ಏಪ್ರಿಲ್ ೧೮

ಪ್ರಮುಖ ಘಟನೆಗಳು

ಟೆಂಪ್ಲೇಟು:ಏಪ್ರಿಲ್ ೨೦೧೯

ನಿಧನ

ಅಂತಾರಾಷ್ಟ್ರೀಯ ವ್ಯಾಪಾರ

ಅಂತರಾಷ್ಟ್ರೀಯ ವ್ಯಾಪಾರವು ಪ್ರಪಂಚದ ರಾಷ್ಟ್ರ-ರಾಷ್ಟ್ರಗಳ ನಡುವೆ ನಡೆಯುವ ವ್ಯಾಪಾರವಾಗಿರುತ್ತದೆ. ಒಂದು ರಾಷ್ಟ್ರವು ಇನ್ನೊಂದು ರಾಷ್ಟ್ರಕ್ಕೆ ಸರಕು-ಸೇವೆಗಳನ್ನು ರಫ್ತು ಮತ್ತು ಆಮದು ಮಾಡಿಕೊಳ್ಳುತ್ತವೆ. ಬೇರೆ ರಾಷ್ಟ್ರಗಳು ಉತ್ಪಾದಿಸಿದ ಸರಕು-ಸೇವೆಗಳನ್ನು ನಮ್ಮ ದೇಶಕ್ಕೆ, ನಮ್ಮ ದೇಶದಲ್ಲಿ ಉತ್ಪಾದಿಸಿದ ಸರಕು-ಸೇವೆಗಳನ್ನು ಹೊರದೇಶಗಳಿಗೆ ಕಳಿಸುವಾ ಅಥವಾ ತರಿಸಿಕೊಳ್ಳುವ ಅಂತರಾಷ್ಟ್ರಿಯ ವ್ಯಾಪಾರದಿಂದ ದೇಶದ ಅಥವಾ ಪ್ರಪಂಚದ ರಾಷ್ಟ್ರಗಳ ಆರ್ಥಿಕ ಪ್ರಗತಿ ತ್ವರಿತಗೊಳ್ಳುತ್ತದೆ. ಅಂತರಾಷ್ಟ್ರೀಯ ವ್ಯಾಪಾರ ರಾಷ್ಟ್ರ-ರಾಷ್ಟ್ರಗಳ ನಡುವಿನ ಆರ್ಥಿಕ ಪ್ರಗತಿಯ ಗತಿಯನ್ನು ಹೆಚ್ಚಿಸುತ್ತದೆ ಎಂಬುದನ್ನು ಪುರಾತನ ಕಾಲದ ಅರ್ಥಶಾಸ್ತ್ರಙ್ನರಾದ ಆಡಮ್ ಸ್ಮಿತ್, ಜೆ.ಎಸ್.ಮಿಲ್ ರವರು ಅಂತರಾಷ್ಟ್ರೀಯ ವ್ಯಾಪಾರದಿಂದಾಗುವ ಉಪಯುಕ್ತತೆಗಳನ್ನು ವಿವರಿಸಿ "ವ್ಯಾಪಾರವು ಆರ್ಥಿಕ ಪ್ರಗತಿಯ ಎಂಜಿನ್ನಾಗಿದೆ " ಎಂದು ಹೇಳಿದ್ದಾರೆ.

ಅರ್ನಾಲ್ಡ್ ಶ್ವಾರ್ಜಿನೆಗ್ಗರ್

ಅರ್ನಾಲ್ಡ್ ಅಲೋಯಿಸ್ ಶ್ವಾರ್ಜಿನೆಗ್ಗರ್ (English pronunciation: /ˈʃwɔrtsənɛɡər/German: [ˈaɐnɔlt ˈaloʏs ˈʃvaɐtsənˌʔɛɡɐ]ಜುಲೈ ೩೦, ೧೯೪೭ರಲ್ಲಿ ಜನನ); ಆಸ್ಟ್ರಿಯಾ ಅಮೇರಿಕದ ದೇಹಧಾಡ್ಯಪಟು, ನಟ, ಉದ್ಯಮಿ ಮತ್ತು ರಾಜಕಾರಣಿ ಆಗಿದ್ದು, ಪ್ರಸ್ತುತ ಕ್ಯಾಲಿಪೋರ್ನಿಯಾದ ೩೮ನೇ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಲಿದ್ದಾರೆ.

ತನ್ನ ಹದಿನೈದರ ಹರಯದಿಂದಲೇ ಶ್ವಾರ್ಜಿನೆಗ್ಗರ್ ದೈಹಿಕ ಕಸರತ್ತುಗಳನ್ನು ಆರಂಭಿಸಿದರು. ೨೨ನೇ ವಯಸ್ಸಿನಲ್ಲಿಯೇ ಮಿ.ಯುನಿವರ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು ಮತ್ತು ಮಿ.ಒಲಂಪಿಯಾ ಸ್ಪರ್ಧೆಯಲ್ಲಿ ಸತತವಾಗಿ ಏಳು ಬಾರಿ ವಿಜೇತರಾದರು. ನಿವೃತ್ತಿಯನ್ನು ಘೋಷಿಸಿ ಬಹಳಷ್ಟು ವರ್ಷಗಳಾಗಿದ್ದರೂ ದೇಹಧಾಡ್ಯ ಕ್ರೀಡಾಕ್ಷೇತ್ರದಲ್ಲಿ ಶ್ವಾರ್ಜಿನೆಗ್ಗರ್ ಮುಖ ಚಿರಪರಿಚಿತವಾಗಿಯೇ ಉಳಿದಿದೆ. ಈ ಕ್ರೀಡೆಯ ಬಗ್ಗೆ ಶ್ವಾರ್ಜಿನೆಗ್ಗರ್ ಸಾಕಷ್ಟು ಪುಸ್ತಕಗಳನ್ನು ಮತ್ತು ಅನೇಕ ಲೇಖನಗಳನ್ನು ಸಹ ಬರೆದಿದ್ದಾರೆ.

ಶ್ವಾರ್ಜಿನೆಗ್ಗರ್ ಹಾಲಿವುಡ್‌ನ ಸಾಹಸಮಯ ಚಿತ್ರಗಳಿಂದ ವಿಶ್ವವಿಖ್ಯಾತಿಯನ್ನು ಪಡೆದರು. ಕ್ಯಾನನ್ ದಿ ಬಾರ್ಬೇರಿಯನ್ ಮತ್ತು ದಿ ಟರ್ಮಿನೇಟರ್ ಗಳಂತಹ ಚಿತ್ರಗಳಲ್ಲಿ ನಿರ್ವಹಿಸಿದ ಪಾತ್ರಗಳು ಇವರಿಗೆ ಜನಮನ್ನಣೆಯನ್ನು ದೊರೆಕಿಸಿಕೊಟ್ಟವು. ಅವರು ದೇಹಧಾಡ್ಯ ಬೆಳೆಸಿಕೊಳ್ಳುವ ದಿನಗಳಲ್ಲಿ ದಿ "ಆಸ್ಟ್ರಿಯನ್ ಓಕ್" ಮತ್ತು ದಿ "ಸ್ಟೆರಿಯನ್ ಓಕ್" ಎಂಬ ಅಡ್ಡಹೆಸರನ್ನು ಹೊಂದಿದ್ದರು. ನಟನಾಗಿ ವೃತ್ತಿಜೀವನ ಮಾಡುವಾಗ "ಅರ್ನಾಲ್ಡ್ ಸ್ಟ್ರಾಂಗ್" ಮತ್ತು "ಅರೈನ್" ಎಂದು ಕರೆಯಲ್ಪಡುತ್ತಿದ್ದರು. ತೀರಾ ಇತ್ತೀಚೆಗೆ "ಗವರ್ನೇಟರ್" ಎಂಬ ಅಡ್ಡಹೆಸರಿನಿಂದ ಕರೆಯಲ್ಪಡುತ್ತಿದ್ದರು (ಗವರ್ನರ್ ಮತ್ತು ಅವರ ಚಲನಚಿತ್ರದ ಪಾತ್ರವಾದ ದಿ ಟರ್ಮಿನೇಟರ್ ಇವೆರಡರ ಮಿಶ್ರಣವಾದ ಹೆಸರು).ಗ್ಯಾರಿ ಡೇವಿಸ್ ಅವರ ಗವರ್ನರ್ ಹುದ್ದೆಗಾಗಿ ನಡೆದ ವಿಶೇಷ ಮರು ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದ ಸದಸ್ಯನಾಗಿ ಈತ ೨೦೦೩ರ ಅಕ್ಟೋಬರ್೭ ರಂದು ಆಯ್ಕೆಗೊಂಡರು. ಡೇವಿಸ್‌ರವರ ಆಡಳಿತದ ಅವಧಿಯಲ್ಲಿ ಉಳಿದಿದ್ದ ಕಾಲವನ್ನು ಪೂರ್ಣಗೊಳಿಸಲು, ಶ್ವಾರ್ಜಿನೆಗ್ಗರ್ ೨೦೦೩ರ ನವೆಂಬರ್ ೧೭ರಂದು ಪ್ರಮಾಣವಚನವನ್ನು ಸ್ವೀಕರಿಸಿದರು. ಶ್ವಾರ್ಜಿನೆಗ್ಗರ್ ಅವರು ನವೆಂಬರ್ ೧೭, ೨೦೦೬ರಲ್ಲಿ ನಡೆದ ಕ್ಯಾಲಿಪೋರ್ನಿಯ ಸರ್ಕಾರದ ೨೦೦೬ ಚುನಾವಣೆಯಲ್ಲಿ ಮರು ಆಯ್ಕೆಗೊಂಡು ರಾಜ್ಯಪಾಲರಾಗಿ ಪೂರ್ಣಾವಧಿ ಸೇವೆಯನ್ನು ಸಲ್ಲಿಸಿದರು. ಈ ಚುನಾವಣೆಯಲ್ಲಿ ಅವರು ಕ್ಯಾಲಿಪೋರ್ನಿಯ ರಾಜ್ಯದ ಖಜಾಂಚಿಯಾಗಿ ಸೇವೆ ಸಲ್ಲಿಸುತ್ತಿದ್ದ ಡೆಮಾಕ್ರಾಟ್ ಪಕ್ಷದ ಫಿಲ್ ಅಂಜೆಲೈಡ್ಸ್‌ರನ್ನು ಸೋಲಿಸಿಸರು. ಶ್ವಾರ್ಜಿನೆಗ್ಗರ್ ೨೦೦೭ರ ಜನವರಿ ೫ರಂದು ಎರಡನೇ ಬಾರಿಗೆ ಪ್ರಮಾಣವಚನವನ್ನು ಸ್ವೀಕರಿಸಿದರು. ವಿಶ್ವವನ್ನು ರೂಪಿಸಲು ಸಹಾಯ ಮಾಡುತ್ತಿರುವವರು ಎಂದು ಟೈಮ್ ಪತ್ರಿಕೆ ಪ್ರಕಟಿಸಿದ ೨೦೦೪ ಮತ್ತು ೨೦೦೭ರಲ್ಲಿ ಪ್ರಕಟಿಸಿದ ಟೈಮ್ ೧೦೦ ಪಟ್ಟಿಯಲ್ಲಿ ಇವರ ಹೆಸರು ಸಹ ಸೇರ್ಪಡೆಗೊಂಡಿತ್ತು. ಶ್ವಾರ್ಜಿನೆಗ್ಗರ್ ಮರಿಯಾ ಶ್ರೈವರ್ ಎಂಬುವವರನ್ನು ಮದುವೆಯಾಗಿದ್ದು, ಈ ದಂಪತಿಗಳಿಗೆ ನಾಲ್ಕು ಮಕ್ಕಳಿದ್ದಾರೆ.

ಅಲ್ಬರ್ಟ್ ಐನ್‍ಸ್ಟೈನ್

ಆಲ್ಬರ್ಟ್ ಐನ್‍ಸ್ಟೀನ್ ( ಜರ್ಮನ್ ಉಚ್ಛಾರಣೆ ) (ಮಾರ್ಚ್ ೧೪, ೧೮೭೯ - ಏಪ್ರಿಲ್ ೧೮, ೧೯೫೫) ೨೦ನೇ ಶತಮಾನದ ಜರ್ಮನಿ ಮೂಲದ ಭೌತವಿಜ್ಞಾನಿ. ಇವರು ಸಾಪೇಕ್ಷತ ಸಿದ್ಧಾಂತವನ್ನು (ಥಿಯರಿ ಆಫ್ ರಿಲೇಟಿವಿಟಿ) ಜಗತ್ತಿನ ಮುಂದಿಟ್ಟವರು. ಕ್ವಾಂಟಮ್ ಮೆಕ್ಯಾನಿಕ್ಸ್, ಸ್ಟ್ಯಾಟಿಸ್ಟಿಕಲ್ ಮೆಕ್ಯಾನಿಕ್ಸ್ ಹಾಗೂ ವಿಶ್ವಶಾಸ್ತ್ರ (ಕಾಸ್ಮಾಲಜಿ)ಗಳಲ್ಲಿ ಕೂಡ ಮಹತ್ತರವಾದ ಕಾಣಿಕೆ ನೀಡಿದ್ದಾರೆ. ೧೯೨೧ರಲ್ಲಿ ಇವರಿಗೆ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದ್ಯುತಿವಿದ್ಯುತ್ ಪರಿಣಾಮ ಬಣ್ಣಿಸಿದ ಇವರ ವಾದ ಹಾಗೂ ಸೈದ್ಧಾಂತಿಕ ಭೌತಶಾಸ್ತ್ರಕ್ಕೆ ಇವರು ಸಲ್ಲಿಸಿದ ಸೇವೆಗೆ ಈ ಪ್ರಶಸ್ತಿ ನೀಡಲಾಯಿತು.

ಆಲ್ ಪಸಿನೊ

'''ಆಲ್ ಪಸಿನೊ''' ಇವರನ್ನು ಆಲ್ಫ್ರೆಡೋ ಜೇಮ್ಸೆ ಪಸಿನೊ ಎಂದು ಕರೆಯುತ್ತಾರೆ.ಇವರೊಬ್ಬರು ಅಮೇರಿಕನ್ ನಟ,ಇವರು ಏಪ್ರಿಲ್ ೨೫ ೧೯೪೦ ರಲ್ಲಿ ಹುಟ್ಟಿದರು.ಇವರು ನ್ಯೂಯಾರ್ಕ್ ಮ್ಯಾನ್ಹ್ಯಾಟನ್ ನಗರದಲ್ಲಿ ಜನಿಸಿದರು,ಇವರು ಸಿಸಿಲಿಯನ್ ಅಮೆರಿಕನ್ ವರ್ಗಕೆ ಸೇರಿದವರು, ಇವರ ತಂದೆಯ ಹೆಸರು ಸಲ್ವಾಟೋರ್ ಪಸಿನೊ ಮತ್ತು ಇವರ ತಾಯಿ ರೋಸ್. ಇವರ ಹದಿಹರೆಯದ ವಯಸ್ಸಿನಲಿ ಇವರ ಸ್ನೇಹಿತರು ಇವರನ್ನು 'ಸನ್ನಿ' ಎಂದು ಕರಿಯುತ್ತಿದ್ದರು.

ಕಂದಾವರ ರಘುರಾಮ ಶೆಟ್ಟಿ

ಕರ್ನಾಟಕ ರಾಜ್ಯದ ಯಕ್ಷಗಾನ ರಸಿಕರಿಗೆಲ್ಲಾ ಚಿರಪರಿಚಿತರಾಗಿರುವ, ’ಕಂದಾವರ ರಘುರಾಮ ಶೆಟ್ಟಿ’ ಯವರು, ಒಬ್ಬ ಖ್ಯಾತ ಶಿಕ್ಷಕ, ಯಕ್ಷಗಾನ ಪ್ರಸಂಗ ಕರ್ತ, ಅರ್ಥಧಾರಿ, ಹವ್ಯಾಸಿ ನಾಟಕ ಕಲಾವಿದ, (ವೇಶಧಾರಿ). ಶ್ರೀ. ರಘುರಾಮ ಶೆಟ್ಟಿಯವರು ಯಕ್ಷಗಾನ ವಲಯದಲ್ಲಿ ಕಂದಾವರದವರು ಯೆಂಬ ಹೆಸರಿನಿಂದ ಪ್ರಸಿದ್ಧರು.

ಕರ್ನಾಟಕ ರಾಜ್ಯ ಮೀಸಲು ಪೋಲಿಸ್

ಕರ್ನಾಟಕ ರಾಜ್ಯ ಮೀಸಲು ಪೋಲಿಸ್

ಕರ್ನಾಟಕದ ಪ್ರವಾಸಿತಾಣಗಳು

ಇದನ್ನೂ ನೋಡಿ- ಕರುನಾಡ ಪ್ರವಾಸಿ ತಾಣಗಳು

ಹಂಪೆ

ಕನ್ನಡ ಸಾಮ್ರಾಜ್ಯಕ್ಕೆ ಮರು ಪಯಣ

ಹಂಪೆಯ ಕಂಡು ಕಣ್ಣೀರು ಹಾಕದವರಾರು?

ಕ್ರಿ.ಶ. ೧೩೩೬ರ ಏಪ್ರಿಲ್ ೧೮ (ಹಿಂದೂ ಪಂಚಾಂಗದ ರೀತ್ಯ ಶಾಲಿವಾಹನ ಶಕೆ ೧೨೫೭ಕ್ಕೆ ಸಲ್ಲುವ ಧಾತೃ ಸಂವತ್ಸರದ ವೈಶಾಖ ಶುದ್ಧ ಸಪ್ತಮಿ) ಇತಿಹಾಸ ಮರೆಯಲಾರದ ಒಂದು ಸುದಿನ. ಪವಿತ್ರ ತುಂಗಭದ್ರಾ ನದಿ ತೀರದಲ್ಲಿ ಕನ್ನಡ ಸಾಮ್ರಾಜ್ಯ ವಿಜಯನಗರ ಸ್ಥಾಪನೆಯಾದ ದಿನ.

ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ ಎಂದೇ ಹೆಸರಾದ ಶ್ರೀವಿದ್ಯಾರಣ್ಯರ ಮಾರ್ಗದರ್ಶನದಲ್ಲಿ (ಹರಿಹರ) ಹಕ್ಕ -ಬುಕ್ಕರು ಕಟ್ಟಿದ ವಿಜಯನಗರ ಎಂಬ ಪುಟ್ಟದೊಂದು ಸಂಸ್ಥಾನ, ವಿಜಯೋತ್ಸವವನ್ನೇ ಆಚರಿಸುತ್ತಾ ಅನತಿ ಕಾಲದಲ್ಲಿಯೇ ಬೃಹತ್ ಕನ್ನಡ ಸಾಮ್ರಾಜ್ಯವಾಯಿತು. ಕೃಷ್ಣಾನದಿಯಿಂದ ಕನ್ಯಾಕುಮಾರಿಯವರೆಗೂ ಹಬ್ಬಿತ್ತು. ಈ ಕನ್ನಡ ಸಾಮ್ರಾಜ್ಯ ಕೊನೆಗೊಂಡಿದ್ದು ೧೫೬೫ರಲ್ಲಿ.೫೦೦ ವರ್ಷಗಳ ಹಿಂದೆ ವೈಭವದಿಂದ ಮೆರೆದ ಈ ಕನ್ನಡ ರಾಜಧಾನಿಯಲ್ಲಿ ಮುತ್ತು, ರತ್ನ, ವಜ್ರ, ವೈಢೂರ್ಯಗಳನ್ನು ರಸ್ತೆಯ ಬದಿಯಲ್ಲಿ ರಾಶಿ ಹಾಕಿ ಮಾರುತ್ತಿದ್ದ ಇತಿಹಾಸವಿದೆ. ಸಾಂಸ್ಕೃತಿಕ ನೆಲೆಯಿದೆ, ನಾಗರಿಕತೆಯ ನಂಟಿದೆ. ಹಂಪೆಗೆ ಸರಿಸಮವಾದ ಮತ್ತಾವುದೇ ಪ್ರದೇಶ ಭಾರತದಲ್ಲಿರಲಿಲ್ಲ ಎಂಬ ಖ್ಯಾತಿಯೂ ಇದಕ್ಕಿದೆ. ಈ ಮಾತುಗಳನ್ನು ಭಾರತೀಯರು ‍ಯಾರೋ ಉತ್ಪೇಕ್ಷೆಗಾಗಿ ಅಥವಾ ಸ್ವಾಭಿಮಾನದಿಂದ ಹೇಳಿದ ನುಡಿಗಳಲ್ಲ. ಇದು ವಿದೇಶೀ ಯಾತ್ರಿಕರು ಮುಕ್ತಕಂಠದಿಂದ ಮಾಡಿದ ಪ್ರಶಂಸೆ. ಇಂಥ ಸುಂದರ ರಾಜಧಾನಿಯ ಮೇಲೆ ನಡೆದಂಥ ಆಕ್ರಮಣ ಮತ್ತಾವ ನಗರಿಯ ಮೇಲೂ ನಡೆದಿಲ್ಲ ಎಂದರೆ ಉತ್ಪ್ರೇಕ್ಷೆಯ ಮಾತಾಗಲಾರದು.

ಇಷ್ಟೆಲ್ಲಾ ಆಘಾತಗಳ ಹೊರತಾಗಿಯೂ ಇಂದಿಗೂ ಹಂಪೆ ಚಿತ್ರಕಾರರಿಗೆ, ಛಾಯಾಗ್ರಾಹಕರಿಗೆ ಸ್ಫೂರ್ತಿಯ ತಾಣವಾಗಿ, ಇತಿಹಾಸ ಅಧ್ಯಯನಿಗಳಿಗೆ ಆಕರ ಗ್ರಂಥವಾಗಿದೆ. ವೈಭವ -ದುರವಸ್ಥೆಗಳಿಗೆ ಹಂಪೆಗಿಂತ ಮಿಗಿಲಾದ ಉದಾಹರಣೆ ಇತಿಹಾಸದ ಪುಟಗಳಲ್ಲಿ ಮತ್ತೊಂದು ಸಿಗಲು ಸಾಧ್ಯವಿಲ್ಲವೇನೋ? ೫೦೦ ವರ್ಷಗಳ ಹಿಂದೆ ಮುಸಲ್ಮಾನ ದೊರೆಗಳ ಹಾಗೂ ಆಂತರಿಕ ಸಂಕುಚಿತವಾದಿಗಳ ದಾಳಿಗೆ ಒಳಗಾಗಿ ಹಾಳಾದ ಹಂಪೆಯಲ್ಲಿ ವ್ಯಗ್ರನಾಗದೆ ಶಾಂತನಾಗಿ ನಿಂತ ಉಗ್ರನರಸಿಂಹ, ನಿಸ್ತೇಜವಾಗಿ ನೀರಿನಲ್ಲಿ ನಿಂತ ಲಿಂಗ, ಛಿದ್ರ ಛಿದ್ರವಾದ ಶಿಲಾಶ್ರೀಮಂತಿಕೆ ಇನ್ನೂ ದಾಳಿಗೆ ಮೂಕಸಾಕ್ಷಿಯಾಗಿ ಪರಂಪರಾಗತವಾಗಿ ಉಳಿದುಕೊಂಡು ಬಂದಿದೆ. ತುಂಗಭದ್ರಾ ನದಿಯ ದಂಡೆಯ ಮೇಲೆ ಪಂಪಾ ಪರಿಸರದಲ್ಲಿ ಮೂರ್ತಿವೆತ್ತ ಈ ಸುಂದರ ತಾಣ ಹಂಪೆ. ಪುರಾಣಕ್ಕೆ ಸಾಕ್ಷಿಯಾಗಿ, ಇತಿಹಾಸದ ಮೆಲುಕಾಗಿ ನೆಲೆನಿಂತ ಈ ನಾಡಿಗೆ ಶ್ರೀರಾಮನೂ ಬಂದಿದ್ದನೆನ್ನುತ್ತದೆ ಪುರಾಣ. ರಾಮಾಯಣದಲ್ಲಿ ಬರುವ ಕಿಷ್ಕಿಂದೆಯೇ ಇಂದಿನ ಆನೆಗೊಂದಿ, ಇಲ್ಲಿಯೇ ಶ್ರೀರಾಮದೂತ ಹನುಮ ಹುಟ್ಟಿದ್ದು ಎನ್ನುತ್ತದೆ ಸ್ಥಳ ಪುರಾಣ. ಕನ್ನಡ ರಾಜರಾಜೇಶ್ವರಿ ಭುವನೇಶ್ವರಿ ಇರುವುದೂ ಈ ಊರಿನಲ್ಲೇ. ಹಂಪೆ ದ್ವಾದಶ ಭಾಸ್ಕರ ಕ್ಷೇತ್ರಗಳಲ್ಲಿ ಒಂದು ಎಂದು ಗೋಕರ್ಣ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

ನಾಲ್ಕು ರಾಜ ಮನೆತನಗಳ ಆಳ್ವಿಕೆಗೆ ಒಳಪಟ್ಟಿದ್ದ ಈ ನಾಡು ಪ್ರವರ್ಧಮಾನಕ್ಕೆ ಬಂದಿದ್ದು ರಾಯರಾಯರ ಗಂಡ ಕೃಷ್ಣದೇವರಾಯರ ಕಾಲದಲ್ಲಿ. ಇಂದು ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಹಂಪೆಯಲ್ಲಿ ನೋಡಲೇ ಬೇಕಾದ ಹತ್ತು ಹಲವು ಪ್ರಮುಖ ಸ್ಥಳಗಳಿವೆ. ನಿರ್ಮಲವಾಗಿ ಹರಿವ ತುಂಗಭದ್ರಾನದಿ, ಗಜಗಾತ್ರವಿರುವ ಸಾಸಿವೆ ಕಾಳು ಗಣಪ, ಕೃಷ್ಣ ದೇಗುಲ, ಶಿಲ್ಪಕಲಾ ವಿಮರ್ಶಕರಾದ ಫರ್ಗ್ಯುಸನ್, ಲಾಂಗ್‌ಹರ್ಸ್ಟ್‌ರಿಂದ ಮುಕ್ತಕಂಠದಿಂದ ಹೊಗಳಿಸಿಕೊಂಡ ವಿಜಯವಿಠ್ಠಲ ಮಂದಿರ, ಕನ್ನಡಿಗರ ಕಣ್ಣಲ್ಲಿ ನೀರೂರಿಸುವ ಭಗ್ನಗೊಂಡು ದುರಸ್ತಿಯಾದ ಉಗ್ರ ನರಸಿಂಹ, ಬಟವಿ ಲಿಂಗ , ಉದ್ಯಾನ ವೀರಭದ್ರಸ್ವಾಮಿ, ಅಕ್ಕ ತಂಗಿ ಗುಂಡು, ಅಂತಃಪುರವಾಸಿಗಳಿಗಾಗಿಯೇ ನಿರ್ಮಿಸಲಾಗಿದ್ದ ಕಮಲಮಹಲ್ ಎಂಬ ಈಜುಕೊಳ, ಹಂಪಿಯ ಆರಾಧ್ಯದೈವ ವಿರೂಪಾಕ್ಷ ದೇಗುಲದ ಎದುರು ಇಕ್ಕೆಲಗಳಲ್ಲೂ ಇರುವ ಬಜಾರು ರಸ್ತೆ, ನದಿಯ ದಂಡೆಯಲ್ಲಿರುವ ಪುರಂದರ ಮಂಟಪ, ಅರಸನ ತುಲಾಭಾರ, ಕೋದಂಡರಾಮ, ವರಾಹ ದೇವಸ್ಥಾನ, ಮಾತಂಗಪರ್ವತ, ಅಚ್ಚುತರಾಯ ದೇವಾಲಯ, ಸುಂದರ ಶಿಲ್ಪಕಲಾ ವೈಭವದ ಪಟ್ಟಾಭಿರಾಮ ದೇಗುಲ, ಗಾಣಿಗಿತ್ತಿ ದೇಗುಲ, ಕಾವಲು ಗೋಪುರ, ಹಜಾರಿರಾಮ ಮಂದಿರ, ಗಜಶಾಲೆ, ಕನ್ನಡಿಗರ ಹೆಮ್ಮೆಯ ಕನ್ನಡ ವಿಶ್ವವಿದ್ಯಾಲಯ, ಎಲ್ಲಕ್ಕಿಂತ ಮಿಗಿಲಾಗಿ ವಿಶ್ವವಿಖ್ಯಾತವಾದ ಕಲ್ಲಿನ ತೇರು ಹಾಗೂ ಮಹಾನವಮಿ ದಿಬ್ಬ. ಇದರ ಜೊತೆಗೆ ಬೆಟ್ಟವನ್ನೇರಿದರೆ ಸಂಜೆಯ ವೇಳೆ ಕಾಣಸಿಗುವ ಸುಂದರ ಸೂರ್ಯಾಸ್ತಮಾನ.

ಈಗಲೂ ಇಲ್ಲಿ ಉತ್ಖನನ ಕಾರ್ಯ ನಿರಂತರವಾಗಿ ಸಾಗಿದೆ. ಇತ್ತೀಚೆಗಷ್ಟೇ ಕಲ್ಲಿನ ರಥವಿರುವ ದೇಗುಲ ಪ್ರಾಕಾರದಲ್ಲಿ ರಾಯರು ಯಾಗಮಾಡುತ್ತಿದ್ದ ಹೋಮಕುಂಡ ಪತ್ತೆಯಾಗಿದೆ. ರಾಯರ ಅರಮನೆ ಇದ್ದ ತಳಹದಿ ಪತ್ತೆಯಾಗಿದೆ. ೨೦೦೬ರ ಏಪ್ರಿಲ್‌ನಲ್ಲಿ ಮುತ್ತುರತ್ನಗಳು ಕುದುರೆಯ ಅಸ್ತಿಪಂಜರ ಮುಂತಾದವು ದೊರೆತಿವೆ. ಇಷ್ಟು ಸುಂದರವಾದ ಕನ್ನಡನಾಡಿನ ರಾಜಧಾನಿಯನ್ನು ಕಣ್ಣಾರೆ ಕಾಣದಿದ್ದರೆ ಆದೀತೆ? ತಡವೇಕೆ ಹೊರಡಿ ಹಂಪೆಗೆ.

ಹೋಗುವುದು ಹೇಗೆ : ಬೆಂಗಳೂರಿನಿಂದ ಹಂಪೆಗೆ ೩೫೩ ಕಿ.ಮೀ., ಬಳ್ಳಾರಿಯಿಂದ ೭೪ ಕಿ.ಮೀ. ೧೮ ಕಿ.ಮಿ. ದೂರದಲ್ಲಿರುವ ಹೊಸಪೇಟೆವರೆಗೆ ರೈಲು ಸೌಕರ್‍ಯವಿದೆ. ಸಾಕಷ್ಟು ಬಸ್‌ಗಳೂ ಇದೆ. ರಾಷ್ಟ್ರೀಯ ಹೆದ್ದಾರಿ ೧೩ಕ್ಕೆ ಸಂಪರ್ಕವಿದೆ. ಉಳಿದುಕೊಳ್ಳಲು ಹೊಸಪೇಟೆ ಹಾಗೂ ತುಂಗಭದ್ರಾ ಡ್ಯಾಂನಲ್ಲಿ ಗೆಸ್ಟ್‌ಹೌಸ್, ಹೋಟೆಲ್‌ಗಳಿವೆ. ಹೊಸಪೇಟೆಯಿಂದ ಹಂಪೆ ಹಾಗೂ ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳ ದರ್ಶನಕ್ಕೆ ವಾಹನ ಸೌಕರ್ಯವಿದೆ. ರಾಜ್ಯ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್ -ವ್ಯಾನ್‌ಗಳೂ ಲಭ್ಯ. ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ವಿಶೇಷ ಪ್ರವಾಸ ಸೇವೆಯೂ ಇದೆ. ಇತಿಹಾಸವನ್ನು ತೆರೆದಿಡಲು ವಿರೂಪಾಕ್ಷ ದೇವಾಲಯದ ಎದುರು ಗೈಡ್‌ಗಳು ನಿಮಗಾಗಿ ಕಾದಿದ್ದಾರೆ. ಅಪರಿಚಿತರೊಂದಿಗೆ ಇಲ್ಲಿ ಮಾತಿಗಿಳಿಯುವುದು ಅಪಾಯಕಾರಿ.

ಬಾದಾಮಿ

ಬಾದಾಮಿ ಚಾಳುಕ್ಯರ ನಾಡಿನ ಶಿಲಾ ವೈಭವ

ಗಂಗ, ಕದಂಬ, ಹೊಯ್ಸಳ, ಚಾಲುಕ್ಯ, ವಿಜಯನಗರದರಸರು, ಮೈಸೂರು ಒಡೆಯರು, ರಾಷ್ಟ್ರಕೂಟರಾಳಿದ ಕರುನಾಡು ಕಲೆಗಳ ಬೀಡು. ಬಹುತೇಕ ಎಲ್ಲ ಅರಸು ಮನೆತನದವರೂ ತಮ್ಮ ತಮ್ಮ ರಾಜ್ಯದಲ್ಲಿ ಭವ್ಯ ದೇವಾಲಯಗಳನ್ನು ನಿರ್ಮಿಸಿ ತಾವು ಕಲೋಪಾಸಕರು ಎಂಬುದನ್ನು ಸಾಬೀತು ಮಾಡಿದ್ದಾರೆ. ಇದರ ಫಲವಾಗಿಯೇ ಇಂದಿಗೂ ಶಿಲ್ಪಕಲಾ ಕ್ಷೇತ್ರದಲ್ಲಿ ಕರ್ನಾಟಕ ವಿಶ್ವಭೂಪಟದಲ್ಲಿ ಶಾಶ್ವತ ಸ್ಥಾನ ಪಡೆದಿದೆ.

ಕರುನಾಡ ಶಿಲ್ಪಕಲಾವೈಭವಕ್ಕೆ ಚಾಲುಕ್ಯರ ಕೊಡುಗೆ ಅಪಾರ. ಹೊಯ್ಸಳರ ಬೇಲೂರು -ಹಳೇಬೀಡಿನಂತೆಯೇ ವಾಸ್ತು ವೈಭವ, ಕಲಾಶ್ರೀಮಂತಿಕೆಯನ್ನು ಚಾಲುಕ್ಯರ ರಾಜಧಾನಿ ಬಾದಾಮಿ, ಸನಿಹದಲ್ಲೇ ಇರುವ ಬನಶಂಕರಿ, ಐಹೊಳೆ, ಪಟ್ಟದಕಲ್ಲುಗಳ ದೇವಾಲಯದಲ್ಲಿಯೂ ಕಾಣಬಹುದು.

ಬಾದಾಮಿ: ಬಾದಾಮಿ ಇತಿಹಾಸ ಪ್ರಸಿದ್ಧವಾದ ಪ್ರಾಚೀನ ಸ್ಥಳ. ಇದಕ್ಕೆ ವಾತಾಪಿ ಎಂಬ ಹೆಸರಿತ್ತು. 6ನೇ ಶತಮಾನದಿಂದ 8ನೇ ಶತಮಾನದ ಅವಧಿಯಲ್ಲಿ ಕರುನಾಡನ್ನಾಳಿದ ಹೆಮ್ಮೆಯ ಕಲ್ಯಾಣದ ಚಾಲುಕ್ಯರು ಈ ಊರನ್ನು ಅಭಿವೃದ್ಧಿಪಡಿಸಿ ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು. ಈ ಅರಸರು ಇಲ್ಲಿ ಹೆಬ್ಬಂಡೆಗಳನ್ನು ಕೊರೆದು ಗುಹಾಂತರ ದೇವಾಲಯಗಳನ್ನು ನಿರ್ಮಿಸಿದರು. ಈ ಗುಹಾಂತರ ದೇವಾಲಯಗಳಲ್ಲಿ ಇರುವ ಚಿತ್ರಕಲೆಗಳು ಬಾದಾಮಿ ಚಾಲುಕ್ಯರ ಕಲಾರಾಧನೆ ಹಾಗೂ ಸೌಂದರ್ಯ ಪ್ರeಗೆ ಹಿಡಿದ ಕೈಗನ್ನಡಿಯಾಗಿ ಇಂದು ಪ್ರವಾಸಿ ತಾಣಗಳ ಪೈಕಿ ಪ್ರಮುಖವಾಗಿದೆ. ಎರಡು ಬೃಹತ್ ಪರ್ವತಗಳ ಕಡಿದಾದ ಕಣಿವೆ ಪ್ರದೇಶದಲ್ಲಿರುವ ಗುಹಾಂತರ್ಗತ ದೇಗುಲಗಳು ಕೆಂಪು ಶಿಲೆಗಳಿಂದ ನಿರ್ಮಿತವಾಗಿದ್ದು ನಯನ ಮನೋಹರವಾಗಿವೆ. ಆದರೆ ಈ ಕಲಾ ವೈಭವವನ್ನು ಕಣ್ತುಂಬಿಕೊಳ್ಳಲು ಮೆಟ್ಟಿಲುಗಳೇರಿ ಮೇಲೆ ಹೋಗುಬೇಕು ಅಷ್ಟೇ.

ಇತಿಹಾಸ: ಚಾಲುಕ್ಯರು ತಮ್ಮ ಸಾಮ್ರಾಜ್ಯವನ್ನು ಕಟ್ಟಿ, ಬಾದಾಮಿಯನ್ನು ರಾಜಧಾನಿಯನ್ನಾಗಿ ಮಾಡಿಕೊಳ್ಳುವ ಮೊದಲೇ ಇದು ಒಂದು ಪ್ರಸಿದ್ಧ ವಾಣಿಜ್ಯ ಕೇಂದ್ರವಾಗಿತ್ತು ಎಂಬುದು ಗ್ರೀಕ್ ಭೂಗೋಳಕಾರ ಟಾಲೆಮಿ ಉಲ್ಲೇಖದಿಂದ ತಿಳಿದುಬರುತ್ತದೆ. ಇದಕ್ಕೆ ಪೂರಕವಾಗಿ ಸರೋವರದ ಉತ್ತರ ಭಾಗದಲ್ಲಿ ಕಿ.ಪೂ. ೩ನೇ ಶತಮಾನಕ್ಕೆ ಸೇರಿದ ಮಣ್ಣಿನ ಪಾತ್ರೆಗಳು, ಕಟ್ಟಡ ಅವಶೇಷಗಳು ದೊರೆತಿವೆ.

ಬಾಗಲಕೋಟೆಯಿಂದ 35 ಕಿ.ಮೀ. ದೂರದಲ್ಲಿರುವ ಬಾದಾಮಿಯ ಮಾಲಗಿತ್ತಿ ದೇವಾಲಯ, ಶಿವಾಲಯ ಹಾಗೂ ಮೇಣಬಸದಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಎರಡು ಬಳಪದ ಕಲ್ಲಿನ ಬೆಟ್ಟಗಳ ನಡುವಿನ ಕಂದಕಗಳ ನಡುವೆ ಇರುವ ಬಾದಾಮಿಯಲ್ಲಿ ಶೈವ ಗುಹಾಲಯ, ವೈಷ್ಣವ ಗುಹಾಲಯ, ವಿಷ್ಣುಗುಹೆ ಹಾಗೂ ಜೈನಗುಹೆಗಳು ತುಂಬಾ ಪ್ರಸಿದ್ಧವಾಗಿವೆ. ವಿವಿಧ ನೃತ್ಯಭಂಗಿಯಲ್ಲಿರುವ ಶಿಲ್ಪಕಲಾ ಕೆತ್ತನೆಗಳು ಮನಸೆಳೆಯುತ್ತವೆ. ಮೇಣಬಸದಿಯಲ್ಲಿ ನಾಲ್ಕು ಲಯಣಗಳಿದ್ದು, ಒಂದನೆ ಲಯಣದಲ್ಲಿರುವ ಅರ್ಧನಾರೀಶ್ವರ, ಚಾವಣಿಯ ಗಂಧರ್ವ ದಂಪತಿ, ಎರಡನೇ ಲಯಣದ ಚಾವಣಿಯ ಅಲಂಕರಣ, ಮೂರನೇ ಲಯಣದ ಶೇಷಶಾಯಿ ವಿಷ್ಣು ಪ್ರಮುಖವಾದ ಶಿಲ್ಪಗಳು. ಶೇಷಶಾಯಿ ವಿಷ್ಣುವನ್ನು ಪಾರ್ಶ್ವನಾಥನ ವಿಗ್ರಹ ಎಂದೂ ಸಂಶೋಧಕರು ಹೇಳುತ್ತಾರೆ. ಕಲ್ಲನ್ನು ಕೊರೆದು ನಿರ್ಮಿಸಿದ ಬೃಹತ್ ಶಿವಲಿಂಗ... ಹೀಗೆ ಹಲವು ಮನೋಹರ ಕೆತ್ತನೆಗಳು ಈ ಗುಹಾಲಯಗಳಲ್ಲಿವೆ. ವೈಷ್ಣವ ಲಯಣದ ಮಧ್ಯೆ ನೈಸರ್ಗಿಕ ಗುಹೆಯೂ ಇದೆ. ಇಲ್ಲಿ ಬೋಸತ್ವ, ಪದ್ಮಪಾಣಿಯ ಉಬ್ಬುಶಿಲ್ಪಗಳಿವೆ. ಮೂರನೇ ಲಯಣದಲ್ಲಿ ವಿಷ್ಣು, ಭೂವರಹ, ನರಸಿಂಹ, ಹರಿಹರ, ಬ್ರಹ್ಮ, ವಿಷ್ಣು, ಶಿವ, ಸಮುದ್ರ ಮಥನ, ಕೃಷ್ಣಲೀಲೆ ಮೊದಲಾದ ಚಿತ್ರ ಪಟ್ಟಿಕೆಗಳು ಪುರಾಣದ ಕಥೆಗಳನ್ನೇ ಹೇಳುತ್ತಾ ನಿಂತಿವೆ.

ಸಾಲು ಭಂಜಿಕೆಗಳಿಂದ ರಮಣೀಯವಾಗಿರುವ ದೇವಾಲಯಗಳ 3ನೇ ಗುಹೆಯಲ್ಲಿರುವ ವಹಾವಿಷ್ಣುವಿನ ವಿಗ್ರಹ ಅತ್ಯಂತ ಮನೋಹರವಾದ ಬೃಹತ್ ಶಿಲ್ಪವಾದರೆ, ಮೊದಲ ಗುಹೆಯಲ್ಲಿರುವ 18 ಬಾಹುಗಳ ನಟರಾಜ ಶಿಲ್ಪ ನಯನ ಮನೋಹರವಾಗಿದೆ.

ಭೂತನಾಥನ ಕೆರೆ, ನದಿತಟದಲ್ಲಿರುವ ಶಿವ, ವಿಷ್ಣು ದೇವಾಲಯ, ಭೂತನಾಥನ ದೇವಾಲಯಗಳು ರುದ್ರ ರಮಣೀಯವಾಗಿವೆ. ಬದಾಮಿಯ ಉತ್ತರ ಬೆಟ್ಟದಲ್ಲಿ ಬಾವನ್ ಬಂಡೆ ಕೋಟೆ ಹಾಗೂ ದಕ್ಷಿಣದಲ್ಲಿ ರಣಮಂಡಲ ಕೋಟೆ ಇದೆ. ರಾಷ್ಟ್ರಕೂಟರು, ವಿಜಯನಗರದರಸರು ಮತ್ತು ಟಿಪ್ಪೂಸುಲ್ತಾನರ ಕಾಲದಲ್ಲಿ ಈ ಕೋಟೆ ವಿಸ್ತರಿಸಿದ ಎನ್ನುತ್ತದೆ ಇತಿಹಾಸ.ಕಲೋಪಾಸಕರಿಗೆ ರಮಣೀಯ ತಾಣವಾಗಿ, ಶಾಸನಾಧ್ಯಯನಿಗಳಿಗೆ ಆಕರವಾಗಿ, ಆಸ್ತಿಕರಿಗೆ ಪುಣ್ಯಕ್ಷೇತ್ರವಾಗಿರುವ ಬಾದಾಮಿ ಕರುನಾಡ ಇತಿಹಾಸದಲ್ಲಿ ಶ್ರೇಷ್ಠ ಸ್ಥಾನ ಪಡೆದಿದೆ. ಬೆಂಗಳೂರಿನಿಂದ ಬಾದಾಮಿಗೆ 420 ಕಿಲೋ ಮೀಟರ್.

ಐಹೊಳೆ

ಬಾದಾಮಿ ಚಾಳುಕ್ಯರ ಕಾಲದಲ್ಲಿ ವೈಭವೋಪೇತವಾಗಿ ಮೆರೆದ ಐಹೊಳೆ

ಭಾರತೀಯ ದೇವಾಲಯಗಳ ಪೈಕಿ ವಾಸ್ತು ಶಿಲ್ಪದ ತವರು ಎಂದೇ ಖ್ಯಾತವಾದ್ದು ಐಹೊಳೆ. ಬಾದಾಮಿ ಚಾಳುಕ್ಯರ ಕಾಲದಲ್ಲಿ ವೈಭವೋಪೇತವಾಗಿ ಮೆರೆದ ಈ ಗ್ರಾಮ ಇಂದು ವಿಶ್ವವಿಖ್ಯಾತವಾಗಲು ಇಲ್ಲಿನ ಕೋಟೆಯ ಒಳಗೆ ಹಾಗೂ ಹೊರಗೆ ಹರಡಿಕೊಂಡಿರುವ ಶಿಲ್ಪಕಲಾಶ್ರೀಮಂತಿಕೆಯ 125ಕ್ಕೂ ಹೆಚ್ಚು ಚಿಕ್ಕ ದೊಡ್ಡ ದೇವಾಲಯಗಳೇ ಕಾರಣ. ಹೀಗಾಗೆ ಈ ಊರನ್ನು ಹಿಂದೂ ದೇವಾಲಯಗಳ ವಾಸ್ತು ಶಿಲ್ಪದ ತೊಟ್ಟಿಲೆಂದೇ ಕರೆಯುತ್ತಾರೆ.

ಇತಿಹಾಸ: ಮಲಪ್ರಭಾ ನದಿಯ ಬಲದಂಡೆಯ ಮೇಲೆ ಪ್ರಶಾಂತವಾಗಿ ಮಲಗಿರುವಂತೆ ತೋರುವ ನಿಸರ್ಗ ರಮಣೀಯ ತಾಣಕ್ಕೆ ಹಿಂದೆ ಅಯ್ಯೋಹೊಳೆ ಎಂದು ಹೆಸರಿತ್ತಂತೆ. ಅಯ್ಯ ಅಥವಾ ಅಯ್ಯನೋರು ಎಂದರೆ ಗುರುಗಳು, ಪಂಡಿತರು ಎಂದು ಅರ್ಥ. ಈ ಊರು ವಿದ್ಯಾಕೇಂದ್ರವಾಗಿ ಅಯ್ಯಗಳಿಂದ ತುಂಬಿದ್ದ ಕಾರಣ ಇದಕ್ಕೆ ಆ ಹೆಸರು ಬಂದಿತ್ತೆಂಬ ವಾದವಿದೆ. ಮತ್ತೊಂದು ಕಥೆಯ ರೀತ್ಯ ಕ್ಷತ್ರಿಯರ ರುಂಡ ಚೆಂಡಾಡಿದ ಪರಶುರಾಮ ಮಲಪ್ರಭೆಯ ಹೊಳೆಯಲ್ಲಿ ತನ್ನ ಪರಶುವನ್ನು ತೊಳೆದಾಗ ಇಡೀ ನದಿ ನೀರು ಕೆಂಪಾಯಿತು. ಮುಂಜಾನೆ ಈ ನೀರು ಕಂಡ ಮಹಿಳೆಯರು ಅಯ್ಯಯ್ಯೋ ಹೊಳೆ ಎಂದು ಉದ್ಗರಿಸಿದರು. ಹೀಗಾಗೆ ಈ ಊರು ಐಹೊಳೆಯಾಯ್ತು.

ಐಹೊಳೆ ಅತ್ಯಂತ ಪ್ರಾಚೀನ ಗ್ರಾಮ. ಇಲ್ಲಿ ಕ್ರಿ.ಪೂ. 6-7ನೇನೇ ಶತಮಾನದಲ್ಲಿ ಅಂದರೆ ಕಬ್ಬಿಣದ ಯುಗದಲ್ಲೇ ಇಲ್ಲಿ ಜನವಸತಿ ಇತ್ತೆಂದು ಪ್ರಾಗೈತಿಹಾಸಿಕ ಸಂಶೋಧಕರು ಅಂದಾಜು ಮಾಡಿದ್ದಾರೆ. ಇಲ್ಲಿ ಉಸಗು ಕಲ್ಲಿನಿಂದ ಮತ್ತು ಕತ್ತರಿಸಿದ ಬಂಡೆಗಳನ್ನು ಗಾರೆ, ಮಣ್ಣಿನ ನೆರವಿಲ್ಲದೆ ಒಂದರ ಮೇಲೊಂದು ಇಟ್ಟು ನಿರ್ಮಿಸಿದ ಕೋಟೆಯಿದೆ. ಇದನ್ನು ಸುಮಾರು ಕ್ರಿ.ಶ. 6ನೇ ಶತಮಾನದಲ್ಲಿ ನಿರ್ಮಿಸಿರಬಹುದು ಎಂದು ಹೇಳಲಾಗಿದ್ದು ಕರ್ನಾಟಕದಲ್ಲಿ ಉಳಿದಿರುವ ಶಿಲಾಕೋಟೆಗಳ ಪೈಕಿ ಇದು ಅತ್ಯಂತ ಪ್ರಾಚೀನವಾದ್ದಾಗಿದೆ. ಕೋಟೆಯ ಸುತ್ತ ಕಂದಕ ಇರುವುದನ್ನು ಈಗಲೂ ಗುರುತಿಸಬಹುದಾಗಿದ್ದು, ಕೋಟೆಯ ಅವಶೇಷಗಳನ್ನು ಕಾಣಬಹುದು.

ವಾಸ್ತುಶಿಲ್ಪ: ಐಹೊಳೆಯ ಕೋಟೆಯನ್ನು ಉತ್ತರ ರಸ್ತೆಯಿಂದ ಪ್ರವೇಶಿಸುತ್ತಿದ್ದಂತೆಯೇ ಕಾಣುವ ಕ್ರಿಸ್ತ ಶಕ 5ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಸುಂದರ ಹಾಗೂ ಮನಮೋಹಕ ಕೆತ್ತನೆಗಳಿಂದ ಕಂಗೊಳಿಸುವ ದುರ್ಗೆಯ ಮಂದಿರ ಮನಸೆಳೆಯುತ್ತದೆ.

ದೇವಾಲಯದ ಮುಖಮಂಟಪದ ಭಿತ್ತಿಯ ಅಡ್ಡಪಟ್ಟಿಕೆಗಳಲ್ಲಿ ರಾಮಲಕ್ಷ್ಮಣ ಸೀತಾಮಾತೆಯನ್ನು ಗುಹ -ನಾವೆಯ ನೆರವಿನಿಂದ ನದಿ ದಾಟಿಸಿದ ಸುಂದರ ಉಬ್ಬುಶಿಲ್ಪವಿದೆ. ಪುರಾಣ, ಪುಣ್ಯಕಥೆಗಳ ಹಲವು ಕಥಾನಕಗಳು ಇಲ್ಲಿವೆ.

ಐಹೊಳೆಯ ದೇವಾಲಯಗಳನ್ನು ಪುರಾತತ್ವ ಸರ್ವೇಕ್ಷಣ ಇಲಾಖೆ 22 ವಿಭಾಗಳಾಗಿ ವಿಂಗಡಿಸಿದೆ. ಇದರಲ್ಲಿ ಹುಚ್ಚಿಮಲ್ಲಿಗುಡಿ, ಲಡಖಾನ್ ಗುಡಿ, ಹುಚ್ಚಪ್ಪಯ್ಯಮಠ, ಗಳಗನಾಥ, ರಾವಲ್ ಪಹಡಿ, ಗುಹಾಂತರ ದೇವಾಲಯ, ಜೈನರ ಮೇಗುತಿ ದೇವಾಲಯ, ಎರಡು ಅಂತಸ್ತಿನ ಜೈನ ದೇವಾಲಯ ಪ್ರಮುಖ ಆಕರ್ಷಣೆ.

ಬೆಂಗಳೂರಿನಿಂದ 460, ಬಿಜಾಪುರದಿಂದ 110 ಹಾಗೂ ಬಾದಾಮಿಯಿಂದ 40 ಕಿ.ಮೀಟರ್ ದೂರದಲ್ಲಿರುವ ಈ ಸುಂದರ ತಾಣ ಕರುನಾಡ ಕಲಾಶ್ರೀಮಂತಿಕೆಗೆ ಸಾಕ್ಷಿಯಾಗಿದೆ.

ತಾತ್ಯಾ ಟೋಪೆ

ರಾಮಚಂದ್ರ ಪಾಂಡುರಂಗ ಟೋಪೆ (೧೮೧೪ – ಏಪ್ರಿಲ್ ೧೮, ೧೮೫೯) ತಾತ್ಯಾ ಟೋಪೆ ಎಂಬ ಹೆಸರಿನಿಂದ ಪ್ರಖ್ಯಾತರಾಗಿದ್ದು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷ್ ಸೇನೆಯ ವಿರುದ್ಧ ಹೋರಾಡಿದ ಮಹಾನ್ ಸೇನಾನಿ.

ದಾಸ್ತಾನು ಮಳಿಗೆಗಳು

ವಸ್ತುಗಳನ್ನು ಭವಿಷ್ಯದಲ್ಲಿ ಉಪಯೋಗಿಸಲು ಕೂಡಿಸುವುದು ಮನುಷ್ಯನ ಪ್ರವೃತ್ತಿ . ಇದು ಅನಾದಿಕಾಲದಿಂದಲೂ ನಡೆದು ಬಂದಿದೆ. ವಸ್ತುಗಳು ಹೆಚ್ಚಾಗಿ ದೊರೆತಾಗ ಅದನ್ನು ಸಂಗ್ರಹಿಸಿ, ಸಿಗದೇ ಹೋದಾಗ ಬಳಸುವ ಕಾರ್ಯ ಅಂದರೆ ಕೂಡಿಸಿಡುವ ಕೆಲಸ ಒಂದು ಪ್ರಮುಖ ಮಾರಾಟ ಪ್ರಕ್ರಿಯೆ ಆಗಿದೆ. ಇದಕ್ಕೆ ಹೆಚ್ಚು ಬಂಡವಾಳ ಸಹ ಬೇಕಾಗುತ್ತದೆ ಅಲ್ಲದೇ ಮಾನವ ಶಕ್ತಿಯೂ ಬೇಕಾಗುತ್ತದೆ. ಮಾರಾಟ ತೀರ್ಮಾನ ಶೀಲತೆಯಲ್ಲಿ ಸಂಗ್ರಹಣೆ ಒಂದು ಮುಖ್ಯ ಅಂಶ. ವಸ್ತುವನ್ನು ತೊಂದರೆಗೆ ಈಡಾಗದಂತೆ ಕಾಪಾಡುವುದು ಅಥವಾ ಹಾಳಾಗದಂತೆ ನೋಡಿಕೊಳ್ಳುವುದು ಒಂದು ಆಸ್ತಿಯನ್ನು ಕೊಂಡಂತಾಗುತ್ತದೆ. ಈ ಕಾರ್ಯ ವಸ್ತುವಿಗೆ 'ಸಮಯ ತುಷ್ಟಿಗುಣ'ವನ್ನು ಕೊಡುತ್ತದೆ. ವಸ್ತುಗಳು ಸಮಯಕ್ಕೆ ಸರಿಯಾಗಿ ಗ್ರಾಹಕರಿಗೆ ತಲಪಿದಾಗ ಮಾತ್ರ ಉತ್ಪಾದನೆಗೆ ಒಂದು ಅರ್ಥ ಬರುತ್ತದೆ. ಸಾಗಣೆ ಮತ್ತು ಶೇಖರಣೆ ಒಂದಕ್ಕೊಂದು ಪೂರಕ ಕಾರ್ಯಗಳು. ಶೇಖರಣೆಯಾಗದೆ ಸಾಗಾಣಿಕೆ ಸಾಧ್ಯವಿಲ್ಲ. ಈ ದೃಷ್ಟಿಯಿಂದ ಇವೆರಡು ಕಾರ್ಯಗಳನ್ನು ಭೌತಿಕ ಕಾರ್ಯವನ್ನಾಗಿ ವಿಂಗಡಿಸಿದೆ. ಭೌಗೋಳಿಕ ಮತ್ತಿತ್ತರ ಕಾರಣಗಳಿಂದಾಗಿ,ವಸ್ತು ಉತ್ಪಾದನಾ ಕೇಂದ್ರ, ಮಾರಟ ಕೇಂದ್ರಗಳಿಂದ ದೂರವಾಗಿರುತ್ತವೆ. ಆದುದರಿಂದ ಉತ್ಪನ್ನಗಳು ಬೇಗ ಮಾರಾಟ ಕೇಂದ್ರಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ. ಸಾಗಣೆ ಮತ್ತು ಶೇಖರಣೆ ಕಾರ್ಯ ಇದನ್ನು ನಿವಾರಿಸುತ್ತದೆ. ಈ ಕಾರ್ಯಗಳು ವಸ್ತುವಿಗೆ ಸಮಯ ಮತ್ತು ಸ್ಥಳ ತುಷ್ಟಿಗುಣವನ್ನು ತರುವುದರಿಂದ, ಇವು ಮಾರಾಟ ಪ್ರಕ್ರಿಯೆಯಲ್ಲಿ ಪ್ರಮುಖವಾಗಿವೆ. ವಸ್ತು ನಿರಂತರವಾಗಿ ಸರಬರಾಜಾಗಲು ಸಹ ಶೇಖರಣೆ ಕಾರ್ಯ ಸಹಾಯಕ. ಗ್ರಾಹಕ ಆಧಾರಿತ ಮಾರುಕಟ್ಟೆಯಲ್ಲಿ, ಬೇಡಿಕೆಯನ್ನು ನಿರೀಕ್ಷಿಸಿ ಉತ್ಪಾದನೆ ನಡೆಯುತ್ತದೆ. ಆದುದರಿಂದ ಮಾರಾಟ ಪ್ರಕ್ರಿಯೆಯಲ್ಲಿ ಒಂದಲ್ಲ ಒಂದು ಜಾಗದಲ್ಲಿ ವಸ್ತು ಶೇಖರಣೆ ಆಗಲೇ ಬೇಕು. ಜಾಹೀರಾತು ಮತ್ತು ಸಾಗಣೆ ವಸ್ತುವಿಗೆ ಮಾರುಕಟ್ಟೆಯನ್ನು ವಿಸ್ತರಿಸಿದರೆ, ಶೇಖರಣೆ ಆಳವಾಗಿರುತ್ತದೆ.

ಬಿ.ಸಿ.ರಾಮಚಂದ್ರ ಶರ್ಮ

ಬಿ.ಸಿ. ರಾಮಚಂದ್ರ ಶರ್ಮ (ನವೆಂಬರ್ ೨೮, ೧೯೨೫ - ಏಪ್ರಿಲ್ ೧೮. [[೨೦೦೫}} ಆಧುನಿಕ ಕನ್ನಡ ಕಾವ್ಯಚರಿತ್ರೆಯಲ್ಲಿ ಪ್ರಮುಖ ಹೆಸರಾದವರು ಗೋಪಾಲಕೃಷ್ಣ ಅಡಿಗರು ಹೊಸ ಬಗೆಯಲ್ಲಿ ಬರೆಯಲು ಆರಂಭಿಸಿದ ಸರಿಸುಮಾರಿನಲ್ಲೇ ಅವರ ಸಮಕಾಲೀನರಾಗಿ ಬರೆಯಲು ತೊಡಗಿದ ಶರ್ಮರು ಅಡಿಗರಿಗಿಂತ ಭಿನ್ನವಾಗಿ ನವ್ಯಕಾವ್ಯ ಮಾರ್ಗವನ್ನು ರೂಪಿಸಲು ಪ್ರಯತ್ನಿಸಿದ ಕವಿ. ಸುಮಾರು ಆರು ದಶಕಗಳ ಕಾಲ ಕಾವ್ಯ ರಚನೆಯಲ್ಲಿ ತಮ್ಮನ್ನು ಇಡಿಯಾಗಿ ತೊಡಗಿಸಿಕೊಂಡ ಶರ್ಮರದು ಕಾವ್ಯದ ಬಗೆಗೆ ಶಬರಿಶ್ರದ್ಧೆಯ ಅತೀವ ನಿಷ್ಠೆ; ಅನೇಕ ಆಕರ್ಷಣೆ, ಆಮಿಷಗಳ ನಡುವೆಯೂ ಅವರು ಕಾವ್ಯದ ಶುದ್ಧರೂಪಕ್ಕೆ ಒಲಿದಂಥವರು.

ಮುಖಾಮುಖಿ ಕೂತರೂ ನೇರ

ಹಾಯದ ದೃಷ್ಟಿಗಳ ಪದಕದ ತಳಕ್ಕೆ ನಾಚಿ

ಕಪ್ಪು ಪುಕ್ಕಲೆದೆ ಹೊರಕ್ಕೆಳೆದು ತರುವಾತರ,

ನಿಲ್ಲದೇ ನಡೆದ ಯುದ್ಧ ರಾಜಿಗೆ

ನಿಲ್ಲದೇ ನಡೆದ ಮಾತುಕತೆ, ಪ್ರತಿರಾತ್ರಿ ಕನಸಿಗೆ ಬಂದು

ಚಂದದಾಸೆ, ಮೋಹಿನಿಯಾಗಿ, ಗೆಲ್ಲದೇ ಹೋದ

ಕೇಸಾಗಿ, ಮಾತಿಗೆಟುಕದೆ ನಿಂತೊಂದು

ಕಲ್ಪನೆಯಾಗಿ, ಕಾಡುವಾಗಲೂ ಅನುಮಾನ;

ಸಮರಸದ ಸ್ಥಿತಿ ಮರಣ; ಸಮರಸವೇ ಜೀವನ.

ಈ ‘ಸಮರ’, ‘ಈ ಮುಖಾಮುಖಿ’ – ಶರ್ಮರ ಕಾವ್ಯಶಕ್ತಿ.

ಭಾರತದ ಜಲ ಮಾಲಿನ್ಯ

ಭಾರತ ದೇಶವು ಜಲಮಾಲಿನ್ಯದ ಬಹುದೊಡ್ಡ ಸಮಸ್ಯೆಯನ್ನು ಹೊಂದಿದೆ ಎಂದು ಗುರುತಿಸಲ್ಪಡುತ್ತಿದೆ. ಇದಕ್ಕೆ ಪ್ರಬಲ ಕಾರಣವು ಒಳಚರಂಡಿ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸದಿರುವುದೇ ಆಗಿದೆ, ಭಾರಿ ಜನಸಂಖ್ಯೆಯ ಪ್ರದೇಶಗಳ ಮೂಲಕ ಹರಿಯುತ್ತಿರುವ ಗಂಗಾ, ಯಮುನಾ, ಇಂತಹ ನದಿಗಳು ಮಲಿನಗೊಂಡಿವೆ.

ಮಂಗಲ್ ಪಾಂಡೆ

ಮಂಗಳ ಪಾಂಡೆ (ದಿ. 8 ಎಪ್ರಿಲ್ 1857) ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮ ಎಂದೇ ಪ್ರಖ್ಯಾತರು. ಈಸ್ಟ್ ಇಂಡಿಯಾ ಕಂಪನಿ ಯ ಬ್ರಿಟಿಷರ ಸೈನ್ಯದಲ್ಲಿ ಸಿಪಾಯಿಯಾಗಿದ್ದರು. 1857ರಲ್ಲಿ ಬ್ರಿಟಿಷರ ಮೇಲೆ ಮಾಡಿದ ಆಕ್ರಮಣವು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ರೂಪವನ್ನು ಪಡೆಯಿತು.ಅವರು ವ್ಯಾಪಕವಾಗಿ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರರು ಎಂದು ಕರೆಯಲಾಗುತ್ತದೆ. ಭಾರತ ಸರ್ಕಾರ ವಿಶಿಷ್ಠ ಸ್ವಾತಂತ್ರ್ಯ ಹೋರಾಟಗಾರ ಎಂದು ಸ್ಮರಣೆಗಾಗಿ ಭಾರತೀಯ ಅಂಚೆ ಚೀಟಿಯ ಜಾರಿ ಮಾಡಿದೆ. ಮೀರಿದ ಅವರ ಜೀವನ ಮತ್ತು ಕ್ರಿಯೆಗಳನ್ನು ಬೆಳ್ಳಿ ತೆರೆಗೆ ಮಾರ್ಪಡಿಸಲಾಗಿದೆ.

ಮಲ್ಲಿಕಾರ್ಜುನ ಬಂಡೆ

ಆಳಂದ ತಾಲುಕಿನ ಖಜೂರಿನಲ್ಲಿ ಜನಿಸಿದರು. ಜೊತೆಗೆ ಬಡತನವೆ ಅವರ ಬೆನ್ನಿಗೆ ಬಿದ್ದಿತ್ತು. ಹುಟ್ಟಿದ ಆರೇಳು ವರ್ಷಕ್ಕೆ ಬಂಡೆ ತಾಯಿ ಕಲಾವತಿ ತೀರಿ ಹೋದರು. ಹೀಗಾಗಿ ಮಲ್ಲಿಕಾರ್ಜುನ ಅವರಿಗೆ ತಾಯಿ ಪ್ರೀತಿ ಸಿಗಲಿಲ್ಲ. ತಾಯಿ ಪ್ರೀತಿ ಸಿಗದೆ ಹೋದರು ತಂದೆ ಪ್ರೀತಿಯಲ್ಲಿ ಮಿಂದೆಂದ್ದರು. ಆದರೆ,ಈ ಭಾಗ್ಯ ಅವರ ಇಬ್ಬರು ಮಕ್ಕಳಾದ ಶಿವಾನಿ ಮತ್ತು ಸಾಯಿದರ್ಶನಿಗೆ ಸಿಗಲಿಲ್ಲ.

ಅವರಿಬ್ಬರಿಗೂ ಬುದ್ದಿ ಬರುವ ಹೊತ್ತಿಗೆ ತಂದೆ ತೀರಿಕೊಂಡಿದ್ದು ತಂದೆ ಪ್ರೀತಿಯಿಂದ ಮಕ್ಕಳು ವಂಚಿತರಾಗಿದ್ದಾರೆ. ಇದು ವಿಧಿಯಾಟವೇ ಅಲ್ಲದೆ ಮತ್ತೇನು? ಎಂದು ಆತನ ಸ್ನೇಹಿತರು,ಒಡನಾಡಿಗಳು ನೋವಿನಿಂದ ಗೋಳಿಟ್ಟರು. ಜೀವನದಲ್ಲಿ ಎನಾದರು ಸಾಧಿಸಬೇಕು ಎಂಬ ಅದಮ್ಯ ಉತ್ಸಾಹ, ಭಂಡ ಧೈರ್ಯ ಅವನಲ್ಲಿತ್ತು. ವಿದ್ಯಾರ್ಥಿ ಜೀವನದ ಸಂಪೂರ್ಣ ಅರಿವಿದ್ದ ಬಂಡೆ ಲೈಬ್ರರಿ ಮುಚ್ಛುವವರೆಗೆ ಓದುತ್ತಿದ್ದ .ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಎತ್ತಿದ ಕೈ. ಮೇಳಕುಂದಿ ಗುರುಗಳೇ ನಮಗೆಲ್ಲ ರೋಲ್ ಮಾಡಲ್. ಜೀವಕ್ಕೆ ಜೀವ ಕೊಡುವ ಸ್ನೇಹಿತ. ಧೈರ್ಯಂ ಸರ್ವತ್ರ ಸಾಧನಂ ಎಂದು ತಿಳಿದುಕೊಂಡಿದ್ದ ಈ ಉತ್ಸಾಹಿಗೆ ತನ್ನ ಭಂಡ ಧೈರ್ಯವೇ ಮುಳುವಾಗುತ್ತೆ ಅಂತ ಅನಿಸಿರಲಿಲ್ಲ.

ಮಲ್ಲಿಕಾರ್ಜುನ ಬಂಡೆ ಕಾಲೇಜುಗಳಲ್ಲಿ ನಡೆಯುತ್ತಿದ್ದ ಮೂಕಾಭಿನಯ, ಚರ್ಚಾ ಸ್ಪರ್ದೆ,ನಾಟಕ ಸೇರಿದಂತೆ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಎತ್ತಿದ ಕೈ.ಈ ಕಾರ್ಯಕ್ರಮಗಳು ಮತ್ತು ಆಗ ಪ್ರಾಂಶುಪಾಲರಾಗಿದ್ದ ಎಸ್.ಜಿ.ಮೇಳಕುಂದಿ ಅವರ ನಡೆ ಬಂಡೆ ಅವರಲ್ಲಿ ನಾಯಕತ್ವ ಗುಣಗಳು ಬೆಳೆಯಲು ಸಹಕಾರಿಯಾಗಿತ್ತು ಎಂದು ನೆನಪಿಸಿಕೊಳ್ಳುತ್ತಾರೆ ಸ್ನೇಹಿತರು. ೧೯೯೨ ಆಗ ದೇಶದಲ್ಲಿ ರಾಮಜನ್ಮಭೂಮಿ ಗಲಾಟೆ. ಈ ಸಂದರ್ಭದಲ್ಲಿ ಗುಲ್ಬರ್ಗಾ ವಿವಿಯ ಯುವಜನೋತ್ಸವದಲ್ಲಿ ಏಕತೆ ಸಂದೇಶ ಸಾರುವ ನಾಟಕವನ್ನು ಎಸ್.ಬಿ.ಕಾಲೇಜಿನಿಂದ ಪ್ರದರ್ಶಿಸಲಾಗಿತ್ತು. ಬಂಡೆ ಸರ್ದಾರ್ಜೀ ಪಾತ್ರದಲ್ಲಿ ಮಿಂಚಿದ್ದರು. ಚರ್ಚಾ ವಿಶಯಗಳಲ್ಲಿ ಯಾವಾಗಲು ಅವರದ್ದೇ ಪಾರಮ್ಯ, ಎಂದು ಸ್ಮರಿಸುತ್ತಾರೆ ಸ್ನೇಹಿತ ಉಪನ್ಯಾಸಕ ಶರಣಗೌಡ.ವಿವಿದೆಡೆ ನಡೆಯುವ ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಚರ್ಚಾ,ಪ್ರಬಂಧ ಸ್ಪರ್ದೆಗಳಲ್ಲಿ ಮಾತ್ರ ಮಿಂಚುತ್ತಿದ್ದ ಎಸ್.ಬಿ.ಕಾಲೇಜು, ನಮ್ಮ ತಂಡದಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಮಿಂಚುವಂತಾಯಿತು. ಅದು ಇಂದಿಗೂ ಮುಂದುವರೆದಿದೆ. ಇದಕ್ಕೆ ಬಂಡೆ ನೇತೃತ್ವದ ನಮ್ಮ ಸ್ನೇಹಿತರ ಗುಂಪು ಕಾರಣ, ಎಂದು ಗೆಳೆಯರು ತಮ್ಮ ಅನಿಸಿಕೆಗಳನ್ನು ಬಿಚ್ಚಿಟ್ಟರು.

ಯುತಿ (ಖಗೋಳಶಾಸ್ತ್ರ)

ಯುತಿ - ಇದು ಸ್ಥಾನಿಕ ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯದಲ್ಲಿ ಉಪಯೋಗಿಸಲಾಗುವ ಒಂದು ಪದ. ಇದರರ್ಥವೇನೆಂದರೆ, ಒಂದು ನಿಗದಿತ ಸ್ಥಳದಿಂದ (ಸಾಮಾನ್ಯವಾಗಿ ಭೂಮಿಯಿಂದ) ನೋಡಿದಾಗ, ಎರಡು ಆಕಾಶಕಾಯಗಳು ಆಗಸದಲ್ಲಿ ಪರಸ್ಪರ ಒಂದರ ನಿಕಟದಲ್ಲಿ ಇನ್ನೊಂದು ಇರುವಂತೆ ಕಾಣುವುದು.

ಖಗೋಳಶಾಸ್ತ್ರದಲ್ಲಿ ಮತ್ತು ಜ್ಯೋತಿಷ್ಯದಲ್ಲಿ ಯುತಿಯನ್ನು ಈ ಚಿಹ್ನೆಯಿಂದ ತೋರಿಸಲಾಗುತ್ತದೆ.

ವಸುಮತಿ ಉಡುಪ

ವಸುಮತಿ ಉಡುಪ (ಏಪ್ರಿಲ್ ೧೮, ೧೯೪೮) ಕನ್ನಡದ ಪ್ರಸಿದ್ಧ ಕಥೆಗಾರ್ತಿಯರಲ್ಲಿ ಒಬ್ಬರೆನಿಸಿದ್ದಾರೆ

ಸುಪರ್ ಮಾನ್

ಸುಪರ್ ಮಾನ್ ಒಂದು ಕಾಲ್ಪನಿಕ ಪಾತ್ರ. ಈ ಪಾತ್ರವನ್ನು ಕಾಮಿಕ್ ಪುಸ್ತಕಗಳಲ್ಲಿ ಕಾಣಬಹುದು. ಇದನ್ನು ದಿ.ಸಿ (DC) ಕಾಮಿಕ್ಸ್ ಪ್ರಕಟಿಸಿದೆ. ಸುಪರ್ ಮಾನ ಯಂಬ ಪಾತ್ರವನ್ನು ರಚಿಸಿದ್ದು ಜೆರ್ರಿ ಸೈಗಲ್ ಮತ್ತು ಜೋ ಶುಸ್ಟರ್. ಸುಪೆರ್ ಮಾನ್ ಕಾಣಿಸಿಕೊಳ್ಳೂವುದು ವಿಶಿಷ್ಟ ಮತ್ತು ಸಾಂಪ್ರದಾಯಿಕವಾದ್ದದ್ದು. ಸುಪರ್ ಮಾನ್ ಸಾಮಾನ್ಯವಾಗಿ ನೀಲಿ ವಸ್ತ್ರವನ್ನು ಧರಿಸುತ್ತಾನೆ ಮತ್ತು ಗುರಾಣಿಯನ್ನು ಕೂಡ ಧರಿಸುತ್ತಾನೆ. ಈ ಗುರಾಣಿಯು ಬಹಳ ಪ್ರಬಲವಾದ್ದದ್ದು.

ಸುಪರ್ ಮಾನ್ನ ಮೂಲ ಕಥೆ ಸೂಚಿಸುವುದು ಯೆನೆಂದರೆ, ಇವರು "ಕಲ್-ಎಲ್" ಎಂಬ ಹೆಸರಿನಲ್ಲಿ "ಕ್ರಿಪ್ಟನ್" ಎಂಬ ಗ್ರಹದಲ್ಲಿ ಜನಿಸಿದರು. ಚಿಕ್ಕ್ ವಯ್ಯಸ್ಸಿನಲ್ಲಿ ಇವನ ತಂದೆ ರಾಕೆಟನಲ್ಲಿ ಇವನನ್ನು ಬೂಮಿಗೆ ಕಳುಹಿಸಿದರು. ಇವನ್ನನ್ನು ಒಂದು ಕಾನ್ಸಾಸ್ ರೈತ ಮತ್ತು ಅವನ ಹೆಂಡತಿ ಅಳವಡಿಸಿಕೊಂಡಿದರು. ಮಗುವಿನಲ್ಲಿ ಇವನಿಗೆ "ಕ್ಲಾರ್ಕ್ ಕೆಂಟ್" ಎಂಬ ಹೆಸರನ್ನು ಇವನ ಕಾನ್ಸಾಸಿನ ತಂದೆ-ತಾಯಿ ನೀಡುತ್ತಾರೆ. ಚಿಕ್ಕ್ ವಯ್ಯಸ್ಸಿನಲ್ಲಿಯೆ ಅದ್ಬುತವಾದ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಆರಂಭಿಸಿದರು. ಈ ತಾಲಂತು ಮತ್ತು ಅದಿಕಾರವನ್ನು ಮಾನವನ ಉಪಯೊಗಕ್ಕೆ ಮತ್ತು ಅನುಕೂಲಕ್ಕೆ ಬಳಸಿದರು. ಸುಪರ್ ಮಾನ್, ಇವನ್ನನ್ನು "ದ ಮಾನ್ ಆಫ್ ಸ್ಟೀಲ್" ಎಂದು ಕರೆಯುತ್ತಾರೆ.

ಶಕ್ತಿಗಳು ಮತ್ತು ಸಾಮರ್ಥ್ಯಗಳು: ಸುಪರ್ಮಾನ್ ಅಸಾಮಾನ್ಯ ಶಕ್ತಿಗಳನ್ನು ಹೊಂದ್ದಿದ್ದಾನೆ. ಅವನು ಗುಂಡುಗಿಂತಲು ವೇಗವಾಗಿ ಹೊಗಲು ಸಾದ್ಯ. ಅವನು ಚಲನಗಿಂತ ಶಕ್ತಿಉಳ್ಳವನಾಗಿದ್ದನು. ಅವನಿಗೆ ಒಂದು ನಿರ್ಬಂಧಿತದಲ್ಲಿ ಎತ್ತರದ ಕಟ್ಟಡಗಳನ್ನು ಜಿಗಿಯಲು ಸಾಧ್ಯವಾಗುತ್ತದೆ. ಅವನಿಗೆ ಹಾರಾಟದ ಶಕ್ತಿ, ಸಾಮಾನ್ಯ ಮನುಶ್ಯಕಿಂತ ಬಯಂಕರ ಶಕ್ತಿ, ಅವನಿಗೆ ಅಲ್ಲದ ಮಾಂತ್ರಿಕ ದಾಳಿಗೆ ಅವೇಧನೀಯತೆ ಕೂಡ ನಾವು ಕಾಣ ಬಹುದು. ಇದಲ್ಲದೆ ಅವನ ದೃಷ್ಟಿಯಲ್ಲಿ ಕೂಡ ಅನೆಕ ಶಕ್ತಿಗಳು ಇತ್ತು - ಎಕ್ಸರೆ, ಶಾಖ-ಎಮಿಟಿಂಗ್, ಅವರೋಹಿತ, ಮತ್ತು ಸೂಕ್ಷ್ಮ ದೃಷ್ಟಿ.

ಸಾಂಸ್ಕೃತಿಕ ಪ್ರಭಾವ:ಸುಪರ್ ಮಾನ್ - ಈ ಕಾಲ್ಪನಿಕ ಪಾತ್ರವನ್ನು "ಅಮೆರಿಕನ್ ಸಾಂಸ್ಕೃತಿಕ ಐಕಾನ್" ಎಂದು ಹೀಳಬಹುದು. ಈ ಪಾತ್ರ ಮೊದಲ ಕಾಮಿಕ್ ಪುಸ್ತಕದ ಸೂಪರ್ ಹೀರೋ. ಅನೇಕರಿಗೆ, ಉದಾ : ಸಂಗೀತಗಾರರು, ಹಾಸ್ಯಗಾರರು, ಮತ್ತು ಬರಹಗಾರರಿಗೆ ಈ ಪಾತ್ರವು ಒಂದು ಸ್ಫೂರ್ತಿಯಾದಿ ಕಾಣಿಸುತ್ತದೆ. ಹಾಗೆಯೆ, ಮಾತನಾಡಬೆಕಾದರೆ ಕೂಡ "ನೀನೆನು ಸುಪರ್ ಮಾನ್ ಏನು?" ಎಂಬ ನುಡಿಗಟ್ಟುಗಳನ್ನು ನಾವು ಉಪಯೂಗಿಸುತ್ತೆವೆ. ಹೀಗೆ, ಪಾತ್ರದ ಸಾಂಸ್ಕೃತಿಕ ಪ್ರಭಾವ ಹೆಚ್ಚು.

ಸುಪರ್ ಮಾನ್ ಅವನ ರಹಸ್ಯ ಗುರುತಿನಲ್ಲಿ ವರದಿಗಾರನಾಗಿ "ಡೈಲಿ ಪ್ಲಾನೆಟ್" ಎಂಬ ಸಂಘಟನೆಯಲ್ಲಿ ಕೆಲಸಮಾಡುತ್ತಾನೆ.

ಅವನು ಅಮೆರಿಕನ್ ನಗರ "ಮೆತ್ರೊಪೊಲಿಸ್"ನಲ್ಲಿ ವಾಸಿಸುತ್ತಾನೆ. ಇದು ಒಂದು ಕಾಲ್ಪನಿಕ ನಗರ. ಇಲ್ಲಿಯೆ ತನು ಪ್ರೀತಿಸುವ ಹುಡುಗಿ "ಲೋಯಿಸ್ ಲೆನ್"ನನ್ನು ಮೊದಲು ಸಂದಿಸುವುದು. ಸಹೋದ್ಯೋಗಿಗಳಾದ "ಪೆರಿ ವ್ಯಟ" ಮತ್ತು "ಜಿಮ್ಮಿ ಓಲ್ಸೆನ್"ನನ್ನು ಕೂಡ ಇಲ್ಲಿಯೆ ಸಂದಿಸುತ್ತಾರೆ. ತನ್ನ ಮಹಾನ್ ಶತ್ರು- ಅತಿ ಭುದ್ದಿವಂತನಾದ ಸೂಪರ್ ವಿಲ್ಲನ್ "ಲೆಕ್ಸ್ ಲೂಥರ್".

ಸುಪರ್ ಮಾನ್ ಎಂಬ ಹೆಸರು ಕ್ಲಾರ್ಕ್ ಕೆಂಟ್ಗೆ ಲೋಯಿಸ್ ಲೆನ್ ನೀಡುತ್ತಾರೆ. ಕ್ಲಾರ್ಕ್ ತನ್ನ ಶಕ್ತಿಗಳನ್ನು ಜನರ ಉಪಯೋಗಕ್ಕಾಗಿ ಬಳಸುತ್ತಾರೆ. ಜನರಿಗೆ ಆಪತ್ತು ಬಂದಾಗ ಮಾತ್ರ ತನ್ನ "ಸುಪರ್ ಮಾನ್" ವೇಶವನ್ನು ಧರಿಸುತ್ತಾನೆ. ಯಾವ ಆಪತ್ತು ಇಲ್ಲದಿದ್ದರೆ ಸಾಮಾನ್ಯ ಮನುಷ್ಯನ ಹಾಗೆ ರಿಪೊರ್ಟರಿನ ಕೆಲಸವನ್ನು ಮಾಡುತ್ತಾನೆ.

ಸೂಪರ್ಮ್ಯಾನ್ ಸಾಂಪ್ರದಾಯಿಕ ನೈತಿಕ ಮೌಲ್ಯಗಳನ್ನು ವಾಸಿಸುತ್ತಾನೆ. ಇದನ್ನು ತನ್ನ ತಂದೆ-ತಾಯಿನಿಂದ ಕಲಿತುಕೊಳ್ಳುತ್ತಾನೆ. ಸುಪರ್ ಮಾನ್ ಆದರ್ಶನಾಗಿದ್ದಾನೆ. ಅವನು ಸತ್ಯ, ನ್ಯಾಯ ಪ್ರಚಾರ ಮಾಡುವವನಾದಿದ್ದನು. ಅವನು(ಸುಪರ್ ಮಾನ್) ನಿಜವಾದ ನಾಯಕ(ಸುಪರ್ ಹೀರೊ) ಎಂದು ಮತ್ತೆ ಮತ್ತೆ ಸಾಬೀತಪಡಿಸಿದರು. ಉತ್ತಮ ಶೌರ್ಯವನ್ನು ತೊರಿಸಿ ಜನರನ್ನು ಎಲ್ಲ

ಆಪತ್ತುಗಳಿಂದ ಕಾಪಾಡಿದನು. ಸುಪರ್ ಮಾನ್ ಬೆರೆ ಗ್ರಹದಿಂದ ಬಂದಿದ್ದರು ಮಾನವೀಯತೆ ಕೆಲಸಗಳನ್ನು ಮಾಡಿ ತನ್ನ ಜವಾಬ್ದಾರಿಗಳನ್ನು ಮತ್ತು ಕರ್ತವ್ಯಗಳನ್ನು ಶ್ರಮಪಟ್ಟು ಮುಗಿಸಿದರು.

ಇತರ ಭಾಷೆಗಳು

This page is based on a Wikipedia article written by authors (here).
Text is available under the CC BY-SA 3.0 license; additional terms may apply.
Images, videos and audio are available under their respective licenses.