ಚೀನಿ ಜನರ ಗಣರಾಜ್ಯ

ಚೀನಾ ಮತ್ತು ಭಾರತ ೨೦೧೭ರಲ್ಲಿ

  • ಸರಕು ತಯಾರಿಕೆ ಆರ್ಥಿಕತೆಯಲ್ಲಿ ಚೀನಾ ಈಗ ವಿಶ್ವದಲ್ಲಿ ಎಲ್ಲರನ್ನೂ ಮೀರಿಸಿದ ಹೊಸ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮುತ್ತಿದೆ. ಆ ದೇಶ ಈಗ ಬಾಹ್ಯ ಜಗತ್ತಿನತ್ತ ನೋಡುತ್ತಿದ್ದು, ಪರಹಿತ ಸಾಧನೆ ಬಗ್ಗೆ ಆಲೋಚಿಸುತ್ತಿದೆ. ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ಕ್ಸಿ ಜಿನ್‌ ಪಿಂಗ್‌ ಅವರು ಮಾಡಿರುವ ಭಾಷಣವು ವಿಶ್ವ ಸಮುದಾಯಕ್ಕೆ ಹೊಸ ಸಂದೇಶ ನೀಡಿದೆ. ಜಾಗತೀಕರಣದ ಆರ್ಥಿಕತೆ ಮತ್ತು ಮುಕ್ತ ವ್ಯಾಪಾರದ ಬೆಂಬಲಕ್ಕೆ ಚೀನಾ ನಿಂತಿರುವುದು ಇದರಿಂದ ಸ್ಪಷ್ಟಗೊಳ್ಳುತ್ತದೆ. ವಿದೇಶಿ ಸರಕುಗಳ ಆಮದು ಮೇಲೆ ಗರಿಷ್ಠ ಪ್ರಮಾಣದ ತೆರಿಗೆ ವಿಧಿಸಿ ಸ್ವದೇಶಿ ಕೈಗಾರಿಕೆಗಳನ್ನು ರಕ್ಷಿಸುವ ಧೋರಣೆಯು ಒಂದರ್ಥದಲ್ಲಿ ವ್ಯಕ್ತಿಯೊಬ್ಬ ತನ್ನಷ್ಟಕ್ಕೆ ತನ್ನನ್ನು ಕತ್ತಲ ಕೋಣೆಯಲ್ಲಿ ಬಂಧಿಸಿ ಇಟ್ಟುಕೊಂಡಂತೆ ಭಾಸವಾಗುತ್ತದೆ; ಇದರಿಂದ ವ್ಯಕ್ತಿ ಮಳೆ, ಚಳಿಯಿಂದ ರಕ್ಷಣೆ ಪಡೆದುಕೊಂಡರೂ ಬೆಳಕು ಮತ್ತು ಗಾಳಿಯಿಂದಲೇ ವಂಚಿತನಾಗಬೇಕಾಗುತ್ತದೆ ಎಂದಿದ್ದಾರೆ. ಜಾಗತೀಕರಣದ ಪರ ಮಾತನಾಡುವ ಭರದಲ್ಲಿ ಜಿನ್‌ ಪಿಂಗ್‌ ಅವರು ಡೊನಾಲ್ಡ್‌ ಟ್ರಂಪ್‌ ಅವರಿಗೆ ಬುದ್ಧಿ ಮಾತು ಹೇಳಲೂ ಹವಣಿಸಿರುವುದು ವೇದ್ಯವಾಗುತ್ತದೆ.
  • ಜಾಗತಿಕ ಹವಾಮಾನ ಬದಲಾವಣೆಯ ಈ ದಿನಗಳಲ್ಲಿ ಜಾಗತಿಕ ಸಮುದಾಯವು ಶಾಂತಿಯುತವಾಗಿ ಪರಸ್ಪರ ಸಹಬಾಳ್ವೆ ನಡೆಸುವ ಅಗತ್ಯ ಹೆಚ್ಚಿರುವ ಸಂದರ್ಭದಲ್ಲಿ ಜಾಗತೀಕರಣಕ್ಕೆ ಹೆಚ್ಚು ಮಹತ್ವ ಇರುವುದನ್ನು ನಿರ್ಲಕ್ಷಿಸಲಿಕ್ಕಾಗದು. ಜಾಗತೀಕರಣದ ವಿಷಯದಲ್ಲಿ ಚೀನಾ ತಳೆದಿರುವ ಧೋರಣೆಯು ಅದರ ಆಷಾಢಭೂತಿತನವನ್ನೂ ಬಯಲುಗೊಳಿಸಿದೆ. ಮುಕ್ತ ವ್ಯಾಪಾರ ಮತ್ತು ಜಾಗತಿಕ ವ್ಯಾಪಾರ ಕಾಯ್ದೆ ಮತ್ತು ನಿಯಮಗಳನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಚೀನಾ ಪ್ರತಿಪಾದಿಸುತ್ತಿರುವುದು ಅದರ ಕಪಟತನಕ್ಕೆ ಕನ್ನಡಿ ಹಿಡಿಯುತ್ತದೆ.
  • ಚೀನಾ, ಒಂದೆಡೆ ಜಾಗತಿಕ ಹೊಸ ತಂತ್ರಜ್ಞಾನದ ಶಕ್ತಿಗಳಾದ ಗೂಗಲ್‌, ಟ್ವಿಟರ್‌ಗಳ ಮೇಲೆ ನಿರ್ಬಂಧ ವಿಧಿಸಿದೆ. ಆಮದು ನಿರ್ಬಂಧಿಸಲು ಅನೇಕ ಕ್ರಮಗಳನ್ನೂ ಕೈಗೊಂಡಿದೆ. ಬೌದ್ಧಿಕ ಆಸ್ತಿ ಹಕ್ಕುಗಳನ್ನು (ಐಪಿಆರ್‌) ಕದಿಯುತ್ತಿದೆ. ತನಗೆ ಸರಿಕಂಡಾಗಲೆಲ್ಲ ವಿದೇಶಿ ಕಾರ್ಪೊರೇಟ್‌ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತದೆ. ಬಹುರಾಷ್ಟ್ರೀಯ ಸಂಸ್ಥೆಗಳ ಕಂಪ್ಯೂಟರ್‌ಗಳಿಂದ ಮಾಹಿತಿ ಕದಿಯುತ್ತಿದೆ. ತನ್ನ ‘ಸಾಗರ ಭಯೋತ್ಪಾದನೆ’ ವಿಸ್ತರಿಸಲು ಸಮುದ್ರದಲ್ಲಿ ಕೃತಕ ದ್ವೀಪಗಳನ್ನು ಸೃಷ್ಟಿಸುವ ಯಕ್ಷಿಣಿಯನ್ನೂ ಮಾಡುತ್ತದೆ. ಪಾಕಿಸ್ತಾನದ ಉಗ್ರ ಮಸೂದ್‌ ಅಜರ್‌ನಂತಹ ಜಾಗತಿಕ ಭಯೋತ್ಪಾದಕನನ್ನು ತುಂಬು ಹೃದಯದಿಂದ ಬೆಂಬಲಿಸುತ್ತದೆ.
  • ತನ್ನೊಳಗೆ ಇಷ್ಟೆಲ್ಲ ಕಪಟತನ ತುಂಬಿಕೊಂಡಿದ್ದರೂ, ಚೀನಾವು ಜಾಗತೀಕರಣದ ಪರವಾಗಿ ದೊಡ್ಡ ದನಿಯಲ್ಲಿ ಮಾತನಾಡುತ್ತಿರುವುದು ಅಚ್ಚರಿ ಮೂಡಿಸುತ್ತದೆ. ವಿಶ್ವದ ಅನೇಕ ಶಕ್ತ ರಾಷ್ಟ್ರಗಳು ಜಾಗತೀಕರಣದಿಂದ ಹಿಂದೆ ಸರಿಯುವ ಮಾತು ಆಡುತ್ತಿರುವಾಗ ಚೀನಾ, ಜಾಗತೀಕರಣದ ಪ್ರಯೋಜನಗಳ ಬಗ್ಗೆ ದೊಡ್ಡದಾಗಿ ದನಿ ಎತ್ತಿರುವುದು ಕುತೂಹಲಕಾರಿ ಸಂಗತಿಯಾಗಿದೆ. ಕ್ಸಿ ಜಿನ್‌ ಪಿಂಗ್‌ ಅವರ ಭಾಷಣವು, ಚೀನಾ ವಿಶ್ವದ ನಾಯಕತ್ವ ವಹಿಸಿಕೊಳ್ಳುವ ಇರಾದೆಯನ್ನು ಸ್ಪಷ್ಟಪಡಿಸುತ್ತದೆ.
  • ನೆರೆಹೊರೆಯಲ್ಲಿಯೇ ಇರುವ ಮತ್ತು ನಮಗೆ ಸೇರಿದ ಭೂಭಾಗದ ಮೇಲೆ ಚೀನಾ ಈಗಲೂ ತನ್ನ ಹಕ್ಕು ಸ್ಥಾಪಿಸಲು ಹವಣಿಸುತ್ತಲೇ ಇದೆ. ಜಿನ್‌ಪಿಂಗ್ ಅವರು ತಮ್ಮ ಭಾಷಣದಲ್ಲಿ, ಯುರೊ ಏಷ್ಯಾ ಮತ್ತು ಚೀನಾದ ಮಧ್ಯೆ ರಸ್ತೆ ಸಂಪರ್ಕದ ವ್ಯಾಪಾರ ವಹಿವಾಟು ಉತ್ತೇಜಿಸುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಸಮಾವೇಶದ ಇತರ ವೇದಿಕೆಗಳಲ್ಲಿ ಮಾತನಾಡಿರುವ ಚೀನಾದ ಪ್ರತಿನಿಧಿಗಳು, 64 ದೇಶಗಳನ್ನು ಒಳಗೊಂಡ 100 ವರ್ಷಗಳ ಯೋಜನೆ ಬಗ್ಗೆ ವಿವರ ಮುಂದಿಟ್ಟಿದ್ದಾರೆ. ಈ ಸಲಹೆಗಳನ್ನು ನೋಡಿದರೆ, ಚೀನಾ, ಉತ್ತರ ಅಟ್ಲಾಂಟಿಕ್‌ ಒಪ್ಪಂದ ಸಂಘಟನೆಗಿಂತ (ನ್ಯಾಟೊ) ದೊಡ್ಡದಾದ ಸಂಘಟನೆ ಅಸ್ತಿತ್ವಕ್ಕೆ ತರುವ ಕನಸು ಹೊಂದಿರುವುದು ಸ್ಪಷ್ಟಗೊಳ್ಳುತ್ತದೆ.[೧]

ಉಲ್ಲೇಖ

  1. ಶೇಖರ್‌ ಗುಪ್ತ;ಚೀನಾ ಎಂಬ ಆಷಾಢಭೂತಿ;22 Jan, 2017
ಚಲಾವಣೆಯಲ್ಲಿರುವ ನಗದು ವ್ಯವಸ್ಥೆಗಳು

ಪ್ರಪಂಚದ ಬಹುತೇಕ ದೇಶಗಳು ತಮ್ಮದೇ ಆದ ನಗದು ವ್ಯವಸ್ಥೆಯನ್ನು ಹೊಂದಿರುತ್ತವೆ. ಈ ಲೇಖನದಲ್ಲಿ ಸಧ್ಯದಲ್ಲಿ ಚಲಾವಣೆಯಲ್ಲಿರುವ ಪ್ರಪಂಚದ ನಗದು ವ್ಯವಸ್ಥೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಚೀನಾ-ವಿಯೆಟ್ನಾಮ್ ಯುದ್ಧ

ಮೂರನೇ ಇಂಡೋಚೀನಾ ಯುದ್ಧ ಎಂದೂ ಪರಿಚಿತವಾಗಿರುವ ಚೀನಾ-ವಿಯೆಟ್ನಾಮ್ ಯುದ್ಧವು ೧೯೭೯ರಲ್ಲಿ ಚೀನಿ ಜನರ ಗಣರಾಜ್ಯ ಮತ್ತು ವಿಯೆಟ್ನಾಮ್‌ನ ಸಮಾಜವಾದಿ ಗಣರಾಜ್ಯಗಳ ಮಧ್ಯೆ ನಡೆದ ಒಂದು ಅಲ್ಪಾವಧಿಯ ಆದರೆ ರಕ್ತಸಿಕ್ತವಾದ ಗಡಿ ಯುದ್ಧವಾಗಿತ್ತು. ಚೀನಾ-ಬೆಂಬಲಿತ ಕಮೇರ್ ರೂಝ್‌ನ ಆಳ್ವಿಕೆಯನ್ನು ಕೊನೆಗೊಳಿಸಿದ ವಿಯೆಟ್ನಾಮ್‌ನ ಕಂಬೋಡಿಯಾದ ಮುತ್ತಿಗೆ ಹಾಗೂ ಸ್ವಾಧೀನ ಮತ್ತು ಗಡಿಯ ಹತ್ತಿರದ ಚೀನಾದ ಪ್ರಾಂತಗಳಲ್ಲಿ ವಿಯೆಟ್ನಾಮ್‌ನ ದಾಳಿಗಳಿಗೆ ಪ್ರತ್ಯುತ್ತರವಾಗಿ ಚೀನಾ ಆಕ್ರಮಣವನ್ನು ಪ್ರಾರಂಭಿಸಿತು. ಉತ್ತರ ವಿಯೆಟ್ನಾಮ್‌ನ ಒಳಗೆ ಅಲ್ಪಕಾಲದ ಒಳನುಗ್ಗುವಿಕೆಯ ನಂತರ, ಸುಮಾರು ಒಂದು ತಿಂಗಳ ತರುವಾಯ ಚೀನಾದ ಸೇನೆಗಳು ಹಿಂದಕ್ಕೆ ಸರಿದವು.

ಚೀನಿ ಅಂತಃಕಲಹ

ಚೀನಿ ಅಂತಃಕಲಹ ಏಪ್ರಿಲ್ ೧೯೨೭ರಿಂದ ಮೇ ೧೯೫೦ರ ವರೆಗೆ ಚೀನಾದಲ್ಲಿ ನಡೆದ ಒಂದು ಅಂತಃಕಲಹ. ಇದು ಚೀನಾದ ರಾಷ್ಟ್ರೀಯತಾವಾದಿ ಪಕ್ಷ ಕುಒಮಿಂಟಾಂಗ್ ಮತ್ತು ಚೀನಾದ ಕಮ್ಯುನಿಸ್ಟ್ ಪಕ್ಷಗಳ ನಡುವೆ ನಡೆಯಿತು. ಈ ಕಲಹ ಪ್ರಮುಖವಾಗಿ ಪಾಶ್ಚಾತ್ಯ ಬೆಂಬಲಿತ ರಾಷ್ಟ್ರೀಯತಾವಾದ ಮತ್ತು ಸೋವಿಯೆಟ್ ಒಕ್ಕೂಟ ಬೆಂಬಲಿತ ಸಮತಾವಾದ ಸಿದ್ಧಾಂತಗಳನ್ನು ಪ್ರತಿನಿಧಿಸಿತು.

ಚೀನಿ ಭಾಷೆ

ಚೀನಿ ಭಾಷೆ (汉语/漢語, ಹಾನ್ಯೂ; 中文, ಝೋಂಗ್ವೇನ್) ಮೂಲತಃ ಹಾನ್ ಚೀನಿ ಜನರ ಭಾಷೆ. ಸಹಸ್ರಾರು ವರ್ಷಗಳ ಬೆಳವಣಗೆಯಿಂದ ಇದು ಅನೇಕ ಸ್ವರೂಪಗಳನ್ನು ಹೊಂದಿ ಇಂದು ಒಂದು ಭಾಷಾ ಕುಟುಂಬವೆನ್ನಬಹುದಾದಷ್ಟು ವೈವಿಧ್ಯ ಭಾಷೆಗಳ ಸಂಕಲನವಾಗಿದೆ. ಚೀನಿ-ಟಿಬೆಟನ್ ಮುಖ್ಯ ಭಾಷಾ ಕುಟುಂಬಕ್ಕೆ ಇದು ಸೇರಿದೆ. About one-sixth of the world’s population, or over one billion people, speak some form of Chinese as their native language. The identification of the varieties of Chinese as "languages" or "dialects" is controversial. As a language family Chinese has an estimated nearly 1.2 billion speakers; Mandarin Chinese alone has around 851 million native speakers, outnumbering any other language in the world.Spoken Chinese is distinguished by its high level of internal diversity, though all spoken varieties of Chinese are tonal and analytic. There are between six and twelve main regional groups of Chinese (depending on classification scheme), of which the most populous (by far) is Mandarin (c. 850 million), followed by Wu (c. 90 million), Min (c. 70 million) and Cantonese (c. 70 million). Most of these groups are mutually unintelligible, though some, like Xiang and the Southwest Mandarin dialects, may share common terms and some degree of intelligibility. Chinese is classified as a macrolanguage with thirteen sub-languages in ISO 639-3, though the identification of the varieties of Chinese as multiple "languages" or as "dialects" of a single language is a contentious issue.

The standardized form of spoken Chinese is Standard Mandarin "普通话/普通話 (pinyin: pǔtōnghùa); 国语/國語 (pinyin: gúoyǔ)", based on the Beijing dialect. Standard Mandarin is the official language of the People's Republic of China, the Republic of China in Taiwan, as well as one of four official languages of Singapore. Chinese—de facto, Standard Mandarin—is one of the six official languages of the United Nations. Of the other varieties, Standard Cantonese is common and influential in Cantonese-speaking overseas communities, and remains one of the official languages of Hong Kong (together with English) and of Macau (together with Portuguese). Min Nan, part of the Min language group, is widely spoken in southern Fujian, in Taiwan (where it is known as Taiwanese or Hoklo) and in Southeast Asia (where it dominates in Singapore, Malaysia and the Philippines and is known as Hokkien).

ಡಿಸೆಂಬರ್ ೪

ಡಿಸೆಂಬರ್ ೪ - ಡಿಸೆಂಬರ್ ತಿಂಗಳಿನ ನಾಲ್ಕನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೩೮ನೇ (ಅಧಿಕ ವರ್ಷದಲ್ಲಿ ೩೩೯ನೇ) ದಿನ.

ಟೆಂಪ್ಲೇಟು:ಡಿಸೆಂಬರ್ ೨೦೧೯

ಇತರ ಭಾಷೆಗಳು

This page is based on a Wikipedia article written by authors (here).
Text is available under the CC BY-SA 3.0 license; additional terms may apply.
Images, videos and audio are available under their respective licenses.