ಮೇ ೨೯

ಮೇ ೨೯ - ಮೇ ತಿಂಗಳ ಇಪ್ಪತ್ತ ಒಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೪೯ನೇ (ಅಧಿಕ ವರ್ಷದಲ್ಲಿ ೧೫೦ನೇ) ದಿನ. ಟೆಂಪ್ಲೇಟು:ಮೇ ೨೦೧೯

ಪ್ರಮುಖ ಘಟನೆಗಳು

ಜನನ

ನಿಧನ

ಹಬ್ಬಗಳು/ಆಚರಣೆಗಳು

ಹೊರಗಿನ ಸಂಪರ್ಕಗಳು

ಉಮೇಶ್ ಯಾದವ್

ಉಮೇಶ್ ಕುಮಾರ್ ತಿಲಕ್ ಯಾದವ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ವೇಗಿ. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಆಡುತ್ತಾರೆ.

ಎರಿಟ್ರಿಯ

(ಕೆಲವು ಅಕ್ಷರಗಳು ಕಾಣುತ್ತಿಲ್ಲವೇ?)

ಎರಿಟ್ರಿಯ (ಗಿಇಜ್ ኤርትራ ; ʾĒrtrā) ಪೂರ್ವ ಆಫ್ರಿಕಾದ ಉತ್ತರದಲ್ಲಿ ಕೆಂಪು ಸಮುದ್ರದ ಅಂಚಿಗಿರುವ ದೇಶ. ಜನವರಿ ೧, ೧೮೯೦ರಲ್ಲಿ ಇಟಲಿಯ ವಸಾಹತುಗಳ ಸಮ್ಮಿಲನವಾಗಿ ಎರಿಟ್ರಿಯ ಸ್ಥಾಪಿತವಾಯಿತು. ಆಧುನಿಕ ಎರಿಟ್ರಿಯ ದೇಶ ೧೯೬೧ರಿಂದ ೧೯೯೧ರ ವರೆಗಿನ ೩೦ ವರ್ಷಗಳ ಯುದ್ಧದ ನಂತರ ಇತ್ಯೋಪಿಯದಿಂದ ಸ್ವಾತಂತ್ರ್ಯ ಪಡೆಯಿತು. ೧೯೯೭ರ ಸಂವಿಧಾನದ ಪ್ರಕಾರ ಎರಿಟ್ರಿಯ ರಾಷ್ಟ್ರಪತಿ ಆಳ್ವಿಕೆ ಆಧಾರಿತ ಸಂಸದೀಯ ಗಣರಾಜ್ಯ. ಆದರೆ ಮೇ ೧೯೯೮ರಲ್ಲಿ ಇತಿಯೋಪಿಯದೊಂದಿಗೆ ಪುನಃ ಯುದ್ಧ ಪ್ರಾರಂಭವಾದುದರಿಂದ ಈ ಸಂವಿಧಾನ ಕಾರ್ಯಕ್ಕೆ ಬಂದಿಲ್ಲ. ಚುನಾವಣೆಗಳು ನಡೆಯದೆ ಪ್ರಸಕ್ತವಾಗಿ ಎರಿಟ್ರಿಯ ಸಂಪೂರ್ಣ ರಾಷ್ಟ್ರಪತಿ ಆಳ್ವಿಕೆಯಲ್ಲಿ ಇದೆ.

ಒಂಬತ್ತು ಜನಾಂಗಗಳಿಗೆ ಸೇರುವ ಜನರನ್ನು ಹೊಂದಿರುವ ಎರಿಟ್ರಿಯದಲ್ಲಿ ಸುನ್ನಿ ಇಸ್ಲಾಂ ಮತ್ತು ಸಾಂಪ್ರದಾಯಿಕ ಕ್ರೈಸ್ತ ಧರ್ಮ ಮುಖ್ಯ ಧರ್ಮಗಳು. ಆಡಳಿತದಲ್ಲಿ ಟಿಗ್ರಿನ್ಯ, ಅರಬ್ಬಿ ಮತ್ತು ಆಂಗ್ಲ ಉಪಯೋಗಿಸಲ್ಪಟ್ಟರೂ, ಯಾವುದೂ ಅಧಿಕೃತ ಭಾಷೆಯಲ್ಲ.

ಏರ್ ಸರ್ಬಿಯಾ

ಏರ್ ಸರ್ಬಿಯಾ (ಏರ್ ಸರ್ಬಿಯಾ ಎಂದು ಬರೆಯಲಾಗುತ್ತದೆ) ಧ್ವಜ ಹೊತ್ತ ಸೆರ್ಬಿಯಾ ಅತಿದೊಡ್ಡ ವಿಮಾನಯಾನ. ಇದು 2013ರಲ್ಲಿ ಏರ್ ಸರ್ಬಿಯಾ ಎಂದು ಮರುನಾಮಕರಣ ಮಾಡಲಾಯಿತು ಅಲ್ಲಿಯವರೆಗೆ ಜಾಟ್ ಏರ್ವೇಸ್ ಎಂದು ಕರೆಯಲಾಗುತ್ತಿತ್ತು. 26 ಅಕ್ಟೋಬರ್ 2013ರಲ್ಲಿ ತನ್ನ ಹೊಸ ಹೆಸರಿನಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿತು ಏರ್ಲೈನ್ ಬೆಲ್ಗ್ರೇಡ್ ನಿಕೋಲಾ ಟೆಸ್ಲಾ ವಿಮಾನನಿಲ್ದಾಣವನ್ನು ಅದರ ಕೇಂದ್ರವಾಗಿ ಹೊಂದಿದೆ.

ಕಾರ್ನ್ಟೆನ್

ಕಾರಿಂಥಿಯಾ (German: [Kärnten] , Slovene: [Koroška] ) ಎಂಬುದು ದಕ್ಷಿಣ ತುದಿಯಲ್ಲಿರುವ ಆಸ್ಟ್ರಿಯನ್ ರಾಜ್ಯ ಅಥವಾ ನೆಲ . ಪೂರ್ವ ಆಲ್ಪ್ಸ್ ನಲ್ಲಿ ನೆಲೆಗೊಂಡಿರುವ ಇದು ಮುಖ್ಯವಾಗಿ ಪರ್ವತಗಳು ಹಾಗು ಸರೋವರಗಳಿಗೆ ಪ್ರಸಿದ್ಧವಾಗಿದೆ.

ಇಲ್ಲಿನ ಜನರು ಪ್ರಧಾನವಾಗಿ ಜರ್ಮನ್ ಭಾಷೆಯನ್ನು ಮಾತನಾಡುವುದರ ಜೊತೆಗೆ ವಿಶಿಷ್ಟವಾದ(ಸುಲಭವಾಗಿ ಗುರುತಿಸಬಹುದಾದ) ಸದರನ್ ಆಸ್ಟ್ರೋ-ಬವಾರಿಯನ್ ಉಪಭಾಷೆಯನ್ನು ಮಾತನಾಡುತ್ತಾರೆ, ಇದರಲ್ಲಿ ಎರಡು ವ್ಯಂಜನಗಳ ಮೊದಲು ಬರುವ ಜರ್ಮನ್ ಭಾಷೆಯ ಎಲ್ಲ ಚಿಕ್ಕ ಸ್ವರಾಕ್ಷರಗಳು ಉದ್ದವಾಗಿರುತ್ತದೆ("ಕಾರಿಂಥಿಯನ್ ವೋವಲ್ ಸ್ಟ್ರೆಚಿಂಗ್") ಕಾರಿಂಥಿಯನ್ ಸ್ಲೋವೀನ್ಸ್ ಎಂದು ಕರೆಯಲಾಗುವ ಸ್ಲೊವೆನ್‌-ಭಾಷೆಯನ್ನು ಮಾತನಾಡುವ ಅಲ್ಪಸಂಖ್ಯಾತರು, ರಾಜ್ಯದ ದಕ್ಷಿಣ ಹಾಗು ಆಗ್ನೇಯ ಭಾಗದಲ್ಲಿ ನೆಲೆಗೊಂಡಿದ್ದಾರೆ. ಇದರ ಗಾತ್ರವನ್ನು ನಿಖರವಾಗಿ ನಿರ್ಧರಿಸಲು ಸಾಧ್ಯವಾಗಿಲ್ಲ. ಏಕೆಂದರೆ ಜನಾಂಗೀಯ ಗುಂಪಿನ ಪ್ರತಿನಿಧಿಗಳು ಗಣನೆಗೆ ನಿರಾಕರಿಸುತ್ತಾರೆ. ೨೦೦೧ರ ಜನಗಣತಿಯಲ್ಲಿ ಅವರು ಮಾತನಾಡುವ ದಿನಬಳಕೆಯಲ್ಲಿ ಬಳಸುವ ಭಾಷೆಯ ಬಗ್ಗೆ ಪಡೆಯಲಾದ ಅಂಕಿಅಂಶವು ಪ್ರಶ್ನಾರ್ಹವಾದ ಕಾರಣಕ್ಕೆ ಜನಗಣತಿಯನ್ನು ಬಹಿಷ್ಕರಿಸಲು ಶಿಫಾರಸುಗಳನ್ನು ಮಾಡಲಾಯಿತು. (೧೨,೫೫೪ ಜನರು ಅಥವಾ ೫೨೭,೩೩೩ರಷ್ಟು ಒಟ್ಟು ಜನಸಂಖ್ಯೆಯಲ್ಲಿ ೨.೩೮%ರಷ್ಟು ಜನರು).

ಕಾರಿಂಥಿಯಾದ ಪ್ರಮುಖ ಉದ್ಯೋಗಗಳೆಂದರೆ ಪ್ರವಾಸೋದ್ಯಮ, ಎಲೆಕ್ಟ್ರಾನಿಕ್ಸ್, ಇಂಜಿನಿಯರಿಂಗ್, ಅರಣ್ಯಶಾಸ್ತ್ರ ಹಾಗು ಕೃಷಿ. ಬಹುರಾಷ್ಟ್ರೀಯ ಸಂಸ್ಥೆಗಳಾದ ಫಿಲಿಪ್ಸ್ ಹಾಗು ಸೈಮನ್ಸ್ ಇಲ್ಲಿ ದೊಡ್ಡ ಮಟ್ಟದ ಕಾರ್ಯಾಚರಣೆಗಳನ್ನು ಹೊಂದಿವೆ.

ಕೆ. ವೆಂಕಟಲಕ್ಷಮ್ಮ

ಡಾ. ಕೆ. ವೆಂಕಟಲಕ್ಷ್ಮಮ್ಮನವರು (ಮೇ ೨೯, ೧೯೦೬ - ಜುಲೈ ೨, ೨೦೦೨) ಮೈಸೂರು ಶೈಲಿಯ ಭರತನಾಟ್ಯದಲ್ಲಿ ವಿಶ್ವಪ್ರಸಿದ್ಧಿ ಪಡೆದವರು.

ಟಿ.ಎಮ್.ಎ.ಪೈ

ತೋನ್ಸೆ ಮಾಧವ ಅನಂತ ಪೈ (ಎಪ್ರಿಲ್ ೩೦,೧೮೯೮ –ಮೇ ೨೯,೧೯೭೯), ವೈದ್ಯ ,ಶಿಕ್ಷಣತಜ್ಞ, ಆರ್ಥಶಾಸ್ತ್ರಜ್ಞ ಮತ್ತು ಮಾನವತಾವಾದಿ.ಇವರು ಆಧುನಿಕ ಮಣಿಪಾಲದ ನಿರ್ಮಾತೃ. ಇವರಿಗೆ ೧೯೭೨ರಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

ಡೀಪ್ ವಾಟರ್ ಹೊರೈಸನ್ ತೈಲ ಸೋರಿಕೆ

ಇದನ್ನು ಡೀಪ್ ವಾಟರ್ ಹರೈಸನ್ ನ ಸೋರಿಕೆ,ಆಳ ನೀರಿನಡಿಯ ಪರಿಧಿ ಯಲ್ಲಿನ ತೈಲ ಸೋರಿಕೆ ಎನ್ನುತ್ತಾರೆ.(ಅದನ್ನು BP ಕಂಪನಿಯ ತೈಲ ಸೋರಿಕೆಯ ನಷ್ಟ ವೂ ಎನ್ನಲಾಗುತ್ತದೆ.ಗಲ್ಫ್ ಆಫ್ ಮೆಕ್ಸಿಕೊ ಆಯಿಲ್ ಸ್ಪಿಲ್ , ಮೆಕ್ಸಿಕೊ ಕೊಲ್ಲಿ ತಳದಲ್ಲಿ ತೈಲ ಸೋರಿಕೆ ಅಥವಾ BP ತೈಲ ದುರಂತ ಅಥವಾ ಮಾಕೊಂಡೊ ಬ್ಲೊಔಟ್ ಅಂದರೆ ಮೆಕ್ಸಿಕೊ ಕೊಲ್ಲಿಯಲ್ಲಿ ತೈಲ ಸೋರಿಕೆ ಯಿಂದ ಆದ ಅನಾಹುತ,ನಷ್ಟ ಎನ್ನಲಾಗಿದ್ದು ಇದು ಸುಮಾರು ಮೂರು ತಿಂಗಳ ಕಾಲ ೨೦೧೦ರಲ್ಲಿ ಸೋರಿ ಹರಿದು ಚೆಲ್ಲಾ ಪಿಲ್ಲಿಯಾಗಿ ನಾಶಗೊಂಡಿದೆ. ಈ ಸೋರಿಕೆಯ ದುಷ್ಪರಿಣಾಮವು ಈ ಬಾವಿಯ ಮುಚ್ಚಳ ಹಾಕಿದ್ದರೂ ಅದರ ಸೋರಿಕೆ ನಷ್ಟ ಇನ್ನೂ ನಿಂತಿಲ್ಲ. ಇದು ಪೆಟ್ರೊಲಿಯಮ್ ಉದ್ಯಮದ ಇತಿಹಾಸದಲ್ಲೇ ಅತ್ಯಧಿಕ ಇಂಧನ ತೈಲ ಸೋರಿಕೆಯ ನಷ್ಟ, ಸಮುದ್ರ ತಳದಲ್ಲಿ ಸಂಭವಿಸಿದ ಅತಿ ದೊಡ್ಡ ಅನಾಹುತವೆನಿಸಿದೆ. ಈ ಸೋರಿಕೆಯು ಸಮುದ್ರ-ಮಟ್ಟದ ಕೆಳಗಿನ ಡೀಪ್ ವಾಟರ್ ಹರೈಸನ್ ನ ತೈಲ ಬುಗ್ಗೆಯಿಂದ ಆಳವಾದ ಪರಿಧಿಯ ಸ್ಪೋಟಕ್ಕೆ ಕಾರಣವಾದದ್ದು ಏಪ್ರಿಲ್ ೨೦,೨೦೧೦ ರಲ್ಲಿ, ಇದು ಎಲ್ಲರನ್ನೂ ಆತಂಕಕ್ಕೀಡು ಮಾಡಿತ್ತು. ಈ ಸ್ಪೋಟವು ಅದರ ಸಮಾಂತರದಲ್ಲಿ ಕೆಲಸ ಮಾಡುತ್ತಿದ್ದ ೧೧ ಜನರನ್ನು ಬಲಿ ತೆಗೆದುಕೊಂಡಿತಲ್ಲದೇ ೧೭ ಜನರು ಗಾಯಗೊಂಡರು. ಆಗ ಜುಲೈ ೧೫ ರಂದು ವ್ಯರ್ಥವಾಗಿ ಹರಿದು ಹೋಗುವುದನ್ನು ತಪ್ಪಿಸಲು ಉಕ್ಕೇರುತ್ತಿದ್ದ ಬಾವಿಯ ಮೇಲ್ಭಾಗವನ್ನು ಮುಚ್ಚಳದಿಂದ ಬಂದ್ ಮಾಡಲಾಯಿತು.ಇದು ಸುಮಾರು 4.9 million barrels (780×10^3 m3)ರಷ್ಟು ಅಥವಾ ೨೦೫.೮ ದಶಲಕ್ಷ ಗ್ಯಾಲನ್ ಗಳಷ್ಟು ಕಚ್ಚಾ ತೈಲ ದ ನಷ್ಟಕ್ಕೆ ಕಾರಣವಾಗಿತ್ತು. ಅದನ್ನು ಒಂದು ಅಂದಾಜಿನ ಪ್ರಕಾರ 53,000 barrels per day (8,400 m3/d)ಪ್ರಮಾಣದ ತೈಲ ಬಾವಿಯಿಂದ ರಭಸದಿಂದ ನುಗ್ಗುತ್ತಿದ್ದಾಗ ಬಿರಡೆ ಕೂರಿಸಲು ಹೋದಾಗ ಈ ತೀವ್ರ ಪ್ರಮಾಣದ ಸೋರಿಕೆ ಕಂಡು ಬಂದಿದೆ. ಆದರೆ ನಂತರ ನಿಧಾನವಾಗಿ ಅನಿಲ ಬುಗ್ಗೆಯಿಂದ ಹೊರಬರುತ್ತಿದ್ದ ಸೋರಿಕೆಯ ಪೋಲಾಗುವ ಪ್ರಮಾಣ ಕಡಿಮೆಯಾಯಿತು.ಯಾವಾಗ ಬುಗ್ಗೆಯಲ್ಲಿ ಹೈಡ್ರೊಕಾರ್ಬೊರೇಟ್ ಇಳಿಮುಖತೆ ಕಂಡಿತೋ ಆಗ ಅದರ ಪ್ರಮಾಣ ಕಡಿಮೆಗೊಂಡಿತು. ನಂತರ ಸೆಪ್ಟೆಂಬರ್ ೧೯ ರಂದು ಪರಿಹಾರ ಕಾರ್ಯವು ಬಾವಿಯ ತೆರೆದ ಬಾಯಿಯನ್ನು ಬಂದು ಮಾಡುವಲ್ಲಿ ಯಶಸ್ವಿಯಾಗಿ, ಒಕ್ಕೂಟ ಸರ್ಕಾರ "ಪರಿಣಾಮಕಾರಿಯಾಗಿ ಇದನ್ನು ಇಲ್ಲ"ವಾಗಿಸಿದೆ ಎಂದು ಪ್ರಕಟಿಸಿತು.ಈ ತೈಲ ಸೋರಿಕೆಯಿಂದ ಸಮುದ್ರದ ನೌಕಾವಲಯಕ್ಕೆ ಹಾನಿಯಾಯಿತಲ್ಲದೇ,ವನ್ಯಜೀವಿಗಳ ನೆಲೆಗಳಿಗೂ ತೊಂದರೆಯಾಯಿತು..ಅದಲ್ಲದೇ ಕೊಲ್ಲಿ ರಾಷ್ಟ್ರದ ಮೀನುಗಾರಿಕೆ ಮತ್ತು ಪ್ರವಾಸೋದ್ಯಮಗಳಿಗೆ ಹೊಡೆತ ಬಿತ್ತು. ಕಳೆದ ನವೆಂಬರ್ ೨೦೧೦ ನಲ್ಲಿ4,200 square miles (11,000 km2) ಕೊಲ್ಲಿಯಲ್ಲಿನ ಮೀನುಗಾರರ ಬಲೆಗಳಲ್ಲಿ ಕಪ್ಪು ಟಾರ್ ನಂತಹ ವಸ್ತು ಸಿಕ್ಕಿಹಾಕಿಕೊಳ್ಳಲು ಆರಂಭಿಸಿದಾಗ ಮತ್ತೆ ಕಡಲಿನಲ್ಲಿನ ಕೆಲಸಗಳನ್ನು ಕೆಲಕಾಲ ಸ್ಥಗಿತಗೊಳಿಸಲಾಯಿತು.ಲೂಸಿಯಾನಾ ಕಡಲತೀರದ ಈ ಸೋರಿಕೆ ಪ್ರಮಾಣ ಜುಲೈನಲ್ಲಿ ೨೮೭ರಿಂದ 320 miles (510 km)ನವೆಂಬರ್ ವರೆಗೆ ತನ್ನ ಏರಿಕೆ ಪಡೆದಿತ್ತು.ತಮ್ಮ ಸಾಮಗ್ರಿ ಹೊತ್ತ ಸಾಗಣೆಯ ಈ ಹಗುರ ಹಡಗುಗಳು ಕಡಲಿನಲ್ಲಿ ಮತ್ತು ದಂಡೆಗಳಲ್ಲಿ ಹಲವಾರು ಅಡತಡೆಗಳನ್ನು ಅಡ್ಡಿಆತಂಕಗಳನ್ನು ಎದುರಿಸಬೇಕಾಯಿತು.ನೂರಾರು ಮೈಲಿಗಳಲ್ಲಿ ಹರಡುವ ಈ ಚೆದುರುವಿಕೆಯನ್ನು ನಿಲ್ಲಿಸುವ ಪ್ರಯತ್ನಗಳನ್ನು ಮಾಡಲಾಯಿತು.ಜವಳು ಭೂಮಿ ಎಡೆಗೆ ಮತ್ತು ಹರಡುವಿಕೆಯನ್ನು ತಪ್ಪಿಸಲು ಹಲವು ಕ್ರಮ ಕೈಗೊಳ್ಳಲಾಯಿತು, ವಿಜ್ಞಾನಿಗಳ ಪ್ರಕಾರ ನೀರಿನಾಳದಲ್ಲಿ ಸೇರಿಕೊಂಡ ಈ ತೈಲವು ಮೇಲ್ಭಾಗದಲ್ಲಿ ಗೋಚರಿಸಲಿಲ್ಲ.ಆದರೆ ಸುತ್ತಮುತ್ತಲಿನ ವಾತಾವರಣವು80-square-mile (210 km2) "ಸಾವಿನ ವಲಯ"ಸೃಷ್ಟಿಸಿ ತಳದಲ್ಲಿನ ಬಿಪಿ ತೈಲ ಭಾವಿಯು ಎಲ್ಲೆಡೆಗೂ ಎಲ್ಲವೂ ನಾಶವಾಗಿದೆ ಎಂಬ ಸಂದೇಶವನ್ನು ನೀಡುತ್ತಿದೆ ಎಂದು ಸ್ವತಂತ್ರ ಸಂಶೋಧಕ ಸಾಮಂತಾ ಜೊಯೆ ಅವರೂ ಅಭಿಪ್ರಾಯಪಡುತ್ತಾರೆ.ಆಗ U.S. ಸರ್ಕಾರವು, BPಕಂಪನಿ ಯೇ ಇದಕ್ಕೆ ಕಾರಣಕರ್ತನಾಗಿದ್ದು ಎಲ್ಲಾ ಹಾನಿಯ ಮತ್ತು ಅದನ್ನು ಶುಚಿಗೊಳಿಸುವ ಎಲ್ಲಾ ವೆಚ್ಚಗಳನ್ನು ಅದು ಭರಿಸುವಂತೆ ಅದು ಹೇಳಿತು. ನಂತರ BP ಕಂಪನಿಯು ತನ್ನದೇ ಆಂತರಿಕ ತನಿಖೆ-ತಪಾಸಣೆ ನಡೆಸಿ ತಾನೇ ಎಸಗಿದ ತಪ್ಪಿನಿಂದಾಗಿ ಮೆಕ್ಸಿಕೊ ಕೊಲ್ಲಿಯ ತೈಲ ಸೋರಿಕೆಯ ಅನಾಹುತವಾಯಿತು ಎಂದು ಒಪ್ಪಿಕೊಂಡಿತು.

ತೇನ್‌ಸಿಂಗ್ ನೋರ್ಗೆ

ಹುಟ್ಟಿದಾಗ ನಮ್ ಗ್ಯಾಲ್ ವಂಗಡಿ ಎಂದೂ ಆಗಾಗ್ಗೆ ತೇನ್ಸಿಂಗ್ ನೋರ್ಗೆ ಎಂದು ಕರೆಯಲ್ಪಡುವ ಸುಪ್ರದಿಪ್ತ - ಮಾನ್ಯಭಾರ - ನೇಪಾಳಿ - ತಾರ ತೇನ್ಸಿಂಗ್ ನೋರ್ಗೆ, ಜಿ ಎಮ್ (೧೯೧೪ ರ ಮೇತಿಂಗಳ ಕೊನೆ - ೯ ನೇ ಮೇ ೧೯೮೬ )ನೇಪಾಳಿ - ಭಾರತೀಯ ಶೇರ್ಪ ಪರ್ವತಾರೋಹಿಯಾಗಿದ್ದರು. ಇತಿಹಾಸದಲ್ಲಿ ಪರ್ವತವನ್ನು ಏರಿದ ಅತ್ಯಂತ ಹೆಸರುವಾಸಿಯಾದವರ ಪೈಕಿ, ೨೯ ನೇ ಮೇ ೧೯೫೩ ರಂದು, ಎಡ್ಮಂಡ್ ಹಿಲರಿಯ /೧} ಜೊತೆ ಯಶಸ್ವಿಯಾಗಿ ಗೌರಿಶಂಖರ ಶಿಖರವನ್ನು ತಲುಪಿದ ಮೊದಲನೆ ಇಬ್ಬರು ವ್ಯಕ್ತಿಗಳಲ್ಲಿ ಇವರೂ ಒಬ್ಬರೆಂದು ತಿಳಿಯಲಾಗಿದೆ. ೨೦ ನೇ ಶತಮಾನದ ಅತ್ಯಂತ ಪ್ರಭಾವಶಾಲಿ ನೂರು ವ್ಯಕ್ತಿಗಳಲ್ಲಿ ಒಬ್ಬರೆಂದು ಟೈಮ್ಸ್ ನಿಯತಕಾಲಿಕ ಸಂಚಕೆಯು ಹೆಸರಿಸಿದೆ.

ನವರತ್ನ ರಾಮರಾವ್

ನವರತ್ನ ರಾಮರಾವ್ (ಮೇ ೨೯, ೧೮೭೭ - ನವೆಂಬರ್ ೨೭, ೧೯೬೦) ನಮ್ಮ ನಾಡಿನ ಶ್ರೇಷ್ಠ ಬರಹಗಾರರಲ್ಲಿ ಒಬ್ಬರು. ಬ್ರಿಟಿಷ್ ಆಡಳಿತ ಕಾಲದಲ್ಲಿನ ಮೈಸೂರು ಸಂಸ್ಥಾನದ ಸರ್ಕಾರದಲ್ಲಿ ಹಿರಿಯ ಅಧಿಕಾರಿಗಳಾಗಿದ್ದ ನವರತ್ನ ರಾಮರಾಯರು ಪ್ರಾಮಾಣಿಕತೆ ಮತ್ತು ದಕ್ಷತೆಗಳಿಗೆ ಹೆಸರಾಗಿದ್ದವರು.

ಪರ್ವತಾರೋಹಣ

ಪರ್ವತಾರೋಹಣ ಅಥವಾ ಪರ್ವತದ ಚಾರಣ ವು ಕ್ರೀಡೆ , ಹವ್ಯಾಸ ಅಥವಾ ಕಾಲ್ನಡುಗೆಯಿಂದ ಏರುವಿಕೆ, ನೀರ್ಗಲ್ಲ ಮೇಲೆ ಜಾರುವಿಕೆ ಮತ್ತು ಪರ್ವತ ಚಾರಣಗಳ ವೃತ್ತಿಯಾಗಿರುತ್ತದೆ. ಪರ್ವತಾರೋಹಣವು ಮೊದಲಿಗೆ ಅದುವರೆಗೆ ಏರಿರದ ಪರ್ವತಗಳ ಅತಿ ಎತ್ತರದ ಸ್ಥಳವನ್ನು ತಲುಪುವ ಪ್ರಯತ್ನಗಳಾಗಿ ಆರಂಭಗೊಂಡಿತ್ತಾದರೂ, ಪರ್ವತಕ್ಕೆ ಸಂಬಂಧಿಸಿದ ವಿವಿಧ ಮಗ್ಗಲುಗಳಲ್ಲಿ ವಿಶೇಷ ಅಧ್ಯಯನ ಕ್ಷೇತ್ರಗಳಾಗಿ ಪರಿಣಮಿಸಿರುವುದಲ್ಲದೇ, ಮೂರು ವಲಯಗಳನ್ನು ಹೊಂದಿದೆ : ಇದು ಒಳಗೊಂಡಿರುವ ಪಥವು ಬಂಡೆಗಳನ್ನು, ಹಿಮಪದರವನ್ನು ಅಥವಾ ನೀರ್ಗಲ್ಲುಗಳನ್ನು ಹೊಂದಿರುವುದೋ ಎಂಬುದರ ಮೇಲೆ ಅವುಗಳನ್ನು ಬಂಡೆ ಏರುವಿಕೆಯ-ಕೌಶಲ್ಯ, ಹಿಮಪದರ ಏರುವಿಕೆಯ ಕೌಶಲ್ಯ ಮತ್ತು ನೀರ್ಗಲ್ಲ ಮೇಲೆ ಜಾರುವಿಕೆ ಎಂದು ಪರಿಗಣಿಸಲಾಗುತ್ತದೆ. ಇವೆಲ್ಲಾ ವಿಧಗಳು ಅನುಭವ, ಹೆಚ್ಚಿನ ದೈಹಿಕ ಸಾಮರ್ಥ್ಯ ಹಾಗೂ ಸುರಕ್ಷತೆಯನ್ನು ನೋಡಿಕೊಳ್ಳಲು ಅಗತ್ಯವಾದ ತಾಂತ್ರಿಕ ಜ್ಞಾನವನ್ನು ಬೇಡುತ್ತವೆ.

UIAA ಅಥವಾ ಯೂನಿಯನ್‌ ಇಂಟರ್‌ನ್ಯಾಷನಲೆ ಡೆಸ್‌ ಅಸೋಸಿಯೇಷನ್ಸ್‌ ಡಿ'ಅಲ್ಪಿನಿಸ್ಮೆ ಎಂಬ ಸಂಸ್ಥೆಯು ಪರ್ವತಾರೋಹಣ ಹಾಗೂ ಚಾರಣಗಳಿಗೆ ಸಂಬಂಧಿಸಿದಂತೆ ಅವಕಾಶ, ವೈದ್ಯಕೀಯ, ಪರ್ವತ ರಕ್ಷಣೆ, ಸುರಕ್ಷತೆ, ಯುವಸಮೂಹ ಹಾಗೂ ನೀರ್ಗಲ್ಲುಗಳ ಮೇಲೆ ಚಾರಣದಂತಹಾ ವಿಚಾರಗಳಲ್ಲಿ ನಿಯಂತ್ರಣ ಹೊಂದಿರುವ ವಿಶ್ವ ಮಟ್ಟದ ನಿಯಂತ್ರಣ ಸಂಸ್ಥೆಯಾಗಿದೆ.

ಭಯೋತ್ಪಾದನೆ

ಭಯೋತ್ಪಾದನೆ ಅಥವಾ ಸ್ವಚ್ಛಂದ ಹಿಂಸೆ ಎಂದರೆ ಹೆದರಿಸುವುದು. ಸಮಾಜದಲ್ಲಿನ ಸಾಮಾಜಿಕ ವ್ಯವಸ್ಥೆಯನ್ನು ಕದಡಿ ಭಯ ಹುಟ್ಟಿಸುವುದು. ಇದು ಸಮಾಜ ವಿರೋಧಿ ಕೃತ್ಯವಾಗಿದೆ. ಇದರಿಂದ ಸಮಾಜದಲ್ಲಿ ಬದುಕು ದುಸ್ತರಗೊಳ್ಳುವುದು. ಅಪರಾಧವೆಂಬುದು ಸಮಾಜದಲ್ಲಿ ಅಸಹಜ ಪ್ರಕ್ರಿಯೆಯೇನಲ್ಲ. ದಮನ, ಮರ್ದನ, ಬಲಾತ್ಕಾರಗಳಿಗೆ ವಿರುದ್ಧ ಪ್ರತಿಕ್ರಿಯೆಯಾಗಿಯೂ ಅಪರಾಧ ಕೃತ್ಯ ನಡೆಯಬಹುದು. ಸ್ವಾರ್ಥವೂ ಅಂತಹ ಕೆಲಸವನ್ನು ಮಾಡಿಸಬಹುದು. ಹಾಗಂತ ಅದು ಭಯೋತ್ಪಾದನೆ ಆಗುವುದಿಲ್ಲ. ಇಂದು ರಾಜಕೀಯ, ಧಾರ್ಮಿಕ ಅಥವಾ ಸೈದ್ಧಾಂತಿಕ ಗುರಿ ಸಾಧಿಸಲು, ಸ್ವಚ್ಛಂದ ಹಿಂಸೆಯನ್ನು ಅನುಸರಿಸುವುದು ಸಹಜವೇ ಆಗಿದೆ.

==ಪರಿಚಯ

ಭಯೋತ್ಪಾದನೆ ಎಂಬುದೀಗ ಗುಪ್ತ ಕಾರ್ಯಾಚರಣೆಯ ರೂಪವನ್ನು ಕಳಚಿಕೊಂಡು ಬಹಿರಂಗ 'ಯುದ್ಧ'ದ ರೂಪದಲ್ಲಿ ರುದ್ರ ನರ್ತನ ನಡೆಸುವ ಧಾಷ್ಟ್ರ್ಯ ಪ್ರದರ್ಶಿಸಿದೆ. ಈ ಭಯೋತ್ಪಾದನೆ ಮತ್ತೆ ಮತ್ತೆ ಏಕೆ ನಮ್ಮನ್ನು ಕಾಡುತ್ತಿದೆ ಮತ್ತು ಇದನ್ನು ಏಕೆ ಶಾಶ್ವತವಾಗಿ ನಿರ್ಮೂಲನ ಮಾಡಲಾಗುತ್ತಿಲ್ಲ ಎಂಬುದನ್ನು ಯೋಚಿಸಿ, ಅ ಬಗ್ಗೆ ಕ್ರಮ ಕೈಗೊಳ್ಳುವಂತಹ ವಾತಾವರಣವನ್ನು ನಿರ್ಮಿಸುವುದು ಇಂದಿನ ಸಂದರ್ಭದಲ್ಲಿ ನಿಜವಾದ ದೇಶಪ್ರೇಮದ ಅಭಿವ್ಯಕ್ತಿ ಎನಿಸಿಕೊಳ್ಳುತ್ತದೆ.

ಇದು ನಾಲ್ಕನೇ ಪೀಳಿಗೆಯ ಯುದ್ಧ ಎನ್ನಬಹುದು ಮತ್ತು ಒಂದು ಹಿಂಸಾತ್ಮಕ ಅಪರಾಧ ಎಂದು ವರ್ಗೀಕರಿಸಲಾಗಿದೆ. ಆಧುನಿಕ ಕಾಲದಲ್ಲಿ, ಭಯೋತ್ಪಾದನೆ ಸಮಾಜದ ಒಂದು ಪ್ರಮುಖ ಶತ್ರು. ಬಹುತೇಕ ಸಂಧರ್ಭಗಳಲ್ಲಿ ಒಪ್ಪಿತ ಅಧಿಕಾರ ವ್ಯಾಪ್ತಿವ್ಯವಸ್ಥೆಗಳಲ್ಲಿ ಭಯೋತ್ಪಾದನಾ ವಿರೋಧಿ ಕಾನೂನುಗಳ ಅಡಿಯಲ್ಲಿ ಭಯೋತ್ಪಾದನೆ ಸಮಾಜಕ್ಕೆ ಬೆದರಿಕೆ; ಆದ್ದರಿಂದ ಅಕ್ರಮ.ಎಂದು ಪರಿಗಣಿಸಲಾಗುತ್ತದೆ.

ನಾಗರಿಕರು ತಟಸ್ಥ ಸೇನಾ ಸಿಬ್ಬಂದಿ ಅಥವಾ ಯುದ್ಧದ ಶತ್ರು ಖೈದಿಗಳನ್ನೂ ವಿರೋಧಿ ಅಲ್ಲದವರು, ಇಂತಹವರನ್ನು ಗುರಿಯಾಗಿ ಹಿಂಸೆ ಕೊಲೆ ಬಳಸಿದಾಗ ಇದು ಯುದ್ಧದ ಕಾನೂನು ಅಡಿಯಲ್ಲಿ ಯುದ್ಧ ಅಪರಾಧದ ಪರಿಗಣಿಸಲಾಗಿದೆ.ನಾಗರಿಕರು ವಿರೋಧಿ ಅಲ್ಲದವರು, ಶಾಂತವಾಗಿ ವಿರೋಧಿಸುವವರು, ಕೇವಲ ಅಭಿಪ್ರಾಯ ಬೇಧವಿದ್ದು ಶಾಂತವಾಗಿ ಅದನ್ನು ಪ್ರಕಟಿಸುವವರು ಇಂತಹವರ ಮೇಲೆ ಯಾವ ಆಭಿಪ್ರಾಯ, ಸಮಜಾಯಶಿಗೂ ಅವಕಾಶಕೊಡದೆ, ಹಿಂಸೆ ಬೆದರಿಕೆ, ಕೊಲೆ ಇವನ್ನು ಭಯೋತ್ಪಾದನೆ ಎನ್ನಬಹುದು.

ಹಾಗೆಯೇ ಯಾವುದೇ ಸಿದ್ಧಾಂತ ವಾದಿಗಳು ತಮ್ಮ ಸಿದ್ಧಾಂತವನ್ನು ಒಪ್ಪದವರನ್ನು ವಿರೋದಿಸುವವರನ್ನು ಹಿಂಸೆಯಿಂದ ಒಪ್ಪಿಸಲು ಪ್ರಯತ್ನಿಸುವುದು, ಅಥವಾ ವಿರೋಧವನ್ನು ಹತ್ತಿಕ್ಕಲು ಯಾವ ಚರ್ಚೆಗೂ ಅವಕಾಶ ಕೊಡದೆ ಕೊಲೆ ಬಲಾತ್ಕಾರ ಬಂದನ, ಈಕ್ರಮ ಅನುಸರಿಸುವುದನ್ನು ಭಯೋತ್ಪಾದನೆ ಎನ್ನಬಹುದು. ಇದರಲ್ಲಿ ತಮ್ಮ ಅಥವಾ ತಮ್ಮ ನಾಯಕನ ಅಭಿಪ್ರಾಯ ಒಪ್ಪದವರಿಗೆ ಬದುಕುವ ಹಕ್ಕೇ ಇಲ್ಲವೆನ್ನುವ ಗಟ್ಟಿ ಕ್ರೂರ ನಿರ್ಧಾರವಿದೆ. ಆದ್ದರಿಂದ ಅದನ್ನು -ಭಯೋತ್ಪಾದನೆಯನ್ನು ಅಪರಾಧವೆಂದು ಎಲ್ಲಾ ಸರಕಾರಗಳೂ ಕಾನೂನು ಮಾಡಿವೆ.

ಶಿವರಾಮ ಕೆ. ಭಂಡಾರಿ

'ಶಿವರಾಮ ಕೆ. ಭಂಡಾರಿ,' 'ಪರಂಪರಾಗತ ಕ್ಷೌರಿಕ ವೃತ್ತಿಯಲ್ಲಿ ಒಂದು ಪರಿಕ್ರಮಮಾಡಿದ ಕರ್ನಾಟಕದ ವ್ಯಕ್ತಿ'. 'ಅಲ್ಟ್ರಸಾನಿಕ್', ತಂತ್ರದ ಬಳಕೆಯಿಂದ 'ಸ್ಟೆರಿಲೈಸ್' ಮಾಡಿದ ಅತ್ಯಾಧುನಿಕ ಉಪಕರಣಗಳನ್ನು ಬಳಸಿ, ಶಿವಾಸ್ ಸ್ಟೈಲೋ ಎಂಬ ಹೆಸರಿನಲ್ಲಿ ಗ್ರಾಹಕರಿಗೆ ಪರಿಚಿತರಾಗಿರುವ 'ಐ.ಎಸ್.ಒ' (ISO) ಮಾನ್ಯತೆ ಪಡೆದ 'ಕೇಶ ಶೃಂಗಾರ ಸಂಸ್ಥೆಯ ಹೆಮ್ಮೆಯ ಮಾಲೀಕ'ರಾಗಿ ಹೆಸರುಗಳಿಸಿದ್ದಾರೆ. ಸನ್, ೨೦೧೦ ರಲ್ಲಿ ಆರಂಭವಾದ 'ಕೇಶಶೃಂಗಾರ ಕಲೆ'ಯಲ್ಲಿ ಅತ್ಯಾಸಕ್ತಿಯಿಂದ ಭವಿಷ್ಯ ಅರಸುತ್ತಿರುವ ಹಲವಾರು ವಿದ್ಯಾರ್ಥಿಗಳಿಗೆ ಬೆಳಗಂಬವಾಗಿರುವ. ಶಿವರಾಮ ಕೆ. ಭಂಡಾರಿ' ಯವರು, ಇಲ್ಲಿಂದ ಹೊರಗೆ ಬಂದ ತಮ್ಮ ಸ್ವಯಂಪ್ರತಿಭೆಯನ್ನು ಉದ್ದೀಪಿಸಿ, 'ಮುಂಬೈನ ಫ್ಯಾಶನ್ ಲೋಕ'ದಲ್ಲಿ ತಮ್ಮದೇ ಆದ ಒಂದು ಹೊಸ ನೆಲೆಯನ್ನು ಕಂಡುಕೊಂಡಿದ್ದಾರೆ.

ಷೆಂಗೆನ್ ವೀಸಾ

ಷೆಂಗೆನ್ ಪ್ರದೇಶ ವು, ೧೯೮೫ರಲ್ಲಿ ಷೆಂಗೆನ್, ಲಕ್ಸೆಂಬರ್ಗ್ ಪಟ್ಟಣದಲ್ಲಿ ಸಹಿ ಹಾಕಲಾದ ಷೆಂಗೆನ್ ಒಪ್ಪಂದವನ್ನು ಜಾರಿಗೆ ತಂದ ಇಪ್ಪತ್ತೈದು ಯುರೋಪಿಯನ್‌ ರಾಷ್ಟ್ರಗಳ ಭೂಪ್ರದೇಶಗಳನ್ನು ಒಳಗೊಂಡಿದೆ. ಷೆಂಗೆನ್ ಪ್ರದೇಶವು, ಅಂತಾರಾಷ್ಟ್ರೀಯ ಪ್ರಯಾಣದಲ್ಲಿ ಏಕೈಕ ರಾಜ್ಯದ ರೀತಿಯಲ್ಲಿ ಹೆಚ್ಚಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಪ್ರದೇಶದ ಒಳಗಡೆ ಹಾಗು ಹೊರಗಡೆ ಪ್ರಯಾಣಿಸುವವರಿಗೆ ಗಡಿ ನಿಯಂತ್ರಣವನ್ನು ಜಾರಿಗೆ ತರುತ್ತದೆ. ಆದರೆ ಇದು ಯಾವುದೇ ಆಂತರಿಕ ಗಡಿ ನಿಯಂತ್ರಣಗಳನ್ನು ಹೊಂದಿರುವುದಿಲ್ಲ.

ಷೆಂಗೆನ್ ನಿಯಮಗಳನ್ನು, ೧೯೯೯ರ ಆಮ್‌ಸ್ಟರ್‌ಡಾಮ್ ಒಪ್ಪಂದದ ಮೂಲಕ ಐರೋಪ್ಯ ಒಕ್ಕೂಟ(EU) ಕಾನೂನಿನೊಳಗೆ ಸೇರ್ಪಡೆಗೊಳಿಸಿತು. ಆದಾಗ್ಯೂ ಪ್ರದೇಶವು, ಅಧಿಕೃತವಾಗಿ ಮೂರು EU ಸದಸ್ಯ ರಾಷ್ಟ್ರಗಳಲ್ಲದ ರಾಷ್ಟ್ರಗಳನ್ನು ಹೊಂದಿದೆ, ಐಸ್ಲ್ಯಾಂಡ್, ನಾರ್ವೆ, ಸ್ವಿಟ್ಜರ್ಲ್ಯಾಂಡ್, ಹಾಗು ಡಿ ಫ್ಯಾಕ್ಟೊ(ವಾಸ್ತವವಾಗಿ ಅಸ್ತಿತ್ವದಲ್ಲಿರುವ) ಮೂರು ಯುರೋಪಿಯನ್ ಸಣ್ಣ ರಾಜ್ಯಗಳನ್ನು ಒಳಗೊಂಡಿದೆ, ಮೊನಾಕೋ, ಸ್ಯಾನ್ ಮರಿನೋ, ಹಾಗು ವ್ಯಾಟಿಕನ್ ನಗರ. EUನ ಎರಡು ಸದಸ್ಯ ರಾಷ್ಟ್ರಗಳಾದ ಐರ್ಲೆಂಡ್ ಹಾಗು ಯುನೈಟೆಡ್ ಕಿಂಗ್ಡಮ್ ನ್ನು ಹೊರತು ಪಡಿಸಿ ಇತರ ಎಲ್ಲ ರಾಷ್ಟ್ರಗಳು ಷೆಂಗೆನ್ ನಿಯಮಗಳನ್ನು ಜಾರಿಗೆ ತರುವ ಅಗತ್ಯವಿದೆ. ಒಪ್ಪಂದವನ್ನು ಜಾರಿಗೆ ತಂದಿರುವ ಬಲ್ಗೇರಿಯಾ, ಸೈಪ್ರಸ್, ಹಾಗು ರೊಮೇನಿಯಾ ರಾಷ್ಟ್ರಗಳು ಇದಕ್ಕೆ ಹೊರತಾಗಿವೆ. ಪ್ರಸಕ್ತ ಪ್ರದೇಶವು, ೪೦೦ ದಶಲಕ್ಷದಷ್ಟು ಜನಸಂಖ್ಯೆಯನ್ನು ಹಾಗು 4,312,099 square kilometres (1,664,911 sq mi)ರಷ್ಟು ಭೂಪ್ರದೇಶವನ್ನು ಹೊಂದಿದೆ.

ಷೆಂಗೆನ್ ನಿಯಮಗಳನ್ನು ಜಾರಿಗೆ ತರುವುದೆಂದರೆ, ಇತರ ಷೆಂಗೆನ್ ಸದಸ್ಯ ರಾಷ್ಟಗಳೊಂದಿಗೆ ಗಡಿ ನಿಯಂತ್ರಣಗಳನ್ನು ತೆಗೆದುಹಾಕುವುದು ಹಾಗು ಏಕಕಾಲಿಕವಾಗಿ ಸದಸ್ಯತ್ವವನ್ನು ಪಡೆಯದ ಇತರ ರಾಜ್ಯಗಳೊಂದಿಗೆ ಗಡಿ ನಿಯಂತ್ರಣಗಳನ್ನು ಬಲಪಡಿಸುವುದು. ನಿಯಮಗಳಲ್ಲಿ, ವ್ಯಕ್ತಿಗಳ ತಾತ್ಕಾಲಿಕ ಪ್ರವೇಶಕ್ಕೆ ಸಾಮಾನ್ಯವಾದ ನಿಯಮ(ಇದರಲ್ಲಿ ಷೆಂಗೆನ್ ವೀಸಾ ಸೇರಿದೆ), ಬಾಹ್ಯ ಗಡಿ ನಿಯಂತ್ರಣಗಳ ಸಮನ್ವಯ, ಹಾಗು ಗಡಿಯಾಚೆ ಪೊಲೀಸ್ ಮತ್ತು ನ್ಯಾಯಾಂಗದ ಸಹಕಾರ ಸೇರಿವೆ.

ವಿಮಾನ ನಿಲ್ದಾಣಗಳಲ್ಲಿ, ಹೊಟೇಲುಗಳಲ್ಲಿ, ಅಥವಾ ಪೊಲೀಸರು ನಡೆಸುವ ಗುರುತಿನ ತಪಾಸಣೆಗಳಿಗೆ ಬೇಕಾಗುವ ಪಾಸ್ ಪೋರ್ಟ್ ಅಥವಾ EUನ ಅಂಗೀಕಾರ ಪಡೆದ ರಾಷ್ಟ್ರೀಯ ಗುರುತಿನ ಚೀಟಿಯು, ರಾಷ್ಟ್ರದ ನಿಯಮಗಳನ್ನು ಅವಲಂಬಿಸಿರುತ್ತದೆ ಹಾಗು ರಾಷ್ಟ್ರದಿಂದ ರಾಷ್ಟ್ರಕ್ಕೆ ಬದಲಾಗುತ್ತದೆ. ಸಾಂದರ್ಭಿಕವಾಗಿ, ಷೆಂಗೆನ್ ರಾಷ್ಟ್ರಗಳ ನಡುವೆ ಕ್ರಮಬದ್ಧವಾದ ಗಡಿ ನಿಯಂತ್ರಣಗಳನ್ನು ಬಳಸಲಾಗುತ್ತದೆ.

ಸರ್ ಹೆನ್ರಿ ಬಾಟಲ್ ಎಡ್ವರ್ಡ್ ಫ್ರೇರ್'

(ಮಾರ್ಚ್ ೨೯, ೧೯೧೫- ಮೇ ೨೯, ೧೮೮೪)

'ಸರ್ ಹೆನ್ರಿ ಬಾಟಲ್ ಎಡ್ವರ್ಡ್ ಫ್ರೇರ್',' (Sir Henry Bartle Edward Frere), ಬ್ರಿಟನ್ ನ ಹೊರಗೆ ಕಾಲೋನಿಗಳ ಆಡಳಿತಗಾರರರಾಗಿ ಬಹುವರ್ಷ ಸೇವೆಸಲ್ಲಿಸಿದರಲ್ಲೊಬ್ಬರು, ತಮ್ಮ ೧೯ ನೆಯ ವಯಸ್ಸಿನಲ್ಲೇ ಬೊಂಬಾಯಿಗೆ ಬಂದು ಕಂಪೆನಿಯ ಸರಕಾರದಡಿಯಲ್ಲಿ ನೌಕರಿಮಾಡಿದರು.

ಸಿರಿಮಾವೋ ಬಂಡಾರನಾಯ್ಕೆ

ಸಿರಿಮಾವೋ ರತ್ವಟ್ಟೆ ಡಯಾಸ್ ಬಂಡಾರನಾಯ್ಕೆ (ಎಪ್ರಿಲ್ ೧೭, ೧೯೧೬ – ಅಕ್ಟೋಬರ್ ೧೦, ೨೦೦೦) ಶ್ರೀಲಂಕಾದ ಒಬ್ಬ ರಾಜಕಾರಣಿ ಮತ್ತು ವಿಶ್ವದ ಮೊದಲ ಮಹಿಳಾ

ಪ್ರಧಾನಮಂತ್ರಿಯಾಗಿದ್ದರು. ಅವರು ಮೂರು ಬಾರಿ, ೧೯೬೦ರಿಂದ ೧೯೬೫ರವರೆಗೆ, ೧೯೭೦ರಿಂದ ೧೯೭೭ರವರೆಗೆ ಮತ್ತು ೧೯೯೪ರಿಂದ ೨೦೦೦ರವರೆಗೆ ಸಿಲೋನ್ ಮತ್ತು ಶ್ರೀಲಂಕಾದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅವರು ದೀರ್ಘಕಾಲದವರೆಗೆ ಶ್ರೀಲಂಕಾ ಸ್ವತಂತ್ರ ಪಕ್ಷದ ನಾಯಕಿಯಾಗಿದ್ದರು.

ಸಿಸು ಸಂಗಮೇಶ

ಸಿಸು ಸಂಗಮೇಶ (ಏಪ್ರಿಲ್ ೨೯, ೧೯೨೯ - ಮೆ ೨೯, ೨೦೦೧) ಆದರ್ಶ ಶಿಕ್ಷಕರಾಗಿ, ಸಾಹಿತ್ಯ ರಚನಕಾರರಾಗಿ ಅದರಲ್ಲೂ ಪ್ರಮುಖವಾಗಿ ಇಂದಿನ ದಿನಗಳಲ್ಲಿ ಅಪರೂಪವಾಗುತ್ತಿರುವ ಮೌಲ್ಯಯುತ ಶಿಶು ಸಾಹಿತ್ಯ ರಚನಕಾರರಾಗಿ, ಪ್ರಕಾಶಕರಾಗಿ ಸಾಧಿಸಿದ ಕೆಲಸ ಮಹತ್ವಯುತವಾದದ್ದು.

ಸುನೀತಿ ಕುಮಾರ್ ಚಟರ್ಜಿ

}}

ಸುನೀತಿ ಕುಮಾರ್ ಚಟರ್ಜಿ (ನವಂಬರ್ ೨೬, ೧೯೮೦ - ಮೇ ೨೯, ೧೯೭೭) ಒಬ್ಬ ಭಾರತೀಯ ಭಾಷಾಶಾಸ್ತ್ರಜ್ಞ, ಶೈಕ್ಷಣಿಕವಾದಿ ಮತ್ತು ಸಾಹಿತಿ. ಇವರು ಪದ್ಮಭೂಷಣ ಪ್ರಶಸ್ತಿಯಿಂದ ಗೌರವಿಸಲ್ಪಟ್ಟಿದ್ದಾರೆ.

ಸ್ಟಾರ್‌ಬಕ್ಸ್‌‌

ಸ್ಟಾರ್‌ಬಕ್ಸ್‌‌ ಕಾರ್ಪೊರೇಷನ್‌ (NASDAQ: SBUX) ಎಂಬುದು ಒಂದು ಅಂತರರಾಷ್ಟ್ರೀಯ ಕಾಫಿ ಮತ್ತು ಕಾಫಿಗೃಹ ಸರಣಿಯಾಗಿದ್ದು, ವಾಷಿಂಗ್ಟನ್‌ನ ಸಿಯಾಟಲ್‌‌‌ನಲ್ಲಿ ತನ್ನ ಮೂಲವನ್ನು ಹೊಂದಿದೆ.೫೦ ದೇಶಗಳಲ್ಲಿ ೧೭,೦೦೯ ಮಳಿಗೆಗಳನ್ನು ಹೊಂದುವುದರೊಂದಿಗೆ ಸ್ಟಾರ್‌ಬಕ್ಸ್‌‌ ವಿಶ್ವದಲ್ಲಿನ ಅತಿದೊಡ್ಡ ಕಾಫಿಗೃಹದ ಕಂಪನಿ ಎನಿಸಿಕೊಂಡಿದ್ದು, ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿರುವ ೧೧,೦೦೦ಕ್ಕೂ ಹೆಚ್ಚಿನ ಮಳಿಗೆಗಳು, ಕೆನಡಾದಲ್ಲಿರುವ ೧೦೦೦ಕ್ಕೂ ಹೆಚ್ಚಿನ ಮಳಿಗೆಗಳು, ಮತ್ತು UKಯಲ್ಲಿರುವ ೭೦೦ಕ್ಕೂ ಹೆಚ್ಚಿನ ಮಳಿಗೆಗಳು ಇವುಗಳಲ್ಲಿ ಸೇರಿವೆ.ಜಿನುಗು ಕುದಿತದ ಕಾಫಿ, ಎಸ್‌ಪ್ರೆಸೊ-ಆಧರಿತ ಮಾದಕ ಪಾನೀಯಗಳು, ಇತರ ಬಿಸಿಯಾದ ಮತ್ತು ತಂಪಾದ ಪಾನೀಯಗಳು, ಕಾಫಿ ಬೀಜಗಳು, ಪಚ್ಚಡಿಗಳು, ಬಿಸಿಯಾದ ಮತ್ತು ತಂಪಾದ ಸ್ಯಾಂಡ್‌ವಿಚ್‌ಗಳು ಮತ್ತು ಪಾನಿನಿ, ಪಿಷ್ಟಭಕ್ಷ್ಯಗಳು, ಕುರುಕಲು ತಿಂಡಿಗಳು, ಹಾಗೂ ಪಾನಪಾತ್ರೆಗಳು ಮತ್ತು ಲೋಟಗಳಂಥ ವಸ್ತುಗಳನ್ನು ಸ್ಟಾರ್‌ಬಕ್ಸ್‌‌ ಮಾರಾಟ ಮಾಡುತ್ತದೆ.

ಸ್ಟಾರ್‌ಬಕ್ಸ್‌‌ ಎಂಟರ್‌ಟೈನ್‌ಮೆಂಟ್‌ ವಿಭಾಗ ಮತ್ತು ಹಿಯರ್‌ ಮ್ಯೂಸಿಕ್‌ ಬ್ರಾಂಡ್ ಮೂಲಕ ಕಂಪನಿಯು ಪುಸ್ತಕಗಳು, ಸಂಗೀತ, ಮತ್ತು ಚಲನಚಿತ್ರಗಳನ್ನೂ ಸಹ ಮಾರುಕಟ್ಟೆ ಮಾಡುತ್ತದೆ. ಕಂಪನಿಯ ಅನೇಕ ಉತ್ಪನ್ನಗಳು ಕಾಲೋಚಿತವಾಗಿವೆ ಅಥವಾ ಮಳಿಗೆಯ ತಾಣಕ್ಕೆ ನಿರ್ದಿಷ್ಟವಾಗಿವೆ. ಸ್ಟಾರ್‌ಬಕ್ಸ್‌‌-ಬ್ರಾಂಡ್‌ನ ಐಸ್‌ ಕ್ರೀಮ್‌ ಮತ್ತು ಕಾಫಿಯನ್ನು ಕಿರಾಣಿ ಮಳಿಗೆಗಳಲ್ಲೂ ನೀಡಲಾಗುತ್ತದೆ.

ಕಾಫಿ ಬೀಜವನ್ನು ಹುರಿಯುವ ಮತ್ತು ಚಿಲ್ಲರೆ ಮಾರಾಟ ಮಾಡುವ ಒಂದು ಸ್ಥಳೀಯ ಘಟಕವಾಗಿ ನಂತರದ ಸ್ವರೂಪಗಳಲ್ಲಿ ಸಿಯಾಟಲ್‌‌‌ನಲ್ಲಿ ಸ್ಟಾರ್‌ಬಕ್ಸ್‌ ಸಂಸ್ಥಾಪನೆಗೊಳ್ಳುವುದರಿಂದ ಮೊದಲ್ಗೊಂಡು ಕಂಪನಿಯು ಕ್ಷಿಪ್ರವಾಗಿ ವಿಸ್ತರಿಸಿದೆ. ೧೯೯೦ರ ದಶಕದಲ್ಲಿ, ಪ್ರತಿಯೊಂದು ಕೆಲಸದ ದಿನದಂದು ಒಂದು ಹೊಸ ಮಳಿಗೆಯನ್ನು ಸ್ಟಾರ್‌ಬಕ್ಸ್‌ ಪ್ರಾರಂಭಿಸುತ್ತಿತ್ತು ಮತ್ತು ಈ ವೇಗವು ೨೦೦೦ದ ದಶಕಕ್ಕೂ ಮುಂದುವರಿಯಿತು. ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಅಥವಾ ಕೆನಡಾದ ಹೊರಗಿನ ಮೊದಲ ಮಳಿಗೆಯು ೯೦ರ ದಶಕದ ಮಧ್ಯಭಾಗದಲ್ಲಿ ಪ್ರಾರಂಭವಾದವು, ಮತ್ತು ಸ್ಟಾರ್‌ಬಕ್ಸ್‌‌ನ ಮಳಿಗೆಗಳ ಸರಿಸುಮಾರು ಮೂರನೇ ಒಂದರಷ್ಟು ಭಾಗವನ್ನು ಸಾಗರೋತ್ತರ ಮಳಿಗೆಗಳು ಪ್ರತಿನಿಧಿಸುತ್ತವೆ. ೨೦೦೯ರಲ್ಲಿ, ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಹೊರಗೆ ೯೦೦ ಹೊಸ ಮಳಿಗೆಗಳ ಒಂದು ಜಾಲವನ್ನು ತೆರೆಯಲು ಕಂಪನಿಯು ಯೋಜಿಸಿತಾದರೂ, ೨೦೦೮ರಿಂದೀಚೆಗೆ ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ೯೦೦ ಮಳಿಗೆಗಳ ಮುಚ್ಚುವಿಕೆಗಳ ಕುರಿತು ಅದು ಪ್ರಕಟಿಸಿದೆ.

ನ್ಯಾಯಸಮ್ಮತ-ವ್ಯಾಪಾರ ಕಾರ್ಯನೀತಿಗಳು, ಕಾರ್ಮಿಕ ಸಂಬಂಧಗಳು, ಪರಿಸರೀಯ ಪ್ರಭಾವ, ರಾಜಕೀಯ ದೃಷ್ಟಿಕೋನಗಳು, ಮತ್ತು ಸ್ಪರ್ಧಾತ್ಮಕತೆ-ವಿರೋಧಿ ಪರಿಪಾಠಗಳಂಥ ವಿವಾದಾಂಶಗಳ ಕುರಿತಾದ ಪ್ರತಿಭಟನೆಗಳಿಗೆ ಸ್ಟಾರ್‌ಬಕ್ಸ್‌ ಒಂದು ಗುರಿಯಾಗುತ್ತಾ ಬಂದಿದೆ.

೧೯೪೦

೧೯೪೦ (MCMXL) ಗ್ರೆಗೋರಿಯನ್ ಪಂಚಾಂಗದ ಸೋಮವಾರ ಆರಂಭವಾದ ಅಧಿಕ ವರ್ಷವಾಗಿತ್ತು.

ಇತರ ಭಾಷೆಗಳು

This page is based on a Wikipedia article written by authors (here).
Text is available under the CC BY-SA 3.0 license; additional terms may apply.
Images, videos and audio are available under their respective licenses.