ಭೌಗೋಳಿಕ ನಿರ್ದೇಶಾಂಕ ಪದ್ಧತಿ

ಭೌಗೋಳಿಕ ನಿರ್ದೇಶಾಂಕ ಪದ್ಧತಿಯು ಭೂಮಿಯ ಮೇಲಿನ ಪ್ರತಿಯೊಂದು ನೆಲೆಯನ್ನು ಮೂರು ನಿರ್ದೇಶಾಂಕಗಳಲ್ಲಿ ನಿರೂಪಿಸಲು, ಮುಖ್ಯವಾಗಿ ಒಂದು ಗೋಳ ನಿರ್ದೇಶಾಂಕ ಪದ್ಧತಿಯನ್ನು ಬಳಸಿ, ಸಾಧ್ಯವಾಗಿಸುವ ಒಂದು ನಿರ್ದೇಶಾಂಕ ಪದ್ಧತಿ. ಭೂಮಿಯು ಒಂದು ಗೋಳವಲ್ಲ, ಅದು ಒಂದು ಅಂಡಾಕಾರದ ಘನಾಕೃತಿಗೆ ಸಮೀಪದ ಒಂದು ಅಸಮ ರೂಪದ ಆಕಾರ; ಪ್ರತಿ ಸ್ಥಳವರ್ಣನಾ ಬಿಂದುವನ್ನು ಸಂಖ್ಯೆಗಳ ಒಂದು ನಿಶ್ಚಿತ ಕ್ರಮಗೊಂಡ ವರ್ಗವಾಗಿ ಖಚಿತವಾಗಿ ನಮೂದಿಸಬಲ್ಲ ಒಂದು ನಿರ್ದೇಶಾಂಕ ಪದ್ಧತಿಯನ್ನು ನಿರೂಪಿಸುವುದು ಸವಾಲು. ಅಕ್ಷಾಂಶವು (ಸಂಕ್ಷೇಪ: ಲ್ಯಾಟಿನ್., φ, ಅಥವಾ ಫೈ) ಗೋಳದ ಕೇಂದ್ರದಿಂದ ಅಳೆಯಲಾದ ಭೂಮಿಯ ಮೇಲ್ಮೈ ಮೇಲಿನ ಒಂದು ಬಿಂದುವಿನಿಂದ ಸಮಭಾಜಕ ಸಮತಲದವರೆಗಿನ ಕೋನ.

WorldMapLongLat-eq-circles-tropics-non
ರೇಖಾಂಶ ಮತ್ತು ಆಕಾಂಕ್ಷಗಳು ಚಿತ್ರಿತವಾಗಿರುವ ಭೂಮಿಯ ನಕಾಶೆ
ಅಕ್ಷಾಂಶ ಮತ್ತು ರೇಖಾಂಶ

Wikipedia

ಭೂಮಿಯ ಮೇಲಿನ ಸ್ಥಳಗಳನ್ನು ಸೂಚಿಸುವ ಕೋನನಿರ್ದೇಶಕಗಳು (ಲ್ಯಾಟಿಟ್ಯೂಡ್ ಮತ್ತು ಲಾಂಜಿಟ್ಯೂಡ್). ಭೂಮಿಯ ಅಕ್ಷಕ್ಕೆ ಲಂಬವಾಗಿರುವಂತೆ, ಕೇಂದ್ರದ ಮೂಲಕ ರಚಿಸಿದ ಸಮತಳ, ಭೂಗೋಳವನ್ನು ಒಂದು ಮಹಾವೃತ್ತದಲ್ಲಿ ಛೇದಿಸುವುದು. ಇದು ಸಮಭಾಜಕ ವೃತ್ತ (ಭೂಮಧ್ಯ ರೇಖೆ: ಟೆರೆಸ್ಟ್ರಿಯಲ್ ಇಕ್ವೇಟರ್, 1ನೆಯ ಚಿತ್ರದಲ್ಲಿ QR). ಇದಕ್ಕೆ ಸಮಾನಾಂತರವಾಗಿ ಉತ್ತರಕ್ಕೂ ದಕ್ಷಿಣಕ್ಕೂ ಎಳೆದ ಅಲ್ಪವೃತ್ತಗಳು ಉತ್ತರ ಮತ್ತು ದಕ್ಷಿಣ ಅಕ್ಷಾಂಶ ವೃತ್ತಗಳು. ಭೂಮಿಕೇಂದ್ರ O; P ಒಂದು ಸ್ಥಳ; ಸಮಭಾಜಕವೃತ್ತದ ಮೇಲೆ P ಯ ಅನುರೂಪಬಿಂದು T ಆಗಿದ್ದರೆ TOP ಕೋನ P ಸ್ಥಳದ ಅಕ್ಷಾಂಶ. ಆದ್ದರಿಂದ ಉತ್ತರ ಮೇರು ಮತ್ತು ದಕ್ಷಿಣ ಮೇರು (N,S) ಅಕ್ಷಾಂಶಗಳು ಕ್ರಮವಾಗಿ 90º ಉ. ಮತ್ತು 90º ದ. ಯಾವುದೇ ಸ್ಥಳದ ಅಕ್ಷಾಂಶ ಇದಕ್ಕಿಂತ ಹೆಚ್ಚಾಗುವುದು ಅಸಾಧ್ಯ. ಆದ್ದರಿಂದ ಅಕ್ಷಾಂಶಗಳನ್ನು 0º ಯಿಂದ (ಸಮಭಾಜಕವೃತ್ತದ ಮೇಲಿರುವ ಸ್ಥಳಗಳು) 90º ಉ. ಅಥವಾ ದಕ್ಷಿಣದವರೆಗೆ ಸೂಚಿಸಲಾಗುವುದು.

ಅಕ್ಷದ ಮೂಲಕ (NS ರೇಖೆ) ಸಾಗುವ ಸಮತಳಗಳು ಭೂಮಿಯನ್ನು ಮಹಾವೃತ್ತಗಳಲ್ಲಿ ಛೇದಿಸುವುವು ಮತ್ತು ಸಮಭಾಗಿಸುವುವು. ಇಂಥ ಮಹಾವೃತ್ತಗಳು ಅಸಂಖ್ಯಾತವಾಗಿವೆ. ಅವೆಲ್ಲವೂ ಸಮಭಾಜಕವೃತ್ತ ಮತ್ತು ಇತರ ಅಕ್ಷಾಂಶ ವೃತ್ತಗಳಿಗೆ ಲಂಬವಾಗಿವೆ. ಇವುಗಳ ಹೆಸರು ರೇಖಾಂಶವೃತ್ತಗಳು. ಇಂಗ್ಲೆಂಡಿನ ಗ್ರೀನ್ವಿಚ್ ಮೂಲಕ ಸಾಗುವ ರೇಖಾಂಶವೃತ್ತವನ್ನು (ಹೆಸರು ಪ್ರಧಾನ ರೇಖಾಂಶವೃತ್ತ NBS ವೃತ್ತ) ಆಧಾರವಾಗಿಟ್ಟುಕೊಂಡು ಅಲ್ಲಿಂದ ಪುರ್ವಕ್ಕೆ 0º ಯಿಂದ 180º ಮತ್ತು ಪಶ್ಚಿಮಕ್ಕೆ 0º ಯಿಂದ 180º ಗಳಾಗಿ (ಒಟ್ಟು 360º) ಭೂಗೋಳವನ್ನು ವಿಭಜಿಸಲಾಗಿದೆ. ಪ್ರಧಾನ ರೇಖಾಂಶವೃತ್ತ ಮತ್ತು P ಯ ಮೂಲಕ ಸಾಗುವ ರೇಖಾಂಶವೃತ್ತ ಇವೆರಡರ ನಡುವಣ ಕೋನ P ಸ್ಥಳದ ರೇಖಾಂಶ. ಗ್ರೀನ್ವಿಚ್ನಿಂದ P ಪುರ್ವಕ್ಕೆ ಇದ್ದರೆ ಆ ರೇಖಾಂಶವನ್ನು ಪುರ್ವ ರೇಖಾಂಶವೆಂದೂ ಪಶ್ಚಿಮಕ್ಕೆ ಇದ್ದರೆ ಪಶ್ಚಿಮ ರೇಖಾಂಶವೆಂದೂ ಹೇಳುತ್ತೇವೆ. BOP ಕೋನ P ಯ ರೇಖಾಂಶ.

ಹೀಗೆ ಒಂದು ಸ್ಥಳದ ಕೋನ ನಿರ್ದೇಶಕಗಳು ಏಕೈಕವಾಗಿವೆ ಮತ್ತು ಒಂದು ಜೊತೆ ಕೋನನಿರ್ದೇಶಕಗಳು ದತ್ತವಾಗಿರುವಾಗ ಅವು ಸೂಚಿಸುವ ಸ್ಥಳವೂ ಏಕೈಕವಾಗಿದೆ. ಋತುಭೇದಗಳನ್ನು ಅನುಸರಿಸಿ 23º 27| ಉತ್ತರ ಮತ್ತು ದಕ್ಷಿಣ ಅಕ್ಷಾಂಶವೃತ್ತಗಳನ್ನು ಕ್ರಮವಾಗಿ ಮಕರ ಸಂಕ್ರಾಂತಿ ವೃತ್ತ (ಟ್ರಾಪಿಕ್ ಆಫ್ ಕ್ಯಾಪ್ರಿಕಾರನ್) ಮತ್ತು ಕರ್ಕಾಟಕ ಸಂಕ್ರಾಂತಿ ವೃತ್ತ (ಟ್ರಾಪಿಕ್ ಆಫ್ ಕ್ಯಾನ್ಸರ್) (ಒಟ್ಟಾಗಿ ಸಂಕ್ರಾಂತಿವೃತ್ತಗಳು) ಎಂದೂ 66º 32| ಉತ್ತರ ಮತ್ತು ದಕ್ಷಿಣ ಅಕ್ಷಾಂಶವೃತ್ತಗಳನ್ನು ಉತ್ತರಮೇರುವೃತ್ತ (ಆರ್ಕ್ಟಿಕ್ ಸರ್ಕಲ್) ಮತ್ತು ದಕ್ಷಿಣಮೇರುವೃತ್ತ ಅಂಟಾರ್ಕ್ಟಿಕ್ ಸರ್ಕಲ್ - ಒಟ್ಟಾಗಿ ಮೇರುವೃತ್ತಗಳು) ಎಂದೂ ಕರೆಯಲಾಗಿದೆ.

0º ರೇಖಾಂಶವೃತ್ತದ ಮುಂದುವರಿಕೆಯೇ 180º ಪುರ್ವ ಅಥವಾ 180º ಪಶ್ಚಿಮ ರೇಖಾಂಶವೃತ್ತ.

ಒಂದು ಸ್ಥಳದ ಕೋನನಿರ್ದೇಶಕಗಳನ್ನು ಕೊಡುವಾಗ ಅಕ್ಷಾಂಶವನ್ನು ಮೊದಲೂ ರೇಖಾಂಶವನ್ನು ಅನಂತರವೂ ಹೇಳುವುದು ವಾಡಿಕೆ. ಬೆಂಗಳೂರಿನ ನಿರ್ದೇಶಕಗಳು (12º 57| ಉತ್ತರ, 77º 38| ಪುರ್ವ) ಎಂದರೆ ಅದರ ಅಕ್ಷಾಂಶ 12º 57| ಉತ್ತರ ಎಂದೂ ರೇಖಾಂಶ 77º 38| ಪುರ್ವ ಎಂದೂ ಅರ್ಥ.

ಇತರ ಭಾಷೆಗಳು

This page is based on a Wikipedia article written by authors (here).
Text is available under the CC BY-SA 3.0 license; additional terms may apply.
Images, videos and audio are available under their respective licenses.