ಟುನೀಶಿಯ

ಟುನೀಶಿಯ (تونس ಟುನಿಸ್), ಅಧಿಕೃತವಾಗಿ ಟುನೀಶಿಯ ಗಣರಾಜ್ಯ (الجمهورية التونسية), ಉತ್ತರ ಆಫ್ರಿಕಾದಲ್ಲಿ ಮೆಡಿಟರೇನಿಯ ಸಮುದ್ರದ ತಟದಲ್ಲಿರುವ ಒಂದು ದೇಶ. ಇದರ ಪಶ್ಚಿಮಕ್ಕೆ ಅಲ್ಜೀರಿಯ ಮತ್ತು ಆಗ್ನೇಯಕ್ಕೆ ಲಿಬ್ಯಾ ದೇಶಗಳಿವೆ. ಈ ದೇಶದ ಸುಮಾರು ೪೦% ಸಹಾರ ಮರುಭೂಮಿಗೆ ಸೇರಿದೆ. ಇತಿಹಾಸದಲ್ಲಿ ಈ ಪ್ರದೇಶ ಫೊನೀಶಿಯದ ಕಾರ್ಥೇಜ್ ನಗರವನ್ನು ಹೊಂದಿತ್ತು.

ಅಂಜೂರ

ಅಂಜೂರ ಮೊರೇಸೀ ಕುಟುಂಬಕ್ಕೆ ಸೇರಿದ ಮರ. ಇದರ ಹಣ್ಣುಗಳನ್ನು ತಿನ್ನಲು ಉಪಯೋಗಿಸುತ್ತಾರೆ. ಫೈಕಸ್ ಕ್ಯಾರಿಕ ಎಂಬುದು ಇದರ ವೈಜ್ಞಾನಿಕ ನಾಮ. ಇದರ ಹಣ್ಣಿನಲ್ಲಿ ಕಬ್ಬಿಣ,ತಾಮ್ರ ಮತ್ತು ಎ,ಬಿ,ಸಿ,ಡಿ ವಿಟಮಿನ್‍ಗಳು ಹೇರಳವಾಗಿವೆ.

ಅಂತಾರಾಷ್ಟ್ರೀಯ ಭೂಭೌತ ವರ್ಷ

ಅಂತಾರಾಷ್ಟ್ರೀಯ ಭೂಭೌತ ವರ್ಷ1957ರ ಜುಲೈ 1ರಿಂದ 1958ರ ಡಿಸೆಂಬರ್ 31 ರವರೆಗಿನ 18 ತಿಂಗಳ ಅವಧಿಗೆ (ಇಂಟರ್ ನ್ಯಾಷನಲ್ ಜಿಯೋಫಿóಸಿಕಲ್ ಇಯರ್-ಐ.ಜಿವೈ.). ಈ ಅವಧಿಯಲ್ಲಿ ಭೂಗ್ರಹ ಹಾಗೂ ಅದರ ಸುತ್ತಲಿರುವ ವಾತಾವರಣದ ಬಗ್ಗೆ ಸಂಶೋಧನಾತ್ಮಕ ಅಧ್ಯಯನ ನಡೆಸುವುದರ ಮೂಲಕ ವಿಶ್ವದ ಬಗ್ಗೆ ಹೆಚ್ಚಿನ ಅರಿವನ್ನು ಪಡೆದುಕೊಳ್ಳಲಾಯಿತು ಈ ಭೂಭೌತ ಸಂಶೋಧನ ಕಾರ್ಯಕ್ರಮದಲ್ಲಿ ಪ್ರಪಂಚದ ಸು. 70 ರಾಷ್ಟ್ರಗಳು ಪಾಲ್ಗೊಂಡಿದ್ದವು. ಇವುಗಳಲ್ಲಿ ಭಾರತವೂ ಒಂದಾಗಿತ್ತು.

ಅಂತಾರಾಷ್ಟ್ರೀಯ ಭೂಭೌತ ವರ್ಷಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ವಿಜ್ಞಾನ ಒಕ್ಕೂಟ ಒಂದು ವಿಶೇಷ ಸಮಿತಿಯನ್ನು ರಚಿಸಿತು. ಈ ಸಮಿತಿಯಲ್ಲಿ ಅಯೋನಾವರಣ (ಅಯೋನೋಸ್ಫಿಯರ್), ರೇಡಿಯೋ ಭೌತವಿಜ್ಞಾನ, ಖಗೋಳವಿಜ್ಞಾನ, ಭೂಭೌತವಿಜ್ಞಾನ, ಭೂಗೋಳ ವಿಜ್ಞಾನ ಹಾಗೂ ಪ್ರಪಂಚದ ಪವನವಿಜ್ಞಾನ ಅಧ್ಯಯನಕ್ಕೆ ಸಂಬಂಧಿಸಿದಂತೆ ಅನೇಕ ರಾಷ್ಟ್ರಗಳ ವಿಜ್ಞಾನಿಗಳಿದ್ದರು.

ಅರಬ್ಬೀ ಭಾಷೆ

ಅರಬ್ಬೀ ಭಾಷೆಯು (ಆಂಗ್ಲದಲ್ಲಿ Arabic‎ ಎಂದೂ, ಅರಬ್ಬೀ ಭಾಷೆಯಲ್ಲಿ العربية ಎಂದೂ ಕರೆಯುತ್ತಾರೆ) ಪುರಾತನ ಅರೇಬಿಯಾ ಉಪ ಖಂಡದಲ್ಲಿ ಮುಖ್ಯವಾಗಿ ಪ್ರಚಲಿತವಾಗಿದುತ್ತದೆ. ಇದಲ್ಲದೆ, ಈ ಭಾಷೆಯು ಇಸ್ಲಾಮ್ ಧರ್ಮದ ಮೂಲ ಭಾಷೆಯಾಗಿರುವುದರಿಂದ, ಪ್ರಪಂಚದದ್ಯಂತ ಇದರ ಅಧ್ಯಯನ ಹಾಗು ಕಲಿಕೆಯನ್ನು ಮಾಡಲಾಗುತ್ತದೆ.

ಈ ಭಾಷೆಯು ಸೆಮಿಟಿಕ್ ಭಾಷಾಕುಟುಂಬಕ್ಕೆ ಸೇರಿದೆ.

ಆಟೋಮನ್ ಚಕ್ರಾಧಿಪತ್ಯ

ಆಟೋಮನ್ ಚಕ್ರಾಧಿಪತ್ಯಅಥವಾ ಒಟ್ಟೋಮನ್ ಸಾಮ್ರಾಜ್ಯ, ತುರ್ಕಿ ಭಾಷೆಯನ್ನಾಡುತ್ತಿದ್ದ ಒಂದು ಜನಾಂಗದಿಂದ ಸ್ಥಾಪಿತವಾದುದು (14 ರಿಂದ 16ನೆಯ ಶತಮಾನ). ಇದಕ್ಕೆ ತುರ್ಕಿ ಸಾಮ್ರಾಜ್ಯವೆಂಬ ಹೆಸರೂ ಇದ್ದು ಈಗಿನ ತುರ್ಕಿಸ್ಥಾನವನ್ನೂ ಒಳಗೊಂಡ ದೊಡ್ಡ ರಾಷ್ಟ್ರವಾಗಿತ್ತು. ಏಷ್ಯಾಮೈನರ್ ಇದರ ಕೇಂದ್ರ. ಸ್ಥಾಪಿತವಾದದ್ದು ಕ್ರಿ.ಶ. ಸುಮಾರು 1300ರಲ್ಲಿ. ಆಗ ಶಾಸ್ತ್ರಸಮ್ಮತವಾದ ಸಾಂಪ್ರದಾಯಿಕ ಇಸ್ಲಾಂ ಧರ್ಮ ಸಂಪ್ರದಾಯಗಳು ಶಿಥಿಲವಾಗುತ್ತ ಬಂದಿದ್ದುವು; ಇಸ್ಲಾಮೀಯರ ನಾಗರಿಕತೆಯಲ್ಲೂ ಪ್ರಗತಿಯಿರಲಿಲ್ಲ. ಈ ಪರಿಸ್ಥಿತಿಯಲ್ಲಿ ಸ್ಥಾಪಿತವಾದ ಹೊಸ ಸಾಮ್ರಾಜ್ಯ ಕೆಲಮಟ್ಟಿಗೆ ಇಸ್ಲಾಂ ಧರ್ಮ ಸಂಪ್ರದಾಯವನ್ನೇ ಬದಲಾಯಿಸಿತು. ಅಲ್ಲದೆ ಪೌರ್ವಾತ್ಯ ನಾಗರಿಕತೆಯ ಪ್ರಭಾವಕ್ಕೊಳಗಾಗಿ ಹೊಸ ಮಾರ್ಗದಲ್ಲಿ ಮುಂದುವರಿಯಿತು.

ತಲಾವಾರು ಒಟ್ಟಾರೆ ಆಂತರಿಕ ಉತ್ಪನ್ನದ ಪಟ್ಟಿ

ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯವರು ತಯಾರಿಸಿರುವ ಪಟ್ಟಿಯ ಪ್ರಕಾರ ವಿವಿಧ ರಾಷ್ಟ್ರಗಳ ತಲಾವಾರು ಒಟ್ಟಾರೆ ಆಂತರಿಕ ಉತ್ಪನ್ನ ಇಂತಿದೆ.

ತುನಿಸೈರ್

ಸೊಸೈಟೆ ತುನಿಸಿಎಂನೆ ಡೆ ಎಲ್ ಏರ್, ಅಥವಾ ತುನಿಸೈರ್ ನಿಮಗೆ ಟುನೀಶಿಯ ಫ್ಲಾಗ್ ಕ್ಯಾರಿಯರ್ ವೈಮಾನ ಯಾನವಾಗಿದೆ . 1948 ರಲ್ಲಿ ಇದರ ರಚನೆಯಾಗಿದ್ದು ಇದು ಯುರೋಪಿಯನ್, ಆಫ್ರಿಕನ್ ಮತ್ತು ಮಧ್ಯಪೂರ್ವ ಸ್ಥಳಗಳಿಗೆ ಅಂತಾರಾಷ್ಟ್ರೀಯ ನಿಗದಿತ ಕಾರ್ಯನಿರ್ವಹಿಸುತ್ತದೆ. ಇದರ ಮುಖ್ಯ ಬೇಸ್ ಟುನಿಸ್-ಕಾರ್ತೇಜ್ ವಿಮಾನ ನಿಲ್ದಾಣದಲ್ಲಿ ಇದೆ. ಏರ್ಲೈನ್ ನ ಕೇಂದ್ರಕಾರ್ಯಾಲಯವನ್ನು ಟುನಿಸ್ ವಿಮಾನ ನಿಲ್ದಾಣದ ಬಳಿ ಇರುವ ಟುನಿಸ್ನಲ್ಲಿ ಇದೆ . ತುನಿಸೈರ್ ಅರಬ್ ಏರ್ ಕ್ಯಾರಿಯರ್ಸ್ ಸಂಸ್ಥೆ ಸದಸ್ಯತ್ವ ಹೊಂದಿದೆ.

ಮಧ್ಯ ಪ್ರಾಚ್ಯ

ಮಧ್ಯ ಪ್ರಾಚ್ಯ (ಅಥವಾ, ಹಿಂದೆ ಸಾಮಾನ್ಯವಾಗಿ ಕರೆಯಲ್ಪಡುತ್ತಿದ್ದ ಹತ್ತಿರದ ಪ್ರಾಚ್ಯ) ನೈರುತ್ಯ ಏಷ್ಯಾ, ಪಶ್ಚಿಮ ಏಷ್ಯಾ ಮತ್ತು ಈಶಾನ್ಯ ಆಫ್ರಿಕವನ್ನು ವ್ಯಾಪಿಸಿರುವ ಪ್ರದೇಶ. ಈ ಪ್ರದೇಶಕ್ಕೆ ಯಾವುದೆ ನಿಗದಿತವಾದ ಗಡಿ ಇಲ್ಲ. ೧೯೦೦ ರಲ್ಲಿ ಯುನೈಟೆಡ್ ಕಿಂಗ್ಡಮ್ನಲ್ಲಿ ಈ ಪದವು ಬಳಕೆಗೆ ಬಂದಿತು.

ಮಧ್ಯ ಪ್ರಾಚ್ಯವು ಪ್ರಪಂಚದ ಮೂರು ಪ್ರಮುಖ ಏಕೀಶ್ವರವಾದದ ಧರ್ಮಗಳಾದ ಇಸ್ಲಾಂ, ಕ್ರೈಸ್ತ ಧರ್ಮ ಮತ್ತು ಯಹೂದಿ ಧರ್ಮಗಳ ಉಗಮ ಸ್ಥಾನವಾಗಿದೆ.

ಮಾನವ ಅಭಿವೃದ್ಧಿ ಸೂಚ್ಯಂಕಕ್ಕನುಗುಣವಾಗಿ ರಾಷ್ಟ್ರಗಳ ಪಟ್ಟಿ

ರಾಷ್ಟ್ರಗಳು ತಮ್ಮ ಮಾನವ ಅಭಿವೃದ್ಧಿ ಸೂಚ್ಯಂಕಕ್ಕೆ ಅನುಗುಣವಾಗಿ ಉನ್ನತ, ಮಧ್ಯಮ ಮತ್ತು ನಿಮ್ನತಮ ಎಂಬೀ ಮೂರು ಗುಂಪುಗಳಲ್ಲಿ ಸ್ಥಾನ ಪಡೆಯುತ್ತವೆ.: (ಉನ್ನತ, ಮಧ್ಯಮ, ಮತ್ತು ನಿಮ್ನತಮ ಮಾನವ ಅಭಿವೃದ್ಧಿ).

ರಾಜಕೀಯ ಒಕ್ಕೂಟ

ರಾಜಕೀಯ ಒಕ್ಕೂಟ ಒಂದು ರೀತಿಯ ರಾಜ್ಯ, ಇದರಲ್ಲಿ ಹಲವು ಚಿಕ್ಕ ರಾಜ್ಯಗಳು ಸೇರಿರುತ್ತವೆ. ವೈಯಕ್ತಿಕ ಒಕ್ಕೂಟಗಿಂತ ಭಿನ್ನವಾಗಿ, ಪ್ರತೆಕ ರಾಜ್ಯಗಳು ಒಂದು ಸಾಮಾನ್ಯ ಸರ್ಕಾರದ ಅಂಶವಗಿರುತ್ತದ್ದೆ ಹಾಗು, ಈ ಒಕ್ಕೂಟಕ್ಕೆ ಅಂತರರಾಷ್ಟ್ರೀಯವಾಗಿ ಏಕೈಕ ರಾಜಕೀಯ ಅಸ್ತಿತ್ವದ ಮಾನ್ಯತೆ ಇರುತ್ತದ್ದೆ . ರಾಜಕೀಯ ಒಕ್ಕೂಟ ಇದಕ್ಕೆ ಬಿನ್ನ ಹೆಸರು ಶಾಸನ ಒಕ್ಕೂಟ ಅಥವಾ ರಾಜ್ಯ ಒಕ್ಕೂಟ.

ಒಂದು ಒಕ್ಕೂಟವನ್ನು ಹಳುವರು ರೀತಿಯಿಂದ ತರಬಹುದು, ಇದ್ದನ್ನು ಈ ರೀತಿ ವಿಭಾಗಿಸಬಹುದು:

ಒಕ್ಕೂಟವನ್ನು ಸಂಯೋಜಿಸುವುದು

ಬಲಪ್ರಯೋಗದ ಮೂಲಕ ಸ್ವಾಧೀನ ಸಂಯೋಜಿಸುವುದು

ಸಂಯುಕ್ತ (ಅಥವಾ ಸಹ-ಸಂಯುಕ್ತ) ಒಕ್ಕೂಟ

ಒಕ್ಕೂಟರಚನೆಯ ಬಲಪ್ರಯೋಗದ ಮೂಲಕ ಸ್ವಾಧೀನ

ಮಿಶ್ರಿತ ಒಕ್ಕೂಟಗಳು.

ರಾಷ್ಟ್ರಗೀತೆ

ಅನೇಕ ದೇಶಗಳು ತಮ್ಮ ದೇಶದ ಜನ, ಇತಿಹಾಸಗಳನ್ನು ಪ್ರತಿನಿಧಿಸುವಂತಃ, ರಾಷ್ಟ್ರಾಭಿಮಾನವನ್ನು ಸೂಚಿಸುವಂತಃ ಒಂದು ಗೀತೆಯನ್ನು ರಾಷ್ಟ್ರಗೀತೆಯೆಂದು ಆಯ್ಕೆ ಮಾಡಿಕೊಂಡಿವೆ.

ಲಿಬಿಯಾ

ಲಿಬಿಯಾ ಉತ್ತರ ಆಫ್ರಿಕಾ ಭಾಗದಲ್ಲಿ ಕಂಡುಬರುವ ದೇಶವಾಗಿದ್ದು, ಉತ್ತರಕ್ಕೆ ಮೆಡಿಟರೆಯನ್ ಸಮುದ್ರ, ಪೂರ್ವಕ್ಕೆ ಈಜಿಪ್ಟ್, ಆಗ್ನೇಯಕ್ಕೆ ನೈಜರ್, ಪಶ್ಚಿಮಕ್ಕೆ ಅಲ್ಜಿರಿಯ, ದಕ್ಷಿಣಕ್ಕೆ ಚಾಡ್ ಮತ್ತು ವಾಯುವ್ಯಕ್ಕೆ ಟುನೀಶಿಯ ದೇಶಗಳೊಂದಿಗೆ ತನ್ನ ಗಡಿಭಾಗಗಳನ್ನು ಹಂಚಿಕೊಂಡಿದೆ.

ವಿಶ್ವ ಪರಂಪರೆಯ ತಾಣಗಳ ಪಟ್ಟಿ

೨೦೦೮ರಂತೆ ವಿಶ್ವದ ೧೪೫ ರಾಷ್ಟ್ರಗಳಲ್ಲಿ ಒಟ್ಟು ೮೭೮ ವಿಶ್ವ ಪರಂಪರೆಯ ತಾಣಗಳಿವೆ. ಯುನೆಸ್ಕೋ ಸಂಸ್ಥೆಯು ಈ ತಾಣಗಳನ್ನು ಪ್ರಾಕೃತಿಕ, ಸಾಂಸ್ಕೃತಿಕ ಹಾಗೂ ಮಿಶ್ರಗುಣದ ತಾಣಗಳೆಂದು ಗುರುತಿಸಿದೆ. ಅಲ್ಲದೆ ತಾಣಗಳ ಉಸ್ತುವಾರಿಯ ದೃಷ್ಟಿಯಿಂದ ಈ ೮೭೮ ತಾಣಗಳನ್ನು ೫ ಭೌಗೋಳಿಕ ವಲಯಗಳಾಗಿ ವಿಭಾಗಿಸಲಾಗಿದೆ. ಅವೆಂದರೆ : ೧) ಯುರೋಪ್ ಮತ್ತು ಉತ್ತರ ಅಮೇರಿಕಾ ೨) ಏಷ್ಯಾ-ಪೆಸಿಫಿಕ್ ೩) ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬ್ಬಿಯನ್ ೪) ಅರಬ್ ರಾಷ್ಟ್ರಗಳು ಮತ್ತು ೫) ಆಫ್ರಿಕಾ

ಸೂಚನೆ : ಕೆಳಕಂಡ ಪಟ್ಟಿಯು ರಾಷ್ಟ್ರಗಳ ಹೆಸರಿನ ಮೇಲೆ ಅಕಾರಾದಿಯಾಗಿ ಜೋಡಿಸಲ್ಪಟ್ಟಿದೆ. ತಲೆಬರಹಗಳ ಬಳಿ ಕಾಣುವ ಪುಟ್ಟ ಬಾಕ್ಸ್ ಗಳನ್ನು ಒತ್ತುವುದರ ಮೂಲಕ ಪಟ್ಟಿಯನ್ನು ಬೇಕಾದ ಮಾನದಂಡ ಮೇಲೆ ಪುನರ್ಜೋಡಿಸಬಹುದು.

ಸಾರ್ವಭೌಮ ದೇಶಗಳ ಪಟ್ಟಿ

ಇದು ಪ್ರಪಂಚದ ಸಾರ್ವಭೌಮ ದೇಶಗಳ ಪಟ್ಟಿ. ಈ ಪಟ್ಟಿ ೧೯೪ ದೇಶಗಳನ್ನು ಒಳಗೊಂಡಿದೆ.

ಹೌಬರ ಕಾಡುಕೋಳಿ

ಹೌಬೊರ ಕಾಡುಕೋಳಿ ಇದು ಕಾಡು ಕೋಳಿಯಾ ಜಾತಿಯಲ್ಲಿ ಅತೀ ದೊಡ್ಡದಾದ ಪಕ್ಷಿ. ಹೌಬೊರ ಕಾಡುಕೋಳಿಯೂ ಚಿಕ್ಕದಿಂದ ದೊಡ್ಡ ಗಾತ್ರದವರೆಗೂ ಇರುತ್ತದೆ. ಅದರ ಗಾತ್ರ 55-65 ಸೆಂಟಿಮೀಟರ್ (22-26 ಇಂಚು) ಉದ್ದ, ಮತ್ತು 135-170 ಸೆಂಟಿಮೀಟರ್ ಅಗಲ. ಹೌಬೊರ ಕಾಡುಕೋಳಿ ಮೇಲಿನ ಬಾಗದಲ್ಲಿ ಕಂದು ಮತ್ತು ಕೆಳಗಿನ ಬಾಗದಲ್ಲಿ ಬಿಳಿ ಬಣ್ಣ ಹೊಂದಿದೆ.ಇದರ ಕತ್ತಿನ ಬಾಗದಲ್ಲಿ ಕಪ್ಪು ಗೆರೆಗಳಿರುತ್ತದೆ. ಹೌಬೊರ ಕಾಡುಕೋಳಿಯಾ ರೆಕ್ಕೆಗಳು ಉದ್ದವಾಗಿರುತ್ತದೆ. ಇದರ ರೆಕ್ಕೆಗಳು ಕಂದು ಮತ್ತು ಕಪ್ಪು ಬಣ್ಣಗಳಿಂದ ಕೂಡಿದೆ. ಗಂಡು ಮತ್ತು ಹೆಣ್ಣು ಹೌಬರ ಕಾಡುಕೋಳಿಗಳು ಒಂದೇ ರೀತಿ ಕಾಣುತ್ತದೆ. ಹೆಣ್ಣು ಹೌಬರ ಕಾಡುಕೋಳಿಗಿಂತ ಗಂಡು ಎತ್ತರವಾಗಿಯೂ ಮತ್ತು ಬೂದಿ ಬಣ್ಣ ಹೊಂದಿರುತ್ತದೆ. ಹೆಣ್ಣು ಹೌಬರ ಕಾಡುಕೋಳಿಯು ೬೬ಸೆಂಟಿಮೀಟರ್ ಉದ್ದ ೧-೧.೭ಕೆಜಿ ತೂಕ, ಹಾಗು ಗಂಡು ೭೭ಸೆಂಟಿಮೀಟರ್ ಉದ್ದ ೧.೧೫-೨.೪ ಕೆಜಿ ತೂಕ ಇರುತದೆ.

೧೯೫೬

೧೯೫೬ - ೨೦ನೆ ಶತಮಾನದ ೫೬ನೆ ವರ್ಷ.

೨೦೦೮ರ ಒಲಂಪಿಕ್ ಕ್ರೀಡಾಕೂಟದ ಪದಕ ಪಟ್ಟಿ

ಬೈಜಿಂಗ್‌ನಲ್ಲಿ ನಡೆದ ೨೦೦೮ರ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ವಿವಿಧ ರಾಷ್ಟ್ರಗಳು ಪದಕ ಗಳಿಸುವಲ್ಲಿ ತೋರಿದ ಸಾಧನೆಗಳು ಇಂತಿವೆ.

೨೦೧೬ ಬೇಸಿಗೆ ಒಲಿಂಪಿಕ್ಸ್

೨೦೧೬ ಬೇಸಿಗೆ ಒಲಿಂಪಿಕ್ಸ್‌, ಅಧಿಕೃತವಾಗಿ XXXI ಒಲಿಂಪಿಯಾಡ್ ಆಟಗಳು ಎಂದು ಕರೆಯಲಾಗುತ್ತದೆ ಮತ್ತು ಸಾಮಾನ್ಯವಾಗಿ ರಿಯೊ ೨೦೧೬ ಎಂದು ಕರೆಯಲಾಗುತ್ತದೆ, ಇದು ಬ್ರೆಜಿಲ್‌ನ ರಿಯೊ ಡಿ ಜನೈರೊನಲ್ಲಿ ೫ ಆಗಸ್ಟ್ ರಿಂದ ಆಗಸ್ಟ್ ೨೧ ೨೦೧೬ರ ವರಗೆ ನಡೆದ ಪ್ರಮುಖ ಅಂತಾರಾಷ್ಟ್ರೀಯ ಬಹು-ಕ್ರೀಡಾಕೂಟವಾಗಿದೆ.

ಮೊದಲ ಬಾರಿಗೆ ಪ್ರವೇಶಿಸಿದ ಕೊಸೊವೊ, ದಕ್ಷಿಣ ಸೂಡಾನ್ ಮತ್ತು ನಿರಾಶ್ರಿತರ ಒಲಿಂಪಿಕ್ ತಂಡ ಸೇರಿ ೨೦೭ ರಾಷ್ಟ್ರೀಯ ಒಲಿಂಪಿಕ್ ಸಮಿತಿಗಳಿಂದ ೧೧,೦೦೦ ಕ್ರೀಡಾಪಟುಗಳು ಪಾಲ್ಗೊಂಡಿದ್ದರು, ೩೦೬ಜೊತೆ ಪದಕಗಳೊಂದಿಗೆ, ೨೦೦೯ರಲ್ಲಿ ಸೇರಿಸಿದ ರಗ್ಬಿ ಸೆವೆನ್ಸ್ ಮತ್ತು ಗಾಲ್ಫ್ ಆಟಗಳು ಸೇರಿದಂತೆ ೨೯ ಒಲಿಂಪಿಕ್ ಕ್ರೀಡಾಸ್ಪರ್ಧೆಗಳು ನಡೆದವು, ಈ ಸ್ಪರ್ಧೆಗಳು ಹೋಸ್ಟ್ ನಗರದಲ್ಲಿ ೩೩ ಸ್ಥಳಗಳಲ್ಲಿ ಮತ್ತು ಸಾವೊ ಪಾಲೊ, ಬೆಲೊ ಹಾರಿಜಾಂಟೆ, ಸಾಲ್ವಡಾರ್, ಬ್ರೆಸಿಲಿಯಾ ಮಾನಾಸ್ ನಲ್ಲಿ ೫ ಸ್ಥಳಗಳಲ್ಲಿ ನೆಡೆಯಿತು.

ಇದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಧಾಮಸ್ ಬ್ಯಾಚ್ ಅಧ್ಯಕ್ಷತೆಯಲ್ಲಿ ನೆಡೆದ ಮೊದಲ ಬೇಸಿಗೆ ಒಲಿಂಪಿಕ್ಸ್. ೦೨ ಅಕ್ಟೋಬರ್ ೨೦೦೯ ರಲ್ಲಿ, ಕೋಪನ್ ಹ್ಯಾಗ್, ಡೆನ್ಮಾರ್ಕ್‌ನಲ್ಲಿ ನೆಡೆದ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧಿವೇಶನದಲ್ಲಿ , ರಿಯೊ ಡಿ ಜನೈರೊ ಆತಿಥ್ಯ ವಹಿಸುವ ನಗರ ಎಂದು ಘೋಷಿಸಲಾಯಿತು. ರಿಯೊ ಬೇಸಿಗೆ ಒಲಿಂಪಿಕ್ಸ್ ಆತಿಥ್ಯ ವಹಿಸಿದ ದಕ್ಷಿಣ ಅಮೆರಿಕದ ಮೊದಲ ನಗರವಾಯಿತು. ಇದು ಪೋರ್ಚುಗೀಸ್ ಮಾತನಾಡುವ ದೇಶದಲ್ಲಿ ನೆಡೆದ ಮೊದಲ ಒಲಿಂಪಿಕ್ಸ್, ಆತಿಥ್ಯ ದೇಶದ ಚಿಳಿಗಾಲದಲ್ಲಿ ನೆಡೆದ ಮೊದಲ ಆಟಗಳು, ೧೯೬೯ನಂತರ ಲ್ಯಾಟಿನ್ ಅಮೆರಿಕಾದಲ್ಲಿ ನೆಡೆದ ಮೊದಲ ಆಟಗಳು ಮತ್ತು ೨೦೦೦ ನಂತರ ದಕ್ಷಿಣ ಗೋಲಾರ್ಧದಲ್ಲಿ ನೆಡೆದ ಮೊದಲ ಒಲಿಂಪಿಕ್ಸ್ ಆಗಿದೆ.

ಈ ಆಟಗಳನ್ನು ದೇಶದ ಒಕ್ಕೂಟ ಸರ್ಕಾರದ ಅಸ್ಥಿರತೆ, ಜೈಕಾ ವೈರಸ್ ಸುತ್ತ ಹುಟ್ಟಿದ ಆರೋಗ್ಯ ಮತ್ತು ಸುರಕ್ಷತೆಯ ಕಾಳಜಿಗಳು, ಗಾನಾಬಾರಾ ಕೊಲ್ಲಿ ಗಮನಾರ್ಹ ಮಾಲಿನ್ಯ ಮತ್ತು ರಷ್ಯಾದ ಉದ್ದೀಪನ ಹಗರಣ ವಿವಾದಗಳಿಂದ ಗುರುತಿಸಿಲಾಯಿತು. ಇದು ಕ್ರೀಡಾಪಟುಗಳು ಭಾಗವಹಿಸುವಿಕೆ ಮೇಲೆ ಪರಿಣಾಮ ಬೀರಿದವು.

ಅತ್ಯಂತ ಹೆಚ್ಚು ಚಿನ್ನ ಗೆಲ್ಲುವ ಮೂಲಕ(೪೬) ಮತ್ತು ಅತ್ಯಂತ ಹೆಚ್ಚು ಪದಕಗಳನ್ನು ಗೆಲ್ಲುವ ಮೂಲಕ(೧೨೧) ಅಮೇರಿಕ ಸಂಯುಕ್ತ ಸಂಸ್ಥಾನ, ಕಳೆದ ೬ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ೫ ಬಾರಿ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು. ಗ್ರೇಟ್ ಬ್ರಿಟನ್ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯಿತು ಮತ್ತು ಆಧುನಿಕ ಒಲಿಂಪಿಕ್ಸ್ ಇತಿಹಾಸದಲ್ಲಿ ಆತಿಥ್ಯ ವಹಿಸಿದ ನಂತರ ಸ್ಪರ್ಧೆಗಳಲ್ಲಿ ಪದಕಗಳ ಸಂಖ್ಯೆ ಹೆಚ್ಚಿಸಿಕೊಂಡ ಮೊದಲ ರಾಷ್ಟ್ರವಾಯಿತು. ಚೀನಾ ಮೂರನೇ ಸ್ಥಾನ ಪಡೆಯಿತು. ಆತಿಥ್ಯ ವಹಿಸಿದ ದೇಶ ಬ್ರೆಜಿಲ್ ೭ ಚಿನ್ನದ ಪದಕ ಗೆಲ್ಲುವ ಮೂಲಕ ೭ನೇ ಸ್ಥಾನ ಪಡೆಯಿತು, ಬ್ರೆಜಿಲ್ ಯಾವುದೇ ಒಂದು ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಅತಿ ಹೆಚ್ಚು ಚಿನ್ನದ ಪದಕ ಪಡೆದಿದ್ದು ಈ ಒಲಿಂಪಿಕ್ಸ್‌ನಲ್ಲಿ. ‌ಫಿಜಿ, ಕೊಸೊವೊ, ಪೋರ್ಟೊ ರಿಕೊ, ಸಿಂಗಾಪುರ, ತಜಾಕಿಸ್ಥಾನ್, ವಿಯೆಟ್ನಾಂ ಮತ್ತು ಸ್ವತಂತ್ರ ಒಲಿಂಪಿಕ್ ಕ್ರೀಡಾಪಟುಗಳು (ಕುವೈತ್‌ನಿಂದ), ತಮ್ಮ ದೇಶಕ್ಕೆ ಮೊದಲ ಚಿನ್ನದ ಪದಕ ತಂಡು ಕೊಟ್ಟರು ಮತ್ತು ಅಮೇರಿಕ ಸಂಯುಕ್ತ ಸಂಸ್ಥಾನ ೧೦೦೦ ನೇ ಒಲಿಂಪಿಕ್ ಚಿನ್ನದ ಪದಕ ಗೆದ್ದುಕೊಂಡಿತು. ಭಾರತಕ್ಕೆ ಬ್ಯಾಡ್ಮಿಂಟನ್‌‌ನಲ್ಲಿ ಪಿ.ವಿ. ಸಿಂಧು ಅವರು ಬೆಳ್ಳಿಯನ್ನು ಮತ್ತು ಮಹಿಳಾ ಕುಸ್ತಿಯ ೫೮ ಕೆ.ಜಿ. ವಿಭಾಗದ ಸಾಕ್ಷಿ ಮಲಿಕ್ ಅವರು ಕಂಚಿನ ಪದಕ ತಂದು ಕೊಟ್ಟರು. ಭಾರತ ೨ ಪದಕಗಳೊಂದಿಗೆ ೬೭ ಸ್ಥಾನ ಪಡೆಯಿತು. ಕರ್ನಾಟಕದ ಕ್ರೀಡಾಪಟುಗಳು ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಯಾವುದೇ ಪದಕ ಪಡೆಯಲಿಲ್ಲ.

ಇತರ ಭಾಷೆಗಳು

This page is based on a Wikipedia article written by authors (here).
Text is available under the CC BY-SA 3.0 license; additional terms may apply.
Images, videos and audio are available under their respective licenses.