ಬ್ರೆಜಿಲ್

ದಕ್ಷಿಣ ಅಮೇರಿಕದ ಜನಸಂಖ್ಯೆ ಮತ್ತು ವಿಸ್ತೀರ್ಣಗಳ ಆಧಾರದ ಮೇಲೆ ಅತಿ ದೊಡ್ಡ ದೇಶ ಬ್ರೆಜಿಲ್. ಬ್ರೆಜಿಲ್ ದಕ್ಷಿಣ ಅಮೇರಿಕದ ಮಧ್ಯದಿಂದ ಅಟ್ಲಾಂಟಿಕ್ ಮಹಾಸಾಗರದ ವರೆಗೆ ಹಬ್ಬಿರುವ ಈ ದೇಶ ಯುರುಗ್ವೆ, ಅರ್ಜೆಂಟೀನ, ಪೆರಗ್ವೆ, ಬೊಲಿವಿಯಾ, ಪೆರು, ಕೊಲಂಬಿಯಾ, ವೆನೆಜುವೆಲಾ, ಗಯಾನಾ, ಸುರಿನಾಮ್, ಮತ್ತು ಫ್ರೆಂಚ್ ಗಯಾನಾಗಳ ಜೊತೆ ಗಡಿಯನ್ನು ಹೊಂದಿದೆ. ಈಕ್ವೆಡಾರ್ ಮತ್ತು ಚಿಲಿ ದೇಶಗಳನ್ನು ಹೊರತುಪಡಿಸಿ ದಕ್ಷಿಣ ಅಮೇರಿಕದ ಎಲ್ಲ ದೇಶಗಳ ಜೊತೆಯೂ ಗಡಿಯನ್ನು ಹೊಂದಿದೆ. ತನ್ನ ಬೃಹತ್ ನೈಸರ್ಗಿಕ ಸಂಪನ್ಮೂಲಗಳು ಮತ್ತು ಅಗ್ಗವಾದ ಕಾರ್ಮಿಕರ ದೆಸೆಯಿಂದ ದಕ್ಷಿಣ ಅಮೆರಿಕದ ಅತಿ ಪ್ರಮುಖ ಆರ್ಥಿಕ ಶಕ್ತಿ ಹಾಗೂ ಪ್ರಾದೇಶಿಕ ನಾಯಕತ್ವವಾಗಿ ಬೆಳೆದಿದೆ. ಪೋರ್ಚುಗಲ್ ದೇಶದ ವಸಾಹತು ಆಗಿದ್ದ ಕಾರಣ ಪೋರ್ಚುಗೀಸ್ ಬ್ರೆಜಿಲ್ ದೇಶದ ಅಧಿಕೃತ ಭಾಷೆಯಾಗಿದೆ. ಪ್ರಪಂಚದ ಎರಡನೇ ಅತಿ ದೊಡ್ಡ ಕ್ರೈಸ್ತ ಧರ್ಮೀಯರ ದೇಶವೂ ಇದಾಗಿದೆ.

ಇತಿಹಾಸ

Brazil-16-map
ಪೋರ್ಚುಗೀಸ್ ನಾವಿಕರು ಉಪಯೋಗಿಸುತ್ತಿದ್ದ ೧೫೧೯ ಇಸವಿಯ ಬ್ರೆಜಿಲ್ ದೇಶದ ನಕ್ಷೆ.

ಮೊದಲನೇ ಪೋರ್ಚುಗೀಸ್ ನಾವಿಕರು ೧೫೦೦ರಲ್ಲಿ ಬಂದಿಳಿಯುವ ಮುನ್ನ್ ಅಲೆಮಾರಿ ಜನಾಂಗವು ಬ್ರೆಜಿಲ್ ಪ್ರದೇಶವನ್ನು ೧೦,೦೦೦ ವರ್ಷಗಳಷ್ಟು ಕಾಲ ಜೀವಿಸುತ್ತಿತ್ತು. ನಂತರದ ಮೂರು ಶತಮಾನದಲ್ಲಿ ಪೋರ್ಚುಗೀಸರು ಬ್ರೆಜಿಲ್‌ನ ನೈಸರ್ಗಿಕ್ ಸಂಪನ್ಮೂಲಗಳನ್ನು ಸುಲಿಗೆ ಮಾಡಿದರು. ಮೊದಲು ಬ್ರೆಜಿಲ್‌ಮರ (brazilwood)ವನ್ನು ದೋಚಿದ ನಂತರ ಕಬ್ಬು, ಕಾಫಿ, ಮತ್ತು ಬಂಗಾರಗಳ ಉಪಯೋಗ ಪಡೆದರು. ತಮ್ಮ ಪರವಾಗಿ ದುಡಿಯಲು ಮೊದಲು ಮೂಲನಿವಾಸಿಗಳನ್ನು ಶೋಷಿಸಿ, ೧೫೫೦ರ ನಂತರ ಆಫ್ರಿಕಾ ಗುಲಾಮರನ್ನು ಕರೆತಂದರು. ೧೮೦೮ರಲ್ಲಿ ಪೋರ್ಚುಗಲ್ ರಾಣಿ ಒಂದನೇ ಮರಿಯಾ ಮತ್ತು ಅವಳ ಮಗ ಆರನೇ ಜಾನ್ ನೆಪೋಲಿಯನ್ನನ ಸೈನ್ಯದಿಂದ ತಪ್ಪಿಸಿಕೊಳ್ಳಲು ದೇಶತ್ಯಾಗ ಮಾಡಿ ರಿಯೊ ಡಿ ಜನೈರೊಗೆ ಬಂದರು. ಇತಿಹಾಸದಲ್ಲಿ ಯಾವುದೇ ರಾಜ ಪರಿವಾರ ಖಂಡಾಂತರ ಪಲಾಯನ ಮಾಡಿದ್ದು ಇದೇ ಮೊದಲು ಮತ್ತು ಕೊನೆ. ಇವರು ಕೊನೆಗೆ ೧೮೨೧ರಲ್ಲಿ ಪೋರ್ಚುಗಲ್ ಗೆ ವಾಪಾಸಾಗಿ, ಬ್ರೆಜಿಲ್ ಪ್ರದೇಶವನ್ನು ಪೋರ್ಚುಗಲ್ಲಿನ ಸಂಯುಕ್ತ ರಾಜ್ಯವನ್ನಾಗಿ ಏರಿಸಲಾಯಿತು. ಆದರೆ ರಾಜ ಆರನೇ ಜಾನ್ ನಿರ್ಗಮನದ ನಂತರ ಬ್ರೆಜಿಲ್ ರಾಜ್ಯವನ್ನು ವಿಸರ್ಜಿಸಿ ಮತ್ತೆ ಪೊರ್ಚುಗಲ್ಲಿನ ವಸಾಹತನ್ನಾಗಿ ಮಾಡಲಾಯಿತು. ಇದರ ನಂತರ ಹಲವಾರು ಕದನಗಳ ಏರ್ಪಟ್ಟು ಬ್ರೆಜಿಲ್ ಸ್ವಾತಂತ್ರ್ಯ ಯುದ್ಧವಾಯಿತು. ೧೮೨೨ರಲ್ಲಿ ಬ್ರೆಜಿಲ್ ರಾಜಕುಮಾರ ಮೊದಲನೇ ಪೀಟರ್ ಸ್ವಾತಂತ್ರ್ಯ ಘೋಷಿಸಿ, ಸ್ವತಂತ್ರ ಬ್ರೆಜಿಲ್ ಸಾಮ್ರಾಜ್ಯವನ್ನು ಸ್ಥಾಪಿಸಿದನು.

ಪ್ರಜಾಪ್ರಭುತ್ವ ಏರ್ಪಟ್ಟ ಮೇಲೆ ೧೮೮೮ರಲ್ಲಿ ಗುಲಾಮ ಪದ್ಧತಿಯನ್ನು ರದ್ದು ಮಾಡಲಾಯಿತು. ನಂತರ ಭೂಸೇನೆ ಮತ್ತು ನೌಕಾಪಡೆಗಳ ನಡುವೆ ಅಂತಃಕಲಹ ತಪ್ಪಿಸಲು ಆಗಿನ ದೊರೆ ಎರಡನೇ ಪೆದ್ರೊ ಸಿಂಹಾಸನ ತ್ಯಾಗ ಮಾಡಿದಾಗ ನವೆಂಬರ್ ೧೫, ೧೮೮೯ರಂದು ಗಣರಾಜ್ಯದ ಸ್ಥಾಪನೆಯಾಯಿತು.

೧೯ನೇ ಶತಮಾನದ ಅಂತ್ಯ ಮತ್ತು ೨೦ನೇ ಶತಮಾನದ ಆದಿಯಲ್ಲಿ ೫೦ ಲಕ್ಷಕ್ಕೂ ಹೆಚ್ಚು ಯೂರೋಪಿಯನ್ನರು, ಅರಬರು, ಮತ್ತು ಜಪಾನೀಯರು ವಲಸೆ ಬಂದರು. ಆ ಕಾಲದಲ್ಲಿ ಬ್ರೆಜಿಲ್ ಕೈಗಾರಿಕೆಗಳ ಸ್ಥಾಪನೆಯಾಗಿ ಒಳಭೂಮಿಯ ಅಭಿವೃದ್ಧಿ ಆಯಿತು. ನಂತರ ಪ್ರಜಾಪ್ರಭುತ್ವವನ್ನು ಮೂರು ಸಲ ಎತ್ತಿಹಾಕಿ ಸರ್ವಾಧಿಕಾರತ್ವದ ಸ್ಥಾಪನೆಯಾಯಿತು. ೧೯೮೫ರ ನಂತರ ಬ್ರೆಜಿಲ್ ದೇಶವನ್ನು ಪ್ರಜಾಪ್ರಭುತ್ವ ಎಂದೇ ಪರಿಗಣಿಸಲಾಗುತ್ತದೆ. ೧೯೯೩ರ ಜನಮತ ಗಣನೆಯ ಪ್ರಕಾರ ಜನರು ಅಧ್ಯಕ್ಷೀಯ ಮಾದರಿಯ ಪ್ರಜಾಪ್ರಭುತ್ವವನ್ನು ಆಯ್ಕೆ ಮಾಡಿ ಸಾಂವಿಧಾನಿಕ ರಾಜಪ್ರಭುತ್ವವನ್ನು ತಿರಸ್ಕರಿಸಿದರು.

ಸರಕಾರ ಮತ್ತು ರಾಜಕಾರಣ

Brazilian National Congress
ರಾಜಧಾನಿ ಬ್ರೆಸಿಲಿಯಾದಲ್ಲಿನ ಪ್ರಖ್ಯಾತ ರಾಷ್ಟ್ರೀಯ ಪರಿಷತ್ತು

ಬ್ರೆಜಿಲ್ ದೇಶದ ರಾಜಧಾನಿ ಬ್ರೆಸಿಲಿಯಾ. ೧೯೮೮ರ ಸಂವಿಧಾನದ ಆದೇಶದ ಪ್ರಕಾರ ಬ್ರೆಜಿಲ್ ಅಧ್ಯಕ್ಷೀಯ ಮಾದರಿಯ ಪ್ರಜಾಪ್ರಭುತ್ವ ಗಣರಾಜ್ಯ ಒಕ್ಕೂಟ ವಾಗಿದ್ದು ದೇಶದ ರಾಷ್ಟ್ರಪತಿ ಸಾಂವಿಧಾನಿಕ ಮತ್ತು ಸರಕಾರದ ಮುಖ್ಯಸ್ಥ. ರಾಜಕೀಯ ಸ್ವಾತಂತ್ರ್ಯವನ್ನು ಕಾಪಾಡಲೋಸುಗ ಬಹುಪಕ್ಷ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ.

ಕಾರ್ಯಾಂಗದ ಮುಖ್ಯಸ್ಥ ರಾಷ್ಟ್ರಪತಿಯಾಗಿದ್ದು, ಇವರನ್ನು ನಾಲ್ಕು ವರ್ಷದ ಅವಧಿಗೆ ಚುನಾಯಿಸಲಾಗುತ್ತದೆ ಮತ್ತು ಇನ್ನೊಂದು ಅವಧಿಗೆ ಮಾತ್ರ ಮರುಚುನಾಯಿತರಾಗಬಹುದಾಗಿದೆ. ಶಾಸಕಾಂಗದ ಅಧಿಕಾರವು ರಾಷ್ಟ್ರೀಯ ಪರಿಷತ್ತಿಗಿದ್ದು, ಇದರಲ್ಲಿ ಎರಡು ಮನೆಗಳಿವೆ.

ನ್ಯಾಯಾಂಗ ರಾಜ್ಯ ಮತ್ತು ಪ್ರಾಂತೀಯ ವಲಯಗಳಲ್ಲಿ "ಕೊಮಾರ್ಕ" ಹೆಸರಿನಾಲಿದೆ. ಒಂದು "ಕೊಮಾರ್ಕ"ದಲ್ಲಿ ಹಲವಾರು ನಗರಸಭೆಗಳಿರಬಹುದು.

ಭೂಗೋಳ

Iguacu-001
ಇಗ್ವಾಚು ಜಲಪಾತ, ಪರಾನ

ಭೂಮಿ: ಉತ್ತರದಲ್ಲಿ ಅಮೆಜಾನ್ ನಿತ್ಯಹರಿದ್ವರ್ಣ ಕಾಡು, ದಕ್ಷಿಣದಲ್ಲಿ ಗುಡ್ಡಗಾಡು ಪ್ರದೇಶ

 • ಪರ್ವತ: ಅಟ್ಲಾಂಟಿಕ್ ಮಹಾಸಾಗರಕ್ಕಿರುವ ಕರಾವಳಿ ಪ್ರದೇಶದುದ್ದಕ್ಕೂ ೨,೯೦೦ ಮೀಟರ್ ಎತ್ತರಕ್ಕಿರುವ ಪರ್ವತ ಶ್ರೇಣಿ. ಅತ್ಯುನ್ನತ ಶಿಖರ ಪೀಕೊ ಡ ನೆಬ್ಲೀನಾ ೩,೦೧೪ ಮಿ. ಎತ್ತರವಿದೆ.
 • ನದಿಗಳು: ಪ್ರಪಂಚದ ಎರಡನೇ ಅತಿ ದೊಡ್ಡ ನದಿಯಾದ ಅಮೆಜಾನ್ (ಹರಿಯುವ ನೀರಿನ ರಾಶಿಯ ಪ್ರಕಾರ ಪ್ರಪಂಚದ ಅತಿ ದೊಡ್ಡ ನದಿ). ಪರಾನ ನದಿ ಮತ್ತದರ ಉಪನದಿಯಾದ ಇಗ್ವಾಚು ನದಿ - ಇಲ್ಲಿಯೇ ಪ್ರಖ್ಯಾತ ಇಗ್ವಾಚು ಜಲಪಾತವಿರುವುದು.
 • ಹವಾಮಾನ: ಬಹುತೇಕ ಉಷ್ಣ ವಲಯದಲ್ಲಿರುವ ಕಾರಣ ಹವಾಮಾನದಲ್ಲಿ ವೈಪರೀತ್ಯಗಳು ವಿರಳ. ಆದರೆ ದಕ್ಷಿಣದ ತುದಿಯಲ್ಲಿ ಸಮಶೀತೋಷ್ಣ ವಾತಾವರನದಿಂದ ಕೆಲವೊಮ್ಮೆ ಹಿಮಪಾತವಾಗುವುದು. ಅಮೆಜಾನ್ ನದಿಯ ಜಲಾನಯನ ಪ್ರದೇಶದಲ್ಲಿ ಅಥೇಚ್ಛವಾಗಿ ಮಳೆಯಾಗುವುದು.

ಆಡಳಿತಾತ್ಮಕ ಪ್ರದೇಶಗಳು

Brasil.RioDeJaneiro.LeblonUndIpanema
ಬ್ರೆಜಿಲ್ ದೇಶದ ಎರಡನೇ ಅತಿ ದೊಡ್ಡ ನಗರವಾದ ರಿಯೊ ಡಿ ಜನೈರೊ.

ಬ್ರೆಜಿಲ್ ೨೬ ರಾಜ್ಯ ("ಎಸ್ಟಾಡೊ")ಗಳ ಮತ್ತು ಒಂದು ಕೆಂದ್ರೀಯ ಜಿಲ್ಲೆ ("ಡಿಸ್ಟ್ರಿಟೊ ಫೆಡೆರಲ್") - ಇವುಗಳ ಒಕ್ಕೂಟ. ಇವುಗಳನ್ನು ಹೀಗೆ ವಿಂಗಡಿಸಲಾಗಿದೆ:

 • ಉತ್ತರ: ಉತ್ತರ ಭಾಗವು ದೇಶದ ಶೇ.೪೫ ರಷ್ಟು ಪ್ರದೇಶವಾಗಿದ್ದು, ಅತಿ ಕಡಿಮೆ ಜನಸಂಖ್ಯೆಯಿರುವ ಪ್ರದೇಶವಾಗಿದೆ. ಪ್ರಪಂಚದಲ್ಲಿರುವ ನಿತ್ಯಹರಿದ್ವರ್ಣ ಕಾಡು ಪ್ರದೇಶ ಬಹುತೇಕ ಈ ಪ್ರದೇಶದಲ್ಲಿಯೇ ಇದೆ. ಈ ಪ್ರದೇಶವು ಅತಿ ಕಡಿಮೆ ಅಭಿವೃದ್ಧಿಯನ್ನು ಕಂಡಿದೆ. ಈ ಪ್ರದೇಶದಲ್ಲಿರುವ ರಾಜ್ಯಗಳು - ರೊರೈಮ, ಅಮಾಪ, ಅಮೆಜಾನಾಸ್, ಪಾರಾ, ಟೊಕಾಂಟಿನ್, ಆಕ್ರೆ, ಮತ್ತು ರೊಂದೊನಿಯ
 • ಈಶಾನ್ಯ: ದೇಶದ ಮೂರನೇ ಒಂದು ಭಾಗದಷ್ಟು ಜನಸಂಖ್ಯೆ ಇಲ್ಲಿ ವಾಸಿಸುತ್ತದೆ. ಸಾಂಸ್ಕೃತಿಕ ವೈವಿಧ್ಯತೆ ಬಹಳಷ್ಟಿರುವ ಈ ಪ್ರದೇಶವು ರಮ್ಯ ಕರಾವಳಿಗೆ ಪ್ರಖ್ಯಾತವಾಗಿದೆ. ಈ ಪ್ರದೇಶದಲ್ಲಿನ ರಾಜ್ಯಗಳು - ಮರಾನ್ಯಾವೊ, ಪಿಯಾವಿ, ರಿಯೊ ಗ್ರಾಂಡೆ ಡೊ ನಾರ್ಟೆ, ಪರಯಿಬ, ಪರ್ನಾಂಬುಚೊ, ಅಲಗೊವಾ, ಸರ್ಗಿಪೆ, ಮತ್ತು ಬಹಿಯ
 • ಕೇಂದ್ರ-ಪಶ್ಚಿಮ: ದೇಶದ ಎರಡನೇ ದೊಡ್ಡ ಪ್ರದೇಶವಾಗಿದ್ದು ರಾಜಧಾನಿ ಬ್ರೆಸಿಲಿಯಾ ಈ ಪ್ರದೇಶದಲ್ಲಿದೆ. ಇಲ್ಲಿರುವ ರಾಜ್ಯಗಳು - ಮಾಟೊ ಗ್ರಾಸೊ, ಗೊಯಾಸ್, ಬ್ರೆಜಿಲ್ ಕೇಂದ್ರೀಯ ಜಿಲ್ಲೆ, ಮಾಟೊ ಮತ್ತು ಗ್ರಸೊ ಡೊ ಸುಲ್
 • ಆಗ್ನೇಯ: ಆಗ್ನೇಯ ಬ್ರೆಜಿಲ್ ಅತಿ ಶ್ರೀಮಂತ ಹಾಗೂ ಅತಿ ಹೆಚ್ಚು ಜನ ಸಾಂದ್ರತೆಯುಳ್ಳ ಪ್ರದೇಶವಾಗಿದ್ದು, ದೇಶದ ಎರಡು ಅತಿ ದೊಡ್ಡ ನಗರಗಳಾದ ಆರ್ಥಿಕ ರಾಜಧಾನಿ ಸಾವೊ ಪಾಲೊ ಮತ್ತು ಮನೋಹರ ಸಮುದ್ರ ತಿರಗಳಿರುವ ರಿಯೊ ಡಿ ಜನೈರೊ ಇಲ್ಲಿವೆ. ಈ ಪ್ರದೇಶದ ರಾಜ್ಯಗಳು - ಮಿನಾಸ್ ಗೆರಾಯ್ಸ್, ಎಸ್ಪಿರಿತೊ ಸಾಂತೊ, ರಿಯೊ ಡಿ ಜನೈರೊ (ರಾಜ್ಯ), ಮತ್ತು ಸಾವೊ ಪಾಲೊ (ರಾಜ್ಯ)
 • ದಕ್ಷಿಣ: ದಕ್ಷಿಣ ಬ್ರೆಜಿಲ್‌ನಲ್ಲಿ ಅತುನ್ನತ ಜೀವನ ಮಟ್ಟವಿದ್ದು ದೇಶದ ಅತಿ ತಣ್ಣನೆಯ ಪ್ರದೇಶವಾಗಿದೆ. ಇಲ್ಲಿರುವ ರಾಜ್ಯಗಳು - ಪರಾನ (ರಾಜ್ಯ), ಸಾಂತಾ ಕ್ಯಾತರೀನಾ, ಮತ್ತು ರಿಯೊ ಗ್ರಾಂಡೆ ಡೊ ಸುಲ್

ಅರ್ಥ ವ್ಯವಸ್ಥೆ

ಸವಾಲುಗಳು

 • ದೇಶದ ಅರ್ಥ ವ್ಯವಸ್ಥೆ ಅತಿ ಮುಂದುವರೆದು ಪ್ರಗತಿಪರವಾಗಿದ್ದರೂ, ಭ್ರಷ್ಟಾಚಾರ, ಬಡತನ, ಮತ್ತು ಅಸಾಕ್ಷರತೆ ವ್ಯಾಪಕವಾಗಿವೆ.
 • ಆಂತರಿಕ ಸಾರ್ವಜನಿಕ ಸಾಲ ದಾಖಲೆ ಪ್ರಮಾಣದಲ್ಲಿ ಹೆಚ್ಚಿದ್ದು ಸಾರ್ವಜನಿಕ ಖರ್ಚು-ವೆಚ್ಚಗಳು ಏರಿವೆ.
 • ತೆರಿಗೆಗಳು ಮುಖ್ಯ ರಾಷ್ಟ್ರೀಯ ಆದಾಯವಾಗಿದ್ದು ಸಮಾಜದ ಎಲ್ಲ ವರ್ಗಗಳಿಗೂ ದೊಡ್ಡ ಹೊರೆಯಾಗಿ ಪರಿಣಮಿಸಿವೆ.
 • ಈಗಿನ ಆರ್ಥಿಕ ಬೆಳವಣಿಗೆ ದರ ದಕ್ಷಿಣ ಅಮೇರಿಕದ ಇತರ ರಾಷ್ಟ್ರಗಳು ಹಾಗೂ ಚೀನಾ ಮತ್ತು ಭಾರತಗಳಿಗಿಂತ ಕಡಿಮೆ ಮಟ್ಟದಲ್ಲಿದೆ.

ಪರಿಸರ

ಆರ್ಥಿಕ ಮತ್ತು ಜನಸಂಖ್ಯಾ ಸ್ಫೋಟದಿಂದ ಬ್ರೆಜಿಲ್‌ನ ವಾತಾವರಣ ತತ್ತರಿಸುತ್ತಿದೆ. ಅಮೆಜಾನ್ ನಿತ್ಯಹರಿದ್ವರ್ಣ ಕಾಡಿನಲ್ಲಿ ಮರಗಳ ಕಡಿಯುವಿಕೆಯಿಂದ ವಿವಿಧ ಜೀವಸಂಕುಲಗಳು ಅಂತ್ಯ ಕಾಣುತ್ತಿವೆ. ಬ್ರೆಜಿಲ್ ದೇಶದಲ್ಲಿ ಸಾವಿರಾರು ಬಗೆಯ ಜೀವಿಗಳಿವೆ, ಇವುಗಳಲ್ಲಿ ಬಹಳಷ್ಟು ಇನ್ನೂ ಪತ್ತೆಯಾಗಿಲ್ಲ. ೨೦೨೦ರಲ್ಲಿ ಕಡಿಮೆಯೆಂದರೂ ಅರ್ಧದಷ್ಟು ಜೀವ ಬಗೆಗಳು ನಾಶವಾಗಿ ಹೋಗುತ್ತವೆ.

ಜನತೆ ಮತ್ತು ಜನಾಂಗಗಳು

 • ಬ್ರೆಜಿಲ್ ದೇಶದ ಪ್ರಧಾನ ವಂಶಾವಳಿ ಪೋರ್ಚುಗೀಸರು. ೧೫೩೨ರ ನಂತರ ವಸಾಹತು ಪ್ರದೇಶಕ್ಕೆ ಪೋರ್ಚುಗೀಸರ ಆಗಮನ, ನಂತರ ೧೯ನೇ ಶತಮಾನದಲ್ಲಿ ಪೋರ್ಚುಗೀಸರ ವಲಸೆಯೇ ಇದಕ್ಕೆ ಕಾರಣ.
 • ಬ್ರೆಜಿಲ್‌ನ ಮೂಲ ನಿವಾಸಿಗಳು ಒಂದೋ ನಿರ್ನಾಮವಾದರು, ಅಥವಾ ಪೋರ್ಚುಗೀಸರ ಜೊತೆ ವಿವಾಹ ಮಾಡಿ ಸೇರಿಕೊಂಡರು. ಇಂದು ಈ ಮೂಲನಿವಾಸಿಗಳ ಸಂಖ್ಯೆ ಸುಮಾರು ಏಳು ಲಕ್ಷ, ದೇಶದ ಶೇ. ೧.
 • ಕಪ್ಪು ವರ್ಣೀಯರನ್ನು ೧೬ನೇ ಶತಮಾನದಿಂದ ೧೯ನೇ ಶತಮಾನದ ತನಕ ಆಫ್ರಿಕಾದಿಂದ ಗುಲಾಮರನ್ನಾಗಿ ಕರೆತರಲಾಯಿತು. ಇವರು ಪೋರ್ಚುಗೀಸ್ ಜನಾಂಗದ ಜೊತೆ ಮಿಶ್ರಗೊಂಡು ಮಿಶ್ರ ತಳಿಯ ಜನಾಂಗ ಸಾಕಷ್ಟಿದೆ.

೨೦೦೦ದ ಜನಗಣತಿಯ ಪ್ರಕಾರ ಬ್ರೆಜಿಲ್‌ನ ಜನರನ್ನು ವಿಭಾಗಿಸಬಹುದು:

 • ಶ್ವೇತ ವರ್ಣೀಯರು - ೫೩.೭ %
 • ಬಹುವರ್ಣೀಯರು - ೩೮.೫ %
 • ಕಪ್ಪು ವರ್ಣೀಯರು - ೬.೨ %
 • ಏಷ್ಯನ್ನರು - ೦.೫ %
 • ಮೂಲನಿವಾಸಿಗಳು - ೦.೪ %
 • ಅಸ್ಪಷ್ಟ - ೦.೭%

ಭಾಷೆಗಳು

ಬ್ರೆಜಿಲ್ ದೇಶದ ಏಕೈಕ ಅಧಿಕೃತ ಭಾಷೆ ಪೋರ್ಚುಗೀಸ್. ಎಲ್ಲ ಜನರೂ ಆಡುವ ಈ ಭಾಷೆ ಶಾಲೆಗಳಲ್ಲಿ ಕಲಿಸಲಾಗುವ ಒಂದೇ ಭಾಷೆಯಾಗಿದೆ. ಎಲ್ಲ ಆಡಳಿತಾತ್ಮಕ, ವ್ಯಾವಹಾರಿಕ, ವಾಣಿಜ್ಯ ಪ್ರಯೋಗಗಳಿಗೆ ಮತ್ತು ಟಿ.ವಿ - ರೇಡಿಯೋಗಳಲ್ಲಿ ಸಹ ಇದೇ ಭಾಷೆಯನ್ನು ಉಪಯೋಗಿಸಲಾಗುತ್ತದೆ. ಎರಡು ಅಮೆರಿಕ ಖಂಡಗಳಲ್ಲಿ ಈ ಭಾಷೆ ಮಾತಾಡುವ ಒಂದೇ ದೇಶ ಬ್ರೆಜಿಲ್ ಆದ್ದರಿಂದ ಈ ಪೋರ್ಚುಗೀಸ್ ಭಾಷೆ ರಾಷ್ಟ್ರೀಯ ಪರಿಚಯ ಸೂಚಕವಾಗಿದೆ.

ಉತ್ತರ ಬ್ರೆಜಿಲ್‌ನಲ್ಲಿ ಅನೇಕ ಮೂಲಭಾಷೆಗಳನ್ನಾಡಲಾಗುತ್ತದೆ. ಇಂಗ್ಲಿಷ್ ಪ್ರೌಢ ಶಾಲೆಯ ಅಧಿಕೃತ ಕಲಿಕೆಯ ಭಾಷೆಯಾಗಿದ್ದರೂ, ಅತಿ ಕಡಿಮೆ ಬ್ರೆಜಿಲಿಯನ್ನರು ಇದನ್ನು ನಿರರ್ಗಳವಾಗಿ ಮಾತನಾಡಬಲ್ಲರು. ಪೋರ್ಚುಗೀಸ್ ಭಾಷೆಯ ಜೊತೆ ಸ್ಪಾನಿಷ್ ಭಾಷೆಯ ಸಾಮ್ಯವಿರುವುದರಿಂದ ಈ ಭಾಷೆಯನ್ನು ಬ್ರೆಜಿಲಿಯನ್ನರು ಅರ್ಥ ಮಾಡಿಕೊಳ್ಳುತ್ತಾರೆ.

ಅಪರಾಧ

Corcovado statue01 2005-03-14
ರಿಯೊ ಡಿ ಜನೈರೊ ನಗರದಲ್ಲಿ ೭೧೦ ಮೀಟರ್ ಎತ್ತರದ ಕೊರ್ಕೊವಾಡೊ ಪರ್ವತದ ಮೇಲೆ ಸ್ಥಿತ ವಿಮೋಚಕ ಕ್ರಿಸ್ತನ ವಿಶ್ವ ವಿಖ್ಯಾತ ಪ್ರತಿಮೆ.

ಕಳೆದ ಕೆಲವು ದಶಕಗಳಲ್ಲಿ ಬ್ರೆಜಿಲ್‌ನಲ್ಲಿ ಅಪರಾಧದ ಪ್ರಮಾಣದಲ್ಲಿ ಅತಿ ಹೆಚ್ಚಿನ ಏರಿಕೆ ಕಂಡು ಬಂದಿದೆ. ಅನೇಕ ಅಪರಾಧಗಳಿಗೆ ಶಿಕ್ಷೆಯೇ ದೊರೆಯುವುದಿಲ್ಲ. ರಸ್ತೆ ಅಪರಾಧಗಳು ಹೆಚ್ಚಿನ ಪ್ರಮಾಣದಲ್ಲಿದ್ದು ನಿವಾಸಿಗಳಿಗೆ ಸಂಜೆಯ ವೇಳೆ ದೊಡ್ಡ ಸಮಸ್ಯೆಯಾಗಿದೆ. ರಿಯೊ ಡಿ ಜನೈರೊ ನಗರದಲ್ಲಿ ಅಪರಾಧ ಪ್ರಮಾಣ ಅಗಾಧವಾಗಿದೆ. ಪೊಲೀಸರು ಮತ್ತು ಮಾದಕ ಪದಾರ್ಥಗಳ ವ್ಯವಹಾರ ನಡೆಸುವವರ ಮಧ್ಯೆ ಗುಂಡಿನ ಕಾಳಗ ಸಾಮಾನ್ಯ. ಅಪರಾಧಿಗಳ್ಯ್ ಜೈಲಿನಲ್ಲಿದ್ದರೂ ಕೂಡ ಅಲ್ಲಿಂದಲೇ ಅಬಾಧಿತವಾಗಿ ವ್ಯವಹಾರವನ್ನು ನಡೆಸುತ್ತಾರೆ. ಬ್ರೆಜಿಲ್‌ನಲ್ಲಿ ಅಪಹರಣಗಳೂ ಸಾಮಾನ್ಯವಾಗಿವೆ.

ಧರ್ಮ

ಜನಗಣತಿಯ ಪ್ರಕಾರ

 • ೭೩.೬% ಜನ ಕ್ಯಾಥಲಿಕ್ ಪಂಗಡದವರು. ಹೀಗೆ ಬ್ರೆಜಿಲ್ ಪ್ರಪಂಚದ ಅತಿ ದೊಡ್ಡ ಕ್ಯಾಥಲಿಕ್ ಜನರ ದೇಶವಾಗಿದೆ.
 • ಪ್ರೊಟೆಸ್ಟಂಟರ ಸಂಖ್ಯೆ ೧೫.೪% ಇದ್ದು, ಈಗ ಹೆಚ್ಚುತ್ತಿದೆ.
 • ೭.೪% ಜನತೆ ನಾಸ್ತಿಕರಾಗಿದ್ದಾರೆ.
 • ಆಧ್ಯಾತ್ಮಿಕತೆ ೧.೩% ಜನರಲ್ಲಿದೆ.
 • ಉಳಿದ ೧.೮% ಜನ ಇನ್ನುಳಿದ ಧರ್ಮಗಳಿಗೆ ಸೇರಿದವರಾಗಿದ್ದಾರೆ.

ಕ್ರೀಡೆ

ಬ್ರೆಜಿಲ್ ದೇಶದ ಅತಿ ಜನಪ್ರಿಯ ಕ್ರೀಡೆ ಫುಟ್‌ಬಾಲ್. ಬ್ರೆಜಿಲ್ ತನ್ನ ಆಟಗಾರರ ಕೌಶಲ್ಯಕ್ಕೆ ಹೆಸರಾಗಿದೆ. ಕೆಲವು ಆಟಗಾರರು - ರೊನಾಲ್ಡೊ, ಪೆಲೆ, ರೊಮಾರಿಯೊ, ರಿವಾಲ್ಡೊ, ರಾಬರ್ಟೊ ಕಾರ್ಲೊಸ್, ರೊನಾಲ್ಡಿನಿಯೊ, ಕಾಕಾ, ಮುಂತಾದವರು. ಬ್ರೆಜಿಲ್ ರಾಷ್ಟ್ರೀಯ ಫುಟ್‌ಬಾಲ್ ತಂಡ ದಾಖಲೆಯ ಐದು ಬಾರಿ ಫುಟ್‌ಬಾಲ್ ವಿಶ್ವ ಕಪ್ ಅನ್ನು ಗೆದ್ದಿದೆ.

ಬ್ರೆಜಿಲ್ ಇನ್ನಿತರ ಅಂತಾರಾಷ್ಟ್ರೀಯ ಕ್ರೀಡೆಗಳಾದ ವಾಲಿಬಾಲ್, ಬಾಸ್ಕೆಟ್‌ಬಾಲ್, ಟೆನ್ನಿಸ್, ಮತ್ತು ಜಿಮ್ನಾಸ್ಟಿಕ್ಸ್ ಗಳಲ್ಲಿ ಉಶಸ್ಸು ಗಳಿಸಿದೆ.

ಇವುಗಳನ್ನೂ ನೋಡಿ

ಹೊರಗಿನ ಸಂಪರ್ಕಗಳು

Logo of SACN ದಕ್ಷಿಣ ಅಮೇರಿಕ ಖಂಡದ ದೇಶಗಳು
ಅರ್ಜೆಂಟೀನ | ಬೊಲಿವಿಯ | ಬ್ರೆಜಿಲ್ | ಚಿಲಿ | ಕೊಲೊಂಬಿಯ | ಎಕ್ವಡಾರ್ | ಗಯಾನ | ಪೆರಗ್ವೆ | ಪೆರು | ಸುರಿನಾಮ್ | ಉರುಗ್ವೆ | ವೆನೆಜುವೆಲಾ
ಅಮೆರಿಕ

REDIRECT Template:Infobox continent

ಅಮೆರಿಕಸ್ ಅಥವಾ ಅಮೆರಿಕ ವು,Spanish: [América] ಪೋರ್ಚುಗೀಸ್:AméricaFrench: AmériqueDutch: [Amerika] ಪಶ್ಚಿಮ ಗೋಳಾರ್ಧದಲ್ಲಿರುವ ಭೂಪ್ರದೇಶ. ಅದು ಉತ್ತರ ಅಮೆರಿಕ, ದಕ್ಷಿಣ ಅಮೆರಿಕ ಖಂಡಗಳು, ದ್ವೀಪ ಪ್ರದೇಶಗಳು ಮತ್ತು ಪ್ರಾಂತ್ಯಗಳನ್ನು ಒಳಗೊಂಡ ಹೊಸ ಜಗತ್ತಾಗಿ ರೂಪುಗೊಂಡಿದೆ. ಅಮೆರಿಕ ಎಂಬ ಪದವು ಆಂಗ್ಲಭಾಷೆಯಲ್ಲಿ ವಿಭಿನ್ನಾರ್ಥ ನೀಡುತ್ತದೆಯಾದರೂ, ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಈ ಪದದಿಂದ ಹೆಚ್ಚಾಗಿ ಮತ್ತು ಸಾಮಾನ್ಯವಾಗಿ ಪ್ರಬೋಧಿಸುತ್ತಾರೆ. ಪೃಥ್ವಿಯ ಒಟ್ಟು ಮೇಲ್ಮೈಯ ಶೇಕಡ 8.3 ರಷ್ಟು ಪ್ರದೇಶವನ್ನು ಅಮೆರಿಕ ಆವರಿಸಿಕೊಂಡಿದೆ ( ಶೇಕಡ 28.4 ರಷ್ಟೂ ಭೂಭಾಗ) ಮತ್ತು ಒಟ್ಟು ಜನಸಂಖ್ಯೆಯ ಶೇಕಡ 13.5 ರಷ್ಹ್ಟು ಜನಸಾಂದ್ರತೆಯನ್ನು ಹೊಂದಿದೆ(ಸುಮಾರು 900 ಮಿಲಿಯನ್ ಜನಸಂಖ್ಯೆ). ಅಮೇರಿಕಾ ದೇಶವನ್ನು ಕೊಲಂಬಸ್ ಸಮುದ್ರದ ಮೂಲಕ ಅನ್ವೇಷಿಸಿದ್ದರು.

ಅರ್ಜೆಂಟೀನ

ಅರ್ಜೆಂಟೀನ ದಕ್ಷಿಣ ಅಮೇರಿಕ ಖಂಡದಲ್ಲಿರುವ ೨ನೇ ದೊಡ್ಡ ದೇಶ ಹಾಗು ಪ್ರಪಂಚದ ೮ನೇ ದೊಡ್ಡ ದೇಶ.https://simple.wikipedia.org/wiki/Argentina ದಕ್ಷಿಣ ಅಮೆರಿಕದ ರಾಜ್ಯಗಳಲ್ಲಿ ಒಂದು (೩೫೦-೫೫೦ ದಕ್ಷಿಣ ಅಕ್ಷಾಂಶ, ೫೪೦೨೨°-೭೩೦೩೦° ಪಶ್ಚಿಮ ರೇಖಾಂಶ). ಉತ್ತರದಲ್ಲಿ ಬೊಲಿವಿಯ, ಪರಗ್ವೆ, ಪಶ್ಚಿಮದಲ್ಲಿ ಚಿಲಿ, ಪೂರ್ವ ಮತ್ತು ಈಶಾನ್ಯದಲ್ಲಿ ಬ್ರೆಜಿಲ್ ಮತ್ತು ಉರುಗ್ವೆ ದೇಶಗಳೂ ದಕ್ಷಿಣ ಮತ್ತು ಪೂರ್ವದಲ್ಲಿ ದಕ್ಷಿಣ ಅಂಟ್ಲಾಂಟಿಕ್ ಸಾಗರ ಸುತ್ತುವರೆದಿರುವ ಈ ದೇಶದ ವಿಸ್ತೀರ್ಣ ೨,೭೮೦,೪೦೦.ಚ.ಕಿಮೀ. ಜನಸಂಖ್ಯೆ ೪೦,೧೧೭,೦೯೬ (೨೦೧೦).http://www.worldometers.info/world-population/argentina-population/ ಉತ್ತರಕ್ಕೆ ಸ್ವಲ್ಪ ವಿಶಾಲವಾಗಿದ್ದು ದಕ್ಷಿಣಕ್ಕೆ ಹೋದಂತೆ ಇಕ್ಕಟ್ಟಾಗುತ್ತ ಹೋಗುತ್ತದೆ. ರಾಜಧಾನಿ ಬ್ಯೂನೆಸ್ ಐರಿಸ್. ಇದರ ಜನಸಂಖ್ಯೆ ೧೨,೪೩೧,೦೦೦. ಶೇ 89ರಷ್ಟು ಜನ ನಗರಗಳಲ್ಲಿ ವಾಸಿಸುತ್ತಾರೆ. ಉಳಿದ ಜನ ಹಳ್ಳಿಗಳಲ್ಲಿ ವಾಸವಾಗಿದ್ದಾರೆ. ಪ್ರತಿ ಸಾವಿರಕ್ಕೆ ಜನನ ಮರಣ ದರಗಳು ಕ್ರಮವಾಗಿ ೨೯ ಮತ್ತು ೯ ಆಗಿವೆ. ಈ ದೇಶದ ಜನ ವಿದ್ಯಾವಂತರು. ಅಕ್ಷರಸ್ಥರ ಸಂಖ್ಯೆ ಶೇ ೮೭ರಷ್ಟಿದೆ. ಒಕ್ಕಲುತನದಲ್ಲಿ ತೊಡಗಿದವರ ಸಂಖ್ಯೆ ಶೇ ೨೫ ರಷ್ಟು ಮಾತ್ರ. ಆದರೂ ಇದು ಕೃಷಿ ಪ್ರಧಾನ ರಾಷ್ಟ್ರ. ಇಲ್ಲಿನ ನಾಣ್ಯ ಪೆಸೊ. ಮುಖ್ಯ ಬೆಳೆಗಳು ಗೋದಿ, ಮೆಕ್ಕೆಜೋಳ, ರೈ, ಓಟ್ಸ್ ಮತ್ತು ಅಗಸೆನಾರು.

ಈ ದೇಶದ ಪಶ್ಚಿಮ ಆಂಡೀಸ್ ಪರ್ವತ ಉತ್ತರ ದಕ್ಷಿಣವಾಗಿ ಹಬ್ಬಿದೆ. ಬಹಳ ಎತ್ತರವಾಗಿರುವುದರಿಂದ ಹಿಮಾವೃತವಾಗಿರುತ್ತದೆ. ಉತ್ತರ ಭಾಗದಲ್ಲಿ ಅರಣ್ಯ ಪ್ರದೇಶವಿದೆ. ನೈಋತ್ಯಕ್ಕೆ ಫಲವತ್ತಾದ ಪಂಪಾಸ್ ಹುಲ್ಲುಗಾವಲು, ದಕ್ಷಿಣಕ್ಕೆ ಮರುಭೂಮಿ. ೧೫೮೦ರಲ್ಲಿ ಸ್ಪೇನ್ ದೇಶದವರು ಇದನ್ನು ಆಕ್ರಮಿಸಿಕೊಂಡರು. ಈ ವಸಾಹತುಗಾರರು ಇಲ್ಲಿಗೆ ಬಂದಕೂಡಲೆ ಇಲ್ಲಿಯ ಜನ ಬೆಳ್ಳಿಯ ಆಭರಣಗಳನ್ನು ಧರಿಸುವುದನ್ನು ಕಂಡು ಇಲ್ಲಿ ಬೆಳ್ಳಿ ಸಿಗಬಹುದೆಂದು ತಿಳಿದು ಇದನ್ನು ಬೆಳ್ಳಿಯ ನಾಡೆಂದು ಕರೆದರು. ಸ್ವಲ್ಪ ಕಾಲಾನಂತರ, ಬೆಳ್ಳಿ ಹೊರದೇಶಗಳಿಂದ ಆಮದಾಗುತ್ತಿದೆ ಎಂಬುದು ತಿಳಿದುಬಂತು.

ಉರುಗ್ವೆ

ಉರುಗ್ವೆ, ಅಧಿಕೃತವಾಗಿ ಉರುಗ್ವೆ ಪೂರ್ವ ಗಣರಾಜ್ಯ (República Oriental del Uruguay) ಆಗ್ನೇಯ ದಕ್ಷಿಣ ಅಮೇರಿಕದ ಅತಿಪುಟ್ಟ ಸ್ವತಂತ್ರದೇಶ ದೇಶ. ಇದರ ರಾಜಧಾನಿ ಮಾಂಟೆವಿಡಿಯೊ. ಇದರ ಉತ್ತರಕ್ಕೆ ಬ್ರೆಜಿಲ್, ಪಶ್ಚಿಮಕ್ಕೆ ಅರ್ಜೆಂಟೀನ, ಮತ್ತು ಆಗ್ನೇಯಕ್ಕೆ ಅಟ್ಲಾಂಟಿಕ್ ಮಹಾಸಾಗರಗಳಿವೆ.

೧೮೨೮ರಲ್ಲಿ ಬ್ರೆಜಿಲ್, ಅರ್ಜೆಂಟೀನ ಮತ್ತು ಸ್ಪೇನ್ಗಳ ಮಧ್ಯೆ ನಡೆದ ವಿವಾದದ ಪರಿಣಾಮವಾಗಿ ಈ ದೇಶ ಸೃಷ್ಟಿತವಾಯಿತು. ಸಾಂವಿಧಾನಿಕ ಪ್ರಜಾತಂತ್ರವಾಗಿರುವ ಈ ದೇಶ ರಾಷ್ಟ್ರಪತಿ ಪದ್ಧತಿಯ ಸರ್ಕಾರವನ್ನು ಹೊಂದಿದೆ.

ಇದರ ವಿಸ್ತೀರ್ಣ 1,77,508 ಚ.ಕಿ.ಮೀ. (68,536 ಚ.ಮೈ.). ಉತ್ತರದಲ್ಲಿ ಬ್ರೆಜಿಲ್, ದಕ್ಷಿಣದಲ್ಲಿ ರಿಯೊ ದೆ ಲಾ ಪ್ಲಾಟಾ ನದಿಯ ಅಳಿವೆ, ಪಶ್ಚಿಮದಲ್ಲಿ ಉರುಗ್ವೇ ನದಿ, ಪೂರ್ವದಲ್ಲಿ ಅಟ್ಲಾಂಟಿಕ್ ಸಾಗರ - ಇವು ದೇಶದ ಮೇರೆಗಳು.

ಒಲಂಪಿಕ್ ಕ್ರೀಡಾಕೂಟ

ಒಲಿಂಪಿಕ್ ಕ್ರೀಡಾಕೂಟ ಒಂದು ಅಂತರರಾಷ್ಟ್ರೀಯ ಕ್ರೀಡಾಕೂಟ. ಇದು ಅನೇಕ ಕ್ರೀಡೆಗಳನ್ನು ಒಳಗೊಂಡಿದೆ. ಈ ಕ್ರೀಡಾಕೂಟವನ್ನು ಬೇಸಗೆಯ ಕ್ರೀಡಾಕೂಟ ಹಾಗೂ ಚಳಿಗಾಲದ ಕ್ರೀಡಾಕೂಟಗಳೆಂದು ವರ್ಗೀಕರಿಸಲಾಗಿದೆ. ಎರಡೂ ಕೂಟಗಳನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸಲಾಗುವುದು. ೧೯೯೨ರವರೆಗೆ ಎರಡೂ ಕ್ರೀಡಾಕೂಟಗಳನ್ನು ಒಂದೇ ವರ್ಷದಲ್ಲಿ ನಡೆಸಲಾಗುತ್ತಿತ್ತು. ನಂತರ ಇವುಗಳ ಮಧ್ಯೆ ಎರಡು ವರ್ಷಗಳ ಅಂತರವಿರಿಸಲಾಗಿದೆ. ಕ್ರಿ.ಪೂ. ೭೭೬ರಲ್ಲಿ ಗ್ರೀಸ್ ದೇಶದ ಒಲಿಂಪಿಯಾದಲ್ಲಿ ಮೂಲ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ನಂತರ ಕ್ರಿ.ಶ. ೩೯೩ರವರೆಗೆ ಇದು ಮುಂದುವರೆಯಿತು. ಕಾರಣಾಂತರಗಳಿಂದ ನಿಂತುಹೋದ ಈ ಕ್ರೀಡಾಕೂಟವನ್ನು ಮತ್ತೆ ಪುನರಾರಂಭಿಸುವುದರಲ್ಲಿ ಆಸಕ್ತಿ ತೋರಿದವನು ಗ್ರೀಸ್ ದೇಶದ ಕವಿ ಹಾಗೂ ಪತ್ರಿಕಾ ಸಂಪಾದಕನಾಗಿದ್ದ ಪನಾಜಿಯೋಟಿಸ್ ಸೌಟ್ಸಾಸ್ ಎಂಬವನು. ಮುಂದೆ ೧೮೫೯ರಲ್ಲಿ ಇವಾಂಜೆಲಾಸ್ ಝಪ್ಪಾಸ್ ಎಂಬುವವನು ನವೀನಕಾಲದ ಪ್ರಪ್ರಥಮ ಅಂತರರಾಷ್ಟ್ರೀಯ ಒಲಿಂಪಿಕ್ ಕ್ರೀಡಾಕೂಟ ವನ್ನು ಪ್ರಾಯೋಜಿಸಿದನು. ೧೮೯೪ರಲ್ಲಿ ಫ್ರಾನ್ಸ್ ದೇಶದ ಗಣ್ಯನಾದ ಬ್ಯಾರನ್ ಪಿಯರಿ ದ ಕೂಬರ್ತಿಯು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯನ್ನು ಹುಟ್ಟುಹಾಕಿದನು. ಈ ಸಂಸ್ಥೆಯ ವತಿಯಿಂದ ಮೊದಲನೆಯ ಬೇಸಿಗೆ ಒಲಿಂಪಿಕ್ ಕ್ರೀಡಾಕೂಟವನ್ನು ಗ್ರೀಸ್ ದೇಶದ ಅಥೆನ್ಸ್ ನಗರದಲ್ಲಿ ೧೮೯೬ರಲ್ಲಿ ನಡೆಸಲಾಯಿತು.https://www.penn.museum/sites/olympics/olympicorigins.shtml ಅಂದು ಕೆಲವೇ ರಾಷ್ಟ್ರಗಳು ಪಾಲ್ಗೊಂಡಿದ್ದ ಒಲಿಂಪಿಕ್ ಕ್ರೀಡಾಕೂಟ ಇಂದು ಹೆಚ್ಚೊಕಡಿಮೆ ವಿಶ್ವದ ಎಲ್ಲಾ ದೇಶಗಳೂ ಭಾಗವಹಿಸುವಷ್ಟರ ಮಟ್ಟಿಗೆ ಅಗಾಧವಾಗಿ ಬೆಳೆದಿದೆ. ಉಪಗ್ರಹ ಸಂಪರ್ಕದ ವ್ಯವಸ್ಥೆಯಿಂದಾಗಿ ಜಗತ್ತಿನ ಮೂಲೆಮೂಲೆಗಳಿಗೂ ಈ ಕೂಟದ ನೇರಪ್ರಸಾರ ಸಾಧ್ಯವಾಗಿದ್ದು ಒಲಿಂಪಿಕ್ ಕ್ರೀಡಾಕೂಟ ಇಂದು ಅಪಾರಪ್ರಮಾಣದ ಜನಪ್ರಿಯತೆ ಗಳಿಸಿಕೊಂಡಿದೆ. ಅತ್ಯಂತ ಇತ್ತೀಚಿನ ಬೇಸಗೆಯ ಒಲಿಂಪಿಕ್ ಕ್ರೀಡಾಕೂಟ ೨೦೧೨ರಲ್ಲಿ ಲಂಡನ್ ನಗರದಲ್ಲಿ ಹಾಗೂ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟ ೨೦೧೦ರಲ್ಲಿ ಕೆನಡಾ ದ ವೆನ್‌ಕೂವರ್ ನಗರದಲ್ಲಿ ಆಯೂಜಿಸಲ್ಪಟ್ಟಿದ್ದವು. ಮುಂದಿನ ಬೇಸಗೆ ಕ್ರೀಡಾಕೂಟ ೨೦೧೬ ರಲ್ಲಿ ಬ್ರೆಜಿಲ್ ದೇಶದ ರಿಯೊ ಡಿ ಜನೈರೊ ನಲ್ಲಿ ನಡೆಯಲಿದೆ. ಮುಂದಿನ ಚಳಿಗಾಲದ ಕ್ರೀಡಾಕೂಟ ರಷ್ಯಾ ದೇಶದ ಸೋಚಿ ಯಲ್ಲಿ ೨೦೧೪ ರಲ್ಲಿ ನಡೆಯಲಿದೆ..

ಕೊಲೊಂಬಿಯ

ಕೊಲೊಂಬಿಯ (ಅಧಿಕೃತವಾಗಿ ಕೊಲೊಂಬಿಯ ಗಣರಾಜ್ಯ - República de Colombia (ಉಚ್ಛಾರಣೆ) ), ದಕ್ಷಿಣ ಅಮೇರಿಕದ ವಾಯುವ್ಯ ಭಾಗದಲ್ಲಿರುವ ಒಂದು ದೇಶ. ಈ ದೇಶದ ಪೂರ್ವಕ್ಕೆ ವೆನೆಜುವೆಲ ಮತ್ತು ಬ್ರೆಜಿಲ್; ದಕ್ಷಿಣಕ್ಕೆ ಎಕ್ವಡಾರ್ ಮತ್ತು ಪೆರು; ಉತ್ತರಕ್ಕೆ ಅಟ್ಲಾಂಟಿಕ್ ಮಹಾಸಾಗರ ಮತ್ತು ಕೆರಿಬ್ಬಿಯನ್ ಸಮುದ್ರ ಹಾಗು ಪಶ್ಚಿಮಕ್ಕೆ ಪನಾಮ ಮತ್ತು ಪೆಸಿಫಿಕ್ ಮಹಾಸಾಗರಗಳಿವೆ.

ಇಂದು ಕೊಲೊಂಬಿಯ ದೇಶ ಇರುವ ಜಾಗದಲ್ಲಿ ಮೊದಲು ಸ್ಥಳೀಯ ಬುಡಕಟ್ಟು ಜನಾಂಗದವರಿದ್ದರು. ೧೪೯೯ ರಲ್ಲಿ ಸ್ಪೇನ್ ದೇಶದವರು ದಾಳಿ ಮಾಡಿ ಇದನ್ನು ವಸಹಾತನ್ನಾಗಿ ಮಾಡಿಕೊಂಡು. ಬೊಗೋಟಾ ಅವರ ರಾಜಧಾನಿಯಾಗಿತ್ತು.

ಗಯಾನ

ಗಯಾನ (ಅಧಿಕೃತವಾಗಿ ಗಯಾನ ಸಹಕಾರಿ ಗಣರಾಜ್ಯ) ದಕ್ಷಿಣ ಅಮೇರಿಕ ಖಂಡದ ಉತ್ತರ ಭಾಗದ ಒಂದು ದೇಶ. ಪೂರ್ವಕ್ಕೆ ಸುರಿನಾಮ್, ದಕ್ಷಿಣಕ್ಕೆ ಬ್ರೆಜಿಲ್, ಪಶ್ಚಿಮಕ್ಕೆ ವೆನೆಜುವೆಲ ಮತ್ತು ಉತ್ತರಕ್ಕೆ ಅಟ್ಲಾಂಟಿಕ್ ಮಹಾಸಾಗರಗಳನ್ನು ಈ ದೇಶ ಹೊಂದಿದೆ. ಸಾಂಸ್ಕೃತಿಕವಾಗಿ ಲ್ಯಾಟಿನ್ ಅಮೇರಿಕಕ್ಕಿಂತ ಕೆರಿಬ್ಬಿಯನ್ ರಾಷ್ಟ್ರಗಳಿಗೆ ಹೆಚ್ಚು ಸಂಬಂಧವನ್ನು ಹೊಂದಿದೆ. ವಿಸ್ತೀರ್ಣ 214, 969 ಚ.ಕಿಮೀ. ಜನಸಂಖ್ಯೆ 7,62,000 (20 ಸು.). ರಾಜಧಾನಿ ಜಾರ್ಜ್‍ಟೌನ್

ತಲಾವಾರು ಒಟ್ಟಾರೆ ಆಂತರಿಕ ಉತ್ಪನ್ನದ ಪಟ್ಟಿ

ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯವರು ತಯಾರಿಸಿರುವ ಪಟ್ಟಿಯ ಪ್ರಕಾರ ವಿವಿಧ ರಾಷ್ಟ್ರಗಳ ತಲಾವಾರು ಒಟ್ಟಾರೆ ಆಂತರಿಕ ಉತ್ಪನ್ನ ಇಂತಿದೆ.

ತೆಂಗಿನಕಾಯಿ ಮರ

ತೆಂಗಿನಕಾಯಿ ಮರ ಪಾಮೇ/ಅರೆಕೆಸಿಯಾ ಸಸ್ಯ ಕುಟುಂಬಕ್ಕೆ ಸೇರಿದ ಮರ. ಕೊಂಬೆಗಳು ಇರುವುದಿಲ್ಲ. ಗರಿಗಳು ಹಸ್ತಾಕಾರದಲ್ಲಿರುತ್ತವೆ. ಪಾಮೇಸಸ್ಯ ಕುಟುಂಬದಲ್ಲಿ ಈ ಮರ ಕೊಕಸ್ ಜಾತಿಗೆ ಸೇರಿದ ಮರ. . ಈ ಜಾತಿಯಲ್ಲಿ ಇರುವ ಒಂದೇ ಮರ ತೆಂಗಿನಮರ.ಗರಿಗಳು ಹರಿತವಾಗಿ ಹಚ್ಚ ಹಸಿರಾಗಿರುತ್ತವೆ. ಈ ಮರದ ಸಸ್ಯ ಶಾಸ್ತ್ರ ಹೆಸರು ಕೊಕಸ್ ನ್ಯುಸಿಫೆರಾ(cocos nucifera). ಮರದ ಮೇಲಿನ ಭಾಗದಲ್ಲಿ ವೃತ್ತಾಕಾರ ರೂಪದಲ್ಲಿ ಗರಿಗಳು ವ್ಯಾಪ್ತಿಸಿರುತ್ತವೆ. ತೆಂಗಿನ ಕಾಯಿಗಳು ದೊಡ್ಡದಾಗಿರುತ್ತವೆ. ಕಾಯಿಯ ಹೊರಭಾಗದಲ್ಲಿ ದಪ್ಪವಾಗಿ ಕತ್ತ/ನಾರು ಇರುತ್ತದೆ. ಕತ್ತದ ಒಳಗೆ ದಪ್ಪವಾದ, ಗಟ್ಟಿಯಾದ ಸಿಪ್ಪೆ ಇರುತ್ತದೆ. ಈ ಸಿಪ್ಪೆ ಒಳಗೆ ತಿರುಳು ಕಂಡು ಬರುತ್ತದೆ. ತಿರುಳು ಬೆಳ್ಳಗೆ ಇರುತ್ತದೆ.

ದಕ್ಷಿಣ ಅಮೇರಿಕ

ದಕ್ಷಿಣ ಅಮೇರಿಕ - ಪೆಸಿಫಿಕ್ ಸಾಗರದ ಪಶ್ಚಿಮ ಭಾಗದಲ್ಲಿ, ಮತ್ತು ಅಟ್ಲಾಂಟಿಕ್ ಸಾಗರದ ಉತ್ತರ ಭಾಗದಲ್ಲಿ ನೆಲೆಗೊಂಡಿರುವ ಖಂಡ. ಇದರ ಉತ್ತರ ಭಾಗಕ್ಕೆ ಉತ್ತರ ಅಮೇರಿಕ ಖಂಡ ಮತ್ತು ಕೆರಿಬ್ಬಿಯನ್ ಸಮುದ್ರವು ಇವೆ.

ಅಮೆರಿಗೊ ವೆಸ್ಪುಚಿ ಎಂಬ ಯೂರೋಪಿಯನ್ ನಾವಿಕ ಮೊದಲ ಬಾರಿಗೆ ಅಮೆರಿಕ ಖಂಡಗಳು "ಪೂರ್ವ ಇಂಡೀಸ್" ಅಲ್ಲ, ಒಂದು ವಿಶಿಷ್ಟ ಖಂಡ ಎಂದು ತಿಳಿಸಿಕೊಟ್ಟನು. ಈ ಕಾರಣದಿಂದ ಈ ಖಂಡಗಳನ್ನು ಇವನ ಹೆಸರನ್ನು ಆಧರಿಸಿ "ಅಮೆರಿಕ" ಎಂದು ಕರೆಯಲಾಗಿದೆ.

ದಕ್ಷಿಣ ಅಮೆರಿಕ ಖಂಡದ ವಿಸ್ತೀರ್ಣ ೧,೭೮,೪೦,೦೦೦ ಚದರ ಕಿ.ಮಿ. ಅಥವಾ ಭೂಮಿಯ ಶೇಕಡಾ ೩.೫% ರಷ್ಟು. ೨೦೦೫ರಲ್ಲಿ ಇದರ ಜನಸಂಖ್ಯೆ ಸುಮಾರು ೩೭,೧೦,೦೦,೦೦೦. ದಕ್ಷಿಣ ಅಮೆರಿಕ ಖಂಡದ ವಿಸ್ತೀರ್ಣವು ಏಷ್ಯಾ, ಆಫ್ರಿಕಾ, ಮತ್ತು ಉತ್ತರ ಅಮೆರಿಕ ಖಂಡಗಳ ನಂತರ ನಾಲ್ಕನೇ ಅತಿದೊಡ್ಡದಾಗಿದೆ. ಜನಸಂಖ್ಯೆ ದೃಷ್ಟಿಯಿಂದ ಇದಕ್ಕೆ ಐದನೆಯ ಸ್ಥಾನವಿದೆ.

ದೇಶಗಳ ರಾಷ್ಟೀಯ ಉತ್ಪನ್ನದ ಪಟ್ಟಿ

ಈ ಲೇಖನದಲ್ಲಿ ದೇಶಗಳ ರಾಷ್ಟ್ರೀಯ ಉತ್ಪನ್ನಗಳನ್ನು ಪಟ್ಟಿ ಮಾಡಲಾಗಿದೆ. ಒಂದು ರಾಷ್ಟ್ರದಲ್ಲಿ ಒಂದು ವರ್ಷದ ಅವಧಿಯಲ್ಲಿ ಉತ್ಪಾದಿಸಲಾದ ಎಲ್ಲ ಅಂತಿಮ ಸರಕುಗಳ ಒಟ್ಟು ಮೌಲ್ಯ ಮತ್ತು ಆ ರಾಷ್ಟ್ರದಲ್ಲಿ ಅದೇ ಅವಧಿಯಲ್ಲಿ ಉತ್ಪಾದಿಸಲಾದ ಎಲ್ಲ ಸೇವಾ ವ್ಯವಹಾರಗಳ ಒಟ್ಟು ಮೌಲ್ಯಗಳೆರಡರ ಮೊತ್ತವು ಆ ರಾಷ್ಟ್ರದ ಒಟ್ಟಾರೆ ಆಂತರಿಕ ಉತ್ಪನ್ನ ಅಥವಾ ರಾಷ್ಟ್ರೀಯ ಉತ್ಪನ್ನವೆಂದು (ಜಿ.ಡಿ.ಪಿ.) ಕರೆಯಿಸಿಕೊಳ್ಳುವುದು. ಈ ಕೆಳಗೆ ಕೊಟ್ಟಿರುವ ಪಟ್ಟಿಗಳಲ್ಲಿ ಜಿಡಿಪಿಯನ್ನು ಕೊಳ್ಳುವ ಶಕ್ತಿಯ ಸಮಾನತೆಯ ಆಧಾರದ ಮೇಲೆ ಗಣಿಸಲಾಗಿದೆ. ಇಲ್ಲಿ ಮೂರು ವಿಭಿನ್ನ ಮೂಲಗಳು ತಯಾರಿಸಿರುವ ಪಟ್ಟಿಗಳನ್ನು ನೀಡಲಾಗಿದೆ.

ಪೆರಗ್ವೆ

ಪೆರಗ್ವೆ, (ಅಧಿಕೃ‍ತವಾಗಿ ಪರಾಗ್ವೆ ಗಣರಾಜ್ಯ),ದಕ್ಷಿಣ ಅಮೆರಿಕದ ಸರಿಸುಮಾರು ಮಧ್ಯಭಾಗದಲ್ಲಿರುವ ಒಂದು ರಾಷ್ಟ್ರ. ಪೆರಗ್ವೆ ನದಿಯ ಎರಡೂ ದಂಡೆಗಳ ಮೇಲಿರುವ ಇದು ದಕ್ಷಿಣ ಮತ್ತು ನೈರುತ್ಯಗಳಲ್ಲಿ ಅರ್ಜೆಂಟೀನವನ್ನು, ಈಶಾನ್ಯದಲ್ಲಿ ಬ್ರೆಜಿಲ್ ದೇಶವನ್ನು ಮತ್ತು ವಾಯವ್ಯದಲ್ಲಿ ಬೊಲಿವಿಯ ದೇಶಗಳನ್ನು ಹೊಂದಿ ದಕ್ಷಿಣ ಅಮೆರಿಕ ಖಂಡದ ಹೃದಯ ಭಾಗದಲ್ಲಿದೆ. ಗ್ವರಾನಿ ಭಾಷೆಯಲ್ಲಿ ಇದರ ಅರ್ಥ "ದೊಡ್ಡ ನದಿಯಿಂದ" ಎಂದು. ಪರಾನ ನದಿಯೇ ಈ ದೊಡ್ಡ ನದಿ.

ಪೆರು

ಪೆರು ( ಅಧಿಕೃತವಾಗಿ ಪೆರು ಗಣರಾಜ್ಯ) ದಕ್ಷಿಣ ಅಮೆರಿಕ ಖಂಡದ ಪಶ್ಚಿಮ ಭಾಗದಲ್ಲಿರುವ ಒಂದು ರಾಷ್ಟ್ರ. ಇದು ಪೂರ್ವಕ್ಕೆ ಬ್ರೆಜಿಲ್ ಆಗ್ನೇಯಕ್ಕೆ ಬೊಲಿವಿಯ ದಕ್ಷಿಣಕ್ಕೆ ಚಿಲಿ ಉತ್ತರಕ್ಕೆ ಎಕ್ವಡಾರ್ ಹಾಗೂ ಕೊಲೊಂಬಿಯ ಮತ್ತು ಪಶ್ಚಿಮಕ್ಕೆ ಶಾಂತಸಾಗರದಿಂದ ಸುತ್ತುವರೆಯಲ್ಪಟ್ಟಿದೆ. ಪೆರು ಪ್ರದೇಶವು ಜಗತ್ತಿನ ಅತಿ ಪ್ರಾಚೀನ ನಾಗರಿಕತೆಗಳಲ್ಲಿ ಒಂದಾದ ನಾರ್ಟೆ-ಚಿಕೋ ನಾಗರಿಕತೆಗೆ, ಇಂಕಾ ಸಾಮ್ರಾಜ್ಯಕ್ಕೆ ನೆಲೆಯಾಗಿತ್ತು. ಅಲ್ಲದೆ ಕೊಲಂಬಸ್ ಅಮೆರಿಕ ಖಂಡದಲ್ಲಿ ಕಾಲಿಡುವ ಸಮಯದಲ್ಲಿ ಅಲ್ಲಿನ ಅತಿ ದೊಡ್ಡ ದೇಶವಾಗಿತ್ತು. ೧೬ನೆಯ ಶತಮಾನದಲ್ಲಿ ಸ್ಪೇನ್ನ ಸಮ್ರಾಟರು ಪೆರುವನ್ನು ವಶಪಡಿಸಿಕೊಂಡು ಇಲ್ಲಿ ತಮ್ಮ ದಕ್ಷಿಣ ಅಮೆರಿಕದ ಎಲ್ಲಾ ವಸಾಹತುಗಳನ್ನೊಳಗೊಂಡ ಒಂದು ವೈಸರಾಯಲ್ಟಿಯನ್ನು ಸ್ಥಾಪಿಸಿದರು. ೧೮೨೧ರಲ್ಲಿ ಸ್ವಾತಂತ್ಯ್ರ ಪಡೆದ ಪೆರು ನಂತರದ ದಿನಗಳಲ್ಲಿ ರಾಜಕೀಯವಾಗಿ ಮತ್ಥು ಆರ್ಥಿಕವಾಗಿ ಹಲವು ಏಳು ಬೀಳುಗಳನ್ನು ಕಂಡಿದೆ. ಪೆರು ಒಂದು ಅಧ್ಯಕ್ಷೀಯ ಪ್ರಾತಿನಿಧಿಕ ಪ್ರಜಾಸತ್ತಾತ್ಮಕ ಗಣರಾಜ್ಯ.

ಪೆರು ಭೌಗೋಳಿಕವಾಗಿ ವಿವಿಧ ವಲಯಗಳನ್ನುಳ್ಳ ದೇಶ. ಪಶ್ಚಿಮದ ಶಾಂತಸಾಗರದ ತೀರದ ಬಯಲು ಪ್ರದೇಶವು ಅತಿ ಶುಷ್ಕ ವಲಯ. ಪೂರ್ವದಲ್ಲಿ ಆಂಡೆಸ್ ಪರ್ವತಶ್ರೇಣಿಯ ಉನ್ನತ ಶಿಖರಗಳು ಹಾಗೂ ಅಮೆಝಾನ್ ಕೊಳ್ಳದ ಉಷ್ಣವಲಯದ ಮಳೆಕಾಡುಗಳಿವೆ. ೧೨,೮೫,೨೨೦ ಚ.ಕಿ.ಮೀ. ವಿಸ್ತೀರ್ಣವುಳ್ಳ ಪೆರುವಿನ ಜನಸಂಖ್ಯೆ ಸುಮಾರು ೨ ಕೋಟಿ ೮೭ ಲಕ್ಷ. ರಾಷ್ಟ್ರದ ರಾಜಧಾನಿ ಲಿಮಾ. ಪೆರು ಒಂದು ಅಭಿವೃದ್ಧಿಶೀಲ ರಾಷ್ಟ್ರ. ಕೃಷಿ, ಮೀನುಗಾರಿಕೆ, ಗಣಿಗಾರಿಕೆ ಮತ್ತು ಜವಳಿ ಉದ್ಯಮ ನಾಡಿನ ಪ್ರಮುಖ ಆರ್ಥಿಕ ಚಟುವಟಿಕೆಗಳು. ಪೆರುವಿನ ಜನತೆ ಹಲವು ಜನಾಂಗಗಳಿಗೆ ಸೇರಿದವರು. ಮುಖ್ಯವಾಗಿ ಅಮೆರಿಂಡಿಯನ್ನರು,ಯುರೋಪಿಯನ್ನರು,ಆಫ್ರಿಕನ್ನರು ಹಾಗೂ ಏಷ್ಯನ್ನರು ಇಲ್ಲಿ ನೆಲೆಸಿದ್ದಾರೆ. ಪ್ರಧಾನ ಭಾಷೆ ಸ್ಪಾನಿಷ್. ಉಳಿದಂತೆ ಕ್ವೆಚುವಾ ಮತ್ತು ಹಲವು ಸ್ಥಳೀಯ ಬುಡಕಟ್ಟು ಭಾಷೆಗಳೂ ನುಡಿಯಲ್ಪಡುತ್ತವೆ. ಬಹುಸಂಖ್ಯಾಕರು ಕ್ಯಾಥೊಲಿಕ್ ಧರ್ಮೀಯರು.

ಬೊಲಿವಿಯ

ಬೊಲಿವಿಯ ಗಣರಾಜ್ಯ (República de Bolivia), ಸಿಮೊನ್ ಬೊಲಿವಾರ್ನ ಸ್ಮರಣಾರ್ಥವಾಗಿ ಹೆಸರಿಡಲಾಗಿರುವ ದಕ್ಷಿಣ ಅಮೇರಿಕದ ಒಂದು ಭೂಆವೃತ ದೇಶ. ಇದರ ಉತ್ತರ ಮತ್ತು ಪೂರ್ವಗಳಿಗೆ ಬ್ರೆಜಿಲ್, ದಕ್ಷಿಣಕ್ಕೆ ಪರಾಗ್ವೆ ಮತ್ತು ಅರ್ಜೆಂಟೀನ, ಮತ್ತು ಪಶ್ಚಿಮಕ್ಕೆ ಚಿಲಿ ಮತ್ತು ಪೆರು ದೇಶಗಳಿವೆ.

ಮೆಣಸಿನಕಾಯಿ

ಮೆಣಸಿನಕಾಯಿ ಸೊಲ್ಯಾನೇಸಿಯಿಯ ಸದಸ್ಯರಾದ ಕ್ಯಾಪ್ಸಿಕಮ್ ಜಾತಿಯ ಸಸ್ಯಗಳ ಹಣ್ಣು. ಕ್ಯಾಪ್ಸೇಯಸಿನ್ ಮತ್ತು ಹಲವು ಸಂಬಂಧಿತ ರಾಸಾಯನಿಕಗಳು, ಒಟ್ಟಾಗಿ ಕ್ಯಾಪ್ಸೇಯಸಿನಾಯ್ಡ್‍ಗಳು ಎಂದು ಕರೆಯಲಾದ ವಸ್ತುಗಳು, ಮೆಣಸಿನಕಾಯಿಗಳನ್ನು ಸೇವಿಸಿದಾಗ ಅಥವಾ ಬಾಹ್ಯವಾಗಿ ಲೇಪಿಸಿದಾಗ ಮೆಣಸಿನಕಾಯಿಗಳಿಗೆ ಅವುಗಳ ತೀಕ್ಷ್ಣತೆ ನೀಡುವ ವಸ್ತುಗಳು. ಮೆಣಸಿನಕಾಯಿಗಳು ಅಮೇರಿಕಾಗಳಲ್ಲಿ ಹುಟ್ಟಿಕೊಂಡವು.

ಭಾರತದ ಸಾಂಬರ ಉತ್ಪನ್ನಗಳಲ್ಲಿ ಮೆಣಸಿನಕಾಯಿ ಅತ್ಯಂತ ಪ್ರಮುಖವಾಗಿದೆ. ಇದು ಮೂಲತಃ ಬ್ರೆಜಿಲ್ ದೇಶದ ಸಸ್ಯವಾಗಿದ್ದು,ಪೋರ್ಚುಗೀಸರು ಭಾರತಕ್ಕೆ 17ನೇ ಶತಮಾನದಲ್ಲಿ ಪರಿಚಯಿಸಿದರು. ಸಾಮಾನ್ಯವಾಗಿ ದೇಶದ ಎಲ್ಲಾ ರಾಜ್ಯಗಳಲ್ಲೂ ಬೆಳೆಯಲಾಗುತ್ತದೆ. ಸದ್ಯ ೮ ಲಕ್ಷ ಹೆಕ್ಟೇರ್ ಕ್ಷೇತ್ರದಲ್ಲಿ ಬೆಳೆಯಲಾಗುತಿದ್ದು, ಮೆಣಸಿನಕಾಯಿ ಉತ್ಪಾದನೆಯಲ್ಲಿ ವಿಶ್ವದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ.

ರಿಯೋ ಡಿ ಜನೈರೊ

{{#if:|

ರಿಯೋ ಡಿ ಜನೈರೊ (ಜನವರಿಯ ನದಿ) ಸಾವೊ ಪಾಲೊ ನಂತರದ ಬ್ರೆಜಿಲ್ ದೇಶ ಮತ್ತು ದಕ್ಷಿಣ ಅಮೇರಿಕ ಖಂಡದ ೨ನೆಯ ಅತ್ಯಂತ ದೊಡ್ಡ ನಗರ. ಇದು ರಿಯೋ ಡಿ ಜನೈರೊ ರಾಜ್ಯದ ರಾಜಧಾನಿ ಕೂಡ ಆಗಿದೆ. ೧೭೬೩ರಿಂದ ೧೯೬೦ರ ವರೆಗೆ ಇದು ಬ್ರೆಜಿಲ್ ದೇಶದ ರಾಜಧಾನಿಯಾಗಿತ್ತು. ಸಾಮಾನ್ಯವಾಗಿ ರಿಯೋ ಎಂದು ಕರೆಯಲ್ಪಡುವ ಈ ನಗರ ಅದ್ಭುತ ನಗರ ಎಂದೇ ಪ್ರಖ್ಯಾತಿ ಪಡೆದಿದೆ.

ವಜ್ರ

ವಜ್ರವು ಇಂಗಾಲದ ಒಂದು ರೂಪ. ಇದು ಪ್ರಕೃತಿಯಲ್ಲಿರುವ ವಸ್ತುಗಳಲ್ಲಿ ಅತ್ಯಂತ ಕಠಿಣವಾದುದು. ಅಲ್ಲದೆ ಇದುವರೆಗೆ ತಯಾರಾಗಿರುವ ವಸ್ತುಗಳಲ್ಲಿ ಮೂರನೆಯ ಅತಿ ಕಠಿಣ ವಸ್ತು. ವಜ್ರವು ತನ್ನ ಕಾಠಿಣ್ಯ ಮತ್ತು ಬೆಳಕನ್ನು ಚದುರಿಸುವ ಗುಣಗಳಿಂದಾಗಿ ಆಭರಣಗಳಲ್ಲಿ ಮತ್ತು ಕೈಗಾರಿಕೆಗಳಲ್ಲಿ ಉಪಯೋಗಿಸಲ್ಪಡುತ್ತದೆ "It is a beautiful thing in the world".

ವಜ್ರವು ತನ್ನ ಕೆಲವು ಅತಿ ವಿಶಿಷ್ಟ ಭೌತಿಕ ಗುಣಗಳಿಗೆ ಹೆಸರಾಗಿದೆ. ಅತಿ ಕಠಿಣವಾಗಿರುವುದರಿಂದ ವಜ್ರವನ್ನು ಘರ್ಷಕಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಒಂದು ವಜ್ರವನ್ನು ಗೀರಲು ಇನ್ನೊಂದು ವಜ್ರವೇ ಬೇಕು ಅಥವಾ ಬೋರಜೋನ್, ಅತಿ ಗಡಸು ಫುಲ್ಲರೈಟ್ ಅಥವ ವಜ್ರದ ನ್ಯಾನೋಕೊಳವೆಗಳು ಬೇಕು. ವಜ್ರವು ತನ್ನ ಹೊಳಪನ್ನು ಮತ್ತು ಮೆರುಗನ್ನು ಶಾಶ್ವತವಾಗಿ ಉಳಿಸಿಕೊಳ್ಳುವುದು.

ಪ್ರತಿವರ್ಷ ಸುಮಾರು ೧೩ ಕೋಟಿ ಕ್ಯಾರಟ್ (೨೬೦೦೦ ಕಿ.ಗ್ರಾಂ) ಗಳಷ್ಟು ವಜ್ರವನ್ನು ಗಣಿಗಳಿಂದ ಪಡೆಯಲಾಗುವುದು. ಇದರ ಒಟ್ಟು ಮೌಲ್ಯ ಸುಮಾರು ೯ ಬಿಲಿಯನ್ ಡಾಲರುಗಳಷ್ಟು. ಇದಲ್ಲದೆ ಸಾಲಿಯಾನ ಸುಮಾರು ೧೦೦,೦೦೦ ಕಿಲೋಗ್ರಾಂ ಗಳಷ್ಟು ಕೃತಕ ವಜ್ರವನ್ನು ಉತ್ಪಾದಿಸಲಾಗುತ್ತದೆ. ಈ ಕೃತಕ ವಜ್ರವು ಹೆಚ್ಚಾಗಿ ಕೈಗಾರಿಕೆಗಳಲ್ಲಿ ಬಳಸಲ್ಪಡುತ್ತದೆ.

ವಜ್ರದ ಆಂಗ್ಲ ಹೆಸರಾದ ಡೈಮಂಡ್ ಪದವು ಅಜೇಯ ಎಂಬ ಅರ್ಥವುಳ್ಳ ಅದಮಾಸ್ ಎಂಬ ಗ್ರೀಕ್ ಶಬ್ದದಿಂದ ವ್ಯುತ್ಪತ್ತಿಯಾಗಿದೆ. ಅತಿ ಪ್ರಾಚೀನ ಕಾಲದಿಂದಲೂ ವಜ್ರಗಳನ್ನು ಧಾರ್ಮಿಕ ಸಂಕೇತಗಳಾಗಿ ಮತ್ತು ಕೊರೆಯುವ ಸಾಧನಗಳಾಗಿ ಮಾನವನು ಬಳಸುತ್ತಾ ಬಂದಿರುವನು. ಅಮೂಲ್ಯರತ್ನವನ್ನಾಗಿ ವಜ್ರವನ್ನು ಜೋಪಾನ ಮಾಡಿಕೊಂಡೂ ಬಂದಿರುವನು. ೧೯ನೆಯ ಶತಮಾನದಿಂದೀಚೆಗೆ ವಜ್ರದ ಜನಪ್ರಿಯತೆ ಹೆಚ್ಚುತ್ತಲೇ ಬಂದಿದೆ. ಹೆಚ್ಚಿನ ಪ್ರಮಾಣದಲ್ಲಿ ವಜ್ರಗಳ ಲಭ್ಯತೆ, ಕತ್ತರಿಸಲು ಮತ್ತು ಹೊಳಪು ನೀಡಲು ಉತ್ತಮ ನವೀನ ತಂತ್ರಜ್ಞಾನ ಮತ್ತು ಒಟ್ಟಾರೆ ವಿಶ್ವದ ಆರ್ಥಿಕ ಸ್ಥಿತಿಯ ಮೇಲ್ಮುಖ ಪ್ರಗತಿ ಇವುಗಳು ವಜ್ರವನ್ನು ಹೆಚ್ಚುಹೆಚ್ಚು ಜನರೆಡೆಗೆ ತಲುಪಿಸುತ್ತಿವೆ.

ವಜ್ರದ ಗುಣಮಟ್ಟವನ್ನು ಅದರ ತೂಕ (ಕ್ಯಾರಟ್), ಬಣ್ಣ, ಕತ್ತರಿಸಲ್ಪಟ್ಟ ರೀತಿ ಮತ್ತು ಸ್ಪಷ್ಟತೆಗಳಿಂದ ಅಳೆಯಲಾಗುತ್ತದೆ.

ಜಗತ್ತಿನ ಒಟ್ಟು ನೈಸರ್ಗಿಕ ವಜ್ರಗಳಲ್ಲಿ ೪೯% ಪಾಲು ಮಧ್ಯ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ದೊರೆಯುತ್ತದೆ. ಉಳಿದಂತೆ ಕೆನಡ, ಭಾರತ, ರಷ್ಯಾ, ಬ್ರೆಜಿಲ್ ಮತ್ತು ಆಸ್ಟ್ರೇಲಿಯಾಗಳಲ್ಲಿ ಸಹ ಗಣನೀಯ ಪ್ರಮಾಣದ ವಜ್ರದ ನಿಕ್ಷೇಪವಿರುವುದು ಕಂಡುಬಂದಿದೆ. ವಜ್ರವನ್ನು ಕಿಂಬರ್ಲೈಟ್ ಮತ್ತು ಲಾಂಪೊರೈಟ್ ಗಳಿಂದ ಗಣಿಗಾರಿಕೆಯ ಮೂಲಕ ತೆಗೆಯಲಾಗುವುದು. ಈ ಎರಡೂ ಅದಿರುಗಳು ಭೂಗರ್ಭದಿಂದ ಜ್ವಾಲಾಮುಖಿಗಳ ಚಟುವಟಿಕೆಯಿಂದಾಗಿ ಮೇಲ್ಭಾಗಕ್ಕೆ ತಳ್ಳಲ್ಪಟ್ಟವಾಗಿವೆ. ಸಾಮಾನ್ಯವಾಗಿ ವಜ್ರದ ಹರಳುಗಳು ಬಹಳ ಆಳದಲ್ಲಿ ಅತಿಯಾದ ಉಷ್ಣತೆ ಮತ್ತು ಒತ್ತಡಗಳಿರುವ ಸನ್ನಿವೇಶದಲ್ಲಿ ಸೃಷ್ಟಿಯಾಗುತ್ತವೆ.

ವೆನೆಜುವೆಲಾ

ವೆನೆಜುವೆಲಾ (ಮೂಲ ಉಚ್ಚರಣೆ: ವೆನೆಜ್ವೆಲಾ) ದಕ್ಷಿಣ ಅಮೇರಿಕ ಖಂಡದ ಉತ್ತರ ಭಾಗದಲ್ಲಿರುವ ಕೆರಿಬ್ಬಿಯನ್ ಸಮುದ್ರದ ಕರಾವಳಿ ದೇಶ. ಇದರ ದಕ್ಷಿಣಕ್ಕೆ ಬ್ರೆಜಿಲ್, ಪೂರ್ವಕ್ಕೆ ಗಯಾನ, ಮತ್ತು ಪಶ್ಚಿಮಕ್ಕೆ ಕೊಲಂಬಿಯಾ ದೇಶಗಳಿವೆ.

ಪೂರ್ವದಲ್ಲಿ ಸ್ಪೇನ್ ವಸಾಹತಾದ ವೆನೆಜುವೆಲಾ ಒಂದು ಸಂಯುಕ್ತ ಗಣರಾಜ್ಯ. ಗಯಾನ ಮತ್ತು ಕೊಲಂಬಿಯಾಗಳೊಂದಿಗೆ ಗಡಿವಿವಾದವನ್ನು ಹೊಂದಿರುವ ಇದು ಪೆಟ್ರೋಲಿಯಂ ಉದ್ಯಮ, ಜೀವ ವೈವಿಧ್ಯ, ಮತ್ತು ನೈಸರ್ಗಿಕ ಸೌಂದರ್ಯಗಳಿಗೆ ಹೆಸರಾಗಿದೆ.

ಇತರ ಭಾಷೆಗಳು

This page is based on a Wikipedia article written by authors (here).
Text is available under the CC BY-SA 3.0 license; additional terms may apply.
Images, videos and audio are available under their respective licenses.