ವಿಶ್ವಕೋಶಗಳು

ವಿಶ್ವಕೋಶ ಲೋಕಜ್ಞಾನದ ಎಲ್ಲಾ ವಿಷಯಗಳನ್ನು ವ್ಯವಸ್ಥಿತವಾಗಿ ನಿರೂಪಿಸುವ ಗ್ರಂಥವಾಗಿದೆ. [೧]

Encyclopaedia Britannica 15 with 2002
ಚಿತ್ರ: ಬ್ರಿಟಾನಿಕ ಇಂಗ್ಲಿಷ್‌ ವಿಶ್ವಕೋಶದ ೧೫ನೇ ಆವೃತ್ತಿ (ಕ್ರಿ.ಶ ೧೯೭೪-೨೦೧೦)
Acer Aspire 8920 Gemstone
ಚಿತ್ರ: ಇಂದು ಕಂಪ್ಯೂಟರ್‌ನಲ್ಲಿ ಆಂತರ್ಜಾಲದ ಮುಖೇನ ಲಭ್ಯವಿರುವ ವಿಶ್ವಕೋಶ

ವ್ಯುತ್ಪತ್ತಿ

ವಿಶ್ವಕೋಶ [ಇಂಗ್ಲಿಷ್: Encyclopedia / Encyclopaedia ಎನ್^ಸೈಕ್ಲ(/ಸೈಕ್ಲೋ)ಪೀಡಿಅ] ಎನ್ನುವುದು ಹಲವು ವಿಷಯಗಳ ಅಥವಾ ಒಂದು ನಿರ್ದಿಷ್ಟ ವಿಷಯದ ಹಲವು ಅಂಶಗಳ ಮಾಹಿತಿಯ ಕುರಿತ ಲೇಖನಗಳ ಒಂದು ಸಂಗ್ರಹವಾಗಿದೆ.

ಚರಿತ್ರೆ

Naturalishistoria
ಚಿತ್ರ: Naturalis Historiæ - ೧೬೬೯ನೇ ಆವೃತ್ತಿಯ ಒಳಗಿನ ಶೀರ್ಷಿಕೆಯ ಪುಟ
 • ವಿಶ್ವಕೋಶಗಳು ಹಾಗೂ ವಿಶ್ವಕೋಶದಂಥ ರಚನೆಗಳು ಸುಮಾರು ೨೦೦೦ ವರ್ಷಗಳಿಗಿಂತ ಮುಂಚೆಯಿಂದಲೂ ಅಸ್ತಿತ್ವದಲ್ಲಿರುವುದು ಕಂಡುಬರುತ್ತದೆ. ಕ್ರಿ.ಪೂ ೧೧೬-೨೭ ರಲ್ಲಿ ರೋಮ್‌ನ ಮಾರ್ಕಸ್ ಟೆರೆನ್ಸಿಅಸ್ ವಾರ್ರೋ (Marcus Terentius Varro) ಎಂಬಾತನು 'ನೈನ್ ಬುಕ್ಸ್ ಆಫ್ಹ್ ಡಿಸಿಪ್ಲೀನ್ಸ್' (Nine Books of Disciplines) ಎಂಬ ವಿಶ್ವಕೋಶದಂತ ಕೃತಿಯನ್ನು ರಚಿಸಿದನು. ಇದು ಮುಂದೆ ವಿಶ್ವಕೋಶಕರ್ತರುಗಳಿಗೆ, ಪ್ರಮುಖವಾಗಿ ಫ್ಲಿನಿ ದಿ ಎಲ್ಡರ್ ಎಂಬಾತನಿಗೆ ಮಾದರಿಯಾಯಿತು.
 • ಕ್ರಿ.ಶ. ೭೭-೭೯ ರಲ್ಲಿ ರೋಮ್‌ನ ಫ್ಲಿನಿ ದಿ ಎಲ್ಡರ್ (Pliny the Elder) 'ನ್ಯಾಚುರಲ್ ಹಿಸ್ಟರಿ' (Natural History, Naturalis Historia) ಎಂಬ ವಿಶ್ವಕೋಶದಂತ ರಚನೆಯನ್ನು ರಚಿಸಿದನು.ಕ್ರಿ.ಶ ೮೦೦ ರಲ್ಲಿ ಚೀನಾದ ಟುಯು ಎಂಬಾತ ರಚಿಸಿದ್ದ ವಿಶ್ವಕೋಶದಲ್ಲಿ ವಿಷಯಗಳನ್ನು ಕ್ರಮಬದ್ದವಾಗಿ ವಿಂಗಡಿಸಲಾಗಿತ್ತು. ಇದು ಚೀನಾದ ಮಹತ್ವಪೂರ್ಣ ವಿಶ್ವಕೋಶವೆನಿಸಿತು.
 • ಕ್ರಿ.ಶ ೯೪೭-೧೦೦೨ ರ ಕಾಲದಲ್ಲಿ ಚೀನಾದ ಉಷು ಎಂಬಾತ ೩೦ ಸಂಪುಟಗಳ ವಿಶ್ವಕೋಶವನ್ನು ರಚಿಸಿದ್ದನೆಂದು ತಿಳಿಯಲಾಗಿದೆ. ಇದು ಚೀನಾ ದೇಶವನ್ನಾಳಿದ ಕ್ರಿ.ಶ ೧೫ನೇ ಶತಮಾನದ ಚಕ್ರವರ್ತಿ ಯುಂಗಲೊ ಮತ್ತು ಕ್ರಿ.ಶ ೧೮ನೇ ಶತಮಾನದ ಕಾಂಗ್ ಹ್ಸಿ ಇವರಿಗಾಗಿ ವಿಶ್ವಕೋಶವನ್ನು ರಚಿಸಲಾಗಿತ್ತೆಂದು ತಿಳಿಯಲಾಗಿದೆ. ಆಧುನಿಕ ವಿಶ್ವಕೋಶಗಳು ನಿಘಂಟುಗಳ ವಿಕಸಿತ ರಚನೆಗಳಾಗಿದ್ದು, ಅವು ಸುಮಾರು ಕ್ರಿ.ಶ ೧೭-೧೮ ನೇ ಶತಮಾನದ ಅವಧಿಯಲ್ಲಿ ರೂಪತಾಳಿದವು.
Britannica 1. baskı
ಚಿತ್ರ: ಬ್ರಿಟಾನಿಕ ಇಂಗ್ಲಿಷ್ ವಿಶ್ವಕೋಶದ ಮೊದಲ ಆವೃತ್ತಿಯ (ಕ್ರಿ.ಶ ೧೭೬೮-೧೭೭೧) ನಕಲು
Houghton Typ 705.71.363 Encyclopaedia Britannica, 1771 - title page
ಚಿತ್ರ: ಬ್ರಿಟಾನಿಕ ಇಂಗ್ಲಿಷ್ ವಿಶ್ವಕೋಶದ ಮೊದಲ ಆವೃತ್ತಿಯ (ಕ್ರಿ.ಶ ೧೭೬೮-೧೭೭೧) ನಕಲಿನ ಒಳಗಿನ ಶೀರ್ಷಿಕೆಯ ಪುಟ
Britannica 1st ed. page
ಚಿತ್ರ: ಬ್ರಿಟಾನಿಕ ಇಂಗ್ಲಿಷ್ ವಿಶ್ವಕೋಶದ ಮೊದಲ ಆವೃತ್ತಿಯ (ಕ್ರಿ.ಶ ೧೭೬೮-೧೭೭೧) ನಕಲಿನ ಒಳಗಿನ ಒಂದು ಲೇಖನದ ಪುಟ
3rdBritannica
ಚಿತ್ರ: ಬ್ರಿಟಾನಿಕ ಇಂಗ್ಲಿಷ್ ವಿಶ್ವಕೋಶದ ಮೂರನೇ ಆವೃತ್ತಿ (ಕ್ರಿ.ಶ ೧೭೬೮-೧೭೯೧)
Brockhaus Lexikon
ಚಿತ್ರ: Brockhaus Konversations Lexikon - ಜರ್ಮನ್ ಭಾಷೆಯ ವಿಶ್ವಕೋಶದ ೧೪ನೇ ಆವೃತ್ತಿ (ಕ್ರಿ.ಶ 1896–1908)

ವಿಧಗಳು

 1. ಕನ್ನಡ ವಿಶ್ವಕೋಶ
 2. ಕನ್ನಡ ವಿಷಯ ವಿಶ್ವಕೋಶ
 3. ಜಾನಪದ ವಿಶ್ವಕೋಶ
 4. ಜಾನಪದ ವಿಷಯ ವಿಶ್ವಕೋಶ
 5. ವಿಜ್ಞಾನ ವಿಶ್ವಕೋಶ
 6. ಬಾಲಜ್ಞಾನ ಕೋಶ - ಇತ್ತಾದಿ

ಪ್ರಸಿದ್ಧ ವಿಶ್ವಕೋಶಗಳು

 • ಎನ್ಸೈಕ್ಲೊಪೀಡಿಅ ಬ್ರಿಟಾನಿಕ: ಇದು ಇಂಗ್ಲಿಷ್‌ನ ಅತ್ಯಂತ ಹಳೆಯ (ಸಮಕಾಲೀನ) ಸಾಮಾನ್ಯ ವಿಶ್ವಕೋಶವಾಗಿದೆ . ಇದು ಮೊದಲು ಕ್ರಿಶ ೧೭೬೮ ರಲ್ಲಿ ಪ್ರಕಟವಾಯಿತು.
 • ವಿಕಿಪೀಡಿಅ: ಇದು ಒಂದು ಅಂತರ್ಜಾಲ-ಆಧಾರಿತ ವಿಶ್ವಕೋಶವಾಗಿದ್ದು, ಇದರಲ್ಲಿ ಹಲವು ಭಾಷೆಗಳಲ್ಲಿ ಲೇಖನಗಳು ಲಭ್ಯವಿದೆ. ಇದರ ಇಂಗ್ಲಿಷ್ ಆವೃತ್ತಿಯಲ್ಲಿ ಪ್ರಸ್ತುತ ೪.೭ ದಶಲಕ್ಷಕ್ಕಿಂತಲೂ ಹೆಚ್ಚಿನ ಲೇಖನಗಳು ಲಭ್ಯವಿದೆ.

ಭಾರತದಲ್ಲಿ ವಿಶ್ವಕೋಶಗಳ ರಚನೆ

 1. ಪೌರಾಣಿಕ ವಿಷಯಗಳೊಡನೆ ವೈದ್ಯಕೀಯ, ವ್ಯಾಕರಣ, ನಾಟ್ಯ, ಸಂಗೀತ, ಜ್ಯೋತಿಶಾಸ್ತ್ರ ಮುಂತಾದ ವಿಷಯಗಳನ್ನೊಳಗೊಂಡ 'ಗರುಡ ಪುರಾಣ', 'ಅಗ್ನಿಪುರಾಣ' ಮತ್ತು 'ನಾರದ ಪುರಾಣ'ಗಳನ್ನು "ವಾಙ್ಮಯ ವಿಶ್ವಕೋಶಗಳು" ಎನ್ನಲಾಗುತ್ತದೆ.
 2. 'ಷಡ್ದರ್ಶನ ಸಮುಚ್ಚಯ' ಎಂಬ ಆಯುರ್ವೇದ ಗ್ರಂಥ ಸಹ ವಿಶ್ವಕೋಶ ಸ್ವರೂಪದ್ದು ಎನ್ನಲಾಗಿದೆ. ಅಲ್ಲದೆ 'ಆಗ್ನೇಯ ಪುರಾಣ'ವನ್ನು ಸರ್ವವಿದ್ಯಾಸಂಗ್ರಹವೆಂದು ಕರೆದು ಅದರ ವಿಶ್ವಕೋಶ ಸ್ವರೂಪವನ್ನು ತಿಳಿಸಲಾಗಿದೆ.
 3. ಕ್ರಿ.ಶ ೧೯೦೨-೧೯೧೧ ರಲ್ಲಿ ಬಂಗಾಳದಲ್ಲಿ ರಂಗಲಾಲ್ ಮುಖರ್ಜಿ ಮತ್ತು ನಾಗೇಂದ್ರನಾಥಬಸು ಇವರ ಸಂಪಾದಕತ್ವದಲ್ಲಿ ಪ್ರಟವಾದ ಬಂಗಾಳಿಭಾಷೆಯ ೨೨ ಸಂಪುಟಗಳ ವಿಶ್ವಕೋಶವೆ ಭಾರತದ ಪ್ರಪ್ರಥಮ ವಿಶ್ವಕೋಶ ಎನ್ನಲಾಗಿದೆ.
 4. ಕ್ರಿ.ಶ ೧೯೧೩ ರಲ್ಲಿ ಕೊಮರಾಜು ವೆಂಕಟಲಕ್ಷ್ಮಣರಾವ್ ಎಂಬುವವರು ಎನ್ಸೈಕ್ಲೊಪೀಡಿಅ ಬ್ರಿಟಾನಿಕ ಮಾದರಿಯಲ್ಲಿ, ತೆಲುಗಿನಲ್ಲಿ ವಿಶ್ವಕೋಶ ಪ್ರಕಟಿಸಲು ಪ್ರಯತ್ನಿಸಿದ್ದರು.
 5. ಕ್ರಿ.ಶ ೧೯೫೪-೧೯೬೩ ರಲ್ಲಿ ತಮಿಳುನಾಡಿನ ಚೆನೈನಲ್ಲಿರುವ ತಮಿಳು ಆಭಿವೃದ್ಧಿಸಂಸ್ಥೆಯು ೯ ಸಂಪುಟಗಳ ತಮಿಳು ವಿಶ್ವಕೋಶವನ್ನು ಪ್ರಕಟಿಸಿರುತ್ತದೆ.
 6. ಕ್ರಿ.ಶ ೧೯೭೨ ರಲ್ಲಿ ಕೇರಳ ಸರ್ಕಾರ ವಿಶ್ವಕೋಶ ಇಲಾಖೆಯೊಂದನ್ನು ಸ್ಥಾಪಿಸಿ ಸರ್ವವಿಜ್ಞಾನಕೋಶಮ್ ಎಂಬ ೨೦ ಸಂಪುಟಗಳ ವಿಶ್ವಕೋಶವನ್ನು ಪ್ರಕಟಿಸಿರುತ್ತದೆ.
 7. ಕಾಶ್ಮೀರ, ಅಸ್ಸಾಂ, ಒಡಿಶಾ, ಪಂಜಾಬ್, ಗುಜರಾತ್, ಮಹಾರಾಷ್ಟ್ರ, ಬಂಗಾಳ ಮುಂತಾದ ರಾಜ್ಯಗಳು ಅವುಗಳ ರಾಜ್ಯ ಭಾಷೆಯಲ್ಲಿ ವಿಶ್ವಕೋಶಗಳನ್ನು ಪ್ರಕಟಿಸುತ್ತಿವೆ.

ಕನ್ನಡದಲ್ಲಿ ವಿಶ್ವಕೋಶಗಳ ರಚನೆ

 1. ಕ್ರಿ.ಶ ೧೫೦೦ ರಲ್ಲಿ ನಿಜಗುಣಶಿವಯೋಗಿ ರಚಿಸಿದ 'ವಿವೇಕ ಚಿಂತಾಮಣಿ' ಕನ್ನಡದ ಅತ್ಯಂತ ಹಳೆಯ ವಿಶ್ವಕೋಶದಂತ ರಚನೆಯಾಗಿದೆ.
 2. ಕ್ರಿಶ ೧೯೬೯ ನವೆಂಬರ್ ೨೧ ರಂದು 'ಕನ್ನಡ ವಿಶ್ವಕೋಶ' ಸಂಪುಟಗಳು ಬಿಡುಗಡೆಯಾದವು.

ಉಲ್ಲೇಖಗಳು

 1. ನಿಘಂಟುಗಳಲ್ಲಿ ಹಾಗು ವಿಶ್ವಕೋಶಗಳಲ್ಲಿ ವ್ಯಾಖ್ಯಾನಿಸಿರುವಂತೆ ೧) www.oxforddictionaries.com/definition/english/encyclopedia, ೨) dictionary.cambridge.org/dictionary/british/encyclopedia, ೩) www.britannica.com/EBchecked/topic/186603/encyclopaedia

References

 • EtymologyOnline
 • "Encyclopaedia". Encyclopædia Britannica. Retrieved July 27, 2010.
 • Béjoint, Henri (2000). Modern Lexicography. Oxford University Press. ISBN 0-19-829951-6.
 • Bergenholtz, H., Nielsen, S., Tarp, S., ed. (2009). Lexicography at a Crossroads: Dictionaries and Encyclopedias Today, Lexicographical Tools Tomorrow. Peter Lang. ISBN 978-3-03911-799-4.
 • Blom, Phillip (2004). Enlightening the World: Encyclopédie, the Book that Changed the Course of History. New York; Basingstoke: Palgrave Macmillan. ISBN 978-1-4039-6895-1. OCLC 57669780.
 • Collison, Robert Lewis (1966). Encyclopaedias: Their History Throughout the Ages (2nd ed.). New York, London: Hafner. OCLC 220101699.
 • Cowie, Anthony Paul (2009). The Oxford History of English Lexicography, Volume I. Oxford University Press. ISBN 0-415-14143-5. Retrieved August 17, 2010.
 • Darnton, Robert (1979). The business of enlightenment : a publishing history of the Encyclopédie, 1775–1800. Cambridge: Belknap Press. ISBN 0-674-08785-2.
 • Hartmann, R. R. K.; James, Gregory (1998). Dictionary of Lexicography. Routledge. ISBN 0-415-14143-5. Retrieved July 27, 2010. Unknown parameter |coauthors= ignored (|author= suggested) (help)
 • Kafker, Frank A., ed. (1981). Notable encyclopedias of the seventeenth and eighteenth centuries: nine predecessors of the Encyclopédie. Oxford: Voltaire Foundation. ISBN 978-0-7294-0256-9. OCLC 10645788.
 • Kafker, Frank A., ed. (1994). Notable encyclopedias of the late eighteenth century: eleven successors of the Encyclopédie. Oxford: Voltaire Foundation. ISBN 978-0-7294-0467-9. OCLC 30787125.
 • Needham, Joseph (1986). "Part 7, Military Technology; the Gunpowder Epic". Science and Civilization in China. 5 – Chemistry and Chemical Technology. Taipei: Caves Books Ltd. ISBN 978-0-521-30358-3. OCLC 59245877.
 • Rosenzweig, Roy (June 2006). "Can History Be Open Source? Wikipedia and the Future of the Past". Journal of American History. 93 (1): 117–46. doi:10.2307/4486062. ISSN 1945-2314.
 • Sideris, Athanasios (2006). "The Encyclopedic Concept in the Web Era", in Ioannides M., Arnold D., Niccolucci F. and K. Mania (eds.), The e-volution of Information Communication Technology in Cultural Heritage. Where Hi-Tech Touches teh Past: Risks and Challenges for the 21st Century. VAST 2006, Epoch, Budapest, pp. 192–197. ISBN 963-8046-74-0.
 • Walsh, S. Padraig (1968). Anglo-American general encyclopedias: a historical bibliography, 1703–1967. New York: Bowker. p. 270. OCLC 577541.
 • Yeo, Richard R. (2001). Encyclopaedic visions : scientific dictionaries and enlightenment culture. Cambridge, New York: Cambridge University Press. ISBN 978-0-521-65191-2. OCLC 45828872.

External links

ಅಪಾಸ್ಟ್ರಫಿ (Apostrophe )

ಅಪಾಸ್ಟ್ರಫಿ ಎಂಬ ಚಿಹ್ನೆಯು ( ’ , ಕೆಲವೊಮ್ಮೆ ' ಎಂದು ನಮೂದಿಸಲಾಗಿದೆ) ಒಂದು ವಿರಾಮ (punctuation) ಚಿಹ್ನೆಯಾಗಿದೆ. ಲ್ಯಾಟೀನ್‌ ಅಕ್ಷರಮಾಲೆಗಳನ್ನು ಬಳಸುವ ಭಾಷೆಗಳಲ್ಲಿ, ಇದನ್ನು ಕೆಲವೊಮ್ಮೆ ಉಚ್ಚಾರಣಾ (diacritic) ಚಿಹ್ನೆಯಾಗಿ ಬಳಸಲಾಗುತ್ತದೆ. ಇಂಗ್ಲಿಷ್‌ ಭಾಷೆಯಲ್ಲಿ, ಇದು ಎರಡು ಮುಖ್ಯ ಉದ್ದೇಶಗಳನ್ನು ಪೂರೈಸುತ್ತದೆ - ಒಂದು ಅಥವಾ ಎರಡು ಅಕ್ಷರಗಳನ್ನು ಬಿಟ್ಟುಬಿಡಬಹುದು (ಇದಕ್ಕೆ 'ಸಂಕುಚಿತಗೊಳಿಸುವಿಕೆ (contraction) ಎನ್ನಲಾಗಿದೆ); (ಉದಾಹರಣೆಗೆ does not ಬದಲಿಗೆ doesn't ), ಹಾಗೂ, ಸ್ವಾಮ್ಯಸೂಚಕಗಳನ್ನು (possessives) ಗುರುತಿಸಲು ಬಳಸಲಾಗಿದೆ (ಉದಾಹರಣೆಗೆ the cat's whiskers ). ಆದರೂ, ಕೆಲವು ಬಹುವಚನ ಪದಗಳಲ್ಲಿ ಅಪಾಸ್ಟ್ರಪಿ ಬಳಸಲು ಅವಕಾಶವಿದೆ. ಆಕ್ಸ್‌ಫರ್ಡ್‌ ಇಂಗ್ಲಿಷ್‌ ನಿಘಂಟು (}Oxford English Dictionary) (OED) ಪ್ರಕಾರ, ಅಪಾಸ್ಟ್ರಫಿ ಪದವು ಗ್ರೀಕ್‌ ಭಾಷೆಯಿಂದ ἡ ἀπόστροφος [προσῳδία] ಲ್ಯಾಟೀನ್‌ ಹಾಗೂ ಫ್ರೆಂಚ್‌ ಮೂಲಕ ಉದ್ಭವಿಸಿದೆ (hē apóstrophos [prosōidía], “[ಉಚ್ಚಾರಣೆ] ‘ಅತ್ತ ತಿರುಗಿಸುವುದು’, ಅಥವಾ ಸ್ವರಲೋಪ”).

ಅಪಾಸ್ಟ್ರಫಿ ಚಿಹ್ನೆಯು ಅಂತ್ಯಗೊಳಿಸುವ ಏಕ-ಉದ್ಧರಣ ಚಿಹ್ನೆ (quotation mark)ಯಿಂದ ಭಿನ್ನವಾಗಿದೆ(ಸಾಮಾನ್ಯವಾಗಿ ಒಂದೇ ರೀತಿಯಾಗಿದ್ದರೂ,ಭಿನ್ನ ಉದ್ದೇಶವನ್ನು ಪೂರೈಸುತ್ತದೆ)ಹಾಗೂ ಇದೇ ರೀತಿ ಕಾಣುವ ಪ್ರೈಮ್ ( ′ ), ಇದನ್ನು ಅಡಿಗಳ ಅಥವಾ ಆರ್ಕ್‌ಮೈನ್ಯೂಟ್ ಅಳತೆ ಸೂಚಿಸಲು ಬಳಸಲಾಗುತ್ತದೆ. ಇದಲ್ಲದೆ ವಿವಿಧ ಗಣಿತ ಉದ್ದೇಶಗಳಿಗೆ) ಹಾಗೂ, ಪಾಲಿನೇಷ್ಯನ್‌ ಭಾಷೆಗಳಲ್ಲಿ ಕಂಠದ್ವಾತೀಯ ವಿರಾಮವನ್ನು ನಿರೂಪಿಸುವ ಒಕಿನಾ(ʻokina)ಗಿಂತ ಭಿನ್ನವಾಗಿದೆ. (ʻ)

ಅಷ್ಟಾದಶ ಪುರಾಣಗಳು

ಭಾರತೀಯ ಸಂಸ್ಕೃತಿಯಲ್ಲಿ ವೇದವಾಙ್ಮಯ ಸೂರ್ಯಮಂಡಲವೆನ್ನಿಸಿದರೆ ಪುರಾಣಗಳು ಗ್ರಹನಕ್ಷತ್ರಗಳೆನ್ನಿಸಿವೆ. ನಾಲ್ಕು ವೇದಗಳಾದ ಬಳಿಕ ಬರುವ ಪುರಾಣ ಸಮುದಾಯ ಐದನೆಯ ವೇದವೆಂದು ಖ್ಯಾತಿವೆತ್ತಿದೆ. ಪುರಾಣ ಜನತಾವೇದ; ವೇದಗಣದಂತೆಯೇ ಪ್ರಾಚೀನ ಪರಂಪರೆಗಳ ಕರಂಡಕ ಮತ್ತು ಪವಿತ್ರ. ಅದರ ವಸ್ತುವೂ ರೀತಿಯೂ ಮಹಾಭಾರತ ಮತ್ತು ಸ್ಮೃತಿಗ್ರಂಥಗಳ ವಸ್ತು, ರೀತಿಗಳನ್ನು ಹೋಲುತ್ತವೆ. ಹಿಂದೂಧರ್ಮದ ಸರ್ವಮುಖಗಳನ್ನೂ ಪ್ರತಿಬಿಂಬಿಸುವ ಹೆಗ್ಗನ್ನಡಿಯೆಂದರೆ ಪುರಾಣಸ್ತೋಮವೇ. ಪುರಾಣಸಂಹಿತೆಗಳಲ್ಲಿ ಹಲವು ವಿಶ್ವಕೋಶಗಳೇ ಆಗಿವೆ; ಅವುಗಳಲ್ಲಿ ಸನಾತನ ಮತಧರ್ಮದ ತತ್ತ್ವಗಳಿವೆ. ತತ್ತ್ವಜ್ಞಾನದ ವಿವಿಧ ವಿವರಣೆಗಳಿವೆ. ಐತಿಹಾಸಿಕ ಸಾಮಗ್ರಿಗಳಿವೆ. ವೈಯಕ್ತಿಕ ಜೀವನದ ಆಚಾರ ನಿಯಮಗಳಿವೆ. ಸಾಮಾಜಿಕ ಹಾಗೂ ರಾಜಕೀಯ ನೀತಿಗಳಿವೆ. ಅಷ್ಟಾದಶವೆಂದು ಪ್ರಸಿದ್ಧವಾದ ಮಹಾಪುರಾಣಗಳಲ್ಲಿರುವ ಶ್ಲೋಕಗಳ ಮೊತ್ತ ನಾಲ್ಕು ಲಕ್ಷಗಳಷ್ಟೆಂದು ಭಾಗವತ ಮಹಾಪುರಾಣದ ಹೇಳಿಕೆ.

ಆಕರ ಗ್ರಂಥ

ಆಕರ ಗ್ರಂಥ ಎಂದರೆ ಯಾವುದರಿಂದ ಮಾಹಿತಿ ಅಥವಾ ವಿಚಾರಗಳನ್ನು ಪಡೆಯಲಾಗುತ್ತದೊ ಆ ಒಂದು ಪಠ್ಯ (ಕೆಲವೊಮ್ಮೆ ವಾಚಿಕ).

ಇತಿಹಾಸ ಲೇಖನದಲ್ಲಿ, ಸಾಮಾನ್ಯವಾಗಿ ಮೂರು ಬಗೆಯ ಆಕರ ಗ್ರಂಥಗಳ ನಡುವೆ ವ್ಯತ್ಯಾಸ ಮಾಡಲಾಗುತ್ತದೆ:

ಪ್ರಾಥಮಿಕ ಮೂಲಗಳು ಘಟನೆಯ ವೇಳೆಯಲ್ಲಿ ಉಪಸ್ಥಿತರಿದ್ದ ಯಾರಿಂದಲೋ ಮಾಡಲ್ಪಟ್ಟ ಇತಿಹಾಸದ ನೇರವಾದ ಬರೆಯಲ್ಪಟ್ಟ ಸಾಕ್ಷ್ಯಾಧಾರಗಳು. ಇವನ್ನು ಅಧ್ಯಯನದಲ್ಲಿರುವ ಮಾಹಿತಿ ಅಥವಾ ವಿಚಾರದ ಮೂಲಕ್ಕೆ ಅತಿ ನಿಕಟವಾಗಿರುವ ಆಕರಗಳು ಎಂದು ವರ್ಣಿಸಲಾಗಿದೆ. ಈ ಬಗೆಯ ಆಕರಗಳು ಅಧ್ಯಯನದ ವಸ್ತುವಿನ ಬಗ್ಗೆ ಸಂಶೋಧಕರಿಗೆ ನೇರ, ಮಧ್ಯಸ್ತಿಕೆಯಿಲ್ಲದ ಮಾಹಿತಿಯನ್ನು ಒದಗಿಸುತ್ತವೆ ಎಂದು ಹೇಳಲಾಗಿದೆ. ಪ್ರಾಥಮಿಕ ಮೂಲಗಳು ಸಾಮಾನ್ಯವಾಗಿ ಘಟನೆಯಲ್ಲಿ ಭಾಗಿಯಾದ, ಅದನ್ನು ನೋಡಿದ ಅಥವಾ ಅದು ನಡೆದಾಗ ಜೀವಿಸಿದ್ದ ಯಾರಿಂದಾದರೂ ದಾಖಲಿಸಲಾದ ಮೂಲಗಳು. ಸಾಮಾನ್ಯವಾಗಿ ಪರಿಗಣನೆಯಲ್ಲಿರುವ ವಸ್ತುವಿಗೆ ಸಂಬಂಧಿಸಿದ ಅಧಿಕೃತ ಮತ್ತು ಮೂಲಭೂತ ದಸ್ತಾವೇಜುಗಳೂ ಇರುತ್ತವೆ. ಇದರಲ್ಲಿ ಪ್ರಕಟಿತ ಮೂಲ ವರದಿಗಳು, ಪ್ರಕಟಿತ ಮೂಲ ಕೃತಿಗಳು, ಅಥವಾ ಪ್ರಕಟಿತ ಮೂಲ ಸಂಶೋಧನೆ ಸೇರಿವೆ. ಅವು ಹಿಂದೆ ಬೇರೆ ಎಲ್ಲೂ ಪ್ರಕಟಿತವಾಗಿರದ ಮೂಲ ಸಂಶೋಧನೆ ಅಥವಾ ಹೊಸ ಮಾಹಿತಿಯನ್ನು ಹೊಂದಿರಬಹುದು. ಇವನ್ನು, ಹಲವುವೇಳೆ ಪ್ರಾಥಮಿಕ ಮೂಲಗಳನ್ನು ಉಲ್ಲೇಖಿಸುವ, ಅವುಗಳ ಮೇಲೆ ಟಿಪ್ಪಣಿ ಬರೆಯುವ, ಅಥವಾ ಅವುಗಳ ಮೇಲೆ ವಿಸ್ತರಿಸುವ ಮಾಧ್ಯಮಿಕ ಮೂಲಗಳಿಂದ ವ್ಯತ್ಯಾಸ ಮಾಡಲಾಗುತ್ತದೆ. ಆದರೆ, ಪ್ರಾಥಮಿಕ ಮತ್ತು ಮಾಧ್ಯಮಿಕ, ಇವು ಸಾಪೇಕ್ಷ ಪದಗಳಾಗಿವೆ, ಮತ್ತು ಯಾವುದೇ ನಿರ್ದಿಷ್ಟ ಮೂಲವನ್ನು, ಅದು ಹೇಗೆ ಬಳಸಲ್ಪಡುತ್ತದೆ ಎಂಬುದನ್ನು ಆಧರಿಸಿ, ಪ್ರಾಥಮಿಕ ಅಥವಾ ಮಾಧ್ಯಮಿಕ ಎಂದು ವರ್ಗೀಕರಿಸಬಹುದು. ಭೌತಿಕ ವಸ್ತುಗಳು ಪ್ರಾಥಮಿಕ ಮೂಲಗಳಾಗಬಲ್ಲವು.

ಮಾಧ್ಯಮಿಕ ಮೂಲಗಳು ಪ್ರಾಥಮಿಕ ಮೂಲಗಳಿಂದ ಪಡೆದ ಸಾಕ್ಷ್ಯಾಧಾರವನ್ನು ಆಧರಿಸಿದ ಇತಿಹಾಸದ ಲಿಖಿತ ವರದಿಗಳಾಗಿರುತ್ತವೆ. ಇವು ಸಾಮಾನ್ಯವಾಗಿ ಪ್ರಾಥಮಿಕ ಮೂಲಗಳನ್ನು ವಿಶ್ಲೇಷಿಸುವ, ಸಮೀಕರಿಸುವ, ಮೌಲ್ಯಮಾಪಿಸುವ, ಅರ್ಥೈಸುವ, ಮತ್ತು/ಅಥವಾ ಸಂಶ್ಲೇಷಿಸುವ ವರದಿಗಳು, ಕೃತಿಗಳು ಅಥವಾ ಸಂಶೋಧನೆಯಾಗಿರುವ ಮೂಲಗಳಾಗಿರುತ್ತವೆ. ಇವು ಅಷ್ಟು ವಿಶ್ವಾಸಾರ್ಹವಾಗಿರುವುದಿಲ್ಲ ಮತ್ತು ಪರಿಗಣನೆಯಲ್ಲಿರುವ ವಿಷಯಕ್ಕೆ ಸಂಬಂಧಿಸಿದ ಪೂರಕ ದಸ್ತಾವೇಜುಗಳಾಗಿರುತ್ತವೆ.

ತೃತೀಯಕ ಮೂಲಗಳು ಪ್ರಾಥಮಿಕ ಮತ್ತು ಮಾಧ್ಯಮಿಕ ಮೂಲಗಳನ್ನು ಆಧರಿಸಿದ ಸಂಕಲನಗಳಾಗಿರುತ್ತವೆ. ಅವು ಪರಿಗಣನೆಯಲ್ಲಿರುವ ಒಂದು ನಿರ್ದಿಷ್ಟ ವಿಷಯದ ಸಾಮಾನ್ಯೀಕೃತ ಸಂಶೋಧನೆಯನ್ನು ಹೊಂದಿರುತ್ತವೆ. ಉದಾ. ವಿಶ್ವಕೋಶಗಳು, ಪಠ್ಯಪುಸ್ತಕಗಳು.

ಕನ್ನಡ ಗಣಕ ಪರಿಷತ್ತು

ಕನ್ನಡ ಗಣಕ ಪರಿಷತ್ತು ಒಂದು ಲಾಭರಹಿತ ಸ್ವಯಂಸೇವಾ ಸಂಸ್ಥೆ. ಇದು ಕನ್ನಡವನ್ನು ಗಣಕಗಳಲ್ಲಿ ಬಳಸುವುದರಲ್ಲಿ ಆಸಕ್ತಿ ಹೊಂದಿರುವ ಆಸಕ್ತರ ಗುಂಪಿನಿಂದ ೧೯೯೭ ರಲ್ಲಿ ಪ್ರಾರಂಭವಾಯಿತು. ಈ ಸಂಸ್ಥೆಯು ವಿವಿಧ ಸಂಗತಿಗಳ ಗಣಕೀಕರಣದ ಸಂದರ್ಭದಲ್ಲಿ ಕನ್ನಡವನ್ನು ಬಳಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಸಿದ್ಧಪಡಿಸಿದೆ ಮತ್ತು ಅವುಗಳನ್ನು ಕಾರ್ಯರೂಪಕ್ಕೆ ತರಲು ಯತ್ನಿಸುತ್ತಿದೆ. ತುಂಬ ಮುಖ್ಯವಾಗಿ ಕರ್ನಾಟಕ ಸರ್ಕಾರದ ಆಡಳಿತದ ಗಣಕೀಕರಣದ ಸಂದರ್ಭದಲ್ಲೂ ಕನ್ನಡ ಭಾಷೆಯೇ ಮಾಧ್ಯಮವಾಗಿ ಮುಂದುವರೆಯಬೇಕೆಂದು ಪ್ರತಿಪಾದಿಸಿದೆ. ಈ ದಿಸೆಯಲ್ಲಿ ಒಂದು ಕನ್ನಡ ತಂತ್ರಾಂಶವು (ಸಾಫ಼್ಟ್ ವೇರ್) ನೀಡಬೇಕಾದ ಕನಿಷ್ಠ ಸೌಲಭ್ಯಗಳನ್ನು ಗುರುತಿಸಿ ಅದನ್ನು ಪ್ರಚುರಪಡಿಸಿ ಆ ಬಗ್ಗೆ ಸರ್ಕಾರದ ಗಮನವನ್ನು ಸೆಳೆದಿದೆ.ಈಗ ಕರ್ನಾಟಕ ಸರ್ಕಾರ ಸ್ವಾಮ್ಯದಲ್ಲಿರುವ ಮತ್ತು ಉಚಿತವಾಗಿ ಲಭ್ಯವಿರುವ 'ನುಡಿ ತಂತ್ರಾಂಶ'ವು ಈ ಸಂಸ್ಥೆಯ ಕೊಡುಗೆ.

ಕನ್ನಡ ವಿಕಿಪೀಡಿಯ.

ಕನ್ನಡ ವಿಶ್ವಕೋಶವು ಮೀಡಿಯಾವಿಕಿಯನ್ನು ಬಳಸಿ ಕಟ್ಟಿರುವ ಸ್ವತಂತ್ರ ವಿಶ್ವಕೋಶ. ಈ ವಿಶ್ವಕೋಶ ಅನೇಕ ಭಾಷೆಗಳಲ್ಲಿ ಲಭ್ಯವಿದೆ. ಪ್ರಸ್ತುತ ಕನ್ನಡ ಆವೃತ್ತಿಯು ಜೂನ್ ೨೦೦೩ ರಲ್ಲಿ ಪ್ರಾರಂಭವಾಯಿತು. ಅನುವಾದಿಸಲು ಉತ್ಸಾಹವಿರುವವರು ಈ ಉಲ್ಲೇಖವನ್ನು ಓದಿಕೊಳ್ಳುವುದಾಗಿ ವಿನಂತಿ. ಪ್ರಯೋಗಾರ್ಥ ವಿಕಿಪೀಡಿಯಾ ಪುಟವನ್ನು ವಿಕಿಪೀಡಿಯಾದಲ್ಲಿ ಸಂಪಾದನೆ ಕಲಿಯಲು ಬಳಸಿಕೊಳ್ಳಬಹುದು.

ಕನ್ನಡ ವಿಶ್ವವಿದ್ಯಾಲಯ

ಕನ್ನಡ ವಿಶ್ವವಿದ್ಯಾಲಯ : ಕನ್ನಡ ನಾಡು, ನುಡಿ, ಸಂಸ್ಕೃತಿಗಳ ವಿಶೇಷ ಅಧ್ಯಯನಕ್ಕಾಗಿ 1991ರಲ್ಲಿ ಸ್ಥಾಪಿತವಾದ ಒಂದು ವಿಶ್ವವಿದ್ಯಾಲಯ. ಕನ್ನಡದ ಕೆಲಸಗಳು ವಿವಿಧ ವಿಶ್ವವಿದ್ಯಾಲಯಗಳ ಕನ್ನಡ ಅಧ್ಯಯನ ಕೇಂದ್ರಗಳು, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿವಿಧ ಅಕಾಡೆಮಿಗಳ ಮೂಲಕ ನಡೆಯುತ್ತಿದ್ದರೂ ಕನ್ನಡ ನಾಡುನುಡಿಯ ಬಗ್ಗೆ, ಕನ್ನಡ ಭಾಷಾ ಪುರೋಬಿsವೃದ್ಧಿಯ ಬಗ್ಗೆ ಆಳವಾದ ಕೆಲಸ ಕಾರ್ಯಗಳು ನಡೆಯಬೇಕೆಂಬ ಮಹೋದ್ದೇಶದಿಂದ ಕರ್ನಾಟಕ ಸರ್ಕಾರ ಈ ವಿಶ್ವವಿದ್ಯಾಲಯವನ್ನು ಅಸ್ತಿತ್ವಕ್ಕೆ ತಂದಿತು. ಬಳ್ಳಾರಿ ಜಿಲ್ಲೆಯ ಚಾರಿತ್ರಿಕ ಮಹತ್ತ್ವವುಳ್ಳ ಹಂಪೆಯ ಪರಿಸರದಲ್ಲಿ ಈ ವಿಶ್ವವಿದ್ಯಾಲಯ ನೆಲೆಗೊಂಡಿದೆ. ಹಂಪಿಯ ಹೊರವಲಯದಲ್ಲಿರುವ ಈ ವಿಶ್ವವಿದ್ಯಾಲಯದ ಆವರಣಕ್ಕೆ ವಿದ್ಯಾರಣ್ಯವೆಂದು ಹೆಸರಿದೆ. ವಿಜಯನಗರ ಕಾಲದ ವಿಶಿಷ್ಟ ವಾಸ್ತುಶೈಲಿಯಲ್ಲಿ ಕಟ್ಟಡಗಳನ್ನು ರೂಪಿಸಲಾಗಿದೆ.

ಕನ್ನಡದಲ್ಲಿ ಶಾಸ್ತ್ರ ಸಾಹಿತ್ಯ

ಕನ್ನಡದಲ್ಲಿ ಶಾಸ್ತ್ರ ಸಾಹಿತ್ಯ :- ಸಂಸ್ಕೃತ ಆಲಂಕಾರಿಕ ರಾಜಶೇಖರ ಕಾವ್ಯಕವಿ, ಶಾಸ್ತ್ರಕವಿ, ಉಭಯಕವಿ ಎಂಬ ಮೂರು ಬಗೆಯ ಕೃತಿಕಾರರನ್ನು ಗುರುತಿಸುತ್ತಾನೆ: ಕಾವ್ಯಕವಿ ರಮಣೀಯವಾಗಿ ಬರೆಯಬಲ್ಲನೇ ಹೊರತು ಖಚಿತತೆ ಪ್ರಧಾನ ಲಕ್ಷಣವಾದ ಶಾಸ್ತ್ರಭಾಗಗಳನ್ನು ಬರೆಯುವಲ್ಲಿ ಅವನು ಸೋತುಬಿಡಬಹುದು. ಶಾಸ್ತ್ರಕವಿ ಶಾಸ್ತ್ರಭಾಗಗಳನ್ನು ತರ್ಕಬದ್ಧವಾಗಿ ನಿರೂಪಿಸಬಲ್ಲವನಾದರೂ ಕಾವ್ಯಭಾಗಗಳನ್ನು ಬರೆಯುವಾಗ ನೀರಸವಾಗಿ ಬಿಡಬಹುದು. ಉಭಯಕವಿ ಮಾತ್ರ ಕಾವ್ಯ ಶಾಸ್ತ್ರಗಳೆರಡನ್ನೂ ಅವುಗಳಿಗೆ ಅಪಚಾರ ವೆಸಗದಂತೆ ಬರೆಯುವ ಸಮರ್ಥ ಎಂದು ರಾಜಶೇಖರ ಅಂಥವನನ್ನು ಹೊಗಳಿದ್ದಾನೆ.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಚಟುವಟಿಕೆಗಳನ್ನೇಲ್ಲ ಕೇಂದ್ರೀಕರಿಸುವ ದೃಷ್ಟಿಯಿಂದ ೧೯೬೬ ರಲ್ಲಿ ರೂಪುಗೊಂಡ ಸಂಸ್ಥೆ. ಇದರ ಮೊದಲ ಹೆಸರು "ಕನ್ನಡ ಅಧ್ಯಯನ ಸಂಸ್ಥೆ"(ಐ.ಕೆ.ಎಸ್). ೧೯೯೪ ರಲ್ಲಿ ಕುವೆಂಪು ಅವರ ಗೌರವಾರ್ಥವಾಗಿ "ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ" ಎಂದು ಪುನರ್ ನಾಮಕರಣ ಮಾಡಲಾಯಿತು. ಇದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಆರಂಭವಾದ ಮೊದಲನೆ ಸಂಸ್ಥೆ (ಇನ್ ಸ್ಟಿಟ್ಯೂಟ್)ಯಾಗಿದೆ. ತನ್ನ ಸ್ವರೂಪ ವ್ಯಾಪ್ತಿಯಲ್ಲಿ ಭಾರತೀಯ ಭಾಷೆಯೊಂದರ ಅಧ್ಯಯನಕ್ಕೆ ಈ ಸಂಸ್ಥೆ ವಿಶಿಷ್ಟವಾಗಿದೆ.

ಕೈಗಾರಿಕಾ ಕ್ರಾಂತಿ

ಕೈಗಾರಿಕಾ ಕ್ರಾಂತಿಯು ೧೮ ಮತ್ತು ೧೯ನೇ ಶತಮಾನದ ಅವಧಿಯಲ್ಲಿ ಸಂಭವಿಸಿದೆ. ಆ ಅವಧಿಯಲ್ಲಿ ಕೃಷಿ, ಉತ್ಪಾದನೆ,ಗಣಿಗಾರಿಕೆ ಮತ್ತು ಸಾರಿಗೆಯಲ್ಲಿ ಪ್ರಮುಖ ಬದಲಾವಣೆಗಳಿಂದ ಸಾಮಾಜಿಕ ಆರ್ಥಿಕ ಮತ್ತು ಸಾಂಸ್ಕೃತಿಕ ಸ್ಥಿತಿಗತಿಗಳ ಮೇಲೆ ಗಾಢಪರಿಣಾಮ ಬೀರಿತು. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಪ್ರಾರಂಭವಾದ ಕೈಗಾರಿಕಾ ಕ್ರಾಂತಿ ತರುವಾಯ ಯುರೋಪ್‌ನಾದ್ಯಂತ, ಉತ್ತರ ಅಮೆರಿಕ ಮತ್ತು ಅಂತಿಮವಾಗಿ ವಿಶ್ವದಲ್ಲಿ ಹರಡಿತು. ಕೈಗಾರಿಕಾ ಕ್ರಾಂತಿಯ ಪ್ರಾರಂಭವು ಮಾನವ ಇತಿಹಾಸದಲ್ಲಿ ಪ್ರಮುಖ ತಿರುವೆಂದು ಗುರುತಿಸಲಾಗಿದೆ; ಬಹುತೇಕ ಜನಜೀವನದ ಪ್ರತಿಯೊಂದು ಅಂಶದ ಮೇಲೆ ಅಂತಿಮವಾಗಿ ಕೆಲವು ರೀತಿಯಲ್ಲಿ ಪ್ರಭಾವ ಬೀರಿತು.

೧೮ನೇ ಶತಮಾನದ ಉತ್ತರಾರ್ಧದಲ್ಲಿ ಪ್ರಾರಂಭವಾದ ಕೈಗಾರಿಕಾ ಕ್ರಾಂತಿಯಿಂದ ಗ್ರೇಟ್ ಬ್ರಿಟನ್‌ನ ಕೆಲವು ಭಾಗಗಳಲ್ಲಿ ಮುಂಚಿನ ದೈಹಿಕ ದುಡಿಮೆ ಮತ್ತು ಭಾರಎಳೆಯುವ ಪ್ರಾಣಿ-ಆಧಾರಿತ ಆರ್ಥಿಕತೆಯಿಂದ ಯಂತ್ರ-ಆಧಾರಿತ ಉತ್ಪಾದನೆಯತ್ತ ಪರಿವರ್ತನೆ ಆರಂಭವಾಯಿತು. ವಸ್ತ್ರೋದ್ಯಮ ಕೈಗಾರಿಕೆಗಳ ಯಾಂತ್ರೀಕರಣ,ಕಬ್ಬಿಣ ತಯಾರಿಸುವ ತಂತ್ರಗಳ ಅಭಿವೃದ್ಧಿ ಮತ್ತು ಸಂಸ್ಕರಿತ ಕಲ್ಲಿದ್ದಲಿನ ಹೆಚ್ಚೆಚ್ಚು ಬಳಕೆಯಿಂದ ಕೈಗಾರಿಕಾ ಕ್ರಾಂತಿ ಆರಂಭವಾಯಿತು. ಕಾಲುವೆಗಳು, ಸುಧಾರಿತ ರಸ್ತೆಗಳು ಮತ್ತು ರೈಲ್ವೆಗಳನ್ನು ಚಾಲ್ತಿಗೆ ತಂದಿದ್ದರಿಂದ ಮಾರಾಟ ವಿಸ್ತರಣೆ ಸಾಧ್ಯವಾಯಿತು. ಕಲ್ಲಿದ್ದಲು ಮುಖ್ಯ ಇಂಧನವಾದ ಉಗಿಶಕ್ತಿಪ್ರಾರಂಭ, ಜಲಚಕ್ರಗಳು ಮತ್ತು ಶಕ್ತಿಆಧಾರಿತ ಯಂತ್ರ(ಮುಖ್ಯವಾಗಿ ವಸ್ತ್ರೋದ್ಯಮ ತಯಾರಿಕೆಯಲ್ಲಿ)ಗಳ ವ್ಯಾಪಕ ಬಳಕೆಯಿಂದ ಉತ್ಪಾದನೆ ಸಾಮರ್ಥ್ಯದಲ್ಲಿ ಗಮನಾರ್ಹ ಹೆಚ್ಚಳಕ್ಕೆ ಪುಷ್ಠಿ ನೀಡಿತು. ಸರ್ವ-ಲೋಹದ ಯಂತ್ರೋಪಕರಣಗಳನ್ನು ೧೯ನೇ ಶತಮಾನದ ಮೊದಲ ಎರಡು ದಶಕಗಳಲ್ಲಿ ಅಭಿವೃದ್ಧಿಪಡಿಸಿದ್ದರಿಂದ ಇತರೆ ಕೈಗಾರಿಕೆಗಳಲ್ಲಿ ಉತ್ಪಾದನೆಗೆ ಹೆಚ್ಚು ಉತ್ಪಾದನೆ ಯಂತ್ರಗಳ ತಯಾರಿಕೆಗೆ ಅವಕಾಶ ಒದಗಿಸಿತು. ಪಶ್ಚಿಮ ಯುರೋಪ್ ಮತ್ತು ಉತ್ತರ ಅಮೆರಿಕದಾದ್ಯಂತ ೧೯ನೇ ಶತಮಾನದಲ್ಲಿ ಇದರ ಪ್ರಭಾವಗಳು ವಿಸ್ತರಿಸಿದವು. ತರುವಾಯ ವಿಶ್ವದ ಬಹುಭಾಗದಲ್ಲಿ ಪ್ರಭಾವ ಬೀರಿದ ಈ ಪ್ರಕ್ರಿಯೆಯು ಕೈಗಾರೀಕರಣವೆಂಬ ಹೆಸರಿನೊಂದಿಗೆ ಮುಂದುವರಿಯಿತು. ಕೈಗಾರೀಕರಣದಿಂದ ಸಮಾಜದ ಮೇಲೆ ಉಂಟಾದ ಬದಲಾವಣೆಯ ಪರಿಣಾಮ ಅಗಾಧವಾಗಿತ್ತು.ಪ್ರಥಮ ಕೈಗಾರಿಕೆ ಕ್ರಾಂತಿಯು ೧೮ನೇ ಶತಮಾನದಲ್ಲಿ ಪ್ರಾರಂಭವಾಗಿ ೧೮೫೦ರ ಆಸುಪಾಸಿನಲ್ಲಿ ಎರಡನೇ ಹಂತದ ಕೈಗಾರಿಕಾ ಕ್ರಾಂತಿಯ ಜತೆ ವಿಲೀನಗೊಂಡಿತು. ಆ ಸಂದರ್ಭದಲ್ಲಿ ಉಗಿ-ಶಕ್ತಿ ಚಾಲಿತ ಹಡಗುಗಳು, ರೈಲ್ವೆಗಳ ಅಭಿವೃದ್ಧಿಯಿಂದ ಮತ್ತು ನಂತರ ೧೯ನೇ ಶತಮಾನದಲ್ಲಿ ಆಂತರಿಕ ದಹನ ಯಂತ್ರ ಮತ್ತು ವಿದ್ಯುಚ್ಛಕ್ತಿ ಉತ್ಪಾದನೆಯೊಂದಿಗೆ ತಾಂತ್ರಿಕ ಮತ್ತು ಆರ್ಥಿಕ ಪ್ರಗತಿ ವೇಗದ ಗತಿ ಪಡೆದುಕೊಂಡಿತು.

ಕೈಗಾರಿಕಾ ಕ್ರಾಂತಿ ಆವರಿಸಿದ ಕಾಲಾವಧಿಯನ್ನು ವಿವಿಧ ಇತಿಹಾಸಕಾರರು ಭಿನ್ನವಾಗಿ ಗುರುತಿಸಿದ್ದಾರೆ. ಬ್ರಿಟನ್‌ನಲ್ಲಿ ೧೭೮೦ರ ದಶಕದಲ್ಲಿ ಇದು "ಹೊರಹೊಮ್ಮಿತು" ಮತ್ತು ೧೮೩೦ರ ದಶಕ ಅಥವಾ ೧೮೪೦ರ ದಶಕದವರೆಗೆ ಅದರ ಅನುಭವ ಸಂಪೂರ್ಣ ತಟ್ಟಲಿಲ್ಲ ಎಂದು ಇತಿಹಾಸಕಾರ ಎರಿಕ್ ಹಾಬ್ಸ್‌ಬಾಮ್ ಹೇಳಿದ್ದಾರೆ. ಅದು ೧೭೬೦ ಮತ್ತು ೧೮೩೦ರ ಆಸುಪಾಸಿನಲ್ಲಿ ಸಂಭವಿಸಿತು ಎಂದು T.S.ಆಶ್‌ಟನ್ ಹೇಳಿದ್ದಾರೆ.

ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಯ ಪ್ರಕ್ರಿಯೆ ಕ್ರಮೇಣ ಸಂಭವಿಸಿತು ಮತ್ತು ಕ್ರಾಂತಿ ಎಂಬ ಪದವು ಈ ವಿದ್ಯಮಾನದ ನೈಜ ವಿವರಣೆಯಲ್ಲ ಎಂದು ೨೦ನೇ ಶತಮಾನದ ಇತಿಹಾಸಕಾರರಾದ ಜಾನ್ ಕ್ಲಾಪ್‌ಹ್ಯಾಮ್ ಮತ್ತು ನಿಕೋಲಾಸ್ ಕ್ರಾಫ್ಟ್ಸ್ ವಾದಿಸಿದ್ದಾರೆ. ಇತಿಹಾಸಕಾರರ ನಡುವೆ ಇದು ಇನ್ನೂ ಚರ್ಚಾಸ್ಪದ ವಸ್ತುವಾಗಿ ಉಳಿದಿದೆ. ಕೈಗಾರಿಕಾ ಕ್ರಾಂತಿ ಮತ್ತು ಆಧುನಿಕ ಬಂಡವಾಳಶಾಹಿ ಅರ್ಥವ್ಯವಸ್ಥೆ ಹೊರಹೊಮ್ಮುವುದಕ್ಕೆ ಮುಂಚಿತವಾಗಿ GDP ತಲಾದಾಯವು ಸ್ಥಿರವಾಗಿತ್ತು. ಕೈಗಾರಿಕಾ ಕ್ರಾಂತಿಯಿಂದ ಬಂಡವಾಳಶಾಹಿ ಅರ್ಥಿಕತೆಗಳಲ್ಲಿ ತಲಾದಾಯದ ಆರ್ಥಿಕ ಪ್ರಗತಿ ಶಕೆ ಪ್ರಾರಂಭವಾಯಿತು. ಕೈಗಾರಿಕಾ ಕ್ರಾಂತಿಯು ಇತಿಹಾಸದ ಅತೀ ಮುಖ್ಯ ವಿದ್ಯಮಾನಗಳಲ್ಲಿ ಒಂದೆಂದು ಇತಿಹಾಸಕಾರರು ಒಪ್ಪಿದ್ದಾರೆ.

ಕೋಶ

ಕೋಶವೆಂದರೆ ನಿಘಂಟು. ಶಬ್ದಗಳನ್ನು ಆಕಾರಾದಿಯಾಗಿ ವಿಂಗಡಿಸಿ ಅವುಗಳ ಅರ್ಥವನ್ನು ಹೇಳಿದಲ್ಲಿ ಅದು ಕೋಶವೆನಿಸುತ್ತದೆ. ಇಂಥ ಕೋಶಗಳನ್ನು ಸಿದ್ಧಪಡಿಸುವ ಶಾಸ್ತ್ರವನ್ನು ಕೋಶವಿಜ್ಞಾನವೆನ್ನುತ್ತೇವೆ. (ಲೆಕ್ಸಿಕಾಗ್ರಫಿ).

ಭಾಷೆ ಮೊದಲು, ಅನಂತರ ವ್ಯಾಕರಣ. ಹಾಗೆಯೇ ಭಾಷೆ ಮೊದಲು, ಅನಂತರ ಕೋಶ. ಭಾಷೆ ಇನ್ನೂ ಶೈಶವಾವಸ್ಥೆಯಲ್ಲಿದ್ದು ಲಿಪಿ ಬಳಕೆಗೆ ಬಾರದಿದ್ದಾಗ ವ್ಯಾಕರಣ ಹಾಗೂ ಕೋಶಗಳ ಅಗತ್ಯ ಅಷ್ಟಾಗಿ ಇರಲಿಲ್ಲವೆಂದು ತೋರುತ್ತದೆ. ಭಾಷೆ ಬೆಳೆದಂತೆಲ್ಲ ಕಾಲ ಮತ್ತು ದೇಶಗಳ ವ್ಯತ್ಯಾಸದಿಂದಾಗಿ ಉಚ್ಚಾರಣೆ ಮತ್ತು ಪ್ರಯೋಗಗಳಲ್ಲಿ ಹಾಗೂ ಶಬ್ದಾರ್ಥ ವಿಚಾರದಲ್ಲಿ ಏಕರೂಪತೆ ಕಡಿಮೆಯಾಯಿತಾಗಿ ಭಾಷೆಗೊಂದು ವ್ಯಾಕರಣ, ಒಂದು ಕೋಶ ಅಗತ್ಯವೆನಿಸುತ್ತ ಬಂದಿರಬೇಕು. ಆಡಿದ ಮಾತು, ಬರೆದ ವಿಷಯ ಸ್ಪಷ್ಟವಾಗಬೇಕಾದರೆ ನಮ್ಮ ಭಾಷೆ ಶುದ್ಧವಾಗಿ, ವ್ಯಾಕರಣಬದ್ಧವಾಗಿರಬೇಕಲ್ಲದೆ ಮಾತಿನಲ್ಲಿನ ಪ್ರತಿಯೊಂದು ಶಬ್ದಕ್ಕೂ ಖಚಿತವಾದ ಅರ್ಥವಿರಬೇಕು. ಒಂದೇ ಶಬ್ದವನ್ನು ನಾಲ್ಕು ಜನ ನಾಲ್ಕು ಅರ್ಥದಲ್ಲಿ ಬಳಸಿದಾಗ, ಒಂದೇ ಪದವನ್ನು ಒಬ್ಬನೇ ಒಂದು ಬರೆಹದಲ್ಲಿ ನಾಲ್ಕು ಅರ್ಥಗಳಲ್ಲಿ ಬಳಸಿದಾಗ ಅಭಿಪ್ರಾಯ ಸಂಧಿಗ್ಧವಾಗುತ್ತದೆ. ಜೊತೆಗೆ ಶಬ್ದದ ಕಾಗುಣಿತ ಕೂಡ. ಯಾವ ಖಚಿತ ಆಧಾರಗಳೂ ಇಲ್ಲದಾಗ, ವ್ಯಕ್ತಿಯಿಂದ ವ್ಯಕ್ತಿಗೆ, ಸನ್ನಿವೇಶದಿಂದ ಸನ್ನಿವೇಶಕ್ಕೆ ಬದಲಾಗುವ ಸಾಧ್ಯತೆ ಉಂಟು. ಹೀಗಾಗಿ ಒಂದು ಭಾಷೆಯಲ್ಲಿ ಕ್ರಮೇಣ ಶಿಷ್ಯರೂಪಗಳು, ವ್ಯಾವಹಾರಿಕ ರೂಪಗಳು ಮತ್ತು ಗ್ರಾಮ್ಯರೂಪಗಳು-ಎಂದು ಶಬ್ದಗಳಿಗೆ ಮೂರು ರೂಪಗಳು ಏರ್ಪಡುತ್ತವೆ. ಇಂಥ ಕಷ್ಟಗಳನ್ನು ನಿವಾರಿಸಲು ಪ್ರತಿಯೊಂದು ಭಾಷೆಗೂ ಸರಿಯಾದ ಒಂದು ವ್ಯಾಕರಣ ಮತ್ತು ಒಂದು ಕೋಶ ಅಗತ್ಯವೆನಿಸುತ್ತದೆ. ಈ ಎರಡೂ ಭಾಷಾಶಾಸ್ತ್ರದ ಪ್ರಮುಖ ಅಂಗಗಳಾಗಿವೆ.

ಭಾಷಾವಿಜ್ಞಾನ ಕ್ಷೇತ್ರದಲ್ಲಿ ಕೋಶನಿರ್ಮಾಣ ಕಾರ್ಯ ಬಹು ಹಿಂದಿನ ಕಾಲದಿಂದಲೂ ನಡೆದು ಬಂದಿದೆ. ಪ್ರಪ್ರಥಮ ಕೋಶ ಕಾಣಿಸಿಕೊಂಡಿದ್ದು ಭರತಖಂಡದಲ್ಲಿ. ಸುಮಾರು ಕ್ರಿ.ಪೂ.1000ಕ್ಕಿಂತ ಹಿಂದೆಯೇ ಭಾರತದಲ್ಲಿ ನಿಘಂಟುಗಳು ರಚನೆಯಾಗಿರಬಹುದೆಂದು ಕೆಲವು ವಿದ್ವಾಂಸರ ಅಭಿಪ್ರಾಯ. ಪಾಣಿನಿಗಿಂತಲ್ಲೂ ಬಹು ಹಿಂದೆ ಯಾಸ್ಕಮಹಾಮುನಿ ಮುಂತಾದ ಭಾರತೀಯ ಪಂಡಿತರು ಅನೇಕ ನಿಘಂಟುಗಳನ್ನು ತಯಾರಿಸಿದ್ದರೆಂದು ತಿಳಿಯಬಂದಿದೆ. ಅವುಗಳಲ್ಲಿ ಉಪಲಬ್ಧವಿರುವ ನಿಘಂಟುಗಳು ಕಡಿಮೆ. ಪಾಣಿನಿಯ ವ್ಯಾಕರಣಗ್ರಂಥ ಹೊರಬರುವ ಹೊತ್ತಿಗಾಗಲೇ ಹಲವಾರು ನಿಘಂಟುಗಳು ಇದ್ದುವೆಂದು ಊಹಿಸಲಾಗಿದೆ. ಆಮೇಲೆ ಗ್ರೀಕ್, ಲ್ಯಾಟಿನ್ ಮುಂತಾದ ಭಾಷೆಗಳಲ್ಲಿ ಅಂದರೆ ಕ್ರಿ.ಶ. 8, 9, 10ನೆಯ ಶತಮಾನಗಳಲ್ಲಿ ವ್ಯಾಕರಣ ಮತ್ತು ನಿಘಂಟುಗಳ ರಚನಾಕಾರ್ಯ ಪಾಣಿನಿ ಮತ್ತು ಯಾಸ್ಕ ಮಹಾಮುನಿಗಳ ವ್ಯಾಕರಣ ಮತ್ತು ನಿಘಂಟುಗಳ ಮಾದರಿಯಲ್ಲಿಯೇ ನಡೆದಿರುವುದು ಕಂಡುಬರುತ್ತದೆ. ಅಂತು ಯೂರೋಪಿನಲ್ಲಿ ಯಾವ ಭಾಷೆಯಲ್ಲಿಯೂ ಸುಮಾರು ಕ್ರಿ.ಪೂ.1000ಕ್ಕಿಂತ ಹಿಂದೆ ಯಾವ ವ್ಯಾಕರಣ ಹಾಗೂ ನಿಘಂಟು ರಚಿತವಾಗಿಲ್ಲವೆನ್ನುವುದು ಖಚಿತ. ಇಂಗ್ಲಿಷ್ ಭಾಷೆಯಲ್ಲಿ ಕೋಶ ನಿರ್ಮಾಣಕಾರ್ಯ ಸುಮಾರು 15 ಮತ್ತು 16ನೆಯ ಶತಮಾನಗಳಿಂದೀಚೆಗೆ ಪ್ರಾರಂಭವಾಯಿತು. ಆದರೆ ಇಪ್ಪತ್ತನೆಯ ಶತಮಾನದ ಮೊದಲು ಐವತ್ತು ಆರುವತ್ತು ವರ್ಷಗಳಲ್ಲಿ ಪಾಶ್ಚಾತ್ಯರು ಕೋಶ ನಿರ್ಮಾಣಕಾರ್ಯದಲ್ಲಿ ಅಗ್ರಗಣ್ಯರೆನಿಸಿಕೊಂಡಿದ್ದಾರೆ.

ಕೋಶಗಳನ್ನು ಪುಸ್ತಕಕೋಶ, ವ್ಯಕ್ತಿಕೋಶ ಮತ್ತು ಭಾಷಾಕೋಶ ಎಂದು ಮೂರು ವರ್ಗಗಳಲ್ಲಿ ವಿಂಗಡಿಸಬಹದು. ವೇದ, ಪುರಾಣ, ಮಹಾಭಾರತ, ರಾಮಾಯಣ ಮುಂತಾದ ಬೇರೆ ಬೇರೆ ಪೌರಾಣಿಕ ಗ್ರಂಥಗಳನ್ನು ಆಧಾರವಾಗಿರಿಸಿಕೊಂಡು ಅವುಗಳಲ್ಲಿನ ಕ್ಲಿಷ್ಟ ಪದಗಳನ್ನು ಸಂಗ್ರಹಿಸಿ ಅರ್ಥೈಸಿದಲ್ಲಿ ಪುಸ್ತಕಕೋಶ ಅಥವಾ ಗ್ರಂಥಸ್ಥ ಕೋಶವಾಗುತ್ತದೆ. ಒಬ್ಬ ವ್ಯಕ್ತಿಯಿಂದಲೇ ನಿರ್ಮಿತವಾದ ಎಲ್ಲಾ ಸಾಹಿತ್ಯಿಕ ಗ್ರಂಥಗಳನ್ನು ಆಧಾರವಾಗಿರಿಸಿಕೊಂಡು ಅವುಗಳಲ್ಲಿನ ಕ್ಲಿಷ್ಟಪದಗಳನ್ನು ಸಂಗ್ರಹಿಸಿ ಅರ್ಥೈಸಿದಲ್ಲಿ ವ್ಯಕ್ತಿಕೋಶವಾಗುತ್ತದೆ. ಪಂಪ, ರನ್ನ, ಶೆಲ್ಲಿ, ಷೇಕ್ಸ್‍ಪಿಯರ್, ಮಿಲ್ಟನ್, ಕಾಳಿದಾಸ ಮುಂತಾದ ವ್ಯಕ್ತಿಗಳ ಸಾಹಿತ್ಯಸಂಬಂಧಿ ಕೋಶ ಈ ವರ್ಗಕ್ಕೆ ಸೇರುತ್ತದೆ. ಭಾಷಾಕೋಶಗಳಲ್ಲಿ ವಿವಿಧ ರೀತಿಯ ಕೋಶಗಳು ಉಂಟು. ಒಂದೇ ಭಾಷೆಗೆ ಸಂಬಂಧಿಸಿದ ಪದಗಳನ್ನು ಸಂಗ್ರಹಿಸಿ ಅವುಗಳಿಗೆ ಅದೇ ಭಾಷೆಯ ಸರಳ ಅರ್ಥ ನೀಡಿ ಕೋಶವನ್ನು ತಯಾರಿಸಬಹುದು. ಉದಾಹರಣೆ-ಕನ್ನಡ-ಕನ್ನಡ ಕೋಶ. ಒಂದು ಭಾಷೆಯ ಶಬ್ದಗಳಿಗೆ ಬೇರೆ ಭಾಷೆಯಲ್ಲಿ ಅರ್ಥನೀಡಿದಲ್ಲಿ ಅದೊಂದು ಬಗೆಯ ಕೋಶವಾಗುತ್ತದೆ. ಕನ್ನಡ-ಇಂಗ್ಲಿಷ್, ಕನ್ನಡ-ಹಿಂದೀ, ಕನ್ನಡ-ಮರಾಠಿ, ಇಂಗ್ಲಿಷ್-ತೆಲುಗು ಕೋಶಗಳು ಇದಕ್ಕೆ ನಿರ್ದಶನಗಳು. ಕೆಲವು ಭಾಷಾಕೋಶಗಳು ಇದೇ ರೀತಿ ಎರಡು ಮತ್ತು ಎರಡಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ಅರ್ಥನೀಡುತ್ತವೆ. ಇವನ್ನೇ ಕ್ರಮವಾಗಿ ಏಕಭಾಷಿಕಕೋಶ, ದ್ವಿಭಾಷಿಕ ಕೋಶ ಮತ್ತು ಬಹುಭಾಷಿಕ ಕೋಶ ಎಂತಲೂ ಕರೆಯುವುದಿದೆ.

ಕೋಶವನ್ನು ಶಾಸ್ತ್ರೀಯವಾಗಿ ಇನ್ನೂ ಮೂರು ವರ್ಗಗಳಲ್ಲಿ ವಿಂಗಡಿಸಬಹುದು. ಅವೇ ವಿವರಣಾತ್ಮಕ ಕೋಶ, ಐತಿಹಾಸಿಕಕೋಶ ಮತ್ತು ತೌಲನಾತ್ಮಕ ಕೋಶಗಳು. ಇಲ್ಲಿ ಕೆಲವು ರೀತಿಯ ಕೋಶಗಳು ಏಕಭಾಷಿಕವಾಗಿಯೂ ದ್ವಿಭಾಷಿಕ ಮತ್ತು ಬಹುಭಾಷಿಕವಾಗಿಯೂ ದೊರೆಯುತ್ತವೆ.

ಯಾವ ಒಂದು ಭಾಷೆಯಲ್ಲಿ ದೊರೆಯಬಹುದಾದ ಸಾಹಿತ್ಯಿಕ ಗ್ರಂಥಗಳನ್ನು ಆಧಾರವಾಗಿರಿಸಿಕೊಂಡು ಅಲ್ಲಿ ಸಿಗುವ ಎಲ್ಲ ಶಬ್ದಗಳನ್ನೂ ಅವುಗಳ ಪರಿಸರದೊಂದಿಗೇ ಎತ್ತಿಕೊಂಡು ಸಂಗ್ರಹಿಸಿ ಅವುಗಳ ಅರ್ಥ ಮತ್ತು ವ್ಯಾಕರಣ ವಿಶೇಷಗಳನ್ನು ಗಮನಿಸಿ, ವಿವರಿಸಿ ತಯಾರಿಸಿದ ಕೋಶವೇ ವಿವರಣಾತ್ಮಕ ಕೋಶ. ಕನ್ನಡ-ಕನ್ನಡ ಕೋಶ ಮತ್ತು ಬೃಹದ್ ಹಿಂದೀಕೋಶ ಈ ವರ್ಗಕ್ಕೆ ಸೇರುತ್ತವೆ. ಕೇವಲ ಆಡುಮಾತಿಗೂ ಇಂಥ ಒಂದು ಕೋಶವನ್ನು ಸಿದ್ಧಪಡಿಸಬಹುದು.

ಐತಿಹಾಸಿಕ ಕೋಶದಲ್ಲಿ ಪದದ ಉಗಮ ಮತ್ತು ವಿಕಾಸದ ಎಲ್ಲ ಹಂತಗಳ ಪೂರ್ಣ ವಿವರಗಳನ್ನು ಕಾಣಬಹುದು. ಪದದ ರೂಪದಲ್ಲೂ ಅರ್ಥದಲ್ಲೂ ಆಗಿರುವ ವ್ಯತ್ಯಾಸಗಳ ಕ್ರಮಶಃ ವಿವರ ಇಲ್ಲಿ ಸಿಗುತ್ತದೆ. ಇಂಥ ಕೋಶಗಳು ಭಾರತೀಯ ಭಾಷೆಗಳಲ್ಲಿ ತೀರ ಕಡಿಮೆ. ಇಂಗ್ಲಿಷ್ ಭಾಷೆಯಲ್ಲಿ ಈ ಪ್ರಯತ್ನ ನಡೆದು ಆಕ್ಸ್‍ಫರ್ಡ್ ಇಂಗ್ಲಿಷ್ ಕೋಶ ತಯಾರಾಯಿತು. ಕನ್ನಡದಲ್ಲಿ ಇಂಥ ಒಂದು ಕೋಶ ಸಿದ್ಧವಾಗುತ್ತಿದೆ. ಈ ಎರಡು ನಿಘಂಟುಗಳ ಬಗ್ಗೆಯೂ ಈ ಲೇಖನದ ಕೊನೆಯಲ್ಲಿ ಹೆಚ್ಚಿನ ವಿವರಗಳನ್ನು ಕೊಟ್ಟಿದೆ. ಈಚೆಗೆ ಒಟ್ಟೊ ಯಸ್‍ಪರಸನ್ ಇಂಗ್ಲಿಷ್ ಭಾಷೆಯಲ್ಲಿ ಹೊಸದೊಂದು ಐತಿಹಾಸಿಕ ಕೋಶವನ್ನು ತಯಾರಿಸುವ ಯತ್ನ ನಡೆಸಿದ್ದಾನೆ. ತೌಲನಾತ್ಮಕ ಕೋಶ ಬಹುಭಾಷಾವರ್ಗಕ್ಕೆ ಸೇರಿದ್ದು. ಒಂದೇ ಭಾಷೆಗೆ ಸಂಬಂಧಿಸಿದ ಎಲ್ಲ ಜ್ಞಾತಿಭಾಷೆಗಳನ್ನೂ ಆಧಾರವಾಗಿರಿಸಿ ಕೊಂಡು ಅವುಗಳಿಂದ ಸಾಮಗ್ರಿಯನ್ನು ಸಂಗ್ರಹಿಸಿ ತಯಾರಿಸಬೇಕಾದ ಕೋಶವಿದು. ದ್ರಾವಿಡಭಾಷೆಗಳ ವ್ಯುತ್ಪತ್ತಿಕೋಶ ಈ ವರ್ಗಕ್ಕೆ ಸೇರುತ್ತದೆ.

ವಿಶ್ವಕೋಶ, ಪಾರಿಭಾಷಿಕ ಪದಕೋಶ, ವೃತ್ತಪದಕೋಶ, ಪರ್ಯಾಯ ಪದ ಕೋಶ, ಗಾದೆಗಳಕೋಶ, ಭಾಷೆಗಳ ಕೋಶ, ಜಾನಪದ ಕೋಶ, ಜಾನಪದ ವಸ್ತು ಕೋಶ, ಕಥಾಕೋಶ, ಸಾಹಿತ್ಯಕೋಶ, ಉದ್ಧರಣಕೋಶ, ವಸ್ತುಕೋಶ, ವ್ಯಕ್ತಿನಾಮಗಳ ಕೋಶ ಮತ್ತು ಸ್ಥಾನಗಳ ಕೋಶ, ವಿವಿಧ ವಿಷಯಗಳ ವಿಶ್ವಕೋಶ-ಹೀಗೆ ಇನ್ನೂ ಅನೇಕ ಬಗೆಬಗೆಯ ಕೋಶಗಳೂ ಉಂಟು. ವಿಶ್ವಕೋಶಗಳು ಕೇವಲ ಪದಕೋಶಗಳಲ್ಲ. ಅವು ಅಭಿಪ್ರಾಯಕೋಶಗಳು. ಪದಕೋಶಕ್ಕಿಂತ ಹೆಚ್ಚಿನ ವಿವರಗಳು ಅಲ್ಲಿ ಸಿಗುತ್ತವೆ. (ನೋಡಿ- ವಿಶ್ವಕೋಶ) ಈ ಸರಣಿಯಲ್ಲಿ ಬಂದಿರುವ ಇತರ ಕೋಶಗಳು ಆಯಾ ವಿಷಯಕ್ಕೆ ಸೀಮಿತವಾದವೇ ಆಗಿವೆ. ಆದರೆ ಪದಕೋಶದಲ್ಲಿ ಹೆಚ್ಚಿನ ವಿವರಗಳು ಇರಬೇಕಾಗಿಲ್ಲವಾದರೂ ಪದ, ಪದಾರ್ಥಗಳ ವಿಷಯ ಬಂದಾಗ ಸಾಧ್ಯವಾದ ಕಡೆಗಳಲ್ಲೆಲ್ಲ ಅವುಗಳ ಗುಣಲಕ್ಷಣಗಳನ್ನು ಕಡ್ಡಾಯವಾಗಿ ಹೇಳಿದರೆ ಒಳ್ಳೆಯದು. ಈ ಕೆಲಸವನ್ನು ವೆಬ್ಸ್‍ಟರ್ಸ್ ನ್ಯೂ ಇಂಟರ್‍ನ್ಯಾಷನಲ್ ಡಿಕ್ಷನರಿ ಆಫ್ ದಿ ಇಂಗ್ಲಿಷ್ ಲ್ಯಾಂಗ್ವೇಜ್ ಎಂಬ ಇಂಗ್ಲಿಷ್ ಕೋಶ ಸಮರ್ಪಕವಾಗಿ ನಿರ್ವಹಿಸಿದೆ. ಈ ನಿಘಂಟಿನ ಬಗೆಗೂ ಹೆಚ್ಚಿನ ವಿವರಗಳು ಈ ಲೇಖನದ ಉತ್ತರಾರ್ಧದಲ್ಲಿವೆ.

ಕೋಶ ನಿರ್ಮಾಣ ಕಾರ್ಯ ಕಷ್ಟಸಾಧ್ಯವಾದುದು. ಸಾಮಾನ್ಯವಾಗಿ ಅದು ಯಾವ ಒಬ್ಬ ವ್ಯಕ್ತಿಯಿಂದಲೂ ಆಗಲಾರದಂಥ ದೊಡ್ಡ ಕೆಲಸ. ಸ್ಯಾಮ್ಯುಯಲ್ ಜಾನ್‍ಸನ್ನನಂಥ ಒಬ್ಬ ಏಕಾಂಗಿಯಾಗಿ ಬೃಹತ್ ಪ್ರಮಾಣದ ನಿಘಂಟೊಂದನ್ನು ಸಿದ್ಧಪಡಿಸಿರಬಹುದು. ಆದರೆ ಪ್ರತಿಯೊಂದು ದೊಡ್ಡ ಕೋಶ ನಿರ್ಮಾಣವಾಗುವಾಗಲೂ ನೂರಾರು ವಿದ್ವಾಂಸರ ನೆರವು ಅಗತ್ಯವಾಗುತ್ತದೆ. ಒಂದು ಪದದ ಅರ್ಥ ನಿರ್ಣೈಸುವಲ್ಲಿ ಉಪಲಬ್ಧವಿರುವ ಎಲ್ಲ ಪ್ರಮುಖ ಗ್ರಂಥಗಳಿಂದಲೂ ಆ ಪದ ಬಳಕೆಯಾಗಿರುವ ವಾಕ್ಯಗಳನ್ನು ಎತ್ತಿ ಪಟ್ಟಿಮಾಡಬೇಕಾಗುತ್ತದೆ. ಹಳೆಯ ಹೊಸ ಗ್ರಂಥಗಳೆಲ್ಲದರಿಂದಲೂ ಇಂಥ ಉದ್ಧರಣ ಕಾರ್ಯ ನಡೆಯಬೇಕಾಗುತ್ತದೆ. ಅಲ್ಲದೆ ಬಳಕೆಯಲ್ಲಿ ಆ ಪದ ಇದ್ದಲ್ಲಿ ಈಗ ಅದರ ಉಚ್ಚಾರಣೆ ಏನು, ಅರ್ಥ ಹೇಗೆ, ಪ್ರಾಂತ್ಯ ಪ್ರಾಂತ್ಯಕ್ಕೂ ಏನಾದರೂ ವ್ಯತ್ಯಾಸಗಳು ಕಂಡುಬರುತ್ತವೆಯೇ-ಎಂಬ ಅಂಶಗಳನ್ನು ಪರಿಶೀಲಿಸಿ, ಒಂದು ಪದದ ಅರ್ಥವನ್ನು ನಿರ್ಣಯಿಸಬೇಕಾಗುತ್ತದೆ. ಬರೆವಣಿಗೆಗೂ ಉಚ್ಚಾರಣೆಗೂ ವ್ಯತ್ಯಾಸವಿಲ್ಲದ ಭಾರತೀಯ ಭಾಷೆಗಳಲ್ಲಿ ಉಚ್ಚಾರಣ ಚಿಹ್ನಗಳ ಅಗತ್ಯ ಕಾಣದು. ಬರೆವಣಿಗೆ ಒಂದು ರೀತಿ ಇದ್ದು ಉಚ್ಚಾರಣೆ ಬೇರೆಯಾಗಿರುವ ಇಂಗ್ಲಿಷ್‍ನಂಥ ಭಾಷೆಯ ನಿಘಂಟನ್ನು ತಯಾರಿಸುವಾಗ ಶಬ್ದರೂಪವನ್ನೂ ಕೊಡುವುದರೊಂದಿಗೆ ಉಚ್ಚಾರಣಾ ರೂಪವನ್ನೂ ತಿಳಿಸಬೇಕಾಗುತ್ತದೆ. ವೆಬ್ಸ್‍ಟರ್, ರ್ಯಾಂಡಮ್ ಹೌಸ್ ಕೋಶಗಳು ಈ ಕೆಲಸವನ್ನು ಮಾಡಿವೆ. ಡೇನಿಯಲ್ ಜೋನ್ಸ್ ಎಂಬ ವಿದ್ವಾಂಸ ಉಚ್ಚಾರಣಾ ವ್ಯವಸ್ಥೆಯನ್ನು ತಿಳಿಸುವುದಕ್ಕಾಗಿಯೇ ಎವ್ವೆರಿಮ್ಯಾನ್ಸ್ ಇಂಗ್ಲಿಷ್ ಪ್ರನೌನ್ಸಿಂಗ್ ಡಿಕ್ಷನರಿ ಎಂಬ ಕೋಶ ಒಂದನ್ನು ತಯಾರಿಸಿದ್ದಾನೆ. ಅದರಲ್ಲಿ 58,000 ಪದಗಳಿಗೆ ಅಂತರರಾಷ್ಟ್ರೀಯ ಉಚ್ಚಾರಣಾ ಚಿಹ್ನೆಗಳನ್ನು ಬಳಸಿ ಉಚ್ಚಾರಣೆಗಳನ್ನು ಕೊಡಲಾಗಿದೆ.

ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟು: ಇಂಗ್ಲಿಷ್ ಶಬ್ದಸಾಗರಕ್ಕೆ ಈಗಿರುವ ಕೆಲವೇ ಪರಮ ಪ್ರಮಾಣ ಅರ್ಥಕೋಶಗಳಲ್ಲೊಂದು. ಫಿಲಲಾಜಿಕಲ್ ಸೊಸೈಟಿಯವರು 1857ರಲ್ಲೇ ಪ್ರಾರಂಭಿಸಿ ದಿ ನ್ಯೂ ಇಂಗ್ಲಿಷ್ ಡಿಕ್ಷನರಿ ಎಂಬ ಹೆಸರಿನಲ್ಲಿ ಹತ್ತು ಸಂಪುಟಗಳಲ್ಲಿ ಪ್ರಕಟಿಸಿದ (1928) ನಿಘಂಟೇ 1895ರಿಂದ ಈಚೆ ಆಕ್ಸ್‍ಫಡ್ ಇಂಗ್ಲಿಷ್ ಡಿಕ್ಷನರಿ ಎಂಬ ಹೆಸರಿನಿಂದ ಪ್ರಚಲಿತವಾಯಿತು. ಮೊದಲು ಇದು ಹತ್ತು ಸಂಪುಟಗಳಲ್ಲಿ ವಿಸ್ತರಣೆಗೊಂಡು ಪ್ರಕಟವಾಯಿತಲ್ಲದೆ ಹದಿಮೂರನೆಯ ಸಂಪುಟ ಮೊದಲ ಹನ್ನೆರಡು ಸಂಪುಟಗಳಿಗೆ ಪರಿಶಿಷ್ಟವಾಗಿ ಹೊರಬಂತು. ಜೆ.ಎ.ವಿಚ್. ಮರೀ, ಹೆನ್ರಿ ಬ್ರ್ಯಾಡ್ಲೀ, ವಿಲಿಯಂ ಅಲೆಕ್ಸಾಂಡರ್ ಕ್ರೇಗೀ ಮತ್ತು ಚಾರ್ಲ್‍ಸ್ ಟಾಲ್‍ಬಾಟ್ ಅನ್ಯನ್ಸ್-ಇವರು ಇದರ ಪ್ರಧಾನ ಸಂಪಾದಕರು. ಈ ನಿಘಂಟಿನ ನಿರ್ಮಾಣಕಾರ್ಯ, ವ್ಯಾಪ್ತಿ ಇತ್ಯಾದಿಗಳ ಬಗ್ಗೆ ಇಲ್ಲಿ ಕೆಲವು ವಿಷಯಗಳನ್ನು ಸಂಗ್ರಹಿಸಲಾಗಿದೆ.

ಸಮಗ್ರ ಕೋಶದ ಒಟ್ಟು ಪುಟಗಳು ಹದಿನೈದುಸಾವಿರಕ್ಕೂ ಹೆಚ್ಚು. ಒಂದೊಂದು ಪುಟದಲ್ಲೂ ಸರಾಸರಿ 112 ಪಂಕ್ತಿಗಳ ಮೂರು ಅಂಕಣಗಳಿವೆ. ಇವುಗಳಲ್ಲಿ ಒಟ್ಟು ಐದು ಕೋಟಿ ಪದಗಳು ಅಡಕವಾಗಿವೆ. ಮುಖ್ಯ ಕೃತಿಯಲ್ಲಿ ಪ್ರತಿಪಾದಿಸಿರುವ ಶಬ್ದಗಳ ಮತ್ತು ಸಮಾಸಗಳ ಒಟ್ಟು ಸಂಖ್ಯೆ 4,14,825. ಇವುಗಳ ಪ್ರಯೋಗವನ್ನು ತೋರಿಸುವ ಕೊಟ್ಟಿರುವ ಉದಾಹರಣೆಗಳು 18,27,306. ಪುಟದ ಅಂದ ಕೆಡದಂತೆ, ಒಂದೊಂದು ಅಂಶಕ್ಕೂ ಉಚಿತವಾದ ಪ್ರಾಮುಖ್ಯ ಬರುವಂತೆ, ಆದಷ್ಟು ಕಡಿಮೆ ಜಾಗದಲ್ಲಿ ಅಡಕವಾಗುವಂತೆ, ಸಂಯೋಜಿಸಿ ಅಚ್ಚುಹಾಕಬೇಕಾದರೆ ಮುದ್ರಣಾಲಯದವರು ಮೂವತ್ತು ಬಗೆಯ ಅಕ್ಷರದ ಅಚ್ಚುಗಳನ್ನು ಉಪಯೋಗಿಸಿದ್ದಾರೆ. ಇಲ್ಲಿ ಅಚ್ಚಾಗಿರುವ ಅಕ್ಷರದ ಮೊಳೆಗಳನ್ನು ಒಂದರ ಮಗ್ಗುಲಲ್ಲಿ ಒಂದರಂತೆ ಜೋಡಿಸುತ್ತಾ ಹೋದರೆ 178 ಮೈಲಿ ಉದ್ದವಾಗುತ್ತದಂತೆ. 1933ರಲ್ಲಿ ಪ್ರಕಟವಾದಾಗ ಇದರ ಬೆಲೆ 315 ರೂ. ಒಟ್ಟು ಗ್ರಂಥದ ನಿರ್ಮಾಣದ ವೆಚ್ಚ 40 ಲಕ್ಷ ರೂ. ಆರನೆಯ ಸಂಪುಟದ ಮುದ್ರಣಕ್ಕಾಗಿ ಬಂದ ಐದುಸಾವಿರ ಪೌಂಡುಗಳ ದತ್ತಿಯೊಂದನ್ನು ಬಿಟ್ಟರೆ ಸಮಗ್ರ ವೆಚ್ಚವನ್ನು ಭರಿಸಿದ ಭಗೀರಥರು ಆಕ್ಸ್‍ಫರ್ಡ್ ಯೂನಿವರ್ಸಿಟಿ ಪ್ರೆಸ್ಸಿನವರು. ಈ ಕೋಶದ ಮುದ್ರಣ ಹಾಗೂ ಪ್ರಕಾಶನ ಅವರದೇ.

ಕೋಶದ ರಚನೆಯನ್ನು ಕುರಿತು ಅವತರಣಿಕೆಯಲ್ಲಿ ಹೀಗೆ ಹೇಳಿದೆ: ಈ ನಿಘಂಟಿನ ಉದ್ದೇಶವೇನೆಂದರೆ-ಈಗ ಬಳಕೆಯಲ್ಲಿರುವ ಮತ್ತು ಕಳೆದ ಏಳುನೂರು ವರ್ಷಗಳಲ್ಲಿ ಎಂದಾದರೂ ಬಳಕೆಯಲ್ಲಿತ್ತೆಂದು ತಿಳಿದುಬಂದಿರುವ ಇಂಗ್ಲಿಷ್ ಶಬ್ದಗಳ ಅರ್ಥ, ಮೂಲ, ಚರಿತ್ರೆಗಳನ್ನು ಪರ್ಯಾಪ್ತವಾಗುವಂತೆ ನಿರೂಪಿಸುವುದು. ಇಲ್ಲಿಯ ಪ್ರಯತ್ನವೆಂದರೆ-1 ಪ್ರತಿಯೊಂದು ಶಬ್ದದ ವಿಷಯದಲ್ಲೂ ಅದು ಎಂದು, ಹೇಗೆ, ಯಾವ ರೂಪದಲ್ಲಿ ಯಾವ ಅರ್ಥದೊಂದಿಗೆ ಇಂಗ್ಲಿಷ್ ಶಬ್ದವಾಯಿತು; ಅಲ್ಲಿಂದೀಚೆಗೆ ರೂಪದಲ್ಲೂ ಅರ್ಥದಲ್ಲೂ ಅದು ಯಾವ ಬೆಳೆವಣಿಗೆಗಳನ್ನು ಪಡೆದಿದೆ; ಅದರ ಪ್ರಯೋಗಗಳಲ್ಲಿ ಯಾವುವು ಕಾಲಕ್ರಮದಲ್ಲಿ ಲೋಪವಾಗಿವೆ; ಯಾವುವು ಇನ್ನೂ ನಿಂತಿವೆ; ಈಚೆಗೆ ಯಾವ ಹೊಸ ಪ್ರಯೋಗಗಳು ಯಾವ ವಿಧಾನಗಳಲ್ಲಿ ಎಂದಿನಿಂದ ತಲೆ ಎತ್ತಿವೆ ಎಂಬುದನ್ನು ತೋರಿಸುವುದು. 2 ಈ ಅಂಶಗಳಿಗೆಲ್ಲ ಉದಾಹರಣೆಯಾಗಿ, ನಮಗೆ ಗೊತ್ತಾಗಿರುವ ಮಟ್ಟಿಗೆ ಶಬ್ದ ಮೊಟ್ಟಮೊದಲು ಕಾಣಿಸಿಕೊಂಡಂದನಿಂದ ಪ್ರಾರಂಭಿಸಿ ಕೊನೆಯ ಸಲಕ್ಕೆ ಅಥವಾ ಇಂದಿನ ವರೆಗೆ ಮುಟ್ಟುವಂತೆ ಪ್ರಯೋಗ ಪರಂಪರೆಯನ್ನು ಕೊಡುವುದು. ಹೀಗೆ ಶಬ್ದ ತನ್ನ ಚರಿತ್ರೆಯನ್ನೂ ಅರ್ಥವನ್ನೂ ತಾನೇ ಪ್ರದರ್ಶಿಸುವಂತೆ ಮಾಡುವುದು. 3 ಪ್ರತಿಯೊಂದು ಶಬ್ದದ ರೂಪನಿಷ್ಪತ್ತಿಯನ್ನೂ ಕೇವಲ ಐತಿಹಾಸಿಕಾಂಶದ ಆಧಾರದ ಮೇಲೆಯೇ ಆಧುನಿಕ ಭಾಷಾಶಾಸ್ತ್ರದ ಪದ್ಧತಿಗಳನ್ನೂ ಸಿದ್ಧಾಂತಗಳನ್ನೂ ಅನುಸರಿಸಿಯೇ ಪ್ರತಿಪಾದಿಸುವುದು.

ಎ ಅಕ್ಷರದಿಂದ ಜ಼ೆಡ್ ಅಕ್ಷರದ ವರೆಗೆ ಒಂದೇ ರೀತಿಯಲ್ಲಿ-ಮೊದಮೊದಲು ಯಾವ ಭಾಗವನ್ನೂ ಅತಿ ಹಿಗ್ಗಲಿಸದೆ, ಕೊನೆಕೊನೆಯಲ್ಲಿ ದೌಡಾಯಿಸದೆ-ಉದ್ದಕ್ಕೂ ವಿಹಿತವಾದ ಕ್ರಮದಲ್ಲಿ ಈ ಗುರಿಯನ್ನು ಇಲ್ಲಿ ಸಾಧಿಸಲಾಗಿದೆ.

ನಿಘಂಟಿನ ಕಟ್ಟಡ ಇದರಲ್ಲಿ ಬಳಸಿರುವ ಅನುಪಮವಾದ ಪ್ರಯೋಗಸಂಪತ್ತಿನ ಇಟ್ಟಿಗೆಗಳ ಮೇಲೆ ನಿಂತಿದೆ. 18 ಲಕ್ಷಕ್ಕೂ ಮೀರಿದ ಪ್ರಯೋಗಗಳನ್ನು ಇಲ್ಲಿ ಸಂಗ್ರಹಿಸಿ ಕೊಡಲಾಗಿದೆ. ಈ ನಿಘಂಟಿನ ರಚನೆಗಾಗಿ ಸಮಗ್ರ ಇಂಗ್ಲಿಷ್ ಸಾಹಿತ್ಯವನ್ನು ಮೊದಲಿಂದ ಕೊನೆಯ ವರೆಗೂ ಓದಿ ಅಲ್ಲಿಂದ ಶಬ್ದಶಬ್ದಕ್ಕೂ ಅವಶ್ಯಕವಾದ ಪ್ರಯೋಗಗಳನ್ನು ಉದ್ಧರಿಸಲಾಗಿದೆ. ಇಲ್ಲಿ ಉದಾಹರಿಸಿರುವ ಮುಖ್ಯ ಗ್ರಂಥಗಳ ಪಟ್ಟಿಯೇ 88 ದೊಡ್ಡ ಪುಟಗಳನ್ನು ಆಕ್ರಮಿಸಿದೆ. ಪುಟಪುಟಕ್ಕೂ ಸುಮಾರು 270 ಆಕರ ಗ್ರಂಥಗಳ ಹೆಸರುಗಳಿವೆ.

1857ರಲ್ಲಿ ಅಂದಿಗೆ ಪ್ರಕಟವಾಗಿದ್ದ ಇಂಗ್ಲಿಷ್ ಕೋಶಗಳಲ್ಲಿ ಕಂಡುಬಂದ ಕೊರತೆಯನ್ನು ಗಮನಿಸಿದ ಆರ್.ಸಿ.ಟ್ರೆಂಚ್, ಆ ಕೋಶಗಳಲ್ಲಿ ಬಿಟ್ಟುಹೋಗಿರುವ ಶಬ್ದಗಳಿಗಾಗಿ ಪರಿಶಿಷ್ಟಕೋಶವೊಂದನ್ನು ಯೋಜಿಸುವಂತೆ ಫಿಲಲಾಜಿಕಲ್ ಸೊಸೈಟಿಯವರಿಗೆ ಕರೆಕೊಟ್ಟ. 1859ರಲ್ಲಿ ಈ ಯೋಜನೆಗೆ ಖಚಿತ ರೂಪರೇಖೆ ಕೊಡಲು ಹರ್‍ಬರ್ಟ್ ಕೋಲ್‍ರಿಜ್, ಫರ್ನಿವಾಲ್ ಮತ್ತು ಗ್ರೀನ್ ಟ್ರೆಂಚ್ ಈ ಮೂವರ ಸಮಿತಿಯೊಂದನ್ನು ನೇಮಿಸಲಾಯಿತು. ಸೊಸೈಟಿಯವರು ಹೊರತರಬಯಸಿದ ದಿ ನ್ಯೂ ಇಂಗ್ಲಿಷ್ ಡಿಕ್ಷನರಿಗೆ ಎಚ್.ಕೋಲ್‍ರಿಜ್‍ನನ್ನು ಮುಖ್ಯ ಸಂಪಾದಕನನ್ನಾಗಿ ಮಾಡಲಾಯಿತು. ಯೋಜನೆಯಂತೆ ದೇಶವಿದೇಶಗಳ ಇಂಗ್ಲಿಷ್ ಓದುಗರಿಂದ ಶಬ್ದಗಳನ್ನೂ ಪ್ರಯೋಗಗಳನ್ನೂ ಪಡೆಯುವ ಕೆಲಸ ಆರಂಭವಾಯಿತು. ಈ ಕೆಲಸದ ನಡುವೆಯೇ 1860 ರಲ್ಲಿ ಮೂವತ್ತೊಂದು ವರ್ಷ ವಯಸ್ಸಿನ ಕೋಲ್‍ರಿಜ್ ಮರಣವನ್ನಪ್ಪಿದ. ಅವನ ಅನಂತರ ಮೂವತ್ತಾರು ವರ್ಷ ವಯಸ್ಸಿನ ಫರ್ನಿವಾಲ್ ಪ್ರಧಾನ ಸಂಪಾದಕನಾದ. ಶಬ್ದಸಂಗ್ರಹಣಕಾರ್ಯ ಯಶಸ್ವಿಯಾಗಿ ನಡೆದರೂ ಹಲವಾರು ಅಡಚಣೆಗಳಿಂದ ಸೊಸೈಟಿಯವರ ಕೋಶದ ಪ್ರಕಟಣೆ ಸಾಧ್ಯವಾಗಲಿಲ್ಲ.

ಕ್ಲ್ಯಾರೆಂಡನ್ ಪ್ರೆಸ್ಸಿನವರು ಒಂದು ಪ್ರಕಟಣೆ ಹೊರಡಿಸಿ, ಅವರು ಪ್ರಕಟಿಸಲಿರುವ ನಿಘಂಟಿನ ರೂಪರೇಖೆಗಳನ್ನು ವಿವರಿಸಿ ಇಂಗ್ಲಿಷ್ ಓದುಗರಿಂದ ಶಬ್ದಗಳನ್ನೂ ಪ್ರಯೋಗಗಳನ್ನೂ ಆಹ್ವಾನಿಸಿದರು. ಭಾಷಾಭಿಮಾನಿಗಳಾದ ಸಹಸ್ರಾರು ಜನ ಆ ಕೆಲಸಕ್ಕಾಗಿ ಮುಂದೆ ಬಂದರು. 1858ರಲ್ಲಿ ಕೆಲಸ ಆರಂಭವಾಯಿತು. 1884ರ ಹೊತ್ತಿಗೆ ಒಬ್ಬಿಬ್ಬ ಖಾಸಗಿ ವಿದ್ವಾಂಸರೇ ಒಂದೂವರೆ ಲಕ್ಷ ಚೀಟಿಗಳನ್ನು ಕಳುಹಿಸಿ ಕೊಟ್ಟಿದ್ದರಂತೆ. ಗ್ರಂಥ ಪೂರ್ಣವಾಗುವ ವರೆಗೂ ಖಾಸಗಿ ಪಂಡಿತರುಗಳ ಕೆಲಸ ಅವಿಚ್ಛಿನ್ನವಾಗಿ ನಡೆದು ಬಂತು. ಸಂಬಳ ಕೊಟ್ಟೇ ಈ ಕೆಲಸವನ್ನು ಮಾಡಿಸುವುದಾಗಿದ್ದರೆ ನಿಘಂಟು ಕನಸಾಗಿಯೇ ಉಳಿಯುತ್ತಿತ್ತೆಂದು ಅಭಿಪ್ರಾಯಪಡಲಾಗಿದೆ.

1877ರಲ್ಲಿ ಕ್ಲ್ಯಾರೆಂಡನ್ ಪ್ರೆಸ್ಸಿನ ಮುಖಂಡ ಪ್ರೈಸ್‍ರವರ ಸಂಧಾನದ ಫಲವಾಗಿ ಆಕ್ಸ್‍ಫರ್ಡ್ ಯೂನಿವರ್ಸಿಟಿ ಪ್ರೆಸ್ಸಿನವರು ನಿಘಂಟಿನ ಪ್ರಕಟಣೆಯ ಹೊರೆ ಹೊತ್ತರು. ಫಿಲಲಾಜಿಕಲ್ ಸೊಸೈಟಿಯವರಿಗೂ ಯೂನಿವರ್ಸಿಟಿ ಪ್ರೆಸ್ಸಿನವರು ನಿಘಂಟಿನ ಪ್ರಕಟಣೆಯ ಹೊರೆ ಹೊತ್ತರು. ಫಿಲಲಾಜಿಕಲ್ ಸೊಸೈಟಿಯವರಿಗೂ ಯೂನಿವರ್ಸಿಟಿ ಪ್ರೆಸ್ಸಿನವರಿಗೂ ಒಂದು ಒಪ್ಪಂದವಾಯಿತು. ಫಿಲಲಾಜಿಕಲ್ ಸೊಸೈಟಿಯವರು ಇದುವರೆಗೂ ಸಂಗ್ರಹಿಸಿದ್ದ ಸಮಸ್ತ ಸಾಮಗ್ರಿಗಳನ್ನೆಲ್ಲ ಯೂನಿವರ್ಸಿಟಿ ಪ್ರೆಸ್ಸಿನವರಿಗೆ ಕೊಡಬೇಕೆಂದೂ ನಿಘಂಟನ್ನು ಫಿಲಲಾಜಿಕಲ್ ಸೊಸೈಟಿಯವರ ದಿ ನ್ಯೂ ಇಂಗ್ಲಿಷ್ ಡಿಕ್ಷನರಿ ಎಂದು ಕರೆಯಬೇಕೆಂದೂ ನಿಘಂಟು ಹತ್ತು ವರ್ಷಗಳಲ್ಲಿ ಪ್ರಕಟವಾಗಬೇಕೆಂದೂ ಇದಕ್ಕೆ ಜೆ.ಎ.ಎಚ್.ಮರೀಯವರೇ ಪ್ರಧಾನ ಸಂಪಾದಕರಾಗಿರಬೇಕೆಂದೂ ಇದಕ್ಕೆ ಹತ್ತು ಸಂಪುಟಗಳ ನಿಘಂಟು ಗರಿಷ್ಠ 8,400 ಪುಟಗಳಾಗಿರತಕ್ಕದ್ದೆಂದೂ ಒಪ್ಪಂದವಾಯಿತು.

ಫಿಲಲಾಜಿಕಲ್ ಸೊಸೈಟಿಯವರು ಸಂಪಾದಕ ಮರೀಯವರಿಗೆ ಕೊಟ್ಟ ಸಾಹಿತ್ಯ ಸಾಮಗ್ರಿಯ ತೂಕ 1 ¾ ಟನ್ ಇತ್ತಂತೆ. ಬೆಟ್ಟದಂತೆ ರಾಶಿರಾಶಿಯಾಗಿ ಬಂದು ಬೀಳುತ್ತಿದ್ದ ಈ ಪ್ರಯೋಗಗಳನ್ನು ಓದಿ, ವಿಂಗಡಿಸಿ, ವಿಭಜಿಸಿ, ಕ್ರಮವಾಗಿ ಜೋಡಿಸಿ, ಅನಾವಶ್ಯಕವಾದವನ್ನು ತೆಗೆದುಹಾಕಿ, ಬೇಕಾದವನ್ನು ಹೊಸದಾಗಿ ಸೇರಿಸಿ ಅದರಿಂದ ಶಬ್ದದ ಚರಿತ್ರೆಯನ್ನು ಪಡೆಯುವ ಕೆಲಸದ ಹೊರೆ ಹೆಚ್ಚಿತು. ಪ್ರಧಾನ ಸಂಪಾದಕ ಮರೀಯವರ ಜೊತೆಗೆ ಹೆನ್ರಿ ಬ್ರ್ಯಾಡ್ಲೀಯವರೂ ಸೇರಿದರು. 1897ರಲ್ಲಿ ವಿಲಿಯಂ ಅಲೆಕ್ಸಾಂಡರ್ ಕ್ರೇಗೀಯವರೂ 1914ರಲ್ಲಿ ಸಿ.ಎ.ಅನ್ಯಯನ್ಸ್‍ರವರೂ ಸಂಪಾದಕ ಮಂಡಲಿ ಸೇರಿದರು. ಇವರ ಜೊತೆಗೆ 84 ಜನ ಉಪಸಂಪಾದಕರೂ 65 ಜನ ಸಹಾಯಕರೂ 24 ಜನ ಅಚ್ಚಿನ ಕರಡು ತಿದ್ದುವವರೂ 1,227 ಖಾಸಗೀ ವಿದ್ವಾಂಸರೂ ಈ ಬೃಹದ್ ಯೋಜನೆಯನ್ನು ಆಗಮಾಡಲು ಅಹರ್ನಿಶಿ ದುಡಿದರು.

ಕೋಶದ ಕೆಲಸ ಅರ್ಧಮುಕ್ಕಾಲು ಮುಗಿದಿದ್ದಾಗ, ಅಷ್ಟು ಹೊತ್ತಿಗಾಗಲೇ ತನ್ನ ಅಸಾಧಾರಣ ಪಾಂಡಿತ್ಯಕ್ಕಾಗಿ ಸರ್ ಪದವಿ ಪಡೆದಿದ್ದ ಮರೀ 26ನೆಯ ಜುಲೈ 1915ರಲ್ಲಿ ನಿಧನ ಹೊಂದಿದ. ಕೋಶದೊಂದಿಗೆ 3 ವರ್ಷಗಳಿಗೂ ಹೆಚ್ಚಿನ ಸಂಬಂಧ ಹೊಂದಿ, ಆಗ ಬೇಕಾಗಿದ್ದ 15,487 ಪುಟಗಳಲ್ಲಿ 7,207 ಪುಟಗಳ ಕಾರ್ಯವನ್ನು ವರೀಯೊಬ್ಬನೇ ಮಾಡಿ ಮುಗಿಸಿದ್ದನಲ್ಲದೆ ಉಳಿದ ಬಹುಪಾಲು ಕೆಲಸದ ಮೇಲ್ವಿಚಾರಣೆಯನ್ನೂ ನಿರ್ವಹಿಸಿದ್ದ. ಈತನ ಉಪಮಾತೀತ ಕಾರ್ಯನಿರ್ವಹಣೆಯ ಸ್ಮರಣೆಯಾಗಿ ಆಕ್ಸ್‍ಫರ್ಡ್ ನಿಘಂಟನ್ನು ಮರೀ ನಿಘಂಟು ಎಂದೇ ಕರೆಯುತ್ತಿದ್ದರು. ಮುಂದೆ ಇದರೊಡನೆ ಸುಮಾರು ಮೂವತ್ತೈದು ವರ್ಷಗಳ ಸಂಬಂಧ ಹೊಂದಿದ್ದ ಬ್ರ್ಯಾಡ್ಲೀ 1923ರ ಮೇ 23ರಂದು ನಿಧನ ಹೊಂದಿದ. ಕೋಶದ ಕೆಲಸ 1928ರಲ್ಲಿ ಮುಗಿದಾಗ ಆ ಕಾರ್ಯವನ್ನು ನಿರ್ವಹಿಸಿ ಬದುಕಿದ್ದವರೆಂದರೆ ಕ್ರೇಗೀ ಹಾಗೂ ಅನ್ಯಯನ್ಸ್.

ಆಕ್ಸ್‍ಫರ್ಡ್ ನಿಘಂಟನ್ನು ಶೈವದಲ್ಲಿ ಹೊಸ (ದಿ ನ್ಯೂ) ಇಂಗ್ಲಿಷ್ ನಿಘಂಟು ಎಂದು ಹೆಸರಿಸಿದ್ದರು. ಇದರಲ್ಲಿ ಹೊಸ ಎಂಬ ಮಾತು ಬಹುಕಾಲ ಉಳಿಯಲಿಲ್ಲ. ಎರಡು ತಲೆಮಾರುಗಳಲ್ಲಿ ಭಾಗಭಾಗವಾಗಿ ಹೊರ ಬಂದ ಈ ಕೋಶದಲ್ಲಿ ಕಾಲಕಾಲಕ್ಕೆ ಮೂಡಿಬಂದ ಹಲವಾರು ಶಬ್ದಗಳು ಸೇರಿರಲಿಲ್ಲ. ಪ್ರಪಂಚಾದ್ಯಂತ ಪ್ರಚಲಿತವಿರುವ ಸಿನಿಮ ಶಬ್ದವೇ ಮೂಲ ಕೋಶದಲ್ಲಿ ಇರಲಿಲ್ಲ. ಇಂಥ ಕೊರತೆಯನ್ನು ನೀಗಿಸಿ ದಿನದಿನಕ್ಕೂ ಮೂಡಿಬರುತ್ತಿದ್ದ ಹೊಸ ಶಬ್ದಗಳನ್ನು ಶೇಖರಿಸಿ ನಿಘಂಟಿಗೆ ಸಮಗ್ರತೆಯನ್ನು ಕೊಡಲು ಪರಿಶಿಷ್ಟವೊಂದು ಅಗತ್ಯವೆಂಬುದನ್ನು ಮರೀ ಅರಿತಿದ್ದರು. ಮುಖ್ಯ ನಿಘಂಟಿನ ಜೊತೆಜೊತೆಗೇ ಪರಿಶಿಷ್ಟದ ಕೆಲಸವೂ ನಡೆದು ಅದು ಹದಿಮೂರನೆಯ ಸಂಪುಟವಾಗಿ ಪ್ರಕಟವಾಯಿತು. 866 ಪುಟಗಳ ಈ ಕೋಶದಲ್ಲಿ ವೈಜ್ಞಾನಿಕ ಸಂಶೋಧನೆ, ಯಂತ್ರನಿರ್ಮಾಣ, ಕ್ರೀಡಾ ಪ್ರಪಂಚ, ಬೆಡಗು, ಭೋಗ ಸಾಮಗ್ರಿ, ಚಿತ್ತಕ್ಷೋಭೆ ಇವನ್ನು ಗುರುತಿಸುವ ಹಲವು ಮಾತುಗಳು ಮೊದಲ ಬಾರಿಗೆ ಬಂದಿವೆ. ಉದ್ಧರಿಸಿರುವ ಮುಖ್ಯ ಗ್ರಂಥಗಳ ಪರಿವಿಡಿಯನ್ನೂ ಈ ಪರಿಶಿಷ್ಟದಲ್ಲಿ ಕೊಡಲಾಗಿದೆ. ಈ ಪರಿವಿಡಿಯೇ 91 ಪುಟಗಳ ವ್ಯಾಪ್ತಿಯನ್ನು ಹೊಂದಿದೆ.

ಮೂಲ ನಿಘಂಟಿನ ವ್ಯಾಪ್ತಿ ಎಷ್ಟೆಂಬುದನ್ನು ತಿಳಿಯಲು, ಇಂಗ್ಲಿಷ್ ವರ್ಣಮಾಲೆಯ ಒಂದೊಂದು ಅಕ್ಷರವೂ ಇಲ್ಲಿ ಎಷ್ಟು ಪುಟಗಳ ವ್ಯಾಪ್ತಿ ಹೊಂದಿದೆ ಎಂಬುದನ್ನು ನೋಡಬಹುದು.

ಎ ಬಿ-1,240 ಸಿ-1308; ಡಿ-740; ಇ-438; ಎಫ್-628; ಜಿ-532; ಹೆಚ್-516; ಐ ಜೆ ಕೆ-758; ಎಲ್-528; ಎಂ-820; ಎನ್-277; ಓ ಪಿ-1676; ಕ್ಯೂ ಆರ್-936; ಎಸ್-2407; ಟಿ-565, ಯು-493, ವಿ-332, ಡಬ್ಲ್ಯು-734; ಎಕ್ಸ್-7; ವೈ ಜûಡ್-105; ಪರಿಶಿಷ್ಟ-875.

ಈ ನಿಘಂಟಿನ ಇಂದಿನ ಬೆಲೆ ಸುಮಾರು 2 ಸಾವಿರ ರೂ. ಇದರ ಗಾತ್ರವೂ ಬೆಲೆಯೂ ಬಹು ಹೆಚ್ಚಾಯಿತೆಂದು ತಿಳಿದ ಸಂಪಾದಕ ವರ್ಗ ಬಹು ಜನರಿಗೆ ಅನುಕೂಲವಾಗುವಂತೆ ಷಾರ್ಟರ್ ಆಕ್ಸ್‍ಫರ್ಡ್ ಡಿಕ್ಷನರಿ ಎಂಬ ಹೆಸರಿನಲ್ಲಿ ಚಿಕ್ಕ ನಿಘಂಟೊಂದನ್ನು ಪ್ರಕಟಿಸಿತು. 2,515 ಪುಟಗಳ ಒಂದೇ ಸಂಪುಟವೂ ಈಗ ಲಭ್ಯವಿದೆ. ಇದರ ಇಂದಿನ ಬೆಲೆ ಸುಮಾರು ಇನ್ನೂರು ರೂ. ಇದು ಮೂರು ಬಾರಿ ಪರಿಷ್ಕರಣವಾಗಿ ಹದಿನಾರು ಬಾರಿ ಪುನರ್ಮುದ್ರಣಗೊಂಡಿದೆ. ಇದರ ಬೆಲೆಯೂ ಸಾಮಾನ್ಯನಿಗೆ ಭಾರವಾದ್ದರಿಂದ ಫೌಲರ್ ಸಹೋದರರು ಕನ್‍ಸೈಸ್ ಆಕ್ಸ್‍ಫರ್ಡ್ ಡಿಕ್ಷನರಿಯನ್ನು 1911ರಲ್ಲಿ ಸಂಪಾದಿಸಿ ಹೊರತಂದರು. 1,558 ಪುಟಗಳ ಈ ಕೋಶ ಈಗಾಗಲೇ 19 ಬಾರಿ ಮುದ್ರಣಗೊಂಡಿದೆ. ಇದರ ಇಂದಿನ ಬೆಲೆ ಹದಿನಾರು ರೂ. ಇದು ಹೊರೆ ಇನ್ನುವವರಿಗೆ ಇದೇ ಸಂಪಾದಕರ ಪಾಕೆಟ್ ಆಕ್ಸ್‍ಫರ್ಡ್ ಡಿಕ್ಷನರಿ ಹೊರಬಂತು. ಇದರ ಬೆಲೆ ಹದಿನಾಲ್ಕು ರೂ. ಬೆಲೆ ಕಡಿಮೆಯಾದರೂ ನಿಜವಾಗಿಯೂ ಇದು ಜೇಬಿಗೆ ಹಿಡಿಸುವುದಿಲ್ಲ. ಇದನ್ನು ಗಮನಿಸಿದ ಅನುಭವಸ್ಥನಾದ ಮುದ್ರಣಕಾರನೊಬ್ಬ ಹೆಚ್ಚು ವಿಷಯ ಬಿಟ್ಟು ಹೋಗದಂತೆ ದಿ ಲಿಟಲ್ ಆಕ್ಸ್‍ಫರ್ಡ್ ಡಿಕ್ಷನರಿಯನ್ನು ಪ್ರಕಟಿಸಿದ. ಇದರ ಬೆಲೆ ಏಳು ರೂ.

ಇವುಗಳ ಜೊತೆಗೆ ಮೂಲ ಹದಿಮೂರು ಸಂಪುಟಗಳ ನಿಘಂಟನ್ನು ಒಂದು ಶಬ್ದವೂ ಬಿಟ್ಟುಹೋಗದಂತೆ ಮೈಕ್ರೋ ಫೋಟೋ ಪ್ರತಿಮಾಡಿ ಎರಡು ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ. ಇದನ್ನು ಮಸೂರದ ಸಹಾಯದಿಂದ ಮಾತ್ರ ನೋಡಲು ಸಾಧ್ಯ. ಗ್ರಂಥದೊಂದಿಗೆ ಮಸೂರವನ್ನೂ ಕೊಡುತ್ತಾರೆ. ಇದರ ಬೆಲೆ ಸುಮಾರು ಆರು ನೂರು ರೂಪಾಯಿಗಳು.

ಆಕ್ಸ್‍ಫರ್ಡ್ ನಿಘಂಟು, ನಿಘಂಟುಗಳ ನಾಯಾಧೀಶ್ವರ, ಪರಿಪೂರ್ಣತೆಯಲ್ಲಿ ಅದ್ವಿತೀಯ. ಪ್ರಾಮಾಣ್ಯದಲ್ಲಿ ಅನುಪಗಮ್ಯ, ಪ್ರಪಂಚದ ಬೇರೆ ಯಾವ ಭಾಷೆಯಲ್ಲೂ ಇಷ್ಟು ಸಮಗ್ರವಾದ ಉತ್ಕøಷ್ಟವಾದ ನಿಘಂಟಲ್ಲ-ಎಂಬುದು ಬಹು ಮಂದಿ ವಿದ್ವಾಂಸರ ಅಭಿಪ್ರಾಯ.

ವೆಬ್ಸ್‌ಟರ್ ಕೋಶ: ಆಕ್ಸ್‍ಫರ್ಡ್ ಇಂಗ್ಲಿಷ್ ಕೋಶದಂತೆ ಈ ಕೋಶವೂ ಒಂದು ಕೋಶ ಕುಟುಂಬವೇ ಆಗಿ ಬೆಳೆದಿದೆ, ಬೆಳೆಯುತ್ತಿದೆ. ಈ ಕೋಶದ ಇತಿಹಾಸ ಸ್ವಾರಸ್ಯಮಯವಾದದ್ದು, ಅಷ್ಟೆ ಅಲ್ಲ ಸ್ಪೂರ್ತಿದಾಯಕವಾದದ್ದು. ಅದರ ಮಹತ್ತ್ವವನ್ನರಿಯಬೇಕಾದರೆ ವೆಬ್ಸ್‍ಟರನ ಜೀವನದ ಹಿನ್ನೆಲೆ ಹಾಗೂ ಜೀವಿತ ಕಾಲದ ವ್ಯಾಪ್ತಿ-ವಿಸ್ತಾರಗಳನ್ನೂ ಅವನಿಗೆ ಲಭಿಸಿದ ಬಹುಮುಖವಾದ ವೈವಿಧ್ಯಪೂರ್ಣವಾದ ಅನುಭವಗಳನ್ನೂ ಗಮನಿಸಬೇಕು. ಈ ಕೋಶವನ್ನು ರಚಿಸಿದ ನೋವ ವೆಬ್ಸ್‍ಟರ್ (1758-1843) ಕನೆಕ್ಟಿಕಟ್‍ನ ಒಂದು ವ್ಯವಸಾಯ ಕ್ಷೇತ್ರದಲ್ಲಿ-ಏಳು ವರ್ಷಗಳ ಯುದ್ಧ (1757-1763) ಬಿರುಸಾಗುತ್ತಿದ್ದಾಗ-ಜನಿಸಿದ. ಅಮೆರಿಕದ ಬ್ರಿಟಿಷ್ ವಸಾಹತುಗಳು ಬ್ರಿಟಿಷ್ ಸರ್ಕಾರದೊಡನೆ ತಮ್ಮ ಬಿಡುಗಡೆಗಾಗಿ ಮಾಡಿದ ಹೋರಾಟ ಬಾಲಕ ವೆಬ್ಸ್ಟರನ ಸ್ವಂತ ಅನುಭವವಾಯಿತು. ಈತ ತನ್ನ ತಂದೆಯೊಡಗೂಡಿ ಅಮೆರಿಕದ ಸ್ವಾತಂತ್ರ್ಯಸಮರದಲ್ಲೂ ಪಾಲುಗೊಳ್ಳುವ ಸುಯೋಗ ಒದಗಿತು. 1783ರಲ್ಲಿ ಬ್ರಿಟಿಷ್ ವಸಾಹತುಗಳು ವಿಜಯ ಸಾಧಿಸಿದುದರಿಂದ ಅಮೆರಿಕದ ಸಂಯುಕ್ತ ಸಂಸ್ಥಾನದ ಉದಯವಾಯಿತು.

ಈ ರೋಮಾಂಚಕಾರಿ ಘಟನಾವಳಿಗಳಿಂದ ಉಜ್ಜ್ವಲಗೊಂಡ ರಾಷ್ಟ್ರೀಯ ಮನೋವೃತ್ತಿಯಿಂದ ವೆಬ್ಸ್‍ಟರನ ಮನಸ್ಸಿನಲ್ಲಿ ಹೊಸದಾಗಿ ಹುಟ್ಟಿದ ಅಮೆರಿಕ ರಾಷ್ಟ್ರಕ್ಕೆ ಸ್ವಂತ ಶಾಲಾಕಾಲೇಜು ಪುಸ್ತಕಗಳು, ಏಕರೂಪದ ಭಾಷೆ ಹಾಗೂ ಸ್ವತಂತ್ರವಾದ ಬೌದ್ಧಿಕ ಬೆಳೆವಣಿಗೆ ಅತ್ಯಾವಶ್ಯಕವೆಂಬ ದೃಢವಿಶ್ವಾಸ ಮೂಡಿತು. ಈ ಮಹೋದ್ದೇಶಗಳನ್ನು ಸಾಧಿಸುವ ಪ್ರಥಮ ಪ್ರಯತ್ನವಾಗಿ ಆತ 1806 ರಲ್ಲಿ ಕಾಂಪೆಂಡಿಯಸ್ ಡಿಕ್ಷನರಿಯನ್ನು ಬರೆದು ಅಮೆರಿಕದ ಬಗ್ಗೆ ಹೆಚ್ಚಿನ ಶಬ್ದಗಳನ್ನದರಲ್ಲಿ ಸೇರಿಸಿದ. ಆಗಲೇ ಆತ ತನ್ನ ಸಮಗ್ರವಾದ ಲೋಕಪ್ರಸಿದ್ಧ ಕೋಶವನ್ನು ರಚಿಸಲು ತೊಡಗಿದ. 1807ರಲ್ಲಿ ಮಿತ್ರನೊಬ್ಬನಿಗೆ ಆತ ಬರೆದ ಕಾಗದದಲ್ಲಿ ಆ ಕೋಶವನ್ನು ಬರೆದು ಮುಗಿಸಲು ಸುಮಾರು ಮೂರು ವರ್ಷಗಳಿಂದ ಹಿಡಿದು ಐದು ವರ್ಷಗಳಷ್ಟು ಕಾಲ ನಿರಂತರವಾಗಿ ಶ್ರಮಿಸಬೇಕಾಗುವುದೆಂದು ಹೇಳಿದ್ದಾನೆ. ಆದರೆ ಆತ ನಿಯೋಜಿಸಿದ ಸಂಪೂರ್ಣ ಕೋಶ ಪ್ರಕಟವಾದದ್ದು 1828ರಷ್ಟು ವಿಳಂಬವಾಗಿ; ಅಂದರೆ 22 ವರ್ಷಗಳ ಅವಿರತ ಪರಿಶ್ರಮದ ಫಲವಾಗಿ ಅಮೆರಿಕನ್ ಡಿಕ್ಷನರಿ ಆಫ್ ದಿ ಇಂಗ್ಲಿಷ್ ಲ್ಯಾಂಗ್‍ವೇಜ್ ಎಂಬ ಎರಡು ದೊಡ್ಡ ಸಂಪುಟಗಳ ಕೋಶ ಪ್ರಕಟವಾಯಿತು.

ಈ ಕೋಶದ ಮೊದಲ ಪರಿಷ್ಕೃತ ಆವೃತ್ತಿಯನ್ನು ವೆಬ್ಸ್‍ಟರ್ ತನ್ನ ನಿಧನಕ್ಕೆ ಕೇವಲ ಎರಡು ವರ್ಷಗಳಷ್ಟು ಮುಂಚೆ (1841) ಪ್ರಕಟಿಸಿದ. ಆತನ ನಿಧನದ ತರುವಾಯ ಜಾರ್ಜ್ ಮತ್ತು ಚಾರಲ್ಸ್ ಮೆರಿಯಮ್ ಎಂಬುವರು ತಮ್ಮ ಜಿ ಅಂಡ್ ಸಿ ಮೆರಿಯಮ್ ಸಂಸ್ಥೆಗಾಗಿ ವೆಬ್ಸ್‍ಟರ್ ಕೋಶದ ಮುದ್ರಣದ ಹಕ್ಕನ್ನು ಕೊಂಡು ಕೊಂಡರು.

ಸರಿಯಾದ, ಸಮಗ್ರವಾದ ಭಾಷಾಜ್ಞಾನಕ್ಕೆ ಆಕರವಾದ ಕೋಶಗ್ರಂಥವೊಂದನ್ನು ರಚಿಸುವುದು ಸಾಹಸದ ಪ್ರಯತ್ನ. ಇಂಥ ಕೃತಿಯನ್ನು ರಚಿಸಲು ಬೇಕಾಗುವಷ್ಟು ಅರ್ಹತೆ, ಪಾಂಡಿತ್ಯ, ಅಧಿಕಾರ ವೆಬ್ಸ್ಟರನಿಗೆ ಸಾಕಷ್ಟು ಇತ್ತು. ವ್ಯವಸಾಯ ತೋಟಗಾರಿಕೆಗಳಷ್ಟೇ ಆತನಿಗೆ ಶಿಕ್ಷಣವೂ ಪರಿಚಿತವಾಗಿತ್ತು. ಆತ ಸ್ವಯಂ ಉತ್ತಮ ವಕೀಲ, ನ್ಯಾಯಶಾಸ್ತ್ರ ಪಂಡಿತ. ಸಾಹಿತ್ಯ, ಅರ್ಥಶಾಸ್ತ್ರ, ರಾಜನೀತಿ, ಭಾಷಾಶಾಸ್ತ್ರ, ವಿಜ್ಞಾನ-ಎಲ್ಲವನ್ನೂ ಕುರಿತು ಆತ ಅನೇಕಾನೇಕ ಲೇಖನಗಳನ್ನು ಬರೆದಿದ್ದ. ಬ್ಯಾಂಕುಗಳು, ಸೋಂಕುರೋಗಗಳು, ಫ್ರಾನ್ಸಿನ ಮಹಾಕ್ರಾಂತಿ, ವೈಟ್‍ಲೆಡ್ ಎಂಬ ಬಳಿಯುವ ಬಣ್ಣದ ವಿಯೋಜ ವಿಧಾನ, ಯುದ್ಧಕಾಲದಲ್ಲಿ ತಟಸ್ಥ ರಾಷ್ಟ್ರಗಳ ಹಕ್ಕುಗಳು-ಹೀಗೆ ಅವನ ಲೇಖನಿಗೆ ಒಳಪಡದ ವಿಷಯವೇ ಇರಲಿಲ್ಲ. ಜೊತೆಗೆ ಆತ ಒಂದು ನಿಯತಕಾಲಿಕ ಪತ್ರಿಕೆಯ ಸಂಪಾದಕನೂ ಆಗಿದ್ದನಲ್ಲದೆ ಬೈಬಲ್ ಗ್ರಂಥವನ್ನು ಪರಿಷ್ಕರಿಸಿ ಪ್ರಕಟಿಸಿದ್ದ. ಹೀಗೆ ಸರ್ವತೋಮುಖವಾದ ಪಾಂಡಿತ್ಯವುಳ್ಳವರಲ್ಲದೆ ಮತ್ತಾರು ತಾನೆ ಕೋಶ ನಿರ್ಮಾಣ ಮಾಡಬಲ್ಲರು?

1812ರಿಂದ ಸುಮಾರು 10 ವರ್ಷ ಕಾಲ ವೆಬ್ಸ್‍ಟರ್ ಮ್ಯಾಸಚೂಸೆಟ್ಸ್‍ನ ಆಮಸ್ರ್ಟ್‍ನಲ್ಲಿ ಒಂದು ದೊಡ್ಡ ದುಂಡು ಮೇಜಿನ ಸುತ್ತಲೂ ಸ್ಥಳದಿಂದ ಸ್ಥಳಕ್ಕೆ ಚಲಿಸುತ್ತ ಎಡೆಬಿಡದೆ ಗ್ರಂಥಾವಲೋಕನ ಮಾಡುತ್ತ ತನ್ನ ಕೋಶ ಸಂಪಾದನ ಕಾರ್ಯವನ್ನು ಮುಂದುವರಿಸಿದ. ಆತನ ಮೇಜಿನ ಮೇಲೆ ಇಪ್ಪತ್ತು ಬೇರೆ ಬೇರೆ ಭಾಷೆಗಳ ಕೋಶಗಳೂ ವ್ಯಾಕರಣ ಗ್ರಂಥಗಳೂ ಹರಡಿರುತ್ತಿದ್ದುವು. 1824ರಲ್ಲಿ ಆತ ಪ್ಯಾರಿಸ್, ಲಂಡನ್ ಮತ್ತು ಕೇಂಬ್ರಿಜ್‍ಗಳಲ್ಲಿ ಒಂದು ವರ್ಷ ಕಾಲ ಇದ್ದು ಅಲ್ಲಿನ ಪುಸ್ತಕ ಭಂಡಾರಗಳನ್ನು ಹುಡುಕಿ ವಿಷಯ ಸಂಗ್ರಹಣ ಮಾಡಿದ. ಇಂಥ 22 ವರ್ಷಗಳ ಉಗ್ರತಪಸ್ಸಿನ ಫಲವೆಲ್ಲ ಅವನ ಕೋಶದಲ್ಲಿ ಮೂಡಿದೆ.

ಅತಿದೊಡ್ಡ ವೆಬ್ಸ್‍ಟರ್ ಕೋಶ ಷಾರ್ಟರ್ ಆಕ್ಸ್‍ಫರ್ಡ್ ಕೋಶದಷ್ಟು ಗಾತ್ರವುಳ್ಳದ್ದು. ಆದರೂ ಅದು ಸಂಪೂರ್ಣ ಆಕ್ಸ್‍ಫರ್ಡ್ ಕೋಶದಲ್ಲಿರುವಷ್ಟು ಪದಗಳನ್ನೂ ಒಳಗೊಂಡಿದೆ. ಆದುದರಿಂದ ಅದರಲ್ಲಿ ಪ್ರತಿಯೊಂದು ಪದಕ್ಕೂ ಕೊಟ್ಟಿರುವ ವ್ಯಾಖ್ಯೆ, ವಿವರಣೆಗಳು ಸಂಕ್ಷಿಪ್ತವಾಗಿರುವುದು ಸಹಜವೇ ಆಗಿದೆ. ವಸ್ತುತಃ ಈ ಸಂಕ್ಷಿಪ್ತತೆ ಈ ಕೋಶದ ಒಂದು ಗುಣವೇ ಆಗಿದೆ. ಏಕೆಂದರೆ ಇದರಲ್ಲಿನ ವ್ಯಾಖ್ಯೆಗಳೂ ವಿವರಣೆಗಳೂ ಎಷ್ಟು ಎಷ್ಟು ಸಂಕ್ಷೇಪವಾಗಿದೆಯೋ ಅಷ್ಟೇ ಸ್ಪಷ್ಟವೂ ನಿಷ್ಕøಷ್ಟವೂ ಆಗಿವೆ. ಅಮೆರಿಕದ ಕಾಗುಣಿತಕ್ಕೂ ಬ್ರಿಟಿಷ್ ಕಾಗುಣಿತಕ್ಕೂ ಭೇದವಿದ್ದಲ್ಲಿ ಈ ಕೋಶದಲ್ಲಿ ಎರಡನ್ನೂ ಕೊಟ್ಟಿರುವುದರಿಂದ ಇದನ್ನು ಎಲ್ಲ ದೇಶಗಳವರೂ ಬಳಸಲು ಉಪಯುಕ್ತವಾಗಿದೆ. ಹಲವೆಡೆಗಳಲ್ಲಿ ಚಿತ್ರಗಳನ್ನೂ ಕೊಟ್ಟಿರುವುದರಿಂದ ವೆಬ್ಸ್‍ಟರ್ ಕೋಶದ ಉಪಯುಕ್ತತೆ ಹೆಚ್ಚಿದೆ.

ಮೆರಿಯಮ್ ಪ್ರಕಟಣ ಸಂಸ್ಥೆಯವರು ವೆಬ್ಸ್‍ಟರ್ ಕೋಶದ ಅಸಂಕ್ಷಿಪ್ತ ಆವೃತ್ತಿಯನ್ನು ಮೊದಲ ಬಾರಿಗೆ 1847ರಲ್ಲಿ ಪ್ರಕಟಿಸಿದರು. ಮುಂದೆ ಈ ಕೋಶ ವೆಬ್ಸ್‍ಟರ್ಸ್ ಇಂಟರ್‍ನ್ಯಾಷನಲ್ ಡಿಕ್ಷನರಿ ಎಂಬ ಹೆಸರಿನಲ್ಲಿ 1890ರಲ್ಲಿ ಅಚ್ಚಾಯಿತು. 1909, 1934 ಮತ್ತು 1962ರಲ್ಲಿ ವೆಬ್ಸ್‍ಟರ್ಸ್ ಫಸ್ಟ್, ಸೆಕೆಂಡ್ ಮತ್ತು ಥರ್ಡ್ ನ್ಯೂ ಇಂಟರ್‍ನ್ಯಾಷನಲ್ ಡಿಕ್ಷನರಿಗಳು ಅನುಕ್ರಮವಾಗಿ ಅಚ್ಚಾದುವು.

ವೆಬ್ಸ್‍ಟರ್ಸ್ ಥರ್ಡ್ ನ್ಯೂ ಇಂಟರ್‍ನ್ಯಾಷನಲ್ ಡಿಕ್ಷನರಿಯಲ್ಲಿ 4ಳಿ ಲಕ್ಷಕ್ಕೂ ಮೀರಿ ಪದಗಳ ವ್ಯಾಖ್ಯೆ ವಿವರಣೆಗಳಿವೆ. ಈ ವ್ಯಾಖ್ಯೆ ವಿವರಣೆಗಳನ್ನು ಸ್ಪಷ್ಟಪಡಿಸಲು ಹಾಗೂ ಸಮರ್ಥಿಸಲು ಪ್ರಸಿದ್ಧ ಲೇಖಕರ ಗ್ರಂಥಗಳು, ಲೇಖನಗಳು, ಅಸಂಖ್ಯಾತ ಪತ್ರಿಕೆಗಳು, ನಿಯತಕಾಲಿಕಗಳು ಇವೆಲ್ಲವುಗಳಿಂದ ಸಂಗ್ರಹಿಸಿದ 60 ಲಕ್ಷಕ್ಕೂ ಮೀರಿದ ಉಲ್ಲೇಖಗಳನ್ನು ಒದಗಿಸಲಾಗಿದೆ.

ಆಕ್ಸ್‍ಫರ್ಡ್ ಇಂಗ್ಲಿಷ್ ಕೋಶದಂತೆ ವೆಬ್ಸ್‍ಟರ್ ಕೋಶವೂ ಮುಖ್ಯವಾಗಿ ಸಾಮಾನ್ಯೋಪಯೋಗಿಯಾದ ಕೋಶ. ಆದರೂ ವಿಜ್ಞಾನ ಮತ್ತು ಶಾಸ್ತ್ರಗಳಿಗೆ ಸಂಬಂಧಿಸಿದ ಸಾವಿರಾರು ಪದಗಳನ್ನೂ ಇಲ್ಲಿ ಸೇರಿಸಲಾಗಿದೆ. ಇವುಗಳ ವ್ಯಾಖ್ಯೆಯಲ್ಲಿಯೂ ಸಾಮಾನ್ಯ ವಾಚಕರಿಗೆ ಸ್ಪಷ್ಟವಾಗಿರಬೇಕೆಂಬ ಕಾರಣದಿಂದ ಶಾಸ್ತ್ರೀಯ ನಿಷ್ಕøಷ್ಟತೆಯನ್ನು ಬಲಿಗೊಟ್ಟಿಲ್ಲ. ನಿರ್ದುಷ್ಟತೆ, ಸ್ಪಷ್ಟತೆ, ಸಮಗ್ರತೆ, ಈ ಮೂರು ಲಕ್ಷಣಗಳೂ ಈ ಕೋಶಗಳ ಮುಖ್ಯ ಆದರ್ಶಗಳೆಂದು ಸಂಪಾದಕರು ಹೇಳಿಕೊಂಡಿದ್ದಾರೆ. ಇದು ಅತಿಶಯೋಕ್ತಿಯಲ್ಲವೆಂಬ ವಿಷಯ ಯಾವ ಓದುಗರಿಗೂ ಸ್ಪಷ್ಟವೇ ಆಗಿದೆ.

ವೆಬ್ಸ್‍ಟರ್ ಕೋಶಕುಟುಂಬದಲ್ಲಿ ವಿವಿಧ ಕೋಶಗಳು ಹುಟ್ಟಿವೆ. ಅವುಗಳಲ್ಲಿ ವೆಬ್ಸ್‍ಟರ್ಸ್ ಡಿಕ್ಷನರಿ ಆಫ್ ಸಿನೊನಿಮ್ಸ್ ಎಂಬುದು ಪರ್ಯಾಯ ಪದಗಳ ಅಥವಾ ಸಮಾನಾರ್ಥಕಗಳ ಕೋಶ. ನ್ಯೂ ಇಂಟರ್‍ನ್ಯಾಷನಲ್‍ಗೂ ಇದಕ್ಕೂ ನೇರವಾದ ಸಂಬಂಧ ಇಲ್ಲ. ಇದರಲ್ಲಿ ಪದಗಳನ್ನು ಅಕ್ಷರ ಕ್ರಮದಲ್ಲೇ ಜೋಡಿಸಿದೆ. ಪದಗಳ ಹಲವು ಸಮಾನಾರ್ಥಕಗಳನ್ನು ಕೊಟ್ಟಿರುವುದಲ್ಲದೆ ಇವುಗಳಲ್ಲೂ ಒಂದಕ್ಕೊಂದಕ್ಕಿರುವ ಅರ್ಥಭೇದಗಳನ್ನೂ ಛಾಯಾಭೇದಗಳನ್ನೂ ಸೂಕ್ಷ್ಮವಾಗಿ ವಿವರಿಸಿ, ನಿದರ್ಶನಗಳ ಸಮೇತ ಸಮರ್ಥಿಸಿರುವುದು ಈ ಕೋಶದ ವೈಶಿಷ್ಟ್ಯ. ಇದರಿಂದ ಈ ಕೋಶ ಜಗತ್ತಿಗೆಲ್ಲ ಉಪಯುಕ್ತವಾದದು. ಪ್ರತಿಪದದ ಕೆಳಗೂ ಪರ್ಯಾಯ ಪದಗಳನ್ನು ಕೊಟ್ಟಮೇಲೆ, ಸದೃಶ ಪದಗಳ ಮತ್ತು ವಿರುದ್ಧ ಪದಗಳ ಪಟ್ಟಿಯನ್ನೂ ಕೊಟ್ಟಿದೆ. ಇದರಿಂದ ಈ ಕೋಶದ ಉಪಯುಕ್ತತೆ ಇನ್ನೂ ಹೆಚ್ಚಿದೆ.

ವೆಬ್ಸ್‍ಟರ್ಸ್ ಸೆವೆನ್ತ್ ನ್ಯೂ ಕಾಲೀಜಿಯೆಟ್ ಡಿಕ್ಷನರಿ, ಮೆರಿಯಮ್-ಬೆಲ್ ಮುದ್ರಣ (1963)-ಈ ಕೋಶ ವೆಬ್ಸ್‍ಟರ್ಸ್ ಇಂಟರ್‍ನ್ಯಾಷನಲ್‍ನಿಂದಲೇ ಹುಟ್ಟಿದ ಸಂಕ್ಷಿಪ್ತ ಕೋಶ. ಸಾಮಾನ್ಯ ವಾಚಕರಿಗೂ ವಿದ್ವಾಂಸರಿಗೂ ಉಪಯುಕ್ತವಾಗಿದ್ದರೂ ಈ ಕೋಶ ವಿಶೇಷವಾಗಿ, ಅದರ ಹೆಸರೇ ಹೇಳುವಂತೆ, ವಿದ್ಯಾರ್ಥಿಗಳನ್ನು ಕುರಿತದ್ದು. ಇದರ 1200 ಪುಟಗಳಲ್ಲಿ 130,000 ಪದಗಳಿವೆ. ಪದಗಳ ವ್ಯಾಖ್ಯೆ ವಿವರಣೆಗಳಲ್ಲದೆ ಇದರಲ್ಲೂ ವಿವಿಧ ಉಪಯುಕ್ತ ವಿಷಯಗಳಿವೆ. ಈ ಗಾತ್ರದ ಕೋಶಗಳಲ್ಲೆಲ್ಲ ಇದು ಅತ್ಯುತ್ಕೃಷ್ಟವಾದುದು.

ವೆಬ್ಸ್‍ಟರ್ ಕೋಶಗಳ ವೈಶಿಷ್ಟ್ಯ ಇದು: ಒಂದು ಪದಕ್ಕೆ ವ್ಯಾಖ್ಯೆ ಕೊಡುವಾಗ ಐತಿಹಾಸಿಕವಾಗಿ ಅದರ ಅರ್ಥ ಕಾಲಕಾಲಕ್ಕೆ ಹೇಗೆ ಬದಲಾಯಿಸುತ್ತ ಹೋಯಿತೋ ಅದೇ ಕ್ರಮದಲ್ಲಿ ವಾಖ್ಯೆಗಳನ್ನು ಜೋಡಿಸಿರುವುದರಿಂದ ಪದಗಳ ಅರ್ಥಭೇದಗಳಲ್ಲಿ ಛಾಯಾಭೇದಗಳನ್ನೂ ಸುಲಭವಾಗಿ ಗುರುತಿಸಬಹುದಾಗಿದೆ. ಪದಗಳ ವ್ಯಾಖ್ಯೆಪ್ರಯೋಗಗಳಿಗೆ ಅಧಿಕೃತ ಮೂಲಗಳಿಂದ ನಿದರ್ಶನಗಳನ್ನು ಉಲ್ಲೇಖಿಸಿರುವುದರಿಂದ ಪದಗಳ ಅರ್ಥ ಹಾಗೂ ಪ್ರಯೋಗಗಳನ್ನು ಸರಿಯಾಗಿ ಗ್ರಹಿಸಬಹುದು. ಮೇಲಾಗಿ, ಸಂಕ್ಷೇಪ ರೂಪಗಳು, ರಸಾಯನಧಾತುಗಳ ಸಂಕೇತಾಕ್ಷರಗಳು, ಸಂಗೀತ ಮೊದಲಾದ ಶಾಸ್ತ್ರಗಳಲ್ಲಿ ಬಳಸುವ ಸಂಕೇತಗಳು, ಮುದ್ರಣದ ಕರಡುಗಳನ್ನು ತಿದ್ದುವ ಸಂಕೇತಗಳು. ವಿವಿಧ ಹೆಸರುಗಳು ಹಾಗೂ ಅವುಗಳ ಉಚ್ಚಾರಣೆಗಳು, ಪ್ರಸಿದ್ಧ ಪುರುಷರ ಸಂಕ್ಷಿಪ್ತ ಪರಿಚಯ, ಭೂವಿವರ ಕೋಶ ಸಂಗ್ರಹ, ಸಂಬೋಧನಾ ಸಂಪ್ರದಾಯಗಳು. ಇಂಥ ಹಲವು ಬಗೆಯ ವಿವಿಧೋಪಯೋಗಿಯಾದ ವಿಷಯಗಳನ್ನೊಳಗೊಂಡಿರುವುದರಿಂದ ವೆಬ್ಸ್‍ಟರ್ ನ್ಯೂ ಇಂಟರ್‍ನ್ಯಾಷನಲ್ ಹಾಗೂ ನ್ಯೂ ಕಾಲೀಜಿಯೆಟ್ ಕೋಶಗಳು ಸಾಮಾನ್ಯ ಕೋಶಗಳಲ್ಲದೆ ವಿಶ್ವಕೋಶಗಳೂ ಆಗಿವೆ.

ವೆಬ್ಸ್‍ಟರ್ಸ್ ಥರ್ಡ್ ಇಂಟರ್‍ನ್ಯಾಷನಲ್ ಡಿಕ್ಷನರಿಯೊಂದರ ಉತ್ಪಾದನೆಗಾಗಿ ಮಾತ್ರ ಮೆರಿಯಮ್ ಕಂಪನಿಗೆ ಆದ ವೆಚ್ಚ 35 ಲಕ್ಷ ಡಾಲರ್. ಇದನ್ನು ತಯಾರಿಸಲು 757 ಸಂಪಾದಕ-ವರ್ಷಗಳು ಹಿಡಿಯಿತೆಂದು ಕೋಶದ ಮುನ್ನುಡಿಯಲ್ಲಿ ಹೇಳಲಾಗಿದೆ. ಈ ಸಾಹಸೋದ್ಯಮದ ಪ್ರಮಾಣವನ್ನು ಈ ಅಂಕಿ-ಅಂಶಗಳಿಂದ ಊಹಿಸಬಹುದು.

ಮೆರಿಯಮ್-ವೆಬ್ಸ್‍ಟರ್ ಸಂಪಾದಕ ವರ್ಗದಲ್ಲಿ ಒಬ್ಬ ಪ್ರಧಾನ ಸಂಪಾದಕ. 13 ಜನ ಸಹಸಂಪಾದಕರು, 58 ಜನ ಸಹಾಯಕ ಸಂಪಾದಕರು, 65 ಜನ ಉಪ ಸಂಪಾದಕರು, 31 ಜನ ಆಡಳಿತವರ್ಗ ಹಾಗೂ ಗುಮಾಸ್ತೆವರ್ಗ-ಇವರೆಲ್ಲ ಇದ್ದಾರೆ. ಸ್ಥಳೀಯ ಸಂಪಾದಕರಲ್ಲಿ ಭೌತ, ಗಣಿತ, ರಸಾಯನ, ಸಸ್ಯ, ಪ್ರಾಣಿ, ತತ್ತ್ವಶಾಸ್ತ್ರ, ರಾಜನೀತಿ, ಪುರಾತತ್ತ್ವ, ಇತಿಹಾಸ ಈ ಒಂದೊಂದು ಶಾಸ್ತ್ರಕ್ಕೆ ಒಬ್ಬೊಬ್ಬರು ಇದ್ದಾರೆ. ಇದಲ್ಲದೆ ಭಾಷಾಶಾಸ್ತ್ರಜ್ಞರು, ಬಹುಭಾಷಾವಿದರು, ನಿರುಕ್ತಿಕಾರರು, ಧ್ವನಿ ಶಾಸ್ತ್ರಜ್ಞರು ಇವರೆಲ್ಲ ಇದ್ದಾರೆ. ವಿವಿಧ ಶಾಸ್ತ್ರಪಟುಗಳಾದ ಬೇರೆ ವಿದ್ವಾಂಸರುಗಳನ್ನೂ ಸಮಾಲೋಚಕರನ್ನಾಗಿ ನೇಮಿಸಿಕೊಂಡು ಕೋಶಗಳ ನಿರ್ಮಾಣದಲ್ಲಿ ಅವರ ಸಹಾಯವನ್ನು ಪಡೆಯಲಾಗಿದೆ. ಇಂಥ ಹೊರಗಿನ ಸಮಾಲೋಚಕರ ಸಂಖ್ಯೆ 196.

ಈಚೆಗೆ 40,000 ವ್ಯಕ್ತಿಗಳ ಸಂಕ್ಷಿಪ್ತ ಜೀವನ ವಿಚಾರಗಳನ್ನೊಳಗೊಂಡು 1,700 ಪುಟಗಳಷ್ಟು ವ್ಯಾಪಾರವಾಗಿರುವ ವೆಬ್ಸ್‍ಟರ್ಸ್ ಬಯೊಗ್ರಾಫಿಕಲ್ ಡಿಕ್ಷನರಿ ಮತ್ತು 40,000 ಭೌಗೋಳಿಕ ಪ್ರದೇಶಗಳ ಸಂಕ್ಷಿಪ್ತ ವಿವರಗಳನ್ನೊಳಗೊಂಡು 1,326 ಪುಟಗಳಷ್ಟು ವ್ಯಾಪಕವಾಗಿರುವ ವೆಬ್ಸ್‍ಟರ್ರ್ ಜಿಯೊಗ್ರಾಫಿಕಲ್ ಡಿಕ್ಷನರಿ-ಎಂಬೆರಡು ಉಪಯುಕ್ತ ಕೋಶಗಳು ಬಂದಿವೆ.

ಕನ್ನಡ-ಕನ್ನಡ ನಿಘಂಟು: ಭಾಷಾಶಾಸ್ತ್ರ ನಿಯಮಗಳಿಗೆ ಅನುಸಾರವಾಗಿದ್ದು, ಚಾರಿತ್ರಿಕ ವಿವರಣೆಯಿಂದ ಕೂಡಿ ಪ್ರಮಾಣ ಭೂತವಾಗಿಯೂ ಸಮಗ್ರಸ್ವರೂಪದ್ದಾಗಿಯೂ ಇರುವ ಕನ್ನಡ-ಕನ್ನಡ ನಿಘಂಟಿನ ನಿರ್ಮಾಣಯೋಜನೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಕೈಗೊಂಡಿದೆ. ಕನ್ನಡ ಭಾಷೆಗೆ ಈ ಬಗೆಯ ಶಾಸ್ತ್ರೀಯವಾದ ನಿಘಂಟು ಸಿದ್ಧವಾಗುತ್ತಿರುವುದು ಇದೇ ಮೊದಲು.

ಕನ್ನಡ ಸಾಹಿತ್ಯ ಪರಿಷತ್ತಿನ ಈ ಕನ್ನಡ-ಕನ್ನಡ ನಿಘಂಟು ಡೆಮ್ಮಿ ಚತುಷ್ಪತ್ರ ಮೊದಲು. ಆಕಾರದಲ್ಲಿ ಸುಮಾರು ಐದುಸಾವಿರ ಪುಟಗಳಷ್ಟಾಗಬಹುದೆಂದು ಅಂದಾಜು ಮಾಡಲಾಗಿದೆ. ಸಾವಿರದ ಇನ್ನೂರ ಐವತ್ತು ಪುಟಗಳಿರುವ ನಾಲ್ಕು ಸಂಪುಟಗಳಲ್ಲಿ ಈ ನಿಘಂಟು ಪ್ರಕಟವಾಗುವಂತೆ ಏರ್ಪಡಿಸಲಾಗಿದೆ. ತೊಂಬತ್ತಾರು ಪುಟಗಳ ಬಿಡಿ ಸಂಚಿಕೆಗಳ ರೂಪದಲ್ಲಿ ಈ ನಿಘಂಟು ಪ್ರಕಟವಾಗುತ್ತಿದೆ. 1,321 ಪುಟಗಳ ನಿಘಂಟಿನ ಪ್ರಥಮ ಸಂಪುಟ 1971ರ ಡಿಸೆಂಬರಿನಲ್ಲಿ ಪ್ರಕಟವಾಯಿತು. ಈ ನಿಘಂಟಿನ ಪ್ರತಿಯೊಂದು ಪುಟದಲ್ಲೂ ಎರಡೆರಡು ಅಂಕಣಗಳಿದ್ದು ಒಂದೊಂದು ಅಂಕಣದಲ್ಲಿ ನಲವತ್ತಾರು ಪಂಕ್ತಿಗಳಿವೆ. ಸುಮಾರು ಒಂದೂವರೆ ಲಕ್ಷ ಶಬ್ದಗಳು ಈ ನಿಘಂಟಿನಲ್ಲಿ ಮುಖ್ಯ ಉಲ್ಲೇಖಗಳಾಗಿ ಬರಬಹುದೆಂದು ನಿರೀಕ್ಷಿಸಲಾಗಿದೆ.

ಕನ್ನಡ ಭಾಷೆಯಲ್ಲಿನ ಎಲ್ಲ ತೆರನ ಸಾಹಿತ್ಯವನ್ನೂ ಈ ನಿಘಂಟಿನ ಸಂಪಾದನೆಯಲ್ಲಿ ಬಳಸಿಕೊಳ್ಳಲಾಗಿದೆ. ಕನ್ನಡದ ಪ್ರಥಮಶಾಸನವೆಂದು ಪರಿಗಣಿತವಾಗಿರುವ ಸುಮಾರು 450ರ ಹಲ್ಮಿಡಿ ಶಾಸನದಿಂದ ಹಿಡಿದು 1800ರ ವರೆಗಿನ ಪ್ರಕಟಿತ ಅಪ್ರಕಟಿತ ಶಾಸನಗಳನ್ನೆಲ್ಲ ಅವಲೋಕಿಸಲಾಗಿದೆ. ಕನ್ನಡದಲ್ಲಿ ಉಪಲಬ್ಧವಾಗಿರುವ ಪ್ರಥಮಗ್ರಂಥವಾದ ನೃಪತುಂಗನ ಕವಿರಾಜಮಾರ್ಗದಿಂದ ಹಿಡಿದು ಕುವೆಂಪು ಅವರ ಶ್ರೀರಾಮಾಯಣ ದರ್ಶನದ ವರೆಗಿನ, ಇನ್ನೂ ಈಚಿನ ಕಾಲಪರಿಮಿತಿಯಲ್ಲಿ ಬರುವ ಹಳಗನ್ನಡ, ನಡುಗನ್ನಡ, ಹೊಸಗನ್ನಡಗಳ ಅನೇಕಾನೇಕ ಪ್ರಕಟಿತ ಮತ್ತು ಅಪ್ರಕಟಿತ ಗ್ರಂಥಗಳನ್ನು ಪರಿಶೀಲಿಸಲಾಗಿದೆ. ಕರ್ಣಾಟಕದ ಬೇರೆ ಬೇರೆ ಪ್ರದೇಶಗಳಿಂದ ಪ್ರಾತಿನಿಧಿಕ ವಾದ ಹಲವು ಆಧುನಿಕ ಗದ್ಯಪದ್ಯಗ್ರಂಥಗಳನ್ನೂ ಉಪಯೋಗಿಸಿಕೊಳ್ಳಲಾಗಿದೆ. ಜೊತೆಗೆ, ಅಲಂಕಾರಶಾಸ್ತ್ರ, ಅಶ್ವಶಾಸ್ತ್ರ, ಶಿಲ್ಪಶಾಸ್ತ್ರ, ಕಾಮಶಾಸ್ತ್ರ, ಗಜಶಾಸ್ತ್ರ, ಛಂದಶಾಸ್ತ್ರ, ಜ್ಯೋತಿಶಾಸ್ತ್ರ, ತತ್ತ್ವಶಾಸ್ತ್ರ, ವೈದ್ಯಶಾಸ್ತ್ರ, ಶಿಲ್ಪಶಾಸ್ತ್ರ, ಸಂಗೀತಶಾಸ್ತ್ರ, ಸೂಪಶಾಸ್ತ್ರ-ಮುಂತಾದುವುಗಳಿಗೆ ಸಂಬಂಧಿಸಿದ ಶಾಸ್ತ್ರೀಯ ಗ್ರಂಥಗಳಿಂದಲೂ ಶಬ್ದಗಳನ್ನು ಸಂಗ್ರಹಿಸಲಾಗಿದೆ. ಮತ್ತು ಜೈನ, ವೀರಶೈವ, ವೈಷ್ಣವಧರ್ಮಗಳಿಗೆ ಸಂಬಂಧಿಸಿದ ವಿಶೇಷ ಪಾರಿಭಾಷಿಕ ಶಬ್ದಗಳಲ್ಲಿ ಹಲವನ್ನು ಆರಿಸಿಕೊಳ್ಳಲಾಗಿದೆ. ಹೀಗೆ ಅನೇಕ ಆಕರಗಳಲ್ಲಿ ದೊರೆಯುವ ಶಬ್ದರೂಪಗಳನ್ನು ಅವುಗಳ ಸಂದರ್ಭಗಳೊಡನೆ ಪಟ್ಟಿಮಾಡಿ ಅವುಗಳ ಆಧಾರದ ಮೇಲೆ ಶಬ್ದರೂಪ ಮತ್ತು ಅರ್ಥಗಳನ್ನು ನಿರ್ಣಯಿಸಲಾಗಿದೆ. ಅಂಥ ಶಬ್ದ ಪಟ್ಟಿಗಳು ಈಗ ಎಂಟು ಲಕ್ಷದಷ್ಟು ಆಗಿವೆ.

ಕನ್ನಡದಲ್ಲಿ ಈವರೆಗೆ ಉಪಲಬ್ಧವಾಗಿರುವ ಅನೇಕ ಪ್ರಾಚೀನ ಅರ್ವಾಚೀನ ನಿಘಂಟುಗಳನ್ನೂ ಇನ್ನೂ ಹಸ್ತಪ್ರತಿ ರೂಪದಲ್ಲೇ ಇರುವ ನಿಘಂಟುಗಳನ್ನೂ ಬಳಸಿಕೊಳ್ಳಲಾಗಿದೆ. ಇದು ಪ್ರಧಾನವಾಗಿ ಕನ್ನಡ ನಿಘಂಟಾದರೂ ಕನ್ನಡಭಾಷೆಯಲ್ಲಿ ಸೇರಿಹೋಗಿರುವ ತದ್ಭವ, ತತ್ಸಮ, ಅನ್ಯದೇಶ್ಯ ಮುಂತಾದ ಶಬ್ದಗಳೂ ಧಾರ್ಮಿಕ, ಲೌಕಿಕ, ವ್ಯಾವಹಾರಿಕ, ಪಾರಿಭಾಷಿಕ ಮುಂತಾದ ಶಬ್ದಗಳೂ ಈ ನಿಘಂಟಿನಲ್ಲಿ ಸೇರಿವೆ. ಕನ್ನಡ ಭಾಷೆಯಲ್ಲಿನ ಶಬ್ದ ಸಮಾಸಗಳು ಮಾತ್ರವಲ್ಲದೆ ಕೃತ್, ತದ್ಧಿತಪ್ರತ್ಯಯಗಳನ್ನೂ ಪ್ರಶ್ನೆ, ಅವಧಾರಣ, ಸಂಶಯ ಮುಂತಾದ ಭಾವಸೂಚಕ ಪ್ರತ್ಯಯಗಳನ್ನೂ ಈ ನಿಘಂಟಿನಲ್ಲಿ ಪ್ರತ್ಯೇಕವಾಗಿ ತೋರಿಸಲಾಗಿದೆ.

ಸಂಸ್ಕøತ ಶಬ್ದಗಳಿಗೆ ಈ ನಿಘಂಟಿನಲ್ಲಿ ಒಂದು ವಿಶಿಷ್ಟ ಸ್ಥಾನವಿದೆ. ಕನ್ನಡ ಕಾವ್ಯಗಳಲ್ಲಿ ಬಂದಿರುವ ಸಂಸ್ಕøತ ಶಬ್ದಗಳು. ಕಿಟ್ಟೆಲ್ ಅವರು ತಮ್ಮ ನಿಘಂಟಿನಲ್ಲಿ ಕೊಟ್ಟಿರುವ ಸಂಸ್ಕøತ ಶಬ್ದಗಳು-ಇವನ್ನೆಲ್ಲ ಈ ನಿಘಂಟಿನಲ್ಲಿ ಸೇರಿಸಿಕೊಳ್ಳಲಾಗಿದೆ. ಸಂಸ್ಕøತ ಶಬ್ದಗಳಿಗೆ ಸಾಮಾನ್ಯವಾಗಿ ಪ್ರಯೋಗಗಳನ್ನು ಕೊಡುವುದಿಲ್ಲ. ಆದರೆ ಸಂಸ್ಕøತದಲ್ಲಿಲ್ಲದ ಅರ್ಥ ಕನ್ನಡದಲ್ಲಿ ಬೆಳೆದುಬಂದಿದ್ದರೆ ಅಂಥ ಸಂದರ್ಭದಲ್ಲಿ ಪ್ರಯೋಗಗಳನ್ನು ಕೊಡಲಾಗುವುದು. ಮತ್ತು ಯಾವುದಾದರೂ ಒಂದು ಶಬ್ದ ಅಪೂರ್ವವಾಗಿದ್ದರೆ, ವಿಶೇಷಾರ್ಥವುಳ್ಳದ್ದಾಗಿದ್ದರೆ ಅಥವಾ ಶಾಸ್ತ್ರಪರಿಭಾಷೆಯದಾಗಿದ್ದರೆ ಅದರ ಅರ್ಥವನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಉಚಿತವರಿತು ಪ್ರಯೋಗಗಳನ್ನು ಕೊಡಲಾಗುವುದು.

ಅಂಕಿತನಾಮಗಳನ್ನು ಸಾಮಾನ್ಯವಾಗಿ ಈ ನಿಘಂಟಿನಲ್ಲಿ ಸೇರಿಸಿಲ್ಲ. ಆದರೆ ಸುಮಾರು 1000ಕ್ಕೆ ಹಿಂದಿನ ಶಾಸನಗಳಲ್ಲಿ ದೊರೆಯುವ, ಭಾಷಾಶಾಸ್ತ್ರ ದೃಷ್ಟಿಯಿಂದ ವೈಶಿಷ್ಟ್ಯ ಕಂಡುಬರುವಂಥ ಅಂಕಿತನಾಮಗಳನ್ನು ಮಾತ್ರ ಸೇರಿಸಲಾಗುವುದು. ತರುವಾಯದ ಅಂಕಿತನಾಮಗಳಲ್ಲಿ ಉಚಿತವಾದವನ್ನು ಮಾತ್ರ ಉಳಿಸಿಕೊಳ್ಳಲಾಗುವುದು.

ಗ್ರಾಮ್ಯಶಬ್ದಗಳಿಗೂ ಪ್ರದೇಶಿಕ ಶಬ್ದರೂಪಗಳಿಗೂ ಈ ನಿಘಂಟಿನಲ್ಲಿ ಎಡೆಯಿಲ್ಲವಾದರೂ ದಿನನಿತ್ಯದ ಬಳಕೆಯಲ್ಲಿರುವ ಅನೇಕ ರೂಢಿಯ ಶಬ್ದಗಳನ್ನು ಸೇರಿಸಿಕೊಳ್ಳಲಾಗುವುದು. ಜೊತೆಗೆ ಭಾಷೆಯಲ್ಲಿ ಉಳಿದುಕೊಂಡು ಬಂದಿರುವ ನುಡಿಗಟ್ಟುಗಳನ್ನು ಆಯಾ ಮುಖ್ಯ ಶಬ್ದದ ಅಡಿಯಲ್ಲೇ ವಿವರಿಸಲಾಗುವುದು.

ಈ ನಿಘಂಟಿನಲ್ಲಿ ಮುಖ್ಯ ಉಲ್ಲೇಖನಗಳಾಗಿ ಬರುವ ಶಬ್ದಗಳನ್ನು ಕ್ರಿಯಾಪದ, ನಾಮವಾಚಕ, ಗುಣವಾಚಕ, ಅವ್ಯಯ, ಪ್ರತ್ಯಯ ಎಂದು ವಿಂಗಡಿಸಿದೆ. ಮುಖ್ಯ ಶಬ್ದಗಳನ್ನು ಕೊಟ್ಟಕೂಡಲೇ ಅದರ ಪಕ್ಕದಲ್ಲಿ ದುಂಡುಕಂಸದೊಳಗೆ ಆ ಶಬ್ದದ ಜಾತಿಯನ್ನು (ಕ್ರಿ), (ನಾ), (ಗು), (ಅ), (ಪ್ರ) ಮುಂತಾದ ಸಂಕೇತಗಳಿಂದ ಸೂಚಿಸಲಾಗುವುದು. ತರುವಾಯ ಅರ್ಥಗಳನ್ನು ವಿವರಿಸಲಾಗುವುದು. ಪ್ರತಿಯೊಂದು ಶಬ್ದದ ಅರ್ಥ ನಿರ್ಣಯಕ್ಕೂ ಪ್ರಯೋಗಗಳೇ ಮುಖ್ಯ ಆಧಾರ. ಶಬ್ದಗಳಿಗೆ ಅರ್ಥಗಳನ್ನು ಕೊಡುವಾಗ ಮೊದಲು ವಾಚ್ಯಾರ್ಥವನ್ನೂ ಆಮೇಲೆ ಲಕ್ಷಾರ್ಥವನ್ನೂ ಕೊಡಲಾಗುವುದು. ಎಲ್ಲ ಅರ್ಥಗಳಿಗೂ ಪ್ರಯೋಗಗಳನ್ನು ಕಾಲಾನುಕ್ರಮದಲ್ಲಿ ತೋರಿಸಲಾಗುವುದು. ಒಂದು ಶಬ್ದಕ್ಕೆ ಹಲವು ರೂಪಗಳಿದ್ದಾಗ ಅತಿಪ್ರಾಚೀನ ರೂಪದಿಂದ ಆರಂಭಿಸಿ ಕಾಲಾನುಕ್ರಮದಲ್ಲಿ ಅರ್ಥಗಳನ್ನೂ ಪ್ರಯೋಗಗಳನ್ನೂ ಕೊಡಲಾಗುವುದು. ಹೀಗೆಯೇ ಒಂದು ಶಬ್ದಕ್ಕೆ ಹಲವು ಅರ್ಥಗಳಿದ್ದಾಗ ಈ ಅರ್ಥಗಳನ್ನು ಚಾರಿತ್ರಿಕ ದೃಷ್ಟಿಯಿಂದ ಬೇರ್ಪಡಿಸಿ ಪ್ರತಿಯೊಂದು ಅರ್ಥಕ್ಕೂ ಸಂಬಂಧಿಸಿದ ಪ್ರಯೋಗಗಳನ್ನು ಕಾಲಾನುಕ್ರಮದಲ್ಲಿ ವಿವರಿಸಲಾಗುವುದು. ಶಬ್ದದ ಅರ್ಥವಿವರಣೆಗಾಗಿ ಹಳಗನ್ನಡ, ನಡುಗನ್ನಡ, ಹೊಸಗನ್ನಡ ಈ ಮೂರರಿಂದಲೂ ಪ್ರಯೋಗಗಳನ್ನು ಉದಾಹರಿಸಲಾಗುವುದು.

ಪ್ರತಿಯೊಂದು ಮುಖ್ಯಶಬ್ದಕ್ಕೂ ನಿಷ್ಪತ್ತಿಯನ್ನು ಆ ಶಬ್ದದ ಕೆಳಗೇ ಚೌಕಕಂಸದಲ್ಲಿ ಸೂಚಿಸಲಾಗುವುದು. ಸಮಾಸ ಶಬ್ದಗಳನ್ನು ಬಿಡಿಸಿ ತೋರಿಸಲಾಗುವುದು. ಒಂದು ಶಬ್ದ ಸಂಸ್ಕøತ ಭಾಷೆಯದಾಗಿದ್ದಲ್ಲಿ, ನಿಷ್ಪತ್ತಿವಿಭಾಗದಲ್ಲಿ ಚೌಕಕಂಸದಲ್ಲಿ [ಸಂ] ಎಂದೂ ದೇಶ್ಯಶಬ್ದವಾಗಿದ್ದಲ್ಲಿ [ದೇ] ಎಂದೂ ಸೂಚಿಸಿ ಇತರ ದ್ರಾವಿಡಭಾಷೆಗಳಲ್ಲಿ ಕಂಡುಬರುವ ಜ್ಞಾತಿಶಬ್ದಗಳನ್ನು ಉಲ್ಲೇಖಿಸಲಾಗುವುದು. ಹಾಗೆಯೇ ಒಂದು ಶಬ್ದ ಅನ್ಯದೇಶ್ಯವಾಗಿದ್ದಲ್ಲಿ ಆ ಶಬ್ದ ಯಾವ ಭಾಷೆಯಿಂದ ಬಂದದ್ದು ಎಂಬುದನ್ನು ( ಈ ಚಿಹ್ನೆ ಮುಂದೆ ಸೂಚಿಸಿ ತರುವಾಯ ಆಧಾರಶಬ್ದವನ್ನು ಕೊಡಲಾಗುವುದು. ಶಬ್ದದ ನಿಷ್ಪತ್ತಿ ತಿಳಿಯದ ಕಡೆ ಪ್ರಶ್ನಾರ್ಥಕ ಚಿಹ್ನೆ [?] ಇರುತ್ತದೆ.

ಉದಾಹರಣೆ:

1944ರ ಜನವರಿ 27ರಂದು ನಿಘಂಟು ಕಚೇರಿ ಪ್ರಾರಂಭವಾಯಿತು; ಅಂದಿನಿಂದ ಸುಮಾರು ಹತ್ತುವರ್ಷಗಳ ಕಾಲ ಎಂಬತ್ತು ವಿದ್ವಾಂಸರು ವಿವಿಧ ಆಕರಗಳಿಂದ ಪದಗಳನ್ನೂ ಪ್ರಯೋಗಗಳನ್ನೂ ಸಂಗ್ರಹ ಮಾಡುವ ಕೆಲಸವನ್ನು ನಿರ್ವಹಿಸುತ್ತ ಬಂದರು. 1954ರ ಅಕ್ಟೋಬರ್ 18 ರಂದು ಡಿ.ಎಲ್. ನರಸಿಂಹಾಚಾರ್ಯರು ಸಂಪಾದಕತ್ವವನ್ನು ವಹಿಸಿಕೊಂಡಮೇಲೆ ನಿಘಂಟಿನ ಸಂಪಾದನ ಕೆಲಸ ಪ್ರಾರಂಭವಾಯಿತು. ನಿಘಂಟು ಕಚೇರಿಯಲ್ಲಿ ಪ್ರಧಾನ ಸಂಪಾದಕರೂ, ಸಂಪಾದಕರೂ ಸೇರಿದಂತೆ ಮೂವರೂ ಉಪಸಂಪಾದಕರೂ ಸುಮಾರು ಹತ್ತು ಮಂದಿ ಸಹಾಯಕ ಸಂಪಾದಕರೂ ಕೆಲಸ ಮಾಡುತ್ತಿದ್ದಾರೆ. ನಿಘಂಟು ಸಂಪಾದಕ ಸಮಿತಿಯಲ್ಲಿ ಪರಿಷತ್ತಿನ ಅಧಿಕಾರ ವರ್ಗವನ್ನುಳಿದು 15 ಜನ ವಿದ್ವಾಂಸರಿದ್ದಾರೆ.

ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿಗಳ ಜೀವಂತಪ್ರತೀಕದಂತಿರುವ ಚಾರಿತ್ರಿಕ ಕ್ರಮದ ಈ ನಿಘಂಟು ಇಷ್ಟು ದೊಡ್ಡಪ್ರಮಾಣದಲ್ಲಿ ಈ ವಿಧದಲ್ಲಿ ರಚಿತವಾಗುತ್ತಿರುವುದು ಇದೇ ಪ್ರಥಮ. ನಿಘಂಟು ಕೇವಲ ನೀರಸವಾದ ಗಂಟಲ್ಲ ಎಂಬುದನ್ನು ತೋರಿಸಲು ಈ ನಿಘಂಟಿನಲ್ಲಿ ಕೊಟ್ಟಿರುವ ರಸವತ್ತಾದ ಪ್ರಯೋಗಗಳೇ ಸಾಕ್ಷಿಯಾಗಿವೆ.

ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ಕಿಟ್ಟೆಲ್ ಅವರ ಕನ್ನಡ-ಇಂಗ್ಲಿಷ್ ನಿಘಂಟಿನಿಂದ ಅತಿಶಯವಾಗಿ ಸಹಾಯ ಪಡೆದಿದ್ದರೂ ಇದು ಅದರ ಪ್ರತಿಕೃತಿಯಲ್ಲ; ಕಿಟ್ಟೆಲ್ ಅವರಿಗೆ ದೊರೆಯದಿದ್ದ ಶಾಸನಗಳನ್ನೂ ಗ್ರಂಥಗಳನ್ನೂ ಲೇಖನಗಳನ್ನೂ ಇಲ್ಲಿ ಹೇರಳವಾಗಿ ಉಪಯೋಗಿಸಿಕೊಂಡಿದೆ; ಭಾಷಾಶಾಸ್ತ್ರದ ಕಡೆ ವಿಶೇಷ ಗಮನವನ್ನು ಹರಿಸಲಾಗಿದೆ. ಕನ್ನಡ ಜನತೆಯ ಇಂದಿನ ಅವಶ್ಯಕತೆಗಳಿಗೆ ತಕ್ಕಂತೆ, ಇಂದಿನ ವಿದ್ವತ್ತನ್ನು ಪ್ರತಿಬಿಂಬಿಸುವಂತೆ ಸಿದ್ಧವಾಗುತ್ತಿರುವ ಈ ನಿಘಂಟು ಕನ್ನಡಿಗರಿಗೆ ಅತ್ಯಂತ ಉಪಯುಕ್ತವಾಗುವುದೆಂದು ನಂಬಬಹುದಾಗಿದೆ.

ಟ್ಯಾಂಗ್ ರಾಜವಂಶ

ಟ್ಯಾಂಗ್ ರಾಜವಂಶ ವು (Chinese: 唐朝; pinyin: Táng Cháo; IPA: [tʰɑ̌ŋ tʂʰɑ̌ʊ]; ಮಧ್ಯಭಾಗದ ಚೀನೀ ಭಾಷೆ: ಧಾಂಗ್‌) (ಜೂನ್‌ ೧೮, ೬೧೮–ಜೂನ್‌ ೪, ೯೦೭) ಚೀನಾದ ಚಕ್ರಾಧಿಪತ್ಯದ ರಾಜವಂಶವಾಗಿದ್ದು ಇದು ಸೂಯಿ ರಾಜವಂಶದ ನಂತರ ತನ್ನ ಅಸ್ತಿತ್ವವನ್ನು ಕಂಡುಕೊಂಡಿತು. ಇದನ್ನು ಅನುಸರಿಸಿಕೊಂಡು ಐದು ರಾಜವಂಶಗಳು ಮತ್ತು ಹತ್ತು ರಾಜ್ಯಗಳ ಅವಧಿಗಳು ಕಂಡುಬಂದವು. ಸೂಯಿ ಸಾಮ್ರಾಜ್ಯದ ಅವನತಿ ಮತ್ತು ಕುಸಿತದ ಸಂದರ್ಭದಲ್ಲಿ ಅಧಿಕಾರವನ್ನು ಸ್ವಾಧೀನಪಡಿಸಿಕೊಂಡ ಲೀ (李) ಕುಟುಂಬದಿಂದ ಇದು ಸಂಸ್ಥಾಪಿಸಲ್ಪಟ್ಟಿತು. ಎರಡನೇ ಝೌ ರಾಜವಂಶದ (ಅಕ್ಟೋಬರ್‌‌ ೮, ೬೯೦–ಮಾರ್ಚ್‌ ೩, ೭೦೫) ವತಿಯಿಂದ ಈ ರಾಜವಂಶವು ಸಂಕ್ಷಿಪ್ತ ಅವಧಿಗೆ ಅಡಚಣೆಗೊಳಗಾಯಿತು; ಏಕೆಂದರೆ ಈ ಅವಧಿಯಲ್ಲಿ ವೂ ಜೆಟಿಯಾನ್‌ ಸಾಮ್ರಾಜ್ಞಿಯು ಸಿಂಹಾಸನವನ್ನು ಸ್ವಾಧೀನಪಡಿಸಿಕೊಂಡು, ತನ್ನ ಸ್ವಂತ ಹಕ್ಕಿನಿಂದ ಆಳುವ ಮೊದಲ ಮತ್ತು ಏಕೈಕ ಚೀನೀ ಆಳುವ ಸಾಮ್ರಾಜ್ಞಿ ಎನಿಸಿಕೊಂಡಿದ್ದಳು.

ಆ ಸಮಯದಲ್ಲಿ ಪ್ರಪಂಚದಲ್ಲಿನ ಅತ್ಯಂತ ಜನದಟ್ಟಣೆಯ ನಗರ ಎಂದು ಪರಿಗಣಿಸಲ್ಪಟ್ಟಿದ್ದ ಚಾಂಗಾನ್‌ (ವರ್ತಮಾನದ ಕ್ಸಿಯಾನ್‌) ನಗರದಲ್ಲಿ ತನ್ನ ರಾಜಧಾನಿಯನ್ನು ಹೊಂದಿದ್ದ ಟ್ಯಾಂಗ್ ರಾಜವಂಶವು ಚೀನೀ ನಾಗರಿಕತೆಯಲ್ಲಿನ ಒಂದು ಉಚ್ಛ್ರಾಯ ಮಟ್ಟ ಎಂದು ಸಾಮಾನ್ಯವಾಗಿ ಪರಿಗಣಿಸಲ್ಪಟ್ಟಿದೆ. ಅಷ್ಟೇ ಅಲ್ಲ, ವಿಶ್ವಮಾನವ ಸಂಸ್ಕೃತಿಯ ಒಂದು ಸುವರ್ಣಯುಗ ಎನಿಸಿಕೊಂಡಿರುವ ಹಿಂದಿನ ಹಾನ್‌‌ ರಾಜವಂಶದ ಅವಧಿಯಲ್ಲಿದ್ದ ನಾಗರಿಕತೆಗೆ ಇದು ಸಮಾನವಾಗಿತ್ತು ಅಥವಾ ಅದನ್ನೂ ಅತಿಶಯಿಸುವಂತಿತ್ತು ಎಂದು ಹೇಳಲಾಗುತ್ತದೆ. ಈ ರಾಜವಂಶದ ಆರಂಭಿಕ ಆಡಳಿತಗಾರರ ಸೇನಾ ಕಾರ್ಯಾಚರಣೆಗಳ ಮೂಲಕ ಸ್ವಾಧೀನಪಡಿಸಿಕೊಳ್ಳಲಾದ ಇದರ ವಿಸ್ತಾರ ಭೂಪ್ರದೇಶವು ಹಾನ್‌‌ ಅವಧಿಯಲ್ಲಿ ಕಂಡುಬಂದುದಕ್ಕಿಂತ ಮಹತ್ತರವಾಗಿತ್ತು, ಮತ್ತು ಇದು ನಂತರದಲ್ಲಿ ಬಂದ ಯುವಾನ್‌ ರಾಜವಂಶ ಮತ್ತು ಕಿಂಗ್‌ ರಾಜವಂಶದೊಡನೆ ಪೈಪೋಟಿಗೆ ಇಳಿಯುವಂತಿತ್ತು. ೭ನೇ ಮತ್ತು ೮ನೇ ಶತಮಾನಗಳಲ್ಲಿ ನಡೆಸಲಾದ ಎರಡು ಜನಗಣತಿಗಳಲ್ಲಿ, ನೋಂದಾಯಿತ ಕುಟುಂಬಗಳ ಸಂಖ್ಯೆಯ ಆಧಾರದ ಮೇಲೆ ಟ್ಯಾಂಗ್ ದಾಖಲೆಗಳು ಜನಸಂಖ್ಯೆಯನ್ನು ಅಂದಾಜಿಸಿದ್ದು ಅದು ಸುಮಾರು ೫೦ ದಶಲಕ್ಷದಷ್ಟು ಜನರನ್ನು ಒಳಗೊಂಡಿತ್ತು ಎಂದು ತಿಳಿದುಬಂದಿದೆ. ಜೊತೆಗೆ, ೯ನೇ ಶತಮಾನದಲ್ಲಿ ಕೇಂದ್ರ ಸರ್ಕಾರವು ವಿಘಟನೆಯಾಗುತ್ತಿದ್ದಾಗ ಮತ್ತು ಜನಸಂಖ್ಯೆಯ ಒಂದು ಕರಾರುವಾಕ್ಕಾದ ಜನಗಣತಿಯನ್ನು ಸಂಕಲಿಸಲು ಅಸಮರ್ಥವಾಗಿದ್ದಾಗ, ಜನಸಂಖ್ಯೆಯು ಅಷ್ಟುಹೊತ್ತಿಗೆ ಸುಮಾರು ೮೦ ದಶಲಕ್ಷದಷ್ಟು ಪ್ರಮಾಣಕ್ಕೆ ಬೆಳೆದಿತ್ತು ಎಂದು ಅಂದಾಜಿಸಲಾಗಿದೆ. ತಾನು ಹೊಂದಿದ್ದ ದೊಡ್ಡ ಪ್ರಮಾಣದ ಜನಸಂಖ್ಯೆಯಿಂದಾಗಿ, ವೃತ್ತಿಪರವಾಗಿ ಮತ್ತು ಬಲಾತ್ಕಾರವಾಗಿ ಸೇರಿಸಲ್ಪಟ್ಟ ನೂರಾರು-ಸಾವಿರಾರು ಸೈನಿಕರ ಪಡೆಗಳನ್ನು ಪೋಷಿಸಿ ಬೆಳೆಸುವುದಕ್ಕೆ ರಾಜವಂಶಕ್ಕೆ ಸಾಧ್ಯವಾಯಿತು; ಏಷ್ಯಾದ ಒಳನಾಡಿನಲ್ಲಿ ಮತ್ತು ರೇಷ್ಮೆ ರಸ್ತೆಯ ಉದ್ದಕ್ಕೂ ಹಬ್ಬಿಕೊಂಡಿದ್ದ ಲಾಭದಾಯಕವಾದ ವ್ಯಾಪಾರ ಮಾರ್ಗಗಳಲ್ಲಿ ಅಸ್ತಿತ್ವವನ್ನು ಕಂಡುಕೊಂಡಿದ್ದ ಅಲೆಮಾರಿ ಅಧಿಕಾರ-ಶಕ್ತಿಗಳ ಜೊತೆಗೆ ಸೆಣಸಾಡಲು ಸದರಿ ರಾಜವಂಶಕ್ಕೆ ಈ ಪಡೆಗಳ ಅಗತ್ಯವಿತ್ತು. ಟ್ಯಾಂಗ್ ಆಸ್ಥಾನಕ್ಕೆ ಹಲವಾರು ರಾಜ್ಯಗಳು ಮತ್ತು ಸಂಸ್ಥಾನಗಳು ಕಪ್ಪ-ಕಾಣಿಕೆಯನ್ನು ಪಾವತಿಸಿದರೆ, ಒಂದು ಪಾಲಿತ ಪ್ರದೇಶ ವ್ಯವಸ್ಥೆ ಅಥವಾ ರಾಜ್ಯಪಾಲಕತ್ವ ವ್ಯವಸ್ಥೆಯ ಮೂಲಕ ತಾನು ಪರೋಕ್ಷವಾಗಿ ನಿಯಂತ್ರಣವನ್ನು ಹೊಂದಿದ್ದ ಹಲವಾರು ಪ್ರದೇಶಗಳನ್ನು ಕೂಡಾ ಟ್ಯಾಂಗ್ ರಾಜವಂಶವು ಗೆದ್ದುಕೊಂಡಿತು ಅಥವಾ ವಶಪಡಿಸಿಕೊಂಡಿತು. ರಾಜಕಾರಣದ ಅಧಿನಾಯಕತ್ವದ ಜೊತೆಜೊತೆಗೆ, ಕೊರಿಯಾ, ಜಪಾನ್‌, ಮತ್ತು ವಿಯೆಟ್ನಾಂ ಮೊದಲಾದ ದೇಶಗಳಲ್ಲಿನ ನೆರೆಹೊರೆಯ ಸಂಸ್ಥಾನಗಳ ಮೇಲೂ ಒಂದು ಶಕ್ತಿಯುತ ಸಾಂಸ್ಕೃತಿಕ ಪ್ರಭಾವವನ್ನು ಟ್ಯಾಂಗ್ ರಾಜವಂಶವು ಚಲಾಯಿಸಿತು.

ಟ್ಯಾಂಗ್ ರಾಜವಂಶದ ದ್ವಿತೀಯಾರ್ಧದಲ್ಲಿ ಕಂಡುಬಂದ ಕೇಂದ್ರಸ್ಥ ಅಧಿಕಾರದ ಅವನತಿ ಹಾಗೂ ಆನ್‌ ಷಿ ಬಂಡಾಯವನ್ನು ಹೊರತುಪಡಿಸಿದರೆ, ಟ್ಯಾಂಗ್ ರಾಜವಂಶವು ಬಹುತೇಕವಾಗಿ ಪ್ರಗತಿ ಮತ್ತು ಸ್ಥಿರತೆಯ ಒಂದು ಅವಧಿಗೆ ಸಾಕ್ಷಿಯಾಯಿತು. ಹಿಂದಿನ ಸೂಯಿ ರಾಜವಂಶದ ರೀತಿಯಲ್ಲಿ, ಪ್ರಮಾಣಕವಾಗಿಸಿದ ಪರೀಕ್ಷೆಗಳನ್ನು ನಡೆಸಿ ಕಚೇರಿಗೆ ಶಿಫಾರಸುಗಳ ಕಳಿಸುವ ಮಾರ್ಗವನ್ನು ಅನುಸರಿಸಿ ಅಧಿಕಾರಿಗಳನ್ನು ಕಡ್ಡಾಯವಾಗಿ ಸೇನೆಗೆ ಸೇರಿಸುವ ಮೂಲಕ ನಾಗರಿಕ ಸೇವಾ ವ್ಯವಸ್ಥೆಯೊಂದನ್ನು ಟ್ಯಾಂಗ್ ರಾಜವಂಶವು ನಿರ್ವಹಿಸಿತು. ೯ನೇ ಶತಮಾನದ ಅವಧಿಯಲ್ಲಿ ಜಿಯೆದುಷಿ ಎಂದು ಕರೆಯಲ್ಪಡುತ್ತಿದ್ದ ಪ್ರಾದೇಶಿಕ ಸೇನಾ ಮಂಡಲಾಧಿಪತಿಗಳ ಉಗಮದಿಂದಾಗಿ ಈ ನಾಗರಿಕ ಸುವ್ಯವಸ್ಥೆಯು ಒಳಗೊಳಗೆ ಹಾಳುಮಾಡಲ್ಪಟ್ಟಿತು. ಟ್ಯಾಂಗ್ ಯುಗದ ಅವಧಿಯಲ್ಲಿ ಚೀನೀ ಸಂಸ್ಕೃತಿಯು ಸಮೃದ್ಧಿಯಾಗಿ ಬೆಳೆಯಿತು ಮತ್ತು ಮತ್ತಷ್ಟು ಪಕ್ವಗೊಂಡಿತು; ಇದು ಚೀನೀ ಕಾವ್ಯಕ್ಕೆ ಸಂಬಂಧಿಸಿದ ಮಹೋನ್ನತವಾದ ಯುಗ ಎಂಬುದಾಗಿ ಪರಿಗಣಿಸಲ್ಪಟ್ಟಿದೆ. ಚೀನಾದ ಇಬ್ಬರು ಅತ್ಯಂತ ಪ್ರಸಿದ್ಧ ಕವಿಗಳಾದ ಲೀ ಬೈ ಮತ್ತು ಡು ಫು ಈ ಯುಗಕ್ಕೆ ಸೇರಿದವರಾಗಿದ್ದರು. ಅಷ್ಟೇ ಅಲ್ಲ, ಹಾನ್‌‌ ಗ್ಯಾನ್‌, ಝಾಂಗ್‌ ಕ್ಸುವಾನ್‌, ಮತ್ತು ಝೌ ಫ್ಯಾಂಗ್‌‌‌ರಂಥ ಅನೇಕ ಪ್ರಸಿದ್ಧ ವರ್ಣಚಿತ್ರಕಾರರು ಕೂಡಾ ಈ ಅವಧಿಯವರೇ ಎಂಬುದು ಗಮನಾರ್ಹ ಸಂಗತಿ. ವಿದ್ವಾಂಸರಿಂದ ಸಂಕಲಿಸಲ್ಪಟ್ಟ ಐತಿಹಾಸಿಕ ಸಾಹಿತ್ಯವಷ್ಟೇ ಅಲ್ಲದೇ ವಿಶ್ವಕೋಶಗಳು ಮತ್ತು ಭೌಗೋಳಿಕ ಕೃತಿಗಳ ಒಂದು ಸಮೃದ್ಧ ವೈವಿಧ್ಯತೆಯನ್ನೇ ಈ ಅವಧಿಯಲ್ಲಿ ಕಾಣಬಹುದಾಗಿತ್ತು.

ಮರದ ಪಡಿಯಚ್ಚಿನ ಮುದ್ರಣದ ಅಭಿವೃದ್ಧಿಯೂ ಸೇರಿದಂತೆ ಟ್ಯಾಂಗ್ ರಾಜವಂಶದ ಅವಧಿಯಲ್ಲಿ ಅನೇಕ ಗಮನಾರ್ಹ ಮಾರ್ಪಾಟುಗಳು ಕಂಡುಬಂದವು. ಬೌದ್ಧಧರ್ಮವು ಚೀನೀ ಸಂಸ್ಕೃತಿಯಲ್ಲಿನ ಒಂದು ಪ್ರಮುಖ ಪ್ರಭಾವಿ ಅಂಶವಾಗಿ ಮಾರ್ಪಟ್ಟಿತು ಮತ್ತು ಸ್ಥಳೀಕ ಚೀನೀ ಒಳಪಂಗಡಗಳು ಪ್ರಾಧಾನ್ಯತೆಯನ್ನು ಗಳಿಸಿದವು. ಆದಾಗ್ಯೂ, ಬೌದ್ಧಧರ್ಮವು ಕಾಲಾನಂತರದಲ್ಲಿ ಸಂಸ್ಥಾನದಿಂದ ಕಿರುಕುಳಕ್ಕೀಡಾಯಿತು ಮತ್ತು ಅದರ ಪ್ರಭಾವದಲ್ಲಿ ಕುಸಿತವು ಕಂಡುಬಂದಿತು. ೯ನೇ ಶತಮಾನದ ವೇಳೆಗೆ ರಾಜವಂಶ ಮತ್ತು ಕೇಂದ್ರ ಸರ್ಕಾರದ ಅವಸಾನವು ಸನ್ನಿಹಿತವಾಗಿತ್ತಾದರೂ, ಕಲೆ ಮತ್ತು ಸಂಸ್ಕೃತಿಗಳ ಬೆಳವಣಿಗೆಯು ಸಮೃದ್ಧಿಯಾಗಿ ಮುಂದುವರಿಯಿತು. ದುರ್ಬಲಗೊಂಡ ಕೇಂದ್ರ ಸರ್ಕಾರವು ಆರ್ಥಿಕತೆಯನ್ನು ನಿರ್ವಹಿಸುವ ಹೊಣೆಗಾರಿಕೆಯಿಂದ ಬಹುತೇಕವಾಗಿ ಹಿಂದೆ ಸರಿಯಿತಾದರೂ, ಇದನ್ನು ಲೆಕ್ಕಿಸದೆ ದೇಶದ ವ್ಯಾಪಾರದ ವ್ಯವಹಾರಗಳು ಅಖಂಡವಾಗಿ ಉಳಿದುಕೊಂಡವು ಹಾಗೂ ವಾಣಿಜ್ಯ ವ್ಯಾಪಾರವು ತನ್ನ ಅಭಿವೃದ್ಧಿಯನ್ನು ಮುಂದುವರಿಸಿತು.

ಬರ್ಕ್‌ಷೈರ್‌ ಹಾಥ್‌ವೇ

ಬರ್ಕ್‌ಷೈರ್‌ ಹಾಥ್‌ವೇ (NYSE: BRKA ಹಾಗೂ NYSE: BRKB) ಎಂಬುದು ಯುನೈಟೆಡ್‌ ಸ್ಟೇಟ್ಸ್‌ನ ನೆಬ್ರಾಸ್ಕಾದ, ಒಮಾಹಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಅನೇಕ ಅಂಗಸಂಸ್ಥೆ ಕಂಪೆನಿಗಳ ಮೇಲ್ವಿಚಾರಣೆ ನೋಡಿಕೊಳ್ಳುವ ಹಾಗೂ ನಿರ್ವಹಿಸುವ ವಾಣಿಜ್ಯ ಕೂಟ/ಸಂಘಟಿತ ವ್ಯಾಪಾರಿ ಸಂಸ್ಥೆ ಹಿಡುವಳಿ ಕಂಪೆನಿಯಾಗಿದೆ. ಕಂಪೆನಿಯು ಕಳೆದ 44 ವರ್ಷಗಳಿಂದ, ಬೃಹತ್‌ ಮೊತ್ತದ ಬಂಡವಾಳ/ಮೂಲಧನ ಹೂಡಿಕೆಯೊಂದಿಗೆ ಹಾಗೂ ಕನಿಷ್ಠ ಹೊಣೆ/ಸಾಲದೊಂದಿಗೆ ತನ್ನ ಷೇರುದಾರರಿಗೆ 20.3%ರಷ್ಟು ಕಡತ ಬೆಲೆಯಷ್ಟು ಮೊತ್ತದ ವಾರ್ಷಿಕ ಬೆಳವಣಿಗೆ ಕಂಡಿದೆ. ಬರ್ಕ್‌ಷೈರ್‌ ಹಾಥ್‌ವೇ ಸ್ಟಾಕ್‌/ದಾಸ್ತಾನು 2000-2010ರ ಅವಧಿಯಲ್ಲಿ S&P 500ರ ಪರವಾಗಿ[೩] ಋಣ ಹುಟ್ಟುವಳಿ 11.3%ರ ವಿರುದ್ಧ ಒಟ್ಟಾರೆ ಹುಟ್ಟುವಳಿ 76%ಯನ್ನು ಉತ್ಪಾದಿಸಿದೆ.

ವಾರೆನ್‌ ಬಫೆಟ್‌ರವರು ಕಂಪೆನಿ'ಯ ಅಧ್ಯಕ್ಷರು ಹಾಗೂ CEO ಆಗಿದ್ದಾರೆ. ಬಫೆಟ್‌ ಬರ್ಕ್‌ಷೈರ್‌ ಹಾಥ್‌ವೇ'ನ ವಿಮೆ ಕಾರ್ಯಾಚರಣೆಗಳಿಂದ (ಪಾವತಿಗಳನ್ನು ಮಾಡುವವರೆಗೆ ತಾತ್ಕಾಲಿಕವಾಗಿ ಪಾಲಿಸಿದಾರರ ಹಣವನ್ನು ಇಟ್ಟುಕೊಂಡಿರುವುದು) ಪಡೆದ "ಚಲಾಸ್ತಿ‌"ಯನ್ನು ತನ್ನ ಹೂಡಿಕೆಗಳಿಗೆ ಹಣ ಒದಗಿಸಲು ಉಪಯೋಗಿಸಿದರು. ಬರ್ಕ್‌ಷೈರ್‌ನಲ್ಲಿನ ತನ್ನ ವೃತ್ತಿಜೀವನದ ಹಿಂದಿನ ಅವಧಿಯಲ್ಲಿ, ಸಾರ್ವಜನಿಕವಾಗಿ ಉಲ್ಲೇಖಿತ ಸ್ಟಾಕ್‌/ದಾಸ್ತಾನುಗಳಲ್ಲಿನ ದೀರ್ಘಕಾಲೀನ ಹೂಡಿಕೆಗಳಲ್ಲಿ ಗಮನ ಕೇಂದ್ರೀಕರಿಸಿದ್ದರೂ, ತೀರ ಇತ್ತೀಚೆಗೆ ಇಡೀ ಕಂಪೆನಿಗಳನ್ನೇ ಕೊಳ್ಳುವುದರೆಡೆಗೆ ಹೊರಳಿದ್ದಾರೆ. ಬರ್ಕ್‌ಷೈರ್‌ ಈಗ ರೈಲುಹಾದಿಗಳು, ಕ್ಯಾಂಡಿ ಉತ್ಪಾದನೆ, ಚಿಲ್ಲರೆಮಾರಾಟ, ಗೃಹದ ಪೀಠೋಪಕರಣಗಳು, ವಿಶ್ವಕೋಶಗಳು, ವ್ಯಾಕ್ಯೂಂಕ್ಲೀನರ್‌ಗಳು, ಆಭರಣ ವ್ಯಾಪಾರ; ಸುದ್ದಿಪತ್ರಿಕೆ ಪ್ರಕಟಣೆ; ಸಮವಸ್ತ್ರಗಳ ತಯಾರಿಕೆ ಹಾಗೂ ವಿತರಣೆ; ಪಾದರಕ್ಷೆಗಳ ತಯಾರಿಕೆ, ಆಮದು ಹಾಗೂ ವಿತರಣೆ; ಅಷ್ಟೇ ಅಲ್ಲದೇ ಅನೇಕ ಪ್ರಾಂತೀಯ ವಿದ್ಯುದುಪಕರಣ ಹಾಗೂ ಅನಿಲ ಉಪಕರಣಗಳ ವ್ಯಾಪಾರವೂ ಸೇರಿದಂತೆ ವ್ಯಾಪಕ ವಿಧಗಳ ವ್ಯವಹಾರಗಳ ಸ್ವಾಮ್ಯವನ್ನು ಹೊಂದಿದೆ.

ಬಾಂಗ್ಲಾಪೀಡಿಯಾ

ಬಾಂಗ್ಲಾಪೀಡಿಯಾ , ಅಥವಾ ಬಾಂಗ್ಲಾದೇಶದ ನ್ಯಾಷನಲ್ ಎನ್ಸೈಕ್ಲೋಪೀಡಿಯಾ, ಇದು ಮೊದಲ ಬಾಂಗ್ಲಾದೇಶದ ಎನ್ಸೈಕ್ಲೋಪೀಡಿಯಾ. ಇದು ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮುದ್ರಣ, CD-ROM ರೂಪದಲ್ಲಿ ಮತ್ತು ಆನ್ಲೈನ್ನಲ್ಲಿ ಲಭ್ಯವಿದೆ, ಮುದ್ರಣ ಆವೃತ್ತಿಯು ಹತ್ತು 500 ಪುಟ ಸಂಪುಟಗಳನ್ನು ಒಳಗೊಂಡಿದೆ. ಮೊದಲ ಆವೃತ್ತಿಯನ್ನು ಜನವರಿ 2003 ರಲ್ಲಿ ಬಾಂಗ್ಲಾದೇಶದ ಏಷಿಯಾಟಿಕ್ ಸೊಸೈಟಿ ಪ್ರಕಟಿಸಿತು, ಪ್ರತಿ ಎರಡು ವರ್ಷಗಳಿಗೊಮ್ಮೆ ಅದನ್ನು ನವೀಕರಿಸಲು ಯೋಜಿಸಲಾಗಿದೆ. ಎರಡನೆಯ ಆವೃತ್ತಿಯನ್ನು 2012 ರಲ್ಲಿ ಬಿಡುಗಡೆ ಮಾಡಲಾಯಿತು.ಬಾಂಗ್ಲಾಪೀಡಿಯಾವನ್ನು ಸಾರ್ವತ್ರಿಕ ಎನ್ಸೈಕ್ಲೋಪೀಡಿಯನ್ನಾಗಿ ವಿನ್ಯಾಸಗೊಳಿಸಲಾಗಿಲ್ಲ ಆದರೆ ಬಾಂಗ್ಲಾದೇಶ-ಸಂಬಂಧಿತ ವಿಷಯಗಳ ಬಗ್ಗೆ ಒಂದು ವಿಶೇಷವಾದ ಎನ್ಸೈಕ್ಲೋಪೀಡಿಯಾ ರೂಪದಲ್ಲಿರಲಿಲ್ಲ. ಎನ್ಸೈಕ್ಲೋಪೀಡಿಯ ಉದ್ದೇಶಗಳಿಗಾಗಿ, ಪ್ರಾಚೀನ ಪೂರ್ವ ಭಾರತ, ಸುಬಾ ಬಂಗ್ಲಾ, ಶಾಹಿ ಬಂಗಾಲಾ, ಮೊಘಲ್ ಸುಬಾ ಬಂಗ್ಲಾ, ಬಂಗಾಳ ಪ್ರಾಂತ್ಯ, ಬಂಗಾಳ ಪ್ರಾಂತ್ಯ, ಪೂರ್ವ ಬಂಗಾಳ, ಪೂರ್ವ ಪಾಕಿಸ್ತಾನ ಮತ್ತು ಸ್ವತಂತ್ರ ಬಾಂಗ್ಲಾದೇಶವನ್ನು ಐತಿಹಾಸಿಕ ಅನುಕ್ರಮವಾಗಿ ಹೊಂದಿರುವ ಪ್ರದೇಶ ಎಂದು ಬಾಂಗ್ಲಾದೇಶವನ್ನು ವ್ಯಾಖ್ಯಾನಿಸಲಾಗಿದೆ.ಎನ್ಸೈಕ್ಲೋಪೀಡಿಯ ಮುಖ್ಯ ಸಂಪಾದಕ ಸಿರಾಜುಲ್ ಇಸ್ಲಾಂ. ಬಾಂಗ್ಲಾದೇಶ ಮತ್ತು ವಿದೇಶದಲ್ಲಿರುವ ಸುಮಾರು 1200 ಕ್ಕಿಂತಲೂ ಹೆಚ್ಚು ಬರಹಗಾರರು ಮತ್ತು ಪರಿಣತರು ಈ ನಮೂದನ್ನು ರಚಿಸಲು ಸಹಾಯ ಮಾಡಿದರು. ಆರು ಸಂಪಾದಕೀಯ ವಿಭಾಗಗಳಲ್ಲಿ 5,700 ಕ್ಕೂ ಹೆಚ್ಚು ನಮೂದುಗಳನ್ನು ಬಾಂಗ್ಲಾಪೀಡಿಯಾ ಹೊಂದಿದೆ, ಪರಿಣಿತ ಸಂಪಾದಕ, ಮತ್ತು 2,000 ಕ್ಕಿಂತಲೂ ಹೆಚ್ಚು ಏಕ ಮತ್ತು ನಾಲ್ಕು-ಬಣ್ಣದ ಚಿತ್ರಣಗಳು ಮತ್ತು 2,100 ಅಡ್ಡ-ಉಲ್ಲೇಖಗಳು ಹೊಂದಿದೆ.ಈ ಯೋಜನೆಯನ್ನು ಬಾಂಗ್ಲಾದೇಶ ಸರ್ಕಾರ, ಖಾಸಗಿ ವಲಯದ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಯುನೆಸ್ಕೋ ಸಂಸ್ಥೆಗಳಿಂದ ನೀಡಲಾಯಿತು. ಅದರ ಮೂಲ ಬಜೆಟ್ 800,000 ತಕಾ (ಸರಿಸುಮಾರಾಗಿ 10,000 ಯುಎಸ್ಡಿ) ಆಗಿತ್ತುಯಾದರೂ, ಏಷಿಯಾಟಿಕ್ ಸೊಸೈಟಿ ಅಂತಿಮವಾಗಿ ಯೋಜನೆಯಲ್ಲಿ 80 ದಶಲಕ್ಷ ಟಕಾವನ್ನು (ಸರಿಸುಮಾರು 1 ಮಿಲಿಯನ್ ಡಾಲರ್) ಖರ್ಚುಮಾಡಿತು. ಬಾಂಗ್ಲಾದೇಶ ವಿಮೋಚನಾ ಯುದ್ಧ ಮತ್ತು ಸ್ಥಳೀಯ ಜನಾಂಗದವರ ಮೇಲಿನ ವಿವಾದಗಳ ಹೊರತಾಗಿಯೂ, ಬಂಗಾಳಿ ಮತ್ತು ಇಂಗ್ಲಿಷ್ ಆವೃತ್ತಿಗಳು ಪ್ರಕಟಣೆಗೆ ಜನಪ್ರಿಯವಾಯಿತು.

ಬಿ.ವೆಂಕಟಾಚಾರ್ಯ

ಬಿ ವೆಂಕಟಾಚಾರ್ಯ (೧೮೪೫ - ಜೂನ್ ೨೬, ೧೯೧೪) ಕನ್ನಡ ಕಾದಂಬರಿಗಳ ಪಿತಾಮಹರೆಂದು ಪ್ರಸಿದ್ಧರಾಗಿದ್ದಾರೆ. ಕನ್ನಡದ ಕಾದಂಬರಿಗಳನ್ನು ಆಸಕ್ತಿಯಿಂದ ಓದುವವರಿಗೆಲ್ಲರಿಗೂ ಬಿ. ವೆಂಕಟಾಚಾರ್ಯರ ಹೆಸರು ಚೆನ್ನಾಗಿಯೇ ಗೊತ್ತುಂಟು.

ಈಗ ನಮಗೆಲ್ಲ ಕಥೆ ಕಾದಂಬರಿಗಳನ್ನು ಓದುವುದು ಎಂದರೆ ಎಷ್ಟು ಇಷ್ಟ ಅಲ್ಲವೆ? ಓದಲು ಕಥೆ, ಕಾದಂಬರಿಗಳೇ ಇಲ್ಲದಿದ್ದರೆ ಎಷ್ಟೊಂದು ಬೇಸರವಾಗುತ್ತಿತ್ತು, ಅಲ್ಲವೆ? ಈಗ ಕನ್ನಡದಲ್ಲಿ ಸೊಗಸಾದ ಕಥೆಗಳ ಪುಸ್ತಕಗಳಿವೆ, ಕಾದಂಬರಿಗಳಿವೆ. ಓದಿ ಸಂತೋಷ ಪಡುತ್ತೇವೆ. ಆದರೆ ಒಂದು ಕಾಲ ಇತ್ತು, ಆಗ ಕನ್ನಡದಲ್ಲಿ ಕಾದಂಬರಿಗಳೇ ಇರಲಿಲ್ಲ. ಅಂತಹ ಕಾಲದಲ್ಲಿ ಕನ್ನಡಿಗರಿಗೆ ಕಾದಂಬರಿಗಳನ್ನು ಕೊಟ್ಟವರು ಬಿ.ವೆಂಕಟಾಚಾರ್ಯರು.

ಮುಂಬಯಿ ವಿಶ್ವವಿದ್ಯಾಲಯ

ಮುಂಬಯಿ ವಿಶ್ವವಿದ್ಯಾಲಯ, ೧೯ ನೆಯ ಶತಮಾನದ ಮಧ್ಯಭಾಗದಲ್ಲಿ ಭಾರತದಲ್ಲಿ ಸ್ಥಾಪಿಸಲ್ಪಟ್ಟ ೩ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲೊಂದು. ಈ ವಿಶ್ವವಿದ್ಯಾಲಯ ಮಹಾರಾಷ್ಟ್ರ ರಾಜ್ಯದ ಮುಂಬಯಿ ಮಹಾನಗರದ ಕೋಟೆ (Fort) ಪರಿಸರದಲ್ಲಿದೆ. ಇದು, ಬಹಳ ವರ್ಷಗಳ ಕಾಲ 'ಮುಂಬಯಿ ಯೂನಿವರ್ಸಿಟಿ' "MU" (for Mumbai University) ಎಂಬ ಹೆಸರಿನಲ್ಲಿ ಪ್ರಚಲಿತದಲ್ಲಿತ್ತು.

ಮೈಸೂರ್ ಅಸೋಸಿಯೇಷನ್, ಮುಂಬಯಿ

ಮೈಸೂರ್ ಅಸೋಸಿಯೇಷನ್ ೩೯೩, ಭಾವುದಾಜಿ ರಸ್ತೆ, ಮಾಟುಂಗಾ, ಮುಂಬಯಿಯಲ್ಲಿರುವ ಮುಂಬಯಿ ಕನ್ನಡಿಗರ ಹಿರಿಯ ಸಂಸ್ಥೆ. ಮುಂಬಯಿವಾಸಿ ಕನ್ನಡಿಗರ, ಕಲೆ, ಸಂಸ್ಕೃತಿ, ಭಾಷೆ, ಸಂಗೀತಗಳನ್ನು ರಕ್ಷಿಸಿ, ಪೋಷಿಸುವ, ಹಾಗೂ ಎಲ್ಲ ಕನ್ನಡಿಗರ ಭಾವನಾತ್ಮಕ ಸ್ಥಾನ. ಅಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಸೋಸಿಯೇಷನ್ ರಂಗ ಮಂದಿರಗಳಲ್ಲಿ ಆಯೋಜಿಸಲಾಗುತ್ತಿದೆ. ಮೈಸೂರ್ ಅಸೋಸಿಯೇಷನ್ ನ ಭವ್ಯ, ಆಧುನಿಕ ಸಭಾಂಗಣದಲ್ಲಿ, ಹಿಂದಿ, ಮರಾಠಿ, ತುಳು, ಬೆಂಗಾಲಿ, ಕನ್ನಡ, ಇತ್ಯಾದಿ, ಭಾಷೆಗಳಲ್ಲಿ ನಾಟಕಗಳು ದಿನ-ಪ್ರತಿ, ಪ್ರದರ್ಶನಗೊಳ್ಳುತ್ತವೆ.

ವಿಜ್ಞಾನ-ತಂತ್ರಜ್ಞಾನ (ಪುಸ್ತಕ)

ಕನ್ನಡ ಸಾಹಿತ್ಯ ಪರಿಷತ್ತು ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ೨೦೧೫ನೇ ಇಸವಿಯಲ್ಲಿ ಹಮ್ಮಿಕೊಂಡ ಮಹತ್ವದ ಯೋಜನೆಗಳ ಅಂಗವಾಗಿ ಎರಡು ಶತಮಾನಗಳಿಗೂ ಮೀರಿದ ಅವಧಿಯ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಗಳ ರಚನೆ, ಪ್ರಕಟಣೆಯ ಭಾಗವಾಗಿ ನಿರ್ಧರಿಸಿದ್ದ ೧೭ ಸಂಪುಟಗಳಲ್ಲಿ 'ವಿಜ್ಞಾನ-ತಂತ್ರಜ್ಞಾನ' ಪುಸ್ತಕವನ್ನು ೧೪ನೇ ಸಂಪುಟವಾಗಿ ಹೊರತರಲಾಗಿದೆ. ವಿಜ್ಞಾನ-ತಂತ್ರಜ್ಞಾನ, ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ೧೪ನೇ ಸಂಪುಟವಾಗಿದ್ದರೂ, ಸಂಪುಟ ಸರಣಿಯಲ್ಲಿ ಮುದ್ರಣಗೊಂಡ ಮೊದಲನೆಯ ಸಂಪುಟವಾಗಿದೆ. ಈ ಸಂಪುಟವನ್ನು ಶ್ರೀ ಟಿ. ಆರ್. ಅನಂತರಾಮು ಅವರು ಸಂಪಾದಿಸಿದ್ದಾರೆ.

ಸಂಗೀತ ನಾಟಕ ಅಕಾಡೆಮಿ

ಸಂಗೀತ ನಾಟಕ ಅಕಾಡೆಮಿ (ಆಂಗ್ಲ: The National Academy for Music, Dance and Drama) ಸಂಗೀತ, ನಾಟಕ ಮತ್ತು ನೃತ್ಯ ಕಲೆಗಳನ್ನು ಪೋಷಿಸಲು ಭಾರತ ಸರಕಾರ ಹುಟ್ಟುಹಾಕಿದ ರಾಷ್ಟ್ರ ಮಟ್ಟದ ಸಂಸ್ಥೆ.

ಇತರ ಭಾಷೆಗಳು

This page is based on a Wikipedia article written by authors (here).
Text is available under the CC BY-SA 3.0 license; additional terms may apply.
Images, videos and audio are available under their respective licenses.