ಪಶ್ಚಿಮ ಯುರೋಪ್

ಪೂರ್ವ ಯುರೋಪ್ ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆ ಪ್ರಕಾರ ಯುರೋಪ್ ಖಂಡದ ಪಶ್ಚಿಮ ಭಾಗದ ೯ ದೇಶಗಳನ್ನು ಒಳಗೊಂಡಿದೆ.

ಪ್ರಪಂಚದ ಪ್ರದೇಶಗಳು   

LocationAfrica

ಆಫ್ರಿಕಾ:

ಮಧ್ಯ – ಪೂರ್ವ – ಉತ್ತರ – ದಕ್ಷಿಣ – ಪಶ್ಚಿಮ

LocationAmericas

ಅಮೇರಿಕಗಳು:

ಕೆರಿಬ್ಬಿಯನ್ – ಮಧ್ಯ – ಲ್ಯಾಟಿನ್ – ಉತ್ತರ – ದಕ್ಷಿಣ

LocationEurope

ಯುರೋಪ್:

ಪೂರ್ವ – ಉತ್ತರ – ದಕ್ಷಿಣ – ಪಶ್ಚಿಮ

LocationAsia

ಏಷ್ಯಾ:

ಮಧ್ಯ – ಪೂರ್ವ – ದಕ್ಷಿಣ – ಆಗ್ನೇಯ – ಪಶ್ಚಿಮ

LocationOceania

ಓಷ್ಯಾನಿಯ:

ಆಸ್ಟ್ರೇಲೇಷ್ಯಾ – ಮೆಲನೇಷ್ಯಾ – ಮೈಕ್ರೋನೇಷ್ಯಾ – ಪಾಲಿನೇಷ್ಯಾ

LocationPolarRegions

ಧ್ರುವಗಳು:

ಆರ್ಕ್ಟಿಕ – ಅಂಟಾರ್ಕ್ಟಿಕ

LocationOceans
ಮಹಾಸಾಗರಗಳು: ಆರ್ಕ್ಟಿಕ್ – ಅಟ್ಲಾಂಟಿಕ – ಹಿಂದೂ – ಪೆಸಿಫಿಕ್ – ದಕ್ಷಿಣ

Location-Europe-UNsubregions, Kosovo as part of Serbia
ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆ ಪ್ರಕಾರ ಯುರೋಪ್‍ನ ವಿಂಗಡನೆ [೧]:
  ಪಶ್ಚಿಮ ಯುರೋಪ್
ಎರಡನೇ ಮಹಾಯುದ್ಧ

ಎರಡನೆಯ ಮಹಾಯುದ್ಧ ೧೯೩೯ರಿಂದ ೧೯೪೫ರವರೆಗೆ ನಡೆದ, ಜಗತ್ತಿನ ಅನೇಕ ದೇಶಗಳನ್ನೊಳಗೊಂಡ ಯುದ್ಧ. ಪ್ರಧಾನವಾಗಿ ಯೂರೋಪ್ ಮತ್ತು ಏಷಿಯಾ ಖಂಡದಲ್ಲಿ ನಡೆಯಲ್ಪಟ್ಟ ಈ ಯುದ್ಧದಲ್ಲಿ ಮಿತ್ರ ರಾಷ್ಟ್ರ ( ಫ್ರಾನ್ಸ್, ರಶಿಯಾ, ಇಂಗ್ಲೆಂಡ್ ಮತ್ತು ಅಮೆರಿಕಾ) ಮತ್ತು ಅಕ್ಷ ರಾಷ್ಟ್ರ (ಜರ್ಮನಿ, ಇಟಲಿ ಮತ್ತು ಜಪಾನ್) ಎಂಬ ಎರಡು ಬಣಗಳಿದ್ದವು. ಒಟ್ಟಿನಲ್ಲಿ ೭೦ ರಾಷ್ಟ್ರಗಳ ಸೈನ್ಯಗಳು ಭಾಗವಹಿಸಿದ ಈ ಯುದ್ಧದಲ್ಲಿ ಆರು ಕೋಟಿಗೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಮನುಷ್ಯನ ಇತಿಹಾಸದಲ್ಲಿಯೇ ಇದು ಅತಿ ಹೆಚ್ಚು. ಕೊನೆಯಲ್ಲಿ ಮಿತ್ರ ರಾಷ್ಟ್ರಗಳ ಮೇಲುಗೈಯಾಯಿತು.

ಎಲ್ಲ ಅಂತಾರಾಷ್ಟ್ರೀಯ ವ್ಯಾಜ್ಯಗಳನ್ನೂ ಶಾಂತಿಯುತ ಮಾರ್ಗದಿಂದಲೇ ಪರಿಹರಿಸಿಕೊಳ್ಳಬೇಕೆಂದು ಒಂದನೆಯ ಮಹಾಯುದ್ಧಾನಂತರದಲ್ಲಿ ಆಗಿದ್ದ ವರ್ಸೇಲ್ಸ್‌ ಒಪ್ಪಂದದ ಆಶಯವನ್ನು ಉಲ್ಲಂಘಿಸಿ ಬಲಪ್ರಯೋಗದಿಂದ ರಾಜ್ಯ ವಿಸ್ತರಣೆಯ ಕಾರ್ಯದಲ್ಲಿ ತೊಡಗಿದ್ದ ಜರ್ಮನಿ, ಇಟಲಿ, ಜಪಾನುಗಳನ್ನೆದುರಿಸಿ ಬ್ರಿಟನ್, ಫ್ರಾನ್ಸ್‌, ಸೋವಿಯತ್ ಒಕ್ಕೂಟ ಅಮೆರಿಕ ಸಂಯುಕ್ತ ಸಂಸ್ಥಾನಗಳೇ ಮೊದಲಾದ ರಾಷ್ಟ್ರಗಳು ನಡೆಸಿದ ಯುದ್ಧ. ಸು. 6 ವರ್ಷ ಕಾಲ ನಡೆದ ಈ ಯುದ್ಧ ವಿಶ್ವವ್ಯಾಪಿಯಾಗಿ ಪರಿಣಮಿಸಿ ಅಗಾಧ ಸಾವು ನೋವು ಕಷ್ಟ ನಷ್ಟಗಳಲ್ಲಿ ಪರ್ಯಾವಸಾನವಾಯಿತಲ್ಲದೆ ವಿಶ್ವದ ಆರ್ಥಿಕ ರಾಜಕೀಯ ಸಾಮಾಜಿಕ ವೈಜ್ಞಾನಿಕ ಕ್ಷೇತ್ರಗಳಲ್ಲಿ ಅಗಾಧ ಪರಿವರ್ತನೆಗಳಿಗೂ ಕಾರಣವಾಯಿತೆನ್ನಬಹುದು.

ಕಾಡು ಕೋಣ

ಕಾಡುಕೋಣಗಳು ದೊಡ್ಡ, ಸಮನಾಂತರ ಕಾಲ್ಬೆರಳುಗಳ ಗೊರಸುಳ್ಳ ಪ್ರಾಣಿ.ಇದು ಮಧ್ಯ ಏಷ್ಯಾ ಮೂಲಕ ಪಶ್ಚಿಮ ಯುರೋಪ್, ರಿಂದ ಹುಲ್ಲುಗಾವಲು ಪರಿಸರಗಳಲ್ಲಿ ಮತ್ತು ಉತ್ತರ ಅಮೆರಿಕಾದಲ್ಲಿ ಕಾಣಲ್ಪಡುತ್ತವೆ.

ಅಮೆರಿಕನ್ ಕಾಡೆಮ್ಮೆ ಮತ್ತು ಯುರೋಪಿಯನ್ ಕಾಡೆಮ್ಮೆ (ಕಾಡೆಮ್ಮೆ ಯಾ ಕಾಡುಕೋಣ) ಉತ್ತರ ಅಮೆರಿಕ ಮತ್ತು ಯುರೋಪ್ ಅತಿದೊಡ್ಡ ಭೂಮಂಡಲದ ಪ್ರಾಣಿಗಳು. ಕಾಡೆಮ್ಮೆ ಉತ್ತಮ ಈಜುಗಾರರು ಮತ್ತು ವ್ಯಾಪಕ ಅರ್ಧ ಮೈಲು (800 ಮೀಟರ್) ಮೇಲೆ ನದಿಗಳು ದಾಟಬಹುದು.ಇವುಗಳು ಅಲೆಮಾರಿ ಮತ್ತು ಹಿಂಡುಗಳಲ್ಲಿ ಸಂಚರಿಸುತ್ತವೆ.ಬೇಸಿಗೆಯ ಕೊನೆಯಲ್ಲಿ, ಸಂತಾನೋತ್ಪತ್ತಿ ನಡೆಸುತ್ತದೆ.ಎರಡೂ ಪ್ರಾಣಿಗಳು 19 ಮತ್ತು 20 ನೇ ಶತಮಾನಗಳಲ್ಲಿ ಹತ್ತಿರ ಸಂತತಿ ಅಳಿಯುವವರೆಗೂ ಬೇಟೆಯಾಡಿ, ಆದರೆ ಮರಳಿತು ರಿಂದ ಮಕ್ಕಳಿದ್ದಾರೆ. ಅಮೆರಿಕದ ಬಯಲುಗಳಲ್ಲಿ ಕಾಡೆಮ್ಮೆ ಇನ್ನು ಮುಂದೆ ಅಪಾಯಕ್ಕೆ ಪಟ್ಟಿ, ಆದರೆ ಮರದ ಕಾಡೆಮ್ಮೆ ಕೆನಡಾದಲ್ಲಿ ಅಳಿವಿನಂಚಿನಲ್ಲಿರುವ ಪ್ರಭೇದಗಳ ಪಟ್ಟಿಯಲ್ಲಿ ಇದೆ. ಮೇಲ್ನೋಟಕ್ಕೆ ಹೋಲುವ, ದೈಹಿಕ ಮತ್ತು ವರ್ತನೆಯ ವ್ಯತ್ಯಾಸಗಳು ಅಮೆರಿಕನ್ ಮತ್ತು ಯುರೋಪಿಯನ್ ಕಾಡೆಮ್ಮೆ ನಡುವೆ ಇದ್ದರೂ. ಯುರೋಪಿಯನ್ ಕಾಡೆಮ್ಮೆ ಅಮೆರಿಕನ್ ಕಾಡೆಮ್ಮೆ ನಾಲ್ಕು ಸೊಂಟದ ಕಶೇರುಖಂಡಗಳ ಹೊಂದಿದೆ. ಯುರೋಪಿಯನ್ ಐದು ಹೊಂದಿದೆ.

ಅಮೆರಿಕನ್ ಕಾಡೆಮ್ಮೆ ನದಿ ಕಣಿವೆಗಳಲ್ಲಿ, ಮತ್ತು ಹುಲ್ಲುಗಾವಲು ಮತ್ತು ಬಯಲು ಪ್ರದೇಶಗಳಲ್ಲಿ ವಾಸಿಸುತ್ತದೆ. ಯೆಲ್ಲೋಸ್ಟೋನ್ ಪಾರ್ಕ್ ಕಾಡೆಮ್ಮೆ ಹಿಂಡಿನ ಕಾಡೆಮ್ಮೆ ಆಗಾಗ್ಗೆ ಹೆನ್ರಿ ಪರ್ವತ ಶ್ರೇಣಿ, ಉಟಾಹ್, ಹಾಗೆಯೇ ಪರ್ವತ ಕಣಿವೆಗಳಲ್ಲಿ ಸುತ್ತ ಬಯಲುಗಳಲ್ಲಿ ಕಂಡುಬರುತ್ತದೆ.

.

ಕೈಗಾರಿಕಾ ಕ್ರಾಂತಿ

ಕೈಗಾರಿಕಾ ಕ್ರಾಂತಿಯು ೧೮ ಮತ್ತು ೧೯ನೇ ಶತಮಾನದ ಅವಧಿಯಲ್ಲಿ ಸಂಭವಿಸಿದೆ. ಆ ಅವಧಿಯಲ್ಲಿ ಕೃಷಿ, ಉತ್ಪಾದನೆ,ಗಣಿಗಾರಿಕೆ ಮತ್ತು ಸಾರಿಗೆಯಲ್ಲಿ ಪ್ರಮುಖ ಬದಲಾವಣೆಗಳಿಂದ ಸಾಮಾಜಿಕ ಆರ್ಥಿಕ ಮತ್ತು ಸಾಂಸ್ಕೃತಿಕ ಸ್ಥಿತಿಗತಿಗಳ ಮೇಲೆ ಗಾಢಪರಿಣಾಮ ಬೀರಿತು. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಪ್ರಾರಂಭವಾದ ಕೈಗಾರಿಕಾ ಕ್ರಾಂತಿ ತರುವಾಯ ಯುರೋಪ್‌ನಾದ್ಯಂತ, ಉತ್ತರ ಅಮೆರಿಕ ಮತ್ತು ಅಂತಿಮವಾಗಿ ವಿಶ್ವದಲ್ಲಿ ಹರಡಿತು. ಕೈಗಾರಿಕಾ ಕ್ರಾಂತಿಯ ಪ್ರಾರಂಭವು ಮಾನವ ಇತಿಹಾಸದಲ್ಲಿ ಪ್ರಮುಖ ತಿರುವೆಂದು ಗುರುತಿಸಲಾಗಿದೆ; ಬಹುತೇಕ ಜನಜೀವನದ ಪ್ರತಿಯೊಂದು ಅಂಶದ ಮೇಲೆ ಅಂತಿಮವಾಗಿ ಕೆಲವು ರೀತಿಯಲ್ಲಿ ಪ್ರಭಾವ ಬೀರಿತು.

೧೮ನೇ ಶತಮಾನದ ಉತ್ತರಾರ್ಧದಲ್ಲಿ ಪ್ರಾರಂಭವಾದ ಕೈಗಾರಿಕಾ ಕ್ರಾಂತಿಯಿಂದ ಗ್ರೇಟ್ ಬ್ರಿಟನ್‌ನ ಕೆಲವು ಭಾಗಗಳಲ್ಲಿ ಮುಂಚಿನ ದೈಹಿಕ ದುಡಿಮೆ ಮತ್ತು ಭಾರಎಳೆಯುವ ಪ್ರಾಣಿ-ಆಧಾರಿತ ಆರ್ಥಿಕತೆಯಿಂದ ಯಂತ್ರ-ಆಧಾರಿತ ಉತ್ಪಾದನೆಯತ್ತ ಪರಿವರ್ತನೆ ಆರಂಭವಾಯಿತು. ವಸ್ತ್ರೋದ್ಯಮ ಕೈಗಾರಿಕೆಗಳ ಯಾಂತ್ರೀಕರಣ,ಕಬ್ಬಿಣ ತಯಾರಿಸುವ ತಂತ್ರಗಳ ಅಭಿವೃದ್ಧಿ ಮತ್ತು ಸಂಸ್ಕರಿತ ಕಲ್ಲಿದ್ದಲಿನ ಹೆಚ್ಚೆಚ್ಚು ಬಳಕೆಯಿಂದ ಕೈಗಾರಿಕಾ ಕ್ರಾಂತಿ ಆರಂಭವಾಯಿತು. ಕಾಲುವೆಗಳು, ಸುಧಾರಿತ ರಸ್ತೆಗಳು ಮತ್ತು ರೈಲ್ವೆಗಳನ್ನು ಚಾಲ್ತಿಗೆ ತಂದಿದ್ದರಿಂದ ಮಾರಾಟ ವಿಸ್ತರಣೆ ಸಾಧ್ಯವಾಯಿತು. ಕಲ್ಲಿದ್ದಲು ಮುಖ್ಯ ಇಂಧನವಾದ ಉಗಿಶಕ್ತಿಪ್ರಾರಂಭ, ಜಲಚಕ್ರಗಳು ಮತ್ತು ಶಕ್ತಿಆಧಾರಿತ ಯಂತ್ರ(ಮುಖ್ಯವಾಗಿ ವಸ್ತ್ರೋದ್ಯಮ ತಯಾರಿಕೆಯಲ್ಲಿ)ಗಳ ವ್ಯಾಪಕ ಬಳಕೆಯಿಂದ ಉತ್ಪಾದನೆ ಸಾಮರ್ಥ್ಯದಲ್ಲಿ ಗಮನಾರ್ಹ ಹೆಚ್ಚಳಕ್ಕೆ ಪುಷ್ಠಿ ನೀಡಿತು. ಸರ್ವ-ಲೋಹದ ಯಂತ್ರೋಪಕರಣಗಳನ್ನು ೧೯ನೇ ಶತಮಾನದ ಮೊದಲ ಎರಡು ದಶಕಗಳಲ್ಲಿ ಅಭಿವೃದ್ಧಿಪಡಿಸಿದ್ದರಿಂದ ಇತರೆ ಕೈಗಾರಿಕೆಗಳಲ್ಲಿ ಉತ್ಪಾದನೆಗೆ ಹೆಚ್ಚು ಉತ್ಪಾದನೆ ಯಂತ್ರಗಳ ತಯಾರಿಕೆಗೆ ಅವಕಾಶ ಒದಗಿಸಿತು. ಪಶ್ಚಿಮ ಯುರೋಪ್ ಮತ್ತು ಉತ್ತರ ಅಮೆರಿಕದಾದ್ಯಂತ ೧೯ನೇ ಶತಮಾನದಲ್ಲಿ ಇದರ ಪ್ರಭಾವಗಳು ವಿಸ್ತರಿಸಿದವು. ತರುವಾಯ ವಿಶ್ವದ ಬಹುಭಾಗದಲ್ಲಿ ಪ್ರಭಾವ ಬೀರಿದ ಈ ಪ್ರಕ್ರಿಯೆಯು ಕೈಗಾರೀಕರಣವೆಂಬ ಹೆಸರಿನೊಂದಿಗೆ ಮುಂದುವರಿಯಿತು. ಕೈಗಾರೀಕರಣದಿಂದ ಸಮಾಜದ ಮೇಲೆ ಉಂಟಾದ ಬದಲಾವಣೆಯ ಪರಿಣಾಮ ಅಗಾಧವಾಗಿತ್ತು.ಪ್ರಥಮ ಕೈಗಾರಿಕೆ ಕ್ರಾಂತಿಯು ೧೮ನೇ ಶತಮಾನದಲ್ಲಿ ಪ್ರಾರಂಭವಾಗಿ ೧೮೫೦ರ ಆಸುಪಾಸಿನಲ್ಲಿ ಎರಡನೇ ಹಂತದ ಕೈಗಾರಿಕಾ ಕ್ರಾಂತಿಯ ಜತೆ ವಿಲೀನಗೊಂಡಿತು. ಆ ಸಂದರ್ಭದಲ್ಲಿ ಉಗಿ-ಶಕ್ತಿ ಚಾಲಿತ ಹಡಗುಗಳು, ರೈಲ್ವೆಗಳ ಅಭಿವೃದ್ಧಿಯಿಂದ ಮತ್ತು ನಂತರ ೧೯ನೇ ಶತಮಾನದಲ್ಲಿ ಆಂತರಿಕ ದಹನ ಯಂತ್ರ ಮತ್ತು ವಿದ್ಯುಚ್ಛಕ್ತಿ ಉತ್ಪಾದನೆಯೊಂದಿಗೆ ತಾಂತ್ರಿಕ ಮತ್ತು ಆರ್ಥಿಕ ಪ್ರಗತಿ ವೇಗದ ಗತಿ ಪಡೆದುಕೊಂಡಿತು.

ಕೈಗಾರಿಕಾ ಕ್ರಾಂತಿ ಆವರಿಸಿದ ಕಾಲಾವಧಿಯನ್ನು ವಿವಿಧ ಇತಿಹಾಸಕಾರರು ಭಿನ್ನವಾಗಿ ಗುರುತಿಸಿದ್ದಾರೆ. ಬ್ರಿಟನ್‌ನಲ್ಲಿ ೧೭೮೦ರ ದಶಕದಲ್ಲಿ ಇದು "ಹೊರಹೊಮ್ಮಿತು" ಮತ್ತು ೧೮೩೦ರ ದಶಕ ಅಥವಾ ೧೮೪೦ರ ದಶಕದವರೆಗೆ ಅದರ ಅನುಭವ ಸಂಪೂರ್ಣ ತಟ್ಟಲಿಲ್ಲ ಎಂದು ಇತಿಹಾಸಕಾರ ಎರಿಕ್ ಹಾಬ್ಸ್‌ಬಾಮ್ ಹೇಳಿದ್ದಾರೆ. ಅದು ೧೭೬೦ ಮತ್ತು ೧೮೩೦ರ ಆಸುಪಾಸಿನಲ್ಲಿ ಸಂಭವಿಸಿತು ಎಂದು T.S.ಆಶ್‌ಟನ್ ಹೇಳಿದ್ದಾರೆ.

ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಯ ಪ್ರಕ್ರಿಯೆ ಕ್ರಮೇಣ ಸಂಭವಿಸಿತು ಮತ್ತು ಕ್ರಾಂತಿ ಎಂಬ ಪದವು ಈ ವಿದ್ಯಮಾನದ ನೈಜ ವಿವರಣೆಯಲ್ಲ ಎಂದು ೨೦ನೇ ಶತಮಾನದ ಇತಿಹಾಸಕಾರರಾದ ಜಾನ್ ಕ್ಲಾಪ್‌ಹ್ಯಾಮ್ ಮತ್ತು ನಿಕೋಲಾಸ್ ಕ್ರಾಫ್ಟ್ಸ್ ವಾದಿಸಿದ್ದಾರೆ. ಇತಿಹಾಸಕಾರರ ನಡುವೆ ಇದು ಇನ್ನೂ ಚರ್ಚಾಸ್ಪದ ವಸ್ತುವಾಗಿ ಉಳಿದಿದೆ. ಕೈಗಾರಿಕಾ ಕ್ರಾಂತಿ ಮತ್ತು ಆಧುನಿಕ ಬಂಡವಾಳಶಾಹಿ ಅರ್ಥವ್ಯವಸ್ಥೆ ಹೊರಹೊಮ್ಮುವುದಕ್ಕೆ ಮುಂಚಿತವಾಗಿ GDP ತಲಾದಾಯವು ಸ್ಥಿರವಾಗಿತ್ತು. ಕೈಗಾರಿಕಾ ಕ್ರಾಂತಿಯಿಂದ ಬಂಡವಾಳಶಾಹಿ ಅರ್ಥಿಕತೆಗಳಲ್ಲಿ ತಲಾದಾಯದ ಆರ್ಥಿಕ ಪ್ರಗತಿ ಶಕೆ ಪ್ರಾರಂಭವಾಯಿತು. ಕೈಗಾರಿಕಾ ಕ್ರಾಂತಿಯು ಇತಿಹಾಸದ ಅತೀ ಮುಖ್ಯ ವಿದ್ಯಮಾನಗಳಲ್ಲಿ ಒಂದೆಂದು ಇತಿಹಾಸಕಾರರು ಒಪ್ಪಿದ್ದಾರೆ.

ಕ್ಯಾಲೆಂಡುಲ ಅಫಿಷಿನಾಲಿಸ್

ಕ್ಯಾಲೆಂಡುಲ ಕುಲದಲ್ಲಿ ಕ್ಯಾಲೆಂಡುಲ ಅಫಿಷಿನಾಲಿಸ್ ಒಂದು ಅತ್ಯಂತ ಸಾಮಾನ್ಯ ಜಾತಿಯಾದು. ಇದು ಬೆಲೆಬಾಳುವ ಗಿಡಮೂಲಿಕೆ. ಕ್ಯಾಲೆಂಡುಲ ಹೂವಿನಲ್ಲಿ ೧೫-೨೦ ವಿವಿಧ ಜಾತಿಗಳಿವೆ. ಪಶ್ಚಿಮ ಯುರೋಪ್, ಮೆಡಿಟರೇನಿಯನ್ ಪ್ರದೇಶ ಮತ್ತು ದಕ್ಷಿಣ ಏಷ್ಯಾದ ಕೆಲವು ಭಾಗಗಳಲ್ಲಿ "ಮಡಕೆ ಮಾರಿಗೋಲ್ಡ್" ಅಥವಾ "ಮಾರಿಗೋಲ್ಡ್" ಎಂದು ಕರೆಯುತ್ತಾರೆ. ಇದು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ಕೊಡುತ್ತದೆ.ಇದರ ಹೆಸರು ಸೂಚಿಸುವಂತೆ ತಿಂಗಳಿಗೊಮ್ಮೆ ಅಥವಾ ಪ್ರತಿ ಅಮಾವಾಸ್ಯೆಗೆ ಅರಳುತ್ತದೆ. ಕ್ಯಾಲೆಂಡುಲ ಹೂವನ್ನು ನಡುಹಗಲು ಕಿತ್ತುಕೋಳುವುದರಿದ್ದ ಹೃದಯವನ್ನು ಬಲಪಡಿಸಲು ಮತ್ತು ಸಾಂತ್ವನ ಮಾಡುತ್ತದೆ ಎಂದು ಹೇಳಲಾಗಿದೆ.

ಗಸಗಸೆ

ಗಸಗಸೆಪ್ರಾಚೀನ ಕಾಲದಿಂದಲೂ ಬೆಳೆಸಲ್ಪಡುತ್ತಿರುವ ಒಂದು ಸಸ್ಯ. ಕಳೆಯ ಪಟ್ಟದಿಂದ ಬೆಳೆಯ ಸ್ಥಾನ ಪಡೆಯುವಲ್ಲಿ ಸಫಲವಾಗಿದೆ. ಬಹಳ ಹಿಂದಿನ ಕಾಲದಿಂದ ಮೆಡಿಟರೇನಿಯನ್ ಪ್ರದೇಶಗಳು, ಮಧ್ಯ ಪ್ರಾಚ್ಯ, ಭಾರತ, ರಷ್ಯಾ ದೇಶಗಳಲ್ಲಿ ಇದರ ವ್ಯವಸಾಯ ಇದೆ.

ಗುರು

ಗುರು (ಸಂಸ್ಕೃತ:गुरु,ಅಂದರೆ ಒಂದು ನಿರ್ದಿಷ್ಟ ವಿಭಾಗದಲ್ಲಿ ಹೆಚ್ಚಿನ ಜ್ಞಾನ, ಬುದ್ಧಿವಂತಿಕೆ ಮತ್ತು ನಿಪುಣತೆಯನ್ನು ಹೊಂದಿರುವ, ಮತ್ತು ಇತರರಿಗೆ ನಿರ್ದೇಶನವನ್ನು ನೀಡಲು (ಶಿಕ್ಷಕ) ಈ ಬುದ್ಧಿವಂತಿಕೆಗಳನ್ನು ಬಳಸುವ ವ್ಯಕ್ತಿಯಾಗಿರುತ್ತಾನೆ. ಸಂಸ್ಕೃತದಲ್ಲಿ ಗು ಅಂದರೆ ಅಂಧಕಾರ ಮತ್ತು ರು ಅಂದರೆ ಬೆಳಕು. ಅರಿವಿನ ಅಭಿವೃದ್ಧಿಯ ಒಂದು ಮೂಲತತ್ವವಾಗಿ ಇದು ಕಾಲ್ಪನಿಕತೆಯಿಂದ ನಿಜಸ್ಥಿತಿಯ ನಿರ್ಮಾಣಕ್ಕೆ, ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುತ್ತದೆ. ಇದರ ಮೂಲರೂಪದಲ್ಲಿ ಈ ’ಗುರು’ ಪರಂಪರೆಯ ತತ್ವವು ಭೂಮಿಯಲ್ಲಿಯ ಒಂದು ದೈವಿಕ ಮೂರ್ತರೂಪ(ಸಾಧು) ಎಂದಾಗುತ್ತದೆ. ’ಗುರು’ ಭೂಮಿಯ ಮೇಲಿರುವ ಅತಿಭೌತಿಕ ಹಾಗೂ ಉನ್ನತ ಶಕ್ತಿಯ ಕುರಿತಾದ ಅತ್ಯುನ್ನತ ಜ್ಞಾನವನ್ನು ಹೊಂದಿರುವ ಒಬ್ಬ ವ್ಯಕ್ತಿ ಎಂಬ ಅರ್ಥವನ್ನು ನೀಡುತ್ತದೆ. ತಂದೆ ತಾಯಂದಿರು, ಶಿಕ್ಷಕರು, ಕೆಲವು ಜ್ಞಾನಾರ್ಜನೆಗೆ ಸಹಾಯಕವಾಗುವಂತಹ ವಸ್ತುಗಳು (ಉದಾಹರಣೆಗೆ ಪುಸ್ತಕ)ಮತ್ತು ಪ್ರತಿ ವ್ಯಕ್ತಿಯಲ್ಲಿರುವ ಬೌದ್ಧಿಕ ಶಿಸ್ತು ಈ ಮೂಲತತ್ವವನ್ನು ಪ್ರತಿಬಿಂಬಿಸುವ ಇತರ ಕೊಂಡಿಗಳು ಎಂದು ಹೇಳಬಹುದಾಗಿದೆ. ಧಾರ್ಮಿಕ ಅರ್ಥದಲ್ಲಿ ಈ ಶಬ್ದವನ್ನು ಸಾಮಾನ್ಯವಾಗಿ ಹಿಂದು ಮತ್ತು ಸಿಖ್ಖ್ ಧರ್ಮದಲ್ಲಿ ಹಾಗೂ ಇನ್ನಿತರ ಕೆಲವು ಭಾರತೀಯ ಧರ್ಮಗಳಲ್ಲಿ ಹಾಗೂ ಕೆಲವು ಹೊಸ ಧಾರ್ಮಿಕ ಪಂಥದ ಚಳುವಳಿಗಳಲ್ಲಿ ಈ ಶಬ್ದವನ್ನು ಬಳಸಲಾಗುತ್ತದೆ. ಒಬ್ಬ ಉತ್ತಮ ಗುರುವನ್ನು ಪಡೆದುಕೊಳ್ಳುವುದು ಆತ್ಮಜ್ಞಾನವನ್ನು ಹೊಂದಲು ಒಂದು ಪೂರ್ವ ತಯಾರಿ ಎಂದು ಹೇಳಲಾಗುತ್ತದೆ. ಗುರು ನಾನಕ್, ಸಿಖ್ ಧರ್ಮದ ಸ್ಥಾಪಕರು ಹೇಳಿದರು: "ಸಾವಿರಾರು ಸೂರ್ಯ ಚಂದ್ರ ಹುಟ್ಟಿ ಬಂದರೂ ಕೂಡ ಹೃದಯದ ಒಳಗಿನ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುವುದು ಸಾಧ್ಯವಿಲ್ಲ. ಇದನ್ನು ಕೇವಲ ಗುರುವಿನ ಅನುಗ್ರಹದಿಂದ ಮಾತ್ರ ತೊಡೆದುಹಾಕಲ್ಪಡುತ್ತದೆ."

ಸಂಸ್ಕೃತದಲ್ಲಿ "ಗುರು" ಎಂಬ ಪದವನ್ನು ಹಿಂದುತ್ವದಲ್ಲಿ ದೈವಸ್ವರೂಪಿ ವ್ಯಕ್ತಿತ್ವದ ಬೃಹಸ್ಪತಿಗೆ ಹೇಳಲಾಗುತ್ತದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, ಗುರು ಅಥವಾ ಬೃಹಸ್ಪತಿಯು ಕಲಿಕೆಯ ಮೇಲೆ ಪ್ರಭಾವ ಬೀರುತ್ತಾರೆ ಎಂದು ನಂಬಲಾಗಿದೆ. ಆದಾಗ್ಯೂ, ಹಿಂದಿಯಂತಹ ಹಲವಾರು ಭಾರತೀಯ ಭಾಷೆಗಳಲ್ಲಿ, ಪಾಶ್ಚಾತ್ಯರ Thursday ಬೃಹಸ್ಪತಿವಾರ ಅಥವಾ ಗುರುವಾರ (ವಾರ ಅಂದರೆ ಸಪ್ತಾಹದ ಒಂದು ದಿನ) ಎಂದು ಕರೆಯಲ್ಪಡುತ್ತದೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ, "ಗುರು" ಎಂಬ ಶಬ್ದವು ವ್ಯಾಪಕವಾಗಿ "ಶಿಕ್ಷಕ" ಎಂಬ ಸಾಮಾನ್ಯ ಅರ್ಥದ ಜೊತೆ ಬಳಸಲ್ಪಡುತ್ತದೆ. ಪಾಶ್ಚಾತ್ಯ ಬಳಕೆಯಲ್ಲಿ, ಗುರು ಎಂಬ ಶಬ್ದದ ಅರ್ಥವು ಅನುಯಾಯಿಗಳನ್ನು ಹೊಂದುವ ಸಾಮರ್ಥ್ಯ ಹೊಂದಿರುವ ಯಾವುದೇ ವ್ಯಕ್ತಿಗೂ ಕೂಡಾ ಬಳಸಬಹುದಾಗಿದೆ. ಅವರು ತತ್ವಶಾಸ್ತ್ರದ ಅಥವಾ ಯಾವುದಾದರೂ ಧಾರ್ಮಿಕ ಪಂಥಕ್ಕೆ ಸೇರಬೇಕೆಂದೇನಿಲ್ಲ. ಇನ್ನೂ ಹೆಚ್ಚಾಗಿ ಪಾಶ್ಚಾತ್ಯರು, ಒಬ್ಬ ವ್ಯಕ್ತಿಯು ಪ್ರಾಪಂಚಿಕವಾದ ವಿಷಯಕ್ಕೆ ಸಂಬಂಧಿಸಿದಂತೆ ಉತ್ತಮ ಜ್ಞಾನ,ನೈಪುಣ್ಯತೆಯನ್ನು ಹೊಂದಿದ್ದರೂ ಕೂಡ ’ಗುರು’ ಎಂಬ ಶಬ್ದವನ್ನು ಬಳಸುತ್ತಾರೆ. ಉದಾಹರಣೆಗೆ ’ವ್ಯವಹಾರ’ ಪ್ರಪಂಚಕ್ಕೆ ಕುರಿತಾದ ಉತ್ತಮ ಜ್ಞಾನ ಹೊಂದಿರುವ ವ್ಯಕ್ತಿಯನ್ನು ’ಗುರು’ ಎಂದು ಕರೆಯಲಾಗುತ್ತದೆ.(eg:management Guru)

ಗುಲಾಮಗಿರಿ

ಗುಲಾಮಗಿರಿ ಎಂಬುದು ಒಂದು ವ್ಯವಸ್ಥೆಯಾಗಿದ್ದು, ಇದರಡಿಯಲ್ಲಿ ಜನರನ್ನು ಸ್ವತ್ತಿನಂತೆ ಕಾಣಲಾಗುತ್ತದೆ. ಅಲ್ಲದೇ ಅವರನ್ನು ದುಡಿಮೆಗಾಗಿ ಬಲವಂತಪಡಿಸಲಾಗುತ್ತದೆ. ಗುಲಾಮರನ್ನು ಬಂಧಿಸಿದಾಗಿನಿಂದ, ಕೊಂಡುಕೊಂಡಾಗಿನಿಂದ ಅಥವಾ ಹುಟ್ಟಿನಿಂದಲೆ ಅವರ ಇಚ್ಛೆಗೆ ವಿರುದ್ಧವಾಗಿ ಇಟ್ಟುಕೊಳ್ಳಬಹುದು. ಅಲ್ಲದೇ ಅವರು ದುಡಿಯಲು ನಿರಾಕರಿಸಿದಲ್ಲಿ ಅಥವಾ ಪ್ರತಿಫಲವನ್ನು ಅಪೇಕ್ಷಿಸಿದಲ್ಲಿ ಅವರ ಬದುಕುವ ಸ್ವತಂತ್ರವನ್ನು ಕಿತ್ತುಕೊಳ್ಳಬಹುದಾಗಿತ್ತು. ಗುಲಾಮಗಿರಿ, ಅನೇಕ ಸಂಸ್ಕೃತಿ ಗಳಲ್ಲಿ ಅಸ್ತಿತ್ವದಲ್ಲಿದಂತಹ ಬರಹ ದಾಖಲೆಗಳನ್ನು ಹಿಂದಿನದ್ದೆಂದು ತಿಳಿಸುತ್ತದೆ. ಅಲ್ಲದೇ ಕೆಲವು ಐತಿಹಾಸಿಕ ಸಂದರ್ಭಗಳಲ್ಲಿ ಮಾಲೀಕರು ಗುಲಾಮರನ್ನು ಹತ್ಯೆಮಾಡುವುದು ಕಾನೂನು ಬದ್ಧವಾಗಿತ್ತು.ಇಂದು ಉಳಿದಿರುವ ಗುಲಾಮರ ಸಂಖ್ಯೆ ಹೆಚ್ಚೆಂದರೆ 12 ಮಿಲಿಯನ್ ನಿಂದ 27 ಮಿಲಿಯನ್ ಇರಬಹುದು, ಆದರೂ ಬಹುಶಃ ಇದು ಇತಿಹಾಸದಲ್ಲಿ ಪ್ರಪಂಚದ ಜನಸಂಖ್ಯೆಯ ಅತ್ಯಂತ ಸಣ್ಣ ಭಾಗವಾಗಿದೆ. ಇವರಲ್ಲಿ ಅನೇಕರು ಸಾಲ ಪಡೆದು ಗುಲಾಮರಾಗಿದ್ದರು, ಇವರೆಲ್ಲರೂ ದಕ್ಷಿಣ ಏಷ್ಯಾದಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದರು, ಇವರುಗಳು ಸಾಲದಾತರಿಂದ ಹಣವನ್ನು ಪಡೆದು ಸಾಲದ ಬಂಧನಕ್ಕೊಳಪಟ್ಟಿದ್ದರು, ಕೆಲವೊಂದು ಬಾರಿ ಇವರ ಸೇವಕತನವು ಮುಂದಿನ ಹಲವಾರು ಪೀಳಿಗೆಗಳವರೆಗೂ ನಡೆಯುತ್ತಿತ್ತು. ಮಾನವನ ವಿನಿಮಯ ವು ಮುಖ್ಯವಾಗಿ ಮಹಿಳೆಯನ್ನು ವೇಶ್ಯೆಯಾಗಿಸುವ ಮತ್ತು ಮಕ್ಕಳನ್ನು ವ್ಯಭಿಚಾರಕ್ಕೆ ತಳ್ಳುವ ವ್ಯಾಪಾರವಾಗಿದೆ. ಇದು ತ್ವರಿತ ಗತಿಯಲ್ಲಿ ಬೆಳೆಯುತ್ತಿರುವ ಅಪರಾಧ ಉದ್ಯಮವಾಗಿದೆ. ಅಲ್ಲದೇ ಅಂತಿಮವಾಗಿ ಇದು ಮಾದಕ ವಸ್ತುವಿನ ವ್ಯಾಪಾರವನ್ನು ಮೀರಿ ಬೆಳೆಯುತ್ತಿದೆ ಎಂದು ಊಹಿಸಲಾಗಿದೆ.

ಜರ್ಮನ್ ಭಾಷೆ

ಜರ್ಮನ್ ಭಾಷೆ ([Deutsch] , [ಡಾಯ್ಶ್ ) ಪ್ರಪಂಚದ ಪ್ರಮುಖ ಭಾಷೆಗಳಲ್ಲಿ ಒಂದು. ಇಂಡೊ-ಯುರೋಪಿಯನ್ ಭಾಷಾ ಕುಟುಂಬಕ್ಕೆ ಸೇರಿರುವ ಈ ಭಾಷೆಯು ಆಂಗ್ಲ ಭಾಷೆ ಮತ್ತು ಡಚ್ ಭಾಷೆಗಳಿಗೆ ಅತ್ಯಂತ ಸಮೀಪ ಸಂಬಂಧ ಹೊಂದಿದೆ. ವಿಶ್ವಾದ್ಯಂತ, ಸುಮಾರು 120 ದಶಲಕ್ಷ ಜನರು ಜರ್ಮನ್‌ ಭಾಷೆ ಮಾತನಾಡುವರು, ಅಲ್ಲದೆ 80 ದಶಲಕ್ಷ ಪರಸ್ಥಳೀಯರೂ ಸಹ ಜರ್ಮನ್‌ ಭಾಷೆ ಮಾತನಾಡಬಲ್ಲರು. ವಿಶ್ವದೆಲ್ಲೆಡೆ,ಶಾಲೆಗಳು, ವಿಶ್ವವಿದ್ಯಾನಿಲಯಗಳು ಹಾಗೂ ಗೋಥೆ ಸಂಸ್ಥೆಗಳಲ್ಲಿ ಪ್ರಮಾಣಿತ ಜರ್ಮನ್‌ ಭಾಷೆ ಕಲಿಸಲಾಗುತ್ತಿದೆ.

ನ್ಯಾಟೋ

ನ್ಯಾಟೋ(NATO) ವಿಶ್ವದ 29 ರಾಷ್ಟ್ರಗಳು ಒಟ್ಟುಗೂಡಿ ನಿರ್ಮಿಸಿಕೊಂಡಿರುವ ಅಂತಾರಾಷ್ಟ್ರೀಯ ಸಂಘಟನೆ. ನಾರ್ತ್ ಆಟ್ಲಾಂಟಿಕ್ ಟ್ರೀಟಿ ಆರ್ಗ್ನೈಸೇಷನ್ ಇದರ ವಿಸ್ತೃತ ರೂಪ.

ಸದಸ್ಯ ರಾಷ್ಟ್ರಗಳ ಭದ್ರತೆ ಮತ್ತು ಸುರಕ್ಷತೆ ಹಿನ್ನೆಲೆಯಲ್ಲಿ ೧೯೪೮ರ ಮಾರ್ಚ್ ೧೭ರಂದು ಬ್ರಸೆಲ್ಸ್ ಒಪ್ಪಂದ ಮಾಡಿಕೊಳ್ಳಲಾಯಿತು. ಈ ಒಪ್ಪಂದಕ್ಕೆ ಬೆಲ್ಜಿಯಮ್, ಇಂಗ್ಲೆಂಡ್, ಫ್ರಾನ್ಸ್, ಲಕ್ಸೆಮ್ಬರ್ಗ್, ನೆದರ್ರ್‍ಲ್ಯಾಂಡ್ ದೇಶಗಳು ಸಹಿ ಹಾಕಿದ್ದವು. ರಷ್ಯಾವನ್ನು ಮಿಲಿಟರಿ ಶಕ್ತಿ ಮೂಲಕ ಎದುರಿಸುವುದಕ್ಕೆ ಅಮೇರಿಕದ ಅಗತ್ಯವನ್ನು ಮನಗಂಡ ಈ ರಾಷ್ಟ್ರಗಳು, ಅಮೆರಿಕವನ್ನು ನ್ಯಾಟೋದ ಸದಸ್ಯರಾಷ್ಟ್ರವಾಗಲು ಆಹ್ವಾನಿಸಿದವು. ಈ ಹೊತ್ತಿಗೆ ಪಶ್ಚಿಮ ಯುರೋಪ್ ಒಕ್ಕೂಟದ ರೂಪ ಪಡೆದುಕೊಂಡಿತ್ತು.

ವಾಷಿಂಗ್ಟನ್ನಲ್ಲಿ ೧೯೪೯ರ ಏಪ್ರಿಲ್ ೪ರಂದು ಕೆನಡಾ, ಪೋರ್ಚುಗಲ್, ಇಟಲಿ, ನಾರ್ವೆ, ಡೆನ್ಮಾರ್ಕ್, ಐಸ್ ಲ್ಯಾಂಡ್ ಮತ್ತು ಹಳೆ ಸದಸ್ಯರು ಒಪ್ಪಂದ ಮಾಡಿಕೊಂಡರು. ಈ ಒಪ್ಪಂದದ ನಂತರ ನ್ಯಾಟೋ ಅಸ್ತಿತ್ವಕ್ಕೆ ಬಂತು. ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆ ಈ ಸಂಘದ ಅಧಿಕೃತ ಭಾಷೆಗಳು. ಬ್ರಸೆಲ್ಸ್ ನಲ್ಲಿ ಇದರ ಪ್ರಧಾನ ಕಚೇರಿ ಇದೆ.

ಪೂರ್ವ ಯುರೋಪ್

ಪೂರ್ವ ಯುರೋಪ್ ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆ ಪ್ರಕಾರ ಯುರೋಪ್ ಖಂಡದ ಪೂರ್ವ ಭಾಗದ ೧೦ ದೇಶಗಳನ್ನು ಒಳಗೊಂಡಿದೆ. ಇವು

ಬೆಲಾರುಸ್

ಬಲ್ಗೇರಿಯ

ಚೆಕ್ ಗಣರಾಜ್ಯ

ಹಂಗೆರಿ

ಮಾಲ್ಡೋವ

ಪೋಲೆಂಡ್

ರೊಮೇನಿಯ

ರಷ್ಯಾ

ಸ್ಲೊವಾಕಿಯ

ಯುಕ್ರೇನ್ಪೂರ್ವ ಯುರೋಪ್ ಯುರೋಪ್ ಖಂಡದ ಪೂರ್ವಭಾಗದಲ್ಲಿನ ದೇಶಗಳು. ಇದು ಯಾವುದೇ ನಿಖರ ಪ್ರದೇಶವನ್ನು ಸೂಚಿಸುವುದಿಲ್ಲ ಭಾಗಶಃ ಏಕೆಂದರೆ ರಾಜಕೀಯ ಭೌಗೋಳಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಆರ್ಥಿಕ ಅರ್ಥವನ್ನು ಒಂದು ಪದದಲ್ಲಿ ಹೇಳಾಲಾಗುವುದಿಲ್ಲ. ಅದು ಒಂದು ವಿಶಾಲ ವ್ಯಾಪ್ತಿಯನ್ನು ಹೊಂದಿದೆ . "ಪೂರ್ವ ಯುರೋಪ್ ಪ್ರದೇಶದಲ್ಲಿ ಬಹುತೇಕ ವ್ಯಾಖ್ಯಾನಗಳ ಪ್ರತಿಭಾವಂತರು ಎಂದು" ಇವೆ.

ಬಳಪ

ಬಳಪ ಎಂದರೆ ಸುಣ್ಣದಿಂದ ತಯಾರಿಸಿದ ಕಡ್ಡಿಯಂತಹ ವಸ್ತು. ಇದನ್ನು ಕಪ್ಪು ಹಲಗೆಯ ಮೇಲೆ ಅಥವಾ ಸ್ಲೇಟಿನ ಮೇಲೆ ಬರೆಯಲು ಉಪಯೋಗಿಸಲಾಗುವುದು.

ಪೆನ್ನು, ಪೇಪರ್ರು ಬಳಸುವ ಈ ಕಾಲದಲ್ಲಿ ಬಳಪ ಎನ್ನುವುದು ಮರೆತು ಹೋಗಿದ್ದರೂ ಸಹ ಶಾಲೆಗಳಲ್ಲಿ ಕೆಲವೊಮ್ಮೆ ಬಳಸುವುದೂ ಉಂಟು.

ಬಳಪವನ್ನು ಬಳಪದ ಕಲ್ಲಿನಿಂದಲೂ ಸಹ ತಯಾರಿಸುತ್ತಾರೆ. ಆದರೆ ಬಹಳ ಮೆದುವಾದ ಈ ಬಳಪದ ಕಲ್ಲನ್ನು ಹೆಚ್ಚಾಗಿ ಶಿಲ್ಪಕಲೆಯಲ್ಲಿ ವಿಗ್ರಹಗಳನ್ನು ಕೆತ್ತಲು ಸಹ ಬಳಸುತ್ತಾರೆ.ಸರಂಧ್ರ ಸಂಚಿತ ಕಾರ್ಬೋನೇಟ್ ಕಲ್ಲಿನಿಂದ ಮೂಲವಾಗಿ ಬಳಪವನ್ನು ತಯಾರಿಸುತ್ತಾರೆ.ಸುಣ್ಣದಕಲ್ಲಿನ ರೂಪವನ್ನುಳ್ಳ, ಖನಿಜವಾಗಿರುವ ಬಳಪ ಕ್ಯಾಲ್ಸೈಟ್ ನಿಂದ ಕೂಡಿದೆ.ಕ್ಯಾಲ್ಸೈಟ್ ಅನ್ನು ಕ್ಯಾಲ್ಸಿಯಂ ಕಾರ್ಬೋನೇಟ್ ಎಂದು ಕರೆಯಲಾಗುತ್ತದೆ.ಬಳ್ಪದ ಕ್ರಿಟೇಷಿಯಸ್ ಠೇವಣಿಯು ಪಶ್ಚಿಮ ಯುರೋಪ್ ನಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಬಳಪದ ರಾಸಾಯನಿಕ ಸಂಯೋಜನೆ, ಕ್ಯಾಲ್ಸಿಯಂ ಕಾರ್ಬೋನೇಟ್ ಆಗಿದೆ.

ಉಲ್ಲೇಖಗಳು

ಬೋಹೀಮಿಯನಿಸಂ (ಸ್ವೇಚ್ಛಾಚಾರ ವರ್ತನೆ)

ಟೆಂಪ್ಲೇಟು:Expert-subject-multiple

ಬೋಹೀಮಿಯನಿಸಂ ಎಂಬುದು ಸ್ವತಂತ್ರವಾದ (ಸಂಪ್ರದಾಯಬದ್ಧವಲ್ಲದ)ಜೀವನಶೈಲಿ ಪದ್ಧತಿಯಾಗಿದೆ. ಇದು ಕೆಲವು ಶಾಶ್ವತ ಸಂಬಂಧಗಳೊಂದಿಗೆ ಸಂಗೀತಮಯ,ಕಲಾತ್ಮಕ ಅಥವಾ ಸಾಹಿತ್ಯಿಕ್ಕೆ ಮನರಂಜನೆಗಳಲ್ಲಿ ತೊಡಗಿರುವ ಸಮಾನ ಮನೋಧರ್ಮದ ಜನರ ಸಮಾರಂಭ ಕೂಟಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ಪ್ರಕರಣದಲ್ಲಿ ಬೋಹೀಮಿಯನ್ ಗಳು ಅಲೆಮಾರಿಗಳಾಗಿರಬಹುದು, ಸಾಹಸಿಗರಾಗಿರಬಹುದು ಅಥವಾ ಪೋಲಿಗಳಾಗಿರಬಹುದು.

ಬೋಹೀಮಿಯನ್ ಪದದ ಈ ಬಳಕೆಯು, ಯುರೋಪಿನ ಅನೇಕ ಪ್ರಧಾನ ನಗರಗಳಲ್ಲಿರುವ ಅಪ್ರಧಾನವಾದ ಮತ್ತು ಬಡ ಕಲಾವಿದರು, ಬರಹಗಾರರು, ಪತ್ರಿಕೋದ್ಯಮಿಗಳು, ಸಂಗೀತಗಾರರು ಮತ್ತು ನಟರ ಸಂಪ್ರದಾಯಬದ್ಧವಲ್ಲದ ಜೀವನ ಶೈಲಿಯನ್ನು ವಿವರಿಸಲು ಮೊಟ್ಟ ಮೊದಲನೆಯ ಬಾರಿಗೆ ಆಂಗ್ಲ ಭಾಷೆಯಲ್ಲಿ 19 ನೇ ಶತಮಾನದಲ್ಲಿ ಕಾಣಿಸಿಕೊಂಡಿತು. ಬೋಹೀಮಿಯಯನ್ ಗಳು, ಸಂಪ್ರದಾಯಬದ್ಧವಲ್ಲದ ಅಥವಾ ಕಾನೂನುಬಾಹಿರವಾದ, ರೂಢ ವ್ಯವಸ್ಥೆಯಲ್ಲದ ರಾಜಕೀಯ ಅಥವಾ ಸಾಮಾಜಿಕ ದೃಷ್ಟಿಕೋನದೊಂದಿಗೆ ಸಂಬಂಧಿಸಿರುತ್ತಾರೆ. ಇದನ್ನು ಅವರು ಹೆಚ್ಚಾಗಿ ಮುಕ್ತ ಪ್ರೇಮ, ಮಿತವ್ಯಯ, ಮತ್ತು/ಅಥವಾ ಸರಳ ಜೀವನದ ಮೂಲಕ ವ್ಯಕ್ತಪಡಿಸುತ್ತಾರೆ.

ಬೋಹೀಮಿಯನಿಸಂ ಎಂಬ ಪದವು ಫ್ರಾನ್ಸ್ ನಲ್ಲಿ 19 ನೇ ಶತಮಾನದ ಪೂರ್ವಾರ್ಧದಲ್ಲಿ ಬೆಳಕಿಗೆ ಬಂದಿತು. ಇಲ್ಲಿನ ಕಲಾವಿದರು ಮತ್ತು ಸೃಷ್ಟಿಕರ್ತರು ಕಡಿಮೆ ಬಾಡಿಗೆಯ, ಕೆಳವರ್ಗದ, ರೋಮನಿ ಜನರ ಪಕ್ಕದಲ್ಲಿ ಬದುಕುವುದರ ಬಗ್ಗೆ ಗಮನಹರಿಸಲು ಪ್ರಾರಂಭಿಸಿದಾಗಿನಿಂದ ಈ ಪದ ಹುಟ್ಟಿಕೊಂಡಿತು. ಬೋಹೀಮಿಯನ್ ಎಂಬುದು ಫ್ರಾನ್ಸ್ ನ ರೋಮನಿ ಜನರಿಗೆ ಬಳಸುವಂತಹ ಸಾಮಾನ್ಯ ಪದವಾಗಿದೆ. ಇವರು ಬೋಹೆಮಿಯಾದ (ಮಾರ್ಗದ) ಮೂಲಕ ಪಶ್ಚಿಮ ಯುರೋಪ್ ಅನ್ನು ತಲುಪಿದವರು.xdw

ಯುರೋಪ್

ಯುರೋಪ್ ಪ್ರಪಂಚದ ೭ ಖಂಡಗಳಲ್ಲಿ ಎರಡನೇ ಅತ್ಯಂತ ಚಿಕ್ಕ ಖಂಡ. ಭೂಗೋಳಶಾಸ್ತ್ರದ ಪ್ರಕಾರ ಯುರೋಪ್ ಯುರೇಷ್ಯಾ ಮಹಾಖಂಡದ ಪಶ್ಚಿಮ ದ್ವೀಪಕಲ್ಪ. ಆದರೆ ಸಾಮಾಜಿಕವಾಗಿ, ರಾಜಕೀಯವಾಗಿ, ಐತಿಹಾಸಿಕವಾಗಿ ಇದು ಏಷ್ಯಾದಿಂದ ವಿಭಿನ್ನವಾಗಿರುವುದರಿಂದ ಇದನ್ನು ಪ್ರತ್ಯೇಕ ಖಂಡವಾಗಿ ಪರಿಗಣಿಸಲಾಗುತ್ತದೆ.

೨೫ ಸದಸ್ಯ ರಾಷ್ಟ್ರಗಳ ಯುರೋಪಿನ ಒಕ್ಕೂಟ ಈ ಖಂಡದ ಅತಿ ದೊಡ್ಡ ರಾಜಕೀಯ ಮತ್ತು ಆರ್ಥಿಕ ಒಕ್ಕೂಟ.

ರಷ್ಯಾ

ರಷ್ಯಾ (Russian: Россия), ಅಧಿಕೃತವಾಗಿ ರಸಿಸ್‌ಕಾಯಾ ಫೇಡರಾಟ್ಸಿಯ (Russian: Российская Федерация - ರಷ್ಯಾದ ಒಕ್ಕೂಟ), ಉತ್ತರ ಯುರೇಷಿಯಾ (ಯುರೋಪ್‌ ಹಾಗೂ ಏಷ್ಯಾ ಒಟ್ಟಿಗೆ)ದಲ್ಲಿರುವ ಒಂದು ದೇಶ. ಇದೊಂದು 83 ಬಿಡಿ ಸಂಸ್ಥಾನಗಳನ್ನು ಹೊಂದಿರುವ ಅರೆ-ಅಧ್ಯಕ್ಷೀಯ ಒಕ್ಕೂಟವಾಗಿದೆ. ರಷ್ಯಾ ತನ್ನ ಭೂಗಡಿಗಳನ್ನು ಈ ದೇಶಗಳೊಂದಿಗೆ ಹಂಚಿಕೊಂಡಿದೆ (ವಾಯುವ್ಯದಿಂದ ಆಗ್ನೇಯದವರೆಗೆ) : ನಾರ್ವೆ, ಫಿನ್‌ಲ್ಯಾಂಡ್‌, ಎಸ್ಟೊನಿಯಾ, ಲಾಟ್ವಿಯಾ, ಲಿಥುವೇನಿಯಾ (ಕಲಿನಿನ್‌ಗ್ರಾಡ್‌‌ ಓಬ್ಲಸ್ಟ್‌‌ ಮೂಲಕ), ಪೋಲೆಂಡ್‌ (ಕಲಿನಿನ್‌ಗ್ರಾಡ್‌‌ ಓಬ್ಲಸ್ಟ್‌‌ ಮೂಲಕ), ಬೆಲಾರೂಸ್, ಉಕ್ರೇನ್, ಜಾರ್ಜಿಯಾ, ಅಜರ್ಬೈಜಾನ್, ಕಜಕ್‌ಸ್ತಾನ್‌, ಚೀನಾ, ಮಂಗೋಲಿಯಾ ಮತ್ತು ಉತ್ತರ ಕೊರಿಯಾ. ಹಾಗೆಯೇ ಈ ದೇಶದ ಸಮುದ್ರ ತಡಿಯ ಗಡಿಗಳು ಜಪಾನ್‌ (ಓಖೋಟ್ಸ್ಕ್‌ ಸಮುದ್ರದಿಂದ ), ದಕ್ಷಿಣ ಕೊರಿಯಾ (ಜಪಾನ್‌ ಸಮುದ್ರದಿಂದ), ಸ್ವೀಡನ್‌ (ಬಾಲ್ಟಿಕ್ ಸಮುದ್ರದಿಂದ), ತುರ್ಕಿ (ಕಪ್ಪು ಸಮುದ್ರದಿಂದ), ಮತ್ತು ಯುನೈಟೆಡ್‌ ಸ್ಟೇಟ್ಸ್‌ (ಬೇರಿಂಗ್‌ ಜಲಸಂಧಿಯಿಂದ) ಗಳಿಂದ ಸುತ್ತುವರೆದಿದೆ. ೧೭ ಮಿಲಿಯನ್ ಚದರ ಕಿಮಿ ವಿಸ್ತೀರ್ಣದೊಂದಿಗೆ ರಷ್ಯಾ, ವಿಶ್ವದ ಅತಿ ದೊಡ್ಡ ದೇಶವಾಗಿದ್ದು, ೧೪೨ ಮಿಲಿಯನ್‌ ಜನರಿಂದ ಕೂಡಿ, ಜನಸಂಖ್ಯೆಯ ಪ್ರಮಾಣದಲ್ಲಿ ೯ನೆಯ ಅತಿ ದೊಡ್ಡ ದೇಶವಾಗಿದೆ. ಇದು ಯೂರೋಪ್‌ನ ೪೦% ಭಾಗವನ್ನು ಒಟ್ಟಾರೆಯಾಗಿ ವಿಸ್ತರಿಸಿದ್ದು, ೧೧ ಕಾಲಮಾನಗಳಲ್ಲಿ ವ್ಯಾಪಿಸಿ, ವಿವಿಧ ಮಾದರಿಯ ಪರಿಸರ ಹಾಗೂ ಭೂಲಕ್ಷಣಗಳನ್ನು ಹೊಂದಿದೆ. ರಷ್ಯಾದಲ್ಲಿ ವಿಶ್ವದಲ್ಲೇ ಅತಿ ಹೆಚ್ಚಿನ ಪ್ರಮಾಣದ ಖನಿಜ ಮತ್ತು ಶಕ್ತಿ ಸಂಪನ್ಮೂಲಗಳ ನಿಕ್ಷೇಪಗಳಿವೆ, ಹಾಗಾಗಿ ಶಕ್ತಿ ಸಂಪನ್ಮೂಲದಲ್ಲಿ ಮಹಾ ಶಕ್ತಿ ಎಂದೂ ಹೆಸರಾಗಿದೆ.ಇದು ವಿಶ್ವದ ಅತಿ ದೊಡ್ಡ ಅರಣ್ಯ ನಿಕ್ಷೇಪವನ್ನು ಹೊಂದಿದ್ದು ಇಲ್ಲಿನ ಸರೋವರಗಳು ಸರಿ ಸುಮಾರು ನಾಲ್ಕನೇ ಒಂದು ಭಾಗದಷ್ಟು ವಿಶ್ವದ ಘನೀಕೃತವಲ್ಲದ ಶುದ್ಧನೀರನ್ನು ಹೊಂದಿದೆ.

೩ನೇ ಮತ್ತು ೮ನೇ ಶತಮಾನ ಗಳಲ್ಲಿ ಯೂರೋಪ್‌ನ ಒಂದು ಗಮನಾರ್ಹ ಸಮೂಹವಾಗಿ ಹೊರ ಹೊಮ್ಮಿದ ಪೂರ್ವ ಸ್ಲಾವ್ ಜನರು‌‌ಗಳಿಂದ ಈ ದೇಶದ ಇತಿಹಾಸವು ಆರಂಭವಾಗಿತ್ತು. ಒಂದು ಉದಾತ್ತ ವೈಕಿಂಗ್ ಯೋಧ ವರ್ಗ ಹಾಗೂ ಅವರ ವಂಶಸ್ಥರಿಂದ ಸ್ಥಾಪಿತ ಕಿವಾನ್‌ ರುಸ್‌ ಎಂಬ ಪ್ರಥಮ ಸ್ಲಾವ್‌ ರಾಜ್ಯವಾಗಿ 9ನೇ ಶತಮಾನದಲ್ಲಿ ಹೊರಹೊಮ್ಮಿ, ಬೈಜಾಂಟೈನ್‌ ಸಾಮ್ರಾಜ್ಯವನ್ನು ಅನುಸರಿಸಿ ೯೮೮ರಲ್ಲಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಿತು. ಇದರಿಂದಾಗಿ ಬೈಜಾಂಟೈನ್‌ ಮತ್ತು ಸ್ಲಾವ್‌ ಸಂಸ್ಕೃತಿಗಳ ಸಂಯೋಜನೆಯಾಗಿ ಮುಂದಿನ ಸಹಸ್ರಮಾನದ ರಷ್ಯಾದ ಸಂಸ್ಕೃತಿಯಾಗಿ ಹೊರಹೊಮ್ಮಿತು. ಅಂತಿಮವಾಗಿ ಕಿವಾನ್‌ ರುಸ್‌ ವಿಭಜನೆಯಾಗಿ ಬಹಳಷ್ಟು ಸಣ್ಣ ಬಿಡಿ ಸಂಸ್ಥಾನಗಳಾಗಿ ಒಡೆಯಿತು. ಕಿವಾನ್‌ ರುಸ್‌ನ ನಂತರ ಶಕ್ತಿಶಾಲಿ ರಾಜ್ಯ ಮಾಸ್ಕೋ ಆಗಿತ್ತು. ಇದು ರಷ್ಯಾದ ಒಗ್ಗೂಡುವಿಕೆ ಹಾಗೂ ಸುವರ್ಣ ತಂಡದ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಶಕ್ತಿಯಾಗಿತ್ತು. ಮಾಸ್ಕೋ ಹಂತಹಂತವಾಗಿ ಅಕ್ಕಪಕ್ಕದ ರಷ್ಯಾದ ಸಂಸ್ಥಾನಗಳನ್ನು ಒಗ್ಗೂಡಿಸುತ್ತಾ ಕಿವಾನ್‌ ರುಸ್‌ನ ಸಾಂಸ್ಕೃತಿಕ ಹಾಗೂ ರಾಜಕೀಯ ಸಂಪ್ರದಾಯಗಳಲ್ಲಿ ಮೇಲುಗೈ ಸಾಧಿಸಿತು. ೧೮ನೇ ಶತಮಾನದ ವೇಳೆಗೆ, ಆಕ್ರಮಣ, ವಿಸ್ತರಣೆ ಹಾಗೂ ಭೂಶೋಧನೆಗಳಿಂದಾಗಿ ರಾಷ್ಟ್ರವು ಬಹಳ ವಿಸ್ತಾರವಾಗಿ, ಪೋಲೆಂಡ್‌ನಿಂದ ಪೂರ್ವದಿಕ್ಕಿನಲ್ಲಿ ಪೆಸಿಫಿಕ್‌ ಮಹಾಸಾಗರ ಹಾಗೂ ಅಲಾಸ್ಕಾಗಳನ್ನೆಲ್ಲಾ ಒಳಗೊಂಡು ಇತಿಹಾಸದಲ್ಲಿನ ೩ನೇ ಅತಿ ದೊಡ್ಡ ಚಕ್ರಾಧಿಪತ್ಯ ಎನಿಸಿ ರಷ್ಯಾದ ಚಕ್ರಾಧಿಪತ್ಯ ಎನಿಸಿಕೊಳ್ಳುವ ಮಟ್ಟಿಗೆ ಬೆಳೆಯಿತು.

ರಷ್ಯಾವು ವಿಶ್ವದಾದ್ಯಂತ ಅಧಿಕಾರ ಮತ್ತು ಪ್ರಭಾವವನ್ನು ರಷ್ಯಾದ ಚಕ್ರಾಧಿಪತ್ಯದ ಕಾಲದಿಂದ ಹಿಡಿದು, ಸೋವಿಯೆತ್‌ ಒಕ್ಕೂಟದ ಅಗ್ರ ಸದಸ್ಯವಾಗಿ, ವಿಶ್ವದ ಪ್ರಪ್ರಥಮ ಹಾಗೂ ಅತಿ ದೊಡ್ಡ ಸಂವಿಧಾನಾತ್ಮಕ ಸಮಾಜವಾದಿ ಆಡಳಿತ ಮತ್ತು ಮನ್ನಣೆ ಪಡೆದ ಉತ್ಕೃಷ್ಠ ಶಕ್ತಿ ಎನಿಸಿತು. ಕಲೆ ಹಾಗೂ ವಿಜ್ಞಾನದ ಪ್ರತಿ ಮಗ್ಗಲುಗಳಲ್ಲಿ ರಷ್ಯಾ ಉತ್ಕೃಷ್ಠತೆಯ ಬಗ್ಗೆ ದೀರ್ಘ ಪರಂಪರೆಯ ಹೆಗ್ಗಳಿಕೆ ಹೊಂದಿದೆ. ರಷ್ಯನ್‌ ಒಕ್ಕೂಟವನ್ನು ೧೯೯೧ರಲ್ಲಿ ಸೋವಿಯತ್‌ ಒಕ್ಕೂಟದ ವಿಭಜನೆಯ ನಂತರ ಸ್ಥಾಪಿಸಲಾಯಿತು. ಆದರೂ ಇದನ್ನು ಸೋವಿಯತ್‌ ಒಕ್ಕೂಟದ ಅಧಿಕೃತ ಪ್ರತಿನಿಧಿಯೆಂದೇ ಈಗಲೂ ಪರಿಗಣಿಸಲಾಗುತ್ತಿದೆ. ಇದು ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ ಪ್ರಪಂಚದಲ್ಲಿ ಎಂಟನೇ ಸ್ಥಾನ, ಖರೀದಿ ಸಾಮಾರ್ಥ್ಯ ಸಮತೆಯಲ್ಲಿ ಆರನೇ ಸ್ಥಾನ ಹಾಗು ಸೇನಾ ಆಯವ್ಯಯದಲ್ಲಿ ಎಂಟನೇ ಸ್ಥಾನ ಹೊಂದಿದೆ. ಈ ದೇಶವು ಐದು ಗಣ್ಯ ಅಣ್ವಸ್ತ್ರ ಸಮರ್ಥ ದೇಶಗಳಲ್ಲಿ ಒಂದಾಗಿದೆ. ಸಮೂಹ ವಿನಾಶಕ ಶಸ್ತ್ರಾಸ್ತ್ರಗಳ ಬೃಹತ್‌ ಸಂಗ್ರಹವನ್ನೇ ಹೊಂದಿದೆ. ರಷ್ಯಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವ ಹೊಂದಿದೆಯಲ್ಲದೇ, G8, APEC ಹಾಗೂ SCOಗಳ ಸದಸ್ಯತ್ವ ಹೊಂದಿದೆ. ಸ್ವತಂತ್ರ ರಾಷ್ಟ್ರಗಳ ಕಾಮನ್‌ವೆಲ್ತ್‌ನ ಅಗ್ರಗಣ್ಯ ಸದಸ್ಯನಾಗಿದೆ.

ವಿವಿಧ ದೇಶಗಳ ಹಿಂದಿನ ಒಟ್ಟು ಆರ್ಥಿಕ ಉತ್ಪನ್ನಗಳ ಪಟ್ಟಿ

ಇಲ್ಲಿ ವಿವಿಧ ದೇಶಗಳ ಹಿಂದಿನ ಒಟ್ಟು ಆರ್ಥಿಕ ಉತ್ಪನ್ನಗಳ (ಜಿಡಿಪಿ) (ಕೊಳ್ಳುವ ಸಾಮರ್ಥ್ಯದ ಸಮತೆ (ಪಿಪಿಪಿ)'ಯ - ನಿಬಂಧನೆಗಳ ಪ್ರಕಾರ) ಅಂದಾಜನ್ನು, ಇಂದಿನ ಅಮೆರಿಕನ್ ಡಾಲರ್ ದರಕ್ಕೆ ಸರಿಹೊಂದುವಂತೆ ಪಟ್ಟಿ ಮಾಡಲಾಗಿದೆ.

ಇಲ್ಲಿ ಕೆಲವು ಪಟ್ಟಿಯಲ್ಲಿ ದೇಶಗಳ ಹೆಸರಿನ ಜಾಗದಲ್ಲಿ ಕೆಲವು ಭೌಗೋಳಿಕ ಪ್ರದೇಶಗಳ ಹೆಸರನ್ನು ಸೇರಿಸಲಾಗಿದೆ. ಇಲ್ಲಿ ಪಟ್ಟಿ ಮಾಡಿರುವ ಬಹುತೇಕ ಮಾಹಿತಿಗಳು ಬ್ರಿಟನ್ ಆರ್ಥಿಕ-ಇತಿಹಾಸ ತಜ್ಞ ಅಂಗುಸ್ ಮಾಡಿಸನ್ Angus Maddison ಅವರ ಅಂದಾಜಿನ ಅವಲಂಬಿತವಾಗಿದೆ. ಅಂಗುಸ್ ಮಾಡಿಸನ್ ಅವರು ಐರೋಪ್ಯ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆಯ (Organisation for Economic Co-operation and Development - OECD) , ಆರ್ಥಿಕ ಅಭಿವೃದ್ಧಿ ಘಟಕದಲ್ಲಿ ಸಹಾಯಕ ನಿರ್ದೇಶಕರಾಗಿದ್ದರು. ಅವರು "ದಿ ವರ್ಲ್ಡ್ ಯೆಕನಾಮಿ : ಹಿಸ್ಟಾರಿಕಲ್ ಸ್ಟಾಟಿಸ್ಟಿಕ್ಸ್" The World Economy: Historical Statistics ಎಂಬ ತಮ್ಮ ಗ್ರಂಥದಲ್ಲಿ ಈ ಅಂದಾಜನ್ನು ಮಾಡಿದ್ದಾರೆ. ಅವರ ಅಂದಾಜು 1'ನೆ ಶತಮಾನದಿಂದ 1998'ರ ವರಗೆ ಇದೆ. ಇಲ್ಲಿ ವಿವಿಧ ದೇಶಗಳ ಆರ್ಥಿಕ ಉತ್ಪನ್ನಗಳು ಅಮೆರಿಕನ್ ಡಾಲರ್'ನಲ್ಲಿ ಒಟ್ಟೂ ಮೌಲ್ಯ ಮತ್ತೂ ವಿಶ್ವದಲ್ಲಿ ಒಟ್ಟೂ ಉತ್ಪನ್ನಗಳಲ್ಲಿ ಆ ದೇಶದ ಭಾಗವನ್ನು ಪಟ್ಟಿಮಾಡಿದೆ.

ಶಿಕ್ಷಣ

ಅದರ ಸಾಮಾನ್ಯ ಅರ್ಥದಲ್ಲಿ ಶಿಕ್ಷಣ ಜ್ಞಾನ, ಕೌಶಲ್ಯ ಮತ್ತು ಜನರು ಒಂದು ಗುಂಪಿನ ಪದ್ಧತಿ ಬೋಧನೆ, ತರಬೇತಿ ಅಥವಾ ಸಂಶೋಧನೆ ಮೂಲಕ ಮುಂದಿನ ಪೀಳಿಗೆಗೆ ವರ್ಗಾಯಿಸಲಾಯಿತು. ಇದರಲ್ಲಿ ಕಲಿಕೆಯು ಒಂದು ರೂಪ. ಶಿಕ್ಷಣ ಆಗಾಗ್ಗೆ ಇತರರ ಮಾರ್ಗದರ್ಶನದಲ್ಲಿ ನಡೆಯುತ್ತದೆ. ಒಬ್ಬ ಯೋಚಿಸುತ್ತಾನೆ. ದಾರಿಯಲ್ಲಿ ಒಂದು ರೂಪುಗೊಳ್ಳುವಿಕೆಯು ಯಾವ ಪರಿಣಾಮವನ್ನು ಹೊoದಿದೆ ಎಂದು. ಯಾವುದೇ ಅನುಭವ, ಭಾವನೆ ಅಥವಾ ಕೃತ್ಯಗಳನ್ನು ಶೈಕ್ಷಣಿಕವೆಂದು ಪರಿಗಣಿಸಬಹುದು. ಶಿಕ್ಷಣ ಸಾಮಾನ್ಯವಾಗಿ ಪ್ರಿಸ್ಕೂಲ್ ಪ್ರಾಥಮಿಕ ಶಾಲೆ, ಸೆಕೆಂಡರಿ ಶಾಲೆ ಮತ್ತು ನಂತರ ಕಾಲೇಜು, ವಿಶ್ವವಿದ್ಯಾಲಯ ಅಥವಾ ಶಿಷ್ಯವೃತ್ತಿಯ ಎಂದು ಹಲವು ಹಂತಗಳಲ್ಲಿ ವಿಂಗಡಿಸಲಾಗಿದೆ. ಶಿಕ್ಷಣ/ವಿದ್ಯೆ ಕಲಿಸುವಾತನೆ ಶಿಕ್ಷಕ.

ಶೀತಲ ಸಮರ

REDIRECT Template:History of the Cold Warಶೀತಲ ಸಮರ ವು (1945–1991) ಎರಡನೇ ವಿಶ್ವಯುದ್ಧದ(1939–1945) ನಂತರ, ಮುಖ್ಯವಾಗಿ ಯು.ಎಸ್.ಎಸ್.ಆರ್ ಮತ್ತು ಅದರ ಆಶ್ರಿತ ದೇಶಗಳು, ಹಾಗೂ ಯುನೈಟೆಡ್ ಸ್ಟೇಟ್ಸ್‌ನ್ನು ಒಳಗೊಂಡಂತೆ ಪಾಶ್ಚಾತ್ಯ ವಿಶ್ವಶಕ್ತಿಗಳ ನಡುವಣ ಎಂದೂ ನಿಲ್ಲದೆ ಮುಂದುವರೆಯುತ್ತಲೇ ಬಂದ ರಾಜಕೀಯ ಘರ್ಷಣೆ, ಮಿಲಿಟರಿ ಉದ್ವಿಗ್ನತೆ, ಮತ್ತು ಆರ್ಥಿಕ ಪೈಪೋಟಿಗಳಿಗೆ ನೀಡಿದ ಹೆಸರಾಗಿದೆ. ಈ ಸಮರದಲ್ಲಿ ಪಾಲ್ಗೊಂಡ ಪ್ರಮುಖ ದೇಶಗಳ ಮಿಲಿಟರಿ ಶಕ್ತಿಗಳು ಎಂದೂ ಅಧಿಕೃತವಾಗಿ ನೇರ ಯುದ್ಧಕ್ಕಿಳಿಯದಿದ್ದರೂ, ಮಿಲಿಟರಿ ಮೈತ್ರಿಗಳು, ಆಯಕಟ್ಟಿನ ಜಾಗಗಳಲ್ಲಿ ಸಾಂಪ್ರದಾಯಿಕವಾಗಿ ಸೈನ್ಯವನ್ನು ಇರಿಸುವುದು, ಪರಮಾಣು ಅಸ್ತ್ರ ಪೈಪೋಟಿ, ಗೂಢಚರ್ಯೆ, ಹುಸಿ ಯುದ್ಧಗಳು, ಪ್ರಚಾರಕಾರ್ಯಗಳು, ಮತ್ತು ಅಂತರಿಕ್ಷ ಪೈಪೋಟಿಯೇ ಮೊದಲಾದ ತಂತ್ರಜ್ಞಾನ ಸ್ಪರ್ಧೆಗಳ ಮೂಲಕ ಈ ಘರ್ಷಣೆಯನ್ನು ವ್ಯಕ್ತಪಡಿಸಲಾಯಿತು.

ಆಕ್ಸಿಸ್ ಶಕ್ತಿಗಳ ವಿರುದ್ಧದ ಮೈತ್ರಿಕೂಟದಲ್ಲಿದ್ದು ಅತ್ಯಂತ ಶಕ್ತಿಶಾಲಿಗಳಾಗಿದ್ದರೂ, ಯು.ಎಸ್.ಎಸ್.ಆರ್ ಮತ್ತು ಯು.ಎಸ್‌ಗಳು ವಿಶ್ವಯುದ್ಧಾನಂತರದ ಸಂರಚನೆಯ ಬಗ್ಗೆ ಯುರೋಪ್‌ನ ಹೆಚ್ಚಿನ ಭಾಗವನ್ನು ಸ್ವಾಧೀನಪಡಿಸಿಕೊಳ್ಳುವ ಸಂದರ್ಭದಲ್ಲಿ ಪರಸ್ಪರ ವಿರೋಧ ವ್ಯಕ್ತಪಡಿಸಿದವು. ಸೋವಿಯೆತ್ ಯೂನಿಯನ್ ತಾನು ಸ್ವಾಧೀನಪಡಿಸಿಕೊಂಡ ಪೂರ್ವ ಯುರೋಪಿಯನ್ ರಾಷ್ಟ್ರಗಳನ್ನು ಸೇರಿಸಿ Eastern Blocನ ಸ್ಥಾಪನೆ ಮಾಡಿ, ಕೆಲವನ್ನು ಸೋವಿಯೆತ್ ಸೋಶಿಯಲಿಸ್ಟ್ ರಿಪಬ್ಲಿಕ್‌ಗಳನ್ನಾಗಿ ಹಾಗೂ ಉಳಿದವನ್ನು ಆಶ್ರಿತ ದೇಶಗಳನ್ನಾಗಿ ಉಳಿಸಿಕೊಂಡಿದ್ದು, ಇವುಗಳಲ್ಲಿ ಕೆಲವನ್ನು ವಾರ್ಸಾ ಒಪ್ಪಂದ(1955–1991)ದ ಪ್ರಕಾರ ಒಗ್ಗೂಡಿಸಲಾಯಿತು. ಯು.ಎಸ್ ಮತ್ತು ಕೆಲವು ಪಾಶ್ಚಿಮಾತ್ಯ ಯುರೋಪಿಯನ್ ದೇಶಗಳು ಇದಕ್ಕೆ ಪ್ರತಿಯಾಗಿ ಕಮ್ಯುನಿಸಮ್ ದಮನವನ್ನು ರಕ್ಷಣಾ ನೀತಿಯನ್ನಾಗಿ ಜಾರಿಗೆ ತಂದದ್ದಲ್ಲದೆ ಈ ದಿಸೆಯಲ್ಲಿ NATOನಂತಹ ಮೈತ್ರಿಕೂಟಗಳನ್ನು ಸ್ಥಾಪಿಸಿದವು. ಈ ರಾಷ್ಟ್ರಗಳಲ್ಲಿ ಹಲವು ಯು.ಎಸ್.ಎಸ್.ಆರ್ ಬಲವಾಗಿ ವಿರೋಧಿಸುತ್ತಿದ್ದ ಪಶ್ಚಿಮ ಯುರೋಪಿನ ಪುನರ್ನಿರ್ಮಾಣದ, ಅದರಲ್ಲೂ ಪಶ್ಚಿಮ ಜರ್ಮನಿಯ ಸಂಯೋಜನೆಯಲ್ಲಿ ಪಾಲ್ಗೊಂಡವು. ಹಲವಾರು ಪಾಶ್ಚಿಮಾತ್ಯ ದೇಶಗಳು ಮತ್ತು ಅವುಗಳ ಪ್ರಾದೇಶಿಕ ಮೈತ್ರಿಗಳ ವಿರೋಧ ಕಟ್ಟಿಕೊಂಡ ಯು.ಎಸ್.ಎಸ್.ಆರ್ ಲ್ಯಾಟಿನ್ ಅಮೆರಿಕಾ ಮತ್ತು ಆಗ್ನೇಯ ಏಷ್ಯಾಗಳಲ್ಲಿ ಕಮ್ಯುನಿಸ್ಟ್ ಕ್ರಾಂತಿಯನ್ನು ಹುಟ್ಟುಹಾಕಿದಾಗ ಕೆಲವೆಡೆ ಅವನ್ನು ವಾಪಾಸು ತಳ್ಳುವ ಪ್ರಯತ್ನಗಳು ಮಿಶ್ರಫಲ ನೀಡಿದವು. ಕೆಲವು ದೇಶಗಳು NATO ಮತ್ತು ವಾರ್ಸಾ ಒಪ್ಪಂದವನ್ನು ಬೆಂಬಲಿಸಿದವಾದರೂ ಆಲಿಪ್ತ ರಾಷ್ಟ್ರಗಳ ಬಣಗಳೂ ಹುಟ್ಟಿಕೊಂಡವು.

ಶೀತಲ ಸಮರವು ಒಂದೇ ಸಮಯದಲ್ಲಿ ಸಾಪೇಕ್ಷ ಶಾಂತಿ ಮತ್ತು ಅಂತರ್ರಾಷ್ಟ್ರೀಯ ಉದ್ವಿಗ್ನತೆಯ ಏರಲು ಕಾರಣವಾದ ಘಟನೆಗಳಿಗೆ ಸಾಕ್ಷಿಯಾಯಿತು – ಬರ್ಲಿನ್ ಮುತ್ತಿಗೆ (1948–1949), the ಕೊರಿಯನ್ ಯುದ್ಧ (1950–1953), the 1961ರ ಬರ್ಲಿನ್ ಬಿಕ್ಕಟ್ಟು, the ವಿಯೆಟ್ನಾಮ್ ಯುದ್ಧ (1959–1975), the ಕ್ಯೂಬಾದ ಮಿಸೈಲ್ ಬಿಕ್ಕಟ್ಟು (1962), the ಅಫ್ಘಾನಿಸ್ತಾನದ ಸೋವಿಯೆತ್ ಯುದ್ಧ (1979–1989), ಮತ್ತು ನವೆಂಬರ್ 1983ರ ಏಬಲ್ ಆರ್ಚರ್ 83 NATO ವ್ಯಾಯಾಮಗಳು. ನೇರವಾದ ಮಿಲಿಟರಿ ಆಕ್ರಮಣ ಮಾಡುವುದರಿಂದ ಪರಮಾಣು ಅಸ್ತ್ರಪ್ರಯೋಗದ ಮುಖಾಂತರ ಇಬ್ಬರ ವಿನಾಶವೂ ಖಚಿತವಾದ್ದರಿಂದ ಎರಡೂ ಬಣಗಳು ತಮ್ಮ ರಾಜಕೀಯ ಉದ್ವಿಗ್ನತೆಯನ್ನು ಹೊರಹಾಕಲು ಮತ್ತು ನೇರ ಯುದ್ಧವನ್ನು ತಪ್ಪಿಸಲು ಉಪಶಮನದ ಮಾದರಿಯ ಮೊರೆಹೊಕ್ಕವು.

1980ರ ದಶಕದಲ್ಲಿ ಯುನೈಟೆಡ್ ಸ್ಟೇಟ್ಸ್ ಈಗಾಗಲೇ ವಿಪರೀತ ಆರ್ಥಿಕ ಜಡತೆಯಿಂದ ನಲುಗಿದ್ದ ಯು.ಎಸ್.ಎಸ್.ಆರ್‌ನ ವಿರುದ್ಧ ರಾಜನೀತಿ, ಮಿಲಿಟರಿ, ಮತ್ತು ಆರ್ಥಿಕ ಒತ್ತಡಗಳನ್ನು ಹೆಚ್ಚಿಸಿತು. ಇದಾದ ನಂತರ ಸೋವಿಯೆತ್‌ನ ಅಧ್ಯಕ್ಷ ಮಿಖಾಯಿಲ್ ಗೋರ್ಬಚೇವ್ ಅವರು ಈ ಉದಾರವಾದಿ ಸುಧಾರಣೆಗಳನ್ನು ಜಾರಿಗೆ ತಂದರು - ಪೆರೆಸ್ತ್ರೊಯಿಕಾ ("ಪುನರ್ರಚನೆ", "ಮರುಸಂಘಟನೆ", 1987) and ಗ್ಲಾಸ್‌ನಾಸ್ತ್ ("ಮುಕ್ತತೆ", ca. 1985). 1991ರ ಸೋವಿಯೆತ್ ಯೂನಿಯನ್‌ನ ಕುಸಿತದೊಂದಿಗೆ ಶೀತಲ ಸಮರ ಕೊನೆಗೊಂಡಿತು. ಅಲ್ಲಿಂದ ಯುನೈಟೆಡ್ ಸ್ತೇಟ್ಸ್ ಅತ್ಯಂತ ಶಕ್ತಿಯುತ ಮಿಲಿಟರಿ ಶಕ್ತಿಯಾಗಿ ಉಳಿಯಿತು ಮತ್ತು ಸೋವಿಯೆತ್ ಯೂನಿಯನ್‌ನ ಹೆಚ್ಚಿನ ಪರಮಾಣು ಅಸ್ತ್ರಗಳೆಲ್ಲವೂ ರಷ್ಯಾದ ಪಾಲಾದವು. ಶೀತಲ ಸಮರ ಮತ್ತು ಅದರ ಘಟನೆಗಳು ಇಂದಿನ ಪ್ರಪಂಚದ ಮೇಲೆ ಸಾಕಷ್ಟು ಪ್ರಭಾವ ಬೀರಿವೆ ಮತ್ತು ಇದನ್ನು ಕಾದಂಬರಿಗಳಂತಹ ಜನಪ್ರಿಯ ಸಂಸ್ಕೃತಿಗಳಲ್ಲಿ ಇಂದಿಗೂ ಸೂಚಿಸಲಾಗುತ್ತಿದೆ.

ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿ

ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿ: ಸಂಯುಕ್ತ ರಾಷ್ಟ್ರ ಸಂಸ್ಥೆಯ ಸಚಿವಾಲಯದ ಮುಖ್ಯಸ್ಥ. ವಾಸ್ತವಿಕವಾಗಿ ಇವರು ಇಡೀ ಸಂಸ್ಥೆಯ ಮುಂದಾಳು ಮತ್ತು ವಕ್ತಾರ.

ದಕ್ಷಿಣ ಕೋರಿಯಾದ ಬಾನ್ ಕೀ-ಮೂನ್ ಪ್ರಸಕ್ತ ಮಹಾಕಾರ್ಯದರ್ಶಿ. ಇವರು ಜನವರಿ ೧, ೨೦೦೭ರಂದು ಅಧಿಕಾರ ವಹಿಸಿಕೊಂಡರು. ಇವರ ಅಧಿಕಾರದ ಅವಧಿ ಡಿಸೆಂಬರ್ ೩೧, ೨೦೧೧ಕ್ಕೆ ಮುಕ್ತಾಯವಾಗಿತ್ತು. 21 ಜೂನ್ 2011ರಂದು ಇವರು ಎರಡನೇ ಅವಧಿಗೆ ಅವಿರೋಧವಾಗಿ ಪುನಃ ಆರಿಸಲ್ಪಟ್ಟರು, 31 ಡಿಸೆಂಬರ್ 2016 ರಂದು ಅವಧಿ ಮುಗಿಯುವ ಬಾನ್ ಕಿ ಮೂನ್ ಅವರ ಅವಧಿ ಮುಗಿಯುವುದು.

ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆ

ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆ ಪದ್ಧತಿಯು ಸಂಯುಕ್ತ ರಾಷ್ಟ್ರ ಸಂಸ್ಥೆಯ ಗಣನಶಾಸ್ತ್ರ ವಿಭಾಗವು ಅಂಕಿ-ಅಂಶಗಳನ್ನು ವರ್ಗೀಕರಿಸಲು ಉಪಯೋಗಿಸುವ ಒಂದು ಪದ್ಧತಿ. ಇದರಲ್ಲಿ ಭೂಖಂಡಗಳನ್ನು ಚಿಕ್ಕ ವಿಭಾಗಗಳಾಗಿ ವಿಂಗಡಿಸಲಾಗಿದೆ.

ಇತರ ಭಾಷೆಗಳು

This page is based on a Wikipedia article written by authors (here).
Text is available under the CC BY-SA 3.0 license; additional terms may apply.
Images, videos and audio are available under their respective licenses.