ಕನ್ಫ್ಯೂಷಿಯಸ್

ಕನ್ಫ್ಯೂಷಿಯಸ್

ಕನ್ಫ್ಯೂಷಿಯಸ್[೧] ( ಸೆಪ್ಟೆಂಬರ್ ೨೮, ೫೫೧ ಇಂದ ೪೭೯ ಬಿಸಿ) ಚೀನಾ ದೇಶದ ಐತಿಹಾಸಿಕ ಬೋಧಕ, ರಾಜಕಾರಣಿ ಹಾಗು ತತ್ವಜ್ಞಾನಿ.[೨] ಕನ್ಫ್ಯೂಷಿಯಸ್ ಅವರ ತತ್ವಗಳು ವೈಯಕ್ತಿಕ ಹಾಗು ಸಾಮಾಜಿಕ ನೈತಿಕತೆ, ಸೂಕ್ತ ಸಾಮಾಜಿಕ ಸಂಬಂಧಗಳು, ಸಾಮಾಜಿಕ ನ್ಯಾಯ ಮತ್ತು ಪ್ರಾಮಣಿಕತೆ ಬಗ್ಗೆ ಸಾರುತ್ತವೆ. ಅವರ ಅನುಯಾಯಿಗಳು "ಹಂಡ್ರೆಡ್ ಸ್ಕೂಲ್ ಆಫ಼ ತಾಟ್" ಯುಗದಲ್ಲಿ ಇತರೆ ತತ್ವಜ್ಞಾನಿ ಗಳೊಂದಿಗೆ ಕಿನ್ ರಾಜವಂಶದ ಶಾಸನವಾದಿಗಳ ಪರ ವಾದ ಮಂಡಿಸುತ್ತಿದ್ದರು. ಕಿನ್ ರಾಜವಂಶದ ನಂತರ ಚು ರಾಜವಂಶವನ್ನು ಸೋಲಿಸಿ ಗದ್ದುಗೆ ಏರಿದ ಹ್ಯಾನ್ ರಾಜವಂಶ ಕನ್ಫ್ಯೂಷಿಯಸ್ ತತ್ವಗಳನ್ನು ಅಧಿಕೃತ ಗೊಳಿಸಿ, ಕನ್ಫ್ಯೂಷಿಯಸ್ ಸಿದ್ಧಾಂತ ಅಥವಾ ಕನ್ಫ್ಯೂಷಿಯನಿಸಮ್ ಎಂದು ಪ್ರಸಿದ್ಧಗೊಳಿಸಿದರು.

ಚೀನೀ ಭಾಷೆಯ ಹಲವು ಮೇರು ಕೃತಿಗಳನ್ನು ರಚಿಸಿರುವ ಹಾಗು ಸಂಪಾದಿಸಿರುವ ಹೆಗ್ಗಳಿಕೆ ಕನ್ಫ್ಯೂಷಿಯಸ್ ಅವರಿಗೆ ಸಲ್ಲುತ್ತದೆ. ಅವರ ಬೋಧನೆ ಗಳನ್ನು ಅವರ ಮರಣದ ನಂತರ "ಅನಲೆಕ್ಟೆಸ್" ಎಂಬ ಪುಸ್ತಕದಲ್ಲಿ ಸಂಗ್ರಹಿಸಲಾಗಿದೆ.

ಕನ್ಫ್ಯೂಷಿಯಸ್ ತತ್ವಗಳು ಮೂಲತಃ ಚೀನೀ ಸಂಪ್ರದಾಯ ಹಾಗು ನಂಬಿಕೆ ಗಳಿಗೆ ಸೇರಿವೆ. ಅವರ ಬೋಧನೆಗಳು ಕೌಟುಂಬಿಕ ನಿಷ್ಠೆ, ಪೂರ್ವಿಕರ ಆರಾಧನೆ, ಮಕ್ಕಳಿಂದ ತಮ್ಮ ಹಿರಿಯರಿಗೆ ಗೌರವ, ಸತಿಯರಿಗೆ ತಮ್ಮ ಪತಿಯ ಮೇಲೆ ಗೌರವದ ಕುರಿತಾಗಿರುತ್ತಿದವು. ಒಂದು ಒಳ್ಳೆ ಸರ್ಕಾರಕ್ಕೆ ಕುಟುಂಬವೇ ಮೂಲ ಎಂಬ ಅಭಿಪ್ರಾಯ ಉಳ್ಳವರಾಗಿದ್ದರು. "ನಿನಗೆ ಬೇರೆಯವರು ಏನು ಮಾಡಬಾರದೆಂದು ಬಯಸುವೆಯೊ, ಅದನ್ನು ನೀನು ಬೇರೆಯವರಿಗೆ ಮಾಡಬೇಡ" ಎಂಬ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ ಹಾಗು ಇದು ಅವರ ಸುವರ್ಣ ನಿಯಮವು ಹೌದು.

Konfuzius-1770
ಕನ್ಫ್ಯೂಷಿಯಸ್ ನ ಭಾವಚಿತ್ರ

ಹೆಸರುಗಳು

ಕನ್ಫ್ಯೂಷಿಯಸ್ ರವರ ಕೌಟುಂಬಿಕ ಹಾಗು ವೈಯಕ್ತಿಕ ಹೆಸರು ಕೊಂಗ್ ಕಿಯು. ಇದಕ್ಕೆ ಪೂರಕವಾದ ಹೆಸರೆಂದರೆ ಜ್ಹೊಂಗ್ನಿ. ಚೀನೀಸ್ ಭಾಷೆಯಲ್ಲಿ ಖೊಂಗ್ಶಿ, ಅರ್ಥ ಮಾಸ್ಟರ್ ಕೊಂಗ್ ಎಂದು. ಕೊಂಗ್ ಫ಼ುಜ಼ಿ ಅರ್ಥ ಗ್ರಾಂಡ್ ಮಾಸ್ಟರ್ ಕೊಂಗ್ ಎಂದೂ ಕರೆಯಲಾಗುವುದು. ರೋಮನೀಕರಣದ ವೇಡ್ ಗೈಲ್ಸ್ ವ್ಯವಸ್ಥೆಯಲ್ಲಿ ಇವರ ಹೆಸರನ್ನು ಕುಂಗ್ ಫ಼ುಟ್ಸು ಎಂದು ನಿರೂಪಿಸಲಾಗಿದೆ. ಲ್ಯಾಟಿನ್ ಹೆಸರಾದ "ಕನ್ಫ್ಯೂಷಿಯಸ್", "ಕೊಂಗ್ ಫ಼ುಜ಼ಿ" ಎಂಬ ಹೆಸರಿನಿಂದ ಹುಟ್ಟಿಕೊಂಡಿದೆ. ಈ ಹೆಸರನ್ನು ಮೊದಲನೆಯ ಬಾರಿಗೆ ಮ್ಯಟ್ಟಿಯೊ ರಿಕ್ಕಿ ಎಂಬ ೧೬ ನೇ ಶತಮಾನದ ಕ್ರೈಸ್ತ ಪಾದ್ರಿ ಬಳಸಿದರು.

ಅನಲೆಕ್ಟೆಸ್ ಪುಸ್ತಕದಲ್ಲಿ, ಕನ್ಫ್ಯೂಷಿಯಸ್ ರವರನ್ನು "ದಿ ಮಾಸ್ಟರ್" ಎಂದು ನಮೂದಿಸಲಾಗಿದೆ. ಕ್ರಿ.ಶ. ೧ ರಲ್ಲಿಅವರಿಗೆ "ಲೌಡೆಬ್ಲಿ ಡೆಕ್ಲಾರಬಲ್ ಲಾರ್ಡ್ ನಿ" ಎಂದು ಮೊದಲನೆಯ ಮರಣೋತ್ತರ ಹೆಸರು ನೀಡಲಾಯಿತು. ೧೫೩೦ ರಲ್ಲಿ ಅವರನ್ನು "ಎಕ್ಸ್ಟೀಮ್ಲ್ಯ್ ಸೇಜ್ ಡಿಪಾರ್ಟೆಡ್ ಟೀಚರ್" ಎಂದು ಘೋಷಿಸಲಾಯಿತು. ಇದನ್ನು ಹೊರೆತು ಪಡಿಸಿ ಅವರನ್ನು ಮಹಾನ್ ಋಷಿ, ಮೊದಲನೆಯ ಗುರು ಹಾಗು ಹತ್ತು ಸಾವಿರ ಕಾಲಾಂತರಕ್ಕೆ ಮಾದರಿ ಗುರು ಎಂದೂ ಕರೆಯಲಾಗುತ್ತದೆ.

ಕೌಟುಂಬಿಕ ಹಿನ್ನಲೆ

(ಮೂಲ ಲೇಖನ: " ಫ್ಯಾಮಿಲಿ ಟ್ರೀ ಆಫ್ ಕನ್ಫ್ಯೂಷಿಯಸ್ ಇನ್ ದ ಮೇನ್ ಲೈನ್ ಆಫ್ ಡೆಸೆಂಟ್")

ಸಂಪ್ರದಾಯದ ಪ್ರಕಾರ, ಕನ್ಫ್ಯೂಷಿಯಸ್ ರವರ ಮೂರು ತಲೆಮಾರು ಹಿಂದಿನವರು ಲು ಸ್ಟೇಟ್ ಇಂದ ವಲಸೆ ಬಂದಿದ್ದರು. ಅವರು ಡ್ಯೂಕ್ಸ್ ಆಫ್ ಸಾಂಗ್ ಮೂಲಕ ಶಾಂಗ್ ರಾಜವಂಶಸ್ಥರಾಗಿದ್ದರು.

ಜೀವನಚರಿತ್ರೆ

ಆರಂಭಿಕ ಜೀವನ

ಕನ್ಫ್ಯೂಷಿಯಸ್ ಅವರು ಸೆಪ್ಟೆಂಬರ್ ೨೮ ೫೫೧ ಕ್ರಿ.ಪೂ. ದಲ್ಲಿ ಜನಿಸಿರುವುದಾಗಿ ನಂಬಲಾಗಿದೆ. ಲು ರಾಜ್ಯದ ಜ಼ೊವು ( ಇಂದಿನ ಕುಫು, ಶಾಂಡೊಂಗ್ ಪ್ರಾಂತ್ಯ) ಅವರ ಜನ್ಮಸ್ಥಾನ. ಅವರ ತಂದೆಯ ಹೆಸರು ಕೊಂಗ್ ಹೆ, ಅವರನ್ನು ಶೂಲಿಯಾಂಗ್ ಹೆ ಎಂದೂ ಕರೆಯಲಾಗುತಿತ್ತು. ಲು ಸೇನೆ ಯಲ್ಲಿ ಕಾರ್ಯನಿರ್ವಹಿಸುತಿದ್ದರು. ಕನ್ಫ್ಯೂಷಿಯಸ್ ತಮ್ಮ ಮೂರನೇಯ ವಯಸ್ಸಿನಲ್ಲಿ, ಅವರ ತಂದೆ ಕೊಂಗ್ ಹೆ ಮರಣ ಹೊಂದಿದರು. ನಂತರ ತಾಯಿ ಯಾನ್ ಜ಼ೆಂಗ್ ಜ಼ೈ ಮಗನನ್ನು ಬಡತನದಲ್ಲಿ ಬೆಳೆಸಬೇಕಾಯಿತು. ಅವರ ತಾಯಿ ನಲವತ್ತಕ್ಕು ಕಮ್ಮಿ ವಯಸ್ಸಿನಲ್ಲೆ ಮರಣ ಹೊಂದಿದರು. ಕನ್ಫ್ಯೂಷಿಯಸ್ ತಮ್ಮ ೧೯ ನೇ ವಯಸ್ಸಿನಲ್ಲಿ ಕಿಗುವಾನ್ ಎಂಬ ಉಪನಾಮ ಹೊಂದಿರುವವರನ್ನು ವರಿಸುತ್ತಾರೆ. ಒಂದು ವರ್ಷದ ಬಳಿಕ ಕೊಂಗ್ ಲಿ ಎನ್ನುವ ಮಗುವನ್ನು ಪಡೆಯುತ್ತಾರೆ. ನಂತರ ಆ ಮಗು "ಬೊಯು" ಎಂದರೆ ಚೀನಿ ಭಾಷೆಯಲ್ಲಿ "ಅತ್ಯುತ್ತಮ ಮೀನು" ಎಂದು ಪ್ರಸಿದ್ಧಿ ಹೊಂದುತ್ತದೆ. ನಂತರ ಕನ್ಫ್ಯೂಷಿಯಸ್ ಮತ್ತು ಕಿಗುವಾನ್ ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡುತ್ತಾರೆ, ಅದರಲ್ಲಿ ಒಂದು ಮಗು ಆರಂಭಿಕ ಜೀವನದಲ್ಲೆ ಮರಣಕ್ಕೆ ಗುರಿಯಾಗುತ್ತದೆ. ಕನ್ಫ್ಯೂಷಿಯಸ್ ಸಾಮಾನ್ಯರಿಗೆಂದೆ ಇದ್ದ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆದರು. ಆರು ಕಲೆಗಳಲ್ಲಿ ಪರಿಣಿತಿ ಯನ್ನು ಗಳಿಸುತ್ತಾರೆ.

ಕನ್ಫ್ಯೂಷಿಯಸ್, ಶ್ರೀಮಂತ ಮತ್ತು ಸಾಮಾನ್ಯ ಜನರ ನಡುವಿನ ವರ್ಗವಾಗಿದ್ದ ಶೀ ವರ್ಗದಲ್ಲಿ ಜನಿಸಿದ್ದರು. ಅವರ ಆರಂಭಿಕ ೨೦ ವರ್ಷಗಳಲ್ಲಿ ಹಲವಾರು ಸರ್ಕಾರಿ ಕೆಲಸಗಳನ್ನು ನಿರ್ವಹಿಸಿದ್ದರು. ತಮ್ಮ ತಾಯಿಯ ಅಂತ್ಯಕ್ರಿಯೆಯನ್ನು ನೆರವೇರಿಸಲು, ಲೆಕ್ಕಪುಸ್ತಕ ಬರೆಯುವವನಾಗಿಯು ಹಾಗು ಕುರಿ, ಕುದುರೆಗಳ ಪಾಲನೆಯನ್ನು ಮಾಡುವವನಾಗಿಯು ಸೇವೆ ಸಲ್ಲಿಸಿದ್ದರು. ೨೩ ವಯಸ್ಸಿನ ಕನ್ಫ್ಯೂಷಿಯಸ್ ಅವರ ತಾಯಿಯ ಮರಣದ ಬಳಿಕ ಸಂಪ್ರದಾಯದ ಅನುಗುಣವಾಗಿ ಮೂರು ವರ್ಷ ಶೋಕಾಚರಣೆ ಯನ್ನು ಮಾಡಿದ್ದರು.

ರಾಜಕೀಯ ಬದುಕು:

ಲು ರಾಜ್ಯವು ಆಡಳಿತ ಸಭೆ ಇಂದ ಆಳಲ್ಪಟ್ಟಿತ್ತು. ಇದರ ಅಡಿಯಲ್ಲಿ ವಿಸ್ಕೌಂಟ್ ಪಟ್ಟ ಹೊಂದಿದ್ದ ಮೂರು ಶ್ರೀಮಂತ ಕುಟುಂಬಗಳಿದ್ದವು. ಅವರು ಪಿತ್ರಾರ್ಜಿತವಾಗಿ ಲು ರಾಜ್ಯದ ಆಡಳಿತಶಾಹಿಗಳ ಪೀಠವನ್ನು ಅಲಂಕರಿಸುತ್ತಿದ್ದರು. ಜಿ ಕುಟುಂಬ ಜನರ ಸಚಿವ ಸ್ಥಾನ ಹಾಗು ಪ್ರಧಾನ ಮಂತ್ರಿ ಸ್ಥಾನಗಳನ್ನು, ಮೆಂಗ್ ಕುಟುಂಬ ವಿವಿಧ ಕಾರ್ಯಗಳ ಸಚಿವ ಸ್ಥಾನ ಮತ್ತು ಶು ಕುಟುಂಬ ಯುದ್ಧ ಸಚಿವ ಸ್ಥಾನಗಳನ್ನು ಅಲಂಕರಿಸುತ್ತಿದ್ದವು. ೫೦೫ ಕ್ರಿ.ಪೂ.ದ ಚಳಿಗಾಲದಲ್ಲಿ ಜಿ ಕುಟುಂಬಕ್ಕೆ ಸೇರಿದ ಯಾಂಗ್ ಹುವ ಬಂಡಾಯ ಎದ್ದು, ಜಿ ಕುಟುಂಬದ ಸಂಪೂರ್ಣ ಆಡಳಿತವನ್ನು ವಶಪಡಿಸಿಕೊಳ್ಳುತ್ತಾನೆ. ಆದರೆ ೫೦೧ ಕ್ರಿ.ಪೂ.ದ ಬೇಸಿಗೆ ಕಾಲದೊಳಗೆ ಮೂರು ಆಡಳಿತಶಾಹಿ ಕುಟುಂಬಗಳು ಒಗ್ಗೂಡಿ ಯಾಂಗ್ ಹುವ ನನ್ನು ಯಶಸ್ವಿಯಾಗಿ ಲು ರಾಜ್ಯದಿಂದ ಹೊರ ಹಾಕುತ್ತಾರೆ. ಅಷ್ಟರಲ್ಲಿ ಕನ್ಫ್ಯೂಷಿಯಸ್ ತಮ್ಮ ಭೋಧನೆಗಳ ಮೂಲಕ ಗಣನೀಯ ಖ್ಯಾತಿಯನ್ನು ಪಡೆದಿದ್ದರು. ಈ ಮೂರು ಆಡಳಿತಶಾಹಿ ಕುಟುಂಬಗಳು ಕಾನೂನುಬದ್ಧ ಸರ್ಕಾರಕ್ಕೆ ನಿಷ್ಠೆಯಿಂದಿರಲು, ಸನ್ನಡತೆಯ ಪ್ರಾಮುಕ್ಯತೆ ಮತ್ತು ಸದಾಚಾರವನ್ನು ಅರಿಯಲು ಕನ್ಫ್ಯೂಷಿಯಸ್ ರವರನ್ನು ಸಂಪರ್ಕಿಸುತ್ತಿದ್ದರು. ಆದ್ದರಿಂದ ಆ ವರ್ಷ (೫೦೧ ಕ್ರಿ.ಪೂ.) ಕನ್ಫ್ಯೂಷಿಯಸ್ ರವರನ್ನು ಒಂದು ಪಟ್ಟಣದ ಗವರ್ನರ್ ಆಗಿ ನೇಮಿಸಲಾಯಿತು. ದಿನಗಳುರುಳಿದಂತೆ ಕನ್ಫ್ಯೂಷಿಯಸ್ ಅಪರಾಧ ಸಚಿವರಾಗಿ ಹೊರಹೊಮ್ಮಿದರು.

ಕನ್ಫ್ಯೂಷಿಯಸ್ ಮೂರು ಆಡಳಿತಶಾಹಿ ಕುಟುಂಬಗಳಿಗೆ ಸೇರಿದ ಭದ್ರ ಕೋಟೆಗಳನ್ನು ಕೆಡವಿ, ಅಧಿಕಾರವನ್ನು ಸಂಪೂರ್ಣವಾಗಿ ಆಡಳಿತ ಸಭೆಗೆ ಹಿಂದಿರುಗಿಸಲು ಇಚ್ಛಿಸಿದರು. ಆದರೆ ಕನ್ಫ್ಯೂಷಿಯಸ್ ಸಂಪೂರ್ಣ ರಾಜತಂತ್ರದ ಮೇಲೆ ಅವಲಂಬಿಸಿದ್ದರು. ಅವರಿಗೆ ಯಾವುದೇ ಸೈನ್ಯದ ಸಹಕಾರವಿರಲಿಲ್ಲ. ಕ್ರಿ.ಪೂ. ೫೦೦ ದಲ್ಲಿ ಹೋ ಪಟ್ಟಣದ ಗವರ್ನರ್ ಆಗಿದ್ದ ಹೋ ಫಾನ್ ಅವನ ಮೇಲಾಡಳಿತವಾಗಿದ್ದ ಶು ರಾಜವಂಶದ ವಿರುದ್ಧವಾಗಿ ಧಂಗೆ ಏಳುತ್ತಾನೆ. ಮೆಂಗ್ ಮತ್ತು ಶು ರಾಜವಂಶಗಳು ಹೋ ನನ್ನು ಮುತ್ತಿಗೆ ಹಾಕಿದರೂ ಯಶಸ್ವಿಯಾಗಲಿಲ್ಲ. ಒಬ್ಬಾ ನಿಷ್ಠಾವಂತ ಸರ್ಕಾರಿ ಅಧಿಕಾರಿ ಜನರೊಂದಿಗೆ ಮಧ್ಯ ಪ್ರವೇಶಿಸಿ ಹೋ ಫಾನ್ ಕೀ ರಾಜ್ಯಕ್ಕೆ ಹೋಗುವಂತೆ ಮಾಡುತ್ತಾರೆ. ಈ ಸಂದರ್ಭವು ಕನ್ಫ್ಯೂಷಿಯಸ್ ಮತ್ತು ಅವರ ಅನುಯಾಯಿಗಳಿಗೆ ಲಾಭದಾಯಕವಾಗಿತ್ತು. ಈಗ ಅವರು ಆಡಳಿತಶಾಹಿ ಕುಟುಂಬಗಳಿಗೆ ತಮ್ಮ ಭದ್ರ ಕೋಟೆಗಳನ್ನು ಕೆಡವಿ, ಉದಾರ ಆಡಳಿತದೊಂದಿಗೆ ಜನರ ಹಿತಾಸಕ್ತಿಗೆ ಶ್ರಮಿಸಲು ಸಲಹೆ ನೀಡುತ್ತಾರೆ. ಒಂದು ವರ್ಷದ ಬಳಿಕ ಕನ್ಫ್ಯೂಷಿಯಸ್ ಮತ್ತು ಅವರ ಅನುಯಾಯಿಗಳು ಆಡಳಿತಶಾಹಿ ಕುಟುಂಬಗಳಿಗೆ, ಇತರರು ನಿರ್ಮಿಸಿದ ಗೋಡೆಗಳನ್ನು ನೆಲಸಮಗೊಳಿಸುವಂತೆ ಮನವೊಲಿಸಿದರು. ಇದರ ಪ್ರಕಾರ ಹೋ ನಿರ್ಮಿಸಿದ ಗೋಡೆಯನ್ನು ಶು ಕುಟುಂಬ, ಬೈ ನಿರ್ಮಿಸಿದ ಗೋಡೆಯನ್ನು ಜಿ ಕುಟುಂಬ, ಚೆಂಗ್ ನಿರ್ಮಿಸಿದ ಗೋಡೆಯನ್ನು ಮೆಂಗ್ ಕುಟುಂಬ ನೆಲಸಮಗೊಳಿಸಿತು. ಮೊದಲನೆಯದಾಗಿ ಶು ಕುಟುಂಬವು ತನ್ನ ಸೇನೆಯನ್ನು ಹೋ ಪಟ್ಟಣಕ್ಕೆ ಕಳಿಸುವುದರ ಮುಖಾಂತರ ಅದನ್ನು ನಾಶಪಡಿಸಿತು. ಇದಾದ ಬಳಿಕ ಜಿ ಕುಟುಂಬದ ಧಾರಕನಾಗಿದ್ದ ಗೊಂಗ್ ಶಾನ್ ಫುರೊ, ಬೈ ಕುಟುಂಬದ ಮೇಲೆ ಧಂಗೆ ಏಳುವುದರ ಮೂಲಕ ಅದನ್ನು ತನ್ನ ವಶಕ್ಕೆ ಪಡೆಯುತ್ತಾನೆ. ಬೇಗ ಒಂದು ದಾಳಿಯನ್ನು ರೂಪಿಸಿ, ರಾಜಧಾನಿ ಲು ಅನ್ನು ಪ್ರವೇಶಿಸುತ್ತಾನೆ

ಉಲ್ಲೇಖಗಳು

  1. https://books.google.co.in/books?id=1R9MAQAAQBAJ&pg=PA4&lpg=PA4&dq=confucius+age+19+marry+qiguan&source=bl&ots=xlKmoo6xBZ&sig=iIVdL5M3fvp42ZqQUaXb4XwpMFE&hl=en&sa=X&redir_esc=y#v=onepage&q=confucius%20age%2019%20marry%20qiguan&f=false
  2. https://books.google.co.in/books?id=ZHvyCQAAQBAJ&pg=PA587&lpg=PA587&dq=confucius+great+sage+first+teacher&source=bl&ots=N-2mD_4M9f&sig=N9oQjur1tulRnUpVmY-BrCMa4yc&hl=en&sa=X&redir_esc=y#v=onepage&q=confucius%20great%20sage%20first%20teacher&f=false
ಕೈಗಾರಿಕಾ ಕ್ರಾಂತಿ

ಕೈಗಾರಿಕಾ ಕ್ರಾಂತಿಯು ೧೮ ಮತ್ತು ೧೯ನೇ ಶತಮಾನದ ಅವಧಿಯಲ್ಲಿ ಸಂಭವಿಸಿದೆ. ಆ ಅವಧಿಯಲ್ಲಿ ಕೃಷಿ, ಉತ್ಪಾದನೆ,ಗಣಿಗಾರಿಕೆ ಮತ್ತು ಸಾರಿಗೆಯಲ್ಲಿ ಪ್ರಮುಖ ಬದಲಾವಣೆಗಳಿಂದ ಸಾಮಾಜಿಕ ಆರ್ಥಿಕ ಮತ್ತು ಸಾಂಸ್ಕೃತಿಕ ಸ್ಥಿತಿಗತಿಗಳ ಮೇಲೆ ಗಾಢಪರಿಣಾಮ ಬೀರಿತು. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಪ್ರಾರಂಭವಾದ ಕೈಗಾರಿಕಾ ಕ್ರಾಂತಿ ತರುವಾಯ ಯುರೋಪ್‌ನಾದ್ಯಂತ, ಉತ್ತರ ಅಮೆರಿಕ ಮತ್ತು ಅಂತಿಮವಾಗಿ ವಿಶ್ವದಲ್ಲಿ ಹರಡಿತು. ಕೈಗಾರಿಕಾ ಕ್ರಾಂತಿಯ ಪ್ರಾರಂಭವು ಮಾನವ ಇತಿಹಾಸದಲ್ಲಿ ಪ್ರಮುಖ ತಿರುವೆಂದು ಗುರುತಿಸಲಾಗಿದೆ; ಬಹುತೇಕ ಜನಜೀವನದ ಪ್ರತಿಯೊಂದು ಅಂಶದ ಮೇಲೆ ಅಂತಿಮವಾಗಿ ಕೆಲವು ರೀತಿಯಲ್ಲಿ ಪ್ರಭಾವ ಬೀರಿತು.

೧೮ನೇ ಶತಮಾನದ ಉತ್ತರಾರ್ಧದಲ್ಲಿ ಪ್ರಾರಂಭವಾದ ಕೈಗಾರಿಕಾ ಕ್ರಾಂತಿಯಿಂದ ಗ್ರೇಟ್ ಬ್ರಿಟನ್‌ನ ಕೆಲವು ಭಾಗಗಳಲ್ಲಿ ಮುಂಚಿನ ದೈಹಿಕ ದುಡಿಮೆ ಮತ್ತು ಭಾರಎಳೆಯುವ ಪ್ರಾಣಿ-ಆಧಾರಿತ ಆರ್ಥಿಕತೆಯಿಂದ ಯಂತ್ರ-ಆಧಾರಿತ ಉತ್ಪಾದನೆಯತ್ತ ಪರಿವರ್ತನೆ ಆರಂಭವಾಯಿತು. ವಸ್ತ್ರೋದ್ಯಮ ಕೈಗಾರಿಕೆಗಳ ಯಾಂತ್ರೀಕರಣ,ಕಬ್ಬಿಣ ತಯಾರಿಸುವ ತಂತ್ರಗಳ ಅಭಿವೃದ್ಧಿ ಮತ್ತು ಸಂಸ್ಕರಿತ ಕಲ್ಲಿದ್ದಲಿನ ಹೆಚ್ಚೆಚ್ಚು ಬಳಕೆಯಿಂದ ಕೈಗಾರಿಕಾ ಕ್ರಾಂತಿ ಆರಂಭವಾಯಿತು. ಕಾಲುವೆಗಳು, ಸುಧಾರಿತ ರಸ್ತೆಗಳು ಮತ್ತು ರೈಲ್ವೆಗಳನ್ನು ಚಾಲ್ತಿಗೆ ತಂದಿದ್ದರಿಂದ ಮಾರಾಟ ವಿಸ್ತರಣೆ ಸಾಧ್ಯವಾಯಿತು. ಕಲ್ಲಿದ್ದಲು ಮುಖ್ಯ ಇಂಧನವಾದ ಉಗಿಶಕ್ತಿಪ್ರಾರಂಭ, ಜಲಚಕ್ರಗಳು ಮತ್ತು ಶಕ್ತಿಆಧಾರಿತ ಯಂತ್ರ(ಮುಖ್ಯವಾಗಿ ವಸ್ತ್ರೋದ್ಯಮ ತಯಾರಿಕೆಯಲ್ಲಿ)ಗಳ ವ್ಯಾಪಕ ಬಳಕೆಯಿಂದ ಉತ್ಪಾದನೆ ಸಾಮರ್ಥ್ಯದಲ್ಲಿ ಗಮನಾರ್ಹ ಹೆಚ್ಚಳಕ್ಕೆ ಪುಷ್ಠಿ ನೀಡಿತು. ಸರ್ವ-ಲೋಹದ ಯಂತ್ರೋಪಕರಣಗಳನ್ನು ೧೯ನೇ ಶತಮಾನದ ಮೊದಲ ಎರಡು ದಶಕಗಳಲ್ಲಿ ಅಭಿವೃದ್ಧಿಪಡಿಸಿದ್ದರಿಂದ ಇತರೆ ಕೈಗಾರಿಕೆಗಳಲ್ಲಿ ಉತ್ಪಾದನೆಗೆ ಹೆಚ್ಚು ಉತ್ಪಾದನೆ ಯಂತ್ರಗಳ ತಯಾರಿಕೆಗೆ ಅವಕಾಶ ಒದಗಿಸಿತು. ಪಶ್ಚಿಮ ಯುರೋಪ್ ಮತ್ತು ಉತ್ತರ ಅಮೆರಿಕದಾದ್ಯಂತ ೧೯ನೇ ಶತಮಾನದಲ್ಲಿ ಇದರ ಪ್ರಭಾವಗಳು ವಿಸ್ತರಿಸಿದವು. ತರುವಾಯ ವಿಶ್ವದ ಬಹುಭಾಗದಲ್ಲಿ ಪ್ರಭಾವ ಬೀರಿದ ಈ ಪ್ರಕ್ರಿಯೆಯು ಕೈಗಾರೀಕರಣವೆಂಬ ಹೆಸರಿನೊಂದಿಗೆ ಮುಂದುವರಿಯಿತು. ಕೈಗಾರೀಕರಣದಿಂದ ಸಮಾಜದ ಮೇಲೆ ಉಂಟಾದ ಬದಲಾವಣೆಯ ಪರಿಣಾಮ ಅಗಾಧವಾಗಿತ್ತು.ಪ್ರಥಮ ಕೈಗಾರಿಕೆ ಕ್ರಾಂತಿಯು ೧೮ನೇ ಶತಮಾನದಲ್ಲಿ ಪ್ರಾರಂಭವಾಗಿ ೧೮೫೦ರ ಆಸುಪಾಸಿನಲ್ಲಿ ಎರಡನೇ ಹಂತದ ಕೈಗಾರಿಕಾ ಕ್ರಾಂತಿಯ ಜತೆ ವಿಲೀನಗೊಂಡಿತು. ಆ ಸಂದರ್ಭದಲ್ಲಿ ಉಗಿ-ಶಕ್ತಿ ಚಾಲಿತ ಹಡಗುಗಳು, ರೈಲ್ವೆಗಳ ಅಭಿವೃದ್ಧಿಯಿಂದ ಮತ್ತು ನಂತರ ೧೯ನೇ ಶತಮಾನದಲ್ಲಿ ಆಂತರಿಕ ದಹನ ಯಂತ್ರ ಮತ್ತು ವಿದ್ಯುಚ್ಛಕ್ತಿ ಉತ್ಪಾದನೆಯೊಂದಿಗೆ ತಾಂತ್ರಿಕ ಮತ್ತು ಆರ್ಥಿಕ ಪ್ರಗತಿ ವೇಗದ ಗತಿ ಪಡೆದುಕೊಂಡಿತು.

ಕೈಗಾರಿಕಾ ಕ್ರಾಂತಿ ಆವರಿಸಿದ ಕಾಲಾವಧಿಯನ್ನು ವಿವಿಧ ಇತಿಹಾಸಕಾರರು ಭಿನ್ನವಾಗಿ ಗುರುತಿಸಿದ್ದಾರೆ. ಬ್ರಿಟನ್‌ನಲ್ಲಿ ೧೭೮೦ರ ದಶಕದಲ್ಲಿ ಇದು "ಹೊರಹೊಮ್ಮಿತು" ಮತ್ತು ೧೮೩೦ರ ದಶಕ ಅಥವಾ ೧೮೪೦ರ ದಶಕದವರೆಗೆ ಅದರ ಅನುಭವ ಸಂಪೂರ್ಣ ತಟ್ಟಲಿಲ್ಲ ಎಂದು ಇತಿಹಾಸಕಾರ ಎರಿಕ್ ಹಾಬ್ಸ್‌ಬಾಮ್ ಹೇಳಿದ್ದಾರೆ. ಅದು ೧೭೬೦ ಮತ್ತು ೧೮೩೦ರ ಆಸುಪಾಸಿನಲ್ಲಿ ಸಂಭವಿಸಿತು ಎಂದು T.S.ಆಶ್‌ಟನ್ ಹೇಳಿದ್ದಾರೆ.

ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಯ ಪ್ರಕ್ರಿಯೆ ಕ್ರಮೇಣ ಸಂಭವಿಸಿತು ಮತ್ತು ಕ್ರಾಂತಿ ಎಂಬ ಪದವು ಈ ವಿದ್ಯಮಾನದ ನೈಜ ವಿವರಣೆಯಲ್ಲ ಎಂದು ೨೦ನೇ ಶತಮಾನದ ಇತಿಹಾಸಕಾರರಾದ ಜಾನ್ ಕ್ಲಾಪ್‌ಹ್ಯಾಮ್ ಮತ್ತು ನಿಕೋಲಾಸ್ ಕ್ರಾಫ್ಟ್ಸ್ ವಾದಿಸಿದ್ದಾರೆ. ಇತಿಹಾಸಕಾರರ ನಡುವೆ ಇದು ಇನ್ನೂ ಚರ್ಚಾಸ್ಪದ ವಸ್ತುವಾಗಿ ಉಳಿದಿದೆ. ಕೈಗಾರಿಕಾ ಕ್ರಾಂತಿ ಮತ್ತು ಆಧುನಿಕ ಬಂಡವಾಳಶಾಹಿ ಅರ್ಥವ್ಯವಸ್ಥೆ ಹೊರಹೊಮ್ಮುವುದಕ್ಕೆ ಮುಂಚಿತವಾಗಿ GDP ತಲಾದಾಯವು ಸ್ಥಿರವಾಗಿತ್ತು. ಕೈಗಾರಿಕಾ ಕ್ರಾಂತಿಯಿಂದ ಬಂಡವಾಳಶಾಹಿ ಅರ್ಥಿಕತೆಗಳಲ್ಲಿ ತಲಾದಾಯದ ಆರ್ಥಿಕ ಪ್ರಗತಿ ಶಕೆ ಪ್ರಾರಂಭವಾಯಿತು. ಕೈಗಾರಿಕಾ ಕ್ರಾಂತಿಯು ಇತಿಹಾಸದ ಅತೀ ಮುಖ್ಯ ವಿದ್ಯಮಾನಗಳಲ್ಲಿ ಒಂದೆಂದು ಇತಿಹಾಸಕಾರರು ಒಪ್ಪಿದ್ದಾರೆ.

ಚೀನಾದ ಇತಿಹಾಸ

ನಿಯೋಲಿಥಿಕ್ ಯುಗದಲ್ಲಿ, ಹಳದಿ ನದಿ (ಎಲ್ಲೊ ರಿವರ್) ಮತ್ತು ಯಾಂಗ್ತ್ಸೆ ನದಿಯ (ಯಾಂಗ್ತ್ಸೆ ರಿವರ್) ದಂಡೆಗಳ ಮೇಲೆ, ಬೇರೆ ಬೇರೆ ಪ್ರಾದೇಶಿಕ ಕೇಂದ್ರಗಳಲ್ಲಿ, ಚೀನಾ ನಾಗರೀಕತೆಯು ಉಗಮವಾಯಿತೆಂದು ಹೇಳಲಾಗುತ್ತದೆಯಾದರೂ, ಪ್ರಮುಖವಾಗಿ ಹಳದಿ ನದಿಯೇ ಚೀನಾ ನಾಗರೀಕತೆಯ ತೊಟ್ಟಿಲು ಎಂದು ಕೂಡಾ ಹೇಳಲಾಗುತ್ತದೆ. (ca. 1700 BC - 1046 BC) ಕಾಲದ ಶಾಂಗ್ ರಾಜಮನೆತನಕ್ಕೂ ಮೊದಲೇ ಲಿಖಿತ ಚೀನಾದ ಇತಿಹಾಸ ಇದ್ದುದನ್ನು ಕಾಣಬಹುದು. ದೈವದ ಮೂಳೆಗಳು ಅಥವಾ ಒರಾಕಲ್ ಬೋನ್ಸ್ ಮೇಲಿನ ಪುರಾತನ ಚೀನಾ ಭಾಷೆಯಲ್ಲಿರುವ ಲಿಪಿಯು ಶಾಂಗ್ ರಾಜಮನೆತನದ್ದೆ ಎಂದು ಹೇಳುವುದಕ್ಕೆ ಪುರಾವೆಗಳಿವೆ. ರೇಡಿಯೋ ಕಾರ್ಬನ್ ದಿನಾಂಕ ನಮೂದಾಗಿರುವ ಈ ಮೂಳೆಗಳು ಕ್ರಿಸ್ತಪೂರ್ವ 1500ಕ್ಕೂ ಮೊದಲೇ ಇದ್ದುದಾಗಿ ತಿಳಿದು ಬರುತ್ತದೆ. ಚೀನಾದ ಸಂಸ್ಕೃತಿ, ಸಾಹಿತ್ಯ ಮತ್ತು ತತ್ವಜ್ಞಾನಗಳ ಮೂಲವು ಝೋ ಆಡಳಿತದ (1045 BC-256 BC) ಕಾಲದಲ್ಲಿ ಬೆಳವಣಿಗೆ ಹೊಂದಿದ್ದಾಗಿ ಕಂಡು ಬರುತ್ತದೆ.

ಕ್ರಿ.ಪೂ. 8 ನೆಯ ಶತಮಾನದ ಆಂತರಿಕ ಮತ್ತು ಬಾಹ್ಯ ಒತ್ತಡಗಳೆರಡಕ್ಕೂ ಝೋ ರಾಜಮನೆತನವು ಬಾಗಬೇಕಾಗಿ ಬಂದುದು ಇತಿಹಾಸದಿಂದ ತಿಳಿದುಬರುತ್ತದೆ. ತನ್ನ ಪ್ರಾದೇಶಿಕ ಮತ್ತು ಸ್ಥಳೀಯ ಅರಸು ಮನೆತನಗಳನ್ನೇ ಹತ್ತಿಕ್ಕಲು ಝೋ ಆಡಳಿತಕ್ಕೆ ಸಾಧ್ಯವಾಗದೇ ಹೋಗುತ್ತದೆ. ಹಾಗಾಗಿಯೇ ಈ ಅರಸು ಮನೆತನವು ಕ್ರಮೇಣ ಸಣ್ಣ ಸಣ್ಣ ರಾಜ್ಯಗಳಾಗಿ ಒಡೆಯಲ್ಪಡುತ್ತದೆ. ವಸಂತ ಋತು ಮತ್ತು ಶಿಶಿರ ಋತುಗಳು ಪ್ರಾರಂಭಗೊಳ್ಳುವ ಸಮಯದಲ್ಲಿ ಶುರುವಾಗುವ ಈ ಒಡಕು, 'ಯುದ್ಧ ಮಾಡುವ ರಾಜ್ಯಗಳ ಕಾಲ'ದಲ್ಲಿಯಾಗಲೇ ಸಂಪೂರ್ಣವಾಗಿ ಒಂದು ಅಭಿವ್ಯಕ್ತಿಯನ್ನು ಪಡೆದುಕೊಂಡಿರುತ್ತದೆ. ಕ್ರಿ.ಪೂ. 221ರಲ್ಲಿ ಕಿನ್ ಶಿ ಹುಯಾಂಗನು ಹಲವಾರು ಯುದ್ಧದ ರಾಜ್ಯಗಳನ್ನು ಒಗ್ಗೂಡಿಸಿ, ಪುನಃ ಮೊತ್ತಮೊದಲ ಚೀನಾ ಅರಸು ನಾಡೊಂದನ್ನು ಕಟ್ಟುತ್ತಾನೆ. ನಂತರದಲ್ಲಿ ಬಂದ ಎಲ್ಲ ಚೀನೀ ಇತಿಹಾಸದ ಅರಸು ಮನೆತನಗಳು ಅಧಿಕಾರಶಾಹೀ ಪದ್ಧತಿಯನ್ನು ಅನುಸರಿಸಿದುವಷ್ಟೇ ಅಲ್ಲದೇ, ಚೀನಾದ ಚಕ್ರವರ್ತಿಗೆ ವಿಶಾಲ ರಾಜ್ಯಗಳನ್ನು ಹತೋಟಿಗೆ ತರಲು ನೆರವಾಗಿವೆ.

ಸಾಂಪ್ರದಾಯಿಕ ಅಥವಾ ರೂಢಿಗತ ಚೀನೀಯ ಇತಿಹಾಸದ ದೃಷ್ಟಿಕೋನದ ಪ್ರಕಾರ, ರಾಜಕೀಯ ಒಗ್ಗೂಡುವಿಕೆ ಮತ್ತು ಒಡೆಯುವಿಕೆಯ ಪ್ರಕ್ರಿಯೆಗಳು ಅದಲು ಬದಲಾಗುತ್ತಲೇ ಇರುತ್ತವೆ. ಇದಲ್ಲದೆಯೇ, ಚೀನಾ ಅಪರೂಪಕ್ಕೊಮ್ಮೆ ಎಂಬಂತೆ ಒಳ ಏಶಿಯಾದ ಜನರಿಂದ ಪ್ರಬಲವಾಗಿ ಹತ್ತಿಕ್ಕಲ್ಪಡುತ್ತದೆ. ಅದರಲ್ಲಿ ಹೆಚ್ಚಿನ ಮಂದಿ, ಹ್ಯಾನ್ ಚೈನೀಸ್ ಜನ ಸಮುದಾಯ ಎಂದು ಕರೆಯಲಾಗುವ ಪಂಗಡಕ್ಕೆ ಸೇರಿದವರಾಗಿರುತ್ತಾರೆ.

ಪರದೇಶಗಳಿಗೆ ವಲಸೆ ಹೋಗುವ, ಅಲ್ಲಿ ಸಾಂಸ್ಕೃತಿಕವಾಗಿ ಒಂದರ ಜೊತೆಗೊಂದು ಬೇರೆಯಬಲ್ಲ ಶಕ್ತಿಯಿರುವ ಹಾಗೂ ವಿಸ್ತಾರಗೊಳ್ಳುವ ಹಲವಾರು ಬದಲಾವಣೆಯ ಅಲೆಗಳು ಚೀನಾದ ಆಧುನಿಕ ಇತಿಹಾಸದ ಭಾಗವೇ ಆಗಿವೆಯಲ್ಲದೆ ಏಶಿಯಾದ ಹಲವಾರು ಭಾಗಗಳ ರಾಜಕೀಯ ಮತ್ತು ಸಾಂಸ್ಕೃತಿಕ ಪ್ರಭಾವಕ್ಕೊಳಪಟ್ಟಿವೆ ಎಂದು ಹೇಳಬಹುದು.

ಚೀನಾದ ಮಾರ್ಶಿಯಲ್ ಆರ್ಟ್ಸ್ ಅಥವಾ ಚೀನಾದ ಕದನ ಕಲೆಗಳು

ಚೀನಾದ ಮಾರ್ಶಿಯಲ್ ಆರ್ಟ್ಸ್ ಅಥವಾ ಕದನ ಕಲೆಗಳು , ಕೆಲವೊಮ್ಮೆ ಚೀನಾದ ಆಡು ನುಡಿಯ ಶಬ್ದ ವೂಶು (simplified Chinese: 武术; traditional Chinese: 武術; pinyin: wǔshù) ಮತ್ತು ಕುಂಗ್ ಫೂ (Chinese: 功夫 ಪಿನಿಯಿನ್ : ಗಾಂಗ್‌ಫೂ) ಎಂದು ಜನಪ್ರಿಯವಾಗಿ ಕರೆಯುವುದಿದೆ, ಇದು ಅಸಂಖ್ಯಾತ ಕಾಳಗ ಶೈಲಿಯನ್ನು ಹೊಂದಿದೆ ಮತ್ತು ಇದು ಇವತ್ತಿನ ಚೀನಾದಲ್ಲಿ ದಕ್ಷಿಣ ಭಾರತದಗುರು ಭೋಧೀಧರ್ಮರ ಮಾರ್ಗದರ್ಶನದ ಕಲರಿಪಯಟ್ಟುವಿನಿಂದ ಶತಮಾನಗಳಿಂದ ಅಭಿವೃದ್ಧಿಯಾಗುತ್ತ ಬಂದು ವೂಶುವಾಗಿ ಜನಪ್ರಿಯವಾಗಿದೆ. ಅನೇಕ ವೇಳೆ ಈ ಕಾಳಗ ಶೈಲಿಗಳನ್ನು ಅದರ ಸಾಮಾನ್ಯ ಗುಣ ವಿಶೇಷಣಗಳನ್ವಯ ವರ್ಗೀಕರಿಸಲಾಗುತ್ತದೆ, ಅವನ್ನು ಕದನ ಕಲೆಗಳ "ಕುಟುಂಬಗಳು" (家, jiā), "ಒಳಪಂಗಡಗಳು" (派, pài) ಅಥವಾ "ಶಾಲೆಗಳು" (門, ಪುರುಷರು) ಎನ್ನಲಾಗುತ್ತದೆ. ಈ ವಿಶೇಷಗುಣಗಳ ಉದಾಹರಣೆಗಳೆಂದರೆ ಪ್ರಾಣಿಗಳ ಕೂಗನ್ನು ಅಣುಕಿಸುವದರ ಜೊತೆಗೆ ಭೌತಿಕ ವ್ಯಾಯಾಮ ಅಥವಾ ಚೀನಿಯರ ತತ್ವಗಳಿಂದ, ಧರ್ಮಗಳಿಂದ ಮತ್ತು ಪುರಾಣ ಕಥೆಗಳಿಂದ ಪ್ರೇರಿತವಾದ ತರಬೇತಿಯ ವೈಖರಿ. ಗಿ ಕೌಶಲ್ಯ ನಿರ್ವಹಣೆಯ ಮೇಲೆ ಕೇಂದ್ರೀಕರಿಸುವ ಕೆಲವು ಶೈಲಿಗಳನ್ನು ಆಂತರಿಕ ವೆಂದು ಹಣೆಪಟ್ಟಿಯನ್ನು ಮಾಡಲಾಗಿದೆ (内家拳, nèijiāquán), ಇನ್ನಿತರವು ಮಾಂಸ ಖಂಡಗಳನ್ನು ಮತ್ತು ಹೃದಯ ಹಾಗೂ ರಕ್ತನಾಳಗಳಿಗೆ ಸಂಬಂದ್ಧಿಸಿದಂತಹವನ್ನು ಬೆಳೆಸುವುದಾಗಿರುತ್ತದೆ, ಇವುಗಳನ್ನು ಬಾಹ್ಯ ವೆಂದು ಗುರುತಿಸಲಾಗಿದೆ (外家拳, wàijiāquán). ಉತ್ತರ (北拳, běiquán) ಮತ್ತು ದಕ್ಷಿಣ (南拳, nánquán) ಎಂಬ ಭೂಗೋಳಿಕ ವಿಂಗಡಣೆಯೂ ಸಹಾ ಒಂದು ರೀತಿಯ ಜನಪ್ರಿಯ ವರ್ಗೀಕರಣ.

ಟಾವೊ ತತ್ತ್ವ

ಟಾವೊ ತತ್ತ್ವ (ಅಥವಾ ಡಾವೊಯಿಸಂ ) ಸಂಬಂಧಿತ ವಿವಿಧ ತತ್ತ್ವಶಾಸ್ತ್ರ ಮತ್ತು ಧಾರ್ಮಿಕ ಸಂಪ್ರದಾಯಗಳಿಗೆ ಸಂಬಂಧಿಸಿವೆ. ಇವು ಎರಡು ಸಹಸ್ರಮಾನಕ್ಕಿಂತಲೂ ಹೆಚ್ಚು ಕಾಲಪೂರ್ವ ಏಷ್ಯಾದ ಮೇಲೆ ಪ್ರಭಾವ ಬೀರಿದೆ. ವಿಶೇಷವಾಗಿ 19ನೇ ಶತಮಾನದಿಂದೀಚೆಗೆ ಪಾಶ್ಚಿಮಾತ್ಯ ಜಗತ್ತಿನ ಮೇಲೆ ಗಮನಸೆಳೆಯುವ ಪ್ರಭಾವ ಬೀರಿದೆ. ಪದ 道, ಟಾವೊ (ಅಥವಾ ಡಾವೊ , ರೋಮನೀಕರಣ ಯೋಜನೆ ಮೇಲೆ ಅವಲಂಬಿತವಾಗಿದೆ),ಸರಿಸುಮಾರು "ಮಾರ್ಗ" ಅಥವಾ "ದಾರಿ" (ಜೀವನದ)ಯಾಗಿ ಅನುವಾದ ಆಗುತ್ತದೆ. ಆದರೂಚೀನಾದ ಜಾನಪದೀಯ ಧರ್ಮ ಮತ್ತು ತತ್ತ್ವಶಾಸ್ತ್ರದಲ್ಲಿ ಇದು ಹೆಚ್ಚು ಅಮೂರ್ತ ಅರ್ಥಗಳನ್ನು ಹೊಂದಿದೆ. ಟಾವೊ ತತ್ತ್ವದ ಔಚಿತ್ಯ ಮತ್ತು ನೀತಿಗಳು ಟಾವೊದ ಮೂರು ಆಭರಣಗಳ ಬಗ್ಗೆ ಮಹತ್ವ ನೀಡುತ್ತದೆ.: ಕರುಣೆ, ಸೌಮ್ಯತೆ, ಮತ್ತು ನಮ್ರತೆ, ಟಾವೊ ತತ್ತ್ವದ ಚಿಂತನೆ ಸಾಮಾನ್ಯವಾಗಿ ನಿಸರ್ಗದಮೇಲೆ ಗಮನಹರಿಸುತ್ತದೆ, ಮಾನವ ಕುಲ ಮತ್ತು ಬ್ರಹ್ಮಾಂಡ (天人相应), ಆರೋಗ್ಯ ಮತ್ತು ದೀರ್ಘಾಯಸ್ಸು, ಹಾಗು ವು ವೆಯ್ (ನಿಷ್ಕ್ರಿಯತೆಯ ಮೂಲಕ ಕ್ರಿಯೆ)ಯ ಸಂಬಂಧವು ಬ್ರಹ್ಮಾಂಡದ ಜತೆ ಸಾಮರಸ್ಯವನ್ನು ಉಂಟುಮಾಡುತ್ತೆಂದು ಚಿಂತಿಸಲಾಗಿದೆ ಜನಪ್ರಿಯ ಟಾವೊ ತತ್ತ್ವದಲ್ಲಿ ಪೂರ್ವಿಕರ ಆತ್ಮಗಳಿಗೆ ಹಾಗು ಅಮರ್ತ್ಯರ ಬಗ್ಗೆ ಪೂಜ್ಯ ಭಾವನೆ ಹೊಂದುವುದು ಸಾಮಾನ್ಯವಾಗಿದೆ. ಸಂಘಟಿತ ಟಾವೊ ತತ್ತ್ವ ಧಾರ್ಮಿಕ ಜಾನಪದದಿಂದ ತನ್ನ ಧಾರ್ಮಿಕ ಆಚರಣೆ ಚಟುವಟಿಕೆಗಳ ನಡುವೆ ಭೇದ ಗುರುತಿಸುತ್ತದೆ. ಕೆಲವು ವೃತ್ತಿಪರ ಟಾವೋ ತತ್ತ್ವಜ್ಞರು(ದಾವೋಶಿ )ಇದನ್ನು ಅದಃಪತನವೆಂದು ಅಭಿಪ್ರಾಯ ಪಟ್ಟಿದ್ದಾರೆ. ಚೀನಾದ ರಸವಿದ್ಯೆ ( ನೈಡಾನ್ ಸೇರಿದಂತೆ), ಜ್ಯೋತಿಷ್ಯಶಾಸ್ತ್ರ, ಪಾಕಶಾಸ್ತ್ರ, ಜೆನ್ ಬೌದ್ಧಧರ್ಮ, ಅನೇಕ ಚೀನಾ ಯುದ್ಧ ಕಲೆಗಳು, ಚೀನಾದ ಸಾಂಪ್ರದಾಯಿಕ ವೈದ್ಯಶಾಸ್ತ್ರ, ಫೆಂಗ್ ಶುಯಿ, ಅಮರತ್ವ, ಹಾಗುಕಿಜಾಂಗ್ ಉಸಿರಾಟ ತರಬೇತಿ ವಿಷಯಗಳ ಅನೇಕ ಶೈಲಿಗಳು ಇತಿಹಾಸದುದ್ದಕ್ಕೂ ಟಾವೊ ತತ್ತ್ವಗಳ ಜತೆ ಹೆಣೆದುಕೊಂಡಿದೆ.

ಟೇಕ್ವಾಂಡೋ

ಟೇಕ್ವಾಂಡೋ (태권도; 跆拳道; Korean pronunciation: [tʰɛkwʌndo]) ಎಂಬುದು ಕೊರಿಯಾದ ಕದನ/ಸಮರ ಕಲೆ ಹಾಗೂ ದಕ್ಷಿಣ ಕೊರಿಯಾದ ರಾಷ್ಟ್ರೀಯ ಕ್ರೀಡೆಯಾಗಿದೆ. ಕೊರಿಯನ್‌ ಭಾಷೆಯಲ್ಲಿ, ಟೇ (태, 跆) ಎಂದರೆ "ಹೊಡೆಯುವಿಕೆ ಅಥವಾ ಕಾಲಿನಿಂದ ಒದ್ದು ಮುರಿಯುವಿಕೆ"; ಕ್ವಾನ್‌ (권, 拳) ಎಂದರೆ "ಹೊಡೆಯುವಿಕೆ ಅಥವಾ ಮುಷ್ಠಿಯಿಂದ ಗುದ್ದಿ ಮುರಿಯುವಿಕೆ"; ಹಾಗೂ ಡೋ (도, 道) ಎಂದರೆ "ಕ್ರಮ," "ವಿಧಾನ," ಅಥವಾ "ಕಲೆ" ಎಂದು ಅರ್ಥ. ಆದ್ದರಿಂದ, ಟೇಕ್ವಾಂಡೋ ವನ್ನು "ಕಾಲು ಹಾಗೂ ಮುಷ್ಠಿಗಳನ್ನು ಬಳಸುವ ಕ್ರಮ " ಅಥವಾ "ಒದೆಯುವಿಕೆ ಹಾಗೂ ಗುದ್ದುವಿಕೆಯ ಕ್ರಮ" ಎಂದು ಸಾಧಾರಣ ಭಾಷಾಂತರಿಸಬಹುದು."

ಟೇಕ್ವಾಂಡೋ ಅಭ್ಯಾಸಿ/ವೃತ್ತಿಪರರ ಸಂಖ್ಯೆಯ ದೃಷ್ಠಿಯಿಂದ ವಿಶ್ವದ ಅತ್ಯಂತ ಜನಪ್ರಿಯ ಕದನ/ಸಮರ ಕಲೆಯಾಗಿದೆ. ಇದರ ಜನಪ್ರಿಯತೆಯಿಂದಾಗಿ ವೈವಿಧ್ಯಮಯ ಅಭಿವೃದ್ಧಿಗಳನ್ನು ಹೊಂದಿ ಕದನ/ಸಮರ ಕಲೆಯು ವಿವಿಧ ಕ್ಷೇತ್ರಗಳಾಗಿ ಬೆಳವಣಿಗೆ ಹೊಂದಲು ಕಾರಣವಾಗಿದೆ : ಇತರ ಇನ್ನೂ ಅನೇಕ ಕಲೆಗಳ ಹಾಗೆ, ಇದೂ ಕೂಡ ಹೋರಾಟ ತಂತ್ರಗಳನ್ನು, ಸ್ವರಕ್ಷಣೆ, ಕ್ರೀಡೆ, ಕಸರತ್ತು, ಧ್ಯಾನ ಹಾಗೂ ಸಿದ್ಧಾಂತಗಳನ್ನು ಒಳಗೊಂಡಿದೆ. ದಕ್ಷಿಣ ಕೊರಿಯಾದ ಸೇನೆಯು ತನ್ನ ತರಬೇತಿಯ ಭಾಗವಾಗಿ ಟೇಕ್ವಾಂಡೋವನ್ನು ಅಳವಡಿಸಿಕೊಂಡಿದೆ. ಗಿಯೋರುಗಿ (pronounced [ɡjʌɾuɡi]), ಎಂಬುದು ಒಂದು ವಿಧದ ಮುಷ್ಠಿಯುದ್ಧ ವರಸೆಯಾಗಿದ್ದು, 2000ನೇ ಇಸವಿಯಿಂದ ಇದೊಂದು ಒಲಿಂಪಿಕ್‌ ಆಟವಿಶೇಷವಾಗಿದೆ.

ರೂಢಿಗತವಾಗಿ ಟೇಕ್ವಾಂಡೋನ ಎರಡು ಪ್ರಧಾನ ಶೈಲಿಗಳಿವೆ. ಒಂದು ಶೈಲಿಯು ಸಿಹಾಪ್‌ ಗಿಯೋರುಗಿ ಎಂಬ ಮುಷ್ಠಿಯುದ್ಧ ವರಸೆಯ ವ್ಯವಸ್ಥೆಯ ಮೂಲವಾದ ಕುಕ್ಕಿವಾನ್‌ನಿಂದ ಬಂದಿದ್ದು, ವರ್ಲ್ಡ್‌ ಟೇಕ್ವಾಂಡೋ ಫೆಡರೇಷನ್‌ (WTF)ನಿಂದ ನಿರ್ವಹಿಸಲ್ಪಡುತ್ತಿದ್ದು ಪ್ರಸ್ತುತ ಬೇಸಿಗೆಯ ಒಲಿಂಪಿಕ್‌ ಪಂದ್ಯಗಳಲ್ಲಿನ ಒಂದು ಆಟವಿಶೇಷವಾಗಿದೆ. ಮತ್ತೊಂದು ಶೈಲಿಯು ಇಂಟರ್‌ನ್ಯಾಷನಲ್‌ ಟೇಕ್ವಾನ್‌-ಡೋ ಫೆಡರೇಷನ್‌ (ITF)ನ ಮೂಲದ್ದಾಗಿದೆ.ವಿವಿಧ ಟೇಕ್ವಾಂಡೋ ಸಂಸ್ಥೆಗಳಿಂದ ಪ್ರತ್ಯೇಕವಾಗಿ, ಟೇಕ್ವಾಂಡೋ ಬೆಳವಣಿಗೆ/ಅಭಿವೃದ್ಧಿಯಲ್ಲಿ ಎರಡು ಪ್ರಧಾನ ಶಾಖೆಗಳಿವೆ : ಅವುಗಳೆಂದರೆ ಸಾಂಪ್ರದಾಯಿಕ ಹಾಗೂ ಕ್ರೀಡೆ. "ಸಾಂಪ್ರದಾಯಿಕ ಟೇಕ್ವಾಂಡೋ" ಎಂಬ ಪದವನ್ನು ಸಾಧಾರಣವಾಗಿ 1950ರ ದಶಕ ಹಾಗೂ 1960ರ ದಶಕಗಳಲ್ಲಿ ದಕ್ಷಿಣ ಕೊರಿಯಾದ ಸೇನಾಪಡೆಗಳು ಸ್ಥಾಪಿಸಿದ ಕದನ/ಸಮರ ಕಲೆಗೆ ಅವರು ಅದನ್ನು ಬಳಸಿದ್ದ ರೀತಿಗೆ ಅನುಗುಣವಾಗಿ ನೀಡಲಾಗುತ್ತದೆ; ನಿರ್ದಿಷ್ಟವಾಗಿ ಸಾಂಪ್ರದಾಯಿಕ ನಮೂನೆಗಳು/ಮಾದರಿಗಳ ಹೆಸರುಗಳು ಹಾಗೂ ಸಂಕೇತಗಳು ಅನೇಕವೇಳೆ ಕೊರಿಯಾದ ಇತಿಹಾಸದ ಅನೇಕ ಅಂಶಗಳ ಮೇಲೆ ಆಧಾರಿತವಾಗಿವೆ. ಟೇಕ್ವಾಂಡೋ ಕ್ರೀಡೆಯು ಆಗಿನಿಂದ ದಶಕಗಳ ಅವಧಿಯಲ್ಲಿ ವಿಕಸನ ಹೊಂದುತ್ತಾ ಬಂದು ತಕ್ಕ ಮಟ್ಟಿಗೆ ಬೇರೆಯೇ ಆದ ಕೇಂದ್ರಬಿಂದುವನ್ನು ಹೊಂದಿದೆ, ಅದರಲ್ಲೂ ವಿಶೇಷವಾಗಿ ವೇಗ ಹಾಗೂ ಸ್ಪರ್ಧಾನೈಪುಣ್ಯತೆಗಳಿಗೆ ನೀಡುವ ಪ್ರಾಧಾನ್ಯತೆ ಗಮನಾರ್ಹ (ಒಲಿಂಪಿಕ್‌ ಮುಷ್ಠಿಯುದ್ಧ ವರಸೆಯಂತೆ), ಆದರೆ ಸಾಂಪ್ರದಾಯಿಕ ಟೇಕ್ವಾಂಡೋ ಶಕ್ತಿ ಹಾಗೂ ಸ್ವರಕ್ಷಣೆಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತದೆ. ಈ ಎರಡೂ ಶಾಖೆಗಳು ಪರಸ್ಪರ ವಿಪರೀತ ಏಕಮಾತ್ರ ವೈಶಿಷ್ಟ್ಯತೆಯನ್ನು ಹೊಂದಿಲ್ಲ ಹಾಗೂ ಎರಡರ ನಡುವಿನ ಪ್ರತ್ಯೇಕತೆಗಳು ಅನೇಕವೇಳೆ ಅಸ್ಪಷ್ಟವಾಗಿರುತ್ತವೆ.

ಈ ಎರಡೂ ಪ್ರಧಾನ ಶೈಲಿಗಳ ನಡುವೆ ಹಾಗೂ ವಿವಿಧ ಸಂಸ್ಥೆಗಳ ನಡುವೆ ಸೈದ್ಧಾಂತಿಕ ಹಾಗೂ ತಾಂತ್ರಿಕ ಭಿನ್ನತೆಗಳಿದ್ದಾಗ್ಯೂ, ಇದರಲ್ಲಿನ ಕಲಾತ್ಮಕತೆಯು ಪ್ರಧಾನವಾಗಿ ಚಂಚಲ/ಸಂಚಾರಿ ನಿಲುವಿನಿಂದ ಕಾಲಿನ ಹರವಿನ ಹಾಗೂ ಶಕ್ತಿಯ ಪರಾಕಾಷ್ಠೆಯಲ್ಲಿ (ತೋಳಿಗೆ ಹೋಲಿಸಿದಂತೆ) ನೀಡಲಾಗುವ ಹೊಡೆತಗಳು/ಒದೆತಗಳಲ್ಲಿದೆ. ವಿವಿಧ ಶೈಲಿಗಳ ನಡುವಿನ ಗರಿಷ್ಠತಮ ವ್ಯತ್ಯಾಸ ಅಥವಾ ಕನಿಷ್ಠ ಮಟ್ಟಿಗೆ ಅತ್ಯಂತ ಸುಸ್ಪಷ್ಟವಾದಂತಹವನ್ನು ಸಾಧಾರಣವಾಗಿ ಕ್ರೀಡೆಗಳು ಹಾಗೂ ಸ್ಪರ್ಧೆಗಳಲ್ಲಿನ ಶೈಲಿಗಳು ಹಾಗೂ ನಿಯಮಗಳ ನಡುವಿನ ವ್ಯತ್ಯಾಸವೆಂದು ಪರಿಗಣಿಸಲಾಗುತ್ತದೆ. ಟೇಕ್ವಾಂಡೋ ತರಬೇತಿಯು ಸಾಮಾನ್ಯವಾಗಿ ಪಟ್ಟುಗಳು/ಬ್ಲಾಕ್‌ಗಳು, ಒದೆತಗಳು, ಗುದ್ದುವಿಕೆಗಳು, ಹಾಗೂ ಮುಕ್ತ ಹಸ್ತದ ಹೊಡೆತಗಳ ವ್ಯವಸ್ಥೆ ಹಾಗೂ ವಿವಿಧ ಟೇಕ್‌ಡೌನ್‌ಗಳು ಅಥವಾ ಬೀಸುಗಳು, ಎಸೆತ/ಒಗೆತಗಳು ಹಾಗೂ ಜಾಯಿಂಟ್‌ಲಾಕ್‌ಗಳನ್ನೂ ಒಳಗೊಂಡಿರುತ್ತದೆ. ಕೆಲ ಟೇಕ್ವಾಂಡೋ ತರಬೇತಿದಾರರು ಜಿಯಾಪ್ಸುಲ್ ‌ ಎಂದು ಹೆಸರಾದ ಒತ್ತಡ ಪ್ರದೇಶಗಳ ಬಳಕೆಯನ್ನು ಹಾಗೂ ಹಾಪ್ಕಿಡೊ ಹಾಗೂ ಜೂಡೋಗಳಂತಹಾ ಇತರೆ ಕದನ/ಸಮರ ಕಲೆಗಳಿಂದ ಸ್ವಯಂರಕ್ಷಣೆಯ ತಂತ್ರಗಳನ್ನು ಪಡೆದು ಸಂಘಟಿಸಿ ಅಳವಡಿಸಿಕೊಳ್ಳುತ್ತಾರೆ.

ಟ್ಯಾಂಗ್ ರಾಜವಂಶ

ಟ್ಯಾಂಗ್ ರಾಜವಂಶ ವು (Chinese: 唐朝; pinyin: Táng Cháo; IPA: [tʰɑ̌ŋ tʂʰɑ̌ʊ]; ಮಧ್ಯಭಾಗದ ಚೀನೀ ಭಾಷೆ: ಧಾಂಗ್‌) (ಜೂನ್‌ ೧೮, ೬೧೮–ಜೂನ್‌ ೪, ೯೦೭) ಚೀನಾದ ಚಕ್ರಾಧಿಪತ್ಯದ ರಾಜವಂಶವಾಗಿದ್ದು ಇದು ಸೂಯಿ ರಾಜವಂಶದ ನಂತರ ತನ್ನ ಅಸ್ತಿತ್ವವನ್ನು ಕಂಡುಕೊಂಡಿತು. ಇದನ್ನು ಅನುಸರಿಸಿಕೊಂಡು ಐದು ರಾಜವಂಶಗಳು ಮತ್ತು ಹತ್ತು ರಾಜ್ಯಗಳ ಅವಧಿಗಳು ಕಂಡುಬಂದವು. ಸೂಯಿ ಸಾಮ್ರಾಜ್ಯದ ಅವನತಿ ಮತ್ತು ಕುಸಿತದ ಸಂದರ್ಭದಲ್ಲಿ ಅಧಿಕಾರವನ್ನು ಸ್ವಾಧೀನಪಡಿಸಿಕೊಂಡ ಲೀ (李) ಕುಟುಂಬದಿಂದ ಇದು ಸಂಸ್ಥಾಪಿಸಲ್ಪಟ್ಟಿತು. ಎರಡನೇ ಝೌ ರಾಜವಂಶದ (ಅಕ್ಟೋಬರ್‌‌ ೮, ೬೯೦–ಮಾರ್ಚ್‌ ೩, ೭೦೫) ವತಿಯಿಂದ ಈ ರಾಜವಂಶವು ಸಂಕ್ಷಿಪ್ತ ಅವಧಿಗೆ ಅಡಚಣೆಗೊಳಗಾಯಿತು; ಏಕೆಂದರೆ ಈ ಅವಧಿಯಲ್ಲಿ ವೂ ಜೆಟಿಯಾನ್‌ ಸಾಮ್ರಾಜ್ಞಿಯು ಸಿಂಹಾಸನವನ್ನು ಸ್ವಾಧೀನಪಡಿಸಿಕೊಂಡು, ತನ್ನ ಸ್ವಂತ ಹಕ್ಕಿನಿಂದ ಆಳುವ ಮೊದಲ ಮತ್ತು ಏಕೈಕ ಚೀನೀ ಆಳುವ ಸಾಮ್ರಾಜ್ಞಿ ಎನಿಸಿಕೊಂಡಿದ್ದಳು.

ಆ ಸಮಯದಲ್ಲಿ ಪ್ರಪಂಚದಲ್ಲಿನ ಅತ್ಯಂತ ಜನದಟ್ಟಣೆಯ ನಗರ ಎಂದು ಪರಿಗಣಿಸಲ್ಪಟ್ಟಿದ್ದ ಚಾಂಗಾನ್‌ (ವರ್ತಮಾನದ ಕ್ಸಿಯಾನ್‌) ನಗರದಲ್ಲಿ ತನ್ನ ರಾಜಧಾನಿಯನ್ನು ಹೊಂದಿದ್ದ ಟ್ಯಾಂಗ್ ರಾಜವಂಶವು ಚೀನೀ ನಾಗರಿಕತೆಯಲ್ಲಿನ ಒಂದು ಉಚ್ಛ್ರಾಯ ಮಟ್ಟ ಎಂದು ಸಾಮಾನ್ಯವಾಗಿ ಪರಿಗಣಿಸಲ್ಪಟ್ಟಿದೆ. ಅಷ್ಟೇ ಅಲ್ಲ, ವಿಶ್ವಮಾನವ ಸಂಸ್ಕೃತಿಯ ಒಂದು ಸುವರ್ಣಯುಗ ಎನಿಸಿಕೊಂಡಿರುವ ಹಿಂದಿನ ಹಾನ್‌‌ ರಾಜವಂಶದ ಅವಧಿಯಲ್ಲಿದ್ದ ನಾಗರಿಕತೆಗೆ ಇದು ಸಮಾನವಾಗಿತ್ತು ಅಥವಾ ಅದನ್ನೂ ಅತಿಶಯಿಸುವಂತಿತ್ತು ಎಂದು ಹೇಳಲಾಗುತ್ತದೆ. ಈ ರಾಜವಂಶದ ಆರಂಭಿಕ ಆಡಳಿತಗಾರರ ಸೇನಾ ಕಾರ್ಯಾಚರಣೆಗಳ ಮೂಲಕ ಸ್ವಾಧೀನಪಡಿಸಿಕೊಳ್ಳಲಾದ ಇದರ ವಿಸ್ತಾರ ಭೂಪ್ರದೇಶವು ಹಾನ್‌‌ ಅವಧಿಯಲ್ಲಿ ಕಂಡುಬಂದುದಕ್ಕಿಂತ ಮಹತ್ತರವಾಗಿತ್ತು, ಮತ್ತು ಇದು ನಂತರದಲ್ಲಿ ಬಂದ ಯುವಾನ್‌ ರಾಜವಂಶ ಮತ್ತು ಕಿಂಗ್‌ ರಾಜವಂಶದೊಡನೆ ಪೈಪೋಟಿಗೆ ಇಳಿಯುವಂತಿತ್ತು. ೭ನೇ ಮತ್ತು ೮ನೇ ಶತಮಾನಗಳಲ್ಲಿ ನಡೆಸಲಾದ ಎರಡು ಜನಗಣತಿಗಳಲ್ಲಿ, ನೋಂದಾಯಿತ ಕುಟುಂಬಗಳ ಸಂಖ್ಯೆಯ ಆಧಾರದ ಮೇಲೆ ಟ್ಯಾಂಗ್ ದಾಖಲೆಗಳು ಜನಸಂಖ್ಯೆಯನ್ನು ಅಂದಾಜಿಸಿದ್ದು ಅದು ಸುಮಾರು ೫೦ ದಶಲಕ್ಷದಷ್ಟು ಜನರನ್ನು ಒಳಗೊಂಡಿತ್ತು ಎಂದು ತಿಳಿದುಬಂದಿದೆ. ಜೊತೆಗೆ, ೯ನೇ ಶತಮಾನದಲ್ಲಿ ಕೇಂದ್ರ ಸರ್ಕಾರವು ವಿಘಟನೆಯಾಗುತ್ತಿದ್ದಾಗ ಮತ್ತು ಜನಸಂಖ್ಯೆಯ ಒಂದು ಕರಾರುವಾಕ್ಕಾದ ಜನಗಣತಿಯನ್ನು ಸಂಕಲಿಸಲು ಅಸಮರ್ಥವಾಗಿದ್ದಾಗ, ಜನಸಂಖ್ಯೆಯು ಅಷ್ಟುಹೊತ್ತಿಗೆ ಸುಮಾರು ೮೦ ದಶಲಕ್ಷದಷ್ಟು ಪ್ರಮಾಣಕ್ಕೆ ಬೆಳೆದಿತ್ತು ಎಂದು ಅಂದಾಜಿಸಲಾಗಿದೆ. ತಾನು ಹೊಂದಿದ್ದ ದೊಡ್ಡ ಪ್ರಮಾಣದ ಜನಸಂಖ್ಯೆಯಿಂದಾಗಿ, ವೃತ್ತಿಪರವಾಗಿ ಮತ್ತು ಬಲಾತ್ಕಾರವಾಗಿ ಸೇರಿಸಲ್ಪಟ್ಟ ನೂರಾರು-ಸಾವಿರಾರು ಸೈನಿಕರ ಪಡೆಗಳನ್ನು ಪೋಷಿಸಿ ಬೆಳೆಸುವುದಕ್ಕೆ ರಾಜವಂಶಕ್ಕೆ ಸಾಧ್ಯವಾಯಿತು; ಏಷ್ಯಾದ ಒಳನಾಡಿನಲ್ಲಿ ಮತ್ತು ರೇಷ್ಮೆ ರಸ್ತೆಯ ಉದ್ದಕ್ಕೂ ಹಬ್ಬಿಕೊಂಡಿದ್ದ ಲಾಭದಾಯಕವಾದ ವ್ಯಾಪಾರ ಮಾರ್ಗಗಳಲ್ಲಿ ಅಸ್ತಿತ್ವವನ್ನು ಕಂಡುಕೊಂಡಿದ್ದ ಅಲೆಮಾರಿ ಅಧಿಕಾರ-ಶಕ್ತಿಗಳ ಜೊತೆಗೆ ಸೆಣಸಾಡಲು ಸದರಿ ರಾಜವಂಶಕ್ಕೆ ಈ ಪಡೆಗಳ ಅಗತ್ಯವಿತ್ತು. ಟ್ಯಾಂಗ್ ಆಸ್ಥಾನಕ್ಕೆ ಹಲವಾರು ರಾಜ್ಯಗಳು ಮತ್ತು ಸಂಸ್ಥಾನಗಳು ಕಪ್ಪ-ಕಾಣಿಕೆಯನ್ನು ಪಾವತಿಸಿದರೆ, ಒಂದು ಪಾಲಿತ ಪ್ರದೇಶ ವ್ಯವಸ್ಥೆ ಅಥವಾ ರಾಜ್ಯಪಾಲಕತ್ವ ವ್ಯವಸ್ಥೆಯ ಮೂಲಕ ತಾನು ಪರೋಕ್ಷವಾಗಿ ನಿಯಂತ್ರಣವನ್ನು ಹೊಂದಿದ್ದ ಹಲವಾರು ಪ್ರದೇಶಗಳನ್ನು ಕೂಡಾ ಟ್ಯಾಂಗ್ ರಾಜವಂಶವು ಗೆದ್ದುಕೊಂಡಿತು ಅಥವಾ ವಶಪಡಿಸಿಕೊಂಡಿತು. ರಾಜಕಾರಣದ ಅಧಿನಾಯಕತ್ವದ ಜೊತೆಜೊತೆಗೆ, ಕೊರಿಯಾ, ಜಪಾನ್‌, ಮತ್ತು ವಿಯೆಟ್ನಾಂ ಮೊದಲಾದ ದೇಶಗಳಲ್ಲಿನ ನೆರೆಹೊರೆಯ ಸಂಸ್ಥಾನಗಳ ಮೇಲೂ ಒಂದು ಶಕ್ತಿಯುತ ಸಾಂಸ್ಕೃತಿಕ ಪ್ರಭಾವವನ್ನು ಟ್ಯಾಂಗ್ ರಾಜವಂಶವು ಚಲಾಯಿಸಿತು.

ಟ್ಯಾಂಗ್ ರಾಜವಂಶದ ದ್ವಿತೀಯಾರ್ಧದಲ್ಲಿ ಕಂಡುಬಂದ ಕೇಂದ್ರಸ್ಥ ಅಧಿಕಾರದ ಅವನತಿ ಹಾಗೂ ಆನ್‌ ಷಿ ಬಂಡಾಯವನ್ನು ಹೊರತುಪಡಿಸಿದರೆ, ಟ್ಯಾಂಗ್ ರಾಜವಂಶವು ಬಹುತೇಕವಾಗಿ ಪ್ರಗತಿ ಮತ್ತು ಸ್ಥಿರತೆಯ ಒಂದು ಅವಧಿಗೆ ಸಾಕ್ಷಿಯಾಯಿತು. ಹಿಂದಿನ ಸೂಯಿ ರಾಜವಂಶದ ರೀತಿಯಲ್ಲಿ, ಪ್ರಮಾಣಕವಾಗಿಸಿದ ಪರೀಕ್ಷೆಗಳನ್ನು ನಡೆಸಿ ಕಚೇರಿಗೆ ಶಿಫಾರಸುಗಳ ಕಳಿಸುವ ಮಾರ್ಗವನ್ನು ಅನುಸರಿಸಿ ಅಧಿಕಾರಿಗಳನ್ನು ಕಡ್ಡಾಯವಾಗಿ ಸೇನೆಗೆ ಸೇರಿಸುವ ಮೂಲಕ ನಾಗರಿಕ ಸೇವಾ ವ್ಯವಸ್ಥೆಯೊಂದನ್ನು ಟ್ಯಾಂಗ್ ರಾಜವಂಶವು ನಿರ್ವಹಿಸಿತು. ೯ನೇ ಶತಮಾನದ ಅವಧಿಯಲ್ಲಿ ಜಿಯೆದುಷಿ ಎಂದು ಕರೆಯಲ್ಪಡುತ್ತಿದ್ದ ಪ್ರಾದೇಶಿಕ ಸೇನಾ ಮಂಡಲಾಧಿಪತಿಗಳ ಉಗಮದಿಂದಾಗಿ ಈ ನಾಗರಿಕ ಸುವ್ಯವಸ್ಥೆಯು ಒಳಗೊಳಗೆ ಹಾಳುಮಾಡಲ್ಪಟ್ಟಿತು. ಟ್ಯಾಂಗ್ ಯುಗದ ಅವಧಿಯಲ್ಲಿ ಚೀನೀ ಸಂಸ್ಕೃತಿಯು ಸಮೃದ್ಧಿಯಾಗಿ ಬೆಳೆಯಿತು ಮತ್ತು ಮತ್ತಷ್ಟು ಪಕ್ವಗೊಂಡಿತು; ಇದು ಚೀನೀ ಕಾವ್ಯಕ್ಕೆ ಸಂಬಂಧಿಸಿದ ಮಹೋನ್ನತವಾದ ಯುಗ ಎಂಬುದಾಗಿ ಪರಿಗಣಿಸಲ್ಪಟ್ಟಿದೆ. ಚೀನಾದ ಇಬ್ಬರು ಅತ್ಯಂತ ಪ್ರಸಿದ್ಧ ಕವಿಗಳಾದ ಲೀ ಬೈ ಮತ್ತು ಡು ಫು ಈ ಯುಗಕ್ಕೆ ಸೇರಿದವರಾಗಿದ್ದರು. ಅಷ್ಟೇ ಅಲ್ಲ, ಹಾನ್‌‌ ಗ್ಯಾನ್‌, ಝಾಂಗ್‌ ಕ್ಸುವಾನ್‌, ಮತ್ತು ಝೌ ಫ್ಯಾಂಗ್‌‌‌ರಂಥ ಅನೇಕ ಪ್ರಸಿದ್ಧ ವರ್ಣಚಿತ್ರಕಾರರು ಕೂಡಾ ಈ ಅವಧಿಯವರೇ ಎಂಬುದು ಗಮನಾರ್ಹ ಸಂಗತಿ. ವಿದ್ವಾಂಸರಿಂದ ಸಂಕಲಿಸಲ್ಪಟ್ಟ ಐತಿಹಾಸಿಕ ಸಾಹಿತ್ಯವಷ್ಟೇ ಅಲ್ಲದೇ ವಿಶ್ವಕೋಶಗಳು ಮತ್ತು ಭೌಗೋಳಿಕ ಕೃತಿಗಳ ಒಂದು ಸಮೃದ್ಧ ವೈವಿಧ್ಯತೆಯನ್ನೇ ಈ ಅವಧಿಯಲ್ಲಿ ಕಾಣಬಹುದಾಗಿತ್ತು.

ಮರದ ಪಡಿಯಚ್ಚಿನ ಮುದ್ರಣದ ಅಭಿವೃದ್ಧಿಯೂ ಸೇರಿದಂತೆ ಟ್ಯಾಂಗ್ ರಾಜವಂಶದ ಅವಧಿಯಲ್ಲಿ ಅನೇಕ ಗಮನಾರ್ಹ ಮಾರ್ಪಾಟುಗಳು ಕಂಡುಬಂದವು. ಬೌದ್ಧಧರ್ಮವು ಚೀನೀ ಸಂಸ್ಕೃತಿಯಲ್ಲಿನ ಒಂದು ಪ್ರಮುಖ ಪ್ರಭಾವಿ ಅಂಶವಾಗಿ ಮಾರ್ಪಟ್ಟಿತು ಮತ್ತು ಸ್ಥಳೀಕ ಚೀನೀ ಒಳಪಂಗಡಗಳು ಪ್ರಾಧಾನ್ಯತೆಯನ್ನು ಗಳಿಸಿದವು. ಆದಾಗ್ಯೂ, ಬೌದ್ಧಧರ್ಮವು ಕಾಲಾನಂತರದಲ್ಲಿ ಸಂಸ್ಥಾನದಿಂದ ಕಿರುಕುಳಕ್ಕೀಡಾಯಿತು ಮತ್ತು ಅದರ ಪ್ರಭಾವದಲ್ಲಿ ಕುಸಿತವು ಕಂಡುಬಂದಿತು. ೯ನೇ ಶತಮಾನದ ವೇಳೆಗೆ ರಾಜವಂಶ ಮತ್ತು ಕೇಂದ್ರ ಸರ್ಕಾರದ ಅವಸಾನವು ಸನ್ನಿಹಿತವಾಗಿತ್ತಾದರೂ, ಕಲೆ ಮತ್ತು ಸಂಸ್ಕೃತಿಗಳ ಬೆಳವಣಿಗೆಯು ಸಮೃದ್ಧಿಯಾಗಿ ಮುಂದುವರಿಯಿತು. ದುರ್ಬಲಗೊಂಡ ಕೇಂದ್ರ ಸರ್ಕಾರವು ಆರ್ಥಿಕತೆಯನ್ನು ನಿರ್ವಹಿಸುವ ಹೊಣೆಗಾರಿಕೆಯಿಂದ ಬಹುತೇಕವಾಗಿ ಹಿಂದೆ ಸರಿಯಿತಾದರೂ, ಇದನ್ನು ಲೆಕ್ಕಿಸದೆ ದೇಶದ ವ್ಯಾಪಾರದ ವ್ಯವಹಾರಗಳು ಅಖಂಡವಾಗಿ ಉಳಿದುಕೊಂಡವು ಹಾಗೂ ವಾಣಿಜ್ಯ ವ್ಯಾಪಾರವು ತನ್ನ ಅಭಿವೃದ್ಧಿಯನ್ನು ಮುಂದುವರಿಸಿತು.

ತಾರ್ಕಿಕ ಕ್ರಿಯೆ

ತಾರ್ಕಿಕ ಕ್ರಿಯೆ ಎಂಬುದು

ಕಾರಣಗಳು, ನಂಬಿಕೆಗಳು, ತೀರ್ಮಾನಗಳು, ನಡೆಗಳು ಅಥವಾ ಭಾವನೆಗಳಿಗೆ ಸಂಬಂಧಿಸಿದಂತೆ ಹುಟುಕಾಟ ನಡೆಸುವುದರ ಅರಿವಿನ ಪ್ರಕ್ರಿಯೆಯಾಗಿದೆ.

ತಾರ್ಕಿಕ ಕ್ರಿಯೆಯ ಕುರಿತಾದ ಇಂಥ ಪರ್ಯಾಲೋಚನೆಯ ವಿಭಿನ್ನ ಸ್ವರೂಪಗಳು ವಿಭಿನ್ನ ಕ್ಷೇತ್ರಗಳಲ್ಲಿ ಕಂಡುಬರುತ್ತವೆ. ವಿಶಿಷ್ಟವೆನಿಸುವಂತೆ, ತಾರ್ಕಿಕ ಕ್ರಿಯೆಯನ್ನು ಪರಿಣಾಮಕಾರಿಯಾಗಿಸುವ ಅಥವಾ ಪರಿಣಾಮಕಾರಿಯಾಗಿಸದ, ಸೂಕ್ತವಾದದ್ದಾಗಿಸುವ ಅಥವಾ ಸೂಕ್ತವಲ್ಲದ್ದಾಗಿಸುವ, ಒಳ್ಳೆಯದಾಗಿಸುವ ಅಥವಾ ಕೆಟ್ಟದಾಗಿಸುವ ಅಂಶಗಳ ಕುರಿತಾಗಿ ದರ್ಶನಶಾಸ್ತ್ರದಲ್ಲಿನ ತಾರ್ಕಿಕ ಕ್ರಿಯೆಯ ಅಧ್ಯಯನವು ಗಮನ ಹರಿಸುತ್ತದೆ. ವಾದಗಳೊಳಗಿನ ತಾರ್ಕಿಕ ಕ್ರಿಯೆಯ ಸ್ವರೂಪ ಅಥವಾ ರಚನೆಯನ್ನು ಪರೀಕ್ಷಿಸುವ ಮೂಲಕ, ಅಥವಾ ತಾರ್ಕಿಕ ಕ್ರಿಯೆಯ ನಿರ್ದಿಷ್ಟ ಗುರಿಗಳನ್ನು ತಲುಪಲು ಬಳಸಲಾಗುವ ವ್ಯಾಪಕ ವಿಧಾನಗಳನ್ನು ಪರಿಗಣಿಸುವ ಮೂಲಕ ದಾರ್ಶನಿಕರು ಇದನ್ನು ಕೈಗೊಳ್ಳುತ್ತಾರೆ. ಇದಕ್ಕೆ ಪ್ರತಿಯಾಗಿ, ಜನರು ಹೇಗೆ ತರ್ಕಿಸುತ್ತಾರೆ, ಅರಿವಿನ ಮತ್ತು ನರದ ಯಾವ ಪ್ರಕ್ರಿಯೆಗಳು ಇದರಲ್ಲಿ ತೊಡಗಿಸಿಕೊಂಡಿವೆ, ಜನರು ತಳೆಯುವ ತೀರ್ಮಾನಗಳ ಮೇಲೆ ಸಾಂಸ್ಕೃತಿಕ ಅಂಶಗಳು ಹೇಗೆ ಪ್ರಭಾವಬೀರುತ್ತವೆ ಎಂಬುದರ ಕುರಿತು ಅಧ್ಯಯನ ನಡೆಸುವುದರ ಕಡೆಗೆ ಮನೋವಿಜ್ಞಾನಿಗಳು ಹಾಗೂ ಅರಿವಿನ ವಿಜ್ಞಾನಿಗಳು ಒಲವು ತೋರಿಸುತ್ತಾರೆ. ತರ್ಕಿಸಲು ಬಳಸಲ್ಪಡಬಹುದಾದ ತರ್ಕದ ಲಕ್ಷಣಗಳನ್ನು ಯಥಾರ್ಥವಾದದ ತರ್ಕಶಾಸ್ತ್ರ ಅಥವಾ ಕರಾರುವಾಕ್ಕಾದ ತರ್ಕಶಾಸ್ತ್ರದಲ್ಲಿ ಅಧ್ಯಯನ ಮಾಡಲಾಗುತ್ತದೆ. ತಾರ್ಕಿಕ ಕ್ರಿಯೆಯನ್ನು ಲೆಕ್ಕಹಾಕುವಿಕೆಯ ರೀತಿಯಲ್ಲಿ ಹೇಗೆ ರೂಪಿಸಬಹುದು ಎಂಬುದನ್ನು ಸ್ವಯಂಚಾಲನಗೊಳಿಸಿದ ತಾರ್ಕಿಕ ಕ್ರಿಯೆಯ ಕ್ಷೇತ್ರವು ಅಧ್ಯಯನ ಮಾಡುತ್ತದೆ. ನ್ಯಾಯವಾದಿಗಳು ಕೂಡಾ ತಾರ್ಕಿಕ ಕ್ರಿಯೆಯ ಅಧ್ಯಯನ ಮಾಡುತ್ತಾರೆ.

ಪರಹಿತ ಚಿಂತನೆ

ಆಲ್ಟ್ರುಯಿಸಮ್ (ಪರಹಿತಚಿಂತನೆ)(pronounced /ˈæltruːɪzəm/) ಎಂಬುದು ಇತರರ ಒಳಿತಿಗಾಗಿ ತೋರುವ ನಿಸ್ಸ್ವಾರ್ಥ ಕಾಳಜಿ. ಇದು ಹಲವು ಸಂಸ್ಕೃತಿಗಳಲ್ಲಿ ಕಂಡುಬರುವ ಒಂದು ಸಾಂಪ್ರದಾಯಿಕ ಸದ್ಗುಣವಾಗಿದೆ, ಜೊತೆಗೆ ಜೂಡೆಯಿಸಮ್, ಕ್ರೈಸ್ತಧರ್ಮ, ಇಸ್ಲಾಂ ಧರ್ಮ, ಹಿಂದೂಧರ್ಮ, ಜೈನಧರ್ಮ, ಬೌದ್ಧಧರ್ಮ, ಕನ್ಫ್ಯೂಷಿಯಸ್ ಧರ್ಮ, ಸಿಖ್ ಧರ್ಮ ಹಾಗು ಇತರ ಹಲವಾರು ಧಾರ್ಮಿಕ ಸಂಪ್ರದಾಯಗಳ ಮುಖ್ಯ ಅಂಶವಾಗಿದೆ. ಪರಹಿತಚಿಂತನೆಯು ಸ್ವಾರ್ಥದ ವಿರುದ್ಧ ಗುಣವಾಗಿದೆ.

ಪರಹಿತಚಿಂತನೆಯನ್ನು ನಿಷ್ಠೆ ಹಾಗು ಕರ್ತವ್ಯದ ಭಾವನೆಗಳಿಂದ ಪ್ರತ್ಯೇಕಿಸಬಹುದಾಗಿದೆ. ಪರಹಿತಚಿಂತನೆಯು ಇತರರಿಗೆ ಸಹಾಯ ಮಾಡುವುದಕ್ಕೆ ಪ್ರೇರಣೆ ನೀಡುತ್ತದೆ ಅಥವಾ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಇತರರಿಗೆ ಒಳಿತನ್ನು ಮಾಡುವುದನ್ನು ಬಯಸುತ್ತದೆ. ಕರ್ತವ್ಯವು ಒಬ್ಬ ನಿರ್ದಿಷ್ಟ ವ್ಯಕ್ತಿಯೆಡೆಗೆ(ಉದಾಹರಣೆಗೆ, ದೇವರು, ಒಬ್ಬ ರಾಜ), ಒಂದು ನಿರ್ದಿಷ್ಟ ಸಂಸ್ಥೆ ಎಡೆಗೆ (ಉದಾಹರಣೆಗೆ, ಒಂದು ಸರ್ಕಾರ), ಅಥವಾ ಒಂದು ಅಮೂರ್ತ ಕಲ್ಪನೆಯೆಡೆಗೆ(ಉದಾಹರಣೆಗೆ, ದೇಶಭಕ್ತಿ ಮುಂತಾದವು) ಹೊಂದಿರುವ ಒಂದು ನೈತಿಕ ಜವಾಬ್ದಾರಿಯಾಗಿರುತ್ತದೆ. ಕೆಲವು ವ್ಯಕ್ತಿಗಳಿಗೆ ಪರಹಿತಚಿಂತನೆ ಹಾಗು ಕರ್ತವ್ಯ ಪೂರೈಸಿದ ಎರಡೂ ಭಾವನೆಗಳು ಉಂಟಾಗಬಹುದು. ಉಳಿದವರಿಗೆ ಆ ಭಾವನೆ ಉಂಟಾಗದಿರಬಹುದು. ಪರಿಶುದ್ಧವಾದ ಪರಹಿತಚಿಂತನೆ ಎಂದರೆ ಪ್ರತಿಫಲಾಪೇಕ್ಷೆಯನ್ನು ಬಯಸದೆ ಅಥವಾ ಮಾನ್ಯತೆ ಹಾಗು ಅವಶ್ಯಕತೆಗಳಿಂದ ಉಂಟಾಗುವ ಲಾಭವನ್ನು ಪರಿಗಣಿಸದೆ ಮಾಡುವ ನಿಸ್ವಾರ್ಥ ಸೇವೆ.

"ಪರಹಿತಚಿಂತನೆ" ಎಂಬ ಪದವು ನೈತಿಕ ಸಿದ್ಧಾಂತಕ್ಕೂ ಸಹ ಸೂಚಿತವಾಗಿದೆ. ಈ ಸಿದ್ಧಾಂತವು, ವ್ಯಕ್ತಿಗಳು ನೈತಿಕವಾಗಿ ಇತರರಿಗೆ ಉಪಕಾರವನ್ನು ಮಾಡಲು ಬದ್ಧರಾಗಿರುತ್ತಾರೆಂದು ಪ್ರತಿಪಾದಿಸುತ್ತದೆ. ಈ ದೃಷ್ಟಿಕೋನದಲ್ಲಿ ಪರಿಗಣಿಸಿದಾಗ, ಇದು ಅಹಂಭಾವಕ್ಕೆ ವಿರುದ್ಧವಾಗಿದೆ.

ಪ್ರೀತಿ

ಅನುರಕ್ತಿ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಆಸಕ್ತಿ ಲೇಖನಕ್ಕಾಗಿ ಇಲ್ಲಿ ನೋಡಿ.ಪ್ರೀತಿ ಎಂಬುದು ಅಸಂಖ್ಯಾತ ಭಾವನೆಗಳು ಮತ್ತು ಅನುಭವಗಳ ಪೈಕಿ ಯಾವುದಾದರೂ ಒಂದು ಭಾವವಾಗಿದ್ದು, ಪ್ರಬಲವಾದ ವಾತ್ಸಲ್ಯ ಮತ್ತು ಬಾಂಧವ್ಯಗಳ ಒಂದು ಸಂವೇದನೆಗೆ ಅದು ಸಂಬಂಧಿಸಿರುತ್ತದೆ

ಪ್ರೀತಿ ಎಂಬುದು ಎಂಬುದು ನಾಟಕವಲ್ಲ ಅದು ನಿಮ್ಮ ಜೀವನವನ್ನ ರೂಪಿಸುತ್ತದೆ ಪ್ರೇಮ ಎಂಬುದು ಪ್ರೀತಿ ಮತ್ತು ದ್ವೇಷದಿಂದ ಕೂಡಿರುತ್ತದೆ ಕೊನೆಗೆ ಪ್ರೀತಿ ಅಂತ್ಯವಾಗುದಿಲ್ಲ ಪ್ರೇಮಿಗಳು ಸಾಯುತ್ತಾರೆ ಸಲಿಂ ಅನಾರ್ಕಲಿ ರೋಮಿಯೋ ಜೂಲಿಯಟ್ ರಂತಹ ಅಮರ ಪ್ರೇಮಿಗಳು ಸತ್ತರೆ ಹೊರತು ಪ್ರೀತಿ ಅಮರವಾಯಿತು ಆದರೆ ಪ್ರೀತಿಯನ್ನ ಬಿಟ್ಟು ಕೊಡಲಿಲ್ಲ ಪ್ರೀತಿ ಎಂಬುದು ಅಂದ ನೋಡಿ ಅಥವಾ ಅಂತಸ್ತನ್ನು ನೋಡಿ ಬರುವುದಲ್ಲ ಅದು ಭಾವನೆಗಳ ಒಂದು ಲೋಕ ಎರೆಡು ಮನಸ್ಸಿನ ಭಾವನೆಗಳನ್ನು ಇಬ್ಬರು ಬೆತ್ತಲೆ ಗೋಳಿಸುವು ದು ಪ್ರೀತಿ ಅಂಕ್ಷರಸ್ತರನ್ನ ಒಬ್ಬ ಕವಿಯನ್ನಾಗಿ ಮಾಡುವ ಶಕ್ತಿಯನ್ನು ಹೊಂದಿದೆ ಆದರೆ ಭಾವನೆ ಮತ್ತು ಪ್ರೀತಿಗೆ ಬೆಳೆಕೊಡದೆ ದುಡ್ಡಿನ ಅಮಲಿನಲ್ಲಿ ತೇಲಾಡುತ್ತಿರುವುದೇ ಹೆಚ್ಚು

Love is not about how much

You say I love you

But how much that you can

Prove that it's true

ನೀವು ಜೀವನದಲ್ಲಿ ಎಷ್ಟು ಸಲ ಮೋಸ ಹೋಗಬಹುದು ಅದಕ್ಕೆ ಕಾರಣ ನಿಮ್ಮ ಬುದ್ಧಿವಂತಿಕೆಯಲ್ಲ ನಾವು ಅವರ ಮೇಲೆ ಇಟ್ಟಿರೋ ನಂಬಿಕೆಯಿಂದ ಮನದಾಳದ ಮಾತೇ ಪ್ರೀತಿ ಮರೆಯಲಾಗದ ನೆನಪೆ ಪ್ರೀತಿ ಮುಗಿಯದ ಕಥೆಯೇ ಪ್ರೀತಿ ದಡವಿಲ್ಲದೆ

ಪ್ರೀತಿ ಎಂದರೆ ಎರೆಡು ದೇಹಗಳು ಬೆತ್ತಲಾಗುವುದಲ್ಲ ಎರೆಡು ಮನಸ್ಸಿನ ಭಾವನೆಗಳು ಬೆತ್ತ ಲಾಗುವುದೇ ಪ್ರೀತಿ

ಪ್ರೀತಿಯಲ್ಲಿ ನೀನು ಪ್ರಾವೀತ್ಯತೆ ಕಂಡು ಕೊಳ್ಳಬೇಕೆಂದರೆ ನೀನು ಅವಳ ಅಥವಾ ಅವನ ಸೌಂದರ್ಯ ನೋಡಿ ಪ್ರೀತಿಸಬಾರದು

Puttu virat (ಪುಟ್ಟನ ಭಾವನೆ)

ಬುದ್ಧಿವಂತಿಕೆ

ಜನರ, ವಸ್ತುಗಳ, ಘಟನೆಗಳ ಅಥವಾ ಸನ್ನಿವೇಶಗಳ ಒಂದು ಆಳವಾದ ತಿಳಿಯುವಿಕೆ ಮತ್ತು ಮನಗಾಣುವಿಕೆ, ಮತ್ತು ಆರಿಸುವ ಸಾಮರ್ಥ್ಯ ಅಥವಾ ಕಡಿಮೆ ಸಮಯ ಮತ್ತು ಶಕ್ತಿಯನ್ನು ಬಳಸಿಕೊಂಡು ಗರಿಷ್ಠ ಫಲಿತಾಂಶಗಳನ್ನು ಒಂದೇ ಸಮನೇ ಉತ್ಪತ್ತಿ ಮಾಡುವುದಕ್ಕೆ ಬುದ್ಧಿವಂತಿಕೆ ಎನ್ನುವರು. ಬುದ್ಧಿವಂತಿಕೆಯು ಗ್ರಹಿಕೆ ಮತ್ತು ಜ್ಞಾನಗಳನ್ನು ಅತ್ಯುತ್ತಮವಾಗಿ (ಪರಿಣಾಮಕಾರಿಯಾಗಿ ಮತ್ತು ಸಮರ್ಥವಾಗಿ) ಅನ್ವಯಿಸುವ ಮತ್ತು ಆದ್ದರಿಂದ ಉದ್ದೇಶಿತ ಫಲಿತಾಂಶಗಳನ್ನು ಉತ್ಪತ್ತಿ ಮಾಡುವ ಸಾಮರ್ಥ್ಯವಾಗಿದೆ. ಬುದ್ಧಿವಂತಿಕೆಯು ಕ್ರಿಯೆಗೆ ಅತ್ಯುತ್ತಮ ನಿರ್ಣಯದ ಜೊತೆಗೂಡಿ ಯಾವುದು ನಿಜ ಅಥವಾ ಸರಿ ಎಂಬುದರ ಗ್ರಹಿಸುವಿಕೆಯಾಗಿದೆ. ಪರ್ಯಾಯ ಪದಗಳು ಇವುಗಳನ್ನು ಒಳಗೊಳ್ಳುತ್ತವೆ: ಜಾಣತನ, ಸೂಕ್ಷ್ಮ ದೃಷ್ಟಿ, ಅಥವಾ ಅಂತರ್ದೃಷ್ಟಿ. ಬುದ್ಧಿವಂತಿಕೆಯು ಅನೇಕ ವೇಳೆ ಒಬ್ಬನ ಭಾವನಾತ್ಮಕ ಪ್ರತಿಕ್ರಿಯೆಗಳ ಮೇಲೆ ( "ಭಾವೋದ್ರೇಕ") ನಿಯಂತ್ರಣವನ್ನು ಹೊಂದಿರಬೇಕು, ಹಾಗಾಗಿ ಒಬ್ಬನ ಕ್ರಿಯೆಗಳನ್ನು ನಿರ್ಧರಿಸುವುದಕ್ಕೆ ತತ್ವಗಳು, ಕಾರಣ ಮತ್ತು ಜ್ಞಾನದ ಮೇಲುಗೈ ಅವಶ್ಯಕವಾಗಿರುತ್ತದೆ.

ಶಿಕ್ಷಣ

ಅದರ ಸಾಮಾನ್ಯ ಅರ್ಥದಲ್ಲಿ ಶಿಕ್ಷಣ ಜ್ಞಾನ, ಕೌಶಲ್ಯ ಮತ್ತು ಜನರು ಒಂದು ಗುಂಪಿನ ಪದ್ಧತಿ ಬೋಧನೆ, ತರಬೇತಿ ಅಥವಾ ಸಂಶೋಧನೆ ಮೂಲಕ ಮುಂದಿನ ಪೀಳಿಗೆಗೆ ವರ್ಗಾಯಿಸಲಾಯಿತು. ಇದರಲ್ಲಿ ಕಲಿಕೆಯು ಒಂದು ರೂಪ. ಶಿಕ್ಷಣ ಆಗಾಗ್ಗೆ ಇತರರ ಮಾರ್ಗದರ್ಶನದಲ್ಲಿ ನಡೆಯುತ್ತದೆ. ಒಬ್ಬ ಯೋಚಿಸುತ್ತಾನೆ. ದಾರಿಯಲ್ಲಿ ಒಂದು ರೂಪುಗೊಳ್ಳುವಿಕೆಯು ಯಾವ ಪರಿಣಾಮವನ್ನು ಹೊoದಿದೆ ಎಂದು. ಯಾವುದೇ ಅನುಭವ, ಭಾವನೆ ಅಥವಾ ಕೃತ್ಯಗಳನ್ನು ಶೈಕ್ಷಣಿಕವೆಂದು ಪರಿಗಣಿಸಬಹುದು. ಶಿಕ್ಷಣ ಸಾಮಾನ್ಯವಾಗಿ ಪ್ರಿಸ್ಕೂಲ್ ಪ್ರಾಥಮಿಕ ಶಾಲೆ, ಸೆಕೆಂಡರಿ ಶಾಲೆ ಮತ್ತು ನಂತರ ಕಾಲೇಜು, ವಿಶ್ವವಿದ್ಯಾಲಯ ಅಥವಾ ಶಿಷ್ಯವೃತ್ತಿಯ ಎಂದು ಹಲವು ಹಂತಗಳಲ್ಲಿ ವಿಂಗಡಿಸಲಾಗಿದೆ. ಶಿಕ್ಷಣ/ವಿದ್ಯೆ ಕಲಿಸುವಾತನೆ ಶಿಕ್ಷಕ.

ಸಮುರಾಯ್‌

Samurai (侍) ಸಮುರಾಯ್‌ ಎಂಬುದು ಕೈಗಾರಿಕಾ ಪೂರ್ವ ಜಪಾನ್‌ನ ಸೇನಾ ಪದವಿಗೆ ಸಂಬಂಧಿಸಿದಂತೆ ಇದ್ದ ಒಂದು ಪದವಾಗಿದೆ. ವಿಲಿಯಂ ಸ್ಕಾಟ್‌ ವಿಲ್ಸನ್‌ ಎಂಬ ಭಾಷಾಂತರಕಾರನ ಅಭಿಪ್ರಾಯದ ಪ್ರಕಾರ: "ಚೀನೀ ಭಾಷೆಯಲ್ಲಿ, 侍 ಎಂಬ ಅಕ್ಷರವು ಮೂಲತಃ ಒಂದು ಕ್ರಿಯಾಪದವಾಗಿದ್ದು, ಒಬ್ಬನ ಅನುಕೂಲಕ್ಕಾಗಿ ಕಾದಿರುವುದು ಅಥವಾ ಸಮಾಜದ ಉನ್ನತವರ್ಗದಲ್ಲಿನ ಗಣ್ಯವ್ಯಕ್ತಿಯೊಬ್ಬನಿಗೆ ಗೌರವಸೂಚಕ ಭೇಟಿ ನೀಡುವುದು ಅಥವಾ ಅವನ ಜೊತೆಗಿರುವುದು ಎಂಬ ಅರ್ಥವನ್ನು ಇದು ಕೊಡುತ್ತದೆ. ಜಪಾನೀ ಭಾಷೆಯಲ್ಲಿನ ಸಬುರಾವು ಎಂಬ ಮೂಲ ಪದವೂ ಇದೇ ಅರ್ಥವನ್ನು ಕೊಡುತ್ತದೆ. ಎರಡೂ ದೇಶಗಳಲ್ಲಿ ಈ ಪದಗಳಿಗೆ "ಶ್ರೀಮಂತ ವರ್ಗದವರ ಸನಿಹದಲ್ಲಿ ಜೊತೆಗಿದ್ದು ಸೇವೆ ಮಾಡುವವರು ಅಥವಾ ಅವರನ್ನು ನೋಡಿಕೊಳ್ಳುವವರು" ಎಂಬ ಅರ್ಥಬರುವಂತೆ ನಾಮವಾಚಕವನ್ನು ರೂಪಿಸಲಾಯಿತು. ಅಷ್ಟೇ ಅಲ್ಲ ಜಪಾನೀ ಭಾಷೆಯಲ್ಲಿನ ಉಚ್ಚಾರಣೆಯನ್ನು ಸಬುರಾಯ್‌ ಎಂದು ಬದಲಿಸಲಾಯಿತು." ವಿಲ್ಸನ್‌ ಪ್ರಕಾರ, "ಸಮುರಾಯ್‌" ಎಂಬ ಪದಕ್ಕೆ ಸಂಬಂಧಿಸಿದ ಒಂದು ಮುಂಚಿನ ಉಲ್ಲೇಖವು ಕೊಕಿನ್‌ ವಕಾಶೂ (905-914) ಎಂಬ ಕೃತಿಯಲ್ಲಿ ಕಂಡುಬರುತ್ತದೆ. ಇದು ಮೊತ್ತಮೊದಲ ಸಾಮ್ರಾಜ್ಯಶಾಹಿ ಕವನ ಸಂಗ್ರಹವಾಗಿದ್ದು, ಒಂಬತ್ತನೇ ಶತಮಾನದ ಪ್ರಥಮಾರ್ಧದಲ್ಲಿ ಸಂಪೂರ್ಣಗೊಳಿಸಲ್ಪಟ್ಟಿತು.

12ನೇ ಶತಮಾನದ ಅಂತ್ಯದ ವೇಳೆಗೆ, ಸಮುರಾಯ್‌ ಎಂಬುದು ಹೆಚ್ಚೂಕಮ್ಮಿ ಸಂಪೂರ್ಣವಾಗಿ ಬುಷಿ ಯೊಂದಿಗೆ (武士) ಸಮಾನಾರ್ಥಕವಾಗಿಹೋಗಿತ್ತು, ಮತ್ತು ಈ ಪದವು ಯೋಧರ ವರ್ಗದ ಮಧ್ಯದ ಮತ್ತು ಮೇಲಿನ ಅಂತಸ್ತುಗಳೊಂದಿಗೆ ನಿಕಟವಾದ ಸಂಬಂಧವನ್ನು ಬೆಳೆಸಿಕೊಂಡಿತ್ತು. ಬುಷಿಡೋ ಎಂಬ ಹೆಸರಿನ ಬರಹರೂಪದ ನಿಯಮಗಳ ಒಂದು ಸಂಗ್ರಹವನ್ನು ಸಮುರಾಯ್‌ ಅನುಸರಿಸಿತು. ಜಪಾನಿನ ಜನಸಂಖ್ಯೆಯ 10%ಗಿಂತ ಕಡಿಮೆ ಮಟ್ಟಕ್ಕೆ ಅವುಗಳ ಸಂಖ್ಯೆ ಮುಟ್ಟಿತು . ಕತ್ತಿವರಸೆಯ ವಿಧಾನ (ದಿ ವೇ ಆಫ್‌ ದಿ ಸ್ವೋರ್ಡ್‌) ಎಂಬ ಅರ್ಥವನ್ನು ಕೊಡುವ ಎರಡೂ ಕೈನ ಕತ್ತಿವರಸೆ ಕದನ ಕಲೆಯೊಂದಿಗೆ ಸಮುರಾಯ್‌ ಬೋಧನೆಗಳನ್ನು ಇಂದಿನ ಆಧುನಿಕ ದಿನದ ಸಮಾಜದಲ್ಲಿ ಇನ್ನೂ ಕಾಣಬಹುದಾಗಿದೆ.

ಇತರ ಭಾಷೆಗಳು

This page is based on a Wikipedia article written by authors (here).
Text is available under the CC BY-SA 3.0 license; additional terms may apply.
Images, videos and audio are available under their respective licenses.