ಸಾಹಿತ್ಯದ ವಿಧ

ಕಥೆ, ಕವನ, ಕಾದಂಬರಿ,ಅನುವಾದ,ನಾಟಕ, ವಿಮರ್ಶೆ ಇತ್ಯಾದಿ ಸಾಹಿತ್ಯದ ವಿವಿಧ ಪ್ರಕಾರಗಳು.

ಬಾಹ್ಯ ಸಂಪರ್ಕಗಳು

ಅಮಿತಾವ್ ಘೋಷ್

ಅಮಿತಾವ್ ಘೋಷ್ (ಜನನ:ಜನವರಿ ೧, ೧೯೫೬) ಇವರು ಭಾರತದ ಆಂಗ್ಲ ಭಾಷೆಯ ಕಾದಂಬರಿಕಾರರು ಮತ್ತು ಲೇಖಕರು. ಇವರ ಜನ್ಮ ಕೋಲ್ಕತ್ತ ನಗರದಲ್ಲಾಯಿತು ಮತ್ತು ಶಿಕ್ಷಣ ದಿ ಡೂನ್ ಸ್ಕೂಲ್, ನವದೆಹಲಿಯ ಸೇಂಟ್ ಸ್ಟೀಫನ್ಸ್ ದೆಹಲಿ ವಿಶ್ವವಿದ್ಯಾಲಯ, ಮತ್ತು ಆಕ್ಸಫೋರ್ಡ ವಿಶ್ವವಿದ್ಯಾಲಯಗಳಲ್ಲಾಯಿತು.

ಅಮಿತಾವ್ ಘೋಷ್ ಕಲ್ಕತ್ತಾದಲ್ಲಿ ಜುಲೈ ೧೧, ೧೯೫೬ ರಂದು ಲೆಫ್ಟಿನೆಂಟ್ ಕರ್ನಲ್ ಶೈಲೇಂದ್ರ ಚಂದ್ರ ಘೋಷ್, ಒಬ್ಬ ಸ್ವಾತಂತ್ರ್ಯ ಪೂರ್ವ ಭಾರತೀಯ ಸೇನೆಯ ನಿವೃತ್ತ ಅಧಿಕಾರಿಯ ಮಗನಾಗಿ ಒಂದು ಬಂಗಾಳಿ ಹಿಂದೂ ಕುಟುಂಬದಲ್ಲಿ ಜನಿಸಿದರು. ಅವರ ಮೊದಲ ವೃತ್ತಿಯನ್ನು ದಹಲಿ ರಲ್ಲಿ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ಮಾಡಿದರು. ಘೋಷ್ ಅವರ ಪತ್ನಿ ಡೆಬೊರಾ ಬೇಕರ್, ಲಾರಾ ರೈಡಿಂಗ್ ಜೀವನಚರಿತ್ರೆಯ ಲೇಖಕಿ ಜೊತೆ ನ್ಯೂಯಾರ್ಕ್‍ನಲ್ಲಿ ವಾಸಿಸುತ್ತಾರೆ

ಜಾರ್ಜ್ ಬರ್ನಾರ್ಡ್ ಷಾ

ಜಾರ್ಜ್ ಬರ್ನಾರ್ಡ್ ಷಾ (೧೮೫೬ - ೧೯೫೦) ಒಬ್ಬ ಪ್ರಸಿದ್ಧ ಆಂಗ್ಲ ನಾಟಕಕಾರರು. ಐರ್ಲೆಂಡಿನಲ್ಲಿ ಜನಿಸಿ ನಂತರ ಇಂಗ್ಲೆಂಡಿನಲ್ಲಿ ನೆಲೆಸಿದವರು. ಬರ್ನಾರ್ಡ್ ಷಾ ೬೦ ಕ್ಕೂ ಹೆಚ್ಚು ನಾಟಕಗಳನ್ನು ಬರೆದರು. ಇದಲ್ಲದೆ ಸಾಹಿತ್ಯ ವಿಮರ್ಶೆ ಮತ್ತು ಸಂಗೀತದ ಬಗ್ಗೆಯೂ ಬರೆದರು. ಇವರು ಪ್ರಸಿದ್ಧ ವಾಗ್ಮಿಯಾಗಿಯೂ ಹೆಸರು ಮಾಡಿದರು. ತಮ್ಮ ಕೃತಿಗಳಲ್ಲಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಹಾಗೆಯೇ ಅವರ ಕೃತಿಗಳಲ್ಲಿ ಹಾಸ್ಯದ ಎಳೆಯೂ ಸಾಮಾನ್ಯವಾಗಿ ಇರುತ್ತದೆ. ಶಿಕ್ಷಣ, ಆರೋಗ್ಯ, ಮದುವೆ, ಧರ್ಮ ಮೊದಲಾದ ವಿಷಯಗಳನ್ನು ತಮ್ಮ ಕೃತಿಗಳಲ್ಲಿ ಚರ್ಚಿಸಿದ ಬರ್ನಾರ್ಡ್ ಷಾ, ತಮ್ಮ ಕಾಲದ ಸಾಮಾಜಿಕ ತೊಡಕುಗಳನ್ನು ಕಟುವಾಗಿ ಟೀಕಿಸಿದರು. ತಮ್ಮ ಭಾಷಣಗಳ ಮೂಲಕ ಪುರುಷರಿಗೆ ಮತ್ತು ಮಹಿಳೆಯರಿಗೆ ಸಮಾನ ರಾಜಕೀಯ ಹಕ್ಕುಗಳು ಮೊದಲಾದ ವಿಷಯಗಳಿಗೆ ಶ್ರಮಿಸಿದರು.

ಬಿ. ಜಿ. ಎಲ್. ಸ್ವಾಮಿ

(೧೯೧೮—೧೯೮೦)

ಬಿ. ಜಿ. ಎಲ್. ಸ್ವಾಮಿ (ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣ ಸ್ವಾಮಿ) ಕರ್ನಾಟಕದ ಹಿರಿಯ ವಿಜ್ಞಾನಿ ಮತ್ತು ಸಾಹಿತಿ. ಕನ್ನಡದ ಹಿರಿಯ ವಿದ್ವಾಂಸ, ಚಿಂತನಶೀಲ ಬರಹಗಾರ.

ಬಿ.ಎಂ.ಶ್ರೀಕಂಠಯ್ಯ

ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ಅಥವಾ ಬಿ ಎಂ ಶ್ರೀ (ಜನವರಿ ೩, ೧೮೮೪ - ಜನವರಿ ೫, ೧೯೪೬) ೨೦ನೇ ಶತಮಾನದ ಆದಿ ಭಾಗದಲ್ಲಿ ಕನ್ನಡ ಸಾಹಿತ್ಯಕ್ಕೆ ಹೊಸ ರೂಪವನ್ನು ನೀಡಿದ ಕವಿ ಮತ್ತು ಸಾಹಿತಿ.

ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಕನ್ನಡಿಗರು ಕನ್ನಡ ಮಾತನಾಡಲು ಸಂಕೋಚ ಪಡುತ್ತಿದ್ದ ಕಾಲ. ಆಗ ಎಲ್ಲ ಕಾರ್ಯವೂ ಇಂಗ್ಲಿಷ್‌ನಲ್ಲೇ ನಡೆಯುತ್ತಿತ್ತು. ಕನ್ನಡಕ್ಕೆ ಯಾವುದೇ ಉನ್ನತ ಸ್ಥಾನ-ಮಾನಗಳಿರಲಿಲ್ಲ. ಅಂತಹ ಸಮಯದಲ್ಲಿ ಕನ್ನಡವನ್ನು ಅದಕ್ಕಿರುವ ಒಂದು ನ್ಯಾಯವಾದ ಸ್ಥಾನವನ್ನು ದೊರಕಿಸಿ ಕೊಡಲೇಬೇಕು ಎಂದು ಆಶಿಸಿ, ತಮ್ಮ ಜೀವನವನ್ನು ಕನ್ನಡಕ್ಕಾಗಿ ಮುಡಿಪಾಗಿಟ್ಟವರು ಬಿ. ಎಂ. ಶ್ರೀಕಂಠಯ್ಯನವರು. ಧಾರವಾಡದಲ್ಲಿ ೧೯೧೧ ರಲ್ಲಿ ಶ್ರೀ ಯವರು ಕನ್ನಡ ಮಾತು ತಲೆಯೆತ್ತುವ ಬಗ್ಗೆಎಂಬ ಯುಗ ಪ್ರವರ್ತಕ ಭಾಷಣವನ್ನು ಮಾಡಿದರು.

ರುಡ್ಯಾರ್ಡ್ ಕಿಪ್ಲಿಂಗ್

(ಡಿಸೆಂಬರ್, ೩೦, ೧೮೬೫-ಜನವರಿ, ೧೮, ೧೯೩೬)

ರುಡ್ಯಾರ್ ಕಿಪ್ಲಿಂಗ್ ಭಾರತ'ದಲ್ಲಿ ಜನಿಸಿದ ಇಂಗ್ಲೀಷ್ ನಾಗರಿಕ. 'ರುಡ್ಯಾರ್ಡ್ ಕಿಪ್ಲಿಂಗ್', ಪ್ರತಿಷ್ಠಿತ 'ನೋಬೆಲ್ ಪ್ರಶಸ್ತಿ,' (೧೯೦೭) ಗೆ ಪಾತ್ರರಾದರು. ಅವರು ಬರೆದ ಹಲವಾರು ಜನಪ್ರಿಯ ಕಾಂದಂಬರಿ, ಕಥೆಗಳಲ್ಲಿ 'ಜಂಗಲ್ ಬುಕ್,' (೧೮೯೪) ಅತಿ ಮಹತ್ವದ ಪಾತ್ರವಹಿಸಿತ್ತು. 'ರುಡ್ಯಾರ್ಡ್ ಕಿಪ್ಲಿಂಗ್' ರವರ ಪುಸ್ತಕದ, ದೃಷ್ಟಾಂತಗಳಿಗೆ ಅವರ ತಂದೆ, 'ಜಾನ್ ಲಾಕ್ ವುಡ್ ಕಿಪ್ಲಿಂಗ್,' ರವರು ಸಚಿತ್ರೀಕರಿಸಿದ್ದಾರೆ. ಲಂಡನ್ ನ " ವಿಕ್ಟೋರಿಯ ಅಂಡ್ ಆಲ್ಬರ್ಟ್ ಮ್ಯೂಸಿಯಮ್," ನ ಅಲಂಕರಿಸುವ ಕೆಲಸದಲ್ಲಿಯೂ ಬಹಳ ಕೊಡುಗೆ ನೀಡಿದ್ದಾರೆ. ಬೊಂಬಾಯಿನ, 'ಕ್ರಾಫರ್ಡ್ ಮಾರ್ಕೆಟ್,' ನಕ್ಷೆಯಲ್ಲಿ ಹಲವು ಸಂಗತಿಗಳನ್ನು ರೂಪಿಸಲು ಸಹಾಯಮಾಡಿದ್ದಾರೆ.

ಲಿಯೊ ಟಾಲ್‍ಸ್ಟಾಯ್

ಕೌಂಟ್ ಲಿಯೋ ಟಾಲ್‍ಸ್ಟಾಯ್ (ಸೆಪ್ಟೆಂಬರ್ ೯, ೧೮೨೮ — ನವೆಂಬರ್ ೨೦, ೧೯೧೦) (Лев Никола́евич Толсто́й, ಉಚ್ಛಾರಣೆ ), ರಷ್ಯಾದ ಒಬ್ಬ ಸಾಹಿತಿ.

ಇತರ ಭಾಷೆಗಳು

This page is based on a Wikipedia article written by authors (here).
Text is available under the CC BY-SA 3.0 license; additional terms may apply.
Images, videos and audio are available under their respective licenses.