ಪಶ್ಚಿಮ

ನಾಲ್ಕು ಪ್ರಧಾನ ದಿಕ್ಕುಗಳಲ್ಲಿ ಒಂದು. ಪಡುವಣ ಎಂದೂ ಕರೆಯುತ್ತಾರೆ. ಸೂರ್ಯ ಮುಳುಗುವ ದಿಕ್ಕು.

ಹಿಂದೂ ಧರ್ಮದ ಪ್ರಕಾರ ವರುಣದಿಕ್ಕಿನ ಅಧಿಪತಿ.

ಆಸ್ಟ್ರೇಲಿಯ

ಆಸ್ಟ್ರೇಲಿಯ ದಕ್ಷಿಣ ಭೂಗೋಳಾರ್ಧದಲ್ಲಿರುವ ಒಂದು ದೇಶಹಾಗೂ ಖಂಡ. ಸುತ್ತಲೂ ಸಾಗರಜಲದಿಂದ ಆವೃತವಾಗಿದ್ದು ಇಡೀ ಖಂಡವೇ ಒಂದು ಬೃಹತ್ ದ್ವೀಪದಂತಿದೆ. ಇದರ ಸ್ಥಳ ನಿರ್ದೇಶ ಹೀಗಿದೆ : 113º90-153º390, ಪು.ರೇ; 10º410-43º390, ದ.ಅ. ವಿಸ್ತೀರ್ಣ 76,86,850 ಚ.ಕಿಮೀ. ಜನಸಂಖ್ಯೆ 19,855,288 (2006). ರಾಜಧಾನಿ ಕ್ಯಾನ್ಬೆರ 353,149 (2001). ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಸಾಗರಗಳ ನಡುವೆ ಇದೆ. ಅಂದರೆ ಇದರ ವಿಸ್ತಾರ ಅಮೆರಿಕ ಸಂಯುಕ್ತ ಸಂಸ್ಥಾನದಷ್ಟಾಗುತ್ತದೆ. ಸಮುದ್ರತೀರ 19,536 ಕಿಮೀ ಉದ್ದವಾಗಿದೆ. ನಿಸ್ಸಂದೇಹವಾಗಿ ಇದೊಂದು ಅಡಕವಾದ ಭೂಭಾಗ. ಇದರ ಈ ವೈಶಿಷ್ಟ್ಯ, ಮೇಲ್ಮೈಲಕ್ಷಣ ಮತ್ತು ಅಕ್ಷಾಂಶರೀತ್ಯಾ ಇದರ ಸ್ಥಾನ, ಇವೆಲ್ಲ ಇದರ ವಾಯುಗುಣವನ್ನು ನಿಯಂತ್ರಿಸುತ್ತವೆ. ಈ ಖಂಡದ ಭೌಗೋಳಿಕ ಲಕ್ಷಣ ನಿರ್ಣಯವಾಗಿರುವುದು ಈ ಅಂಶಗಳಿಂದ. ಆಸ್ಟ್ರೇಲಿಯ ಎಂಬ ಹೆಸರು `ಆಸ್ಟ್ರಲ’ ಎಂಬ ಲ್ಯಾಟಿನ್ ಶಬ್ದದಿಂದ ಬಂದದ್ದು.

ಇಸ್ರೇಲ್

ಇಸ್ರೇಲ್ (יִשְׂרָאֵל, ಯಿಸ್ರೆಇಲ್), ಅಧಿಕೃತವಾಗಿ ಇಸ್ರೇಲ್ ರಾಜ್ಯ (מְדִינַת יִשְׂרָאֵל, ಮೆದೀನತ್ ಯಿಸ್ರೇಎಲ್; دَوْلَةْ إِسْرَائِيل, ದವ್ಲತ್ ಇಸ್ರೇಇಲ್), ಮೆಡಿಟೆರೇನಿಯ ಸಮುದ್ರದ ಆಗ್ನೇಯಕ್ಕೆ ಇರುವ ಪಶ್ಚಿಮ ಏಷ್ಯಾದ ಒಂದು ದೇಶ. ಉತ್ತರಕ್ಕೆ ಲೆಬನನ್, ಪೂರ್ವಕ್ಕೆ ಸಿರಿಯ ಮತ್ತು ಜಾರ್ಡನ್, ನೈರುತ್ಯಕ್ಕೆ ಸಂಯುಕ್ತ ಅರಬ್ ಗಣರಾಜ್ಯ ಈಜಿಪ್ಟ್ ದೇಶಗಳೊಂದಿಗೆ ಗಡಿಯನ್ನು ಇಸ್ರೇಲ್ ಹೊಂದಿದೆ. ಪ್ಯಾಲೆಸ್ತೈನ್ ರಾಷ್ಟ್ರೀಯ ಪ್ರಾಧಿಕಾರ ಆಡಳಿತ ನಡೆಸುವ ಪಶ್ಚಿಮ ದಂಡೆ ಮತ್ತು ಗಾಜಾ ಪಟ್ಟಿ ಕೂಡ ಪಕ್ಕದಲ್ಲಿ ಇವೆ. ಇದು ಪ್ರಪಂಚದ ಏಕೈಕ ಯಹೂದಿ ರಾಷ್ಟ್ರ.

ಇಸ್ರೇಲ್ ಬೈಬಲಿನ ಕಾಲದಲ್ಲಿ ಯೆಹೂದಿ ಜನಸಮುದಾಯದ ಹೆಸರಾಗಿದ್ದು ಮುಂದೆ ಹೀಬ್ರೂ ರಾಜ್ಯಕ್ಕೂ ಇದೇ ಅಂಕಿತವಾಯಿತು.

ಈ ಗಣರಾಜ್ಯವು 1948ರ ಮೇ 15ರಂದು ಅಸ್ತಿತ್ವಕ್ಕೆ ಬಂತು. . 1948ರ ವರೆಗೆ ಬ್ರಿಟಿಷ್ ರಕ್ಷಿತ ಪ್ರದೇಶವಾಗಿದ್ದ ಪ್ಯಾಲಿಸ್ಟೈನಿನ ಬಹುಭಾಗವೀಗ ಇಸ್ರೇಲಿನ ಭೂಭಾಗ. ವಿಸ್ತೀರ್ಣ 7,999 ಚ. ಮೈ. 1961ರ ಜನಗಣತಿಯ ಪ್ರಕಾರ ಪ್ರಜಾಸಂಖ್ಯೆ 21,79,491 ; ಇವರಲ್ಲಿ 19,32,357 ಜನ ಯೆಹೂದ್ಯರು ; 1,70,830 ಮಂದಿ ಮುಸ್ಲಿಮರು ; 50,543 ಕ್ರೈಸ್ತರು ; 24,282 ಮಂದಿ ಡ್ರೂಸ್ ಜನರು. ರಾಜಧಾನಿ ಜೆರೂಸಲೆಂ.

ಏಷ್ಯಾ

ಏಷ್ಯಾ ಪ್ರಪಂಚದ ಅತಿ ದೊಡ್ಡ ಹಾಗೂ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಖಂಡವಾಗಿದೆ. ಭೂಗೋಳದ ಸುಮಾರು ೮.೭% ಪ್ರದೇಶವನ್ನು ಈ ಖಂಡ ಆವರಿಸಿದೆ ಮತ್ತು ಪ್ರಪಂಚದ ಸುಮಾರು ೬೦% ಜನಸಂಖ್ಯೆಯನ್ನು ಹೊಂದಿದೆ.

ಪಾರಂಪರಿಕವಾಗಿ ಏಷ್ಯಾದ ಪಶ್ಚಿಮದ ಪರಿಮಿತಿಯು ಸುಯೆಜ್ ಕಾಲುವೆ, ಯೂರಲ್ ಪರ್ವತ ಶ್ರೇಣಿಯೆಂದು ಹಾಗು ಉತ್ತರ ಪರಿಮಿತಿಯು ಕಾವ್ಕಸಸ್ ಪರ್ವತ ಶ್ರೇಣಿ ಹಾಗು ಕ್ಯಾಸ್ಪಿಯನ್ ಸಮುದ್ರ ಮತ್ತು ಕಪ್ಪು ಸಮುದ್ರ(ಬ್ಲ್ಯಕ್ ಸೀ)ಗಳೆಂದು ಪರಿಗಣಿಸಲ್ಪಡುತ್ತದೆ.

ಸಂಯುಕ್ತ ರಾಷ್ಟ್ರ ಸಂಸ್ಥಯು ಏಷ್ಯಾ ಖಂಡವನ್ನು ಈ ಪ್ರಕಾರ ವಿಭಜಿಸುತ್ತದೆ.

ಪೂರ್ವ ಏಷ್ಯಾ

ಆಗ್ನೇಯ ಏಷ್ಯಾ

ದಕ್ಷಿಣ ಏಷ್ಯಾ

ಮಧ್ಯ ಏಷ್ಯಾ

ಉತ್ತರ ಏಷ್ಯಾ

ಪಶ್ಚಿಮ ಏಷ್ಯಾ

ಕನ್ನಡ

ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ. ೨೦೧೧ರ ಜನಗಣತಿಯ ಪ್ರಕಾರ ಜಗತ್ತಿನಲ್ಲಿ ೬.೪ ಕೋಟಿ ಜನಗಳು ಕನ್ನಡ ಮಾತನಾಡುತ್ತಾರೆ ಎಂದು ತಿಳಿದುಬಂದಿದೆ. ಇವರಲ್ಲಿ ೫.೫ ಕೋಟಿ ಜನಗಳ ಮಾತೃಭಾಷೆ ಕನ್ನಡವಾಗಿದೆ.

ಬ್ರಾಹ್ಮಿ ಲಿಪಿಯಿಂದ ರೂಪುಗೊಂಡ ಕನ್ನಡ ಲಿಪಿಯನ್ನು ಉಪಯೋಗಿಸಿ ಕನ್ನಡ ಭಾಷೆಯನ್ನು ಬರೆಯಲಾಗುತ್ತದೆ. ಕನ್ನಡ ಬರಹದ ಮಾದರಿಗಳಿಗೆ ಸಾವಿರದ ಐನೂರು ವರುಷಗಳ ಚರಿತ್ರೆಯಿದೆ. ಕ್ರಿ.ಶ. ಆರನೆಯ ಶತಮಾನದ ಪಶ್ಚಿಮ ಗಂಗ ಸಾಮ್ರಾಜ್ಯದ ಕಾಲದಲ್ಲಿ ಮತ್ತು ಒಂಬತ್ತನೆಯ ಶತಮಾನದ ರಾಷ್ಟ್ರಕೂಟ ಸಾಮ್ರಾಜ್ಯದ ಕಾಲದಲ್ಲಿ ಹಳಗನ್ನಡ ಸಾಹಿತ್ಯ ಅತ್ಯಂತ ಹೆಚ್ಚಿನ ರಾಜಾಶ್ರಯ ಪಡೆಯಿತು. ಅದಲ್ಲದೆ ಸಾವಿರ ವರುಷಗಳ ಸಾಹಿತ್ಯ ಪರಂಪರೆ ಕನ್ನಡಕ್ಕಿದೆ.ವಿನೋಬಾ ಭಾವೆ ಕನ್ನಡ ಲಿಪಿಯನ್ನು ಲಿಪಿಗಳ ರಾಣಿಯೆಂದು ಹೊಗಳಿದ್ದಾರೆ.

ಕರ್ನಾಟಕ

{{#if:ಕನ್ನಡ|

ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಕರ್ನಾಟಕವು ಅತಿ ದೊಡ್ಡ ರಾಜ್ಯ ಹಾಗೂ ದೇಶದ ಆರನೇ ದೊಡ್ಡ ರಾಜ್ಯ. ೧೯೭೩ ಕ್ಕೆ ಮೊದಲು ಕರ್ನಾಟಕದ ಹೆಸರು ಮೈಸೂರು ರಾಜ್ಯ ಎಂದಿತ್ತು.. ಇದಕ್ಕೆ ಕಾರಣ ಕರ್ನಾಟಕದ ಮೊದಲ ಸೃಷ್ಟಿ ಮೈಸೂರು ಸಂಸ್ಥಾನವನ್ನು ಆಧರಿಸಿದ್ದು (೧೯೫೦ ರಲ್ಲಿ). ೧೯೫೬ ರಲ್ಲಿ ಸುತ್ತ-ಮುತ್ತಲ ರಾಜ್ಯಗಳ ಕನ್ನಡ ಪ್ರಧಾನ ಪ್ರದೇಶಗಳನ್ನು ಸೇರಿಸಲಾಯಿತು. "ಕರ್ನಾಟಕ" ಎಂಬ ಹೆಸರಿಗೆ ಅನೇಕ ವ್ಯುತ್ಪತ್ತಿಗಳು ಪ್ರತಿಪಾದಿಸಲ್ಪಟ್ಟಿವೆ. ಎಲ್ಲಕ್ಕಿಂತ ಹೆಚ್ಚಾಗಿ ಒಪ್ಪಲ್ಪಟ್ಟಿರುವ ವ್ಯುತ್ಪತ್ತಿ ಎಂದರೆ ಕರ್ನಾಟಕ ಎಂಬುದು "ಕರು+ನಾಡು" ಎಂಬುದರಿಂದ ವ್ಯುತ್ಪತ್ತಿಯನ್ನು ಪಡೆದಿದೆ. ಕರು ನಾಡು ಎಂದರೆ ಕಪ್ಪು ಮಣ್ಣಿನ ನಾಡು, "ಎತ್ತರದ ಪ್ರದೇಶ" ಎಂದು ಅರ್ಥ. ಕರ್ನಾಟಕ ರಾಜ್ಯದ ಸಮುದ್ರ ಮಟ್ಟದಿಂದ ಸರಾಸರಿ ಎತ್ತರ ೧೫೦೦ ಅಡಿ ಇದ್ದು ಇದು ಭಾರತದಲ್ಲಿ ಅತಿ ಹೆಚ್ಚಿನ ಸರಾಸರಿ ಎತ್ತರವುಳ್ಳ ರಾಜ್ಯಗಳಲ್ಲಿ ಒಂದು.ಸಮುದ್ರದಿಂದ, ವಾಯವ್ಯದಲ್ಲಿ ಗೋವದಿಂದ, ಉತ್ತರದಲ್ಲಿ ಮಹಾರಾಷ್ಟ್ರದಿಂದ, ಪೂರ್ವದಲ್ಲಿ ತೆಲಂಗಾಣ ಮತ್ತು ಆಂಧ್ರ ಪ್ರದೇಶದಿಂದ, ಆಗ್ನೇಯದಲ್ಲಿ ತಮಿಳುನಾಡಿ ನಿಂದ, ನೈಋತ್ಯದಲ್ಲಿ ಕೇರಳದಿಂದ ಸುತ್ತುವರಿಯಲ್ಪಟ್ಟಿದೆ. ೨೦೦೧ ರ ಜನಗಣತಿಯಂತೆ, ೫ ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಹತ್ತು ಭಾರತೀಯ ರಾಜ್ಯಗಳಲ್ಲಿ ಕರ್ನಾಟಕವೂ ಒಂದು.

ಕರ್ನಾಟಕದ ರಾಜಧಾನಿಯಾದ ಬೆಂಗಳೂರು ಮಾತ್ರ 1.30 ಕೋಟಿಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ ನಗರ. ಇತರ ಪ್ರಮುಖ ನಗರಗಳೆಂದರೆ ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ದಾವಣಗೆರೆ, ಬಳ್ಳಾರಿ, ಕಲಬುರಗಿ, ವಿಜಯಪುರ ಮತ್ತು ಬೆಳಗಾವಿ. ಪೂರ್ವ ಶಿಲಾಯುಗದಷ್ಟು ಪ್ರಾಚೀನತೆಯಿರುವ ಕರ್ನಾಟಕವು ಭಾರತದ ಅನೇಕ ಪ್ರಬಲ ಸಾಮ್ರಾಜ್ಯಗಳಿಗೆ ನೆಲೆಬೀಡಾಗಿದೆ.

ಈ ಸಾಮ್ರಾಜ್ಯಗಳಿಂದ ಆಶ್ರಯ ಪಡೆದಿರುವ ಅನೇಕ ತತ್ವಜ್ಞಾನಿಗಳು ಮತ್ತು ಕವಿಗಳಿಂದ ಆರಂಭಿಸಲ್ಪಟ್ಟಿರುವ ಸಾಮಾಜಿಕ, ಧಾರ್ಮಿಕ ಹಾಗು ಸಾಹಿತ್ಯಕ ಚಳವಳಿಗಳು ಇಂದಿನವರೆಗೂ ನಡೆದುಕೊಂಡು ಬಂದಿವೆ.ಕನ್ನಡ ಭಾಷೆಯ ಸಾಹಿತಿಗಳು ಭಾರತದಲ್ಲಿ ಅತಿ ಹೆಚ್ಚು (ಹಿಂದಿ ಭಾಷೆಯಲ್ಲಿ ಬಿಟ್ಟು) ಜ್ಞಾನಪೀಠ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕವು ಭಾರತದ ಶಾಸ್ತ್ರೀಯ ಸಂಗೀತ ಪರಂಪರೆಗಳಾದ ಕರ್ನಾಟಕ ಸಂಗೀತ ಶೈಲಿಗೆ ಹಾಗು ಹಿಂದೂಸ್ಥಾನಿ ಸಂಗೀತ ಶೈಲಿಗೆ ಮಹತ್ತರವಾದ ಕೊಡುಗೆ ನೀಡಿದೆ.

ಕೃಷ್ಣಾ ನದಿ

ಕೃಷ್ಣಾ ನದಿ ದಕ್ಷಿಣ ಭಾರತದ ಎರಡನೆಯ ದೊಡ್ಡ ನದಿಯಾಗಿದೆ. ಈ ನದಿ ಮಹಾರಾಷ್ಟ್ರದ ಪಶ್ಚಿಮ ಘಟ್ಟದ ಮಹಾದೇವ ಪರ್ವತ ಶ್ರೇಣಿಯಲ್ಲಿ ಮಹಾಬಲೇಶ್ವರ‍ದ ಹತ್ತಿರ ಸಮುದ್ರ ಮಟ್ಟಕ್ಕಿಂತ ೧೩೩೮ ಮೀಟರ ಎತ್ತರದಲ್ಲಿ ಉಗಮವಾಗಿ ಸುಮಾರು ೧೩೯೨ ಕಿ.ಮಿ.ಗಳಷ್ಟು ಹರಿದು ಆಂಧ್ರಪ್ರದೇಶ‍ದ ಹಂಸಲಾದೀವಿಯಲ್ಲಿ ಬಂಗಾಳ ಕೊಲ್ಲಿ ‍ ಯನ್ನು ಸೇರುತ್ತದೆ. ಕೃಷ್ಣಾ ನದಿ ಮಹಾರಾಷ್ಟ್ರ,ಕರ್ನಾಟಕ, ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಪ್ರವಹಿಸುತ್ತದೆ. ಕರ್ನಾಟಕ ರಾಜ್ಯದಲ್ಲಿ ಇದು ಸುಮಾರು ೪೮೩ ಕಿ.ಮಿ.ಹರಿಯುತ್ತದೆ.ಇದರ ಮುಖ್ಯವಾದ ಉಪನದಿಗಳೆಂದರೆ ತುಂಗಭದ್ರಾ , ಕೊಯ್ನಾ, ಭೀಮಾ , ಮಲಪ್ರಭಾ ,ಮತ್ತು ಘಟಪ್ರಭಾ.

ಕೊಲ್ಕತ್ತ

ಕೊಲ್ಕತ್ತ ಪಶ್ಚಿಮ ಬಂಗಾಳ ರಾಜ್ಯದ ರಾಜಧಾನಿ , ಭಾರತದ ಪ್ರಧಾನ ನಗರ, ಮಹಾವಾಣಿಜ್ಯಕೇಂದ್ರ, ಸಂಸ್ಕೃತಿ ರಂಗ. . ೧೯೧೧ಕ್ಕೆ ಮೊದಲು ಬ್ರಿಟಿಷರ ಆಳ್ವಿಕೆಯಲ್ಲಿ 1773ರಿಂದ 1912ರ ವರೆಗೆ-ಭಾರತಕ್ಕೂ 1947ರ ವರೆಗೆ ಬಂಗಾಳಕ್ಕೂ ರಾಜಧಾನಿಯಾಗಿತ್ತು. ಕಲ್ಕತ್ತ ಇದರ ಹಿಂದಿನ ಹೆಸರು

ಜರ್ಮನಿ

ಜರ್ಮನಿ (ಜರ್ಮನ್: ದೊಯಿಚ್ಲಂತ್), ಅಧಿಕೃತವಾಗಿ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ, ಕೇಂದ್ರ-ಪಶ್ಚಿಮ ಯುರೋಪಿನಲ್ಲಿ ಫೆಡರಲ್ ಸಂಸದೀಯ ಗಣತಂತ್ರ ದೇಶವಾಗಿದೆ.ಇದು 16 ಘಟಕ ರಾಜ್ಯಗಳನ್ನು ಒಳಗೊಂಡಿದೆ. 3,57,021 ಚದರ ಕಿಲೋಮೀಟರ್ (1,37,847 ಚದರ ಮೈಲಿ) ನಷ್ಟು ಪ್ರದೇಶವನ್ನು ಒಳಗೊಂಡಿದೆ ಮತ್ತು ಹೆಚ್ಚಾಗಿ ಸಮಶೀತೋಷ್ಣ ಕಾಲೋಚಿತ ಹವಾಮಾನವನ್ನು ಹೊಂದಿದೆ. 82 ದಶಲಕ್ಷ ನಿವಾಸಿಗಳನ್ನು ಹೊಂದಿರುವ ಜರ್ಮನಿ ಯುರೋಪಿನ ಅತ್ಯಂತ ಜನನಿಬಿಡ ಸದಸ್ಯ ದೇಶವಾಗಿದೆ. ಅಮೇರಿಕಾದ ನಂತರ ಇದು ವಿಶ್ವದ ಎರಡನೇ ಅತ್ಯಂತ ಜನಪ್ರಿಯ ವಲಸೆ ತಾಣವಾಗಿದೆ.ಜರ್ಮನಿಯ ರಾಜಧಾನಿ ಮತ್ತು ದೊಡ್ಡ ಮಹಾನಗರ ಬರ್ಲಿನ್. ಇತರೆ ಪ್ರಮುಖ ನಗರಗಳು ಹ್ಯಾಂಬರ್ಗ್, ಮ್ಯೂನಿಚ್, ಕಲೋನ್, ಫ್ರಾಂಕ್ಫರ್ಟ್, ಸ್ಟಟ್ಗಾರ್ಟ್ ಮತ್ತು ಡಸೆಲ್ಡಾರ್ಫ್ ಸೇರಿವೆ.ಯುರೋಪ್ ಖಂಡದ ಕೇಂದ್ರದಲ್ಲಿರುವ ಈ ರಾಷ್ಟ್ರವು ವಿಶ್ವದ ಅಗ್ರ ಔದ್ಯೋಗಿಕ ದೇಶಗಳಲ್ಲಿ ಒಂದು.

ದಕ್ಷಿಣ ಕನ್ನಡ

{{#if:|

ದಕ್ಷಿಣ ಕನ್ನಡ (ತುಳು: ದಕ್ಷಿಣ ಕನ್ನಡ) ಕರ್ನಾಟಕ ರಾಜ್ಯದ ಒಂದು ಕರಾವಳಿ ಜಿಲ್ಲೆ. ಈ ಜಿಲ್ಲೆಯ ಕೇಂದ್ರಸ್ಥಳ ಹಾಗೂ ಮುಖ್ಯ ನಗರ ಮಂಗಳೂರು. ದಕ್ಷಿಣ ಕನ್ನಡ ಜಿಲ್ಲೆಯ ಜನಸಂಖ್ಯೆ ೨೦,೮೯,೬೪೯ ಆಗಿದ್ದು ಇದರಲ್ಲಿ ಪುರುಷರು ೧೦,೩೪,೭೧೪ ಹಾಗೂ ಮಹಿಳೆಯರು ೧೦,೫೪,೯೩೫ (೨೦೧೧ರ ಜನಗಣತಿಯಂತೆ ). . ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ತಾಲೂಕುಗಳಿವೆ: ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ.

ಕೆಲವು ವರ್ಷಗಳ ಹಿಂದೆ ಇನ್ನೂ ಮೂರು ತಾಲೂಕುಗಳು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ್ದವು: ಉಡುಪಿ, ಕುಂದಾಪುರ ಮತ್ತು ಕಾರ್ಕಳ. ಆಗಸ್ಟ್ ೧೯೯೭ ರಲ್ಲಿ ಈ ತಾಲೂಕುಗಳನ್ನು ಉಡುಪಿ ಜಿಲ್ಲೆಯ ಭಾಗವಾಗಿ ಘೋಷಿಸಲಾಯಿತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ತುಳುನಾಡು ಎಂದೂ ಕರೆಯಲಾಗುತ್ತದೆ. ತುಳು ಭಾಷೆ ಇಲ್ಲಿನ ಪ್ರಮುಖ ಭಾಷೆಯಾದ್ದರಿಂದ ಈ ಹೆಸರು ಬಂದಿದೆ.

ಪಶ್ಚಿಮ ಘಟ್ಟಗಳು

ಪಶ್ಚಿಮ ಘಟ್ಟಗಳು ಭಾರತ ಜಂಬೂದ್ವೀಪದ ಪಶ್ಚಿಮ ಭಾಗದಲ್ಲಿರುವ ಒಂದು ಪರ್ವತ ಶ್ರೇಣಿ. ಈ ಶ್ರೇಣಿಗೆ ಸಹ್ಯಾದ್ರಿ ಪರ್ವತಗಳು ಎಂಬ ಹೆಸರು ಸಹ ಇದೆ. ದಖ್ಖನ್ ಪೀಠಭೂಮಿಯ ಪಶ್ಚಿಮದ ಅಂಚಿನ ಉದ್ದಕ್ಕೂ ಹಬ್ಬಿರುವ ಪಶ್ಚಿಮ ಘಟ್ಟಗಳು ಪೀಠಭೂಮಿಯನ್ನು ಅರಬ್ಬೀ ಸಮುದ್ರದ ಕಿರಿದಾದ ಕರಾವಳಿ ಪ್ರದೇಶದಿಂದ ಬೇರ್ಪಡಿಸುತ್ತವೆ. ಮಹಾರಾಷ್ಟ್ರ-ಗುಜರಾತ್‌ಗಳ ಗಡಿಪ್ರದೇಶದಲ್ಲಿ ತಾಪ್ತಿ ನದಿಯ ದಕ್ಷಿಣದಲ್ಲಿ ಆರಂಭವಾಗುವ ಈ ಶ್ರೇಣಿಯು ದಕ್ಷಿಣಾಭಿಮುಖವಾಗಿ ಹಬ್ಬಿ ಕನ್ಯಾಕುಮಾರಿಯವರೆಗೆ ಇರುವುದು. ಒಟ್ಟು ಸುಮಾರು ೧೬೦೦ ಕಿ.ಮೀ. ಉದ್ದವಿರುವ ಪಶ್ಚಿಮ ಘಟ್ಟಗಳು ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಹಬ್ಬಿವೆ. ಒಟ್ಟು ಶ್ರೇಣಿಯ ಅರ್ಧಕ್ಕಿಂತ ಹೆಚ್ಚು ಭಾಗವು ಕರ್ಣಾಟಕದಲ್ಲಿಯೇ ಇದೆ.

ಪಶ್ಚಿಮ ಘಟ್ಟಗಳು ಒಟ್ಟು ೬೦೦೦೦ ಚದರ ಕಿ.ಮೀ. ಪ್ರದೇಶವನ್ನು ಆವರಿಸಿದ್ದು ಅತಿ ಸಂಕೀರ್ಣ ನದಿ ವ್ಯವಸ್ಥೆಗೆ ಮೂಲವಾಗಿವೆ. ಇಲ್ಲಿಂದ ಹೊರಡುವ ನದಿಗಳು ಭಾರತದ ಒಟ್ಟು ಜಲಾನಯನ ಪ್ರದೇಶದ ೪೦% ಭಾಗವನ್ನು ಆವರಿಸಿವೆ. ಪಶ್ಚಿಮ ಘಟ್ಟಗಳ ಸರಾಸರಿ ಎತ್ತರ ಸುಮಾರು ೧೨೦೦ ಮೀಟರ್. ಈ ಪ್ರದೇಶವು ವಿಶ್ವದ ಅತ್ಯಂತ ಸಕ್ರಿಯ ಜೀವವೈವಿಧ್ಯದ ನೆಲೆಗಳಲ್ಲಿ ಒಂದಾಗಿದ್ದು ೫೦೦೦ಕ್ಕೂ ಹೆಚ್ಚಿನ ತಳಿಯ ಗಿಡಮರಗಳು, ೧೩೯ ಬಗೆಯ ಸಸ್ತನಿಗಳು, ೫೦೮ ಪ್ರಭೇದದ ಪಕ್ಷಿಗಳು ಮತ್ತು ೧೭೯ ಪ್ರಕಾರದ ಉಭಯವಾಸಿಗಳು ನೆಲೆಯಾಗಿವೆ. ವಿಶ್ವದಲ್ಲಿ ಅಳಿವಿನಂಚಿನಲ್ಲಿರುವ ಜೀವತಳಿಗಳ ಪೈಕಿ ೩೨೫ ತಳಿಗಳ ಜೀವಿಗಳು ಪಶ್ಚಿಮ ಘಟ್ಟಗಳಲ್ಲಿ ನೆಲೆಸಿವೆ.

ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳ ಪೂರ್ವ ಭಾರತದ ರಾಜ್ಯಗಳಲ್ಲೊಂದು.

ಪಶ್ಚಿಮ ಬಂಗಾಲ - ಭಾರತ ಗಣರಾಜ್ಯದ ಒಂದು ರಾಜ್ಯ. ದೇಶದ ಈಶಾನ್ಯ ಭಾಗದಲ್ಲಿ, ಉ,ಅ. 21( 38'-27(10' ಮತ್ತು ಪೂ. ರೇ. 85(50'-89(50' ನಡುವೆ ಇದೆ. ಕರ್ಕಾಟಕದ ಸಂಕ್ರಾಂತಿ ವೃತ್ತ ಈ ರಾಜ್ಯದ ನಡುವೆ ಹಾದುಹೋಗುತ್ತದೆ. ರಾಜ್ಯದ ಉತ್ತರದಲ್ಲಿ ಸಿಕ್ಕಿಂ ಮತ್ತು ಭೂತಾನ್, ದಕ್ಷಿಣದಲ್ಲಿ ಬಂಗಾಲ ಕೊಲ್ಲಿ, ಪೂರ್ವದಲ್ಲಿ ಅಸ್ಸಾಂ ಮತ್ತು ಬಾಂಗ್ಲಾ ದೇಶ, ಪಶ್ಚಿಮದಲ್ಲಿ ಒರಿಸ್ಸ, ಬಿಹಾರ ಮತ್ತು ನೇಪಾಲ ಇವೆ ಇದರ ವಿಸ್ತೀರ್ಣ 88,752 ಚದರ ಕಿಮೀ. ಜನ ಸಂಖ್ಯೆ 8,02,21,171 (2001). ಜನಸಂಖ್ಯೆಯಲ್ಲಿ ಈ ರಾಜ್ಯದ್ದು ಭಾರತದ ರಾಜ್ಯಗಳ ಪೈಕಿ ನಾಲ್ಕನೆಯ ಸ್ಥಾನ, ರಾಜಧಾನಿ ಕೊಲ್ಕತ್ತ.

1947 ರಲ್ಲಿ ಭಾರತ ವಿಭಜನೆಯಾದಾಗ ಆಗಿನ ಬಂಗಾಲ ಪ್ರಾಂತ್ಯವನ್ನು ಪೂರ್ವ ಮತ್ತು ಪಶ್ಚಿಮ ಬಂಗಾಲಗಳಾಗಿ ವಿಂಗಡಿಸಲಾಯಿತು. ಪೂರ್ವ ಬಂಗಾಲಪೂರ್ವ ಪಾಕಿಸ್ತಾನವಾಯಿತು. ಪಶ್ಚಿಮ ಬಂಗಾಲ ಭಾರತದಲ್ಲಿ ಉಳಿಯಿತು. ಈ ರಾಜ್ಯವನ್ನು ವಿಚಿತ್ರವಾದ ಆಕಾರ. ಇದರ ಅಗಲ ಒಂದೆಡೆಯಲ್ಲಿ 320 ಕಿಮೀ. ಇದ್ದರೆ ಇನ್ನೊಂದಡೆಯಲ್ಲಿ ಕೇವಲ 16 ಕಿಮೀ. ಭಾರತದ ರಕ್ಷಣಾ ದೃಷ್ಟಿಯಿಂದ ಇದರದು ಆಯಕಟ್ಟಿನ ಸ್ಥಾನ. ಬಾಂಗ್ಲಾದೇಶದೊಂದಿಗೆ ಸುಮಾರು 2,160 ಕಿಮೀ. ಉದ್ದದ ಗಡಿ ಇದಕ್ಕಿದೆ.

ಪಿನ್ ಕೋಡ್

ಪಿನ್ ಕೋಡ್ - ಇಂಗ್ಲೀಷಿನ ಪೋಸ್ಟಲ್ ಇಂಡೆಕ್ಸ್ ನಂಬರ್ ( Postal Index Number) ಎಂಬುದರ ಸಂಕ್ಷಿಪ್ತರೂಪವಾಗಿದೆ.

ಅದು ಅಂಚೆ ಕಛೇರಿಗಳಿಗೆ ಭಾರತೀಯ ಅಂಚೆ ಇಲಾಖೆಯ ಆಡಳಿತವು ಬಳಸುವ ಸಂಖ್ಯಾ ವ್ಯವಸ್ಥೆ ಆಗಿದೆ.

ಅದು ಆರು ಅಂಕೆಗಳಷ್ಟು ಉದ್ದವಾಗಿದೆ. ಈ ವ್ಯವಸ್ಥೆಯನ್ನು ೧೫ ಆಗಸ್ಟ್ ೧೯೭೨ ರಂದು ಜಾರಿಗೆ ತರಲಾಯಿತು.

ಎಂಟು ಪ್ರಾದೇಶಿಕ ವಲಯಗಳು ಮತ್ತು ಭಾರತೀಯ ಸೇನೆಗಾಗಿಯೇ ಒಂದು ಸಕ್ರಿಯವಾದ ವಲಯ ಸೇರಿದಂತೆ ಭಾರತದಲ್ಲಿ ಒಂಬತ್ತು ಪಿನ್ ಕೋಡ್ ವಲಯಗಳು ಇವೆ. ಪಿನ್ ಕೋಡ್ ಮೊದಲ ಅಂಕಿಯು "ವಲಯ"ವನ್ನೂ , ಎರಡನೇ ಅಂಕಿಯ "ಉಪವಲಯ"ವನ್ನೂ , ಮೂರನೇ ಅಂಕಿಯ ಪ್ರದೇಶದಲ್ಲಿ ಅಂಚೆ-ವಿಂಗಡಣೆಯ "ಜಿಲ್ಲೆ"ಯನ್ನೂ ಸೂಚಿಸುತ್ತವೆ. ಕೊನೆಯ ಮೂರು ಅಂಕೆಗಳ ಗುಂಪು "ಅಂಚೆ ಕಛೇರಿ"ಯನ್ನು ನಿರ್ದೇಶಿಸುತ್ತದೆ.

ಒಂಬತ್ತು ಪಿನ್ ಕೋಡ್ ವಲಯಗಳು ಕೆಳಗಿನಂತೆ ಭಾರತೀಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸೂಚಿಸುತ್ತವೆ.

1 - ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ (ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಸೇರಿದಂತೆ), ಚಂಡೀಗಡ

2 - ಉತ್ತರ ಪ್ರದೇಶ, ಉತ್ತರಾಖಂಡ

3 - ರಾಜಸ್ಥಾನ, ಗುಜರಾತ್, ದಮನ್ ಮತ್ತು ದಿಯು, ದಾದ್ರಾ ಮತ್ತು ನಗರ್ ಹವೇಲಿ

4 - ಗೋವಾ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಛತ್ತೀಸ್‌ಘಡ್

5 - ಆಂಧ್ರ ಪ್ರದೇಶ, ಕರ್ನಾಟಕ

6 - ತಮಿಳುನಾಡು, ಕೇರಳ, ಪುದುಚೆರಿ, ಲಕ್ಷದ್ವೀಪ

7 - ಒಡಿಶಾ, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಝೋರಂ, ತ್ರಿಪುರ, ಮೇಘಾಲಯ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅಸ್ಸಾಂ

8 - ಬಿಹಾರ, ಜಾರ್ಖಂಡ್

9 - ಆರ್ಮಿ ಪೋಸ್ಟ್ ಆಫೀಸ್ (APO) ಮತ್ತು ಫೀಲ್ಡ್ ಪೋಸ್ಟ್ ಆಫೀಸ್ (FPO)

ಫ್ರಾನ್ಸ್

ಫ್ರಾನ್ಸ್ ಪಶ್ಚಿಮ ಯೂರೋಪಿನಲ್ಲಿರುವ ದೇಶ.ಇದು ಯುರೋಪ್ ಖಂಡದ ಮೂರನೆಯ ಅತ್ಯಂತ ದೊಡ್ಡ ದೇಶ.ಇದು ಯುರೋಪಿನ ಒಂದು ಬಲಾಡ್ಯ ದೇಶವಾಗಿದೆ.ಇದು ಪ್ರಪಂಚದ ಹಲವೆಡೆ ತನ್ನ ವಸಾಹತುಗಳನ್ನು ಸ್ಥಾಪಿಸಿ ಹತ್ತಂಭತ್ತನೆಯ ಶತಮಾನ ಮತ್ತು ೨೦ನೆಯ ಶತಮಾನದ ಮೊದಲ ಭಾಗದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿತ್ತು.ಸಾಂಸ್ಕೃತಿಕವಾಗಿ ಹಲವಾರು ಚಿಂತಕರು, ಕಲಾವಿದರು,ವಿಜ್ಞಾನಿಗಳನ್ನು ಹೊಂದಿ ಈಗಲೂ ಪ್ರಪಂಚದ ಗಮನಸೆಳೆಯುತ್ತಿದೆ. ಪ್ರಪಂಚದಲ್ಲಿ ನಾಲ್ಕನೆಯದಾಗಿ ಅತೀ ಹೆಚ್ಚು ಪಾರಂಪರಿಕ ತಾಣಗಳಿದ್ದು, ವರ್ಷಕ್ಕೆ ೮ ಕೊಟಿಗಿಂತಲೂ ಹೆಚ್ಚು ಪ್ರವಾಸಿಗಳನ್ನು ಸೆಳೆಯುತ್ತಿದೆ.

ಫ್ರಾನ್ಸ್ ಅಧಿಕೃತವಾಗಿ ರೇಪಬ್ಲೀಕ್ ಫ್ರಾನ್ಸೇಸ್. ಪಶ್ಚಿಮ ಯುರೋಪಿನ ಗಣರಾಜ್ಯ. ಪಶ್ಚಿಮ ಯುರೋಪಿನಲ್ಲಿ ಅಟ್ಲಾಂಟಿಕ್ ಮತ್ತು ಮೆಡಿಟರೇನಿಯಾನ್ ಸಮುದ್ರಗಳ ನಡುವೆ ಉ.ಅ. 42( 20(-51(5( ಮತ್ತು ಪ.ರೇ. 4( 42(-ಪೂ.ರೇ. 8(11( ನಡುವೆ ಹಬ್ಬಿದೆ. ಹೆಚ್ಚು ಕಡಿಮೆ ಷಟ್ಕೋನಾಕೃತಿಯಲ್ಲಿರುವ ಈ ದೇಶದ ಉತ್ತರದಲ್ಲಿ ಇಂಗ್ಲಿಷ್ ಕಡಲ್ಗಾಲುವೆ, ಬೆಲ್ಜಿಯಮ್ ಮತ್ತು ಲುಕ್ಸೆಂಬರ್ಗ್, ಪಶ್ಚಿಮದಲ್ಲಿ ಅಟ್ಲಾಂಟಿಕ್ ಸಾಗರ ಮತ್ತು ಬಿಸ್ಕೇಕೊಲ್ಲಿ, ದಕ್ಷಿಣದಲ್ಲಿ ಸ್ಪೇನ್ ಮತ್ತು ಮೆಡಿಟರೇನಿಯನ್ ಸಮುದ್ರ, ಪೂರ್ವದಲ್ಲಿ ಪಶ್ಚಿಮ ಜರ್ಮನಿ, ಸ್ವಿಟ್‍ಜóರ್‍ಲೆಂಡ್ ಮತ್ತು ಇಟಲಿ ಇವು ಇವೆ. ಫ್ರಾನ್ಸ್ ಉತ್ತರ ದಕ್ಷಿಣವಾಗಿ 950 ಕಿ.ಮೀ. ಪೂರ್ವ ಪಶ್ವಿಮವಾಗಿ 974 ಕಿ.ಮೀ ಇದ್ದು ಒಟ್ಟು ವಿಸ್ತೀರ್ಣ 551,500 ಚ.ಕಿ.ಮೀ ಇದೆ. 3700 ಕಿ.ಮೀ ಉದ್ದ ಸಮುದ್ರ ತೀರ ಹೊಂದಿದೆ. 1990ರಲ್ಲಿ ಇಲ್ಲಿನ ಜನಸಂಖ್ಯೆ 56,634,299 ಇದ್ದು 2000ದ ಗಣತಿಯಂತೆ 59024,000ವಾಗಿದೆ. ರಾಜಧಾನಿ ಪ್ಯಾರಿಸ್.

ಬಂಗಾಳಿ ಭಾಷೆ

ಬಂಗಾಳಿ ಅಥವಾ ಬಾಂಗ್ಲ ಇಂಡೊ-ಯೂರೋಪಿಯನ್ ಪಂಗಡಕ್ಕೆ ಸೇರಿದ ಭಾಷೆ.ಸಂಸ್ಕೃತ ಮತ್ತು ಪಾಳಿ ಭಾಷೆಗಳನ್ನು ಪೂರ್ವಜರನ್ನಾಗಿ ಹೊಂದಿರುವ ಈ ಭಾಷೆ, ಭಾರತದ ಪಶ್ಚಿಮ ಬಂಗಾಳದ ರಾಜ್ಯ ಭಾಷೆ ಮತ್ತು ಬಾಂಗ್ಲಾದೇಶದ ರಾಷ್ಟ್ರಭಾಷೆ. ಸುಮಾರು ೨೦.೭ ಕೋಟಿ ಜನ ಈ ಭಾಷೆ ಮಾತನಾಡುತ್ತಾರೆ.

ಬಂಗಾಳೀ ಭಾಷೆ - ಪಶ್ಚಿಮ ಬಂಗಾಳ ರಾಜ್ಯದ ಭಾಷೆ: ನೆರೆಯ ಬಾಂಗ್ಲದೇಶದಲ್ಲಿ ರಾಷ್ಟ್ರಭಾಷೆ: ಗಂಗಾನದಿ ಬಯಲಿನ ಉತ್ತರ ಮತ್ತು ಪೂರ್ವ ಭಾಗದಲ್ಲಿ ಹಬ್ಬಿರುವ ಬಂಗಾಳ ಪ್ರಾಂತ್ಯದ ಜನರ ಭಾಷೆ. ಇದು ಇಂಡೋ ಆರ್ಯನ್ ಭಾಷಾವರ್ಗದ ಮುಖ್ಯಭಾಷೆಗಳಲ್ಲಿ ಒಂದಾಗಿದ್ದು, ಮಾಗಧಿ ಅಪಭ್ರಂಶದ ಪೂರ್ವೀರೂಪದಿಂದ ವಿಕಾಸಗೊಂಡಿದೆ ಎಂದು ಭಾಷಾತಜ್ಞರ ಅಭಿಪ್ರಾಯ. ಭಾರತ, ಪಾಕಿಸ್ತಾನ, ಬಾಂಗ್ಲ ದೇಶಗಳಲ್ಲಿ ವಾಸಿಸುತ್ತಿರುವ ಸುಮಾರು 80,000,000 ಜನ ಈ ಭಾಷೆಯನ್ನಾಡುತ್ತಾರೆ.

ಬಂಗ ಎಂಬ ಪದಕ್ಕೆ ಆಲ್ ಪ್ರತ್ಯಯ ಸೇರುವುದರ ಮೂಲಕ ಬಂಗಾಲಿ (ಬಂಗಾಳಿ) ಪದ ರೂಪುಗೊಂಡಿದೆ. ಈ ಪದ ಭಾಷಾಸೂಚಕ, ಸ್ಥಳಸೂಚಕ, ಹಾಗು ಜನಸಮುದಾಯಸೂಚಕ ರೂಪವಾಗಿ ಬಂದಿವೆ. ಬಂಗಾಳೀ ಪದಕ್ಕೆ ಪರ್ಯಾಯವಾಗಿ ಗೌಡಿ, ಮಾಗಧಿ, ಗೊಲ್ಲ ಎಂದೂ ಕರೆಯುವರು.

779ರಲ್ಲಿ ರಚಿತವಾದ ಕುವಲಯಮಾಲಾ ಎಂಬ ಗ್ರಂಥದಲ್ಲಿ ಈ ಪದವನ್ನು ಭಾಷೆ ಎಂಬಂರ್ಥದಲ್ಲಿ ಮೊತ್ತಮೊದಲು ಬಳಸಲಾಗಿದೆ. ಬಂಗಾಳೀ ಭಾಷೆಯಲ್ಲಿ ಪ್ರಾಚೀನ ಬಂಗಾಳೀ (ಸುಮಾರು 950-1350). ಮಧ್ಯಕಾಲೀನ ಬಂಗಾಳಿ (ಸುಮಾರು 1350-1800) ಮತ್ತು ಆಧುನಿಕ ಬಂಗಾಳಿ (1800ರಿಂದ ಈಚೆಗೆ) ಎಂಬ ಮೂರು ಅವಸ್ಥಾಭೇದಗಳಿವೆ. ಮಧ್ಯಕಾಲೀನ ಬಂಗಾಳಿಯಲ್ಲಿ ಮೊದಲಿನದು ಮತ್ತು ಆಮೇಲಿನದು ಎಂಬ ಎರಡು ಸ್ತರಗಳನ್ನು ಗುರ್ತಿಸಬಹುದು. ಮೊದಲದರ ಕಾಲ 1350-1500ರ ತನಕ; ಆಮೇಲಿನದರ ಕಾಲ 1500-1800ರ ತನಕ. ಮೊದಲಿನ ಮಧ್ಯಕಾಲೀನ ಬಂಗಾಳಿಯಿಂದ ಆಮೇಲಿನ ಮಧ್ಯಕಾಲೀನ ಬಂಗಾಳಿಯನ್ನು ಪ್ರತ್ಯೇಕಿಸುವ ಪ್ರಧಾನ ಲಕ್ಷಣಗಳಿವು: 1. ನಾಮಪದಗಳ ಮತ್ತು ಸರ್ವನಾಮಗಳ ಬಹುವಚನಸೂಚಕ ವಿಭಕ್ತಿ ಪ್ರತ್ಯಯಗಳನ್ನು ನಿರ್ಮಿಸಿದುದು, 2. ನಿರ್ದಿಷ್ಟ ಕ್ರಿಯಾಪದಗಳಿಂದ ವಚನಸೂಚಕಗಳು ಮಾಯವಾದ್ದು ಮತ್ತು ಆಖ್ಯಾತ ಪ್ರತ್ಯಯವನ್ನು ಹಚ್ಚದೆ ಸಹಾಯಕ ಕ್ರಿಯಾಪದವನ್ನು ಕಾಲತ್ರಯದಲ್ಲಿ ನಡೆಸಿದ್ದು; ಮತ್ತು 3. ಅಧಿಕ ಸಂಖ್ಯೆಯ ಪಾರ್ಸಿಯನ್-ಅರಾಬಿಕ್ ಪದಗಳನ್ನು ಸೇರಿಸಿಕೊಂಡುದು. ಮಧ್ಯಕಾಲೀನ ಬಂಗಾಳಿಯಲ್ಲಿ ಉದ್ದಕ್ಕೂ ಪೂರ್ತಿ ಒಂದು ವಿಶಿಷ್ಟವಾದ ಕಾವ್ಯಭಾಷೆ ಅಥವಾ ಪ್ರಕ್ರಿಯಾಪದಗಳು ಬಳಕೆಯಾಗಿವೆ. ಈ ಭಾಷೆಯನ್ನು ಬ್ರಜಬುಲಿ ಎನ್ನುತ್ತಾರೆ. ಅವಹಟ್ಠ ಕಾವ್ಯಸಂಪ್ರದಾಯ ಇದಕ್ಕೆ ಅಧಾರ. ಈ ಭಾಷೆಗೆ ಅನಂತರ ಸಂಸ್ಕøತ ಪದಗಳ ಜೊತೆಗೆ ಪಾರ್ಸಿ (ಅರಾಬಿಕ್ ಮತ್ತು ಸ್ವಲ್ಪ ತುರ್ಕಿ ಸೇರಿ) ಪದಗಳೂ ಸೇರಿದವು. ಬ್ರಿಟಿಷರು ಬಂಗಾಳದ ಆಡಳಿತವನ್ನು ತಮ್ಮ ಕೈಗೆ ತೆಗೆದುಕೊಳ್ಳುವ ತನಕ ಎಂದರೆ 18ನೆಯ ಶತಮಾನದ ಮಧ್ಯಕಾಲದ ತನಕ ಪರ್ಷಿಯನ್ ಪದಗಳ ಸ್ವೀಕರಣ ನಡೆಯುತ್ತಿತ್ತು. ಆ ವೇಳೆಗೆ ಪರ್ಷಿಯನ್ (ಮತ್ತು ಅರಾಬಿಕ್) ಭಾಷೆಗಳ ಕೆಲವು ವಿಭಕ್ತಿ ಪ್ರತ್ಯಯಗಳ ಬಳಕೆಯೂ ನಡೆದಿತ್ತು ಮತ್ತು ದಸ್ತಾವೇಜಿನ ಗದ್ಯಶೈಲಿಯನ್ನು ರೂಪಿಸಿತ್ತು. ಅನಂತರದ ದಿನಗಳಲ್ಲಿ ಇಂಗ್ಲಿಷ್ ಭಾಷೆಯ ಜೊತೆಗೆ ಪೋರ್ಚುಗೀಸ್ ಭಾಷೆಯ ಅನೇಕ ಪದಗಳು ಬಂಗಾಳಿ ಭಾಷೆಗೆ ಸೇರಿದುವು. ಇಂಗ್ಲಿಷ್ ವಿದ್ಯಾಭ್ಯಾಸ ಹರಡುತ್ತ ಬಂದಂತೆ ಬಂಗಾಳಿ ಭಾಷೆಯ ಮೇಲೆ ಇಂಗ್ಲಿಷ್‍ಭಾಷಾ ಪ್ರಭಾವ ಅಧಿಕವಾಯಿತು. ಇದನ್ನು ಮುಖ್ಯವಾಗಿ ಎರಡು ರೀತಿ ಗುರುತಿಸಬಹುದು. 1. ಬಂಗಾಳಿಯಲ್ಲಿ ತಕ್ಕ ಸಮಾನಾರ್ಥಕವಾಗಲಿ, ಸಮೀಪಾರ್ಥಕವಾಗಲಿ ಇಲ್ಲದ ಪದಗಳ ಮತ್ತು ಈ ದೇಶಕ್ಕೆ ತಿಳಿಯುವ ವಸ್ತುಗಳನ್ನು ಕುರಿತು ಪದಗಳ ಸೇರುವಿಕೆ, 2. ಇಂಗ್ಲಿಷ್ ಭಾಷೆಯ ಮತ್ತು ಸಾಹಿತ್ಯದ ನೇರವಾದ ಪ್ರಭಾವವೆಂದೇ ಹೇಳಲಾಗದ ರೀತಿಯಲ್ಲಿ ಬಂಗಾಳಿ ಗದ್ಯಶೈಲಿಯೊಂದರ ಬೆಳೆವಣಿಗೆ.

ಭಾರತ

ಭಾರತ ಅಥವಾ ಇಂಡಿಯಾ ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶದ ಅಧಿಕೃತ ಹೆಸರು: ಭಾರತ ಗಣರಾಜ್ಯ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದೆ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (2018 ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.ಆಗ್ನೇಯದಲ್ಲಿ ಬಂಗಾಳ ಕೊಲ್ಲಿ,ದಕ್ಷಿಣದಲ್ಲಿ ಹಿಂದೂ ಮಹಾ ಸಾಗರ, ನೈಋತ್ಯದಲ್ಲಿ ಅರಬ್ಬಿ ಸಮುದ್ರಗಳಿಂದ ಸುತ್ತುವರಿದಿದ್ದು , ಪಶ್ಚಿಮದಲ್ಲಿ ಪಾಕಿಸ್ತಾನ, ಈಶಾನ್ಯದಲ್ಲಿ ಚೀನಾ,ನೇಪಾಳ,ಭೂತಾನ , ಪೂರ್ವದಲ್ಲಿ ಬರ್ಮಾ, ಬಾಂಗ್ಲಾದೇಶ ಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಕೊಳ್ಳುವ ಶಕ್ತಿಯ ಮೇರೆಗೆ, ಪ್ರಪಂಚದ ನಾಲ್ಕನೇ ಅತಿ ದೊಡ್ಡ ಆರ್ಥಿಕ ವ್ಯವಸ್ಥೆಯನ್ನು ಹೊಂದಿದೆ.

ಭಾರತ ದೇಶವು ಪ್ರಾಚೀನ ಸಿಂಧೂತಟದ ನಾಗರೀಕತೆಯ ತವರು ಮನೆಯಾಗಿದೆ. ಅನೇಕ ಐತಿಹಾಸಿಕ ವಾಣಿಜ್ಯ ಮಾರ್ಗಗಳು ಹಾಗೂ ಪ್ರಾಚೀನ ಸಾಮ್ರಾಜ್ಯಗಳು ಭಾರತ ದೇಶದಲ್ಲಿ ಉಗಮಿಸಿವೆ. ಪ್ರಪಂಚದ ನಾಲ್ಕು ಪ್ರಮುಖ ಧರ್ಮಗಳಾದ ಹಿಂದೂಧರ್ಮ, ಬೌದ್ಧ, ಜೈನ್ ಧರ್ಮ ಮತ್ತು ಸಿಖ್ ಧರ್ಮಗಳು ಭಾರತದಲ್ಲಿ ಆರಂಭವಾಗಿವೆ. ಝೋ ರಾಷ್ಟ್ರಿಯನಿಸಂ, ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ ಧರ್ಮ ಕ್ರಿ. ಶ 7 ನೇ ಸಹಸ್ರಮಾನದಲ್ಲಿ ಆಗಮಿಸಿ ಈ ಪ್ರದೇಶದ ಸಂಸ್ಕೃತಿಯನ್ನು ವೈವಿಧ್ಯಮಯವಾಗಿಸಿವೆ. 16ನೇ ಶತಮಾನದಲ್ಲಿ ಭಾರತ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪೆನಿಯಿಂದ ಆಕ್ರಮಣಗೊಂಡು ಇಂಗ್ಲೇಂಡಿನ ಆಡಳಿತಕ್ಕೊಳಪಟ್ಟಿತು. ೧೯ನೇ ಶತಮಾನದ ಮಧ್ಯದಲ್ಲಿ ಭಾರತ ಅನೇಕ ಸ್ವಾತಂತ್ರ್ಯ ಹೋರಾಟದ ಫಲವಾಗಿ ಬ್ರಿಟೀಷರಿಂದ ಸ್ವತಂತ್ರವಾಯಿತು.

ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು

ಭಾರತದ ರಾಜ್ಯಗಳು ಮತ್ತು ಪ್ರಾಂತ್ಯಗಳು=States and union territories of Indiaಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ ಭಾರತ ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಒಂಬತ್ತು ಒಕ್ಕೂಟ ಪ್ರಾಂತ್ಯಗಳು ಇವೆ. ರಾಜ್ಯಗಳು ಹಾಗು ಪ್ರಾಂತ್ಯಗಳು ಮತ್ತೆ ಜಿಲ್ಲೆಗಳಾಗಿ ಉಪವಿಭಾಗಿಸಲಾಗಿದೆ.[[image:Indiastates&utnumbered.png|thumb|270px|ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು]

ಮಂಗಳೂರು

ಮಂಗಳೂರು (ತುಳು: ಕುಡ್ಲ; ಕೊಂಕಣಿ: ಕೊಡಿಯಾಲ್; ಬ್ಯಾರಿ: ಮೈಕಾಲ; ಆಂಗ್ಲ: ಮ್ಯಾಂಗಲೋರ್; ಮಲಯಾಳಂ: ಮಂಗಲಾಪುರಂ) ಕರ್ನಾಟಕದ ನೈಋತ್ಯದಲ್ಲಿರುವ ಪ್ರಮುಖ ರೇವು ಪಟ್ಟಣ ಹಾಗೂ ಕರ್ನಾಟಕದ ಪ್ರಮುಖ ನಗರಗಳಲ್ಲೊಂದು. ಭಾರತದ ಪಶ್ಚಿಮ ಕರಾವಳಿಯಲ್ಲಿ ಅರಬ್ಬೀ ಸಮುದ್ರದ ತೀರದಲ್ಲಿರುವ ಇದು ತನ್ನ ಪೂರ್ವದಲ್ಲಿ ಪಶ್ಚಿಮ ಘಟ್ಟಗಳನ್ನು ಹೊಂದಿದೆ.

ಮಂಗಳೂರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಆಡಳಿತ ಕೇಂದ್ರ. ಅರಬ್ಬೀ ಸಮುದ್ರದ ಬಂದರಾಗಿ ಅಭಿವೃದ್ಧಿಪಡಿಸಲಾದ ಇದು ಪ್ರಸ್ತುತ ಭಾರತದ ಪ್ರಮುಖ ಬಂದರುಗಳಲ್ಲಿ ಒಂದಾಗಿದೆ. ನೇತ್ರಾವತಿ ಮತ್ತು ಗುರುಪುರ ನದಿಗಳಿಂದುಂಟಾದ ಹಿನ್ನೀರಿನ ತಟದಲ್ಲಿರುವ ಈ ನಗರವು ಭಾರತದ ೭೫ ಪ್ರತಿಶತ ಕಾಫಿ ಮತ್ತು ಗೋಡಂಬಿ ರಫ್ತನ್ನು ನಿರ್ವಹಿಸುತ್ತದೆ.ಮಂಗಳೂರು ತನ್ನ ದೇವಸ್ಥಾನಗಳಿಗೆ, ಕಡಲತೀರಗಳಿಗೆ ಹಾಗೂ ಕೈಗಾರಿಕೆಗಳಿಗೆ ತುಂಬಾ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಮುಖ ಭಾಷೆಗಳು ತುಳು, ಕೊಂಕಣಿ, ಕನ್ನಡ ಮತ್ತು ಬ್ಯಾರಿ ಭಾಷೆ. ಈ ಪ್ರದೇಶವು ಇಲ್ಲಿನ ಪ್ರಮುಖ ಗುಣಲಕ್ಷಣವಾದ ತೆಂಗಿನ ಮರಗಳು, ಜೊತೆಗೆ ಹೊರಳುವ ಪರ್ವತಶ್ರೇಣಿಗಳು, ಸಮುದ್ರಕ್ಕೆ ಹರಿಯುವ ನದಿ ಹೊಳೆಗಳು ಹಾಗೂ ಎಲ್ಲೆಲ್ಲೂ ಕಾಣುವ ಇಲ್ಲಿನ ಹಂಚಿನ ಛಾವಣಿಯ ಕಟ್ಟಡಗಳಿಂದ ತನ್ನ ವಿಶಿಷ್ಟತೆಯನ್ನು ಪಡೆದುಕೊಂಡಿದೆ. ಲ್ಯಾಟರೈಟ್ ಕಲ್ಲಿನಿಂದ ನಿರ್ಮಿತ, ಸ್ಥಳೀಯ ಗಟ್ಟಿ ಕೆಂಪು ಜೇಡಿಮಣ್ಣಿನಿಂದ ತಯಾರಿತ ಮಂಗಳೂರು ಹಂಚುಗಳ ಮನೆಗಳು ಇಲ್ಲಿ ಸಾಮಾನ್ಯ. ಪುರಾತನ ಮನೆಗಳು ಸಾಮನ್ಯವಾಗಿ ವಿಸ್ತಾರವಾದ ಮರದ ಕೆತ್ತನೆಗಳನ್ನು ಹೊಂದಿರುತ್ತವೆ.ಆಸ್ಟ್ರೇಲಿಯ ದೇಶದ ವಿಕ್ಟೋರಿಯ ರಾಜ್ಯದಲ್ಲಿಯೂ ಮಂಗಳೂರು ಎಂಬ ಹೆಸರಿನ ಒಂದು ಊರು ಇದೆ.

ಮುಂಬೈ

ಮುಂಬಯಿನಗರ, ಮಹಾರಾಷ್ಟ್ರದ ರಾಜಧಾನಿ. ಸುಮಾರು ಒಂದು ಕೋಟಿ ಮೂವತ್ತು ಲಕ್ಷ ಜನ (೨೦೦೬ ರ ಅಂದಾಜು) ವಾಸಿಸುವ ಇದು ಭಾರತದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯಿರುವ ನಗರವಾಗಿದೆ. ಮುಂಬಯಿಯ ಉಪನಗರಗಳೂ ಸೇರಿದರೆ , ಒಟ್ಟು ಜನಸಂಖ್ಯೆ ಎರಡು ಕೋಟಿ ಮೀರಿ, ಪ್ರಪಂಚದಲ್ಲಿಯೇ ಐದನೆಯ ಅತಿ ದೊಡ್ಡ ನಗರವೆನಿಸುತ್ತದೆ. ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಮುಂಬಯಿ, ಸ್ವಾಭಾವಿಕ ಬಂದರೂ ಆಗಿದ್ದು , ಭಾರತದ ಸಮುದ್ರಮಾರ್ಗದ ಐವತ್ತು ಶೇಕಡಾ ಪ್ರವಾಸಿಗಳು, ಹಾಗೂ ಸರಕು ಇಲ್ಲಿಂದಲೇ ಸಾಗಿಸಲ್ಪಡುತ್ತದೆ.

ಮುಂಬಯಿಯನ್ನು ಭಾರತದ ಆರ್ಥಿಕ ಹಾಗೂ ಮನರಂಜನಾಲೋಕದ ರಾಜಧಾನಿ ಎಂದೂ ಪರಿಗಣಿಸಲಾಗಿದೆ. ಸಂಜಯಗಾಂಧಿ ರಾಷ್ಟ್ರೀಯ ಉದ್ಯಾನವನ ನಗರದ ಸರಹದ್ದಿನಲ್ಲಿಯೇ ಇರುವುದು ಬಹುತೇಕ ಮತ್ತಾವುದೇ ನಗರಗಳಲ್ಲಿ ಕಂಡುಬರದ ವೈಶಿಷ್ಟ್ಯ.

ಯುರೋಪ್

ಯುರೋಪ್ ಪ್ರಪಂಚದ ೭ ಖಂಡಗಳಲ್ಲಿ ಎರಡನೇ ಅತ್ಯಂತ ಚಿಕ್ಕ ಖಂಡ. ಭೂಗೋಳಶಾಸ್ತ್ರದ ಪ್ರಕಾರ ಯುರೋಪ್ ಯುರೇಷ್ಯಾ ಮಹಾಖಂಡದ ಪಶ್ಚಿಮ ದ್ವೀಪಕಲ್ಪ. ಆದರೆ ಸಾಮಾಜಿಕವಾಗಿ, ರಾಜಕೀಯವಾಗಿ, ಐತಿಹಾಸಿಕವಾಗಿ ಇದು ಏಷ್ಯಾದಿಂದ ವಿಭಿನ್ನವಾಗಿರುವುದರಿಂದ ಇದನ್ನು ಪ್ರತ್ಯೇಕ ಖಂಡವಾಗಿ ಪರಿಗಣಿಸಲಾಗುತ್ತದೆ.

೨೫ ಸದಸ್ಯ ರಾಷ್ಟ್ರಗಳ ಯುರೋಪಿನ ಒಕ್ಕೂಟ ಈ ಖಂಡದ ಅತಿ ದೊಡ್ಡ ರಾಜಕೀಯ ಮತ್ತು ಆರ್ಥಿಕ ಒಕ್ಕೂಟ.

ಸ್ಪೇನ್

ಸ್ಪೇನ್ ಅಥವಾ ಸ್ಪೇನ್ ಸಂಸ್ಥಾನ (ಸ್ಪ್ಯಾನಿಷ್:Reino de España), ಆಗ್ನೇಯ ಯುರೋಪಿನ ಐಬೀರಿಯನ್ ದ್ವೀಪಕಲ್ಪದಲ್ಲಿರುವ ಒಂದು ದೇಶ. ಇದರ ದಕ್ಷಿಣ ಮತ್ತು ಪೂರ್ವದಲ್ಲಿ ಮೆಡಿಟರೇನಿಯನ್ ಸಮುದ್ರ ಮತ್ತು ಜಿಬ್ರಾಲ್ಟರ್; ಉತ್ತರದಲ್ಲಿ ಫ್ರಾನ್ಸ್, ಅಂಡೊರ ಮತ್ತು ಬಿಸ್ಕೆ ಕೊಲ್ಲಿ; ಪಶ್ಚಿಮದಲ್ಲಿ ಅಟ್ಲಾಂಟಿಕ್ ಮಹಾಸಾಗರ ಮತ್ತು ಪೋರ್ಚುಗಲ್ ಇವೆ. ಮೆಡಿಟರೇನಿಯನ್‌ನಲ್ಲಿರುವ ಬಲೇರಿಕ್ ದ್ವೀಪ, ಅಟ್ಲಾಂಟಿಕ್ ಮಹಾಸಗರದಲ್ಲಿರುವ ಕೆನರಿ ದ್ವೀಪ ಮತ್ತು ಉತ್ತರ ಆಫ್ರಿಕದಲ್ಲಿ ಮೊರೊಕ್ಕೊ ನಗರದ ಗಡಿಯಲ್ಲಿರುವ ಸಿಯುಟ ಹಾಗು ಮೆಲಿಲ್ಲ ನಗರಗಳು ಸ್ಪೇನ್ ದೇಶಕ್ಕೆ ಸೇರಿವೆ. 504,030 ಕಿಮಿ² ವಿಸ್ತೀರ್ಣ ಹೊಂದಿರುವ ಸ್ಪೇನ್, ಫ್ರಾನ್ಸಿನ ನಂತರ ಪಶ್ಚಿಮ ಯುರೋಪಿನಲ್ಲಿ ೨ನೆಯ ದೊಡ್ಡ ದೇಶವಾಗಿದೆ. ಇದು ಯುರೋಪಿಯನ್ ಒಕ್ಕೂಟ ಮತ್ತು ನೇಟೊ ಸಂಘಗಳ ಸದಸ್ಯವಾಗಿದೆ. ಈ ದೇಶದ ರಾಜಧಾನಿ ಮ್ಯಾಡ್ರಿಡ್.

ಸ್ಪೇನಿನ ಈಶಾನ್ಯ ದಿಕ್ಕಿನಲ್ಲಿರುವ ಅತ್ಯಂತ ಶ್ರೀಮಂತ ಪ್ರಾಂತ್ಯ ಕ್ಯಾಟಲೋನಿಯಾ. ಸ್ಪೇನಿನ ಒಳಗೆ ಪ್ರತ್ಯೇಕ ರಾಷ್ಟ್ರದ ರೀತಿಯಲ್ಲೇ ಅದು ಕಾರ್ಯನಿರ್ವಹಿಸುತ್ತದೆ. ಆ ಮಟ್ಟಿನ ಸ್ವಾಯತ್ತತೆ ಅದಕ್ಕೆ ಇದೆ. ಬಾರ್ಸಿಲೋನಾ ಅದರ ರಾಜಧಾನಿ. ಕ್ಯಾಟಲೋನಿಯಾ ತನ್ನದೇ ಆದ ಭಾಷೆ ಹೊಂದಿದೆ. ತನ್ನದೇ ಆದ ಸಂಸತ್ತು, ಧ್ವಜ, ರಾಷ್ಟ್ರಗೀತೆಯನ್ನೂ ಹೊಂದಿದೆ. ಪ್ರತ್ಯೇಕ ಪೊಲೀಸ್‌ ಪಡೆಯನ್ನೂ ಕ್ಯಾಟಲೋನಿಯಾ ಸರ್ಕಾರ ಹೊಂದಿದೆ. ಶಿಕ್ಷಣ, ಆರೋಗ್ಯದಂತಹ ಕೆಲವು ಸಾರ್ವಜನಿಕ ಸೇವೆಗಳನ್ನು ಸ್ಥಳೀಯ ಸರ್ಕಾರವೇ ನಿರ್ವಹಿಸುತ್ತದೆ. 1,000 ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿರುವ ಕ್ಯಾಟಲೋನಿಯಾ, ಸ್ಪೇನಿನ ಅತ್ಯಂತ ಸಿರಿವಂತ ಮತ್ತು ಹೆಚ್ಚು ಉತ್ಪಾದಕ ಸಾಮರ್ಥ್ಯ ಹೊಂದಿರುವ ಪ್ರಾಂತ್ಯಗಳಲ್ಲಿ ಒಂದು. ಪ್ರವಾಸಿ ಕೇಂದ್ರವಾಗಿಯೂ ಜನಪ್ರಿಯ. ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ದೊಡ್ಡ ದೊಡ್ಡ ಕಂಪೆನಿಗಳು, ಸಂಶೋಧನಾ ಸಂಸ್ಥೆಗಳು ಇಲ್ಲಿವೆ. ಕ್ಯಾಟಲೋನಿಯಾ ೨೦೧೭ರ ಅಕ್ಟೋಬರ್ ನಲ್ಲಿ ಸ್ವಾತಂತ್ರ್ಯ ಹೊಂದುವ ಕುರಿತು ಒಂದು ಜನಮತ ಸಂಗ್ರಹ ನಡೆಸಿದೆ.

ಪ್ರಧಾನ ದಿಕ್ಕುಗಳು
ಉಪ ದಿಕ್ಕುಗಳು

ಇತರ ಭಾಷೆಗಳು

This page is based on a Wikipedia article written by authors (here).
Text is available under the CC BY-SA 3.0 license; additional terms may apply.
Images, videos and audio are available under their respective licenses.