ಭೂಕುಸಿತ

ಭೂಕುಸಿತ ಅಥವಾ ಭೂಪಾತ ವೆಂಬುದು ಒಂದು ಭೂವೈಜ್ಞಾನಿಕ ಸಂಗತಿಯಾಗಿದ್ದು, ಇದರಲ್ಲಿ ವ್ಯಾಪಕವಾಗಿ ಭೂಮಿಯ ಚಲನೆಯು ಒಳಗೊಂಡಿರುತ್ತದೆ, ಉದಾಹರಣೆಗೆ ಬಂಡೆ ಉರುಳುವುದು, ಪ್ರಪಾತಗಳು ಮತ್ತಷ್ಟು ಆಳವಾಗುವುದು ಹಾಗು ಲಘುವಾಗಿ ಬಂಡೆಚೂರುಗಳ ರಾಶಿಗಳು ನುಗ್ಗುವುದು ನಡೆಯುತ್ತದೆ, ಇದು ಕಡಲಾಚೆಗೆ, ಸಮುದ್ರದಡಿಯಲ್ಲಿ ಹಾಗು ಸಮುದ್ರ ತೀರದ ಪರಿಸರಗಳಲ್ಲಿ ನಡೆಯುತ್ತದೆ. ಆದಾಗ್ಯೂ ಗುರುತ್ವ ಚಲನೆಯು ಮೂಲವಾಗಿ ಭೂಕುಸಿತ ಉಂಟುಮಾಡುವ ಕ್ರಿಯಾಶಕ್ತಿಯಾಗಿದ್ದರೂ, ಇತರ ಅಂಶಗಳೂ ಸಹ ಮೂಲ ಇಳಿಜಾರು ಸ್ಥಿರತೆಯ ಮೇಲೆ ಪರಿಣಾಮವನ್ನು ಉಂಟುಮಾಡುತ್ತದೆ. ಮಾದರಿಯಾಗಿ, ಪೂರ್ವಭಾವಿ ಅಂಶಗಳು ನಿರ್ದಿಷ್ಟವಾದ ಉಪ-ಮೇಲ್ಮೈ ಪರಿಸ್ಥಿತಿಗಳನ್ನು ನಿರ್ಮಾಣ ಮಾಡುತ್ತವೆ, ಇದು ಪ್ರದೇಶದ/ಇಳಿಜಾರಿನ ಕುಸಿತಕ್ಕೆ ಗುರಿಯಾಗುವ ಸಂಭವವಿರುತ್ತದೆ, ಆದರೆ ಇದಕ್ಕೆ ವಿರುದ್ಧವಾಗಿ ವಾಸ್ತವವಾಗಿ ಭೂಕುಸಿತವು ಸಾಮಾನ್ಯವಾಗಿ ಉಂಟಾಗುವ ಮುಂಚೆ ಸರಣಿಕ್ರಿಯಾಕಾರಿಯಾಗಿರುವ ಅಗತ್ಯವಿರುತ್ತದೆ.

Landslide animation San Matteo County
ಜನವರಿ 1997ರಲ್ಲಿ ಸ್ಯಾನ್ ಮಟೆಯೋ ಕೌಂಟಿ, ಕ್ಯಾಲಿಫೋರ್ನಿಯಾನಲ್ಲಿ(USA) ಸಂಭವಿಸಿದ "ತೀವ್ರ" ಭೂಕುಸಿತದ ಗಣಕೀಕೃತ ಅನುಕರಣೆ

ಕಾರಣಗಳು

Mameyes
ಸ್ಪಾನಿಶ್ ಪ್ರಾಂತಗಳಾದ ಟಿಬೆಸ್, ಪೋನ್ಸ್, ಪೋರ್ಟೊ ರಿಕೊನಲ್ಲಿ ಸಂಭವಿಸಿದ ಮಮೆಯೆಸ್ ಭೂಕುಸಿತ, ಇದು 100ಕ್ಕೂ ಅಧಿಕ ಮನೆಗಳನ್ನು ನಾಶಪಡಿಸಿತು, ಇದು ಭಾರಿ ಮಳೆಯ ಕಾರಣದಿಂದಾಗಿ ಸಂಭವಿಸಿತು ಹಾಗು ಕೆಲವೊಂದು ಮೂಲಗಳ ಪ್ರಕಾರ ಮಿಂಚಿನಿಂದ ಸಂಭವಿಸಿರಬಹುದು.

ಸ್ಥಿರದಿಂದ ಅಸ್ಥಿರ ಪರಿಸ್ಥಿತಿಗೆ ಇಳಿಜಾರಿನ ಸ್ಥಿರತೆಯು ಬದಲಾವಣೆಯಾದಾಗ ಭೂಕುಸಿತಗಳು ಉಂಟಾಗುತ್ತದೆ. ಇಳಿಜಾರಿನ ಸ್ಥಿರತೆಯಲ್ಲಿನ ಬದಲಾವಣೆಯು ಹಲವಾರು ಅಂಶಗಳಿಂದ ಉಂಟಾಗಬಹುದು, ಇವುಗಳು ಒಟ್ಟಾರೆಯಾಗಿ ಅಥವಾ ಒಂದೇ ಒಂದು ಅಂಶವು ಭೂಕುಸಿತಕ್ಕೆ ಕಾರಣವಾಗಬಹುದು. ಭೂಕುಸಿತವು ಉಂಟಾಗುವ ಸ್ವಾಭಾವಿಕ ಕಾರಣಗಳಲ್ಲಿ ಈ ಕೆಳಕಂಡವುಗಳು ಸೇರಿವೆ:

 • ಅಂತರ್ಜಲದ (ಮಳೆನೀರು) ಒತ್ತಡವು ಇಳಿಜಾರಿನ ಅಸ್ಥಿರತೆಗೆ ಕಾರಣವಾಗುತ್ತದೆ
 • ಸಮಗ್ರ ಸಸ್ಯಕ ರಚನೆ, ಮಣ್ಣಿನ ಪೌಷ್ಟಿಕಗಳು, ಹಾಗು ಮಣ್ಣಿನ ರಚನೆಯ(ಉದಾಹರಣೆಗೆ ಕಾಳ್ಕಿಚ್ಚಿನ ನಂತರ ಉಂಟಾಗುವ ಪರಿಣಾಮ) ನಷ್ಟ ಅಥವಾ ಕೊರತೆ
 • ನದಿಗಳು ಅಥವಾ ಸಾಗರದ ಅಲೆಗಳಿಂದ ಇಳಿಜಾರಿನ ಕೆಳತುದಿಯಲ್ಲಿ ಉಂಟಾಗುವ ಸವೆತ
 • ಹಿಮಕರಗುವಿಕೆ, ಹಿಮನದಿಗಳ ದ್ರವೀಕರಣ, ಅಥವಾ ಭಾರಿ ಮಳೆಯಿಂದ ಆರ್ದ್ರೀಕರಣದ ಮೂಲಕ ಇಳಿಜಾರುಗಳು ದುರ್ಬಲಗೊಳ್ಳುತ್ತದೆ
 • ಸಾಕಷ್ಟು ಸ್ಥಿರತೆಯನ್ನು ಹೊಂದಿರದ ಇಳಿಜಾರುಗಳು ಭೂಕಂಪಗಳನ್ನು ಉಂಟುಮಾಡುತ್ತದೆ.
 • ಭೂಕಂಪಗಳು ದ್ರವೀಕರಣವನ್ನು ಉಂಟುಮಾಡುತ್ತದೆ ಇದು ಇಳಿಜಾರುಗಳ ಅಸ್ಥಿರತೆಗೆ ಕಾರಣವಾಗುತ್ತದೆ
 • ಜ್ವಾಲಾಮುಖಿ ಸ್ಫೋಟಗಳು

ಭೂಕುಸಿತಗಳು ಮಾನವನ ಕಾರ್ಯಚಟುವಟಿಕೆಗಳಿಂದ ಮತ್ತಷ್ಟು ಅಧಿಕಗೊಂಡಿವೆ, ಮನುಷ್ಯನು ಹುಟ್ಟು ಹಾಕುವ ಕಾರಣಗಳಲ್ಲಿ:ಅರಣ್ಯನಾಶ, ಕೃಷಿ ಹಾಗು ಕಟ್ಟಡ ನಿರ್ಮಾಣಗಳು ಸೇರಿವೆ, ಇವುಗಳು ಈಗಾಗಲೇ ದುರ್ಬಲವಾಗಿರುವ ಇಳಿಜಾರುಗಳನ್ನು ಮತ್ತಷ್ಟು ಅಸ್ಥಿರಗೊಳಿಸುತ್ತವೆ

 • ಯಂತ್ರೋಪಕರಣಗಳು ಅಥವಾ ವಾಹನ ದಟ್ಟಣೆಯಿಂದ ಉಂಟಾಗುವ ಕಂಪನಗಳು
 • ಸ್ಫೋಟ
 • ಮಣ್ಣುದಿಬ್ಬವು ಇಳಿಜಾರಿನ ಆಕಾರವನ್ನು ವಿಸ್ತರಿಸುತ್ತದೆ, ಅಥವಾ ಅಸ್ತಿತ್ವದಲ್ಲಿರುವ ಹೊಸ ಹೊರೆಗಳ ಮೇಲೆ ಹೇರುತ್ತದೆ
 • ಆಳ ಕಡಿಮೆಯಿರುವ ಮಣ್ಣುಗಳು, ಆಳವಾಗಿ-ಬೇರುಬಿಟ್ಟ ಸಸ್ಯಕಗಳನ್ನು ತೆಗೆದುಹಾಕುವುದರಿಂದ, ಇದು ಆಧಾರಶಿಲೆಗೆ ಕೊಲ್ಲುವಿಯಂ ಅನ್ನು ಬಂಧಿಸುತ್ತದೆ.
 • ನಿರ್ಮಾಣ, ಕೃಷಿ ಅಥವಾ ವನ್ಯಪ್ರದೇಶದಲ್ಲಿ ಚಟುವಟಿಕೆಗಳು(ಮರ ಕಡಿಯುವುದು) ಇದು ಮಣ್ಣು ಅಂತರ್ವ್ಯಾಪಿಸುವ ನೀರಿನ ಪ್ರಮಾಣವನ್ನು ಬದಲಾವಣೆ ಮಾಡುತ್ತದೆ.
Landslide in Sweden (Surte) 1950, 2
ಸ್ವೀಡನ್ ನ ಸುರ್ಟೆಯಲ್ಲಿ ಸಂಭವಿಸಿದ ಭೂಕುಸಿತ, 1950.ಒಬ್ಬ ವ್ಯಕ್ತಿಯನ್ನು ಆಹುತಿ ತೆಗೆದುಕೊಂಡಂತಹ ಕೆಮ್ಮಣ್ಣು ಕುಸಿತ.

ವಿಧಗಳು

ಶಿಲಾಖಂಡರಾಶಿಗಳ ಚಲನೆ

ನೀರಿನೊಂದಿಗೆ ಸಂಪೂರಿತವಾಗುವ ಇಳಿಜಾರಿನ ವಸ್ತುಗಳು ಶಿಲಾಖಂಡರಾಶಿಗಳ ಚಲನೆ ಅಥವಾ ಮಣ್ಣಿನ ಹರಿವನ್ನು ಅಭಿವೃದ್ಧಿಪಡಿಸಬಹುದು. ಇದರ ಪರಿಣಾಮವಾಗಿ ಉಂಟಾಗುವ ಬಂಡೆಯ ತಿಳಿ ಕೆಸರು ಹಾಗು ಮಣ್ಣು, ಮರಗಳು, ಮನೆಗಳು ಹಾಗು ಕಾರ್ ಗಳನ್ನು ಬೇರ್ಪಡಿಸಬಹುದು, ಈ ರೀತಿಯಾಗಿ ಸೇತುವೆಗಳು ಹಾಗು ಉಪನದಿಗಳಿಗೆ ನಿರ್ಬಂಧವನ್ನು ಒಡ್ಡುವುದರ ಮೂಲಕ ಮಾರ್ಗದುದ್ದಕ್ಕೂ ಪ್ರವಾಹವನ್ನು ಉಂಟುಮಾಡುತ್ತದೆ.

ಶಿಲಾಖಂಡರಾಶಿಗಳ ಚಲನೆಯನ್ನು ಸಾಮಾನ್ಯವಾಗಿ ಹಠಾತ್ ಪ್ರವಾಹವೆಂದು ತಪ್ಪಾಗಿ ಗ್ರಹಿಸಲಾಗುತ್ತದೆ, ಇದು ಸಂಪೂರ್ಣವಾಗಿ ವಿವಿಧ ಪ್ರಕ್ರಿಯೆಯಾಗಿದೆ.

ಮಣ್ಣಿನಿಂದ ಕೂಡಿದ ಶಿಲಾಖಂಡರಾಶಿಗಳ ಚಲನೆಯು ಆಲ್ಪೈನ್ ಪ್ರದೇಶಗಳಲ್ಲಿ ಕಟ್ಟಡಗಳು ಹಾಗು ಅಡಿವ್ಯವಸ್ಥೆಗಳಿಗೆ ತೀವ್ರತರವಾದ ಹಾನಿಯನ್ನು ಉಂಟುಮಾಡುವುದರ ಜೊತೆಗೆ ಸಾಮಾನ್ಯವಾಗಿ ಮಾನುಶ್ಯರ ಜೀವಕ್ಕೆ ಕುತ್ತು ತರಬಹುದು. ಮಣ್ಣಿನಿಂದ ಕೂಡಿದ ಶಿಲಾಖಂಡ ರಚನೆಗಳ ಹರಿವು ಇಳಿಜಾರು-ಸಂಬಂಧಿ ಅಂಶಗಳ ಪರಿಣಾಮವಾಗಿರುತ್ತದೆ ಹಾಗು ಅಷ್ಟೇನೂ ಆಳವಿಲ್ಲದ ಭೂಕುಸಿತಗಳು ಹಳ್ಳದ ಆಧಾರಗಳಿಗೆ ಹಾನಿಯನ್ನು ಉಂಟುಮಾಡಬಹುದು, ಇದು ತಾತ್ಕಾಲಿಕವಾಗಿ ನೀರಿನ ತಡೆಯನ್ನು ಉಂಟು ಮಾಡುತ್ತದೆ. ಶೇಖರಣೆಯಾದ ನೀರಿಗೆ ಪೋಲಾದರೆ, "ಡಾಮಿನೊ ಪರಿಣಾಮ"ವು ಸೃಷ್ಟಿಯಾಗಬಹುದು, ಜೊತೆಗೆ ಹರಿಯುವ ನೀರಿನ ರಾಶಿಯ ಪ್ರಮಾಣದಲ್ಲಿ ಗಮನಾರ್ಹವಾಗಿ ಬೆಳವಣಿಗೆಯಾಗಬಹುದು, ಇದು ಹಳ್ಳದಲ್ಲಿರುವ ಶಿಲಾಖಂಡರಾಶಿಗಳನ್ನು ಹೀರಿಕೊಳ್ಳುತ್ತದೆ. ಘನ-ದ್ರವದ ಮಿಶ್ರಣವು 2 ಟನ್ ಗಳಷ್ಟು/m³ ಸಾಂದ್ರತೆಯನ್ನು ಹಾಗು 14 m/sನಷ್ಟು ವೇಗವನ್ನು ತಲುಪಬಹುದು (ಚಿಯರ್ಲೆ ಹಾಗು ಲುಯಿನೊ, 1998; ಅರಟ್ಟನೋ, 2003). ಈ ಪ್ರಕ್ರಿಯೆಗಳು ಸಾಧಾರಣವಾಗಿ ಮೊದಲು ತೀವ್ರತರವಾಗಿ ರಸ್ತೆಯ ತಡೆಯನ್ನು ಉಂಟುಮಾಡುತ್ತದೆ, ಇದಕ್ಕೆ ರಸ್ತೆಯ ಮೇಲೆ ಸಂಗ್ರಹವಾದ ಸಂಚಯವಷ್ಟೇ ಅಲ್ಲ(ಹಲವಾರು ಕ್ಯೂಬಿಕ್ ಮೀಟರ್ ಗಳಿಂದ ಹಿಡಿದು ನೂರಾರು ಕ್ಯೂಬಿಕ್ ಮೀಟರ್ ಗಳವರೆಗೆ), ಆದರೆ ಕೆಲವೊಂದು ಸಂದರ್ಭಗಳಲ್ಲಿ ಹೊಳೆಯ ಮೇಲೆ ನಿರ್ಮಾಣಗೊಂಡಿರುವ ಸೇತುವೆಗಳು ಅಥವಾ ರಸ್ತೆಮಾರ್ಗಗಳು ಅಥವಾ ರೈಲ್ವೆ ಕ್ರಾಸಿಂಗ್ ನ್ನು ಸಂಪೂರ್ಣವಾಗಿ ತೆಗೆದುಹಾಕಬೇಕಾಗುತ್ತದೆ. ಸಾಮಾನ್ಯವಾಗಿ ಹಾನಿಯು, ಮಣ್ಣಿನಿಂದ ಕೂಡಿದ-ಶಿಲಾಖಂಡರಾಶಿಗಳ ಚಲನೆಯ ಸಾಮಾನ್ಯ ಕೀಳಂದಾಜಿನಿಂದ ಉಂಟಾಗುತ್ತದೆ: ಉದಾಹರಣೆಗೆ, ಆಲ್ಪೈನ್ ಕಣಿವೆಗಳಲ್ಲಿ, ಸೇತುವೆಗಳು ಸಾಮಾನ್ಯವಾಗಿ ಚಲನೆಯ ಅಪ್ಪಳಿಕೆಯ ಬಲದಿಂದ ನಾಶವಾಗುತ್ತದೆ ಏಕೆಂದರೆ ಇವುಗಳನ್ನು ಕೇವಲ ನೀರಿನ ಹರಿವನ್ನು ಪರಿಗಣಿಸಿ ನಿರ್ಮಿಸಲಾಗಿರುತ್ತದೆ. ಇಟಾಲಿಯನ್ ಆಲ್ಪ್ಸ್ ನಲ್ಲಿರುವ ಒಂದು ಸಣ್ಣ ಬೋಗುಣಿಗೆ ಶಿಲಾಖಂಡರಾಶಿಗಳ ಚಲನೆಯಿಂದ ಪರಿಣಾಮ ಉಂಟಾಗಿದೆ, ಚಿಯರ್ಲೆ ಹಾಗು ಲುಯಿನೊ (1998) ಮುಖ್ಯ ಕಾಲುವೆಯ ಮಧ್ಯದ ವಿಸ್ತರಣೆಯಲ್ಲಿ ಸ್ಥಿತವಾಗಿದ್ದ ವಿಭಾಗದಲ್ಲಿ 750 m3/ಗಳಷ್ಟು ಅತ್ಯಧಿಕ ವಿಸರ್ಜನೆಯು ಉಂಟಾಗಿದೆಯೆಂದು ಅಂದಾಜಿಸಲಾಗಿದೆ. ಅದರದೇ ಅಡ್ಡ ವಿಭಾಗದಲ್ಲಿ, ನಿರೀಕ್ಷಿತ ನೀರಿನ ಗರಿಷ್ಠ ಹರಿವು (HEC-1ನಿಂದ) 19 m³/ಗಳಷ್ಟಿತ್ತು, ಉಂಟಾದ ಶಿಲಾಖಂಡರಾಶಿಗಳ ಚಲನೆಗೆ ಹೋಲಿಸಿದರೆ ಇದರ ಪ್ರಮಾಣವು 40 ಬಾರಿ ಕಡಿಮೆಯಾಗಿತ್ತು.

ಭೂಮಿಯ ಚಲನೆ

Slide-guerrero1
ಗುಯೆರ್ರೆರೋ, ಮೆಕ್ಸಿಕೋನಲ್ಲಿ ಸಂಭವಿಸಿದ ಬಂಡೆ ಕುಸಿತ

ಭೂಮಿಯಚಲನೆಗಳು ಇಳಿಜಾರಿನ ಕೆಳಭಾಗದಲ್ಲಿ ನಡೆಯುತ್ತದೆ, ಸಂಪೂರಿತವಾದ, ನುಣುಪಾದ ಪದಾರ್ಥಗಳ ಅರೆದ್ರವಗಳು ಚಲಿಸುತ್ತವೆ, ಇದು ಯಾವುದೇ ವೇಗದಲ್ಲಿ ನಿಧಾನವಾಗಿ ಹಿಡಿದು ರಭಸವಾಗಿ ಚಲಿಸುತ್ತವೆ. ಮಾದರಿಯಾಗಿ, ಇವುಗಳು 0.17ರಿಂದ ಹಿಡಿದು 20 km/hನ ವೇಗದವರೆಗೂ ಚಲಿಸಬಹುದು. ಆದಾಗ್ಯೂ ಇವುಗಳು ಮಣ್ಣಿನಚಲನೆಗಳನ್ನು ಹೆಚ್ಚಾಗಿ ಹೊಳುತ್ತವಾದರೂ, ಒಟ್ಟಾರೆಯಾಗಿ ಇವುಗಳು ನಿಧಾನವಾಗಿ ಚಲಿಸುತ್ತವೆ ಹಾಗು ಇವುಗಳನ್ನು ಒಳಭಾಗದಿಂದ ಚಲಿಸುವ ಘನ ಪದಾರ್ಥಗಳು ಆವರಿಸಿರುತ್ತವೆ. ಇವುಗಳು ದ್ರವದ ಚಲನೆಗಿಂತ ಭಿನ್ನವಾಗಿದ್ದರೂ ಇವುಗಳು ರಭಸವಾಗಿ ಚಲಿಸುತ್ತವೆ. ಕೆಮ್ಮಣ್ಣು, ನಯವಾದ ಮರುಳು ಹಾಗು ಮೆಕ್ಕಲು, ಹಾಗು ನುಣುಪಾಗಿರುವ, ಉಷ್ಣರೂಪಿತ ಪದರ್ಥಗಳೆಲ್ಲವೂ ಸಹ ಭೂಮಿಯಚಲನೆಯ ಪ್ರಭಾವಕ್ಕೆ ಒಳಪಟ್ಟಿರುತ್ತವೆ. ಭೂಮಿಚಲನೆಯ ವೇಗವು, ಸ್ವತಃ ಚಲನೆಯಲ್ಲಿ ಎಷ್ಟು ನೀರಿನ ಅಂಶವಿದೆ ಎಂಬುದರ ಮೇಲೆ ಅವಲಂಬಿಸಿರುತ್ತದೆ: ಚಲನೆಯಲ್ಲಿ ಹೆಚ್ಚು ನೀರಿನ ಅಂಶವಿದ್ದರೆ, ವೇಗವು ಅಧಿಕವಾಗಿರುತ್ತದೆ.

ಈ ಚಲನೆಗಳು ಸಾಮಾನ್ಯವಾಗಿ ನುಣುಪಾದ ಪದಾರ್ಥದ ರಾಶಿಯಲ್ಲಿರುವ ಸೂಕ್ಷ್ಮ ರಂಧ್ರದ ಒತ್ತಡಗಳು, ಸೂಕ್ಷ್ಮ ರಂಧ್ರದ ನೀರಿನಿಂದ ಆಧರಿಸಿದ ಪದಾರ್ಥದ ತೂಕವು ತಡೆಯುವಷ್ಟು ಅಧಿಕಗೊಂಡಾಗ, ಇದು ಮಹತ್ವವಾಗಿ ಪದಾರ್ಥದ ಆಂತರಿಕ ವ್ಯತ್ಯಾಸದ ಬಲವನ್ನು ತಗ್ಗಿಸುತ್ತದೆ. ಇದು ಈ ಮೂಲಕವಾಗಿ ಒಂದು ಹಿಗ್ಗುದ ಹಾಲೆಯನ್ನು ಸೃಷ್ಟಿಸುತ್ತದೆ, ಇದು ನಿಧಾನವಾಗಿ, ಉರುಳುವುದರೊಂದಿಗೆ ಮುಂದೆ ಸಾಗುತ್ತದೆ. ಈ ಹಾಳೆಗಳು ಹರಡುತ್ತಿದ್ದಂತೆ, ಸಂಚಯದ ಜಲನಿರ್ಗಮನವು ಅಧಿಕಗೊಳ್ಳುತ್ತದೆ ಹಾಗು ಅಧಿಕಾಂಶವು ಒಣಗಿ ಹೋಗುತ್ತದೆ, ಆ ಮೂಲಕ ಚಲನೆಯ ಒಟ್ಟಾರೆ ವೇಗವು ತಗ್ಗುತ್ತದೆ. ಈ ಪ್ರಕ್ರಿಯೆಯು ಹರಿವನ್ನು ಮತ್ತಷ್ಟು ಸಾಂದ್ರಗೊಳಿಸುತ್ತದೆ. ಭೂಮಿಚಲನೆಗಳ ಗೆಡ್ಡೆಯಾಕಾರದ ವಿಧವು ಪ್ರೇಕ್ಷಣೀಯವಾಗಿರುವುದಿಲ್ಲ, ಆದರೆ ವೇಗವಾಗಿ ಚಲಿಸುವ ತಮ್ಮ ಪ್ರತಿರೂಪಕ್ಕಿಂತ ಹೆಚ್ಚು ಸಾಮಾನ್ಯವಾಗಿರುತ್ತವೆ. ಇವುಗಳ ಮೇಲ್ಭಾಗದಲ್ಲಿ ಒಂದು ಕುಸಿತವು ಬೆಳವಣಿಗೆಯಾಗಿರುತ್ತದೆ ಹಾಗು ಇವುಗಳು ಸಾಮಾನ್ಯವಾಗಿ ಮೂಲದಲ್ಲಿರುವ ಕುಸಿತದಿಂದ ಹುಟ್ಟಿಕೊಂಡಿರುತ್ತವೆ.

ಭೂಮಿಯಚಲನೆಗಳು ಅಧಿಕ ಅವಕ್ಷೇಪನದ ಅವಧಿಗಳಲ್ಲಿ ಹೆಚ್ಚು ಸಂಭವಿಸುತ್ತವೆ, ಇದು ಕೆಳಭಾಗವನ್ನು ಸಂಪೂರಣಗೊಳಿಸುವುದರ ಜೊತೆಗೆ ಇಳಿಜಾರಿನ ಅಂಶಕ್ಕೆ ನೀರನ್ನು ಸೇರ್ಪಡೆ ಮಾಡುತ್ತದೆ. ಕೆಮ್ಮಣ್ಣು-ಮಾದರಿಯ ಪದಾರ್ಥವು ನೀರಿನೊಂದಿಗೆ ಭೂಮಿಯಚಲನೆಯಲ್ಲಿ ಒಳನುಗ್ಗಿದ ಸಂದರ್ಭದಲ್ಲಿ ಬಿರುಕುಗಳು ಉಂಟಾಗುತ್ತವೆ. ನಂತರದಲ್ಲಿ ನೀರು ಸೂಕ್ಷ್ಮರಂಧ್ರದ ಒತ್ತಡವನ್ನು ಹೆಚ್ಚಿಸುವುದರ ಜೊತೆಗೆ ಪದಾರ್ಥದ ವ್ಯತ್ಯಾಸ ಬಲವನ್ನು ತಗ್ಗಿಸುತ್ತದೆ.[೧]

ಶಿಲಾಖಂಡರಾಶಿಗಳ ಆಕಸ್ಮಿಕ ಕುಸಿತ

Goodell Creek Debris Avalanche
ಗೂಡೆಲ್ ಕ್ರೀಕ್ ಡೆಬ್ರಿಸ್ ಅವಲಾಂಚೆ, ವಾಶಿಂಗ್ಟನ್

ಶಿಲಾಖಂಡರಾಶಿಗಳ ಆಕಸ್ಮಿಕ ಕುಸಿತವು, ಕುಸಿತದ ಒಂದು ಮಾದರಿಯಾಗಿದ್ದು ಬಂಡೆಗಳ ಮಣ್ಣಿನ ಅಸ್ತವ್ಯಸ್ತ ಚಲನೆಯಿಂದ ವಿಶಿಷ್ಟವಾಗಿರುತ್ತದೆ ಹಾಗು ನೀರು ಅಥವಾ ಐಸ್ ನೊಂದಿಗೆ(ಅಥವಾ ಎರಡೂ) ಶಿಲಾಖಂಡರಾಶಿಗಳು ಮಿಶ್ರಣಗೊಂಡಿರುತ್ತವೆ. ಇವುಗಳು ಸಾಮಾನ್ಯವಾಗಿ ದಟ್ಟವಾದ ಸಸ್ಯಕ ಇಳಿಜಾರುಗಳ ಸಂಪೂರತೆಯಿಂದ ಸರಣಿಕ್ರಿಯಾಕಾರಿಯಾಗಿರುತ್ತದೆ, ಇದು ಮರದ ತುಂಡುಗಳು, ಸಣ್ಣ ಸಸ್ಯಕಗಳು ಹಾಗು ಇತರ ಶಿಲಾಖಂಡರಾಶಿಗಳ ಅಸಂಬದ್ಧ ಮಿಶ್ರಣವನ್ನು ಉಂಟುಮಾಡುತ್ತದೆ.[೧] ಶಿಲಾಖಂಡರಾಶಿಗಳ ಆಕಸ್ಮಿಕ ಕುಸಿತವು ಶಿಲಾಖಂಡರಾಶಿಗಳ ಕುಸಿತಕ್ಕಿಂತ ಭಿನ್ನವಾಗಿರುತ್ತದೆ ಏಕೆಂದರೆ ಇವುಗಳ ಚಲನೆಯು ಹೆಚ್ಚು ವೇಗವಾಗಿರುತ್ತದೆ. ಇದು ಸಾಮಾನ್ಯವಾಗಿ ಅಂಟಿಕೆಯ ಪರಿನಾಮವಾಗಿರುತ್ತದೆ ಅಥವಾ ಅಧಿಕ ನೀರಿನ ಅಂಶದ ಪರಿಣಾಮವಾಗಿರುತ್ತದೆ ಹಾಗು ಸಾಮಾನ್ಯವಾಗಿ ಕಡಿದಾದ ಇಳಿಜಾರುಗಳನ್ನು ಹೊಂದಿರುತ್ತದೆ.

ಚಲನೆ

ಶಿಲಾಖಂಡರಾಶಿಗಳ ಕುಸಿತವು ಸಾಧಾರಣವಾಗಿ ದೊಡ್ಡ ಬಂಡೆಗಳ ಉರುಳುವಿಕೆಯಿಂದ ಆರಂಭವಾಗುತ್ತದೆ, ಇದು ಕುಸಿತದ ಮೇಲ್ಭಾಗದಿಂದ ಆರಂಭಗೊಳ್ಳುತ್ತದೆ ಹಾಗು ಕೆಳಭಾಗಕ್ಕೆ ಕುಸಿವಾಗ ಬೇರೆ ಬೇರೆಯಾಗಿ ಛಿದ್ರಗೊಳ್ಳುತ್ತದೆ. ಇದು ಶಿಲಾಖಂಡರಾಶಿಗಳ ಆಕಸ್ಮಿಕ ಕುಸಿತಕ್ಕಿಂತ ನಿಧಾನವಾಗಿರುತ್ತದೆ. ಶಿಲಾಖಂಡರಾಶಿಗಳ ಆಕಸ್ಮಿಕ ಕುಸಿತವು ಬಹಳ ವೇಗವಾಗಿರುತ್ತದೆ ಹಾಗು ಸಂಪೂರ್ಣ ರಾಶಿಯು ಇಳಿಜಾರಿನಲ್ಲಿ ಕೆಳಕ್ಕೆ ಕುಸಿಯುವಾಗ ದ್ರವೀಕರಿಸುವಂತೆ ಕಂಡುಬರುತ್ತದೆ. ಇದು ಸಂಪೂರಿತ ಪದಾರ್ಥ, ಹಾಗು ಕಡಿದಾದ ಇಳಿಜಾರುಗಳ ಸಂಯೋಜನೆಯಿಂದ ಉಂಟಾಗುತ್ತದೆ. ಶಿಲಾಖಂಡರಾಶಿಗಳು ಇಳಿಜಾರಿನಿಂದ ಕೆಳಕ್ಕೆ ಚಲಿಸುವಾಗಿ ಇದು ಸಾಧಾರಣವಾಗಿ ಹಳ್ಳದ ಹರಿವನ್ನು ಅನುಸರಿಸುತ್ತದೆ, ಬೆಟ್ಟದಿಂದ ಕೆಳಕ್ಕೆ ಚಲಿಸುವಾಗ v-ಆಕಾರದ ಗುರುತನ್ನು ಉಳಿಸಿ ಹೋಗುತ್ತದೆ. ಇದು ಕುಸಿತದ ಹೆಚ್ಚು U-ಆಕಾರದ ಗುರುತಿನಿಂದ ಹೆಚ್ಚು ಭಿನ್ನವಾಗಿದೆ. ಶಿಲಾಖಂಡರಾಶಿಗಳ ಆಕಸ್ಮಿಕ ಕುಸಿತವು ಅವುಗಳ ರಭಸದ ಕಾರಣದಿಂದಾಗಿ ಇಳಿಜಾರಿನ ತಪ್ಪಲಿಗೆ ಬಹಳ ಬೇಗನೆ ಚಲಿಸಬಹುದು.[೨]

Hunza River
ಹುನ್ಜ ನದಿಯ ತಡೆಗಟ್ಟುವಿಕೆ

ಸ್ಟುರ್ಜ್ ಸ್ಟ್ರಾಮ್

ಒಂದು ಸ್ಟುರ್ಜ್ ಸ್ಟ್ರಾಮ್ ಬಹಳ ವಿರಳವಾಗಿ ಜರುಗುತ್ತದೆ, ಇದನ್ನು ಭೂಕುಸಿತದ ಅತ್ಯಲ್ಪವಾಗಿ ಗ್ರಹಿಸಲ್ಪಡುವ ವಿಧವಾಗಿದೆ, ಮಾದರಿಯಾಗಿ ದೀರ್ಘಾವಧಿಗೊಮ್ಮೆ ಕ್ರಮೇಣವಾಗಿ ಚಲಿಸುತ್ತದೆ. ಸಾಮಾನ್ಯವಾಗಿ ಬಹಳ ದೊಡ್ಡದಾದ ಈ ಇಳಿಜಾರುಗಳು ಅಪಸಾಮಾನ್ಯವಾಗಿ ಚಲನೀಯವಾಗಿರುತ್ತದೆ, ಕಡಿಮೆ ಕೋನದಲ್ಲಿ, ಚಪ್ಪಟ್ಟೆಯಾಗಿ, ಅಥವಾ ಸ್ವಲ್ಪಮಟ್ಟಿಗಿನ ಚಡಾವು ಕ್ಷೇತ್ರಗಳಲ್ಲಿ ಬಹಳ ದೂರಕ್ಕೆ ಚಲಿಸುತ್ತದೆ.

ಆಳ ಕಡಿಮೆಯಿರುವ ಭೂಕುಸಿತ

Limone sul Garda Hotel 001
ಗಾರ್ಡ ಸರೋವರದಲ್ಲಿರುವ ಹೋಟೆಲ್ ಲಿಮೋನ್.ದೆವೋನಿಯನ್ ಪರ್ವತದ ಜೇಡಿ ಪದರುಗಲ್ಲುಗಳ ಭಾಗವನ್ನು ರಸ್ತೆಯ ನಿರ್ಮಾಣಕ್ಕಾಗಿ ತೆಗೆದುಹಾಕಲಾಗಿದೆ, ಇದು ಆಳವಾದ-ಇಳಿಜಾರನ್ನು ರೂಪಿಸುತ್ತದೆ.ಮೇಲ್ಭಾಗದ ದೊಡ್ಡ-ತುಂಡುಗಳು ಸ್ತರವಿನ್ಯಾಸದ ಸಮತಲದುದ್ದಕ್ಕೂ ಪ್ರತ್ಯೇಕಗೊಳ್ಳುತ್ತದೆ ಹಾಗು ಇದು ಬೆಟ್ಟದ ಕೆಳಭಾಗಕ್ಕೆ ಕುಸಿಯುತ್ತದೆ, ಇದು ಭೂಕುಸಿತದ ಕೆಳಭಾಗದಲ್ಲಿ ಬಂಡೆಯ ಅವ್ಯವಸ್ಥಿತವಾದ ಒಡ್ದನ್ನು ರೂಪಿಸುತ್ತದೆ.

ಭೂಕುಸಿತದಲ್ಲಿ ಕುಸಿತದ ಮೇಲ್ಮೈ ಮಣ್ಣಿನ ಹೊದಿಕೆ ಅಥವಾ ಹವಾಮಾನ ಆಧಾರಿತ ಆಧಾರಶಿಲೆಯೊಳಗೆ ಸ್ಥಿತವಾಗಿರುತ್ತದೆ (ಮಾದರಿಯಾಗಿ ಕೆಲವು ಡೆಸಿಮೀಟರ್ ಗಳಿಂದ ಹಿಡಿದು ಕೆಲವು ಮೀಟರ್ ಗಳ ಆಳಕ್ಕಿರುತ್ತದೆ). ಇವುಗಳು ಸಾಮಾನ್ಯವಾಗಿ ಶಿಲಾಖಂಡರಾಶಿಗಳ ಕುಸಿತಗಳು, ಶಿಲಾಖಂಡರಾಶಿಗಳ ಹರಿವು, ಹಾಗು ರಸ್ತೆಯ ವಿಭಜಿತ-ಇಳಿಜಾರುಗಳ ವಿಫಲತೆಗಳನ್ನು ಒಳಗೊಂಡಿರುತ್ತದೆ. ಇಳಿಜಾರಿನ ಕೆಳಗೆ ನಿಧಾನವಾಗಿ ಚಲಿಸುವ ಬಂಡೆಯ ಏಕೈಕ ದೊಡ್ಡ ಚೂರುಗಳಾಗಿ ಉಂಟಾಗುವ ಭೂಕುಸಿತಗಳನ್ನು ಕೆಲವೊಂದು ಬಾರಿ ಕಲ್ಲುಬಂಡೆಗಳ ಜಾರಿಕೆ ಎಂದು ಕರೆಯಲಾಗುತ್ತದೆ.

ಆಳವಿಲ್ಲದ ಭೂಕುಸಿತಗಳು ಸಾಮಾನ್ಯವಾಗಿ ಕಡಿಮೆ ಅಂತರ್ವ್ಯಾಪ್ಯವಾಗಿರುವ ಕೆಳಗಿನ ಮಣ್ಣುಗಳ ಮೇಲೆ ಅಧಿಕ ಅಂತರ್ವ್ಯಾಪ್ಯತೆಯನ್ನು ಹೊಂದಿರುವ ಇಳಿಜಾರು ಪ್ರದೇಶಗಳಲ್ಲಿ ಉಂಟಾಗುತ್ತದೆ. ಕಡಿಮೆ ಅಂತರ್ವ್ಯಾಪ್ಯತೆಯುಳ್ಳ, ಕೆಳಗಿನ ಮಣ್ಣು ತೀರ ಆಳವಾಗಿ ಅಲ್ಲದೆ ನೀರನ್ನು ತಡೆಯುತ್ತದೆ, ಅಧಿಕ ಅಂತರ್ವ್ಯಾಪ್ಯತೆಯುಳ್ಳ ಮಣ್ಣುಗಳು ಮೇಲ್ಭಾಗದ ಮಣ್ಣಿನಲ್ಲಿ ಅಧಿಕ ನೀರಿನ ಒತ್ತಡವನ್ನು ಉಂಟುಮಾಡುತ್ತದೆ. ಮೇಲ್ಭಾಗದ ಮಣ್ಣು ನೀರಿನಿಂದ ಭರ್ತಿಯಾಗಿ, ಭಾರವಾದರೆ, ಇಳಿಜಾರುಗಳು ಬಹಳ ಅಸ್ಥಿರವಾಗಿ ಪರಿಣಮಿಸುತ್ತದೆ ಹಾಗು ಕಡಿಮೆ ಅಂತರ್ವ್ಯಾಪ್ಯತೆಯುಳ್ಳ ಕೆಳಭಾಗ ಮಣ್ಣಿನ ಕುಸಿತಕ್ಕೆ ಕಾರಣವಾಗುತ್ತದೆ. ಬಿರುಕಿನೊಂದಿಗೆ ಕೂಡಿದ ಇಳಿಜಾರಿದ್ದು, ಮೇಲ್ಭಾಗದಲ್ಲಿ ಮರಳು ಅದರ ಮಣ್ಣಾಗಿದ್ದು, ಆಧಾರಶಿಲೆಯು ಇದರ ಕೆಳಭಾಗದ ಮಣ್ಣು ಎಂದು ಪರಿಗಣಿಸೋಣ. ತೀವ್ರತರವಾದ ಗಾಳಿಮಳೆಯ ಸಮಯದಲ್ಲಿ, ಆಧಾರಶಿಲೆಯು ಮಳೆ ನೀರನ್ನು ಬಿರುಕಿನ ಮೇಲ್ಭಾಗದ ಮಣ್ಣುಗಳು ಹಾಗು ಮರುಳಿನ ಮೇಲೆ ಬೀಳದಂತೆ ತಡೆಯುತ್ತದೆ. ಮೇಲ್ಭಾಗದ ಮಣ್ಣು ಸಂಪೂರಣಗೊಂಡು, ಭಾರವಾಗುವಾಗ, ಇದು ಅಧಾರಶಿಲೆಯ ಮೇಲೆ ಕುಸಿಯಲು ಆರಂಭಿಸುತ್ತದೆ ಹಾಗು ಇದು ತೀರ ಆಳವಿಲ್ಲದ ಭೂಕುಸಿತಕ್ಕೆ ಕಾರಣವಾಗುತ್ತದೆ. R. H. ಕ್ಯಾಂಪ್ಬೆಲ್, ಕ್ಯಾಲಿಫೋರ್ನಿಯಾದ ಸಾಂಟ ಕ್ರೂಜ್ ದ್ವೀಪದಲ್ಲಿ ಉಂಟಾಗುವ ತೀರ ಆಳವಿಲ್ಲದ ಭೂಕುಸಿತಗಳ ಬಗ್ಗೆ ಅಧ್ಯಯನ ನಡೆಸಿದರು. ಆಳದೊಂದಿಗೆ ವ್ಯಾಪ್ಯತೆಯು ಕಡಿಮೆಯಾಗುತ್ತಿದ್ದಂತೆ, ಎತ್ತರದಲ್ಲಿರುವ ನೀರಿನ ಚಪ್ಪಟ್ಟೆ ಮೇಲ್ಮೈ ಮಣ್ಣುಗಳಲ್ಲಿ ತೀವ್ರತರವಾದ ಅವಕ್ಷೇಪನದಲ್ಲಿ ಬೆಳವಣಿಗೆಯಾಗಬಹುದು. ಸೂಕ್ಷ್ಮರಂಧ್ರದ ಒತ್ತಡಗಳು ಪರಿಣಾಮಕಾರಿಯಾಗಿ ಸಾಮಾನ್ಯ ಒತ್ತಡವನ್ನು ತೀವ್ರತರ ಮಟ್ಟಕ್ಕೆ ತಗ್ಗಿಸಲು ಸಾಕಾದಾಗ, ವಿಫಲತೆಯು ಉಂಟಾಗುತ್ತದೆ.[೩]

ಆಳವಾದ ಭೂಕುಸಿತ

Landslide 2
ಪಾಕಿಸ್ತಾನದಲ್ಲಿ ಮಣ್ಣಿನ ಕುಸಿತ ಹಾಗು ರೆಗಲಿತ್

ಭೂಕುಸಿತಗಳು, ಮರಗಳ ಗರಿಷ್ಠ ಆಳದ ಕೆಳಗೂ ಇಳಿಜಾರಿನ ಮೇಲ್ಮೈ ಸ್ಥಿತವಾಗಿರುತ್ತದೆ (ಮಾದರಿಯಾಗಿ ಹತ್ತು ಮೀಟರ್ ಗಳಿಗಿಂತಲೂ ಅಧಿಕ ಆಳ). ಆಳವಾದ ಭೂಕುಸಿತಗಳು ಸಾಮಾನ್ಯವಾಗಿ ಆಳವಾದ ರೆಗಲಿತ್ (ಆಧಾರಶಿಲಾತಲದ ಮೇಲಿನ ಗಟ್ಟಿಗೊಂಡಿಲ್ಲದ ಘನ ಪದಾರ್ಥ), ಆಧಾರಿತ ಬಂಡೆ, ಹಾಗು/ಅಥವಾ ಆಧಾರಶಿಲೆ ಹಾಗು ಬದಲಾವಣೆಯಾಗುವ, ಕ್ರಮಾವರ್ತನದ, ಅಥವಾ ಸಂಕೀರ್ಣ ಚಲನೆಯೊಂದಿಗೆ ಸಂಯೋಜನೆಯನ್ನು ಹೊಂದಿರುವ ದೊಡ್ಡದಾದ ಇಳಿಜಾರು ವಿಫಲತೆಯನ್ನು ಒಳಗೊಂಡಿರುತ್ತದೆ. ಇವುಗಳು ಮಾದರಿಯಾಗಿ ಬಹಳ ನಿಧಾನವಾಗಿ ಚಲಿಸುತ್ತವೆ, ಪ್ರತಿ ವರ್ಷ ಕೇವಲ ಹಲವಾರು ಮೀಟರ್ ಗಳಷ್ಟು ಚಲಿಸುತ್ತದೆ, ಆದರೆ ಸಾಂದರ್ಭಿಕವಾಗಿ ಬಹಳ ವೇಗವಾಗಿ ಚಲಿಸುತ್ತದೆ. ಇವುಗಳು ಆಳವಿಲ್ಲದ ಭೂಕುಸಿತಗಳಿಗಿಂತ ಹೆಚ್ಚು ದೊಡ್ಡದಾಗಿರುತ್ತದೆ ಹಾಗು ದೋಷ ಅಥವಾ ಸ್ತರವಿನ್ಯಾಸದ ಸಮತಲಗಳಂತಹ ಸಮತಲಗಳ ನ್ಯೂನ್ಯತೆಗಳೊಂದಿಗೆ ರೂಪುಗೊಂಡಿರುತ್ತದೆ. ಇದನ್ನು ಮೇಲ್ಭಾಗದಲ್ಲಿರುವ ಒಳಬಾಗಿದ ತುಂಡುಗಳು ಹಾಗು ಕೆಳಭಾಗದ ಆಳವಾದ ಪ್ರದೇಶಗಳ ಮೂಲಕ ಗುರುತಿಸಬಹುದಾಗಿದೆ.[೪]

ಸುನಾಮಿಗಳನ್ನು ಉಂಟುಮಾಡುವುದು

ಸಮುದ್ರದ ಕೆಳಭಾಗದಲ್ಲಿ ಉಂಟಾಗುವ ಭೂಕುಸಿತಗಳು, ಅಥವಾ ನೀರಿನ ಮೇಲೆ ಪ್ರಭಾವವನ್ನು ಬೀರುವ ಭೂಕುಸಿತಗಳು ಸುನಾಮಿಗಳನ್ನು ಉಂಟುಮಾಡಬಹುದು. ಭಾರಿ ಭೂಕುಸಿತಗಳೂ ಸಹ ಮೆಗಾಸುನಾಮಿಗಳನ್ನು ಉಂಟುಮಾಡಬಹುದು, ಇವುಗಳು ಸಾಮಾನ್ಯವಾಗಿ ನೂರಾರು ಮೀಟರ್ ಗಳಷ್ಟು ಎತ್ತರದಲ್ಲಿರುತ್ತವೆ. 1958ರಲ್ಲಿ, ಇಂತಹ ಒಂದು ಸುನಾಮಿಯು ಅಲಾಸ್ಕಾದ ಲಿಟುಯ ಕೊಲ್ಲಿಯಲ್ಲಿ ಸಂಭವಿಸಿತ್ತು.

ಸಂಬಂಧಿತ ಘಟನೆ

 • ಆಕಸ್ಮಿಕ ಭೂಕುಸಿತದಲ್ಲಿ, ಭೂಕುಸಿತಕ್ಕೆ ಸಮನಾದ ಪ್ರಕ್ರಿಯೆಯು, ಒಂದು ದೊಡ್ಡ ಪ್ರಮಾಣದ ಐಸ್, ಹಿಮ ಹಾಗು ಬಂಡೆಯು ಪರ್ವತದ ಬದಿಯಿಂದ ಬೇಗನೆ ಬೀಳುತ್ತದೆ.
 • ಒಂದು ಉಷ್ಣರೂಪಿತ ಚಲನೆಯು, ಒಂದು ಸ್ಫೋಟಗೊಳ್ಳುವ ಜ್ವಾಲಾಮುಖಿಯ ಕೆಳಗೆ ವೇಗವಾಗಿ ಚಲಿಸುವ ಬಿಸಿಯಾದ ಬೂದಿ, ಅನಿಲ ಹಾಗು ಬಂಡೆಗಳ ಒಂದು ಕುಸಿದು ಬೀಳುವ ಧೂಮರಾಶಿಯಿಂದ ಉಂಟಾಗುತ್ತದೆ.

ಸಂಭವನೀಯ ಭೂಕುಸಿತದ ನಕ್ಷೆ ತಯಾರಿಕೆ

Global Landslide Risks
ಜಾಗತಿಕವಾಗಿ ಭೂಕುಸಿತಗಳು ಉಂಟುಮಾಡುವ ಅಪಾಯಗಳು
Ferguson-slide
ಜೂನ್ 2006ರಲ್ಲಿ ಕ್ಯಾಲಿಫೋರ್ನಿಯಾ ಸ್ಟೇಟ್ ರೂಟ್ 140ಯಲ್ಲಿ ಸಂಭವಿಸಿದ ಫೆರ್ಗುಸನ್ ಕುಸಿತ

ಭೂಕುಸಿತವು ಉಂಟುಮಾಡುವ ಅಪಾಯದ ವಿಶ್ಲೇಷಣೆ ಹಾಗು ನಕ್ಷೆಯು, ದುರಂತವು ಉಂಟುಮಾಡುವ ನಷ್ಟವನ್ನು ತಗ್ಗಿಸಲು ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ, ಹಾಗು ಸಮರ್ಥನೀಯವಾಗಿ ಭೂಮಿಯ ಬಳಕೆಯ ಯೋಜನೆಗೆ ಮಾರ್ಗದರ್ಶನಗಳ ಅಭಿವೃದ್ಧಿಗೆ ಸಹಾಯಕವಾಗಿದೆ. ಭೂಕುಸಿತಗಳಿಗೆ ಸಂಬಂಧಿಸಿದ ಅಂಶಗಳನ್ನು ಗುರುತಿಸಲು ವಿಶ್ಲೇಷಣೆಯನ್ನು ಬಳಸಲಾಗುತ್ತದೆ, ಭೂಕುಸಿತಗಳನ್ನು ಉಂಟು ಮಾಡುವ ಅಂಶಗಳ ಸಂಬಂಧಿತ ಕೊಡುಗೆಗಳನ್ನು ಅಂದಾಜಿಸುತ್ತದೆ, ಅಂಶಗಳು ಹಾಗು ಭೂಕುಸಿತಗಳ ನಡುವೆ ಸಂಬಂಧವನ್ನು ಸ್ಥಾಪಿಸುತ್ತದೆ, ಹಾಗು ಇಂತಹ ಸಂಬಂಧದ ಮೇಲೆ ಆಧಾರಿತವಾದ ಭೂಕುಸಿತದ ಅಪಾಯವನ್ನು ಊಹಿಸುತ್ತದೆ.[೫] ಭೂಕುಸಿತವು ಉಂಟುಮಾಡುವ ಅಪಾಯದ ವಿಶ್ಲೇಷಣೆಗೆ ಬಳಸಲಾಗುವ ಅಂಶಗಳನ್ನು ಸಾಮಾನ್ಯವಾಗಿ ಭೂರೂಪಶಾಸ್ತ್ರ, ಭೂವಿಜ್ಞಾನ, ಭೂಮಿಯ ಬಳಕೆ/ಭೂಮಿಯ ವ್ಯಾಪನೆ, ಹಾಗು ಹೈಡ್ರೋಜಿಯಾಲಜಿ ಎಂದು ವಿಭಾಗಿಸಲಾಗಿರುತ್ತದೆ. ಭೂಕುಸಿತವು ಉಂಟು ಮಾಡುವ ಅಪಾಯದ ಬಗೆಗಿನ ನಕ್ಷೆ ತಯಾರಿಕೆಗೆ ಹಲವು ಅಂಶಗಳನ್ನು ಪರಿಗಣಿಸಿರುವ ಕಾರಣ, GIS ಒಂದು ಸೂಕ್ತ ಸಾಧನವಾಗಿದೆ ಏಕೆಂದರೆ ಇದು ಸಂಗ್ರಹಣೆ, ಶೇಖರಣೆ, ಕುಶಲ ಬಳಕೆ, ಪ್ರದರ್ಶನ, ಹಾಗು ದೈಶಿಕವಾಗಿ ಸೂಚಿತವಾಗುವ ದತ್ತಾಂಶದ ದೊಡ್ಡ ಪ್ರಮಾಣಗಳ ವಿಶ್ಲೇಷಣೆಯಂತಹ ಅಂಶಗಳನ್ನು ಹೊಂದಿದೆ, ಇದರಿಂದ ಭೂಕುಸಿತವನ್ನು ತಗ್ಗಿಸಲು ಬೇಗನೆ ಹಾಗು ಪರಿಣಾಮಕಾರಿಯಾಗಿ ಕ್ರಮವನ್ನು ಕೈಗೊಳ್ಳಬಹುದು.[೬] ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನಗಳು, ಭೂಕುಸಿತವು ಉಂಟುಮಾಡುವ ಅಪಾಯದ ನಿರ್ಧಾರಣೆ ಹಾಗು ವಿಶ್ಲೇಷಣೆಗೆ ಅಧಿಕ ಉಪಯುಕ್ತವಾಗಿರುತ್ತದೆ. ಮುಂಚೆ ಹಾಗು ನಂತರದ ವೈಮಾನಿಕ ಚಿತ್ರಗಳು ಹಾಗು ಉಪಗ್ರಹಗಳು ಒದಗಿಸುತ್ತಿದ್ದ ಚಿತ್ರಣಗಳನ್ನು ಭೂಕುಸಿತದ ಲಕ್ಷಣಗಳನ್ನು ಸಂಗ್ರಹಿಸಲು ಬಳಸಲಾಗುತ್ತಿತ್ತು, ಉದಾಹರಣೆಗೆ ಹಂಚಿಕೆ ಹಾಗು ವರ್ಗಾವಣೆ, ಹಾಗು ಇಳಿಜಾರು, ಶಿಲಾವಿಜ್ಞಾನ, ಹಾಗು ಭೂಮಿಯ ಬಳಕೆ/ಭೂಮಿಯ ವ್ಯಾಪನೆಯಂತಹ ಅಂಶಗಳು ಭವಿಷ್ಯದ ಘಟನೆಗಳನ್ನು ಊಹಿಸಲು ಸಹಕಾರಿಯಾಗಿದ್ದವು.[೭] ಮುಂಚಿನ ಹಾಗು ನಂತರದ ಚಿತ್ರಣಗಳು, ಘಟನೆಯ ನಂತರ ಹೇಗೆ ಭೂದೃಶ್ಯವು ಬದಲಾವಣೆಯಾಗಿದೆಯೆಂದು ತಿಳಿಸುವಲ್ಲಿ ಸಹಕಾರಿಯಾಗಿದೆ, ಇದು ಭೂಕುಸಿತಕ್ಕೆ ಕಾರಣವಾಗುವ ಅಂಶಗಳ ಬಗ್ಗೆ ತಿಳಿಸುತ್ತದೆ, ಹಾಗು ಪುನರುಜ್ಜೀವನ ಹಾಗು ಸುಧಾರಣೆ ಪ್ರಕ್ರಿಯೆಯನ್ನು ಪ್ರಕಟಿಸುತ್ತದೆ.[೮]

GISನ ಸಂಯೋಜನೆಯೊಂದಿಗೆ ಉಪಗ್ರಹದ ಚಿತ್ರಣಗಳ ಬಳಕೆ ಹಾಗು ಘಟನಾ ಸ್ಥಳದ ಅಧ್ಯಯನಗಳನ್ನು ಬಳಸಿಕೊಂಡು, ಭವಿಷ್ಯದಲ್ಲಿ ಉಂಟಾಗುವ ಭೂಕುಸಿತಗಳ ಬಗ್ಗೆ ನಕ್ಷೆಯನ್ನು ತಯಾರಿಸಲು ಸಾಧ್ಯವಾಗುತ್ತದೆ.[೯] ಇಂತಹ ನಕ್ಷೆಗಳು ಹಿಂದಿನ ಘಟನೆಗಳು ನಡೆದ ಸ್ಥಳವನ್ನು ತೊರಿಸುವುದರ ಜೊತೆಗೆ ಭವಿಷ್ಯದಲ್ಲಿ ಸಂಭವಿಸಬಹುದಾದ ಭೂಕುಸಿತಗಳ ಸ್ಥಳಗಳನ್ನು ಸ್ಪಷ್ಟವಾಗಿ ಸೂಚಿಸಬೇಕು. ಒಟ್ಟಾರೆಯಾಗಿ, ಭೂಕುಸಿತಗಳ ಬಗ್ಗೆ ಊಹಿಸಬೇಕಾದರೆ, ಇದಕ್ಕೆ ಕಾರಣವು ಕೆಲವು ಭೂವೈಜ್ಞಾನಿಕ ಅಂಶಗಳಿಂದ ನಿರ್ಧಾರವಾಗುತ್ತವೆಂದು ಭಾವಿಸಬೇಕು, ಹಾಗು ಭವಿಷ್ಯದಲ್ಲಿ ಉಂಟಾಗುವ ಭೂಕುಸಿತಗಳು ಹಿಂದಿನ ಘಟನೆಗಳು ಸಂಭವಿಸಿದಂತಹ ಪರಿಸ್ಥಿತಿಗಳಲ್ಲೇ ಸಂಭವಿಸುತ್ತದೆ.[೧೦] ಈ ರೀತಿಯಾಗಿ, ಈ ಹಿಂದೆ ಘಟಿಸಿದ ಭೂಕುಸಿತಗಳ ಭೂರೂಪಶಾಸ್ತ್ರೀಯ ಪರಿಸ್ಥಿತಿಗಳು ಹಾಗು ನಿರೀಕ್ಷಿತ ಪರಿಸ್ಥಿತಿಗಳ ನಡುವೆ ಸಂಬಂಧವನ್ನು ಸ್ಥಾಪಿಸುವ ಅಗತ್ಯವಿರುತ್ತದೆ.[೧೧]

ನೈಸರ್ಗಿಕ ಪ್ರಕೋಪಗಳು, ನಿಸರ್ಗದೊಂದಿಗೆ ಘರ್ಷಣೆ ನಡೆಸುತ್ತಿರುವ ಜನರ ಒಂದು ನಾಟಕೀಯ ಉದಾಹರಣೆಯಾಗಿದೆ. ಆಸ್ತಿ ಹಾನಿ ಹಾಗು ಜೀವಕ್ಕೆ ಉಂಟಾಗುವ ಹಾನಿಯನ್ನು ತಗ್ಗಿಸಲು ಮುಂಚೆಯೇ ತಿಳಿದುಬರುವ ಮಾಹಿತಿಗಳು ಹಾಗು ಎಚ್ಚರಿಕೆಗಳ ಅಗತ್ಯವಿರುತ್ತದೆ. ಏಕೆಂದರೆ ಭೂಕುಸಿತಗಳು ಸತತವಾಗಿ ಸಂಭವಿಸುವುದರಿಂದ ಹಾಗು ಭೂಮಿಯ ಮೇಲಿನ ಅತ್ಯಂತ ವಿನಾಶಕಾರಿ ಬಲಗಳನ್ನು ಪ್ರತಿನಿಧಿಸುವುದರಿಂದ, ಇದು ಉಂಟಾಗುವ ಕಾರಣಗಳ ಬಗ್ಗೆ ಒಂದು ಉತ್ತಮ ಗ್ರಹಣವನ್ನು ಪಡೆಯುವುದು ಅನಿವಾರ್ಯವಾಗಿರುತ್ತದೆ ಹಾಗು ಜನರು ಹೇಗೆ ಇದನ್ನು ತಡೆಗಟ್ಟಲು ಸಹಕರಿಸಬಹುದು ಅಥವಾ ಅವುಗಳು ಸಂಭವಿಸಿದಾಗ ಹೇಗೆ ಎದುರಿಸಬೇಕು ಎಂಬುದನ್ನು ತಿಳಿದಿರಬೇಕು. ಸಮರ್ಥನೀಯ ಭೂಮಿ ನಿರ್ವಹಣೆ ಹಾಗು ಅಭಿವೃದ್ಧಿಯು ಭೂಕುಸಿತಗಳು ಉಂಟುಮಾಡುವ ಋಣಾತ್ಮಕ ಪ್ರಭಾವಗಳನ್ನು ತಗ್ಗಿಸಲು ಒಂದು ಪ್ರಮುಖ ಅಂಶವಾಗಿರುತ್ತದೆ.

GIS, ಭೂಕುಸಿತ ವಿಶ್ಲೇಷಣೆಗೆ ಒಂದು ಉತ್ತಮ ವಿಧಾನವನ್ನು ಒದಗಿಸುತ್ತದೆ ಏಕೆಂದರೆ ಇದು ದೊಡ್ಡ ಪ್ರಮಾಣದ ದತ್ತಾಂಶವನ್ನು ಬೇಗನೆ ಹಾಗು ಪರಿಣಾಮಕಾರಿಯಾಗಿ ಸೆರೆಹಿಡಿದು, ಸಂಗ್ರಹಿಸಿ, ಕುಶಲ ನಿರ್ವಹಣೆ ಮಾಡಿ, ವಿಶ್ಲೇಷಿಸಲು ಅವಕಾಶ ಮಾಡಿಕೊಡುತ್ತದೆ. ಹಲವು ವ್ಯತ್ಯಾಸಸಾಧ್ಯಗಳು ಒಳಗೊಂಡ ಕಾರಣದಿಂದ, ಭೂಮಿಯ ಮೇಲ್ಮೈನಲ್ಲಿ ಎಂದು ನಡೆಯುತ್ತಿದೆ ಎಂಬುದರ ಬಗ್ಗೆ ಒಂದು ಸಂಪೂರ್ಣ ಹಾಗು ನಿಖರವಾದ ಚಿತ್ರಣವನ್ನು ನೀಡುವ ಹಲವು ಸ್ತರಗಳ ದತ್ತಾಂಶವನ್ನು ವರ್ಗಾಯಿಸುವ ಪ್ರಕ್ರಿಯೆ ಮುಖ್ಯವಾಗುತ್ತದೆ. ಸಂಶೋಧಕರು, ಯಾವುದೇ ಒಂದು ಪ್ರದೇಶದಲ್ಲಿ ಸಂಭವಿಸಬಹುದಾದ ಭೂಕುಸಿತಗಳಿಗೆ ಯಾವ ವ್ಯತ್ಯಾಸಸಾಧ್ಯಗಳು ಅತ್ಯಂತ ಪ್ರಮುಖ ಅಂಶವಾಗುತ್ತವೆಂಬುದನ್ನು ತಿಳಿಯುವ ಅಗತ್ಯವಿರುತ್ತದೆ. GISನ್ನು ಬಳಸಿಕೊಂಡು, ಹೆಚ್ಚಿನ ವಿವರಣೆಯನ್ನು ನೀಡುವ ನಕ್ಷೆಗಳನ್ನು ತಯಾರಿಸಲು ಸಾಧ್ಯ, ಇದರಿಂದ ಹಿಂದೆ ಸಂಭವಿಸಿದ ಘಟನೆಗಳು ಹಾಗು ಭವಿಷ್ಯದ ನಿರೀಕ್ಷಿತ ಘಟನೆಗಳ ಬಗ್ಗೆ ಅರಿಯಲು ಸಹಕಾರಿ, ಇವುಗಳು ಸಂಭವನೀಯವಾಗಿ ಜೀವಗಳನ್ನು, ಆಸ್ತಿಯನ್ನು, ಹಾಗು ಹಣವನ್ನು ಉಳಿಸುತ್ತದೆ.

ಇತಿಹಾಸಪೂರ್ವ ಯುಗದ ಭೂಕುಸಿತಗಳು

Rhine cutting through Flims Rockslide debris
ಫ್ಲಿಮ್ಸ್ ರಾಕ್ ಸ್ಲೈಡ್ ನ ಶಿಲಾಖಂಡರಾಶಿಗಳ ಮೂಲಕ ರೈನ್ ಕತ್ತರಿಸುವಿಕೆ, ಸ್ವಿಟ್ಜರ್ಲ್ಯಾಂಡ್
 • ಹಾರ್ಟ್ ಮೌಂಟೈನ್ ಇರುವ ಪ್ರಸಕ್ತದ ಸ್ಥಳಕ್ಕೆ ಅದು ಚಲಿಸಲು ಭೂಕುಸಿತವು ಕಾರಣವಾಯಿತು, ಇದು ಭೂಮಿಯ ಮೇಲೆ ಹಿಂದೆಂದೂ ಕಂಡಿರದ ಅತ್ಯಂತ ದೊಡ್ಡ ಭೂಪ್ರದೇಶವಾಗಿತ್ತು. ಭೂಕುಸಿತವು ಸಂಭವಿಸಿ 48 ದಶಲಕ್ಷ ವರ್ಷಗಳಿಂದೀಚೆಗೆ, ಭೂಸವೆತವು ಭೂಕುಸಿತದ ಹೆಚ್ಚಿನ ಭಾಗವನ್ನು ಅಳಿಸಿ ಹಾಕಿದೆ.
 • ಫ್ಲಿಮ್ಸ್ ರಾಕ್ ಸ್ಲೈಡ್, ಸುಮಾರು. 13,000 km3 (3,100 cu mi), ಸ್ವಿಟ್ಜರ್ಲ್ಯಾಂಡ್, ಸುಮಾರು 10000 ವರ್ಷಗಳ ಹಿಂದೆ ಹಿಮಶಿಲೆಯ ನಂತರದ ಪ್ಲೇಸ್ಟಸೀನ್ ಹಾಲಸೀನ್, ಆಲ್ಪ್ಸ್ ನಲ್ಲಿ ಈವರೆಗೂ ಕಂಡುಬಂದ ಅತ್ಯಂತ ದೊಡ್ಡ ಭೂಕುಸಿತವೆನಿಸಿದೆ ಹಾಗು ಒಣ ಭೂಮಿಯ ಮೇಲೆ ಇದನ್ನು ಅತಿಶಯವಿಲ್ಲದ ಭೂಸವೆತವಾದ ಪ್ರದೇಶವನ್ನು ಸುಲಭವಾಗಿ ಗುರುತಿಸಬಹುದು.[೧೨]
 • ಸುಮಾರು 200 BCಯಲ್ಲಿ ನ್ಯೂಜಿಲೆಂಡ್ ನ ನಾರ್ತ್ ಐಲೆಂಡ್ ನ ಮೇಲೆ ವೈಕರೆಮೊಯನ ಸರೋವರವನ್ನು ಭೂಕುಸಿತವು ಸೃಷ್ಟಿಸಿತು, ಇಲ್ಲಿ ನ್ಗಮೊಕೋ ಪರ್ವತ ಶ್ರೇಣಿಯ ಕುಸಿತ ಹಾಗು ವೈಕರೆತಹೇಕೆ ನದಿಯ ಅಡಚಿತು, ಇದು 248 ಮೀಟರ್ ಆಳದ ನೈಸರ್ಗಿಕ ಜಲಾಶವನ್ನು ರೂಪಿಸಿತು.
 • ಚೀಕ್ಯೇ ಫ್ಯಾನ್, ಬ್ರಿಟಿಶ್ ಕೊಲಂಬಿಯಾ, ಕೆನಡಾ, ಸುಮಾರು. 25 km2 (9.7 sq mi), ಪ್ಲೇಸ್ಟಸೀನ್ ನಂತರದ ಯುಗ.

ಇತಿಹಾಸಪೂರ್ವ ಯುಗದ ಜಲಾಂತರ್ಗಾಮಿ ಭೂಕುಸಿತಗಳು

 • ಸ್ಟಾರೆಗ್ಗ ಕುಸಿತ, ನಾರ್ವೆ, ಸುಮಾರು. 3,500 km3 (840 cu mi), ಸುಮಾರು. 8,000 ವರ್ಷಗಳ ಹಿಂದೆ, ಕರಾವಳಿ ತೀರದ ಸಮಕಾಲೀನ ಮೆಸೋಲಿಥಿಕ್ ಜನಸಂಖ್ಯೆಯ ಮೇಲೆ ದುರಂತ ಪರಿಣಾಮ
 • ಅಗುಲ್ಹಾಸ್ ಕುಸಿತ, ಸುಮಾರು. 20,000 km3 (4,800 cu mi), ದಕ್ಷಿಣ ಆಫ್ರಿಕಾದಿನದ್ದ ಸ್ವಲ್ಪ ದೂರಕ್ಕೆ, ಪ್ಲಿಯೋಸೀನ್ ಯುಗದ ನಂತರ, ವಿವರಿಸಲಾದಂತೆ ಅತ್ಯಂತ ದೊಡ್ಡ ಭೂಕುಸಿತ ಇದಾಗಿದೆ[೧೩]
 • ರುವಟೋರಿಯಾ ಶಿಲಾಖಂಡರಾಶಿಗಳ ಆಕಸ್ಮಿಕ ಕುಸಿತ, ನಾರ್ತ್ ಐಲೆಂಡ್ ನ ಸ್ವಲ್ಪ ದೂರಕ್ಕೆ ನ್ಯೂಜಿಲೆಂಡ್, ಗಾತ್ರದಲ್ಲಿ ಸುಮಾರು 3,000 km³, 170,000 ವರ್ಷಗಳ ಹಿಂದೆ.[೧೪]

ಐತಿಹಾಸಿಕ ಭೂಕುಸಿತಗಳು

 • ಸೆಪ್ಟೆಂಬರ್ 2, 1806ರಲ್ಲಿ ಸಂಭವಿಸಿದ ಗೋಲ್ಡು
 • ಸೆಪ್ಟೆಂಬರ್ 19, 1889ರಲ್ಲಿ ಸಂಭವಿಸಿದ ಕ್ಯಾಪ್ ಡಿಯಮಾಂಟ್ ಕ್ಯೂಬೆಕ್ ಬಂಡೆಕುಸಿತ
 • 29 ಏಪ್ರಿಲ್ 1903ರಲ್ಲಿ ಸಂಭವಿಸಿದ ಫ್ರಾಂಕ್ ಸ್ಲೈಡ್, ಟರ್ಟಲ್ ಮೌಂಟನ್, ಆಲ್ಬರ್ಟ, ಕೆನಡಾ
 • ಜುಲೈ 10, 1949ರಲ್ಲಿ ಖೈತ್ ಭೂಕುಸಿತ, ಖೈತ್, ತಜಿಕಿಸ್ತಾನ್, ಸೋವಿಯತ್ ಒಕ್ಕೂಟ
 • ಅಕ್ಟೋಬರ್ 9, 1963ರಲ್ಲಿ ಸಂಭವಿಸಿದ ಮೊಂಟೆ ಟಾಕ್ ಭೂಕುಸಿತ (260 ದಶಲಕ್ಷ ಕ್ಯೂಬಿಕ್ ಮೀಟರ್ ಗಳು), ಇದು ಇಟಲಿಯ ವಜೋಂಟ್ ಆಣೆಕಟ್ಟು ಜಲಾನಯನ ಪ್ರದೇಶಕ್ಕೆ ಬಿದ್ದಿತು, ಇದು ಮೆಗಾಸುನಾಮಿಯನ್ನು ಉಂಟುಮಾಡುವುದರ ಜೊತೆಗೆ ಸುಮಾರು 2000 ಜನರ ಸಾವಿಗೆ ಕಾರಣವಾಯಿತು
 • ಜನವರಿ 9, 1965ರಲ್ಲಿ ಸಂಭವಿಸಿದ ಹೋಪ್ ಸ್ಲೈಡ್ ಭೂಕುಸಿತ (46 ದಶಲಕ್ಷ ಕ್ಯೂಬಿಕ್ ಮೀಟರ್ ಗಳು), ಹೋಪ್, ಬ್ರಿಟಿಶ್ ಕೊಲಂಬಿಯಾ ಸಮೀಪ.[೧೫]
 • 1966ರ ಅಬೇರ್ಫಾನ್ ವಿಪತ್ತು
 • ನವೆಂಬರ್ 30, 1977ರಲ್ಲಿ ಸಂಭವಿಸಿದ ತುವೆ ಭೂಕುಸಿತ, ಗೋಥೆನ್ಬರ್ಗ್, ಸ್ವೀಡನ್.
 • ಆಗಸ್ಟ್ 8, 1979ರಲ್ಲಿ ಸಂಭವಿಸಿದ 1979ರ ಅಬೋಟ್ಸ್ಫೋರ್ಡ್ ಭೂಕುಸಿತ, ಡುನೆಡಿನ್, ನ್ಯೂಜಿಲೆಂಡ್.
 • ವಲ್ಟೆಲ್ಲಿನ ವಿಪತ್ತಿನ ಸಂದರ್ಭದಲ್ಲಿ ಸಂಭವಿಸಿದ ವಾಲ್ ಪೋಲ ಭೂಕುಸಿತ (1987) ಇಟಲಿ
 • 30 ಜುಲೈ 1997ರಲ್ಲಿ ಸಂಭವಿಸಿದ ಥ್ರೆಡ್ಬೊ ಭೂಕುಸಿತ, ಆಸ್ಟ್ರೇಲಿಯಾ, ಇದು ವಸತಿನಿಲಯವನ್ನು ನಾಶಪಡಿಸಿತು.
 • ಡಿಸೆಂಬರ್ 1999ರಲ್ಲಿ ಸಂಭವಿಸಿದ ವರ್ಗಾಸ್ ಮಣ್ಣುಕುಸಿತಗಳು, ಇದು ವೆನೆಜುವೆಲಾದ ವರ್ಗಾಸ್ ರಾಜ್ಯದಲ್ಲಿ ಸುರಿದ ಭಾರಿ ಮಳೆಯ ಕಾರಣದಿಂದ ಉಂಟಾಯಿತು, ಇದು ಸಾವಿರಾರು ಜನರ ಸಾವಿಗೆ ಕಾರಣವಾಯಿತು.
 • ಜೂನ್ 11, 2007ರಲ್ಲಿ ಸಂಭವಿಸಿದ 2007 ಚಿತ್ತಗಾಂಗ್ ಮಣ್ಣುಕುಸಿತ, ಚಿತ್ತಗಾಂಗ್, ಬಾಂಗ್ಲಾದೇಶ.
 • ಸೆಪ್ಟೆಂಬರ್ 6, 2008ರಲ್ಲಿ ಸಂಭವಿಸಿದ 2008ರ ಕೈರೋ ಭೂಕುಸಿತ.
 • 2010ರ ಉಗಾಂಡ ಭೂಕುಸಿತ, ಇದು ಬುಡುಡ ಪ್ರದೇಶದಲ್ಲಿ ಸುರಿದ ಭಾರಿ ಮಳೆಯ ಕಾರಣದಿಂದ 100 ಜನರ ಸಾವಿಗೆ ಕಾರಣವಾಯಿತು.
 • ಆಗಸ್ಟ್ 8, 2010ರಲ್ಲಿ ಸಂಭವಿಸಿದ ಜ್ಹೌಗು ಕೌಂಟಿ ಮಣ್ಣುಕುಸಿತ, ಗಾನ್ಸು, ಚೀನಾ.[೧೬]
 • ಡೆವಿಲ್'ಸ್ ಸ್ಲೈಡ್, ಸ್ಯಾನ್ ಮಟೆಯೋ ಕೌಂಟಿ, ಕ್ಯಾಲಿಫೋರ್ನಿಯಾದಲ್ಲಿ ಇಂದಿಗೂ ಸಂಭವಿಸುತ್ತಿರುವ ಭೂಕುಸಿತ.
 • ಜನವರಿ 11, 2011ರಲ್ಲಿ ಸಂಭವಿಸಿದ 2011 ರಿಯೋ ಡಿ ಜನೈರೊ ಭೂಕುಸಿತ, ರಿಯೋ ಡಿ ಜನೈರೊ, ಬ್ರೆಜಿಲ್, ಇದು ಇಲ್ಲಿಯವರೆಗೆ 610 ಜನರ ಸಾವಿಗೆ ಕಾರಣವಾಗಿದೆ.[೧೭]

ಭೂಮ್ಯತೀತ ಭೂಕುಸಿತಗಳು

Venus-Landslide
ಶುಕ್ರನ ಮೇಲೆ ಸಂಭವಿಸಿದ ಭೂಕುಸಿತಗಳಿಗೆ ಮುನ್ನ ಹಾಗು ನಂತರದ ರೇಡಾರ್ ಚಿತ್ರಣಗಳು.ಚಿತ್ರದ ಬಲಬದಿಯಲ್ಲಿ ಮಧ್ಯಭಾಗಕ್ಕೆ, ಹೊಸ ಭೂಕುಸಿತ ಸಂಭವಿಸಿರುವುದು ಕಂಡುಬರುತ್ತಿದೆ, ಒಂದು ಪ್ರಕಾಶಮಾನವಾದ, ಚಲಿಸುವ-ಮಾದರಿಯ ಪ್ರದೇಶವನ್ನು ಹೊಂದಿರುತ್ತದೆ, ಇದು ಪ್ರಕಾಶಮಾನವಾದ ಬಿರಿತದ ಎಡಭಾಗಕ್ಕೆ ವಿಸ್ತರಿಸುವಂತೆ ಕಂಡುಬರುತ್ತಿದೆ. 1990ರ ಚಿತ್ರ.
Avalanche on Mars February 19th 2008 01
2008-02-19ರಲ್ಲಿ ಮಂಗಳಗ್ರಹದ ಮೇಲೆ ಪ್ರಗತಿಯಲ್ಲಿರುವ ಭೂಕುಸಿತ

ಈ ಹಿಂದೆ ಸಂಭವಿಸಿದ ಹಲವು ಭೂಕುಸಿತಗಳ ಬಗೆಗಿನ ಸಾಕ್ಷ್ಯಗಳು ಸೌರ ಮನ್ಡಲ ಹಲವು ಕಾಯಗಳಲ್ಲೂ ಸಹ ಪತ್ತೆಯಾಗಿರುವುದಕ್ಕೆ ಪುಷ್ಟಿ ನೀಡುತ್ತವೆ, ಆದರೆ ಶೋಧನೆಗಳು ಕೇವಲ ಸೀಮಿತ ಅವಧಿಯಲ್ಲಿ ವೀಕ್ಷಣೆಗಳನ್ನು ನಡೆಸುವುದರ ಜೊತೆಗೆ ಸೌರ ಮಂಡಲದ ಹಲವು ಕಾಯಗಳು ಭೂವೈಜ್ಞಾನಿಕವಾಗಿ ನಿಷ್ಕ್ರಿಯವೆಂದು ಕಂಡು ಬಂದ ಕಾರಣಕ್ಕೆ ಹಲವು ಭೂಕುಸಿತಗಳು ಇತ್ತೀಚಿನ ಸಮಯಗಳಲ್ಲಿ ಸಂಭವಿಸಿಲ್ಲವೆಂದು ಕಂಡುಬರುತ್ತದೆ. ಪರಿಭ್ರಮಿಸುವ ಉಪಗ್ರಹಗಳು ದೀರ್ಘಕಾಲಿಕವಾಗಿ ಶುಕ್ರ ಹಾಗು ಮಂಗಳದ ನಕ್ಷೆ ತಯಾರಿಕೆಯಲ್ಲಿ ತೊಡಗಿವೆ, ಹಾಗು ಎರಡೂ ಗ್ರಹಗಲ್ ಮೇಲೆ ಭೂಕುಸಿತಗಳು ಉಂಟಾದ ಉದಾಹರಣೆಗಳು ದೊರೆತಿವೆ.

ಇವನ್ನೂ ಗಮನಿಸಿ‌

Landslide Buries Valley of the Geysers
ಗೆಯ್ಸರ್ಸ್ ಕಣಿವೆಯಲ್ಲಿ ಸಂಭವಿಸಿದ ಭೂಕುಸಿತದ ಒಂದು ಅವರೊಹಿತ ದೃಶ್ಯಾವಳಿ
 • ಆಟೋಮ್ಯಾಟಿಕ್ ಡಿಫಾರ್ಮೇಶನ್ ಮಾನಿಟರಿಂಗ್ ಸಿಸ್ಟಂ
 • ಡಿಫಾರ್ಮೇಶನ್ ಮಾನಿಟರಿಂಗ್
 • ಭೂಕಂಪ ಎಂಜಿನಿಯರಿಂಗ್
 • ಭೂಗರ್ಭಶಾಸ್ತ್ರದ ತಂತ್ರಜ್ಞಾನ
 • ಭೂತಂತ್ರಗಾರಿಕೆ ಎಂಜಿನೀಯರಿಂಗ್
 • ಭೂಕುಸಿತದ ಅಣೆಕಟ್ಟು
 • ಭೂಕುಸಿತ
 • ಸಂಚಯದ ನಿರುಪಯುಕ್ತತೆ
 • ಇಳಿಜಾರಿನ ಸ್ಥಿರತೆ
 • ಸ್ಟುರ್ಜ್ ಸ್ಟ್ರಾಮ್
 • ಜಲಾಂತರ್ಗಾಮಿ ಭೂಕುಸಿತ
 • ಕೊಚ್ಚಿಕೊಂಡುಹೋಗುವುದು
 • ಮಣ್ಣುಕುಸಿತ
 • ಕ್ಯಾಲಿಫೋರ್ನಿಯಾದ ಭೂಕುಸಿತಗಳು

ಉಲ್ಲೇಖಗಳು‌‌

 1. ೧.೦ ೧.೧ Easterbrook, Don J. (1999). Surface Processes and Landforms. Upper Saddle River: Prentice-Hall. ISBN 0138609586.
 2. ಸ್ಚುಸ್ಟರ್, R.L. & ಕ್ರಿಜೆಕ್, R.J. (1978). ಲ್ಯಾಂಡ್ ಸ್ಲೈಡ್ಸ್: ಅನಾಲಿಸಿಸ್ ಅಂಡ್ ಕಂಟ್ರೋಲ್. ವಾಶಿಂಗ್ಟನ್, D.C.: ನ್ಯಾಷನಲ್ ಅಕ್ಯಾಡೆಮಿ ಆಫ್ ಸೈನ್ಸಸ್.
 3. Renwick,W., Brumbaugh, R. and Loeher, L (1982). "Landslide Morphology and Processes on Santa Cruz Island California". Geografiska Annaler. Series A, Physical Geography. 64 (3/4): 149–159. doi:10.2307/520642.CS1 maint: multiple names: authors list (link)
 4. ಜಾನ್ಸನ್, B.F. ಸ್ಲಿಪರಿ ಸ್ಲೋಪ್ಸ್. ಅರ್ಥ್ ನಿಯತಕಾಲಿಕ. June 2010. ಪುಟಗಳು 48–55.
 5. Chen, Zhaohua; Wang, Jinfei (2007). "Landslide hazard mapping using logistic regression model in Mackenzie Valley, Canada". Natural Hazards. 42: 75. doi:10.1007/s11069-006-9061-6.
 6. Clerici, A; Perego, S; Tellini, C; Vescovi, P (2002). "A procedure for landslide susceptibility zonation by the conditional analysis method1". Geomorphology. 48: 349. doi:10.1016/S0169-555X(02)00079-X.
 7. Metternicht, G; Hurni, L; Gogu, R (2005). "Remote sensing of landslides: An analysis of the potential contribution to geo-spatial systems for hazard assessment in mountainous environments". Remote Sensing of Environment. 98: 284. doi:10.1016/j.rse.2005.08.004.
 8. De La Ville, Noemi; Chumaceiro Diaz, Alejandro; Ramirez, Denisse (2002). Environment, Development and Sustainability. 4: 221. doi:10.1023/A:1020835932757. Missing or empty |title= (help)
 9. Fabbri, Andrea G.; Chung, Chang-Jo F.; Cendrero, Antonio; Remondo, Juan (2003). "Is Prediction of Future Landslides Possible with a GIS?". Natural Hazards. 30: 487. doi:10.1023/B:NHAZ.0000007282.62071.75.
 10. Lee, S; Talib, Jasmi Abdul (2005). "Probabilistic landslide susceptibility and factor effect analysis". Environmental Geology. 47: 982. doi:10.1007/s00254-005-1228-z.
 11. Ohlmacher, G (2003). "Using multiple logistic regression and GIS technology to predict landslide hazard in northeast Kansas, USA". Engineering Geology. 69: 331. doi:10.1016/S0013-7952(03)00069-3.
 12. Weitere Erkenntnisse und weitere Fragen zum Flimser Bergsturz A.v. Poschinger, Angewandte Geologie, Vol. 11/2, 2006
 13. Dingle, R. V. (1977). "The anatomy of a large submarine slump on a sheared continental margin (SE Africa)". Journal of the Geological Society. 134: 293. doi:10.1144/gsjgs.134.3.0293.
 14. ದಿ ಜೈಂಟ್ ರುವಟೋರಿಯಾ ಡೆಬ್ರಿಸ್ ಅವಲಾಂಚೆ ಆನ್ ದಿ ನಾರ್ದರ್ನ್ ಹಿಕುರಂಗಿ ಮಾರ್ಜಿನ್, ನ್ಯೂಜಿಲೆಂಡ್: ರಿಸಲ್ಟ್ ಆಫ್ ಆಬ್ಲೀಕ್ ಸೀಮೌಂಟ್ ಸಬ್ಡಕ್ಶನ್. Agu.org. 2010-12-16ರಂದು ಮರುಸಂಪಾದಿಸಲಾಗಿದೆ.
 15. "Hope Slide". BC Geographical Names. http://apps.gov.bc.ca/pub/bcgnws/names/53154.html.
 16. ಲಾರ್ಜ್ ಲ್ಯಾಂಡ್ ಸ್ಲೈಡ್ ಇನ್ ಗಾನ್ಸು ಜ್ಹೌಗು ಆಗಸ್ಟ್ 7 ಆಗಸ್ಟ್ 19, 2010. 2010ರ ಅಗಸ್ಟ್ 19ರಂದು ಮರುಸಂಪಾದಿಸಲಾಗಿದೆ.
 17. [೧] ಜನವರಿ 13, 2011. ಜನವರಿ 13, 20011ರಲ್ಲಿ ಮರುಸಂಪಾದಿಸಲಾಗಿದೆ.

ಬಾಹ್ಯ ಕೊಂಡಿಗಳು‌‌

ಅಪಘಾತಗಳು

ಅಪಘಾತವು (ಆಕಸ್ಮಿಕ) ಒಂದು ಅನಪೇಕ್ಷಿತ, ಪ್ರಾಸಂಗಿಕ, ಮತ್ತು ಅಯೋಜಿತ ಘಟನೆ. ಅದು ಸಂಭವಿಸುವುದಕ್ಕೆ ಮೊದಲು, ಅದಕ್ಕೆ ದಾರಿಕಲ್ಪಿಸುವ ಸಂದರ್ಭಗಳನ್ನು ಗುರುತಿಸಿ ಕ್ರಮ ತೆಗೆದುಕೊಂಡರೆ ಅಪಘಾತವನ್ನು ತಡೆಗಟ್ಟಬಹುದು. ಅನುದ್ದೇಶಿತ ಗಾಯವನ್ನು ಅಧ್ಯಯನ ಮಾಡುವ ಬಹುತೇಕ ವಿಜ್ಞಾನಿಗಳು "ಅಪಘಾತ" ಪದವನ್ನು ಬಳಸುವುದಿಲ್ಲ ಮತ್ತು ತೀವ್ರ ಗಾಯದ ಅಪಾಯವನ್ನು ಹೆಚ್ಚಿಸುವ ಮತ್ತು ಗಾಯದ ವ್ಯಾಪ್ತಿ ಮತ್ತು ತೀವ್ರತೆಯನ್ನು ಕಡಿಮೆಮಾಡುವ ಅಂಶಗಳ ಮೇಲೆ ಕೇಂದ್ರೀಕರಿಸುತ್ತಾರೆ.

ಅನುದ್ದೇಶಿತ ಮೋಟಾರು ವಾಹನ ಘರ್ಷಣೆಗಳು ಅಥವಾ ಬೀಳಿಕೆಗಳು, ಯಾವುದಾದರೂ ಚೂಪಾದ, ಬಿಸಿಯಾದ, ವಿದ್ಯುತ್ತಿನ ವಸ್ತುವಿನಿಂದ ಗಾಯಗೊಳ್ಳುವುದು ಅಥವಾ ವಿಷ ಸೇವಿಸುವುದು, ಅಪಘಾತಗಳ ಕೆಲವು ಭೌತಿಕ ಉದಾಹರಣೆಗಳು. ಅನುದ್ದೇಶಿತವಾಗಿ ರಹಸ್ಯವನ್ನು ಬಹಿರಂಗ ಮಾಡುವುದು ಅಥವಾ ಏನನ್ನಾದರೂ ತಪ್ಪಾಗಿ ಹೇಳುವುದು, ಅಥವಾ ಭೇಟಿ ಏರ್ಪಾಟನ್ನು ಮರೆಯುವುದು, ಇತ್ಯಾದಿಗಳು ಅಭೌತಿಕ ಉದಾಹರಣೆಗಳು.

ಕಾರ್ಯ ನಿರ್ವಹಣೆಯ ಅವಧಿಯಲ್ಲಿನ ಅಥವಾ ಅದರಿಂದ ಉದ್ಭವಿಸಿದ ಅಪಘಾತಗಳನ್ನು ಕೆಲಸದ ಅಪಘಾತಗಳೆಂದು ಕರೆಯಲಾಗುತ್ತದೆ. ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಪ್ರಕಾರ, ಪ್ರತಿ ವರ್ಷ ಕೆಲಸದ ಸಮಯದಲ್ಲಿ ೩೩೭ ಮಿಲಿಯಕ್ಕಿಂತ ಹೆಚ್ಚು ಅಪಘಾತಗಳು ಆಗುತ್ತವೆ, ಪರಿಣಾಮವಾಗಿ, ಔದ್ಯೋಗಿಕ ರೋಗಗಳೊಂದಿಗೆ, ವಾರ್ಷಿಕವಾಗಿ ೨.೩ ಮಿಲಿಯಕ್ಕಿಂತ ಹೆಚ್ಚು ಸಾವುಗಳು ಸಂಭವಿಸುತ್ತವೆ. ವ್ಯತಿರಿಕ್ತವಾಗಿ, ಬಿಡುವು ಸಂಬಂಧಿತ ಅಪಘಾತಗಳು ಮುಖ್ಯವಾಗಿ ಕ್ರೀಡಾ ಗಾಯಗಳಾಗಿರುತ್ತವೆ.

ವಿಷಗಳು, ವಾಹನ ಡಿಕ್ಕಿಗಳು ಮತ್ತು ಬೀಳಿಕೆಗಳು ಮಾರಕ ಗಾಯಗಳ ಅತ್ಯಂತ ಸಾಮಾನ್ಯ ಕಾರಣಗಳಾಗಿವೆ. ಅಮೇರಿಕದ ಆರೋಗ್ಯ ಅಂಕಿಅಂಶಗಳ ರಾಷ್ಟ್ರೀಯ ಕೇಂದ್ರದ ರಾಷ್ಟ್ರೀಯ ಜನನ ಮರಣ ಅಂಕಿಅಂಶಗಳಿಂದ ಪಡೆದ ದತ್ತಾಂಶ ಬಳಸಿದ ಮನೆಯಲ್ಲಿ ಅನುಭವಿಸಿದ ಗಾಯಗಳ ಒಂದು ೨೦೦೫ರ ಸಮೀಕ್ಷೆಯ ಪ್ರಕಾರ ಬೀಳಿಕೆಗಳು, ವಿಷ ಸೇರಿಕೆ ಮತ್ತು ಬೆಂಕಿ/ಸುಟ್ಟ ಗಾಯಗಳು ಮರಣಗಳ ಅತ್ಯಂತ ಸಾಮಾನ್ಯ ಕಾರಣಗಳು.

ಅರಣ್ಯನಾಶ

ಅರಣ್ಯನಾಶ ಎಂದರೆ ನೈಸರ್ಗಿಕವಾಗಿ ಕಾಣಸಿಗುವ ಅರಣ್ಯಗಳನ್ನು ಮಾನವ ಚಟುವಟಿಕೆಗಳಾದ ಕತ್ತರಿಸುವಿಕೆ ಹಾಗೂ/ಅಥವಾ ಬೆಂಕಿಯಿಂದ ಅರಣ್ಯ ಪ್ರದೇಶದ ಮರಗಿಡಗಳನ್ನು ನಾಶಕ್ಕೊಳಪಡುವ ಕ್ರಿಯೆಯಾಗಿದೆ.

ಅರಣ್ಯನಾಶಕ್ಕೆ ಹಲವಾರು ಕಾರಣಗಳಿವೆ: ಮರಗಳು ಅಥವಾ ಅವುಗಳಿಂದ ದೊರಕುವ ಇದ್ದಿಲನ್ನು ಇಂಧನಕ್ಕಾಗಿ ಅಥವಾ ಮಾನವರಿಂದ ಬಳಕೆಯಾಗಲ್ಪಡುವ ಉತ್ಪನ್ನಗಳನ್ನಾಗಿ ಮಾರಾಟ ಮಾಡಲಾಗುತ್ತದೆ, ಇದರ ಜೊತೆಗೆ ತೆರವುಗೊಂಡ ಭೂಮಿಯನ್ನು ಮಾನವರು ಜಾನುವಾರುಗಳ ಮೇವಿಗಾಗಿ, ವಾಣಿಜ್ಯ ಉತ್ಪನ್ನಗಳನ್ನು ಪಡೆಯಲು, ಹಾಗೂ ವಾಸಯೋಗ್ಯ ಸ್ಥಳಗಳಿಗಾಗಿ ಬಳಕೆ ಮಾಡಲಾಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಅರಣ್ಯ ಪುನರ್‌ ನಿರ್ಮಾಣ ಮಾಡದೇ ಜನರು ಮರಗಳನ್ನು ಕಡಿದುಹಾಕುತ್ತಿದ್ದಾರೆ, ಇದರಿಂದಾಗಿ ವಾಸಸ್ಥಾನಗಳಿಗೆ ಆದ ಹಾನಿಯಿಂದಾಗಿ ಜೀವ ವೈವಿಧ್ಯತೆ ನಾಶವಾಗಿದ್ದು ವಾತಾವರಣದಲ್ಲಿ ಶುಷ್ಕತೆ ಹೆಚ್ಚುತ್ತಿದೆ. ಇದರಿಂದಾಗಿ ವಾತಾವರಣದ ಇಂಗಾಲ ಡೈಆಕ್ಸೈಡ್‌ನ ಜೀವಿಗಳ ಸೇವನೆಯ ಪ್ರಮಾಣದಲ್ಲಿ ಮತ್ತಷ್ಟು ಏರುಪೇರಾಗಿ ಜೀವಿಗಳ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ. ಅರಣ್ಯನಾಶವಾದ ಪ್ರದೇಶಗಳು ಮಹತ್ತರ ದುಷ್ಪರಿಣಾಮವಾದ ಮಣ್ಣಿನ ಸವಕಳಿಗೆ ಒಳಗಾಗುತ್ತವೆ ಹಾಗೂ ಅವುಗಳು ಆಗಿಂದಾಗ್ಗೆ ಬಂಜರು ಭೂಮಿಯಾಗಿ ಪರಿವರ್ತನೆಗೊಳ್ಳುತ್ತದೆ.

ನೈಜ ಮೌಲ್ಯಗಳ ಕುರಿತಾದ ತಾತ್ಸಾರ ಅಥವಾ ಅಜ್ಞಾನ, ಬೇಜವಾಬ್ದಾರಿತನ, ಅರಣ್ಯ ನಿರ್ವಹಣೆಯಲ್ಲಿ ಅಜಾಗರೂಕತೆ ಹಾಗೂ ಪರಿಸರ ಕಾನೂನುಗಳಲ್ಲಿರುವ ಸಡಿಲ ನೀತಿಗಳು ದೊಡ್ಡಪ್ರಮಾಣದಲ್ಲಿ ಅರಣ್ಯನಾಶವಾಗಲು ಪ್ರಮುಖ ಕಾರಣಗಳಾಗಿವೆ. ಹಲವಾರು ದೇಶಗಳಲ್ಲಿ, ಅರಣ್ಯನಾಶ ನಿರಂತರ ಪ್ರಕ್ರಿಯೆಯಾಗಿದ್ದು, ಅಳಿವು, ಹವಾಮಾನ ಬದಲಾವಣೆ, ಮರುಭೂಮೀಕರಣಗೊಳ್ಳುವಿಕೆಯಿಂದ ಸ್ಥಳೀಯ ಜನರ ಸ್ಥಳಾಂತರಕ್ಕೆ ಕೂಡ ಕಾರಣವಾಗಿವೆ.

GDP ತಲಾವಾರು ಆದಾಯ ಕನಿಷ್ಟ US$ 4,600ನಷ್ಟು ಇರುವ ದೇಶಗಳಲ್ಲಿ, ಅರಣ್ಯನಾಶದ ಒಟ್ಟು ಪ್ರಮಾಣದ ಏರಿಕೆಗಳು ನಿಲ್ಲುತ್ತಿವೆ.

ಕತ್ರಿನಾ ಚಂಡಮಾರುತ

ಟೆಂಪ್ಲೇಟು:Katrina

2005ರ ಅಟ್ಲಾಂಟಿಕ್ ಚಂಡಮಾರುತ ಕತ್ರಿನಾ ಚಂಡಮಾರುತ ವು ಭಾರಿ ನಷ್ಟಕ್ಕೆ ಕಾರಣವಾದ ಚಂಡಮಾರುತವಾಗಿದೆ. ಇದು ಅಮೆರಿಕ ಸಂಯುಕ್ತ ಸಂಸ್ಥಾನದ ಇತಿಹಾಸದಲ್ಲಿನ ಹಲವಾರು ಮಂದಿಯ ಮರಣಕ್ಕೆ ಕಾರಣವಾದ ಐದು ಘಟನೆಗಳಲ್ಲಿ ಒಂದಾಗಿದೆ. ದಾಖಲಾದ ಅಟ್ಲಾಂಟಿಕ್ ಚಂಡಮಾರುತಗಳಲ್ಲಿ ಇದು ಆರನೇ ಅತಿ ಪ್ರಬಲವಾದುದಾಗಿದೆ.

ಕತ್ರಿನಾ ಚಂಡಮಾರುತವು 2005ರ ಆಗಸ್ಟ್ 23ರಲ್ಲಿ ಬಹಮಾಸ್ನಲ್ಲಿ ಹುಟ್ಟಿಕೊಂಡು, ದಕ್ಷಿಣ ಫ್ಲೋರಿಡಾಕ್ಕೆ ತೀವ್ರತೆ 1ರ ಚಂಡಮಾರುತವಾಗಿ ಸಾಗಿತು. ಅಲ್ಲಿ ಕೆಲವು ಸಾವುಗಳಿಗೆ ಮತ್ತು ಪ್ರವಾಹಕ್ಕೆ ಕಾರಣವಾದ ಇದು ನಂತರ ಗಲ್ಫ್ ಆಫ್ ಮೆಕ್ಸಿಕೊದಲ್ಲಿ ತೀವ್ರವಾಗಿ ಪ್ರಬಲಗೊಂಡಿತು. ಚಂಡಮಾರುತವು ಅದರ ಎರಡನೇ ಭೂಸ್ಪರ್ಶವನ್ನು ಆಗ್ನೇಯ ಲೂಸಿಯಾನದಲ್ಲಿ ಆಗಸ್ಟ್ 29ರ ಸೋಮವಾರದಂದು ಬೆಳಗ್ಗೆ ತೀವ್ರತೆ 3 ಆಗಿ ಮಾಡುವ ಮೊದಲು ದುರ್ಬಲಗೊಂಡಿತು. ಇದು ಗಲ್ಫ್ ಕರಾವಳಿಯಾದ್ಯಂತ ಕೇಂದ್ರ ಫ್ಲೋರಿಡಾದಿಂದ ಟೆಕ್ಸಾಸ್‌ವರೆಗೆ ತೀವ್ರ ಹಾನಿಯನ್ನು ಉಂಟುಮಾಡಿತು. ಇವೆಲ್ಲವೂ ಹೆಚ್ಚಾಗಿ ಚಂಡಮಾರುತದ ಹಠಾತ್ ಉಲ್ಬಣದ ಕಾರಣದಿಂದ ಆಯಿತು. ಅತಿಹೆಚ್ಚಿನ ಪ್ರಾಣ ಹಾನಿಯು ನ್ಯೂ ಓರ್ಲಿಯನ್ಸ್‌, ಲೂಸಿಯಾನದಲ್ಲಿ ಸಂಭವಿಸಿತು. ಹೆಚ್ಚಿನ ಸಂದರ್ಭಗಳಲ್ಲಿ ಚಂಡಮಾರುತವು ಒಳನಾಡಿಗೆ ಪ್ರವೇಶಿಸಿದ ನಂತರ ಪ್ರವಾಹತಡೆ ವ್ಯವಸ್ಥೆಯು ಮಹಾದುರಂತವಾಗಿ ವಿಫಲಗೊಂಡಿದುದರಿಂದ ಈ ಪ್ರದೇಶಗಳು ಪ್ರವಾಹದಿಂದ ಕೊಚ್ಚಿಹೋದುದರಿಂದ ಈ ಹಾನಿ ಉಂಟಾಯಿತು. ಅಂತಿಮವಾಗಿ 80%ನಷ್ಟು ನಗರ ಮತ್ತು ಹತ್ತಿರದ ಪ್ಯಾರಿಷ್‌ಗಳ ವಿಶಾಲ ಪ್ರದೇಶಗಳು ಪ್ರವಾಹದಿಂದ ಮುಳುಗಿದವು ಹಾಗೂ ಪ್ರವಾಹದ ನೀರು ಕೆಲವು ವಾರಗಳವರೆಗೆ ಹಾಗೆಯೇ ಉಳಿದುಕೊಂಡಿತ್ತು.

ಅತಿ ಹೆಚ್ಚಿನ ಸಂಪತ್ತು ನಷ್ಟವು ಮಿಸಿಸಿಪ್ಪಿ ಕಡಲ ಕಿನಾರೆಯ ನಗರಗಳಂತಹ ಕರಾವಳಿ ಪ್ರದೇಶಗಳಲ್ಲಿ ಕಂಡುಬಂದಿತು. ಇಲ್ಲಿ ಈ ಚಂಡಮಾರುತವು ದೋಣಿಗಳನ್ನು ಮತ್ತು ಮೋಜಿನ ನೌಕಾಗೃಹಗಳನ್ನು ಕಟ್ಟಡಗಳಿಗೆ ಬಲವಾಗಿ ಬಡಿಯುವಂತೆ ಮಾಡಿ, ಕಾರುಗಳನ್ನು ಮತ್ತು ಮನೆಗಳನ್ನು ಒಳಪ್ರದೇಶಕ್ಕೆ ತಳ್ಳಿ, ಕರಾವಳಿಯಿಂದ 6–12 ಮೈಲುಗಳಷ್ಟು (10–19 ಕಿಮೀ) ದೂರ ನೀರಿನಿಂದ ಆವರಿಸುವಂತೆ ಮಾಡಿ, ಸುಮಾರು 90%ನಷ್ಟು ಭಾಗವನ್ನು ಪ್ರವಾಹದಿಂದ ಮುಳುಗಿಸಿತು.

ಕನಿಷ್ಠ 1,836 ಜನರು ಈ ಚಂಡಮಾರುತದಿಂದ ಮತ್ತು ಆನಂತರದ ಪ್ರವಾಹದಿಂದ ಜೀವಕಳೆದುಕೊಂಡರು. ಈ ಮೂಲಕ ಇದು 1928ರ ಒಕೀಚೊಬೀ ಚಂಡಮಾರುತದ ನಂತರದ ಮಾರಣಾಂತಿಕ U.S. ಚಂಡಮಾರುತವನ್ನಾಗಿ ಮಾಡಿದೆ. 2005ರ ಕತ್ರಿನಾ ಚಂಡಮಾರುತವು ಅಮೆರಿಕ ಸಂಯುಕ್ತ ಸಂಸ್ಥಾನದ ಇತಿಹಾಸದಲ್ಲೇ ಅತಿ ದೊಡ್ಡ ನೈಸರ್ಗಿಕ ದುರ್ಘಟನೆಯಾಗಿದೆ. ಈ ಚಂಡಮಾರುತದಿಂದಾಗ ಒಟ್ಟು ಹಾನಿಯು $81 ಶತಕೋಟಿಯಷ್ಟಿತ್ತು (2005 USD). ಇದು 1992ರ ಆಂಡ್ರಿವ್ ಚಂಡಮಾರುತದಿಂದ ಉಂಟಾದ ನಷ್ಟದ ಸುಮಾರು ಮ‌ೂರು ಪಟ್ಟು ಹೆಚ್ಚಾಗಿದೆ.ಪ್ರವಾಹ ತಡೆ ವಿಫಲತೆಗಳು, 1965ರ ಪ್ರವಾಹ ನಿಯಂತ್ರಣ ಕಾಯಿದೆಯಲ್ಲಿ ನಿರ್ದೇಶಿಸಿದಂತೆ US ಆರ್ಮಿ ಕಾರ್ಪ್ಸ್ ಆಫ್ ಇಂಜಿನಿಯರ್ಸ್‌‌ಗೆ (USACE) ಸಂಬಂಧಿಸಿದ ಅವುಗಳ ವಿನ್ಯಾಸ ಮತ್ತು ನಿರ್ಮಾಣದ ಬಗ್ಗೆ ವಿಚಾರಣೆ ಮಾಡುವಂತೆ ಮತ್ತು ಅವುಗಳ ನಿರ್ವಹಣೆಯನ್ನು ಸ್ಥಳೀಯ ಪ್ರವಾಹ ತಡೆ ಮಂಡಳಿಗಳು ನೋಡಿಕೊಳ್ಳುವಂತೆ ಪ್ರೇರೇಪಿಸಿದವು. ಫೆಡರಲ್, ರಾಜ್ಯ ಮತ್ತು ಸ್ಥಳೀಯ ಸರಕಾರಗಳ ಪ್ರತಿಕ್ರಿಯೆಗಳ ಬಗ್ಗೆಯ‌ೂ ವಿಚಾರಣೆ ನಡೆಯಿತು. ಇದರ ಫಲವಾಗಿ ಫೆಡರಲ್ ಎಮರ್ಜೆನ್ಸಿ ಮ್ಯಾನೇಜ್ಮೆಂಟ್ ಏಜೆನ್ಸಿಯ (FEMA) ನಿರ್ದೇಶಕ ಮೈಕೆಲ್ D. ಬ್ರೌವ್ನ್‌‌ ಮತ್ತು ನ್ಯೂ ಓರ್ಲಿಯನ್ಸ್‌ ಪೋಲೀಸ್ ಡಿಪಾರ್ಟ್ಮೆಂಟ್‌‌ನ (NOPD) ವ್ಯವಸ್ಥಾಪಕ ಎಡ್ಡೀ ಕೊಂಪಾಸ್‌ ಮೊದಲಾದವರು ರಾಜಿನಾಮೆ ನೀಡಿದರು. ಇದಕ್ಕೆ ವಿರುದ್ಧವಾಗಿ, ಯುನೈಟೆಡ್ ಸ್ಟೇಟ್ಸ್ ಕೋಸ್ಟ್ ಗಾರ್ಡ್‌ (USCG), ನ್ಯಾಷನಲ್ ಹರಿಕೇನ್ ಸೆಂಟರ್‌ (NHC) ಮತ್ತು ನ್ಯಾಷನಲ್ ವೆದರ್ ಸರ್ವಿಸ್‌ (NWS) ಇತ್ಯಾದಿಗಳು ಅವುಗಳ ಚಟುವಟಿಕೆ, ನಿಖರವಾದ ಮುನ್ಸೂಚನೆ ಮತ್ತು ಹೆಚ್ಚಿನ ಮಾರ್ಗದರ್ಶನದಿಂದಾಗಿ ವ್ಯಾಪಕವಾಗಿ ಪ್ರಶಂಸೆಗೆ ಪಾತ್ರವಾಗಿವೆ.ಹೆಚ್ಚುಕಡಿಮೆ ಐದು ವರ್ಷಗಳ ನಂತರವೂ, ಮಿಸಿಸಿಪ್ಪಿ ಮತ್ತು ಲೂಸಿಯಾನದ ಸಾವಿರಾರು ಸ್ಥಳಾಂತರಿಸಿದ ನಿವಾಸಿಗರು ಇನ್ನೂ ಮೋಟಾರು ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಲೂಸಿಯಾನದ ದಕ್ಷಿಣದ ಪ್ರತಿಯೊಂದು ಭಾಗದ ಪುನರ್ನಿರ್ಮಾಣವನ್ನು ಆರ್ಮಿ ಕಾರ್ಪ್ಸ್‌ನ LACPR ಫೈನಲ್ ಟೆಕ್ನಿಕಲ್ ರಿಪೋರ್ಟ್‌ನಲ್ಲಿ ತಿಳಿಸಲಾಗಿದೆ. ಇದು ಪುನಃ ನಿರ್ಮಾಣದ ಮಾಡಬಾರದ ಪ್ರದೇಶಗಳನ್ನು ಹಾಗೂ ಉತ್ತಮಗೊಳಿಸಬೇಕಾದ ಪ್ರದೇಶಗಳು ಮತ್ತು ಕಟ್ಟಡಗಳನ್ನು ಗುರುತಿಸುತ್ತದೆ.

ಕೇದಾರನಾಥ ಮತ್ತು ಪ್ರಕೃತಿ ವಿಕೋಪ

ಕೇದಾರನಾಥ ಮತ್ತು ಪ್ರಕೃತಿ ವಿಕೋಪ

ಕ್ಷರಣ/ಸವೆತ

ಸವೆತ ವು ನೈಸರ್ಗಿಕ ಪರಿಸರದಲ್ಲಿ ಅಥವಾ ಅವುಗಳ ಮೂಲದಲ್ಲಿ ಘನವಸ್ತುಗಳ ಸೆಡಿಮೆಂಟ್(ಕಣ),ಮಣ್ಣು,ಕಲ್ಲು ಮತ್ತಿತರ ಕಣಗಳುಹವೆಯ ಪ್ರಭಾವದಿಂದ ವಿಘಟನೆ ಮತ್ತು ಸಾಗಣೆಯಾಗಿ ಬೇರೆ ಕಡೆ ಶೇಖರಣೆಯಾಗುವ ಪ್ರಕ್ರಿಯೆ. ಇದು ಸಾಮಾನ್ಯವಾಗಿ ಗಾಳಿ,ನೀರು ಅಥವಾ ಹಿಮದ ಸಾಗಣೆಯಿಂದ ಸಂಭವಿಸುತ್ತದೆ; ಇಳಿಜಾರಿನಲ್ಲಿ ಮಣ್ಣು ಅಥವಾ ಇತರ ವಸ್ತುಗಳು ಗುರುತ್ವ ಬಲದಿಂದ ಜಾರುವ ಮೂಲಕ,ಅಥವಾ ಜೈವಿಕಸವೆತದಲ್ಲಿ ನೆಲದಡಿ ವಾಸಿಸುವ ಜೀವಿಗಳಿಂದ ಉಂಟಾಗುತ್ತದೆ.

ಭೂಸವೆತವು ನೈಸರ್ಗಿಕ ಕ್ರಿಯೆಯಾಗಿದ್ದು, ಮಾನವ ಭೂಬಳಕೆಯಿಂದ ಇದು ಗಮನಾರ್ಹವಾಗಿ ಹೆಚ್ಚಿದೆ. ವಿಶೇಷವಾಗಿ ಕೈಗಾರಿಕೆ ಕೃಷಿ,ಕಾಡು ಕಡಿಯುವಿಕೆ ಮತ್ತು ಪಟ್ಟಣದ ಯದ್ವಾತದ್ವಾ ಬೆಳವಣಿಗೆ. ನೈಸರ್ಗಿಕ ಸಸ್ಯವರ್ಗದ ಭೂಮಿ ಅಥವಾ ಸುಸ್ಥಿರ ಕೃಷಿಪದ್ದತಿಗಳಲ್ಲಿ ಬಳಸುವ ಭೂಮಿಗಿಂತ, ಕೈಗಾರಿಕೆ ಕೃಷಿಗೆ ಬಳಸಲಾದ ಭೂಮಿ ಸಾಮಾನ್ಯವಾಗಿ ಗಮನಾರ್ಹ ಹೆಚ್ಚಿನ ಪ್ರಮಾಣದ ಸವೆತಕ್ಕೆ ಗುರಿಯಾಗುತ್ತದೆ. ವಿಶೇಷವಾಗಿ ಭೂಮಿಯನ್ನು ಉಳುಮೆಗೆ ಬಳಸುವ ವಿಚಾರದಲ್ಲಿ ಇದು ನಿಜ, ಇದು ನೆಲದ ಮೇಲ್ಭಾಗದಲ್ಲಿ ಸಸ್ಯಗಳ ಹೊದಿಕೆಯನ್ನು ಕಡಿಮೆ ಮಾಡುತ್ತದೆ ಹಾಗೂ ಮಣ್ಣಿನ ರಚನೆ ಮತ್ತು ಸಸ್ಯದ ಬೇರುಗಳು ಎರಡಕ್ಕೂ ಹಾನಿವುಂಟುಮಾಡುತ್ತದೆ. ಉಳುಮೆ ಮಾಡಿಲ್ಲದಿದ್ದರೆ ಅವು ಮಣ್ಣನ್ನು ಇರುವ ಸ್ಥಳದಲ್ಲೇ ಭದ್ರವಾಗಿ ಹಿಡಿದಿಡುತ್ತಿತ್ತು. ಆದಾಗ್ಯೂ,ಸುಧಾರಿತ ಭೂಬಳಕೆ ಪದ್ಧತಿಗಳಿಂದ ಸವೆತವನ್ನು ತಪ್ಪಿಸಬಹುದು.ಎತ್ತರದ ಪ್ರದೇಶದ ಕೃಷಿ,ಸಾಂಪ್ರದಾಯಿಕ ಉಳುಮೆ ಪದ್ಧತಿಗಳು ಮತ್ತು ಗಿಡ ನೆಡುವಿಕೆ.

ಸ್ವಲ್ಪ ಪ್ರಮಾಣದ ಸವೆತವು ನೈಸರ್ಗಿಕವಾಗಿದ್ದು,ವಾಸ್ತವವಾಗಿ ಪರಿಸರವ್ಯವಸ್ಥೆಗೆ ಆರೋಗ್ಯಕರವಾಗಿದೆ. ಉದಾಹರಣೆಗೆ,ನೀರಿನ ತೊರೆಗಳಲ್ಲಿ ನರುಜುಕಲ್ಲುಗಳು ಸತತವಾಗಿ ನೀರುಹರಿಯುವ ದಿಕ್ಕಿನಲ್ಲಿ ಸಾಗುತ್ತದೆ. ವಿಪರೀತ ಸವೆತವು ಆದಾಗ್ಯೂ ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತವೆ. ನೀರಿನ ರಾಡಿ,ಪರಿಸರವ್ಯವಸ್ಥೆ ನಾಶ ಮತ್ತು ಒಟ್ಟಾರೆ ಮಣ್ಣಿನ ನಷ್ಟ.

ಸವೆತವು ವೆದರಿಂಗ್(ಹವೆಯ ಪ್ರಭಾವಕ್ಕೆ ವಿಘಟನಗೊಳ್ಳುವ ಪ್ರಕ್ರಿಯೆ)ನಿಂದ ವ್ಯತ್ಯಾಸವನ್ನು ಹೊಂದಿದೆ. ವೆದರಿಂಗ್ ಕಲ್ಲಿನಲ್ಲಿರುವ ಖನಿಜಗಳ ರಾಸಾಯನಿಕ ಅಥವಾ ನೈಸರ್ಗಿಕ ವಿಘಟನೆ.ಇವೆರಡೂ ಪ್ರಕ್ರಿಯೆಗಳು ಜತೆಜತೆಯಾಗಿ ಉಂಟಾಗಬಹುದು.

ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳು

ಜಾಗತಿಕ ತಾಪಮಾನ ಏರಿಕೆಯ ಅಪಾಯಗಳು ಮತ್ತು ಪರಿಣಾಮಗಳ ಬಗ್ಗೆ ನೀಡಲಾದ ಗ್ರಾಫಿಕಲ್ ವಿವರಣೆ. ಈ ವರದಿಗೆ ನಂತರ ಮಾಡಲಾದ ಸುಧಾರಣೆಗಳ ಪ್ರಕಾರ ಅಪಾಯಗಳು

ಗಣನೀಯವಾಗಿ ಹೆಚ್ಚಾದವು.ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳು ಮತ್ತು ಹವಾಗುಣ ಬದಲಾವಣೆಗಳು ಈ ಲೇಖನದಲ್ಲಿ "ಜಾಗತಿಕ ತಾಪಮಾನ ಏರಿಕೆ" ಮತ್ತು "ಹವಾಗುಣ ಬದಲಾವಣೆ"

- ಈ ಎರಡೂ ಪದಗಳನ್ನು ಒಂದರ ಬದಲಾಗಿ ಇನ್ನೊಂದರಂತೆ ಬಳಸಲಾಗಿದೆ. ಪರಿಸರ ಮತ್ತು ಮಾನವ ಜೀವನದ ಬಗ್ಗೆ ಕಳಕಳಿ ಮೂಡಿಸಿವೆ. ಉಪಕರಣ ಮೂಲದ ಉಷ್ಣತಾ ದಾಖಲೆಗಳು, ಏರುತ್ತಿರುವ ಸಮುದ್ರಮಟ್ಟಗಳು, ಹಾಗೂ ಉತ್ತರ ಗೋಳಾರ್ಧದಲ್ಲಿ ಕಡಿಮೆಯಾಗುತ್ತಿರುವ ಹಿಮವೇ ಮುಂತಾದುವುಗಳನ್ನು ಹವಾಗುಣ ಬದಲಾವಣೆಯ ಸಾಕ್ಷಿಗಳನ್ನಾಗಿ ಬಳಸಿಕೊಳ್ಳಲಾಗಿದೆ ಪ್ರಕಾರ, "20ನೇ ಶತಮಾನದ ಮಧ್ಯಭಾಗದಿಂದಲೂ ಗಮನಿಸಲಾಗುತ್ತಿರುವ ಹೆಚ್ಚಿನಜಾಗತಿಕ ಸರಾಸರಿ ತಾಪಮಾನದಲ್ಲಿನ ಏರಿಕೆಗೆ ಇರಬಹುದಾದ ಕಾರಣ ಎಂದರೆ ಮಾನವ ಹಸಿರುಮನೆ ಅನಿಲಗಳ

ಸಾಂದ್ರತೆಗಳಲ್ಲಿ ಕಂಡುಬರುತ್ತಿರುವ ಹೆಚ್ಚಳ". ಭವಿಷ್ಯದ ಹವಾಗುಣ ಬದಲಾವಣೆಗಳು ಜಾಗತಿಕ ತಾಪಮಾನ ಏರಿಕೆಯ ಹೆಚ್ಚಳ (ಎಂದರೆ, ಸರಾಸರಿ ಜಾಗತಿಕ ಉಷ್ಣತೆಯ ಪ್ರವೃತ್ತಿಯಲ್ಲಿ ಏರಿಕೆ),

ಸಮುದ್ರಮಟ್ಟದಲ್ಲಿ ಏರಿಕೆ, ಹಾಗೂ ಕೆಲವು ಹವಾಮಾನ ವೈಪರೀತ್ಯದ ಘಟನೆಗಳ ಪುನರಾವರ್ತನೆಯಲ್ಲಿ ಆಗಬಹುದಾದ ಏರಿಕೆಗಳನ್ನು ಒಳಗೊಂಡಿರುವುದೆಂದು ಊಹೆ ಮಾಡಲಾಗಿದೆ.

ಪರಿಸರವ್ಯವಸ್ಥೆಗಳು ಹವಾಗುಣ ಬದಲಾವಣೆಗಳಿಗೆ ಹೆಚ್ಚು ಭೇದ್ಯವಾಗಿರುವುದನ್ನು ಗಮನಿಸಲಾಗಿದೆ. ಭವಿಷ್ಯದ ಹವಾಗುಣ ಬದಲಾವಣೆಗೆ ಹೊಂದಿಕೊಳ್ಳುವಲ್ಲಿ ಮಾನವ ವ್ಯವಸ್ಥೆಗಳು

ವೈವಿಧ್ಯಮಯ ಸಾಮರ್ಥ್ಯಗಳನ್ನು ಹೊಂದಿರುವುದನ್ನು ಕಾಣಬಹುದು.ಭವಿಷ್ಯದ ಹವಾಗುಣದಲ್ಲಿ ದೊಡ್ಡ ಬದಲಾವಣೆಗಳ ಅಪಾಯವನ್ನು ಕಡಿಮೆಮಾಡುವ ಸಲುವಾಗಿ, ಹಲವಾರು ದೇಶಗಳು

ತಮ್ಮ ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಹಲವಾರು ಕಾರ್ಯನೀತಿಗಳನ್ನು ರೂಪಿಸಿಕೊಂಡು ಜಾರಿಗೆ ತಂದಿವೆ.

ನಯಾಗರ ಜಲಪಾತ

ನಯಾಗರ ಫಾಲ್ಸ್, (Niagara Falls) (/naɪˈæɡrə/) ಅಮೆರಿಕ ಸಂಯುಕ್ತ ಸಂಸ್ಥಾನ, ಮತ್ತು ಕೆನಡಾ ದೇಶಗಳ ಅತಿದೊಡ್ಡ ಮತ್ತು ಅತ್ಯಂತ ಸುಂದರ ಜಲಪಾತ. ಈ ಜಲಪಾತ ಎರಡು ದೇಶಗಳಲ್ಲಿ ಹರಡಿಕೊಂಡಿದೆ. ಜಲಪಾತದ ಒಂದು ಭಾಗದಲ್ಲಿ ಅಮೆರಿಕ ಇನ್ನೊಂದು ತುದಿಯಲ್ಲಿ ಕೆನಡ. ಇವೆರಡರ ಮಧ್ಯೆ ನಯಾಗರ ನದಿ ಹರಿಯುತ್ತದೆ. ಅಮೆರಿಕದ ಈರಿ ಸರೋವರ ಮತ್ತು ಕೆನಡದ ಒಂಟಾರಿಯೋ ಸರೋವರಗಳ ಮಧ್ಯೆ ಇರುವ ಸಣ್ಣ ನಯಾಗರ ನದಿ, ಈ ಅದ್ಭುತ ಜಲಪಾತ ಸೃಷ್ಟಿಸಿದೆ. ನಯಾಗರ ಮೂರು ಜಲಪಾತಗಳನ್ನು ಹೊಂದಿದೆ.

ಅಮೇರಿಕನ್ ಜಲಪಾತ, (ಚಿಕ್ಕದು)

ಬ್ರೈಡಲ್ ಜಲಪಾತ, (ಅತಿ ಚಿಕ್ಕದು)

ಕೆನಡಿಯನ್, ಅಥವಾ ಕುದುರೆ ಲಾಳಿಯನ್ನು ಹೋಲುವ ಜಲಪಾತ. (ಗಾತ್ರದಲ್ಲಿ ದೊಡ್ಡದು)ಅಂತಾರಾಷ್ಟ್ರೀಯ ಸೀಮಾರೇಖೆಯನ್ನುಮೊದಲು 'ಹಾರ್ಸ್ ಶೂ ಫಾಲ್ಸ್' ಕಡೆಯಿಂದ ೧೮೧೯ ರಲ್ಲಿ ಎಳೆದು ನಿರ್ಧಾರಮಾಡಿದ ಜಾಗವನ್ನು ಎರಡೂ ಕಡೆಯವರು ಒಪ್ಪಿಕೊಳ್ಳುತ್ತಿಲ್ಲ. ಸ್ವಾಭಾವಿಕ ಭೂಕುಸಿತ ಮತ್ತು ನೀರಿನ ಕೊರೆತಗಳಿಂದ ಕೊಚ್ಚಿಹೋದ ಭೂಮಿಯ ಬಗ್ಗೆ ಮತ್ತು ಕಟ್ಟಡನಿರ್ಮಾಣದಿಂದ ಆಗಿರುವ ಆಕ್ರಮಣಗಳಿಂದ ಅಲ್ಲಿನ ಜನಕ್ಕೆ ಸಮಾಧಾನ ಸಿಕ್ಕದೆ, ಆ ಜಾಗ ವಿವಾದದಲ್ಲಿದೆ.

ನೈಸರ್ಗಿಕ ವಿಕೋಪ

ಮಾನವನ ಜೀವ ಅಥವಾ ಸಾಮಾಜಿಕ ಚಟುವಟಿಕೆಗಳಿಗೆ ಹಾನಿ ಉಂಟುಮಾಡುವ ನೈಸರ್ಗಿಕ ಪ್ರಕ್ರಿಯೆಗಳು ನೈಸರ್ಗಿಕ ವಿಪತ್ತುಗಳು ಅಥವಾ ನೈಸರ್ಗಿಕ ವಿಕೋಪಗಳು. ಮಾನವನ ಚಟುವಟಿಕೆಗಳ ಮೇಲೆ ಪ್ರಭಾವ ಬೀರದಿದ್ದರೆ, ಇವೇ ಪ್ರಕ್ರಿಯೆಗಳು ವಿಪತ್ತುಗಳೆಂದೆನಿಸಿಕೊಳ್ಳುವುದಿಲ್ಲ.

ಪ್ರವಾಹ

ಕೆರೆ-ಕಟ್ಟೆ, ನದಿ, ಅಣೆಕಟ್ಟೆ, ಸರೋವರ ಮುಂತಾದ ಕಡೆ ಶೇಖರಣೆಯಾಗಿರುವ ನೀರು ರಭಸವಾಗಿ ಉಕ್ಕಿ ಹರಿದು ವಿಶಾಲವಾದ ಭೂ ಪ್ರದೇಶವನ್ನು ಮುಳುಗಿಸುವುದೇ ಪ್ರವಾಹ ಅಥವಾ ಜಲಪ್ರವಾಹ. "ಹರಿಯುವ ನೀರು" ಎಂಬ ಅರ್ಥದಲ್ಲಿ ಈ ಪದ ಅಲೆಗಳಗಳ ಒಳಹರಿವಿಗೂ ಅನ್ವಯಿಸಬಹುದು. ನದಿ, ಸರೊವರಗಳಂಥ ನೀರಿನ ಸಂಗ್ರಹಾಗಾರಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ ಜಾಸ್ತಿಯಾಗಿ ಅದು ಉಕ್ಕಿ ಹರಿದಾಗ ಪ್ರವಾಹಗಳುಂಟಾಗಬಹುದು. ಹೀಗೆ ಹರಿಯುವ ನೀರು ಅಣೆಕಟ್ಟೆಗಳನ್ನು ಒಡೆದುಹಾಕಿ ರಭಸವಾಗಿ ನುಗ್ಗುತ್ತದೆ. ಈ ಸಂದರ್ಭದಲ್ಲಿ ಸಾಮಾನ್ಯ ಮಟ್ಟಕ್ಕಿಂತ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರನುಗ್ಗುತ್ತದೆ.

==ಇತಿವೃತ್ತ==

ಹಿಮಪಾತ ಮತ್ತು ಹಿಮಗಡ್ಡೆಗಳ ಕರಗುವಿಕೆಯಂತಹ ಋತುಮಾನ ಬದಲಾವಣೆಯಿಂದಾಗಿ ಸರೋವರ ಅಥವಾ ಯಾವುದೇ ಸಂಗ್ರಹಾಗಾರಗಳಲ್ಲಿ ನೀರಿನ ಪ್ರಮಾಣದಲ್ಲಿ ವ್ಯತ್ಯಾಸವುಂಟಾಗುತ್ತದೆ. ಹೀಗೆ ಸಂಗ್ರಹಗೊಂಡ ನೀರು ಹಳ್ಳಿ, ನಗರ, ಹೊಲ-ಗದ್ದೆ ಅಥವಾ ಮನುಷ್ಯ ವಾಸಿಸುವ ಹಾಗೂ ಅವನು ತನ್ನ ಅನುಕೂಲಕ್ಕೆ ಬಳಸುವ ಪ್ರದೇಶಗಳನ್ನು ಮುಳುಗಿಸದ ಹೊರತು ಉಕ್ಕಿ ಹರಿದರೂ ಅದೇನೂ ಅಪಾಯಕಾರಿಯಲ್ಲ. ನದಿಗಳಿಂದಾಗಿಯೂ ಪ್ರವಾಹ ಸಂಭವಿಸುತ್ತದೆ. ನದಿಗಳ ಹರಿವಿನ ರಭಸ ಹೆಚ್ಚಾದಾಗ ನೀರು ನದಿಪಥದ ಹೊರಗೂ ನುಗ್ಗಲು ಪ್ರಯತ್ನಿಸುತ್ತದೆ. *ನಿರ್ದಿಷ್ಟವಾಗಿ ನದಿಗಳ ಅಂಕು-ಡೊಂಕಾದ ಮಾರ್ಗಗಳಲ್ಲಿ ನದಿಪಥದಿಂದ ಹೊರನುಗ್ಗುವ ನೀರು, ನದಿಯುದ್ದಕ್ಕೂ ಇರುವ ಮನೆ-ಮಠ ಅಷ್ಟೇ ಏಕೆ ಮನುಷ್ಯ ವ್ಯಾಪಾರದ ಸಕಲಕ್ಕೂ ಹಾನಿ ಉಂಟು ಮಾಡುತ್ತದೆ, ಕೆಲವೊಮ್ಮೆ ಸರ್ವನಾಶವನ್ನೂ ಉಂಟುಮಾಡುತ್ತದೆ.ನದಿ ಅಥವಾ ಇನ್ನಾವುದೇ ನೀರು ಸಂಗ್ರಹಾರಗಾಗಳಿಂದ ಹೊರನುಗ್ಗುವ ನೀರು ಎಂದರೆ ಪ್ರವಾಹ ಅಕ್ಷರಷಹ ಭೌತಿಕವಾದ ಚರಾಚರಗಳನ್ನು ಅದಲು-ಬದಲು ಮಾಡುತ್ತದೆ.

ಪುರಾತನ ಕಾಲದಿಂದಲೂ ಜನರು ತಮ್ಮ ಜೀವನೋವೋಪಾಯ ಮತ್ತು ಹಣಗಳಿಕೆಯ ಮಾರ್ಗ ಕಂಡುಕೊಳ್ಳಲು ನೀರಿನೊಡನೆಯೇ ಬದುಕಿದ್ದಾರೆ; ನೀರಿನಿಂದಲೇ ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ, ಇಷ್ಟೇ ಅಲ್ಲದೆ ನೀರಿನ ಸಮೀಪ ವಾಸಿಸುವುದರೊಂದಿಗೆ ಸರಳ ಮತ್ತು ಅಗ್ಗದ ಸಂಚಾರ ಹಾಗೂ ವ್ಯಾಪಾರ-ವಹಿವಾಟಿನ ಲಾಭ ಗಳಿಸಿದ್ದಾರೆ.

ಮುರುಕಳಿಸುವ ಪ್ರವಾಹ ಮತ್ತು ಅದು ತಂದೊಡ್ಡುವ ಅಪಾರ ಹಾನಿಗಿಂತಲೂ ನೀರಿನ ಬಳಿಯೇ ವಾಸಿಸುವುದು ದೊಡ್ಡದು ಎಂಬ ಗ್ರಹೀತ ಮೌಲ್ಯಕ್ಕೆ, ಪ್ರವಾಹದಿಂದ ಹಾನಿಗೊಳಗಾಗುವ ಪ್ರದೇಶಗಳಲ್ಲಿ ಮನುಷ್ಯ ಇನ್ನೂ ವಾಸಿಸುವುದನ್ನು ಮುಂದುವರಿಸಿಕೊಂಡೇ ಬಂದಿರುವುದೇ ಸಾಕ್ಷಿ. "ಫ್ಲಡ್‌" (ಪ್ರವಾಹ) ಎನ್ನುವ ಪದ ಹಳೆ ಇಂಗ್ಲಿಷ್‌ನ ಫ್ಲೋಡ್‌ (flod) ಎಂಬ ಪದದಿಂದ ವ್ಯುತ್ಪತ್ತಿ ಹೊಂದಿದೆ.

ಇದು ಜರ್ಮಾನಿಕ್‌ ಭಾಷೆಗಳಲ್ಲಿ ಸಾಮಾನ್ಯ ಪದ.(ಫ್ಲೋ (flow),ಫ್ಲೋಟ್ ‌(float)ನಲ್ಲಿ ಕಾಣುವ ಹಾಗೆ ಇದೇ ಮೂಲದಿಂದ ಬಂದಿರುವ ಜರ್ಮನ್‌ನ ಫ್ಲಟ್‌ (Flut) ಡಚ್‌ನ ವ್ಲೋಡ್‌ (vloed) ಪದಗಳ ಅರ್ಥವನ್ನು ಹೋಲಿಸಿ ನೋಡಿ.)ದಪ್ಪಕ್ಷರದಲ್ಲಿ ಬರೆಯುವ "ದಿ ಫ್ಲಡ್‌" ಎನ್ನುವ ನಿರ್ದಿಷ್ಟ ಪರಿಭಾಷೆ, ಸಾಮಾನ್ಯವಾಗಿ ಬೈಬಲ್‌ನ ಜೆನಿಸಿಸ್‌ ಸೃಷ್ಟಿಪರ್ವದಲ್ಲಿ ವರ್ಣಿಸಿರುವಂತೆ ವಿಶ್ವದ ಜಲಪ್ರಳಯ ವನ್ನು ಸೂಚಿಸುತ್ತದೆ ಹಾಗೂ ಇದನ್ನು ಜಲಪ್ರಳಯವೆಂದು ಪೌರಾಣಿಕ ಕಥೆಯೊಂದರಲ್ಲಿ ನಿರೂಪಿಸಲಾಗಿದೆ.

ಭಾರತದಲ್ಲಿನ ನೈಸರ್ಗಿಕ ವಿಕೋಪಗಳು

ಭಾರತದಲ್ಲಿನ ನೈಸರ್ಗಿಕ ವಿಕೋಪಗಳು, ಅವುಗಳಲ್ಲಿ ಹಲವು ಭಾರತದ ಹವಾಮಾನಕ್ಕೆ ಸಂಬಂಧಿಸಿವೆ, ಇದರಿಂದಾಗಿ ಅಪಾರ ಪ್ರಮಾಣದ ಜೀವ ಮತ್ತು ಆಸ್ತಿಪಾಸ್ತಿ ನಷ್ಟವಾಗುತ್ತದೆ. ಬರ, ಮಿಂಚಿನ ಪ್ರವಾಹ, ಚಂಡಮಾರುತಗಳು, ಹಿಮಪಾತಗಳು, ಧಾರಾಕಾರ ಮಳೆಯಿಂದ ಉಂಟಾದ ಭೂಕುಸಿತಗಳು ಮತ್ತು ಹಿಮಬಿರುಗಾಳಿಗಳು ಅತ್ಯಂತ ದೊಡ್ಡ ಅಪಾಯವನ್ನುಂಟುಮಾಡುತ್ತವೆ. ಭೂಕಂಪಗಳು, ಪ್ರವಾಹ, ಜ್ವಾಲಾಮುಖಿ ಸ್ಫೋಟ, ಭೂಕುಸಿತಗಳು, ಚಂಡಮಾರುತಗಳು ಇತ್ಯಾದಿಗಳಿಂದ ನೈಸರ್ಗಿಕ ವಿಪತ್ತು ಸಂಭವಿಸಬಹುದು. ಪರಿಸರದಲ್ಲಿ ಆಳವಾದ ಹಾನಿಯಾದಲ್ಲಿ ಅಥವಾ ಮಾನವ ನಷ್ಟವಾದಲ್ಲಿ ಅದರಿಂದ ಆಗಾಗ ಆರ್ಥಿಕ ನಷ್ಟವಾಗುತ್ತದೆ ಅದನ್ನು ನೈಸರ್ಗಿಕ ವಿಕೋಪ ಎಂದು ಪರಿಗಣಿಸಬಹುದು . ಇದರಿಂದ ಉಂಟಾಗುವ ಮತ್ತೊಂದು ಅಪಾಯವೆಂದರೆ; ಆಗಾಗ್ಗೆ ಉಂಟಾಗುವ ಬೇಸಿಗೆಯ ಧೂಳಿನ ಬಿರುಗಾಳಿಗಳು , ಇದು ಸಾಮಾನ್ಯವಾಗಿ ಉತ್ತರದಿಂದ ದಕ್ಷಿಣಕ್ಕೆ ಚಲಿಸುತ್ತದೆ; ಅವು ಉತ್ತರ ಭಾರತದಲ್ಲಿ ವ್ಯಾಪಕವಾದ ಆಸ್ತಿಪಾಸ್ತಿಗಳಿಗೆ ಹಾನಿಯನ್ನುಂಟುಮಾಡುತ್ತವೆ ಮತ್ತು ಶುಷ್ಕ ಪ್ರದೇಶಗಳಿಂದ ಹೆಚ್ಚಿನ ಪ್ರಮಾಣದ ಧೂಳನ್ನು ಸಂಗ್ರಹಿಸುತ್ತವೆ. ಭಾರತದ ಕೆಲವು ಭಾಗಗಳಲ್ಲಿ ಆಲಿಕಲ್ಲು ಸಾಮಾನ್ಯವಾಗಿದೆ, ಇದರಿಂದಾಗಿ ನಿಂತಿರುವ ಬೆಳೆಗಳಾದ ಭತ್ತ ಮತ್ತು ಗೋಧಿ ಮತ್ತು ಇನ್ನೂ ಅನೇಕ ಬೆಳೆಗಳಿಗೆ ತೀವ್ರ ಹಾನಿಯಾಗುತ್ತದೆ.

ಭೂರೂಪಶಾಸ್ತ್ರ

ಭೂರೂಪಶಾಸ್ತ್ರ (ಗ್ರೀಕ್ ನಿಂದ; ವಿಜೆ"ಭೂಮಿ", ಗೆ ಮೋರಪೆ ಅಂದರೆ ರಚನೆ; ಹಾಗೂ ಲೋಗೋಸ್ ಅಂದರೆ "ಅಧ್ಯಯನ)ದೂರೂಪಶಾಸ್ತ್ರವು ಯಾವುದೇ ಗ್ರಹದ ಒಂದು ಭೂಗಳ ವಿಕಾಸನ ಹಾಗೂ ಇನ್ನೂ ವಿಶಾಲವಾಗಿ ಅವುಗಳಿಗೆ ಆಕಾರ ಕೊಡುವ ಪದ್ಧತಿಗಳು ಮತ್ತು ಭೂರಚನೆಯ ವೈಜ್ಞಾನಿಕ ಅಧ್ಯಯನವಾಗಿದೆ. ಭೂರೂಪಶಾಸ್ತ್ರಜ್ಞರು ಭೂದೃಶ್ಯಗಳು ಏಕೆ ಈ ರೀತಿ ಕಾಇಸಿಕೊಳ್ಳುತ್ತವೆ, ಭೂ ರಚನೆಯ ಿತಿಹಾಸ ಮತ್ತು ರಚನಾಶಾಸ್ತ್ರವನ್ನು ಅರ್ಥಮಾಡಿಕೊಳ್ಳಲು, ಹಾಗೂ ಆಂಕಿಅಂಶಗಳ ಮಾದರಿ ರಚಿಸುವಿಕೆ ಮತ್ತು ಕ್ಷೇತ್ರಾವಲೋಕನದ ಸಂಯುಕ್ತಕ್ರಿಯೆಯ ಮುಖಾಂತರ ಭವಿಷ್ಯದ ಬದಲಾವಣೆಗಳನ್ನು ನುಡಿಯಲು ಹಾಗೂ ಅರ್ಥೈಸಿಕೊಳ್ಳಲು ಅನ್ವೇಶಿಸುತ್ತಾರೆ. ಭೂರೂಪಶಾಸ್ತ್ರವು ಭೂಗೋಳ, ಭೂಗರ್ಭಶಾಸ್ತ್ರ, ಭೂಮಾಪನ ಗಣಿತಶಾಸ್ತ್ರ, ಯಂತ್ರಶಿಲ್ಪದ ಭೂ ರಚನಾ ಶಾಸ್ತ್ರ, ಪುರಾತನ ವಾಸ್ತುಶಾಸ್ತ್ರ, ಮತ್ತು ಭೂ ತಾಂತ್ರಿಕ ಯಂತ್ರಶಿಲ್ಪಶಾಸ್ತ್ರದಡಿಯಲ್ಲಿ ಆಚರಿಸಲ್ಪಡುತ್ತದೆ, ಹಾಗೂ ಈ ಅಭಿರುಚಿಯ ವಿಶಾಲವಾದ ತಳಹದಿಯು ಸಂಶೋಧನೆಯ ಶೈಲಿಗಳು ಮತ್ತು ಕ್ಷೇತ್ರದೊಳಗಿನ ಅಭಿರುಚಿಗಳ ವಿವಿಧ ರೀತಿಗಳಿಗೆ ಕೊಡುಗೆಯಾಗಿತ್ತಿವೆ.

ಪೃಥ್ವಿಯ ಮೇಲ್ಮೈನ ರಚನೆಯು ಸ್ವಾಭಾವಿಕ ಹಾಗೂ ಮಾನವನ ಮೂಲದ ಅಧ್ಯಯನದ ಕಾರ್ಯವಿಧಾನಗಳ ೊಂದು ಸಂಯೋಜನೆಗೆ ಪ್ರತಿಕ್ರಿಯಸಿ ವಿಕಸಿತವಾಗುತ್ತದೆ, ಹಾಗೂ ಅದನ್ನು ಸ್ಥಳಾಂತರಿಸುವಂತಹ ಮತ್ತುಭೌತಿಕವಾದುವುಸೇರಿಸುವಂತಹ ಕಾರ್ಯವಿಧಾನಗಳ ನಡುವೆ ಶೇಷಕ್ಕೆ ಸ್ಪಂದಿಸುತ್ತದೆ ಅಂತಹ ಪದ್ಧತಿಗಳು ಬಹಳಷ್ಟು ಉದ್ದದ ಹಾಗೂ ಕಾಲದ ಪ್ರಮಾಣಗಳ ಅಡ್ಡಲಾಗಿ ವರ್ತಿಸಬಹುದು. ಅತ್ಯಂತ ವಿಶಾಲವಾದ ದರ್ಜೆಗಳಲ್ಲಿ ಭೂ ದೃಶ್ಯವು ಜ್ವಾಲಾಮುಖಿ ಮತ್ತು ಭೂಮಿಯ ಮಧ್ಯ ಭಾಗದ ಮೇಲಕ್ಕೆ ಬರುವಿಕೆಯಿಂದ ಏಳಿಗೆಯ ಮುಖಾಂತರ ಕಟ್ಟಲ್ಪಟ್ಟಿದೆ. ಭೂ ದೃಶ್ಯಗಳು ಅಥವಾ ತೀರದಾಚೆಯೋಳಗೆ ಮತ್ತೆಲ್ಲಿಯಾದರೂ ಸಾಗಿಸಿ ಸಂಗ್ರಹಿಸಲ್ಪಟ್ಟಂತಹ ಚರಟವನ್ನು ಉತ್ಪಾದಿಸುವ ಸವಕಳಿ ಮತ್ತು ಸಾಮೂಹಿಕ ತ್ಯಾಜ್ಯದಿಂದ ಅನಾವರಣವುಂಟಾಗುತ್ತದೆ, ಹೆಚ್ರಚು ಪ್ರಗತಿಪರವಾದ ಸಣ್ಣಪ್ರಮಾಣಗಳಲ್ಲಿ ತದ್ರೂಪು ಭಾವನೆಗಳು ಅನ್ವಯಿಸುತ್ತವೆ. ಒಂದು ಚಿಕ್ಕ ಪ್ರಮಾಣದ ಮಾಪನದ ಮೇಲೆ ಅಲ್ಲಿ ವಿಶಿಷ್ಠ ಭೂ ದೃಶ್ಯಗಳು ಹೆಚ್ಚಳಿಕೆಯ (ಭೂ ಮಧ್ಯ ಭಾಗದ ಮೇಲಕ್ಕೆ ಬರುವಿಕೆ ಅಥವಾ ಪದರುಗಲ್ಲು) ಮತ್ತು ಕಳೆಯುವಿಕೆಯ (ಸವಕಲಾದ) ಕಾರ್ಯವಿಧಾನಗಳಿಗೆ ಶೇಷಕ್ಕೆ ಪ್ರತಿಕ್ರಿಯಸಿ ವಿಕಾಸವಾಗುತ್ತವೆ. ಆಧುನಿಕ ಭೂರೂಪಶಾಸ್ತ್ರವು ಗ್ರಹದ ಮೇಲ್ಮೈ ಮೇಲೆ ವಸ್ತುವಿನ ಪ್ರವಾಹದ ಹರಿತದ ಒಮ್ಮುಖವೆಂದು ಸಾಮಾನ್ಯವಾಗಿ ನೋಡಬಲ್ಲದಾದ ಪದರಗಲ್ಲು ವಿಜ್ಞಾನದ ಜೊತೆ ನಿಕಟವಾಗಿ ಸಂಬಂಧಿಸಿದೆ.

ಭೂರೂಪದ ಪ್ರಕ್ರಿಯೆಗಳು ಟೆಕ್ಟಾನಿಕ್ ಗಳು, ವಾತಾವರಣ, ಪರಿಸರಶಾಸ್ತ್ರ, ಮತ್ತು ಮಾನವರ ಚಟುವಟಿಕೆಗಳಿಂದ ಪ್ರಭಾವಿತವಾಗುವುವು ಮತ್ತು ಈ ಹಲವಾರು ಚಾಲಕಗಳು ಭೂಮಿಯ ಮೇಲ್ಮೈ ವಿಕಸನಗೊಳ್ಳುತ್ತಿರುವುದರಿಂದ ಪರಿಣಾಮಕ್ಕೊಳಗಾಗಲೂಬಹುದು; ಉದಾಹರಣೆಗೆ, ಇವುಗಳಿಂದ ಭೂಮಿಯ ಮೇಲ್ಮೈಯನ್ನು ಕುಸಿಯುವಿಕೆ ಅಥವಾ ತಳ್ಳುವಿಕೆಯಿಂದ ಅಥವಾ ಪರ್ವತಗಳ ಮೇಲಿನಿಂದ ಹರಿದು ಬರುವ ನೀರಿನ ಪ್ರಮಾಣದಿಂದ . ಭೂರೂಪಶಾಸ್ತ್ರದಿಂದ ಬದಲಾಯಿಸಲ್ಪಟ್ಟ ವಾತಾವರಣ ಹಾಗೂ ಟಾಕ್ಟಾನಿಕ್ಗಳ ಮಧ್ಯೆ ಪ್ರಭಾವಗಳ ಒಂದು ಉಪಸಂಹಿತೆಯ ಬಗ್ಗೆ ಪ್ರಮುಖವಾಗಿ ವಿಶೇಷವಾದ ಆಸಕ್ತಿಯನ್ನು ಅನೇಕ ಭೂರೂಪಶಾಸ್ತ್ರಜ್ಞರು ತೋರಿಸುತ್ತಾರೆ.ಭೂರೂಪಶಾಸ್ತ್ರ ಪ್ರಮುಖ ುಪಯೋಗಗಳು ಹಾಗೂ ಪ್ರಾಮುಖ್ಯತೆಯು ಇವುಗಞಲನ್ನು ಒಳಗೊಂಡಿವೆ ಭೂಕುಸಿತ ಹಾಗೂ ಅದರ ನಿರೀಕ್ಷೆ ಮತ್ತು ತಡೆಯುವಿಕೆ, ನದಿಗಳ ಹತೋಟಿ ಹಾಗೂ ಪುರ್ಸ್ಥಾಪಿಸುವಿಕೆ ಮತ್ತು ಕರಾವಳಿಯ ರಕ್ಷಣೆ.

ಶಿಥಿಲೀಕರಣ ಮತ್ತು ಸವೆತ

ಭೂ ಮೇಲ್ಮೈ ಸ್ವರೂಪಗಳು ಎರಡು ರೀತಿಯ ನೈಸರ್ಗಿಕ ಕರ್ತೃಗಳಿಂದ ಹಿಂದಿನ ಕಾಲದಿಂದಲೂ ಬದಲಾಗುತ್ತಾ ಬಂದಿವೆ, ಅವು ೧) ಅಂತರ್ ಜನಿತ ಶಕ್ತಿಗಳು ಮತ್ತು ೨) ಬಹಿರ್ ಜನಿತ ಶಕ್ತಿಗಳು.

ಅಂತರ್ ಜನಿತ ಶಕ್ತಿಗಳು: ಭೂ ಅಂತರಾಳದಲ್ಲಿ ತಮ್ಮ ಕಾರ್ಯನಿರ್ವಹಿಸುವ ಭೂ ಅಂತರಾಳ ಶಕ್ತಿಗಳು. ಉದಾ: ಜ್ವಾಲಮುಖಿ ಸ್ಟೋಟನೆ, ಭೂಕಂಪಗಳು ಮತ್ತು ಭೂಚಲನೆ (ಭೂವಿಕೃತಿ).

ಬಹಿರ್ ಜನಿತ ಶಕ್ತಿಗಳು: ಭೂ ಮೇಲ್ಮೈ ಮೇಲೆ ನೇರವಾಗಿ ತಮ್ಮ ಕರ್ತವ್ಯ ನಿರ್ವಹಿಸುವ "ಬಾಹ್ಯಶಕ್ತಿಗಳು". ಉದಾ: ಗಾಳಿ, ಮಳೆ, ನೀರು, ಅಂತರ್ಜಲ, ಸಮುದ್ರ ಅಲೆ, ಪ್ರವಾಹಗಳು ಹಿಮನದಿ, ಇತ್ಯಾದಿ.ಬಾಹ್ಯಶಕ್ತಿಗಳು ಭೂ ಮೇಲ್ಮೈಯನ್ನು ನಿರಂತರವಾಗಿ ಕ್ಷಯಿಸುತ್ತಾ ಇರುತ್ತವೆ. ಈ ಕಾರಣದಿಂದ 'ನಗ್ನೀಕರಣ' ಉಂಟಾಗುತ್ತದೆ. ನಗ್ನೀಕರಣವು 'ಸವೆತ' ಮತ್ತು 'ಸಂಚಯನ' ಕಾರ್ಯಗಳನ್ನು ಒಳಗೊಂಡಿದೆ. ಅನೇಕ ಭೂ ಗರ್ಭದ ಅಂಶಗಳಿಂದಾಗಿ (ಚಲಿಸುವ ನೀರು ಮತ್ತು ಹಿಮ, ಬೀಸುವ ಗಾಳಿ ಇತ್ಯಾದಿ) ಉನ್ನತ ಭಾಗಗಳನ್ನು ಕ್ಷಯಿಸಿ ಮಟ್ಟಸ ಮಾಡುವ ಪ್ರಕ್ರಿಯೆಗೆ 'ಸವೆತ' ಅಥವಾ 'ಡೀಗ್ರೆಡೇಶನ್' ಎನ್ನುವರು. ಹಳ್ಳ/ತಗ್ಗಿನ ಪ್ರದೇಶಳಲ್ಲಿ ವಸ್ತುಗಳ ಶೇಖರಣೆ ಮಾಡಿ, ಭೂಭಾಗವನ್ನು ಮಟ್ಟಸ ಮಾಡುವ ಪ್ರಕ್ರಿಯೆಗೆ ಸಂಚಯನ/ಅಗ್ರಡೇಶನ್ ಎನ್ನುವರು. 'ಸವೆತವು' ಮುಖ್ಯವಾಗಿ ಶಿಥಿಲೀಕರಣದಿಂದ ಉಂಟಾಗುತ್ತದೆ.

ಶಿವಾಲಿಕ ಪರ್ವತಗಳು

ಹಿಮಾಲಯ ಪರ್ವತ ಶ್ರೇಣಿಗಳು ಹಿಮಾದ್ರಿ ಪರ್ವತಗಳು, ಮಹಾಭಾರತ ಪರ್ವತಗಳು ಹಾಗೂ ಶಿವಾಲಿಕ ಪರ್ವತಗಳೆಂಬ ಮೂರು ವರ್ಗಗಳಾಗಿ ವಿಭಾಗಗೊಂಡಿವೆ.

ಶಿವಾಲಿಕ ಪರ್ವತಗಳು ಹಿಮಾಲಯ ಪರ್ವತ ಶ್ರೇಣಿಗಳ ದಕ್ಷಿಣದಂಚಿನ ಬೆಟ್ಟಸಾಲುಗಳಾಗಿವೆ. ಶಿವಾಲಿಕ ಪರ್ವತಗಳು ಮಹಾಭಾರತ ಹಾಗೂ ಚುರಿಯ ಪರ್ವತಗಳ ನಡುವೆ ನೆಲೆಯಾಗಿದೆ. ಪೂರ್ವ-ಪಶ್ಚಿಮಾಭಿಮುಖವಾಗಿ ಹಬ್ಬಿರುವ ಶಿವಾಲಿಕ ಪರ್ವತಗಳು ಭೂಗರ್ಭಶಾಸ್ತ್ರದ ಪ್ರಕಾರ ಇಡಿ ಹಿಮಾಲಯದಲ್ಲಿ ಅತಿ ಕಿರಿಯ ವಯಸ್ಸಿನವು. 'ಶಿವಾಲಿಕ' ಎಂಬ ಪದ ಸಂಸ್ಕೃತ ಪದವಾಗಿದ್ದು, ಅದಕ್ಕೆ 'ಶಿವನ ಜಡೆಗಳು' ಎಂಬ ಅರ್ಥವಿದೆ. ಪ್ರಾಚೀನ ಕಾಲಗಳಲ್ಲಿ ಈ ಪರ್ವತಗಳನ್ನು ಮಾನಕ ಪರ್ವತವೆಂದು ಕರೆಯಲಾಗುತ್ತಿತ್ತು. ಕೆಲವೊಮ್ಮೆ ಈ ಶ್ರೇಣಿಗಳನ್ನು ಹೊರಗಣ ಹಿಮಾಲಯ ಎಂದು ಸಹ ಕರೆಯಲಾಗುತ್ತದೆ. ನೇಪಾಳದಲ್ಲಿರುವ ಶಿವಾಲಿಕ ಪರ್ವತಗಳ ಭಾಗವನ್ನು ಚುರಿಯ ಪರ್ವತಗಳೆಂದು ಕರೆಯಲಾಗುತ್ತದೆ. ಈ ಪ್ರದೆಶದ ಎತ್ತರ ಪ್ರತಿವರ್ಷ ೩ ಮಿ.ಮಿ ರಿಂದ ೪ ಮಿ.ಮಿ ವರೆಗೆ ಹೆಚ್ಚಾಗುತ್ತಿದ್ದು, ಇಡಿ ಹಿಮಾಲಯದ ಅತ್ಯಂತ ಕ್ರಿಯಾತ್ಮಕ ವಲಯವಾಗಿದೆ. ಪೂರ್ವದ ಸಿಕ್ಕಿಂನ ಟೀಸ್ಟಾ ನದಿಯಿಂದ ಆರಂಭವಾಗಿ ನೇಪಾಳ, ಉತ್ತರಾಖಂಡ, ಹಿಮಾಚಲ ಪ್ರದೇಶ ಹಾಗೂ ಕಾಶ್ಮೀರಗಳನ್ನು ಹಾದು ಪಾಕಿಸ್ತಾನದ ಉತ್ತರಭಾಗದಲ್ಲಿ ಕೊನೆಗೊಳ್ಳುವ ಶಿವಾಲಿಕ ಪರ್ವತ ಶ್ರೇಣಿಗಳ ಒಟ್ಟು ಉದ್ದ ಸುಮಾರು ೧೬೦೦ ಕಿ.ಮಿ. ಈ ಪರ್ವತಗಳ ಸರಾಸರಿ ಎತ್ತರ ೯೦೦ರಿಂದ ೧೨೦೦ ಮೀಟರ್‍ಗಳಷ್ಟು. ಉತ್ತರ ಭಾರತದಲ್ಲಿ ಗಂಗಾ ನದಿಯಿಂದ ವ್ಯಾಸ ನದಿಯವರೆಗೆ ೨೦೦ ಮೈಲಿಗಳ ದೂರದವರೆಗೆ ಹರಡಿದೆ.

ಕೃಷಿ ಹಾಗೂ ಬೌಗೋಳಿಕ

ಶಿವಾಲಿಕ ಪರ್ವತಗಳು ಬಹುಪಾಲಗಿ ಮರಳುಗಲ್ಲು, ಸಂಘಟಿತ ಬೆಟ್ಟಗಳು ಹಾಗೂ ಹಿಮಾಲಯದ ಉಳಿದ ರಾಶಿಗಳಿಂದ ಕೂಡಿವೆ. ಈ ಪರ್ವತ ಸುಮಾರು ೬೦೦೦ ಮೀಟರ್‍ಗಳಷ್ಟು ಪದರಗೊಂಡ ಬಂಡೆಗಳನ್ನು ಒಳಗೊಂಡಿದೆ. ಇವು ಹಿಮಾಲಯ ಪರ್ವತಗಳು ಸೃಷ್ಟಿಗೊಂಡಾಗ ಸಂಭವಿಸಿದ ಸವೆತದಿಂದ ಉಂಟಾದವು. ಶಿವಾಲಿಕ ಪ್ರದೇಶದಲ್ಲಿ ಸುಲಭವಾಗಿ ಸವೆದು ಹೋಗುವ ಮಣ್ಣಿರುವುದರಿಂದ, ಈ ಪ್ರದೇಶ ಕೃಷಿಗೆ ಅಷ್ಟು ಉತ್ತಮವಿಲ್ಲ. ಮೆಕ್ಕೆ ಜೋಳ, ಗೋಧಿ, ರಾಗಿ ಹಾಗೂ ಸಾಸಿವೆ ಈ ಪ್ರದೇಶದಲ್ಲಿ ಉತ್ಪಾದಿಸಲಾಗುವ ಬೆಳೆಗಳು. ಕೃಷಿಗೆ ನೀರಾವರಿ ಸುಲಭವಾಗಿ ಲಭ್ಯವಿರುವುದರಿಂದ ಭತ್ತ ಉತ್ಪಾದಿಸಲು ಈ ಪ್ರದೇಶ ಸೂಕ್ತವಾಗಿದೆ.

ಪ್ರಾಣಿಗಳು ಹಾಗೂ ಸಸ್ಯವರ್ಗ

ಶಿವಾಲಿಕ ಪರ್ವತಗಳು ವಿವಿಧ ರೀತಿಯ ಸಸ್ಯ-ಪ್ರಾಣಿಗಳು ಜೀವಿಸುವ ಸುಂದರ ಪರ್ವತ ಶ್ರೇಣಿ. ಈ ಪ್ರದೇಶದಲ್ಲಿ ವೈಶಿಷ್ಟವಾಗಿ ನದಿಯ ದಂಡೆಗಳ ಪಕ್ಕದಲ್ಲಿ ಬೆಳೆಯುವ ಎತ್ತರದ ಹುಲ್ಲುಗಾವಲುಗಳು ಹಾಗೂ 'ಖೈರ್' ಮತ್ತು 'ಸಿಸೂ' ಎಂಬ ಬಗೆಗಳ ಮಳೆಕಾಡುಗಳು ಇರುತ್ತವೆ. ಇಲ್ಲಿ ಅನೇಕ ದೊಡ್ಡಗಾತ್ರದ ಸಸ್ತನಿಗಳನ್ನು ಕಾಣಬಹುದು. ಈ ಅರಣ್ಯಗಳು ಆನೆಗಳು, ಜೌಗು ಜಿಂಕೆ, ಬಾರ್ಕಿಂಗ್‍ ಡೀರ್, ಚೀತಲ್, ಕಸ್ತೂರಿ ಜಿಂಕೆ, ಕಾಡು ಹಂದಿ, ಚೆರತೆ, ಕಾಡು ನಾಯಿ, ಕತ್ತೆಕಿರುಬಗಳು, ನರಿ, ಹುಲಿ, ಸಿಂಹ ಮುಂತಾದ ಪ್ರಾಣಿಗಳಿಂದ ವಿಪುಲವಾಗಿದೆ. ಅಪರೂಪದ ಪ್ರಾಣಿಗಳೆಂದು ಪರಿಗಣಿಸಲಾಗುವ ಒಂದು-ಕೊಂಬಿನ ಖಡ್ಗಮೃಗ ಹಾಗೂ ಪಿಗ್ಮಿ ಹಂದಿಗಳೂ ಇಲ್ಲಿ ಕಂಡುಬರುತ್ತವೆ. ಕಾರ್ಬೆಟ್‍ ರಾಷ್ಟ್ರಿಯ ಉದ್ಯಾನವನದ ಒಂದು ಭಾಗವಾದ 'ಪತ್ಲಿ ದೂನ್' ಎಂಬ ಕಣಿವೆ, ಶಿವಾಲಿಕ ಪರ್ವತಗಲಲ್ಲಿ ತನ್ನ ಸಸ್ಯ ಹಾಗೂ ಪ್ರಾಣಿಗಳನ್ನು ಸಂರಕ್ಷಿಸುವ ಮಾತ್ರ ಪ್ರದೇಶವಾಗಿದೆ. ಈ ಕಣಿವೆ ಹಚ್ಚಹಸಿರಾದ ಹುಲ್ಲುಗಾವಲುಗಳು ಹಾಗೂ ಸೋಂಪಾದ 'ಸಾಲ್' ಅರಣ್ಯಗಳಿಂದ ಕೂಡಿವೆ.

ಪ್ರವಾಸೋದ್ಯಮ

ಈ ಪ್ರದೇಶದಲ್ಲಿ ಅನೇಕ ಪ್ರಸಿದ್ದ ಪ್ರವಾಸ ಸ್ಥಳಗಳಿವೆ. ಅವುಗಳಲ್ಲಿ ಕೆಲವು-ರೇಣುಕ ಸರೋವರ, ಶಿವಾಲಿಕ ಫ಼ಾಸಿಲ್ ಪಾರ್ಕ, ಪತ್ಲಿ ದೂನ್, ಜಿಮ್‍ ಕಾರ್ಬೆಟ್‍ ರಾಷ್ಟ್ರೀಯ ಉದ್ಯಾನವನ, ದೆಹರಾದೂನ್ ಹಾಗೂ ಶಿಮ್ಲಾ. ಹಿಮಾಚಲ ಪ್ರದೇಶದ ರಾಜಧಾನಿಯಾದ ಶಿಮ್ಲಾ, ಶಿವಾಲಿಕ ಪರ್ವತಗಳಲ್ಲಿರುವ ಒಂದು ಆಕರ್ಷಿಕ ಗಿರಿಧಾಮ. ಭಾರತದ 'ಗಿರಿಧಾಮಗಳ ರಾಣಿ'ಯೆಂದು ಶಿಮ್ಲಾ ಹೆಸರಾಗಿದೆ. ಇದು ಹಿಮಾಚಲ ಪ್ರದೇಶದ ಪ್ರಧಾನ ವಾನಿಜ್ಯ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕೇಂದ್ರವಾಗಿದೆ. ಇದರಂತೆಯೆ ಇಲ್ಲಿ ಅನೇಕ ಸುಂದರ ಗಿರಿದಾಮಗಳು ಹಾಗೂ ಅನೇಕ ಧಾರ್ಮಿಕ ಕೇಂದ್ರಗಳಿವೆ. ಶಿವಾಲಿಕ ಪರ್ವತಗಳಲ್ಲಿ ತುಂಬ ಪ್ರಸಿದ್ದವಾದ ಸ್ಥಳವೆಂದರೆ ದೆಹರಾದೂನ್. ಉತ್ತರಖಂಡ ರಾಜ್ಯದ ರಾಜಧಾನಿಯಾದ ದೆಹರಾದೂನ್, ಶಿವಾಲಿಕ ಪ್ರದೇಶದ ದೂನ್ ಕಣಿವೆಯಲ್ಲಿದೆ. ಈ ನಗರ ತನ್ನ ಚಿತ್ರಸದೃಶ್ಯ, ಭೂದೃಶ್ಯಕ್ಕೆ ಹಾಗೂ ಸೌಮ್ಯ ಹವಾಮಾನಕ್ಕೆ ಎಲ್ಲೆಡೆಯೂ ಪ್ರಸಿದ್ದವಾಗಿದೆ. ಇಂತಹ ಸ್ಥಳಗಳಿರುವುದರಿಂದ ಶಿವಾಲಿಕ ಪರ್ವತಗಳು ಶಾಂತಿ ಮತ್ತು ಸೌಂಧರ್ಯ ಕೂಡಿದ ಸ್ವರ್ಗವಾಗಿದೆ. ಈ ಕಾರಣದಿಂದ ಪ್ರತಿವರ್ಷ ಜನರು ಭಾರಿ ಸಂಖ್ಯೆಯಲ್ಲಿ ಒಂದು ಅದ್ಭುತ ಅನುಭವಕ್ಕಾಗಿ ಇಲ್ಲಿ ಬರುತ್ತಾರೆ.

ಇತ್ತೀಚೆಗೆ, ಶಿವಾಲಿಕ ಪರ್ವತಗಳಲ್ಲಿ ಅಂತರ್ಜಲ ಸವಕಳಿ, ನೀರಿನ ಸಂಗ್ರಹಣಾ ಸ್ಥಳಗಳ ಅಭಾವ, ಅರಣ್ಯನಾಶ ಮುಂತಾದ ಗಂಭೀರ ಸಮಸ್ಯೆಗಳು ಎದುರುಗೊಂಡಿವೆ. ಈ ಕಾರಣದಿಂದ ಕೃಷಿ-ಉತ್ಪಾದಕತೆಯು ಕಡಿಮೆಯಾಗುತ್ತಿದೆ. ಎಲ್ಲೆಡೆಯೂ ಪೊದೆಗಳನ್ನು ತೆಗೆದುಹಾಕಲಾಗುತ್ತಿದೆ, ಮರಗಳನ್ನು ಕತ್ತರಿಸಲಾಗುತ್ತಿದೆ. ಈ ಪ್ರದೇಶ ತೀವ್ರ ಸವೆತಕ್ಕೆ ಒಳಪಟ್ಟಿದೆ. ಈ ಕಾರಣದಿಂದಾಗಿ ಪ್ರವಾಹ ಹಾಗೂ ಭೂಕುಸಿತ ಆಗಾಗ ಸಂಭವಿಸುತ್ತಿದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾದ ಕಾರಣ ಪರಿಸರ ಮಾಲಿನ್ಯ ದೊಡ್ಡ ಮಟ್ಟಿಗೆ ಏರಿದೆ. ಅರಣ್ಯ ಪ್ರದೇಶವನ್ನು ತೆರೆವುಗೊಳಿಸಿ, ಆ ಜಾಗದಲ್ಲಿ ಪ್ರವಾಸಿಗರಿಗಾಗಿ ವಸತಿ ಗೃಹಗಳನ್ನು ನಿರ್ಮಾಣಿಸಲಾಗುತ್ತಿದೆ. ಈ ಕಾರಣಗಳಿಂದ ಅಲ್ಲಿನ ವನಜೀವಿಗಳ ಹಾಗೂ ಕಾಡುಗಳ ಅಸ್ತಿತ್ವಕ್ಕೆ ಅಪಾಯವಾಗಿದೆ.

ಉಲ್ಲೇಖಗಳು

ಸುನಾಮಿ

ಸಾಗರ ಅಥವಾ ಇನ್ನಿತರ ಜಲರಾಶಿಯಲ್ಲಿ ಅಗಾಧ ಪ್ರಮಾಣದ ಚಲನೆಯುಂಟಾದಾಗ ಜನಿಸುವ ಸಾಗರದ ತರಂಗಗಳ ಸರಣಿಗೆ ಸುನಾಮಿ (ತ್ಸುನಾಮಿ) ಎಂದು ಕರೆಯಲಾಗುತ್ತದೆ. ಭೂಕಂಪ, ಜ್ವಾಲಾಮುಖಿ, ಬಾಹ್ಯಾಕಾಶದ ಬೃಹತ್ ಗಾತ್ರದ ವಸ್ತುವಿನ ಅಪ್ಪಳಿಕೆ ಇತ್ಯಾದಿ ಸುನಾಮಿ ಅಲೆಗಳನ್ನು ಹುಟ್ಟುಹಾಕುವ ಸಾಮರ್ಥ್ಯ ಪಡೆದಿವೆ. ಸುನಾಮಿಯು, ಗಮನಕ್ಕೆ ಬಾರದಷ್ಟು ಸಣ್ಣ ಪ್ರಮಾಣದಿಂದ ಹಿಡಿದು ಅತ್ಯಂತ ಹಾನಿಕರವಾದ ನೈಸರ್ಗಿಕ ವಿಕೋಪದವರೆಗೂ ತನ್ನ ಪ್ರಭಾವ ಬೀರಬಲ್ಲುದಾಗಿದೆ.

ತ್ಸುನಾಮಿ ಎಂಬ ಪದ ಮೂಲತಃ ಜಪಾನಿ ಭಾಷೆಯಿಂದ ಬಂದದ್ದು. ಇಲ್ಲಿ "ತ್ಸು"(津) ಅಂದರೆ "ಬಂದರು" ಹಾಗು "ನಾಮಿ"( 波) ಎಂದರೆ "ಅಲೆ". ಜಪಾನಿ ಭಾಷೆಯಲ್ಲಿ ಸುನಾಮಿ ಪದವನ್ನು ಏಕವಚನ ಹಾಗೂ ಬಹುವಚನದಲ್ಲಿ ಬಳಸುತ್ತಾರೆ, ಆದರೆ ಕನ್ನಡದಲ್ಲಿ ಬಹುವಚನವಾಗಿ "ಸುನಾಮಿಗಳು" ಎಂದೂ ಇಂಗ್ಲಿಷಿನಲ್ಲಿ "tsunamis" ಎಂದು ಕರೆಯಲಾಗುತ್ತದೆ. ಅಲ್ಲಿಯ ಮೀನುಗಾರರು ಅಲೆಗಳ ಬಗ್ಗೆ ಹೆಚ್ಚು ಗೊತ್ತಿಲ್ಲದಿದ್ದರೂ "ಸುನಾಮಿ" ಪದವನ್ನು ಅವರೇ ಹುಟ್ಟಿಹಾಕಿದಂತೆ. ಸುನಾಮಿಯು ಸಾಗರದ ತೀರಾ ಒಳ-ಮೇಲ್ಮೈನಲ್ಲಿ ಘಟಿಸುವಂತಹದಲ್ಲ; ಇದು ಅತಿ ದೂರದಲ್ಲಿ ತುಂಬಾ ಚಿಕ್ಕ ವಿಸ್ತಾರವುಳ್ಳ (ಅಲೆಗಳ ಎತ್ತರ) ಹಾಗೂ ತೀರ ಉದ್ದವಾದ ತರಂಗಗಳನ್ನು ಹೊಂದಿರುತ್ತದೆ (ಬಹಳಷ್ಟು ಬಾರಿ ನೂರಾರು ಕಿಲೋಮೀಟರ್ ಉದ್ದವುಳ್ಳದಾಗಿರುತ್ತದೆ). ಇದೇ ಕಾರಣಕ್ಕೆ ಸಮುದ್ರದಲ್ಲಿ ಬಹಳಷ್ಟು ಬಾರಿ ಇದನ್ನು ಯಾರೂ ಗಮನಿಸುವುದೇ ಇಲ್ಲ.

ಸುನಾಮಿಯನ್ನು ದೈತ್ಯ ಅಲೆಗಳು ಎಂದೂ ಸಂಬೋಧಿಸುವುದುಂಟು, ಕಾರಣ ಇದರ ಅತೀವ ಉಬ್ಬರ - ಇಳಿತಗಳು. ಈ ದೈತ್ಯ ಅಲೆಗಳು ಬಹಳಷ್ಟು ಬಾರಿ ಸೂರ್ಯ ಚಂದ್ರರ ಗುರುತ್ವಾಕರ್ಷಣ ಸೆಳೆತದಿಂದಾಗಿ ಉಂಟಾಗುವ ಸ್ವಾಭಾವಿಕ ಉಬ್ಬರ - ಇಳಿತಗಳು. ಆದರೆ ಇದನ್ನು ಸಮುದ್ರ ಅಧ್ಯಯನ ಮಾಡುವ ವಿಜ್ಞಾನಿಗಳು ಅಲ್ಲಗಳೆಯುತ್ತಾರೆ.

== ಕಾರಣಗಳು ==

ಸಮುದ್ರದ ಕೆಳಪದರಿನಲ್ಲಿ ಏಕಾಏಕಿ ಉಂಟಾಗುವ ವಿಕೃತೀಕರಣ ಅಲ್ಲಿರುವ ನೀರನ್ನು ನೇರವಾಗಿ(ಲಂಬವಾಗಿ) ಹೊರಚೆಲ್ಲುತ್ತದೆ, ಇದೇ ಸುನಾಮಿಗೆ ಕಾರಣ. ಮಹಾಸಮುದ್ರಗಳಡಿಯ ಭೂಮಿಯ ಹೊರ ಪದರಿನಲ್ಲಿ ಹಲವೆಡೆ ಬಿರುಕುಗಳಿದ್ದು (ಆಂಗ್ಲಭಾಷೆಯಲ್ಲಿ: ಪ್ಲೇಟ್ ಬೌಂಡರಿ), ಭಾಗಗಳಾಗಿ ಬೇರ್ಪಡೆಯಾಗಿದೆ. ಈ ಭಾಗಗಳು ಸ್ಥಾನ ಪಲ್ಲಟಗೊಳ್ಳುವುದು ಈ ವಿಕೃತಿಗೆ ಕಾರಣ.

ವಿಶೇಷವಾಗಿ, ಈ ಭಾಗಗಳು ಒಂದರಮೇಲೊಂದು ಜರುಗಿದರೆ ಸುನಾಮಿಗೆ ಎಡೆಗೊಡುವ ಪ್ರಮೇಯ ಹೆಚ್ಚಾಗುತ್ತದೆ. ಸಮುದ್ರದ ಕೆಳಗಿನ ಪದರು ಖಂಡಗಳ ಪದರಿನಡಿಗೆ ಹೊಕ್ಕಾಗ, ಖಂಡದ ಪದರಿನ ಅಂಚನ್ನು ಕೆಲವೊಮ್ಮೆ ತನ್ನೊಂದಿಗೆ ಒಯ್ಯುತ್ತದೆ. ಕ್ರಮೇಣ, ಈ ಅಂಚಿನ ಮೇಲೆ ಬಹಳ ಒತ್ತಡ ಉಂಟಾಗಿ ಅದು ಹಿಂದಕ್ಕೆ ಮಗುಚುತ್ತದೆ. ಇದರ ರಭಸಕ್ಕೆ ಉಂಟಾಗುವ ಅಲೆಗಳು ಹೊರಪದರಿನಲ್ಲಿ ಹಬ್ಬಿ ಸಮುದ್ರದಡಿಯ ಭೂಕಂಪವನ್ನು ಉಂಟುಮಾಡುತ್ತದೆ. ಸಮುದ್ರದಡಿಯಲ್ಲಿ ಕೆಲವೊಮ್ಮೆ ಉಂಟಾಗುವ ಭೂಕುಸಿತಗಳು, ಜ್ವಾಲಾಮುಖಿಗಳ ಉದ್ಭವಗಳು ಮತ್ತು ಹಳೆ ಜ್ವಾಲಾಮುಖಿಗಳ ಅವಶೇಷಗಳ ಕುಸಿತಗಳು ಕೂಡ ಮೇಲಿರುವ ನೀರನ್ನು ತಲ್ಲಣಗೊಳಿಸಿ ಸುನಾಮಿಯನ್ನುಂಟು ಮಾಡಬಹುದು.

ಗುರುತ್ವಾಕರ್ಷಣೆಯ ಪ್ರಭಾವದಿಂದ ಹೊರದೂಡಲ್ಪಟ್ಟ ಜಲರಾಶಿಯು ,ತನ್ನ ಸಮತೋಲನವನ್ನು ಕಾಯ್ದುಕೊಳ್ಳಲು ಪ್ರಯತ್ನಿಸುವಾಗ ಅಲೆಗಳು ರೂಪುಗೊಳ್ಳುತ್ತವೆ ಹಾಗೂ ಇವು ಕೊಳದೊಳಗಿನ ಸಣ್ಣ ಅಲೆಗಳಂತೆ ಸಾಗರದುದ್ದಕ್ಕೂ ಹರಡುತ್ತವೆ.

ಸುನಾಮಿಗಳ ಬಗ್ಗೆ ಹಿಂದೆ ಇದ್ದ ನಂಬಿಕೆಗಳಿಂದ ಬೇರೆಯಾಗಿ,೧೯೫೦ರಲ್ಲಿ ದೊಡ್ಡ ಗಾತ್ರದ ಸುನಾಮಿಗಳಿವೆ ಹಾಗೂ ಅವು ಭೂಕುಸಿತ,ಜ್ವಾಲಾಮುಖಿಯ ಸ್ಫೋಟನ ಮತ್ತು ತೀವ್ರತರ ಘಟನೆಗಳಿಂದ ಸಂಭವಿಸುತ್ತವೆ ಎಂದು ಕಂಡುಹಿಡಿದರು.ನೀರಿಗೆ ಬೀಳುತ್ತಿದ್ದ ಭಗ್ನಾವಶೇಷಗಳ ಶಕ್ತಿ ಅಥವಾ ಭಗ್ನಾವಶೇಷಗಳು ನೀರಿಗೆ ವರ್ಗಾವಣೆಗೊಂಡ ತಕ್ಷಣ ವ್ಯಾಪಕವಾಗಿ ಹರಡುತ್ತಿದ್ದುದರಿಂದ,ಇಂತಹ ಘಟನೆಗಳು ನೀರಿನ ಪರಿಮಾಣವನ್ನು ವೇಗವಾಗಿ ಸ್ಥಾನಪಲ್ಲಟಗೊಳಿಸುತ್ತಿದ್ದವು.ಈ ವಿಕೃತೀಕರಣಗಳಿಂದ ಉಂಟಾದ ಸುನಾಮಿಗಳು,ಕೆಲವು ಭೂಕಂಪಗಳಿಂದ ಸಾಗರದಗಲಕ್ಕೂ ಹರಡುವ ಸುನಾಮಿಗಳಂತಲ್ಲದೆ,ಸಾಮಾನ್ಯವಾಗಿ ಬೇಗ ಚದುರಿ ಹೋಗುತ್ತಿದ್ದವು ಹಾಗೂ ಸಮುದ್ರದ ಕೆಲ ಭಾಗಕ್ಕೆ ಮಾತ್ರ ಧಕ್ಕೆಯಾಗುತ್ತಿದ್ದ ಕಾರಣ,ಬಹುದೂರದ ಕಡಲತೀರಕ್ಕೆ ಹರಡುವ ಸಾಧ್ಯತೆ ಕಡಿಮೆ ಇತ್ತು.ಅದರೆ ಈ ಘಟನೆಗಳು ಸುಮಾರು ದೊಡ್ಡವಾದ ಸ್ಥಳೀಯ ಆಘಾತಕಾರಿ ಅಲೆ(local shock waves)ಗಳನ್ನು(solitions) ಹುಟ್ಟು ಹಾಕಬಲ್ಲವು.ಉದಾಹರಣೆಗೆ ಲಿಟುಯ ಕೊಲ್ಲಿ(Lituya Bay)ಯ ಶಿರೋಭಾಗದಲ್ಲಿ ಸಂಭವಿಸಿದ ಭೂಕುಸಿತ ಅಂದಾಜು ೫೦-೧೫೦ ಮೀ.ನಷ್ಟು ನೀರಿನ ಅಲೆಗಳನ್ನು ಸೃಷ್ಟಿಸಿತು ಹಾಗೂ ಸ್ಥಳೀಯ ಪರ್ವತಗಳ ೫೨೪ ಮೀ.ನಷ್ಟುಎತ್ತರ ತಲುಪಿತು.ಒಟ್ಟಾರೆ ಅತ್ಯಂತ ಪರಿಣಾಮಕಾರಿ ದೊಡ್ಡ ಭೂಕುಸಿತ ಸಾಗರದಗಲಕ್ಕೂ ಪ್ರಭಾವ ಬೀರಬಲ್ಲ ಒಂದು ದೈತ್ಯ ಸುನಾಮಿಯನ್ನು ಸೃಷ್ಟಿಸಬಲ್ಲುದು.

ಹುಡ್ ಹುಡ್ ಚಂಡಮಾರುತ

ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ 'ಹುಡ್‌ಹುಡ್‌' (ಓಮಾನ್‌ ದೇಶದ ಒಂದು ಪಕ್ಷಿಯ ಹೆಸರು) ಚಂಡಮಾರುತ ಗಂಟೆಗೆ 185 ಕಿ.ಮೀ. ವೇಗದಲ್ಲಿ ದೇಶದ ಪೂರ್ವ ಕರಾವಳಿಯತ್ತ ನುಗ್ಗಿ ಬಂದು . ೧೨/೧೦/೨೦೧೪ ರಂದು ಮಧ್ಯಾಹ್ನ ಆಂಧ್ರದ ವಿಶಾಖಪಟ್ಟಣಂ ಸಮೀಪ ಗಂಟೆಗೆ 195 ಕಿ.ಮೀ.ಕ್ಕಿಂತ ಹೆಚ್ಚು ವೇಗದಲ್ಲಿ ಈ ಮಾರುತ ಭೂಮಿಗೆ ಅಪ್ಪಳಿಸಿತು.

ವಿಶಾಖಪಟ್ಟಣಂನಲ್ಲಿ ಮನೆಯೊಂದು ಕುಸಿದು ಮಹಿಳೆಯೊಬ್ಬರು ಬಲಿಯಾದರೆ, ಶ್ರೀಕಾಕುಳಂನಲ್ಲಿ ಮರ ಬಿದ್ದು ಇಬ್ಬರು ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ.

ಒಡಿಶಾದಲ್ಲಿ ಮೀನುಗಾರ ಮತ್ತು ಬಾಲಕನೊಬ್ಬ ಕಡಲು ಪಾಲಾಗಿದ್ದಾರೆ ಎಂದು ವರದಿಯಾಗಿದೆ.

ಚಂಡಮಾರುತದಿಂದಾಗಿ ದಕ್ಷಿಣ ಒಡಿಶಾದಲ್ಲಿ ಬಿರುಗಾಳಿ ಸಹಿತ ಮಳೆ ಯಾಗುತ್ತಿದೆ. 'ಹುಡ್‌ಹುಡ್‌' ಅಪ್ಪಳಿಸಿದ ವೇಳೆ ನೂರಾರು ಮನೆಗಳಿಗೆ ಹಾನಿಯಾಗಿದೆ.

ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ದೊಡ್ಡ ಮರಗಳು ಉರುಳಿ ಬೀಳುತ್ತಿವೆ, ವಿದ್ಯುತ್‌ ಹಾಗೂ ಸಂಪರ್ಕ ವ್ಯವಸ್ಥೆಗೆ ತೊಂದರೆ ಸೇರಿದಂತೆ ಭಾರಿ ಪ್ರಮಾಣದ ನಷ್ಟ ಸಂಭವಿಸಿದೆ.

ವಿಶಾಖ ಪಟ್ಟಣಂನ ಕೆಲವೆಡೆ ಗಾಳಿ ಮಳೆಯಿಂದಾಗಿ ಮರಗಳು ಧರೆಗುರುಳಿದ್ದು, ಕೆಲವೆಡೆ ಭೂಕುಸಿತ ಉಂಟಾಗಿದೆ.

ಹುಡ್‌ ಹುಡ್‌ ಪರಿಣಾಮಾವಾಗಿ ಬಿಹಾರ , ಜಾರ್ಖಂಡ್‌, ಛತ್ತೀಸ್ ಘಡ್ ಮತ್ತು ಮಧ್ಯ ಪ್ರದೇಶದಲ್ಲೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ವಿಶಾಖಪಟ್ಟಣಂ ಕರಾವಳಿಯಲ್ಲಿ ಗಂಡೆಗೆ 170 ಕೀಮಿ ವೇಗದಲ್ಲಿ ಗಾಳಿ ಬೀಸುತ್ತಿದೆ ಎಂದು ವರದಿಯಾಗಿದೆ.

ಆಂಧ್ರ ಮತ್ತು ಒಡಿಶಾದ ಕರಾವಳಿ ತೀರದಲ್ಲಿ ವಿದ್ಯುತ್‌ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು .

ವಿಶಾಖಪಟ್ಟಣಂ ಸೇರಿದಂತೆ ಒಡಿಶಾದ ಕರಾವಳಿಯಲ್ಲೂ ಜನಜೀವನ ಸಂಪೂರ್ಣ ಅಸ್ಥವ್ಯಸ್ಥವಾಗಿತ್ತು.

Topics in geotechnical engineering
Soils
Soil properties
Soil mechanics
Geotechnical investigation
Laboratory tests
Field tests
Foundations
Retaining walls
Slope stability
Earthquakes
Geosynthetics
Instrumentation for Stability Monitoring

ಇತರ ಭಾಷೆಗಳು

This page is based on a Wikipedia article written by authors (here).
Text is available under the CC BY-SA 3.0 license; additional terms may apply.
Images, videos and audio are available under their respective licenses.