLXXII) ಗ್ರೆಗೋರಿಯನ್ ಪಂಚಾಂಗದ ಬುಧವಾರ ಆರಂಭವಾದ ಅಧಿಕ ವರ್ಷವಾಗಿತ್ತು.

೧೭೭೩

ವರ್ಷ ೧೭೭೩ (MDCCLXXIII) ಗ್ರೆಗೋರಿಯನ್ ಪಂಚಾಂಗದ ಶುಕ್ರವಾರ ಆರಂಭವಾದ ಸಾಮಾನ್ಯ ವರ್ಷವಾಗಿತ್ತು.

೧೭೭೪

ವರ್ಷ ೧೭೭೪ (MDCCLXXIV) ಗ್ರೆಗೋರಿಯನ್ ಪಂಚಾಂಗದ ಶನಿವಾರ ಆರಂಭವಾದ ಸಾಮಾನ್ಯ ವರ್ಷವಾಗಿತ್ತು.

ಇತರ ಭಾಷೆಗಳು

This page is based on a Wikipedia article written by authors (here).
Text is available under the CC BY-SA 3.0 license; additional terms may apply.
Images, videos and audio are available under their respective licenses.