ಯುರೋಪಿನ ಒಕ್ಕೂಟ

ಯುರೋಪಿನ ಒಕ್ಕೂಟ (ಆಂಗ್ಲ:European Union - EU) ಯುರೋಪ್ ಖಂಡದಲ್ಲಿರುವ ೨೫ ಗಣತಂತ್ರ ದೇಶಗಳ ರಾಜಕೀಯ ಒಕ್ಕೂಟ. ೧೯೯೨ರ ಮಾಸ್ಟ್ರಿಚ್ ಒಪ್ಪಂದದ ಕೆಳಗಡೆ ಸ್ಥಾಪಿತ ಇದು ಪ್ರಪಂಚದ ಅತೀ ದೊಡ್ಡ ಸ್ವತಂತ್ರ ರಾಷ್ಟ್ರಗಳ ಒಕ್ಕೂಟ.

ಯೂರೋಪಿನ ಒಕ್ಕೂಟ[೧]
ಒಕ್ಕೂಟದ ಧ್ವಜ

Flag of the European Union[೨]
ಧ್ಯೆಯ: ಇನ್ ವರಿಯಟೇಟೆ ಕಾನ್ಕಾರ್ಡಿಯ[೨]
Anthem: ಬೀಥೋವೆನ್ಓಡ್ ಟು ಜಾಯ್ (orchestral)[೨]
EUmap
EU institution sites ಬ್ರುಸೆಲ್ಸ್ (CoEU, EC, and EP)
Frankfurt am Main (ECB)
ಲಕ್ಸೆಂಬೂರ್ಗ್ (ECoJ and ECoA)
ಸ್ಟ್ರಾಸ್ಬೋರ್ಗ್ (2nd EP)
Monetary authority ಯೂರೋಪಿನ ಕೇಂದ್ರ ಬ್ಯಾಂಕ್[೩]
ಆಡಳಿತ ಕೇಂದ್ರ ಬ್ರುಸೆಲ್ಸ್ (de facto capital)[೪]
Largest city ಪ್ಯಾರಿಸ್
ಸದಸ್ಯ ರಾಷ್ಟ್ರಗಳು ೨೫ ಸದಸ್ಯರು, (ಜನವರಿ ೧, ೨೦೦೭ರಿಂದ ೨೭)
ಅಧಿಕೃತ ಭಾಷೆಗಳು ೨೦ ಭಾಷೆಗಳು
ಅಧ್ಯಕ್ಷತೆಗಳು
European Council Matti Vanhanen
Council of the EU Finland
European Commission José Manuel Durão Barroso
European Parliament Josep Borrell Fontelles
ಇತಿಹಾಸ
ಯೂರೋಪ್ ದಿನ ಮೇ ೯, ೧೯೫೦
ಯುರೋಪಿನ ಅರ್ಥಿಕ ಸಮುದಾಯದ ಸ್ಥಾಪನೆ
 - ಒಪ್ಪಂದ
 - ಜಾರಿಗೆ ಬಂದಿದ್ದು
ರೋಮ್ ಒಪ್ಪಂದ

 - ಮಾರ್ಚ್ ೨೫, ೧೯೫೭
 - ಜನವರಿ ೧, ೧೯೫೮
ಯುರೋಪಿನ ಒಕ್ಕೂಟ ಸ್ಥಾಪನೆ
 - ಒಪ್ಪಂದ
 - ಜಾರಿಗೆ ಬಂದಿದ್ದು
ಮಾಸ್ಟ್ರಿಚ್ ಒಪ್ಪಂದ
 - ಫೆಬ್ರುವರಿ ೭, ೧೯೯೨
 - ನವೆಂಬರ್ ೧, ೧೯೯೩
ಅಂಕಿ-ಅಂಶಗಳು
Area
 - Total
7th if ranked[೫]
3,976,372 km²
1,5352,86 sq mi
Population
 - Total (2006)
 - Density
3rd if ranked[೫]
461,500,000
115.6 people/km²
299.4 people/sq mi
GDP 2006)
 - Total
 - Per capita
1st if ranked[೫]
$13.31 trillion[೬]
$28,100[೬]
HDI (2003) 0.922 (est.)[೭](22nd if ranked[೮]) – high
Other information
Currencies Euro (EUR or €)[೩]

Other currencies:
British pound (GBP or GB£)
Cyprus pound (CYP or C£)
Czech koruna (CZK or Kč)
Danish krone (DKK or kr)
Estonian kroon (EEK or kr)
Hungarian forint (HUF or Ft)
Latvian lats (LVL or Ls)
Lithuanian litas (LTL or Lt)
Maltese lira (MTL or Lm)
Polish złoty (PLN or zł)
Slovak koruna (SKK or Sk)
Slovenian tolar (SIT)
Swedish krona (SEK or kr)

Time zone UTC 0 to +2[೯]
Internet TLD .eu
Calling codes Not standardised[೧೦]
Official Website http://europa.eu/
ಚಿತ್ರ:Consttreat.jpg
The constitutional treaty as signed in Rome on 29 October 2004 by representatives from all EU Member States

references

  1. See other official names
  2. ೨.೦ ೨.೧ ೨.೨ See European symbols [೧]
  3. ೩.೦ ೩.೧ Only for Eurozone members and EU institutions
  4. Not de jure - Brussels is unofficialy referred to as The Capital of the European Union because it is the hub of EU institutions: it hosts the European Commission, the European Council, and the European Parliament.
  5. ೫.೦ ೫.೧ ೫.೨ If counted as a single unit.
  6. ೬.೦ ೬.೧ Total: According to IMF Estimations & Reports for 2005; Per capita: According to the CIA World Factbook [೨].
  7. Estimated using members' HDI, and weighted by estimated current population.
  8. Would be 9th if member states were not counted.
  9. +1 to +3 during DST; French overseas départements, UTC −4 to +4
  10. Plans for a EU-wide +3 prefix were abandoned. The European Telephony Numbering Space, +388 3 is somewhat similar. Current members' codes begin with either +3 or +4.
ಎಸ್ಟೊನಿಯ

ಎಸ್ಟೊನಿಯ, ಅಧಿಕೃತವಾಗಿ ಎಸ್ಟೊನಿಯ ಗಣರಾಜ್ಯ ([Eesti or Eesti Vabariik] ; ಜರ್ಮನ್: Estland), ಉತ್ತರ ಯುರೋಪ್ನ ಒಂದು ದೇಶ. ದಕ್ಷಿಣಕ್ಕೆ ಲಾಟ್ವಿಯ, ಪೂರ್ವಕ್ಕೆ ರಷ್ಯಾಗಳೊಂದಿಗೆ ಎಸ್ಟೊನಿಯ ಭೂಗಡಗಳನ್ನು ಹೊಂದಿದೆ. ಉತ್ತರಕ್ಕೆ ಫಿನ್‍ಲ್ಯಾಂಡ್ ಇಂದ ಫಿನ್‍ಲ್ಯಾಂಡ್ ಕೊಲ್ಲಿ ಮತ್ತು ಸ್ವೀಡನ್ ಇಂದ ಬಾಲ್ಟಿಕ್ ಸಮುದ್ರಗಳಿಂದ ಬೇರ್ಪಟ್ಟಿದೆ. ಎಸ್ಟೊನಿಯ ಯುರೋಪಿನ ಒಕ್ಕೂಟ ಮತ್ತು ನೇಟೊಗಳ ಸದಸ್ಯ ರಾಷ್ಟ್ರ.

ಎಸ್ಟೋನಿಯವು ಸೋವಿಯತ್ ಒಕ್ಕೂಟದ ಗಣರಾಜ್ಯಗಳಲ್ಲೊಂದಾಗಿತ್ತು. 1991ರಲ್ಲಿ ಎಸ್ಟೋನಿಯನ್ ಸೋವಿಯತ್ ಸಮಾಜವಾದೀ ಗಣರಾಜ್ಯದಿಂದ ಬೇರ್ಪಟ್ಟು ಸ್ವತಂತ್ರ ರಾಷ್ಟ್ರವಾಯಿತು. ಸುಮಾರು 57° 50' ಉತ್ತರ ಅಕ್ಷಾಂಶದಿಂದ 59° 75' ಉತ್ತರ ಅಕ್ಷಾಂಶದ ವರೆಗೂ 22° ಪೂರ್ವ ರೇಖಾಂಶದಿಂದ 28° 10' ಪೂರ್ವ ರೇಖಾಂಶದ ವರೆಗೂ ಹರಡಿದೆ. ಉತ್ತರದಲ್ಲಿ ಫಿನ್ಲೆಂಡ್ ಖಾರಿ, ಪಶ್ಚಿಮದಲ್ಲಿ ಬಾಲ್ಟಿಕ್ ಸಮುದ್ರ, ಪುರ್ವದಲ್ಲಿ ಪೈಪುಸ್ ಸರೋವರ, ಪ್ಸಾಫ್ಕ್‌ ಮತ್ತು ರಷ್ಯನ್ ಸೋವಿಯತ್ ಗಣರಾಜ್ಯ, ದಕ್ಷಿಣದಲ್ಲಿ ಲ್ಯಾಟ್ವಿಯ ಇವುಗಳ ನಡುವೆ ಇರುವ ಈ ರಾಜ್ಯ ಬಾಲ್ಟಿಕ್ ಪ್ರದೇಶದ ಮೂರು ಗಣರಾಜ್ಯಗಳ ಪೈಕಿ ಅತ್ಯಂತ ಚಿಕ್ಕದು. (ಉಳಿದೆರಡು ಲಿಥುವೇನಿಯ ಮತ್ತು ಲ್ಯಾಟ್ವಿಯ.) ಪ್ರಧಾನ ಭೂ ಭಾಗದೊಂದಿಗೆ ಪಶ್ಚಿಮದಲ್ಲಿನ 818 ದ್ವೀಪಗಳೂ ಈ ದೇಶಕ್ಕೆ ಸೇರಿವೆ. ಇವುಗಳಲ್ಲಿ ಮುಖ್ಯವಾದವು ಸೆರ್ಯಿಮ (ಅಸೆóಲ್) (163 ಚ.ಕಿಮೀ) ಹೀಯೂಮಾ (ಡೇಗೋ) (600 ಚ.ಕಿಮೀ), ಮುಹುಮಾ ಮತ್ತು ಮೊಮೊರ್ಸ್‌. ರಾಜ್ಯದ ವಿಸ್ತೀರ್ಣ 29,555 ಚ.ಕಿಮೀ ಗಳಿದ್ದುದು 1946ರ ಅನಂತರ 45,100 ಚ.ಕಿಮೀ ಆಯಿತು. ವಿಸ್ತೀರ್ಣದ ದೃಷ್ಟಿಯಿಂದ ಈ ರಾಜ್ಯದ ಸಮುದ್ರ ತೀರ ಅಧಿಕ ಉದ್ದವೆಂದೇ ಹೇಳಬೇಕು.

ಈ ರಾಜ್ಯದ ಉತ್ತರಾರ್ಧದಲ್ಲೂ ದ್ವೀಪಗಳಲ್ಲೂ ಸಿಲ್ಯೂರಿಯನ್ ಕಾಲದ ಡೊಲೊಮೈಟ್ ಮತ್ತು ಸುಣ್ಣಕಲ್ಲು ಶಿಲೆಗಳೂ ದಕ್ಷಿಣದಲ್ಲಿ ಡಿವೊನಿಯನ್ ಕಾಲದ ಮರಳುಕಲ್ಲುಗಳೂ ಇವೆ. ದೇಶದಾದ್ಯಂತ ಹೇರಳವಾಗಿ ಹಿಮಚಲನೆಗಳಿಂದ ಸಂಭವಿಸಿದ ಸಂಚಯನಗಳುಂಟು. ಇವು ದಕ್ಷಿಣದಲ್ಲಿ ಹೆಚ್ಚು ಒತ್ತಾಗಿವೆ. ಹಿಮಚಲನೆಯಿಂದಾದ ಸರೋವರಗಳು ಸುಮಾರು 1,500ಕ್ಕೂ ಅಧಿಕವಾಗಿವೆ. ಮಧ್ಯ ಮತ್ತು ದಕ್ಷಿಣಗಳಲ್ಲಿ ಇವನ್ನು ಹೆಚ್ಚಾಗಿ ಕಾಣಬಹುದು. ಇವುಗಳಲ್ಲಿ ವೋಟ್ರ್ಸ್‌-ಜಾರು ಅತ್ಯಂತ ದೊಡ್ಡದು.

ಗ್ರೀಸ್

ಯುರೋಪ್ ಖಂಡದ ಒಂದು ದೇಶ.

ಜರ್ಮನಿ

ಜರ್ಮನಿ (ಜರ್ಮನ್: ದೊಯಿಚ್ಲಂತ್), ಅಧಿಕೃತವಾಗಿ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ, ಕೇಂದ್ರ-ಪಶ್ಚಿಮ ಯುರೋಪಿನಲ್ಲಿ ಫೆಡರಲ್ ಸಂಸದೀಯ ಗಣತಂತ್ರ ದೇಶವಾಗಿದೆ.ಇದು 16 ಘಟಕ ರಾಜ್ಯಗಳನ್ನು ಒಳಗೊಂಡಿದೆ. 3,57,021 ಚದರ ಕಿಲೋಮೀಟರ್ (1,37,847 ಚದರ ಮೈಲಿ) ನಷ್ಟು ಪ್ರದೇಶವನ್ನು ಒಳಗೊಂಡಿದೆ ಮತ್ತು ಹೆಚ್ಚಾಗಿ ಸಮಶೀತೋಷ್ಣ ಕಾಲೋಚಿತ ಹವಾಮಾನವನ್ನು ಹೊಂದಿದೆ. 82 ದಶಲಕ್ಷ ನಿವಾಸಿಗಳನ್ನು ಹೊಂದಿರುವ ಜರ್ಮನಿ ಯುರೋಪಿನ ಅತ್ಯಂತ ಜನನಿಬಿಡ ಸದಸ್ಯ ದೇಶವಾಗಿದೆ. ಅಮೇರಿಕಾದ ನಂತರ ಇದು ವಿಶ್ವದ ಎರಡನೇ ಅತ್ಯಂತ ಜನಪ್ರಿಯ ವಲಸೆ ತಾಣವಾಗಿದೆ.ಜರ್ಮನಿಯ ರಾಜಧಾನಿ ಮತ್ತು ದೊಡ್ಡ ಮಹಾನಗರ ಬರ್ಲಿನ್. ಇತರೆ ಪ್ರಮುಖ ನಗರಗಳು ಹ್ಯಾಂಬರ್ಗ್, ಮ್ಯೂನಿಚ್, ಕಲೋನ್, ಫ್ರಾಂಕ್ಫರ್ಟ್, ಸ್ಟಟ್ಗಾರ್ಟ್ ಮತ್ತು ಡಸೆಲ್ಡಾರ್ಫ್ ಸೇರಿವೆ.ಯುರೋಪ್ ಖಂಡದ ಕೇಂದ್ರದಲ್ಲಿರುವ ಈ ರಾಷ್ಟ್ರವು ವಿಶ್ವದ ಅಗ್ರ ಔದ್ಯೋಗಿಕ ದೇಶಗಳಲ್ಲಿ ಒಂದು.

ಜೆಕ್ ಗಣರಾಜ್ಯ

ಜೆಕ್ ಗಣರಾಜ್ಯವು ಮಧ್ಯ ಯುರೋಪಿನಲ್ಲಿರುವ ಒಂದು ರಾಷ್ಟ್ರ. ಇದು ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಜೆಕ್ ಗಣರಾಜ್ಯವು ಉತ್ತರದಲ್ಲಿ ಪೋಲಂಡ್, ಪಶ್ಚಿಮ ಮತ್ತು ವಾಯವ್ಯದಲ್ಲಿ ಜರ್ಮನಿ, ದಕ್ಷಿಣದಲ್ಲಿ ಆಸ್ಟ್ರಿಯಾ ಮತ್ತು ಪೂರ್ವದಲ್ಲಿ ಸ್ಲೊವಾಕಿಯಾಗಳೊಂದಿಗೆ ಭೂಗಡಿ ಹೊಂದಿದೆ. ಹೀಗಾಗಿ ಈ ರಾಷ್ಟ್ರಕ್ಕೆ ಸಮುದ್ರತೀರವಿರುವುದಿಲ್ಲ. ದೇಶದ ರಾಜಧಾನಿ ಮತ್ತು ಅತಿ ದೊಡ್ಡ ನಗರ ಪ್ರಾಹಾ.

ನೆದರ್‍ಲ್ಯಾಂಡ್ಸ್

ನೆದರ್‌ಲ್ಯಾಂಡ್ಸ್ ಪಶ್ಚಿಮ ಯುರೋಪಿನ ಒಂದು ರಾಷ್ಟ್ರ. ನೆದರ್‌ಲ್ಯಾಂಡ್ಸ್ ರಾಜ್ಯವು ಈ ಮುಖ್ಯ ಭೂಭಾಗದ ಜೊತೆಗೆ ಕೆರಿಬ್ಬಿಯನ್ ಪ್ರದೇಶದ ನೆದರ್‌ಲ್ಯಾಂಡ್ಸ್ ಆಂಟಿಲ್ಲ್ಸ್ ಮತ್ತು ಅರೂಬಾ ಗಳನ್ನು ಸಹ ಒಳಗೊಂಡಿದೆ. ನೆದರ್‌ಲ್ಯಾಂಡ್ಸ್‌ನ ಉತ್ತರ ಮತ್ತು ಪಶ್ಚಿಮದಲ್ಲಿ ಉತ್ತರ ಸಮುದ್ರವಿದ್ದರೆ (ನಾರ್ತ್ ಸೀ) ದಕ್ಷಿಣದಲ್ಲಿ ಬೆಲ್ಜಿಯಮ್ ಹಾಗೂ ಪೂರ್ವದಲ್ಲಿ ಜರ್ಮನಿ ದೇಶಗಳಿವೆ.

ಫಿನ್‍ಲ್ಯಾಂಡ್

ಫಿನ್‍ಲ್ಯಾಂಡ್ ಉತ್ತರ ಯೂರೋಪಿನ ಒಂದು ದೇಶ. ಈ ದೇಶದಲ್ಲಿ ಫಿನ್ನಿಶ್ ಮುಖ್ಯವಾದ ಆಡುಭಾಷೆಯಾಗಿದೆ.

ಬಲ್ಗೇರಿಯ

ಬಲ್ಗೇರಿಯ (България, ಅಧಿಕೃತವಾಗಿ ಬಲ್ಗೇರಿಯ ಗಣರಾಜ್ಯ (Република България, ಪೂರ್ವ ಯುರೋಪ್ನ ಒಂದು ದೇಶ. ಇದರ ಉತ್ತರಕ್ಕೆ ರೊಮಾನಿಯ, ಪಶ್ಚಿಮಕ್ಕೆ ಸೆರ್ಬಿಯ ಮತ್ತು ಮ್ಯಾಸೆಡೋನಿಯ ಗಣರಾಜ್ಯ, ದಕ್ಷಿಣಕ್ಕೆ ಗ್ರೀಸ್ ಮತ್ತು ಟರ್ಕಿ ದೇಶಗಳಿವೆ. ಇದರ ಪೂರ್ವಕ್ಕೆ ಕಪ್ಪು ಸಮುದ್ರವಿದೆ. ಪ್ರಾಚೀನ ಕಾಲದ ಥ್ರಾಸ್, ಮೊಸಿಯ ಮತ್ತು ಮ್ಯಾಸೆಡೊನಿಯಗಳ ಪ್ರದೇಶದಲ್ಲಿ ಈಗ ಬಲ್ಗೇರಿಯ ಇದೆ.

ಬೆಲ್ಜಿಯಂ

ಬೆಲ್ಜಿಯಂ ಸಂಸ್ಥಾನವು ವಾಯವ್ಯ ಯುರೋಪಿನಲ್ಲಿನ ಒಂದು ರಾಷ್ಟ್ರ. ಇದರ ನೆರೆಯ ದೇಶಗಳೆಂದರೆ ನೆದರ್ಲೆಂಡ್ಸ್, ಜರ್ಮನಿ, ಫ್ರಾನ್ಸ್ ಮತ್ತು ಲಕ್ಸೆಂಬರ್ಗ್.

ಮಾಲ್ಟ

ಮಾಲ್ಟ ಮೆಡಿಟೆರೇನಿಯನ್ ಸಮುದ್ರದಲ್ಲಿನ ಒಂದು ದ್ವೀಪರಾಷ್ಟ್ರ. ಮಾಲ್ಟ ಒಟ್ಟು ಏಳು ದ್ವೀಪಗಳನ್ನು ಹೊಂದಿದೆ. ಮಾಲ್ಟ ದಕ್ಷಿಣ ಯುರೋಪ್‌ನ ಭಾಗವೆಂದು ಪರಿಗಣಿಸಲ್ಪಡುತ್ತದೆ. ಬಲು ಸಣ್ಣ ವಿಸ್ತಾರವುಳ್ಳ ಮಾಲ್ಟ ದಟ್ಟ ಜನವಸತಿಯನ್ನು ಹೊಂದಿದೆ.

ಮಾಸ್ಟ್ರಿಕ್ಟ್ ಒಪ್ಪಂದ

ಮಾಸ್ಟ್ರಿಕ್ಟ್ ಒಪ್ಪಂದ (ಅಧಿಕೃತವಾಗಿ ಯುರೋಪಿನ ಒಕ್ಕೂಟದ ಮೇಲಿನ ಒಪ್ಪಂದ) ೧೯೯೨ರ ಫೆಬ್ರುವರಿ ೭ರಂದು ನೆದರ್‌ಲ್ಯಾಂಡ್ಸ್‍ನ ಮಾಸ್ಟ್ರಿಕ್ಟ್ ನಗರದಲ್ಲಿ ಯುರೋಪಿನ ಒಕ್ಕೂಟ ಮತ್ತು ಯುರೋ ನಾಣ್ಯಪದ್ಧತಿಗಳನ್ನು ಸ್ಥಾಪಿಸಲು ಅನೇಕ ಯುರೋಪಿನ ದೇಶಗಳು ಸಹಿ ಹಾಕಿದ ಒಂದು ಒಪ್ಪಂದ.

ಯುರೋ

ಯುರೋ (ಚಿಹ್ನೆ: €; ಕೋಡು: EUR) ಯುರೋಪಿನ ಒಕ್ಕೂಟದ ೧೬ ದೇಶಗಳ ಅಧಿಕೃತ ನಗದು. ಈ ದೇಶಗಳು ಆಸ್ಟ್ರಿಯ, ಬೆಲ್ಜಿಯಂ, ಸೈಪ್ರಸ್, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಗ್ರೀಸ್, ಐರ್ಲ್ಯಾಂಡ್, ಇಟಲಿ, ಲಕ್ಸೆಂಬರ್ಗ್, ಮಾಲ್ಟ, ನೆದರ್ಲ್ಯಾಂಡ್ಸ್, ಪೋರ್ಚುಗಲ್, ಸ್ಲೊವಾಕಿಯ, ಸ್ಲೊವೇನಿಯ, ಮತ್ತು ಸ್ಪೇನ್.

ಯುರೋಪ್

ಯುರೋಪ್ ಪ್ರಪಂಚದ ೭ ಖಂಡಗಳಲ್ಲಿ ಎರಡನೇ ಅತ್ಯಂತ ಚಿಕ್ಕ ಖಂಡ. ಭೂಗೋಳಶಾಸ್ತ್ರದ ಪ್ರಕಾರ ಯುರೋಪ್ ಯುರೇಷ್ಯಾ ಮಹಾಖಂಡದ ಪಶ್ಚಿಮ ದ್ವೀಪಕಲ್ಪ. ಆದರೆ ಸಾಮಾಜಿಕವಾಗಿ, ರಾಜಕೀಯವಾಗಿ, ಐತಿಹಾಸಿಕವಾಗಿ ಇದು ಏಷ್ಯಾದಿಂದ ವಿಭಿನ್ನವಾಗಿರುವುದರಿಂದ ಇದನ್ನು ಪ್ರತ್ಯೇಕ ಖಂಡವಾಗಿ ಪರಿಗಣಿಸಲಾಗುತ್ತದೆ.

೨೫ ಸದಸ್ಯ ರಾಷ್ಟ್ರಗಳ ಯುರೋಪಿನ ಒಕ್ಕೂಟ ಈ ಖಂಡದ ಅತಿ ದೊಡ್ಡ ರಾಜಕೀಯ ಮತ್ತು ಆರ್ಥಿಕ ಒಕ್ಕೂಟ.

ಲಕ್ಸೆಂಬೊರ್ಗ್

ಲಕ್ಸೆಂಬರ್ಗ್ ಪಶ್ಚಿಮ ಯುರೋಪ್‌ನಲ್ಲಿನ ಒಂದು ಪುಟ್ಟ ರಾಷ್ಟ್ರ. ಸುತ್ತಲೂ ಭೂಪ್ರದೇಶಗಳಿಂದ ಆವೃತವಾಗಿರುವ ಲಕ್ಸೆಂಬರ್ಗ್ ಜರ್ಮನಿ, ಫ್ರಾನ್ಸ್‌ ಮತ್ತು ಬೆಲ್ಜಿಯಂಗಳ ನಡುವೆ ಹುದುಗಿದೆ. ಲಕ್ಸೆಂಬರ್ಗ್ ಅತ್ಯುನ್ನತ ಮಟ್ಟದಲ್ಲಿ ಅಭಿವೃದ್ಧಿ ಹೊಂದಿರುವ ರಾಷ್ಟ್ರವಾಗಿದ್ದು ವಿಶ್ವದಲ್ಲಿಯೇ ಅತಿ ಹೆಚ್ಚಿನ ತಲಾವಾರು ಆಂತರಿಕ ಉತ್ಪನ್ನ ಹೊಂದಿದೆ.

ಲಾಟ್ವಿಯ

ಲಾಟ್ವಿಯ (ˈlætviːə) ( ಅಧಿಕೃತವಾಗಿ ಲಾಟ್ವಿಯ ಗಣರಾಜ್ಯ ) ಉತ್ತರ ಯುರೋಪ್‌ನಲ್ಲಿನ ಒಂದು ರಾಷ್ಟ್ರ. ಲಾಟ್ವಿಯದ ಉತ್ತರಕ್ಕೆ ಎಸ್ಟೋನಿಯ, ದಕ್ಷಿಣದಲ್ಲಿ ಲಿಥುವೇನಿಯ, ಪೂರ್ವಕ್ಕೆ ಬೆಲಾರುಸ್ ಹಾಗೂ ರಷ್ಯಾ ಮತ್ತು ಪಷ್ಚಿಮದಲ್ಲಿ ಬಾಲ್ಟಿಕ್ ಸಮುದ್ರಗಳು ಇವೆ. ಲಾಟ್ವಿಯ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ.

ಸಿಪ್ರಸ್

ಸೈಪ್ರಸ್ ( Κύπρος, Kýpros ,ಅಧಿಕೃತವಾಗಿ ಸೈಪ್ರಸ್ ಗಣರಾಜ್ಯ ) ಮೆಡಿಟೆನೇನಿಯನ್ ಸಮುದ್ರದ ಪೂರ್ವಭಾಗದಲ್ಲಿರುವ ಒಂದು ದ್ವೀಪರಾಷ್ಟ್ರ. ಸೈಪ್ರಸ್ ಟರ್ಕಿಯ ದಕ್ಷಿಣಕ್ಕೆ ಹಾಗೂ ಗ್ರೀಸ್‌ನ ಅಗ್ನೇಯಕ್ಕೆ ಮತ್ತು ಈಜಿಪ್ಟ್‌ನ ಉತ್ತರಕ್ಕಿದೆ. ಹಿಂದೆ ಬ್ರಿಟಿಷ್ ಸಾಮ್ರಾಜ್ಯದ ಅಂಗವಾಗಿದ್ದ ಸೈಪ್ರಸ್ ೧೯೬೦ರಲ್ಲಿ ಸ್ವತಂತ್ರರಾಷ್ಟ್ರವಾಯಿತು.

ಸ್ಪೇನ್

ಸ್ಪೇನ್ ಅಥವಾ ಸ್ಪೇನ್ ಸಂಸ್ಥಾನ (ಸ್ಪ್ಯಾನಿಷ್:Reino de España), ಆಗ್ನೇಯ ಯುರೋಪಿನ ಐಬೀರಿಯನ್ ದ್ವೀಪಕಲ್ಪದಲ್ಲಿರುವ ಒಂದು ದೇಶ. ಇದರ ದಕ್ಷಿಣ ಮತ್ತು ಪೂರ್ವದಲ್ಲಿ ಮೆಡಿಟರೇನಿಯನ್ ಸಮುದ್ರ ಮತ್ತು ಜಿಬ್ರಾಲ್ಟರ್; ಉತ್ತರದಲ್ಲಿ ಫ್ರಾನ್ಸ್, ಅಂಡೊರ ಮತ್ತು ಬಿಸ್ಕೆ ಕೊಲ್ಲಿ; ಪಶ್ಚಿಮದಲ್ಲಿ ಅಟ್ಲಾಂಟಿಕ್ ಮಹಾಸಾಗರ ಮತ್ತು ಪೋರ್ಚುಗಲ್ ಇವೆ. ಮೆಡಿಟರೇನಿಯನ್‌ನಲ್ಲಿರುವ ಬಲೇರಿಕ್ ದ್ವೀಪ, ಅಟ್ಲಾಂಟಿಕ್ ಮಹಾಸಗರದಲ್ಲಿರುವ ಕೆನರಿ ದ್ವೀಪ ಮತ್ತು ಉತ್ತರ ಆಫ್ರಿಕದಲ್ಲಿ ಮೊರೊಕ್ಕೊ ನಗರದ ಗಡಿಯಲ್ಲಿರುವ ಸಿಯುಟ ಹಾಗು ಮೆಲಿಲ್ಲ ನಗರಗಳು ಸ್ಪೇನ್ ದೇಶಕ್ಕೆ ಸೇರಿವೆ. 504,030 ಕಿಮಿ² ವಿಸ್ತೀರ್ಣ ಹೊಂದಿರುವ ಸ್ಪೇನ್, ಫ್ರಾನ್ಸಿನ ನಂತರ ಪಶ್ಚಿಮ ಯುರೋಪಿನಲ್ಲಿ ೨ನೆಯ ದೊಡ್ಡ ದೇಶವಾಗಿದೆ. ಇದು ಯುರೋಪಿಯನ್ ಒಕ್ಕೂಟ ಮತ್ತು ನೇಟೊ ಸಂಘಗಳ ಸದಸ್ಯವಾಗಿದೆ. ಈ ದೇಶದ ರಾಜಧಾನಿ ಮ್ಯಾಡ್ರಿಡ್.

ಸ್ಪೇನಿನ ಈಶಾನ್ಯ ದಿಕ್ಕಿನಲ್ಲಿರುವ ಅತ್ಯಂತ ಶ್ರೀಮಂತ ಪ್ರಾಂತ್ಯ ಕ್ಯಾಟಲೋನಿಯಾ. ಸ್ಪೇನಿನ ಒಳಗೆ ಪ್ರತ್ಯೇಕ ರಾಷ್ಟ್ರದ ರೀತಿಯಲ್ಲೇ ಅದು ಕಾರ್ಯನಿರ್ವಹಿಸುತ್ತದೆ. ಆ ಮಟ್ಟಿನ ಸ್ವಾಯತ್ತತೆ ಅದಕ್ಕೆ ಇದೆ. ಬಾರ್ಸಿಲೋನಾ ಅದರ ರಾಜಧಾನಿ. ಕ್ಯಾಟಲೋನಿಯಾ ತನ್ನದೇ ಆದ ಭಾಷೆ ಹೊಂದಿದೆ. ತನ್ನದೇ ಆದ ಸಂಸತ್ತು, ಧ್ವಜ, ರಾಷ್ಟ್ರಗೀತೆಯನ್ನೂ ಹೊಂದಿದೆ. ಪ್ರತ್ಯೇಕ ಪೊಲೀಸ್‌ ಪಡೆಯನ್ನೂ ಕ್ಯಾಟಲೋನಿಯಾ ಸರ್ಕಾರ ಹೊಂದಿದೆ. ಶಿಕ್ಷಣ, ಆರೋಗ್ಯದಂತಹ ಕೆಲವು ಸಾರ್ವಜನಿಕ ಸೇವೆಗಳನ್ನು ಸ್ಥಳೀಯ ಸರ್ಕಾರವೇ ನಿರ್ವಹಿಸುತ್ತದೆ. 1,000 ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿರುವ ಕ್ಯಾಟಲೋನಿಯಾ, ಸ್ಪೇನಿನ ಅತ್ಯಂತ ಸಿರಿವಂತ ಮತ್ತು ಹೆಚ್ಚು ಉತ್ಪಾದಕ ಸಾಮರ್ಥ್ಯ ಹೊಂದಿರುವ ಪ್ರಾಂತ್ಯಗಳಲ್ಲಿ ಒಂದು. ಪ್ರವಾಸಿ ಕೇಂದ್ರವಾಗಿಯೂ ಜನಪ್ರಿಯ. ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ದೊಡ್ಡ ದೊಡ್ಡ ಕಂಪೆನಿಗಳು, ಸಂಶೋಧನಾ ಸಂಸ್ಥೆಗಳು ಇಲ್ಲಿವೆ. ಕ್ಯಾಟಲೋನಿಯಾ ೨೦೧೭ರ ಅಕ್ಟೋಬರ್ ನಲ್ಲಿ ಸ್ವಾತಂತ್ರ್ಯ ಹೊಂದುವ ಕುರಿತು ಒಂದು ಜನಮತ ಸಂಗ್ರಹ ನಡೆಸಿದೆ.

ಸ್ಲೊವಾಕಿಯ

ಸ್ಲೊವಾಕಿಯ ಮಧ್ಯ ಯುರೋಪಿನ ಒಂದು ರಾಷ್ಟ್ರ. ಹಿಂದೆ ಜೆಕೊಸ್ಲೊವಾಕಿಯದ ಒಂದು ಭಾಗವಾಗಿದ್ದ ಸ್ಲೊವಾಕಿಯ, ೧೯೯೩ರಲ್ಲಿ ಜೆಕೊಸ್ಲೊವಾಕಿಯದ ವಿಸರ್ಜನೆಯಾದಾಗ ಸ್ವತಂತ್ರ ರಾಷ್ಟ್ರವಾಗಿ ಉದಯಿಸಿತು. ಸ್ಲೊವಾಕಿಯದ ಪಶ್ಚಿಮದಲ್ಲಿ ಜೆಕ್ ಗಣರಾಜ್ಯ ಮತ್ತು ಆಸ್ಟ್ರಿಯ, ಉತ್ತರಕ್ಕೆ ಪೋಲೆಂಡ್, ಪೂರ್ವದಲ್ಲಿ ಯುಕ್ರೇನ್ ಹಾಗೂ ದಕ್ಷಿಣದಲ್ಲಿ ಹಂಗರಿ ದೇಶಗಳಿವೆ. ಯುರೋಪಿಯನ್ ಒಕ್ಕೂಟದ ಸದಸ್ಯರಾಷ್ಟ್ರವಾಗಿರುವ ಸ್ಲೊವಾಕಿಯದ ರಾಜಧಾನಿ ಬ್ರಾಟಿಸ್ಲಾವಾ.

ಸ್ಲೊವೇನಿಯ

ಸ್ಲೊವೇನಿಯ (ಅಧಿಕೃತವಾಗಿ ಸ್ಲೊವೇನಿಯ ಗಣರಾಜ್ಯ) ಮಧ್ಯ ಯುರೋಪಿನ ದಕ್ಷಿಣ ಭಾಗದಲ್ಲಿರುವ ಒಂದು ರಾಷ್ಟ್ರ. ಸ್ಲೊವೇನಿಯದ ಪಶ್ಚಿಮಕ್ಕೆ ಇಟಲಿ, ಪೂರ್ವ ಮತ್ತು ದಕ್ಷಿಣದಲ್ಲಿ ಕ್ರೊವೆಶಿಯ, ಈಶಾನ್ಯಕ್ಕೆ ಹಂಗರಿ ಹಾಗೂ ಉತ್ತರದಲ್ಲಿ ಆಸ್ಟ್ರಿಯ ದೇಶಗಳಿವೆ. ನೈಋತ್ಯದಲ್ಲಿ ಏಡ್ರಿಯಾಟಿಕ್ ಸಮುದ್ರವಿದೆ. ರಾಷ್ಟ್ರದ ರಾಜಧಾನಿ ಲ್ಯೂಬ್ಲಿಯಾನ.

ಹಂಗರಿ

ಹಂಗರಿ (ಅಧಿಕೃತವಾಗಿ ಹಂಗರಿ ಗಣರಾಜ್ಯ) ಸ್ಥಳೀಯ ಭಾಷೆಯಲ್ಲಿ ಮಗ್ಯಾರ್ ಗಣರಾಜ್ಯವೆಂದು ಕರೆಯಲ್ಪಡುತ್ತದೆ. ಹಂಗರಿ ಮಧ್ಯ ಯುರೋಪಿನ ಒಂದು ರಾಷ್ಟ್ರ. ಹಂಗರಿಯನ್ನು ಎಲ್ಲಾ ದಿಕ್ಕುಗಳಲ್ಲಿಯೂ ಇತರ ರಾಷ್ಟ್ರಗಳು ಸುತ್ತುವರಿದಿವೆ. ಆಸ್ಟ್ರಿಯ, ಸ್ಲೊವಾಕಿಯ, ಉಕ್ರೈನ್, ರೊಮಾನಿಯ, ಸೆರ್ಬಿಯ, ಕ್ರೊಯೆಶಿಯ ಮತ್ತು ಸ್ಲೊವೇನಿಯ ದೇಶಗಳು ಹಂಗರಿಯೊಂದಿಗೆ ಭೂಗಡಿಗಳನ್ನು ಹೊಂದಿವೆ. ರಾಷ್ಟ್ರದ ರಾಜಧಾನಿ ಬುಡಾಪೆಸ್ಟ್. ನಾಡಿನ ಅಧಿಕೃತ ಭಾಷೆ ಹಂಗೇರಿಯನ್ ಅಥವಾ ಮಗ್ಯಾರ್.

ಇತರ ಭಾಷೆಗಳು

This page is based on a Wikipedia article written by authors (here).
Text is available under the CC BY-SA 3.0 license; additional terms may apply.
Images, videos and audio are available under their respective licenses.