ಸಿಪ್ರಸ್


ಸೈಪ್ರಸ್ ( Κύπρος, Kýpros ,ಅಧಿಕೃತವಾಗಿ ಸೈಪ್ರಸ್ ಗಣರಾಜ್ಯ ) ಮೆಡಿಟೆನೇನಿಯನ್ ಸಮುದ್ರದ ಪೂರ್ವಭಾಗದಲ್ಲಿರುವ ಒಂದು ದ್ವೀಪರಾಷ್ಟ್ರ. ಸೈಪ್ರಸ್ ಟರ್ಕಿಯ ದಕ್ಷಿಣಕ್ಕೆ ಹಾಗೂ ಗ್ರೀಸ್‌ನ ಅಗ್ನೇಯಕ್ಕೆ ಮತ್ತು ಈಜಿಪ್ಟ್‌ನ ಉತ್ತರಕ್ಕಿದೆ. ಹಿಂದೆ ಬ್ರಿಟಿಷ್ ಸಾಮ್ರಾಜ್ಯದ ಅಂಗವಾಗಿದ್ದ ಸೈಪ್ರಸ್ ೧೯೬೦ರಲ್ಲಿ ಸ್ವತಂತ್ರರಾಷ್ಟ್ರವಾಯಿತು.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕ್ಲಾರಾ ಜೆಟ್‌ಕಿನ್

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಪ್ರತಿ ವರ್ಷ ಮಾರ್ಚ್ ೮ ರಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಈ ದಿನದಂದು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯಲಾಗುತ್ತದೆ.

ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ

REDIRECT Template:Infobox central bankವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಯು (IMF ) ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು, ತನ್ನ ಸದಸ್ಯ ರಾಷ್ಟ್ರಗಳ ಬೃಹದಾರ್ಥಿಕ ಕಾರ್ಯನೀತಿಗಳು, ಅದರಲ್ಲಿಯೂ ಮುಖ್ಯವಾಗಿ ವಿನಿಮಯ ದರಗಳು ಹಾಗೂ ಬಾಕಿಇರುವ ಹಣಸಂದಾಯಗಳ ಮೇಲೆ ಪರಿಣಾಮ ಬೀರುವಂತಹ ಜಾಗತಿಕ ವಿತ್ತೀಯ ವ್ಯವಸ್ಥೆಯನ್ನು ನೋಡಿಕೊಳ್ಳುತ್ತದೆ. ಅಂತರರಾಷ್ಟ್ರೀಯ ವಿನಿಮಯ ದರಗಳನ್ನು ಸಬಲಗೊಳಿಸಿ ಅಭಿವೃದ್ಧಿಯನ್ನು ಮತ್ತಷ್ಟು ಸುಲಭ ಮಾಡುವ ಗುರಿಯನ್ನು ಗಮನದಲ್ಲಿ ಇಟ್ಟುಕೊಂಡು ಸ್ಥಾಪಿಸಲಾಗಿರುವ ಸಂಸ್ಥೆಯಾಗಿದೆ. ಹಲವು ಬಡ ರಾಷ್ಟಗಳಿಗೆ ಹೆಚ್ಚಿನ ಮಟ್ಟದ ಹತೋಟಿಯೊಂದಿಗೆ ಅಗತ್ಯ ಇರುವಷ್ಟು ಸಾಲವನ್ನು ನೀಡುತ್ತಿದೆ. ಇದರ ಕೇಂದ್ರ ಕಾರ್ಯಾಲಯವು ಅಮೇರಿಕ ಸಂಯುಕ್ತ ಸಂಸ್ಥಾನದ ವಾಷಿಂಗ್ಟನ್, ಡಿ.ಸಿ.ಯಲ್ಲಿದೆ.

ಅಭಿವೃದ್ಧಿ ಹೊಂದಿದ ರಾಷ್ಟ್ರ

ಅಭಿವೃದ್ಧಿ ಹೊಂದಿದ ರಾಷ್ಟ್ರ ಪದವನ್ನು ಕೆಲವು ಮಾನದಂಡಗಳಳ್ಲಿ ಅತೀ ಹೆಚ್ಚಿನ ಮಟ್ಟದ ಅಭಿವೃದ್ಧಿಯನ್ನು ಹೊಂದಿದ ರಾಷ್ಟ್ರಗಳನ್ನು ವಿವರಿಸಲು ಬಳಸಲಾಗುತ್ತದೆ. ಯಾವ ಮಾನದಂಡ ಮತ್ತು ಯಾವ ರಾಷ್ಟ್ರಗಳನ್ನು ಅಭಿವೃದ್ಧಿ ಹೊಂದಿದ ಎಂದು ವರ್ಗೀಕರಿಸಲಾಗಿದೆ ಎನ್ನುವುದು ವಿವಾದಾಸ್ಪದವಾದ ವಿಷಯಗಳನ್ನು ಮತ್ತು ಪ್ರಬಲವಾದ ವಾದವನ್ನು ಒಳಗೊಂಡಿದೆ. ಆರ್ಥಿಕ ಮಾನದಂಡವು ಚರ್ಚೆಗಳಲ್ಲಿ ಪ್ರಮುಖ ವಸ್ತುವಾಗಲಿದೆ. ಅಂತಹ ಒಂದು ಮಾನದಂಡವೆಂದರೆ ತಲಾವಾರು ರಾಷ್ಟ್ರೀಯ ಆದಾಯ; ಹೆಚ್ಚಿನ ತಲಾವಾರು ರಾಷ್ಟ್ರೀಯ ನಿವ್ವಳ ದೇಶೀಯ ಉತ್ಪನ್ನ (ಜಿಡಿಪಿ) ದೊಂದಿಗಿನ ರಾಷ್ಟ್ರಗಳನ್ನು ಈ ಮೂಲಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳೆಂದು ವಿವರಿಸಲಾಗುತ್ತದೆ. ಮತ್ತೊಂದು ಆರ್ಥಿಕ ಮಾನದಂಡವೆಂದರೆ ಕೈಗಾರಿಕೀಕರಣ; ತೃತೀಯ ಶ್ರೇಣಿಯ ಮತ್ತು ಉದ್ಯಮದ ಚತುಷ್ಕ ವಿಭಾಗಗಳು ಪ್ರಬಲವಾಗಿರುವ ರಾಷ್ಟ್ರಗಳನ್ನು ಈ ಮೂಲಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳೆಂದು ವಿವರಿಸಲಾಗುತ್ತದೆ. ತೀರಾ ಇತ್ತೀಚೆಗೆ ಆರ್ಥಿಕ ಕ್ರಮಗಳು, ಇತರ ಕ್ರಮಗಳೊಂದಿಗೆ ರಾಷ್ಟ್ರೀಯ ವರಮಾನ, ಜೀವನ ನಿರೀಕ್ಷೆಗೆ ಸೂಚಕಗಳು ಮತ್ತು ಶಿಕ್ಷಣವನ್ನು ಒಗ್ಗೂಡಿಸುವ ಮತ್ತೊಂದು ಮಾಪನವಾದ ಮಾನವ ಬೆಳವಣಿಗೆ ಸೂಚಕ (ಹೆಚ್‌ಡಿಐ)ಯು ಪ್ರಮುಖವಾಗಿದೆ. ಈ ಮಾನದಂಡವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳನ್ನು ಅತೀ ಹೆಚ್ಚಿನ (ಹೆಚ್‌ಡಿಐ) ಮೌಲ್ಯಮಾಪನದೊಂದಿಗೆ ವಿವರಿಸುತ್ತದೆ. ಆದರೆ, ಯಾವುದೇ ಕ್ರಮಗಳನ್ನು ಬಳಸಿದರೂ ಸಹ "ಅಭಿವೃದ್ಧಿ ಹೊಂದಿದ" ಸ್ಥಾನವನ್ನು ನಿರ್ಣಯಿಸುವಲ್ಲಿ ಹಲವು ವೈಪರೀತ್ಯಗಳು ಇವೆ.

ಇಂತಹ ಲಕ್ಷಣಗಳಿಗೆ ಹೊಂದಿಕೆಯಾಗದ ರಾಷ್ಟ್ರಗಳನ್ನು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಎಂದು ವರ್ಗೀಕರಿಸಲಾಗಿದೆ.

ಆಗಸ್ಟ್ ೧೬

ಆಗಸ್ಟ್ ೧೬ - ಆಗಸ್ಟ್ ತಿಂಗಳಿನ ಹದಿನಾರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೨೮ನೇ ದಿನ (ಅಧಿಕ ವರ್ಷದಲ್ಲಿ ೨೨೯ನೇ ದಿನ).

ಟೆಂಪ್ಲೇಟು:ಆಗಸ್ಟ್ ೨೦೧೯

ಆಟೋಮನ್ ಚಕ್ರಾಧಿಪತ್ಯ

ಆಟೋಮನ್ ಚಕ್ರಾಧಿಪತ್ಯಅಥವಾ ಒಟ್ಟೋಮನ್ ಸಾಮ್ರಾಜ್ಯ, ತುರ್ಕಿ ಭಾಷೆಯನ್ನಾಡುತ್ತಿದ್ದ ಒಂದು ಜನಾಂಗದಿಂದ ಸ್ಥಾಪಿತವಾದುದು (14 ರಿಂದ 16ನೆಯ ಶತಮಾನ). ಇದಕ್ಕೆ ತುರ್ಕಿ ಸಾಮ್ರಾಜ್ಯವೆಂಬ ಹೆಸರೂ ಇದ್ದು ಈಗಿನ ತುರ್ಕಿಸ್ಥಾನವನ್ನೂ ಒಳಗೊಂಡ ದೊಡ್ಡ ರಾಷ್ಟ್ರವಾಗಿತ್ತು. ಏಷ್ಯಾಮೈನರ್ ಇದರ ಕೇಂದ್ರ. ಸ್ಥಾಪಿತವಾದದ್ದು ಕ್ರಿ.ಶ. ಸುಮಾರು 1300ರಲ್ಲಿ. ಆಗ ಶಾಸ್ತ್ರಸಮ್ಮತವಾದ ಸಾಂಪ್ರದಾಯಿಕ ಇಸ್ಲಾಂ ಧರ್ಮ ಸಂಪ್ರದಾಯಗಳು ಶಿಥಿಲವಾಗುತ್ತ ಬಂದಿದ್ದುವು; ಇಸ್ಲಾಮೀಯರ ನಾಗರಿಕತೆಯಲ್ಲೂ ಪ್ರಗತಿಯಿರಲಿಲ್ಲ. ಈ ಪರಿಸ್ಥಿತಿಯಲ್ಲಿ ಸ್ಥಾಪಿತವಾದ ಹೊಸ ಸಾಮ್ರಾಜ್ಯ ಕೆಲಮಟ್ಟಿಗೆ ಇಸ್ಲಾಂ ಧರ್ಮ ಸಂಪ್ರದಾಯವನ್ನೇ ಬದಲಾಯಿಸಿತು. ಅಲ್ಲದೆ ಪೌರ್ವಾತ್ಯ ನಾಗರಿಕತೆಯ ಪ್ರಭಾವಕ್ಕೊಳಗಾಗಿ ಹೊಸ ಮಾರ್ಗದಲ್ಲಿ ಮುಂದುವರಿಯಿತು.

ಕಾರ್ಮಿಕರ ದಿನಾಚರಣೆ

ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕಾರ್ಮಿಕ ಸಂಘಗಳು ಮತ್ತು ಸಮಾಜವಾದಿ ಪಕ್ಷಗಳ ಮುಖ್ಯವಾಗಿ ಆಚರಿಸುವ ಸಂಭ್ರಮದ ಸಾರ್ವಜನಿಕ ಉತ್ಸವ ದಿನ (ಲೇಬರ ಡೇ). ಮೇ ದಿನ ಅಥವಾ ‘ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ಪ್ರತಿ ವರ್ಷದ ಮೇ ೧ನೇ ತಾರೀಖಿನಂದು ಪ್ರಪಂಚದ ಹಲವು ದೇಶಗಳಲ್ಲಿ ಆಚರಿಸಲಾಗುತ್ತದೆ. ಈ ದಿನದಂದು ಕಾರ್ಮಿಕ ಆಂದೋಲನದ ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳನ್ನು ಆಚರಿಸಲಾಗುತ್ತದೆ.ಕಾರ್ಮಿಕರ ಮೆರೆವಣಿಗೆ, ಪ್ರದರ್ಶನ, ಸಭೆ-ಇವು ಆ ದಿನದ ವಿಶೇಷಗಳು.

ಗ್ರೀಕ್ ಭಾಷೆ

ಗ್ರೀಕ್ (ελληνικά, IPA: [eliniˈka] or ελληνική γλώσσα, IPA: [eliniˈci ˈɣlosa]), ಇಂಡೋ-ಯೂರೋಪ್‌ ಭಾಷೆಗಳ ಒಂದು ಸ್ವತಂತ್ರ ಭಾಗವಾಗಿದ್ದು, ಇದು ಗ್ರೀಕರ ಭಾಷೆಯಾಗಿದೆ.

ಇದು ದಕ್ಷಿಣ ಬಾಲ್ಕನ್ಸ್‌ನ ಮೂಲದಿಂದ ಹುಟ್ಟಿದ್ದು, ಸುಮಾರು 34 ಶತಮಾನಗಳ ಲಿಖಿತ ದಾಖಲೆಯನ್ನು ಹೊಂದಿರುವ ಈ ಭಾಷೆಯು ಇತರ ಯಾವುದೇ ಇಂಡೋ-ಯೂರೋಪ್ ಭಾಷೆಗಳಿಗಿಂತಲೂ ಧೀರ್ಘಕಾಲದ ದಾಖಲೆಯ ಚರಿತ್ರೆಯನ್ನು ಹೊಂದಿದೆ.ಇದರ ಬರವಣಿಗೆಯ ವಿಧಾನವು ಪ್ರಮುಖವಾಗಿ ಗ್ರೀಕ್ ಅಕ್ಷರಮಾಲೆಯಿಂದ ಉಗಮಗೊಂಡಿದೆ.(ಇದಕ್ಕೆ ಮೊದಲು ಇತರ ಪದ್ದತಿಗಳಾದ ಲೀನಿಯರ್ ಬಿ ಮತ್ತು ಸಿಪ್ರಿಯೋಟ್ ಕಾಗುಣಿತ , ಪದ್ದತಿಗಳನ್ನು ಬಳಸಲಾಗುತ್ತಿತ್ತು).

ಈ ಅಕ್ಷರಮಾಲೆಯು ಫೀನೀಸಿಯನ್ ಲಿಪಿಯಿಂದ ಉಗಮಗೊಡಿದ್ದು, ನಂತರ ಇದು ಲ್ಯಾಟಿನ್, ಸಿರಿಲಿಕ್, ಕೋಪ್ಟಿಕ್, ಮತ್ತು ಇತರ ಬರಹ ಪದ್ದತಿಗಳ ಮೂಲವಾಯಿತು.

ಗ್ರೀಕ್ ಭಾಷೆಯು ಹೆಚ್ಚು ದುರ್ಬಲವಾಗಿ ವ್ಯಾಖ್ಯಾನಿಸಲಾದ "ಪಾಶ್ಚಿಮಾತ್ಯ" ಪ್ರಪಂಚವಾದ ಯೂರೋಪ್, ಮತ್ತು ಕ್ರೈಸ್ತ ಚರಿತ್ರೆಯಲ್ಲಿ ಪ್ರಮುಖವಾದ ಸ್ಥಾನ ಮಾನವನ್ನು ಹೊಂದಿದೆ.ಪುರಾತನ ಗ್ರೀಕ್ ಸಾಹಿತ್ಯದ ಸಾಮಾನ್ಯ ನಿಯಮಗಳು ಸ್ಮಾರಕ ದೃಷ್ಟಿಕೋನ ಮತ್ತು ಮಹಾಕಾವ್ಯಗಳಾದ ಈಲಿಯಡ್ ಮತ್ತು ಒಡಿಸ್ಸಿ ಯಂತಹ ಪಾಶ್ಚಿಮಾತ್ಯ ನಿಯಮಗಳ ಮೇಲಿನ ಪ್ರಭಾವ ಕಾರಣವಾದ ಅಂಶಗಳನ್ನು ಒಳಗೊಂಡಿದೆ.

ಪ್ಲೇಟೋನ ಸಂಭಾಷಣೆಗಳು ಮತ್ತು ಅರಿಸ್ಟಾಟಲ್‌ನ ಬರಹಗಳಂತಹ ಪಾಶ್ಚಿಮಾತ್ಯ ತತ್ವಜ್ಞಾನದ ಮೂಲಭೂತ ಗ್ರಂಥಗಳನ್ನು ಗ್ರೀಕ್ ಭಾಷೆಯಲ್ಲಿಯೇ ರಚಿಸಲಾಗಿದೆ. ಕೈಸ್ತರ ಧರ್ಮಗ್ರಂಥವಾದ ಬೈಬಲ್‌ನ ಹೊಸಒಡಂಬಡಿಕೆಯು ಕೊಯಿನ್ ಗ್ರೀಕ್ ಭಾಷೆಯಲ್ಲಿ ಬರೆಯಲ್ಪಟ್ಟಿದೆ. ಹಲವಾರು ಕ್ರೈಸ್ತ ಪಂಗಡಗಳು (ವಿಶೇಷವಾಗಿ ಪೂರ್ವ ಸಂಪ್ರದಾಯಸ್ಥರು ಮತ್ತು ಕ್ಯಾಥೊಲಿಕ್ ಚರ್ಚ್‌ನ ಗ್ರೀಕ್ ಪದ್ದತಿಗಳ ಅನುಯಾಯಿಗಳು) ತಮ್ಮ ಕ್ರೈಸ್ತ ಪೂಜಾ ವಿಧಿ ವಿಧಾನಗಳನ್ನು ಈ ಭಾಷೆಯಲ್ಲಿ ಆಚರಣೆ ಮಾಡುವುದನ್ನು ಮುಂದುವರೆಸಿದರು.

ಲ್ಯಾಟೀನ್ ಗ್ರಂಥಗಳು ಮತ್ತು ರೋಮ್ ಪ್ರಪಂಚದ ಸಂಪ್ರದಾಯಗಳ (ಗ್ರೀಕ್ ಸಮಾಜದ ಪ್ರಭಾವಕ್ಕೆ ಒಳಗಾಗಿದ್ದ) ಜೊತೆಗೆ, ಗ್ರೀಕ್ ಗ್ರಂಥಗಳ ಅಧ್ಯಯನ ಮತ್ತು ಪ್ರಾಚೀನಕಾಲದ ಸಮಾಜವು ಉತ್ಕೃಷ್ಟತೆಗಳ ಅಂಕೆಯನ್ನು ಸ್ಥಾಪಿಸುತ್ತವೆ.

ಗ್ರೀಕ್ ಭಾಷೆಯು ಮೆಡಿಟರೇನಿಯನ್ ಭಾಗಗಳಲ್ಲಿ ವ್ಯಾಪಕವಾಗಿ ಮಾತನಾಡುತ್ತಿದ್ದ ಒಂದು ಭಿನ್ನ ಜನಾಂಗಗಳ ಸಂಕರ ಭಾಷೆ ಯಾಗಿತ್ತು. ಅಷ್ಟೇ ಅಲ್ಲದೆ ಶ್ರೇಷ್ಠ ಪ್ರಾಚೀನ ಕಾಲದ ಹಿಂದೆಯೂ ಇದು ಬಳಕೆಯಲ್ಲಿತ್ತು. ಕಾಲಾಂತರದಲ್ಲಿ ಬೈಝಾಂಟಿನ್ ಸಾಮ್ರಾಜ್ಯದ ಅಧಿಕೃತ ಆಡುಭಾಷೆಯಾಯಿತು.

ಈ ಭಾಷೆಯ ಆಧುನಿಕ ರೂಪವು ಇಂದು ಗ್ರೀಸ್ ಮತ್ತು ಸಿಪ್ರಸ್ ದೇಶಗಳ ಅಧಿಕೃತ ಭಾಷೆಯಾಗಿದೆ. ಮತ್ತು ಯೂರೋಪ್ ಒಕ್ಕೂಟದ 23 ಅಧಿಕೃತ ಭಾಷೆಗಳಲ್ಲಿ ಇದೂ ಒಂದಾಗಿದೆ.

ಇಂದು ಗ್ರೀಸ್, ಸಿಪ್ರಸ್ ಮತ್ತು ಪ್ರಪಂಚದ ಹಲವಾರು ಭಾಗಗಳಹಂಚಿಹೋದ ಜನಾಂಗಗಳಲ್ಲಿ ಸುಮಾರು 13 ಮಿಲಿಯನ್ ಜನರು ಗ್ರೀಕ್ ಭಾಷೆಯನ್ನು ಮಾತನಾಡುವವರಾಗಿದ್ದಾರೆ.

ಆಂಗ್ಲ ಭಾಷೆಯಂತಹ ಅನೇಕ ಆಧುನಿಕ ಭಾಷೆಗಳು , ಗ್ರೀಕ್ ಭಾಷೆಯಿಂದ ಅನೇಕ ಪದಗಳನ್ನು ಸ್ವೀಕರಿಸಿವೆ.

ಆಂಗ್ಲ ಭಾಷೆಯ ನಿಘಂಟಿನಲ್ಲಿರುವ,ವಿಶೇಷವಾಗಿ ವಿಜ್ಞಾನ ಮತ್ತು ವೈದ್ಯಕೀಯ ಶಾಸ್ತ್ರದ 50,000 ಕ್ಕೂ ಹೆಚ್ಚು ಪದಗಳು ಗ್ರೀಕ್ ಭಾಷೆಯ ಮೂಲದಿಂದ ಬಂದಿವೆ. ಲ್ಯಾಟೀನ್ ಭಾಷೆಯೊಂದಿಗೆ ,ಗ್ರೀಕ್ ಭಾಷೆಯನ್ನೂ ಸಹ ಇಂದಿನ ಆಧುನಿಕ ಭಾಷೆಗಳಲ್ಲಿ ನೂತನ ಪದಗಳನ್ನು ರಚಿಸಲು ಬಳಸುತ್ತಿದ್ದಾರೆ.

ಥಲಸ್ಸಿಮಿಯಾ

ಥಲಸ್ಸಿಮಿಯಾ (ಬ್ರಿಟಿಷ್ ಅಕ್ಷರಗಳಲ್ಲಿ, "thalassaemia ")ವು ತೀವ್ರ ಆಟೋಸೋಮಲ್‌ ರಕ್ತದ ರೋಗವನ್ನು ಉಂಟುಮಾಡುತ್ತದೆ. ಥಲಸ್ಸಿಮಿಯಾದಲ್ಲಿ, ಅನುವಂಶಿಕ ನ್ಯೂನತೆಯ ಪರಿಣಾಮದಿಂದಾಗಿ ಹೀಮೋಗ್ಲೋಬಿನ್‌ನ್ನು ಉತ್ಪಾದಿಸುವ ಗೋಬಿನ್ ಚೈನ್‌ಗಳ ಸಂಯೋಗದ ಸಾಮರ್ಥ್ಯವನ್ನು ಕುಂದಿಸುತ್ತದೆ. ಒಂದು ಗ್ಲೋಬಿನ್‌ ಚೈನ್‌ನ ಸಂಯೋಗ ಸಾಮರ್ಥ್ಯ ಕುಂದುವುದರಿಂದಾಗಿ ಅಸಹಜ ಹೀಮೋಗ್ಲೋಬಿನ್‌ ಕಣಗಳು ಉತ್ಪತ್ತಿಯಾಗುತ್ತವೆ, ಈ ರೀತಿಯಾಗಿ ಥಲಸ್ಸಿಮಿಯಾದ ರೋಗಲಕ್ಷಣವಾಗಿ ಅನಿಮಿಯಾ ಕಾಣಿಸಿಕೊಳ್ಳುತ್ತದೆ.

ಅತಿ ಹೆಚ್ಚಿನ ಪ್ರಮಾಣದ ಗ್ಲೋಬಿನ್‌ ಸಂಯೋಜನೆಯಿಂದಾಗುವ ತೊಂದರೆಯೇ ಥಲಸ್ಸಿಮಿಯಾ, ಆದೇ ರೀತಿ ಗ್ಲೋಬಿನ್‌ನ ಅಸಹಜ ರೀತಿಯ ಕಾರ್ಯದಿಂದಾಗುವ ಸಂಯೋಜನೆಯ ಗುಣಾತ್ಮಕ ತೊಂದರೆಯೇ (sickle-cell) ರಕ್ತಹೀನತೆ (ಹೀಮೋಗ್ಲೋಬಿನೋಪತಿ ಆಗಿದೆ). ಆಗಾಗ್ಗೆ ಬದಲಾವಣೆ ಮೂಲಕ ಆಗುವ ಕ್ರಮಬದ್ಧ ಜೀನ್ಸ್‌ಗಳಿಂದಾಗಿ ಉಂಟಾಗುವ ಸಹಜ ಗ್ಲೋಬಿನ್‌ ಪ್ರೋಟಿನ್ಸ್‌ನ ಕೆಳಹಂತದ ಉತ್ಪಾದನೆಯಲ್ಲಿ ಸಾಮಾನ್ಯವಾಗಿ ಥಲಸ್ಸಿಮಿಯಾ ಕಾಣಿಸಿಕೊಳ್ಳುತ್ತದೆ.

ಗ್ಲೋಬಿನ್‌ ಪ್ರೋಟೀನ್ಸ್‌ಗಳಲ್ಲಿ ಅವುಗಳಲ್ಲೇ ಅಸಹಜ ರಚನೆಗಳನ್ನು ಹಿಮೋಗ್ಲೋಬಿನೊಪತೀಸ್‌ ಉಂಟುಮಾಡುತ್ತದೆ.

ಎರಡು ಸ್ಠಿತಿಗಳು ಒಂದರಮೇಲೊಂದಿದ್ದರು ಕೂಡಾ, ಗ್ಲೋಬಿನ್‌ ಪ್ರೋಟೀನ್‌ (hemoglobinopathy)ಗಳಲ್ಲಿ ಅನಿಯಮಿತ ಕೆಲವು ಸ್ಥಿತಿಗಳು ಹಾನಿಗೊಳಿಸುತ್ತಿದ್ದವು ಅಲ್ಲದೆ ಅವುಗಳ(thalassemia)ಯ ಉತ್ಪಾದನೆಯಲ್ಲಿ ತೊಡಕನ್ನು ಉಂಟುಮಾಡುತ್ತವೆ ರೀತಿಯಾಗಿ, ಕೆಲವು ಥಲಸ್ಸಿಮಿಯಾಗಳು ಹೀಮೋಗ್ಲೋಬಿನೋಪಥೀಸ್‌ ಆಗುತ್ತವೆ. ಆದರೆ ಎಲ್ಲವೂ ಅದೇ ರೀತಿ ಆಗುತ್ತಿರಲಿಲ್ಲ. ಎರಡರಲ್ಲಿ ಒಂದು ಅಥವಾ ಎರಡೂ ಸ್ಥಿತಿಗಳು ಅನಿಮಿಯಾವನ್ನು ಉಂಟುಮಾಡಬಹುದು.

ಈ ಕಾಯಿಲೆ ವಿಶೇಷವಾಗಿ ಮೆಡಿಟರೇನಿಯನ್‌ನ ಜನರಲ್ಲಿ ಕಾಣಿಸಿಕೊಳ್ಳುತ್ತದೆ, ಮತ್ತು ಇದು ಭೌಗೋಳಿಕ ಸಂಬಂಧಹೊಂದಿದ್ದ ಕಾರಣಕ್ಕಾಗಿ ಇದನ್ನು Thalassa (θάλασσα) ಎಂದರೆ ಗ್ರೀಕ್‌ನಲ್ಲಿ ಸಮುದ್ರ ಎಂತಲೂ, Haema (αἷμα) ವು ಗ್ರೀಕ್‌ನಲ್ಲಿ ರಕ್ತಕ್ಕಾಗಿ ಎಂದು ಹೆಸರಿಸಲಾಗಿದೆ.

ಯೂರೋಪ್‌ನಲ್ಲಿ, ಗ್ರೀಸ್‌ ಮತ್ತು ಇನ್ನಿತರೆ ಪ್ರದೇಶಗಳಾದ ಇಟಲಿ, ವಿಶೇಷವಾಗಿ ದಕ್ಷಿಣ ಇಟಲಿ ಮತ್ತು ಕೆಳ ಪೋ ವ್ತಾಲಿಗಳಲ್ಲಿ ಅತ್ಯಂತ ಹೆಚ್ಚಿನ ಯಾತನಾದಾಯಕವಾದ ಈ ರೋಗ ಕಾಣಿಸಿಕೊಳ್ಳುತ್ತದೆ.

ಪ್ರಮುಖ ಮೆಡಿಟೇರಿಯನ್‌ ದ್ವೀಪಗಳಾದ (Balearics ಹೊರತಾಗಿ) ಸಿಸಿಲಿ, ಸಾರ್ಡೀನಿಯಾ, ಮಾಲ್ಟಾ, ಕೋರ್ಸಿಕಾ, ಸಿಪ್ರಸ್ ಮತ್ತು ಕ್ರೆಟ್‌ಗಳು ವಿಶೇಷವಾಗಿ ಹೆಚ್ಚಿನ ಪ್ರಮಾಣದಲ್ಲಿ ಹಾನಿಗೊಳಗಾದವು.

ಇನ್ನಿತರ ಮೆಡಿಟೇರಿಯನ್‌ ಜನರು ಸೇರಿದಂತೆ ಮೆಡಿಟೇರಿಯನ್‌ ನೆರೆಹೊರೆಯವರು, ಮಧ್ಯ ಪೂರ್ವ ಮತ್ತು ಉತ್ತರ ಆಫ್ರಿಕಾದಿಂದ ಬಂದಂತಹವರು ಕೂಡ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಥಲಸ್ಸಿಮಿಯಾ ಪೀಡಿತರಾದರು.

ಮೆಡಿಟೇರಿಯನ್‌ಗಳಲ್ಲದೆ ದೂರದಿಂದ ಬಂದಂತಹ ದಕ್ಷಿಣ ಏಷಿಯಾದ ಜನರು ಕೂಡ ಬಾಧಿತರಾದರು, ಮಾಲ್ಡೀವ್ಸ್‌ನವರಾಗಿದ್ದೂ ಕೂಡ ಪ್ರಪಂಚದ ಅತ್ಯಂತ ಹೆಚ್ಚಿನ ಸಾಂದ್ರತೆಯಿಂದ (ಒಟ್ಟು ಜನಸಂಖ್ಯೆಯಲ್ಲಿ ಶೇಕಡವಾರು 18 ರಷ್ಟು) ಬಳಲಬೇಕಾಯಿತು.

ಥಲಸ್ಸಿಮಿಯಾವು ಮಲೇರಿಯಾದ ವಿರುದ್ಧ ಕ್ರಮೇಣವಾಗಿ ರಕ್ಷಣೆ ಪಡೆದುಕೊಳ್ಳುವ ವಿಧಾನವಾಗಿದ್ದರೂ, ಅದು ಅಥವಾ ಅದರ ಪ್ರಾಭಲ್ಯ ಲಕ್ಷಣಗಳು ಪ್ರದೇಶಗಳಲ್ಲಿ ರೋಗಲಕ್ಷಣವು ಸಾಮಾನ್ಯವಾಗಿದೆ, ಹಾಗೆ ಉಳಿಸಿಕೊಂಡಿದ್ದು ವಾಹಕರಿಗೆ ಅನುಕೂಲವಾಗಿದ್ದನ್ನು ದೃಢಪಡಿಸಿತು ಅಲ್ಲದೆ ಮ್ಯುಟೇಶನ್ ಅನ್ನು ಶಾಶ್ವತವಾಗಿರಿಸಿತು.

ಆ ಕಾರಣಕ್ಕಾಗಿ ಇನ್ನಿತರೆ ಅನುವಂಶಿಕ ರೋಗಗಳಿಗೆ ಹೋಲುವ ಹಲವು ಥಲಸ್ಸಿಮಿಯಾಗಳು ಹೀಮೋಗ್ಲೋಬಿನ್‌‌ಗೆ ಹಾನಿಯನ್ನು ಉಂಟುಮಾಡಿ sickle-cell disease ಉಂಟಾಗುತ್ತದೆ.

ಪ್ರಾಚೀನ ಈಜಿಪ್ಟ್‌

ಪ್ರಾಚೀನ ಈಜಿಪ್ಟ್‌ ಪೌರಾತ್ಯ ಉತ್ತರ ಆಫ್ರಿಕಾದ ನೈಲ್ ನದಿ ದಂಡೆಯುದ್ದಕ್ಕೂ ಚಾಚಿಕೊಂಡಿದ್ದ ಒಂದು ಪುರಾತನ ನಾಗರಿಕತೆ, ಈ ಪ್ರದೇಶದಲ್ಲಿ ಈಗ ಆಧುನಿಕ ಈಜಿಪ್ಟ್ ಇದೆ. ಈ ನಾಗರಿಕತೆಯು ಸುಮಾರು ಕ್ರಿ.ಪೂ 3150ರ ಸಂದರ್ಭದಲ್ಲಿ ಒಳನಾಡು ಮತ್ತು ಕೆಳ ಈಜಿಪ್ಟಿನ ರಾಜಕೀಯ ಸಂಘಟನೆಯೊಂದಿಗೆ ಮೊದಲ ಫೇರೋನಡಿಯಲ್ಲಿ ಏಕೀಭವಗೊಂಡು, ನಂತರದ ಸುಮಾರು ಮ‌ೂರು ಸಹಸ್ರವರ್ಷಗಳಷ್ಟು ಕಾಲ ಬೆಳವಣಿಗೆ ಹೊಂದಿತು. ಇದರ ಇತಿಹಾಸವು ಸುಭದ್ರ ರಾಜ್ಯ ಗಳ ಸಂದರ್ಭದಲ್ಲಿ ಉತ್ತಮವಾಗಿತ್ತು, ನಂತರ ಈ ರಾಜ್ಯಗಳು 'ಮಧ್ಯಕಾಲೀನ ಯುಗ' ಎಂದು ಕರೆಯುವ ಪರಸ್ಪರ ಅಭದ್ರತೆಯ ಅವಧಿಯಲ್ಲಿ ಬೇರ್ಪಟ್ಟವು. ಪ್ರಾಚೀನ ಈಜಿಪ್ಟ್‌ ಹೊಸ ರಾಜ್ಯಗಳ ಸಂದರ್ಭದಲ್ಲಿ ಪರಮೋತ್ಕರ್ಷ ಸ್ಥಿತಿ ತಲುಪಿತು, ಆನಂತರ ಅದು ನಿಧಾನವಾಗಿ ಅವನತಿಯ ಕಾಲವನ್ನು ಪ್ರವೇಶಿಸಿತು. ಈ ಅವಧಿಯಲ್ಲಿ ಈಜಿಪ್ಟ್‌ ವಿದೇಶಿ ಪ್ರಭಾವದ ಉತ್ತರಾಧಿಕಾರಿಗಳ ಅಧೀನಕ್ಕೊಳಪಟ್ಟಿತು. ಫೇರೋಗಳ ಆಳ್ವಿಕೆಯು ಕ್ರಿ.ಪೂ 31ರಲ್ಲಿ, ಪ್ರಾಚೀನ ರೋಮನ್ ಸಾಮ್ರಾಜ್ಯ ಈಜಿಪ್ಟ್‌ಅನ್ನು ವಶಪಡಿಸಿಕೊಂಡು ಒಂದು ಪ್ರಾಂತವಾಗಿ ಮಾಡಿಕೊಂಡಾಗ ಅಧಿಕೃತವಾಗಿ ಕೊನೆಗೊಂಡಿತು.ಪ್ರಾಚೀನ ಈಜಿಪ್ಟ್‌ ನಾಗರಿಕತೆಯ ಯಶಸ್ವಿಗೆ ಕಾರಣ ನೈಲ್‌ ನದಿ ಕಣಿವೆಯ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಅದರ ಸಾಮರ್ಥ್ಯ. ಫಲವತ್ತಾದ ಕಣಿವೆಯಲ್ಲಿನ ಪ್ರವಾಹದ ಬಗ್ಗೆ ಭವಿಷ್ಯ ನುಡಿಯಬಹುದಾದ ಸ್ಥಿತಿ ಮತ್ತು ನಿಯಂತ್ರಿತ ನೀರಾವರಿ ವ್ಯವಸ್ಥೆಯು ಅಧಿಕ ಪ್ರಮಾಣದ ಬೆಳೆ ಬೆಳೆಯಲು ಸಹಾಯಕವಾಗಿತ್ತು. ಇವು ಸಾಮಾಜಿಕ ಅಭಿವೃದ್ಧಿ ಮತ್ತು ಸಂಸ್ಕೃತಿಯ ಬೆಳವಣಿಗೆಯನ್ನು ಉತ್ತೇಜಿಸಿದವು. ಸಂಪನ್ಮೂಲಗಳು ಸಾಕಷ್ಟಿಲ್ಲದಿದ್ದುದರಿಂದ ಆಡಳಿತವು ಕಣಿವೆ ಮತ್ತು ಸುತ್ತಲಿನ ನಿರ್ಜನ ಪ್ರದೇಶಗಳ ಖನಿಜ ಸಂಪತ್ತನ್ನು ಉಪಯೋಗಕ್ಕೆ ಬರುವಂತೆ ಮಾಡಿತು, ಸ್ವತಂತ್ರ ಬರವಣಿಗೆ ಪದ್ಧತಿಯನ್ನು ಅಭಿವೃದ್ಧಿಗೊಳಿಸಿತು, ಸಮಷ್ಟಿ ನಿರ್ಮಾಣಕಾರ್ಯಗಳನ್ನು ಮತ್ತು ಕೃಷಿ ಯೋಜನೆಗಳನ್ನು ರಚಿಸಿತು, ಸುತ್ತಮುತ್ತಲಿನ ಪ್ರದೇಶಗಳೊಂದಿಗೆ ವ್ಯವಹಾರ ನಡೆಸಿತು, ವಿದೇಶಿ ಶತ್ರುಗಳನ್ನು ಸೋಲಿಸುವ ಮತ್ತು ಈಜಿಪ್ಟಿನ ಪ್ರಾಬಲ್ಯತೆಯನ್ನು ದೃಢಪಡಿಸುವ ಉದ್ಧೇಶವನ್ನು ಹೊಂದಿರುವ ಸೇನೆಯನ್ನು ರೂಪಿಸಿತು. ಈ ಚಟುವಟಿಕೆಗಳನ್ನು ಪ್ರೇರೇಪಿಸುವುದು ಮತ್ತು ಆಯೋಜಿಸುವುದು; ಗಣ್ಯ ಲೇಖಕರ, ಧಾರ್ಮಿಕ ಮುಖಂಡರ ಮತ್ತು ಆಡಳಿತಗಾರರ ಅಧಿಕಾರವಾಗಿತ್ತು. ಇದು ಧಾರ್ಮಿಕ ನಂಬಿಕೆಗಳನ್ನು ವಿಸ್ತಾರವಾಗಿ ಬೆಳೆಸುವ ನಿಟ್ಟಿನಲ್ಲಿ ಈಜಿಪ್ಟಿನ ಜನರ ಸಹಕಾರ ಮತ್ತು ಏಕತೆಯನ್ನು ಕಾಪಾಡುತ್ತಿದ್ದ ಫೇರೋಗಳ ನಿಯಂತ್ರಣದಡಿ ನಡೆಯುತ್ತಿತ್ತು.ಪ್ರಾಚೀನ ಈಜಿಪ್ಟಿನವರ ಪ್ರಮುಖ ಸಾಧನೆಗಳೆಂದರೆ - ಶಾಶ್ವತ ಸ್ಮಾರಕವಾದ ಪಿರಮಿಡ್‌ಗಳು, ದೇವಾಲಯಗಳು ಮತ್ತು ಆಬಲಿಸ್ಕ್‌ಗಳು(ಚೌಕ ಸೂಜಿಯಂಥ ಕಂಬಗಳು) ಮೊದಲಾದವುಗಳ ನಿರ್ಮಾಣಕ್ಕೆ ಕಾರಣವಾದ ಅವರ ರಚನೆ, ಸ್ಥೂಲ ಸಮೀಕ್ಷೆ ಮತ್ತು ನಿರ್ಮಾಣದ ಕುಶಲತೆಗಳು; ಗಣಿತಶಾಸ್ತ್ರ ಪದ್ಧತಿ, ಔಷಧದ ಪ್ರಾಯೋಗಿಕ ಮತ್ತು ಪರಿಣಾಮಕಾರಿ ವ್ಯವಸ್ಥೆ, ನೀರಾವರಿ ವ್ಯವಸ್ಥೆ ಮತ್ತು ಕೃಷಿ ಉತ್ಪನ್ನ ಕೌಶಲಗಳು, ಮೊದಲು ಆವಿಷ್ಕರಿಸಿದ ಹಡಗು, ಈಜಿಪ್ಟಿನ ಪಿಂಗಾಣಿ ಮತ್ತು ಗಾಜಿನ ತಂತ್ರವಿದ್ಯೆಗಳು, ಸಾಹಿತ್ಯದ ಹೊಸ ಸ್ವರೂಪಗಳು ಮತ್ತು ಆರಂಭದ ಶಾಂತಿ ಒಪ್ಪಂದ. ಈಜಿಪ್ಟ್‌ ಶಾಶ್ವತ ಆಸ್ತಿಯನ್ನು ಉಳಿಸಿಹೋಗಿದೆ. ಅದರ ಕಲೆ ಮತ್ತು ವಾಸ್ತುಶಿಲ್ಪಗಳನ್ನು ಎಲ್ಲಾ ಕಡೆ ವಿಸ್ತಾರವಾಗಿ ಅನುಸರಿಸಲಾಗಿದೆ. ಅಲ್ಲದೇ ಅದರ ಪ್ರಾಚೀನತೆಯು ಪ್ರಪಂಚದ ಮ‌ೂಲೆಮ‌ೂಲೆಯಲ್ಲೂ ಕೀರ್ತಿಗಳಿಸಿಕೊಂಡಿದೆ. ಅದರ ಸ್ಮಾರಕಗಳ ಭಗ್ನಾವಶೇಷಗಳು ಶತಮಾನಗಳಿಂದಲೂ ಪ್ರವಾಸಿಗರಿಗೆ ಮತ್ತು ಬರಹಗಾರರ ಕಲ್ಪನೆಗಳಿಗೆ ಪ್ರೇರಣೆ ನೀಡಿವೆ. ಆರಂಭಿಕ ಆಧುನಿಕ ಯುಗದಲ್ಲಿ ಬೆಳಕಿಗೆ ಬಂದ ಪ್ರಾಚೀನಾವಶೇಷಗಳು ಮತ್ತು ಭೂಶೋಧನೆಗಳು ಈಜಿಪ್ಟ್‌ ನಾಗರಿಕತೆಯ ವೈಜ್ಞಾನಿಕ ಪರೀಕ್ಷೆಗೆ ಅವಕಾಶ ಮಾಡಿಕೊಟ್ಟವು. ಅಲ್ಲದೇ ಅದರ ಸಾಂಸ್ಕೃತಿಕ ಆಸ್ತಿಗೆ ಈಜಿಪ್ಟ್‌ನಲ್ಲಿ ಮಾತ್ರವಲ್ಲದೆ ಇಡೀ ಪ್ರಪಂಚದಲ್ಲೇ ಶ್ರೇಷ್ಠ ಮನ್ನಣೆ ತಂದುಕೊಟ್ಟಿತು.

ಮಧ್ಯ ಪ್ರಾಚ್ಯ

ಮಧ್ಯ ಪ್ರಾಚ್ಯ (ಅಥವಾ, ಹಿಂದೆ ಸಾಮಾನ್ಯವಾಗಿ ಕರೆಯಲ್ಪಡುತ್ತಿದ್ದ ಹತ್ತಿರದ ಪ್ರಾಚ್ಯ) ನೈರುತ್ಯ ಏಷ್ಯಾ, ಪಶ್ಚಿಮ ಏಷ್ಯಾ ಮತ್ತು ಈಶಾನ್ಯ ಆಫ್ರಿಕವನ್ನು ವ್ಯಾಪಿಸಿರುವ ಪ್ರದೇಶ. ಈ ಪ್ರದೇಶಕ್ಕೆ ಯಾವುದೆ ನಿಗದಿತವಾದ ಗಡಿ ಇಲ್ಲ. ೧೯೦೦ ರಲ್ಲಿ ಯುನೈಟೆಡ್ ಕಿಂಗ್ಡಮ್ನಲ್ಲಿ ಈ ಪದವು ಬಳಕೆಗೆ ಬಂದಿತು.

ಮಧ್ಯ ಪ್ರಾಚ್ಯವು ಪ್ರಪಂಚದ ಮೂರು ಪ್ರಮುಖ ಏಕೀಶ್ವರವಾದದ ಧರ್ಮಗಳಾದ ಇಸ್ಲಾಂ, ಕ್ರೈಸ್ತ ಧರ್ಮ ಮತ್ತು ಯಹೂದಿ ಧರ್ಮಗಳ ಉಗಮ ಸ್ಥಾನವಾಗಿದೆ.

ಮಾನವ ಅಭಿವೃದ್ಧಿ ಸೂಚ್ಯಂಕಕ್ಕನುಗುಣವಾಗಿ ರಾಷ್ಟ್ರಗಳ ಪಟ್ಟಿ

ರಾಷ್ಟ್ರಗಳು ತಮ್ಮ ಮಾನವ ಅಭಿವೃದ್ಧಿ ಸೂಚ್ಯಂಕಕ್ಕೆ ಅನುಗುಣವಾಗಿ ಉನ್ನತ, ಮಧ್ಯಮ ಮತ್ತು ನಿಮ್ನತಮ ಎಂಬೀ ಮೂರು ಗುಂಪುಗಳಲ್ಲಿ ಸ್ಥಾನ ಪಡೆಯುತ್ತವೆ.: (ಉನ್ನತ, ಮಧ್ಯಮ, ಮತ್ತು ನಿಮ್ನತಮ ಮಾನವ ಅಭಿವೃದ್ಧಿ).

ಮಿಲಾನ್

ಮಿಲನ್ ; (ಇಟಾಲಿಯನ್:Milano, listen Italian pronunciation: [miˈla(ː)no]; ಪಶ್ಚಿಮ ಲೋಂಬಾರ್ಡ್, ಮಿಲನ್ listen ) ಇಟಲಿ ದೇಶದ ಒಂದು ನಗರ ಲೊಂಬಾರ್ಡಿ ಪ್ರದೇಶ ಮತ್ತು ಮಿಲನ್ ಪ್ರಾಂತದ ಒಂದು ರಾಜಧಾನಿ. ಈ ನಗರದ ಜನಸಂಖ್ಯೆ ಸುಮಾರು 1,300,000 ಇದ್ದು, ಈ ನಗರ ಪ್ರದೇಶ ಅಂದಾಜು 4,300,000 ಜನರಿರುವ ಯೂರೋಪಿಯನ್ ಒಕ್ಕೂಟದಲ್ಲಿ ಇದು ಐದನೆ ದೊಡ್ಡ ನಗರ. ಈ ಮಿಲನ್ ಮಹಾನಗರದ ವಿಸ್ತೀರ್ಣ ಇಡೀ ಇಟಲಿಯಲ್ಲೇ ದೊಡ್ಡದಾಗಿದ್ದು OECD ಅಂದಾಜು ಮಾಡಿರುವಂತೆ ಇಲ್ಲಿ 7,400,000 ಜನಸಂಖ್ಯೆಯಿದೆ.

ಸೆಲ್ಟಿಕ್ ಜನಾಂಗಕ್ಕೆ ಸೇರಿದ ಇನ್ಸ್‌ಬ್ರರು ಈ ನಗರವನ್ನು ಮೀಡಿಯೋನಮ್ ಎಂಬ ಹೆಸರಿನಿಂದ ಸ್ಥಾಪಿಸಿದರು. ಮುಂದೆ 222 BCಯಲ್ಲಿ ಇದನ್ನು ರೋಮನ್ನರು ವಶಪಡಿಸಿಕೊಂಡರು ಮತ್ತು ರೋಮನ್ ಚಕ್ರಾಧಿಪತ್ಯದಡಿ ಈ ನಗರ ಯಶಸ್ಸು ಕಂಡಿತು. ನಂತರ 1500ರಲ್ಲಿ ಮಿಲನ್ ನಗರವನ್ನು ವಿಸ್ಕೊಂಟಿ, ಸಪೋರ್ಜಾ ಮತ್ತು ಸ್ಪ್ಯಾನಿಷರು ಮತ್ತು 1700ರಲ್ಲಿ ಆಸ್ಟ್ರಿಯನ್ನರು ಆಳಿದರು 1796ರಲ್ಲಿ ಮಿಲನ್ ನಗರವನ್ನು ವಶಪಡಿಸಿಕೊಂಡ ನೆಪೋಲಿಯನ್ 1805ರಲ್ಲಿ ತನ್ನ ಇಟಾಲಿ ಸಾಮ್ರಾಜ್ಯದ ರಾಜಧಾನಿಯನ್ನಾಗಿ ಮಾಡಿಕೊಂಡನು. ರೊಮ್ಯಾಂಟಿಕ್ ಅವಧಿಯಲ್ಲಿ ಮಿಲನ್ ಅನೇಕ ಕಲಾವಿದರು, ಕವಿಗಳು ಮತ್ತು ಬರಹಗಾರರನ್ನು ಆಕರ್ಷಿಸಿ ಯೂರೋಪಿನ ದೊಡ್ಡ ಸಾಂಸ್ಕೃತಿಕ ಕೇಂದ್ರವಾಯಿತು. ನಂತರ 2ನೆ ಮಹಾಯುದ್ಧದಲ್ಲಿ ಸಂಯುಕ್ತ ಪಡೆಗಳ ಬಾಂಬ್ ದಾಳಿಯಿಂದ ನಗರ ವಿರೂಪಗೊಂಡಿತು ಮತ್ತು 1943ರಲ್ಲಿ ಇದನ್ನು ಜರ್ಮನಿ ಆಕ್ರಮಿಸಿಕೊಂಡಾಗ ಮಿಲನ್ ನಗರ ಇಟಾಲಿಯನ್ನರ ಪ್ರತಿರೋದದ ಪ್ರಮುಖ ಕೇಂದ್ರವಾಯಿತು. ಇಷ್ಟಾದರೂ ದಕ್ಷಿಣ ಇಟಲಿ ಮತ್ತು ವಿದೇಶಗಳಿಂದ ಸಾವಿರಾರು ವಲಸೆಗಾರರನ್ನು ಆಕರ್ಷಿಸಿ ಯುದ್ಧೋತ್ತರ ಕಾಲದಲ್ಲಿ ಆರ್ಥಿಕ ಬೆಳವಣಿಗೆಯನ್ನು ಕಂಡಿತು. ಅಂತರರಾಷ್ಟ್ರೀಯ ಮತ್ತು ಕಾಸ್ಮೊಪಾಲಿಟನ್ ನಗರವಾಗಿರುವ ಮಿಲನ್‌ನ ಜನಸಂಖ್ಯೆಯ ಪೈಕಿ 13.9% ವಿದೇಶೀಯರು. ಈ ನಗರ ಯೂರೋಪಿನ ಮುಖ್ಯ ಸಾಗಾಣಿಕೆ ಮತ್ತು ಕೈಗಾರಿಕಾ ವಲಯ ಮತ್ತು $115 ಬಿಲಿಯನ್ ಡಾಲರ್ GDP ಇರುವ ವಿದ್ಯುತ್ ಖರೀದಿಯಲ್ಲಿ ಜಗತ್ತಿನ ಶ್ರೀಮಂತಿಕೆಯಲ್ಲಿ 26ನೇ ಸ್ಥಾನದಲ್ಲಿದ್ದು EUನ ಮುಖ್ಯ ವ್ಯಾಪಾರ ಮತ್ತು ಹಣಕಾಸು ಕೇಂದ್ರ (ಮಿಲನ್‌ನ ಆರ್ಥಿಕತೆ ನೋಡಿ). ಮಿಲನ್ ನಗರದ ಮೆಟ್ರೋಪಾಲಿಟನ್ ಪ್ರದೇಶ 2004ರಲ್ಲಿ € 241.2 ಬಿಲಿಯನ್ (US$ 312.3 ಬಿಲಿಯನ್)ಗಳಷ್ಟು GDPಸಾಧಿಸಿ ಯೂರೋಪಿನ 4ನೆಯ ಸ್ಥಾನದಲ್ಲಿತ್ತು. €35,137 (US$ 52,263) ತಲಾವಾರು GDP ಇರುವ ಮಿಲನ್ ನಗರ ಇಟಲಿಯಲ್ಲೇ ಮುಂಚೂಣಿಯಲ್ಲಿದೆ, ಅದು EU ಸರಾಸರಿಯ 161.6% ನಷ್ಟು ಇದೆ. ಇದರ ಜೊತೆಗೆ ಹೊರಗಿನಿಂದ ಬಂದ ಕೆಲಸಗಾರರಿಗೆ ಮಿಲನ್ ನಗರ ಜಗತ್ತಿನ ತುಂಬಾ ದುಬಾರಿ ನಗರಗಳ ಪೈಕಿ 11ನೆಯ ಸ್ಥಾನದಲ್ಲಿದೆ. ಮಿಲನ್ ನಗರವನ್ನು ಜಗತ್ತಿನ 28ನೆಯ ಪ್ರಭಾವಿ ಮತ್ತು ಶಕ್ತಿಯುತ ನಗರವೆಂದು ವರ್ಗೀಕರಿಸಲಾಗಿದೆ.ವಾಣಿಜ್ಯ, ಕೈಗಾರಿಕೆ, ಸಂಗೀತ, ಕ್ರೀಡೆ, ಸಾಹಿತ್ಯ, ಕಲೆ ಮತ್ತು ಮಾಧ್ಯಮಗಳಲ್ಲಿ ಜಾಗತಿಕ ಪ್ರಭಾವ ಹೊಂದಿರುವ ಮಿಲನ್ ನಗರವನ್ನು ಜಗತ್ತಿನ ಫ್ಯಾಷನ್ ವಿನ್ಯಾಸ ರಾಜಧಾನಿಯೆಂದು ಗುರುತಿಸಲಾಗಿದೆ; GaWC ಶ್ರೇಷ್ಠ ದರ್ಜೆ ನಗರವಾಗಿ ಆಲ್ಫಾ ವರ್ಲ್ಡ್ ಸಿಟೀಸ್ ಮಾನ್ಯ ಮಾಡಿದೆ. ಲೋಬಾರ್ಡ್ ಮಹಾನಗರ ವಿಶೇಷವಾಗಿ ಫ್ಯಾಷನ್ ಗೃಹಗಳು ಮತ್ತು ವಯಾ ಮೊಂಟೆನಾಪೊಲಿಯೋನ್ ಮತ್ತು ಗ್ಯಾಲರಿಯಾ ವಿಟ್ಟೋರಿಯೊ ಇಮ್ಯಾನುಯೆಲ್ ಮತ್ತು ಪಿಯಝಾ ಡುಯೊಮೊ (ಜಗತ್ತಿನ ಅತಿ ಹಳೆಯ ವ್ಯಾಪಾರಿ ಸಂಕೀರ್ಣವೆಂದು ಹೆಸರಾಗಿದೆ) ಮುಂತಾದ ಫ್ಯಾಷನ್ ಗೃಹಗಳು ಮತ್ತು ಅಂಗಡಿಗಳಿಗೆ ಪ್ರಸಿದ್ಧಿಯಾಗಿದೆ. ಈ ನಗರಕ್ಕೆ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಆಸ್ತಿ ಹೊಂದಿದೆ, ಮತ್ತು ಅನನ್ಯ ಪಾಕ ವಿದ್ಯಾ ಪರಂಪರೆಯನ್ನು ಹೊಂದಿದೆ (ಪ್ರಾನೆಟೋನ್ , ಕ್ರಿಸ್‌ಮಸ್ ಕೇಕ್ ಮತ್ತು ರಿಸೊಟ್ಟೊ ಅಲ್ಲಾ ಮಿಲಾನೀಸ್ ಮುಂತಾದ ತಿಂಡಿ ತಿನಿಸುಗಳ ತವರಾಗಿದೆ). ಈ ನಗರಕ್ಕೆ ನಿರ್ಧಿಷ್ಟವಾದ ಮತ್ತು ಪ್ರಸಿದ್ಧಿಯಾದ ಆಪರ್ಯಾಟಿಕ್ ಸಂಗೀತ ಪರಂಪರೆಯಿದೆ; ಇದು ಗಿಯೂಸೆಪ್ ವರ್ದಿ ಯಂತಹ ಸಂಗೀತಗಾರರು ಮತ್ತು (ಟಿಯಾಟ್ರೊ ಅಲಾಸ್ಕಾಲಾದಂತಹ) ರಂಗಮಂದಿರಗಳ ತವರು. ಮಿಲನ್ ನಗರ ಅನೇಕ ಮುಖ್ಯ ಮ್ಯೂಜಿಯಂಗಳು, ವಿಶ್ವವಿದ್ಯಾಲಯ ಅಕಾಡೆಮಿಗಳು, ಅರಮನೆಗಳು, ಚರ್ಚುಗಳು ಮತ್ತು ಗ್ರಂಥಾಲಯಗಳು (ಅಕಾಡೆಮಿ ಆಫ್ ಬ್ರೆರಾ ಮತ್ತು ಕ್ಯಾಸ್ಟೆಲೊ ಜಫೋರ್ಜೆಸ್ಕೊ) ಮತ್ತು ಎ.ಸಿ.ಮಿಲನ್ ಮತ್ತು ಎಫ್.ಸಿ.ಇಂಟರ್ನ್ಯಾಜನಾಲೆ ಮಿಲಾನೊ ನಂತಹ ಎರಡು ಹೆಸರಾಂತ ಫುಟ್ಬಾಲ್ ತಂಡಗಳಿಗೆ ಹೆಸರುವಾಸಿ. ಈ ಎಲ್ಲಾ ಪರಂಪರೆಗಳಿರುವ ಕಾರಣ ಮಿಲನ್ ನಗರ ಯೂರೋಪಿನ ಸುಪ್ರಸಿದ್ಧ ಪ್ರವಾಸಿ ಸ್ಥಳವಾಗಿ ರೂಪುಗೊಂಡಿದೆ; 2008ರಲ್ಲಿ ಇಲ್ಲಿಗೆ 1914 ಮಿಲಿಯನ್ ವಿದೇಶಿ ಪ್ರವಾಸಿಗರು ಭೇಟಿ ಕೊಟ್ಟಿದ್ದಾರೆ. ಈ ನಗರ ಹಿಂದೆ 1906ರಲ್ಲಿ ವಿಶ್ವ ವಸ್ತು ಪ್ರದರ್ಶನವನ್ನು ಏರ್ಪಡಿಸಿತ್ತು; ಮುಂದೆ 2015ರಲ್ಲಿ ಜಾಗತಿಕ ವಸ್ತುಪ್ರದರ್ಶನಕ್ಕೆ ಆತಿಥ್ಯ ನೀಡಲಿದೆ. ಮಿಲನ್ ನಗರವಾಸಿಗಳನ್ನು ಮಿಲನೀಸ್ (ಇಟಾಲಿಯನ್: [Milanesi] ವಾಡಿಕೆ ಪ್ರಕಾರ ಅಥವಾ ಅನೌಪಚಾರಿಕವಾಗಿ [Meneghini] [Ambrosiani] ) ಮಿಲನ್ ನಗರವಾಸಿಗಳು ಈ ನಗರಕ್ಕೆ ಪ್ರೀತಿಯಿಂದ "ನೈತಿಕ ರಾಜಧಾನಿ" ಎಂಬ ಅಡ್ಡಹೆಸರಿನ್ನಿಟ್ಟುಕೊಂಡಿದ್ದಾರೆ.

ಯುರೋ

ಯುರೋ (ಚಿಹ್ನೆ: €; ಕೋಡು: EUR) ಯುರೋಪಿನ ಒಕ್ಕೂಟದ ೧೬ ದೇಶಗಳ ಅಧಿಕೃತ ನಗದು. ಈ ದೇಶಗಳು ಆಸ್ಟ್ರಿಯ, ಬೆಲ್ಜಿಯಂ, ಸೈಪ್ರಸ್, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಗ್ರೀಸ್, ಐರ್ಲ್ಯಾಂಡ್, ಇಟಲಿ, ಲಕ್ಸೆಂಬರ್ಗ್, ಮಾಲ್ಟ, ನೆದರ್ಲ್ಯಾಂಡ್ಸ್, ಪೋರ್ಚುಗಲ್, ಸ್ಲೊವಾಕಿಯ, ಸ್ಲೊವೇನಿಯ, ಮತ್ತು ಸ್ಪೇನ್.

ರಾಜಕೀಯ ಒಕ್ಕೂಟ

ರಾಜಕೀಯ ಒಕ್ಕೂಟ ಒಂದು ರೀತಿಯ ರಾಜ್ಯ, ಇದರಲ್ಲಿ ಹಲವು ಚಿಕ್ಕ ರಾಜ್ಯಗಳು ಸೇರಿರುತ್ತವೆ. ವೈಯಕ್ತಿಕ ಒಕ್ಕೂಟಗಿಂತ ಭಿನ್ನವಾಗಿ, ಪ್ರತೆಕ ರಾಜ್ಯಗಳು ಒಂದು ಸಾಮಾನ್ಯ ಸರ್ಕಾರದ ಅಂಶವಗಿರುತ್ತದ್ದೆ ಹಾಗು, ಈ ಒಕ್ಕೂಟಕ್ಕೆ ಅಂತರರಾಷ್ಟ್ರೀಯವಾಗಿ ಏಕೈಕ ರಾಜಕೀಯ ಅಸ್ತಿತ್ವದ ಮಾನ್ಯತೆ ಇರುತ್ತದ್ದೆ . ರಾಜಕೀಯ ಒಕ್ಕೂಟ ಇದಕ್ಕೆ ಬಿನ್ನ ಹೆಸರು ಶಾಸನ ಒಕ್ಕೂಟ ಅಥವಾ ರಾಜ್ಯ ಒಕ್ಕೂಟ.

ಒಂದು ಒಕ್ಕೂಟವನ್ನು ಹಳುವರು ರೀತಿಯಿಂದ ತರಬಹುದು, ಇದ್ದನ್ನು ಈ ರೀತಿ ವಿಭಾಗಿಸಬಹುದು:

ಒಕ್ಕೂಟವನ್ನು ಸಂಯೋಜಿಸುವುದು

ಬಲಪ್ರಯೋಗದ ಮೂಲಕ ಸ್ವಾಧೀನ ಸಂಯೋಜಿಸುವುದು

ಸಂಯುಕ್ತ (ಅಥವಾ ಸಹ-ಸಂಯುಕ್ತ) ಒಕ್ಕೂಟ

ಒಕ್ಕೂಟರಚನೆಯ ಬಲಪ್ರಯೋಗದ ಮೂಲಕ ಸ್ವಾಧೀನ

ಮಿಶ್ರಿತ ಒಕ್ಕೂಟಗಳು.

ರಾಷ್ಟ್ರಗೀತೆ

ಅನೇಕ ದೇಶಗಳು ತಮ್ಮ ದೇಶದ ಜನ, ಇತಿಹಾಸಗಳನ್ನು ಪ್ರತಿನಿಧಿಸುವಂತಃ, ರಾಷ್ಟ್ರಾಭಿಮಾನವನ್ನು ಸೂಚಿಸುವಂತಃ ಒಂದು ಗೀತೆಯನ್ನು ರಾಷ್ಟ್ರಗೀತೆಯೆಂದು ಆಯ್ಕೆ ಮಾಡಿಕೊಂಡಿವೆ.

ವಿಶ್ವ ಪರಂಪರೆಯ ತಾಣಗಳ ಪಟ್ಟಿ

೨೦೦೮ರಂತೆ ವಿಶ್ವದ ೧೪೫ ರಾಷ್ಟ್ರಗಳಲ್ಲಿ ಒಟ್ಟು ೮೭೮ ವಿಶ್ವ ಪರಂಪರೆಯ ತಾಣಗಳಿವೆ. ಯುನೆಸ್ಕೋ ಸಂಸ್ಥೆಯು ಈ ತಾಣಗಳನ್ನು ಪ್ರಾಕೃತಿಕ, ಸಾಂಸ್ಕೃತಿಕ ಹಾಗೂ ಮಿಶ್ರಗುಣದ ತಾಣಗಳೆಂದು ಗುರುತಿಸಿದೆ. ಅಲ್ಲದೆ ತಾಣಗಳ ಉಸ್ತುವಾರಿಯ ದೃಷ್ಟಿಯಿಂದ ಈ ೮೭೮ ತಾಣಗಳನ್ನು ೫ ಭೌಗೋಳಿಕ ವಲಯಗಳಾಗಿ ವಿಭಾಗಿಸಲಾಗಿದೆ. ಅವೆಂದರೆ : ೧) ಯುರೋಪ್ ಮತ್ತು ಉತ್ತರ ಅಮೇರಿಕಾ ೨) ಏಷ್ಯಾ-ಪೆಸಿಫಿಕ್ ೩) ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್ ೪) ಅರಬ್ ರಾಷ್ಟ್ರಗಳು ಮತ್ತು ೫) ಆಫ್ರಿಕಾ

ಸೂಚನೆ : ಕೆಳಕಂಡ ಪಟ್ಟಿಯು ರಾಷ್ಟ್ರಗಳ ಹೆಸರಿನ ಮೇಲೆ ಅಕಾರಾದಿಯಾಗಿ ಜೋಡಿಸಲ್ಪಟ್ಟಿದೆ. ತಲೆಬರಹಗಳ ಬಳಿ ಕಾಣುವ ಪುಟ್ಟ ಬಾಕ್ಸ್ ಗಳನ್ನು ಒತ್ತುವುದರ ಮೂಲಕ ಪಟ್ಟಿಯನ್ನು ಬೇಕಾದ ಮಾನದಂಡ ಮೇಲೆ ಪುನರ್ಜೋಡಿಸಬಹುದು.

ಸಾರ್ವಭೌಮ ದೇಶಗಳ ಪಟ್ಟಿ

ಇದು ಪ್ರಪಂಚದ ಸಾರ್ವಭೌಮ ದೇಶಗಳ ಪಟ್ಟಿ. ಈ ಪಟ್ಟಿ ೧೯೪ ದೇಶಗಳನ್ನು ಒಳಗೊಂಡಿದೆ.

ಸೆಮಲೀನ

{{Nutritional value

| name =

| image =

| caption =

| serving_size =

| kJ =

| carbs =

| starch =

| sugars =

| lactose =

| fiber =

| fat =

| satfat =

| transfat =

| monofat =

| polyfat =

| omega3fat =

| omega6fat =

| protein =

| water =

| alcohol =

| caffeine =

| vitA_ug =

| vitA_iu =

| betacarotene_ug =

| lutein_ug =

| thiamin_mg =

| riboflavin_mg =

| niacin_mg =

| pantothenic_mg =

| vitB6_mg =

| folate_ug =

| vitB12_ug =

| choline_mg =

| vitC_mg =

| vitD_ug =

| vitD_iu =

| vitE_mg =

| vitK_ug =

| calcium_mg =

| iron_mg =

| magnesium_mg =

| manganese_mg =

| phosphorus_mg =

| potassium_mg =

| sodium_mg =

| zinc_mg =

| opt1n =

| opt1v =

| opt2n =

| opt2v =

| opt3n =

| opt3v =

| opt4n =

| opt4v =

| note =

| source =

| source_usda =

| noRDA =

| float =

}}

ಸೆಮಲೀನ (ದಪ್ಪ ರವೆ) ಎಂಬುದು ಒಂದು ಬಗೆಯ ಗಟ್ಟಿ ಕಾಳಿನ ಗೋಧಿ ಮತ್ತು ಗೋಧಿಯ ಸಾಮಾನ್ಯ ನುಣುಪಿನ ಹಿಟ್ಟಾಗಿದ್ದು, ಇದನ್ನು ಪಾಸ್ತ ತಯಾರಿಸಲು ಹಾಗು ಬೆಳಗ್ಗಿನ ಸಿರಿಲ್ ಗಳು ಮತ್ತು ಪುಡಿಂಗ್ ಅನ್ನು ತಯಾರಿಸಲು ಬಳಸಲಾಗುತ್ತದೆ.

ಇತರ ಭಾಷೆಗಳು

This page is based on a Wikipedia article written by authors (here).
Text is available under the CC BY-SA 3.0 license; additional terms may apply.
Images, videos and audio are available under their respective licenses.