ವಾಣಿಜ್ಯ(ವ್ಯಾಪಾರ)

ವಾಣಿಜ್ಯ ವೆಂಬುದು ವಸ್ತುಗಳನ್ನು, ಸೇವೆಗಳನ್ನು ,ಅಥವಾ ಎರಡನ್ನೂ ಉದ್ದೇಶಪೂರ್ವಕವಾಗಿ ವಿನಿಮಯ ಮಾಡಿಕೊಳ್ಳುವಿಕೆಯಾಗಿದೆ. ವಾಣಿಜ್ಯವನ್ನು ವಿಶಾಲ ಅರ್ಥದಲ್ಲಿ ವ್ಯಾಪಾರ ಅಥವಾ ವ್ಯವಹಾರವೆಂದೂ ಕರೆಯಲಾಗುತ್ತದೆ. ವಾಣಿಜ್ಯ-ವಹಿವಾಟು ನಡೆಸುವಂತಹ ಪ್ರದೇಶವನ್ನು ಅದರ ಕಾರ್ಯರೀತಿಯನ್ನು ಮಾರುಕಟ್ಟೆ ಎಂದು ಕರೆಯಲಾಗುವುದು. ವಾಣಿಜ್ಯದ ಮೂಲ ರೂಪ ವಿನಿಮಯವಾಗಿದೆ, ಸರಕುಗಳು ಮತ್ತು ಸೇವೆಗಳ ನೇರ ವಿನಿಮಯ. ಹೀಗೆ, ವಿನಿಮಯವು ಒಂದೆಡೆ ಲೋಹಗಳು, ಬೆಲೆಬಾಳುವ ಲೋಹಗಳು (ಲೋಹದಕಂಬಗಳು, ನಾಣ್ಯಗಳು),ಖರೀದಿಪತ್ರ, ಹಾಗು ಕಾಗದ ರೂಪದ ನಗದನ್ನು ಹೊಂದಿದೆ. ಇವುಗಳ ಬದಲಿಗೆ ಆಧುನಿಕ ವ್ಯಾಪಾರಿಗಳು , ಬಹುಮಟ್ಟಿಗೆ ವಿನಿಮಯ ಮಾಧ್ಯಮದ ಮೂಲಕ ವ್ಯವಹಾರವನ್ನು ನಡೆಸಿದರು, ಉದಾಹರಣೆಗೆ ಹಣ.ಅಥವಾ ನಗದು ಎನ್ನಬಹುದು. ಇದರಿಂದ, ಕೊಂಡುಕೊಳ್ಳುವುದನ್ನು ಮಾರುವುದ ರಿಂದ, ಅಥವಾ ಗಳಿಸುವುದರಿಂದ ಬೇರ್ಪಡಿಸಬಹುದು. ಹಣದ ಅನ್ವೇಷಣೆ (ಹಾಗು ನಂತರ ಖಾತೆಯಲ್ಲಿರುವ ಹಣ, ನೋಟು ಹಾಗು ಹಣದ ರೂಪದಲ್ಲಿರುವ ಇತರ ಪ್ಲಾಸ್ಟಿಕ್ ಕಾರ್ಡ್ ಗಳು (ಕ್ರೆಡಿಟ್ ಕಾರ್ಡ್), ಬಹುಮಟ್ಟಿಗೆ ವಾಣಿಜ್ಯವನ್ನು ಸುಲಭೀಕರಿಸಿ, ಅದನ್ನು ಉತ್ತೇಜಿಸಿತು. ಇಬ್ಬರು ವ್ಯಾಪಾರಿಗಳ ನಡುವಿನ ವ್ಯವಹಾರವನ್ನು ಉಭಯಪಕ್ಷೀಯ ವಾಣಿಜ್ಯವೆಂದು ಕರೆಯಲಾಗುತ್ತದೆ.ಅದೇ ಇಬ್ಬರಿಗಿಂತ ಹೆಚ್ಚಿನ ವ್ಯಾಪಾರಿಗಳ ನಡುವೆ ನಡೆಯುವ ವಾಣಿಜ್ಯವನ್ನು ಬಹುಪಕ್ಷೀಯ ವಾಣಿಜ್ಯವೆಂದು ಕರೆಯಲಾಗುತ್ತದೆ.

Kaufmann-1568
ಜರ್ಮನಿಯಲ್ಲಿ ವ್ಯಾಪಾರ ಮಾಡುವವರು, 16ನೇ ಶತಮಾನದ ಅವಧಿಯಲ್ಲಿ.

ಕೆಲಸವನ್ನು , ವಿಶಿಷ್ಟಗೊಳಿಸುವ ಹಾಗು ಹಂಚುವ ಕಾರಣದಿಂದ ವ್ಯವಹಾರವು ಮನುಷ್ಯನ ಉಪಯೋಗಕ್ಕಾಗಿ ಅಸ್ತಿತ್ವದಲ್ಲಿದೆ.ಬಹುಪಾಲು ಜನರು ಇತರ ಉತ್ಪನ್ನಗಳನ್ನು ವ್ಯಾಪಾರ ಮಾಡಲು ,ಚಿಕ್ಕಪ್ರಮಾಣದ ಉತ್ಪಾದನೆಯ ಕಡೆ ಗಮನವಹಿಸುತ್ತಾರೆ. ವಾಣಿಜ್ಯವು ಪರಸ್ಪರ ಆಯಾ ಪ್ರದೇಶಗಳ ನಡುವೆ ನಡೆಯುತ್ತದೆ, ಏಕೆಂದರೆ ವಿವಿಧ ಪ್ರದೇಶಗಳು ವ್ಯಾಪಾರ ಮಾಡುವಂತಹ ಸರಕುಗಳ ಉತ್ಪಾದನೆಯಲ್ಲಿ ತುಲನಾತ್ಮಕ ಲಾಭವನ್ನುಹೊಂದಿರುತ್ತವೆ. ಅಥವಾ ಪ್ರದೇಶಗಳ ವಿವಿಧ ವಿಸ್ತೀರ್ಣ ಒಟ್ಟು ಉತ್ಪಾದನೆಯ ಲಾಭವನ್ನು ತಂದುಕೊಡುತ್ತದೆ. ಅದೇ ರೀತಿಯಲ್ಲಿ, ಸ್ಥಳಗಳ ನಡುವೆ ಮಾರುಕಟ್ಟೆ ಬೆಲೆಗಳಲ್ಲಿ ನಡೆಯುವ ವ್ಯಾಪಾರ ಎರಡೂ ಸ್ಥಳಗಳಿಗೂ ಲಾಭದಾಯಕವಾಗಿರುತ್ತದೆ.

MercadodeSanJuandeDios
ಗುದಲಜರದಲ್ಲಿ ಸ್ಯಾನ್ ಜುವನ್ ದೆ ಡಿವೊಸ್ ಮಾರುಕಟ್ಟೆ , ಜಲಿಸ್ಕೊ

ಚಿಲ್ಲರೆವ್ಯಾಪಾರವು , ವಸ್ತುಗಳ ಮಾರಾಟವನ್ನು ಅಥವಾ ನಿರ್ದಿಷ್ಟ ಸ್ಥಳದಿಂದ ವ್ಯಾಪಾರದ ಸರಕುಗಳನ್ನು ಕೊಂಡುಕೊಂಡು ವ್ಯಾಪಾರ ಮಾಡುವ ಕ್ರಿಯೆಯನ್ನು ಒಳಗೊಂಡಿರುತ್ತದೆ, ಉದಾಹರಣೆಗೆ ವಿವಿಧ ಸರಕಿನ ಮಳಿಗೆಗಳು, ಬೂಟೀಕ್ ಅಥವಾ ಕಿಯಾಸ್ಕ್, ಅಥವಾ ಮೇಲ್ (ಅಂಚೆಯ), ಹಾಗು ಚಿಕ್ಕದಾದ ಅಥವಾ ವ್ಯಕ್ತಿಗಳ ಮೂಲಕ ಕೊಂಡುಕೊಳ್ಳುವವನು ನೇರವಾಗಿ ಬಳಸಬಹುದು.[೧] ಸಗಟು ವ್ಯಾಪಾರ ಎಂಬುದನ್ನು , ಸರಕು ಅಥವಾ ವಾಣಿಜ್ಯ ಸರಕುಗಳನ್ನು ಚಿಲ್ಲರೆ ವ್ಯಾಪಾರಿಗಳಿಗೆ, ಕೈಗಾರಿಕಾ ,ವ್ಯಾಪಾರಿ ಸಂಬಂಧೀ, ಸಾಂಸ್ಥಿಕ ಅಥವಾ ಇತರ ವೃತ್ತಿಪರ ವ್ಯಾಪಾರದ ಬಳಕೆದಾರರಿಗೆ, ಅಥವಾ ಇತರ ಸಗಟು ವ್ಯಾಪಾರಿಗಳಿಗೆ ಹಾಗು ಇದರಡಿಯಲ್ಲಿ ಬರುವಂತಹ ಸೇವೆಗಳಿಗೆ ಮಾರಾಟಮಾಡುವುದು ಎಂದು ವ್ಯಾಖ್ಯಾನಿಸಲಾಗಿದೆ.[೨]

ವ್ಯಾಪಾರವು, ವ್ಯಾಪಾರಿಗಳಿಂದ ನಡೆಯುವಂತಹ ಚಟುವಟಿಕೆಯನ್ನು ಸೂಚಿಸುತ್ತದೆ. ಅಲ್ಲದೇ ಇದು ಹಣಕಾಸಿನ ಮಾರುಕಟ್ಟೆಗಳಲ್ಲಿ ಇತರ ಮಾರುಕಟ್ಟೆ ಪ್ರತಿನಿಧಿಗಳು ನಡೆಸುವಂತಹ ಕ್ರಿಯೆಯನ್ನೂ ಕೂಡ ಸೂಚಿಸುತ್ತದೆ.

ವಾಣಿಜ್ಯದ ಇತಿಹಾಸ


ವಾಣಿಜ್ಯವು, ಪ್ರಾಗೈತಿಹಾಸಿಕ ಕಾಲದಲ್ಲಿ ಸಂವಹನ ಪ್ರಾರಂಭವಾದಾಗ ಅದರ ಜೊತೆಯಲ್ಲಿಯೇ ಸಂಪರ್ಕದ ಜಾಲವೂ ಹುಟ್ಟಿಕೊಂಡಿತು. ವ್ಯಾಪಾರ,(ಪ್ರಾಚೀನ)ಪ್ರಾಗೈತಿಹಾಸಿಕ ಕಾಲದ ಜನರಿಗೆ ಇದ್ದಂತಹ ಪ್ರಮುಖ ಸೌಲಭ್ಯವಾಗಿದೆ.ಆಧುನಿಕ ಕಾಲದ ಕರನ್ಸಿಯನ್ನು ಕಂಡುಹಿಡಿಯುವ ಮೊದಲು ಆ ಕಾಲದ ಜನ ಸರಕುಗಳನ್ನು ಮತ್ತು ಸೇವೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿದ್ದರು. ಪೀಟರ್ ವಾಟ್ ಸನ್, ವಾಣಿಜ್ಯದ ಇತಿಹಾಸವನ್ನು, ಸುಮಾರು 150,000 ವರ್ಷಗಳ ಹಿಂದಿನದ್ದಾಗಿದೆ ಎಂದು ತಿಳಿಸಿದ್ದಾನೆ.[೩]

ದಾಖಲಿಸಲ್ಪಟ್ಟ ಮಾನವ ಇತಿಹಾಸದುದ್ದಕ್ಕೂ ವಾಣಿಜ್ಯ ತನ್ನ ಸ್ಥಾನವನ್ನು ಪಡೆದುಕೊಂಡಿದೆ ಎಂದು ನಂಬಲಾಗಿದೆ. ಶಿಲಾಯುಗದ ಸಮಯದಲ್ಲಿ ಖನಿಜದ ಕಾರ್ಗಲ್ಲು ಹಾಗು ಚಕಮಕಿ ಕಲ್ಲುಗಳ ವಿನಿಮಯ ನಡೆಯುತಿತ್ತು ಎಂಬುದಕ್ಕೆ ಪುರಾವೆಗಳಿವೆ. ಆಭರಣಗಳನ್ನು ತಯಾರಿಸಲು ಬಳಸುವ ವಸ್ತುಗಳ ವ್ಯಾಪಾರವನ್ನು ಈಜಿಫ್ಟ್ ನೊಂದಿಗೆ 3000 BC ಯಲ್ಲಿ ಮಾಡಲಾಗುತ್ತಿತ್ತು. ಮೆಸಪಟೋಮಿಯ ನಾಗರಿಕತೆಯಲ್ಲಿದ್ದ ಸುಮೇರಿಯನ್ ಗಳು ಸಿಂಧೂ ಕಣಿವೆಯ ಹರಪ್ಪನ್ ನಾಗರಿಕತೆಯ ಜೊತೆಯಲ್ಲಿ ವ್ಯಾಪಾರ ಮಾಡುತ್ತಿದ್ದಾಗ, ದೂರವ್ಯಾಪ್ತಿಯ ವ್ಯಾಪಾರಿ ಮಾರ್ಗವು ಮೊಟ್ಟ ಮೊದಲ ಬಾರಿಗೆ 3ನೇ ಸಹಸ್ರವರ್ಷ BCಯಲ್ಲಿ ಕಾಣಿಸಿಕೊಂಡಿತು. ಫಿನಿಷಿಯನ್ನರು,ಮೆಡಿಟರೇನಿಯನ್ ಸಮುದ್ರದ ಸುತ್ತ ಪ್ರವಾಸವನ್ನು ಕೈಗೊಳ್ಳುವ ಮೂಲಕ, ಹಾಗು ಕಂಚನ್ನು ತಯಾರಿಸಲು ಬೇಕಾದ ತವರಕ್ಕಾಗಿ ಉತ್ತರದಲ್ಲಿ ಬ್ರಿಟನ್ ಗೆ ಪ್ರವಾಸ ಕೈಗೊಂಡು ಸಮುದ್ರದ ವ್ಯಾಪಾರಿಗಳೆಂದು ಕರೆಯಲ್ಪಟ್ಟಿದ್ದಾರೆ. ಈ ಉದ್ದೇಶಕ್ಕಾಗಿ ಅವರು ವಾಣಿಜ್ಯ ವಸಾಹತುಗಳನ್ನು ಸ್ಥಾಪಿಸಿದರು. ಇವುಗಳನ್ನು ಗ್ರೀಕರು(ಬೃಹತ್ ಡಿಪಾರ್ಟ್ ಮೆಂಟಲ್ ಸ್ಟೋರ್ ) ಎಂಪೋರಿಯವೆಂದು ಕರೆದಿದ್ದಾರೆ. ಗ್ರೀಕ್ ನಾಗರಿಕತೆಯ ಪ್ರಾರಂಭದಿಂದ ರೋಮನ್ ಸಾಮ್ರಾಜ್ಯ 5ನೇ ಶತಮಾನದಲ್ಲಿ ಮುಳುಗುವ ವರೆಗೂ,ಆರ್ಥಿಕವಾಗಿ ಲಾಭದಾಯಕವಾಗಿತ್ತು.ನಂತರ ಈ ವ್ಯಾಪಾರವು ಯುರೋಪಿಗೆ ,ಭಾರತ ಮತ್ತು ಚೀನಾವನ್ನು ಒಳಗೊಂಡಂತೆ ದೂರಪ್ರಾಚ್ಯದಿಂದ, ಬೆಲೆಬಾಳುವ ಸಂಬಾರು ಪದಾರ್ಥಗಳನ್ನು ತಂದುಕೊಡುತ್ತಿತ್ತು. ರೋಮನ್ ವ್ಯಾಪಾರ, ಅದರ ಸಾಮ್ರಾಜ್ಯವನ್ನು ಅಭಿವೃದ್ಧಿಯಾಗುವಂತೆ ಹಾಗು ಅಸ್ತಿತ್ವದಲ್ಲಿರುವಂತೆ ಮಾಡಿತು. ರೋಮನ್ ಸಾಮ್ರಾಜ್ಯವು ಸ್ಥಿರ ಹಾಗು ಸುರಕ್ಷಿತ ಸಾರಿಗೆ ಸಂಪರ್ಕವನ್ನು ನೀಡಿತ್ತು.ಈ ಸಾರಿಗೆ ಸಂಪರ್ಕದಿಂದ ಸರಕುಗಳನ್ನು ಸಾಗಿಸುತ್ತಿದ್ದ ಹಡಗುಗಳು ಕಡಲುಗಳ್ಳತನದ ಹೆದರಿಕೆ ಇಲ್ಲದೆಯೇ ಸಾಗುವಂತಾಯಿತು.

ರೋಮನ್ ಸಾಮ್ರಾಜ್ಯದ ಅಂತ್ಯ ಹಾಗು ಕತ್ತಲೆಯುಗ ಪಾಶ್ಚಾತ್ಯ ಸಾಮ್ರಾಜ್ಯದಲ್ಲಿ ಅಭದ್ರತೆಯನ್ನು ಮೂಡಿಸಿತ್ತು.ಅಲ್ಲದೇ ಪಾಶ್ಚಾತ್ಯ ಲೋಕದಲ್ಲಿ ವ್ಯಾಪಾರ ಸಂಪರ್ಕ ಕುಸಿಯುವಂತೆಯೂ ಮಾಡಿತ್ತು. ಆದರೂ, ವಾಣಿಜ್ಯದ ಅಭಿವೃದ್ದಿ ಆಫ್ರಿಕಾ, ಮಧ್ಯಪ್ರಾಚ್ಯ, ಭಾರತ, ಚೀನಾ ಹಾಗು ಆಗ್ನೇಯ ಏಷ್ಯಾ ಮೊದಲಾದ ದೇಶಗಳಲ್ಲಿ ಮುಂದುವರೆಯಿತು. ಕೆಲವು ವ್ಯಾಪಾರಗಳು ಪಶ್ಚಿಮದಲ್ಲಿಯೂ ಕಾಣಿಸಿಕೊಂಡವು; ಉದಾಹರಣೆಗೆ, ರಾಧನೈಟ್ಸ್, ಇದು ಮಧ್ಯಕಾಲೀನದ ಜ್ಯೂಯಿಷ್ ವ್ಯಾಪಾರಿಗಳ ಸಂಘ ಅಥವಾ ಸಂಘಟನೆಯ ಗುಂಪಾಗಿದೆ. (ಪದದ ಸರಿಯಾದ ಅರ್ಥ ಇತಿಹಾಸವನ್ನು) ಇವರು ಯುರೋಪ್ ನಲ್ಲಿ ಕ್ರೈಸ್ತರೊಡನೆ , ಸಮೀಪದಲ್ಲಿದ್ದ ಪ್ರಾಚ್ಯದಲ್ಲಿ ಮುಸಲ್ಮಾನರೊಡನೆ ವ್ಯಾಪಾರವನ್ನು ಮಾಡಿದ್ದರು.

ಸುಯಬ್ ಮತ್ತು ತಲಾಸ್ ಗಳು ಉತ್ತರದಲ್ಲಿ ಪ್ರಮುಖ ಕೇಂದ್ರಗಳೆಂದು ಕರೆಯಲ್ಪಡುವುದರ ಜೊತೆಗೆ ಸಾಗ್ಡಿಯನ್ಸ್ ರು ಆಳುತ್ತಿದ್ದ ಪೂರ್ವ-ಪಶ್ಚಿಮ ವಾಣಿಜ್ಯ ಮಾರ್ಗಗಳನ್ನು 4 ನೇ ಶತಮಾನದ AD ಯ ನಂತರ 8ನೇ ಶತಮಾನದ AD ಯವರೆಗೆ ಸಿಲ್ಕ್ ರೋಡ್ ಎಂದು ಕರೆಯಲಾಗುತ್ತಿತ್ತು. ಇವರುಗಳು ಮಧ್ಯ ಏಷ್ಯಾಕ್ಕೆ ಪ್ರಯಾಣ ಬೆಳೆಸಿದ ತಂಡಗಳಲ್ಲಿ ಪ್ರಮುಖ ವರ್ತಕರಾಗಿದ್ದಾರೆ.

8 ರಿಂದ 11 ನೇ ಶತಮಾನದವರೆಗೆ,ವೈಕಿಂಗ್ ಗಳು ಮತ್ತು ವರಾನ್ಗಿಯನ್ಸರು ಸ್ಕ್ಯಾಂಡಿನೇವಿಯಾಕ್ಕೆ ಹೋಗಿ ಬಂದು ಹಡಗಿನ ಪ್ರಯಾಣದ ಮೂಲಕ ವ್ಯಾಪಾರ ಮಾಡಿದರು. ವೈಕಿಂಗ್ಸ್ ಪಾಶ್ಚಾತ್ಯ ಸಾಮ್ರಾಜ್ಯಕ್ಕೆ ಪ್ರಯಾಣ ಬೆಳೆಸಿದರೆ, ವರಾನ್ಜಿಯನ್ಸ್ ರಷ್ಯಾಕ್ಕೆ ಪ್ರಯಾಣ ಬೆಳೆಸಿದರು. ದಿ ಹ್ಯಾನ್ಸಿಯಾಟಿಕ್ ಲೀಗ್ (ವರ್ತಕ ಕೂಟ) ಎಂಬುದು ವಾಣಿಜ್ಯ ನಗರಗಳ ಒಕ್ಕೂಟವಾಗಿದ್ದು,13ನೇ ಶತಮಾನದಿಂದ 17 ನೇ ಶತಮಾನದ ವರೆಗೆ ಬಹುಪಾಲು ಉತ್ತರ ಯುರೋಪ್ ಹಾಗು ಬಾಲ್ಟಿಕ್ ಗಳ ಮೇಲಿನ ವಾಣಿಜ್ಯ ಏಕಸಸೌಮ್ಯವನ್ನು ನಡೆಸಿಕೊಂಡುಬಂದಿದೆ.

ವಾಸ್ಕೋಡಗಾಮ,ಆಫ್ರಿಕಾ ಭೂಖಂಡದುದ್ದಕ್ಕೂ ನೌಕಾಯಾನ ಕೈಗೊಂಡ ಸಂದರ್ಭದಲ್ಲಿ ಕ್ಯಾಲಿಕಟ್ಅನ್ನು ತಲುಪಿದಾಗ , ಯುರೋಪಿನ ಸಂಬಾರು ಪದಾರ್ಥಗಳ ವ್ಯಾಪಾರವನ್ನು 1498 ರಲ್ಲಿ ಅನ್ವೇಷಿಸಿದ. ಇದಕ್ಕೂ ಮೊದಲು ,ಭಾರತದಿಂದ ಯುರೋಪಿಗೆ ಧಾರಾಳವಾಗಿ ಹರಿದುಹೋಗುತ್ತಿದ್ದ ಸಂಬಾರು ಪದಾರ್ಥಗಳ ರಫ್ತನ್ನು ಇಸ್ಲಾಮ್ ಶಕ್ತಿಗಳು,ಅದರಲ್ಲೂ ವಿಶೇಷವಾಗಿ ಈಜಿಪ್ಟ್ ನಿಯಂತ್ರಿಸುತ್ತಿತ್ತು. ಸಂಬಾರು ಪದಾರ್ಥಗಳ ವ್ಯಾಪಾರವು, ಪ್ರಮುಖ ಆರ್ಥಿಕ ಮಹತ್ವ ಪಡೆದಿದೆ. ಅಲ್ಲದೇ ಇದು ಯುರೋಪಿನಲ್ಲಿ ಪರಿಶೋಧನೆಯ ಅವಧಿ ಯನ್ನು ಉತ್ತೇಜಿಸಲು ಸಹಾಯಮಾಡಿತು. ಸಂಬಾರು ಪದಾರ್ಥಗಳನ್ನು ಯುರೋಪಿಗೆ ಪೂರ್ವ ದೇಶಗಳಿಂದ ತರಲಾಗುತ್ತಿತ್ತು. ಅಲ್ಲದೇ ಇದು ಬೆಲೆಬಾಳುವ ವ್ಯಾಪಾರೀ ಸರಕುಗಳನ್ನು, ಕೆಲವೊಮ್ಮೆ ಚಿನ್ನವನ್ನು ಒಳಗೊಂಡಿರುತ್ತಿತ್ತು.

16ನೇ ಶತಮಾನದಲ್ಲಿ ಹಾಲೆಂಡ್,ವ್ಯಾಪಾರದ ಮೇಲೆ ಯಾವುದೇ ವಿನಿಮಯ ನಿಯಂತ್ರಣಗಳನ್ನು ವಿಧಿಸದೆ ಹಾಗು ಸರಕುಗಳ ಅನಿರ್ಬಂಧ ಚಟುವಟಿಕೆಯನ್ನು ಸಮರ್ಥಿಸುವ ಮೂಲಕ ಅನಿರ್ಬಂಧ ವಾಣಿಜ್ಯದ ಕೇಂದ್ರವಾಗಿತ್ತು. ಈಸ್ಟ್ ಇಂಡಿಸ್ ನಲ್ಲಿ ವಾಣಿಜ್ಯವು 16 ನೇ ಶತಮಾನದಲ್ಲಿ ಪೋರ್ಚುಗಲ್ ನಿಂದ, 17ನೇ ಶತಮಾನದಲ್ಲಿ ನೆದರಲ್ಯಾಂಡ್ ನಿಂದ , ಹಾಗು 18ನೇ ಶತಮಾನದಲ್ಲಿ ಬ್ರಿಟಿಷರಿಂದ ಆಡಳಿತದ ನಿಯಂತ್ರಣಕ್ಕೆ ಒಳಪಟ್ಟಿತು. ಸ್ಪ್ಯಾನಿಷ್ ಸಾಮ್ರಾಜ್ಯವು, ಅಟ್ಲಾಂಟಿಕ್ ಮತ್ತು ಫೆಸಿಫಿಕ್ ಸಾಗರದುದ್ದಕ್ಕೂ ಕಾಯಂ ಆದ ವಾಣಿಜ್ಯ ಸಂಪರ್ಕವನ್ನು ಅಭಿವೃದ್ಧಿಪಡಿಸಿತ್ತು.

Wojciech Gerson - Gdańsk in the XVII century
17ನೇ ಶತಮಾನದಲ್ಲಿ ಡ್ಯಾನ್ ಜಿಗ್

1776 ರಲ್ಲಿ ಆಡಂ ಸ್ಮಿತ್ ಆನ್ ಇನ್ಕ್ವೇರಿ ಇನ್ ಟು ದಿ ನೇಚರ್ ಅಂಡ್ ಕಾಸಸ್ ಆಫ್ ದಿ ವೆಲ್ತ್ ಆಫ್ ನೇಷನ್ಸ್ ಎಂಬ ಗ್ರಂಥವನ್ನು ಪ್ರಕಟಿಸಿದನು. ಇದು ವಾಣಿಜ್ಯ ಸಿದ್ಧಾಂತವನ್ನು ಟೀಕಿಸಿತು.ಅಲ್ಲದೇ ಆರ್ಥಿಕತೆಯ ವಿಶೇಷ ಪ್ರಜ್ಞೆ ಯು ರಾಷ್ಟ್ರಕ್ಕೆ ವ್ಯವಹಾರ ಸಂಸ್ಥೆಗಳಷ್ಟೇ ಲಾಭವನ್ನು ತಂದುಕೊಂಡುತ್ತದೆ ಎಂಬುದನ್ನು ತೋರಿಸಿತು. ಈ ಕಾರಣಕ್ಕಾಗಿ ಶ್ರಮಿಕ ಶಕ್ತಿ ವಿತರಣೆಯನ್ನು ಮಾರುಕಟ್ಟೆಯ ವಿಸ್ತೀರ್ಣದ ಆಧಾರದ ಮೇಲೆ ಸೀಮಿತಗೊಳಿಸಲಾಗಿದೆ. ರಾಷ್ಟ್ರಗಳು ದೊಡ್ಡ ಮಾರುಕಟ್ಟೆಯಲ್ಲಿ ಪ್ರವೇಶ ಪಡೆಯುವುದರಿಂದ ಕಾರ್ಯವನ್ನು ಹೆಚ್ಚು ದಕ್ಷತೆಯಿಂದ ವಿಂಗಡಿಸಬಹುದು. ಅಲ್ಲದೇ ಅದರಿಂದ ಹೆಚ್ಚು ಉತ್ಪಾದಕತೆ ಸಾಧ್ಯವಾಗಬಹುದು ಎಂಬುದನ್ನು ಆತ ಹೇಳಿದನು. ನಿರ್ದಿಷ್ಟ ಉದ್ಯಮದ ಮೇಲೆ ಬಂಡವಾಳ ಹೂಡಿ,ವ್ಯಾಪಾರ ಮಾಡುವಂತಹ ರಾಷ್ಟ್ರಕ್ಕೆ ನಷ್ಟವನ್ನು ಉಂಟು ಮಾಡುವ, ಆಮದು ಹಾಗು ರಫ್ತಿನ "ಮೋಸ"ವನ್ನು ನಿಯಂತ್ರಣ ಮಾಡುವ ಎಲ್ಲಾ ಪುನರ್ವ್ಯವಸ್ಥೆಗಳನ್ನು ತಾನು ಪರಿಗಣಿಸುವುದಾಗಿ ಸ್ಮಿತ್ ಹೇಳಿದನು.

1799 ರಲ್ಲಿ ,ಪ್ರಪಂಚದ ಅತಿ ದೊಡ್ಡ ಕಂಪನಿಯಾಗಿದ್ದ ಡಚ್ ಈಸ್ಟ್ ಇಂಡಿಯ ಕಂಪನಿ, ಪ್ರತಿಸ್ಪರ್ಧಿ ಅನಿರ್ಬಂಧ ವಾಣಿಜ್ಯದ ಆಗಮನದಿಂದ ಬಹುಮಟ್ಟಿಗೆ ದಿವಾಳಿಯಾಯಿತು.

Berber Trade with Timbuktu 1300s
ಟಿಮ್ ಬುಕುಟುವಿನ ಜೊತೆಯಲ್ಲಿ ಬರ್ಬರರ ವ್ಯಾಪಾರ,1853

1817ರಲ್ಲಿ , ಡೇವಿಡ್ ರಿಕಾರ್ಡೊ, ಜೆಮ್ಸ್ ಮಿಲ್ ಹಾಗು ರಾಬರ್ಟ್ ಟೊರೆನ್ಸ್ ಎಂಬುವವರು ತುಲನಾತ್ಮಕ ಪ್ರಯೋಜನವೆಂಬ ಜನಪ್ರಿಯ ಸಿದ್ಧಾಂತದಲ್ಲಿ, ಅನಿರ್ಬಂಧ ವಾಣಿಜ್ಯ ಉದ್ಯಮಕ್ಕೆ ಸಡಿಲತೆಯಲ್ಲೂ ಹಾಗು ಶಕ್ತಿಶಾಲಿಯಾಗಿಯೂ ಲಾಭವನ್ನು ತಂದುಕೊಡುತ್ತದೆ ಎಂಬುದನ್ನು ಸಾಬೀತುಪಡಿಸಿದರು. ಪ್ರಿನ್ಸಿಪಲ್ಸ್ ಆಫ್ ಪಾಲಿಟಿಕಲ್ ಎಕಾನಮಿ ಅಂಡ್ ಟ್ಯಾಕ್ಸೆಷನ್ ಎಂಬ ಪುಸ್ತಕದಲ್ಲಿ ರಿಕಾರ್ಡೊ ಮುಂದುವರೆಸಿದ ಸಿದ್ಧಾಂತ, ಸಾಮಾನ್ಯ ಸಿದ್ಧಾಂತದ(ಸಾಮಾನ್ಯ ಪ್ರಜ್ಞೆಯ) ವಿರುದ್ಧವಾಗಿದೆ ಎಂದೂ ಅರ್ಥಶಾಸ್ತ್ರದಲ್ಲಿ ತಿಳಿಯಲಾಗಿದೆ:

ಅನನುಭವಿ ಉತ್ಪಾದಕ ವಾಣಿಜ್ಯ ಸರಕನ್ನು ಕಳುಹಿಸಿದಾಗ ,ಅದನ್ನು ಇನ್ನು ಹೆಚ್ಚು ಸಮರ್ಥವಾಗಿ ಉತ್ಪಾದಿಸಲು ಸಾಧ್ಯವಾಗುವ ಮೂಲಕ ಅದು ರಾಷ್ಟ್ರಕ್ಕೆ ಲಾಭವನ್ನು ತಂದುಕೊಡುತ್ತದೆ,ಅಲ್ಲದೇ ಎರಡೂ ರಾಷ್ಟ್ರಗಳು ಲಾಭವನ್ನು ಪಡೆಯುತ್ತವೆ.

19 ನೇ ಶತಮಾನದ ಮಧ್ಯಭಾಗದಲ್ಲಿ ಅನಿರ್ಬಂಧ ವಾಣಿಜ್ಯದ ಪ್ರಾಬಲ್ಯ, ಪ್ರಧಾನವಾಗಿ ರಾಷ್ಟ್ರೀಯ ಲಾಭವನ್ನು ಆಧರಿಸಿತ್ತು. ಯಾವುದೇ ಪ್ರತ್ಯೇಕ ರಾಷ್ಟ್ರ ಅದರ ಸ್ವಪ್ರಯೋಜನಕ್ಕಾಗಿ ಆಮದಿನ ಮೇಲೆ ಅದರ ಮಿತಿಗಳನ್ನು ಹೇರುವುದರಲ್ಲಿ ಲಾಭವಿದೆಯೇ ಎಂಬುದರ ಮೇಲೆ ಲೆಕ್ಕಚಾರ ಮಾಡಲಾಗುತ್ತಿತ್ತು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಯನ್ನು ನಿರ್ಧರಿಸುವ ಅಧಿಕಾರದ ಸಂಪೂರ್ಣ ಹಕ್ಕನ್ನು ಹೊಂದಿರುವ ರಾಷ್ಟ್ರ, ತೆರಿಗೆ ಗಳನ್ನು ಹೇರುವುದರ ಮೂಲಕ ವಾಣಿಜ್ಯದ ದುರುಪಯೋಗ ಮಾಡಿಕೊಳ್ಳಬಹುದು.ಅಲ್ಲದೇ ಅದು ಪ್ರತಿಕ್ರಿಯಿಸುವುದು ವಾಣಿಜ್ಯ ನೀತಿಯಲ್ಲಿ ವಾಣಿಜ್ಯ ವಿನಿಮಯವಾಗಬಹುದು ಎಂಬುದನ್ನು ಜಾನ್ ಸ್ಟುವರ್ಟ್ ಮಿಲ್ ಸಾಬೀತುಪಡಿಸಿ ತೋರಿಸಿದ್ದಾನೆ. ರಿಕಾರ್ಡೊ ಮತ್ತು ಇತರರು ಇದನ್ನು ಮೊದಲೇ ತಿಳಿಸಿದ್ದರು. ಇದನ್ನು ಅನಿರ್ಬಂಧ ವಾಣಿಜ್ಯದ ಸಾರ್ವತ್ರಿಕ ಮೋಸಕ್ಕೆ ಸಾಕ್ಷಿಯಾಗಿ ತೆಗೆದುಕೊಳ್ಳಲಾಯಿತು. ಸಂಪೂರ್ಣವಾಗಿ ಅನಿರ್ಬಂಧ ವಾಣಿಜ್ಯದ ನೀತಿಗಿಂತ ಬದಲಿ ವಾಣಿಜ್ಯ ನೀತಿಯನ್ನು ಅನುಸರಿಸುವ ಮೂಲಕ ವಾಣಿಜ್ಯದ ಆರ್ಥಿಕ ಹೆಚ್ಚುವರಿ ರಾಷ್ಟ್ರಕ್ಕೆ ಸೇರಿಕೊಳ್ಳುವುದು. ಸಂಪೂರ್ಣವಾಗಿ ಅಭಿವೃದ್ಧಿ ಹೊಂದುವವರೆಗೂ ಕೆಲವು ಸಮಯದವರೆಗೆ ಸರ್ಕಾರವು ಹೊಸ ಉದ್ಯಮಗಳನ್ನು ರಕ್ಷಿಸುವ "ಕರ್ತವ್ಯವನ್ನು" ಹೊಂದಿರುತ್ತದೆ ಎಂಬ ಸಿದ್ಧಾಂತವನ್ನು ಬೆಂಬಲಿಸಲಾಯಿತು. ಮಿಲ್ ಅಭಿವೃದ್ಧಿಪಡಿಸಿದಂತಹ ಬೆಳವಣಿಗೆಯ ಪ್ರಾರಂಭಿಕ ಸ್ಥಿಯಲ್ಲಿರುವ ಉದ್ಯಮಗಳು ಇದನ್ನು ಕೆಲವೇ ವರ್ಷಗಳಲ್ಲಿ ಅನುಸರಿಸಿದವು. ಕೈಗಾರೀಕರಣ ಮಾಡುವ ಹಾಗು ಇಂಗ್ಲೀಷ್ ರಫ್ತುದಾರರನ್ನು ಮೀರಿಸುವ ಮೂಲಕ ಇದು ಅನೇಕ ರಾಷ್ಟ್ರಗಳ ಕಾರ್ಯನೀತಿಯಾಯಿತು. ಈ ತೆರಿಗೆಯು ಕೆಲವು ಪರಿಸ್ಥಿತಿಗಳಲ್ಲಿ ಹೊಸದಾಗಿ ಸದಸ್ಯತ್ವ ಪಡೆದಿರುವ ರಾಷ್ಟ್ರಕ್ಕೆ ಲಾಭದಾಯಕವಾಗಬದುದು;ಆದರೆ ಪ್ರಂಪಚಕ್ಕೆ ಎಂದಿಗೂ ದೊಡ್ಡ ಪ್ರಮಾಣದಲ್ಲಿ ಲಾಭದಾಯಕವಾಗಲಾರದು, ಎಂಬುದನ್ನು ತೋರಿಸುವ ಮೂಲಕ ಮಿಲ್ಟನ್ ಫ್ರೈಡ್ ಮನ್ ನಂತರ ಈ ವಿಚಾರದ ಎಳೆಯನ್ನು ಮುಂದುವರೆಸಿದನು.[೪]

1929 ರಿಂದ 1930ರ ಕೊನೆಯವರೆಗೆ ನಡೆದ ಆರ್ಥಿಕ ಕುಸಿತ ದೊಡ್ಡ ಆರ್ಥಿಕ ಹಾಗು ಕೈಗಾರಿಕಾ ಕುಸಿತ ಎನಿಸಿದೆ. ಈ ಸಮಯದಲ್ಲಿ ,ವಾಣಿಜ್ಯ ಹಾಗು ಇತರ ಆರ್ಥಿಕ ಸೂಚಕಗಳಲ್ಲಿ ದೊಡ್ಡ ಕುಸಿತವೇ ಉಂಟಾಗಿತ್ತು.

ಅನಿರ್ಬಂಧ ವಾಣಿಜ್ಯದ ಕೊರತೆಯೇ, ಆರ್ಥಿಕ ಹಾಗು ಕೈಗಾರಿಕಾ ಕುಸಿತಕ್ಕೆ ಮುಖ್ಯ ಕಾರಣ ಎಂದು ಅನೇಕರು ಭಾವಿಸಿದರು. ವಿಶ್ವಯುದ್ಧ II ರ ಸಮಯದಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಮಾತ್ರ ಆರ್ಥಿಕ ಕುಸಿತ ಕೊನೆಗೊಂಡಿತು. 1944 ರಲ್ಲಿ ನಡೆಯುತ್ತಿದ್ದ ಯುದ್ಧದ ಸಮಯದಲ್ಲೂ ಕೂಡ, ರಾಷ್ಟ್ರೀಯ ವ್ಯಾಪಾರಕ್ಕೆ ನಿರ್ಬಂಧ ಹೇರುವುದನ್ನು ಹಾಗು ಆರ್ಥಿಕ ಕುಸಿತವನ್ನು ತಡೆಯಲು,44 ರಾಷ್ಟ್ರಗಳು ಬ್ರಿಟನ್ ವುಡ್ಸ್ ಕರಾರಿಗೆ ಸಹಿಹಾಕಿದವು. ಈ ಒಪ್ಪಂದ ಅಂತರರಾಷ್ಟ್ರೀಯ ರಾಜಕೀಯ ಅರ್ಥಶಾಸ್ತ್ರವನ್ನು ನಿಯಂತ್ರಿಸುವ ನಿಯಮಗಳನ್ನು ಹಾಗು ಸಂಸ್ಥೆಗಳನ್ನು ಹುಟ್ಟುಹಾಕಿತು: ದಿ ಇಂಟರ್ ನ್ಯಾಷನಲ್ ಮಾನಿಟರಿ ಫಂಡ್ ಹಾಗು ದಿ ಇಂಟರ್ ನ್ಯಾಷನಲ್ ಬ್ಯಾಂಕ್ ಫಾರ್ ರೀಕನ್ ಸ್ಟ್ರಕ್ಷನ್ ಅಂಡ್ ಡೆವಲಪ್ ಮೆಂಟ್ (ವಿಶ್ವ ಬ್ಯಾಂಕ್ ಹಾಗು ಬ್ಯಾಂಕ್ ಫಾರ್ ಇಂಟರ್ ನ್ಯಾಷನಲ್ ಸೆಟಲ್ ಮೆಂಟ್ಸ್ ಎಂದು ವಿಂಗಡಿಸಲಾಯಿತು). ಸಾಕಷ್ಟು ರಾಷ್ಟ್ರಗಳು ಒಪ್ಪಂದವನ್ನು ಅನುಮೋದಿಸಿದ ನಂತರ ಈ ಸಂಸ್ಥೆ 1946 ರಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. 1947ರಲ್ಲಿ , ಅನಿರ್ಬಂಧ ವಾಣಿಜ್ಯವನ್ನು ಪ್ರೋತ್ಸಾಹಿಸಲು 23 ರಾಷ್ಟ್ರಗಳು ತೆರಿಗೆ ಹಾಗು ವಾಣಿಜ್ಯದ ಮೇಲಿನ ಸಾರ್ವತ್ರಿಕ ಒಪ್ಪಂದಕ್ಕೆ ಸಹಿ ಹಾಕಿದವು.

ಅನಿರ್ಬಂಧ ವಾಣಿಜ್ಯ, 20ನೇ ಶತಮಾನದ ಉತ್ತರಾರ್ಧದಲ್ಲಿ ಹಾಗು 2000ನೇ ಇಸವಿಯ ಪೂರ್ವಾರ್ಧದಲ್ಲಿ ಮುಂದುವರೆಯಿತು:

 • 1992 ರ ಯುರೋಪಿಯನ್ ಒಕ್ಕೂಟ, ಆಂತರಿಕ ವಾಣಿಜ್ಯದಲ್ಲಿ ಸರಕುಗಳು ಮತ್ತು ಕಾರ್ಮಿಕರ ಮೇಲಿನ ಪ್ರತಿಬಂಧವನ್ನು ತೆಗೆದುಹಾಕಿತು.
 • ಜನವರಿ 1, 1994ರಲ್ಲಿ ನಾರ್ತ್ ಅಮೇರಿಕನ್ ಫ್ರೀ ಟ್ರೇಡ್ ಅಗ್ರೀಮೆಂಟ್(ಉತ್ತರ ಅಮೇರಿಕನ್ ಅನಿರ್ಬಂಧ ವಾಣಿಜ್ಯ ಒಪ್ಪಂದ) (NAFTA) ಕಾರ್ಯನಿರ್ವಹಿಸಲು ಪ್ರಾರಂಭಿಸಿತು.
 • 1994 ರ ದಿ GATT ಮರ್ಕೆಚ್ಚ ಅಗ್ರೀಮೆಂಟ್ WTO ಸ್ಥಾಪನೆಯನ್ನು ಸ್ಪಷ್ಟಪಡಿಸಿತು.
 • ಜನವರಿ 1, 1995ರಲ್ಲಿ ವಿಶ್ವ ವಾಣಿಜ್ಯ ಸಂಸ್ಥೆಯನ್ನು,ಒಪ್ಪಂದಕ್ಕೆ ಸಹಿಮಾಡಿದ ಎಲ್ಲಾ ಸದಸ್ಯರೊಳಗೆ ಪರಸ್ಪರವಾಗಿ ಅತ್ಯಂತ ಹೆಚ್ಚು ಸ್ನೇಹಭಾವದಿಂದಿರುವ ರಾಷ್ಟ್ರದ ವ್ಯಾಪಾರದ ಮಾಹಿತಿಯನ್ನು ನಿರ್ದೇಶಿಸುವುದರ ಮೂಲಕ ಅನಿರ್ಬಂಧ ವಾಣಿಜ್ಯದ ಅನುಕೂಲಕ್ಕಾಗಿ ಸ್ಥಾಪಿಸಲಾಯಿತು.
 • EC ಯನ್ನು ಯುರೋಪಿಯನ್ ಒಕ್ಕೂಟವಾಗಿ ಬದಲಾಯಿಸಲಾಯಿತು.Euroವನ್ನು ಪರಿಚಯಿಸುವುದರ ಮೂಲಕ 2002 ರಲ್ಲಿ ಇದು ಆರ್ಥಿಕ ಹಾಗು ಮಾನಿಟರಿ ಯುನಿಯನ್ (EMU)ಅನ್ನು ನಿರ್ವಹಿಸಿತು. ಅಲ್ಲದೇ ಇದೇ ಹಾದಿಯಲ್ಲಿ ಜನವರಿ 1, 2007 ರಲ್ಲಿ 13 ಸದಸ್ಯ ರಾಷ್ಟ್ರಗಳ ನಡುವೆ ಒಂದೇ ಮಾರುಕಟ್ಟೆಯನ್ನು ನಿರ್ಮಿಸಿತು.
 • 2005 ರಲ್ಲಿ, ಕೇಂದ್ರೀಯ ಅಮೇರಿಕನ್ ಅನಿರ್ಬಂಧ ವಾಣಿಜ್ಯ ಒಪ್ಪಂದಕ್ಕೆ ಸಹಿಹಾಕಲಾಯಿತು;ಇದು ಅಮೇರಿಕ ಸಂಯುಕ್ತ ಸಂಸ್ಥಾನ ಹಾಗು ಡಾಮಿನಿಕನ್ ರಿಪಬ್ಲಿಕ್ ಅನ್ನು ಒಳಗೊಂಡಿದೆ.

ಹಣಕಾಸು ಅಭಿವೃದ್ಧಿ

ಹಣದ ಮೊದಲನೆಯ ಮಾದರಿಗಳು ವಾಸ್ತವಿಕ ಮೌಲ್ಯದೊಂದಿಗೆ ವಸ್ತುರೂಪದಲ್ಲಿದ್ದವು. ಇದನ್ನು ಉಪಯುಕ್ತ ವಸ್ತುವಿನ ರೂಪದ ಹಣವೆಂದು ಕರೆಯಲಾಗುತ್ತದೆ.ಇದು ವಾಸ್ತವಿಕ ಮೌಲ್ಯವನ್ನು ಹೊಂದಿರುವ ಯಾವುದೇ ಸಾಮಾನ್ಯವಾಗಿ ದೊರೆವ ಉಪಯುಕ್ತ ವಸ್ತುಗಳನ್ನು ಒಳಗೊಳ್ಳುತ್ತದೆ; ಐತಿಹಾಸಿಕ ಉದಾಹರಣೆಗಳು ಹಂದಿಗಳನ್ನು, ವಿರಳ ಕಪ್ಪೆಚಿಪ್ಪುಗಳನ್ನು,ತಿಮಿಂಗಿಲದ ಹಲ್ಲುಗಳನ್ನು,ಹಾಗು (ವಿರಳವಾಗಿ) ಕುದುರೆಗಳನ್ನು ಒಳಗೊಂಡಿದೆ. ಮಧ್ಯಕಾಲೀನ ಇರಾಕ್ ನಲ್ಲಿ, ತಳಿಗಳನ್ನು ಹಣದ ಹಿಂದಿನ ರೂಪವಾಗಿ ಬಳಸಲಾಗುತ್ತಿತ್ತು. ಮೆಕ್ಸಿಕೊದಲ್ಲಿನ ಮಾನ್ ಟೆಜೋಮವರ್ಗದಲ್ಲಿ ಕೋಕೋಬೀಜಗಳೇ ಹಣದ ರೂಪವಾಗಿದ್ದವು.. [೧]

Roman denarius in silver (Maximinus)-transparent
ರೋಮನ್ ಬೆಳ್ಳಿನಾಣ್ಯ

ಕರನ್ಸಿಯನ್ನು, ಸರುಕಗಳ ಹಾಗು ಸೇವೆಗಳ ದೊಡ್ಡ ಪ್ರಮಾಣದ ವಿನಿಮಯವನ್ನು ಸುಲಭಗೊಳಿಸಲು ಮಾಡಿರುವ ಪ್ರಮಾಣೀಕರಿಸಲ್ಪಟ್ಟ ಹಣದಂತೆ ಪರಿಚಯಿಸಲಾಯಿತು. ಕರನ್ಸಿಯ ಮೊದಲನೆಯ ಹಂತದಲ್ಲಿ,ನಾಣ್ಯದ ಬೆಲೆಯನ್ನು ಪ್ರತಿನಿಧಿಸಲು ಲೋಹಗಳನ್ನು ಬಳಸಲಾಗುತ್ತಿತ್ತು. ಅಲ್ಲದೇ ಉಪಯುಕ್ತ ವಸ್ತುಗಳನ್ನು ಪ್ರತಿನಿಧಿಸಲು ಚಿಹ್ನೆಗಳನ್ನು ಬಳಸಲಾಗುತ್ತಿತ್ತು.ಈ ಚಿಹ್ನೆಗಳನ್ನು ವ್ಯಾಪಾರದ ಆಧಾರದ ಮೇಲೆ ಅರ್ಧಚಂದ್ರಾಕೃತಿಯಲ್ಲಿ ಸುಮಾರು 1500 ವರ್ಷಗಳ ಕಾಲ ನಿರ್ಮಿಸಲಾಯಿತು.

ನಾಣ್ಯ ಸಂಗ್ರಹಕಾರರು ಹಿಂದೆ ಇದ್ದ ವಿಶಾಲ ತಳಹದಿಯ ಸಮಾಜ ನಿರ್ಮಿತ ನಾಣ್ಯಗಳ ಉದಾಹರಣೆಯನ್ನು ಹೊಂದಿದ್ದಾರೆ. ಆದರೂ ಆರಂಭದಲ್ಲಿ ಈ ನಾಣ್ಯಗಳನ್ನು ಬೆಲೆಬಾಳುವ ಲೋಹಗಳ ರಾಶಿ ಎಂದು ಗುರುತಿಸಲಿಲ್ಲ.[೫]

ಪ್ರಾಚೀನ ಸ್ಪಾರ್ಟ ,ಅದರ ಪ್ರಜೆಗಳು ಹೊರಗಿನವರೊಂದಿಗೆ ವ್ಯಾಪಾರದಲ್ಲಿ ತೊಡಗದಂತೆ ಮಾಡಲು ಕಬ್ಬಿಣದಿಂದ ನಾಣ್ಯಗಳನ್ನು ಟಂಕಿಸುತ್ತಿತ್ತು.

ಪ್ರಚಲಿತ ಪ್ರವೃತ್ತಿಗಳು

ದೋಹಾಾ ರೌಂಡ್ಸ್ (ದೋಹಾಾ ಮಾತುಕತೆಗಳು)

ವಿಶ್ವ ವಾಣಿಜ್ಯ ಸಂಸ್ಥೆಯ ದೋಹಾ ರೌಂಡ್ ನ ಸಂಧಾನ ಸಭೆಯೂ, ಅಭಿವೃದ್ಧಿಶೀಲ ರಾಷ್ಟ್ರಗಳು ವ್ಯಾಪಾರ ಮಾಡಲು ಸುಲಭವಾಗಿಸುವುದರ ಬಗ್ಗೆ ಬೆಳಕು ಚೆಲ್ಲುತ್ತವೆ.ಪ್ರಪಂಚದಾದ್ಯಂತ ವಾಣಿಜ್ಯದ ಮೇಲೆ ಪ್ರತಿಬಂಧವನ್ನು ಕಡಿಮೆ ಪ್ರಮಾಣದಲ್ಲಿ ಹೇರುವ ಉದ್ದೇಶವನ್ನು ಹೊಂದಿತ್ತು. ಮಾತುಕತೆಯು ಅಭಿವೃದ್ಧಿ ಹೊಂದಿದ ಶ್ರೀಮಂತ ರಾಷ್ಟ್ರಗಳನ್ನು ಪ್ರತಿನಿಧಿಸುತ್ತಿದ್ದ G20ಹಾಗು ಇತರ ಪ್ರಮುಖ ಅಭಿವೃದ್ಧಿಶೀಲ ರಾಷ್ಟ್ರಗಳ ಭಿನ್ನಾಬಿಪ್ರಾಯಗಳ ಮಧ್ಯೆ ನಿಂತಿತು. ವ್ಯವಸಾಯದ ಸಹಾಯಧನ ನಿಧಿಗಳು, ಒಪ್ಪಂದವನ್ನು ಸಂಧಾನದ ಮೂಲಕ ತೀರ್ಮಾನಿಸಲು ಕಷ್ಟವಾಗುವಂತೆ ಮಾಡುವ ಅತ್ಯಂತ ಪ್ರಮುಖ ವಿಚಾರಗಳಾಗಿವೆ. ವೈದೃಶ್ಯವಾಗಿ , ವಾಣಿಜ್ಯವನ್ನು ಸುಲಭಗೊಳಿಸಲು ಹಾಗು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದರ ಮೇಲೆ ಹೆಚ್ಚು ಒಪ್ಪಂದಗಳಿವೆ.

ದಿ ದೋಹಾ ರೌಂಡ್ ದೋಹಾ, ಕತಾರ್ ನಲ್ಲಿ ಪ್ರಾರಂಭವಾಯಿತು,ಹಾಗು ಸಂಧಾನ ಸಭೆಗಳು ನಂತರ ಈ ಕೆಳಕಂಡ ಪ್ರದೇಶಗಳಲ್ಲಿ ಮುಂದುವರೆದವು: ಕಾನ್ ಕುನ್ , ಮೆಕ್ಸಿಕೊ; ಜಿನೇವಾ, ಸ್ವಿಜರ್ ಲ್ಯಾಂಡ್; ಹಾಗು ಪ್ಯಾರೀಸ್, ಫ್ರಾನ್ಸ್ ಮತ್ತು ಹಾಂಗ್ ಕಾಂಗ್.

ಚೀನಾ

1978 ರ ಪ್ರಾರಂಭದ ಸುಮಾರಿಗೆ,ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ(PRC)ದ ಸರ್ಕಾರವು ಆರ್ಥಿಕ ಸುಧಾರಣೆಯಲ್ಲಿ ಪ್ರಯೋಗವನ್ನು ಪ್ರಾರಂಭಿಸಿತು. ಹಿಂದಿನ ಸೋವಿಯತ್ ನ ಕೇಂದ್ರೀಯವಾಗಿ ಯೋಜಿಸಲ್ಪಟ್ಟ ಅರ್ಥಶಾಸ್ತ್ರ ಶೈಲಿಗೆ ಸಮರೂಪವಾದಂತೆ ,ಹೊಸ ಕ್ರಮಗಳು ವ್ಯವಸಾಯ, ಕೃಷಿ ವಿತರಣೆ ಹಾಗು ಅನೇಕ ವರ್ಷಗಳ ನಂತರ ನಗರದ ಉದ್ಯಮಗಳು ಹಾಗು ದುಡಿಮೆಯ ಮೇಲಿರುವ ನಿರ್ಬಂಧಗಳನ್ನು ಸಡಿಲಗೊಳಿಸಿದವು. ಮಾರುಕಟ್ಟೆ ಆಧಾರಿತ ಹೆಚ್ಚು ವ್ಯಾಪಾರಗಳು, ಅದಕ್ಷತೆಯನ್ನು ಕಡಿಮೆಮಾಡುತ್ತವೆ. ಅಲ್ಲದೇ ಖಾಸಗಿ ಬಂಡವಾಳ ಹೂಡಿಕೆಯನ್ನು ವಿಶೇಷವಾಗಿ ಕೃಷಿಕರಿಂದ ಪ್ರೋತ್ಸಾಹಿಸುತ್ತವೆ.ಅಲ್ಲದೇ ಇದು ಉತ್ಪಾದಕತೆಯನ್ನು ಹಾಗು ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಆಗ್ನೇಯ ಕರಾವಳಿಯಲ್ಲಿರುವ ನಾಲ್ಕು (ನಂತರ ಐದು) ವಿಶೇಷ ಆರ್ಥಿಕ ವಲಯಗಳ ಸ್ಥಾಪನೆ ಇದರ ಒಂದು ಪ್ರಮುಖ ಲಕ್ಷಣವಾಗಿದೆ.

ಉತ್ಪಾದನೆ, ವಿವಿಧತೆ, ಗುಣಮಟ್ಟ, ಬೆಲೆಯಲ್ಲಿ ಹಾಗು ಬೇಡಿಕೆಗಳು ಹೆಚ್ಚಾಗುವ ಮೂಲಕ ಸುಧಾರಣೆಗಳು ಅದ್ಭುತವಾಗಿ ಯಶಸ್ವಿಯಾದವು. ನಿಜವಾದ ಅರ್ಥದಲ್ಲಿ,ಆರ್ಥಿಕ ಸ್ಥಿತಿಯು 1978 ರಿಂದ 1986ರ ವರೆಗೆ ದುಪ್ಪಟ್ಟಾಯಿತು; ಮತ್ತೆ 1994ರಲ್ಲಿ ದುಪ್ಪಟ್ಟಾಯಿತು, ಅದು ಮತ್ತೆ 2003ರಲ್ಲಿಯೂ ದ್ವಿಗುಣವಾಯಿತು. ನಿಜವಾದ ತಲಾವರಮಾನದ ಆಧಾರದ ಮೇಲೆ, 1978ರಿಂದ ಪ್ರಾರಂಭವಾಗಿ 1987, 1996 ಹಾಗು 2006ರಲ್ಲಿ ದ್ವಿಗುಣಗೊಂಡಿತು. 2008 ರಷ್ಟಕ್ಕೆ, ಆರ್ಥಿಕ ಪರಿಸ್ಥಿತಿ 1978 ರಲ್ಲಿ ಇದ್ದ ಪ್ರಮಾಣಕ್ಕಿಂತ 16.7 ಪ್ರಮಾಣದಷ್ಟು ಆರ್ಥಿಕ ಪ್ರಗತಿ ಹೆಚ್ಚಾಯಿತು.ಅಲ್ಲದೇ ಹಿಂದೆ ಇದ್ದ ತಲಾವರಮಾನದ 12.1 ರ ಪ್ರಮಾಣದಲ್ಲಿ ತಲಾದಾಯ ಹೆಚ್ಚಾಯಿತು. ಅಂತರರಾಷ್ಟ್ರೀಯ ವಾಣಿಜ್ಯ ಇನ್ನು ವೇಗವಾಗಿ ಅಭಿವೃದ್ಧಿಯನ್ನು ಹೊಂದಿತು,ಸುಮಾರು ಪ್ರತಿ 4.5 ವರ್ಷಗಳಿಗೆ ಇದು ದುಪ್ಪಟ್ಟಾಗುತ್ತಿದೆ. ಜನವರಿ 1998 ರಲ್ಲಿ ಎರಡೂ ಕಡೆಯ ಒಟ್ಟು ವ್ಯಾಪಾರ 1978 ರಲ್ಲಿ ಆದ ಎಲ್ಲಾ ವ್ಯಾಪಾರವನ್ನು ಮೀರಿಸಿತು;2009ರ ಮೊದಲಾರ್ಧದಲ್ಲಿ, 1998ರ ಇಡೀ ವರ್ಷದ ವ್ಯಾಪಾರವನ್ನು ಮೀರಿಸಿದೆ. 2008ರಲ್ಲಿ,ಚೀನಾದ ಎರಡೂ ಕಡೆಯ ಒಟ್ಟು ವ್ಯಾಪಾರ US$2.56 ಟ್ರಿಲಿಯನ್.

1991ರಲ್ಲಿ PRC, ವಾಣಿಜ್ಯವನ್ನು ಪ್ರೋತ್ಸಾಹಿಸುವ ಫೋರಂ ಆಗಿರುವ ಏಷ್ಯ-ಫೆಸಿಫಿಕ್ ಎಕಾನಮಿಕ್ ಕಾರ್ಪೋರೇಷನ್ ಗುಂಪಿಗೆ ಸೇರಿಕೊಂಡಿತು. 2001ರಲ್ಲಿ ,ಇದು ವಿಶ್ವ ವಾಣಿಜ್ಯ ಸಂಸ್ಥೆಗೂ ಸೇರಿಕೊಂಡಿತು. ಇದನ್ನೂ ನೋಡಿ: ಪಿಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಆರ್ಥಿಕ ಪರಿಸ್ಥಿತಿ

ಅಂತರರಾಷ್ಟ್ರೀಯ ವಾಣಿಜ್ಯ

ಅಂತರರಾಷ್ಟ್ರೀಯ ವಾಣಿಜ್ಯವು,ರಾಷ್ಟ್ರದ(ಗಡಿ) ಎಲ್ಲೆಗಳಲ್ಲಿ ನಡೆಯುವ ಸರಕುಗಳ ಹಾಗು ಸೇವೆಗಳ ವಿನಿಮಯವಾಗಿದೆ. ಬಹುಪಾಲು ರಾಷ್ಟ್ರಗಳಲ್ಲಿ ,ಇದು GDPಯ ಪ್ರಧಾನ ಭಾಗವನ್ನು ಪ್ರತಿನಿಧಿಸುತ್ತದೆ .ಅಂತರರಾಷ್ಟ್ರೀಯ ವಾಣಿಜ್ಯವು ಇತಿಹಾಸದುದ್ದಕ್ಕೂ ಬಹುಮಟ್ಟಿಗಿದ್ದರೂ ಕೂಡ(ಸಿಲ್ಕ್ ರೋಡ್, ಅಂಬರ್ ರೋಡ್ನೋಡಿ),ಇದರ ಆರ್ಥಿಕ, ಸಾಮಾಜಿಕ, ಹಾಗು ರಾಜಕೀಯ ಮಹತ್ವವು ಇತ್ತೀಚಿನ ಶತಮಾನದಲ್ಲಿ ಹೆಚ್ಚಿತು. ಮುಖ್ಯವಾಗಿ ಕೈಗಾರಿಕೀಕರಣದಿಂದ, ಮುಂದುವರೆದ ಸಾರಿಗೆ ಸಂಪರ್ಕ, ಜಾಗತೀಕರಣದಿಂದ, ಬಹುರಾಷ್ಟ್ರೀಯ ಸಂಘಟನೆಗಳಿಂದ, ಹಾಗು ಹೊರಗಿನಿಂದಲೂ ಇದರ ಮಹತ್ವ ಹೆಚ್ಚಿದೆ. ಭಾಗಶಃ ಇದು, ಅಂತರರಾಷ್ಟ್ರೀಯ ವಾಣಿಜ್ಯ ಚಟುವಟಿಕೆಗಳಿಗೆ ಹೆಚ್ಚಾಗುತ್ತಿರುವ ಪ್ರಾಧಾನ್ಯತೆಯಾಗಿದೆ. ಇದನ್ನು ಯಥಾಪ್ರಕಾರ "ಜಾಗತೀಕರಣ"ವೆಂಬ ಹೆಸರಿನಲ್ಲಿ ಸೂಚಿಸಲಾಗುತ್ತದೆ.

ವಾಣಿಜ್ಯದ ಯಶಸ್ಸಿಗೆ ಪ್ರಾಯೋಗಿಕ ಪುರಾವೆಗಳನ್ನು ರಾಷ್ಟ್ರಗಳ ನಡುವಿನ ಸಾಮರಸ್ಯದಲ್ಲಿ ನೋಡಬಹುದು.ಉದಾಹರಣೆಗೆ , ದಕ್ಷಿಣ ಕೊರಿಯ,ಇದು ರಫ್ತು-ಆಧಾರಿತ ಕೈಗಾರಿಕೀಕರಣ ನಿಯಮವನ್ನು ಅನುಸರಿಸಿತು. ಭಾರತ, ಐತಿಹಾಸಿಕವಾಗಿ ಹೆಚ್ಚು ಪ್ರತಿಬಂಧಕ ನಿಯಮವನ್ನು ಅನುಸರಿಸಿದೆ. (ಆದರೂ ,2005 ರಿಂದ ಅದರ ಅರ್ಥಿಕ ಪರಿಸ್ಥಿತಿಯನ್ನು ಅನಿರ್ಬಂಧಗೊಳಿಸಲಿದೆ.) ಸುಮಾರು ಐವತ್ತು ವರ್ಷಗಳ ಆರ್ಥಿಕ ಪರಿಸ್ಥಿಯನ್ನು ತಾಳೆಮಾಡಿ ನೋಡಿದರೆ ದಕ್ಷಿಣ ಕೊರಿಯ ಭಾರತಕ್ಕಿಂತ ಹೆಚ್ಚು ಉತ್ತಮವಾಗಿ ನಿರ್ವಹಿಸಿದೆ.ಆದರೂ ಇದರ ಯಶಸ್ಸು ರಾಜ್ಯಗಳ ಪರಿಣಾಮಕಾರಿ ಆಡಳಿತ ಸಂಸ್ಥೆಗಳಿಂದಲೂ ಸಾಧ್ಯವಾಗಿದೆ.

ಕೆಲವೊಮ್ಮೆ ನಿರ್ದಿಷ್ಟ ರಾಷ್ಟ್ರಗಳ ಮೇಲೆ ಹೇರಲಾಗುವ [[]]ವಾಣಿಜ್ಯ ನಿರ್ಬಂಧಗಳು , ಯಾವುದೋ ಕೆಲಸಕ್ಕಾಗಿ ಆ ರಾಷ್ಟ್ರವನ್ನು ಶಿಕ್ಷಿಸಲು ಮಾಡಿರುವ ದಂಡನೆಗಳಾಗಿವೆ. (ಆರ್ಥಿಕ) ವಾಣಿಜ್ಯ ದಿಗ್ಬಂಧನ ,ಎಂಬುದು ಬಾಹ್ಯವಾಗಿ ಹೇರಿರುವಂತಹ ಕ್ರಮಬದ್ಧವಾದ ಪ್ರತ್ಯೇಕತೆಯಾಗಿದೆ.ಇದು ಒಂದು ದೇಶ ಮತ್ತೊಂದರೊಂದಿಗಿನ ಎಲ್ಲಾ ವ್ಯಾಪಾರ-ವಹಿವಾಟನ್ನು ನಿರ್ಭಂದಿಸುವುದಾಗಿದೆ. ಉದಾಹರಣೆಗೆ, ಅಮೇರಿಕ ಸಂಯುಕ್ತ ಸಂಸ್ಥಾನ ಸುಮಾರು ನಲವತ್ತು ವರ್ಷಗಳ ಕಾಲ ಕ್ಯೂಬಾ ವಿರುದ್ಧ ವಾಣಿಜ್ಯ ಪ್ರತಿಬಂಧಕಾಜ್ಞೆಯನ್ನು ಹೊಂದಿತ್ತು.

ಆದರೂ, ರಾಷ್ಟ್ರಗಳೊಳಗೆ ಕೆಲವು ಮಾಮೂಲಿನ ವಾಣಿಜ್ಯ ಪರಿಮಿತಿಗಳು ಇರುತ್ತವೆ.ಅಂತರರಾಷ್ಟ್ರೀಯ ವಾಣಿಜ್ಯವು ಸರ್ಕಾರಿ ಹಕ್ಕು ಭಾದ್ಯತೆಗಳಿಂದ ನಿಯಂತ್ರಿಸಲ್ಪಡುತ್ತದೆ. ಅಲ್ಲದೇ ನಿರ್ಬಂಧಿಸಲ್ಪಡುತ್ತದೆ.ಅಲ್ಲದೇ ಯಾವಾಗಲೂ ನಿಗದಿತ ವ್ಯಾಪಾರಗಳಿಂದ ತೆರಿಗೆ ಬರುತ್ತದೆ. ಸುಂಕ ಸಾಮಾನ್ಯವಾಗಿ ಆಮದಿನ ಮೇಲಿರುತ್ತದೆ,ಆದರೆ ಕೆಲವು ಸಂದರ್ಭಗಳಲ್ಲಿ ರಾಷ್ಟ್ರಗಳು ರಫ್ತಿನ ಮೇಲೂ ಸುಂಕವನ್ನು ಅಥವಾ ರಿಯಾಯತಿ ನಿಧಿಯನ್ನು ವಿಧಿಸಬಹುದು. ಇವೆಲ್ಲವನ್ನು ವಾಣಿಜ್ಯದ ಪ್ರತಿಬಂಧಕ ಗಳು ಎಂದು ಕರೆಯಲಾಗುತ್ತದೆ. ಸರ್ಕಾರ ಎಲ್ಲಾ ವಾಣಿಜ್ಯ ಪ್ರತಿಬಂಧಕಗಳನ್ನು ತೆಗೆದುಹಾಕಿದರೆ,ಅನಿರ್ಬಂಧ ವಾಣಿಜ್ಯ ಪರಿಸ್ಥಿತಿ ಉಂಟಾಗುತ್ತದೆ. ಸರ್ಕಾರ ಜಾರಿಗೆ ತರುವಂತಹ ಆರ್ಥಿಕ ರಕ್ಷಣಾನೀತಿ, ವಾಣಿಜ್ಯ ಪ್ರತಿಬಂಧಕಗಳನ್ನು ಉಂಟುಮಾಡುತ್ತದೆ.

ಫೇರ್ ಟ್ರೇಡ್ ಚಳವಳಿಯು,ಟ್ರೇಡ್ ಜಸ್ಟಿಸ್ ಎಂದು ಕೂಡ ಕರೆಯಲ್ಪಡುತ್ತದೆ,ಇದುಕಾರ್ಯಚಟುವಟಿಕೆಯ ಬಳಕೆಗೆ ಪ್ರೋತ್ಸಾಹಿಸುವುದು.ಅಲ್ಲದೇ ಉಪಯುಕ್ತ ವಸ್ತುಗಳ ಉತ್ಪಾದನೆಯ ಮೇಲೆ ವಾತಾವರಣದ ಹಾಗು ಸಾಮಾಜಿಕ ಗುಣಮಟ್ಟವನ್ನು ಹೆಚ್ಚಿಸಲು ಉತ್ತೇಜಿಸುವುದು. ವಿಶೇಷವಾಗಿ ತೃತೀಯ ಹಾಗು ದ್ವಿತೀಯ ವರ್ಲ್ಡ್ ನಿಂದ ಮೊದಲನೆಯ ವರ್ಲ್ಡ್ ಗೆ(ಅಭಿವೃದ್ಧಿ ಹೊಂದಿದ ರಾಷ್ಟ್ರಗಳು) ರಫ್ತಾಗುವ ವಸ್ತುಗಳ ಗುಣಮಟ್ಟವನ್ನು ಹೆಚ್ಚಿಸಲು ಪ್ರೋತ್ಸಾಹಿಸಿತು. . ಈ ವಿಚಾರಗಳು,ವಾಣಿಜ್ಯಮಾನವ ಹಕ್ಕುಗಳಂತೆ ಸಂಹಿತೆಯನ್ನು ರಚಿಸಿಕೊಂಡಿವೆ ಎಂಬ ವಿಷಯದ ಬಗ್ಗೆ ಚರ್ಚೆನಡೆಯುವಂತೆ ಮಾಡಿವೆ.[೬]

ಗುಣಮಟ್ಟವು ಆಮದು ಮಾಡುವ ವ್ಯವಹಾರ ಸಂಸ್ಥೆಗಳಲ್ಲಿಯೇ ಸೇರಿಕೊಂಡಿರುತ್ತದೆ ಅಥವಾ ಉದ್ಯೋಗ ಮತ್ತು ವಾಣಿಜ್ಯ ಕಾನೂನಿನ ಮೂಲಕ ಸರ್ಕಾರದಿಂದ ವಿಧಿಸಲ್ಪಡಬಹುದು. ಅನಿರ್ಬಂಧ ವಾಣಿಜ್ಯ ನೀತಿಗಳು ಆಗಾಗ ಹೆಚ್ಚಾಗಿ ವ್ಯತ್ಯಾಸಗೊಂಡಿವೆ, ಈ ವ್ಯತ್ಯಾಸಗಳು ಸಾಮಾನ್ಯವಾದ ನಿಷ್ಠೆಯಿಂದ ಕಾರ್ಮಿಕರಿಂದ ಉತ್ಪಾದಕತೆಗೆ ನೇಮಕ ಮಾಡಲ್ಪಟ್ಟ ಸರಕುಗಳ ನಿಷೇಧದವರೆಗೂ ಹಾಗು ಜೀತದಾಳುಗಳಿಗೆ ಕನಿಷ್ಠ ಸಂಬಳ ನೀಡುವ ಯೋಜನೆಗಳು,ಉದಾಹರಣೆಗೆ 1980ರ ಕಾಫಿಯಲ್ಲಿದ್ದವರಿಗೆ,ಇವುಗಳವರೆಗೂ ನೋಡಬಹುದು. ಸರ್ಕಾರೇತರ ಸಂಸ್ಥೆಗಳು, ಅನಿರ್ಬಂಧ ವಾಣಿಜ್ಯ ಗುರುತಿನ ಅಗತ್ಯತೆಗಳೊಡನೆ ಅನುವರ್ತನೆಯ ಸ್ವತಂತ್ರ ನಿಯಂತ್ರಕವಾಗಿ,ಅನಿರ್ಬಂಧ ವಾಣಿಜ್ಯ ಗುಣಮಟ್ಟವನ್ನು ಪ್ರೋತ್ಸಾಹಿಸುತ್ತವೆ.

ಉಲ್ಲೇಖಗಳು

 1. "Distribution Services". Foreign Agricultural Service. 2000-02-09. Retrieved 2006-04-04.
 2. WTO - ವಿಶ್ವ ವಾಣಿಜ್ಯ ಸಂಸ್ಥೆ
 3. Watson, Peter (2005). Ideas : A History of Thought and Invention from Fire to Freud. HarperCollins. ISBN 0-06-621064-X. ಪರಿಚಯ.
 4. ಬೆಲೆ ಸಿದ್ಧಾಂತ ಮಿಲ್ಟನ್ ಫ್ರೈಡ್ ಮನ್
 5. ಒರಿಜಿನ್ಸ್ ಆಫ್ ಮನಿ ಅಂಡ್ ಆಫ್ ಬ್ಯಾಂಕಿಂಗ್ನಲ್ಲಿ ವಿವರಿಸಿರುವಂತೆ,ಚಿನ್ನವು ವಿಶೇಷವಾಗಿ ಹಿಂದೆ ಇದ್ದ ಹಣದ ಸಾಮಾನ್ಯ ರೂಪವಾಗಿದೆDavies, Glyn (2002). Ideas : A history of money from ancient times to the present day. University of Wales Press. ISBN 0-7083-1717-0.
 6. "Should trade be considered a human right?". COPLA. 9 December 2008.
ಅಡಮಾನ ಸಾಲ

ಅಡಮಾನ ಸಾಲವು ಸ್ಥಿರಾಸ್ತಿ ಖರೀದಿಸುವ ಉದ್ದೇಶದಿಂದ ನಿಧಿ ಸಂಗ್ರಹಿಸಲು ನಿಜ ಆಸ್ತಿಯ ಖರೀದಿದಾರರಿಂದ ಬಳಸಲ್ಪಡುತ್ತದೆ; ಅಥವಾ ಪರ್ಯಾಯವಾಗಿ ಒತ್ತೆಯಿಡಲಾಗುತ್ತಿರುವ ಆಸ್ತಿಯ ಮೇಲೆ ಧಾರಣೆ ಹಾಕುವಾಗ ಯಾವುದೇ ಉದ್ದೇಶಕ್ಕಾಗಿ ನಿಧಿ ಸಂಗ್ರಹಿಸಲು ಆಸ್ತಿಯ ಮಾಲೀಕರಿಂದ ಬಳಸಲ್ಪಡುತ್ತದೆ. ಸಾಲಗಾರನ ಸ್ವತ್ತಿನ ಮೇಲೆ ಸಾಲವು ಭದ್ರಪಟ್ಟಿರುತ್ತದೆ. ಇದರರ್ಥ ಒಂದು ಕಾನೂನು ವಿಧಾನವನ್ನು ಸಿದ್ಧಪಡಿಸಲಾಗುತ್ತದೆ. ಇದು ಸಾಲ ತೀರಿಸುವ ಉದ್ದೇಶದಿಂದ ಆಧಾರವಾಗಿಟ್ಟ ಆಸ್ತಿಯನ್ನು ಸುಪರ್ದಿಗೆ ತೆಗೆದುಕೊಂಡು ಮಾರಾಟಮಾಡಲು ಸಾಲದಾತನಿಗೆ ಅನುಮತಿಸುತ್ತದೆ. ಇದು ಸಾಲಗಾರನು ಸಾಲ ತೀರಿಸಲು ತಪ್ಪಿದ ಅಥವಾ ಅದರ ನಿಯಮಗಳನ್ನು ಪಾಲಿಸಲು ವಿಫಲನಾದ ಸಂದರ್ಭದಲ್ಲಿ ಮಾತ್ರ ಆಗುತ್ತದೆ. ಅಡಮಾನ ಪದವನ್ನು ಒಂದು ಲಾಭ (ಸಾಲ) ಕ್ಕಾಗಿ ಮೇಲಾಧಾರದ ರೂಪದಲ್ಲಿ ಸಾಲಗಾರನು ಪರಿಗಣಿಕೆ ನೀಡುವುದು ಎಂದೂ ವಿವರಿಸಬಹುದು.

ಭೋಗ್ಯ ಸಾಲಗಾರರು ತಮ್ಮ ಮನೆಯನ್ನು ಒತ್ತೆಯಿಡುವ ವ್ಯಕ್ತಿಗಳಾಗಿರಬಹುದು ಅಥವಾ ವಾಣಿಜ್ಯ(ವ್ಯಾಪಾರ) ಆಸ್ತಿಯನ್ನು ಒತ್ತೆಯಿಡುವ ಉದ್ಯಮಗಳಾಗಿರಬಹುದು (ಉದಾಹರಣೆಗೆ, ತಮ್ಮ ಸ್ವಂತ ಉದ್ಯಮ ಆವರಣಗಳು, ಹಿಡುವಳಿದಾರರಿಗೆ ಕೊಟ್ಟ ವಸತಿ ಆಸ್ತಿ ಅಥವಾ ಹೂಡಿಕೆ ಬಂಡವಾಳ). ಸಾಲದಾತನು ಸಂಬಂಧಪಟ್ಟ ದೇಶವನ್ನು ಅವಲಂಬಿಸಿ ಸಾಮಾನ್ಯವಾಗಿ ಬ್ಯಾಂಕ್, ಕ್ರೆಡಿಟ್ ಒಕ್ಕೂಟ ಅಥವಾ ಕಟ್ಟಡ ಸಂಘದಂತಹ ಒಂದು ಹಣಕಾಸು ಸಂಸ್ಥೆಯಾಗಿರುತ್ತದೆ, ಮತ್ತು ಸಾಲದ ವ್ಯವಸ್ಥೆಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಮಧ್ಯವರ್ತಿಗಳ ಮೂಲಕ ಮಾಡಬಹುದು. ಸಾಲದ ಗಾತ್ರ, ಸಾಲದ ಮುಕ್ತಾಯ, ಬಡ್ಡಿ ದರ, ಸಾಲವನ್ನು ಪಾವತಿಸುವ ವಿಧಾನ, ಮತ್ತು ಬೇರೆ ಗುಣಲಕ್ಷಣಗಳಂತಹ ಅಡಮಾನ ಸಾಲದ ವೈಶಿಷ್ಟ್ಯಗಳು ಗಣನೀಯವಾಗಿ ಬದಲಾಗಬಹುದು. ಆಧಾರವಾಗಿಟ್ಟ ಆಸ್ತಿಯ ಮೇಲೆ ಸಾಲದಾತನ ಹಕ್ಕುಗಳು ಸಾಲಗಾರನ ಇತರ ಸಾಲದಾತರ ಮೇಲೆ ಆದ್ಯತೆ ತೆಗೆದುಕೊಳ್ಳುತ್ತವೆ. ಇದರರ್ಥ ಸಾಲಗಾರನು ದಿವಾಳಿಯಾದರೆ ಅಥವಾ ಪಾಪರ್ ಆದರೆ, ಆಧಾರವಾಗಿಟ್ಟ ಆಸ್ತಿಯ ಮಾರಾಟದಿಂದ ಅಡಮಾನ ಸಾಲದಾತನಿಗೆ ಮೊದಲು ಪೂರ್ಣವಾಗಿ ಮರುಪಾವತಿ ಮಾಡಿದ ನಂತರ, ಇತರ ಸಾಲದಾತರಿಗೆ ಸಾಲವನ್ನು ಪಾವತಿ ಮಾಡಲಾಗುತ್ತದೆ.

ಅಡುಗೆ

ಅಡುಗೆ ಶಾಖವನ್ನು ಬಳಸಿ ಸೇವನೆಗೆ ಆಹಾರವನ್ನು ತಯಾರಿಸುವ ಕಲೆ, ತಂತ್ರಜ್ಞಾನ ಮತ್ತು ಕುಶಲಕರ್ಮ. ತೆರೆದ ಬೆಂಕಿ ಮೇಲೆ ಆಹಾರವನ್ನು ಗ್ರಿಲ್ ಮಾಡುವುದರಿಂದ ಹಿಡಿದು ವಿದ್ಯುತ್ ಒಲೆಗಳನ್ನು ಬಳಸುವುದರವರೆಗೆ, ವಿವಿಧ ಬಗೆಯ ಅವನ್‍ಗಳಲ್ಲಿ ಬೇಕ್ ಮಾಡುವುದರವರೆಗೆ, ಅಡುಗೆ ತಂತ್ರಗಳು ಮತ್ತು ಪದಾರ್ಥಗಳು ವಿಶ್ವದಾದ್ಯಂತ ವ್ಯಾಪಕವಾಗಿ ಬದಲಾಗುತ್ತವೆ, ಮತ್ತು ಅನನ್ಯ ಪಾರಿಸರಿಕ, ಆರ್ಥಿಕ, ಮತ್ತು ಸಾಂಸ್ಕೃತಿಕ ಪರಂಪರೆಗಳು ಮತ್ತು ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತವೆ. ಅಡುಗೆಯ ರೀತಿಗಳು ಮತ್ತು ಪ್ರಕಾರಗಳು ಒಬ್ಬ ವೈಯಕ್ತಿಕ ಅಡುಗೆಗಾರನು ಹೊಂದಿರುವ ಕೌಶಲ ಮತ್ತು ತರಬೇತಿಯ ಬಗೆಯನ್ನು ಅವಲಂಬಿಸಿವೆ. ತಮ್ಮ ಸ್ವಂತ ಮನೆಗಳಲ್ಲಿ ಜನರು ಮತ್ತು ಉಪಾಹಾರ ಗೃಹಗಳು ಮತ್ತು ಇತರ ಆಹಾರ ಮಳಿಗೆಗಳಲ್ಲಿ ವೃತ್ತಿಪರ ಬಾಣಸಿಗರು ಮತ್ತು ಶೆಫ್‍ಗಳು ಅಡುಗೆ ಮಾಡುತ್ತಾರೆ. ಮೀನ ನ್ನು ನಿಂಬೆ ರಸದಲ್ಲಿರುವ ಆಮ್ಲಗಳಿಂದ ಬೇಯಿಸುವ ಒಂದು ಸಾಂಪ್ರದಾಯಿಕ ದಕ್ಷಿಣ ಅಮೇರಿಕಾದ ಖಾದ್ಯವಾದ ಸವೀಚೆಯಂತಹ, ಶಾಖದ ಉಪಸ್ಥಿತಿಯಿರದೆ ರಾಸಾಯನಿಕ ಕ್ರಿಯೆಗಳ ಮೂಲಕವೂ ಅಡುಗೆ ಆಗಬಹುದು.

ಶಾಖ ಅಥವಾ ಬೆಂಕಿಯಿಂದ ಆಹಾರವನ್ನು ತಯಾರಿಸುವುದು ಮಾನವರಿಗೆ ಅನನ್ಯವಾದ ಒಂದು ಚಟುವಟಿಕೆ. ಅದು ಸುಮಾರು ೨ ಮಿಲಿಯ ವರ್ಷಗಳ ಹಿಂದೆ ಆರಂಭವಾಗಿರಬಹುದಾದರೂ, ಅದರ ಪುರಾತತ್ವ ಸಾಕ್ಷ್ಯಗಳು ೧ ಮಿಲಿಯ ವರ್ಷ ಹಿಂದೆಗಿಂತ ಹೆಚ್ಚು ಹೋಗುವುದಿಲ್ಲ.

ಭಿನ್ನ ಪ್ರದೇಶಗಳಲ್ಲಿ ನಾಗರಿಕತೆಗಳ ನಡುವೆ ಕೃಷಿ, ವಾಣಿಜ್ಯ, ವ್ಯಾಪಾರ ಮತ್ತು ಸಾರಿಗೆಯ ವಿಸ್ತರಣೆ ಬಾಣಸಿಗರಿಗೆ ಅನೇಕ ಹೊಸ ಪದಾರ್ಥಗಳನ್ನು ನೀಡಿತು. ನೀರನ್ನು ಹಿಡಿಯಲು ಮತ್ತು ಕುದಿಸಲು ಕುಂಬಾರಿಕೆಯ ಆವಿಷ್ಕಾರದಂತಹ, ಹೊಸ ಆವಿಷ್ಕಾರಗಳು ಮತ್ತು ತಂತ್ರಜ್ಞಾನಗಳು ಅಡುಗೆ ತಂತ್ರಗಳನ್ನು ವಿಸ್ತರಿಸಿದವು. ಬಡಿಸಲಾದ ತಿನಿಸಿನ ರುಚಿಯನ್ನು ಮತ್ತಷ್ಟು ಹೆಚ್ಚಿಸಲು ಕೆಲವು ಆಧುನಿಕ ಬಾಣಸಿಗರು ಆಹಾರ ತಯಾರಿಕೆಗೆ ಮುಂದುವರಿದ ವಿಧಾನಗಳನ್ನು ಅನ್ವಯಿಸುತ್ತಾರೆ.ಅಡುಗೆಯಲ್ಲಿನ ಬಹುತೇಕ ಪದಾರ್ಥಗಳನ್ನು ಜೀವಿಗಳಿಂದ ಪಡೆಯಲಾಗುತ್ತದೆ. ತರಕಾರಿಗಳು, ಹಣ್ಣುಗಳು, ಧಾನ್ಯಗಳು ಮತ್ತು ಕರಟಕಾಯಿಗಳು, ಜೊತೆಗೆ ಮೂಲಿಕೆಗಳು ಮತ್ತು ಸಾಂಬಾರ ಪದಾರ್ಥಗಳು ಸಸ್ಯಗಳಿಂದ ಬಂದರೆ, ಮಾಂಸ, ಮೊಟ್ಟೆಗಳು ಮತ್ತು ಕ್ಷೀರೋತ್ಪನ್ನಗಳು ಪ್ರಾಣಿಗಳಿಂದ ಬರುತ್ತವೆ. ಅಣಬೆಗಳು ಮತ್ತು ಬೇಕಿಂಗ್‍ನಲ್ಲಿ ಬಳಸುವ ಮಡ್ಡಿ ಶಿಲೀಂಧ್ರಗಳ ಬಗೆಗಳು. ಬಾಣಸಿಗರು ನೀರು ಮತ್ತು ಉಪ್ಪಿನಂತಹ ಖನಿಜಗಳನ್ನೂ ಬಳಸುತ್ತಾರೆ. ಬಾಣಸಿಗರು ವೈನ್ ಅಥವಾ ಮದ್ಯಗಳನ್ನೂ ಬಳಸಬಹುದು.

ಅರ್ಥ ವ್ಯವಸ್ಥೆ

ಅರ್ಥ ವ್ಯವಸ್ಥೆ/ಆರ್ಥಿಕತೆ ಎಂದರೆ ರಾಷ್ಟ್ರ ಅಥವಾ ಇತರೆ ಪ್ರದೇಶದ, ಕಾರ್ಮಿಕವರ್ಗ, ಬಂಡವಾಳ/ಮೂಲಧನ ಹಾಗೂ ಭೂಮಿ ಸಂಪನ್ಮೂಲಗಳು, ಹಾಗೂ ಉತ್ಪಾದನೆ, ವಿನಿಮಯ, ವಿತರಣೆ, ಹಾಗೂ ಆ ಪ್ರದೇಶದಲ್ಲಿನ ಸರಕುಗಳ ಹಾಗೂ ಸೇವೆಗಳ ಬಳಕೆಗಳಲ್ಲಿ ಸಾಮಾಜಿಕವಾಗಿ ಭಾಗವಹಿಸುವ ಆರ್ಥಿಕ ಕಾರಕಸಂಸ್ಥೆಗಳು ಒಳಗೊಂಡಿರುವ ಒಂದು ಆರ್ಥಿಕ ವ್ಯವಸ್ಥೆ. ನಿರ್ದಿಷ್ಟ ಅರ್ಥ ವ್ಯವಸ್ಥೆ/ಆರ್ಥಿಕತೆಯೆಂದರೆ ತಾಂತ್ರಿಕ ವಿಕಸನ, ಇತಿಹಾಸ ಹಾಗೂ ಸಾಮಾಜಿಕ ಸಂಯೋಜನೆ, ಅಷ್ಟೇ ಅಲ್ಲದೇ ಅಲ್ಲಿನ ಭೌಗೋಳಿಕ ವ್ಯವಸ್ಥೆ, ನೈಸರ್ಗಿಕ ಸಂಪನ್ಮೂಲಗಳ ಸಂಪನ್ನತೆ, ಹಾಗೂ ಪರಿಸರ ವ್ಯವಸ್ಥೆಗಳನ್ನು ಪ್ರಮುಖ ಅಂಶಗಳನ್ನಾಗಿ ಒಳಗೊಂಡ ಒಂದು ಪ್ರಕ್ರಿಯೆಯ ಫಲಿತಾಂಶವಾಗಿರುತ್ತದೆ. ಈ ಸಂಗತಿಗಳು ಪರಿಸ್ಥಿತಿ, ಅಂಶಗಳನ್ನು ಹೊಂದಿಸುವುದಲ್ಲದೇ, ಅರ್ಥ ವ್ಯವಸ್ಥೆ/ಆರ್ಥಿಕತೆ ಕಾರ್ಯನಿರ್ವಹಿಸುವ ವಿವಿಧ ಸಂದರ್ಭಗಳು ಹಾಗೂ ಪರಿಮಾಣಗಳನ್ನು ನಿಗದಿಪಡಿಸುತ್ತದೆ.

ಪ್ರಸ್ತುತ ಸಂದರ್ಭದಲ್ಲಿ ಅರ್ಥ ವ್ಯವಸ್ಥೆ/ಆರ್ಥಿಕತೆಗಳನ್ನು ಪರಿಶೀಲಿಸುವ ಸಮಾಜವಿಜ್ಞಾನ ಅಧ್ಯಯನ ಶಾಖೆಗಳ ವ್ಯಾಪ್ತಿಗೆ ಆರ್ಥಿಕತೆಯ, ಸಮಾಜಶಾಸ್ತ್ರ (ಆರ್ಥಿಕ ಸಮಾಜಶಾಸ್ತ್ರ), ಇತಿಹಾಸ (ಆರ್ಥಿಕ ಇತಿಹಾಸ) ಹಾಗೂ ಭೂಗೋಳಶಾಸ್ತ್ರ (ಆರ್ಥಿಕ ಭೂಗೋಳಶಾಸ್ತ್ರ)ಗಳಂತಹಾ ಶಾಖೆಗಳೂ ಸೇರುತ್ತವೆ. ಉತ್ಪಾದನೆ, ವಿತರಣೆ, ವಿನಿಮಯಗಳಲ್ಲದೇ, ಸರಕುಗಳ ಮತ್ತು ಸೇವೆಗಳ ಬಳಕೆಯನ್ನೊಳಗೊಂಡ ಮಾನವ ಚಟುವಟಿಕೆಗಳಿಗೆ ನೇರವಾಗಿ ಸಂಬಂಧಿಸಿದ ಕಾರ್ಯೋಪಯೋಗಿ ಕ್ಷೇತ್ರಗಳಾದ ವಾಸ್ತುಶಿಲ್ಪದಿಂದ ಹಿಡಿದು ನಿರ್ವಹಣೆ ಹಾಗೂ ವ್ಯಾವಹಾರಿಕ ಆಡಳಿತಗಳು ಮತ್ತು ಅನ್ವಯಿಕ ವಿಜ್ಞಾನದಿಂದ ಹಿಡಿದು ಹಣಕಾಸು ಕ್ಷೇತ್ರಗಳವರೆಗೆ ವ್ಯಾಪಿಸಿವೆ. ಎಲ್ಲಾ ವಿಧದ ವೃತ್ತಿಗಳು, ಉದ್ಯೋಗಗಳು, ಆರ್ಥಿಕ ಕಾರಕಸಂಸ್ಥೆಗಳು ಅಥವಾ ಆರ್ಥಿಕ ಚಟುವಟಿಕೆಗಳು ಅರ್ಥ ವ್ಯವಸ್ಥೆ/ಆರ್ಥಿಕತೆಗೆ ತಮ್ಮ ಕೊಡುಗೆ ನೀಡುತ್ತವೆ. ಅರ್ಥ ವ್ಯವಸ್ಥೆ/ಆರ್ಥಿಕತೆಯಲ್ಲಿ ಬಳಕೆ, ಉಳಿಕೆ ಹಾಗೂ ಹೂಡಿಕೆಗಳು ಮೂಲ ವ್ಯತ್ಯಾಸಸಾಧ್ಯ ಘಟಕಗಳಾಗಿದ್ದು ಮಾರುಕಟ್ಟೆಯ ಸಮತೋಲನವನ್ನು ನಿರ್ಧರಿಸುತ್ತವೆ. ಆರ್ಥಿಕ ಚಟುವಟಿಕೆಗಳ ಮೂರು ಪ್ರಮುಖ ವಲಯಗಳಿವೆ: ಪ್ರಾಥಮಿಕ/ಪ್ರಥಮ, ಮಾಧ್ಯಮಿಕ/ಮಧ್ಯಮ ಹಾಗೂ ತೃತೀಯ ವಲಯಗಳೆಂದು ಅವುಗಳನ್ನು ಕರೆಯಲಾಗುತ್ತದೆ.

ಅರ್ಥಶಾಸ್ತ್ರ

ಈ ಲೇಖನ ಸಮಾಜ ವಿಜ್ಞಾನದ ಬಗ್ಗೆ. ಅರ್ಥಶಾಸ್ತ್ರ ಪದದ ಇತರ ಬಳಕೆಗಳಿಗಾಗಿ ಅರ್ಥಶಾಸ್ತ್ರ (ದ್ವಂದ್ವ ನಿವಾರಣೆ) ನೋಡಿ.ಅರ್ಥಶಾಸ್ತ್ರವು ಸರಕುಗಳ ಮತ್ತು ಸೇವೆಗಳ ಉತ್ಪಾದನೆ, ಹಂಚುವಿಕೆ ಮತ್ತು ಬಳಕೆಗಳನ್ನು ಅಧ್ಯಯನ ಮಾಡುವ ಒಂದು ಸಮಾಜ ವಿಜ್ಞಾನ.

ಪ್ರಚಲಿತ ಆರ್ಥಿಕ ವಿನ್ಯಾಸಗಳು, ಭೌತಿಕ ವಿಜ್ಞಾನಗಳಿಗೆ ಹೆಚ್ಚಿನ ಸಮಾನ ಧರ್ಮವುಳ್ಳ ಒಂದು ಪ್ರಾಯೋಗಿಕ ಹಾದಿ ಬಳಸುವ ಒಂದು ಅಪೇಕ್ಷೆಗೆ ಬದ್ಧವಾಗಿ, ೧೯ನೇ ಶತಮಾನದಲ್ಲಿ ತಡವಾಗಿ ರಾಜಕೀಯ ಆರ್ಥಿಕ ವ್ಯವಸ್ಥೆಯ ವಿಶಾಲವಾದ ವ್ಯಾಪ್ತಿಯಿಂದ ಹೊರಹೊಮ್ಮಿದವು. ಆಧುನಿಕ ಅರ್ಥಶಾಸ್ತ್ರದ ಬಹಳಷ್ಟನ್ನು ನಿರೂಪಿಸುವ ಒಂದು ವ್ಯಾಖ್ಯಾನ ಲಾಯನಲ್ ರಾಬಿನ್ಸ್‌ರ ಒಂದು ೧೯೩೨ರ ಪ್ರಬಂಧದಲ್ಲಿದೆ: "ಮಾನವೀಯ ವರ್ತನೆಯನ್ನು ಪರ್ಯಾಯ ಉಪಯುಕ್ತತೆಗಳಿರುವ ಮಿತಿಗಳು ಮತ್ತು ದುರ್ಲಭವಾದ ಸಾಧನಗಳ ನಡುವಣ ಒಂದು ಸಂಬಂಧವಾಗಿ ಅಧ್ಯಯನಮಾಡುವ ವಿಜ್ಞಾನ." ವಿರಳತೆಯು ಲಭ್ಯವಾದ ಸಂಪನ್ಮೂಲಗಳು ಎಲ್ಲ ಬೇಕುಗಳನ್ನು ಮತ್ತು ಆವಶ್ಯಕತೆಗಳನ್ನು ನೆರವೇರಿಸಲು ಸಾಕಾಗುವುದಿಲ್ಲ ಎಂದು ಸೂಚಿಸುತ್ತದೆ. ಕೊರತೆ ಇಲ್ಲದಿದ್ದರೆ ಮತ್ತು ಲಭ್ಯವಾದ ಸಂಪನ್ಮೂಲಗಳ ಪರ್ಯಾಯ ಉಪಯೋಗಗಳಿದ್ದರೆ, ಯಾವುದೇ ಆರ್ಥಿಕ ಸಮಸ್ಯೆ ಇಲ್ಲ. ಈ ಪ್ರಕಾರವಾಗಿ ವ್ಯಾಖ್ಯಾನಿಸಿದ ವಿಷಯ ಆಯ್ಕೆಗಳ (ರ‍್ಯಾಷನಲ್ ಚಾಯ್ಸ್ ಥೀಯರಿ) ಅಧ್ಯಯನವನ್ನು ಒಳಗೊಂಡಿರುತ್ತದೆ ಏಕೆಂದರೆ ಅವು ಪ್ರೋತ್ಸಾಹಗಳು ಮತ್ತು ಸಂಪನ್ಮೂಲಗಳಿಂದ ಬಾಧಿತವಾಗಿರುತ್ತವೆ.

ಅರ್ಥಶಾಸ್ತ್ರವು ಅರ್ಥವ್ಯವಸ್ಥೆಗಳು ಹೇಗೆ ಕೆಲಸಮಾಡುತ್ತವೆ ಮತ್ತು ಆರ್ಥಿಕ ಕಾರ್ಯಭಾರಿಗಳು ಹೇಗೆ ಪರಸ್ಪರ ಪ್ರತಿಕ್ರಿಯಿಸುತ್ತಾರೆಂದು ಸ್ಪಷ್ಟಪಡಿಸುವ ಉದ್ದೇಶ ಹೊಂದಿರುತ್ತದೆ. ಆರ್ಥಿಕ ವಿಶ್ಲೇಷಣೆ ಸಮಾಜದ ಪ್ರತಿ ಅಂಶದಲ್ಲೂ ಪ್ರಯೋಗಿಸಲಾಗುತ್ತದೆ, ವ್ಯಾಪಾರ ಮತ್ತು ಹಣಕಾಸಿನಲ್ಲಿ ಆದರೆ ಅಪರಾಧದಲ್ಲಿ ಕೂಡ, ಶಿಕ್ಷಣದಲ್ಲಿ, ಕುಟುಂಬದಲ್ಲಿ, ಆರೋಗ್ಯದಲ್ಲಿ, ಕಾನೂನಿನಲ್ಲಿ, ರಾಜಕೀಯದಲ್ಲಿ, ಧರ್ಮದಲ್ಲಿ, ಸಾಮಾಜಿಕ ಸಂಸ್ಥೆಗಳಲ್ಲಿ, ಮತ್ತು ಯುದ್ಧದಲ್ಲಿ. ಸಾಮಾಜಿಕ ವಿಜ್ಞಾನಗಳ ಮೇಲೆ ಅರ್ಥಶಾಸ್ತ್ರದ ಈ ಅಧಿಕಾರಯುತ ಪ್ರಭಾವ ಆರ್ಥಿಕ ಸಾಮ್ರಾಜ್ಯಶಾಹಿ (ಎಕನಾಮಿಕ್ ಇಂಪೀರಿಯಲಿಸ಼ಮ್) ಎಂದು ವಿವರಿಸಲಾಗಿದೆ.

ಆಗ್ನೇಯ ಏಷ್ಯಾ

ಭಾರತದ ಪೂರ್ವಕ್ಕೆ ಮತ್ತು ಚೀನಾದ ದಕ್ಷಿಣಕ್ಕೆ ಏಷ್ಯಾ ಖಂಡದ ಆಗ್ನೇಯ ಭಾಗದಲ್ಲಿರುವ ದೇಶಗಳು ಆಗ್ನೇಯ ಏಷ್ಯಾದಲ್ಲಿ ಒಳಗೊಳ್ಳುತ್ತವೆ.

ಆರ್ಥಿಕ ತತ್ತ್ವಸಮೀಕ್ಷೆ

ಸರಳವಾಗಿದ್ದ ಬದುಕಿನ ಪ್ರಶ್ನೆ ಜಟಿಲವಾಗುತ್ತ ಬಂದಂತೆಲ್ಲ ಮಾನವನ ಸಾಮಾಜಿಕ ಮತ್ತು ಆರ್ಥಿಕ ಪ್ರಜ್ಞೆ ಹೇಗೆ ಬೆಳೆದುಬಂದಿತೆಂಬುದನ್ನು ಇಲ್ಲಿ ಚಾರಿತ್ರಿಕವಾಗಿ ಪರಿಶೀಲಿಸಲಾಗಿದೆ. ಆಹಾರಕ್ಕಾಗಿ ಬೇಟೆಯನ್ನೂ ಗೆಡ್ಡೆ ಗೆಣಸುಗಳ ಆಯ್ಕೆಯನ್ನೂ ನಂಬಿ ಅಲೆಮಾರಿಯಾಗಿದ್ದ ಮಾನವ ಬರಬರುತ್ತ ನೆಲೆನಿಂತು ಬೇಸಾಯ, ಪಶುಪಾಲನಾದಿ ವೃತ್ತಿಗಳನ್ನವಲಂಬಿಸಿದ. ಸಂಸಾರಿಯಾದ. ಮನೆ, ಹಳ್ಳಿಗಳು ಬೆಳೆದುವು. ಪದಾರ್ಥಗಳ ಉತ್ಪತ್ತಿ, ಸಂಗ್ರಹಣೆ, ವಿನಿಮಯಗಳಿಂದ ಆರ್ಥಿಕ ವ್ಯವಹಾರವನ್ನು ಕುದುರಿಸಿದ. ಚಣಿ, ಆಳು ಎಂಬ ಭಾವನೆ ಬೆಳೆಯಿತು. ಹೀಗೆ ಮಾನವನ ಜೀವನದಲ್ಲಿ ಬದಲಾವಣೆ ಉಂಟಾದ ಹಾಗೆಲ್ಲ, ಜನಾಂಗ ಬೆಳೆಯಿತು. ಆರ್ಥಿಕ ವಿಧಾನಗಳು ಒಂದೊಂದಾಗಿ ತಲೆದೋರುತ್ತ ಬಂದುವು. ಮಾನವ ಜೀವನಕ್ಕೂ ಆರ್ಥಿಕ ವಿಭಾಗಕ್ಕೂ ನಿಕಟ ಸಂಬಂಧ ಬೆಳೆದುಬಂದಿತು. ಜೀವನಶಾಸ್ತ್ರವೇ ಅರ್ಥಶಾಸ್ತ್ರದ ಮೂಲ. ಮಾನವನ ಆರ್ಥಿಕ ಚಲನವಲನಗಳು ಅರ್ಥಶಾಸ್ತ್ರದ ವಿಷಯ. ಇದೇ ಸಮಾಜಶಾಸ್ತ್ರದ ಒಂದು ಭಾಗವೂ ಆಗಿದೆ. ಆರ್ಥಿಕ ಚಟುವಟಿಕೆ ವೃದ್ಧಿಯಾದಂತೆಲ್ಲ, ಆರ್ಥಿಕ ಸಂಸ್ಥೆಗಳ ನಿರ್ಮಾಣ ಮೊದಲಾಯಿತು.

ಆರ್ಥಿಕ ಸಂಸ್ಥೆಗಳನ್ನು ವೈಯಕ್ತಿಕ (ಪ್ಯಾಕ್ ಟೈಪ್), ಸಾಮಾಜಿಕ (ಹರ್ಡ್ ಟೈಪ್) ಎಂದು ವಿಭಾಗಿಸಲಾಗಿದೆ. ಕೇಂದ್ರೀಕೃತ ಅಧಿಕಾರ, ಕಠಿಣಶಿಸ್ತು, ಲಾಭದಾಶೆ ಮುಖ್ಯ ಲಕ್ಷಣಗಳು. ಸಂಪಾದನೆಯೇ ಈ ಸಂಸ್ಥೆಯ ಗುರಿ. ಈ ಕುರುಹುಗಳೆಲ್ಲ ಪಾಶ್ಚಾತ್ಯ ದೇಶಗಳ ಆರ್ಥಿಕ ಸಂಸ್ಥೆಗಳಲ್ಲಿ ಮುಖ್ಯವಾಗಿ ಕಂಡುಬರುತ್ತವೆ.

ಸಾಮಾಜಿಕ ಆರ್ಥಿಕಸಂಸ್ಥೆಗಳಲ್ಲಿ ಪ್ರಜಾಸತ್ತಾತ್ಮಕ ಅಧಿಕಾರ ಬಡವರ ಬಲಹೀನರ ರಕ್ಷಣೆ, ಆದಾಯ ವಿಭಜನೆ, ವ್ಯಕ್ತಿಸ್ವಾತಂತ್ರ್ಯ ಇವೆಲ್ಲ ಇವೆ. ಇವು ಪ್ರತಿಯೊಂದೂ ಸಾಮಾಜಿಕ, ಆರ್ಥಿಕ ಜೀವನದ ಮೇಲೆ ತಮ್ಮ ಪ್ರಭಾವವನ್ನು ಬೀರುತ್ತವೆ.

ಪಾಶ್ಚಾತ್ಯದೇಶಗಳು ವ್ಯವಸಾಯ ವೃತ್ತಿಯನ್ನು ಅಭಿವೃದ್ಧಿಪಡಿಸದೆ ಕೈಗಾರಿಕಾ ಸ್ಥಾಪನೆಯನ್ನು ಬಲಪಡಿಸಿ ವೃದ್ಧಿಪಡಿಸಿದುವು. ಇಂಥ ಆರ್ಥಿಕ ಚರಿತ್ರೆಯನ್ನು ಶಕ್ತಿಯುಗ, ಆರ್ಥಿಕಯುಗ ಮತ್ತು ಯಂತ್ರಯುಗ ಎಂದು ವಿಂಗಡಿಸಬಹುದು. ಒಂದಾನೊಂದು ಕಾಲದಲ್ಲಿ ಜಹಗೀರ್ದಾರರು, ಕೆಲಸಗಾರರನ್ನು ನಿರ್ಬಂಧಪಡಿಸಿ ಅವರ ಶಕ್ತಿಸಾಮರ್ಥ್ಯದ ಸಂಪಾದನೆಯನ್ನು ತಾವು ಉಪಯೋಗಿಸಿಕೊಂಡು ಶ್ರೀಮಂತರಾಗುತ್ತಿದ್ದರು. ಅನಂತರ ವಿದೇಶಗಳಿಗೆ ವ್ಯಾಪಾರಕ್ಕಾಗಿ ಹೋಗಿ ಅಪಾರ ಧನಸಂಪಾದನೆ ಮಾಡುತ್ತಿದ್ದರು. ಹೀಗೆ ಗಂಗಾನದಿ ತೀರದಿಂದ ಥೇಮ್ಸ್ ನದಿ ದಡದವರೆಗೆ ಹೊನ್ನಿನ ಹೊಳೆ ಹರಿಯಿತು. ಇತರ ದೇಶಗಳನ್ನು ಸೂರೆಮಾಡಿ ಸಂಪಾದಿಸಿದ ಹಣದಿಂದ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಿ, ಸಂಪಾದನೆಯನ್ನು ವೃದ್ಧಿಪಡಿಸಲಾಯಿತು. ಇಂಥ ಯಂತ್ರಯುಗದ ಫಲವಾಗಿ ವೈಯಕ್ತಿಕ ಆರ್ಥಿಕ ಸಂಸ್ಥೆಗಳು ಬೆಳೆಯುತ್ತ ಬಂದುವು. ಇವು ವೃದ್ಧಿಹೊಂದಿದಂತೆ ಮಾನವನ ಕ್ರಿಯಾತ್ಮಕ ಶಕ್ತಿ ಕುಗ್ಗಿತು. ಬಂಡವಾಳ ಪ್ರಭುತ್ವ ತಾನೇತಾನಾಗಿ ವೃದ್ಧಿಹೊಂದಿತು. ಕೇಂದ್ರೀಕೃತ ವಸ್ತುರಚನೆ ಆಯಿತು. ಪ್ರಪಂಚದಲ್ಲಿ ಇಂದು ಒಂದು ಕಡೆ ಅಪಾರ ವಸ್ತು ಉತ್ಪಾದನೆಯಾದರೆ, ಇನ್ನೊಂದು ಕಡೆ ಹಸಿವಿನ ಆತುರ ಕಂಡುಬರುತ್ತದೆ. ರಾಜಕೀಯದ ಲ್ಲಿರುವಂತೆ ಆರ್ಥಿಕ ವಿಚಾರದಲ್ಲೂ ಒಂದು ಬಗೆಯ ಸ್ವಾತಂತ್ರ್ಯ ಇದ್ದರೆ ಒಳ್ಳೆಯದು. ಆದರೆ ವೈಯಕ್ತಿಕ ಆರ್ಥಿಕಸಂಸ್ಥೆಗಳಲ್ಲಿ ಇಂಥ ಸ್ವಾತಂತ್ರ್ಯಕ್ಕೆ ಅವಕಾಶವಿಲ್ಲ.

ಸಾಮಾಜಿಕ, ಆರ್ಥಿಕ ಸಂಸ್ಥೆಗಳಲ್ಲಿ ಸಾಮೂಹಿಕ ರಕ್ಷಣೆ ಸಂಯೋಜನಾಶಕ್ತಿಗಳಿವೆ. ಇದರ ಫಲವಾಗಿ, ಜಾತಿಭೇದ, ಅವಿಭಕ್ತಕುಟುಂಬ, ಲಾಭವಿಭಜನಾ ಸಂಸ್ಥೆ, ಗ್ರಾಮಸಭೆ ಮುಂತಾದುವು ಭದ್ರವಾಗಿ ತಳವೂರಿದವು. ಒಂದು ಸಂಸಾರದಲ್ಲಿ ಒಬ್ಬ ಸಂಪಾದಿಸಿದರೆ, ಇನ್ನೊಬ್ಬ ಅದರ ಭಾಗಕ್ಕೆ ಹಕ್ಕುದಾರನಾಗುತ್ತಾನೆ. ಹೆಚ್ಚು ಹಣ ಒಂದೇ ಕಡೆ ಸೇರುವುದಕ್ಕೆ ಅವಕಾಶವಿಲ್ಲ. ಒಂದೊಂದು ಜಾತಿಯೂ ಆಯಾ ಪಂಗಡದ ಯುವಕರ ಶಿಕ್ಷಣ, ವ್ಯಾಜ್ಯ ತೀರ್ಮಾನ, ಲಾಭವಿತರಣೆ ಮುಂತಾದುವನ್ನು ಅವೇ ನಿರ್ವಹಿಸುತ್ತಿದ್ದುವು. ಇಂಥ ಸಾಮಾಜಿಕ ಸಂಸ್ಥೆಗಳು ಪರಸ್ಪರ ಸಹಾಯವನ್ನು ವೃದ್ಧಿಪಡಿಸಿ, ಐಕ್ಯವನ್ನುಂಟುಮಾಡುತ್ತಿದ್ದುವು. ಆದರೆ ಪಾಶ್ಚಾತ್ಯ ಸಂಪರ್ಕ ಹೆಚ್ಚಿದಂತೆ, ಅಲ್ಲಿಯ ಆಡಳಿತಪದ್ಧತಿ ಆಚರಣೆಗೆ ಬಂದುದರ ಫಲವಾಗಿ, ಇಲ್ಲಿಯ ಹಿಂದಿನ ಕಟ್ಟುಪಾಡುಗಳು ಸಡಿಲವಾದುವು. ಕಸಬಿನ ಸ್ವಾತಂತ್ರ್ಯ ಕ್ಷೀಣವಾಯಿತು. ಪಾಶ್ಚಾತ್ಯ ಆರ್ಥಿಕ ಸಂಸ್ಥೆಗಳ ಪ್ರಭಾವ ಎಲ್ಲ ಕಡೆ ವಿಸ್ತರಿಸುತ್ತ ಬಂತು. ಇಂದು ಜಗತ್ತಿನ ಎಲ್ಲ ಭಾಗದಲ್ಲೂ ವೈಯಕ್ತಿಕ ಆರ್ಥಿಕ ಸಂಸ್ಥೆಯ ವಿಧಾನ ಹಬ್ಬಿದೆ. ಸಾಮಾಜಿಕ ಆರ್ಥಿಕ ಸಂಸ್ಥೆಗಳಿದ್ದ ದೇಶಗಳೂ ವೈಯಕ್ತಿಕ ಆರ್ಥಿಕ ತತ್ತ್ವವನ್ನೇ ಅಂಗೀಕರಿಸಿವೆ.

ಅರ್ಥಶಾಸ್ತ್ರ ಎಂಬ ಪದ ೨೦ನೆಯ ಶತಮಾನದಲ್ಲಿ ಹೆಚ್ಚು ಬಳಕೆಗೆ ಬಂತು. ಅದಕ್ಕೆ ಮುಂಚೆ ರಾಜಕೀಯ ಅರ್ಥಶಾಸ್ತ್ರ ಎಂಬ ಪದ ರೂಢಿಯಲ್ಲಿತ್ತು. ಈ ಪದವೂ ಆಧುನಿಕವಾದುದೇ. ೧೭ನೆಯ ಶತಮಾನದಲ್ಲಿ ಈ ಪದ ರೂಢಿಗೆ ಬಂತು. ರಾಜ್ಯಗಳ ಆದಾಯ, ಮತ್ತು ಸಾಧನಸಂಪತ್ತು ಹೆಚ್ಚಿಸುವ ಅರ್ಥದಲ್ಲಿ ಈ ಪದವನ್ನು ಬಳಸಲಾಯಿತು. ಅರ್ಥಶಾಸ್ತ್ರ ವಿಕಸನದಲ್ಲಿ ಮುಖ್ಯವಾಗಿ ನಾಲ್ಕು ವಿಭಾಗಗಳಿವೆ-ಗ್ರೀಕರ ಕಾಲ, ಮಧ್ಯಯುಗದ ಕಾಲ, ಅನಂತರದ ಕಾಲ (೧೬-೧೮ ಶತಮಾನ) ಮತ್ತು ಆಧುನಿಕ ಕಾಲ. ಈ ವಿಭಾಗಗಳು ಯುರೋಪ್ ಖಂಡದ ಇತಿಹಾಸ ವಿಭಾಗಕ್ಕೆ ಸರಿಹೊಂದುವಂತಿವೆ.

ಗ್ರೀಕರ ಕಾಲದ ಅರ್ಥಶಾಸ್ತ್ರ ಸಾಹಿತ್ಯವನ್ನು ಅಲ್ಲಿಯ ತತ್ತ್ವವೇತ್ತರು ಅಂದಿನ ನೈತಿಕ ದೃಷ್ಟಿಗನುಗುಣವಾಗಿ ರಚಿಸಿದರು. ಅರಿಸ್ಟಾಟಲ್, ಪ್ಲೇಟೊ ಮುಂತಾದ ಬರೆಹಗಾರರು ಕೂಲಿ ವಿಭಜನೆ, ಹಣದ ಉಪಯೋಗ ಮುಂತಾದ ಆರ್ಥಿಕ ವಿಷಯವಾಗಿ ಬರೆದಿದ್ದಾರೆ.

ಮಧ್ಯಮಯುಗದ ಆರ್ಥಿಕ ಆಲೋಚನೆಗಳು ಅಂದಿನ ನೈತಿಕ ಭಾವನೆಗಳನ್ನೊಳ ಗೊಂಡಿದ್ದುವು. ಈ ಬಗೆಯ ಸಾಹಿತ್ಯವನ್ನು ಕ್ರೈಸ್ತಪಾದ್ರಿಗಳು ರಚಿಸಿದ್ದರು. ಅವರ ಬರೆಹಗಳಲ್ಲಿ ಆರ್ಥಿಕ ಜೀವನ ಮತ್ತು ಐಹಿಕ ಜೀವನಗಳ ಪರಾಮರ್ಶೆ ಬರುತ್ತದಾದರೂ ಎಲ್ಲ ಅಭಿಪ್ರಾಯಗಳೂ ಕ್ರೈಸ್ತಧರ್ಮದತ್ತ, ವೈರಾಗ್ಯದತ್ತ ವಾಲುತ್ತವೆ.

ಮೂರನೆಯ ಯುಗ ಆರ್ಥಿಕ ರಾಷ್ಟ್ರೀಕರಣದ ಕಾಲ. ಇದನ್ನು ವ್ಯಾಪಾರೋದ್ಯಮದ ಕಾಲ ಎಂದೂ ಹೇಳಬಹುದು. ಈ ಕಾಲದಲ್ಲಿ ಮಧ್ಯಯುಗದ ಜಹಗೀರಿಯನ್ನು ಕಿತ್ತೊಗೆದು ರಾಷ್ಟ್ರೀಯಭಾವನೆಯಿಂದ ಕೂಡಿದ ಆರ್ಥಿಕತತ್ತ್ವವನ್ನು ಆಚರಣೆಗೆ ತರಲಾಯಿತು. ಇದರ ಫಲವಾಗಿ ಸಾಮಾಜಿಕ ಜೀವನದಲ್ಲಿ ಬದಲಾವಣೆಗಳುಂಟಾದುವು. ಇಟಲಿ ಮತ್ತು ಉತ್ತರ ಯುರೋಪ್ ರಾಜ್ಯಗಳಲ್ಲಿ ಸಂಸ್ಕೃತಿ, ಸಾಹಿತ್ಯ, ಕಲೆಯ ಪುನರುಜ್ಜೀವನವಾಯಿತು. ಔದ್ಯೋಗಿಕ ಪ್ರಗತಿ ಆಯಿತು. ಅಚ್ಚುಕೂಟ, ಪ್ರಕಟಣೆ, ವಿಜ್ಞಾನ, ವ್ಯಾಪಾರಗಳನ್ನು ಮುಖ್ಯವೆಂದು ಪರಿಗಣಿಸಲಾಯಿತು. ಈ ಯುಗವನ್ನು ವಾಣಿಜ್ಯದ ಕ್ರಾಂತಿಕಾಲ ಎಂದು ಹೇಳಬಹುದು. ವಾಣಿಜ್ಯ, ವ್ಯಾಪಾರ ೧೬ನೆಯ ಶತಮಾನದಿಂದ ೧೮ರವರೆಗೆ ಯುರೋಪಿನಲ್ಲಿ ಅಭಿವೃದ್ಧಿ ಹೊಂದಿತು. ಬಾಕಿರ್ಲ್, ಕ್ರಾಂವೆಲ್ ಮುಂತಾದ ರಾಜಕಾರಣಿಗಳು ಬರೆದ ಪುಸ್ತಕಗಳು ಈ ವಿಚಾರವನ್ನು ವಿಶದವಾಗಿ ತಿಳಿಸಿವೆ. ವಿದೇಶೀ ವ್ಯಾಪಾರದಲ್ಲಿ ಉಳಿತಾಯ ಮಾಡುವುದು ಆ ರಾಷ್ಟ್ರಗಳ ಉದ್ದೇಶವಾಗಿತ್ತು. ಹೊಸದೇಶದ ವ್ಯಾಪಾರದಿಂದ ತಮ್ಮ ದೇಶದೊಳಕ್ಕೆ ಹಣವನ್ನಾಗಲಿ, ಚಿನ್ನವನ್ನಾಗಲಿ ತರುವುದು, ಬಡ್ಡಿದರ ಕಡಿಮೆ ಮಾಡುವುದು, ಕಡಿಮೆ ಕೂಲಿ, ಜನಸಂಖ್ಯೆ ಹೆಚ್ಚಿಸುವುದಕ್ಕೆ ಉತ್ತೇಜನ, ವಸಾಹತು ನಿರ್ಮಾಣ ಇತ್ಯಾದಿ ಉದ್ದೇಶಗಳನ್ನು ಆ ರಾಷ್ಟ್ರಗಳು ಹೊಂದಿದ್ದುವು.

ಆಧುನಿಕ ಅರ್ಥಶಾಸ್ತ್ರದ ವಿಕಸನ ಆಧುನಿಕ ಮಾನವನ ಆಲೋಚನೆಯ ಫಲಿತಾಂಶ. ಆರ್ಥಿಕ ರೀತಿಯಲ್ಲಿ ಈ ಯುಗವನ್ನು ಬಂಡವಾಳ, ಪೈಪೋಟಿ ಅಥವಾ ಸ್ವತಂತ್ರ ವ್ಯಾಪಾರದ ಪ್ರಯತ್ನ ಎಂದು ಹೇಳಬಹುದು. ರಾಜಕೀಯವಾಗಿ ಇದು ಪ್ರಜಾಪ್ರಭುತ್ವ ಕಾಲ. ನಾಲ್ಕನೆಯದಾದ ಈ ಆರ್ಥಿಕಯುಗವನ್ನು ಆರ್ಥಿಕ ಜ್ಞಾನೋದಯ ಕಾಲ ಅಥವಾ ವಿಮರ್ಶಾತ್ಮಕ ವಿಚಾರಕಾಲ ಎಂದು ಹೇಳಲಾಗಿದೆ, ಇಂಥ ಅಭಿವೃದ್ಧಿ ಕಾಲದಲ್ಲಿ ಆರ್ಥಿಕ ಮುಖಂಡತ್ವ ಮೆಡಿಟರೇನಿಯನ್ ಭಾಗದಿಂದ ಯುರೋಪ್ ಖಂಡದ ಉತ್ತರಭಾಗದಲ್ಲಿರುವ ಇಂಗ್ಲೆಂಡಿಗೆ ವರ್ಗವಾಯಿತು. ಅಲ್ಲಿಂದ ಉತ್ತರ ಅಮೆರಿಕ ವಸಾಹತುಗಳಿಗೆ ಹರಡಿತು. ಆಧುನಿಕ ಅರ್ಥಶಾಸ್ತ್ರವನ್ನು ಸ್ವತಂತ್ರ್ಯ ಉದ್ಯಮದ ವಿಜಯ ಎಂದು ಹೇಳಬಹುದು. ಹಣವೇ ಎಲ್ಲ ಬಗೆಯ ಅಭಿವೃದ್ಧಿಗೂ ಮೂಲ. ಹಣ ಸಂಪಾದನೆ ಮುಖ್ಯ. ಈ ವಿಚಾರವಾಗಿ ಅರ್ಥಶಾಸ್ತ್ರ ಸಾಹಿತ್ಯರಚನಕರಾದ ಜೇಮ್ಸ್ ಅಪ್ಲಿ, ಥಾಮಸ್ ಮ್ಯಾನ್ ಮುಂತಾದವರು, ವಿದೇಶೀ ಮತ್ತು ಸ್ವತಂತ್ರ ವ್ಯಾಪಾರಗಳ ವಿಷಯವಾಗಿ ಪುಸ್ತಕ ಬರೆದು ಹಂಚಿದರು.

ಹಣ ಸಂಪಾದನೆಯೇ ಮುಖ್ಯ ಎಂಬ ಭಾವನೆ ಬೇರೂರಿದಂತೆ, ಆರ್ಥಿಕ ವಿಚಾರದಲ್ಲಿ ಸ್ವತಂತ್ರ ಪ್ರವೃತ್ತಿ ಹೆಚ್ಚಿತು. ನಿಯಂತ್ರಣ ಹೋಯಿತು. ಆ್ಯಡಂ ಸ್ಮಿತ್ ಮುಂತಾದ ಅರ್ಥಶಾಸ್ತ್ರಕಾರರ ಬರೆಹದ ಪ್ರಭಾವಕ್ಕೆ ಇಂಗ್ಲೆಂಡ್ ಒಳಗಾಯಿತು. ಇಂಗ್ಲೆಂಡಿನ ಕೈಗಾರಿಕಾಕ್ರಾಂತಿ, ಫ್ರಾನ್ಸ್ ನ ಮಹಾಕ್ರಾಂತಿ, ನೆಪೋಲಿಯನ್ನನ ಯುದ್ಧಗಳು ಇವೆಲ್ಲದರ ಫಲವಾಗಿ , ವ್ಯವಸಾಯ, ಕೈಗಾರಿಕೆ, ವ್ಯಾಪಾರ ಮುಂತಾದ ಆರ್ಥಿಕ ಉದ್ಯಮಗಳಿಗೆ ಹೆಚ್ಚು ಪ್ರೋತ್ಸಾಹ ದೊರೆಯಿತು. ಇಂಥ ಉತ್ತೇಜನ, ರಾಜಕೀಯ ಅರ್ಥಶಾಸ್ತ್ರ ಮತ್ತು ತೆರಿಗೆಯ ತತ್ತ್ವಗಳನ್ನು ಕುರಿತು ಪುಸ್ತಕ ಪ್ರಕಟಣೆಯಿಂದ ಪ್ರಾರಂಭವಾಯಿತು. ಜಾನ್ ಸ್ಟೂಯರ್್ಟ ಮಿಲ್ ೧೮೪೮ರಲ್ಲಿ ರಾಜಕೀಯ ಅರ್ಥಶಾಸ್ತ್ರ ತತ್ತ್ವ ಎಂಬ ಗ್ರಂಥವನ್ನು ಪ್ರಕಟಿಸಿದ. ಹೀಗೆಯೇ ಬಂಡವಾಳ, ಉತ್ಪನ್ನ, ಲಾಭ, ವಿತರಣೆ ಮುಂತಾದ ವಾಣಿಜ್ಯ, ವ್ಯಾಪಾರ ಲಾಭ ಸಂಪಾದನೆ ಮುಂತಾದ ಆರ್ಥಿಕ ಹವ್ಯಾಸಗಳು ಬಳಕೆಗೆ ಬಂದುವು. ಹಣಸಂಪಾದನೆ, ಬೆಲೆ, ಅಪೇಕ್ಷೆ, ಸರಬರಾಜು ಇತ್ಯಾದಿ ಅರ್ಥಶಾಸ್ತ್ರದ ವಿಷಯವಾಗಿ ವಿಪುಲಸಾಹಿತ್ಯ ಸೃಷ್ಟಿಯಾಯಿತು. ಇದರ ಫಲವಾಗಿ ಹೊಸಭಾವನೆ, ಹೊಸ ಪ್ರವೃತ್ತಿ, ಹೊಸ ಸಂಸ್ಥೆಗಳು ಹುಟ್ಟಿದುವು. ಪೇಟೆ, ಪೇಟೆಧಾರಣೆ, ಉತ್ಪಾದನೆ ಮತ್ತು ಅದರ ಅಂಗಗಳು, ವಿತರಣೆಯ ವಿಭಾಗ ಮುಂತಾದ ಆರ್ಥಿಕ ವಿಷಯಗಳು ಅರ್ಥಶಾಸ್ತ್ರಕಾರರ ಗಮನವನ್ನು ವಿಶೇಷವಾಗಿ ಆಕರ್ಷಿಸಿದುವು. ಇದರ ಪರಿಣಾಮವಾಗಿಯೊ ಎಂಬಂತೆ ಆಲ್ಫ್ರೆಡ್ ಮಾರ್ಷಲ್ನ ಉದ್ಗ್ರಂಥ ಪ್ರಕಟವಾಯಿತು. ಇಂಥ ಪ್ರಭಾವಯುತ ಪ್ರಚೋದನಾತ್ಮಕ ಅರ್ಥಶಾಸ್ತ್ರ ಕೃತಿಯನ್ನು ಎಲ್ಲರೂ ಆದರಿಂದ ಸ್ವಾಗತಿಸಿದರು. ಈ ಪುಸ್ತಕವನ್ನು ಅನೇಕ ಸಲ ಅಚ್ಚು ಹಾಕಿಸಿ ಹಂಚಬೇಕಾಯಿತು.

ಅರ್ಥಶಾಸ್ತ್ರದ ತಾತ್ವಿಕ ವಿಭಾಗದಲ್ಲಿ ಸಾಹಿತ್ಯ ರಚನೆಯಾದಂತೆ, ಪ್ರಾಯೋಗಿಕ ವಿಭಾಗದಲ್ಲಿ ತಲೆದೋರಿದ ಸಮಸ್ಯೆಗಳನ್ನು ಬಗೆಹರಿಸಲಾಯಿತು. ಇಂಥ ಸಮಸ್ಯೆಗಳಲ್ಲಿ ಅತಿ ಮುಖ್ಯವಾದುವು ಎರಡು. ಒಂದು ಬೃಹತ್ ಕೈಗಾರಿಕೆಗಳ ಮತ್ತು ವ್ಯಾಪಾರ ಸಂಸ್ಥೆಗಳ ಸ್ಥಾಪನೆ. ಕೇಂದ್ರೀಕೃತ ಅಧಿಕಾರ ಉತ್ಪನ್ನ ವಸ್ತುವಿನ ಮಾರಾಟದ ಸಂಪುರ್ಣ ಅಧಿಕಾರ ಎಂದು ಇದನ್ನು ಹೇಳಬಹುದು. ಇನ್ನೊಂದು ಹಣಕಾಸು ಸಾಲ, ವಾಣಿಜ್ಯ, ಕೈಗಾರಿಕೆ ಮತ್ತು ವ್ಯಾಪಾರಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಮತ್ತು ಅವುಗಳ ಪರಿಹಾರ, ಸರ್ಕಾರದ ಪ್ರವೇಶ ಇವೇ ಮುಂತಾದುವು. ಈ ವಿಷಯಗಳನ್ನು ಅರ್ಥಶಾಸ್ತ್ರಜ್ಞರು ಕೂಲಂಕಷವಾಗಿ ವಿಮರ್ಶೆಮಾಡಿ, ಭವಿಷ್ಯಸೂಚಿಸಿ ಆ ಬಗ್ಗೆ ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಹಾಗೆಯೇ ಹಣದ ಉಬ್ಬರ, ಅದನ್ನು ನಿವಾರಿಸುವ ವಿಧಾನವನ್ನೂ ಅರ್ಥಶಾಸ್ತ್ರ ನಿಪುಣರು ವಿಚಾರ ಮಾಡದೇ ಇಲ್ಲ. ಜೆ.ಎಮ್. ಕೇನ್ಸ್ ಎಂಬ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಉದ್ಯೋಗ, ಬಡ್ಡಿ, ಹಣಕಾಸಿನ ತತ್ತ್ವಗಳನ್ನು ಕುರಿತು ವಿಚಾರಾತ್ಮಕ ಅರ್ಥಶಾಸ್ತ್ರ ಪುಸ್ತಕವನ್ನು ೧೯೩೬ರಲ್ಲಿ ಪ್ರಕಟಿಸಿದ. ಇವನ ಅನುಯಾಯಿಗಳಾದ ಇತರ ಅರ್ಥಶಾಸ್ತ್ರನಿಪುಣರು ಇಂಥ ಸಾಹಿತ್ಯರಚನೆ ಮಾಡಿ ಅಂತಾರಾಷ್ಟ್ರೀಯ ಆರ್ಥಿಕ ಭಾವನೆ ಮತ್ತು ಸಮಸ್ಯೆಗಳ ವಿಚಾರವಾಗಿ ಅನೇಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಇತ್ತೀಚೆಗೆ ಅರ್ಥಶಾಸ್ತ್ರದಲ್ಲಿ ಉದ್ಭವಿಸಿರುವ ಇಂದ್ರಿಯಗೋಚರವಾದ ವಿಷಯಗಳಲ್ಲಿ ಅತಿಮುಖ್ಯವಾದುದು ದುಡಿಮೆ. ಇದೊಂದು ದೊಡ್ಡ ಸಮಸ್ಯೆ. ಇದನ್ನು ಸಮರ್ಪಕವಾಗಿ ಬಗೆಹರಿಸದೆ ಯಾವ ಬಗೆಯ ಆರ್ಥಿಕ ಯೋಜನೆಯನ್ನೂ ಕಾರ್ಯಗತ ಮಾಡಲು ಸಾಧ್ಯವಿಲ್ಲ. ದುಡಿಮೆ, ಕೂಲಿ ಕೂಲಿಗಾರರ ಸಂಘ, ಕೂಲಿಯ ದರ, ಕೆಲಸದ ಕಾಲ, ಕಾರ್ಖಾನೆಯ ಕಾನೂನು, ಲಾಭದ ಹಂಚಿಕೆ, ಕೈಗಾರಿಕಾವ್ಯಾಜ್ಯ ತೀರ್ಮಾನ, ಮಧ್ಯಸ್ಥಗಾರರ ತೀರ್ಪು, ವಿಮೆ, ನಿರುದ್ಯೋಗ ಅದರ ಪರಿಹಾರ ಇತ್ಯಾದಿ ವಿಷಯಗಳೆಲ್ಲವೂ ಅರ್ಥಶಾಸ್ತ್ರದ ವ್ಯಾಪ್ತಿಗೆ ಬಂದು ಪರಿಶೀಲಿಸತಕ್ಕ ವಿಷಯಗಳಾಗಿರುವುದಲ್ಲದೆ ಪ್ರಾಯೋಗಿಕ ಪ್ರಶ್ನೆಗಳೂ ಆಗಿವೆ. ಇದರಿಂದ ಅರ್ಥಶಾಸ್ತ್ರದ ವೈಶಾಲ್ಯ ಎಷ್ಟು ಎಂಬುದು ಗೊತ್ತಾಗುವುದು.

ಆಧುನಿಕ ಅರ್ಥಶಾಸ್ತ್ರದಲ್ಲಿ ಸಮೀಕ್ಷಿಸಬೇಕಾದ ಮುಖ್ಯ ವಿಷಯ ಅಂಕಿಅಂಶಗಳ ಸಂಗ್ರಹ. ಇತ್ತೀಚೆಗೆ ಇದಕ್ಕೆ ವಿಶೇಷ ಪ್ರಾಶಸ್ತ್ಯ ದೊರೆತಿದೆ. ಆರ್ಥಿಕ ಚಟುವಟಿಕೆಗಳ ಫಲಿತಾಂಶವಾದ ಅಂಕಿಅಂಶಗಳನ್ನು ಪ್ರಾಮಾಣಿಕವಾಗಿ ಸಂಗ್ರಹಿಸಿ ಪ್ರಕಟಿಸಲಾಗುತ್ತಿದೆ. ಸರ್ಕಾರಗಳೂ ಖಾಸಗಿ ವಾಣಿಜ್ಯಸಂಸ್ಥೆಗಳೂ ಈ ಬಗೆಯ ಕೆಲಸ ಕೈಗೊಂಡಿವೆ. ಮುಂಚಿನ ಅರ್ಥಶಾಸ್ತ್ರ ನಿಪುಣರು ಈ ವಿಷಯವನ್ನು ಅಷ್ಟಾಗಿ ಗಮನಿಸಿರಲಿಲ್ಲ. ಈ ಅಂಕಿಅಂಶಗಳು ಆರ್ಥಿಕ ಅನುಭವದ ಕುರುಹಾಗಿ, ಆರ್ಥಿಕ ಸಮಸ್ಯೆಗಳ ವ್ಯಾಸಂಗ, ವಿಭಜನೆ ಪರಿಹಾರಕ್ಕೆ ವಿಶೇಷವಾಗಿ ಸಹಾಯ ಮಾಡುತ್ತಿವೆ.

ಹೀಗೆ ಆಧುನಿಕ ಅರ್ಥಶಾಸ್ತ್ರದ ಆಸಕ್ತಿ ವಿಶೇಷರೀತಿಯ ವೈವಿಧ್ಯ ವಾಸ್ತವಿಕತೆಯಿಂದ ಕೂಡಿದ್ದರೂ ಅದರ ಕಲ್ಪನೆಗಳು ಆರ್ಥಿಕ ಜೀವನದ ವಾಸ್ತವಾಂಶಗಳನ್ನು ವಿಮರ್ಶಿಸುವುದಕ್ಕೆ ಸಹಾಯ ಮಾಡಿದರೂ ಅರ್ಥಶಾಸ್ತ್ರ, ರಾಜಕೀಯ ಅಥವಾ ಸಾಮಾಜಿಕಶಾಸ್ತ್ರದ ಅಂಗವಾಗಿಯೇ ಉಳಿದಿದೆ. ಈ ದೃಷ್ಟಿಯಿಂದ ಇದು ತಾತ್ತ್ವಿಕದ ಮಾನಸಿಕಶಿಕ್ಷಣವಾಗಿದೆ. ನಿರ್ದಿಷ್ಟವಾದ ತೀರ್ಪುಗಳು ಅಥವಾ ಸಿದ್ಧಾಂತಗಳು ತಿರಸ್ಕೃತವಾಗಿರಬಹುದು ಅಥವಾ ಬದಲಾವಣೆ ಉಂಟಾಗಿರಬಹುದು. ಅಥವಾ ಪ್ರಧಾನವಾಗಿ ಪುನಾರಚಿತವಾಗಿರಬಹುದು. ಗಂಭೀರವಾದ ಅನುಬಂಧಗಳು ಸೇರಿಸಲ್ಪಟ್ಟಿರಬಹುದು. ಆದರೆ ಸಮಾಜದ ಆರ್ಥಿಕಜೀವನ ಕ್ರಮದ ಸಾಮಾನ್ಯಚಿತ್ರ ಯಾವಾಗಲೂ ವಿಭಜನೆ ಮತ್ತು ಭವಿಷ್ಯನಿರ್ಧಾರಕ್ಕೆ ಸಹಾಯ ವಾಗಿಯೇ ಉಳಿದಿರುತ್ತದೆ. ಅಭಿಪ್ರಾಯಭೇದ ಮಾರ್ಗಭೇದಗಳಿದ್ದರೂ, ಅರ್ಥಶಾಸ್ತ್ರ ಸದಾ ಮುಂದುವರಿಯುತ್ತಿರುವ, ಉತ್ಕೃಷ್ಟರೀತಿಯ ವಿಸ್ತಾರವಾದ ವ್ಯಾಸಂಗ ಎಂಬುದನ್ನು ಅರ್ಥಶಾಸ್ತ್ರ ಸಮೀಕ್ಷೆಯಿಂದ ಚೆನ್ನಾಗಿ ತಿಳಿಯಬಹುದು.

ಇ- ವಾಣಿಜ್ಯ

ಸಾಮಾನ್ಯವಾಗಿ E- ಕಾಮರ್ಸ್ ಅಥವಾ eCommerce ಎಂದೇ ಪರಿಚಿತ ಇಲೆಕ್ಟ್ರಾನಿಕ್ ಅಂತರ್ಜಾಲ ಮಾಹಿತಿ ಕಂಪ್ಯೂಟರ್ ಜಾಲಗಳು, ಬಳಸಿಕೊಂಡು ಉತ್ಪನ್ನಗಳನ್ನು ಅಥವಾ ಸೇವೆಗಳನ್ನು ವಹಿವಾಟು. ಇಲೆಕ್ಟ್ರಾನಿಕ್ ಇಂತಹ ಮೊಬೈಲ್ ಕಾಮರ್ಸ್, ಎಲೆಕ್ಟ್ರಾನಿಕ್ ಹಣ ವರ್ಗಾವಣೆ, ಸಪ್ಲೈ ಚೈನ್ ಮ್ಯಾನೇಜ್ಮೆಂಟ್, ಅಂತರ್ಜಾಲದಲ್ಲಿ ಮಾರಾಟ ವ್ಯವಸ್ಥೆ, ಆನ್ಲೈನ್ ನಲ್ಲಿ ವ್ಯವಹಾರ ಪ್ರಕ್ರಿಯೆ, ಇಲೆಕ್ಟ್ರಾನಿಕ್ ಡಾಟಾ ವಿನಿಮಯ (EDI), ಸರಕು-ಸಂಗ್ರಹ ನಿರ್ವಹಣಾ ವ್ಯವಸ್ಥೆಗಳು ಹಾಗು ಸ್ವಯಂಚಾಲಿತ ಡಾಟಾ ಸಂಗ್ರಹಣಾ ವ್ಯವಸ್ಥೆಗಳು ತಂತ್ರಜ್ಞಾನಗಳನ್ನು ಆಧರಿಸಿದೆ. ಇದು ಇ-ಮೇಲ್ ಇತರ ತಂತ್ರಜ್ಞಾನಗಳನ್ನು ಬಳಸಬಹುದಾಗಿದೆ ಆದರೂ ಆಧುನಿಕ ಇಲೆಕ್ಟ್ರಾನಿಕ್ ವ್ಯವಹಾರವು ವಿಶಿಷ್ಟವಾಗಿ, ವ್ಯವಹಾರ ಜೀವನಚಕ್ರದ ಕನಿಷ್ಠ ಒಂದು ಭಾಗ ವರ್ಲ್ಡ್ ವೈಡ್ ವೆಬ್.

ಅರ್ಥಶಾಸ್ತ್ರಜ್ಞರು ಉತ್ಪನ್ನಗಳು ಮತ್ತು ಬೆಲೆ ಬಗ್ಗೆ ಮಾಹಿತಿ ಸಂಗ್ರಹಿಸಲು ಗ್ರಾಹಕರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ತೀವ್ರವಾಗುತ್ತಿದ್ದಂತೆ ಬೆಲೆ ಸ್ಪರ್ಧೆಗೆ ದಾರಿ ಕಾಮರ್ಸ್ ಬರಬೇಕಾಗುತ್ತದೆ ಪತ್ತೆಹಚ್ಚಿದ್ದಾರೆ. ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ನಾಲ್ಕು ಅರ್ಥಶಾಸ್ತ್ರಜ್ಞರು ರಿಸರ್ಚ್ ಆನ್ಲೈನ್ ಶಾಪಿಂಗ್ ಬೆಳವಣಿಗೆಗೆ ಇ-ವಾಣಿಜ್ಯ, ಮಳಿಗೆ ಮತ್ತು ಪ್ರಯಾಣ ಸಂಸ್ಥೆಗಳು ಗಣನೀಯವಾಗಿ ಎಂದು ಎರಡು ಪ್ರದೇಶಗಳಲ್ಲಿ ಉದ್ಯಮ ರಚನೆ ಪರಿಣಾಮ ಎಂದು ಕಂಡುಹಿಡಿದಿದೆ. ಸಾಮಾನ್ಯವಾಗಿ, ದೊಡ್ಡ ಸಂಸ್ಥೆಗಳ ಆರ್ಥಿಕ ಮಾನದಂಡದ ಬಳಸಲು ಮತ್ತು ಕಡಿಮೆ ಬೆಲೆಗಳು ನೀಡಬಹುದು. ಈ ಮಾದರಿಯ ಒಂಟಿ ಹೊರತುಪಡಿಸಿ, ಮಾರಾಟಗಾರ ಅತ್ಯಂತ ಚಿಕ್ಕ ವರ್ಗದಲ್ಲಿ ಬಂದಿದೆ ಪ್ರವೃತ್ತಿ ಸಹಿಸಿಕೊಂಡ ಕಾಣುವುದೇ ಒಂದರಿಂದ ನಾಲ್ಕು ನೌಕರರು ಅಂಗಡಿಗಳು.

ವ್ಯಕ್ತಿ ಅಥವಾ ವಹಿವಾಟಿಗೆ ಕೊಳ್ಳುವ ಅಥವಾ ಮಾರಾಟ ವಹಿವಾಟನ್ನು ಸಾಧಿಸಲು ಸಲುವಾಗಿ ಇಂಟರ್ನೆಟ್ ಆಧರಿತ ತಂತ್ರಜ್ಞಾನ ಅವಲಂಬಿಸಿವೆ ಎಂಬುದನ್ನು ಇ-ವಾಣಿಜ್ಯ ಒಳಗೊಂಡಿರುವ. E- ಕಾಮರ್ಸ್ ವ್ಯಾಪಾರ ಸಂವಹನ ಮತ್ತು ಯಾವುದೇ ವೇಳೆ ಮತ್ತು ನಗರದಲ್ಲಿ ವ್ಯವಹಾರ ರಚನೆಗೆ ತನ್ನ ಸಾಮರ್ಥ್ಯವನ್ನು ಗುರುತಿಸಲಾಗಿದೆ. ವ್ಯಕ್ತಿಯ ಅಮೇರಿಕಾದ ಅಥವಾ ಸಾಗರೋತ್ತರ ಎಂಬುದು, ವ್ಯಾಪಾರ ಇಂಟರ್ನೆಟ್ ಮೂಲಕ ನಡೆಸಬಹುದಾಗಿದೆ. ಇ-ವಾಣಿಜ್ಯ ಶಕ್ತಿ ಭೂಮಿಯ ಸಂಭಾವ್ಯ ಗ್ರಾಹಕರ ಹಾಗೂ ವಿತರಕರ ಮೇಲೆ ಎಲ್ಲಾ ಗ್ರಾಹಕರು ಮತ್ತು ವ್ಯವಹಾರಗಳಿಗೆ ಮಾಡುವ, ಭೂಭೌತ ತಡೆ ಕಣ್ಮರೆಯಾಗಿ ಅನುಮತಿಸುತ್ತದೆ. ಇಬೇ ಇ-ವಾಣಿಜ್ಯ ವ್ಯಾಪಾರ ವ್ಯಕ್ತಿಗಳ ಉತ್ತಮ ಉದಾಹರಣೆ ಮತ್ತು ವ್ಯವಹಾರಗಳು ತಮ್ಮ ವಸ್ತುಗಳನ್ನು ಪೋಸ್ಟ್ ಮತ್ತು ಜಗತ್ತಿನಾದ್ಯಂತ ಮಾರಲು ಸಾಧ್ಯವಾಗುತ್ತದೆ.

ತಲಾ ಖರ್ಚು ಪ್ರಮಾಣವನ್ನು ಮಾಪನ 2010 ರಲ್ಲಿ, ಯುನೈಟೆಡ್ ಕಿಂಗ್ಡಮ್ ಅತಿದೊಡ್ಡ ಇ-ವಾಣಿಜ್ಯ ಮಾರುಕಟ್ಟೆ ಹೊಂದಿತ್ತು. ಜೆಕ್ ರಿಪಬ್ಲಿಕ್ ಐಕಾಮರ್ಸ್ enterprises' ಒಟ್ಟು ಆದಾಯಕ್ಕೆ ದೊಡ್ಡ ಕೊಡುಗೆ ನೀಡುತ್ತದೆ ಅಲ್ಲಿ ಯುರೋಪಿಯನ್ ದೇಶ. ದೇಶದ ಒಟ್ಟು ವಹಿವಾಟು ಸುಮಾರು ಕಾಲು (24%) ಆನ್ಲೈನ್ ಚಾನೆಲ್ ಮೂಲಕ ಉತ್ಪಾದಿಸಲಾಗುತ್ತದೆ.

ಉದಯೋನ್ಮುಖ ಆರ್ಥಿಕ ನಡುವೆ, ಚೀನಾ ಇ-ವಾಣಿಜ್ಯ ಉಪಸ್ಥಿತಿ ಪ್ರತಿವರ್ಷ ವಿಸ್ತರಣೆಯನ್ನು ಮುಂದುವರಿಸಿದೆ. 384 ಮಿಲಿಯನ್ ಇಂಟರ್ನೆಟ್ ಬಳಕೆದಾರರನ್ನು, ಚೀನಾ ಆನ್ಲೈನ್ ಶಾಪಿಂಗ್ ಮಾರಾಟ 2009 ರಲ್ಲಿ $ 36.6 ಬಿಲಿಯನ್ ಗುಲಾಬಿ ಮತ್ತು ಬೃಹತ್ ಬೆಳವಣಿಗೆ ಹಿಂದಿರುವ ಕಾರಣಗಳಲ್ಲಿ ಒಂದಾಗಿದೆ ವ್ಯಾಪಾರಿಗಳು ಸುಧಾರಿತ ಟ್ರಸ್ಟ್ ಮಟ್ಟದ ಬಂದಿದೆ. ಚೀನೀ ಚಿಲ್ಲರೆ ಗ್ರಾಹಕರು ಆನ್ಲೈನ್ ಹೆಚ್ಚು ಆರಾಮದಾಯಕ ಶಾಪಿಂಗ್ ಅಭಿಪ್ರಾಯ ಸಹಾಯ ಸಮರ್ಥವಾಗಿವೆ. ಚೀನಾ ತಂದೆಯ ಗಡಿಯಾಚೆಗಿನ ಇ-ವಾಣಿಜ್ಯ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಚೀನಾ ಮತ್ತು ಇತರ ರಾಷ್ಟ್ರಗಳ ನಡುವಿನ ಇ-ವಾಣಿಜ್ಯ ವ್ಯವಹಾರಕ್ಕೆ 2012 ರಲ್ಲಿ 2.3 ಟ್ರಿಲಿಯನ್ ಯೆನ್ ($ 375.8 ಬಿಲಿಯನ್) ಗೆ 32% ಹೆಚ್ಚಾಗಿದೆ ಮತ್ತು ಚೀನಾ ಒಟ್ಟು ಅಂತರರಾಷ್ಟ್ರೀಯ ವ್ಯಾಪಾರದ 9.6% ರಷ್ಟು 2013 ರಲ್ಲಿ, ಅಲಿಬಾಬಾ ರಲ್ಲಿ 80% ಕಾಮರ್ಸ್ ಮಾರುಕಟ್ಟೆ ಪಾಲನ್ನು ಹೊಂದಿದೆ ಚೀನಾ.

ಇತರೆ BRIC ದೇಶಗಳ ಹಾಗೂ ಐಕಾಮರ್ಸ್ ವೇಗವರ್ಧಿತ ಬೆಳವಣಿಗೆ ಸಾಕ್ಷಿಯಾಗಿವೆ. ಬ್ರೆಜಿಲ್ನ ಐಕಾಮರ್ಸ್, eMarketer ಬ್ರೆಜಿಲ್ನಲ್ಲಿ ಚಿಲ್ಲರೆ ಐಕಾಮರ್ಸ್ ಮಾರಾಟ $ 17.3 ಬಿಲಿಯನ್ ತಲುಪಲು ನಿರೀಕ್ಷಿಸುತ್ತದೆ 2016 2014 ಮೂಲಕ ಆರೋಗ್ಯಕರ ಎರಡು ಅಂಕಿಯ ಗತಿಯಲ್ಲಿ ಬೆಳೆಯುವ ನಿರೀಕ್ಷೆಯಿದೆ ಚಿಲ್ಲರೆ ಐಕಾಮರ್ಸ್ ಮಾರಾಟ ವೇಗವಾಗಿ ಬೆಳೆಯುತ್ತಿದೆ. ಭಾರತದ ಐಕಾಮರ್ಸ್ ಬೆಳವಣಿಗೆ, ಮತ್ತೊಂದೆಡೆ, ಹೊಂದಿದೆ ದೇಶದ ಸಂಭಾವ್ಯ PC ಗಳು ಮೂಲಕ ಹಠಾತ್ತಾದ ಆರ್ಥಿಕ, ಅಂತರ್ಜಾಲ, ಇಂಗ್ಲೀಷ್ ಭಾಷೆಯ ಪ್ರಾವೀಣ್ಯತೆಯನ್ನು ಮತ್ತು 1.2 ಶತಕೋಟಿ ಗ್ರಾಹಕರು ಒಂದು ದೊಡ್ಡ ಮಾರುಕಟ್ಟೆಯ ಕ್ಷಿಪ್ರ ಬೆಳವಣಿಗೆ (ಬಹುಶಃ ಕೇವಲ 50 ಮಿಲಿಯನ್ ಪ್ರವೇಶ ಆದರೂ ಇಂಟರ್ನೆಟ್ ಪರಿಗಣಿಸಿ ಘನ ಉಳಿದಿದೆ ಮತ್ತು ಕೆಲವು ಅತ್ಯಂತ ಸಕ್ರಿಯ ಗುಂಪಿನ ಅಂದಾಜು ಆದರೂ ನಿಧಾನವಾಯಿತು ಇ-ವಾಣಿಜ್ಯ ಗ್ರಾಹಕರು ಸಂಖ್ಯೆಗಳನ್ನು ಮಾತ್ರ 2-3 ದಶಲಕ್ಷ). E- ಕಾಮರ್ಸ್ ಸಂಚಾರ ಕಾಂ ಸ್ಕೋರ್ ಬಿಡುಗಡೆ ಒಂದು ವರದಿಯ ಪ್ರಕಾರ, 37.5 ಮಿಲಿಯನ್ 26.1 ದಶಲಕ್ಷದಿಂದ, 2011 ರಿಂದ 2012 ಬಗ್ಗೆ 50% ರಷ್ಟು ಬೆಳೆಯಿತು. [ಉಲ್ಲೇಖದ ಅಗತ್ಯವಿದೆ] 2012 ಐಕಾಮರ್ಸ್ ರಲ್ಲಿ ಅಂದಾಜು 14 ಬಿಲಿಯನ್ ಡಾಲರ್ ಇನ್ನೂ ಹೆಚ್ಚು ಸೈಟುಗಳಿಂದ ರಚಿಸಿದ್ದಾರೆ. [ಉಲ್ಲೇಖದ ಅಗತ್ಯವಿದೆ]

ಇ-ಉದ್ಯಮ

ಎಲೆಕ್ಟ್ರಾನಿಕ್ ವ್ಯಾಪಾರ(ಉದ್ಯಮ), ಅಥವಾ ಇ-ವ್ಯಾಪಾರ, ವ್ಯಾಪಾರ ಎಲ್ಲಾ ಚಟುವಟಿಕೆಗಳನ್ನು ಬೆಂಬಲವಾಗಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಬಳಕೆಯಾಗಿದೆ. ವಾಣಿಜ್ಯ ವ್ಯವಹಾರಗಳು, ತಂಡಗಳು ಮತ್ತು ವ್ಯಕ್ತಿಗಳು ಮತ್ತು ಯಾವುದೇ ವ್ಯಾಪಾರ ಅಗತ್ಯ ಚಟುವಟಿಕೆಗಳಲ್ಲಿ ಒಂದಾಗಿದೆ ಕಾಣಬಹುದು ನಡುವೆ ಉತ್ಪನ್ನಗಳು ಮತ್ತು ಸೇವೆಗಳ ವಿನಿಮಯವನ್ನು ಒಳಗೊಂಡಿದೆ. ಎಲೆಕ್ಟ್ರಾನಿಕ್ ಇಂಟರ್ನೆಟ್ ಜಾಲದ ಸಹಾಯದಿಂದ ವ್ಯವಹಾರವನ್ನು ಅಂದರೆ ಇಂಟರ್ನೆಟ್ ಸಹಾಯದಿಂದ ವ್ಯಾಪಾರ ಸೂಚಿಸುತ್ತದೆ ಬಾಹ್ಯ ಚಟುವಟಿಕೆಗಳನ್ನು ಮತ್ತು ವ್ಯಕ್ತಿಗಳು, ಗುಂಪುಗಳು ಮತ್ತು ಇತರ ವ್ಯವಹಾರಗಳಿಗೆ ಅಥವಾ ಇ ವ್ಯಾಪಾರ ವ್ಯವಹಾರ ಸಂಬಂಧಗಳನ್ನು ಸಕ್ರಿಯಗೊಳಿಸಲು ಐಸಿಟಿ ಬಳಕೆ ಕೇಂದ್ರೀಕರಿಸುತ್ತದೆ. ಪದ "ಇ-ವ್ಯಾಪಾರ" 1996 ರಲ್ಲಿ IBM ನ ಮಾರುಕಟ್ಟೆ ಮತ್ತು ಇಂಟರ್ನೆಟ್ ತಂಡದ ಸೃಷ್ಟಿಸಿದರು.

ಇ-ಉದ್ಯಮ (ವ್ಯಾಪಾರ)

ಎಲೆಕ್ಟ್ರಾನಿಕ್ ವ್ಯಾಪಾರ(ಉದ್ಯಮ), ಅಥವಾ ಇ-ವ್ಯಾಪಾರ, ವ್ಯಾಪಾರ ಎಲ್ಲಾ ಚಟುವಟಿಕೆಗಳನ್ನು ಬೆಂಬಲವಾಗಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಬಳಕೆಯಾಗಿದೆ. ವಾಣಿಜ್ಯ ವ್ಯವಹಾರಗಳು, ತಂಡಗಳು ಮತ್ತು ವ್ಯಕ್ತಿಗಳು ಮತ್ತು ಯಾವುದೇ ವ್ಯಾಪಾರ ಅಗತ್ಯ ಚಟುವಟಿಕೆಗಳಲ್ಲಿ ಒಂದಾಗಿದೆ ಕಾಣಬಹುದು ನಡುವೆ ಉತ್ಪನ್ನಗಳು ಮತ್ತು ಸೇವೆಗಳ ವಿನಿಮಯವನ್ನು ಒಳಗೊಂಡಿದೆ. ಎಲೆಕ್ಟ್ರಾನಿಕ್ ಇಂಟರ್ನೆಟ್ ಜಾಲದ ಸಹಾಯದಿಂದ ವ್ಯವಹಾರವನ್ನು ಅಂದರೆ ಇಂಟರ್ನೆಟ್ ಸಹಾಯದಿಂದ ವ್ಯಾಪಾರ ಸೂಚಿಸುತ್ತದೆ ಬಾಹ್ಯ ಚಟುವಟಿಕೆಗಳನ್ನು ಮತ್ತು ವ್ಯಕ್ತಿಗಳು, ಗುಂಪುಗಳು ಮತ್ತು ಇತರ ವ್ಯವಹಾರಗಳಿಗೆ ಅಥವಾ ಇ ವ್ಯಾಪಾರ ವ್ಯವಹಾರ ಸಂಬಂಧಗಳನ್ನು ಸಕ್ರಿಯಗೊಳಿಸಲು ಐಸಿಟಿ ಬಳಕೆ ಕೇಂದ್ರೀಕರಿಸುತ್ತದೆ. ಪದ "ಇ-ವ್ಯಾಪಾರ" 1996 ರಲ್ಲಿ IBM ನ ಮಾರುಕಟ್ಟೆ ಮತ್ತು ಇಂಟರ್ನೆಟ್ ತಂಡದ ಸೃಷ್ಟಿಸಿದರು.

ಇರಾಕಿನ ಇತಿಹಾಸ

ಇರಾಕ್ ದೇಶ ಪಶ್ಚಿಮ ಏಷ್ಯದ ಒಂದು ಪುರಾತನ ಪ್ರದೇಶ. ಇದಕ್ಕೆ ಮೆಸೊಪೊಟೇಮಿಯ (ನದಿಗಳ ನಡುವಣ ನಾಡು) ಎಂಬುದು ಪುರಾತನವಿಟ್ಟ ಅನ್ವರ್ಥನಾಮ. ಸುಮಾರು ನೂರು ವರ್ಷಗಳಿಂದ ಇಲ್ಲಿ ನಡೆದ ಭೂಶೋಧನೆಗಳಿಂದ ಈ ಪ್ರದೇಶ ಅತ್ಯಂತ ಪ್ರಾಚೀನ ನಾಗರಿಕತೆಗಳ ತೌರು ಮಾತ್ರವಲ್ಲದೆ ಇತಿಹಾಸಪೂರ್ವ ಯುಗದಲ್ಲೂ ಆದಿಮಾನವನ ಕಾರ್ಯರಂಗವಾಗಿದ್ದು ನಾಗರಿಕತೆಯ ತೊಟ್ಟಿಲು ಎಂಬ ಬಿರುದನ್ನು ಸಾರ್ಥಕಗೊಳಿಸಿಕೊಂಡಿದೆ.

ಇರಾಕ್ ದೇಶದಲ್ಲಿ ನಡೆದಿರುವ 6,400 ಕ್ಕಿಂತಲೂ ಹೆಚ್ಚಿನ ಭೂಶೋಧನೆಗಳಿಂದ ದೇಶದ ಪುರಾತನ ಚರಿತ್ರೆ ತಿಳಿದುಬರುತ್ತದೆ. ನವಶಿಲಾಯುಗದಲ್ಲಿ ಕೊರೆದ ಮತ್ತು ಬಣ್ಣಗಳಿಂದ ಚಿತ್ರಿತವಾದ ಮಣ್ಣಿನ ಪಾತ್ರೆಗಳನ್ನು ಉಪಯೋಗಿಸುತ್ತ ಒಂದೇ ಸ್ಥಳದಲ್ಲಿ ಸ್ಥಿರಜೀವನ ನಡೆಸುತ್ತಿದ್ದ ಜನರ ಸಂಸ್ಕøತಿಯ ಚಿತ್ರ ಟೆಲ್ ಹಸೂನಾದ ಭೂಶೋಧನೆಗಳಿಂದ ಕಂಡು ಬರತ್ತದೆ. ಟೆಲ್ ಹಲಾಫೆ ಭೂಶೋಧನೆಗಳು ವಿವಿಧ ಬಣ್ಣಬಳಿದ ರಮ್ಯವಾಗಿ ಅಲಂಕೃತವಾದ ಮಣ್ಣಿನ ಪಾತ್ರೆಗಳನ್ನೂ ಕಲ್ಲಿನ ಆಯುಧಗಳನ್ನೂ ಬಳಸುತ್ತಿದ್ದ ಜನರ ಜೀವನವನ್ನು ನಿರೂಪಿಸುತ್ತದೆ.

ತಾಮ್ರ ಶಿಲಾಯುಗದವರಿಗೆ ಅಂದವಾದ ಬಣ್ಣದ ಮಡಕೆಗಳು, ತಾಮ್ರ, ಇತರ ಮೊದಲಾದ ಲೋಹಗಳ ಉಪಯೋಗ ತಿಳಿದಿತ್ತು. ಮೊತ್ತ ಮೊದಲನೆಯ ದೇವಸ್ಥಾನ ಕಟ್ಟಿದ್ದ ಆ ಜನರ ಜೀವನಚಿತ್ರ ಅಲ್ ಉಬೈದ್ ಭೂಶೋಧನೆಗಳಿಂದ ದೊರಕುತ್ತದೆ. ದಕ್ಷಿಣ ಇರಾಕಿನಲ್ಲಿ ಉರುಕ್ ಸಂಸ್ಕøತಿ ಕಾಲದಲ್ಲಿ ದೊಡ್ಡ ದೊಡ್ಡ ದೇವಾಲಯಗಳೂ ಹೊಸನಗರಗಳೂ ಉರುಳೆಯಾಕಾರದ ಮುದ್ರೆಗಳೂ ಚಿತ್ರಲಿಪಿಯೂ ಇದ್ದುದಕ್ಕೆ ಉತ್ಪನ್ನಗಳು ಸಾಕ್ಷಿ ಒದಗಿಸಿವೆ. ಖಫಾಜೆ ಮತ್ತು ಟೆಲ್ ಅಸಮಾರ್ ಭೂಶೋಧನೆಗಳಿಂದ ತಿಳಿದುಬರುವಂತೆ ಪ್ರಾಚೀನರಾಜ್ಯವಂಶದ ಕಾಲದಲ್ಲಿ ದೇಶ ನೀರಾವರಿ ವ್ಯವಸಾಯದಿಂದ ಸಂಪದ್ಯುಕ್ತವಾಗಿದ್ದು, ಇರಾಕ್ ಅಂದಿನ ಜಗತ್ತಿನ ಧಾನ್ಯ ಕಣಜದಂತಿತ್ತು. ಅರ್ ನಗರದ ಆಳರಸರ ಶ್ಮಶಾನ ಶೋಧನೆಗಳಿಂದ ಆ ಕಾಲದ ಐಶ್ವರ್ಯ ಮತ್ತು ಸಂಸ್ಕøತಿಯ ಮಟ್ಟ ತಳಿದು ಬರುತ್ತದೆ (ನೋಡಿ- ಅರ್). ಮಾರಿ, ನೂಜಿ, ದುರ್ ಕುರಿಕಾಲ್ಜುಗಳ ಭೂಶೋಧನೆಗಳಲ್ಲಿ ದೊರೆತ ಜೇಡಿಮಣ್ಣಿನ ಲಿಖಿತ ಫಲಕಗಳಿಂದ ಕ್ರಿ. ಪೂ. 3ನೆಯ ಸಹಸ್ರಾಬ್ಧದ ಇತಿಹಾಸ ತಿಳಿದುಬರುತ್ತದೆ. ಅಸ್ಸೂರ್, ನಿನೆವೆ, ನಿಮ್ರುಸ್, ನಿಪ್ಪೂರ್ ಮುಂತಾದ ಸ್ಥಳಗಳ ಭೂಶೋಧನೆಗಳಿಂದ ಕ್ರಿ.ಪೂ 3 ರಿಂದ 1ನೆಯ ಸಹಸ್ರಾಬ್ದಗಳ ಇರಾಕಿ ಸಂಸ್ಕøತಿಯ ಅನೇಕ ವಿಷಯಗಳು ಗೊತ್ತಾಗಿವೆ. ಇವುಗಳ ಕೆಲವು ವಿವರಗಳನ್ನಿಲ್ಲಿ ಸಂಗ್ರಹಿಸಲಾಗಿದೆ.

ಉತ್ತರ ಇರಾಕಿನ ಬಾರ್ದಾಬಲ್ಕಾ ಎಂಬಲ್ಲಿ ದೊರಕಿರುವ ನಾಜೂಕಿಲ್ಲದ ಕೈ ಕೊಡಲಿ ಮತ್ತು ಕಲ್ಲಿನ ಚಕ್ಕೆಗಳಿಂದ ಮಾಲಡ್ಪಟ್ಟ ಆಯುಧಗಳು ಅತ್ಯಂತ ಪುರಾತನವಾದವು. ಇವನ್ನು ಪೂರ್ವಶಿಲಾಯುಗದ ಆಯುಧಗಳನ್ನು ಹಜರ್‍ಮರ್ದ್ ಮತ್ತು ಷನಿದಾರ್ ಗುಹೆಗಳಲ್ಲಿ ಕಂಡುಬಂದಿವೆ. ಈ ಪದರಗಳಲ್ಲಿ ಹಳೆಯ ಕೈಕೊಡಲಿಗಳು ಹೊಸರೀತಿಯ ಚಕ್ಕೆ ಆಯುಧಗಳ ಜೊತೆಯಲ್ಲಿ ಕಂಡುಬರುವುದರಿಂದ ಇದು ಆದಿ ಮಾನ್ ಸಂಸ್ಕøತಿಯ ಅವಿಚ್ಛಿನ್ನ ಬೆಳವಣಿಗೆಯನ್ನು ಸಾಕ್ಷೀಕರಿಸುತ್ತದೆ. ಹಜರ್‍ಮರ್ದ್, ನಿದಾರ್, ಜರ್ಜಿ ಮತ್ತು ಪಲೇಗ್ರಾವ್ರಾ ಎಂಬೆಡೆಗಳಲ್ಲಿ ಅಂತ್ಯಶಿಲಾಯುಗದ ಕೂಲಗುಳ್ಳ ಚಕ್ಕೆಗಳೂ ಸೂಕ್ಷ್ಮ ಶಿಲಾಯುಗದ ಆಯುಧಗಳ ಬೆರಕೆಯಿದ್ದು ಕಾಲಗಣನೆಯಲ್ಲಿ ಇವು ಯೂರೋಪಿನ ಸೂಕ್ಷ್ಮ ಶಿಲಾಯುಧಗಳಿಗಿಂತಲೂ ಹಳೆಯವಾಗಿರುವುವೆಂದೂ ಪಶ್ಚಿಮದ ಏಷ್ಯದಲ್ಲಿ ಈ ಕಾಲದ ಮಾನವ ಹೆಚ್ಚು ಪ್ರಗತಿಪರನಾಗಿದ್ದನೆಂದೂ ಅಂತ್ಯಶಿಲಾಯುಗದ ಯೂರೋಪಿನ ಸಂಸ್ಕøತಿಗಳು ಕೂಡ ಇಲ್ಲಿ ಆವಿರ್ಭವಿಸಿ ಅನಂತರ ಯೂರೋಪಿಗೆ ಹರಡಿದುವೆಂದೂ ಪಂಡಿತರ ಅಭಿಪ್ರಾಯ

ಇದರ ಮುಂದಿನ ಸಂಸ್ಕøತಿಗಳ ಅವಶೇಷಗಳು ಇರಾಕಿನಲ್ಲಿ ಹೆಚ್ಚಾಗಿ ದೊರೆತಿಲ್ಲ. ಕೇವಲ ಷನಿದಾರ್ ಗುಹೆಗಳಲ್ಲಿ ಮಾತ್ರ ನಾಗರಿಕತೆಯ ಉಗಮಕಾಲದವರೆಗೂ ಮಾನವ ಅವಿಚ್ಛಿನ್ನವಾಗಿ ವಾಸಿಸಿದ ಮಾಹಿತಿಗಳು ದೊರಕಿವೆ. ಇಲ್ಲಿನ ತಳಮಟ್ಟದ ಪದರಗಳಲ್ಲಿ ಮೊದಮೊದಲು ನೂತನಶಿಲಾಯುಗದ ಅವಶೇಷಗಳೂ ಮೇಲ್ಭಾಗದಲ್ಲಿ ಚರಿತ್ರ ಪೂರ್ವ ಅಕ್ಷರಸ್ಥನಾಗರಿಕತೆಯ ಕುರುಹುಗಳೂ ದೊರಕಿವೆ.

ನೂತನ ಶಿಲಾಯುಗದಲ್ಲಿ ಇರಾಕಿನಲ್ಲಿ ಹೆಚ್ಚಿನ ಅಭಿವೃದ್ಧಿಯ ಮಾಹಿತಿಗಳು ದೊರಕುತ್ತವೆ. ಪಶ್ಚಿಮ ಏಷ್ಯ ಪ್ರದೇಶಗಳಲ್ಲಿ ಮಾನವನ ಪುರೋಗಾಮಿತ್ವ ಮತ್ತು ನಾಗರಿಕತೆಯ ಬೆಳವಣಿಗೆಯ ಮೂಲಾಧಾರವಾದ ಆಹಾರೋತ್ಪತ್ತಿಯ ಉದ್ಘಾಟನೆ ನಡೆದದ್ದು ನಿರ್ವಿವಾದ ಸಂಗತಿ. ಇರಾಕಿನ ಚಾವಿ ಷಮಿಷನಿದಾರ್, ಕರೀಮ್ ಷಾಹಿರ್, ಮ್ಲಾಫಾತ್ ಮುಂತಾದ ನೆಲೆಗಳಲ್ಲಿ ಈ ಸಂಸ್ಕøತಿಯ ಅತ್ಯಂತ ಪ್ರಾಚೀನ ಅವಶೇಷಗಳು ದೊರಕಿವೆ. ಇವು ಸುಮಾರು ಕ್ರಿ. ಪೂ. 9000 ವರ್ಷಗಳಷ್ಟು ಹಳೆಯವೆಂದು ನಿರ್ಣಯಿಸಲಾಗಿದೆ. ಈ ಸಂಸ್ಕøತಿಯಲ್ಲಿ ನಯಮಾಡಿದ ಕಲ್ಲಿನ ಕೊಡಲಿಗಳೂ ಅಗೆಯುವ ಕೋಲಿನ ಭಾರದಗುಂಡುಗಳೂ ಅರೆಯುವ ಕಲ್ಲುಗಳೂ ಒರಟಾಗಿ ಕಟ್ಟಿದ ಗುಡಿಸಲ ಅವಶೇಷಗಳೂ ಸಾಕುಪ್ರಾಣಿಯಾದ ಆಡು, ಕುರಿ, ಹಂದಿ ಮತ್ತು ದನಗಳ ಅವಶೇಷಗಳೂ ಸಿಕ್ಕಿವೆಯಾದರೂ ಬೇಟೆಯೇ ಆಹಾರೋತ್ಪತ್ತಿಯ ಮುಖ್ಯ ವಿಧಾನವಾಗಿತ್ತೆಂದು ಹೇಳಲಾಗಿದೆ. ವ್ಯವಸಾಯವನ್ನೇ ಮುಖ್ಯ ಆಹಾರೋತ್ಪತ್ತಿಮಾರ್ಗವಾಗುಳ್ಳ ಜನ ಗ್ರಾಮಗಳಲ್ಲಿ ನೆಲೆನಿಂತು ಉತ್ತರದ ಕುರ್ದಿಸ್ತಾನ್ ಬೆಟ್ಟಗಳ ಬುಡದಲ್ಲಿರುವ ಕಾಲಾತ್ ಚಾರ್ಮೋ ಎಂಬಲ್ಲಿ ದೊರಕಿವೆ. ಇಲ್ಲಿನ ಕ್ರಮಾಗತ 12 ಪದರಗಳಲ್ಲಿ ದೊರಕುವ ಸಾಕ್ಷ್ಯಗಳಲ್ಲೂ ನೂತನ ಶಿಲಾಯುಗಕ್ಕೆ ಸೇರಿದ್ದುವಾದರೂ ಆ ಜನಗಳಿಗೆ ಇನ್ನೂ ಮಣ್ಣಿನ ಪಾತ್ರೆಗಳನ್ನು ಮಾಡುವ ಕಲೆ ಗೊತ್ತಿರಲಿಲ್ಲ. ಕಲ್ಲಿನ ಆಸ್ತಿಭಾರದ ಮೇಲೆ ಮಣ್ಣಿನಿಂದ ಕಟ್ಟಿದ ಅನೇಕ ಆಯತಾಕಾರದ ಕೊಠಡಿಗಳಿಂದ ಕೂಡಿದ ಮನೆಗಳು, ಗಾರ್ಕಿ ಗೋದಿಗಳ ವ್ಯವಸಾಯ ಇವು ಮೊದಲಿನ ಹಂತದಲ್ಲೂ ಸಾಕುಆಡು, ಕುರಿ, ಹಂದಿಗಳು ಮೇಲಿನ ಪದರಗಳಲ್ಲೂ ದೊರಕಿರುವುದು ಈ ಸಂಸ್ಕøತಿಯ ಮುನ್ನಡೆಗೆ ಸಾಕ್ಷಿ. ಚಕಮಕಿ ಕಲ್ಲಿನಿಂದ ಮತ್ತು ಜ್ವಾಲಾಮುಖಿಯಿಂದ ಉತ್ಪನ್ನವಾದ ಅಬ್ಸಿಡಿಯನ್ ಗಾಜಿನಿಂದ ಮಾಡಿದ ಸೂಕ್ಷ್ಮ ಶಿಲಾಯುಧಗಳು, ನಯಮಾಡಿದ ಕಲ್ಲಿನ ಕೊಡಲಿಗಳು, ಬಾಚಿಗಳು, ಮಣಿಯ ಕೈಗಡಗಳು ಮತ್ತು ಅತಿ ಕೌಶಲದಿಂದ ಮಾಡಲಾದ ಕಲ್ಲಿನ ಪಾತ್ರೆಗಳು ಆಗ ಬಳಕೆಯಲ್ಲಿದ್ದವು. ಮಣ್ಣಿನಲ್ಲಿ ಮಾಡಿದ ಬೆತ್ತಲೆ ಗರ್ಭಿಣಿ ಗೊಂಬೆಗಳು ಪೂರ್ವಶಿಲಾಯುಗದಿಂದಲೂ ಈ ಜನಗಳಲ್ಲಿ ಬೆಳೆದುಬಂದ ಮಾಂತ್ರಿಕ ಹಾಗೂ ಬಹುಸಂತಾನ ಪಂಥದ ಕುರುಹುಗಳಾಗಿವೆ. ಕಡೆಕಡೆಗೆ ಕೈಯಲ್ಲಿ ಮಾಡಿದ ಮಣ್ಣಿನ ಮಡಕೆಗಳೂ ಬಳಕೆಗೆ ಬಂದಿದ್ದವು. ಈ ಸಂಸ್ಕøತಿ ಕ್ರಿ. ಪೂ. 6750ರಷ್ಟು ಹಳೆಯದೆಂದು ಇಂಗಾಲ-14ರ ಪ್ರಯೋಗದಿಂದ ಗುರುತಿಸಲಾಗಿದೆ. ಇವರು ಹೊರಗಿನಿಂದ ಬಂದಿರಬಹುದೆಂಬುದಕ್ಕೆ ಅನೇಕ ಸೂಚ್ಯ ಆಧಾರಗಳಿವೆ.

ಇದರ ಮುಂದಿನ ಹಂತವೂ ಉತ್ತರ ಇರಾಕಿನ ಟೈಗ್ರಿಸ್ ನದೀತೀರದಲ್ಲಿರುವ ಹಸ್ಸುನಾ ಎಂಬೆಡೆಯಲ್ಲಿ ದೊರಕಿದೆ. ಇದೇ ರೀತಿಯ ಮಾಹಿತಿಗಳು ಮಟಾರ್ರಾನಿನೆವ್ಹೇ, ಅರ್ಪಾಚಿಯಾ ಹಾಗೂ ಗಾವ್ರಾ ಎಂಬ ಎಡೆಗಳಲ್ಲಿ ದೊರಕಿವೆ. ಚಕಮಕಿ ಕಲ್ಲಿನಾಯುಧಗಳು, ಅಗೆಯುವ ಗುದ್ದಲಿ ಮತ್ತು ಅರೆಯುವ ಕಲ್ಲಿನ ಉಪಕರಣಗಳನ್ನು ಈ ಬೇಟೆಗಾರ ಜನ ಉಪಯೋಗಿಸುತ್ತಿದ್ದರು. ಅವರ ಹಿಂದುಳಿದ ವ್ಯವಸಾಯದ ರೀತಿಗಳು, ವ್ಯವಸಾಯಾತ್ಮಕ ಸಂಸ್ಕøತಿಯ ಕಡೆಗೆ ಕ್ರಮಕ್ರಮವಾಗಿ ಅವರ ಮುನ್ನಡೆ, ಸ್ವಲ್ಪಮಟ್ಟಿನ ಅಲೆಮಾರಿತನ-ಇವು ಈ ಸಂಸ್ಕøತಿಯ ಲಕ್ಷಣಗಳೆಂದು ಹೇಳಬಹುದು. ಅವರ ಮಡಕೆ ಕುಡಿಕೆಗಳು ಸಾಮಾನ್ಯವಾಗಿ ಅಲಂಕಾರ ರಹಿತವಾಗಿದ್ದವು. ಕೆಂಪು, ಕಂದು, ಕಪ್ಪು; ಬಣ್ಣಗಳ ಒರಟು ಚಿತ್ರಗಳಿರುವ ಮಡಕೆಗಳೂ ಕೆಲವು ಸಿಕ್ಕಿವೆ. ಇವಲ್ಲದೆ ಮೂಲವಸ್ತು ಒರಟಾದ ಕಪ್ಪು ಮಣ್ಣು. ಶಿಲಾಜಿತು (ಬಿಟ್ಯೂಲಮೆನ್) ಮತ್ತು ಸುಣ್ಣದಿಂದ ಪಕ್ಕಗಳನ್ನೂ ತಳಭಾಗವನ್ನೂ ಹದಮಾಡಿದ್ದ ಹಳ್ಳಗಳಲ್ಲಿ ಧಾನ್ಯಗಳನ್ನು ಸಂಗ್ರಹಿಸಲಾಗುತ್ತಿತ್ತು. ಕಟ್ಟಡಗಳನ್ನು ಕಟ್ಟಲು ಹಸಿ ಇಟ್ಟಿಗೆಗಳನ್ನು ಬಳಸುತ್ತಿದ್ದರು. ಬಿದಿರು ಹಣಿಗೆ ಮತ್ತು ಬಟ್ಟೆ ನೇಯ್ಗೆ ಕ್ರಮಗಳು ಇವರಿಗೆ ತಿಳಿದಿದ್ದಿರಬಹುದು. ಮಕ್ಕಳ ಶವಗಳನ್ನು ಜಾಡಿಗಳಲ್ಲೂ ವಯಸ್ಕರ ಶವಗಳನ್ನು ಹಳ್ಳಗಳಲ್ಲೂ ಹೂಳುತ್ತಿದ್ದರು. ಈ ಸಂಸ್ಕøತಿಯ ಕಾಲ ಕ್ರಿ. ಪೂ. 5000-4000. ಇದರ ಮುಂದಿನ ಹಲಾಫ್ ಸಂಸ್ಕøತಿಯ ಜನ ಕೈಯಲ್ಲಿ ಮಾಡಿದ, ವಿವಿಧ ಆಕಾರದ, ವರ್ಣಚಿತ್ರಗಳಿಂದ ಕೂಡಿದ ಮಡಕೆಗಳನ್ನು ಬಳಸುತ್ತಿದ್ದರು. ಇವರಿಗೆ ತಾಮ್ರದ ಕೆಲವು ಅಲಂಕರಣ ಸಾಮಗ್ರಿಗಳ ಪರಿಚಯವಿದ್ದರೂ ಇವರ ಆಯುಧೋಪಕರಣಗಳು ಕಲ್ಲಿನವೇ ಆಗಿದ್ದವು. ಕಲ್ಲಿನ ಗುಂಡಿ ಮುದ್ರೆಗಳೂ (ಬಟನ್ ಸೀಲ್ಸ್) ಮಣಿಗಳೂ ಯಂತ್ರಗಳೂ (ಆಮ್ಯುಲೆಟ್ಸ್) ಮತ್ತು ಸಣ್ಣ ಪಾತ್ರೆಗಳೂ ಬಳಕೆಯಲ್ಲಿದ್ದವು. ಇತರ ವಿಷಯಗಳಲ್ಲಿ ಹಳೆಯ ಸಂಸ್ಕøತಿಯ ಚಿಹ್ನೆಗಳೇ ಕಂಡು ಬಂದರೂ ಅವು ಹೆಚ್ಚು ಮುಂದುವರಿದಿದ್ದವು. ಮೇಲೆ ಹೇಳಿದ ಸಂಸ್ಕøತಿಗಳೆಲ್ಲವೂ ಉತ್ತರ, ಮಧ್ಯ ಇರಾಕಿನಲ್ಲಿ ಮಾತ್ರ ನೆಲೆಸಿದ್ದವು. ದಕ್ಷಿಣ ಪ್ರದೇಶ ಚೌಗುಪ್ರದೇಶವಾಗಿದ್ದು ಜನವಸತಿಗೆ ಅನುಕೂಲವಾಗಿರಲಿಲ್ಲ. ಸುಮಾರು ಆ ಕಾಲಕ್ಕೆ ಯೂಫ್ರೆಟಿಸ್ ಟೈಗ್ರಿಸ್ ನದಿಗಳು ಒತ್ತಳ್ಳಿದ ಮೆಕ್ಕಲುಮಣ್ಣಿನ ಹರಡುವಿಕೆಯಿಂದ ನೆಲ ವಾಸಯೋಗ್ಯವಾದದ್ದಲ್ಲದೆ ಬಹಳ ಫಲವತ್ತಾದ ಭೂಮಿಯಾಗಿ ಹೆಚ್ಚು ಬೆಳೆ ಕೊಡುವಂತಾಯಿತು. ಈ ಸುಮಾರಿಗೆ ಪ್ರಾರಂಭವಾದ ತಾಮ್ರಶಿಲಾಯುಗದ ಸಂಸ್ಕøತಿಯ ಅವಶೇಷಗಳು ಇರಾಕಿನ ಎಲ್ಲೆಡೆಗಳಲ್ಲೂ ದೊರಕಿವೆ. ಉಬೈದ್ ಸಂಸ್ಕøತಿಯ ಮೊದಲ ಹಂತದಲ್ಲಿ ವ್ಯವಸಾಯ ಸುಧಾರಿತವಾಯಿತು. ನೀರಾವರಿ ಕಾಲುವೆಗಳಿಂದ ಉತ್ತಮ ಬೆಳೆಗಳನ್ನು ತೆಗೆಯುತ್ತಿದ್ದರು. ಲೋಹಗಳ ಕೆಲಸ ಉತ್ತಮಮಟ್ಟದ್ದಾಗಿ ತಾಮ್ರದ ಆಯಧೋಪಕರಣಗಳು ಮಾತ್ರವಲ್ಲದೆ ಮನೆಬಳಕೆ ಪಾತ್ರೆಗಳೂ ರೂಢಿಗೆ ಬಂದಿದ್ದವು. ತಮಗೆ ಅವಶ್ಯಕವಾದ ಕಚ್ಚಾಪದಾರ್ಥಗಳನ್ನು ದೂರ ದೇಶಗಳಿಂದ ವ್ಯಾಪಾರಮುಖೇನ ತರಿಸಿಕೊಳ್ಳುತ್ತಿದ್ದರು. ತಮ್ಮ ಬೆಳೆಗಳನ್ನು ಚಕಮಕಿಕಲ್ಲಿನ ಹಲ್ಲುಗಳಿಂದ ಸಜ್ಜಾದ ಕುಡುಗೀಲುಗಳಿಂದ ಕುಯ್ಯುತ್ತಿದ್ದರು. ಹುಲ್ಲು ಮತ್ತು ಮಣ್ಣಿನ ಗೋಡೆಗಳನ್ನೂ ನೆಲವನ್ನೂ ಸಗಣಿಯಿಂದ ಹದಗೊಳಿಸುತ್ತಿದ್ದರು. ಕೈಯಲ್ಲಿ ಮಾಡಿದ ಮಡಕೆಗಳನ್ನು ವಿವಿಧ ಬಣ್ಣಗಳ ಜ್ಯಾಮಿತಿಕ ಆಕಾರಗಳಿಂದ ಚಿತ್ರಿಸುತ್ತಿದ್ದರು. ವ್ಯವಸಾಯೋತ್ಪನ್ನವೇ ಮುಖ್ಯ ಆಹಾರವಾದರೂ ಬೇಟೆ ಮೀನುಗಾರಿಕೆಗಳೂ ರೂಢಿಯಲ್ಲಿದ್ದವು. ಗ್ರಾಮಜೀವನದ ಜೊತೆಗೆ ನಗರ ಜೀವನವೂ ಈ ಕಾಲದಲ್ಲೇ ಪ್ರಾರಂಭವಾದ ಚಿಹ್ನೆಗಳು ಕಂಡುಬರುತ್ತವೆ. ಈ ಜನ ಮೊತ್ತಮೊದಲಿಗೆ ಸಾಮಾಜಿಕ ಜೀವನದ ಅಂಗವಾಗಿ ದೇವಾಲಯಗಳನ್ನು ನಿರ್ಮಿಸಿದರು. ಅಬು ಷಹರೀನ್ ಎಂಬಲ್ಲಿ 13 ಸಲ ಪುನರ್‍ನಿರ್ಮಿತವಾದ ದೇವಾಲಯವೊಂದರ ಅವಶೇಷಗಳು ದೊರಕಿವೆ. ಮೊದಲಿಗೆ ಈ ದೇವಾಲಯದಲ್ಲಿ ಆಯತಾಕಾರದ ಒಂದು ಕೊಠಡಿ, ಅದರ ಒಂದು ಮೂಲೆಯಲ್ಲಿ ಬಾಗಿಲು ವೇದಿಕೆ ಮತ್ತು ಬಲಿಪೀಠಗಳಿದ್ದು ಕ್ರಮೇಣ ಮಧ್ಯಕೋಣೆಯ ಎರಡು ಪಾಶ್ರ್ವಗಳಲ್ಲಿ ಮತ್ತೆರಡು ಕೋಣೆಗಳು ನಿರ್ಮಿತವಾದವು. ಈ ಕಾರಣಗಳಿಂದ ಉಬೈದ್ ಜನ ಇರಾಕಿನ ನಾಗರಿಕತೆಯ ಆದ್ಯಪ್ರವರ್ತಕರೆನ್ನಬಹುದು.

ಈ ಉಬೈದ್ ಸಂಸ್ಕøತಿಯ ಅಸ್ತಿಭಾರದ ಮೇಲೆ ಮುಂದಿನ ಹಂತ್ವಾದ ಉರಕ್ ಸಂಸ್ಕøತಿ ಬೆಳೆಯಿತು. ಪ್ರಾಯಶಃ ಅನಟೋಲಿಯ ಪ್ರಾಂತ್ಯದಿಂದ ಆಮದಾದ, ಗಟ್ಟಿ ಮುಟ್ಟಾದ, ವರ್ಣಚಿತ್ರಗಳಿಂದ ಹೊಸರೀತಿಯ ಮಡಕೆಗಳು ಬಳಕೆಗೆ ಬಂದವು. ಇವು ಚಕ್ರಯಂತ್ರದಿಂದ ತಯಾರಾದವು. ವಾಸ್ತುಶಿಲ್ಪಕಲೆ ಆಗ ಚೆನ್ನಾಗಿ ಬೆಳೆಯಿತು. ಆ ಕಾಲದ ಅತ್ಯುತ್ತಮವಾದ ಶ್ವೇತದೇವಾಲಯ ಎರಡು ಪಟ್ಟಣದಲ್ಲಿ ನಿರ್ಮಿತವಾಯಿತು. 70 ಮೀ. ಉದ್ದ 66 ಮೀ. ಅಗಲ ಮತ್ತು 13 ಮೀ. ಎತ್ತರದ ಜಗತಿಯ ಮೇಲಿದ್ದ ಈ ದೇವಾಲಯದ ವಿಸೀರ್ಣ 22.3 ( 17.5 ಮೀ. ಇರಾಕೀ ಸಂಸ್ಕøತಿಯ ವಿಶಿಷ್ಟಲಕ್ಷಗಳಲ್ಲೊಂದಾದ ಜಿಗುರೇಟ್ ಅಥವಾ ಪವಿತ್ರ ಶಿಖರ ಈ ರೀತಿ ಹುಟ್ಟಿಕೊಂಡಿತು. ಇತರ ವಿಶಿಷ್ಟ ಕುರುಹುಗಳಾದ ಉರುಳೆಯಾಕಾರದ ಮುದ್ರೆ ಮತ್ತು ಲೇಖನಕಲೆಗಳೂ ಈ ಕಾಲದಲ್ಲೇ ಪ್ರಾರಂಭವಾದಂತೆ ಕಂಡುಬರುತ್ತದೆ.

ಮುಂದಿನ ಹಂತವಾದ ಜಿಮೆಡೆಟ್ ನಾಸ್ರ್ ಸಂಸ್ಕøತಿಗೆ ಲೇಖನಪೂರ್ವ ಸಂಸ್ಕøತಿಯೆಂದೂ ಹೆಸರಿಟ್ಟಿದ್ದಾರೆ. ದೇವಾಲಯಕ್ಕೆ ಅಭಿವೃದ್ಧಿಹೊಂದಿ ಹಂತ ಹಂತವಾದ ಜಗತಿ ಅಥವಾ ತಾಜಾ ಜಿಗುರೇಟ್ ಬೆಳೆದು ಬಂದು ದೊಡ್ಡ ಸ್ತಂಭಗಳಿಂದೊಡಗೂಡಿದ ಮೂರು ಕೋಣೆಗಳುಳ್ಳ ದೇವಾಲಯಗಳು ರೂಢಿಗೆ ಬಂದವು. ಗೋಡೆಗಳಿಗೆ ಸುಟ್ಟ ಮಣ್ಣಿನ, ಬಣ್ಣಬಣ್ಣದ ಶಂಕುವಿನಾಕಾರದ ಕೊಳವೆಗಳ ಅಲಂಕಾರ ಬಳಕೆಗೆ ಬಂತು. ಇವು ಅಲಂಕರಣದ ಜೊತೆಗೆ ಭದ್ರತೆಯನ್ನೂ ಹೆಚ್ಚಿಸಿದವು. ತಾಮ್ರ ಮತ್ತು ಬೆಳ್ಳಿಯ ಪಾತ್ರೆಗಳು, ಭವ್ಯ ಶಿಲ್ಪಕೃತಿಗಳು ಮತ್ತು ಚಿತ್ರಲಿಪಿ, ದಶಮಾಂಶ ಮತ್ತು ಷಷ್ಠ್ಯಂಶ ಗಣಪದ್ಧತಿಗಳು ಬಳಕೆಗೆ ಬಂದವು. ಈ ಶಿಲ್ಪಗಳಿಗೆ ಶಂಖದ ಕಣ್ಣುಗುಡ್ಡೆಗಳನ್ನಿಡುತ್ತಿದ್ದರು. ಭೂ ಸಾರಿಗೆ ರೂಢಿಗೆ ಬಂತು. ದೇವಾಲಯ ಕೇಂದ್ರಸ್ಥವಾದ ನಾಗರಿಕತೆ ಸರ್ವತೋಮುಖವಾಗಿ ಬೆಳೆದು ಕ್ರಿ. ಪೂ. 3ನೆಯ ಸಹಸ್ರಮಾನದ ಆದಿಯಲ್ಲಿ ಅದು ಇನ್ನೂ ಹೆಚ್ಚಿನ ಮಟ್ಟ ಮುಟ್ಟಿತು. (ಬಿ.ಕೆ.ಜಿ.)

ಕ್ರಿ. ಪೂ. 3000 ರಿಂದ ಕ್ರಿ. ಶ. 600 ರವರೆಗೆ : ಕ್ರಿ. ಪೂ. 3ನೆಯ ಸಹಸ್ರ ಮಾನದ ಕೆಲವು ಲಿಖಿತ ದಾಖಲೆಗಳು ಇರಾಕಿನ ಚರಿತ್ರೆಯ ಬಗ್ಗೆ ಮಾಹಿತಿಗಳನ್ನು ಒದಗಿಸುತ್ತವೆ. ಇವುಗಳ ಪ್ರಕಾರ ಇರಾಕಿನಲ್ಲಿ ಯಾವುದೋ ಕಾಲದಲ್ಲಿ ಬಂದ ಒಂದು ಮಹಾಪೂರ ಹಿಂದಿನ ರಾಜವಂಶಗಳ ಬಗ್ಗೆ ಈ ದಾಖಲೆಗಳಲ್ಲಿ ದೊರಕುವ ವಿಷಯ ನಂಬಲರ್ಹವಲ್ಲ. ಆದರೆ ಆ ಪ್ರವಾಹಾನಂತರದ ವಿಷಯಗಳ ಬಗ್ಗೆ ಸಿಗುವ ಹೇಳಿಕೆಗಳಲ್ಲು ಪೂರ್ಣವಾಗಿ ನಿರ್ದಿಷ್ಟವಾಗಿಲ್ಲವಾದರೂ ಹೆಚ್ಚು ಕಡಿಮೆ ಸರಿಯಾಗಿದ್ದು, ಭೂಶೋಧನೆಗಳಲ್ಲಿ ದೊರಕಿರುವ ಅನೇಕ ಸಾಮಗ್ರಿಗಳ ಸಹಾಯದಿಂದ ಒಂದು ಸ್ಪಷ್ಟಚಿತ್ರವನ್ನು ಕಲ್ಪಸಿಕೊಳ್ಳಲು ಸಹಾಯಮಾಡುತ್ತವೆ.

ಪ್ರವಾಹದ ಅನಂತರ ಅನೇಕ ನಗರರಾಜ್ಯಗಳು ದಕ್ಷಿಣ ಇರಾಕಿನಲ್ಲಿ (ಸುಮೇರಿಯ) ಸ್ಥಾಪಿತವಾದವು. ಅವುಗಳಲ್ಲಿ ಕ್ರಿ.ಶ. ಎರೆಕ್ ಮತ್ತು ಅರ್ ಮುಖ್ಯವಾದವು. ಈ ನಗರರಾಜ್ಯಗಳ ಪ್ರಭಾವ ಬಹುಮಟ್ಟಿಗೆ ಆಯಾ ನಗರಗಳಿಗೆ ಮಾತ್ರ ಸೀಮಿತವಾಗಿರುತ್ತಿದ್ದರೂ ಕೆಲವು ಸಂದರ್ಭಗಳಲ್ಲಿ ಒಂದೆರೆಡು ನಗರರಾಜ್ಯಗಳು ಮಿಕ್ಕವುಗಳ ಮೇಲೆ ಮೇಲ್ಗೈಯನ್ನು ಸಾಧಿಸಿಕೊಂಡಿದ್ದುದೂ ಕಂಡುಬರುತ್ತದೆ. ಕ್ರಿ.ಪೂ. 2350ರ ಸುಮಾರಿನಲ್ಲಿ ಅಕ್ಕಾಡಿನ ಸಾರಗಾನ್ ಈ ನಗರರಾಜ್ಯಗಳನ್ನೆಲ್ಲ ಮೂಲೆಗೊತ್ತಿ ದೊಡ್ಡ ಸಾಮ್ರಾಜ್ಯವೊಂದನ್ನು ಸ್ಥಾಪಿಸಿದೆ. (ನೋಡಿ- ಅಕ್ಕಾಡ್) ಈ ಸಾಮ್ರಾಜ್ಯ ಅನತಿಕಾಲದಲ್ಲಿ ಅನೇಕ ಮೆಲಜನರ ದಾಳಿಗಳಿಂದಾಗಿ ಶಿಥಿಲಗೊಂಡು, ಇರಾಕ್ ಪುನಃ ಸಣ್ಣ ರಾಜ್ಯಘಟಕಗಳಾಗಿ ಹಂಚಿಹೋಯಿತು. ಈ ಸಂದರ್ಭದಲ್ಲಿ ಇಸಿನ್ ಮತ್ತು ಲಾಸ ಎಂಬ ಎರಡು ನಗರಗಳಲ್ಲಿದ್ದ ರಾಜ್ಯಪಾಲ ಕುಲಗಳು ಬಹಳ ಪ್ರಭಾವ ಬೆಳೆಸಿಕೊಂಡಿದ್ದವು.

ಕ್ರಿ. ಪೂ. 18ನೆಯ ಶತಮಾನದಿಂದ ಇರಾಕಿನ ಬ್ಯಾಬಿಲೋನಿಯ ಒಂದು ಮುಖ್ಯ ಸ್ಥಾನವನ್ನಾಕ್ರಮಿಸಿತು. ಇಲ್ಲಿ ಆಳಿದವರಲ್ಲಿ ಪ್ರಸಿದ್ಧ ನ್ಯಾಯವಾದಿ ಹಮ್ಮುರಬಿ (1728-1686) ಮತ್ತು ಅವನ ಮಗ ಶಂಸುಲಿನ್ ಮುಖ್ಯರು. ಆದರೆ ಬ್ಯಾಬಿಲೋನಿಯ ಸಾಮ್ರಾಜ್ಯ ಸಹ ಕ್ರಿ. ಪೂ. 16ನೆಯ ಶತಮಾನದಲ್ಲಿ ಹೆವ್ವೈವ್ ಜನರ ದಾಳಿಯಿಂದ ನಾಶವಾಗಿ, ಈ ಪ್ರದೇಶ ಇಂಡೊ-ಯೂರೋಪಿಯನ್ ಜನಾಂಗಕ್ಕೆ ಸೇರಿದ ಕ್ಯಾಸೈಟ್ ಕುಲದ ಅರಸರ ಕೈಸೇರಿತು.

ಇದೇ ಸುಮಾರಿನಲ್ಲಿ ಉತ್ತರ ಇರಾಕಿನ ಅಶುರ್ ಎಂಬಲ್ಲಿ ಒಂದು ರಾಜವಂಶದವರು ಪ್ರವರ್ಧಮಾನಕ್ಕೆ ಬರುತ್ತಿದ್ದರು. ಈ ರಾಜವಂಶ ಮೊದಮೊದಲು ಅಷ್ಟೇನು ಪ್ರಭಾವಶಾಲಿಯಾಗಿರದಿದ್ದರೂ ಮುಂದೆ ಆ ಕುಲದ ಅದದ್ ನಿಕರಿ (ಕ್ರಿ. ಪೂ. 14ನೆಯ ಶತಮಾನ) ಮುಂತಾದ ಶೂರರ ಸಾಹಸಗಳಿಂದಾಗಿ ಒಂದು ದೊಡ್ಡ ಸಾಮ್ರಾಜ್ಯವನ್ನು ಕಟ್ಟಿತು. ಇದೇ ಪ್ರಸಿದ್ಧವಾದ ಅಸ್ಸೀರಿಯನ್ ಸಾಮ್ರಾಜ್ಯ. ತಿಗಲಕ್ ಪಲೆಸರ್, ಶಲ್ಮನೆಸ್ಸರ್, ಅಶುರ್ ಬನಿಪಾಲ್ ಮುಂತಾದವರು ಈ ವಂಶದ ಪ್ರಖ್ಯಾತ ದೊರೆಗಳು. ಸುಮಾರು ಒಂದು ಸಾವಿರ ವರ್ಷಗಳಿಗೂ ಹೆಚ್ಚು ಕಾಲ ಪ್ರಭಾವಶಾಲಿಯಗಿದ್ದ ಈ ಸಾಮ್ರಾಜ್ಯ ಕ್ರಿ. ಪೂ. 606ರಲ್ಲಿ ಮೀಡರ ದಾಳಿಯಿಂದ ಅಳಿಸಿಹೋಯಿತು. ಅನಂತರ ಪುನಃ ಬ್ಯಾಬಿಲಾನನ್ನು ರಾಜ್ಯ ಕೇಂದ್ರವಾಗಿ ಹೊಂದಿದ್ದ ಕಾಲ್ಡೀಯ ಸಾಮ್ರಾಜ್ಯ ಹಟ್ಟಿ ಕ್ರಿ. ಪೂ. 539ರಲ್ಲಿ ಪರ್ಷಿಯದ ಅಖಮೇನಿಯನ್ ವಂಶದ ಸೈರಸ್ನ ಕೈವಶವಾಗುವವರೆಗೆ ಮುಂದುವರೆಯಿತು. ಕ್ರಿ. ಪೂ. 539ರಂದು ಸುಮಾರು ಹನ್ನೊಂದು ಶತಮಾನಗಳ ಕಾಲ ಇರಾಕ್ ಪರಕೀಯರ ಆಳ್ವಿಕೆಗೆ ಒಳಪಟ್ಟಿತ್ತು. ಕ್ರಿ. ಪೂ. 330ರಲ್ಲಿ ಅಖಮೇನಿಯನ್ನರಿಂದ ಮ್ಯಾಸಿಡೋನಿಯದ ಅಲೆಕ್ಸಾಂಡರ್ ಇರಾಕನ್ನು ಸ್ವಾಧೀನಪಡಿಸಿಕೊಂಡ. ಅನಂತರ ಕ್ರಿ. ಪೂ. ಸು. 2ನೆಯ ಶತಮಾನದ ಕೊನೆಯವರೆಗೆ ಸೆಲ್ಯೂಕೀ ಗ್ರೀಕರ, ಅನಂತರ ಕ್ರಿ. ಶ. 3ನೆಯ ಶತಮಾನದ ಆದಿಭಾಗದವರೆಗೆ ಪಾರ್ಥಿಯನ್ ಪರ್ಷಿಯನ್ನರ, ಆಮೇಲೆ ಸಸ್ಸಾನೀಯ ಪರ್ಷಿಯನ್ನರ ವಶದಲ್ಲಿದ್ದ ಇರಾಕ್ ಕ್ರಿ. ಶ. 637ರ ಸುಮಾರಿನಲ್ಲಿ ದೇಶೀಯ ಇಸ್ಸಾಮೀ ಸಾಮ್ರಾಜ್ಯದ ಸ್ಥಾಪನೆಯಿಂದಾಗಿ ಸ್ವತಂತ್ರವಾಯಿತು.

ಏಳನೆಯ ಶತಮಾನದಿಂದ: ಬೈಜಾಂಟಿಯಂ ಮತ್ತು ಪರ್ಷಿಯ ಸಾಮ್ರಾಜ್ಯಗಳ ಘರ್ಷಣೆಗಳ ಪರಿಣಾಮವಾಗಿ ಉಂಟಾದ ಕಲಹಗಳನ್ನು ನಿಲ್ಲಿಸಿ ಎಲ್ಲ ಇರಾಕಿಗಳು ಮತ್ತು ಅರಬರು ಒಂದುಗೂಡಲು ಮಹಮ್ಮದ್ ಪೈಗಂಬರ್ ಮತಪ್ರಚಾರ ಸಹಾಯಮಾಡಿತು.

ಮಹಮ್ಮದನ ಮರಣಾನಂತರ ಅವನ ಸ್ಥಾನಕ್ಕೆ ಯಾರು ಬರಬೇಕೆಂಬ ವಿಷಯದಲ್ಲಿ ವಿವಾದ ಬಂತು. ಅಳಿಯನಾದ ಆಲಿಯ ಪರವಾಗಿ ವಾದಿಸಿದವರು ಷೀಯ ಪಂಥದವರಾದರು. ವಿರೋಧಿಸಿದವರು ಸುನ್ನಿ ಪಂಥದವರಾದರು. ಇವರ ಕಲಹ ಐಕ್ಯಮತ್ಯಕ್ಕೆ ಭಂಗ ತರುವ ಹಾಗಾಯಿತು. ಷೀಯಗಳು ಗೆದ್ದು ಅಬುಬೇಕರನ್ನು ಕಲೀಫನನ್ನಾಗಿ ಆರಿಸಿದರು. ಪರ್ಷಿಯದ ಜನರೂ ಷೀಯಗಳಾಗಿ, ಐರೋಪ್ಯ ರಾಷ್ಟ್ರಗಳಾದ ಗಾಲ್ ಸ್ಪೇನ್ಗಳನ್ನು ಜಯಿಸಿ, ಅನೇಕ ರಾಷ್ಟ್ರಗಳ ಆಕ್ರಮಣ ಮಾಡಿ, ಆಫ್ರಿಕದ ಬಹುಭಾಗವನ್ನು ಸ್ವಾಧೀನಪಡಿಸಿಕೊಂಡು ಇಸ್ಲಾಂ ಮತಕ್ಕಾಗಿ ದೊಡ್ಡ ಸಾಮ್ರಾಜ್ಯವನ್ನು ಗಳಿಸಿದರು. ಅತ್ಯಲ್ಪ ಕಾಲದಲ್ಲಿ ಅಷ್ಟು ದೊಡ್ಡ ರಾಜ್ಯವನ್ನು ಕಟ್ಟಲು ಅವರಿಗೆ ಸಾಧ್ಯವಾದದ್ದಕ್ಕೆ ಎರಡು ಕಾರಣಗಳನ್ನು ಹೇಳಬಹುದು. ಒಂದು-ತಾವು ಅವಲಂಬಿಸಿದ ಹೊಸ ಮತಧರ್ಮದ ಬಗ್ಗೆ ಅವರಿಗಿದ್ದ ಆಸಕ್ತಿ. ಎರಡು-ಅನ್ಯ ರಾಷ್ಟ್ರಗಳ ದೌರ್ಬಲ್ಯ.

ಬಾಗ್‍ದಾದ್ ನಗರ ಮುಸ್ಲಿಂ ಸಾಮ್ರಾಜ್ಯದ ರಾಜಧಾನಿಯಾಯಿತು. ಆಳಿದ ಅತಿ ಮುಖ್ಯ ಕಲೀಫರಲ್ಲಿ ಮೂವರು ಮೂರು ಖಂಡಗಳನ್ನಾವರಿಸಿಕೊಂಡ ಸಾಮ್ರಾಜ್ಯವನ್ನೂ ಅಖಂಡ ಸಂಪತ್ತನ್ನೂ ಗಳಿಸಿದರು. ಅವರಲ್ಲಿ ಅತ್ಯಂತ ಪ್ರಸಿದ್ಧನೆಂದರೆ ಹಾರೂನ್ ಅಲ್ ರಷೀದ್. ಇವನ ಸಾಮರ್ಥ್ಯ ಸದ್ಗುಣಗಳನ್ನು ಅರೇಬಿಯನ್ ನೈಟ್ಸ್ ಗ್ರಂಥ ಮನೋರಂಜಕವಾಗಿ ವಿವರಿಸಿದೆ.

ಇಸ್ಲಾಂ ಧರ್ಮ ಮೊದಲು ಹರಡಿ ಇಡೀ ರಾಷ್ಟ್ರದ ಜನರನ್ನೇ ತನ್ನ ಕಡೆಗೆಳೆದದ್ದು ಇರಾಕ್ ರಾಜ್ಯದಲ್ಲಿ. ಮತ ತತ್ತ್ವದ ಜೊತೆಗೆ ಅರಬ್ಬೀ ಭಾಷೆಯೂ ಅಲ್ಲಿ ಮೊದಲು ಪ್ರಚಾರಕ್ಕೆ ಬಂತು. ಉಮಾಯದ್ದ ಕಲೀಫರ ಕಾಲದಲ್ಲಿ ಗರೀಕ್ ಮತ್ತು ಪಾರಸಿ ಸಂಸ್ಕøತಿಗಳ ಪ್ರಭಾವಕ್ಕೆ ಒಳಗಾಗಿ ಸಮನ್ವಯದ ಒಂದು ನೂತನ ದರ್ಶನವನ್ನೂ ಇರಾಕ್ ಜನ ಪಡೆದರು. ಪೈಗಂಬರನ ಮಾವನಾದ ಅಬ್ಬಾಸಿದ್ದನ ಪರವಾಗಿ ಇರಾಕ್ ಮತ್ತು ಖುರೇಸಾನ್ ಜನ ಹೋರಾಟ ನಡೆಸಿ ಉಮಾಯದ್ದರನ್ನು ಸೋಲಿಸಿ ಅಬ್ಬಾಸಿದ್ ರಾಜ್ಯ ಭಾರವನ್ನು ಬಾಗ್‍ದಾದ್‍ನಲ್ಲಿ ಸ್ಥಾಪಿಸಿದರು. ಇರಾಕಿನ ದಕ್ಷಿಣ ಪ್ರಾಂತ್ಯಗಳ ಸುನ್ನಿಪಂಥದವರ ಅಸಹ್ಯ ದೌರ್ಜನ್ಯಗಳನ್ನು ತಡೆಯಲಾರದೆ ಪ್ರಬಲರಾಗಿದ್ದ ಷೀಯ ಜನ ವಲಸೆ ಹೋದರು. 1945ರಲ್ಲಿ ಅಬ್ಬಾಸಿದ್ ಕಲೀಫರು ಷೀಯಪಂಗಡದ ಬುವೇಹಿದ್ ಜನರ ಆಕ್ರಮಣಕ್ಕೆ ಒಳಗಾದರು. 1400ರಲ್ಲಿ ತೈಮೂರ್‍ಲೇನನ ಯುದ್ಧಗಳ ಮತ್ತು ದೌರ್ಜನ್ಯಕೃತ್ಯಗಳ ಪರಿಣಾಮವಾಗಿ ಸುಸಂಸ್ಕøತರೂ ಶಾಂತಿ ಮತಧರ್ಮ ಪೋಷಕರೂ ಆದ ಇರಾಕಿನ ಬಹು ಮಂದಿ ಹತರಾದರು. ಬಾಗ್‍ದಾದ್ ನಾಶಹೊಂದಿತು.

ಮ್ಯಾಮಲೂಕರ ರಾಜ್ಯಭಾರ ಕ್ಷೀಣವಾಯಿತು. ನೂರ ಇಪ್ಪತ್ತೆಂಟು ವರ್ಷಗಳಲ್ಲಿ ಇಪ್ಪತ್ತೊಂಬತ್ತು ರಾಜರು ಆಳಿದರು. 1480ರಲ್ಲಿ ಟರ್ಕೊಮನ್ ಮತ್ತು ಬಿದೂಯಿನ್ ಪರ್ವತವಾಸಿಗಳು ದಾಳಿ ನಡೆಸಿ ರಾಜ್ಯದ ಬಹುಭಾಗವನ್ನು ನಾಶ ಮಾಡಿದರು. ನಾಗರಿಕತೆಯ ಪರಾಕಾಷ್ಠೆಯನ್ನು ಮುಟ್ಟಿದ್ದ ಇರಾಕಿನ ಜನ ದಿಕ್ಕೆಟ್ಟು ಹೋದರು. ಪಾಶ್ಚಾತ್ಯ ರಾಷ್ಟ್ರಗಳ ಸ್ವಾಧೀನಕ್ಕಾಗಿ ಆಟೊಮನ್ ಮತ್ತು ಪರ್ಷಿಯ ರಾಷ್ಟ್ರಗಳ ಭಯಂಕರ ಸ್ಪರ್ಧೆ, ಅಂತರ್ಯುದ್ಧಗಳಲ್ಲೂ-ಇವು ಹದಿನೆಂಟು ಮತ್ತು ಹತ್ತೊಂಬತ್ತನೆಯ ಶತಮಾನಗಳಲ್ಲಿ ಇರಾಕ್ ಜನರ ಇಡೀ ಇತಿಹಾಸವನ್ನೇ ರೂಪಾಂತರಗೊಳಿಸಿದವು.

ಆಟೊಮನ್ನರು ಇರಾಕನ್ನು ಗೆದ್ದು ರಾಜ್ಯಾಡಳಿತವನ್ನು ಸರಿಪಡಿಸಿ ಇರಾಕೀ ಶ್ರೀಮಂತರಿಗೂ ಪರ್ವತವಾಸಿಗಳಾದ ಕುರ್ಡನಾಯಕರಿಗೂ ರಾಜ್ಯಭಾರವನ್ನು ಒಪ್ಪಿಸಿದ ಪರಿಣಾಮವಾಗಿ ಕೆಲವು ಕಾಲ ಶಾಂತಿ ಸೌಹಾರ್ದಗಳು ನೆಲೆಗೊಂಡವು. ಆದರೆ ಕೆಲವು ಕಾಲದಲ್ಲಿಯೇ ಅನಾಯಕತ್ವ ಮತ್ತೆ ತಲೆದೋರಿತು. ಈ ಮಧ್ಯ ವಾಣಿಜ್ಯ, ವ್ಯಾಪಾರ ಬೆಳವಣಿಗೆಗಳನ್ನೇ ಪರಮ ಧ್ಯೇಯವಾಗಿಟ್ಟಿಕೊಂಡ ಫ್ರೆಂಚ್ ಮತ್ತು ಇಂಗ್ಲೆಂಡಿನ ವ್ಯಾಪಾರ ಸಂಸ್ಥೆ ಪ್ರಬಲವಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಪ್ರಭಾವ ಕ್ಷೇತ್ರಗಳನ್ನು ಸ್ಥಾಪಿಸಿ, ಅಂತರ ರಾಜಕೀಯದಲ್ಲಿ ಪ್ರವೇಶಿಸಿ, ರಾಜಮನೆತನಗಳನ್ನು ಒಡೆದು ವ್ಯಾಪಾರ ಕೇಂದ್ರಗಳನ್ನು ಸ್ಥಾಪಿಸಿಕೊಂಡಿತು. ಫ್ರೆಂಚ್ ಸಮ್ರಾಟನಾದ ಲೂಯಿಯ ಲಿವಾಂಟ್ ಕಂಪನಿ, ಈಸ್ಟ್ ಇಂಡಿಯ ಕಂಪನಿಗಳು ಇವುಗಳಲ್ಲಿ ಬಹು ಮುಖ್ಯ. ಪರ್ಷಿಯ ಕೊಲ್ಲಿ ವ್ಯಾಪಾರ ಸ್ಪರ್ಧೆಗೆ ಮುಖ್ಯ ಕೇಂದ್ರವಾಯಿತು. ಬಾಬಲ್ ಮಂಡಬ್, ಬಸ್ರ, ಬಾಗ್‍ದಾದ್ ಮತ್ತು ಇತರ ಪಟ್ಟಣಗಳು ಐರೋಪ್ಯ ಜನರ ಧನಾರ್ಜನೆಯ ದಾಹಕ್ಕೆ ಬಲಿಯಾದವು.

ಹತ್ತೊಂಬತ್ತನೆಯ ಶತಮಾನದ ಆದಿಯಲ್ಲಿ ಇತರ ರಾಷ್ಟ್ರಗಳಲ್ಲಿ ಉಂಟಾದ ಹಾಗೆ ಇಲ್ಲೂ ರಾಷ್ಟ್ರೀಯ ಭಾವನೆ ಮೂಡಿತು. ಐರೋಪ್ಯ ವ್ಯಾಪಾರಸ್ಥರು ಪ್ರತಿಭಾವಂತರು, ಪ್ರಗಲ್ಫರು, ಸಾಹಸಿಗಳು. ಅವರು ಮಧ್ಯಪ್ರಾಚ್ಯ, ರಾಷ್ಟ್ರಗಳಲ್ಲಿ ತಿರುಗಿ ಆಧುನಿಕ ಭಾವನೆಗಳನ್ನು ಹರಡಿದರು. ವೃತ್ತಪತ್ರಿಕೆಗಳು ಹೊಸ ಸ್ಫೂರ್ತಿಯನ್ನು ಕೊಟ್ಟವು. 1853ರಲ್ಲಿ ಪ್ರಗತಿಪರ ಭಾವನೆಗಳಿಂದ ಕೂಡಿದ ಮಹಮ್ಮದ್ ರಷೀದ್ ಪಾಷಾ ವಿದ್ಯಾಕೇಂದ್ರಗಳನ್ನು ಸ್ಥಾಪಿಸಿ, ಜನಗಳಿಗೆ ಅಂತರರಾಷ್ಟ್ರೀಯ ಉದ್ಯಮ ವ್ಯಾಪಾರ ಮತ್ತು ಸಂಸ್ಕøತಿಯ ವೈವಿಧ್ಯಗಳ ಪರಿಚಯವನ್ನು ಮಾಡಿಸಿದ. ನಿರಂಕುಶ ಆಳ್ವಿಕೆಗೆ ಮನಸೋತ ಪಾಷಗಳನ್ನು ಪದಚ್ಯುತರನ್ನಾಗಿ ಮಾಡಿ, ನೌಕರಿ ದರ್ಜೆಯ ಜನರನ್ನು ಹದಗೊಳಿಸಿ, ಈಫೆಂಡಿ ಎಂಬ ಹೆಸರಿನ ಉನ್ನತ ಅಧಿಕಾರಿಗಳನ್ನು ನಾನಾ ಕ್ಷೇತ್ರಗಳಲ್ಲಿ ನೇಮಿಸಿ, ಬಟ್ಟೆ ನೀತಿನಡೆಗಳನ್ನು ತಿದ್ದಿ, ಇರಾಕ್ ರಾಷ್ಟ್ರಜೀವನದ ಮಾರ್ಪಾಟಿಗಾಗಿ ಬಹಳ ಶ್ರಮ ವಹಿಸಿದ. ಪರಿಣಾಮವಾಗಿ ಹೊರ ಜನಾಂಗಗಳ ಪ್ರಭಾವ ಕ್ಷೇತ್ರಗಳನ್ನೂ ಅವುಗಳ ಅಧಿಕಾರಿಗಳನ್ನೂ ಹೊರದೂಡುವ ಪ್ರಯತ್ನಗಳು ನಡೆದವು. ಆಟೊಮನ್ ಸೇನೆಯಲ್ಲಿ ಅಧಿಕಾರಿಯಾಗಿದ್ದ ಅಜಿûೀeóï ಆಲಿ ಅಲ್ ಅಹದ್ ಸಾಲೆಂ ಲೀಗ್ ಮತ್ತು ಕಾವನೆಂಟ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಬ್ರಿಟಿಷ್ ಜನರನ್ನೂ ಹೊರದೂಡುವಂತೆ ಪ್ರೇರೇಪಿಸಿದ.

ಅರಬ್ಬಿ ಕ್ರಾಂತಿಗಳು ಜರುಗಿದವು. ಬ್ರಿಟಿಷ್ ಸೇನಾನಾಯಕ ಕಿಚನ್, ರೊನಾಲ್ಡ್ ಸ್ಕಾಟ್ ಮತ್ತು ಇತರ ಪ್ರತಿಭಾವಂತರು ಗೊಂದಲಕ್ಕೆ ಸಿಕ್ಕರು. ಅನೇಕ ಕಾರಣಗಳಿಂದ ಹೋರಾಟ ಯಶಸ್ವಿಯಾಗಲಿಲ್ಲ. 1918ರಲ್ಲಿ ಆಂಗ್ಲೊ-ಫ್ರೆಂಚ್ ಒಪ್ಪಂದ ಅರಬ್ಬರ ರಾಷ್ಟ್ರಪ್ರೇಮವನ್ನು ಲಾಲಿಸಿ ಅವರ ಸ್ವತಂತ್ರ್ಯದ ಹಾದಿಯನ್ನು ತೆರೆಯಿತು. ಜಿಲ್ಲಾ ಸಮಿತಿಗಳಾದವು. ಸೆವರಸ್ ಒಪ್ಪಂದದ ಪ್ರಕಾರ ಸಮಿತಿಗಳ ಮೂಲಕ ಏಕರಾಷ್ಟ್ರ ಸಿದ್ಧಿಗಾಗಿ ವಿಲ್ಸನ್ ಉತ್ತಮ ಸಲಹೆಗಳನ್ನು ಮಾಡಿದ. ಬ್ರಿಟಿಷರ ಪ್ರತಿನಿಧಿಗಳೇ ಅರಬ್ಬರ ಪ್ರತಿನಿಧಿಗಳಿಗಿಂತ ಹೆಚ್ಚು ಅಧಿಕಾರವನ್ನು ಗಳಿಸಿದರು. ಸಮಿತಿಗಳು ಬ್ರಿಟಿಷರ ಕೈವಾಡಕ್ಕೆ ಸಿಕ್ಕಿದವು. ಸರ್ ಪರ್ಸಿ ಕಾಕ್ಸ್ ಮುಖ್ಯಾಧಿಕಾರಿಯಾಗಿ ಇರಾಕ್ ಸ್ವತಂತ್ರ ರಾಷ್ಟ್ರವಾಗುವುದಕ್ಕೆ ಬೇಕಾದ ಸಲಹೆಗಳನ್ನು ಸೂಚಿಸಿದ. ಉಜ್ವಲ ರಾಷ್ಟ್ರ ಪ್ರೇಮಿಗಳು ಸಣ್ಣ ಸಣ್ಣ ಸುಧಾರಣೆಗಳನ್ನು ಒಪ್ಪದೆ ಮತ್ತೆ ಉಗ್ರ ವಿಪ್ಲವಗಳನ್ನು ಎಬ್ಬಿಸಿದರು. ಭಾರತ ಸರ್ಕಾರದ ಸೇನಾದಳ ಪ್ರಭಾವಯುತವಾಗಿ ಹೋರಾಡಿ, ಬ್ರಿಟಿಷ್ ಸರ್ಕಾರಕ್ಕೆ ಯಶಸ್ಸನ್ನು ತಂದಿತು. 1924ರಲ್ಲಿ ಮತ್ತೆ ಒಪ್ಪಂದವಾಯಿತು. ಸರ್ ಜಾರ್ಜ್ ಕ್ಲೇಟನ್ ಎಂಬ ಅಧಿಕಾರಿ ಬ್ರಿಟಿಷ್ ಮತ್ತು ಇರಾಕ್ ಜನರ ಪರಸ್ಪರ ಸಹಕಾರ ಸದ್ಭಾವನೆಗಳಿಗಾಗಿ ಮತ್ತೆ ಒಪ್ಪಂದ ಮಾಡಿ ಯುದ್ಧ ಸಮಯಗಳಲ್ಲಿ ಇರಾಕ್ ಜನ ಸಹಕಾರ ನೀಡಬೇಕೆಂದು ಸಲಹೆ ಮಾಡಿದ. ಲೀಗ್ ಆಫ್ ನೇಷನ್ಸ್‍ನಲ್ಲಿ ಇರಾಕಿಗೆ ಪ್ರಾತಿನಿಧ್ಯ ಕೊಡಲು ಬ್ರಿಟಿಷ್ ಸರ್ಕಾರಕ್ಕೆ ಸಲಹೆಮಾಡಿದ.

ಆದರೂ ಅಸ್ಸೀರಿಯ ಮಧ್ಯ ಯುಫ್ರಟಿಸ್ ಪ್ರದೇಶಗಳಲ್ಲಿ ಅಶಾಂತಿ ಇದ್ದೇ ಇತ್ತು. ಕ್ರಾಂತಿಗಳು, ರಕ್ತಪಾತ, ದೌರ್ಜನ್ಯ ಕೃತ್ಯಗಳು 1940ರಲ್ಲೂ ಜರುಗುತ್ತಲೇ ಇದ್ದವು. ಫೈಸಲ್ ದೊರೆಯ ಮರಣಾನಂತರ 1933ರಲ್ಲಿ ಪಟ್ಟಕ್ಕೆ ಬಂದ ಘಾಸಿಯೂ ಶಾಂತಿ ಪ್ರಯತ್ನದಲ್ಲಿ ವಿಫಲನಾದ. ಎರಡನೆಯ ಮಹಾಯುದ್ಧದಲ್ಲಿ ಅನೇಕ ಉತ್ಪಾದಕರ ಘಟನೆಗಳು ಜರುಗಿದವು. ಅಬ್ದುಲ್ಲನ ಉತ್ಕಟಾಕಾಂಕ್ಷೆ ಸಿರಿಯ ರಾಷ್ಟ್ರವನ್ನು ಅರಬ್ಬರ ಧರ್ಮಸಾಮ್ರಾಜ್ಯವನ್ನಾಗಿ ಮಾಡಬೇಕೆಂಬುದಾಗಿತ್ತು. ಆ ಪ್ರಯತ್ನಕ್ಕೆ ಅನೇಕ ವಿರೋಧಿಗಳು ಹುಟ್ಟಿಕೊಂಡರು. ಯುದ್ಧದ ತರುವಾಯ ಕಮ್ಯೂನಿಸ್ಟ ಸಾಮ್ಯಾಜ್ಯದ ನಾಯಕನಾದ ಸ್ಟಾಲಿನ್ನನ ಪ್ರಭಾವ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಬಲವಾಯಿತು. ಬ್ರಿಟಿಷ್ ಮತ್ತು ಫ್ರೆಂಚ್ ಸಾಮ್ರಾಜ್ಯಗಳ ಅಧಿಕಾರ ವ್ಯಾಪ್ತಿ ಕುಂಠಿತವಾಯಿತು. ಈ ರಾಷ್ಟ್ರಗಳಲ್ಲಿ ಇನ್ನೂ ಶಾಂತಿ ಸ್ಥಾಪನೆಯಾಗಿಲ್ಲ. ಪೂರ್ಣ ಸ್ವಾತಂತ್ರ್ಯ ಸಾಧ್ಯವಾಗಿಲ್ಲ. ಪ್ರಪಂಚದ ದೊಡ್ಡ ಸಾಮ್ರಾಜ್ಯಗಳ ಕೈವಾಡದಿಂದ ಕಮ್ಯೂನಿಸಂ ತತ್ತ್ವ ಮತ್ತು ಇಸ್ಲಾಂ ಧರ್ಮಗಳ ಸಮನ್ವಯ ಸಾಧ್ಯವೇ ಎಂಬ ಪ್ರಶ್ನೆ ಜಟಿಲವಾಗಿದೆ. ಈ ಸಂದಿಗ್ಥ ಸ್ಥಿತಿಯಲ್ಲಿ ಆಗಿಂದಾಗ್ಗೆ ವಿಪ್ಲವಗಳು, ಪುಟ್ಟ ಪುಟ್ಟ ಕ್ರಾಂತಿಗಳು ಆಗುತ್ತಿವೆ. ಅಂತರರಾಷ್ಟ್ರೀಯ ಪರಿಸ್ಥಿತಿಗನುಗುಣವಾಗಿ, ಎಣ್ಣೆ ವ್ಯಾಪಾರದ ರಾಜಕೀಯ ಆಂದೋಲನಗಳು ಜರುಗಿವೆ. ಅಂತರ್ಯುದ್ಧಗಳು, ದೌರ್ಜನ್ಯ, ಶ್ರೀಮಂತರ ಕೊಲೆ, ಅಶಾಂತಿ-ಇವೆಲ್ಲ ಸರ್ಕಾರದ ಸುಭದ್ರತೆಯನ್ನು ಅಲುಗಿಸಿವೆ. ಭವಿಷ್ಯ ಕಷ್ಟವಾಗಿದೆ.

ಕೃಷಿ ಅರ್ಥಶಾಸ್ತ್ರ

ಕೃಷಿ ಅರ್ಥಶಾಸ್ತ್ರ (Agricultural economics) ಮೂಲತಃ ಬೆಳೆ ಮತ್ತು ಜಾನುವಾರುಗಳ ಉತ್ಪಾದನೆಗಳಿಗೆ ಅರ್ಥಶಾಸ್ತ್ರದ ತತ್ವಗಳನ್ನು ಅನ್ವಯಿಸುತ್ತದೆ. ಕೃಷಿ ಅರ್ಥಶಾಸ್ತ್ರವು ಭೂಬಳಕೆಯ ಅಧ್ಯಯನ ಮಾಡುವ ಅರ್ಥಶಾಸ್ತ್ರದ ಭಾಗವಾಗಿದೆ.

ನಾವಲ್ ಹರ್ಮುಸ್ ಜಿ ಟಾಟಾ

(೧೯೦೪-೧೯೮೯)

'ನಾವಲ್ ಹರ್ಮುಸ್ ಜಿ ಟಾಟಾ','ಜಮ್‍ಸೆಟ್‍ಜಿ ನುಝರ್‍ವಾನ್‍ಜಿ ಟಾಟ' ರವರ ನೇರ ವಂಶಾವಳಿಯಲ್ಲಿ ಬರದಿದ್ದರೂ ದೂರದಿಂದ ಸಂಬಂಧಿಗಳೆಂದು ಹೇಳಬಹುದು. ಟಾಟಾ ಸಾಮ್ರಾಜ್ಯದಲ್ಲಿ ಪಾದಾರ್ಪಣೆಮಾಡುವ ಯೋಗ ಅವರಿಗೆ ದೈವವಶದಿಂದ ದೊರೆಯಿತು. ಆದರೆ 'ನಾವಲ್' ಆ ಅವಕಾಶಗಳನ್ನು ದೇವರವರವೆಂದೇ ಪರಿಗಣಿಸಿ, ತಮ್ಮ ಶುದ್ಧಮನಸ್ಸಿನಿಂದ 'ಟಾಟಾ ಕೈಗಾರಿಕಾ ಸಾಮ್ರಾಜ್ಯ'ದ ಏಳಿಗೆಗಾಗಿ ತಮ್ಮ ತನು-ಮನಗಳನ್ನು ಮುಡಿಪಾಗಿಟ್ಟರು.

ಬೀರೂರು

ಬೀರೂರು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಒಂದು ಪಟ್ಟಣ. ತಾಲೂಕು ಕೇಂದ್ರವಾದ ಕಡೂರುನಿಂದ ವಾಯವ್ಯಕ್ಕೆ ಕೇವಲ ೬ ಕಿ.ಮೀ. ದೂರದಲ್ಲಿದೆ. ಚಿಕ್ಕಮಗಳೂರು ಜಿಲ್ಲೆಯ ಪ್ರಮುಖ ರೈಲ್ವೇ ಜಂಕ್ಷನ್‌ ಆಗಿದೆ. ಜನಸಂಖ್ಯೆ 18,081 (1981) ಬೆಂಗಳೂರು ಪುಣೆ ರೈಲು ಮಾರ್ಗ ಮತ್ತು ಬೆಂಗಳೂರು-ಹೊನ್ನಾವರ ರಸ್ತೆ ಈ ಊರಿನ ಮೂಲಕ ಹಾದುಹೋಗುತ್ತವೆ.

ಬೃಹದರ್ಥಶಾಸ್ತ್ರ

ಬೃಹದರ್ಥಶಾಸ್ತ್ರ ವು (ಗ್ರೀಕ್‌ನ ಪೂರ್ವಪ್ರತ್ಯಯವಾದ "ಮ್ಯಾಕ್ರೊ" ಅಂದರೆ "ಬೃಹತ್‌" ಎಂಬುದರಿಂದ ಬಂದದ್ದು; "ಬೃಹತ್‌‌" + "ಅರ್ಥಶಾಸ್ತ್ರ") ಅರ್ಥಶಾಸ್ತ್ರದ ಒಂದು ಶಾಖೆಯಾಗಿದ್ದು, ಸಮಗ್ರ ಆರ್ಥಿಕತೆಯ ನಿರ್ವಹಣೆ, ಸ್ವರೂಪ, ವರ್ತನೆ ಹಾಗೂ ತೀರ್ಮಾನ-ತಳೆಯುವಿಕೆಯೊಂದಿಗೆ ಅದು ವ್ಯವಹರಿಸುತ್ತದೆ. ಇಲ್ಲಿ ತಿಳಿಸಿರುವ ಸಮಗ್ರ ಆರ್ಥಿಕತೆಯು ಒಂದು ರಾಷ್ಟ್ರೀಯ, ಪ್ರಾದೇಶಿಕ, ಅಥವಾ ಜಾಗತಿಕ ಆರ್ಥಿಕತೆಯ ಸ್ವರೂಪದಲ್ಲಿರಬಹುದು. ವ್ಯಷ್ಟಿ ಅರ್ಥಶಾಸ್ತ್ರದ ಜೊತೆಯಲ್ಲಿ ಸೇರಿಕೊಂಡು ಬೃಹದರ್ಥಶಾಸ್ತ್ರವು ಅರ್ಥಶಾಸ್ತ್ರದಲ್ಲಿನ ಎರಡು ಅತ್ಯಂತ ಸಾರ್ವತ್ರಿಕ ಕ್ಷೇತ್ರಗಳ ಪೈಕಿ ಒಂದೆನಿಸಿಕೊಂಡಿದೆ.

ಸಮಗ್ರ ಆರ್ಥಿಕತೆಯ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು, GDP, ನಿರುದ್ಯೋಗದ ಪ್ರಮಾಣಗಳು, ಮತ್ತು ಬೆಲೆ ಸೂಚಿಗಳಂಥ ಒಟ್ಟುಗೂಡಿಸಿದ ಸೂಚಕಗಳನ್ನು ಬೃಹದರ್ಥಶಾಸ್ತ್ರಜ್ಞರು ಅಧ್ಯಯನ ಮಾಡುತ್ತಾರೆ. ಇಂಥ ಅಂಶಗಳ ನಡುವಿನ ಸಂಬಂಧವನ್ನು ವಿವರಿಸುವ ಮಾದರಿಗಳನ್ನು ಬೃಹದರ್ಥಶಾಸ್ತ್ರಜ್ಞರು ಅಭಿವೃದ್ಧಿಪಡಿಸುತ್ತಾರೆ. ಅವುಗಳೆಂದರೆ: ರಾಷ್ಟ್ರೀಯ ಆದಾಯ, ಉತ್ಪನ್ನದ ಪ್ರಮಾಣ, ಬಳಕೆ, ನಿರುದ್ಯೋಗ, ಹಣದುಬ್ಬರ, ಉಳಿತಾಯಗಳು, ಹೂಡಿಕೆ, ಅಂತರಾಷ್ಟ್ರೀಯ ವ್ಯಾಪಾರ ಮತ್ತು ಅಂತರಾಷ್ಟ್ರೀಯ ಹಣಕಾಸು. ಇದಕ್ಕೆ ಪ್ರತಿಯಾಗಿ, ಸಂಸ್ಥೆಗಳು ಮತ್ತು ಬಳಕೆದಾರರಂಥ ಪ್ರತ್ಯೇಕ ಮಧ್ಯವರ್ತಿಗಳ ಕಾರ್ಯವಿಧಾನಗಳ ಮೇಲೆ ವ್ಯಷ್ಟಿ ಅರ್ಥಶಾಸ್ತ್ರವು ಪ್ರಧಾನವಾಗಿ ಗಮನಹರಿಸುತ್ತದೆ, ಮತ್ತು ನಿರ್ದಿಷ್ಟ ಮಾರುಕಟ್ಟೆಗಳಲ್ಲಿನ ಬೆಲೆಗಳು ಮತ್ತು ಪ್ರಮಾಣಗಳನ್ನು ಅವರ ವರ್ತನೆಯು ಹೇಗೆ ನಿರ್ಣಯಿಸುತ್ತದೆ ಎಂಬುದರ ಕಡೆ ಅದು ಗಮನ ಹರಿಸುತ್ತದೆ.

ಬೃಹದರ್ಥಶಾಸ್ತ್ರವು ಒಂದು ಬೃಹತ್‌ ಅಧ್ಯಯನ ಕ್ಷೇತ್ರವಾಗಿದ್ದು, ಸದರಿ ಬೋಧನಾ ಶಾಖೆಯ ಅಥವಾ ಅಧ್ಯಯನ ಕ್ಷೇತ್ರದ ಸಾಂಕೇತಿಕ ಸ್ವರೂಪದಲ್ಲಿರುವ ಎರಡು ಸಂಶೋಧನಾ ವಲಯಗಳು ಅಲ್ಲಿ ಅಸ್ತಿತ್ವದಲ್ಲಿವೆ: ರಾಷ್ಟ್ರೀಯ ಆದಾಯದಲ್ಲಿನ (ವ್ಯಾಪಾರ ಚಕ್ರ) ಅಲ್ಪ-ಕಾಲದ ಏರಿಳಿತಗಳ ಕಾರಣಗಳು ಮತ್ತು ಪರಿಣಾಮಗಳನ್ನು ಅರ್ಥೈಸಿಕೊಳ್ಳುವಲ್ಲಿನ ಪ್ರಯತ್ನ, ಮತ್ತು ದೀರ್ಘ-ಕಾಲದ ಆರ್ಥಿಕ ಬೆಳವಣಿಗೆಯ (ರಾಷ್ಟ್ರೀಯ ಆದಾಯದಲ್ಲಿನ ಹೆಚ್ಚಳಗಳು) ನಿರ್ಣಾಯಕ ಅಂಶಗಳನ್ನು ಅರ್ಥೈಸಿಕೊಳ್ಳುವಲ್ಲಿನ ಪ್ರಯತ್ನ.

ಆರ್ಥಿಕ ನೀತಿ ಮತ್ತು ವ್ಯವಹಾರ ಕಾರ್ಯತಂತ್ರದ ಅಭಿವೃದ್ಧಿ ಹಾಗೂ ಮೌಲ್ಯಮಾಪನದಲ್ಲಿ ನೆರವಾಗಲು ಸರ್ಕಾರಗಳು ಮತ್ತು ಬೃಹತ್‌‌ ಸಂಸ್ಥೆಗಳೆರಡೂ ಬೃಹದಾರ್ಥಿಕ ಮಾದರಿಗಳು ಮತ್ತು ಅವುಗಳ ಮುನ್ಸೂಚನೆಗಳನ್ನು ಬಳಸಿಕೊಳ್ಳುತ್ತವೆ.

ವೆಂಗಿನಾಡು

ವೆಂಗಿನಾಡು - ಪಶ್ಚಿಮ ಗೋದಾವರಿಯ ಎಲ್ಲೋರದ ಉತ್ತರಕ್ಕಿರುವ ಪೆದ್ದ ವೇಗಿ ಪ್ರದೇಶವೆಂದು ಇತಿಹಾಸಕಾರರ ಅಭಿಪ್ರಾಯವಾಗಿದೆ. ಹರಿಷೇಣ ಕೃಷ್ಣಾ ಮತ್ತು ಗೋದಾವರಿ ನಡುವೆ ಇರುವ ಪ್ರದೇಶ ವೆಂಗಿ ಎಂದು ಕರೆದಿದ್ದಾನೆ. ಯುವಾನ್ ಚಾಂಗ್ (ಹ್ಯೂಯನ್ ತ್ಸಾಂಗ್)ನು ಪಿಂಗ್.ಕಿ.ಲೇ.ಯನ್ನು ವೆಂಗಿಪುರವೆಂದು ಕರೆದಿದ್ದಾನೆ. ಇದನ್ನು ಪಲ್ಲವ ಶಾಸನಗಳಲ್ಲಿ ವೆಂಗಿರಾಷ್ಟ್ರ ಎಂದೂ ಕರೆಯಲಾಗಿದೆ. ವೆಂಗಿ ಎಂಬ ಹೆಸರು ನಿರ್ದಿಷ್ಟ ಅರ್ಥದಲ್ಲಿ ರಾಜಧಾನಿಗೂ ವಿಶಾಲಾರ್ಥದಲ್ಲಿ ಒಂದು ರಾಷ್ಟ್ರ, ದೇಶ, ಮಂಡಲಕ್ಕೂ ಅನ್ವಯಿಸುತ್ತಿದ್ದಂತೆ ಕಾಣುತ್ತದೆ. ಗೋದಾವರಿ ಮತ್ತು ಕೃಷ್ಣಾನದಿಗಳ ನಡುವೆ ಇರುವ ಪ್ರದೇಶಕ್ಕೆ ಮಾತ್ರ ವೆಂಗಿಯೆಂದೂ ಗೋದಾವರಿಯಿಂದ ಕಳಿಂಗದವರೆಗಿರುವ ಪ್ರದೇಶಕ್ಕೆ ಆಂಧ್ರವೆಂದೂ ಕರೆಯುತ್ತಿದ್ದರೆಂದು ವ್ಯಕ್ತವಾಗುತ್ತದೆ. ವೆಂಗಿ ಅತಿ ಪ್ರಾಚೀನ ಕಾಲದಿಂದಲೂ ದೇಶ-ವಿದೇಶಗಳೊಡನೆ ವಾಣಿಜ್ಯ-ವ್ಯಾಪಾರ ಮೊದಲಾದ ಸಂಪರ್ಕ ವಿಟ್ಟುಕೊಂಡು, ಸಂಸ್ಕøತಿಯ ಬೆಳೆವಣಿಗೆಯಲ್ಲಿಯೂ ಮಹತ್ತರ ಪಾತ್ರವಹಿಸಿದೆ. ಲೆಂಡಲೂರು, ಪೆದ್ದ ಮತ್ತು ಚಿನ್ನವೆಂಗಿಯ ಸುತ್ತಲೂ ಅನೇಕ ಐತಿಹಾಸಿಕ ಸ್ಮಾರಕಗಳಿವೆ.

ಸೂಕ್ಷ್ಮ ಅರ್ಥಶಾಸ್ತ್ರ

ಸಣ್ಣ ಪ್ರಮಾಣದ ಗ್ರಾಹಕರ, ವ್ಯಕ್ತಿಗಳ ಮತ್ತು ಚಿಕ್ಕ ಕಂಪನಿಗಳ ಆರ್ಥಿಕ ವಹಿವಾಟೇ ಸೂಕ್ಷ್ಮ ಅರ್ಥಶಾಸ್ತ್ರ . ( ಗ್ರೀಕ್ ನ ಪೂರ್ವಪ್ರತ್ಯಯ ಮೈಕ್ರೋ- ಅರ್ಥ "ಚಿಕ್ಕ" + "ಎಕನಾಮಿಕ್ಸ್"(ಅರ್ಥಶಾಸ್ತ್ರ) ಎಂಬುದರಿಂದ ಹುಟ್ಟಿಕೊಂಡಿದೆ.) ಇದು ಅರ್ಥಶಾಸ್ತ್ರದ ಶಾಖೆಯಾಗಿದ್ದು, ಇದು ಸೀಮಿತ ಮೂಲಗಳ ವಿಂಗಡಣೆಯಲ್ಲಿ ಆಧುನಿಕ ಕುಟುಂಬದ ವ್ಯಕ್ತಿಯ ನಡವಳಿಕೆ ಮತ್ತು ವ್ಯಾಪಾರೀ ಸಂಸ್ಥೆ ತೆಗೆದುಕೊಳ್ಳುವ ನಿರ್ಧಾರವನ್ನು ಅಧ್ಯಯನ ಮಾಡುತ್ತದೆ. ಸಾಮಾನ್ಯವಾಗಿ, ಇದು ಸರಕು ಮತ್ತು ಸೇವೆಗಳ ಖರೀದಿ ಮತ್ತು ಮಾರಾಟದ ಮಾರುಕಟ್ಟೆಗೆ ಅನ್ವಯವಾಗುತ್ತದೆ. ವಹಿವಾಟಿನ ನಿರ್ಧಾರಗಳು ಮತ್ತು ನಡವಳಿಕೆಗಳು ಸರಕು ಮತ್ತು ಸೇವೆಗಳಿಗಾಗಿ ಪೂರೈಕೆ, ಸರಬರಾಜು ಮತ್ತು ಬೇಡಿಕೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ, ಎಂಬುದನ್ನು ಸೂಕ್ಷ್ಮ ಅರ್ಥಶಾಸ್ತ್ರ, ಪರಿಶೀಲಿಸುತ್ತದೆ. ಇದು ಬೆಲೆಯ ಪ್ರಮಾಣವನ್ನು ನಿರ್ಧರಿಸುತ್ತದೆ. ಅಲ್ಲದೇ ಸರಬರಾಜು ಮಾಡಲಾದ ಸರಕಿನ ಪರಿಮಾಣ ಮತ್ತು ಬೇಡಿಕೆಯಿರುವ ಸರಕು ಮತ್ತು ಸೇವೆಗಳ ಪರಿಮಾಣವನ್ನೂ ನಿರ್ಧರಿಸುತ್ತದೆ.ಇದು ಬೃಹದರ್ಥಶಾಸ್ತ್ರಕ್ಕೆ ತದ್ವಿರುದ್ಧವಾಗಿದ್ದು,ಅಭಿವೃದ್ಧಿ, ಹಣದುಬ್ಬರ ಮತ್ತು ನಿರುದ್ಯೋಗದ ವಿಷಯಗಳೊಂದಿಗೆ ವ್ಯವಹರಿಸುವ ಮೂಲಕ "ಸಮಗ್ರ ಆರ್ಥಿಕತೆಯ ನಿರ್ವಹಣೆಯಾಗಿದೆ. ಸೂಕ್ಷ್ಮ ಅರ್ಥಶಾಸ್ತ್ರ, ಮೇಲೆ ತಿಳಿಸಲಾದ ಆರ್ಥಿಕ ಅಂಶಗಳ ಮೇಲೆ ರಾಷ್ಟ್ರೀಯ ಆರ್ಥಿಕ ನೀತಿಗಳು ಬೀರುವ (ಉದಾಹರಣೆಗೆ ತೆರಿಗೆಯ ಬದಲಾಗುತ್ತಿರುವ ಹಂತಗಳು) ಪರಿಣಾಮಗಳೊಂದಿಗೂ ವ್ಯವಹರಿಸುತ್ತದೆ. ವಿಶೇಷವಾಗಿ ಲ್ಯೂಕಾಸ್‌ ವಿಶ್ಲೇಷಣೆಯ ಜಾಗೃತಿಯಲ್ಲಿ, ಬಹುಪಾಲು ಆಧುನಿಕ ಬೃಹದರ್ಥಶಾಸ್ತ್ರದ ಸಿದ್ಧಾಂತವನ್ನು 'ಸೂಕ್ಷ್ಮ ಅಡಿಪಾಯ'ದ ಮೇಲೆ ಸೃಷ್ಟಿಸಲಾಗಿದೆ— ಉದಾಹರಣೆಗೆ ಸೂಕ್ಷ್ಮ ಹಂತದ ನಡವಳಿಕೆ ಮೇಲೆ ಮಾಡಲಾದ ಊಹೆಗಳನ್ನು ಆಧರಿಸಿ ಎನ್ನಬಹುದು.

ಮಾರುಕಟ್ಟೆ ಕಾರ್ಯಾಚರಣೆಯನ್ನು ವಿಶ್ಲೇಷಿಸುವುದು, ಸೂಕ್ಷ್ಮ ಅರ್ಥಶಾಸ್ತ್ರದ ಗುರಿಗಳಲ್ಲಿ ಒಂದಾಗಿದೆ. ಇದು ಸರಕು ಮತ್ತು ಸೇವೆಗಳ ನಡುವೆ ಹತ್ತಿರದ ಬೆಲೆಯನ್ನು ನಿರ್ಧರಿಸುತ್ತದೆ. ಅಲ್ಲದೇ ಅನೇಕ ಪರ್ಯಾಯ ಬಳಕೆಗಳ ನಡುವೆ ಸೀಮಿತ ಸಂಪನ್ಮೂಲಗಳನ್ನು ವಿಂಗಡಿಸುತ್ತದೆ. ಸೂಕ್ಷ್ಮ ಅರ್ಥಶಾಸ್ತ್ರವು, ಮಾರುಕಟ್ಟೆಯ ದಕ್ಷ ಫಲಿತಾಂಶ ನೀಡುವಲ್ಲಿ ವಿಫಲವಾದಾಗ ಮಾರುಕಟ್ಟೆ ವಿಫಲತೆಯನ್ನು ವಿಶ್ಲೇಷಿಸುತ್ತದೆ. ಅಲ್ಲದೇ ಪರಿಪೂರ್ಣ ಸ್ಪರ್ಧೆಗೆ ಅಗತ್ಯವಿರುವ ಸೈದ್ಧಾಂತಿಕ ಸ್ಥಿತಿಗತಿಗಳನ್ನು ವಿವರಿಸುತ್ತದೆ. ಸೂಕ್ಷ್ಮ ಅರ್ಥಶಾಸ್ತ್ರದಲ್ಲಿ ಅಧ್ಯಯನದ ಪ್ರಮುಖ ಕ್ಷೇತ್ರಗಳು ಕೆಳಕಂಡಂತಿವೆ: ಸಾಮಾನ್ಯ ಸಮತೋಲನ ಸಿದ್ಧಾಂತ,(ಕುಶಲತೆ ಕಾರ್ಯ) ಅಸಮ ಕೆಲಸದ ಮಾಹಿತಿಯ ಅಂತರ್ಗತ ಮಾರುಕಟ್ಟೆಗಳು, ಅನಿಶ್ಚಿತತೆಯ ಅಂತರ್ಗತ ವಿಕಲ್ಪ ಹಾಗು ಕ್ರೀಡಾ ಸಿದ್ಧಾಂತದ ಆರ್ಥಿಕ ಅನ್ವಯಿಕೆಗಳು. ಇವುಗಳ ಜೊತೆಯಲ್ಲಿ ಮಾರುಕಟ್ಟೆ ವ್ಯವಸ್ಥೆಯೊಳಗೆ ಉತ್ಪನ್ನಗಳ ಸ್ಥಿತಿಸ್ಥಾಪಕತ್ವತೆಯ ಬಗ್ಗೆಯೂ ವಿಚಾರ ಮಾಡಲಾಗುತ್ತದೆ.

ಹಣ

thumb|coin money

ಸಾಮಾನ್ಯವಾಗಿ ಸರಕು ಮತ್ತು ಸೇವೆಗಳು ಹಾಗೂ ಋಣಗಳ ವಾಪಸಾತಿಗೆ ಸಂದಾಯದ ರೂಪವೆಂದು ಒಪ್ಪಿಕೊಳ್ಳಲಾದ ಯಾವುದಕ್ಕಾದರೂ ಹಣವೆನ್ನಬಹುದು. ಪ್ರಮುಖವಾಗಿ ಒಂದು ವಿನಿಮಯ ಸಾಧನವಾಗಿ (ಮೀಡಿಯಮ್ ಆಫ಼್ ಎಕ್ಸ್‌ಚೇಂಜ್), ಒಂದು ಲೆಕ್ಕದ ಏಕಮಾನವಾಗಿ (ಯೂನಿಟ್ ಆಫ಼್ ಅಕೌಂಟ್), ಮತ್ತು ಒಂದು ಮೌಲ್ಯದ ಸಂಗ್ರಹವಾಗಿ (ಸ್ಟೋರ್ ಆಫ಼್ ವ್ಯಾಲ್ಯು) ಹಣವನ್ನು ಉಪಯೋಗಿಸಲಾಗುತ್ತದೆ. ಕೆಲವು ಲೇಖಕರು ಹಣವು ಸ್ಪಷ್ಟವಾಗಿ ಒಂದು ಮುಂದೆ ಸಲ್ಲಿಸುವ ಸಂದಾಯದ ಮಾನದಂಡ (ಸ್ಟ್ಯಾಂಡರ್ಡ್ ಆಫ಼್ ಡೆಫ಼ರ್ಡ್ ಪೇಮಂಟ್) ಆಗಿರಬೇಕೆಂದು ಬಯಸುತ್ತಾರೆ. ನಗದು ಹಣದ ಪ್ರಧಾನ ಸ್ವರೂಪವಾಗಿದೆ.ಸರಕು ಮೌಲ್ಯಮಾಪನ ಅಥವಾ ಹಣಕಾಸು ಲೆಕ್ಕ ವ್ಯವಸ್ಥೆಗಳನ್ನು ಬಳಸುವ ವಿಧಾನಗಳನ್ನು ಪ್ರಸ್ತಾಪಿಸಲು ಕೆಲವೊಮ್ಮೆ "ಬೆಲೆ ವ್ಯವಸ್ಥೆ" ಪದವನ್ನು ಬಳಸಲಾಗುತ್ತದೆ.

ಹಣದುಬ್ಬರ

ಅರ್ಥ ಶಾಸ್ತ್ರದಲ್ಲಿ, ಹಣದುಬ್ಬರ ವೆಂದರೆ ಆರ್ಥಿಕತೆಯ ಕಾಲಾವಧಿಯಲ್ಲಿ ಸರಕುಗಳ ಹಾಗೂ ಸೇವೆಗಳ ಸಾಮಾನ್ಯ ಬೆಲೆಗಳ ಮಟ್ಟದ ಏರಿಕೆ.

ಬೆಲೆ ಏರಿಕೆಯಾದಾಗ, ಚಲಾವಣೆಯ ಪ್ರತಿ ಘಟಕವೂ ಕಡಿಮೆ ಪ್ರಮಾಣದಲ್ಲಿ ಸರಕುಗಳನ್ನು-ಸೇವೆಗಳನ್ನು ಕೊಂಡುಕೊಳ್ಳುತ್ತದೆ; ಹಾಗಾಗಿ ಹಣದುಬ್ಬರವೆಂದರೆ ಹಣದ ಕೊಂಡುಕೊಳ್ಳುವ ಸಾಮರ್ಥ್ಯದಲ್ಲಿನ ಕೊರೆತಯೂ ಹೌದು - ವಿನಿಮಯ ಮತ್ತು ಆರ್ಥಿಕತೆಯ ಲೆಕ್ಕದ ಘಟಕದ ಆಂತರಿಕ ಮಾಧ್ಯಮದಲ್ಲಿ ನೈಜ ಮೌಲ್ಯದ ನಷ್ಟವೂ ಆಗುತ್ತದೆ. ಹಣದುಬ್ಬರದ ಪ್ರಮಾಣವೇ ಬೆಲೆ ಏರಿಕೆಯ ಮುಖ್ಯ ಪ್ರಮಾಣವಾಗಿದ್ದು, ಕಾಲಾವಧಿಯಲ್ಲಿ ಹಣದುಬ್ಬರದ ದರ, ಸಾಮಾನ್ಯ ಬೆಲೆಯ ಸೂಚ್ಯಂಕಲ್ಲಿ ವಾರ್ಷಿಕ ಶೇಕಡಾವಾರು ಬದಲಾವಣೆ (ಗ್ರಾಹಕ ಬೆಲೆ ಸೂಚ್ಯಂಕ ಎಂದೂ ಹೇಳಲಾಗಿದೆ).

ಹಣದುಬ್ಬರವು ಆರ್ಥಿಕತೆಯ ಮೇಲೆ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದು. ಹಣದುಬ್ಬರದ ನಕಾರಾತ್ಮಕ ಪರಿಣಾಮಗಳಲ್ಲಿ ಕೆಲವು ಹೀಗಿವೆ: ಕಾಲಾವಧಿಯಲ್ಲಿ ಹಣದ ನೈಜ ಮೌಲ್ಯದಲ್ಲಿ ಮತ್ತು ಇತರೆ ಹಣಕಾಸಿನ ಅಂಶಗಳಲ್ಲಿ ಅಸ್ಥಿರತೆ; ಭವಿಷ್ಯದಲ್ಲಿ ಹಣದುಬ್ಬರದ ಬಗೆಗಿನ ಅನಿಶ್ಚಿತತೆಯ ಕಾರಣ, ಹೂಡಿಕೆ ಮತ್ತು ಉಳಿತಾಯಗಳನ್ನು ಮಾಡದಿರುವುದು; ಮತ್ತು ತೀವ್ರ ಹಣದುಬ್ಬದ ಕಾರಣದಿಂದಾಗಿ, ಭವಿಷ್ಯದಲ್ಲಿ ಬೆಲೆಗಳು ಇನ್ನಷ್ಟೂ ಏರಬಹುದೆಂದು ಗ್ರಾಹಕರು ಕೂಡಿಟ್ಟಕೊಂಡು ಅವಶ್ಯ ಸರಕುಗಳ ಕೊರತೆಗೆ ಕಾರಣರಾಗುತ್ತಾರೆ.ಸಕಾರಾತ್ಮಕ ಪರಿಣಾಮಗಳಲ್ಲಿ ಅರ್ಥಿಕ ಕುಸಿತಗಳ ಉಪಶಮನ ಮತ್ತು ನೈಜ ಸಾಲದ ಮಟ್ಟವನ್ನು ಕಡಿಮೆಗೊಳಿಸುವುದರ ಮೂಲಕ ಸಾಲ ಮುಕ್ತ.

ಹಣದ ಪೂರೈಕೆಯಲ್ಲಾದ ಅತಿ ಬೆಳವಣಿಗೆಯ ಕಾರಣ ಹಣದುಬ್ಬರದ ಪ್ರಮಾಣ ಹೆಚ್ಚಿದೆ ಮತ್ತು ಅತಿ-ಹಣದುಬ್ಬರಕ್ಕೆ ಕಾರಣವಾಗಿವೆ ಎಂದು ಆರ್ಥಿಕ ತಜ್ಞರು ಒಟ್ಟಾರೆ ಒಪ್ಪಿಕೊಂಡಿದ್ದಾರೆ. ಕಡಿಮೆ ಹಾಗೂ ಮಧ್ಯಮ ಪ್ರಮಾಣದ ಹಣದುಬ್ಬರದ ದರಗಳನ್ನು ನಿರ್ಧರಿಸುವ ಸಂಗತಿಗಳ ಬಗೆ ವಿವಿಧ ಅಭಿಪ್ರಾಯಗಳಿವೆ.ಕಡಿಮೆ ಅಥವಾ ಮಧ್ಯಮ ಪ್ರಮಾಣದ ಹಣದುಬ್ಬರಗಳು ಸರಕು ಮತ್ತು ಸೇವೆಗಳ ನೈಜ ಬೇಡಿಕೆಯಲ್ಲಿ ಏರುಪೇರುಗಳಿಗೆ ಕಾರಣವಾಗಿರಬಹುದು, ಅಥವಾ ಕೊರತೆಗಳ ಕಾಲದಲ್ಲಿ ಲಭ್ಯ ಪೂರೈಕೆಗಳಲ್ಲಿ ಬದಲಾವಣೆಗಳು, ಹಾಗೂ ಹಣದ ಪೂರೈಕೆಯಲ್ಲಿ ವೃದ್ಧಿ.ಆದಾಗ್ಯೂ, ಆರ್ಥಿಕ ಬೆಳವಣಿಗೆಗಿಂತಲೂ ವೇಗವಾಗಿ ಹಣ ಪೂರೈಕೆಯಾದಾಗ ದೀರ್ಘ ಕಾಲಾವಧಿಯ ಹಣದುಬ್ಬರವಾಗುತ್ತದೆ ಎಂಬುದು ಒಮ್ಮತದ ಅಭಿಪ್ರಾಯ.

ಇಂದು, ಮುಖ್ಯವಾಹಿನಿಯಲ್ಲಿರುವ ಬಹಳಷ್ಟು ಅರ್ಥ ಶಾಸ್ತ್ರಜ್ಞರು ಕಡಿಮೆ ದರದ ಸ್ಥಿರ ಹಣದುಬ್ಬರವನ್ನು ಬಯಸುತ್ತಾರೆ. ಕಡಿಮೆ ದರದ (ಶೂನ್ಯ ಅಥವಾ ನಕಾರಾತ್ಮಕಕ್ಕೆ ವಿರುದ್ಧವಾಗಿ) ಹಣದುಬ್ಬರವು ಆರ್ಥಿಕ ಹಿಂಜರಿಕೆಗಳ ತೀವ್ರತೆಯನ್ನು ಕಡಿಮೆಗೊಳಿಸಬಹುದಾಗಿದೆ. ಶ್ರಮ ಮಾರುಕಟ್ಟೆಯು ಹಿಂಜರಿಕೆಗೆ ಬೇಗ ಸರಿಹೊಂದುವಂತೆ ಮಾಡಿ, ಮತ್ತು ದ್ರವತೆಯ ಯುಕ್ತಿ ಆರ್ಥಿಕತೆಯ ಸ್ಥಿರತೆಗೆ ಆಗಬಹುದಾದ ಅಪಾಯನ್ನು ಹಣಕಾಸಿನ ನೀತಿಮೂಲಕ ತಪ್ಪಿಸುತ್ತದೆ. ಹಣದುಬ್ಬರದ ದರವನ್ನು ಕಡಿಮ ಹಾಗೂ ಸ್ಥಿರ ಮಟ್ಟದಲ್ಲಿಯೇ ಇಡುವ ಜವಾಬ್ದಾರಿ ಹಣಕಾಸಿನ ಅಧಿಕಾರಿಗಳದ್ದಾಗಿದೆ. ಸಾಮಾನ್ಯವಾಗಿ, ಈ ಹಣಕಾಸಿನ ಅಧಿಕಾರಿಗಳು, ಕೇಂದ್ರೀಯ ಬ್ಯಾಂಕ್‌ಗಳಾಗಿದ್ದು, ಮುಕ್ತ ಮಾರುಕಟ್ಟೆ ಕಾರ್ಯಾಚರಣೆ ಮತ್ತು ಬ್ಯಾಂಕಿಂಗ್‌ ನಿಧಿ ಅಗತ್ಯಗಳ ಸ್ಥಾಪನೆಗಳ ಮೂಲಕ ಬಡ್ಡಿ ದರಗಳನ್ನು ನಿಗದಿಪಡಿಸಿ, ಹಣದ ಪೂರೈಕೆಯ ಪ್ರಮಾಣದ ಮೇಲೆ ನಿಗಾ ವಹಿಸುತ್ತವೆ.

ಹಣದುಬ್ಬರವಿಳಿತ

ಅರ್ಥಶಾಸ್ತ್ರದಲ್ಲಿ, ಹಣದುಬ್ಬರವಿಳಿತ ಎಂಬುದು ಸರಕುಗಳು ಮತ್ತು ಸೇವೆಗಳ ಸಾರ್ವತ್ರಿಕ ಬೆಲೆಯ ಮಟ್ಟದಲ್ಲಿನ ಒಂದು ಇಳಕೆಯಾಗಿದೆ. ವಾರ್ಷಿಕ ಹಣದುಬ್ಬರ ದರವು ಶೂನ್ಯ ಶೇಕಡಾವಾರು ಪ್ರಮಾಣಕ್ಕಿಂತ (ಒಂದು ಋಣಾತ್ಮಕ ಹಣದುಬ್ಬರ ದರ) ಕೆಳಗೆ ಬಿದ್ದಾಗ ಹಣದುಬ್ಬರವಿಳಿತವು ಕಂಡುಬರುತ್ತದೆ. ಇದರಿಂದಾಗಿ ಹಣದ ವಾಸ್ತವಿಕ ಮೌಲ್ಯದಲ್ಲಿ ಒಂದು ಹೆಚ್ಚಳ ಕಂಡುಬರುವಂತಾಗಿ, ಅದೇ ಮೊತ್ತದ ಹಣದಿಂದ ಹೆಚ್ಚು ಸರಕುಗಳನ್ನು ಓರ್ವರು ಖರೀದಿಸಲು ಅದು ಅನುವುಮಾಡಿಕೊಡುತ್ತದೆ. ಹಣದುಬ್ಬರ ದರದಲ್ಲಿನ ಒಂದು ನಿಧಾನೀಕರಣವಾದ ಹಣದುಬ್ಬರ ತಗ್ಗಿಸುವಿಕೆಯೊಂದಿಗೆ ಇದನ್ನು ತಪ್ಪಾಗಿ ಗ್ರಹಿಸಬಾರದು (ಅಂದರೆ, ಹಣದುಬ್ಬರ ಇಳಿಕೆಯಾದರೂ, ಧನಾತ್ಮಕವಾಗಿಯೇ ಉಳಿಯುತ್ತದೆ). ಹಣದುಬ್ಬರವು ಕಾಲಾನಂತರದಲ್ಲಿ ಹಣದ ವಾಸ್ತವಿಕ ಮೌಲ್ಯವನ್ನು ತಗ್ಗಿಸುತ್ತದೆಯಾದ್ದರಿಂದ, ಇದಕ್ಕೆ ಪ್ರತಿಯಾಗಿ, ಒಂದು ರಾಷ್ಟ್ರೀಯ ಅಥವಾ ಪ್ರಾದೇಶಿಕ ಆರ್ಥಿಕತೆಯಲ್ಲಿ ಕಾರ್ಯಾರ್ಥಕ ಚಲಾವಣೆಯಾದ (ಮತ್ತು ಲೆಕ್ಕಪತ್ರದ ಹಣಕಾಸಿನ ಘಟಕವಾದ) ಹಣದ ವಾಸ್ತವಿಕ ಮೌಲ್ಯವನ್ನು ಹಣದುಬ್ಬರವಿಳಿತವು ಏರಿಸುತ್ತದೆ.

ಸದ್ಯದಲ್ಲಿ, ಮುಖ್ಯವಾಹಿನಿಯ ಅರ್ಥಶಾಸ್ತ್ರಜ್ಞರು ಸಾಮಾನ್ಯವಾಗಿ ನಂಬುವ ಪ್ರಕಾರ, ಹಣದುಬ್ಬರವಿಳಿತ ಎಂಬುದು ಒಂದು ಆಧುನಿಕ ಆರ್ಥಿಕತೆಯಲ್ಲಿನ ಒಂದು ಸಮಸ್ಯೆಯಾಗಿದೆ. ಇದಕ್ಕೆ ಹಣದುಬ್ಬರವಿಳಿತದ ಸುರುಳಿಯೊಂದರ (ಕೆಳಗೆ ವಿವರಿಸಲಾಗಿದೆ ) ಅಪಾಯವೇ ಕಾರಣ ಎಂಬುದು ಅವರ ಅಭಿಮತ. ಬ್ಯಾಂಕುಗಳು ಠೇವಣಿದಾರರಿಗೆ ಸಂಬಂಧಿಸಿ ಬಾಕೀದಾರನಾಗುವುದರಿಂದ ಹಣದುಬ್ಬರವಿಳಿತವು ಹಿಂಜರಿತಗಳೊಂದಿಗೆ ಹಾಗೂ ಮಹಾನ್‌ ಕುಸಿತದೊಂದಿಗೂ ಸಂಬಂಧಹೊಂದಿರುತ್ತದೆ. ಇದರ ಜೊತೆಗೆ, ದ್ರವ್ಯತೆಯ ಜಾಲ ಎಂದು ಕರೆಯಲಾಗುವ ಒಂದು ಕಾರ್ಯವಿಧಾನದ ಕಾರಣದಿಂದಾಗಿ ಆರ್ಥಿಕತೆಯನ್ನು ಸ್ಥೀರೀಕರಿಸದಂತೆ ಹಣಕಾಸಿನ ನೀತಿಯನ್ನು ಹಣದುಬ್ಬರವಿಳಿತವು ತಡೆಯುತ್ತದೆ. ಆದಾಗ್ಯೂ, ಹಣದುಬ್ಬರವಿಳಿತದ ಎಲ್ಲಾ ನಿದರ್ಶನಗಳೂ ದುರ್ಬಲ ಆರ್ಥಿಕ ಬೆಳವಣಿಗೆಯ ಅವಧಿಗಳೊಂದಿಗೆ ಐತಿಹಾಸಿಕವಾಗಿ ಸಂಬಂಧ ಹೊಂದಿರುವುದಿಲ್ಲ.

ಇತರ ಭಾಷೆಗಳು

This page is based on a Wikipedia article written by authors (here).
Text is available under the CC BY-SA 3.0 license; additional terms may apply.
Images, videos and audio are available under their respective licenses.