ಒಗಟು

'''ಒಗಟು''': ಜನಪದ ಸಾಹಿತ್ಯದಲ್ಲಿ ಒಂದು ಮುಖ್ಯವಾದ ಪ್ರಕಾರ (ರಿಡ್ಲ್‌). ಕನ್ನಡದಲ್ಲಿ ಒಡಪು, ಮುಂಡಿಗೆ ಎಂಬ ಬೇರೆ ಹೆಸರಗಳೂ ಉಂಟು. ಒಗಟು ಎಂದರೆ ಒಬ್ಬರು ಮತ್ತೊಬ್ಬರಿಗೆ ಒಡ್ಡಿದ ಸವಾಲು, ಸಮಸ್ಯೆ ಒಂದು ವಸ್ತುವನ್ನು ಮತ್ತೊಂದು ವಸ್ತುವಿನ ಮೂಲಕ  ಚಮತ್ಕಾರವಾಗಿ ವರ್ಣಿಸಿ ಆ ಅವ್ಯಕ್ತ ವಸ್ತುವನ್ನು ಕಂಡುಹಿಡಿಯುವಂತೆ ಹೇಳುವುದು ಇದರ ಕ್ರಮ. ಒಗಟಿನಲ್ಲಿ ಎರಡು ಸದೃಶವಸ್ತುಗಳಿರಬೇಕು ಒಂದು ಉಪಮಾನ, ಮತ್ತೊಂದು ಉಪಮೇಯ. ಇಲ್ಲಿ ಉಪಮಾನ ವಾಚ್ಯವಾಗಿರುತ್ತದೆ; ಉಪಮೇಯ ಅಸ್ಪಷ್ಟವಾಗಿ ರಹಸ್ಯವಾಗಿರುತ್ತದೆ. ಅದನ್ನು ಒಗಟೆಯ ಕರ್ತೃ ಬಹಳ ಜಾಣ್ಮೆಯಿಂದ ಬಚ್ಚಿಟ್ಟಿರುತ್ತಾನೆ. ಉಪಮಾನದ ಆಧಾರದಿಂದ ಉಪಮೇಯವನ್ನು ಪತ್ತೆಮಾಡಬೇಕಾಗುತ್ತದೆ. ಇದು ಬುದ್ಧಿಶಕ್ತಿಯ ಪರೀಕ್ಷೆಗೊಂದು ಒಳ್ಳೆಯ ಒರೆಗಲ್ಲು.

ಉಗಮ

ಮಾನವಕುಲದ ಬಾಲ್ಯದಲ್ಲೆ ಒಗಟು ಹುಟ್ಟಿತೆಂದು ಹೇಳಬಹುದು. ಮಾತಿನ ಸಂಪ್ರದಾಯದಲ್ಲಿ ಒಗಟೆಯೇ ಎಲ್ಲಕಿಂತ ಮೊದಲಿನದೆಂಬ ಅಭಿಪ್ರಾಯವೂ ಉಂಟು. ಆದಿಮಾನವ ಪ್ರಕೃತಿಯ ವಸ್ತುಗಳಲ್ಲಿ ಗುರುತಿಸಿದ ಸಾದೃಶ್ಯವೆ ಒಗಟುಗಳ ನಿರ್ಮಾಣಕ್ಕೆ ತಳಹದಿ. ಅವನು ಸಾದೃಶ್ಯಜ್ಞಾನದಿಂದುಂಟಾದ ವಿಸ್ಮಯದಲ್ಲೆ ನಿಲ್ಲದೆ, ಅದನ್ನು ಹಾಸ್ಯ ಮತ್ತು ಮನೋರಂಜನೆಗಾಗಿ ಬಳಸಿಕೊಳ್ಳಲು ಮಾಡಿದ ಪ್ರಯತ್ನವೆ ಒಗಟಿನ ರೂಪ ತಳೆಯಿತು. ಈಗ ನಮಗೆ ಗೊತ್ತಿರುವ ಹಾಸ್ಯದ ಪ್ರಕಾರಗಳಲ್ಲಿ ಒಗಟೇ ಅತ್ಯಂತ ಪ್ರಾಚೀನವೆಂದೂ ಸಾದೃಶ್ಯಪ್ರಜ್ಞೆಯೆ ಇದಕ್ಕೆ ಮೂಲಕಾರಣವೆಂದೂ ವಿದ್ವಾಂಸರ ಅಭಿಪ್ರಾಯ. ಒಗಟುಗಳು ಬಹುಮಟ್ಟಿಗೆ ಬುದ್ಧಿಪುರ್ವಕವಾದವು; ಬುದ್ಧಿಯ ವಿಕಾಸಕ್ಕೆ ನೆರವಾಗುತ್ತವಾದರೂ ಕೇವಲ ಸಂತೋಷವೆ ಅವುಗಳ ಮುಖ್ಯವಾದ ಗುರಿ. ಒಗಟುಗಳಲ್ಲಿ ಎರಡು ವಸ್ತುಗಳ ತರ್ಕಬದ್ಧ ಸಮೀಕರಣವಿರುತ್ತದೆ. 

ಆದ್ದರಿಂದ ಒಗಟುಗಳೆಂದರೆ ರೂಪಕಗಳು ಅಥವಾ ಪ್ರತಿಮೆಗಳು ಎನ್ನಬಹುದು. ಇವುಗಳಲ್ಲಿ ಕೆಲವಂತೂ ಸುಂದರವಾದ ಕಾವ್ಯಗಳೇ. ಲೋಕಾನುಭವ, ಸೂಕ್ಷ್ಮ ಸಂವೇದನೆ, ಕಲ್ಪನಾಶಕ್ತಿಗಳು ಉತ್ತಮವಾದ ಒಗಟುಗಳಲ್ಲಿ ಕಂಡುಬರುತ್ತವೆ. ವಸ್ತುಗಳ ಯಥಾರ್ಥ ಚಿತ್ರಗಳನ್ನು ಸಂಕ್ಷಿಪ್ತವಾಗಿ ಕೊರೆದು ನಿಲ್ಲಿಸುವ ಶಕ್ತಿ ಒಗಟುಗಳಲ್ಲುಂಟು. ಇವುಗಳಿಗೆ ವಿಷಯವಾಗದ ಪದಾರ್ಥವೇ ಜಗತ್ತಿನಲ್ಲಿಲ್ಲ. 

ಎಷ್ಟೋ ವೇಳೆ, ಒಗಟುಗಳ ಅಂತರಾರ್ಥ ಸುಲಭವಾಗಿ ಹೊಳೆಯದಿದ್ದರೂ ಅವುಗಳ ಬಾಹ್ಯರೂಪ ಮಾತ್ರ ಆಕರ್ಷಕವಾಗಿ ಕುತೂಹಲ ಕೆರಳಿಸುವಂತಿರುತ್ತದೆ. ಒಗಟುಗಳಲ್ಲಿ ಹಲವು ಬಗೆಗಳಿವೆ. ಕೆಲವು ಪದ್ಯರೂಪದಲ್ಲಿದ್ದರೆ ಮತ್ತೆ ಕೆಲವು ಲಯಬದ್ಧ ಗದ್ಯದಲ್ಲಿರುತ್ತವೆ.

ಒಗಟುಗಳ ಇತಿಹಾಸ

ಒಗಟುಗಳ ಇತಿಹಾಸ ಜಾಗತಿಕವಾದುದು. ಪ್ರಪಂಚದ ಅತ್ಯಂತ ಪ್ರಾಚೀನ ಜನಾಂಗಗಳಲ್ಲೆಲ್ಲ ಅವು ಬಳಕೆಯಲ್ಲಿದ್ದುವು. ಭರತಖಂಡದಲ್ಲಿ ಮಾತ್ರವಲ್ಲದೆ ಗ್ರೀಕ್, ರೋಮನ್, ಈಜಿಪ್ಷಿಯನ್ ಜನಾಂಗಗಳಲ್ಲಿ ಕೂಡ ಒಗಟುಗಳ ಸಾಹಿತ್ಯ ವಿಪುಲವಾಗಿತ್ತು. ಭಾರತದಲ್ಲಿ ವೈದಿಕ ವಾಙ್ಮಯದಲ್ಲೆ ಒಗಟುಗಳು ಸುಳಿಯುತ್ತವೆ. ಕುರಾನ್, ಬೈಬಲ್ಗಳಲ್ಲೂ ಅವು ಬಂದಿವೆಯೆಂದು ಹೇಳುತ್ತಾರೆ.

ಒಗಟುಗಳು ಜನಸಾಮಾನ್ಯರಲ್ಲಿ ಮನರಂಜನೆಗಾಗಿ ಬಳಕೆಗೊಳ್ಳುತ್ತಿದ್ದುವಾದರೂ ರಾಜಾಸ್ಥಾನಗಳಲ್ಲಿ ಪಂಡಿತಕವಿಗಳ ಕ್ಯೆಯಲ್ಲಿ ಅವು ವಿದ್ವತ್ತಿನ ಸ್ಪರ್ಧೆಯ ಉದ್ದೇಶಕ್ಕೂ ಒದಗುತ್ತಿದ್ದುವು. ಪಾಂಡಿತ್ಯಪ್ರದರ್ಶನ, ಕೀರ್ತಿಸಂಪಾದನೆ, ಧನಲಾಭ, ಪ್ರಣಯಸಾಫಲ್ಯ ಮುಂತಾದ ಪ್ರಯೋಜನಗಳೂ ಇವುಗಳಿಂದ ಸಿದ್ಧಿಸುತ್ತಿದ್ದಂತೆ ತೋರುತ್ತದೆ. ಒಗಟುಗಳ ಮೇಲೆ ಪಣ ಕಟ್ಟಿ ಜೂಜಾಡುವ ಪದ್ಧತಿಯೂ ಕೆಲವೆಡೆ ಇದ್ದಂತೆ ತಿಳಿದುಬರುತ್ತದೆ. ಒಗಟಿಗೆ ಸಂಬಂಧಿಸಿದ ದ್ಯೂತ ಸ್ಪರ್ಧೆ, ಮೇಳ, ಸಮಾರಂಭಗಳು ಗ್ರೀಕರಲ್ಲಿ ವಿಪರೀತವಾಗಿದ್ದುವು. ಅನೇಕ ಗ್ರೀಕ್ ರುದ್ರನಾಟಕಗಳಲ್ಲಿ ಒಗಟುಗಳೆ ಕ್ರಿಯೆಗೆ ಚಾಲಕಶಕ್ತಿಯಾಗಿ ಕೆಲಸ ಮಾಡಿರುವುದುಂಟು. ಸ್ಫಿಂಕ್ಸ್‌ಭೂತ ಈಡಿಪಸನಿಗೆ ಒಡ್ಡಿದ ಸಮಸ್ಯೆ ಬಹಳ ವಿಖ್ಯಾತವಾದದ್ದು; ಅದು ಜಗತ್ತಿನ ಪುರಾತನ ಒಗಟುಗಳಲ್ಲೊಂದು, ಅದು ಹೀಗಿದೆ; ಬೆಳಗ್ಗೆ ನಾಲ್ಕು ಕಾಲು, ಮಧ್ಯಾಹ್ನ ಎರಡು ಕಾಲು, ಸಂಜೆ ಮೂರು ಕಾಲುಗಳಲ್ಲಿ ನಡೆಯುವ ಪ್ರಾಣಿ ಯಾವುದು? ಉತ್ತರ-ಮನುಷ್ಯ! (ನೋಡಿ- ಈಡಿಪಸ್)

ಒಗಟುಗಳು ಪ್ರಾಚೀನಕಾಲದಿಂದಲೂ ಧಾರ್ಮಿಕ ವಿಧಿ ಉತ್ಸವಗಳಿಗೆ ಸಂಬಂಧಿಸಿದಂತೆ, ಅಲೌಕಿಕ ಉದ್ದೇಶಗಳಿಗೆ ಮಾಧ್ಯಮವಾಗಿ ಬಳಕೆಯಾಗುತ್ತ ಬಂದಿರುವುದು ಆಶ್ಚರ್ಯದ ಸಂಗತಿ. ಅವು ಆಧ್ಯಾತ್ಮಿಕ ಸತ್ಯಗಳಿಗೆ, ವೇದಾಂತ ರಹಸ್ಯಗಳಿಗೆ ಅಭಿವ್ಯಕ್ತಿ ನೀಡಿವೆ. ಗ್ರೀಕರಲ್ಲಿ ಡೆಲ್ಫಿಯ ಭವಿಷ್ಯವಾಣಿ ಪುರೋಹಿತರ ಮೂಲಕ ಒಗಟುಗಳ ರೂಪದಲ್ಲೆ ಹೊರಹೊಮ್ಮುತ್ತಿತ್ತು. ಭರತಖಂಡದ ವೈದಿಕ ಯಜ್ಞಯಾಗಾದಿಗಳಲ್ಲಿ ಒಗಟುಗಳ ಸಂಪ್ರದಾಯವಿದ್ದುದು ತಿಳಿದುಬರುತ್ತದೆ. ಕನ್ನಡದಲ್ಲಿ ಅಲ್ಲಮಪ್ರಭುವಿನ ಎಷ್ಟೋ ವಚನಗಳು ಬಹಳ ಗಹನವಾಗಿದ್ದು

ಬೆಡಗಿನ ವಚನಗಳೆನಿಸಿಕೊಂಡು, ಅನುಭಾವಗಳಿಗೆ ಪ್ರತೀಕಗಳಾಗಿವೆ; ಇವೂ ಒಗಟುಗಳೇ.

ಕನ್ನಡ ಜನಪದದಲ್ಲಿ ಪ್ರಚಲಿತವಾಗಿರುವ ಕೆಲವು ಒಗಟುಗಳನ್ನಿಲ್ಲಿ ಉದಾಹರಿಸಲಾಗಿದೆ; ಅಂಗೈ ಅಗಲದ ಗದ್ದೆ, ಗದ್ದೆಗೆ ನೀರು, ನೀರಿಗೆ ಬೇರು, ಬೇರಿಗೆ ಬೆಂಕಿ (ದೀಪ); ಚಿನ್ನದ ಪೆಟ್ಟಿಗೆಯಲ್ಲಿ ಬೆಳ್ಳಿ ಲಿಂಗ (ಹಲಸಿನ ತೊಳೆ); ಹಸುರು ಗಿಡದ ಮೇಲೆ ಮೊಸರು ಚೆಲ್ಲಿದೆ (ಮಲ್ಲಿಗೆ ಹೂ); ಗಿಡ್ಡಿ ಗುದ್ದಿದರೆ ಮನೆಯೆಲ್ಲ ಮಕ್ಕಳು (ಬೆಳ್ಳುಳ್ಳಿ); ಹಗ್ಗ ಹಾಸಿದೆ, ಕೋಣ ಮಲಗಿದೆ (ಕುಂಬಳಕಾಯಿ); ಸುತ್ತ ನೋಡಿದರೆ ಸುಣ್ಣದ ಗೋಡೆ, ಎತ್ತ ನೋಡಿದ್ರೂ ಬಾಗಿಲೇ ಇಲ್ಲ (ಕೋಳಿಮೊಟ್ಟೆ); ಕೆರೆಯೆಲ್ಲ ಕುರಿಹೆಜ್ಜೆ (ನಕ್ಷತ್ರ).

ಒಗಟು ಕೇಳುಗರನ್ನು ಕುತೂಹಲಕ್ಕೆ ತಳ್ಳಿ, ಆಸಕ್ತಿಯನ್ನು ಅರಳಿಸಿ, ಅವರ ಬುದ್ಧಿಯನ್ನು ಕೆಣಕುತ್ತದೆ. ಕಂಬದ ಮೇಲೆ ನಿಂಬೆಹಣ್ಣು-ಎಂದಾಗ ಲವಂಗವೆಂಬ ಅರ್ಥ ಹೊಳೆಯುವುದು ಕಷ್ಟವಾಗಬಹುದು. ಹಾಗೆಯೇ ಮುದ್ದು ಮಗುವಿನ ಕೆನ್ನೆಯನ್ನು ತಿನ್ನಬಾರದ ಹಣ್ಣು ಬಲುರುಚಿ, ಬಲುರುಚಿ ಎಂದು ಬಣ್ಣಿಸಿ ಚಪ್ಪರಿಸುವುದೂ ಒಗಟಿನ ರೀತಿ, ಒಂದು ಪದಗಳ ಗುಂಪು, ಒಂದು ವಾಕ್ಯ ಅಥವಾ ಒಂದು ಇಡೀ ಪದ್ಯವೇ ಒಗಟಾಗಿರಬಹುದು. ಕೆಲವು ಕವಿಗಳಂತೂ ತಮ್ಮ ಕೃತಿಗಳಲ್ಲಿ ಇಂಥ ಚಾತುರ್ಯದ ಉಕ್ತಿಗಳನ್ನು ಸೊಗಸಾಗಿ ಬಳಸಿಕೊಂಡಿದ್ದಾರೆ.

ಲಕ್ಷ್ಮೀಶನ ಈ ಸಾಲುಗಳನ್ನು ನೋಡಿ; ಹರಿಯೆನ್ನ ಭಾವ; ವಿಧಿಯೆನಗೆ ಅಳಿಯ; ಜಲಧಿಯೆನಗೆ ಮಾತೆ; ಲಕ್ಷ್ಮಿಯೆನಗೆ ಸೋದರಿ; ಸುಧಾಕರ ನನಗೆ ಹಿರಿಯಣ್ಣ-ಈ ಐವರಿದ್ದೂ ನಾನೀ ತಿರುಕನ ಕೈಗೆ ಸಿಕ್ಕಿ ನರಳುವಂತಾಯ್ತೆ ಎಂಬಲ್ಲಿ ಹುದುಗಿದ ಹೂರಣದ ರುಚಿ ಎರಡು ವಿಧ.

ಚತುರತೆಯ ಮಾತಿನ ಹಿಂದಿನ ಅರ್ಥಗ್ರಹಿಸಿದ ಆನಂದ ಒಂದು ಕಡೆ; ಅದರ ಹಿಂದಿರುವ ನೀತಿಯ ಸೂಚನೆ ಮತ್ತೊಂದು ಕಡೆ. ಎರಡರಿಂದಲೂ ಸಂತೋಷ ಉಕ್ಕುತ್ತದೆ. ವಿಷ್ಣು ನನಗೆ ಭಾವ. ಬ್ರಹ್ಮ ಅಳಿಯ, ಸಮುದ್ರವೇ ತಾಯಿ, ಲಕ್ಷ್ಮಿ ಸೋದರಿ, ಚಂದ್ರನು ಅಣ್ಣ-ಇಂಥ ದೊಡ್ಡ ದೊಡ್ಡ ನಂಟರಿದ್ದರೂ ನನ್ನ ಹಣೆಯಬರೆಹ-ತಿರುಕನ ಕೈಯಲ್ಲಿ ಸಿಕ್ಕಿಕೊಂಡು ಅವನ ಬಾಯ ಉಸಿರಿಗೆ ಪಕ್ಕಾಗಿ ನರಳಬೇಕಾಯಿತಲ್ಲ ಎಂದು ಶಂಖ ತನ್ನ ಗೋಳನ್ನು ತೋಡಿಕೊಳ್ಳುವ ಈ ಭಾಗ ತುಂಬ ರಸವತ್ತಾಗಿದೆ, ನೀತಿಯುತವಾಗಿದೆ. ಹೀಗೆಯೇ ಎಷ್ಟೋ ಒಗಟುಗಳು ನಾಣ್ಣುಡಿಗಳಾಗಿವೆ. ಮಾತಿನ ಚಕಮಕಿಯಿಂದಲೂ ಒಗಟುಗಳು ಸೃಷ್ಟಿಯಾಗುತ್ತವೆ. ಪುರಸೀ, ಹೊರಸೀ, ಒಳಸೀ ಎಂಬ ಮೂರು ವಸ್ತುಗಳನ್ನು ತನ್ನಿರೆಂದು ಗುರು ಹೇಳಿದಾಗ ಶಿಷ್ಯರು ಒದ್ದಾಡಿದರಂತೆ, ಜಾಣನಾದ ಶಿಷ್ಯ ಮಾತ್ರ ಕಲ್ಲುಸಕ್ಕರೆ, ಖರ್ಜೂರ, ಬಾದಾಮಿಗಳನ್ನು ತಂದನಂತೆ. ಕಲ್ಲು ಸಕ್ಕರೆ ಪುರ ಸಿಹಿ, ಖರ್ಜೂರ ಹೊರಗೆ ಮಾತ್ರ ಸಿಹಿ, ಬಾದಾಮಿ ಒಳಗೆ ಮಾತ್ರ ಸಿಹಿ. ಇಂಥ ಒಗಟಿನ ಅನೇಕ ಕಥೆಗಳು ಪ್ರಚಾರದಲ್ಲಿವೆ. ಇಡೀ ಪದ್ಯದಲ್ಲಿ ಈ ರೀತಿಯ ಒಗಟನ್ನು ತುಂಬಿರುವ ಒಂದು ಉದಾಹರಣೆಯಾಗಿ ಕನಕದಾಸರ

ಕೀರ್ತನೆಯ ಒಂದು ಭಾಗವನ್ನು ನೋಡಬಹುದು:

* ಅಂಧಕನನುಜನ ಕಂದನ ತಂದೆಯ, ಕೊಂದನ ಶಿರದಲ್ಲಿ ನಿಂದವನ | ಚಂದದಿ ಪಡೆದನ ನಂದನೆಯಳ ನಲ | ವಿಂದ ಧರಿಸಿದ ಮುಕುಂದನಿಗೆ ||

ಧೃತರಾಷ್ಟ್ರನ ತಮ್ಮನಾದ ಪಾಂಡುವಿನ ಮಗ ಧರ್ಮರಾಯನ ತಂದೆಯಾದ ಯಮ ಧರ್ಮರಾಯನನ್ನು ನಿಗ್ರಹಿಸಿದ (ಮಾರ್ಕಂಡೇಯನ ಕಥೆಯಲ್ಲಿ) ಈಶ್ವರನ ತಲೆಯ ಮೇಲೆ ನಿಂದ ಚಂದ್ರನನ್ನು ಪಡೆದ ತಂದೆಯಾದ ಸಮುದ್ರರಾಜನ ಮಗಳಾದ ಲಕ್ಷ್ಮಿಯನ್ನು ಆನಂದದಿಂದ ಹೃದಯದಲ್ಲಿ ಧರಿಸಿದ ಮುಕುಂದನಿಗೆ ಮಂಗಳಂ-ಎಂದು ಕನಕದಾಸರು ಇಲ್ಲಿ ಒಗಟುಗಂಟನ್ನೇ ಸೃಜಿಸಿದ್ದಾರೆ, ಈಗಲೂ ಒಗಟುಗಳೆಂದರೆ ಮಕ್ಕಳಿಗೆ ಪ್ರಾಣ, ದೊಡ್ಡವರಿಗೆ ಆಸಕ್ತಿ, ಸಂಸ್ಕೃತ ಸಾಹಿತ್ಯದಲ್ಲಿನ ವಿಚಿತ್ರ ಪದಬಂಧಗಳು, ಸಮಸ್ಯಾಪುರ್ಣ, ತೆಲುಗರಲ್ಲಿ ಹೆಚ್ಚು ಪ್ರಚಾರವಿರುವ ದಶಾವಧಾನ, ಶತಾವಧಾನ-ಇವುಗಳೆಲ್ಲ ಒಗಟಿನ ಬೃಹದ್ರೂಪಗಳು, ಮಹಾಕವಿಗಳು ಕೂಡ ಒಗಟುಗಳಿಂದ ಆಕರ್ಷಿತರಾಗಿರುವರು. ಭಾಸನ ನಾಟಕಗಳ ಮೊದಲ ಶ್ಲೋಕದಲ್ಲಿ ಶ್ಲೇಷೆಯ ಬಳಕೆಯಿಂದ ಒಗಟು ಸೃಷ್ಟಿಯಾಗಿದೆ. ಕಾಳಿದಾಸನಲ್ಲಿಯೂ ಇದನ್ನು ಕಾಣುತ್ತೇವೆ. ಪಂಪ, ಕುಮಾರವ್ಯಾಸ ಮುಂತಾದವರಲ್ಲಿಯೂ ಒಗಟುಗಳ ಬಳಕೆ ಸ್ಪಷ್ಟವಾಗಿದೆ. ಮಾತಿನ ಚಾಣಕ್ಯತನ ಇದ್ದಲ್ಲಿ ಯಕ್ಷಪ್ರಶ್ನೆಯಾಗಿ ಒಗಟು ಆವಿರ್ಭವಿಸುತ್ತದೆನ್ನಬಹುದು.

ವಿದೇಶಗಳಲ್ಲಿ

ಪ್ರಾಚೀನ ಗ್ರೀಕರಿಗೆ ಒಗಟು ನೀತಿಯ ನೆಲೆಗಟ್ಟಾಗಿತ್ತು. ಅನಂತರ ಗ್ರೀಕ್ ಮತ್ತು ರೋಮನ್ನರ ಭೋಜನ ಕೂಟಗಳಲ್ಲಿ ತಮಾಷೆ ಮಾಡಲೆಂದು ಒಗಟುಗಳನ್ನು ಬಿಡಿಸುವ ಪಂದ್ಯಗಳನ್ನಿಟ್ಟುಕೊಳ್ಳುತ್ತಿದ್ದರು. ಸಾಲೋಮನ್ ರಾಜನ ನಾಣ್ಣುಡಿಗಳು ನಿಜವಾಗಿ ಒಗಟುಗಳೇ.

ಷೀಬದ ರಾಣಿ ಮುಂದೊಡ್ಡುವ ಸಮಸ್ಯೆಗಳು ಒಗಟಿನ ದೊಡ್ಡ ರೂಪದಲ್ಲಿವೆ. ಈಜಿಪ್ಟಿನ ದೈವವಾಣಿಗಳಂತೂ ಒಗಟಿನ ರೂಪದಲ್ಲಿಯೇ ಇವೆ. ಅಪುಲ್ಸಿಯಸ್ ಎಂಬಾತ ಒಗಟುಗಳ ಗ್ರಂಥವೊಂದನ್ನೇ ಬರೆದನೆಂದು ಪ್ರತೀತಿಯಿದೆ. ಆದರೆ ಈ ಗ್ರಂಥ ದೊರಕಿಲ್ಲ. ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್‌ ಮುಂತಾದೆಡೆಗಳಲ್ಲಿ ಒಗಟು ತುಂಬ ಪ್ರಚಾರದಲ್ಲಿದೆ. 16ನೆಯ ಶತಮಾನದವರೆಗೆ ಬಹಳ ಉಚ್ಚ್ರಾಯ ಸ್ಥಿತಿಯಲಿದ್ದು ಒಂದು ಶತಮಾನ ಮರೆಯಾಗಿದ್ದ ಒಗಟು 17ನೆಯ ಶತಮಾನದ ಅನಂತರ ಮತ್ತೆ ಜನಪ್ರಿಯ ಮನರಂಜನೆಯಾಯಿತು. ಅಬ್ಬೆ ಕೋಟಿನ್ ಎಂಬ ಪಾದ್ರಿ ಹತ್ತು ಸಾವಿರಕ್ಕೂ ಹೆಚ್ಚು ಒಗಟುಗಳನ್ನು ಹೊಸೆದಿದ್ದನೆಂದು ಹೆಸರಾಗಿದ್ದಾನೆ. ಫ್ರಾನ್ಸಿನಲ್ಲಿ ಕವಿಗಳೆಲ್ಲರೂ ಒಗಟುಗಳನ್ನು ಬೆಳೆಸಿದರು. ಜರ್ಮನಿಯಲ್ಲಿ ಷಿಲ್ಲರ್ ಕವಿ ಇದಕ್ಕೆ ವಿಸ್ತಾರವಾದ ಹರಹು, ಗಾಂಭೀರ್ಯಗಳನ್ನು ಕೊಟ್ಟು ಗೌರವಸ್ಥಾನ ಕಲ್ಪಿಸಿದನೆನ್ನಲಾಗಿದೆ.

ಚೆರೇಡ್ ಎಂಬುದು ಇಂಗ್ಲೆಂಡಿನಲ್ಲಿ ಒಗಟು ಬೆಳೆದಿರುವ ಒಂದು ವಿಶಿಷ್ಟ ರೀತಿ. ಭೋಜನಕೂಟ ನಡೆಯುವಾಗ ಅಲ್ಲಿಯೇ ಒಂದು ತಂಡದವರು ಉಳಿದವರಿಗೆ ಒಗಟನ್ನು ನಾಟಕದ ದೃಶ್ಯಗಳ ರೂಪದಲ್ಲಿ ಒಡ್ಡುತ್ತಾರೆ. ಒಂದೊಂದು ದೃಶ್ಯಕ್ಕೆ ಒಂದೊಂದು ಪದ ಕೇಂದ್ರಬಿಂದುವಾಗಿರುತ್ತದೆ. ಉದಾಹರಣೆಗೆ, ಮಕ್ಕಳು ಎಂಬ ಪದಕ್ಕಾಗಿಯೇ ಒಂದು ದೃಶ್ಯದಲ್ಲಿ ಮಕ್ಕಳ ಮನೋಧರ್ಮ, ಮಕ್ಕಳ ಆಟ, ಮಕ್ಕಳ ಮಾತು ಮುಂತಾದುವನ್ನೇ ಒತ್ತಿ ಒತ್ತಿ ಹೇಳುವುದು. ನೋಟಕರು ದೃಶ್ಯದಿಂದ ಆ ಪದವನ್ನು ಊಹಿಸಬೇಕು. ಹಲವಾರು ದೃಶ್ಯಗಳ ಪದವನ್ನು ಗ್ರಹಿಸಿದಾಗ ಒಂದು ಪುರ್ಣ ವಾಕ್ಯ ಸಿಗುತ್ತದೆ. ಅದೇ ಒಗಟು, ಇದು 18-19ನೆಯ ಶತಮಾನದಲ್ಲಿ ಬಹಳ ಜನಪ್ರಿಯವಾಗಿತ್ತು. ಯಾವುದು ಸುಲಭವಾಗಿ ಅರ್ಥವಾಗುವುದಿಲ್ಲವೋ ಅದು ಒಗಟು ಎಂಬ ಅರ್ಥದಲ್ಲಿಯೂ ಈ ಪದ ಎಲ್ಲ ದೇಶಗಳಲ್ಲಿಯೂ ಬಳಕೆಯಾಗುತ್ತಿರುವುದು ಅದರ ಗಟ್ಟಿತನವನ್ನು, ಬುದ್ಧಿಗೆ ಅದು ಎಸೆಯುವ ಸವಾಲನ್ನು ಒತ್ತಿ ತೋರಿಸುತ್ತದೆ.

ಮತ ಮತ್ತು ತತ್ತ್ವಶಾಸ್ತ್ರಗಳಲ್ಲಿ

ಮತ ಮತ್ತು ತತ್ತ್ವಶಾಸ್ತ್ರಗಳಲ್ಲಿ ಒಗಟುಗಳ ಪಾತ್ರ ದೊಡ್ಡದು. ಪ್ರಾಕ್ತನರ ಮತಗಳಲ್ಲೂ ನಾಗರಿಕ ಮತಗಳಲ್ಲೂ ಅವನ್ನು ಕಾಣಬಹುದು. ತತ್ತ್ವಕ್ಕೆ ಸಂಬಂಧಪಟ್ಟ ಒಗಟುಗಳು ಇರುತ್ತವೆಯಾದರೂ ಅವು ವಿಶೇಷವಾಗಿ ಕಾಣಿಸಿಕೊಳ್ಳುವುದು ಮತದ ಸಂಪ್ರದಾಯಗಳಲ್ಲಿ ಮತ್ತು ಸಂಸ್ಕಾರಗಳಲ್ಲಿ. ಪ್ರಾಕ್ತನರು ಒಂದು ಶವದ ಮುಂದೆ ಅಥವಾ ಕಣದ ರಾಶಿಗಳ ಮುಂದೆ ಗೂಢ ಪ್ರಶ್ನೆಗಳನ್ನು ಒಡ್ಡುವುದುಂಟು. ಆರು ದ್ವೀಪಸ್ತೋಮದಲ್ಲಿ ಶವವನ್ನು ಶವದ ಪೆಟ್ಟಿಗೆಯೊಳಗೆ ಇಡುವುದಕ್ಕೆ ಮುನ್ನ ಶವವನ್ನು ಕಾಯುವವರಲ್ಲಿ ಒಬ್ಬ ಇನ್ನೊಬ್ಬನಿಗೆ ಗೂಢಪ್ರಶ್ನೆಯನ್ನು ಹಾಕುತ್ತಾನೆ. ಹೀಗೆ ಗೂಢ ಪ್ರಶ್ನೆ ಕೇಳುವುದು ಆ ಶವದ ಪ್ರೇತಕ್ಕೆ ದಿಗ್ಭ್ರಮೆ ಹುಟ್ಟಿಸುವ ಸಲುವಾಗಿ, ಇಂಥ ಪದ್ಧತಿಯನ್ನು ಬ್ರಿಟನಿನಲ್ಲಿ ಈಗಲೂ ಕಾಣಬಹುದು. ಪುರ್ವ ಆಫ್ರಿಕದ ಅಕಂಬ ಗುಂಪಿನ ಹುಡುಗ ಹುಡುಗಿಯರು ಪರಿವರ್ತನ ಕಾಲದಲ್ಲಿ ಗೂಢ ಸಮಸ್ಯೆಗಳನ್ನು ಒಡ್ಡುವುದು ವಾಡಿಕೆ. ಫಸಲನ್ನು ಬೆಳೆಸುವ ಕಾಲದಲ್ಲಿ ಮಧ್ಯ ಸಿಲಬಸಿನ ಪ್ರಾಕ್ತನರು ಒಗಟುಗಳನ್ನು ಮಂಡಿಸುತ್ತಾರೆ. ಬೇಳೆ ಚೆನ್ನಾಗಿ ಆಗುವುದಕ್ಕೆ ಅಥವಾ ಕೆಟ್ಟು ಹೋಗುವುದಕ್ಕೆ ಒಗಟುಗಳನ್ನು ಬಿಡಿಸುವುದರಲ್ಲಿ ಗೆಲ್ಲುವುದು ಅಥವಾ ಸೋಲುವುದುಕಾರಣವಾಗುತ್ತದೆಂದು ಅವರ ನಂಬಿಕೆ. ಡೆಲ್ಫಿಯಲ್ಲಿ ಕಣಿ ಹೇಳುವವರು ಒಗಟುಗಳ ಮೂಲಕ ಭವಿಷ್ಯ ನುಡಿಯುತ್ತಿದ್ದರು. ಡಯೋನೀಸಿಯಸ್ ದೇವರಿಗೆ ಪ್ರಿಯವಾದ ಅಗ್ರಿಯೋನಿಯ ಜಾತ್ರೆಯ ಕಾಲದಲ್ಲಿ ಜನರು ಸಾಮೂಹಿಕವಾಗಿ ಸಾಲುಸಾಲಾಗಿ ಕುಳಿತು ಊಟ ಮಾಡುವಾಗ ಒಂದು ಸಾಲಿನವರು ತಮ್ಮ ಎದುರು ಸಾಲಿನವರಿಗೆ ಗೂಢಪ್ರಶ್ನೆಗಳನ್ನೂ ಹಾಕುತ್ತಿದ್ದರು. ಎದುರು ಸಾಲಿನವರು ಉತ್ತರ ಹೇಳುತ್ತಿದ್ದರು. ಭಾರತದಲ್ಲೂ ಮತ ಸಂಸ್ಕಾರಗಳಿಗೆ ಸಂಬಂಧಪಟ್ಟಂತೆ ಒಗಟುಗಳು ಪ್ರಚಾರದಲ್ಲಿದ್ದುವು. ಶ್ರಾದ್ಧ ಸಂದರ್ಭದ ಊಟದ ಕಾಲದಲ್ಲಿ ಊಟ ಮಾಡುವ ಬ್ರಾಹ್ಮಣರಿಗೆ ಗೂಢ ಪ್ರಶ್ನೆಗಳನ್ನು ಹಾಕಬೇಕೆಂದು ಮನು ವಿಧಾಯಕ ಮಾಡಿರುತ್ತಾನೆ. ಏಕೆಂದರೆ ಹಾಗೆ ವೇದೋಕ್ತವಾದ ಗೂಢಪ್ರಶ್ನೆಗಳನ್ನು ಕೇಳುವುದು ಪಿತೃಗಳಿಗೆ ಇಷ್ಟಕರವಾದದ್ದು.

ವೇದಮಂತ್ರಗಳಲ್ಲಿ ಕಾಣಬರುವ ಒಗಟುಗಳಿಗೆ ಬ್ರಹ್ಮೋದ್ಯ ಅಥವಾ ಬ್ರಹ್ಮವದ್ಯ ಎಂದು ಹೆಸರು. ಒಂದು ಮಂತ್ರದಲ್ಲಿ ಅಗ್ನಿಯ ವರ್ಣನೆ ಒಂದು ಒಗಟಿನ ರೂಪದಲ್ಲಿ ಹೀಗೆ ಬಂದಿದೆ: ನಿಮ್ಮಲ್ಲಿ ಯಾರು ಆ ಗೂಢದೇವತೆಯನ್ನು ತಿಳಿದಿರುತ್ತೀರಿ? ಆ ಕರು ತನ್ನ ತಾಯಿಯರನ್ನು ಈದಿದೆ. ತಾಯಿಯರಿಗೆ ಕಾರಣವಾದ ಗರ್ಭಾಣು ಎಲ್ಲವನ್ನು ನೋಡುವ ಆ ಮಹಿಮನು ಯಾರು? ತನ್ನ ಸ್ವಶಕ್ತಿಯಿಂದಲೇ ಚಲಿಸುವ ಅವನು, ಚೇತನಯುತವಾದ ಅಣುಗಳಿಂದ ಮೇಲಕ್ಕೆ ಏಳುತ್ತಾನೆ. (ಇಲ್ಲಿ ಕರು ಅಗ್ನಿ, ತಾಯಂದಿರು ಆಪಗಳು), ದೀರ್ಘತಮಸ್ಸೆಂಬ ಋಷಿಯ ಒಂದು ಮಂತ್ರ ತತ್ತ್ವಕ್ಕೆ ಸಂಬಂಧಪಟ್ಟ ಒಗಟುಗಳಿಂದ ತುಂಬಿದೆ. ಆ ಮಂತ್ರ ಅಶ್ವಮೇಧ ಯಜ್ಞದ ಕಾಲದಲ್ಲಿ ಉಪಯೋಗಿಸುವಂಥದು. ಅದು ಪ್ರಶ್ನೋತ್ತರ ರೂಪದಲ್ಲಿದೆ. ಯಾಜಕರಲ್ಲಿ ಹೋತೃ ಪ್ರಶ್ನೆ ಕೇಳುತ್ತಾನೆ; ಅಧ್ವರ್ಯು ಉತ್ತರ ಹೇಳುತ್ತಾನೆ.

ಹೋತೃ ಈ ಪ್ರಶ್ನೆ ಕೇಳುತ್ತಾನೆ; ಏಕಾಕಿಯಾಗಿ ಸಂಚರಿಸುವವನು ಯಾವನು? ಯಾವನು ಮರಳಿ ಹುಟ್ಟುತ್ತಾನೆ? ನೆಗಡಿಗೆ ಸಿದ್ಧೌಷದ ಯಾವುದು? ಮಹಾರಾಶಿ ಯಾವುದು?

ಅಧ್ವರ್ಯು ಹೀಗೆ ಉತ್ತರ ಕೊಡುತ್ತಾನೆ; ಏಕಾಕಿಯಾಗಿ ಸಂಚರಿಸುವವನು ಸೂರ್ಯ, ಪುನಃ ಪುನಃ ಹುಟ್ಟುವವನು ಚಂದ್ರ, ನೆಗಡಿಗೆ ಬೆಂಕಿ ಔಷಧ. ದೊಡ್ಡ ರಾಶಿ ಭೂಮಿ.

ಹೋತೃ ಕೇಳುವ ಇನ್ನೊಂದು ಪ್ರಶ್ನೆ : ಸೂರ್ಯನಿಗೆ ಸದೃಶವಾದ ಬೆಳಕು ಯಾವುದು? ಸಾಗರಕ್ಕೆ ಸದೃಶವಾದ ಸಾಗರ ಯಾವುದು? ಪೃಥ್ವಿಗಿಂತ ಮಹತ್ತರವಾದುದು ಯಾವುದು? ಯಾವುದರ ಬೆಲೆ ಅಳತೆಗೆ ಮೀರಿದ್ದು? ಅದಕ್ಕೆ ಉತ್ತರ ಇದು : ಸೂರ್ಯನಿಗೆ ಸದೃಶವಾದ ಬೆಳಕು ಬ್ರಹ್ಮ, ಸಾಗರಕ್ಕೆ ಸದೃಶವಾದ್ದು ಸ್ವರ್ಗ. ಇಂದ್ರ ಪೃಥ್ವಿಗಿಂತ ದೊಡ್ಡವನು. ಕಾಮಧೇನುವಿನ ಪ್ರಭಾವ ಅಳತೆಗೆ ಮೀರಿದ್ದು. ಇನ್ನೊಂದು ಪ್ರಶ್ನೆ: ಪ್ರಥ್ವಿಯ ತುತ್ತತುದಿ ಯಾವುದು? ವಿಶ್ವದ ಗುಂಬ ಯಾವುದು? ವೀರ್ಯವತ್ತಾದ ಆ ಅಶ್ವದ ಬೀಜ ಯಾವುದು? ವಾಕ್ಕಿನ ಮಹತ್ತರ ಸ್ವರ್ಗ ಯಾವುದು? ಅದಕ್ಕೆ ಉತ್ತರ: ಬಲಿಪೀಠ ಪೃಥ್ವಿಯ ತುತ್ತತುದಿ. ಯಜ್ಞ ವಿಶ್ವದ ಗುಂಬ, ಸೋಮ ಆ ವೀರ್ಯವತ್ತಾದ ಅಶ್ವದ (ಇಂದ್ರ) ಬೀಜ. ಬ್ರಹ್ಮ ವಾಕ್ಕಿನ ಮಹತ್ತರ ಸ್ವರ್ಗ. ದೀರ್ಘತಮಸ್ ಋಷಿಯ ಸೂಕ್ತದಲ್ಲಿ ತತ್ತ್ವಕ್ಕೆ ಸಂಬಂಧಪಟ್ಟ ಒಗಟು ಇದು: ಸಹಚಾರಿಗಳಾದ, ಪರಸ್ಪರ ಸ್ನೇಹಿತರಾದ ಎರಡು ಹಕ್ಕಿಗಳು ಒಂದೇ ಮರದ ಮೇಲೆ ವಾಸಿಸುತ್ತವೆ. ಅವುಗಳಲ್ಲಿ ಒಂದು ಸಿಹಿಯಾದ ಅಂಜೂರದ ಹಣ್ಣನ್ನು ತಿನ್ನುತ್ತದೆ. ಇನ್ನೊಂದು ತಿನ್ನದೆ ಸುಮ್ಮನೆ ನೋಡುತ್ತದೆ. ಇಲ್ಲಿ ತಿನ್ನುವ ಹಕ್ಕಿ ಸಂಸಾರದಲ್ಲಿ ತೊಡಗಿರುವ ಜೀವ. ತಿನ್ನದ ಹಕ್ಕಿ ಪರಮಾತ್ಮ. ಇದೇ ಒಗಟು ಉಪನಿಷತ್ತುಗಳಲ್ಲೂ ಸಾಂಖ್ಯಕಾರಿಕದಲ್ಲೂ ಪುನರುಕ್ತವಾಗಿದೆ.

ಕೆಲವು ಉದಾಹರಣೆಗಳು

 • ಊರೆಲ್ಲ ತಿರುಗ್ತತಿ ಮನೆ ಮೂಲ್ಯಾಗ್ ಬಿದ್ದಿರ್ತತಿ - - : ಚಪ್ಪಲಿ ಅಥವಾ ಎಕ್ಕಡ
 • ಮುಳುಗ್ತತಿ, ತೇಲ್ತತಿ, ಕರ್ಗತತಿ – : ಅಡಿಕೆ ,ಎಲೆ, ಸುಣ್ಣ.
 • ಅಂಗಣ್ಣ ,ಮಂಗಣ್ಣ ,ಅಂಗಿ ಬಿಚ್ಕೊಂಡು ನುಂಗಣ್ಣ . - : ಬಾಳೆಹಣ್ಣು.
 • ಉದ್ದುದ್ದವನೆ ,ಉರಿ ಮುಖದವನೆ ,ಸುದ್ದಿ ಹೇಳೋ ಸೂ..ಮಗನೇ . - : ಮೆಣಸಿನಕಾಯಿ.
 • ಅಂಕ ಡೊಂಕ ’’; ಅದರ ತಮ್ಮ ’ಸಾ’; ಕರಿಯದೊಂದು ’ಮೆ’; ನಾಲ್ಕು ಚೌಕ ’ಬೆ’. - :ಅಡಿಕೆ ,ಸಾಸಿವೆ ,ಮೆಣಸು , ಬೆಲ್ಲ.

ಹೋಲಿಕೆಗಳ ಮೂಲಕ ರಚಿತವಾದ ಒಗಟುಗಳು

ದಿನನಿತ್ಯದ ಬದುಕಿನಿಂದಲೇ ಎತ್ತಿಕೊಂಡ ಸಂಗತಿಗಳನ್ನು ಉಪಮಾನ-ಉಪಮೇಯಗಳ ಮೂಲಕ ಬಣ್ಣಬಣ್ಣವಾಗಿ ಕಟ್ಟಿಕೊಡುವ ಪ್ರಯತ್ನವನ್ನು ಇಲ್ಲಿ ಕಾಣಬಹುದು.ಉದಾಹರಣೆಗೆ :-

 • ಅಮ್ಮನ ಸೀರೆ ಮಡಿಸೋಕಾಗಲ್ಲ ; ಅಪ್ಪನ ದುಡ್ಡು ಎಣಿಸೋಕಾಗಲ್ಲ -- : ಆಕಾಶ, ನಕ್ಷತ್ರ
 • ಅಟ್ಟದ ಮೇಲೆ ಪುಟ್ಟ ಲಕ್ಷ್ಮಿ -- : ಹಣೆ, ಕುಂಕುಮ
 • ಚಿಕ್ಕ ಮನೆ ತುಂಬಾ ಚಕ್ಕೆ ತುಂಬಿದೆ-- : ಬಾಯಿ, ಹಲ್ಲು
 • ಅಟ್ಟದ ಮೇಲಿರೋ ಗಿಡ್ಡ ಗೋಪಾಲ, ನಿನಗ್ಯಾರಿಟ್ಟರೋ ಸಾದಿನ ಬೊಟ್ಟು? -- : ಗುಲಗಂಜಿ
 • ಬಾವೀಲಿ ಬೆಳ್ಳಿ ಬಟ್ಟಲು ಬಿದ್ದಿದೆ. - : ಚಂದ್ರ
 • ಹಸುರು ಗಿಡದ ಮೇಲೆ ಮೊಸರು ಚೆಲ್ಲಿದೆ. - : ಮಲ್ಲಿಗೆ ಹೂ.
 • ಅಂಕು ಡೊಂಕಾದ ಬಾವಿ ,ಬಗ್ಗಿ ನೋಡಿದರೆ ಗುಬ್ಬಿ ಕುಡಿಯುವಷ್ಟು ನೀರಿಲ್ಲ. - : ಕಿವಿ.
 • ಬರೆಯುವುದಕ್ಕಾಗದೆ ಇರೊ ನುಡಿ ಯಾವುದು ? -- "ಮುನ್ನುಡಿ"
Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ಆಸ್ಟ್ರೇಲಿಯ

ಆಸ್ಟ್ರೇಲಿಯ ದಕ್ಷಿಣ ಭೂಗೋಳಾರ್ಧದಲ್ಲಿರುವ ಒಂದು ದೇಶಹಾಗೂ ಖಂಡ. ಸುತ್ತಲೂ ಸಾಗರಜಲದಿಂದ ಆವೃತವಾಗಿದ್ದು ಇಡೀ ಖಂಡವೇ ಒಂದು ಬೃಹತ್ ದ್ವೀಪದಂತಿದೆ. ಇದರ ಸ್ಥಳ ನಿರ್ದೇಶ ಹೀಗಿದೆ : 113º90-153º390, ಪು.ರೇ; 10º410-43º390, ದ.ಅ. ವಿಸ್ತೀರ್ಣ 76,86,850 ಚ.ಕಿಮೀ. ಜನಸಂಖ್ಯೆ 19,855,288 (2006). ರಾಜಧಾನಿ ಕ್ಯಾನ್ಬೆರ 353,149 (2001). ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಸಾಗರಗಳ ನಡುವೆ ಇದೆ. ಅಂದರೆ ಇದರ ವಿಸ್ತಾರ ಅಮೆರಿಕ ಸಂಯುಕ್ತ ಸಂಸ್ಥಾನದಷ್ಟಾಗುತ್ತದೆ. ಸಮುದ್ರತೀರ 19,536 ಕಿಮೀ ಉದ್ದವಾಗಿದೆ. ನಿಸ್ಸಂದೇಹವಾಗಿ ಇದೊಂದು ಅಡಕವಾದ ಭೂಭಾಗ. ಇದರ ಈ ವೈಶಿಷ್ಟ್ಯ, ಮೇಲ್ಮೈಲಕ್ಷಣ ಮತ್ತು ಅಕ್ಷಾಂಶರೀತ್ಯಾ ಇದರ ಸ್ಥಾನ, ಇವೆಲ್ಲ ಇದರ ವಾಯುಗುಣವನ್ನು ನಿಯಂತ್ರಿಸುತ್ತವೆ. ಈ ಖಂಡದ ಭೌಗೋಳಿಕ ಲಕ್ಷಣ ನಿರ್ಣಯವಾಗಿರುವುದು ಈ ಅಂಶಗಳಿಂದ. ಆಸ್ಟ್ರೇಲಿಯ ಎಂಬ ಹೆಸರು `ಆಸ್ಟ್ರಲ’ ಎಂಬ ಲ್ಯಾಟಿನ್ ಶಬ್ದದಿಂದ ಬಂದದ್ದು.

ಈಡಿಪಸ್

ಈಡಿಪಸ್ ಪ್ರಾಚೀನ ಗ್ರೀಕ್ ಪುರಾಣಗಳಲ್ಲಿನ ನಾಯಕ ಶಿಖಾಮಣಿಗಳಲ್ಲೊಬ್ಬ. ಇವನ ವೃತ್ತಾಂತ ಅತ್ಯಂತ ಭಯಾನಕವೂ ರೋಮಾಂಚಕಾರವೂ ಸಮಸ್ಯಾತ್ಮಕವೂ ಜಟಿಲವೂ ದುರಂತಮಯವೂ ಆಗಿದೆ. ಗ್ರೀಕ್ ಪುರಾಣದ ಪ್ರಕಾರ ಈಡಿಪಸ್ ಥೀಬ್ಸ್ ರಾಜ್ಯದ ದೊರೆ. ಗೊತ್ತಿಲ್ಲದೆ ತಂದೆಯನ್ನೇ ಕೊಂದು ತಾಯಿಯನ್ನೇ ಮದುವೆಯಾದ ವ್ಯಕ್ತಿ. ಈಡಿಪಸ್ ಥೀಬ್ಸ್‍ನ ದೊರೆಯಾಗಿ ಸಾಯುವತನಕ ರಾಜ್ಯಭಾರ ಮಾಡಿದನಾದರೂ ತಮ್ಮಿಬ್ಬರಿಗೂ ಇರುವ ಸಂಬಂಧದಲ್ಲಿನ ಸತ್ಯ ತಿಳಿದಾಗ ಅವನ ತಾಯಿ ಹೇಗೆ ನೇಣುಹಾಕಿಕೊಂಡಳು ಎಂಬುದನ್ನು ಹೋಮರ್ ಕವಿಯೇ ಉಲ್ಲೇಖಿಸುತ್ತಾನೆ.

ಗ್ರೀಸಿನ ದೊರೆ ಲಯಸ್‍ಗೆ, ಅವನ ಮಗನಿಂದಲೆ ಕೊಲೆಯಾಗುತ್ತದೆಂದು ದಿವ್ಯವಾಣಿಯೊಂದು ಭವಿಷ್ಯ ನುಡಿದಿರುತ್ತದೆ. ಇದನ್ನು ತಿಳಿದ ರಾಜ, ತನಗೊಂದು ಮಗುವಾದಾಗ ಅದರ ಪಾದಗಳನ್ನು ಮೊನಚಾದ ಲೋಹದ ಮೊಳೆಯಿಂದ ಚುಚ್ಚಿ ಗಾಯಮಾಡಿ ಸಾಯಲು ಹೊರಹಾಕಿಬಿಡುತ್ತಾನೆ. ಮಗುವನ್ನು ಮತ್ತಾರೂ ಕಾಪಾಡಕೂಡದೆಂದೂ ಅದರ ದೆವ್ವ ಸಹ ಸುಳಿಯದಂತೆ ನೋಡಿಕೊಳ್ಳತಕ್ಕದೆಂದೂ ಕಟ್ಟಪ್ಪಣೆ ಮಾಡುತ್ತಾನೆ. ಆದರೆ ದೈವೇಚ್ಛೆ ಬೇರೊಂದು ತೆರನಾಗಿತ್ತು. ಕಾರಿಂಥಿನ ದೊರೆ ಪಾಲಿಬಸ್‍ನ ಕಡೆಯ ಕುರುಬನೊಬ್ಬ ಮಗುವನ್ನು ನೋಡಿ ಕನಿಕರಪಟ್ಟು, ಅದನ್ನು ತೆಗೆದುಕೊಂಡು ಹೋಗಿ ಪಾಲಿಬಸ್‍ನ ರಾಣಿಗೆ ಕೊಟ್ಟ. ಪಾಲಿಬಸ್ ಮತ್ತು ಅವನ ರಾಣಿ ಈ ಮಗುವನ್ನು ತಮ್ಮದೆಂದೇ ತಿಳಿದು ಸಾಕಿದರು. ಪಾದಗಳು ಊದಿಕೊಂಡಿದ್ದರಿಂದ, ಈ ಮಗುವಿಗೆ ಈಡಿಪಸ್ ಎಂಬ ಹೆಸರನ್ನು ಅವರೇ ಕೊಟ್ಟರು. ಈಡಿಪಸ್ ಬೆಳೆದು ಪ್ರಾಯಕ್ಕೆ ಬಂದಾಗ, ಅವನ ಸಂದೇಹಾಸ್ಪದ ವಂಶವೃತ್ತಾಂತದ ಬಗ್ಗೆ ಕುಡುಕನೊಬ್ಬ ಹಂಗಿಸಿದ. ಆಗ ತನ್ನ ನಿಜವಾದ ತಂದೆತಾಯಿಗಳನ್ನು ಪತ್ತೆ ಹಚ್ಚಲು ಈಡಿಪಸ್ ಗ್ರೀಸಿನ ಭವಿಷ್ಯವಾಣಿಯ ಸ್ಥಳವಾದ ಡೆಲ್ಫಗೆ ಬಂದ. ಅಲ್ಲಿನ ಗ್ರೀಕರ ಸೂರ್ಯದೇವತೆ ಅಪೊಲೊ ಮುಂದೆ ಈಡಿಪಸ್ ತನ್ನ ತಂದೆಯನ್ನು ಕೊಂದು ತಾಯಿಯನ್ನು ಮದುವೆಯಾಗುವ ಭವಿಷ್ಯವನ್ನು ತಿಳಿಸಿತು. ಈಡಿಪಸ್ ಕಾರಿಂಥಿಗೆ ವಾಪಸಾಗದೆ, ಥೀಬ್ಸ್ ಕಡೆಗೆ ಪ್ರಯಾಣ ಬೆಳೆಸಿದ.ದಾರಿಯಲ್ಲಿ ಲಯಸ್‍ನನ್ನು ಸಂಧಿಸಿದ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆಯಿತು. ದ್ವಂದ್ವಯುದ್ಧ ಮೊದಲಾಯಿತು. ಈಡಿಪಸ್ ಲಯಸ್‍ನನ್ನು ಕೊಂದುಹಾಕಿದ. ಆದರೆ ಸತ್ತವನು ತನ್ನ ತಂದೆ ಎಂಬುದು ಈಡಿಪಸ್‍ಗೆ ತಿಳಿಯದು. ಹೀಗೆ ತಂದೆಯನ್ನು ಕೊಂದು ಪ್ರಯಾಣ ಮುಂದುವರಿಸಿದಾಗ ಸ್ಫಿಂಕ್ಸ್ ರಾಕ್ಷಸಿಯಿಂದ ಥೀಬ್ಸ್‍ಗೆ ಆಗುತ್ತಿದ್ದ ಉಪದ್ರವದ ವಿಚಾರ ಈಡಿಪಸ್‍ಗೆ ಗೊತ್ತಾಯಿತು. ಗ್ರೀಕ್ ಪುರಾಣದ ಪ್ರಕಾರ ಸ್ಫಿಂಕ್ಸ್ ಒಂದು ಅದ್ಭುತ ಪ್ರಾಣಿ. ಅದಕ್ಕೆ ಹೆಂಗಸಿನ ತಲೆಯೂ ಸಿಂಹದ ಒಡಲೂ ರೆಕ್ಕೆಗಳೂ ಇದ್ದುವು. ತನ್ನೆಡೆಗೆ ಸುಳಿದವರಿಗೆಲ್ಲ ಬಿಡಿಸಲಾರದ ಒಗಟೊಂದನ್ನು ಒಡ್ಡಿ ಅವರನ್ನು ಈ ರಾಕ್ಷಸಿ ಕೊಲ್ಲುತ್ತಿತ್ತು. "ಬೆಳಗ್ಗೆ ನಾಲ್ಕು ಕಾಲಿನಲ್ಲಿ, ಮಧ್ಯಾಹ್ನ ಎರಡು ಕಾಲಿನಲ್ಲಿ, ಸಂಜೆ ಮೂರು ಕಾಲಿನಲ್ಲಿ ನಡೆವ ಪ್ರಾಣಿ ಯಾವುದು?" ಎಂಬುದೇ ಅದರ ಒಗಟು. ಮನುಷ್ಯನೆಂಬುದೇ ಅದರ ಅರ್ಥವಾದರೂ ಯಾರೂ ಆ ತನಕ ಉತ್ತರ ಹೇಳಿ ಜೀವಂತ ಪಾರಾದವರಿರಲಿಲ್ಲ. ಇಲ್ಲಿ ಬೆಳಗ್ಗೆ, ಮಧ್ಯಾಹ್ನ, ಸಾಯಂಕಾಲಗಳಿಗೆ ಜೀವನದ ಮೂರು ಘಟ್ಟಗಳಾದ ಬಾಲ್ಯ, ಯೌವನ ಮತ್ತು ಮುಪ್ಪು ಎಂಬ ಅರ್ಥವಿದೆ. ಈಡಿಪಸ್ ಅಲ್ಲಿಗೆ ಬಂದು ಸ್ಫಿಂಕ್ಸ್ ರಾಕ್ಷಸಿ ಒಡ್ಡಿದ್ದ ಒಗಟನ್ನು ಬಿಡಿಸುತ್ತಾನೆ. ಇದರಿಂದ ಆ ರಾಕ್ಷಸಿ ತನ್ನನ್ನೇ ತಾನು ಕೊಂದುಕೊಂಡು ಸತ್ತುಹೋಗುತ್ತದೆ. ಒಗಟನ್ನು ಬಿಡಿಸಿ, ಸ್ಫಿಂಕ್ಸ್ ರಕ್ಕಸಿಯನ್ನು ಕೊಂದವರಿಗೆ ಆ ರಾಜ್ಯ ಮತ್ತು ಅದರ ರಾಣಿ ಉಡುಗೊರೆಯಾಗಬೇಕೆಂದು ಮೊದಲೇ ನಿಗದಿಯಾಗಿರುತ್ತದೆ. ಈಡಿಪಸ್ ಥೀಬ್ಸ್‍ನ ಸಿಂಹಾಸನವನ್ನೂ ವಿಧವೆ ರಾಣಿ-ಅರ್ಥಾತ್ ತಾಯಿ-ಇಯೊಕಾಸ್ಟೆಯನ್ನೂ ಬಹುಮಾನವಾಗಿ ಪಡೆಯುತ್ತಾನೆ.

ಈಡಿಪಸ್ ಮತ್ತು ಇಯೊಕಾಸ್ಟೆ ಬಹಳ ಕಾಲ ಸಹಬಾಳ್ವೆ ನಡೆಸಿದರು. ಅವರಿಗೆ ಈಟಿಯೊಕ್ಲಿಸ್, ಪಾಲಿನೀಸಸ್, ಅಂತಿಗೊನೆ ಮತ್ತು ಇಸ್ಮೇನೆ ಎಂಬ ನಾಲ್ವರು ಮಕ್ಕಳೂ ಆದರು. ಕಡೆಗೆ ಒಂದು ಸಾರಿ ಆ ರಾಜ್ಯಕ್ಕೆ ಕ್ಷಾಮ ತಲೆದೋರಿತೆಂದೂ ಅದಕ್ಕೆ ಇವರಿಬ್ಬರ ಅಕ್ರಮ ಸಂಬಂಧದ ಪಾಪವೇ ಕಾರಣವೆಂದೂ ಭವಿಷ್ಯವಾಣಿ ಹೇಳಿತೆಂದು ಪುರಾಣ ಕಥೆಯ ಸಾಮಾನ್ಯ ಪಾಠ ತಿಳಿಸುತ್ತದೆ. ಇದರಿಂದ ಸತ್ಯ ಬೆಳಕು ಕಂಡಿತು. ಆಗ ಇಯೊಕಾಸ್ಟೆ ಆತ್ಮಹತ್ಯೆ ಮಾಡಿಕೊಂಡಳು. ಈಡಿಪಸ್ ಉದ್ವಿಗ್ನನಾಗಿ ಪಶ್ಚಾತ್ತಾಪರೂಪವಾಗಿ ಕಣ್ಣುಕಿತ್ತುಕೊಂಡ. ಆಮೇಲೆ ಈಡಿಪಸ್ ತನ್ನ ಭಾವನನ್ನು ರಾಜಪ್ರತಿನಿಧಿಯಾಗಿ ನೇಮಿಸಿ, ತನ್ನಿಬ್ಬರು ಮಕ್ಕಳು ಅಂತಿಗೊನೆ ಮತ್ತು ಇಸ್ಮೇನೆಯರೊಡನೆ ದೇಶಭ್ರಷ್ಠನಾದಂತೆ ತಿಳಿದುಬರುತ್ತದೆ. ಕಡೆಗೆ ಅಥೆನ್ಸಿನ ಸಮೀಪದ ಕೊಲೊನಸ್‍ನಲ್ಲಿ ಈಡಿಪಸ್‍ನ ಅಂತ್ಯ ಸಂಭವಿಸಿತೆಂದೂ ಭೂಮಿ ಬಾಯಿ ಬಿಟ್ಟು ಅವನನ್ನು ಒಳಕೊಂಡಿತೆಂದೂ ಪ್ರತೀತಿ. ಆಮೇಲೆ ಈಡಿಪಸ್ ಆ ಪ್ರದೇಶದ ರಕ್ಷಕವೀರನಾದನೆಂದೂ ಕಥೆ ಇದೆ.

ಈಡಿಪಸ್ ಐತಿಹ್ಯದಲ್ಲಿ ಚಾರಿತ್ರಿಕ ಸತ್ಯಸಂಗತಿ ಇರುವುದಾದರೂ ಜನಪದ ಕಥಾಂಶಗಳಿಂದ ಅದನ್ನು ಬೇರ್ಪಡಿಸಲು ಸಾಧ್ಯವಾಗುತ್ತಿಲ್ಲ. ಆಬ್ಬೇನಿಯ, ಫಿನ್ಲೆಂಡ್, ಸೈಪ್ರಸ್, ಗ್ರೀಸ್ ಮೊದಲಾದ ದೇಶಗಳಲ್ಲಿ ಅಪ್ಪಟ ಈಡಿಪಸ್ ಜಾನಪದ ಸಂಪ್ರದಾಯವನ್ನು ಕಾಣಬಹುದು. ಮಧ್ಯಯುಗದ ಕೆಲವು ಕೃತಿಗಳಲ್ಲಿ ಇದರ ಸ್ಥಳಾಂತರೀಕರಣ ನಡೆದಿರುವುದೂ ಉಂಟು. ಈಡಿಪಸ್ ಪುರಾತನ ಕಥೆಯಲ್ಲಿ ನಾಟಕೀಯ ತೀವ್ರತೆ ಬಹುವಾಗಿದ್ದು ಪುರಾತನ ಕಲೆಯಲ್ಲಿ ಈ ಸಂಗತಿ ಚಿತ್ರಿತವಾಗಿರುವುದು ಮಾತ್ರವಲ್ಲದೆ, ಕಾನೈಲ್ಲೆ, ಡ್ರೈಡನ್, ವಾಲ್ಟೇರರನ್ನೂ ಸೇರಿಸಿಕೊಂಡು ಹಲವು ನಾಟಕಕಾರರಿಗೆ ಬಹುಕಾಲ ನಾಟಕದ ವಸ್ತುವಾಗಿತ್ತು ಎಂಬುದು ತಿಳಿದ ಸಂಗತಿಯೇ ಆಗಿದೆ. ಇಪ್ಪತ್ತನೆಯ ಶತಮಾನದಲ್ಲೂ ಇದು ವಿಶೇಷ ಆಕರ್ಷಣೆಗೆ ಗುರಿಯಾಗಿದ್ದು, ಹಲವು ಲೇಖಕರಿಗೆ ಸ್ಫೂರ್ತಿನೀಡಿರುವುದು ಉಲ್ಲೇಖನೀಯ.

ಫ್ರಾಯ್ಡ್ ತನ್ನ ಸಿದ್ಧಾಂತವೊಂದಕ್ಕೆ ಈ ಕಥೆಯನ್ನು ಆಧಾರ ಮಾಡಿಕೊಂಡು ಅದಕ್ಕೆ ಈಡಿಪಸ್ ಕಾಂಪ್ಲೆಕ್ಸ್ (ನೋಡಿ- ಈಡಿಪಸ್-ಕಾಂಪ್ಲೆಕ್ಸ್) ಎಂದು ಹೆಸರಿಟ್ಟಿದ್ದು ಗಮನಾರ್ಹ ಅಂಶವಾಗಿದೆ.

ಈಡಿಪಸ್ ಕಥೆಯಲ್ಲಿ ಹಲವಾರು ಪಾಠಾಂತರಗಳು ಕಾಣಬರುತ್ತವೆ. ಜನಪದ ಕಥೆಯಲ್ಲಿ ರೂಪಾಂತರ ಸಾಧ್ಯತೆ ಒಂದು ಸಾಮಾನ್ಯ ಲಕ್ಷಣ. ಈ ಕಥೆ ಇದಕ್ಕೆ ಹೊರತಾಗಿಲ್ಲ. ಈಡಿಪಸ್ ಕಥೆಯಲ್ಲಿ ಹಲವು ಸಂಪ್ರದಾಯಗಳಿದ್ದು, ಒಂದೊಂದು ವಿಶೇಷ ಸಂಗತಿಯನ್ನು ಆಸ್ಫೋಟಿಸುತ್ತದೆ. ಈಗ ಅಂಥ ಕೆಲವನ್ನು ಗುರುತಿಸಬಹುದು. ಇಯೊಕಾಸ್ಟೆಯ ಆತ್ಮಹತ್ಯೆಯಾಗಲಿ, ಈಡಿಪಸ್‍ನ ದೇಶಭ್ರಷ್ಟತೆಯಾಗಲಿ ಕೆಲವು ಪಾಠಾಂತರಗಳ ಪ್ರಕಾರ ಘಟನೆಯ ಸಮೀಪ ಕಾಲದಲ್ಲಿ ನಡೆದಿರಬೇಕೆಂದು ತಿಳಿದುಬರುತ್ತದೆ. ಆದರೆ ಇನ್ನು ಕೆಲವಲ್ಲಿ ಈ ಎರಡು ಘಟನೆಗಳಿಗೂ ನಡುವೆ ಕೆಲವು ವರ್ಷಗಳೇ ಕಳೆದುಹೋಗಿರಬೇಕೆಂದು ಗೊತ್ತಾಗುತ್ತದೆ. ಈಡಿಪಸನ ನಾಲ್ಕುಜನ ಮಕ್ಕಳು ಅವನ ಮೊದಲ ಹೆಂಡತಿ ಅರ್ಥಾತ್ ತಾಯಿ ಇಯೊಕಾಸ್ಟೆಗೆ ಹುಟ್ಟಿದವರೊ ಅಥವಾ ಅವನ ಎರಡನೆಯ ಹೆಂಡತಿ ಈರಿಗನೇಯಾ ಅಥವಾ ಅಸ್ಟಿಮಿಡುಸಿಗೆ ಹುಟ್ಟಿದವರೊ ತಿಳಿಯದು. ಇದರ ಇನ್ನೊಂದು ತೊಡಕೆಂದರೆ ಕಥೆಯ ಅಂತ್ಯವನ್ನು ಕುರಿತದ್ದು. ಅಥೇನಿಯದ ಲೇಖಕರು ಅಟಿಕದಲ್ಲಿ ಈ ಕಥೆ ಕೊನೆಗೊಂಡಿತೆಂದು ಹೇಳಿ ಸಮಸ್ಯೆಯನ್ನು ಮತ್ತಷ್ಟು ತೊಡಕುಮಾಡಿದ್ದಾರೆ. ಕುರುಡ ಈಡಿಪಸನನ್ನು ಭೂಮಿ ಒಳಗೊಂಡ ವಿಚಾರದ ಬಗ್ಗೆ ಇನ್ನೊಂದು ಸಂಪ್ರದಾಯ ಪ್ರಚಲಿತವಾಗಿದೆ. ಥೀಬ್ಸಿನ ದನಗಳನ್ನು ದಾಳಿಕಾರರಿಂದ ರಕ್ಷಿಸುವಾಗ ಪ್ರಾಯಶಃ ನಡೆದ ಯುದ್ಧದಲ್ಲಿ ಈಡಿಪಸ್ ಮಡಿದಿರಬೇಕೆಂಬುದೇ ಅದು. ಇಷ್ಟಾದರೂ ಅವನ ಶವಸಂಸ್ಕಾರ ಥೀಬ್ಸಿನಲ್ಲಿ ನಡೆಯದೆ ಬೇರೆ ಕಡೆ ನಡೆದಂತೆ ತಿಳಿದು ಬರುತ್ತದೆ. ಅವನ ಸಮಾಧಿಯ ಪರಿಸರದಲ್ಲಿ ವಾಸಿಸಿದರೆ ವಿಪತ್ತು ಬರುತ್ತದೆ ಎಂಬುದೇ ಆ ಜನ ಅವನ ಶವ ಸಂಸ್ಕಾರ ಸ್ಥಳಕ್ಕೆ ಪ್ರವೇಶಿಸದಿರಲು ಕಾರಣವಾಗಿರಬೇಕು. ಕಡೆಗೆ ದೇವತೆಯ ಆಜ್ಞೆಯ ಪ್ರಕಾರವಾಗಿ ಎಟಿಯೊನಸನ ಡೆಮೆಟರ್ ಎಂಬ ಪವಿತ್ರಸ್ಥಳದಲ್ಲಿ ಆತನ ಸಮಾಧಿಯಾದಂತೆ ಕಥೆಯೊಂದು ತಿಳಿಸುತ್ತದೆ. ಪ್ರಾಚೀನ ಜಗತ್ತಿನಲ್ಲಿ ಈ ಸ್ಥಳ ತುಂಬ ಪ್ರಸಿದ್ಧಿ ಪಡೆದುಕೊಂಡಿತ್ತಂತೆ. ಇಲ್ಲಿ ಗಮನಿಸಬಹುದಾದ ಮತ್ತೊಂದು ವಿಚಾರವೆಂದರೆ, ಥೀಬ್ಸಿನ ರಾಜರು ದುರಂತತೆಯ ಶಿಕ್ಷೆಗೆ ಗುರಿಯಾಗಬೇಕಾಗಿ ಬಂದುದಕ್ಕೆ ಪೆಲೋಪ್ಸ್ ಕೊಟ್ಟ ಶಾಪವೂ ಒಂದಾಗಿದೆ ಎಂಬುದು. ಇಂಥ ಹಲವಾರು ಸಂಗತಿಗಳಿಂದ ಈಡಿಪಸ್ ಕಥೆ ಅತ್ಯಂತ ಕ್ಲಿಷ್ಟವಾಗಿದೆ. ಈ ಎಲ್ಲ ವಿಷಯಗಳ ಅಧ್ಯಯನದಿಂದ ಇಷ್ಟನ್ನು ಮಾತ್ರ ಹೇಳಬಹುದು. ಪುರಾಣಕಾವ್ಯಗಳ ಆವರ್ತದಲ್ಲಿ ಸಿಕ್ಕಿ ಈ ಕಥೆ ಪ್ರಾರಂಭದಲ್ಲಿ ಒಂದು ರೂಪ ತಾಳಿದುದು ನಿಸ್ಸಂಶಯವಾದರೂ ಹೋಮರನ ಅನಂತರದ ಸಂಪ್ರದಾಯದಲ್ಲಿ, ಬಹುತೇಕವಾಗಿ ನಮಗೆ ಗೊತ್ತಿರುವ ಸೋಫಕ್ಲೀಸನ ಈಡಿಪಸ್ ರೆಕ್ಸ್ ಮತ್ತು ಈಡಿಪಸ್ ಕಾಲೊನಿಯಸುಗಳಿಂದ ಕಥೆಯಲ್ಲಿ ಭಿನ್ನರೂಪಗಳು ಕಾಣಿಸಿಕೊಂಡಿರಬೇಕು.

ಈಡಿಪಸ್ ಕಥೆ ಹಲವು ಆಶಯಗಳಿಂದ ಘಟಿತವಾದದ್ದು, ಭವಿಷ್ಯವಾಣಿ, ಮಗುವಿನ ಪಾದಗಳನ್ನು ಇರಿಯುವುದು, ತ್ಯಜಿಸಿದ ಮಗುವನ್ನು ಬೇರೊಬ್ಬರು ಸಾಕಿಕೊಳ್ಳುವುದು, ತಂದೆಯನ್ನು ಕೊಲ್ಲುವುದು, ಇಯೊಕಾಸ್ಟೆಯ ಆತ್ಮಹತ್ಯೆ, ಈಡಿಪಸ್ ಕಣ್ಣು ಕಳೆದುಕೊಂಡು ದೇಶಭ್ರಷ್ಟನಾಗುವುದು-ಭೂಮಿ ಒಳಗೊಳ್ಳುವುದು-ಇವೇ ಆ ಆಶಯಗಳು. ಈ ಮೂಲ ಆಶಯಗಳೆಲ್ಲ ಪ್ರಪಂಚಾದ್ಯಂತ ಒಂದಲ್ಲ ಒಂದು ರೀತಿಯಲ್ಲಿ ವಿತರಣೆಗೊಂಡಿವೆ. ಈಡಿಪಸ್‍ನನ್ನು ಭೂಮಿ ಒಳಗೊಂಡಿದ್ದರ ಜೊತೆಯಲ್ಲಿ ಸೀತೆಯನ್ನು ಭೂಮಿ ಬಾಯಿ ಬಿಟ್ಟು ಸೇರಿಸಿಕೊಂಡುದನ್ನು ಹೋಲಿಸಬಹುದು. ಇಲ್ಲಿನ ಕಥನ ಆಶಯಗಳಲ್ಲಿ ಮನಸೆಳೆವ ಮತ್ತೊಂದೆಂದರೆ ಸ್ಫಿಂಕ್ಸ್ ರಕ್ಕಸಿಯ ಒಗಟು. ಈಡಿಪಸ್ ಕಥೆಯ ಈ ಸ್ಫಿಂಕ್ಸ್ ಘಟನೆ ಮಾರ್ಷನ್ ಮತ್ತು ರಾಕ್ಷಸ ಸಂಬಂಧದ ಕಥನವರ್ಗಕ್ಕೆ ಸೇರುತ್ತದೆಂದು ವಿದ್ವಾಂಸರ ಅಭಿಪ್ರಾಯ. ಸ್ಫಿಂಕ್ಸ್ ರಾಕ್ಷಸಿಯ ಒಗಟು ಜನತ್ತಿನ ಪ್ರಾಚೀನ ರೂಪದ ಒಗಟುಗಳಲ್ಲಿ ಒಂದಾಗಿದೆ. ಇದು ಸ್ಪರ್ಧಾ ಒಗಟಿಗೂ ನಿದರ್ಶನವಾಗುತ್ತವೆ. ಸ್ಫಿಂಕ್ಸ್ ಕಥೆಗೆ ಸಮಾನವಾದ ಒಗಟು ಕಥೆಗಳು ಎಲ್ಲ ಕಡೆಯಲ್ಲೂ ದೊರೆಯುತ್ತವೆ. ಭಾರತದ ವರರುಚಿ ಮತ್ತು ರಾಕ್ಷಸ, ಯಕ್ಷಪ್ರಶ್ನೆ, ಬೇತಾಳಪಂಚವಿಂಶತಿ ಮೊದಲಾದುವನ್ನು ನಿದರ್ಶನಗಳಾಗಿ ಕೊಡಬಹುದು. ಹೀಗೆ ಒಂದಕ್ಕಿಂತ ಹೆಚ್ಚು ಆಶಯಗಳು ಇದರಲ್ಲಿರುವುರಿಂದ, ರಚನೆಯ ದೃಷ್ಟಿಯಿಂದ ಇದನ್ನು ಸಂಕೀರ್ಣ ಕಥಾವರ್ಗಕ್ಕೆ ಸೇರಿಸಬಹುದಾಗಿದೆ.

ಒಟ್ಟಿನಲ್ಲಿ ಈಡಿಪಸ್ ಕಥೆ ಜಗತ್ತಿನ ಹೆಚ್ಚು ಪ್ರಸಾರವುಳ್ಳ ಕಥೆಗಳಲ್ಲಿ ಒಂದಾಗಿದೆ. ಇದು ಜನಪದ ಕಥೆಯ ಆಶಯಗಳಿಂದ ರೂಪಗೊಂಡಿದ್ದು. ಥೀಬ್ಸಿನ ಪ್ರಧಾನರನ್ನು ಇದು ಆಕರ್ಷಿಸಿರಬಹುದು ಅಥವಾ ಜನಪದ ಕಥನ ಸಮುದಾಯವನ್ನು ಸ್ವೀಕರಿಸಿ ಗ್ರೀಕರು ಮಿಥ್ಯೇತಿಹಾಸವೊಂದನ್ನು ಸೃಷ್ಟಿಸಿಕೊಂಡಿರಬಹುದು. ಅಂತೂ ಇದರಲ್ಲಿ ಚರಿತ್ರೆಯ ಅಂಶಗಳು ಎಷ್ಟಿವೆಯೊ ಅಥವಾ ಏನೂ ಇಲ್ಲವೊ ಗೊತ್ತಿಲ್ಲ. ವಾಕ್ ಸಂಪ್ರದಾಯದಲ್ಲಿ ಹರಿದು ಪೂರ್ಣ ಜಾನಪದ ಎನ್ನಿಸುವಷ್ಟರಮಟ್ಟಿಗೆ ಇದು ರೂಪಾಂತರಗೊಂಡಿದೆ ಎಂಬುದಂತೂ ಸತ್ಯವಾದ ಮಾತು.

ಎಚ್ ನರಸಿಂಹಯ್ಯ

ಜನನಡಾ. ಹೆಚ್.ನರಸಿಂಹಯ್ಯ (ಜೂನ್ ೬, ೧೯೨೦ - ಜನವರಿ ೩೧, ೨೦೦೫) ಬೆಂಗಳೂರಿನ ಹೆಸರಾಂತ ಭೌತಶಾಸ್ತ್ರಜ್ಞರೂ, ಶಿಕ್ಷಣತಜ್ಞರೂ ಆಗಿದ್ದರು. ಇವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಮುಂದೆ ಅಮೇರಿಕ ದೇಶದಲ್ಲಿನ ಓಹಿಯೋ ವಿಶ್ವವಿದ್ಯಾಲಯದಲ್ಲಿ ಪರಮಾಣು ಭೌತಶಾಸ್ತ್ರದಲ್ಲಿ ಪದವಿಯನ್ನು ಪಡೆದರು. ನ್ಯಾಷನಲ್ ಕಾಲೇಜು, ಬೆಂಗಳೂರಿನಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿ ಸೇರಿಕೊಂಡ ಇವರು, ತದನಂತರ ಕಾಲೇಜಿನ ಪ್ರಾಂಶುಪಾಲರಾದರು.

ಕನ್ನಡ ಸಾಹಿತ್ಯ ಪ್ರಕಾರಗಳು

ಕನ್ನಡ ಸಾಹಿತ್ಯ ಅನೇಕ ಪ್ರಕಾರಗಳಿಂದ ಶ್ರೀಮಂತವಾಗಿದೆ. ಸಾಹಿತ್ಯ ಪ್ರಕಾರದ ಸ್ವರೂಪ, ರಚನೆ(structure) ಆಧಾರದ ಮೇಲೆ ಈ ಕೆಳಕಂಡಂತೆ ವಿಂಗಡಿಸಬಹುದು. ಕನ್ನಡ ಸಾಹಿತ್ಯವೇ ಬೇರೆ -ಕನ್ನಡ ಸಾಹಿತ್ಯ ಪ್ರಕಾರಗಳೇ ಬೇರೆ ಆದ್ದರಿಂದ ಕನ್ನಡ ಸಾಹಿತ್ಯಕ್ಕೆ ಬೇರೆ ಶೀರ್ಶಿಕೆ ಕೊಡುವುದೇ ಉಚಿತ. ಸಾಹಿತ್ಯದ ವಿಷಯ ದೊಡ್ಡದು. ಅದರಲ್ಲಿ ಪ್ರಾಚೀನ ಸಾಹಿತ್ಯದಿಂದ ಅರ್ವಾಚೀನ ಸಾಹಿತ್ಯ ಎಲ್ಲಾ ವಿಷಯಗಳನ್ನು ಹಾಕಬಹುದು. ತಕ್ಕ ಮಟ್ಟಿಗೆ ಸಾಹಿತ್ಯದ -ಅದರ ಪ್ರಕಾರಗಳ ವಿವರಣೆ ಪೂರ್ವಾಗ್ರವಿಲ್ಲದ ವಿಮರ್ಶೆಯೂ ಇದರಲ್ಲಿ ಸೇರಬಹುದು /ಸೇರಬೇಕು.

ಕಲಿಕೆ

ಕಲಿಕೆ : ಒಂದು ಜೀವಿ ಪಡೆದುಕೊಳ್ಳುವ ಎಲ್ಲ ಬಗೆಯ ತಿಳಿವು, ನೈಪುಣ್ಯ ಅಥವಾ ವರ್ತನೆಯ ರೀತಿಯ ಸಂಪಾದನೆ (ಲರ್ನಿಂಗ್). ಜೀವಿ ಹುಟ್ಟಿದಾಗಲೇ ಜೀವ ಕಣಕ್ಕೆ ಅವಶ್ಯವಾದ ಎಲ್ಲ ಸಾಮರ್ಥ್ಯಗಳೂ ಸಾಮಾನ್ಯವಾಗಿ ಬೆಳೆದಿರುವುದಿಲ್ಲ. ಕಾಲಕ್ರಮೇಣ ಕೆಲವು ತಾವಾಗಿ ಪ್ರಕಾಶಕ್ಕೆ ಬರುತ್ತವೆ. ಮತ್ತೆ ಕೆಲವನ್ನು ಜೀವಿ ಸ್ವಪ್ರಯತ್ನದಿಂದಲೊ ಇತರರನ್ನು ಅನುಕರಿಸುವುದರಿಂದಲೊ ಇತರರಿಂದ ಹೇಳಿಸಿಕೊಂಡೊ ತನ್ನ ಸ್ವಂತ ಅನುಭವಗಳ ಮೂಲಕವೊ ಕಲಿತುಕೊಳ್ಳುತ್ತದೆ. ಸ್ವಪರಿವರ್ತನೆಯ ಸಾಮರ್ಥ್ಯಇತರ ಜೀವಿಗಳಿಗಿಂತ ಮಾನವನಿಗೆ ಹೆಚ್ಚು. ಇದಕ್ಕೆ ಅವನ ಮಿದುಳಿನ ವಿಶೇಷ ಬೆಳೆವಣಿಗೆಯೇ ಕಾರಣವೆಂಬುದು ಜೀವಶಾಸ್ತ್ರಜ್ಞರ ಅಭಿಪ್ರಾಯ.

ಮಾನವೇತರ ಜೀವಿಗಳಿಗೆ ಕಲಿಕೆಯ ಆವಶ್ಯಕತೆ ಮಾನವನಿಗಿಂತ ಕಡಿಮೆ. ಅವು ಹುಟ್ಟುವಾಗಲೇ ತಮ್ಮ ಜೀವನಕ್ಕೆ ಆವಶ್ಯಕವಾದ ವರ್ತನವಿಧಾನಗಳನ್ನು ಪಡೆದುಕೊಂಡು ಬಂದಿರುತ್ತವೆ. ಕಲಿಯುವ ಆವಶ್ಯಕತೆ ಇಲ್ಲದೆಯೇ ಅನೇಕ ಜೀವಿಗಳಿಗೆ ಅವುಗಳ ಆಹಾರ, ಅದನ್ನು ತಿನ್ನುವ ವಿಧಾನ, ಅದು ಸಿಗುವ ಜಾಗ ಎಲ್ಲವೂ ತಿಳಿದಿರುತ್ತದೆ. ನೀರಿನಲ್ಲಿ ವಾಸಿಸುವ ಮೀನು, ಆಮೆ ಮೊದಲಾದ ಜೀವಿಗಳಿಗೆ ಈಜನ್ನು ಯರೂ ಕಲಿಸಬೇಕಾಗಿಲ್ಲ. ಕೆಲವು ಕೀಟಗಳು ಮತ್ತು ಪಕ್ಷಿಗಳು ತಮ್ಮ ಜಾತಿಗನು ಗುಣವಾದ ಗೂಡುಗಳನ್ನು ಇತರರ ಸಹಾಯವಿಲ್ಲದೆಯೇ, ಇತರರು ಕಟ್ಟುವುದನ್ನು ನೋಡದೆಯೇ, ಕಟ್ಟಬಲ್ಲವು. ಇಂಥ ಪ್ರಕೃತಿಸಿದ್ಧವಾದ ಪ್ರವರ್ತನ ವಿಶೇಷಗಳು, ಸಿದ್ಧವರ್ತನೆಗಳು, ಸ್ವಾಭಾವಿಕ ವೃತ್ತಿಗಳು ಅಥವಾ ಮೂಲಪ್ರವೃತ್ತಿಗಳು (ಇನ್ಸ್ಟಿಂಕ್ಟ್ಸ್ ) ಎನಿಸಿಕೊಳ್ಳುತ್ತವೆ. ಇವು ಮನುಷ್ಯರಲ್ಲೂ ಕಂಡುಬಂದರೂ ಅವರ ವರ್ತನೆಯಲ್ಲಿ ಕಲಿಕೆಯ ಅಂಶವೇ ಬಹಳ ಹೆಚ್ಚು. ಜೀವವಿಕಾಸ ವೃಕ್ಷದಲ್ಲಿ ಉನ್ನತ ಮಟ್ಟವನ್ನು ಏರಿದಂತೆಲ್ಲಾ ಜೀವಿಗಳು ಕಲಿಯಬೇಕಾದ ಅಂಶ ಹೆಚ್ಚಾಗುತ್ತ ಹೋಗುತ್ತದೆ; ನೈಜವಾದ ಅಂಶಗಳು ಕಡಿಮೆಯಾಗುತ್ತವೆ.

ಹುಟ್ಟಿದ ಒಡನೆಯೇ ಮಗುವಿನಲ್ಲಿ ಕಂಡುಬರುವ ಗುಣಗಳು ಮಾತ್ರವೇ ನೈಜವಾದವೆಂದೂ ಮಿಕ್ಕವೆಲ್ಲಾ ಕಲಿತುಕೊಂಡವೆಂದೂ ತಿಳಿಯಬಾರದು. ಅನೇಕ ಗುಣಗಳು ಕಲಿಯುವ ಆವಶ್ಯಕತೆ ಇಲ್ಲದೆಯೇ ತಾವಾಗಿಯೇ ಸಕಾಲದಲ್ಲಿ ಕಾಣಿಸಿಕೊಳ್ಳುತ್ತವೆ. ಹುಟ್ಟಿದಾಗ ನಿಲ್ಲುವುದಕ್ಕಾಗಲಿ, ನಡೆಯುವುದಕ್ಕಾಗಲಿ ಆಗದ ಮಗು, ದೇಹದ ಮಾಂಸಖಂಡಗಳೂ ನರಗಳೂ ಮೂಳೆಗಳೂ ಬಲಿತು ಹತ್ತು ಹನ್ನೆರಡು ತಿಂಗಳಾದ ಕೂಡಲೆ ನಿಂತು ನಡೆಯಲು ಪ್ರಾರಂಭಿಸುತ್ತದೆ. ಹೀಗೆ ಬೆಳೆವಣಿಗೆಯಿಂದ ದೈಹಿಕ ಶಕ್ತಿಗಳಂತೆ ಮಾನಸಿಕ ಶಕ್ತಿಗಳೂ ಪಕ್ವತೆ ಪಡೆಯುತ್ತವೆ. ಕೆಲವು ಶಕ್ತಿಗಳು ಪಕ್ವವಾಗಲು ಬೆಳೆವಣಿಗೆ ಮಾತ್ರವೇ ಸಾಕು. ಇನ್ನು ಕೆಲವಕ್ಕೆ ಕಲಿಕೆ ಸಹಾಯ ಮಾಡುತ್ತದೆ.

ಎಲ್ಲ ಜೀವಿಗಳೂ ಕಲಿಯಬಲ್ಲುವು. ಒಂದು ಪ್ರಾಣಿ ಏನನ್ನು, ಎಷ್ಟು ವೇಗವಾಗಿ ಕಲಿಯಬಲ್ಲುದು ಎಂಬುದು ಆ ಪ್ರಾಣಿಯ ಸಾಮಥರ್ಯ್‌ವನ್ನಲ್ಲದೆ ಅದು ಜೀವನದಲ್ಲಿ ಎದುರಿಸಬೇಕಾದ ಸಮಸ್ಯೆಗಳನ್ನೂ ಅವಲಂಬಿಸಿರುತ್ತದೆ. ಅಮೀಬದಂಥ ಸೂಕ್ಷ್ಮ ಜೀವಿಗಳು, ತಮ್ಮ ದೇಹಕ್ಕೆ ಹೊಂದಿಕೊಳ್ಳದ ಪರಿಸ್ಥಿತಿಗಳಿಂದ ಅಥವಾ ಅಪಾಯಕಾರಿ ಪದಾರ್ಥಗಳಿಂದ ತಪ್ಪಿಸಿಕೊಳ್ಳುವುದನ್ನು ಕಲಿಯುತ್ತವೆ. ಸಂಕೀರ್ಣ ಸಮಾಜದಲ್ಲಿ ಬಾಳಬೇಕಾದ ಮನುಷ್ಯ ಭಾಷೆ, ಗಣಿತ, ಒಳ್ಳಯ ನಡತೆ ಮೊದಲಾದವನ್ನು ಕಲಿಯುತ್ತಾನೆ.

ಕಲಿಕೆ ನಮ್ಮ ದೈಹಿಕ ಮತ್ತು ಮಾನಸಿಕ ಶಕ್ತಿಗಳನ್ನು ಅಭಿವೃದ್ಧಿಪಡಿಸುತ್ತದೆ. ಆದರೆ ಸರ್ವದಾ ಈ ಮಾತು ಸಮ್ಮತರ್ಹವಾಗಿಲ್ಲದಿರಬಹುದು. ಅರ್ಥವಿಲ್ಲದ ಹೆದರಿಕೆಗಳನ್ನು ಕುರುಡು ನಂಬಿಕೆಗಳನ್ನೂ ಅನೇಕ ದುವರ್ಯ್‌ಸನಗಳನ್ನೂ ಮಾನವರು ಕಲಿಯುತ್ತಾರೆ. ಇವುಗಳಿಂದ ಮಾನವನ ಜ್ಞಾನಪ್ರಜ್ಞೆಗಳ ಅಭಿವೃದ್ಧಿಗೆ ಬದಲು, ವ್ಯಕ್ತಿಗಳಿಗೂ ಸಮಾಜಕ್ಕೂ ಹಾನಿಯುಂಟಾಗಬಹುದು.

ಕುಮಾರವ್ಯಾಸ

ಕುಮಾರವ್ಯಾಸ (ಕ್ರಿ.ಶ. ೧೩೫೦-೧೪೦೦) ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು. ಕುಮಾರವ್ಯಾಸನ ಮೂಲ ಹೆಸರು ನಾರಾಯಣಪ್ಪ. "ಗದುಗಿನ ನಾರಾಯಣಪ್ಪ" ಎಂದು ಸಾಮಾನ್ಯವಾಗಿ ಕುಮಾರವ್ಯಾಸನನ್ನು ಗುರುತಿಸಲಾಗುತ್ತದೆ. ಈತನ ಕಾವ್ಯ ನಾಮ ಕುಮಾರವ್ಯಾಸ. ವ್ಯಾಸ ಮಹಾಕವಿಯ ಸಂಸ್ಕೃತ ಮಹಾಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ್ದರಿಂದ, ವ್ಯಾಸ ಮಹಾಕವಿಯ ಮಾನಸಪುತ್ರ ತಾನೆನ್ನುವ ವಿನೀತ ಭಾವದಿಂದ ನಾರಣಪ್ಪ ಕುಮಾರ ವ್ಯಾಸನಾಗಿದ್ದಾನೆ. ಈ ಹೆಸರು ಕುಮಾರವ್ಯಾಸನಿಗೆ ಅನ್ವರ್ಥವಾಗಿದೆ. ಕುಮಾರವ್ಯಾಸ ಗದುಗಿನ ವೀರನಾರಾಯಣ ದೇಗುಲದಲ್ಲಿನ ಕಂಬದ ಅಡಿಯಲ್ಲೇ ಗದುಗಿನ ಭಾರತವನ್ನು ರಚಿಸಿ ಓದುತ್ತಿದ್ದ ಎಂಬ ಪ್ರತೀತಿ ಸಹ ಇದೆ.

ಗಮಕ

ಗಮಕ ಕಲೆ

ಗೌರೀಶ ಕಾಯ್ಕಿಣಿ

ಗೌರೀಶ ಕಾಯ್ಕಿಣಿಯವರು ೧೯೧೨ ಸಪ್ಟಂಬರ ೧೨ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದರು.

ಜನಪದ ಗಣಿತ

ಬೆಳೆದು ಬಂದಿರುವ ಇಂದಿನ ಗಣಿತಶಾಸ್ತ್ರಕ್ಕೆ ಜನಪದ ಗಣಿತವನ್ನು ಹೋಲಿಸಿದಾಗ ಜನಪದ ಗಣಿತಕ್ಕೆ ತನ್ನದೇ ಆದ ಪರಿಮಿತಗಳಿದ್ದರೂ ವಿಜ್ಞಾನ ಪೂರ್ವಯುಗದಲ್ಲಿನ ಜನತೆಯ ಸಮಸ್ಯೆಗಳಿಗೆ ಅದು ತಕ್ಕ ಉತ್ತರವನ್ನು ಒದಗಿಸಿ ಕೊಟ್ಟಿದ್ದಿತೆಂದೇ ಹೇಳಬಹುದು. ಅಲ್ಲದೆ ಇಂದಿನ ಗಣಿತಶಾಸ್ತ್ರ ಜನಪದ ಗಣಿತದ ಪರಿಷ್ಕøತ ರೂಪವೇ ಆಗಿದೆ. ಆದ್ದರಿಂದ ಅಂದಿನ ಅಂದಾಜಿನ ಲೆಕ್ಕಾಚಾರ ಇಂದು ಕರಾರುವಾಕ್ಕೆನಿಸದಿರಬಹುದು. ಈ ಮಾತು ಜನಪದ ಗಣಿತಕ್ಕೆ ಎಲ್ಲ ಸಂದರ್ಭಗಳಲ್ಲೂ ಅನ್ವಯವಾಗುವಂಥದಲ್ಲ ಎಂಬುದನ್ನೂ ಮರೆಯಕೂಡದು.

ಜಿಗ್ಸಾ ಕಲಿಕೆ

ಗರಗಸ ತಂತ್ರ ಪರಸ್ಪರ ಅವಲಂಬಿಸಿದೆ ವಿದ್ಯಾರ್ಥಿಗಳು ಯಶಸ್ವಿಯಾಗಲು ಮಾಡುತ್ತದೆ ತರಗತಿಯ ಚಟುವಟಿಕೆ ಸಂಘಟಿಸುವ ಒಂದು ವಿಧಾನವಾಗಿದೆ. ಇದು ಗುಂಪುಗಳಾಗಿ ತರಗತಿಗಳು ಒಡೆಯುತ್ತದೆ ಮತ್ತು ಗುಂಪು (ಜಿಗ್ಸಾ) ಒಗಟು ಪೂರ್ಣಗೊಳಿಸಲು ಒಟ್ಟುಗೂಡಿಸುತ್ತದೆ ಎಂದು ತುಂಡುಗಳಾಗಿ ಕಾರ್ಯಯೋಜನೆಯು ಒಡೆಯುತ್ತದೆ. ಬಲವಂತವಾಗಿ ಸಮಗ್ರ ಶಾಲೆಗಳ ಜನಾಂಗೀಯ ಸಿಬ್ಬಂದಿ ದುರ್ಬಲಗೊಳಿಸಲು ಸಹಾಯ ಸಾಮಾಜಿಕ ಮನಶ್ಶಾಸ್ತ್ರಜ್ಞ ಎಲಿಯಟ್ ಆರನ್ಸನ್ ವಿನ್ಯಾಸಗೊಳಿಸಿದರು

ತಂತ್ರ ಮಿಶ್ರ ಗುಂಪುಗಳಾಗಿ ತರಗತಿಗಳು ಗುಂಪು ಅಂತಿಮ ಫಲಿತಾಂಶದ ಒಳಗೆ ಸಂಕಲಿಸುತ್ತದೆ ಸಣ್ಣ ಸಮಸ್ಯೆಗಳ ಮೇಲೆ ಕೆಲಸ ಮಾಡಲು ಅವಕಾಶವಾಯಿತು. ಉದಾಹರಣೆಗೆ, ತರಗತಿಯೊಳಗಿನ ಹುದ್ದೆ ವಿಷಯಗಳ ವಿಂಗಡಿಸಲಾಗಿದೆ. ನಂತರ ವಿದ್ಯಾರ್ಥಿಗಳು ಪ್ರತಿ ವಿಷಯವನ್ನು ನಿಗದಿಪಡಿಸಲಾಗಿದೆ ಒಂದು ಸದಸ್ಯ ಗುಂಪುಗಳಾಗಿ ವಿಭಜನೆಯಾಯಿತು. ಪ್ರತ್ಯೇಕವಾಗಿ ಕೆಲಸ, ಪ್ರತಿ ವಿದ್ಯಾರ್ಥಿ ತನ್ನ ವಿಷಯದ ಬಗ್ಗೆ ಕಲಿಯುತ್ತಾನೆ ಮತ್ತು ಅವರ ಗುಂಪು ಒದಗಿಸಿಕೊಡುತ್ತವೆ. ಮುಂದೆ, ವಿದ್ಯಾರ್ಥಿಗಳು ವಿಷಯ ಗುರುಗಳು ಗುಂಪುಗಳಾಗಿ ಸಂಗ್ರಹಿಸಲು. ಪ್ರತಿ ಸದಸ್ಯ ವಿಷಯ ಗುಂಪಿಗೆ ಮತ್ತೆ ಒದಗಿಸುತ್ತದೆ. ಅದೇ ವಿಷಯ ಗುಂಪುಗಳಲ್ಲಿ, ವಿದ್ಯಾರ್ಥಿಗಳು ವೀಕ್ಷಿಸಿ ಅಂಕಗಳನ್ನು ಸಮನ್ವಯಗೊಳಿಸಲು ಮತ್ತು ಮಾಹಿತಿ ಸಂಶ್ಲೇಷಿಸಲು. ಅವರು ಅಂತಿಮ ವರದಿಯನ್ನು ರಚಿಸಲು. ಅಂತಿಮವಾಗಿ, ಮೂಲ ಗುಂಪುಗಳು ಆಹ್ವಾನಿಸು ಮತ್ತು ಪ್ರತಿ ಸದಸ್ಯರಿಂದ ಪ್ರಸ್ತುತಿಗಳನ್ನು ಕೇಳಲು. ಅಂತಿಮ ಪ್ರಸ್ತುತಿಗಳನ್ನು ತಮ್ಮ ವಸ್ತುಗಳ ಒಂದು ಗ್ರಹಿಕೆಯೊಂದಿಗೆ ಎಲ್ಲಾ ಗುಂಪಿನ ಸದಸ್ಯರು, ಹಾಗೂ ವಿಷಯವನ್ನು ನಿರ್ದಿಷ್ಟ ಗುಂಪು ಚರ್ಚೆ ಹೊರಹೊಮ್ಮಿತು ಎಂದು ಸಂಶೋಧನೆಗಳು ಒದಗಿಸಲು.

ನಿರಂಜನ ವಾನಳ್ಳಿ

ನಿರಂಜನ ವಾನಳ್ಳಿ ಕವಿ, ವಿಮರ್ಶಕ, ಸಂಶೋಧಕ, ಅಧ್ಯಾಪಕ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ, ಕನ್ನಡದ ಹೆಸರಾಂತ ನುಡಿಚಿತ್ರಕಾರ, ಅಂಕಣಕಾರ, ಫ್ರೀಲಾನ್ಸ್ ಪತ್ರಕರ್ತ. ವೃತ್ತಿಯಲ್ಲಿ ಪತ್ರಕರ್ತ, ಹವ್ಯಾಸದಲ್ಲಿ ಕಾಲೇಜು ಅಧ್ಯಾಪಕ. ಮೈಸೂರು ವಿಶ್ವವಿದ್ಯಾನಿಲಯದ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ. ಸದಾ ಒಂದಲ್ಲೊಂದು ಪತ್ರಿಕೆ, ನಿಯತಕಾಲಿಕಗಳಲ್ಲಿ ವೈವಿಧ್ಯಮಯ ಬರಹಗಳನ್ನು ಪ್ರಕಟಿಸುತ್ತಿದ್ದರು. ನಾಡಿನ ಬಹುತೇಕ ಎಲ್ಲಾ ಪತ್ರಿಕೆಗಳಲ್ಲಿ ವಾನಳ್ಳಿಯವರ ಲೇಖನಗಳನ್ನು ನಿರಂಜನ ವಾನಳ್ಳಿ ರಚಿಸಿದ್ದಾರೆ. ಪ್ರಸ್ತುತ ಸಂಗೀತ ವಿಶ್ವವಿದ್ಯಾನಿಲಯದ ಕುಲಸಚಿವರು. ಐದು ಅಂತಾರಾಷ್ಟ್ರೀಯ, ೨೫ ರಾಷ್ಟ್ರೀಯ ವಿಚಾರಸಂಕಿರಣಗಳಲ್ಲಿ ಭಾಗವಹಿಸಿದ್ದಾರೆ.

ಬಿ.ಎ.ವಿವೇಕ್ ರೈ

ಡಾ. ಬಿ. ಎ. ವಿವೇಕ್ ರೈ ಇವರು ತುಳು ವಿದ್ವಾಂಸರು, ಕನ್ನಡ ಪ್ರಾಧ್ಯಾಪಕರು, ವಿಮರ್ಶಕರು. ಕಳೆದ ೫೦ ವರ್ಷದಿಂದ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನ ತನ್ನನ್ನು ಅರ್ಪಿಸಿಕೊಂಡಿದ್ದಾರೆ ಕರ್ನಾಟಕದ ಕನ್ನಡಕ್ಕು, ಕರಾವಳಿಯ ತುಳುವಿನ ಬೆಳವಣಿಗೆಗೆ ದುಡಿಯುತ್ತಿದ್ದಾರೆ.ಇವರ ಮನೆ ಭಾಷೆ ತುಳು. ಇವರಿಗೆ ಚಿಕ್ಕ ವಯಸ್ಸಿಗೆ ಕಾರಂತರ ಪರಿಚಯ ಇತ್ತು. ಆ ಕಾರಣದಿಂದ ಭಾಷೆ, ಸಂಸ್ಕೃತಿಯ ಕ್ಷೇತ್ರದಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.

ರೂಬಿಕ್ ನ ಕ್ಯೂಬ್

ರೂಬಿಕ್ ಕ್ಯೂಬ್- ಮೂರು ಆಯಾಮದ , ಆರು ಬಣ್ಣದ, ಸಮಸ್ಯೆಯನ್ನೊಡ್ಡುವ ಆಟದ ಘನ, ಯಾಂತ್ರಿಕ ಒಗಟು. ಇದನ್ನು ಹಂಗೇರಿಯನ್ ಶಿಲ್ಪಿ ಮತ್ತು ವಾಸ್ತುಶಿಲ್ಪ ಪ್ರಾಧ್ಯಾಪಕ ಎರ್ನೊ ರೂಬಿಕ್ ೧೯೭೪ರಲ್ಲಿ ಶೋಧಿಸಿದ

ಶಿವಮೊಗ್ಗ ಜಿಲ್ಲೆಯ ಜಾನಪದ ಕಲೆ

ಒಂದು ಪ್ರದೇಶದ ಜಾನಪದ ಆ ಪ್ರದೇಶದ ಜನಜೀವನದ ಸಾರ. ಆಚರಣೆಯ ಮೂಲ ಬೇರು ಆಯಾ ಪ್ರದೇಶದ ಜಾನಪದದಲ್ಲಿ ಅಡಗಿರುತ್ತದೆ. ಶಿವಮೊಗ್ಗ ಜಿಲ್ಲೆಯ ಆಚರಣೆಗಳನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಆ ಜಿಲ್ಲೆಯ ಜಾನಪದ ಅರಿವು ಅತ್ಯಂತ ಮಹತ್ವದಾಗುತ್ತದೆ. ಯಾವುದೇ ಜನಪದ ಸಮುದಾಯದ ಆಯ ಕಾಲದ ನೋವು, ನಲಿವು ,ಏಳು ,ಬೀಳುಗಳನ್ನು ಕಥೆ ,ಗೀತೆ ,ಗಾದೆ ,ಐತಿಹ್ಯ ,ಒಗಟು ,ನುಡಿಗಟ್ಟು ,ನಂಬಿಕೆ ,ಸಂಪ್ರದಾಯ ,ಕಲೆಗಳ ಮೂಲಕ ಒಂದು ತಲೆಮಾರಿನಿಂದ ಮುಂದಿನ ತಲೆಮಾರಿಗೆ ವರ್ಗಾಯಿಸಿರುತ್ತದೆ. ಆದ್ದರಿಂದ ಜಾನಪದವು ಜಾನಪದ ಅಧ್ಯ ಯನವಾಗಿ ಮಹತ್ವ ಭೂಮಿಕೆಯನ್ನು ನಿಭಾಯಿಸುತ್ತದೆ.

ಜನಪದ ಸಾಹಿತ್ಯ ಜನಪದರ ಅಭಿವ್ಯಕ್ತಿಯ ಸಾಧನ ,ಜನಪದರ ಅನುಭವದ ಸಂಪತ್ತಿನಿಂದ ರೂಪು ಪಡೆದ ಜನಪದ ಸಾಹಿತ್ಯದಲ್ಲಿ ಆ ಸಮುದಾಯದ ,ಮೌಲ್ಯ ,ನೀತಿ, ವಿವೀಕ , ಆದರ್ಶಗಳು ಅಡಗಿರುತ್ತದೆ. ಜನಪದರ ಮಾತುಗಳು ಕಾವ್ಯವಲ್ಲದ ಕಾವ್ಯ ,ಮೌನವೇ ಧ್ವನಿ , ಧ್ವನಿಯೇ ಅರ್ಥ ,ಪಿಸುಗುಡುವಿಕೆಯೇ ಮಾತು ,ಅವರ ಬದುಕೇ ಮೌಲ್ಯದ ಗಣಿ , ಹೀಗಾಗಿ ಜನಪದ ಸಾಹಿತ್ಯವೆಂದರೇ ಪರಂಪರೆಯ ಬೇರುಗಳ ಅರಿವಿನ ಆಗರವೇ ಆಗಿರುತ್ತದೆ. ಕರ್ನಾಟಕದಲ್ಲಿ ಶಿವಮೊಗ್ಗ ಜಿಲ್ಲೆ ಪ್ರಾಕೃತಿಕವಾಗಿ ,ಸಾಂಸ್ಕ್ರುತಿಕವಾಗಿ ಅತ್ಯಂತ ವೈವಿಧ್ಯಮಯ ಜಿಲ್ಲೆಯಾಗಿದೆ.ಸಾಂಸ್ಕ್ರುತಿಕ ವೈವಿಧ್ಯದಂತೆ ಜನಪದ ಸಾಹಿತ್ಯ ಸಮೃದ್ದವಾಗಿದೆ. ತೀರ್ಥಹಳ್ಳಿಯ ಅಂಟಿಕೆ ಪಂಟಕೆ ಪದಗಳು ,ಶಿಕಾರಿಪುರದ ತ್ಯಾಗ ಬಲಿದಾನದ ಕಥನಗೀತೆಗಳು ,ಸೊರಬದ ಜೋಗಿಯ ಹಾಡುಗಳು ,ಸಾಗರದ ಚೌಡಿಕೆ ಪದಗಳು ಶಿವಮೊಗ್ಗ ಜಿಲ್ಲೆಯ ವಿಶೇಷತೆಯಾಗಿವೆ. ಇದರೊಂದಿಗೆ ಒಸಗೆಯ ಹಾಡುಗಳು, ಕಥೆಗಳು, ಪುರಾಣಗಳು, ಐತಿಹ್ಯಗಳು, ನುಡಿಗಟ್ಟು ,ಗಾದೆ ಒಗಟುಗಳು, ಶಿವಮೊಗ್ಗ ಜಿಲ್ಲೆಯಲ್ಲಿ ಹೇರಳವಾಗಿದೆ.

ಅದು ಎಂದು ಬತ್ತದಿರುವ, ಮೊಗೆದಂತೆ ತುಂಬಿಕೊಳ್ಳುವ ಚಿರಂತನ ಚಿಲುಮೆ.

ಶಿವಮೊಗ್ಗ ಜಿಲ್ಲೆಯಲ್ಲಿ ಲಂಬಾಣಿ ಬುಡಕಟ್ಟು ಜನರು ಸಾಕಷ್ಟು ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ತಂಡಗಳನ್ನು ಕಟ್ಟಿ ಕೊಂಡು ವಾಸಿಸುವ ಈ ಜನರಲ್ಲಿ ಜಾನಪದ ಸಮೃದ್ದವಾಗಿದೆ. ಇವರ ಮಧುವೆಯ ಸಮಾರಂಭಗಳು ಜನಪದ ಗೀತೆಗಳ ವರ್ಷಧಾರೆ. ಅಪಾರ ಶಾಸ್ತ್ರಗಳ ಆಚರಣೆ ,ಶಾಸ್ತ್ರಗಳಿಗನುಸಾರವಾಗಿ ಗೀತೆಗಳನ್ನು ಹಾಡುವ ಪದ್ದತಿ ಇವರಲ್ಲಿದೆ. ಹಾಸ್ಯ ,ವಿಡಂಬನೆ ,ಹಾರೈಕೆ ,ಪ್ರಾರ್ಥನೆ ಹೀಗೆ ಅನೇಕ ಬಗೆಯ ಗೀತೆಗಳನ್ನು ಮದುವೆಯ ಸಮಾರಂಭದಲ್ಲಿ ಹಾಡುತ್ತಾರೆ. ಮದುಮಗಳನ್ನು ಬೀಳ್ಕೊಡುವ ಸಂದರ್ಭದಲ್ಲಿ ಮದುಮಗಳು ಹವೇಲಿ ಗೀತೆಯನ್ನು ಹಾಡುತ್ತಾಳೆ. ಹವೇಲಿ ಎಂದರೆ ಮನೆ. ಸೂರ್ಯೋದಯಕ್ಕೆ ಅಭಿಮುಖವಾಗಿ ನಿಂತು ಸಾಕಿ ಸಲುಹಿದ ತಾಯಿ ತಂದೆಯವರನ್ನು ಮತ್ತು ತಂದೆಯ ವಂಶವನ್ನು ಕಾಪಾಡುವಂತೆ ದೈವವನ್ನು ಕುರಿತು ಪ್ರಾರ್ಥಿಸುವ ಗೀತೆ

ಮದುವೆಯಾಗಿ ಗಂಡನ ಮನೆಗೆ ಹೊರಟು ನಿಂತ ಮದುಮಗಳು, ತಾನು ಹುಟ್ಟಿ ಬೆಳೆದ ಮನೆಯನ್ನು ಬಿಡುವ ಸಂದರ್ಭದಲ್ಲಿ ಹಾಡುವ ಈ ಗೀತೆ ಕರುಣರಸಾರ್ದ್ರವಾಗಿದೆ. ತಂದೆಯ ಮನೆಯನ್ನು ಅಂದರೆ ವಂಶವನ್ನು ಕುರಿತು ಆಲದ ಹಾಗೆ ಹಬ್ಬಲಿ, ಹೂವಿನಂತೆ ಫಲಿಸಲಿ ಎಂದು ಹಾರೈಸುವುದು. ಬಳ್ಳಿ ಬಿಟ್ಟ ಹೂವುಗಳು ಫಲಿಸುವಂತೆ ತಂದೆಯ ಹವೇಲಿ(ಮನೆ) ಬಿಟ್ಟ ಹೂವುಗಳು ಫಲ ತುಂಬಲಿ ಎಂಬ ಹಾರೈಕೆ ಅದ್ಭುತ ಭಾವನಾ ಶಕ್ತಿಯಿಂದ ಕೂಡಿದೆ.

ದೀಪಾವಳಿ ಹಬ್ಬದಲ್ಲಿ ಮಲೆನಾಡಿನ ತೀರ್ಥಹಳ್ಳಿಯ ತಾಲ್ಲೂಕಿನ ಸುತ್ತಮುತ್ತ ಮನೆಮನೆಗಳಿಗೆ ಜ್ಯೋತಿ ಮುಟ್ಟಿಸುವ ಸಂಪ್ರದಾಯವಿದೆ. ಆ ಸಂದರ್ಭದಲ್ಲಿ ಹಾಡುವ ಹಾಡುಗಳು 'ಅಂಟಿಗೆ ಪಂಟಿಗೆ ' ಎಂದೇ ಪ್ರಸಿದ್ಧವಾಗಿದೆ. ದೀಪಾವಳಿಯಲ್ಲಿ ಗಂಡಸರು ಯಾವುದೇ ವಾದ್ಯ ವಿಶೇಷಗಳಿಲ್ಲದೆ ಅಂಟಿಗೆ ಪಂಟಿಗೆ ಪದಗಳನ್ನು ಹಾಡುವುದು ಒಂದು ವಿಶೇಷ. ಈ ಹಾಡುಗಳಲ್ಲಿ ಬರುವ ಸಾಹಿತ್ಯಕ ಅಂಶಗಳ ಸೊಗಸು ಅಪಾರ. ಬಲಿಪಾಡ್ಯಮಿಯ ಸಂಜೆ ಅಂಟಿಗೆ ಪಂಟಿಗೆ ತಂಡ ಊರ ಹೊರಗಿನ ಆಲದ ಮರದ ಕೆಳಗೆ ಜ್ಯೋತಿಯನ್ನು ಬೆಳಗಿಕೊಳ್ಳುತ್ತಾರೆ. ಆಗ ಹಾಡುವ ಹಾಡು.

ಹೀಗೆ ಅಂಟಿಗೆ ಪಂಟಿಗೆ ತಂಡದವರು ಜೋತಿಯ ಉಗಮ ಮತ್ತು ಅದರ ಅಗತ್ಯ ಮತ್ತು ಮಹತ್ವ ವನ್ನು ಗುಣಗಾನ ಮಡುತ್ತಾ ದೀಪವನ್ನು ಹೊತ್ತಿಸಿಕೊಳುತ್ತಾರೆ. ಮೆರವಣಿಗೆಯಲ್ಲಿ ಹೊರಡುತ್ತಾರೆ. ಗ್ರಾಮದ ಮನೆಮನೆಗೂ ಭೇಟಿ ಕೊಡುತ್ತಾ ಬೆಳಗಿನ ಜಾವದ ವೇಳೆಗೆ ಮತ್ತೆ ಜ್ಯೋತಿ ಬೆಳಗಿಸಿಕೊಂಡು ಮರದ ಬಳಿಗೆ ಬಂದು ಜ್ಯೋತಿಯನ್ನು ಕಳಿಸುತ್ತಾರೆ.ಜನಪದ ಗೀತೆಗಳು ಜನಪದ ಸಮುದಾಯಗಳಲ್ಲಿ ಸಮೃದ್ದ ವಾಗಿವೆ. ಕೃಷಿಯನ್ನು ಕುರಿತು ಗೀತೆಗಳು, ಒಸಗೆಯ ಹಾಡುಗಳು, ಬೀಸುವ ಕಲ್ಲಿನ ಪದ, ಮಳೆರಾಯನ ಹಾಡು,ಲಾವಣಿ ಗೀಗೀ ಪದ, ಹೀಗೆ ನಾನಾ ಬಗೆಯ ಹಾಡುಗಳು ಜನಪದರಲ್ಲಿ ಇಂದಿಗೂ ಪ್ರಚಲಿತದಲ್ಲಿವೆ.ಅವುಗಳನ್ನು ಪ್ರತ್ಯೇಕವಾಗಿಯೇ ದಾಖಲಿಸಬೇಕಗುತ್ತದೆ. ಕನ್ನಡ ಜನಪದ ಸಾಹಿತ್ಯದಲ್ಲಿ ಲಾವಣಿ ಪ್ರಕಾರ ವಿಶಿಷ್ಟವಾದುದಾಗಿದೆ. ಲಾವಣಿ ಸಾಹಿತ್ಯಕ ,,ಪೌರಾಣಿಕ ಮೌಲ್ಯಗಳನ್ನು ಒಳಗೊಂಡಿರುವಂತೆ ಸಂಗೀತವನ್ನು ಒಳಗೊಂಡಿರುತ್ತದೆ. ಲಾವಣಿಗಳನ್ನು ಹೆಣ್ಣು ಮಕ್ಕಳು ಕಳೆ ಕೀಳುವಾಗ, ನಾಟಿ ಮಾಡುವಾಗ,ಅಡಿಕೆ ಸುಲಿಯುವಾಗ ಹಾಡುತ್ತರೆ. ವೃತ್ತಿಗಾಯಕರು ದಮ್ಮಡಿಯನ್ನು ಬಾರಿಸುತ್ತ, ಕಿನ್ನರಿ ಜೋಗಿಗಳು ಕಿನ್ನರಿಯನ್ನು ನುಡಿಸುತ್ತಾ ಲಾವಣಿಯನ್ನು ಹಾಡುವುದೂ ಉಂಟು. ಲಾವಣಿಗಳಲ್ಲಿ ಬರುವ ವರ್ಣನಾ ವೈಖರಿ ಅಪ್ರತಿಮವಾದುದು. ಕೇಳುಹರು ಬೆರಗಾಗುವಂತೆ ಊಹಾತೀತ ಮತ್ತು ವಿಸ್ಮ್ಯಯಕರವಾದ ಸಂಗತಿಗಳನ್ನು ಲಾವಣಿಯಲ್ಲಿ ತಂದಿರುತ್ತಾನೆ.

ಶಿವಮೊಗ್ಗ ಜಿಲ್ಲೆಯ ಭೌಗೋಳಿಕ ಪರಿಸರ ವೈವಿಧ್ಯಮಯವಾಗಿದೆ. ಭೌಗೋಳಿಕ ವೈವಿಧ್ಯತೆಗನುಗುಣವಾಗಿ ಇಲ್ಲಿನ ಸಾಹಿತ್ಯ ಸಂಪತ್ತು ವೈವಿಧ್ಯಮಯವಾಗಿದೆ.ಮೌಲ್ಯ ಪರಿಪಾಲನೆಯಲ್ಲಿ ಶಿವಮೊಗ್ಗ ಜಿಲ್ಲೆಯ ಜನಸಮುದಾಯ ಎಂದೂ ಮುಂದೆ ; ತ್ಯಾಗ ಬಲಿದಾನ ,ಶೌರ್ಯ ,ನ್ಯಾಯ ಧರ್ಮ ಇಲ್ಲಿಯ ಜನರ ಆದರ್ಶಗಳಾಗಿವೆ.ಈ ಜಿಲ್ಲೆಯ ಜಾನಪದವನ್ನು ಹಲವಾರು ವಿದ್ವಾಂಸರು ಸಂಗ್ರಹ ಮಾಡಿದ್ದಾರೆ. ಸಂಗ್ರಹಿಸಬೇಕಾದ ಸಂಪತ್ತು ಹೇರಳವಾಗಿದೆ. ಆ ನಿಟ್ಟಿನಲ್ಲಿ ಮೊಗೆದಷ್ಟು ಮುಗಿಯದಷ್ಟು ಸಮೃದ್ದವಾಗಿದೆ.

ಸೂಡೊಕು

ಸೂಡೊಕು ಒಂದು ತರ್ಕಾಧಾರಿತ, ಸಂಚಯಾತ್ಮಕ ಸಂಖ್ಯಾ ನಿಯೋಜನ ಬಂಧ. ಇದರ ಉದ್ದೇಶ ಒಂದು 9×9 ಚೌಕಗಳ ಜಾಲವನ್ನು ಅಂಕಿಗಳಿಂದ ತುಂಬುವುದು, ಹೇಗೆಂದರೆ ಚೌಕಗಳ ಜಾಲವನ್ನು ರಚಿಸುವ ಪ್ರತಿ ಅಡ್ಡಸಾಲು, ಪ್ರತಿ ಲಂಬಸಾಲು ಮತ್ತು ಒಂಭತ್ತು 3×3 ಚೌಕಗಳ ಉಪಜಾಲಗಳು ("ಖಂಡಗಳು") 1 ರಿಂದ 9 ರ ವರೆಗಿನ ಎಲ್ಲ ಅಂಕಿಗಳನ್ನು ಹೊಂದಿರಬೇಕು. ಬಂಧವನ್ನು ಹೂಡುವವನು ಭಾಗಶಃ ಪೂರ್ಣವಾದ ಚೌಕಗಳ ಜಾಲವನ್ನು ಒದಗಿಸುತ್ತಾನೆ. ಒಂದು ಚೆನ್ನಾಗಿ ಒಡ್ಡಿದ ಒಗಟಿಗೆ ಒಂದೇ ಪರಿಹಾರವಿರುತ್ತದೆ.

ಆಟದಲ್ಲಿ ಪ್ರತ್ಯೇಕ ಪ್ರದೇಶಗಳ ಒಳಬಂಧದ ಮೇಲೆ ಹೆಚ್ಚುವರಿ ನಿರ್ಬಂಧಗಳಿರುತ್ತವೆ. ಉದಾಹರಣೆಗೆ, ಅದೇ ಏಕ ಅಂಕಿಯು ಒಂದೇ ಅಡ್ಡಸಾಲು, ಲಂಬಸಾಲು, ಅಥವಾ 9x9 ಆಟದ ಫಲಕದ ಯಾವುದೇ ಒಂಭತ್ತು 3×3 ಉಪಪ್ರದೇಶಗಳಲ್ಲಿ ಎರಡು ಬಾರಿ ಬರುವಂತಿಲ್ಲ.

ಆಧುನಿಕ ಸೂಡೊಕು ೧೯೮೬ರಲ್ಲಿ ಜಾಪಾನ್‍ನ ಒಗಟು ಕಂಪನಿ ನಿಕೋಲಿಯ ಪ್ರಯತ್ನದಿಂದ ಮುಖ್ಯವಾಹಿನಿಯಲ್ಲಿ ಬರಲು ಶುರುವಾಯಿತು. ಇದೇ ಕಂಪನಿ ಸೂಡೊಕು ಎಂಬ ಹೆಸರಿಟ್ಟಿತು, ಸೂಡೊಕು ಅಂದರೆ "ಒಂಟಿ ಸಂಖ್ಯೆ". ಅಮೇರಿಕಾದ ಸುದ್ದಿಪತ್ರಿಕೆಯಲ್ಲಿ ಮತ್ತು ನಂತರ ಬ್ರಿಟನ್‍ನ ದ ಟೈಮ್ಸ್‌ನಲ್ಲಿ ೨೦೦೪ರಲ್ಲಿ ಮೊದಲು ಕಾಣಿಸಿಕೊಂಡಿತು, ವೇಯ್ನ್ ಗೂಲ್ಡ್‌ರ ಪ್ರಯತ್ನಗಳಿಂದ. ವೇಯ್ನ್ ಗೂಲ್ಡ್ ಕ್ಷಿಪ್ರವಾಗಿ ವಿಶಿಷ್ಟ ಒಗಟುಗಳನ್ನು ಸೃಷ್ಟಿಸಲು ಒಂದು ಗಣಕ ಕ್ರಮವಿಧಿಯನ್ನು ರೂಪಿಸಿದರು.

ಒಂದು ಸರಿಯಾದ ಸೂಡೊಕುಗೆ ಅತ್ಯಂತ ಕಡಿಮೆ ಸಂಭವನೀಯ ಸುಳಿವುಗಳ ಸಂಖ್ಯೆ 17 (ಸಾಬೀತಾಗಿದ್ದು ಜನೆವರಿ ೨೦೧೨, ಮತ್ತು ದೃಢಪಡಿಸಿದ್ದು ಸೆಪ್ಟೆಂಬರ್ ೨೦೧೩). ೧೭ ಸುಳಿವುಗಳಿರುವ ೪೯,೦೦೦ ಕ್ಕಿಂತ ಹೆಚ್ಚು ಸೂಡೊಕುಗಳನ್ನು ಕಂಡುಹಿಡಿಯಲಾಗಿದೆ, ಜಪಾನೀ ಉತ್ಸಾಹಿಗಳಿಂದ ಅನೇಕ. ೧೮ ಸುಳಿವುಗಳ ಮತ್ತು ತಿರುಗು ಸಮ್ಮಿತಿಯ ಸೂಡೊಕುಗಳನ್ನು ಕಂಡುಹಿಡಿಯಲಾಗಿದೆ, ಮತ್ತು ೧೮ ಸುಳಿವುಗಳ ಕನಿಷ್ಠಪಕ್ಷ ಒಂದು ಸೂಡೊಕು ಪರಿಚಿತವಿದೆ ಮತ್ತು ಎರಡು ದಾರಿಯ ಕರ್ಣ ಸಮ್ಮಿತಿಯನ್ನು ಪ್ರದರ್ಶಿಸುತ್ತದೆ, ಮತ್ತು ಸ್ವಾಕಾರದದ್ದಾಗಿದೆ.

ಹಾಲಾಹಲ

ಹಾಲಾಹಲ ಅಥವಾ ಕಾಲಕೂಟವು (ಅಕ್ಷರಶಃ 'ಕಪ್ಪು ರಾಶಿ' ಅಥವಾ 'ಸಮಯದ ಒಗಟು') (ಹಿಂದೂ ಪುರಾಣದ ಪ್ರಕಾರ) ದೇವತೆಗಳು ಮತ್ತು ಅಸುರರು ಅಮರತ್ವದ ಪಾನೀಯವಾದ ಅಮೃತವನ್ನು ಪಡೆಯಲು ಸಮುದ್ರ ಮಂಥನ ಮಾಡಿದಾಗ ಸೃಷ್ಟಿಯಾದ ಒಂದು ವಿಷದ ಹೆಸರು.

ಈ ಕಾರ್ಯದಲ್ಲಿ ಹದಿನಾಲ್ಕು ವಿಭಿನ್ನ ರತ್ನಗಳನ್ನು ಪಡೆಯಲಾಯಿತು, ಮತ್ತು ಅಸುರರು ಅವರಿಗೆ ಮೋಸಮಾಡಲು ಪ್ರಯತ್ನಿಸಿದ ನಂತರ ಇವು ಬಹುತೇಕವಾಗಿ ದೇವತೆಗಳು ಕೈ ಸೇರಿದವು. ಆದರೆ ಅಮೃತ ರೂಪಗೊಳ್ಳುವುದಕ್ಕೆ ಮುಂಚೆ, ಹಾಲಾಹಲವು ಉತ್ಪತ್ತಿಯಾಯಿತು ಮತ್ತು ಎರಡೂ ಪಕ್ಷಗಳಿಗೆ ಗಾಯಮಾಡಲು ಆರಂಭಿಸಿತು. ವಿಷವು ಹೊರಸೂಸಿದ ಮಾರಕ ಧೂಮವನ್ನು ಯಾರೂ ಕೂಡ ಸಹಿಸಲಾಗದ್ದರಿಂದ, ದೇವತೆಗಳು ಮತ್ತು ಅಸುರರು ಇಬ್ಬರೂ ಉಸಿರುಗಟ್ಟುವಿಕೆಯಿಂದ ಕುಸಿದು ಬೀಳುವುದು ಆರಂಭವಾಯಿತು. ಸಹಾಯಕ್ಕಾಗಿ ಅವರು ಬ್ರಹ್ಮನ ಬಳಿ ಓಡಿದರು, ಬ್ರಹ್ಮನು ಅವರನ್ನು ವಿಷ್ಣುವಿನ ಬಳಿ ಕಳಿಸಿದನು. ವಿಷ್ಣುವು ನಿರಾಕರಿಸಿ ಕೇವಲ ಶಿವನು ಮಾತ್ರ ಅವರಿಗೆ ಸಹಾಯ ಮಾಡಬಲ್ಲನು ಎಂದು ಸಲಹೆ ನೀಡಿದನು. ಹಾಗಾಗಿ ಎರಡೂ ಪಕ್ಷಗಳು ಕೈಲಾಸಪರ್ವತಕ್ಕೆ ಹೋಗಿ ಸಹಾಯಮಾಡುವಂತೆ ಶಿವನನ್ನು ಪ್ರಾರ್ಥಿಸಿದರು. ಶಿವನು ವಿಷವನ್ನು ಸೇವಿಸಲು ಆಯ್ಕೆಮಾಡಿಕೊಂಡನು ಮತ್ತು ಹಾಗಾಗಿ ಅದನ್ನು ಕುಡಿದನು. ಅವನ ಪತ್ನಿಯಾದ ಪಾರ್ವತಿಯು ಗಾಬರಿಗೊಂಡು ವಿಷವನ್ನು ನಿಲ್ಲಿಸುವ ಸಲುವಾಗಿ ತನ್ನ ಪತಿಯ ಕತ್ತನ್ನು ಎರಡೂ ಕೈಗಳಿಂದ ಗಟ್ಟಿಯಾಗಿ ಹಿಡಿದಳು. ಹಾಗಾಗಿ ಅವನಿಗೆ ವಿಷಕಂಠ ಎಂಬ ಹೆಸರು ಬಂದಿತು. ಪಾರ್ವತಿಯ ರೂಪವಾದ ಮಹಾವಿದ್ಯೆ ತಾರಾಳು ನಂತರ ಶಿವನನ್ನು ರಕ್ಷಿಸಿದಳು. ವಿಷವು ಅವನ ಗಂಟಲನ್ನು ನೀಲಿಗೊಳಿಸಿತು; ಹಾಗಾಗಿ ಅವನನ್ನು ನೀಲಕಂಠ ಎಂದೂ ಕರೆಯಲಾಗುತ್ತದೆ.

ಜಾನಪದ ಸಾಹಿತ್ಯ

ಇತರ ಭಾಷೆಗಳು

This page is based on a Wikipedia article written by authors (here).
Text is available under the CC BY-SA 3.0 license; additional terms may apply.
Images, videos and audio are available under their respective licenses.