ಸೆಪ್ಟೆಂಬರ್ ೧೧

ಸೆಪ್ಟೆಂಬರ್ ೧೧ - ಸೆಪ್ಟೆಂಬರ್ ತಿಂಗಳಿನ ಹನ್ನೊಂದನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೫೪ನೇ ದಿನ (ಅಧಿಕ ವರ್ಷದಲ್ಲಿ ೨೫೫ನೇ ದಿನ)

ಟೆಂಪ್ಲೇಟು:ಸೆಪ್ಟೆಂಬರ್ ೨೦೧೯

ಪ್ರಮುಖ ಘಟನೆಗಳು

ಜನನ

ನಿಧನ

  • ೧೬೭೭ - ಜೇಮ್ಸ್ ಹ್ಯಾರಿಂಗ್ಟನ್, ಇಂಗ್ಲೀಷ್ ತತ್ವಜ್ಞಾನಿ ಮತ್ತು ಲೇಖಕ
  • ೧೯೩೫ - ಚಾರ್ಲ್ಸ್ ನೋರಿಸ್, ಅಮೇರಿಕಾದ ತನಿಖಾಧಿಕಾರಿಯು

ಹಬ್ಬ/ಆಚರಣೆಗಳು

  • ರಾಷ್ಟ್ರೀಯ ಕ್ಯಾಟಲೊನಿಯಾ ದಿನ (ಕ್ಯಾಟಲೊನಿಯಾ)

ಹೊರಗಿನ ಸಂಪರ್ಕಗಳು

ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್
ಇಂಡಿಯನ್‌ ಏರ್‌‌ಲೈನ್ಸ್‌

ಇಂಡಿಯನ್‌ ಏರ್‌‌ಲೈನ್ಸ್‌ ಅಥವಾ ಹಿಂದಿ:इंडियन एयरलाइंस or इंडियनಇಂಡಿಯನ್ ಇದು ಮುಂಬಯಿ ಮೂಲದ ಏರ್ ಲೈನ,ಇಂಡಿಯಾ,ಪ್ರಮುಖವಾಗಿ ಆಂತರಿಕ ವಿಮಾನಯಾನದ ಜೊತೆಗೆ ಅಂತಾರಾಷ್ಟ್ರೀಯ ನಾಗರಿಕ ವಿಮಾನ ಸೌಲಭ್ಯವನ್ನೂ ನೆರೆ ದೇಶಗಳಿಗೆ ಒದಗಿಸುತ್ತದೆ. ಇಂಡಿಯನ್ ಏರ್ ಲೈನ್ಸ್ ರಾಜ್ಯ ಮಾಲಿಕತ್ವದಲ್ಲಿದೆ.ಇದರ ಉಸ್ತುವಾರಿಯನ್ನು ನಾಗರಿಕ ವಿಮಾನ ಯಾನ ಸಚಿವಾಲಯ ನೋಡಿಕೊಳ್ಳುತ್ತದೆ. ಇದರಲ್ಲಿ ಎರಡು ತೆರನಾದ ಫ್ಲ್ಯಾಗ(ಪತಾಕೆ) ಗಳಿವೆ.ಒಂದು ಇಂಡಿಯನ್ ಧ್ವಜ,ಮತ್ತೊಂದು ಏರ್ ಇಂಡಿಯಾ ಇದರ ಹೆಗ್ಗುರುತಾಗಿದೆ.

ಇದಕ್ಕೆ ಕಂಪನಿ ಮಾಲಿಕತ್ವ ಮತ್ತು ಕಾರ್ಯಾಡಳಿತವಿದ್ದರೂ ಇದನ್ನು ೭ ಡಿಸೆಂಬರ್ ೨೦೦೫,ರಿಂದ ಇಂಡಿಯನ್ ಏರ್ ಲೈನ್ಸ್ ಲಿಮಿಟೆಡ್ ಎಂದು ಕರೆಯಲಾಗುತ್ತದೆ.ಸಾರ್ವಜನಿಕ ವಲಯದ ಶೇರು ಬಂಡವಾಳ ಸಂಗ್ರಹಿಸಲು ಹಾಗು ಈ ಕ್ಷೇತ್ರದಲ್ಲಿ ಇದಕ್ಕೊಂದು ಹೊಸ ಛಾಪು ಮೂಡಿಸಲು ಜಾಹಿರಾತು ಮಾಧ್ಯಮಗಳಲ್ಲಿ ಇದನ್ನು ಇಂಡಿಯನ್ ಅಥವಾ इंडियन ಎಂಬ ಪದನಾಮದಿಂದ ಗುರುತಿಸಲ್ಪಡುತ್ತದೆ.ಇನಿಶಿಯಲ್ ಪಬ್ಲಿಕ್ ಆಫರಿಂಗ್ (IPO)ಸಂದರ್ಭದಲ್ಲಿ ಇದಕ್ಕೆ ನವೀನ ಕಾಯಕಲ್ಪ ಒದಗಿಸಲು ಪ್ರಯತ್ನಿಸಲಾಯಿತು. ಈ ಏರ್ ಲೈನ್ ಏರ್ ಇಂಡಿಯಾದೊಂದಿಗೆ ನಿಕಟವಾಗಿ ಕಾರ್ಯ ನಿರ್ವಹಿಸುತ್ತದೆ.ಅಲ್ಲದೇ ಇಂಡಿಯಾದ ನ್ಯಾಶನಲ್ ಕ್ಯಾರಿಯರ್ ಅಂತೆ ಕೆಲಸ ಮಾಡುತ್ತದೆ. ಅಲಿಯನ್ಸ್ ಏರ್ ಒಂದು ಪೂರ್ಣ ಪ್ರಮಾಣದ ಇಂಡಿಯನ್ ಏರ್ ಲೈನ್ಸ್ ನ ಶಾಖೆಯಾಗಿ ಕಾರ್ಯ ನಿರ್ವಹಿಸುತ್ತದೆ;ಇದನ್ನು ಏರ್ ಇಂಡಿಯಾ ರೀಜನಲ್ ಎಂದು ಮರುನಾಮಕರಣ ಮಾಡಲಾಗಿದೆ.

ಫೆಬ್ರವರಿ ೨೦೦೭ರಲ್ಲಿ ಇಂಡಿಯನ್ ಏರ್ ಲೈನ್ಸ್ ನ್ನು ಏರ್ ಇಂಡಿಯಾದೊಂದಿಗೆ ಸೇರ್ಪಡೆಯಾಗುವಂತೆ ಸಮ್ಮತಿಸಲಾಯಿತು. ಭಾರತೀಯ ವಿಮಾನಯಾನ ಸಚಿವಾಲಯವು ರಾಷ್ಟ್ರೀಯ ಇಂಡಿಯನ್ ಧ್ವಜ ಹೊತ್ತ ಏರ್ ಇಂಡಿಯಾ ಲಿಮಿಟೆಡ್ (AI) ಮತ್ತು ಸ್ಥಳೀಯ ಆಂತರಿಕ ವಿಮಾನ ಸೇವೆಯ ಇಂಡಿಯನ್ ಏರ್ ಲೈನ್ಸ್ (IA) ಒಂದುಗೂಡುವವೆಂದು ೨೦೦೭ರಲ್ಲಿ ಘೋಷಿಸಿ ಇದನ್ನು ಜುಲೈ೧೫ರಿಂದ,೨೦೦೭ಕ್ಕೆ ಅನುಷ್ಟಾನಕ್ಕೆ ತಂದಿತು. ನೂತನವಾಗಿ ರಚನೆಯಾದ ಇದನ್ನು "ಏರ್ ಇಂಡಿಯಾ"ಎಂದು ಕರೆಯಲ್ಪಟ್ಟು ಆಂತರಿಕ ಅಥವಾ ಸ್ಥಳೀಯ ಹಾಗು ಬಾಹ್ಯ ಅಂದರೆ ಹೊರದೇಶಗಳ ಅಂತಾರಾಷ್ಟ್ರೀಯ ವಿಮಾನಯಾನ ಸೌಲಭ್ಯಕ್ಕೆ ಅನುವು ಮಾಡಲಾಗಿದೆ.

ಒಸಾಮಾ ಬಿನ್ ಲಾಡೆನ್

ಒಸಾಮಾ ಬಿನ್ ಮೊಹಮ್ಮದ್ ಬಿನ್ ಅವದ್ ಬಿನ್ ಲಾಡೆನ್ (ಅರೇಬಿಕ್: أسامة بن محمد بن عوض بن لادن, ೧೦ ಮಾರ್ಚ್ ೧೯೫೭– ೨ ಮೇ ೨೦೧೧) ಸೌದಿ ಅರೇಬಿಯದ ಶ್ರೀಮಂತ ಬಿನ್ ಲಾಡೆನ್ ಪರಿವಾರದ ಸದಸ್ಯ, ಜಿಹಾದಿ ಭಯೋತ್ಪಾದಕ ಸಂಸ್ಥೆಯಾದ ಅಲ್ ಖೈದಾದ ಸಂಸ್ಥಾಪಕ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಸೆಪ್ಟೆಂಬರ್ ೧೧ ೨೦೦೧ರಂದು ನಡೆದ ದಾಳಿ ಮತ್ತು ಇನ್ನೂ ಅನೇಕ ನಾಗರಿಕ ಮತ್ತು ಸೈನ್ಯ ಗುರಿಗಳ ಮೇಲೆ ನಡೆದ ದಾಳಿಗಳ ಜವಾಬ್ದಾರ.

ಜೇಮ್ಸ್ ಡೀನ್

ಟೆಂಪ್ಲೇಟು:Pp-pending

ಜೇಮ್ಸ್ ಬೈರನ್ ಡೀನ್ (ಫೆಬ್ರುವರಿ ೮, ೧೯೩೧ – ಸೆಪ್ಟೆಂಬರ್ ೩೦, ೧೯೫೫) ಅವರು ಒಬ್ಬ ಅಮೆರಿಕನ್ ಚಲನಚಿತ್ರ ನಟನೂ ಮತ್ತು ಒಬ್ಬ ಸಾಂಸ್ಕೃತಿಕ ಪ್ರತೀಕವೂ ಆಗಿದ್ದರು. ಅವರ ವ್ಯಕ್ತಿತ್ವವನ್ನು ಅವರು ಲಾಸ್ ಏಂಜೆಲ್ಸ್‌ನ ಕ್ಷೋಭೆಗೀಡಾಗಿರುವ ಹರೆಯದ ಹುಡುಗ ಜಿಮ್ ಸ್ಟಾರ್ಕ್‌ನ ಪಾತ್ರದಲ್ಲಿ ನಟಿಸಿರುವ ಅತ್ಯಂತ ಜನಪ್ರಿಯ ಚಿತ್ರವಾದ ರೆಬೆಲ್ ವಿದೌಟ್ ಕಾಸ್ ಎಂಬ ಚಲನಚಿತ್ರದ ಶೀರ್ಷಿಕೆಯಲ್ಲಿ ಅತ್ಯಂತ ಸಮರ್ಥವಾಗಿ ಬಿಂಬಿಸಲಾಗಿದೆ. ಈತನ ಇತರೆ ಎರಡು ಪಾತ್ರಗಳಾದ ಈಸ್ಟ್ ಆಫ್ ಈಡನ್‌ ನಲ್ಲಿನ ಲೋನರ್ ಕ್ಯಾಲ್ ಟ್ರಾಸ್ಕ್, ಮತ್ತು ಜ‌ಯಂಟ್‌ ನಲ್ಲಿನ ಸಿಡುಕು ರೈತ ಜೆಟ್ ರಿಂಕ್‍‌ಗಳು ಇವರನ್ನು ತಾರೆಯಾಗಿ ಗುರುತಿಸಿವೆ. ಡೀನ್‌ನ ಬಹುಕಾಲ ಬಾಳಿಕೆಯ ಕೀರ್ತಿ ಮತ್ತು ಖ್ಯಾತಿ ಈ ಮೂರು ಚಲನಚಿತ್ರಗಳ ಮೇಲೇ ನಿಂತಿದೆ, ತಾರೆಯ ಪಾತ್ರದ ಸಂಪೂರ್ಣ ಸೃಷ್ಟಿ. ಚಿಕ್ಕ ವಯಸ್ಸಿನಲ್ಲಿಯೇ ಕಾರು ಅಪಘಾತದಲ್ಲಾದ ಮರಣವು ಆತನ ಪ್ರಖ್ಯಾತಿಗೆ ವಿರಾಮ ನೀಡಿದವು.

ಅಕಾಡೆಮಿ ಅವಾರ್ಡ್‌ ನ ಅತ್ಯುತ್ತಮ ನಟ ನ ಪ್ರಶಸ್ತಿಗೆ ಮರಣೋತ್ತರವಾಗಿ ನಾಮಕರಣಗೊಂಡ ಮೊದಲ ನಟ ಇವನು ಮತ್ತು ಎರಡು ಬಾರಿ ಮರಣೋತ್ತರ ನಟನ ಪ್ರಶಸ್ತಿಗೆ ನಾಮಕರಣಗೊಂಡ ಏಕಮಾತ್ರ ನಟನಾಗಿ ಉಳಿದಿದ್ದಾನೆ. ೧೯೯೯ರಲ್ಲಿ, ಅಮೆರಿಕನ್ ಫಿಲ್ಮ್ ಇನ್ಸ್‌ಟಿಟ್ಯೂಟ್ ಅವರ AFIನ 100 ವರ್ಷ…100 ತಾರೆಯರು ಪಟ್ಟಿಯಲ್ಲಿ ಡೀನ್‌ನನ್ನು ೧೮ನೇ ಅತ್ಯುತ್ತಮ ಪುರುಷ ಚಲನಚಿತ್ರ ನಟ ಸ್ಥಾನವನ್ನು ನೀಡಿದ್ದಾರೆ.

ಟುರೆಟ್ ಸಿಂಡ್ರೋಮ್

ಟುರೆಟ್ ಸಿಂಡೋಮ್ (ಟುರೆಟ್‌ನ ರೋಗಲಕ್ಷಣ , ಟುರೆಟ್‌ನ ಅಸ್ವಸ್ಥತೆ , ಗಿಲ್ಲೆಸ್ ದೆಲಾ ಟುರೆಟ್ ಸಿಂಡ್ರೋಮ್ , ಜಿಟಿಎಸ್ ಅಥವಾ, ಹೆಚ್ಚು ಸಾಮಾನ್ಯವಾಗಿ, ಸರಳವಾಗಿ ಟುರೆಟ್‌ ನ ಅಥವಾ ಟಿಎಸ್ ಎಂದು ಕೂಡ ಕರೆಯಲ್ಪಡುತ್ತದೆ) ಇದು ಮಕ್ಕಳಲ್ಲಿ ಪ್ರಾರಂಭವಾಗುವ ಒಂದು ಆನುವಂಶಿಕ ನರಮಾನಸಿಕ ಅಸ್ವಸ್ಥತೆಯಾಗಿದೆ, ಅದು ಬಹುವಿಧದ ದೈಹಿಕ (ಧ್ವನಿಯ) ಸಂಕೋಚನಗಳು ಮತ್ತು ಕನಿಷ್ಠ ಪಕ್ಷ ಒಂದು ವಾಚಿಕ ಸಂಕೋಚನದ ಮೂಲಕ ಗುಣಲಕ್ಷಣಗಳನ್ನು ವಿವರಿಸಲ್ಪಡುತ್ತದೆ; ಈ ಸಂಕೋಚನಗಳು ಗುಣಲಕ್ಷಣದಲ್ಲಿ ಬಣ್ಣರುಚಿಗಳಿಲ್ಲದ ಮತ್ತು ಕ್ಷಯಿಸುವಿಕೆಯನ್ನು ಹೊಂದಿದ ಸ್ಥಿತಿಯಾಗಿರುತ್ತದೆ. ಟುರೆಟ್‌ನ ರೋಗಲಕ್ಷಣವು ಅನೈಚ್ಛಿಕ ಸಂಕೋಚನ ಅಸ್ವಸ್ಥತೆಯ ಒಂದು ಶಕ್ತಿಯ ಭಾಗವಾಗಿ ಉಲ್ಲೇಖಿಸಲ್ಪಡುತ್ತದೆ, ಅದು ಕ್ಷಣಮಾತ್ರದ ಮತ್ತು ತೀವ್ರವಾದ ಸಂಕೋಚನಗಳನ್ನು ಒಳಗೊಳ್ಳುತ್ತದೆ.

ಟುರೆಟ್ ಸಿಂಡ್ರೋಮ್ ಇದು ಒಮ್ಮೆ ತುಂಬಾ ವಿರಳವಾದ ಮತ್ತು ವಿಲಕ್ಷಣವಾದ ರೋಗಲಕ್ಷಣವಾಗಿತ್ತು, ಇದು ಹೆಚ್ಚು ಸಾಮಾನ್ಯವಾಗಿ ಅಶ್ಲೀಲ ಶಬ್ದಗಳ ಉದ್ಗಾರದ ಜೊತೆಗೆ ಅಥವಾ ಸಾಮಾಜಿಕವಾಗಿ ಅಸಮರ್ಪಕವಾದ ಮತ್ತು ಭಂಗವನ್ನುಂಟುಮಾಡುವ ಪ್ರತಿಕ್ರಿಯೆಗಳ (ಕೊಪ್ರೊಲಲಿಯಾ) ಜೊತೆಗೆ ಸಂಬಂಧಿತವಾಗಿದೆ, ಆದರೆ ಈ ರೋಗಲಕ್ಷಣವು ಟುರೆಟ್ ಸಿಂಡ್ರೋಮ್ ಅನ್ನು ಹೊಂದಿರುವ ಕೆಲವೇ ಕೆಲವು ಜನರಲ್ಲಿ ಮಾತ್ರ ಕಂಡುಬರುತ್ತದೆ. ಟುರೆಟ್‌ನ ಲಕ್ಷಣವು ದಿರ್ಘ ಕಾಲದವರೆಗೆ ಒಂದು ವಿರಳವಾದ ಸ್ಥಿತಿ ಎಂದು ಪರಿಗಣಿಸಲ್ಪಡುವುದಿಲ್ಲ, ಆದರೆ ಹೆಚ್ಚಿನ ಸನ್ನಿವೇಶಗಳು ಮಂದಗತಿಯವು ಎಂದು ಪರಿಗಣಿಸಲ್ಪಡುವ ಕಾರಣದಿಂದ ಇದು ಯಾವಾಗಲೂ ಕೂಡ ನಿಖರವಾಗಿ ಕಂಡುಹಿಡಿಯಲ್ಪಡುವುದಿಲ್ಲ. ೧ ಮತ್ತು ೧೦ ವರ್ಷಗಳ ನಡುವಿನ ಮಕ್ಕಳಲ್ಲಿ ಪ್ರತಿ ೧,೦೦೦ ಮಕ್ಕಳು ಟುರೆಟ್‌ನ ಲಕ್ಷಣವನ್ನು ಹೊಂದಿರುತ್ತಾರೆ; ಹೆಚ್ಚೆಂದರೆ ೧,೦೦೦ ಜನರಲ್ಲಿ ೧೦ ಜನರು ಸಂಕೋಚನಾ ಅಸ್ವಸ್ಥತೆಗಳನ್ನು ಹೊಂದಿರುತ್ತಾರೆ, ಅದರ ಜೊತೆಗೆ ಕಣ್ಣುಗಳ ಮಿಟುಕಿಸುವಿಕೆ, ಕೆಮ್ಮುವಿಕೆ, ಗಂಟಲು ಸರಿಪಡಿಸಿಕೊಳ್ಳುವಿಕೆ, ವಾಸನೆಯನ್ನು ತೆಗೆದುಕೊಳ್ಳುವಿಕೆ, ಮತ್ತು ಮೌಖಿಕ ಚಲನೆಗಳ ಸಾಮಾನ್ಯವಾದ ಸಂಖೋಚನವನ್ನು ಹೊಂದಿರುತ್ತಾರೆ. ಟುರೆಟ್ ಅನ್ನು ಹೊಂದಿರುವ ಜನರು ಸಾಮಾನ್ಯ ಜೀವನ ನಿರೀಕ್ಷಣೆ ಮತ್ತು ಬುದ್ಧಿವಂತಿಕೆಯನ್ನು ಹೊಂದಿರುತ್ತಾರೆ. ಸಂಕೋಚನದ ತೀವ್ರತೆಯು ಮಕ್ಕಳು ಬಾಲ್ಯಾವಸ್ಥೆಯನ್ನು ದಾಟುತ್ತಿದ್ದಂತೆ ಕಡಿಮೆಯಾಗಲ್ಪಡುತ್ತದೆ, ಮತ್ತು ಪ್ರೌಢಾವಸ್ಥೆಯಲ್ಲಿ ತೀವ್ರವಾದ ಟುರೆಟ್‌ನ ಲಕ್ಷಣವು ವಿರಳ ಸಂಗತಿಯಾಗಿದೆ. ಜೀವನದ ಎಲ್ಲ ಸಮಯದಲ್ಲಿಯೂ ಕೂಡ ಟುರೆಟ್ ಅನ್ನು ಹೊಂದಿರುವ ಪ್ರಮುಖ ವ್ಯಕ್ತಿಗಳು ಕಂಡುಬರುತ್ತಾರೆ.ಆನುವಂಶಿಕ ಮತ್ತು ವಾತಾವರಣದ ಸಂಗತಿಗಳು ಟುರೆಟ್‌ನ ವಿವರ್ಣನ ಶಾಸ್ತ್ರದಲ್ಲಿ ಒಂದು ಪಾತ್ರವನ್ನು ನಿರ್ವಹಿಸುತ್ತವೆ, ಆದರೆ ನಿಖರವಾದ ಕಾರಣಗಳು ಇನ್ನೂ ತಿಳಿಯಲ್ಪಟ್ಟಿಲ್ಲ. ಹೆಚ್ಚಿನ ದೃಷ್ಟಾಂತಗಳಲ್ಲಿ, ಚಿಕಿತ್ಸೆಯು ಅವಶ್ಯಕವಾಗಿರುವುದಿಲ್ಲ. ಸಂಕೋಚನದ ಪ್ರತಿ ಸನ್ನಿವೇಶಕ್ಕೂ ಕೂಡ ಒಂದು ಪರಿಣಾಮಕಾರಿಯಾದ ಚಿಕಿತ್ಸೆಯು ಇರುವುದಿಲ್ಲ, ಆದರೆ ಅವುಗಳ ಬಳಕೆಯು ಅತ್ಯವಶ್ಯಕವಾದಾಗ ಸಹಾಯ ಮಾಡುವ ಔಷಧೋಪಚಾರಗಳು ಮತ್ತು ಚಿಕಿತ್ಸೆಗಳು ಅಸ್ತಿತ್ವದಲ್ಲಿವೆ. ವಿವರಣೆ ಮತ್ತು ಪುನರ್ಭರವಸೆ ಇವುಗಳೇ ಅನೇಕ ವೇಳೆ ಸಮರ್ಥವಾದ ಚಿಕಿತ್ಸೆಯಾಗಿರುತ್ತವೆ; ಅದರ ಬಗ್ಗೆ ಶಿಕ್ಷಣವನ್ನು (ಮಾಹಿತಿಯನ್ನು) ನೀಡುವುದು ಯಾವುದೇ ಚಿಕಿತ್ಸೆಯ ಒಂದು ಅತ್ಯಂತ ಪ್ರಮುಖವಾದ ಭಾಗವಾಗಿರುತ್ತದೆ.ನಾಮಸೂಚಕವು ಜೀನ್-ಮಾರ್ಟಿನ್ ಕ್ಯಾರ್ಕೊಟ್‌ನಿಂದ (೧೮೨೫–೧೮೯೩) ಅವನ ಸ್ಥಳೀಕ ಜೊರ್ಜ್ಸ್ ಅಲ್ಬರ್ಟ್ ಎಡೌರ್ಡ್ ಬ್ರುಟುಸ್ ಗಿಲ್ಲೆಸ್ ದೆ ಲಾ ಟುರೆಟ್‌ನ (೧೮೫೯–೧೯೦೪) ಪರವಾಗಿ ನೀಡಲ್ಪಟ್ಟಿತು, ಜೊರ್ಜ್ಸ್ ಅಲ್ಬರ್ಟ್ ಎಡೌರ್ಡ್ ಬ್ರುಟುಸ್ ಗಿಲ್ಲೆಸ್ ದೆ ಲಾ ಟುರೆಟ್‌‌ನು ಫ್ರೆಂಚ್‍ನ ಒಬ್ಬ ವೈದ್ಯ ಮತ್ತು ನರಶಾಸ್ತ್ರಜ್ಞನಾಗಿದ್ದನು, ಅವನು ೧೮೮೫ ರಲ್ಲಿ ಟುರೆಟ್ ಅನ್ನು ಹೊಂದಿರುವ ಒಂಭತ್ತು ರೋಗಿಗಳ ಒಂದು ವರದಿಯನ್ನು ಪ್ರಕಟಿಸಿದನು.

ದೂರಸಂವಹನ ವ್ಯವಸ್ಥೆ

ಸಂವಹನ ಕಲ್ಪಿಸುವ ಉದ್ದೇಶಕ್ಕಾಗಿ ಗಮನಾರ್ಹವಾದ ದೂರದ ಆಚೆಯಿಂದ ಮಾಹಿತಿಯ ಪ್ರಸಾರಣವೇ ದೂರಸಂವಹನ ವ್ಯವಸ್ಥೆ . ಮುಂಚಿನ ದಿನಗಳಲ್ಲಿ, ದೂರಸಂವಹನ ವ್ಯವಸ್ಥೆಗಾಗಿ ದೃಗ್ಗೋಚರ ಸಂಕೇತಗಳಾದ ಮಾರ್ಗದರ್ಶಕ ದೀಪಗಳು, ಹೊಗೆ, ಸಂಕೇತಕಂಬ ತಂತಿ ಸಂದೇಶಗಳು, ಸಂಕೇತ ಧ್ವಜಗಳು, ದ್ಯುತಿ ಸೌರಲೇಖಿಗಳನ್ನು ಬಳಸಿ ಅಥವಾ ಶಾಬ್ಧಿಕ ಸಂದೇಶಗಳಾದ ಡ್ರಮ್ ಬಾರಿಸುವ ಮೂಲಕ ಸಂಕೇತ ಕಳುಹಿಸುವುದು, ಕೊಂಬು ಊದುವ ಮೂಲಕ, ಅಥವಾ ದೊಡ್ಡದಾದ ಸಿಳ್ಳು ಹಾಕುವುದು ಇವುಗಳನ್ನು ಬಳಸಲಾಗುತ್ತಿತ್ತು. ವಿದ್ಯುಚ್ಛಕ್ತಿ ಮತ್ತು ವಿದ್ಯುಜ್ಜನಿತಗಳ ಆಧುನಿಕ ಯುಗದಲ್ಲಿ ದೂರಸಂವಹನ ವ್ಯವಸ್ಥೆಗಾಗಿ ವಿದ್ಯುತ್ ಉಪಕರಣಗಳಾದ ತಂತಿ ಸಂದೇಶಗಳು, ದೂರವಾಣಿ, ಟೆಲೆಗ್ರಾಫ್ ಯಂತ್ರಗಳು, ರೇಡಿಯೋ ಮತ್ತು ಸೂಕ್ಷ್ಮತರಂಗ ಸಂವಹನಗಳ ಬಳಕೆ ಹಾಗೆಯೆ ಫೈಬರ್ ಆಪ್ಟಿಕ್ಸ್ ಮತ್ತು ಅದಕ್ಕೆ ಸಂಬಂಧಿಸಿದ ವಿದ್ಯುಜ್ಜನಿತಗಳು, ಮತ್ತು ಕಕ್ಷೆಯಲ್ಲಿ ಸುತ್ತುತ್ತಿರುವ ಉಪಗ್ರಹಗಳು ಮತ್ತು ಅಂತರ್ಜಾಲ ಬಳಸಿಕೊಳ್ಳುತ್ತಿದ್ದೇವೆ.

೧೮೩೦ರಲ್ಲಿ ತಂತಿ ಸಂದೇಶದ ಸಂಪೂರ್ಣ ಬೆಳವಣಿಗೆಯಾಗುತ್ತಿದ್ದಂತೆ ಆಧುನಿಕ ವಿದ್ದುಜ್ಜನಿತ ದೂರಸಂವಹನ ವ್ಯವಸ್ಥೆಯಲ್ಲಿ ಮೊದಲಬಾರಿಗೆ ಹೊಸ ಬೆಳವಣಿಗೆ ಆರಂಭವಾಯಿತು. ಹತ್ತೊಂಭತ್ತನೆಯ ಶತಮಾನದಲ್ಲಿ ಜಗತ್ತಿನ ಎಲ್ಲ ಖಂಡಗಳಲ್ಲೂ ಸಂವಹನದಲ್ಲಿ ವಿದ್ಯುತ್ತಿನ ಬಳಕೆಯು ಹೆಚ್ಚಾಯಿತು, ಮತ್ತು ಸಮುದ್ರದ ನೆಲದಲ್ಲಿ ಕೇಬಲ್ ಎಳೆಯುವ ಮೂಲಕ ಖಂಡಗಳ ನಡುವೆ ಸಂವಹನ ಕಲ್ಪಿಸಲಾಗುತ್ತಿದೆ. ವಿದ್ಯುತ್ತಿನ ದೂರಸಂವಹನ ವ್ಯವಸ್ಥೆಯಲ್ಲಿ ಬಳಸಲಾಗುವ ಪ್ರಸಿದ್ಧ ಮೂರು ಪದ್ಧತಿಗಳು, ತಂತಿ ಸಂದೇಶ, ದೂರವಾಣಿ ಮತ್ತು ಟೆಲೆಗ್ರಾಫ್ ಯಂತ್ರಗಳು, ಇವೆಲ್ಲವುಗಳಿಗೂ ವಾಹಕ ಲೋಹ ತಂತಿಯ ಬಳಕೆ ಅಗತ್ಯ.

ಇಪ್ಪನೇಯ ಶತಮಾನದ ಆರಂಭದ ದಶಕದಲ್ಲಿ ನಿಸ್ತಂತು ದೂರಸಂವಹನ ವ್ಯವಸ್ಥೆಯ ಕ್ರಾಂತಿ ಶುರುವಾಯಿತು. ಮಾರ್ಕೋನಿ ಗುಗ್ಲಿಯೆಲ್ಮೊ ನಿಸ್ತಂತು ರೇಡಿಯೋ ಸಂವಹನದ ಪ್ರಾರಂಭಿಕ ಬೆಳವಣಿಗೆಗಾಗಿ ೧೯೦೯ರಲ್ಲಿ ಭೌತಶಾಸ್ತ್ರದಲ್ಲಿ ನೋಬೆಲ್ ಬಹುಮಾನ ಪಡೆದುಕೊಂಡರು. ವಿದ್ಯುತ್ ಸಂಬಂಧಿ ಮತ್ತು ವಿದ್ಯುಜ್ಜನಕ ಕ್ಷೇತ್ರದಲ್ಲಿ ಅತಿ ಹೆಚ್ಚು ಗುರುತಿಸಲ್ಪಡುವ ಇತರೆ ಮೂಲ ಪ್ರವರ್ತಕರು ಮತ್ತು ಅಭಿವೃದ್ಧಿ ಪಡಿಸಿದವರು: ಚಾರ್ಲ್ಸ್ ವೀಟ್‌ಸ್ಟೋನ್, ಮತ್ತು ಸ್ಯಾಮ್ಯುಯೆಲ್ ಮೋರ್ಸ್ (ತಂತಿ ಸಂದೇಶ), ಅಲೆಗ್ಸಾಂಡರ್ ಗ್ರಹಾಂ ಬೆಲ್ (ದೂರವಾಣಿ), ನಿಕೊಲಾ ಟೆಸ್ಲಾ, ಎಡ್ವಿನ್ ಆರ್ಮ್‌ಸ್ಟ್ರಾಂಗ್, ಮತ್ತು ಲೀ ಡೆ ಫಾರೆಸ್ಟ್ (ರೇಡಿಯೋ) ಜಾನ್ ಲಾಗಿ ಬೇರ್ಡ್ ಮತ್ತು ಫಿಲೊ ಫಾರ್ನ್ಸ್‌‌ವರ್ತ್ (ದೂರದರ್ಶನ).

ದೂರಸಂವಹನ ವ್ಯವಸ್ಥೆಯು ಜಾಗತಿಕ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು ೨೦೦೮ರಲ್ಲಿ ಜಗತ್ತಿನ ದೂರಸಂವಹನ ವ್ಯವಸ್ಥೆ ಉದ್ಯಮದ ಅಂದಾಜು ಆದಾಯ $೩.೮೫ ಟ್ರಿಲಿಯನ್‌ಗಳು. ೨೦೦೮ರಲ್ಲಿ ಜಾಗತಿಕ ದೂರಸಂವಹನ ವ್ಯವಸ್ಥೆ ಸೇವೆಯ ಅಂದಾಜು ಆದಾಯ $೧.೭ ಟ್ರಿಲಿಯನ್‌ಗಳು, ೨೦೧೩ರಲ್ಲಿ ಇದು $೨.೭ ಟ್ರಿಲಿಯನ್‌ಗಳಿಗೆ ಮುಟ್ಟುವ ನಿರೀಕ್ಷೆಯಿದೆ.

ನಾಸ್ಟ್ರ ಡಮಸ್

ಮೈಕೆಲ್ ಡೆ ನಾಸ್ಟ್ರೆಡೇಮ್ (೧೪ ಡಿಸೆಂಬರ್ ಅಥವಾ ಡಿಸೆಂಬರ್ ೨೧ ೧೫೦೩ -೨ಜುಲೈ೧೫೬೬)ಸಾಮಾನ್ಯವಾಗಿ ಲ್ಯಾಟಿನ್ನಾಸ್ಟ್ರಾಡಾಮಸ ,ಈತ ಒಬ್ಬ ಫ್ರೆಂಚ್ ಪ್ರಾಚೀನ ಔಷಧ ವ್ಯಾಪಾರಿ ಮತ್ತು ಹೆಸರಾಂತ ಕಾಲಜ್ಞಾನಿ.ಆತ ತನ್ನ ಹಲವು ತತ್ವ ಸಿದ್ದಾಂತಗಳನ್ನು ಪ್ರಕಟಿಸಿದ್ದಾನೆ. ಅವುಗಳು ಆವಾಗಿನಿಂದಲೂ ಜಗತ್ತಿನಾದ್ಯಂತ ಪ್ರಖ್ಯಾತವಾಗಿವೆ. ಆತನ ಅತ್ಯುತ್ತಮ ಪುಸ್ತಕ ಲೇಸ್ ಪ್ರೊಫೆಟೀಸ್ ("ದಿ ಪ್ರೊಫೆಟೀಸ್ ") ಇದರ ಸಂಪುಟ ೧೫೫೫ರಲ್ಲಿ ಪ್ರಕಟಿಸಲ್ಪಟ್ಟಿತು. ಈ ಪುಸ್ತಕದ ಪ್ರಕಟನೆಯು ಆತನ ಮರಣಾನಂತರ ಇದರ ಮರುಮುದ್ರಣಕ್ಕೆ ಯಾವದೇ ಅಡ್ದಿಯಾಗಿರಲಿಲ್ಲ.ಇದರ ಪ್ರಕಾಶಕರು ಇದರಲ್ಲಿನ ವಿಶ್ವ ಪ್ರಸಿದ್ದ ಘಟನೆ ಮತ್ತು ಆಗುಹೋಗುಗಳ ಬಗ್ಗೆ ಜನರು ಆಕರ್ಷಿತರಾಗಿರುವದನ್ನು ಗಮನಿಸಿ ನಾಸ್ಟ್ರಾಡಾಮಸ್ ನ ಜನಪ್ರಿಯತೆಯನ್ನು ಗಮನಿಸಿದರು.ಅದೂ ಅಲ್ಲದೇ ಇಂತಹ ಘಟನೆಗಳ ಬಗ್ಗೆ ಆತ ಊಹಿಸಿರುವದನ್ನು ಗಮನಿಸಿದರೆ ಅದೊಂದು ಪವಾಡವೆಂದು ಅವರು ಹೇಳುತ್ತಾರೆ. ಆತನ ಹಲವಾರು ಸಂಶೋಧನೆಗಳು ಮತ್ತು ತತ್ವಗಳು ಬೈಬಲ್ ನಿಯಮದಲ್ಲಿರುವ ಭೋದನೆಯನ್ನು ಹೋಲುತ್ತವೆಯಲ್ಲದೇ ಇನ್ನುಳಿದ ಯಾವದೇ ಸಿದ್ದಾಂತಕ್ಕೂ ಸರಿಸಾಟಿಯಾಗುವ ಧಾಟಿಯಲ್ಲಿವೆ.

ಹಲವಾರು ಶಿಕ್ಷಣ ತಜ್ಞರು ಈ ನಾಸ್ಟ್ರಾಡಾಮಸ್ ನ ತತ್ವಗಳನ್ನು ಜಗತ್ತಿನ ಘಟನೆಗಳಿಗೆ ಹೋಲಿಕೆ ಮಾಡುವುದನ್ನು ಇದು ನಾಸ್ಟ್ರಾಡಾಮಸ್ ನ ಈ ನಾಲ್ಕು ಸಾಲಿನ ಪದ್ಯಗಳನ್ನು ತಪ್ಪು ತಪ್ಪಾಗಿ ಅರ್ಥೈಸಲಾಗಿದೆ ಇಲ್ಲವೇ ಅದು ತಪ್ಪು ತರ್ಜುಮೆಯಾಗಿರಬಹದೆಂದು(ಕೆಲವನ್ನು ಉದ್ದೇಶಪೂರ್ವಕವಾಗಿ) ಅಭಿಪ್ರಾಯಪಡುತ್ತಾರೆ. ಅದೂ ಅಲ್ಲದೇ ಆತನ ಪದ್ಯದ ಸಾಲುಗಳಲ್ಲಿ ನಾಸ್ಟ್ರಾಡಾಮಸ್ ಯಾವ ತೆರನಾಗಿ ಘಟನೆಗಳ ಬಗ್ಗೆ ಏನು ಬರೆದಿದ್ದಾನೆಂಬುದನ್ನು ಯಾರೂ ಸಾಕ್ಷಿ ಪುರಾವೆಗಳನ್ನುಹುಡುಕುವ ಪ್ರಯತ್ನ ಮಾಡಿಲ್ಲ.ಆದರೆ ಈ ಘಟನೆಯ ಸ್ಪಷ್ಟ ಗುರುತಿಸುವಿಕೆಯಲ್ಲಿ ಸಹ ವಿಫಲಗೊಂಡ ಬಗ್ಗೆ ಅವರ ಟೀಕೆ ಇದನ್ನು ಪುನರುಚ್ಚರಿಸಿದೆ.

ಬರಾಕ್ ಒಬಾಮ

ಬರಾಕ್ ಹುಸೇನ್ ಒಬಾಮ , (ಜನನ: ಆಗಸ್ಟ್ ೪, ೧೯೬೧) ಅಮೇರಿಕ ದೇಶದ ೪೪ನೇ ರಾಷ್ಟಪತಿ. ಇದಕ್ಕೆ ಮುಂಚೆ ಇಲಿನೊಯ್ ರಾಜ್ಯದ ಸೆನೆಟರ್ ಆಗಿದ್ದರು. ಇವರು ಡೆಮೊಕ್ರೆಟಿಕ್ ಪಕ್ಷಕ್ಕೆ ಸೇರಿರುವರು. ಕೊಲಂಬಿಯ ವಿಶ್ವವಿದ್ಯಾಲಯ ಮತ್ತು ಹಾರ್ವರ್ಡ್ ಕಾನೂನು ಶಾಲೆಗಳಲ್ಲಿ ವಿದ್ಯಾಭ್ಯಾಸ ಮುಗಿಸಿದ ಈತ ಇಲಿನೊಯ್ ರಾಜ್ಯದ ವಿಧಾನ ಸಭೆಯಲ್ಲಿ ೧೯೯೭ರಿಂದ ೨೦೦೪ರವರೆಗೆ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದರು. ೨೦೦೪ರಲ್ಲಿ ಸೆನೆಟ್‍ಗೆ ಆಯ್ಕೆಯಾದರು. ನವೆಂಬರ್ ೪,೨೦೦೮ ರಂದು ನಡೆದ ಚುನಾವಣೆಯಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿ ಆಯ್ಕೆಯಾದರು.

ಬ್ಯಾಟಲ್‌ಸ್ಟಾರ್ ಗ್ಯಾಲಕ್ಟಿಕಾ

ಬ್ಯಾಟಲ್‌ಸ್ಟಾರ್ ಗ್ಯಾಲಕ್ಟಿಕಾ , ಅಮೇರಿಕಾದವನಾದ ಗ್ಲೆನ್ ಎ.ಲಾರ್ಸಾನ್‌ನಿಂದ ಹುಟ್ಟುಹಾಕಲ್ಪಟ್ಟ ವೈಜ್ಞಾನಿಕ ಕಲ್ಪನೆಯ ಒಂದು ಫ್ರಾಂಚೈಸಿ. ಇದರ ಸಂಪೂರ್ಣ ಪೌರ ಹಕ್ಕು,೧೯೭೮ರಲ್ಲಿ ದೂರದರ್ಶನದ ಬ್ಯಾಟಲ್‌ಸ್ಟಾರ್ ಗ್ಯಾಲಕ್ಟಿಕಾ ಧಾರಾವಾಹಿಯೊಂದಿಗೆ ಆರಂಭವಾಯಿತು, ಇದರ ಸಂಕ್ಷಿಪ್ತ ಪರಿಣಾಮ, ೧೯೮೦ರ ದೂರದರ್ಶನ ಸರಣಿಗಳು, ಗ್ರಂಥದ ಸರಣಿ ರೂಪಾಂತರಗಳು, ಮೂಲ ಕಾದಂಬರಿಗಳು, ಕಾಮಿಕ್ ಪುಸ್ತಕಗಳು, ಒಂದು ಬೋರ್ಡ್ ಆಟ, ಮತ್ತು ವೀಡಿಯೊ ಆಟಗಳು ಇದನ್ನು ಹಿಂಬಾಲಿಸಿದವು. ೨೦೦೩ರಲ್ಲಿ ರೋನಾಲ್ಡ್ ಡಿ.ಮೂರ್ ಮತ್ತು ಡೇವಿಡ್ ಎರಿಕ್ ಇಬ್ಬರೂ ಬ್ಯಾಟಲ್‌ಸ್ಟಾರ್ ಗ್ಯಾಲಕ್ಟಿಕಾದ ಪುನರ್‌ಕಲ್ಪಿತ ಕಿರು ಸರಣಿಗಳನ್ನು ಮೊದಲ ಬಾರಿಗೆ ಪ್ರಸಾರ ಮಾಡಿದರು , ಈ ಪರಿಕಲ್ಪನೆಯು ಇನ್ನೊಂದು ಬ್ಯಾಟಲ್‌ಸ್ಟಾರ್ ಗ್ಯಾಲಕ್ಟಿಕಾದ ದೂರದರ್ಶನ ಸರಣಿಯಾಗಿ ಪ್ರಸಾರಗೊಂಡು ೨೦೦೪ ರಿಂದ ೨೦೦೯ರವರೆಗೆ ಮುಂದುವರೆಯಿತು. ಒಂದು ಪೂರ್ವಭಾವಿ ದೂರದರ್ಶನ ಸರಣಿ ಕ್ಯಾಪ್ರಿಕಾ ವನ್ನು ೨೦೧೦ರಲ್ಲಿ ಪ್ರಾರಂಭಿಸಿದರು.

ಎಲ್ಲ ಬ್ಯಾಟಲ್‌ಸ್ಟಾರ್ ಗ್ಯಾಲಕ್ಟಿಕಾ ದ ತಯಾರಿಕೆದಾರರು ನಮ್ಮ ತಾರಾಪುಂಜದಿಂದ ಬಹು ದೂರದಲ್ಲಿರುವ ಬಯಲು ಪ್ರದೇಶವನ್ನು ಆರಿಸಿದರು, ಮಾನವ ನಾಗರೀಕತೆಯು ಹನ್ನೆರಡು ವಸಾಹತು ಗಳೆಂಬ ಗ್ರಹಗಳ ಗುಂಪುಗಳಲ್ಲಿ ವಾಸಿಸುತ್ತಾರೆ, ಅದಕ್ಕಾಗಿ ಅವರು ತಮ್ಮ ತವರೂರಾದ ಕಾಬೊಲ್‌ನಿಂದ ವಲಸೆ ಬಂದಿದ್ದರು. ಹನ್ನೆರಡು ವಸಾಹತುಗಳು ದಶಮಾನಗಳವರೆಗೆ ಜೀವಿಗಳಲ್ಲಿ ನಿಯಂತ್ರಣ ವಿಜ್ಞಾನ (ಸೈಬರ್‌ನೆಟಿಕ್)ದ ಜನಾಂಗಕ್ಕೆ ಸಮರ ಸಾರಿದ್ದವು, ಇದನ್ನು ಸೈಲಾನ್ಸ್ ಎನ್ನುತ್ತಾರೆ, ಅವರ ಗುರಿ ಮಾನವ ಜನಾಂಗೀಯತೆಯನ್ನು ಬೇರುಸಹಿತ ಕೀಳುವುದೇ ಆಗಿದೆ.

ಸೈಲಾನ್ ಸಾಮ್ರಾಜ್ಯ ಮನುಷ್ಯರಿಗೆ ಶಾಂತಿಯನ್ನು ನೀಡುವ ಉಪಾಯವಾಗಿ ಸಾಬೀತಾಗಿದೆ. ಬಾಲ್ಟರ್‌ ಹೆಸರಿನ ಮಾನವನ ವಿಶ್ವಾಸದ್ರೋಹಿಯ ನೆರವಿನೊಂದಿಗೆ, ಸೈಲಾನ್‌ಗಳು ತಮ್ಮನ್ನು ರಕ್ಷಿಸಿಕೊಳ್ಳಲು ತವರು ಗ್ರಹಗಳಾದ ಹನ್ನೆರಡು ವಸಾಹತುಗಳು ಮತ್ತು ವಸಾಹತು ಗುಂಪಾದ ತಾರಾಪದವಿಯ ಮೇಲೆ ತೀವ್ರವಾದ ಯುದ್ಧವನ್ನು ಸಾರಿವೆ. ಈ ಆಕ್ರಮಣಗಳು ವಸಾಹತುಗಳ ಗುಂಪನ್ನು ಹಾಳುಗೆಡವುತ್ತವೆ, ವಸಾಹತುಗಳನ್ನು ನಿರ್ಜನವಾಗಿ ಮಾಡುತ್ತವೆ ಮತ್ತು ಅವರ ಜನಸಂಖ್ಯೆಯನ್ನು ನಾಶಮಾಡುತ್ತದೆ.

ಅಲ್ಲಲ್ಲಿ ಬದುಕುಳಿದವರು ಸಿಕ್ಕಿದ ಬಾಹ್ಯಾಕಾಶ ನೌಕೆಯನ್ನು ಹತ್ತಿಕೊಂಡು ಹೊರಬಾಹ್ಯಾಕಾಶಕ್ಕೆ ಓಡಿಹೋಗುತ್ತಿದ್ದಾರೆ. ಎಲ್ಲ ವಸಾಹತುಗಳ ಯುದ್ಧ ಪಡೆಗಳಲ್ಲಿ, ಸಿಲಾನ್ ಅಗ್ನಿದುರಂತದಿಂದ ಉಳಿದ ಏಕಮಾತ್ರ ಹೊರ ಅಂತರಿಕ್ಷದ, ದೈತ್ಯಾಕಾರದ ವಿಮಾನವಾಹಕ, ಸಮರತಾರೆ ಗ್ಯಾಲಕ್ಟಿಕಾ . ವರ್ಷಗಳ ನಂತರ, ಇನ್ನೊಂದು ಸಮರ ತಾರೆ, ಪೆಗಸಸ್ ಸಹ ಉಳಿದುಕೊಂಡಿತ್ತು ಎಂಬುದು ಕಂಡುಬಂದಿತು ಮತ್ತು ಕಮಾಂಡರ್ ಕೈನ್‌ನ ಆದೇಶದ ಮೇರೆಗೆ ಅಂತರಿಕ್ಷದ ಆಳಕ್ಕೆ ಎಳೆಯಲ್ಪಟ್ಟಿತ್ತು, ಎಷ್ಟೋ ವರ್ಷಗಳವರೆಗೆ ಏಟು-ಪ್ರತಿಏಟುಗಳಿಂದ ಸಿಲೋನ್ ವಿರುದ್ಧ ಆಕ್ರಮಣಕ್ಕೊಳಗಾಗುತ್ತಾ ಮತ್ತು ಅವಶ್ಯಕ ವಸ್ತುಗಳ ಪೂರೈಕೆಗಾಗಿ ಧಾಳಿ ಮಾಡುತ್ತಾ ಉಳಿದುಕೊಂಡಿತ್ತು.

ಕಮಾಂಡರ್ ಅದಮನ ನಾಯಕತ್ವದಲ್ಲಿ, ಗ್ಯಾಲಕ್ಟಿಕ ಮತ್ತು ವೈಪರ್‌ನ ಪೈಲಟ್‌ಗಳು ಒಂದು ಅಲ್ಪಕಾಲಿಕ ಪಡೆಯ ಯೋಧರೊಂದಿಗೆ ಕಾಲ್ಪನಿಕ ಹದಿಮೂರನೆಯ ವಸಾಹತು ಭೂಮಿಯ ಹುಡುಕಾಟದಲ್ಲಿ ಹೊರಟರು.

ಬ್ರೂಕ್ಲಿನ್ ಸೇತುವೆ

ಬ್ರೂಕ್ಲಿನ್ ಸೇತುವೆ ಎಂಬುದು ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿರುವ ಅತ್ಯಂತ ಹಳೆಯ ತೂಗು ಸೇತುವೆಗಳಲ್ಲಿ ಒಂದಾಗಿದೆ. ಇದನ್ನು ೧೮೮೩ ರಲ್ಲಿ ನಿರ್ಮಿಸಲಾಯಿತು. ಇದು ಪಶ್ಚಿಮ ನದಿಯ(ಈಸ್ಟ್ ರಿವರ್) ಮೂಲಕ ಮ್ಯಾನ್ ಹ್ಯಾಟನ್ ನ ನ್ಯೂಯಾರ್ಕ್ ನಗರದ ಬರೋಗ್ರಾಮ ಪ್ರಾಂತ್ಯಗಳನ್ನು ಹಾಯ್ದು, ಬ್ರೂಕ್ಲಿನ್ ಅನ್ನು ಜೋಡಿಸುತ್ತದೆ. ಇದರ ಜೊತೆಯಲ್ಲಿ ಈ ಟೆಂಪ್ಲೇಟು:Ft to m ಅಳತೆಯ ಪ್ರಮುಖ ಕಮಾನು ಹೊಂದಿದೆ. ಇದನ್ನು ನಿರ್ಮಿಸಿದಾಗಿನಿಂದ, ೧೯೦೩ರ ವರೆಗೆ ಮತ್ತು ಕಬ್ಬಿಣದ ತಂತಿಯ ಮೊದಲ ತೂಗು ಸೇತುವೆಯನ್ನು ನಿರ್ಮಿಸುವ ವರೆಗೂ ಇದು ಪ್ರಪಂಚದಲ್ಲಿರುವ ಅತ್ಯಂತ ಉದ್ದದ ತೂಗು ಸೇತುವೆಯಾಗಿತ್ತು.

ಮೂಲತಃ ಇದನ್ನು ನ್ಯೂಯಾರ್ಕ್ ಮತ್ತು ಬ್ರೂಕ್ಲಿನ್ ಸೇತುವೆ ಎಂದು ಉಲ್ಲೇಖಿಸಲಾಗುತ್ತಿತ್ತು. ಬ್ರೂಕ್ಲಿನ್ ಡ್ಯೇಲಿ ಈಗಲ್ ನ ಸಂಪಾದಕರಿಗೆ ರವಾನಿಸಲಾದ ೧೮೬೭ ರ ಜನವರಿ ೨೫ ರ ಪತ್ರದಲ್ಲಿ ಇದಕ್ಕೆ ಬ್ರೂಕ್ಲಿನ್ ಸೇತುವೆ ಎಂದು ನಾಮಕರಣ ಮಾಡಲಾಗಿತ್ತು. ನಗರ ಸರ್ಕಾರವು ೧೯೧೫ ರಲ್ಲಿ ಈ ಹೆಸರನ್ನು ಅಧಿಕೃತವಾಗಿಸಿತು. ಇದು ಆರಂಭಗೊಂಡಾಗಿನಿಂದಲೂ, ನ್ಯೂಯಾರ್ಕ್ ಬಾನಗೆರೆಯ ಸಾಂಪ್ರದಾಯಿಕ ನಿರ್ಮಾಣದ ಭಾಗವಾಗಿದೆ. ಇದನ್ನು ೧೯೬೪ ರಲ್ಲಿ ರಾಷ್ಟ್ರೀಯ ಐತಿಹಾಸಿಕ ಹೆಗ್ಗುರುತೆಂದು ಹಾಗು ೧೯೭೨ ರಲ್ಲಿ ರಾಷ್ಟ್ರೀಯ ಐತಿಹಾಸಿಕ ನಾಗರಿಕ ಶಿಲ್ಪ ಶಾಸ್ತ್ರದ ಹೆಗ್ಗುರುತೆಂದು ಪರಿಗಣಿಸಲಾಗಿದೆ.

ಮಹಾತ್ಮ ಗಾಂಧಿ

ಮೋಹನ್‌ದಾಸ್ ಕರಮ್‌ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು. ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.

ಪುಣೄ ಸ್ಮರಣೆ....

ಮಹಾತ್ಮ ಗಾಂಧಿ ವೄಕ್ತಿ ಬದುಕಿನ ಹಾದಿ

ಪ್ರಪಂಚದ ಯಾವುದೋ ಮೂಲೆಯಲ್ಲಿರುವ ವ್ಯಕ್ತಿಗೆ ಭಾರತ ಎಂದರೆ ಮೊದಲು ನೆನಪಾಗುವುದು ಗಾಂಧಿ! ಪ್ರಪಂಚದ ಬಹುತೇಕ ಎಲ್ಲ ರಾಷ್ಟ್ರಗಳಲ್ಲೂ ಗಾಂಧಿಯ ನೆನಪಿನ ಸ್ಮಾರಕವೊ ಪ್ರತಿಮೆಯೊ ಇದ್ದೇ ಇರುತ್ತದೆ!! ಗಾಂಧಿ ಎನ್ನುವ ಹೆಸರು ಪ್ರತಿಯೊಬ್ಬ ಭಾರತೀಯನ ಅಂತಃಸಾಕ್ಷಿ!!! ಹೌದು ಗಾಂದಿ ಎಂದರೆ ಜಗದಗಲ, ಮುಗಿಲಗಲ. ಕಳೆದ ಸಹಸ್ರಾಮನದ ಮಹಾ ಮೇದಾವಿ ವಿಜ್ಞಾನಿಗಳಲ್ಲಿ ಅಗ್ರಗಣ್ಯರಲ್ಲಿ ಒಬ್ಬರಾದ ಸರ್. ಅಲ್ಬರ್ಟ್ ಐನ್ಸ್ಟೀನ್ ಗಾಂಧಿಯ ಬಗ್ಗೆ ಮಾತನಾಡುತ್ತ “ರಕ್ತಮಾಂಸಗಳಿಂದ ಕೂಡಿದ್ದ ಇಂತಹ ವ್ಯಕ್ತಿಯೊಬ್ಬ ಭೂಮಿ ಮೇಲೆ ನಡೆದಾಡಿದ್ದ ಎಂಬುದನ್ನು ನಂಬುವುದಕ್ಕೆ ಮುಂದಿನ ಪೀಳಿಗೆಗೆ ಕಷ್ಟವಾಗಲಿದೆ.” ಎಂದು ಉದ್ಘರಿಸಿದ್ದಾರೆಂದರೆ ಗಾಂಧಿ ನಿರ್ಲಕ್ಷಿಸುವಂತವರಲ್ಲ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಹೇಳಿದ “ಮಾನವೀಯತೆ ಉಳಿಯಬೇಕೆಂದರೆ ಗಾಂಧಿ ಅನಿವಾರ್ಯ! ನಾವು ಗಾಂಧಿಯನ್ನು ಉತ್ಪ್ರೇಕ್ಷೆ ಮಾಡಬಹುದು; ಆದರೆ ಅದು ದುಸ್ಸಾಹಸ!!” ಎಂಬ ಮಾತು ಅದೆಷ್ಟು ಅರ್ಥಪೂರ್ಣ.

ಹೌದು. ಗಾಂಧಿ ಯುಗಪುರುಷನೂ ಹೌದು; ಜಗದಪುರುಷನೂ ಹೌದು. ಆದರೆ ಆತನ ಬದುಕಿನ ಹಾದಿ? ಬಾಲ್ಯದ ಸುಮಾರು ಏಳೆಂಟು ವರ್ಷಗಳ ಅವಧಿ ಬಿಟ್ಟರೆ, ಉಳಿದ ಸರಿಸುಮಾರು 70 ವರ್ಷಗಳು ಸವೆಸಿದ ಹಾದಿ, ಎದುರಿಸಿದ ಸವಾಲುಗಳು, ಒದಗಿದ ಸಂದರ್ಭಗಳು ಎಲ್ಲವೂ ಅಗ್ನಿಪರೀಕ್ಷೆಗಳೆ! ಪೋರಬಂದರಿನ ಮೋಹನದಾಸ ಕರಮಚಂದ ಗಾಂಧಿ ಎಂಬ ಪುಟ್ಟಪೋರ ಜಗದ ಬೆಳಕು ಮಹಾತ್ಮ ಗಾಂಧಿಯಾಗಿ ಬೆಳೆದ ರೀತಿ ಮನುಕುಲದ ಅಚ್ಚರಿಗಳಲ್ಲಿ ಒಂದು.

ಜನನ....

ಗಾಂಧಿಯವರ ಜನನ ೧೮೬೯ರ ಅಕ್ಟೋಬರ್ ೨ರಂದು ಭಾರತದ ಇಂದಿನ ಗುಜರಾತ್‌ ರಾಜ್ಯದ ಕರಾವಳಿ ಪಟ್ಟಣ ಪೋರಬಂದರ್‌ನಲ್ಲಿ. ತಂದೆ ಕರಮ್‌ಚಂದ್ ಗಾಂಧಿ (೧೮೨೨-೧೮೮೫), ಬ್ರಿಟಿಷ್‌ ಭಾರತದ ಕಾಥೇವಾಡ ರಾಜಾಡಳಿತದ ಪೋರ ಬಂದರ್ ಪ್ರಾಂತ್ಯದ ದಿವಾನ್‌ (ಪ್ರಧಾನ ಮಂತ್ರಿ) ಆಗಿದ್ದರು. ಅವರ ತಾಯಿ ಪುತಲೀಬಾಯಿ. ಧರ್ಮನಿಷ್ಠ ತಾಯಿಯೊಂದಿಗೆ ಮತ್ತು ಆ ಪ್ರಾಂತ್ಯದ ಜೈನ್‌ ಸಂಪ್ರದಾಯಗಳೊಂದಿಗೆ ಬೆಳೆದ ಬಾಲಕ ಮೋಹನ್‌ದಾಸ್‌ ತಮ್ಮ ಮುಂದಿನ ಪ್ರೌಢ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಬಹುದಾದಂತಹ ಪ್ರಭಾವಗಳನ್ನು ಸಾಕಷ್ಟು ಮುಂಚಿತವಾಗಿಯೇ ಅರಗಿಸಿಕೊಂಡರು. ನೊಂದ ಜೀವಿಗಳಿಗಾಗಿ ಸಹಾನುಭೂತಿ, ಸ್ವಶುದ್ಧೀಕರಣಕ್ಕಾಗಿ ಉಪವಾಸ ಮತ್ತು ಪರಮತ ಸಹಿಷ್ಣುತೆ ಎಲ್ಲವೂ ತಾಯಿಯಿಂದ ಬಂದ ಗುಣಗಳೆ.

ಭಾರತೀಯ ಪುರಾಣ ಕಥೆಗಳಾದ ಶ್ರವಣಕುಮಾರ ಮತ್ತು ಹರಿಶ್ಚಂದ್ರನ ಕಥೆಗಳು ಬಾಲ್ಯಾವಸ್ಥೆಯಲ್ಲಿದ್ದ ಗಾಂಧಿಯವರ ಮೇಲೆ ಸತ್ಯ, ಪ್ರೇಮ, ಸೇವೆ, ಬಲಿದಾನ ಮೊದಲಾದ ಮೌಲ್ಯಗಳ ವಿಷಯದಲ್ಲಿ ಭಾರೀ ಪ್ರಭಾವ ಬೀರಿದ್ದವು. ಸತ್ಯ ಮತ್ತು ಪ್ರೇಮದಂತಹ ಸರ್ವೋಚ್ಚ ಮೌಲ್ಯಗಳೊಂದಿಗೆ ಗಾಂಧಿಯವರು ತಮ್ಮನ್ನು ಗುರುತಿಸಿಕೊಂಡಿದ್ದರ ಹಿಂದಿನ ಕಾರಣ ಈ ಮಹಾಕೃತಿಗಳ ಪಾತ್ರಗಳೊಂದಿಗೆ ಅವರ ಗುರುತಿಸಿ ಕೊಳ್ಳುವಿಕೆಯೇ ಆಗಿತ್ತು.

ಬೆಳೆಯುವ ಪೈರು ಮೊಳಕೆಯಲ್ಲಿ....

ಗಾಂಧಿಯ ಕೊನೆಯ ಮಾತು ರಾಮ ಎಂಬುದು. ರಾಮ ಅವರ ಬದುಕಿನುದ್ದಕ್ಕೂ ಇದ್ದ. ರಾಮ ಅವರ ಪಾಲಿಗೆ ದೇವರಾಗಿರಲಿಲ್ಲ; ಸಹಯಾತ್ರಿಕನಾಗಿದ್ದ; ಅಂತ‍ಃಸಾಕ್ಷಿಯಾಗಿದ್ದ. ಅಂತಹ ರಾಮ ಗಾಂಧಿಯ ಎದೆಗೆ ಇಳಿದಿದ್ದು, ಅವರ ಬಾಲ್ಯದಲ್ಲಿಯೆ. ಮೂರ್ನಾಲ್ಕು ವರ್ಷದ ಮಗುವಾಗಿದ್ದ ಮೋಹನದಾಸನನ್ನು ರಂಭಾ ಎಂಬ ಹೆಂಗಸು ಲಾಲನೆ ಪಾಲನೆ ಮಾಡುತ್ತಿದ್ದಳು. ಪಿಶಾಚಿಯ ಭಯ ವ್ಯಕ್ತಪಡಿಸಿದ ಮೋಹನದಾಸನಿಗೆ, ರಾಮನಾಮ ಬೋಧಿಸಿ ಭಯ ಹೋಗಲಾಡಿಸಿದವಳು ಇದೇ ರಂಭೆ. ಅಂದು ರಂಭೆಯಿಂದ ಅವರ ಎದೆಗಿಳಿದ ರಾಮ ಮತ್ತೆಂದೂ ಅವರಿಂದ ದೂರವಾಗಲಿಲ್ಲ!

ಗಾಂಧಿಯವರ ಬದುಕಿನಲ್ಲಿ ಅಸ್ಪೃಶ್ಯತೆಯ ವಿರುದ್ಧದ ಹೋರಾಟ ಅತ್ಯಂತ ಮಹತ್ವದ್ದು. ಅಸ್ಪೃಶ್ಯತೆಯ ವಿರುದ್ಧದ ಭಾವನೆಯೂ ಎದೆಗಿಳಿದಿದ್ದು ಬಾಲ್ಯದಲ್ಲಿಯೆ. ಮನೆಯ ಪಾಯಿಖಾನೆ ತೊಳೆಯಲು ಬರುತ್ತಿದ್ದ ಉಕಾ ಎಂಬಾತನನ್ನು ಮುಟ್ಟಿಸಿಕೊಳ್ಳಬಾರದೆಂಬ ಕಟ್ಟಳೆ ಮನೆಯಲ್ಲಿತ್ತು. ಆದರೆ ಅದನ್ನು ಮೀರುವ ಪ್ರಯತ್ನವನ್ನು ಮೋಹನದಾಸ ಮಾಡುತ್ತಿದ್ದ. ಆದರೆ ಮನೆಯ ಕಟ್ಟಳೆ ಆತನನ್ನು ಗಲಿಬಿಲಿಗೊಳಿಸುತ್ತಿತ್ತು. ಬಾಲಕನ ಸ-ತರ್ಕಕ್ಕೆ ತಾಯಿಯವರ ನಗುವಷ್ಟೇ ಉತ್ತರವಾಗಿತ್ತು. ಆದರೆ, ಆಗ ಬಾಲಕನ ಎದೆಯಲ್ಲಿ ತುಂಬಿದ, ಅಸ್ಫಶ್ಯತೆ ತಪ್ಪು ಎಂಬ ಭಾವ ಮನುಕುಲದ ಒಂದು ದೊಡ್ಡ ಹೋರಾಟಕ್ಕೆ ಬೀಜಪ್ರಾಯವಾಗಿತ್ತು.

ಕ್ಷಮಿಸುವುದಕ್ಕೆ ಹಾಗೂ ಕ್ಷಮೆ ಕೇಳುವುದಕ್ಕೆ ದುರ್ಬಲರಿಂದ ಸಾಧ್ಯವಿಲ್ಲ ಎಂಬುದು ಗಾಂಧೀಜಿಯವರ ಅಭಿಪ್ರಾಯ. ಕ್ಷಮೆ ಈ ಜಗತ್ತಿನಲ್ಲಿ ಬಹುದೊಡ್ಡ ವಸ್ತು, ಬೆಲೆಕಟ್ಟಲಾಗದ್ದು. ಪ್ರಾಮಾಣಿಕತೆಯೂ ಅಷ್ಟೆ. ಈ ಜಗತ್ತಿನಲ್ಲಿ ಒಬ್ಬ ಮನುಷ್ಯ ಪ್ರಾಮಾಣಿಕನಾಗಿ ಬದುಕುವುದು ಅತ್ಯಂತ ಕಷ್ಟಸಾಧ್ಯ. ಆಗೊಂದು ವೇಳೆ ಅದು ಸಾಧ್ಯವಾದರೆ ಅದು ಆತನ ಪರಮಸಿದ್ಧಿಗಳಲ್ಲಿ ಒಂದು. ಗಾಂಧಿ, ಈ ಕ್ಷಮೆ ಮತ್ತು ಪ್ರಾಮಾಣಿಕತೆ ಎಂಬ ಎರಡು ಸಿದ್ಧಿಗಳ ಸಾಧಕರಾಗಲು ಬಾಲ್ಯದಲ್ಲಿಯೇ ವೇದಿಕೆ ಸಿದ್ಧವಾಗಿತ್ತು. ಅವನ್ನು ಬಾಲ್ಯದಲ್ಲಿಯೇ ಗಳಿಸಿದ್ದರು; ಕೊನೆಯವರೆಗೂ ಉಳಿಸಿಕೊಂಡಿದ್ದರು.

ಬಾಲ್ಯಸಹಜವಾದ ಕುತೂಹಲ-ತುಂಟಾಟಗಳಿಂದಾಗಿ, ಸಹವಾಸ ದೋಷದಿಂದ ಹಲವಾರು ದುಶ್ಚಟಗಳು ಕೆಲಕಾಲ ಮೋಹನದಾಸನನ್ನು ಆವರಿಸಿದ್ದವು. ಕುಟುಂಬಕ್ಕೆ, ಸಮುದಾಯಕ್ಕೆ, ಧರ್ಮಕ್ಕೆ ನಿಷಿದ್ಧವಾದ ಮಾಂಸಾಹಾರ ಸೇವೆನೆ, ಮದ್ಯಪಾನ, ಜೂಜು, ಸುಳ್ಳು, ಕಳ್ಳತನ ಇವುಗಳು ಬಾಲಕನನ್ನು ಕಾಡಿದ್ದು ಉಂಟು. ಆದರೆ ಇದೆಲ್ಲ ಕೆಲ ದಿನಗಳು ಮಾತ್ರ. ತಾಯಿಯಿಂದ ಬಂದ ಸಂಸ್ಕಾರ ಅದಕ್ಕೆ ತಡೆಯೊಡ್ಡಿತು. ಮೋಹನ ಅಂತರಾತ್ಮ ತನ್ನ ತಪ್ಪನ್ನು ಒಪ್ಪಿಕೊಂಡಿತ್ತು. ಎಲ್ಲವನ್ನು ತಂದೆಯಲ್ಲಿ ಹೇಳಿ, ಪಾಪನಿವೇದನೆ ಮಾಡಿಕೊಂಡು ಕ್ಷಮೆ ಕೇಳಬೇಕೆಂದುಕೊಂಡ ಮೋಹನದಾಸ, ಧೈರ್ಯಸಾಲದೆ, ಒಂದು ಕಾಗದ ಬರೆದು ಎಲ್ಲವನ್ನೂ ತಂದೆಯ ಗಮನಕ್ಕೆತಂದು, ತನಗೆ ಶಿಕ್ಷೆ ನೀಡಬೇಕೆಂದು ಕೇಳಿಕೊಂಡರು. ಅನಾರೋಗ್ಯ ಕಾರಣದಿಂದ ಹಾಸಿಗೆ ಹಿಡಿದು ಮಲಗಿದ್ದ, ಪತ್ರವನ್ನೋದಿದ ತಂದೆಯ ಕಣ್ಣಾಲಿಗಳಲ್ಲಿ ನೀರು ತುಳುಕಿತು. ಪತ್ರವನ್ನು ಹರಿದು ಹಾಕಿ, ವಾತ್ಸಲ್ಯಪೂರ್ಣರಾಗಿ ಮಗನನ್ನು ನೋಡಿದರು. ಮಗ ತಪ್ಪು ಒಪ್ಪಿಕೊಂಡನಲ್ಲ ಎಂದು ಅವರಿಗೆ ಸಂತೋಷವಾಗಿತ್ತು. ಆದರೆ, ಮೋಹನದಾಸನಿಗೆ ತಂದೆಗೆ ಸಂಕಟವುಂಟು ಮಾಡಿದೆನಲ್ಲ ಎಂಬ ಪಶ್ಚತ್ತಾಪದ ಭಾವ ಸ್ಫುರಿಸಿತು. ತಂದೆಯ ಕಣ್ಣಿರು, ಕ್ಷಮೆ ಎಲ್ಲವೂ ಬಾಲಕನಿಗೆ ಅಹಿಂಸೆಯ ಅರ್ಥವನ್ನು ತಿಳಿಸಿದ ಮೊದಲ ಪಾಠಗಳಾಗಿದ್ದವು.

ವಿವಾಹ...

ಮೇ ೧೮೮೩ರಲ್ಲಿ, ೧೩ ವರ್ಷದ ಮೋಹನದಾಸನಿಗೆ ಅವರು ೧೪ ವರ್ಷದ ಕಸ್ತೂರ ಬಾಯಿ ಮಖಾಂಜಿ ಅವರೊಂದಿಗೆ ಬಾಲ್ಯವಿವಾಹವಾಯಿತು. ಅಂದು ಬಾಲಕ ಮೋಹನದಾಸನನ್ನು ಕೈಹಿಡಿದ ಕಸ್ತೂರ್ ಬಾ ತಮ್ಮ ಇಡೀ ಜೀವಿತಾವಧಿಯಲ್ಲಿ ಗಾಂಧಿಯನ್ನು ನೆರಳಿನಂತೆ ಹಿಂಬಾಲಿಸಿದರು. ಪ್ರತಿಯೊಬ್ಬ ಯಶಸ್ವೀಪುರುಷನ ಹಿಂದೆ ಸ್ತ್ರೀಯೊಬ್ಬಳಿರುತ್ತಾಳೆ ಎಂಬ ಮಾತಿಗೆ ಜೀವಂತಸಾಕ್ಷಿ ಎಂದರೆ ಕಸ್ತೂರ್ ಬಾ. ಗಾಂಧಿಯವರ, ವಿದೇಶ ಪ್ರವಾಸ, ವ್ಯಾಸಂಗ, ತ್ಯಾಗ... ಹೀಗೆ ಎಲ್ಲ ಹೋರಾಟದಲ್ಲೂ ಕಸ್ತೂರ್ ಬಾ ಅವರ ನೆರವಿತ್ತು. ಗಾಂಧೀ ದಂಪತಿಗಳಿಗೆ ನಾಲ್ವರು ಮಕ್ಕಳು: ಹರಿಲಾಲ್, ಮಣಿಲಾಲ್, ರಾಮದಾಸ್ ಮತ್ತು ದೇವದಾಸ್.

ವಿದ್ಯಾಭ್ಯಾಸ...

ಪೋರಬಂದರಿನ ಮಾಧ್ಯಮಿಕ ಶಾಲೆ ಮತ್ತು ರಾಜ್‌ಕೋಟ್‌ನ ಪ್ರೌಢಶಾಲೆಯಲ್ಲಿ ಓದಿದ ಗಾಂಧಿಯವರು ಶೈಕ್ಷಣಿಕವಾಗಿ ಸರಾಸರಿ ಮಟ್ಟದ ವಿದ್ಯಾರ್ಥಿಯಾಗಿದ್ದರು. ಅವರ ಕುಟುಂಬವು ಅವರು ಒಬ್ಬ ನ್ಯಾಯವಾದಿ (ಬ್ಯಾರಿಸ್ಟರ್‌) ಅಗಲೆಂದು ಇಚ್ಛಿಸಿತ್ತು. ಮೆಟ್ರಿಕ್ಯುಲೇಷನ್ ಪಾಸಾದ ನಂತರ, ಇಂಗ್ಲೆಂಡ್‌ನಲ್ಲಿರುವ ಲಂಡನ್‌ ಯೂನಿವರ್ಸಿಟಿ ಕಾಲೇಜ್‌ನಲ್ಲಿ ಕಾನೂನು ಅಧ್ಯಯನ ಮಾಡಿ ನ್ಯಾಯವಾದಿಯಾಗಿ ತರಬೇತಿ ಪಡೆಯಲು ೪ ಸೆಪ್ಟೆಂಬರ್ ೧೮೮೮ರಂದು ಗಾಂಧಿಯವರು ಲಂಡನ್‍ಗೆ ಪ್ರಯಾಣಿಸಿದರು. ಇದಕ್ಕಾಗಿ ಗಾಂಧಿ ಕೆಲವು ಮತಬಾಂಧವರ ದಾಕ್ಷಿಣ್ಯಕ್ಕೂ ಕೋಪಕ್ಕೂ ಒಳಗಾಗಬೇಕಾಯಿತು.

ವಿದೇಶಕ್ಕೆ ಹೋದ ಮೇಲೆ ಮಾಂಸ, ಮದ್ಯ ಮತ್ತು ಕಾಮದಾಹಗಳಿಂದ ದೂರವಿರಬೇಕೆಂಬ ಹಿಂದೂ ಆಚಾರ ಸೂತ್ರಗಳನ್ನು ಪಾಲಿಸುವುದಾಗಿ ಜೈನ್ ಸನ್ಯಾಸಿ ಬೆಚಾರ್ಜೀ ಅವರ ಸನ್ನಿಧಿಯಲ್ಲಿ ಅವರ ತಾಯಿಗೆ ಮಾತು ನೀಡಿದ ಗಾಂಧಿ ಅದನ್ನು ಜೀವನದ ಕೊನೆಯವರೆಗೂ ಉಳಿಸಿಕೊಂಡದ್ದು ಅವರ ದೃಢನಿಷ್ಠೆಗೆ ಸಾಕ್ಷಿಯಾಗಿದೆ. ಲಂಡನ್‍ನಲ್ಲಿ ಅವರು ಸಸ್ಯಾಹಾರಿ ಸಂಘಕ್ಕೆ ಸೇರ್ಪಡೆಯಾಗಿ, ಅದರ ಕಾರ್ಯಕಾರೀ ಸಮಿತಿಗೆ ಚುನಾಯಿತರಾಗಿ, ಆ ನಂತರ ಸ್ಥಳೀಯ ಬೇಯ್ಸ್‌ವಾಟರ್ ಶಾಖೆಯನ್ನು ಸ್ಥಾಪಿಸುವ ಮೂಲಕ ಸಾಧನಾರಂಗಕ್ಕೆ ಇಳಿದರು. ಕೆಲವು ಪರಿಚಿತ ಥಿಯೋಸಾಫಿಕಲ್ ಸೊಸೈಟಿಯ ಸದಸ್ಯರು ಭಗವದ್ಗೀತೆಯ ಮೂಲ ಹಾಗೂ ಅನುವಾದಗಳೆರಡನ್ನೂ ಪಠಿಸಲು ಗಾಂಧಿಯವರನ್ನು ಪ್ರೇರೇಪಿಸಿದರು. ಅದುವರೆಗೂ ಧರ್ಮದಲ್ಲಿ ನಿರ್ದಿಷ್ಟವಾದ ಆಸಕ್ತಿ ತೋರದಿದ್ದ ಗಾಂಧಿಯವರು, ಧಾರ್ಮಿಕ ಚಿಂತನೆಯಲ್ಲಿ ಆಸಕ್ತರಾಗಿ ಹಿಂದೂ ಮತ್ತು ಕ್ರೈಸ್ತ ಮತಗ್ರಂಥಗಳೆರಡನ್ನೂ ಅಧ್ಯಯನ ಮಾಡಿದರು.

ಉದ್ಯೋಗ....

ಪರೀಕ್ಷೆಗಳನ್ನು ಯಶಸ್ವಿಯಾಗಿ ಮುಗಿಸಿದ್ದಲ್ಲದೆ, ಸಾಮಾಜಿಕ ಜೀವನಾನುಭವವನ್ನೂ ಗಳಿಸಿ, ಬ್ಯಾರಿಸ್ಟರ್ ಆಗಿ ಲಂಡನ್‌ನಿಂದ ಭಾರತಕ್ಕೆ ೧೨ ಜೂನ್‌ ೧೮೯೧ರಂದು ಭಾರತಕ್ಕೆ ಮರಳಿದರು. ತಾವು ಲಂಡನ್‌ನಲ್ಲಿದ್ದಾಗ ತಮ್ಮ ತಾಯಿ ನಿಧನರಾಗಿದ್ದರು ಎಂಬುದು ಆಗ ಅವರಿಗೆ ತಿಳಿದುಬಂದಿತು. ಅವರ ಕುಟುಂಬವು ಈ ಸಮಾಚಾರವನ್ನು ಸದುದ್ದೇಶದಿಂದ ಅವರಿಗೆ ತಿಳಿಸಿರಲಿಲ್ಲ. ಗಾಂಧಿ ವಕೀಲಿ ವೃತ್ತಿಯನ್ನು ಪ್ರಾರಂಬಿಸಲು ನಿರ್ಧರಿಸಿದರಾದರೂ ಮುಂಬಯಿಯಲ್ಲಿ ಅವರ ಯತ್ನಗಳು ವಿಫಲವಾದವು. ಆ ನಂತರ, ಒಬ್ಬ ಪ್ರೌಢಶಾಲಾ ಅಧ್ಯಾಪಕರ ಅರೆಕಾಲಿಕ ಹುದ್ದೆಗೆ ಅರ್ಜಿ ಸಲ್ಲಿಸಿ ಅದು ತಿರಸ್ಕೃತಗೊಂಡ ನಂತರ, ಅವರು ರಾಜ್‌ಕೋಟ್‌ಗೆ ವಾಪಸಾಗಿ, ಕಕ್ಷಿದಾರರಿಗಾಗಿ ಅರ್ಜಿಗಳ ಕರಡುಗಳನ್ನು ತಯಾರಿಸಿಕೊಟ್ಟು ಸರಳಜೀವನವನ್ನು ನಡೆಸುತ್ತಿದ್ದರು. ಸ್ಥಿರವಾದ ವೃತ್ತಿಜೀವನಕ್ಕೆ ಹಂಬಲಿಸುತ್ತಿದ್ದಾಗ, ಏಪ್ರಿಲ್ ೧೮೯೩ರಲ್ಲಿ ಅವರು ಭಾರತೀಯ ಸಂಸ್ಥೆಯಾದ ದಾದಾ ಅಬ್ದುಲ್ಲಾ ಅಂಡ್ ಕಂಪೆನಿಯಿಂದ, ಆಗ ಬ್ರಿಟಿಷ್ ಸಾಮ್ರಾಜ್ಯದ ಅಂಗವಾಗಿದ್ದ ದಕ್ಷಿಣ ಆಫ್ರಿಕಾದ ನೇಟಲ್ ಕಾಲೊನಿಯಲ್ಲಿನ ಹುದ್ದೆಯೊಂದಕ್ಕೆ ನೀಡಲಾದ ಒಂದು ವರ್ಷ ಅವಧಿಯ ಗುತ್ತಿಗೆಯನ್ನು ಸ್ವೀಕರಿಸಿದರು.

ಆಫ್ರಿಕಾದಲ್ಲಿ ಗಾಂಧಿ...

ದಕ್ಷಿಣ ಆಫ್ರಿಕಾದಲ್ಲಿ, ಭಾರತೀಯರತ್ತ ತೋರಲಾಗಿದ್ದ ತಾರತಮ್ಯವನ್ನು ಗಾಂಧಿಯವರೂ ಸಹ ಎದುರಿಸಬೇಕಾಯಿತು. ಅವರು ಕ್ರಮಬದ್ಧವಾಗಿದ್ದ ಪ್ರಥಮ ದರ್ಜೆಯ ಚೀಟಿಯನ್ನು ಹೊಂದಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಪ್ರಥಮ ದರ್ಜೆಯ ಡಬ್ಬಿಯಿಂದ ಮೂರನೆಯ ದರ್ಜೆಗೆ ಸ್ಥಳಾಂತರ ಗೊಳ್ಳಲು ನಿರಾಕರಿಸಿದ್ದಕ್ಕೆ ಪೀಟರ್‌ಮೆರಿಟ್ಜ್‌ಬರ್ಗ್‌ನಲ್ಲಿ ಬಲವಂತವಾಗಿ ಇಳಿಸಲಾಗಿತ್ತು. ಅಲ್ಲಿಂದ ಮುಂದಕ್ಕೆ ಕುದುರೆಗಾಡಿಯಲ್ಲಿ ಪ್ರಯಾಣಿಸುತ್ತಿದ್ದಾಗ ಒಬ್ಬ ಐರೋಪ್ಯ ಪ್ರಯಾಣಿಕರಿಗೆ ಸ್ಥಳಾವಕಾಶ ನೀಡುವುದಕ್ಕೋಸ್ಕರ, ತಾವು ಮೆಟ್ಟಿಲುಗಳ ಮೇಲೆ ನಿಂತು ಪ್ರಯಾಣಿಸಲು ನಿರಾಕರಿಸಿದ್ದಕ್ಕೆ ಚಾಲಕನು ಗಾಂಧಿಯವರ ಮೇಲೆ ಹಲ್ಲೆ ನಡೆಸಿದನು. ಹಲವು ಹೊಟೇಲುಗಳಲ್ಲಿ ಪ್ರವೇಶ ನಿರಾಕರಣೆಯೂ ಸೇರಿದಂತೆ ಅವರು ಪ್ರಯಾಣದಲ್ಲಿ ಇನ್ನೂ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ಇನ್ನೊಂದು ಘಟನೆಯಲ್ಲಿ, ಡರ್ಬನ್‌ ನ್ಯಾಯಾಲಯವೊಂದರ ದಂಡಾಧಿಕಾರಿಯೊಬ್ಬರು ತಮ್ಮ ಪೇಟವನ್ನು ತೆಗೆಯಲು ಗಾಂಧಿಯವರಿಗೆ ಆದೇಶಿಸಿದರೂ ಅವರು ನಿರಾಕರಿಸಿದರು. ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿ ವಲಸಿಗ ವಕೀಲರಾಗಿದ್ದಾಗ ಅಲ್ಲಿ ವಾಸವಾಗಿದ್ದ ಭಾರತೀಯ ಸಮುದಾಯವು ನಾಗರಿಕ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದರು. ಈ ಅವಧಿಯಲ್ಲಿ ಅಹಿಂಸಾತ್ಮಕ ನಾಗರಿಕ ಅವಿಧೇಯತೆಯ ಆಂದೋಲನವನ್ನು ಮೊದಲ ಬಾರಿಗೆ ಪ್ರಯೋಗಿಸಿದರು.

ಇಂತಹ ಘಟನೆಗಳು ಅವರ ಜೀವನದಲ್ಲಿ ಒಂದು ಮಹತ್ವದ ತಿರುವು ನೀಡಿ, ಸಾಮಾಜಿಕ ಅನ್ಯಾಯದ ವಿರುದ್ಧ ಅವರನ್ನು ಜಾಗ್ರತಗೊಳಿಸಿ, ಅವರ ಆನಂತರದ ಸಾಮಾಜಿಕ ಕ್ರಿಯಾಸಿದ್ಧಾಂತದ ಮೇಲೆ ಪ್ರಭಾವ ಬೀರಿದವು. ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರ ವಿರುದ್ಧ ವರ್ಣಭೇದ ನೀತಿ, ಪೂರ್ವಾಗ್ರಹ ಮತ್ತು ಅನ್ಯಾಯಗಳು ನಡೆಯುತ್ತಿದ್ದನ್ನು ಸ್ವತಃ ಅನುಭವಿಸುವ ಮೂಲಕ ಗಾಂಧಿಯವರು ಬ್ರಿಟಿಷ್ ಸಾಮ್ರಾಜ್ಯದಲ್ಲಿ ತಮ್ಮ ಜನರ ಸ್ಥಾನಮಾನಗಳನ್ನು ರಕ್ಷಿಸಲು ಹೋರಾಟಕ್ಕಿಳಿದರು. ದಕ್ಷಿಣ ಆಫ್ರಿಕಾದಲ್ಲಿನ ಭಾರತೀಯರಿಗೆ ಮತದಾನದ ಹಕ್ಕನ್ನು ನಿರಾಕರಿಸುವ ಮಸೂದೆಯನ್ನು ವಿರೋಧಿಸುವ ನಿಟ್ಟಿನಲ್ಲಿ ಅಲ್ಲಿನ ಭಾರತೀಯರಿಗೆ ನೆರವಾಗಲು ಗಾಂಧಿಯವರು ಅಲ್ಲಿನ ತಮ್ಮ ಉಳಿಯುವಿಕೆಯ ಅವಧಿಯನ್ನು ವಿಸ್ತರಿಸಿದರು. ಮಸೂದೆಯ ಅಂಗೀಕಾರವನ್ನು ತಡೆಯಲು ಅವರು ವಿಫಲರಾದರೂ, ದಕ್ಷಿಣ ಆಫ್ರಿಕಾದಲ್ಲಿನ ಭಾರತೀಯರ ಕುಂದುಕೊರತೆಗಳತ್ತ ಗಮನ ಸೆಳೆಯುವಲ್ಲಿ ಅವರ ಚಳುವಳಿಯು ಯಶಸ್ವಿಯಾಯಿತು.

೧೮೯೪ರಲ್ಲಿ ನೇಟಲ್ ಇಂಡಿಯನ್ ಕಾಂಗ್ರೆಸ್‌ನ ಸ್ಥಾಪನೆಯಲ್ಲಿ ಸಹಾಯ ಮಾಡಿದ ಅವರು, ಈ ಸಂಘಟನೆಯ ಮೂಲಕ ದಕ್ಷಿಣ ಆಫ್ರಿಕಾದಲ್ಲಿರುವ ಭಾರತೀಯ ಸಮುದಾಯವನ್ನು ಏಕರೂಪವಾದ ರಾಜಕೀಯ ಶಕ್ತಿಯಾಗಿ ಮಾರ್ಪಾಡು ಮಾಡಿದರು. ಜನವರಿ ೧೮೯೭ರಲ್ಲಿ ಗಾಂಧಿಯವರು ಡರ್ಬನ್‌ಗೆ ಆಗಮಿಸಿದಾಗ ಬಿಳಿ ಮೂಲನಿವಾಸಿಗಳ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿತು. ಆಗ ಓರ್ವ ಆರಕ್ಷಕ ಅಧೀಕ್ಷಕನ ಪತ್ನಿಯ ಯತ್ನಗಳ ಫಲವಾಗಿಯೇ ಅವರು ಪಾರಾಗಲು ಸಾಧ್ಯವಾಯಿತು. ಆದಾಗ್ಯೂ, ವ್ಯಕ್ತಿಯೊಬ್ಬನು ಮಾಡಿದ ತಪ್ಪಿಗಾಗಿ ನ್ಯಾಯಾಲಯದಲ್ಲಿ ಪರಿಹಾರವನ್ನು ಕೇಳದಿರುವುದು ತಮ್ಮ ತತ್ವಗಳಲ್ಲೊಂದು ಎಂದು ಹೇಳಿದ ಅವರು ಆ ಗುಂಪಿನ ಯಾವುದೇ ಸದಸ್ಯನ ವಿರುದ್ಧವೂ ಮೊಕದ್ದಮೆ ಹೂಡಲು ನಿರಾಕರಿಸಿದರು.

ಸತ್ಯಾಗ್ರಹದ ಚಳುವಳಿಯ ಉಗಮ

ವಸಾಹತಿನಲ್ಲಿರುವ ಭಾರತೀಯ ಸಮುದಾಯದ ನೋಂದಣಿಯನ್ನು ಕಡ್ಡಾಯಗೊಳಿಸುವ ಒಂದು ಹೊಸ ಕಾಯಿದೆಯನ್ನು ಟ್ರಾನ್ಸ್‌ವಾಲ್‌ ಸರ್ಕಾರವು ೧೯೦೬ರಲ್ಲಿ ಪ್ರಕಟಿಸಿತು. ಅದೇ ವರ್ಷದ ಸೆಪ್ಟೆಂಬರ್‌ ೧೧ ರಂದು ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಒಂದು ಸಾಮೂಹಿಕ ಪ್ರತಿಭಟನಾ ಸಭೆಯಲ್ಲಿ, ಗಾಂಧಿಯವರು ಇನ್ನೂ ವಿಕಸನಗೊಳ್ಳುತ್ತಿದ್ದ ತಮ್ಮ ಸತ್ಯಾಗ್ರಹ (ಸತ್ಯಕ್ಕಾಗಿ ನಿಷ್ಠೆ), ಅಥವಾ ಅಹಿಂಸಾತ್ಮಕ ಪ್ರತಿಭಟನೆಯ ಕ್ರಮಶಾಸ್ತ್ರವನ್ನು ಮೊದಲ ಬಾರಿಗೆ ಅಳವಡಿಸಿ, ಹಿಂಸಾತ್ಮಕ ರೀತಿಯಲ್ಲಿ ಪ್ರತಿಭಟಿಸುವ ಬದಲಿಗೆ ಈ ಹೊಸ ಕಾನೂನನ್ನು ಧಿಕ್ಕರಿಸಿ ಅದಕ್ಕೆ ದೊರೆಯುವ ಶಿಕ್ಷೆಯನ್ನನುಭವಿಸಿರೆಂದು ತಮ್ಮ ಸಹ-ಭಾರತೀಯರಿಗೆ ಕರೆ ನೀಡಿದರು.

ಈ ರಣನೀತಿಯನ್ನು ಅಳವಡಿಸಿಕೊಂಡ ಫಲವಾಗಿ, ಪ್ರತಿಭಟನೆ, ನೋಂದಾಯಿಸಲು ನಿರಾಕರಣೆ, ತಮ್ಮ ನೋಂದಣಿ ಪತ್ರಗಳ ದಹನ ಅಥವಾ ಇತರ ಅಹಿಂಸಾತ್ಮಕ ಪ್ರತಿರೋಧಗಳನ್ನು ಒಳಗೊಂಡ ಹೋರಾಟದಲ್ಲಿ ಭಾಗವಹಿಸಿದ್ದಕ್ಕಾಗಿ ಗಾಂಧಿಯವರೂ ಸೇರಿದಂತೆ ಸಾವಿರಾರು ಭಾರತೀಯರು ಕಾರಾಗೃಹ ಸೇರಿದರು, ಹೊಡೆತಗಳನ್ನು ತಿಂದರು, ಅಥವಾ ಗುಂಡೇಟಿಗೀಡಾದರು. ಸರ್ಕಾರವು ಭಾರತೀಯ ಪ್ರತಿಭಟನಾಕಾರರನ್ನು ಸದೆಬಡಿಯುವುದರಲ್ಲಿ ಯಶಸ್ವಿಯಾದರೂ, ಭಾರತೀಯ ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ದಕ್ಷಿಣ ಆಫ್ರಿಕಾದ ಸರ್ಕಾರವು ಬಳಸಿದ ಕಟುವಾದ ಕ್ರಮಗಳ ವಿರುದ್ಧ ಭುಗಿಲೆದ್ದ ಸಾರ್ವಜನಿಕ ಪ್ರತಿಭಟನೆಯು ಅಂತಿಮವಾಗಿ ದಕ್ಷಿಣ ಆಫ್ರಿಕಾದ ಜನರಲ್ ಜೆನ್ ಕ್ರಿಶ್ಚಿಯಾನ್ ಸ್ಮಟ್ಸ್‌ ಅವರು ಗಾಂಧಿಯವರೊಂದಿಗೆ ರಾಜಿ ಮಾಡಿಕೊಳ್ಳುವಂತೆ ಒತ್ತಾಯಿಸಿತು. ಗಾಂಧಿಯವರ ಆಲೋಚನೆಗಳು ಆಕಾರ ಪಡೆದು ಸತ್ಯಾಗ್ರಹ ಚಳುವಳಿಗೆ ಒಂದು ಸಾಂಸ್ಥಿಕ ರೂಪ ದೊರೆಯಿತು.

ಜುಲು ಸಮರ.....

೧೯೦೬ರಲ್ಲಿ, ಬ್ರಿಟಿಷ್ ಆಡಳಿತವು ಹೊಸ ತಲೆಗಂದಾಯವನ್ನು ಜಾರಿಗೊಳಿಸಿದ ನಂತರ, ದಕ್ಷಿಣ ಆಫ್ರಿಕಾದಲ್ಲಿನ ಜುಲು ಜನಾಂಗದವರು ಇಬ್ಬರು ಬ್ರಿಟಿಷ್ ಅಧಿಕಾರಿಗಳನ್ನು ಕೊಂದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಬ್ರಿಟಿಷರು ಜುಲುಗಳ ವಿರುದ್ಧ ಸಮರ ಸಾರಿದರು. ಭಾರತೀಯರನ್ನು ನೇಮಿಸಿಕೊಳ್ಳುವಂತೆ ಗಾಂಧಿಯವರು ಬ್ರಿಟಿಷ್ ಆಡಳಿತವನ್ನು ಸಕ್ರಿಯರಾಗಿ ಪ್ರೇರೇಪಿಸಿದರು. ಭಾರತೀಯರ ಪೂರ್ಣಪ್ರಮಾಣದ ಪೌರತ್ವದ ಬೇಡಿಕೆಯನ್ನು ಕಾನೂನು ಸಮ್ಮತವಾಗಿಸುವ ನಿಟ್ಟಿನಲ್ಲಿ ಭಾರತೀಯರು ಯುದ್ಧದ ಪ್ರಯತ್ನಗಳಿಗೆ ತಮ್ಮ ಬೆಂಬಲವನ್ನು ನೀಡಬೇಕೆಂದು ಅವರು ವಾದಿಸಿದರು. ಆದರೆ, ಬ್ರಿಟಿಷ್ ಆಡಳಿತವು ಭಾರತೀಯರನ್ನು ಸೇನಾ ಅಧಿಕಾರಿಗಳನ್ನಾಗಿ ನೇಮಿಸಿಕೊಳ್ಳಲು ನಿರಾಕರಿಸಿತು. ಆದಾಗ್ಯೂ, ಗಾಯಗೊಂಡಿರುವ ಬ್ರಿಟಿಷ್ ಸೈನಿಕರಿಗೆ ಶುಶ್ರೂಷೆ ಮಾಡುವ ಡೋಲಿವಾಹಕರಾಗಿ ಕೆಲಸ ಮಾಡುವ ಅವಕಾಶವನ್ನು ಭಾರತೀಯ ಸ್ವಯಂಸೇವಕರ ತುಕಡಿಯೊಂದಕ್ಕೆ ನೀಡಬೇಕೆಂಬ ಗಾಂಧಿಯವರ ಪ್ರಸ್ತಾವವನ್ನು ಬ್ರಿಟಿಷ್ ಆಡಳಿತವು ಪುರಸ್ಕರಿಸಿತು. ಈ ತುಕಡಿಯು ಗಾಂಧಿಯವರ ನಿಯಂತ್ರಣಲ್ಲಿತ್ತು.

ಇಂಡಿಯನ್ ಒಪಿನಿಯನ್‌ನಲ್ಲಿನ ತಮ್ಮ ಅಂಕಣಗಳ ಮೂಲಕ, ಯುದ್ಧಕ್ಕೆ ಸೇರಿರೆಂದು ಗಾಂಧಿಯವರು ದಕ್ಷಿಣ ಆಫ್ರಿಕಾಲ್ಲಿರುವ ಭಾರತೀಯ ಜನಾಂಗವನ್ನು ಪ್ರೇರೇಪಿಸಿದರು. ಗಾಂಧಿಯವರ ಅಭಿಪ್ರಾಯದಲ್ಲಿ, ೧೯೦೬ರ ಕರಡು ಅಧಿಶಾಸನವು ಭಾರತೀಯರ ಸ್ಥಾನಮಾನವನ್ನು ಸ್ಥಳೀಯರಿಗಿಂತಲೂ ಕೀಳುಮಟ್ಟಕ್ಕೆ ಇಳಿಸಿತ್ತು. ಆದ್ದರಿಂದ, "ಕಾಫಿರ್‌ರ" ಜನಾಂಗದ ಉದಾಹರಣೆಯನ್ನು ಗಮನದಲ್ಲಿಟ್ಟುಕೊಂಡು ಸತ್ಯಾಗ್ರಹದ ಹಾದಿಯನ್ನು ಅನುಸರಿಸಿ ಅಧಿಶಾಸನವನ್ನು ವಿರೋಧಿಸಿರೆಂದು ಅವರು ಭಾರತೀಯರನ್ನು ಆಗ್ರಹಿಸಿದರು. ಬೋಯೆರ್ ಯುದ್ಧ ಕಾಲದಲ್ಲಿ ಗಾಂಧಿ ಸೈನ್ಯದಲ್ಲಿ ಕೆಲಸ ಮಾಡಿದ್ದರು. ಯುದ್ಧದ ಕರಾಳತೆಯನ್ನು ಹತ್ತಿರದಿಂದ ಕಂಡ ನಂತರ ಅವರು ಅವರ ಅಹಿಂಸೆಯ ಹಾದಿ ಮತ್ತಷ್ಟು ಸ್ಪಷ್ಟವಾಯಿತು.

ಮರಳಿ ಭಾರತಕ್ಕೆ.....

೧೯೧೫ರಲ್ಲಿ ಭಾರತಕ್ಕೆ ಮರಳಿ ಬಂದರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಭೆಗಳಲ್ಲಿ ಮಾತನಾಡಿದರು. ಆ ಸಮಯದಲ್ಲಿ ಕಾಂಗ್ರೆಸ್‌ ಪಕ್ಷದ ಗೌರವಾನ್ವಿತ ನಾಯಕರಾದ ಗೋಪಾಲಕೃಷ್ಣ ಗೋಖಲೆಯವರಿಂದ ಗಾಂಧಿಯವರಿಗೆ ಭಾರತೀಯ ಸಮಸ್ಯೆಗಳು, ರಾಜಕೀಯ ಮತ್ತು ಭಾರತೀಯ ಜನತೆಯ ಕುರಿತಾದ ಪ್ರಾಥಮಿಕ ಪರಿಚಯವಾಯಿತು. ಬಂದವರೇ ಇಡೀ ಭಾರತದ ಪ್ರವಾಸ ಕೈಗೊಂಡರು. ಅದು ಒಂದು ರೀತಿಯಲ್ಲಿ ಭಾರತದ ಆತ್ಮವನ್ನು ಸ್ಪರ್ಷಿಸುವ ಪ್ರಯತ್ನವಾಗಿತ್ತು. ಭಾರತದಲ್ಲಿಯೂ ಅವರ ಹೋರಾಟದ ಹಾದಿ ಮುಂದುವರೆಯುತ್ತದೆ. ಅತಿಯಾದ ಜಮೀನು ತೆರಿಗೆ ಮತ್ತು ತಾರತಮ್ಯಗಳಿಗೆ ಸಂಬಂಧಿಸಿದಂತೆ ರೈತರ, ಬೇಸಾಯಗಾರರ ಮತ್ತು ನಗರ ಪ್ರದೇಶದ ಕಾರ್ಮಿಕರ ಪ್ರತಿಭಟನೆಗಳನ್ನು ಅವರು ಸಂಘಟಿಸಿದರು.

ಚಂಪಾರಣ್ ಮತ್ತು ಖೇಡಾ......

ಗಾಂಧಿಯವರ ಮೊದಲ ಪ್ರಮುಖ ಸಾಧನೆಗಳು ೧೯೧೮ರಲ್ಲಿ ಚಂಪಾರಣ್‌ ಚಳವಳಿ ಮತ್ತು ಖೇಡಾ ಸತ್ಯಾಗ್ರಹ ದೊಂದಿಗೆ ಪ್ರಾರಂಭವಾದವು. ಬದುಕಿಗೆ ಅಗತ್ಯವಾದ ಆಹಾರ ಬೆಳೆಗಳ ಬದಲಿಗೆ ಇಂಡಿಗೋ ಮತ್ತು ಇತರ ವಾಣಿಜ್ಯ ಬೆಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಖೇಡಾ ಸತ್ಯಾಗ್ರಹದಲ್ಲಿ ಸೇರಿದ್ದವು. ಜಮೀನುದಾರರ (ಬಹುತೇಕವಾಗಿ ಬ್ರಿಟಿಷರ) ಖಾಸಗಿ ಸೇನೆಯಿಂದ ನಿಗ್ರಹಿಸಲ್ಪಡುತ್ತಿದ್ದ ಅವರಿಗೆ ಬಹಳ ಕಡಿಮೆ ಪರಿಹಾರ ಧನವನ್ನು ನೀಡಲಾಗುತ್ತಿತ್ತು. ಹೀಗಾಗಿ ಅವರು ತೀವ್ರ ಬಡತನದಲ್ಲಿ ಸಿಲುಕಿದ್ದರು.

ಹಳ್ಳಿಗಳು ಅತ್ಯಂತ ಕೊಳಕು ಮತ್ತು ಅನೈರ್ಮಲ್ಯದ ಸ್ಥಿತಿಯಲ್ಲಿದ್ದವು; ಮತ್ತು ಕುಡಿತ, ಅಸ್ಪೃಶ್ಯತೆ ಹಾಗೂ ಬುರ್ಖಾ ಪದ್ಧತಿಗಳು ಅತಿರೇಕವಾಗಿದ್ದವು. ಇಂಥಾ ವಿನಾಶಕಾರಿ ಕ್ಷಾಮದ ಹಿಂಸೆಯ ಸನ್ನಿವೇಶ ದಲ್ಲಿಯೂ ಬ್ರಿಟಿಷ್ ಆಡಳಿತವು ತೆರಿಗೆಯೊಂದನ್ನು ವಿಧಿಸಿದ್ದೇ ಅಲ್ಲದೇ ಅದನ್ನು ಹೆಚ್ಚಿಸುತ್ತಲೇ ಹೋಯಿತು. ಪರಿಸ್ಥಿತಿಯು ಹತಾಶೆಯಿಂದ ಕೂಡಿತ್ತು. ಗುಜರಾತ್‌ನ ಖೇಡಾದಲ್ಲಿಯೂ ಸಹ ಇದೇ ಸಮಸ್ಯೆಯಿತ್ತು. ಆ ಪ್ರಾಂತ್ಯದಿಂದ ತಮ್ಮ ನುರಿತ ಬೆಂಬಲಿಗರು ಹಾಗೂ ಹೊಸ ಸ್ವಯಂಸೇವಕರ ಪಡೆಯನ್ನು ಸಂಘಟಿಸಿದ ಗಾಂಧಿಯವರು ಅಲ್ಲಿ ಒಂದು ಆಶ್ರಮವನ್ನು ಸ್ಥಾಪಿಸಿದರು.

ಹದಗೆಟ್ಟ ಬದುಕಿನ ಸಾರ್ವತ್ರಿಕ ಪರಿಸ್ಥಿತಿಯೂ ಸೇರಿದಂತೆ ಸಂಕಟ ಸನ್ನಿವೇಶದ ಘೋರ ಮತ್ತು ಭಯಾನಕ ಅಧ್ಯಾಯಗಳನ್ನು ಗಮನದಲ್ಲಿರಿಸಿಕೊಂಡು ಹಳ್ಳಿಗಳ ವಿಸ್ತೃತ ಅಧ್ಯಯನ ಮತ್ತು ಸಮೀಕ್ಷೆಯನ್ನು ಅವರು ನಡೆಸಿದರು. ಹಳ್ಳಿಗರ ಆತ್ಮವಿಶ್ವಾಸದ ಬುನಾದಿಯ ಮೇಲೆ ಹಳ್ಳಿಗಳ ಶುದ್ಧೀಕರಣ, ಶಾಲೆಗಳು ಹಾಗೂ ಆಸ್ಪತ್ರೆಗಳ ನಿರ್ಮಾಣದ ನೇತೃತ್ವವನ್ನು ವಹಿಸಲು ಮುಂದಾದ ಅವರು, ಮೇಲೆ ತಿಳಿಸಲಾದ ಅನೇಕ ಸಾಮಾಜಿಕ ಪಿಡುಗುಗಳನ್ನು ಮಾಡದಂತಿರುವ ಹಾಗೂ ಖಂಡಿಸುವ ನಿಟ್ಟಿನಲ್ಲಿ ಹಳ್ಳಿಗರಲ್ಲಿ ನಾಯಕತ್ವದ ಗುಣವನ್ನು ಬೆಳೆಸುವೆಡೆಗೆ ಪ್ರೋತ್ಸಾಹಿಸಿದರು.

ಗಾಂಧಿಯವರ ನಡೆಯನ್ನು ತಪ್ಪಾಗಿ ಗ್ರಹಿಸಿದ ಬ್ರಿಟಿಷ್ ಸರ್ಕಾರ, ಕ್ಷೋಭೆಯನ್ನು ಸೃಷ್ಟಿಸಿದ ಆಪಾದನೆಯ ಮೇರೆಗೆ ಅವರನ್ನು ಬಂಧಿಸಿಗಡಿಪಾರು ಮಾಡಿತು. ನೂರಾರು, ಸಾವಿರಾರು ಜನರು ಕಾರಾಗೃಹ, ಪೊಲೀಸ್ ಠಾಣೆ ಮತ್ತು ನ್ಯಾಯಾಲಯಗಳ ಹೊರಗೆ ಜಮಾವಣೆಗೊಂಡು ಪ್ರತಿಭಟನೆ ನಡೆಸಿ, ಅವರ ಬಿಡುಗಡೆಯಾಗಬೇಕೆಂದು ಒತ್ತಾಯಿಸಿದರು. ನ್ಯಾಯಾಲಯವು ಒಲ್ಲದ ಮನಸ್ಸಿನೊಂದಿಗೆ ಗಾಂಧಿಯವರನ್ನು ಬಿಡುಗಡೆ ಮಾಡಿತು.

ಜಮೀನುದಾರರ ವಿರುದ್ಧ ಗಾಂಧಿಯವರು ಸುಸಂಘಟಿತ ಪ್ರತಿಭಟನೆಗಳನ್ನು ನಡೆಸಿದ ಫಲವಾಗಿ, ಬ್ರಿಟಿಷ್ ಸರ್ಕಾರದ ಮಾರ್ಗದರ್ಶನದೊಂದಿಗೆ ಜಮೀನುದಾರರು ಒಂದು ಕರಾರಿಗೆ ಸಹಿ ಹಾಕಿದರು. ಇದರನ್ವಯ ಆ ವಲಯದ ಬಡ ರೈತರಿಗೆ ಹೆಚ್ಚಿನ ಪರಿಹಾರ ಧನ ಮತ್ತು ಬೇಸಾಯದ ಮೇಲಣ ನಿಯಂತ್ರಣ ನೀಡಿ, ಕ್ಷಾಮದ ಅಂತ್ಯದವರೆಗೂ ಕಂದಾಯಗಳ ಹೆಚ್ಚಳ ಮತ್ತು ಅವುಗಳ ವಸೂಲಿಯನ್ನು ರದ್ದುಗೊಳಿಸಲಾಯಿತು. ಈ ಚಳುವಳಿ ನಡೆಯುತ್ತಿದ್ದ ವೇಳೆ, ಜನರು ಗಾಂಧಿಯವರನ್ನು ಬಾಪು (ಅಪ್ಪ) ಎಂದು ಕರೆದರು. ಖೇಡಾದಲ್ಲಿ ಬ್ರಿಟಿಷ್‌ ಆಡಳಿತದೊಂದಿಗಿನ ಮಾತುಕತೆಯಲ್ಲಿ ಸರ್ದಾರ್ ಪಟೇಲ್‌ ಅವರು ರೈತರನ್ನು ಪ್ರತಿನಿಧಿಸಿದರು. ಬ್ರಿಟಿಷ್ ಆಡಳಿತವು ಕಂದಾಯ ವಸೂಲಿಯನ್ನು ರದ್ದುಗೊಳಿಸಿ ಎಲ್ಲಾ ಖೈದಿಗಳನ್ನು ಬಿಡುಗಡೆಗೊಳಿಸಿತು. ಇದರ ಫಲವಾಗಿ, ಗಾಂಧಿಯವರ ಪ್ರಭಾವ ರಾಷ್ಟ್ರದೆಲ್ಲೆಡೆ ಹಬ್ಬಿತು.

ಅಸಹಕಾರ ಅಂದೋಲನ.....

ಬ್ರಿಟಿಷ್‌ರ ವಿರುದ್ಧದ ಹೋರಾಟದಲ್ಲಿ ಗಾಂಧಿಯವರು ಅಸಹಕಾರ, ಅಹಿಂಸೆ ಮತ್ತು ಶಾಂತಿಯುತ ಪ್ರತಿರೋಧವನ್ನು ತಮ್ಮ ಶಸ್ತ್ರಗಳನ್ನಾಗಿ ಬಳಸಿದರು. ಪಂಜಾಬ್‌ನಲ್ಲಿ, ಬ್ರಿಟಿಷ್ ಪಡೆಗಳು ಮಾಡಿದ ನಾಗರಿಕರ ಜಲಿಯನ್‌ವಾಲಾ ಬಾಗ್‌ ಹತ್ಯಾಕಾಂಡವು ರಾಷ್ಟ್ರಕ್ಕೆ ತೀವ್ರವಾದ ಪೆಟ್ಟು ನೀಡಿತು. ಇದರಿಂದಾಗಿ ಸಾರ್ವಜನಿಕ ಸಿಟ್ಟು ಮತ್ತು ಹಿಂಸಾಚಾರದ ಘಟನೆಗಳು ಹೆಚ್ಚಾದವು. ಗಾಂಧಿಯವರು ಬ್ರಿಟಿಷ್‌ ಆಡಳಿತದ ಕೃತ್ಯ ಹಾಗೂ ಭಾರತೀಯರ ಸೇಡಿನ ಹಿಂಸಾಚಾರಗಳೆರಡನ್ನೂ ಖಂಡಿಸಿದರು.

ಗಾಂಧಿಯವರು ಹಿಂಸಾಚಾರದ ಘಟನೆಯನ್ನು ಖಂಡಿಸಿ, ಹಲ್ಲೆಗೀಡಾದ ಬ್ರಿಟಿಷ್ ನಾಗರಿಕರಿಗೆ ಸಂತಾಪ ಸೂಚಿಸುವ ನಿರ್ಣಯವನ್ನು ಬರೆದಿದ್ದರು. ಮೊದಲು ಇದಕ್ಕೆ ಪಕ್ಷದಲ್ಲಿ ವಿರೋಧ ವ್ಯಕ್ತವಾದರೂ, ತಮ್ಮ ತತ್ವಗಳ ಪ್ರಕಾರ ಎಲ್ಲಾ ರೀತಿಯ ಹಿಂಸಾಚಾರವೂ ಕೆಟ್ಟದು ಮತ್ತು ಎಂದಿಗೂ ಸಮರ್ಥಿಸಿಕೊಳ್ಳಲಾಗದು ಎಂದು ಗಾಂಧಿಯವರು ಭಾವುಕವಾಗಿ ಭಾಷಣ ಮಾಡಿದಾಗ ಈ ನಿರ್ಣಯವನ್ನು ಅಂಗೀಕರಿಸಲಾಯಿತು. ಆದರೆ ಹತ್ಯಾಕಾಂಡ ಮತ್ತು ಸೇಡಿನ ಹಿಂಸಾಚಾರದ ನಂತರವಷ್ಟೇ ಸಂಪೂರ್ಣ ಸ್ವ-ಸರ್ಕಾರ ಮತ್ತು ಭಾರತ ಸರ್ಕಾರದ ಎಲ್ಲಾ ಸಂಸ್ಥಾನಗಳ ನಿಯಂತ್ರಣ ಪಡೆಯುವತ್ತ, ಕ್ರಮೇಣ ಸ್ವರಾಜ್‌ ಅಥವಾ ಸಂಪೂರ್ಣ ಸ್ವತಂತ್ರ ಅಧ್ಯಾತ್ಮಿಕ ಮತ್ತು ರಾಜಕೀಯ ಸ್ವಾತಂತ್ರ್ಯವಾಗಿ ಪರಿಪೂರ್ಣವಾಗಿಸುವತ್ತ ಗಾಂಧಿಯವರ ಮನವು ಕೇಂದ್ರೀಕೃತಗೊಂಡಿತು.

ಭಾರತ ರಾಷ್ಟ್ರೀಯ ಕಾಂಗ್ರೆಸ್ ಚುಕ್ಕಾಣಿ.....

೧೯೨೧ ಡಿಸೆಂಬರ ತಿಂಗಳಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪರವಾಗಿ ಕಾರ್ಯಕಾರೀ ಅಧಿಕಾರವನ್ನು ಗಾಂಧಿಯವರಿಗೆ ನೀಡಲಾಯಿತು. 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಗಾಂಧಿ ವಹಸಿದ್ದರು. ಗಾಂಧಿಯವರ ನಾಯಕತ್ವದಲ್ಲಿ, ಸ್ವರಾಜ್‌ ಎಂಬ ಗುರಿಯಿಟ್ಟುಕೊಂಡ ಕಾಂಗ್ರೆಸ್‌ ಹೊಸ ಸಂವಿಧಾನ ದೊಂದಿಗೆ ಪುನಸ್ಸಂಘಟಿತವಾಯಿತು. ಸಾಂಕೇತಿಕ ಶುಲ್ಕ ಪಾವತಿ ಮಾಡಲು ಸಿದ್ಧವಿದ್ದ ಯಾರಿಗಾದರೂ ಪಕ್ಷದ ಸದಸ್ಯತ್ವ ಲಭ್ಯವಿತ್ತು. ಶಿಸ್ತಿನಲ್ಲಿ ಸುಧಾರಣೆ ತರಲು ಸಮಿತಿಗಳ ಶ್ರೇಣಿ ವ್ಯವಸ್ಥೆಯನ್ನು ಸ್ಥಾಪಿಸಿದ್ದರಿಂದಾಗಿ, ಒಂದು ಉತ್ಕೃಷ್ಟ ಸಂಘಟನೆಯಂತಿದ್ದ ಪಕ್ಷವು ಇಡೀ ರಾಷ್ಟ್ರದಲ್ಲೇ ಜನಪ್ರಿಯತೆ ಗಳಿಸುವ ಪಕ್ಷವಾಗಿ ಮಾರ್ಪಾಡಾಯಿತು.

ವಿದೇಶೀ ಉತ್ಪಾದನೆಗಳು, ಅದರಲ್ಲೂ ವಿಶೇಷವಾಗಿ ಬ್ರಿಟಿಷ್ ಉತ್ಪಾದನೆಗಳನ್ನು ಬಹಿಷ್ಕರಿಸುವಂತಹ "ಸ್ವದೇಶಿ" ನೀತಿಯನ್ನು ತೊಡಗಿಸಲು ಗಾಂಧಿಯವರು ತಮ್ಮ ಅಹಿಂಸಾ ತತ್ವದ ವೇದಿಕೆಯನ್ನು ವಿಸ್ತರಿಸಿದರು. ಇದಕ್ಕೆ ಸಂಬಂಧಿಸಿದಂತೆ, ಎಲ್ಲಾ ಭಾರತೀಯರು, ಬ್ರಿಟಿಷ್-ಉತ್ಪಾದಿತ ಜವಳಿಗಳ ಬದಲಿಗೆ ಮನೆಯಲ್ಲಿ ನೂತ ಖಾದಿ ಉಡುಪನ್ನೇ ಧರಿಸಬೇಕೆಂದು ಸಮರ್ಥಿಸಿದರು. ಸ್ವಾತಂತ್ರ್ಯ ಆಂದೋಲನಕ್ಕೆ ಬೆಂಬಲವನ್ನು ಸೂಚಿಸಲು, ಎಲ್ಲಾ ಭಾರತೀಯ ಪುರುಷರು-ಸ್ತ್ರೀಯರು, ಅವರು ಶ್ರೀಮಂತರೇ ಆಗಿರಲಿ ಅಥವಾ ಬಡವರೇ ಆಗಿರಲಿ, ಪ್ರತಿದಿನವೂ ಸ್ವಲ್ಪ ಸಮಯ ಖಾದಿಯನ್ನು ನೂಲಲು ಗಾಂಧಿಯವರು ಪ್ರೇರೇಪಿಸಿದರು.

ಭಾರತೀಯ ಸಮುದಾಯದ ಎಲ್ಲಾ ಸ್ತರಗಳ ಉತ್ಸಾಹ ಹಾಗೂ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿದ "ಅಸಹಕಾರ ಆಂದೋಲನ"ವು ವ್ಯಾಪಕ ಜನಪ್ರಿಯತೆ ಮತ್ತು ಯಶಸ್ಸನ್ನು ಗಳಿಸಿತು. ಆದಾಗ್ಯೂ, ಆಂದೋಲನವು ತನ್ನ ಉತ್ತುಂಗವನ್ನು ತಲುಪುವಷ್ಟರಲ್ಲಿಯೇ, ಉತ್ತರ ಪ್ರದೇಶದ ಚೌರಿ ಚೌರಾ ಪಟ್ಟಣದಲ್ಲಿ ೧೯೨೨ರ ಫೆಬ್ರುವರಿ ತಿಂಗಳಲ್ಲಿ ನಡೆದ ಒಂದು ಹಿಂಸಾತ್ಮಕ ಘರ್ಷಣೆಯ ಕಾರಣವಾಗಿ ಅದು ಹಠಾತ್ತಾಗಿ ಕೊನೆಗೊಂಡಿತು. ಆಂದೋಲನವು ಹಿಂಸಾಚಾರದತ್ತ ತಿರುವು ಪಡೆದುಕೊಳ್ಳಲಿದೆಯೆಂದು ಆತಂಕಗೊಂಡು ಹಾಗೂ ಇದು ತಮ್ಮ ಕಾರ್ಯವನ್ನೆಲ್ಲಾ ವ್ಯರ್ಥಗೊಳಿಸಬಹುದೆಂದು ಮನಗಂಡ ಗಾಂಧಿಯವರು, ಸಾಮೂಹಿಕ ನಾಗರಿಕ ಅವಿಧೇಯತಾ ಆಂದೋಲನವನ್ನು ಹಿಂದೆಗೆದುಕೊಂಡರು. ೧೯೨೨ರ ಮಾರ್ಚ್ ೧೦ರಂದು ಗಾಂಧಿಯವರನ್ನು ಬಂಧಿಸಿ, ಶಾಂತಿಭಂಗ ಮಾಡಿದರೆಂಬ ಆಪಾದನೆಯನ್ನು ಅವರ ಮೇಲೆ ಹೊರಿಸಿ, ಆರು ವರ್ಷದ ಕಾರಾಗೃಹ ಸಜೆ ವಿಧಿಸಲಾಯಿತು.

ಅವರು ೧೯೨೨ರ ಮಾರ್ಚ್ ೧೮ರಂದು ತಮ್ಮ ಸಜೆಯನ್ನು ಆರಂಭಗೊಳಿಸಿದರು. ಸಜೆಯಲ್ಲಿ ಕೇವಲ ಎರಡು ವರ್ಷಗಳನ್ನು ಪೂರೈಸಿದ್ದಾಗ ಕರುಳು ಸಂಬಂಧಿತ ರೋಗದ ಒಂದು ಶಸ್ತ್ರಚಿಕಿತ್ಸೆಗಾಗಿ ೧೯೨೪ರ ಫೆಬ್ರವರಿ ತಿಂಗಳಲ್ಲಿ ಅವರನ್ನು ಬಿಡುಗಡೆಗೊಳಿಸಲಾಯಿತು. ಗಾಂಧಿಯವರ ಒಗ್ಗೂಡಿಸುವಂತಹ ವ್ಯಕ್ತಿತ್ವದ ಅನುಪಸ್ಥಿತಿಯಲ್ಲಿ, ಅವರ ಕಾರಾಗೃಹವಾಸದ ವರ್ಷಗಳ ಅವಧಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಎರಡು ಬಣಗಳಾಗಿ ಒಡೆದಿತ್ತು. ಒಂದೆಡೆ ಚಿತ್ತರಂಜನ್‌ ದಾಸ್‌ ಮತ್ತು ಮೋತಿಲಾಲ್‌ ನೆಹರೂ ನೇತೃತ್ವದ ಬಣವು ಶಾಸನ ಸಭೆಯಲ್ಲಿ ಭಾಗವಹಿಸುವ ಒಲವನ್ನು ತೋರಿದರೆ; ಇನ್ನೊಂದೆಡೆ ಚಕ್ರವರ್ತಿ ರಾಜಗೋಪಾಲಾಚಾರಿ ಮತ್ತು ಸರ್ದಾರ್‌ ವಲ್ಲಭ್‌ಭಾಯಿ ಪಟೇಲ್‌ ನೇತೃತ್ವದ ಇನ್ನೊಂದು ಬಣವು ಈ ಪ್ರಸ್ತಾಪವನ್ನು ವಿರೋಧಿಸಿತು. ಇದಕ್ಕಿಂತಲೂ ಹೆಚ್ಚಾಗಿ, ಅಹಿಂಸಾ ಆಂದೋಲನದ ಉತ್ತುಂಗದಲ್ಲಿ ಸದೃಢವಾಗಿದ್ದ ಹಿಂದೂ-ಮುಸ್ಲಿಮ್‌ರ ನಡುವಿನ ಸಹಕಾರ ಭಾವವು ಮುರಿದು ಬೀಳುತ್ತಿತ್ತು. ೧೯೨೪ರ ಶರತ್ಕಾಲದಲ್ಲಿ ಕೈಗೊಂಡ ಮೂರು ವಾರಗಳ ಉಪವಾಸವೂ ಸೇರಿದಂತೆ, ಹಲವಾರು ರೀತಿಯಲ್ಲಿ ಈ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಗಾಂಧಿಯವರು ಯತ್ನಿಸಿದರು, ಆದರೂ ಇದರ ಯಶಸ್ಸು ಸೀಮಿತ ಮಟ್ಟದ್ದಾಗಿತ್ತು.

*ಸ್ವರಾಜ್ ಮತ್ತು ಉಪ್ಪಿನ ಸತ್ಯಾಗ್ರಹ (ದಂಡಿಯಾತ್ರೆ)*

೧೯೨೦ರ ದಶಕದ ಬಹುಪಾಲು ಗಾಂಧಿಯವರು ಸಕ್ರಿಯ ರಾಜಕಾರಣದಿಂದ ಮತ್ತು ಲೋಕಪ್ರಸಿದ್ಧಿಯಿಂದ ದೂರ ಉಳಿದು, ಸ್ವರಾಜ್‌ ಪಕ್ಷ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಡುವಿನ ಒಡಕನ್ನು ಸರಿಪಡಿಸಲು ಹಾಗೂ ಅಸ್ಪೃಶ್ಯತೆ, ಮದ್ಯಪಾನ, ಅಜ್ಞಾನ ಮತ್ತು ಬಡತನದ ವಿರುದ್ಧದ ಅಭಿಯಾನವನ್ನು ಮುಂದುವರೆಸಲು ಇಚ್ಛಿಸಿದರು. ಅವರು ೧೯೨೮ರಲ್ಲಿ ಮುಂಚೂಣಿಗೆ ಮರಳಿ ಬಂದರು.

ಇದರ ಹಿಂದಿನ ವರ್ಷ, ಬ್ರಿಟಿಷ್ ಸರ್ಕಾರವು ಸರ್ ಜಾನ್‌ ಸೈಮನ್‌ ನೇತೃತ್ವದ ಒಂದು ಹೊಸ ಸಾಂವಿಧಾನಿಕ ಸುಧಾರಣಾ ಆಯೋಗವನ್ನು ನೇಮಿಸಿತ್ತು. ಆದರೆ ಇದರಲ್ಲಿ ಒಬ್ಬ ಭಾರತೀಯ ಸದಸ್ಯನೂ ಇರಲಿಲ್ಲ. ಇದರ ಪರಿಣಾಮವಾಗಿ ಭಾರತೀಯ ರಾಜಕೀಯ ಪಕ್ಷಗಳು ಆಯೋಗವನ್ನು ಬಹಿಷ್ಕರಿಸಿದವು. ೧೯೨೮ರ ಡಿಸೆಂಬರ್ ತಿಂಗಳಲ್ಲಿ ನಡೆದ ಕೋಲ್ಕತ್ತಾ ಸಭೆಯಲ್ಲಿ, 'ಬ್ರಿಟಿಷ್ ಸರ್ಕಾರವು ಭಾರತಕ್ಕೆ ಪರಮಾಧಿಕಾರವನ್ನು ನೀಡಲಿ, ಅಥವಾ, ದೇಶದ ಸಂಪೂರ್ಣ ಸ್ವಾತಂತ್ರ್ಯವನ್ನು ಗುರಿಯಾಗಿಟ್ಟು ಕೊಂಡಿರುವ ಅಸಹಕಾರದ ಹೊಸ ಆಂದೋಲನವನ್ನು ಎದುರಿಸಲಿ' ಎಂಬ ನಿರ್ಣಯವನ್ನು ಗಾಂಧಿಯವರು ಮಂಡಿಸಿದರು. ತತ್‌ಕ್ಷಣದ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸಿದ ಯುವ ನಾಯಕರಾದ ಸುಭಾಷ್ ಚಂದ್ರ ಬೋಸ್‌ ಮತ್ತು ಜವಾಹರ್‌ ಲಾಲ್‌ ನೆಹರೂ ಅವರ ಅಭಿಪ್ರಾಯದ ಬಲಾಬಲವನ್ನು ನಿರ್ಣಯಿಸಿದರಲ್ಲದೆ, ಸ್ವಾತಂತ್ರ್ಯಕ್ಕಾಗಿ ತಮ್ಮದೇ ಆದ ಕರೆಗಾಗಿ ಎರಡು ವರ್ಷಗಳ ನಿರೀಕ್ಷೆಯನ್ನು ಒಂದು ವರ್ಷಕ್ಕೆ ಮೊಟಕುಗೊಳಿಸಿದರು. ಬ್ರಿಟಿಷ್‌ರು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

೧೯೩೦ರ ಮಾರ್ಚ್‌ ತಿಂಗಳಲ್ಲಿ, ಬ್ರಿಟಿಷ್ ಸರ್ಕಾರವು ವಿಧಿಸಿದ ಉಪ್ಪು ತೆರಿಗೆಯನ್ನು ವಿರೋಧಿಸಿ ಹೊಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ತಾವೇ ಉಪ್ಪನ್ನು ತಯಾರಿಸುವ ಉದ್ದೇಶದಿಂದ, ಮಾರ್ಚ್‌ ೧೨ರಂದು ಅಹ್ಮದಾಬಾದ್‌ನಿಂದ ಪಾದಯಾತ್ರೆ ಆರಂಭಿಸಿ ೪೦೦ ಕಿಲೋಮೀಟರ್‌ಗಳಷ್ಟು ದೂರ ನಡೆದು, ಏಪ್ರಿಲ್‌ ೬ರಂದು ದಂಡಿ ತಲುಪಿದ್ದು, ಇದರ ಪ್ರಮುಖಾಂಶವಾಗಿತ್ತು. ಸಮುದ್ರದತ್ತ ಸಾಗಿದ ಈ ದಂಡಯಾತ್ರೆಯಲ್ಲಿ ಸಾವಿರಾರು ಭಾರತೀಯರು ಗಾಂಧಿಯವರ ಜತೆಗೂಡಿದರು. ಭಾರತದ ಮೇಲಿನ ಬ್ರಿಟಿಷ್‌ರ ಹಿಡಿತವನ್ನು ಬುಡಮೇಲುಗೊಳಿಸುವಲ್ಲಿನ ಗಾಂಧಿಯವರ ಈ ಆಂದೋಲನವು ಯಶಸ್ವೀ ಆಂದೋಲನಗಳಲ್ಲಿ ಒಂದಾಗಿದ್ದು, ೬೦,೦೦೦ಕ್ಕೂ ಹೆಚ್ಚು ಜನರನ್ನು ಬಂಧಿಸುವುದರ ಮೂಲಕ ಬ್ರಿಟಿಷ್ ಸರ್ಕಾರವು ಇದಕ್ಕೆ ಪ್ರತಿಕ್ರಿಯೆ ನೀಡಿತು. ಲಾರ್ಡ್ ಎಡ್ವರ್ಡ್‌ ಇರ್ವಿನ್‌ರ ಪ್ರಾತಿನಿಧ್ಯದೊಂದಿಗೆ ಬ್ರಿಟಿಷ್‌ ಸರ್ಕಾರವು ಗಾಂಧಿಯವರೊಂದಿಗೆ ಮಾತುಕತೆ ನಡೆಸಲು ನಿರ್ಧರಿಸಿತು.

೧೯೩೧ರ ಮಾರ್ಚ್‌ ತಿಂಗಳಲ್ಲಿ ಗಾಂಧಿ-ಇರ್ವಿನ್‌ ಒಪ್ಪಂದಕ್ಕೆ ಸಹಿ ಹಾಕಲಾಯಿತು. ನಾಗರಿಕ ಅಸಹಕಾರ ಆಂದೋಲನವನ್ನು ರದ್ದುಗೊಳಿಸಿದ್ದಕ್ಕೆ ಪ್ರತಿಯಾಗಿ ಬ್ರಿಟಿಷ್ ಸರ್ಕಾರವು ಎಲ್ಲಾ ರಾಜಕೀಯ ಬಂಧಿತರನ್ನು ಬಿಡುಗಡೆಗೊಳಿಸಲು ಒಪ್ಪಿಕೊಂಡಿತು. ಈ ಒಪ್ಪಂದದ ಫಲವಾಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಏಕೈಕ ಪ್ರತಿನಿಧಿಯಾಗಿ ಗಾಂಧಿಯವರನ್ನು ಲಂಡನ್‌ನಲ್ಲಿನ ದುಂಡುಮೇಜಿನ ಸಮ್ಮೇಳನಕ್ಕೆ ಹಾಜರಾಗಲು ಆಮಂತ್ರಿಸಲಾಯಿತು. ಈ ಸಮ್ಮೇಳನವು ಅಧಿಕಾರವನ್ನು ಹಸ್ತಾಂತರಗೊಳಿಸುವ ಬದಲಿಗೆ ಭಾರತದ ರಾಜಕುಮಾರರ ಮತ್ತು ಭಾರತದಲ್ಲಿನ ಅಲ್ಪಸಂಖ್ಯಾತರ ಮೇಲೆ ಕೇಂದ್ರೀಕೃತವಾದದ್ದು ಗಾಂಧಿಯವರಿಗೆ ನಿರಾಶೆಯುಂಟುಮಾಡಿತು.

ಇದಕ್ಕಿಂತಲೂ ಹೆಚ್ಚಾಗಿ, ಲಾರ್ಡ್ ಇರ್ವಿನ್‌ರ ಉತ್ತರಾಧಿಕಾರಿಯಾದ ಲಾರ್ಡ್ ವಿಲಿಂಗ್ಡನ್‌ ರಾಷ್ಟ್ರವಾದಿಗಳ ಚಲನವಲನಗಳನ್ನು ನಿಯಂತ್ರಿಸುವ ಅಭಿಯಾನವನ್ನು ಆರಂಭಿಸಿದರು. ಗಾಂಧಿಯವರನ್ನು ಪುನ: ಬಂಧಿಸಲಾಯಿತು. ತಮ್ಮ ಅನುಯಾಯಿಗಳಿಂದ ಅವರನ್ನು ಸಂಪೂರ್ಣವಾಗಿ ಪ್ರತ್ಯೇಕಿಸಿಟ್ಟು ಅವರ ಪ್ರಭಾವನ್ನು ಕಡಿಮೆಗೊಳಿಸಲು ಬ್ರಿಟಿಷ್ ಸರ್ಕಾರವು ಹವಣಿಸಿತು. ಆದರೆ, ಈ ತಂತ್ರವು ಸಫಲವಾಗಲಿಲ್ಲ.

ಚುನಾವಣೆಗಳಲ್ಲಿ ಸ್ಪರ್ಧಿಸಿ ಒಕ್ಕೂಟ ಯೋಜನೆಯಡಿ ಅಧಿಕಾರವನ್ನು ಸ್ವೀಕರಿಸಲು ಕಾಂಗ್ರೆಸ್‌ ಪಕ್ಷವು ನಿರ್ಧರಿಸಿದಾಗ, ಗಾಂಧಿಯವರು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದರು. ಅವರು ಪಕ್ಷದ ನಡೆಗೆ ಅಸಮ್ಮತಿಯನ್ನು ಸೂಚಿಸಲಿಲ್ಲವಾದರೂ, ಒಂದು ವೇಳೆ ತಾವು ರಾಜೀನಾಮೆ ನೀಡಿದಲ್ಲಿ, ಭಾರತೀಯರೊಂದಿಗಿನ ತಮ್ಮ ಜನಪ್ರಿಯತೆಯ ಕಾರಣದಿಂದಾಗಿ ಸಮುದಾಯ ಸ್ವಾಮ್ಯವಾದಿಗಳು (ಕಮ್ಯೂನಿಸ್ಟರು), ಸಮಾಜವಾದಿಗಳು, ಕಾರ್ಮಿಕ ಸಂಘದವರು (ಟ್ರೇಡ್‌ ಯುನಿಯನ್‌ನವರು), ವಿದ್ಯಾರ್ಥಿಗಳು, ಧಾರ್ಮಿಕ ಸಂಪ್ರದಾಯವಾದಿಗಳಿಂದ ಮೊದಲ್ಗೊಂಡು ವ್ಯವಹಾರ ಪರವಾದ ಗಾಢ ನಂಬುಗೆಗಳನ್ನು ಹೊಂದಿರುವವರ ತನಕ ಅನೇಕ ಸ್ತರದ ಸದಸ್ಯರನ್ನು ಒಳಗೊಂಡಿರುವ ಪಕ್ಷದ ಸದಸ್ಯತ್ವದ ಸಂಖ್ಯೆಯಲ್ಲಿ ಕುಸಿತವುಂಟಾಗಬಹುದು ಹಾಗೂ ತಂತಮ್ಮ ಕೂಗುಗಳಿಗೆ ಓಗೊಡುವಂತೆ ಈ ವಿವಿಧ ಧ್ವನಿಗಳಿಗೆ ಅವಕಾಶ ನೀಡಬೇಕಾಗಿ ಬರಬಹುದು ಎಂದು ಗಾಂಧಿಯವರು ಭಾವಿಸಿದರು.

ಬ್ರಿಟಿಷ್ ಸರ್ಕಾರದೊಂದಿಗೆ ತಾತ್ಕಾಲಿಕ ರಾಜಕೀಯ ಹೊಂದಾಣಿಕೆಯನ್ನು ಮಾಡಿಕೊಂಡ ಪಕ್ಷವೊಂದರ ನಾಯಕತ್ವ ವಹಿಸಿ, ಬ್ರಿಟಿಷ್ ಸರ್ಕಾರದ ಪ್ರಚಾರಕ್ಕೆ ಗುರಿಯಾಗುವುದನ್ನೂ ಸಹ ಗಾಂಧಿಯವರು ಬಯಸಿರಲಿಲ್ಲ. ೧೯೩೬ರಲ್ಲಿ ನೆಹರೂ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್‌ನ ಲಕ್ನೋ ಅಧಿವೇಶನದಲ್ಲಿ ಗಾಂಧಿಯವರು ಮುಂಚೂಣಿಗೆ ಮರಳಿದರು. ಭಾರತದ ಭವಿಷ್ಯದ ಬಗೆಗಿನ ಊಹಾಪೋಹಗಳಿಗಿಂತಲೂ ರಾಷ್ಟ್ರಕ್ಕೆ ಸ್ವಾತಂತ್ರ್ಯವನ್ನು ಗಳಿಸಿಕೊಡುವತ್ತ ತಮ್ಮ ಸಂಪೂರ್ಣ ಗಮನವನ್ನು ಕೇಂದ್ರೀಕರಿಸಲು ಗಾಂಧಿಯವರು ಇಚ್ಛಿಸಿದರಾದರೂ, ಪಕ್ಷವು ಸಮಾಜವಾದವನ್ನು ತನ್ನ ಧ್ಯೇಯವನ್ನಾಗಿ ಮಾಡಿಕೊಳ್ಳುವುದನ್ನು ಅವರು ತಡೆಯಲಿಲ್ಲ.

ಸ್ವತಂತ್ರವಾದ ಗೃಹ ಸಮುದಾಯವೊಂದರಲ್ಲಿ ನಿರಾಡಂಬರವಾದ ಜೀವನ ನಡೆಸಿದ ಗಾಂಧಿಯವರು ಚರಕಾದ ಮೂಲಕ ತಾವೇ ತೆಗೆದ ನೂಲಿನಿಂದ ನೇಯ್ದ ಸಾಂಪ್ರದಾಯಿಕ ಭಾರತೀಯ ಧೋತಿ ಮತ್ತು ಶಾಲನ್ನು ತೊಡುತ್ತಿದ್ದರು. ಸರಳ ಸಸ್ಯಾಹಾರವನ್ನು ಸೇವಿಸುತ್ತಿದ್ದ ಅವರು ಸ್ವಶುದ್ಧೀಕರಣ ಹಾಗೂ ಸಾಮಾಜಿಕ ಪ್ರತಿಭಟನೆಗಳೆರಡರ ಸಂಕೇತವಾಗಿ ದೀರ್ಘಾವಧಿಯ ಉಪವಾಸಗಳನ್ನು ಕೈಗೊಳ್ಳುತ್ತಿದ್ದರು.

'ಕ್ವಿಟ್ ಇಂಡಿಯಾ ಆಂದೋಲನ'

ನಾಜಿ ಜರ್ಮನಿ ಪೋಲೆಂಡ್‌ನ ಮೇಲೆ ಅತಿಕ್ರಮಣ ನಡೆಸಿದಾಗ ೧೯೩೯ರಲ್ಲಿ ಎರಡನೆಯ ವಿಶ್ವ ಸಮರವು ನಡೆಯಿತು. ಮೊದಲಿಗೆ, ಮಹಾಯುದ್ಧದಲ್ಲಿ ಬ್ರಿಟಿಷ್ ಸರ್ಕಾರದ ಕಾರ್ಯಾಚರಣೆಗೆ ಅಹಿಂಸಾತ್ಮಕ ನೈತಿಕ ಬೆಂಬಲವನ್ನು ನೀಡಲು ಗಾಂಧಿಯವರು ಒಲವು ತೋರಿದರೂ, ಜನಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸದೆ ಏಕಾಏಕಿಯಾಗಿ ಭಾರತವನ್ನು ಯುದ್ಧದಲ್ಲಿ ಸೇರಿಸಿಕೊಂಡ ಬಗ್ಗೆ ಇತರ ಕಾಂಗ್ರೆಸ್‌ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಎಲ್ಲಾ ಕಾಂಗ್ರೆಸ್ಸಿಗರೂ ತಮ್ಮ ಹುದ್ದೆಗಳಿಗೆ ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದರು. ದೀರ್ಘಕಾಲದ ಚರ್ಚೆಗಳ ನಂತರ, 'ಭಾರತಕ್ಕೇ ಸ್ವಾತಂತ್ರ್ಯ ನಿರಾಕರಿಸಿದ್ದಾಗ, ಪ್ರಜಾಪ್ರಭುತ್ವಕ್ಕಾಗಿ ಎಂದು ನೆಪಹೂಡಿ ನಡೆಸಲಾದ ಯುದ್ಧಕ್ಕೆ ರಾಷ್ಟ್ರವು ಎಂದಿಗೂ ಸಹಭಾಗಿಯಾಗಲಾಗದು' ಎಂದು ಗಾಂಧಿಯವರು ಘೋಷಿಸಿದರು. ಯುದ್ಧವು ಮುನ್ನಡೆದಾಗ, ಬ್ರಿಟಿಷ್ ಆಡಳಿತವು ಭಾರತ ಬಿಟ್ಟು ತೊಲಗಲಿ (ಕ್ವಿಟ್ ಇಂಡಿಯಾ) ಎಂಬ ನಿರ್ಣಯವನ್ನು ಸಿದ್ಧಪಡಿಸಿ, ಸ್ವಾತಂತ್ರ್ಯಕ್ಕಾಗಿ ತಮ್ಮ ಬೇಡಿಕೆಯನ್ನು ತೀವ್ರಗೊಳಿಸಿದರು. ಇದು ಬ್ರಿಟಿಷ್‌ ಆಡಳಿತವು ಭಾರತದ ಗಡಿಯನ್ನು ಬಿಟ್ಟು ಹೋಗುವಂತೆ ಮಾಡಲು ಗಾಂಧಿಯವರ ಮತ್ತು ಕಾಂಗ್ರೆಸ್‌ನ ಅತ್ಯಂತ ನಿರ್ಣಾಯಕ ದಂಗೆಯಾಗಿತ್ತು.

ಅಭೂತಪೂರ್ವ ಪ್ರಮಾಣದಲ್ಲಿ ನಡೆದಂತಹ ಸಾಮೂಹಿಕ ಬಂಧನಗಳು ಮತ್ತು ಹಿಂಸಾಚಾರದ ಘಟನೆಗಳನ್ನೊಳಗೊಂಡ ಕ್ವಿಟ್ ಇಂಡಿಯಾ ಚಳುವಳಿಯು ಹೋರಾಟದ ಇತಿಹಾಸದಲ್ಲಿಯೇ ಅತ್ಯಂತ ಬಲವತ್ತಾದ ಆಂದೋಲನವಾಯಿತು. ಪೊಲೀಸರ ಗುಂಡೇಟಿನಿಂದ ಸಾವಿರಾರು ಮಂದಿ ಸ್ವಾತಂತ್ರ್ಯ ಯೋಧರು ಹತರಾದರು ಅಥವಾ ಗಾಯಗೊಂಡರು, ಹಾಗೂ ಲಕ್ಷಗಟ್ಟಲೆ ಜನರು ಬಂಧಿತರಾದರು. ಭಾರತಕ್ಕೆ ಕೂಡಲೇ ಸ್ವಾತಂತ್ರ್ಯ ನೀಡದಿದ್ದಲ್ಲಿ, ಯುದ್ಧದ ಕಾರ್ಯಾಚರಣೆಗೆ ಬೆಂಬಲವನ್ನು ನೀಡಲಾರೆವೆಂದು ಗಾಂಧಿಯವರು ಮತ್ತು ಅವರ ಬೆಂಬಲಿಗರು ಖಡಾಖಂಡಿತವಾಗಿ ಹೇಳಿದರು. ತಮ್ಮ ಸುತ್ತಲಿನ "ಆದೇಶಿತ ಅರಾಜಕತೆ"ಯು "ನೈಜ ಅರಾಜಕತೆಗಿಂತಲೂ ಕೆಟ್ಟದು" ಎಂದು ಹೇಳಿ, ಕೆಲವು ಹಿಂಸಾಚಾರದ ಕೃತ್ಯಗಳನ್ನು ಎಸಗಿದರೂ ಸಹ ಈ ಬಾರಿ ಆಂದೋಲನವನ್ನು ಸ್ಥಗಿತಗೊಳಿಸಲಾರೆವು ಎಂಬ ಸ್ಪಷ್ಟೀಕರಣವನ್ನೂ ನೀಡಿದರು. ಆತ್ಯಂತಿಕ ಸ್ವಾತಂತ್ರ್ಯಕ್ಕಾಗಿ ಅಹಿಂಸಾ ಮತ್ತು ಮಾಡು ಇಲ್ಲವೇ ಮಡಿ ತತ್ವಗಳ ಮೂಲಕ ಶಿಸ್ತು ಪಾಲಿಸಲು ಅವರು ಎಲ್ಲ ಕಾಂಗ್ರೆಸ್ಸಿಗರಿಗೆ ಮತ್ತು ಭಾರತೀಯರಿಗೆ ಕರೆ ನೀಡಿದರು.

'ಕಸ್ತೂರ್ ಬಾ ಮರಣ'

೧೯೪೨ರ ಆಗಸ್ಟ್ ೯ರಂದು, ಗಾಂಧಿಯವರನ್ನು ಮತ್ತು ಇಡೀ ಕಾಂಗ್ರೆಸ್‌ ಕಾರ್ಯಕಾರೀ ಸಮಿತಿಯನ್ನು ಬ್ರಿಟಿಷ್‌ರು ಮುಂಬಯಿಯಲ್ಲಿ ಬಂಧಿಸಿದರು. ಪುಣೆಯಲ್ಲಿನ ಅಗಾ ಖಾನ್ ಅರಮನೆಯಲ್ಲಿ ಗಾಂಧಿ ಮತ್ತು 'ಕಸ್ತೂರ ಬಾ'ರವರನ್ನು ಎರಡು ವರ್ಷಗಳ ಕಾಲ ಗೃಹ ಬಂದಿಯಾಗಿ ಇರಿಸಲಾಗಿತ್ತು. ಇಲ್ಲಿಯೇ ಗಾಂಧಿಯವರ ವೈಯಕ್ತಿಕ ಜೀವನದಲ್ಲಿ ಎರಡು ದೊಡ್ಡ ಆಘಾತಗಳುಂಟಾದವು. ಅವರ ಆಪ್ತ ಕಾರ್ಯದರ್ಶಿಯಾಗಿದ್ದ ೫೦ ವರ್ಷ ವಯಸ್ಸಿನ ಮಹದೇವ್‌ ದೇಸಾಯಿ ಆರು ದಿನಗಳ ನಂತರ ಹೃದಯಾಘಾತದಿಂದ ಮೃತರಾದರು, ೧೮ ತಿಂಗಳುಗಳ ಕಾಲ ಅಲ್ಲಿಯೇ ಗೃಹ ಕೈದಿಯಾಗಿದ್ದ 'ಕಸ್ತೂರಬಾ' ರವರು ೧೯೪೪ರ ಫೆಬ್ರುವರಿ ೨೨ರಂದು, ಮಹಾತ್ಮಾಗಾಂಧಿಯವರ ತೊಡೆಯ ಮೇಲೆ ಮಲಗಿದ್ದಂತೆಯೆ ಚಿರನಿದ್ರೆಗೈದರು; ಇದಾದ ಆರು ವಾರಗಳ ನಂತರ ಗಾಂಧಿಯವರು ಮಲೇರಿಯಾ ಜ್ವರಕ್ಕೆ ತುತ್ತಾದರು.

ಯುದ್ಧ ಮುಗಿಯುವ ಮುಂಚೆಯೇ, ೧೯೪೪ರ ಮೇ ೬ರಂದು, ಕ್ಷೀಣಿಸುತ್ತಿದ ಆರೋಗ್ಯ ಮತ್ತು ಆವಶ್ಯ ಶಸ್ತ್ರಚಿಕಿತ್ಸೆಗಾಗಿ ಗಾಂಧಿಯವರನ್ನು ಬಿಡುಗಡೆಗೊಳಿಸಲಾಯಿತು; ಗಾಂಧಿಯವರು ಕಾರಾಗೃಹದಲ್ಲಿಯೇ ಸತ್ತು ರಾಷ್ಟ್ರವನ್ನು ಕುಪಿತಗೊಳಿಸುವುದು ಬ್ರಿಟಿಷ್ ಸರ್ಕಾರಕ್ಕೆ ಬೇಕಾಗಿರಲಿಲ್ಲ. ಕ್ವಿಟ್ ಇಂಡಿಯಾ ಆಂದೋಲನವು ತನ್ನ ಧ್ಯೇಯದಲ್ಲಿ ನಿಯಮಿತ ಯಶಸ್ಸು ಕಂಡಿತ್ತಾದರೂ, ಈ ಆಂದೋಲನದ ಹತ್ತಿಕ್ಕುವಿಕೆಯು ೧೯೪೩ರ ಅಂತ್ಯದಲ್ಲಿ ಭಾರತಕ್ಕೆ ಸುವ್ಯವಸ್ಥೆಯನ್ನು ತಂದಿತ್ತಿತು. ಯುದ್ಧದ ಅಂತ್ಯದಲ್ಲಿ, ಆಡಳಿತವನ್ನು ಭಾರತೀಯರಿಗೆ ಹಸ್ತಾಂತರಿಸಲಾಗುವುದೆಂದು ಬ್ರಿಟಿಷರು ಸ್ಪಷ್ಟ ಸೂಚನೆಗಳನ್ನು ನೀಡಿದರು. ಈ ಹಂತದಲ್ಲಿ ಗಾಂಧಿಯವರು ಹೋರಾಟವನ್ನು ಹಿಂದೆಗೆದುಕೊಂಡ ಫಲವಾಗಿ, ಕಾಂಗ್ರೆಸ್ ನಾಯಕತ್ವವೂ ಸೇರಿದಂತೆ ಸುಮಾರು ೧೦೦,೦೦೦ ರಾಜಕೀಯ ಬಂಧಿತರು ಬಿಡುಗಡೆಗೊಂಡರು.

'ದೇಶ ವಿಭಜನೆ'

೧೯೪೬ರಲ್ಲಿ ಬ್ರಿಟಿಷ್ ಸಂಪುಟ ನಿಯೋಗ‌ದ ಪ್ರಸ್ತಾಪಗಳನ್ನು ತಿರಿಸ್ಕರಿಸಿರೆಂದು ಗಾಂಧಿಯವರು ಕಾಂಗ್ರೆಸ್‌ಗೆ ಕರೆ ನೀಡಿದರು, ಏಕೆಂದರೆ, ಮುಸ್ಲಿಮರು ಬಹುಸಂಖ್ಯೆಯಲ್ಲಿದ್ದ ರಾಜ್ಯಗಳಿಗಾಗಿ ಪ್ರಸ್ತಾಪಿಸಲಾದ ಗುಂಪುಗೂಡಿಕೆಯು ವಿಭಜನೆಗೆ ನಾಂದಿಯಾಗುತ್ತದೆಂದು ಗಾಂಧಿಯವರು ಅನುಮಾನಿಸಿದ್ದರು. ಆದಾಗ್ಯೂ, ಗಾಂಧಿಯವರ ಸಲಹೆಯಿಂದ ಕಾಂಗ್ರೆಸ್ ಭಿನ್ನವಾಗಿ ನಡೆದುಕೊಂಡ ಕೆಲವೇ ಸಂದರ್ಭಗಳಲ್ಲಿ ಇದೂ ಒಂದಾಗಿತ್ತು. ಭಾರತವು ಎರಡು ರಾಷ್ಟ್ರಗಳಾಗಿ ವಿಭಜನೆಯಾಗುವ ಯಾವುದೇ ಪ್ರಸ್ತಾಪವನ್ನು ಗಾಂಧಿಯವರು ಬಲವಾಗಿ ವಿರೋಧಿಸಿದರು. ಏಕೆಂದರೆ, ಒಂದು ವೇಳೆ ಕಾಂಗ್ರೆಸ್‌ ಪ್ರಸ್ತಾಪವನ್ನು ಅಂಗೀಕರಿಸದಿದ್ದಲ್ಲಿ, ಸರ್ಕಾರದ ನಿಯಂತ್ರಣವು ಮುಸ್ಲಿಮ್‌ ಲೀಗ್‌ಗೆ ಹೋಗಬಹುದು ಎಂದು ನೆಹರೂ ಮತ್ತು ಪಟೇಲ್‌ರಿಗೆ ಗೊತ್ತಿತ್ತು.

ಭಾರತದಲ್ಲಿ ಇದುವರೆಗೂ ಹಿಂದೂ ಮತ್ತು ಸಿಖ್ಖರೊಂದಿಗೆ ಜೊತೆಗೂಡಿ ವಾಸಿಸುತ್ತಿದ್ದ ಮುಸ್ಲಿಮರಲ್ಲಿ ಬಹುಪಾಲು ಜನರು ವಿಭಜನೆಯ ಪರ ನಿಂತರು. ಇದಕ್ಕಿಂತಲೂ ಹೆಚ್ಚಾಗಿ, ಮುಸ್ಲಿಮ್‌ ಲೀಗ್‌ ಪಕ್ಷದ ಮುಖಂಡರಾದ ಮಹಮದ್‌ ಅಲಿ ಜಿನ್ನಾ ಪಶ್ಚಿಮ ಪಂಜಾಬ್‌, ಸಿಂಧ್‌, ವಾಯುವ್ಯ ಸೀಮಾಂತ ಪ್ರಾಂತ್ಯ ಮತ್ತು ಪೂರ್ವ ಬಂಗಾಳ ವಲಯಗಳಲ್ಲಿ ಅಪಾರ ಬೆಂಬಲವನ್ನು ಗಳಿಸಿದ್ದರು.

ಹಿಂದೂ-ಮುಸ್ಲಿಮ್‌ ನಡುವಿನ ವ್ಯಾಪಕ ನಾಗರಿಕ ಘರ್ಷಣೆಯನ್ನು ತಡೆಗಟ್ಟಲು ಇದೊಂದೇ ದಾರಿಯೆಂದು ವಿಭಜನಾ ಯೋಜನೆಯನ್ನು ಕಾಂಗ್ರೆಸ್‌ ನಾಯಕತ್ವವು ಅಂಗೀಕರಿಸಿತು. ಗಾಂಧಿಯವರು ತಮ್ಮ ಅಂತರಾಳದಿಂದ ವಿಭಜನೆಯನ್ನು ವಿರೋಧಿಸುವರೆಂದು ಕಾಂಗ್ರೆಸ್‌ ಮುಖಂಡರಿಗೆ ಗೊತ್ತಿತ್ತು, ಹಾಗೂ ಅವರ ಒಪ್ಪಿಗೆಯಿಲ್ಲದೆ ಪಕ್ಷವು ವಿಭಜನೆಯ ಪ್ರಸ್ತಾಪದೊಂದಿಗೆ ಮುನ್ನಡೆಯಲು ಅಸಾಧ್ಯವೆಂದು ತಿಳಿದಿತ್ತು, ಏಕೆಂದರೆ ಪಕ್ಷದಲ್ಲಿ ಮತ್ತು ಭಾರತದಾದ್ಯಂತ ಅವರಿಗೆ ಸದೃಢ ಬೆಂಬಲವಿತ್ತು. ವಿಭಜನೆಯೊಂದೇ ದಾರಿಯೆಂದು ಗಾಂಧಿಯವರ ನಿಕಟ ಸಹೋದ್ಯೋಗಿಗಳು ಒಪ್ಪಿಕೊಂಡಿದ್ದರು, ಹಾಗೂ ನಾಗರಿಕ ಸಮರವನ್ನು ತಡೆಗಟ್ಟಲು ಇದೊಂದೇ ದಾರಿಯೆಂದು ಗಾಂಧಿಯವರಿಗೆ ಮನಗಾಣಿಸಲು ಸರ್ದಾರ್ ಪಟೇಲ್‌ರು ಪ್ರಯತ್ನಿಸಿದರು. ಜರ್ಜರಿತರಾದ ಗಾಂಧಿಯವರು ಒಪ್ಪಿಗೆ ಸೂಚಿಸಿದರು. ಉತ್ತರ ಭಾರತ ಹಾಗೂ ಬಂಗಾಳ ಪ್ರಾಂತ್ಯದಲ್ಲಿ ಉದ್ರೇಕವನ್ನು ಶಮನಗೊಳಿಸಲು, ಗಾಂಧಿಯವರು ಮುಸ್ಲಿಮ್‌ ಮತ್ತು ಹಿಂದೂ ಮುಖಂಡರೊಂದಿಗೆ ವಿಸ್ತೃತವಾದ ಚರ್ಚೆಗಳನ್ನು ನಡೆಸಿದರು. ವಿಭಜನೆಯ ಸಂದರ್ಭದಲ್ಲಿ ೧೯೪೬ರಿಂದ ೧೯೪೮ರ ವರೆಗೆ, ಹಿಂಸಾಚಾರದ ಘಟನೆಗಳಲ್ಲಿ ೫,೦೦೦ಕ್ಕಿಂತಲೂ ಹೆಚ್ಚು ಜನರು ಹತರಾದರು.

ಮುಸ್ಲಿಮ್‌ ಮತ್ತು ಹಿಂದೂ ಮುಖಂಡರು ಪರಸ್ಪರ ಸೌಹಾರ್ದದತ್ತ ಬರಲು ಸಾಧ್ಯವಾಗದೆ ಹತಾಶೆಯನ್ನು ವ್ಯಕ್ತಪಡಿಸಿದಾಗ, ಹಾಗೂ ಎಲ್ಲಾ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಬೇಕೆಂಬ ಕೂಗುಗಳು ತಿರುಗಿ ಎದ್ದಾಗ ಗಾಂಧಿಯವರು ಇನ್ನಷ್ಟು ಜರ್ಜರಿತರಾದರು. ಎಲ್ಲಾ ಕೋಮು ಗಲಭೆಗಳನ್ನು ನಿಲ್ಲಿಸಬೇಕು. ಪಾಕಿಸ್ತಾನಕ್ಕೆ ೫೫೦ ಮಿಲಿಯನ್ ರೂಪಾಯಿಗಳನ್ನು ವಿಭಜನಾ ಸಮಿತಿಯು ರಚಿಸಿದ ಒಪ್ಪಂದದಂತೆ ಸರ್ಕಾರವು ಸಂದಾಯ ಮಾಡಬೇಕಂಬ ಹಠಹಿಡಿದು ದಿಲ್ಲಿಯಲ್ಲಿ ಅವರು ಅಮರಣಾಂತ ಉಪವಾಸ ಕುಳಿತರು. ಪಾಕಿಸ್ತಾನದಲ್ಲಿನ ಅಸ್ಥಿರತೆ ಮತ್ತು ಅಭದ್ರತೆಯು ಭಾರತದ ವಿರುದ್ಧದ ಕೋಪವನ್ನು ಹೆಚ್ಚಿಸಿ, ಗಡಿಯಲ್ಲಿ ಹಿಂಸಾಚಾರದ ಘಟನೆಗಳು ಹಬ್ಬಬಹುದೆಂದು ಗಾಂಧಿಯವರು ಆತಂಕ ವ್ಯಕ್ತಪಡಿಸಿದರು. ಹಿಂದೂಗಳು ಮತ್ತು ಮುಸ್ಲಿಮರು ತಮ್ಮ ಶತ್ರುತ್ವವನ್ನು ಮುಂದುವರೆಸಿ ಇದು ವ್ಯಾಪಕ ನಾಗರಿಕ ಸಮರಕ್ಕೆ ಆಸ್ಪದ ಕೊಡಬಹುದೆಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದರು.

ತಮ್ಮ ಜೀವಾವಧಿ ಸಹೋದ್ಯೋಗಿಗಳೊಂದಿಗಿನ ಭಾವಪೂರ್ಣ ಚರ್ಚೆಗಳ ನಂತರ ಗಾಂಧಿಯವರು ತಮ್ಮ ನಿರ್ಧಾರವನ್ನು ಸಡಿಲಿಸಲು ನಿರಾಕರಿಸಿದರು. ಇದರ ಫಲವಾಗಿ ಸರ್ಕಾರವು ತಮ್ಮ ನೀತಿಯನ್ನು ರದ್ದುಗೊಳಿಸಿ ಪಾಕಿಸ್ತಾನಕ್ಕೆ ಹಣಸಂದಾಯವನ್ನು ಮಾಡಿತು. ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಹಿಂದೂ ಮಹಾಸಭಾ ಸೇರಿದಂತೆ ಹಿಂದೂ, ಮುಸ್ಲಿಮ್‌ ಮತ್ತು ಸಿಖ್ ಸಮುದಾಯದ ಮುಖಂಡರು ತಾವು ಹಿಂಸಾಚಾರವನ್ನು ತ್ಯಜಿಸಿ ಶಾಂತಿಗಾಗಿ ಕರೆ ನೀಡುವುದಾಗಿ ಗಾಂಧಿಯವರಿಗೆ ಭರವಸೆ ನೀಡಿದರು. ಆಗ ಗಾಂಧಿಯವರು ಮೂಸಂಬಿ ರಸ ಕುಡಿಯುವುದರ ಮೂಲಕ ತಮ್ಮ ಉಪವಾಸವನ್ನು ಅಂತ್ಯಗೊಳಿಸಿದರು.

'ಯುಗಾಂತ್ಯ'

೧೯೪೮ರ ಜನವರಿ ೩೦ರಂದು, ನವ ದೆಹಲಿಯ ಬಿರ್ಲಾ ಭವನ ದ (ಬಿರ್ಲಾ ಹೌಸ್‌) ಮೈದಾನದಲ್ಲಿ ಪ್ರಾರ್ಥನೆಗೆ ಆಗಮಿಸುತ್ತಿದ್ದ ಗಾಂಧಿಯವರನ್ನು ನಾಥೂರಾಮ್ ಗೋಡ್ಸೆ ಎಂಬಾತ ಗುಂಡಿಕ್ಕಿ ಕೊಂದನು. ಪಾಕಿಸ್ತಾನಕ್ಕೆ ಹಣದ ಸಂದಾಯ ಮಾಡಲು ಒತ್ತಾಯಿಸಿ, ಭಾರತವನ್ನು ದುರ್ಬಲಗೊಳಿಸಿದಕ್ಕೆ ಗಾಂಧಿಯವರೇ ಹೊಣೆ ಎಂಬುದು ಆತನ ಅಭಿಪ್ರಾಯವಾಗಿತ್ತು ಹೇಳಿದ್ದನು. ಗೋಡ್ಸೆ ಮತ್ತು ಆತನ ಸಹಚರ ನಾರಾಯಣ್ ಆಪ್ಟೆ - ಇವರಿಬ್ಬರ ಮೇಲಿನ ಆರೋಪವನ್ನು ಸಾಬೀತುಪಡಿಸಲಾಗಿ, ೧೯೪೯ರ ನವೆಂಬರ್ ೧೫ರಂದು ಅವರನ್ನು ಗಲ್ಲಿಗೇರಿಸಲಾಯಿತು. ದೆಹಲಿಯ ರಾಜ್‍ಘಾಟ್‍ನಲ್ಲಿ ಗಾಂಧಿಯವರ ಶರೀರದ ಅಂತ್ಯಸಂಸ್ಕಾರ ನಡೆಸಲಾಯಿತು. ಅಲ್ಲಿ ರಾಷ್ಟ್ರೀಯ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದೆ. ಗಾಂಧಿ ಒಬ್ಬ ವ್ಯಕ್ತಿ ಮಾತ್ರವಾಗಿರಲಿಲ್ಲ. ಅವರೊಂದು ಶಕ್ತಿ. ಅವರ ಕಾಲವೊಂದು ಯುಗ. ಆದ್ದರಿಂದ ಗಾಂಧಿಯವರ ಅಂತ್ಯ ಯುಗಾಂತ್ಯವೇ ಸರಿ!

ಮಹಾತ್ಮಾ ಗಾಂಧಿಜಿಯವರ ಜನ್ಮದಿನವಾದ ಅಕ್ಟೋಬರ್ 2ನ್ನು ರಾಷ್ಟ್ರೀಯ ರಜಾದಿನವೆಂದು ಭಾರತ ಸರ್ಕಾರ ಘೊಷಿಸಿದೆ. ವಿಶ್ವಸಂಸ್ಥೆಯು ಅಂತರರಾಷ್ಟ್ರೀಯ ಅಹಿಂಸಾ ದಿನವೆಂದು ಗಾಂಧಿ ಜಯಂತಿಯನ್ನು ಆಚರಿಸಲು ನಿರ್ಣಯ ಕೈಗೊಂಡಿದೆ. ಗಾಂಧೀಜಿಯವರ ನಿಧನ ದಿನವಾದ ಜನವರಿ 30ನ್ನು ಹುತಾತ್ಮರ ದಿನವೆಂದೂ ಸರ್ವೋದಯ ದಿನವೆಂದೂ ಆಚರಿಸಲಾಗುತ್ತದೆ. ಪ್ರತೀ ವರ್ಷ ಜನವರಿ ೩೦ರಂದು, ಮಹಾತ್ಮ ಗಾಂಧಿಯವರು ಹುತಾತ್ಮರಾದ ದಿನದ ವಾರ್ಷಿಕ ಪುಣ್ಯತಿಥಿಯಂದು ಹಲವು ದೇಶಗಳ ಶಾಲೆಗಳಲ್ಲಿ ಅಹಿಂಸೆ ಮತ್ತು ಶಾಂತಿಯ ಶಾಲಾದಿನವೆಂದು (DENIP) ಆಚರಿಸುತ್ತಾರೆ, ಇದನ್ನು ಸ್ಪೇಯ್ನ್‌ನಲ್ಲಿ ೧೯೬೪ರಂದು ಪ್ರಾರಂಭಿಸಲಾಯಿತು.

ಮೋಹನ್ ಭಾಗವತ್

ಡಾ.ಮೋಹನ್ ಮಧುಕರ್ ಭಾಗವತ್ ಅವರು ಮೋಹನ್ ಭಾಗವತ್ ಎಂಬ ಹೆಸರಿನಿಂದ ಆರ್.ಎಸ್.ಎಸ್ ನಲ್ಲಿ ಪ್ರಸಿದ್ದರಾಗಿದ್ದಾರೆ. ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆರನೇ ಸರಸಂಘಚಾಲಕರು. ಅವಿವಾಹಿತರಾಗಿದ್ದುಕೊಂಡೇ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ಸಮರ್ಪಣಾಭಾವದಿಂದ ತೊಡಗಿಸಿಕೊಂಡಿದ್ದಾರೆ.

ಯುತಿ (ಖಗೋಳಶಾಸ್ತ್ರ)

ಯುತಿ - ಇದು ಸ್ಥಾನಿಕ ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯದಲ್ಲಿ ಉಪಯೋಗಿಸಲಾಗುವ ಒಂದು ಪದ. ಇದರರ್ಥವೇನೆಂದರೆ, ಒಂದು ನಿಗದಿತ ಸ್ಥಳದಿಂದ (ಸಾಮಾನ್ಯವಾಗಿ ಭೂಮಿಯಿಂದ) ನೋಡಿದಾಗ, ಎರಡು ಆಕಾಶಕಾಯಗಳು ಆಗಸದಲ್ಲಿ ಪರಸ್ಪರ ಒಂದರ ನಿಕಟದಲ್ಲಿ ಇನ್ನೊಂದು ಇರುವಂತೆ ಕಾಣುವುದು.

ಖಗೋಳಶಾಸ್ತ್ರದಲ್ಲಿ ಮತ್ತು ಜ್ಯೋತಿಷ್ಯದಲ್ಲಿ ಯುತಿಯನ್ನು ಈ ಚಿಹ್ನೆಯಿಂದ ತೋರಿಸಲಾಗುತ್ತದೆ.

ಷೆಒಣ ಜಇ-ಗಿ

ಷೆಒಣ ಜಇ-ಗಿ (ಕೊರಿಯಾ:성재기 成在基, [sʰəːŋ dʑɛgi], ಸೆಪ್ಟೆಂಬರ್ ೧೧ ೧೯೬೭ - ಜುಲೈ ೨೬ ೨೦೧೩) ದಕ್ಷಿಣ ಕೊರಿಯಾದ ಮಾನವ ಹಕ್ಕು ಕಾರ್ಯಕರ್ತರು ಮತ್ತು ನಾಗರಿಕ ಬಲ ಕಾರ್ಯಕರ್ತರು, ಉದಾರೀಕರಣ ತತ್ವಜ್ಞಾನಿಗಳು ಆಗಿತ್ತು. ಜನವರಿ ೨೪ ೨೦೦೮, ಅವರು ಕೊರಿಯನ್ ಪುರುಷ ಸಂಘದ(남성연대 男性連帶) ಸ್ಥಾಪಕರು. ೧೯೯೯ ರಲ್ಲಿ ೨೦೧೩, ಅವರು ಉದಾರೀಕರಣ ಚಳುವಳಿ ಮತ್ತು ಲಿಂಗ ಲಿಬರೇಷನ್ ಮೂವ್ಮೆಂಟ್, ಮಹಿಳೆ ಸಚಿವಾಲಯ(ministry of Woman, 여성부) ನಿರ್ಮೂಲನೆ ಆಗಿತ್ತು.

ಜುಲೈ ೨೬ ೨೦೧೩, ಅವರು ಆತ್ಮಹತ್ಯೆ ಮ್ಹಪ್ಹೋ ಸೇತುವೆ, ಸೌಲ್. ಏಕೆಂದರೆ ದಕ್ಷಿಣ ಕೊರಿಯಾದ ಲೈಂಗಿಕ ತಾರತಮ್ಯ ಪ್ರತಿಭಟನೆ.

೧೮೯೫

೧೮೯೫ - ಹತ್ತೊಂಬತ್ತನೆಯ ಶತಮಾನದ ೯೫ನೇ ವರ್ಷ.

೧೯೧೧

೧೯೧೧ - ೨೦ನೆ ಶತಮಾನದ ೧೧ನೆ ವರ್ಷ.

ಇತರ ಭಾಷೆಗಳು

This page is based on a Wikipedia article written by authors (here).
Text is available under the CC BY-SA 3.0 license; additional terms may apply.
Images, videos and audio are available under their respective licenses.