ಉಯಿಲು

ಉಯಿಲು: ಸ್ವತ್ತಿನ ಮಾಲೀಕನ ಮರಣ ಸಂಭವಿಸಿದಾಗ ಆತನ ಆಸ್ತಿಗಳ ವಿಲೆಯ ಬಗ್ಗೆ ಆತ ಮಾಡಿದ ಕಾಯಿದೆಬದ್ಧ ವಹಿವಾಟು (ವಿಲ್). ಮೃತ್ಯು ಪತ್ರ ಎಂಬುದು ಇದರ ಇನ್ನೊಂದು ಹೆಸರು. ಒಬ್ಬಾತ ತನ್ನ ಮರಣಾನಂತರ ತನ್ನ ಸ್ವತ್ತು ಹೇಗೆ ವಿಲೆ ಆಗಬೇಕೆಂಬುದನ್ನು ವ್ಯಕ್ತಪಡಿಸುವ ಕೊಟ್ಟಕೊನೆಯ ಬಯಕೆ-ಎಂಬುದಾಗಿ ಭಾರತೀಯ ಉತ್ತರಾಧಿಕಾರ ಕಾಯಿದೆಯಲ್ಲಿ ಹೇಳಲಾಗಿದೆ. ಇದು ಇಂಗ್ಲೀಷಿನ ವಿಲ್ ಎಂಬ ಶಬ್ದದಿಂದ ಬಂದದ್ದು. ವಿಲ್ ಎಂಬ ಪದಕ್ಕೆ ಸಮಾನವಾದ ಶಬ್ದ ಸಂಸ್ಕೃತದಲ್ಲಾಗಲಿ, ಇತರ ಯಾವ ಭಾರತೀಯ ಭಾಷೆಯಲ್ಲೇ ಆಗಲಿ ಹಿಂದೆ ಇರಲಿಲ್ಲ. ಭಾರತದ ಪ್ರಾಚೀನ ನ್ಯಾಯಶಾಸ್ತ್ರದಲ್ಲಿ ಉಯಿಲಿನ ಕಲ್ಪನೆಯೇ ಇರದಿದ್ದದ್ದೇ ಇದಕ್ಕೆ ಮುಖ್ಯ ಕಾರಣ. ಶುದ್ಧ ಹಿಂದೂ ನ್ಯಾಯಶಾಸ್ತ್ರಕ್ಕೆ ಉಯಿಲಿನ ಕಲ್ಪನೆ ತೀರ ಹೊರಗು. ಉಯಿಲಿಗೆ ಸಂಬಂಧಪಟ್ಟ ನ್ಯಾಯವೇನಿದ್ದರೂ ರೋಮನ್ ನ್ಯಾಯದಿಂದ ಹುಟ್ಟಿದ್ದು. ಆದರೂ 1867ರಷ್ಟು ಹಿಂದೆಯೇ ಬೀರ್ ಪ್ರತಾಪ್ ವಿರುದ್ಧ ರಾಜೇಂದ್ರ ಪರ್ತಾಬ್ (12 ಮೂರ್ಸ್‌ ಇಂಡಿಯನ್ ಅಪೀಲ್ಸ್‌ 1-37-38) ಮೊಕದ್ದಮೆಯಲ್ಲಿ ಪ್ರಿವಿ ಕೌನ್ಸಿಲ್ ತನ್ನ ತೀರ್ಪುಕೊಡುತ್ತಾ, ಪ್ರಾಚೀನ ಹಿಂದೂ ನ್ಯಾಯಶಾಸ್ತ್ರದಲ್ಲಿ ಉಯಿಲುಗಳ ಉಲ್ಲೇಖ ಇಲ್ಲ ಎಂಬ ಕಾರಣದಿಂದ ಹಿಂದುಗಳು ತಮ್ಮ ಆಸ್ತಿಯನ್ನು ಉಯಿಲು ಮೂಲಕ ವಿಲೆ ಮಾಡಲಾರರು ಎಂಬುದನ್ನು ಸಾಧಿಸುವ ಕಾಲ ಎಂದೋ ಮುಗಿದುಹೋಗಿದೆಯೆಂದು ಸುಸ್ಪಷ್ಟವಾಗಿ, ನಿರ್ವಿವಾದವಾಗಿ ಘೋಷಿಸಿದೆ. ಉಯಿಲುಗಳಿಗೆ ಸಂಬಂಧಿಸಿದ ನ್ಯಾಯ ಇಂದು ಭಾರತದ ನ್ಯಾಯ ಪದ್ಧತಿಯಲ್ಲಿ ಸ್ಥಿರವಾದ ಸ್ಥಾನ ಪಡೆದಿದೆ. ಉಯಿಲಿನ ಮುಖ್ಯ ಲಕ್ಷಣಗಳು ಮೂರು: 1 ಇದರಲ್ಲಿ ಸ್ವತ್ತಿನ ವಿಲೆಯ ಉಲ್ಲೇಖವಿರುತ್ತದೆ. 2 ಈ ವಿಲೆ ಆಗತಕ್ಕದ್ದು ಉಯಿಲು ಬರೆದಾತನ ಮರಣಾನಂತರ. 3 ಇದನ್ನು ಮಾಡಿದಾತ ತನಗಿಷ್ಟ ಬಂದಂತೆ ಇದನ್ನು ರದ್ದು ಪಡಿಸಲು, ಬದಲಾಯಿಸಲು ಅಥವಾ ಮೊಟಕು ಮಾಡಲು ಅವಕಾಶ ಇರುತ್ತದೆ. ಈ ಮೇಲಿನ ಮೂರು ಲಕ್ಷಣಗಳಲ್ಲಿ ಕೊನೆಯ ಎರಡು ಲಕ್ಷಣಗಳು ಉಯಿಲುಗಳಿಗೇ ವಿಶಿಷ್ಟವಾದಂಥವು. ವಿಕ್ರಯ, ಭೋಗ್ಯ, ಗುತ್ತಿಗೆ ಮುಂತಾದ ರೀತಿಯಲ್ಲಿ ನಡೆಯುವ ಸ್ವತ್ತಿನ ವಿಲೆಗೂ ಉಯಿಲು ಮೂಲಕ ನಡೆಯುವ ವಿಲೆಗೂ ಇದೇ ಮುಖ್ಯ ವ್ಯತ್ಯಾಸ. ಒಬ್ಬಾತ ತನ್ನ ಹೆಂಡತಿಗೆ ತನ್ನ ಮರಣಾನಂತರ ದತ್ತು ತೆಗೆದುಕೊಳ್ಳುವ ಅಧಿಕಾರ ಕೊಟ್ಟು ಬರೆದಿಡುವ ಪತ್ರವನ್ನು ಆತ ಉಯಿಲು ಎಂದು ಕರೆದರೂ ಅದು ಉಯಿಲಲ್ಲ. ಏಕೆಂದರೆ ಅದರಲ್ಲಿ ಸ್ವತ್ತಿನ ವಿಲೆಗೆ ಸಂಬಂಧಿಸಿದ ಅಂಶವಿಲ್ಲ. ಹಾಗೆಯೇ, ಪತ್ರ ಬರೆದ ಕೂಡಲೇ ಒಂದು ಸ್ವತ್ತು ಇನ್ನೊಬ್ಬನಿಗೆ ಹಸ್ತಾಂತರವಾಗಿ ಆತನಿಗೆ ಅದರ ಮೇಲೆ ಅಧಿಕಾರ ಪ್ರಾಪ್ತವಾದರೆ ಅಂಥ ಪತ್ರವೂ ಉಯಿಲಲ್ಲ. ಏಕೆಂದರೆ, ಅಂಥ ದಸ್ತವೇಜನ್ನು ಬರೆದಾತನ ಜೀವಿತ ಕಾಲದಲ್ಲೇ ಸ್ವತ್ತು ಹಸ್ತಾಂತರಗೊಳ್ಳುತ್ತದೆ. ಕೊನೆಯದಾಗಿ, ಯಾವ ದಸ್ತಾವೇಜನ್ನು ರದ್ದು ಪಡಿಸಲಾಗದ ರೀತಿಯಲ್ಲಿ ರಚಿಸಲಾಗುವುದೋ ಅದು ಉಯಿಲು ಎನ್ನಿಸಿಕೊಳ್ಳಲಾರದು, ಏಕೆಂದರೆ, ಬರೆದಾತನಿಗೆ ಅದನ್ನು ರದ್ದುಪಡಿಸುವ ಅಧಿಕಾರವಿಲ್ಲದಿದ್ದರೆ ಅಂಥ ದಸ್ತಾವೇಜು ಉಯಿಲಾಗಲಾರದು. ಉಯಿಲನ್ನು ಮೊಟಕು ಮಾಡುವ, ವಿವರಿಸುವ, ಸ್ಪಷ್ಟೀಕರಿಸುವ ಇಲ್ಲವೇ ಮತ್ತಾವ ರೀತಿಯಲ್ಲಾದರೂ ಮೂಲದಲ್ಲಿ ಬದಲಾವಣೆ ಮಾಡುವ ಪತ್ರವನ್ನು ಉಪಮೃತ್ಯುಪತ್ರ, ಉಪಉಯಿಲು ಅಥವಾ ಅನುಬಂಧ (ಕಾಡಿಸಿಲ್) ಎಂದು ಕರೆಯುತ್ತಾರೆ. ಇದಕ್ಕೂ ಉಯಿಲಿಗೆ ಇರಬೇಕಾದ ಎಲ್ಲ ಲಕ್ಷಣಗಳೂ ಇರಲೇಬೇಕು. ಆದರೆ ಇದು ಉಯಿಲು ಎನಿಸಿಕೊಳ್ಳಲಾರದು. ಮೂಲ ಉಯಿಲು ಇದ್ದಾಗ ಮಾತ್ರ ಇದು ಹುಟ್ಟಲು ಅವಕಾಶವುಂಟು.

Alfred Nobels will-November 25th, 1895
ನೊಬೆಲ್ ಪಾರಿತೋಷಕವನ್ನು ಘೋಷಿಸಿದ ಆಲ್ಪ್ರೆಡ್ ನೊಬೆಲ್ರವರ ಉಯಿಲು.

ಉಯಿಲುಗಳ ಪ್ರಭೇದಗಳು

ಭಾರತೀಯ ಉತ್ತರಾಧಿಕಾರ ಕಾಯಿದೆಯ ಪ್ರಕಾರ ವಿಶೇಷ ಸೌಲಭ್ಯಯುಕ್ತ ಹಾಗೂ ಸಾಮಾನ್ಯ ಉಯಿಲು ಎಂಬ ಎರಡು ಬಗೆಯ ಉಯಿಲುಗಳಿವೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಸೈನಿಕರು, ವೈಮಾನಿಕರು ಅಥವಾ ನಾವಿಕರು ಮಾಡಬಹುದಾದ ಉಯಿಲು ವಿಶೇಷ ಸೌಲಭ್ಯಯುಕ್ತ ಉಯಿಲು, ಯುದ್ಧರಂಗಕ್ಕೆ ಕಳಿಸಿದ ಅಥವಾ ಯುದ್ಧದಲ್ಲಿ ವಾಸ್ತವವಾಗಿ ಹೋರಾಟದಲ್ಲಿ ತೊಡಗಿದ ಹದಿನೆಂಟು ವರ್ಷ ತುಂಬಿದ ಸೈನಿಕರಿಗೂ ನಾವಿಕರಿಗೂ ವೈಮಾನಿಕರಿಗೂ ಇಂಥ ಉಯಿಲುಗಳನ್ನು ಮಾಡುವ ವಿಶೇಷ ಅಧಿಕಾರ ಕೊಡಲಾಗಿದೆ. ಇಂಥ ಉಯಿಲು ಬರೆವಣಿಗೆಯಲ್ಲೇ ಇರಬೇಕಾದ್ದಿಲ್ಲ; ಬಾಯಿಮಾತಿನಲ್ಲಿದ್ದರೂ ಇದು ಕಾಯಿದೆಬದ್ಧ. ಈ ಉಯಿಲುಗಳನ್ನು ಮಾಡುವುದರಲ್ಲಿ ಅನುಸರಿಸಬೇಕಾದ ನಿಯಮಗಳನ್ನು ಭಾರತೀಯ ಉತ್ತರಾಧಿಕಾರ ಕಾಯಿದೆಯ 66ನೆಯ ಕಲಮಿನಲ್ಲಿ ನಮೂದಿಸಲಾಗಿದೆ. ಈ ನಿಯಮಗಳು ಯಾವುದೆಂದರೆ: 1. ಸ್ವತ್ತು ವಿಲೆ ಮಾಡಬೇಕೆಂದಿರುವಾತ ತನ್ನ ಹಸ್ತದಿಂದ ಉಯಿಲನ್ನು ಬರೆದದ್ದಾದರೆ, ಅದಕ್ಕೆ ಆತ ತನ್ನ ಸಹಿ ಹಾಕಲೇ ಬೇಕಾಗಿಲ್ಲ. ಅದಕ್ಕೆ ಸಾಕ್ಷಿಗಳೂ ಬೇಕಿಲ್ಲ. 2. ಇದನ್ನು ಇತರರು ಪೂರ್ಣವಾಗಿ ಅಥವಾ ಆಂಶಿಕವಾಗಿ ಬರೆದದ್ದಾದರೆ, ಸ್ವತ್ತಿನ ವಿಲೆದಾರ ಸಹಿಮಾಡಬೇಕಾದ್ದು ಅಗತ್ಯ. ಸಾಕ್ಷಿಗಳು ಇರಲೇಬೇಕೆಂದಿಲ್ಲ. 3. ಒಂದು ವೇಳೆ ಇಂಥ ಉಯಿಲನ್ನು ಪೂರ್ಣವಾಗಿ ಅಥವಾ ಆಂಶಿಕವಾಗಿ ಬೇರೆಯವರು ಯಾರಾದರೂ ಬರೆದಿದ್ದು, ವಿಲೆದಾರ ಇದಕ್ಕೆ ಸಹಿಮಾಡಿಲ್ಲದಿದ್ದರೂ ಇದು ಆತನೇ ಹೇಳಿ ಬರೆಸಿದ್ದೆಂದು ರುಜುವಾತು ಮಾಡಬೇಕು, ಇಲ್ಲವೇ ಇದು ತನ್ನದೆಂದು ಆತ ಒಪ್ಪಿಕೊಳ್ಳಬೇಕು. 4. ಹೀಗೆ ದಸ್ತಾವೇಜು ವಿಲೆದಾರನ ಇಚ್ಛೆಗೆ ಅನುಗುಣವಾಗಿ ಪೂರ್ಣಗೊಳ್ಳದೆ ಇದ್ದ ಪಕ್ಷದಲ್ಲಿ, ಇದು ಅಪೂರ್ಣವೆಂಬ ಕಾರಣದಿಂದಲೇ ನ್ಯಾಯಬಾಹಿರವೆಂದು ಪರಿಗಣಿಸತಕ್ಕದ್ದಲ್ಲ. ಆದರೆ ಹಾಗೆ ಇದು ಅಪೂರ್ಣವಾಗಿ ಉಳಿಯಲು ಬೇರೆ ಯಾವುದಾದರೂ ಕಾರಣಗಳಿದ್ದುವೆಂದು ರುಜುವಾತಾದರೆ ಸಾಕು. 5. ಯಾವನೇ ಸೈನಿಕ, ವೈಮಾನಿಕ ಅಥವಾ ನಾವಿಕ ಉಯಿಲು ಬರೆಯಲೆಂದು ಬರೆವಣಿಗೆಯ ಮೂಲಕ ಸೂಚನೆಗಳನ್ನು ಕೊಟ್ಟಿದ್ದು, ಆ ರೀತಿ ಉಯಿಲು ರಚನೆಯಾಗುವ ಮೊದಲೇ ಆತ ಸತ್ತರೆ, ಆಗ ಆತ ಬರೆದ ಸೂಚನೆಗಳೇ ಉಯಿಲು ಎಂದು ಭಾವಿಸತಕ್ಕದ್ದು. 6. ಒಂದು ವೇಳೆ ಆತ ಉಯಿಲು ತಯಾರಿಸಲು ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ಬಾಯಿಮಾತಿನ ಸೂಚನೆ ಕೊಟ್ಟಿದ್ದು ಆ ಸೂಚನೆಗಳನ್ನು ಆತನ ಎದುರಿನಲ್ಲೇ ಬರೆದು ಓದಿ ಹೇಳಿದ್ದ ಪಕ್ಷದಲ್ಲಿ ಆ ಸೂಚನೆಗಳೇ ಆತನ ಉಯಿಲು ಎಂದು ಭಾವಿಸತಕ್ಕದ್ದು. 7. ಏಕಕಾಲಕ್ಕೆ ಹಾಜರಿದ್ದ ಕನಿಷ್ಠ ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ಬಾಯಿಮಾತಿನಲ್ಲಿ ಆತ ತನ್ನ ಇಚ್ಛೆ ವ್ಯಕ್ತಪಡಿಸುವುದರ ಮೂಲಕ ಉಯಿಲು ಮಾಡುವುದು ಸಾಧ್ಯ. 8. ಬಾಯಿ ಮಾತಿನಲ್ಲಿ ಉಯಿಲುಮಾಡಿದ ಒಂದು ತಿಂಗಳ ಅನಂತರ ಉಯಿಲು ಮಾಡಿದಾತನಿಗೆ ವಿಶೇಷ ಸೌಲಭ್ಯಯುಕ್ತ ಉಯಿಲುಮಾಡುವ ಅಧಿಕಾರ ತಪ್ಪಿಹೋಗಿ, ಆತ ಇನ್ನೂ ಬದುಕಿದ್ದರೆ ಆಗ ಅಂಥ ಉಯಿಲು ಅನೂರ್ಜಿತವೆನಿಸುತ್ತದೆ. ಹಿಂದೆ ವಿವರಿಸಲಾದ ಸಂದರ್ಭದಲ್ಲಿನ ಸೈನಿಕ, ವೈಮಾನಿಕ, ನಾವಿಕರ ಹೊರತು ಇತರ ಯಾರೇ ಆಗಲಿ ಮಾಡುವ ಉಯಿಲುಗಳು ಸಾಮಾನ್ಯ ಉಯಿಲುಗಳು-ಇವುಗಳ ರಚನೆಯ ನಿಯಮಗಳನ್ನು ಭಾರತೀಯ ಉತ್ತರಾಧಿಕಾರ ಕಾಯಿದೆಯ 63ನೆಯ ಕಲಮಿನಲ್ಲಿ ಈ ರೀತಿ ನಮೂದಿಸಲಾಗಿದೆ: 1. ಸ್ವತ್ತು ವಿಲೇವಾರಿ ಮಾಡುವಾತ ಉಯಿಲಿಗೆ ತನ್ನ ಸಹಿ ಅಥವಾ ಗುರುತನ್ನು ತಾನೇ ಆಗಲಿ ತನ್ನ ಸಮಕ್ಷಮದಲ್ಲಿ ತನ್ನ ನಿರ್ದೇಶನದ ಪ್ರಕಾರ ಇನ್ನೊಬ್ಬನಾಗಲಿ ಹಾಕಿರಬೇಕು. 2. ಆತ ಮಾಡಿದ ಅಥವಾ ಆತನ ನಿರ್ದೇಶದ ಪ್ರಕಾರ ಇನ್ನೊಬ್ಬರು ಮಾಡಿದ ಸಹಿಯ ಉದ್ದೇಶ ಸ್ಪಷ್ಟವಾಗಿರಬೇಕು. ಉಯಿಲನ್ನು ಆಚರಣೆಯಲ್ಲಿ ತರುವ ಉದ್ದೇಶವನ್ನು ಅದು ಸ್ಪಷ್ಟವಾಗಿ ವ್ಯಕ್ತಪಡಿಸುವಂತಿರಬೇಕು. 3. ಸ್ವತ್ತಿನ ವಿಲೆದಾರನೋ ಆತನ ಪರವಾಗಿ ಇನ್ನೊಬ್ಬನೋ ಆ ಉಯಿಲಿಗೆ ಸಹಿ ಅಥವಾ ಗುರುತು ಹಾಕಿದ್ದನ್ನು ಕಣ್ಣಾರೆ ಕಂಡ ಕನಿಷ್ಠ ಇಬ್ಬರು ಸಾಕ್ಷ್ಯ ಹಾಕಿರತಕ್ಕದ್ದು. ಒಂದು ವೇಳೆ ಆತ ತಮ್ಮ ಸಮಕ್ಷವೇ ಸಹಿ ಹಾಕಿರದಿದ್ದರೂ ತಾನೇ ಹಾಕಿದುದಾಗಿ ಆತ ತಮ್ಮೆದುರಿಗೆ ಒಪ್ಪಿಕೊಂಡ ಮೇಲೆ ಇವರು ಸಾಕ್ಷ್ಯ ಹಾಕಿರಬೇಕು. ಈ ಸಾಕ್ಷಿಗಳು ಮಾತ್ರ ಉಯಿಲಿಗೆ ವಿಲೆದಾರನ ಸಮಕ್ಷದಲ್ಲೇ ಸಾಕ್ಷ್ಯ ಹಾಕಿರಬೇಕಾದ್ದು ಅವಶ್ಯ. ಇವರು ಏಕಕಾಲದಲ್ಲಿ ಹಾಜರಿರಬೇಕಾದ್ದಿಲ್ಲ. ಹೀಗೇ ಸಾಕ್ಷ್ಯ ಹಾಕಬೇಕೆಂಬ ಯಾವ ನಿರ್ದಿಷ್ಟ ನಿಯಮವೂ ಇಲ್ಲ.

ಉಯಿಲುದಾರನ ಅರ್ಹತೆ

ಅಪ್ರಾಪ್ತವಯಸ್ಕನಲ್ಲದ, ಸ್ವಸ್ಥಚಿತ್ತನಾದ ಯಾವನಾದರೂ ಸ್ವಂತ ಇಚ್ಛೆಯಿಂದ ಯಾವ ಆತಂಕ ನಿರ್ಬಂಧಗಳಿಗೂ ಒಳಗಾಗದೆ ಉಯಿಲು ಮಾಡಬಹುದು. ಆತ ಯಾವ ಮತದವನಾದವನಾದರೂ ಆಗಿರಬಹುದು. ಭಾರತೀಯ ಉತ್ತರಾಧಿಕಾರ ಕಾಯಿದೆ ಹಿಂದೂ, ಮುಸ್ಲಿಂ, ಬೌದ್ಧ, ಸಿಖ್ ಅಥವಾ ಜೈನರಿಗೆ ಅನ್ವಯಿಸದೆ ಇದ್ದರೂ ಆಯಾ ಮತದವರು ತಾವು ವಿಲೆ ಮಾಡಬಹುದಾದಂಥ ಆಸ್ತಿಯನ್ನು ಉಯಿಲು ಮೂಲಕ ವಿಲೆ ಮಾಡಬಯಸಿದರೆ, ಆ ಕಾಯಿದೆಯ ಆರನೆಯ ಪರಿಚ್ಛೇದದಲ್ಲಿನ ಕಲಮುಗಳಿಗೆ ಅನುಗುಣವಾಗಿಯೇ ಉಯಿಲು ಮಾಡಬೇಕಾಗುತ್ತದೆ. ಇದರಲ್ಲಿನ ಕೆಲವು ಕಲಮುಗಳು ಹಿಂದೂಗಳಿಗೆ ಅನ್ವಯಿಸುವುದಿಲ್ಲ. 1956ರ ಹಿಂದೂ ಉತ್ತರಾಧಿಕಾರ ಕಾಯಿದೆ ಹಿಂದುಗಳಿಗೂ ಅನ್ವಯಿಸುತ್ತದೆ.

ನ್ಯಾಯದ ಅನ್ವಯ

ಎಂಥ ಸ್ವತ್ತನ್ನು ಉಯಿಲು ಮೂಲಕ ವಿಲೆ ಮಾಡಬಹುದು ಎಂಬುದು ಇನ್ನೊಂದು ಪ್ರಶ್ನೆ. ಹಿಂದೆ ಭಾರತೀಯ ನ್ಯಾಯ ಬಹುಮಟ್ಟಿಗೆ ವ್ಯಕ್ತಿಯ ಮತವನ್ನೇ ಅವಲಂಬಿಸಿತ್ತು. ಹಿಂದೂಗಳಿಗೆ ಹಿಂದೂಧರ್ಮಶಾಸ್ತ್ರದ ಆಧಾರದ ಮೇಲೆ ರೂಪಿತವಾದ ನ್ಯಾಯವೂ ಮುಸ್ಲಿಮರಿಗೆ ಷರಿಯತ್ ನ್ಯಾಯವೂ ಅನ್ವಯವಾಗುತ್ತಿದ್ದುವು. 1956ನೆಯ ಹಿಂದೂ ಉತ್ತರಾಧಿಕಾರ ಕಾಯಿದೆ ಜಾರಿಗೆ ಬರುವ ತನಕ ಹಿಂದೂಗಳಿಗೆ ಸಂಬಂಧಿಸಿದಂತೆ ಈ ಹಕ್ಕು ಬಹು ಕುಂಠಿತವಾಗಿತ್ತು. ತಾನು ಬದುಕಿರುವಾಗ ಯಾವ ಸ್ವತ್ತನ್ನು ದಾನಮಾಡಲು ಹಿಂದೂವಿಗೆ ಅಧಿಕಾರವಿತ್ತೋ ಅದನ್ನು ಮಾತ್ರ ಆತ ಉಯಿಲು ಮೂಲಕ ವಿಲೆ ಮಾಡಲು ಸಮರ್ಥನಾಗಿದ್ದ. ಆದರೆ 1956ರ ಕಾಯಿದೆ ಜಾರಿಗೆ ಬಂದಮೇಲೆ ಹಿಂದೂವಿನ ಈ ಅಧಿಕಾರ ಬಹಳ ಮಟ್ಟಿಗೆ ವಿಸ್ತಾರವಾಗಿದೆ. ಮಿತಾಕ್ಷರ ನ್ಯಾಯ ಅನ್ವಯಿಸುವ ಪ್ರತಿಯೊಬ್ಬ ಹಿಂದುವೂ ಅವಿಭಕ್ತ ಕುಟುಂಬದಲ್ಲಿರುವ ತನ್ನ ಅವಿಭಕ್ತ ಹಿಸ್ಸೆಯನ್ನು ಉಯಿಲು ಮೂಲಕ ವಿಲೆ ಮಾಡಬಹುದು. ಆದರೆ ತನ್ನ ಹೆಂಡತಿಯ ಹಕ್ಕಿಗಾಗಲಿ ತನ್ನಿಂದ ಜೀವನಾಂಶವನ್ನೋ ರಕ್ಷಣೆಯನ್ನೋ ಪಡೆಯಬಲ್ಲ ಯಾರ ಹಕ್ಕಿಗಾಗಲಿ ಧಕ್ಕೆ ಬಾರದ ರೀತಿಯಲ್ಲಿ ಮಾತ್ರ ಆತ ತನ್ನ ಸ್ವತ್ತು ವಿಲೆ ಮಾಡುವುದು ಸಾಧ್ಯ. ಈಗ ಜಾರಿಯಲ್ಲಿರುವ ಶಾಸನದ ಪ್ರಕಾರ ಹಿಂದೂಗಳು ತಮ್ಮ ಸ್ವಯಾರ್ಜಿತ ಸ್ವತ್ತನ್ನು ಯಾವತ್ತೂ ಉಯಿಲು ಮೂಲಕ ವಿಲೆ ಮಾಡಬಹುದು. ದಾಯಭಾಗಾ ಹಿಂದೂ ನ್ಯಾಯಪದ್ಧತಿ ಅನ್ವಯಿಸುವ ಹಿಂದೂ ತಂದೆ ತನ್ನ ಎಲ್ಲ ಸ್ವತ್ತನ್ನೂ-ಅದು ಪುರ್ವಾರ್ಜಿತವಾ ಗಿರಲಿ ಸ್ವಯಾರ್ಜಿತವಾಗಿರಲಿ-ಉಯಿಲು ಮೂಲಕ ವಿಲೆ ಮಾಡಬಹುದು. ಅಂಥ ಹಿಂದೂ ಕುಟುಂಬದ ಸದಸ್ಯನೂ ಅವಿಭಕ್ತ ಕುಟುಂಬದಲ್ಲಿರುವ ತನ್ನ ಹಿಸ್ಸೆಯನ್ನು ಉಯಿಲು ಮೂಲಕ ವಿಲೇವಾರಿ ಮಾಡಬಹುದು. ಹಿಂದೂ ಸ್ತ್ರೀ ತನ್ನ ಸ್ತ್ರೀಧನವನ್ನು ತನ್ನ ಗಂಡನ ಒಪ್ಪಿಗೆಯಿಂದ ಉಯಿಲು ಮೂಲಕ ವಿಲೆ ಮಾಡಬಹುದು. ಹಿಂದೂ ಉತ್ತರಾಧಿಕಾರ ಕಾಯಿದೆ ಬಂದ ಮೇಲೆ ಆಕೆಯ ಅಧಿಕಾರ ಇನ್ನೂ ಅಧಿಕವಾಗಿದೆ. ಅವಿಭಾಜ್ಯದಾಯದ ಮಾಲೀಕ ಯಾವುದಾದರೂ ವಿಶೇಷವಾದ ರೂಢಿ ಇಲ್ಲವೇ ನಿಷೇಧದ ಷರತ್ತಿಗೆ ಒಳಗಾಗಿಲ್ಲದ ಆಸ್ತಿಯನ್ನು ಉಯಿಲಿನ ಮೂಲಕ ವಿಲೆಮಾಡಬಹುದು. (ನೋಡಿ-ಅವಿಭಾಜ್ಯದಾಯ) ಮುಸ್ಲಿಂ ನ್ಯಾಯಪದ್ಧತಿಯ ಪ್ರಕಾರ ಯಾವುದೇ ಒಬ್ಬ ಮುಸ್ಲಿಂ ಮತಸ್ಥನು/ಳು ತನ್ನ ಉತ್ತರಕ್ರಿಯೆ ಮತ್ತು ಸಾಲಗಳಿಗೆ ಸಂದಾಯವಾಗಿ ಮಿಗತೆ ಉಳಿದ ಸ್ವತ್ತಲ್ಲಿ ಮೂರನೇ ಒಂದು ಭಾಗಕ್ಕೆ (1/3) ಮೀರದಷ್ಟು ಭಾಗವನ್ನು ಮಾತ್ರ ಉಯಿಲು ಮೂಲಕ ವಿಲೆ ಮಾಡಬಹುದು. ಈ ಮಿತಿಯನ್ನು ಉಲ್ಲಂಘಿಸಿದ ಯಾವುದೇ ಉಯಿಲು ವ್ಯಕ್ತಿಯ ಮರಣಾಂತರದಲ್ಲಿ ಉತ್ತರಾಧಿಕಾರಿಗಳು ಸಮ್ಮತಿ ಕೊಡದ ಪಕ್ಷದಲ್ಲಿ ಮಿತಿಯನ್ನು ಉಲ್ಲಂಘಿಸಿದ ಅಂಶಕ್ಕೆ ಸಂಬಂಧಿಸಿದಂತೆ ಅನ್ವಯವಾಗುವುದಿಲ್ಲ.

ಉಯಿಲುಗಳ ರೂಪ

ಉಯಿಲುಗಳು ಲಿಖಿತವಾಗಿರಬೇಕು. ಆದರೆ ರಿಜಿಸ್ಟರ್ ಮಾಡಿಸಬೇಕಾದ ನಿಯಮವೇನೂ ಇಲ್ಲ. ವಿಶೇಷ ಸೌಲಭ್ಯಯುಕ್ತ ಉಯಿಲುಗಳು ಬಾಯಿ ಮಾತಿನಲ್ಲೂ ಇರಬಹುದು. ಆದರೆ ಕನಿಷ್ಠ ಇಬ್ಬರು ಸಾಕ್ಷಿಗಳ ಸಹಿ ಅನಿವಾರ್ಯ.

ಉಯಿಲುಗಳನ್ನು ಅರ್ಥೈಸುವ ರೀತಿ

ಉಯಿಲು ಸತ್ತ ಮನುಷ್ಯನ ಕೊಟ್ಟಕೊನೆಯ ಇಚ್ಛೆಯಾದ್ದರಿಂದ ಅದನ್ನು ಆತನ ಉದ್ದೇಶಕ್ಕೆ ಅನುಗುಣವಾಗಿಯೇ ಅರ್ಥೈಸಬೇಕಾದ್ದು ನ್ಯಾಯ ಮತ್ತು ಧರ್ಮ. ಉಯಿಲು ಸ್ಪಷ್ಟವಾಗಿ ನಿಸ್ಸಂದಿಗ್ಧವಾಗಿದ್ದರೆ ಅದನ್ನು ಅರ್ಥೈಸುವ ಕಷ್ಟ ಕಡಿಮೆ. ಒಂದು ವೇಳೆ ಅದು ಸ್ಪಷ್ಟವಾಗಿಲ್ಲದೆ ಇದ್ದರೆ, ಅದನ್ನು ಅರ್ಥೈಸುವಾಗ ಉಯಿಲುದಾರನ ಉದ್ದೇಶಕ್ಕೆ ಭಂಗಬಾರದ ರೀತಿಯಲ್ಲಿ, ಅವನ ಅಂತಿಮ ಇಚ್ಛೆಗೆ ದ್ರೋಹವಾಗದಂತೆ, ಅರ್ಥೈಸಬೇಕಾದ ಮಹತ್ತರ ಹೊಣೆ ನ್ಯಾಯಾಲಯಗಳ ಮೇಲೂ ಉಯಿಲನ್ನು ಆಚರಣೆಯಲ್ಲಿ ತರಬೇಕಾದವರ ಮೇಲೂ ಇದೆ. ಉಯಿಲಿನ ಅರ್ಥವನ್ನು ಅನಾವಶ್ಯಕವಾಗಿ ಹಿಗ್ಗಿಸಲೂ ಕೂಡದು; ಅದಕ್ಕೆ ತೀರ ಸಂಕುಚಿತ ಅರ್ಥವನ್ನು ಕಲ್ಪಿಸಬಾರದು. ತೀರಿದವನ ಕೊನೆಯ ಬಯಕೆಯನ್ನು ಈಡೇರಿಸಲು ಎಲ್ಲ ರೀತಿಯ ಎಚ್ಚರಿಕೆಯಿಂದ ಪ್ರಯತ್ನಿಸಬೇಕು. ಇದೊಂದು ಪವಿತ್ರ ಕರ್ತವ್ಯ.

ಬಾಹ್ಯ ಸಂಪರ್ಕಗಳು

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ಅಡೋಲ್ಫ್ ಹಿಟ್ಲರ್

ಅಡಾಲ್ಫ್ ಹಿಟ್ಲರ್ , ೨೦ ಏಪ್ರಿಲ್ ೧೮೮೯ - ೩೦ ಏಪ್ರಿಲ್ ೧೯೪೫) ಆಸ್ಟ್ರಿಯಾದಲ್ಲಿ ಜನಿಸಿದ ಜರ್ಮನ್ ರಾಜಕಾರಣಿ ಹಾಗೂ ನಾಜಿ ಪಕ್ಷವೆಂದೇ ಖ್ಯಾತವಾದ ನ್ಯಾಶನಲ್ ಸೋಶಿಯಲಿಸ್ಟ್ ಜರ್ಮನ್ ವರ್ಕರ್ಸ್ ಪಾರ್ಟಿಯ (German: [ Nationalsozialistische Deutsche Arbeiterpartei] ಸಂಕ್ಷಿಪ್ತ ರೂಪ NSDAP) ನೇತಾರನಾಗಿದ್ದವನು. ಈತನು ೧೯೩೩ರಿಂದ ೧೯೪೫ರ ವರೆಗೆ ಜರ್ಮನಿಯನ್ನು ಆಳಿದನು. ೧೯೩೩ರಿಂದ ೧೯೪೫ರವರೆಗೆ ಚಾನ್ಸೆಲರ್ ಆಗಿ ಹಾಗೂ ೧೯೩೪ರಿಂದ ೧೯೪೫ರವರೆಗೆ ರಾಷ್ಟ್ರದ ಮುಖ್ಯಸ್ಥನಾಗಿ (Führer und Reichskanzler ) ಆಡಳಿತ ನಡೆಸಿದನು.

ಮೊದಲನೇ ವಿಶ್ವಯುದ್ಧದ ಅನುಭವದಲ್ಲಿ ಪಳಗಿದ್ದ ಹಿಟ್ಲರನು ೧೯೧೯ರಲ್ಲಿ ನಾಝಿ ಪಕ್ಷವನ್ನು ಸೇರಿಕೊಂಡನು ಮತ್ತು ೧೯೨೧ರಲ್ಲಿ NSDAPಯ ಅಧ್ಯಕ್ಷನಾದನು.೧೯೨೩ರಲ್ಲಿ ಗುರಿತಲುಪಲು ವಿಫಲನಾಗಿ ಬವೇರಿಯಾದಲ್ಲಿ ಬಂಧನಕ್ಕೊಳಗಾದ ಅನಂತರದ ದಿನಗಳಲ್ಲಿ ಆತನು, ಜರ್ಮನ್ ರಾಷ್ಟ್ರೀಯವಾದ, ಸೆಮಿಟಿಸಮ್ ವಿರೋಧೀ ನಿಲುವು, ಹಾಗೂ ಕಮ್ಯುನಿಸಮ್ ವಿರೋಧೀ ನಿಲುವುಗಳನ್ನು ರಮಣೀಯವಾಗಿ ನಿರೂಪಿಸುತ್ತ, ತನ್ನ ಮಾತುಗಾರಿಕೆ ಹಾಗೂ ಪ್ರಚಾರ ಕಾರ್ಯಗಳಿಂದ ಜನಬೆಂಬಲ ಗಳಿಸಿಕೊಂಡನು.ಆತನು ೧೯೩೩ರಲ್ಲಿ ಚಾನ್ಸೆಲರ್ ಆಗಿ ನೇಮಕೊಂಡು, ಅತ್ಯಲ್ಪಾವಧಿಯಲ್ಲಿಯೇ ರಾಷ್ಟ್ರೀಯ ಸಮಾಜವಾದದ ಸಂಪೂರ್ಣಾಧಿಕಾರ ಹಾಗೂ ನಿರಂಕುಶ ಪ್ರಭುತ್ವ ಗಳ ಬಲದಿಂದ ಏಕಪಕ್ಷೀಯ ಸರ್ವಾಧಿಕಾರವನ್ನು ಸ್ಥಾಪಿಸಿದನು.

ಹಿಟ್ಲರನು ಆರ್ಯಜನಾಂಗೀಯರಿಗಾಗಿ ಲೇಬನ್ಸ್ರಾವ್ಮ್ (``ಬದುಕುವ ಅವಕಾಶ") ಕಿತ್ತುಕೊಳ್ಳುವ ಘೋಷಿತ ಉದ್ದೇಶದ ವಿದೇಶೀನೀತಿಯನ್ನು ಬೆನ್ನತ್ತಿದನು ಮತ್ತು ರಾಷ್ಟ್ರದ ಸಂಪನ್ಮೂಲಗಳನ್ನು ಈ ಉದ್ದೇಶದತ್ತ ತಿರುಗಿಸಿಕೊಂಡನು. ಹಿಟ್ಲರನು ಜರ್ಮನಿಯನ್ನು ಯುದ್ಧಸನ್ನದ್ಧಗೊಳಿಸಿದನು, ಮತ್ತು ೧೯೩೯ರಲ್ಲಿ ಜರ್ಮನ್ ಸೇನೆಯು (ವೆಹ್ರ್‌ಮ್ಯಾಚ್) ಪೋಲ್ಯಾಂಡ್ ಮೇಲೆ ಆಕ್ರಮಣ ಮಾಡುವ ಮೂಲಕ ಯುನೈಟೆಡ್ ಕಿಂಗ್ ಡಮ್ ಹಾಗೂ ಫ್ರಾನ್ಸ್ಗಳು ನಾಝಿ ಜರ್ಮನಿಯ (ಥರ್ಡ್ ರೀಚ್) ವಿರುದ್ಧ ಯುದ್ಧ ಘೋಷಿಸುವಂತಾಗಿ, ಈ ಘಟನೆಯು ಯುರೋಪಿನಲ್ಲಿ ಎರಡನೆ ಮಹಾಯುದ್ಧಕ್ಕೆ ದಾರಿ ಮಾಡಿಕೊಟ್ಟಿತು.

ಮೂರು ವರ್ಷಗಳೊಳಗಾಗಿ ಜರ್ಮನಿ ಮತ್ತು ಆಕ್ಸಿಸ್ ಶಕ್ತಿಗಳು (ಮಿಲಿಟರಿ ಒಪ್ಪಂದ ಮಾಡಿಕೊಂಡಿದ್ದ ರಾಷ್ಟ್ರಗಳು) ಯುರೋಪಿನ ಬಹುಭಾಗವನ್ನು, ಉತ್ತರ ಆಫ್ರಿಕಾದ ಬಹುಭಾಗವನ್ನು ಹಾಗೂ ಪೂರ್ವ ಮತ್ತು ಆಗ್ನೇಯ ಏಷ್ಯಾ ಮತ್ತು ಪೆಸಿಫಿಕ್ ಸಮುದ್ರವನ್ನು ಆಕ್ರಮಿಸಿದವು.೧೯೪೨ರ ಅನಂತರದ ದಿನಗಳಲ್ಲಿ ಮಿತ್ರ ರಾಷ್ಟ್ರಗಳು ಮೇಲುಗೈ ಸಾಧಿಸತೊಡಗಿದ್ದವು ಮತ್ತು ೧೯೪೫ರಲ್ಲಿ ಮಿತ್ರ ರಾಷ್ಟ್ರಗಳ ಸೇನೆಗಳು ಜರ್ಮನಿಯನ್ನು ಎಲ್ಲ ದಿಕ್ಕುಗಳಿಂದಲೂ ಮುತ್ತಿಗೆ ಹಾಕಿದವು. ಆತನ ಸೇನೆಯು ಯುದ್ಧ ಸಂದರ್ಭದಲ್ಲಿ ಸುಮಾರು ೧೭ ಮಿಲಿಯ ನಾಗರಿಕರನ್ನು, ಅವರಲ್ಲಿ ಅಂದಾಜಿನ ಪ್ರಕಾರ ಆರು ಮಿಲಿಯ ಯಹೂದಿಗಳನ್ನು, ಹಾಲೋಕ್ಯಾಸ್ಟ್ ಎಂದು ಕುಖ್ಯಾತವಾದ ಯೋಜಿತ ನರಮೇಧದ ಮೂಲಕ ವ್ಯವಸ್ಥಿತವಾಗಿ ಕೊಲ್ಲುವುದು ಮತ್ತಿತರ ಹಲವು ಬಗೆಯ ದೌರ್ಜನ್ಯಗಳನ್ನು ಎಸಗಿತ್ತು.

೧೯೪೫ರಲ್ಲಿ, ಯುದ್ಧದ ಕೊನೆಯ ದಿನಗಳಲ್ಲಿ ಹಿಟ್ಲರನು ತನ್ನ ದೀರ್ಘಕಾಲದ ಪ್ರೇಯಸಿ ಎವಾ ಬ್ರೌನ್ ಳನ್ನು ವಿವಾಹವಾದನು.ಅನಂತರ ಎರಡು ದಿನಗಳೊಳಗಾಗಿ ಅವರಿಬ್ಬರೂ ಆತ್ಮಹತ್ಯೆ ಮಾಡಿಕೊಂಡರು.

ಅರಿಸ್ಟಾಟಲ್‌

ಅರಿಸ್ಟಾಟಲ್‌ (Greek: Ἀριστοτέλης, ಅರಿಸ್ಟಾಟೆಲೆಸ್‌ ) (384 BC – 322 BC) ಒಬ್ಬ ಗ್ರೀಕ್‌ ದಾರ್ಶನಿಕ ಮಾತ್ರವಲ್ಲದೆ, ಪ್ಲೇಟೋನ ಓರ್ವ ವಿದ್ಯಾರ್ಥಿ ಹಾಗೂ ಅಲೆಕ್ಸಾಂಡರ್ನ ಗುರುವಾಗಿದ್ದ. ಭೌತಶಾಸ್ತ್ರ, ತತ್ತ್ವಮೀಮಾಂಸೆ, ಕವಿತೆ, ರಂಗಭೂಮಿ, ಸಂಗೀತ, ತರ್ಕಶಾಸ್ತ್ರ, ಭಾಷಣಶಾಸ್ತ್ರ, ರಾಜಕಾರಣ, ಸರ್ಕಾರ, ನೀತಿಶಾಸ್ತ್ರ, ಜೀವಶಾಸ್ತ್ರ, ಮತ್ತು ಪ್ರಾಣಿಶಾಸ್ತ್ರ ಇವೇ ಮೊದಲಾದವನ್ನು ಒಳಗೊಂಡಂತೆ ಅನೇಕ ವಿಷಯಗಳ ಕುರಿತು ಆತ ಬರೆದ.

ಪ್ಲೇಟೋನ ಗುರುವಾದ ಸಾಕ್ರಟಿಸ್‌ ಮತ್ತು ಪ್ಲೇಟೋನ ಜೊತೆಜೊತೆಗೆ, ಪಾಶ್ಚಿಮಾತ್ಯ ತತ್ತ್ವಶಾಸ್ತ್ರದಲ್ಲಿನ ಅತಿ ಪ್ರಮುಖ ಪ್ರಸಿದ್ಧ ಸಂಸ್ಥಾಪಕರಲ್ಲಿ ಅರಿಸ್ಟಾಟಲ್‌ ಕೂಡಾ ಒಬ್ಬನಾಗಿದ್ದಾನೆ. ಪಾಶ್ಚಿಮಾತ್ಯ ತತ್ತ್ವಶಾಸ್ತ್ರದ ಒಂದು ವ್ಯಾಪಕವಾದ ಪದ್ಧತಿಯನ್ನು ಸೃಷ್ಟಿಸುವಲ್ಲಿ ಆತ ಮೊದಲಿಗನಾಗಿದ್ದು, ನೀತಿಶಾಸ್ತ್ರ ಮತ್ತು ಸೌಂದರ್ಯ ಮೀಮಾಂಸೆ, ತರ್ಕಶಾಸ್ತ್ರ ಮತ್ತು ವಿಜ್ಞಾನ, ರಾಜಕಾರಣ ಮತ್ತು ತತ್ತ್ವಮೀಮಾಂಸೆ ಇವೇ ಮೊದಲಾದವುಗಳನ್ನು ಈ ಪದ್ಧತಿಯು ಒಳಗೊಂಡಿದೆ.

ಭೌತಿಕ ವಿಜ್ಞಾನಗಳ ಕುರಿತಾದ ಅರಿಸ್ಟಾಟಲ್‌ನ ದೃಷ್ಟಿಕೋನಗಳು ಮಧ್ಯಯುಗದ ಪಾಂಡಿತ್ಯಕ್ಕೆ ಗಾಢವಾದ ಸ್ವರೂಪವನ್ನು ನೀಡಿದವು. ಅಂತಿಮವಾಗಿ ಅವು ನ್ಯೂಟನ್ನನ ಭೌತಶಾಸ್ತ್ರದಿಂದ ಸ್ಥಾನಪಲ್ಲಟಗೊಂಡರೂ ಸಹ, ಅವುಗಳ ಪ್ರಭಾವವು ನವೋದಯ ಕಾಲಕ್ಕೂ ವಿಸ್ತರಿಸಿತು ಎಂದು ಹೇಳಬಹುದು. ಜೈವಿಕ ವಿಜ್ಞಾನಗಳಲ್ಲಿನ ಆತನ ಕೆಲವೊಂದು ವೀಕ್ಷಣೆಗಳು ತುಂಬಾ ನಿಖರವಾಗಿವೆ ಎಂದು ಕೇವಲ ಹತ್ತೊಂಬತ್ತನೇ ಶತಮಾನದಲ್ಲಿ ದೃಢೀಕರಿಸಲ್ಪಟ್ಟವು. ಅತಿ ಮುಂಚಿನದು ಎಂದು ಹೇಳಲಾದ ತರ್ಕಶಾಸ್ತ್ರದ ಔಪಚಾರಿಕ ಅಧ್ಯಯನವು ಆತನ ಕೃತಿಗಳಲ್ಲಿ ಸೇರಿಕೊಂಡಿದ್ದು, ಅದನ್ನು ಹತ್ತೊಂಬತ್ತನೇ ಶತಮಾನದ ಅಂತ್ಯದ ವೇಳೆಗೆ ಆಧುನಿಕ ಔಪಚಾರಿಕ ತರ್ಕಶಾಸ್ತ್ರದೊಳಗೆ ಅಳವಡಿಸಲಾಯಿತು. ತತ್ತ್ವಮೀಮಾಂಸೆಗೆ ಸಂಬಂಧಿಸಿ ಹೇಳುವುದಾದರೆ, ಮಧ್ಯ ಯುಗಗಳಲ್ಲಿನ ಇಸ್ಲಾಂ ಹಾಗೂ ಯೆಹೂದೀಯ ಸಂಪ್ರದಾಯಗಳಲ್ಲಿರುವ ತತ್ವಶಾಸ್ತ್ರದ ಮತ್ತು ದೇವತಾಶಾಸ್ತ್ರದ ಚಿಂತನಾ ಲಹರಿಗಳ ಮೇಲೆ ಅರಿಸ್ಟಾಟಲ್ ಸಿದ್ಧಾಂತವು ವ್ಯಾಪಕವಾದ ಪ್ರಭಾವವನ್ನು ಹೊಂದಿತ್ತು. ಇದು ಇಷ್ಟಕ್ಕೇ ನಿಲ್ಲದೇ, ಕ್ರೈಸ್ತ ದೇವತಾಶಾಸ್ತ್ರದ, ಅದರಲ್ಲೂ ವಿಶೇಷವಾಗಿ ಪೌರಸ್ತ್ಯ ಸಾಂಪ್ರದಾಯಿಕ ದೇವತಾಶಾಸ್ತ್ರ, ಮತ್ತು ಕೆಥೊಲಿಕ್ ಚರ್ಚ್‌‌ನ ವಿದ್ವತ್ಪೂರ್ಣ ಸಂಪ್ರದಾಯದ ಮೇಲೂ ಪ್ರಭಾವವನ್ನು ಬೀರುತ್ತಿದೆ.

ಆತನ ನೀತಿಶಾಸ್ತ್ರ ಯಾವಾಗಲೂ ಪ್ರಭಾವಶಾಲಿಯಾಗಿದ್ದರೂ ಸಹ, ಆಧುನಿಕ ಸದ್ಗುಣ ನೀತಿಶಾಸ್ತ್ರದ ಉದಯವಾಗುವುದರೊಂದಿಗೆ ಹೊಸಚೈತನ್ಯದೊಂದಿಗಿನ ಆಸಕ್ತಿಯನ್ನು ಗಳಿಸಿದವು. ಅರಿಸ್ಟಾಟಲ್‌ನ ತತ್ತ್ವಶಾಸ್ತ್ರದ ಎಲ್ಲಾ ಮಗ್ಗುಲುಗಳೂ, ವಿದ್ವತ್ಪೂರ್ಣವಾದ ಅಥವಾ ಪ್ಲೇಟೋವಿನ ತಾತ್ವಿಕ ಪಂಥಕ್ಕೆ ಸಂಬಂಧಿಸಿದ ಇಂದಿನ ಕ್ರಿಯಾಶೀಲ ಅಧ್ಯಯನದ ಕೇಂದ್ರವಸ್ತುವಾಗಿಯೇ ಮುಂದುವರಿದುಕೊಂಡು ಬಂದಿವೆ. ಸುಸಂಸ್ಕೃತವಾದ ಅನೇಕ ಪ್ರಕರಣ ಗ್ರಂಥಗಳು ಹಾಗೂ ಸಂಭಾಷಣಾ ರೂಪದ ಗ್ರಂಥಗಳನ್ನು ಅರಿಸ್ಟಾಟಲ್‌ ಬರೆದನಾದರೂ, (ಆತನ ಸಾಹಿತ್ಯಿಕ ಶೈಲಿಯನ್ನು "ಬಂಗಾರದ ಒಂದು ನದಿ" ಎಂದು ಸಿಸೆರೊ ವರ್ಣಿಸಿದ್ದಾನೆ), ಆತನ ಬಹುಪಾಲು ಬರಹಗಳು ಈಗ ಇಲ್ಲವಾಗಿವೆ ಮತ್ತು ಆತನ ಮೂಲಕೃತಿಗಳ ಪೈಕಿ ಕೇವಲ ಮೂರನೇ ಒಂದು ಭಾಗ ಮಾತ್ರವೇ ಸದ್ಯಕ್ಕೆ ಲಭ್ಯವಿವೆ ಎಂಬ ಅಭಿಪ್ರಾಯವೂ ಚಾಲ್ತಿಯಲ್ಲಿದೆ.

ಉತ್ತರಾಧಿಕಾರ

ಉತ್ತರಾಧಿಕಾರವು ಒಬ್ಬ ವ್ಯಕ್ತಿಯ ಮರಣದ ನಂತರ ಆಸ್ತಿ, ಆಸ್ತಿಹಕ್ಕುಗಳು, ಋಣಗಳು, ಹಕ್ಕುಗಳು, ಮತ್ತು ಕರ್ತವ್ಯಗಳನ್ನು ಹಸ್ತಾಂತರಿಸುವ ಅಭ್ಯಾಸ. ಉತ್ತರಾಧಿಕಾರದ ನಿಯಮಗಳು ಸಮಾಜಗಳ ನಡುವೆ ಬದಲಾಗುತ್ತವೆ ಮತ್ತು ಕಾಲ ಕಳೆದಂತೆ ಬದಲಾಗಿವೆ. ಕಾನೂನಿನಲ್ಲಿ, ಉತ್ತರಾಧಿಕಾರಿ/ವಾರಸುದಾರನು ಮೃತನು ನಾಗರಿಕನಾಗಿದ್ದ ಅಥವಾ ಮೃತನು ಮರಣಹೊಂದಿದ ಅಥವಾ ಮರಣದ ಸಮಯದಲ್ಲಿ ಆಸ್ತಿಯನ್ನು ಹೊಂದಿದ ಕಾನೂನುವ್ಯಾಪ್ತಿಯಲ್ಲಿನ ಉತ್ತರಾಧಿಕಾರದ ನಿಯಮಗಳಿಗೆ ಬದ್ಧವಾಗಿ ಮೃತರ ಆಸ್ತಿಯ ಒಂದು ಪಾಲನ್ನು ಪಡೆಯಲು ಅರ್ಹನಾಗಿರುವ ಒಬ್ಬ ವ್ಯಕ್ತಿ.

ಉತ್ತರಾಧಿಕಾರವು ಒಂದು ಉಯಿಲಿನ ನಿಯಮಗಳಡಿಯಲ್ಲಿ ಅಥವಾ ಮೃತನು ಉಯಿಲನ್ನು ಹೊಂದಿರದಿದ್ದರೆ ಉಯಿಲು ನಾಮಕರಣವಿಲ್ಲದೆ ಇರುವ ವಾರಸುದಾರಿಕೆಯ ನಿಯಮಗಳಿಂದ ಆಗಬಹುದು. ಆದರೆ, ಉಯಿಲು ಸೃಷ್ಟಿಯಾದ ಸಮಯದಲ್ಲಿನ ಕಾನೂನುವ್ಯಾಪ್ತಿಯ ಕಾನೂನುಗಳನ್ನು ಅನುಸರಿಸಬೇಕು, ಇಲ್ಲವಾದರೇ ಅದನ್ನು ಅಮಾನ್ಯವೆಂದು ಘೋಷಿಸಲಾಗುವುದು (ಉದಾಹರಣೆಗೆ, ಕೆಲವು ರಾಜ್ಯಗಳು ಸ್ವಲಿಖಿತ ಉಯಿಲುಗಳನ್ನು ಮಾನ್ಯವೆಂದು ಗುರುತಿಸುವುದಿಲ್ಲ, ಅಥವಾ ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಗುರುತಿಸುತ್ತವೆ) ಮತ್ತು ಆಗ ಉಯಿಲು ನಾಮಕರಣವಿಲ್ಲದೆ ಇರುವ ವಾರಸುದಾರಿಕೆಯ ಕಾನೂನುಗಳು ಅನ್ವಯಿಸುವವು.

ಮೃತನ ಮರಣಕ್ಕೆ ಮೊದಲು ಒಬ್ಬ ವ್ಯಕ್ತಿಯು ವಾರಸುದಾರನಾಗುವುದಿಲ್ಲ, ಏಕೆಂದರೆ ವಾರಸುದಾರರಾಗಲು ಅರ್ಹರಾಗುವ ವ್ಯಕ್ತಿಗಳ ನಿಖರ ಗುರುತನ್ನು ಆವಾಗ ಮಾತ್ರ ನಿರ್ಧರಿಸಲಾಗುತ್ತದೆ. ಅವರು ಉತ್ತರಾಧಿಕಾರ ಪಡೆಯಲು ಮೊದಲಿನವರಾಗಿದ್ದರೆ ಮತ್ತು ಇನ್ನೊಬ್ಬ ಹಕ್ಕುದಾರರಿಂದ ವಾರಸುದಾರರಾಗುವುದರಿಂದ ಸ್ಥಳಾಂತರಿಸಲು ಸಾಧ್ಯವಿಲ್ಲದಿದ್ದರೆ ಉತ್ತರಾಧಿಕಾರಿಗಳಾಗಲು ನಿರೀಕ್ಷಿಸಲಾದ ಆಳ್ವಿಕೆ ನಡೆಸುವ ಕುಲೀನ ಅಥವಾ ಅರಸು ಮನೆತನದ ಸದಸ್ಯರನ್ನು ಪ್ರಧಾನ ಉತ್ತರಾಧಿಕಾರಿಗಳು ಎಂದು ಕರೆಯಲಾಗುತ್ತದೆ; ಇಲ್ಲವೆಂದರೆ, ಅವರನ್ನು ಸಂಭಾವ್ಯ ಉತ್ತರಾಧಿಕಾರಿಗಳೆಂದು ಕರೆಯಲಾಗುತ್ತದೆ. ಇನ್ನೂ ಹೆಚ್ಚಾಗಿ, ಎಲ್ಲರೂ ಪರಿತ್ಯಜಿಸಿ ಒಬ್ಬರು ಮಾತ್ರ ಒಪ್ಪಿದರೆ, ಜಂಟಿ ಉತ್ತರಾಧಿಕಾರ ಎಂಬ ಪರಿಕಲ್ಪನೆಯಿದೆ. ಇದನ್ನು ಕೋಪಾರ್ಸೆನಿ ಎಂದು ಕರೆಯಲಾಗುತ್ತದೆ.

ಪೈತೃವಂಶಕ ಉತ್ತರಾಧಿಕಾರದ ರೂಢಿಗಳ ಬಗ್ಗೆ ವಿವರವಾದ ಮಾನವಶಾಸ್ತ್ರ ಸಂಬಂಧಿ ಮತ್ತು ಸಮಾಜಶಾಸ್ತ್ರ ಸಂಬಂಧಿ ಅಧ್ಯಯನಗಳನ್ನು ನಡೆಸಲಾಗಿದೆ. ಇದರಲ್ಲಿ ಗಂಡು ಮಕ್ಕಳು ಮಾತ್ರ ವಾರಸುದಾರರಾಗಬಹುದು. ಕೆಲವು ಸಂಸ್ಕೃತಿಗಳು ಮಾತೃವಂಶಕ ಉತ್ತರಾಧಿಕಾರವನ್ನೂ ಬಳಸುತ್ತವೆ. ಇದರಲ್ಲಿ ಆಸ್ತಿಯು ಹೆಣ್ಣು ಸಂತತಿಯ ಮೂಲಕ ಮಾತ್ರ ಹಸ್ತಾಂತರಗೊಳ್ಳುತ್ತದೆ, ಅತ್ಯಂತ ಸಾಮಾನ್ಯವಾಗಿ ಮೃತನ ಸೋದರಿಯ ಪುತ್ರರಿಗೆ ಹೋಗುತ್ತದೆ; ಆದರೆ, ಕೆಲವು ಸಮಾಜಗಳಲ್ಲಿ, ತಾಯಿಯಿಂದ ಅವಳ ಪುತ್ರಿಯರಿಗೆ ಕೂಡ ಹೋಗುತ್ತದೆ. ಕೆಲವು ಪ್ರಾಚೀನ ಸಮಾಜಗಳು ಮತ್ತು ಬಹುತೇಕ ಆಧುನಿಕ ದೇಶಗಳು ಲಿಂಗ ಮತ್ತು/ಅಥವಾ ಜನನ ಕ್ರಮವನ್ನು ಆಧರಿಸಿ ತಾರತಮ್ಯ ಮಾಡದೆ ಸಮಾನತಾವಾದಿ ಉತ್ತರಾಧಿಕಾರವನ್ನು ಬಳಸುತ್ತವೆ.

ಉಷಾ ನವರತ್ನರಾಂ

ಉಷಾ ನವರತ್ನ ರಾಂ (ನವೆಂಬರ್ ೨೩, ೧೯೩೯ - ಅಕ್ಟೋಬರ್ ೦೧, ೨೦೦೦) ಕನ್ನಡದ ಜನಪ್ರಿಯ ಕಥೆಗಾರ್ತಿಯರಲ್ಲೊಬ್ಬರು.

ಚನ್ನಸ೦ದ್ರ

ಚನ್ನಸ೦ದ್ರ ಬೆ೦ಗಳೂರಿನಲ್ಲಿನ ಎರಡು ಪ್ರದೇಶಗಳ ಹೆಸರು. ಬಿ.ಡಿ.ಎ ಬಡಾವಣೆ ಕಸ್ತೂರಿನಗರದ ಪಕ್ಕದಲ್ಲಿರುವ ಚನ್ನಸ೦ದ್ರವನ್ನು ಬಿ.ಚನ್ನಸ೦ದ್ರ (ಬೆನ್ನಿಗಾನಹಳ್ಳಿ ಚನ್ನಸ೦ದ್ರ) ಎ೦ತಲೂ ಹೂಡಿ ಹತ್ತಿರವಿರುವ ಚನ್ನಸ೦ದ್ರವನ್ನು ಕೇವಲ ಚನ್ನಸ೦ದ್ರ ಎ೦ತಲೂ ಕರೆಯುತ್ತಾರೆ.

ಬಿ.ಚನ್ನಸ೦ದ್ರ ಮೊದಲು ಒಂದು ಹಳ್ಳಿಯಾಗಿತ್ತು. ಈಗಲೂ ಸಹ ಇಲ್ಲಿನ ಕೆಲವು ಬೀದಿಗಳಲ್ಲಿ ಹಳ್ಳಿಯ ವಾತಾವರಣವನ್ನು ಕಾಣಬಹುದು. ಈಗ ಇದರ ಸುತ್ತಮುತ್ತ ಮೆಟ್ರೋ ಸೇರಿದ೦ತೆ ಅನೇಕ ಅಭಿವೃದ್ಧಿ ಕೆಲಸಗಳು ನಡೆಯುತ್ತಿರುವುದರಿ೦ದ ಇಲ್ಲಿನ ನೆಲಕ್ಕೆ ಹೆಚ್ಚಿನ ಬೆಲೆ ಬ೦ದಿದೆ. ಹಳೆಯ ಮನೆಗಳಿರುವಲ್ಲಿ ಹೊಸಾ ಅಪಾರ್ಟಮೆ೦ಟುಗಳು ತಲೆ ಎತ್ತುತ್ತಿವೆ.

ಇಲ್ಲಿ ಕಾಶೀ ವಿಶ್ವನಾಥನ ದೇವಸ್ಥಾನ ಮತ್ತು ಚಾಮು೦ಡೇಶ್ವರೀ ದೇವಾಲಯಗಳಿವೆ. ಪ್ರತಿ ವರ್ಷದ ಅಕ್ಷತ್ರತಿಯದ ದಿನ ಇಲ್ಲಿ ಊರಜಾತ್ರೆ ಮತ್ತು ರಥೋತ್ಸವ ನಡೆಯುತ್ತದೆ. ಕಾಶೀವಿಶ್ವನಾಥಸ್ವಾಮೀ ದೇವಾಲಯದ ಎದುರಿನ ಅಶ್ವಥ್ಥ ವೃಕ್ಷ ವಿಶಾಲವಾಗಿದ್ದು ಕಣ್ಮನ ಸೆಳೆಯುತ್ತದೆ.

ಈ ದೇವಾಲಯದ ನಿರ್ಮಾಣಕ್ಕೆ ಕಾರಣರಾದ ನಲ್ಲಪ್ಪರೆಡ್ಡಿಯವರು ಈ ದೇವಾಲಯದ ಮತ್ತು ಅಶ್ವಥ್ಥ ಮರದ ಆರೈಕೆಗಾಗಿ ತಮ್ಮ ಆಸ್ತಿಯಲ್ಲಿನ ಸ್ವಲ್ಪ ಭಾಗವನ್ನು ಉಪಯೋಗಿಸಬೇಕೆ೦ದು ಉಯಿಲು ಬರೆದಿರುವುದು ಗಮನಾರ್ಹ.

ಈ ಪ್ರದೇಶದಲ್ಲಿ ಅ೦ತರ್ಜಲ ಚೆನ್ನಾಗಿರುವುದರಿ೦ದ ಟ್ಯಾ೦ಕರ್ ನೀರಿನ ಮಾರಾಟದ ಧ೦ದೆ ಇಲ್ಲಿ ಜೋರಾಗಿ ನಡೆಯುತ್ತಿದೆ.

ಚಾರ್ಲ್ಸ್‌ ಡಿಕನ್ಸ್

ಚಾರ್ಲ್ಸ್‌ ಜಾನ್‌ ಹಫಾಮ್‌ ಡಿಕನ್ಸ್‌ , FRSA (pronounced /ˈtʃɑrlz ˈdɪkɪnz/; 7 ಫೆಬ್ರವರಿ 1812–9 ಜೂನ್‌ 1870), ಕಾವ್ಯನಾಮ "ಬೋಝ್‌‌", ವಿಕ್ಟೋರಿಯಾ ಯುಗದ ಅತ್ಯಂತ ಜನಪ್ರಿಯ ಇಂಗ್ಲಿಷ್‌ ಕಾದಂಬರಿಕಾರನಾಗಿದ್ದ ಮತ್ತು ಸಾರ್ವಕಾಲಿಕವಾಗಿರುವ ಅತ್ಯಂತ ಜನಪ್ರಿಯರ ಪೈಕಿ ಒಬ್ಬನಾಗಿದ್ದ. ಸಾಮಾಜಿಕ ಸುಧಾರಣೆಯ ವಸ್ತುವು ಆತನ ಕೃತಿಯಾದ್ಯಂತ ಪ್ರವಹಿಸುವುದರೊಂದಿಗೆ, ಸಾಹಿತ್ಯದ ಅತ್ಯಂತ ಸಾಂಪ್ರದಾಯಿಕ ಮಾದರಿ ಪಾತ್ರಗಳ ಪೈಕಿ ಕೆಲವೊಂದನ್ನು ಆತ ಸೃಷ್ಟಿಸಿದ. ಆತನ ಕಾದಂಬರಿಗಳು ಹಾಗೂ ಕಿರುಗತೆಗಳ ಜನಪ್ರಿಯತೆ ಎಷ್ಟಿದೆಯೆಂದರೆ, ಅವುಗಳ ಮುದ್ರಿತಪ್ರತಿ ಅಲಭ್ಯವಾಗಿದೆ ಎಂಬ ಪರಿಸ್ಥಿತಿ ಎಂದಿಗೂ ನಿರ್ಮಾಣಗೊಂಡಿದ್ದೇ ಇಲ್ಲ.ಆತನ ಕೃತಿಗಳಲ್ಲಿ ಬಹುಪಾಲು, ಆ ಸಮಯದಲ್ಲಿ ಕಾದಂಬರಿಯನ್ನು ಪ್ರಕಟಿಸುವುದರ ಒಂದು ಜನಪ್ರಿಯ ಮಾರ್ಗವಾಗಿದ್ದ, ಧಾರಾವಾಹಿಯಾಗಿರುವ ಸ್ವರೂಪದಲ್ಲಿ ನಿಯತಕಾಲಿಕಗಳು ಹಾಗೂ ಸಂಕೀರ್ಣ ಪತ್ರಿಕೆಗಳಲ್ಲಿ ಮೊದಲು ಕಾಣಿಸಿಕೊಂಡವು. ಧಾರಾವಾಹಿಯ ಪ್ರಕಟಣೆಯು ಪ್ರಾರಂಭವಾಗುವುದಕ್ಕೆ ಮುಂಚಿತವಾಗಿ ಸಂಪೂರ್ಣ ಕಾದಂಬರಿಯನ್ನು ಬರೆದು ಮುಗಿಸುವುದು ಇತರ ಲೇಖಕರ ಪರಿಪಾಠವಾಗಿದ್ದರೆ, ಡಿಕನ್ಸ್‌ ಅವನ್ನು ಭಾಗ ಭಾಗಗಳಾಗಿ, ಅವು ಯಾವ ಕ್ರಮದಲ್ಲಿ ಕಾಣಿಸಿಕೊಳ್ಳಬೇಕೋ ಹಾಗೆ ಬರೆಯುತ್ತಿದ್ದ. ಈ ಪರಿಪಾಠದಿಂದಾಗಿ ಆತನ ಕಥೆಗಳಿಗೆ ಒಂದು ನಿರ್ದಿಷ್ಟ ಸ್ವರೂಪದ ಲಯ ಸಿಕ್ಕಂತಾಗಿ ಒಂದು "ಕುತೂಹಲ ಘಟ್ಟ‌"ದಿಂದ ಮತ್ತೊಂದಕ್ಕೆ ಸಾಗುವಾಗ ಕೊಂಚ ವಿರಾಮವನ್ನು ನೀಡುತ್ತಿತ್ತು. ಇದರಿಂದಾಗಿ ಮುಂದಿನ ಕಂತು ಯಾವಾಗ ಬರುವುದೋ ಎಂದು ಓದುಗರು ತುದಿಗಾಲಲ್ಲಿ ನಿಲ್ಲುವಂತಾಗುತ್ತಿತ್ತು.ಜಾರ್ಜ್‌ ಗಿಸ್ಸಿಂಗ್‌ ಮತ್ತು G. K. ಚೆಸ್ಟರ್‌ಟನ್‌‌ನಂಥ ಲೇಖಕರಿಂದ ಆತನ ಕೆಲಸವು ಹೊಗಳಿಕೆಗೆ ಪಾತ್ರವಾಗಿದೆ. ಕಾದಂಬರಿಯ ಗದ್ಯದ ನೈಪುಣ್ಯ, ಮತ್ತು ಅನನ್ಯ ವ್ಯಕ್ತಿತ್ವಗಳಿಂದ ಸಮೃದ್ಧವಾಗಿದ್ದ ಅದರ ವೇದಿಕೆ ಇತ್ಯಾದಿಗಳಿಂದಾಗಿ ಈ ಹೊಗಳಿಕೆಯು ಆತನಿಗೆ ದಕ್ಕುತ್ತಿತ್ತು. ಆದರೆ ಅವನ ಕಾದಂಬರಿಗಳ ಇದೇ ಗುಣಲಕ್ಷಣಗಳು, ಡಿಕನ್ಸ್‌ನನ್ನು ಆತನ ಅತಿಭಾವುಕತೆ ಮತ್ತು ಅಸಂಭಾವ್ಯತೆಗಾಗಿ ಹೆನ್ರಿ ಜೇಮ್ಸ್‌ ಮತ್ತು ವರ್ಜೀನಿಯಾ ವೂಲ್ಫ್‌ನಂಥ ಇತರರು ಟೀಕಿಸುವಂತೆ ಮಾಡಿವೆ.

ಜರ್ಸಿ

ಜರ್ಸಿ ಕ್ಷೇತ್ರಾಡಳಿತ ಪ್ರದೇಶವು (English pronunciation: /ˈdʒɜrzi/, French: [ʒɛʁzɛ]; ಜೆರ್ರೆಯೆಸ್: ಜೆರ್ರಿ ) ಎಂದು ಕರೆಸಿಕೊಳ್ಳುವ ಇದು ಬ್ರಿಟಿಶ್ ಕ್ರೌನ್ ಆಡಳಿತದ ಸ್ವತಂತ್ರದ್ವೀಪ ಪ್ರದೇಶವಾಗಿದೆ.ಇದು ಫ್ರಾನ್ಸ್ ನ ನಾರ್ಮಂಡಿ, ಕರಾವಳಿಗೆ ಸಮಾನಾಂತರದಲ್ಲಿ ಹರಡಿದೆ. ಈ ಜರ್ಸಿ ದ್ವೀಪದ ಆಡಳಿತ ಕ್ಷೇತ್ರ ಪ್ರದೇಶ ಸಣ್ಣ ದ್ವೀಪಗಳ ಎರಡು ಗುಂಪುಗಳನ್ನು ಹೊಂದಿದೆ. ಮಿಂಕ್ವೆರ್ಸ್ ಮತ್ತು ಎಕ್ರೆಹೊಸ್ , ಮತ್ತು ಪಿಯರ್ಸ್ ಡೆ ಎಕ್ ; ಅಲ್ಲದೇ ಇನ್ನುಳಿದ ಬಂಡೆಗಲ್ಲು ಪ್ರದೇಶ ಮತ್ತು ದಂಡೆ ಪ್ರದೇಶಗಳು ಸೇರಿದ್ದರೂ ಅವು ಕಾಯಂ ಆಗಿ ಇದರೊಂದಿಗೆ ಒಂದಾಗಿ ಬೆರೆತು ನೆಲೆಯಾಗಿಲ್ಲ. ಇದರ ಜೊತೆಗೆ ಆಡಳಿತ ಪ್ರದೇಶ ಹೊಂದಿರುವ ಗುರ್ನಸಿ, ಸೇರಿ ರಚಿಸುವ ಈ ದ್ವೀಪ ಪ್ರದೇಶ ಸಮೂಹಕ್ಕೆ ಚಾನಲ್ ಐಲ್ಯಾಂಡ್ಸ್ ಎಂದು ಹೆಸರಿಸಲಾಗಿದೆ. ಐಸ್ಲೆ ಆಫ್ ಮನ್,ಇರುವಂತೆ ಜರ್ಸಿ ಕೂಡಾ ದಿ ಕ್ರೌನ್ ನ ಆಡಳಿತದಲ್ಲಿ ಸ್ವತಂತ್ರ ಅಸ್ತಿತ್ವ ಹೊಂದಿದೆ.ಅದಲ್ಲದೇ ಇದು ಯುನೈಟೆಡ್ ಕಿಂಗ್ಡಮ್. ನ ಒಂದು ಭಾಗವೆನಿಸಿದೆ. ಜರ್ಸಿಯು ಅಂತರರಾಷ್ಟ್ರೀಯ ವಲಯದಲ್ಲಿ ತನ್ನನ್ನು ಗುರುತಿಸಿಕೊಳ್ಳಲು UK,ದಿಂದ ಪ್ರತ್ಯೇಕವಾಗಿಯೇ ಗುರುತಿಸಿಕೊಳ್ಳುತ್ತದೆ. ಅಷ್ಟೇ ಅಲ್ಲದೇ ಇದು ಕಾಮನ್ ಟ್ರಾವಲ್ ಏರಿಯಾ ಅಂದರೆ ಸಾಮಾನ್ಯ ಪ್ರವಾಸಿ ಪ್ರದೇಶವಾಗಿ ಗುರುತಿಸಲ್ಪಡುತ್ತದೆ.ಇಲ್ಲಿ "ಯುನೈಟೆಡ್ ಕಿಂಗ್ಡಮ್ " ವ್ಯಾಖ್ಯಾನವನ್ನು ಬ್ರಿಟಿಶ್ ನ್ಯಾಶ್ ನಾಲಟಿ ಆಕ್ಟ್ 1981 ರ ಪ್ರಕಾರ ಬ್ರಿಟಿಶ್ ಕ್ರೌನ್ ಎಂದರೆ, UK ಮತ್ತು ದ್ವೀಪಗಳ ಒಟ್ಟು ಸಮೂಹ ಎಂದು ಅರ್ಥವಿವರಣೆ ನೀಡಲಾಗಿದೆ. ಇಲ್ಲಿ ಯುನೈಟೆಡ್ ಕಿಂಗ್ಡಮ್ ಸಾಂವಿಧಾನಿಕವಾಗಿ ಜರ್ಸಿಯ ರಕ್ಷಣೆ ಮಾಡಬೇಕಾಗುತ್ತದೆ. ಜರ್ಸಿಯು ಯುರೊಪಿಯನ್ ಯುನಿಯನ್ ನ ಭಾಗವಲ್ಲ.ಆದರೆ ಅದರೊಂದಿಗೆ ವಿಶೇಷ ಸಂಬಂಧ ಹೊಂದಿದೆ.ಸಾಮಗ್ರಿಗಳ ಮುಕ್ತ ವ್ಯಾಪಾರಕ್ಕಾಗಿ ಇದು ಯುರೊಪಿಯನ್ ಸಮುದಾಯದಲ್ಲಿದೆ.

ಟಿ.ಸುನಂದಮ್ಮ

ಲೇಖಕಿಯರೆ ಬೆರಳೆಣಿಕೆಯಷ್ಟು ಇದ್ದ ಕಾಲದಲ್ಲಿ ಟಿ.ಸುನಂದಮ್ಮನವರು ಹಾಸ್ಯ ಲೇಖಕಿಯಾಗಿ ಕನ್ನಡ ಸಾಹಿತ್ಯಕ್ಕೆ ಸೇವೆ ಸಲ್ಲಿಸಿದರು. ೧೯೪೨ರಲ್ಲಿ " ರಾಶಿ"ಯವರು ಪ್ರಾರಂಭಿಸಿದ "ಕೊರವಂಜಿ" ಮಾಸಪತ್ರಿಕೆಯಲ್ಲಿ ೨೫ ವರ್ಷಗಳ ಕಾಲ ಇವರ ಅನೇಕ ಹಾಸ್ಯ ಲೇಖನಗಳು ಪ್ರಕಟವಾಗಿವೆ.

ಥಾಮಸ್ ಹಾರ್ಡಿ

ಧಾಮಸ್‌ ಹಾರ್ಡಿ , OM ( 2 ಜೂನ್‌ 1840- 11 ಜನವರಿ 1928) ಇಂಗ್ಲಿಷ್ ಮೂಲದ ಒಬ್ಬ ಕಾದಂಬರಿಕಾರ ಮತ್ತು ಕವಿಯಾಗಿದ್ದರು. ಅವರ ಕೃತಿಗಳು ಸಾಮಾನ್ಯವಾಗಿ ಯಥಾರ್ಥ ಚಿತ್ರಣದ ಬೆಳವಣಿಗೆಗೆ ಸೇರಿದರೂ, ಅವರ ಹಲವು ಕವನಗಳು ಮುಂಚಿನ ಸಾಹಿತ್ಯ ಯುಗದ ರಮ್ಯ ಮತ್ತು ಜ್ಞಾನೋದಯ ಅವಧಿಗಳ ಅಂಶಗಳನ್ನು ಪ್ರದರ್ಶಿಸುತ್ತದೆ. ಇದರಲ್ಲಿ ಅಲೌಕಿಕ ಶಕ್ತಿಗಳ ಬಗ್ಗೆ ಅವರ ಆಕರ್ಷಣೆ ಕೂಡ ಒಳಗೊಂಡಿದೆ.

ತಮ್ಮನ್ನು ಸ್ವತಃ ಹಣಕ್ಕಾಗಿ ಕಾದಂಬರಿಗಳನ್ನು ರಚಿಸಿದ ಕವಿಯನ್ನಾಗಿ ಪರಿಗಣಿಸಿದರೂ, ಅವರ ಜೀವಾವಧಿಯಲ್ಲಿ ಅವರು ಹೆಚ್ಚಾಗಿ ತಮ್ಮ ಕಾದಂಬರಿಗಳಿಗಾಗಿ ಖ್ಯಾತರಾಗಿದ್ದರು. ಇವರ ಕಾದಂಬರಿಗಳಲ್ಲಿ ಟೆಸ್‌ ಆಫ್‌ ದಿ ಡಿ'ಅರ್ಬರ್ವಿಲ್ಸ್‌ ಹಾಗೂ ಫಾರ್‌ ಫ್ರಮ್‌ ದಿ ಮ್ಯಾಡಿಂಗ್‌ ಕ್ರೌಡ್‌ ಅವರಿಗೆ ಮಹಾನ್‌ ಕಾದಂಬರಿಕಾರ ಎಂಬ ಖ್ಯಾತಿಯನ್ನು ತಂದುಕೊಟ್ಟಿತು. ಇವರ ಕಾಲ್ಪನಿಕ ಕಥಾ-ಕೃತಿಗಳು ಮೊದಲಿಗೆ ಪತ್ರಿಕೆಗಳಲ್ಲಿ ಧಾರಾವಾಹಿ-ರೂಪದಲ್ಲಿ ಪ್ರಕಟಣೆಯಾಗುತ್ತಿದ್ದವು. ಅವರು ಹುಟ್ಟಿ-ಬೆಳೆದ ಡಾರ್ಚೆಸ್ಟರ್‌ ವಲಯವನ್ನಾಧರಿಸಿ, ಅರೆ-ಕಾಲ್ಪನಿಕ ವೆಸೆಕ್ಸ್‌ ಎಂಬ ಭೂಪ್ರದೇಶದಲ್ಲಿ ಅವರು ಬರೆದ ಕಾಲ್ಪನಿಕ-ಕಥೆಗಳನ್ನು ಹೆಣೆಯಲಾಗಿತ್ತು ಮತ್ತು ಅವು ಬಾವೋದ್ರೇಕಗಳು ಮತ್ತು ಸಾಮಾಜಿಕ ಸನ್ನಿವೇಶಗಳ ವಿರುದ್ಧ ಹೋರಾಡುವ ದುರಂತ ಪಾತ್ರಗಳನ್ನು ಶೋಧಿಸಿತು.

ಥಾಮಸ್ ಹಾರ್ಡಿಯವರ ಕವಿತೆಗಳು ಮೊದಲ ಬಾರಿಗೆ ತಮ್ಮ ಐವತ್ತನೇ ವಯಸ್ಸಿನಲ್ಲಿ ಪ್ರಕಟಣೆಯಾದವು ಮತ್ತು ಅವರ ಕಾದಂಬರಿಗಳು ಒಳ್ಳೆಯ ಮೆಚ್ಚುಗೆ ಗಳಿಸಿದವು. ಇವು ಆಧುನಿಕ ಇಂಗ್ಲಿಷ್ ಭಾಷಾ ಕವಿತೆಗಳ ಮೇಲೆ ಗಮನಾರ್ಹ ಪ್ರಭಾವ ಬೀರಿದವು. ಅದರಲ್ಲೂ ವಿಶೇಷವಾಗಿ, 1950 ಹಾಗೂ 1960ರ ದಶಕದ ಕಾಲಾವಧಿಗಳಲ್ಲಿ, ಥಾಮಸ್‌ ಹಾರ್ಡಿಯವರದ್ದು ಪ್ರಧಾನ ವ್ಯಕ್ತಿತ್ವ ಎಂದು ದಿ ಮೂವ್ಮೆಂಟ್‌ ಕವಿಗಳು ಅಭಿಪ್ರಾಯಪಟ್ಟಿದ್ದಾರೆ.

ಫ್ರೆಂಚ್ ನ್ಯಾಯ

ಫ್ರೆಂಚ್ ನ್ಯಾಯ - ಫ್ರಾನ್ಸ್ ದೇಶದ ನ್ಯಾಯ ಪದ್ಧತಿಯಾಗಿದ್ದು 19ನೆಯ ಶತಮಾನದ ಆರಂಭದಲ್ಲಿ ಚಕ್ರವರ್ತಿ ನೆಪೋಲಿಯನ್ ಜಾರಿಗೆ ತಂದ ಹಲವಾರು ಸಂಹಿತೆಗಳನ್ನು ಇದು ಆಧರಿಸಿದೆ. ಇವುಗಳಿಗೆ ಆಧಾರವಾಗಿದ್ದ ಹಿಂದಿನ ನ್ಯಾಯಿಕ ಅನುಭವ ಎರಡು ಬಗೆಯದು: 1 ಪ್ರಾಚೀನ ಆಳ್ವಿಕೆಯ ಸಂಪ್ರದಾಯಗಳು. 2 ಫ್ರೆಂಚ್ ಕ್ರಾಂತಿಯ ಸಾಧನೆಗಳು. ದಿವಾಣೀ ಸಂಹಿತೆಯನ್ನು (ಕೋಡ್ ಸಿವಿಲ್) ರಚಿಸಿದಾತ ಇವೆರಡರ ಉತ್ತಮ ಲಕ್ಷಣಗಳನ್ನು ಉಳಿಸಿಕೊಳ್ಳಲು ಯತ್ನಿಸಿದ.

1789ರ ಫ್ರೆಂಚ್ ಕ್ರಾಂತಿಪೂರ್ವದ ಫ್ರೆಂಚ್ ನ್ಯಾಯ ಬಹಳ ಮಟ್ಟಿಗೆ ಆಕ್ರಮಣಕಾರಿ ಶಕ್ತಿಗಳ ನ್ಯಾಯದಿಂದ-ಎಂದರೆ ರೋಮನ್ ನ್ಯಾಯ, ಜರ್ಮನ್ ನ್ಯಾಯ ಮುಂತಾದವುಗಳಿಂದ ಪ್ರಭಾವಿತವಾಗಿತ್ತು. 5ನೆಯ ಶತಮಾನದಲ್ಲಿ ಗಾಲ್‍ದೇಶ ಜರ್ಮನಿಕ್ ಜನರ ಹಲವಾರು ಅಲೆ ಅಲೆ ಆಕ್ರಮಣಗಳಿಗೆ ಈಡಾದಾಗ ಆದಿಮವೂ ಕುಲ ಕೇಂದ್ರಿತವೂ ಆದ ಇವರ ನ್ಯಾಯಕ್ಕೂ ಕಡಮೆ ಆಚಾರಭೂಯಿಷ್ಠವಾಗಿದ್ದ ರೋಮನ್ ಪದ್ಧತಿಗೂ ನಡುವೆ ಘರ್ಷಣೆಯಾಗಿ ಹೆಚ್ಚಿನ ವ್ಯಕ್ತಿಸ್ವಾತಂತ್ರ್ಯದ ದಿಕ್ಕಿನಲ್ಲಿ ವಿಕಾಸ ಹೊಂದಿತು. ಅದಾಗ್ಯೂ 8ನೆಯ ಶತಮಾನದ ವೇಳೆಗೆ ದೊರೆಗಳ ಅಥವಾ ಚಕ್ರವರ್ತಿಗಳ ಕ್ರೈಸ್ತ ದೇವಾಲಯಸಭಾಮುಖ್ಯರು ಹೆಚ್ಚು ಪ್ರಬಲರಾಗಿದ್ದರು. ತನ್ನ ಸಮುದಾಯದ ನ್ಯಾಯವನ್ನು ಅನುಸರಿಸುತ್ತಿದ್ದ ವ್ಯಕ್ತಿಯ ಮೇಲೆ ಹೆಚ್ಚು ಪ್ರಭಾವ ಹೊಂದಿದರು. ಅಲ್ಲದೆ ನೈತಿಕ ವಿಚಾರಗಳಲ್ಲಿ ಚರ್ಚಿನ ಅಧಿಕಾರ ನಿರ್ವಿವಾದದ್ದಾಗಿತ್ತು. ಕ್ರಮೇಣ ಎಲ್ಲ ನ್ಯಾಯ ಕ್ಷೇತ್ರಗಳ ಮೇಲೂ ಕ್ರೈಸ್ತ ವಿಧಿಗಳ ಪ್ರಭಾವ ಬೆಳೆಯಿತು.

ಬಿ.ವೆಂಕಟಾಚಾರ್ಯ

ಬಿ ವೆಂಕಟಾಚಾರ್ಯ (೧೮೪೫ - ಜೂನ್ ೨೬, ೧೯೧೪) ಕನ್ನಡ ಕಾದಂಬರಿಗಳ ಪಿತಾಮಹರೆಂದು ಪ್ರಸಿದ್ಧರಾಗಿದ್ದಾರೆ. ಕನ್ನಡದ ಕಾದಂಬರಿಗಳನ್ನು ಆಸಕ್ತಿಯಿಂದ ಓದುವವರಿಗೆಲ್ಲರಿಗೂ ಬಿ. ವೆಂಕಟಾಚಾರ್ಯರ ಹೆಸರು ಚೆನ್ನಾಗಿಯೇ ಗೊತ್ತುಂಟು.

ಈಗ ನಮಗೆಲ್ಲ ಕಥೆ ಕಾದಂಬರಿಗಳನ್ನು ಓದುವುದು ಎಂದರೆ ಎಷ್ಟು ಇಷ್ಟ ಅಲ್ಲವೆ? ಓದಲು ಕಥೆ, ಕಾದಂಬರಿಗಳೇ ಇಲ್ಲದಿದ್ದರೆ ಎಷ್ಟೊಂದು ಬೇಸರವಾಗುತ್ತಿತ್ತು, ಅಲ್ಲವೆ? ಈಗ ಕನ್ನಡದಲ್ಲಿ ಸೊಗಸಾದ ಕಥೆಗಳ ಪುಸ್ತಕಗಳಿವೆ, ಕಾದಂಬರಿಗಳಿವೆ. ಓದಿ ಸಂತೋಷ ಪಡುತ್ತೇವೆ. ಆದರೆ ಒಂದು ಕಾಲ ಇತ್ತು, ಆಗ ಕನ್ನಡದಲ್ಲಿ ಕಾದಂಬರಿಗಳೇ ಇರಲಿಲ್ಲ. ಅಂತಹ ಕಾಲದಲ್ಲಿ ಕನ್ನಡಿಗರಿಗೆ ಕಾದಂಬರಿಗಳನ್ನು ಕೊಟ್ಟವರು ಬಿ.ವೆಂಕಟಾಚಾರ್ಯರು.

ಮರಣ

ಮರಣಎಂದರೆ ಜೀವಿಯ ಅಂತ್ಯವಾಗುವುದು. ಇನ್ನೊಂದು ಅರ್ಥದಲ್ಲಿ ಈ ಜಗತ್ತಿನಿಂದ ಇಲ್ಲವಾಗುವುದು.ಜನನದಂತೆ ಮರಣವೂ ನಿಸರ್ಗ ಪ್ರೇರಿತ.ಮರಣವೆಂದರೆ ದೇಹದಿಂದ ಆತ್ಮ ಸ್ವತಂತ್ರವಾಗುವುದು ಎಂಬ ಭಾವನೆ ಜಗತ್ತಿನ ಎಲ್ಲ ದೇಶಗಳಲ್ಲಿಯೂ ಇದೆ.ಎಲ್ಲಾ ಧರ್ಮಗಳಲ್ಲಿಯೂ ಮರಣ ಸಂಬಂದ ಕಲ್ಪನೆಗಳಲ್ಲಿ ಸಾದೃಶ್ಯವಿದೆ.ಮನುಷ್ಯ ಸಹಜವಾದ ಭೀತಿ,ನಿರೀಕ್ಷೆ,ಆಶೋತ್ತರಗಳನ್ನು ಮರಣದ ಕಲ್ಪನೆ ಪ್ರತಿಬಿಂಬಿಸುತ್ತದೆ.

ಸಾವು, ಜೀವಿಯೊಂದರಲ್ಲಿ ಇರುವ ಎಲ್ಲಾ ಜೈವಿಕ ಕಾರ್ಯಗಳು ಮುಕ್ತಾಯ ಆಗುತ್ತವೆ. ಸಾಮಾನ್ಯವಾಗಿ ಸಾವಿನ ಬಗ್ಗೆ ಸೆಳೆಯುವ ವಿಷಯಗಳು ಜೀವ ವಯಸ್ಸಾದಾಗ (ವೃದ್ಧಾಪ್ಯ). ಭಕ್ಷಣೆ, ಅಪೌಷ್ಟಿಕತೆ, ರೋಗ, ಆತ್ಮಹತ್ಯೆ, ನರಹತ್ಯೆ, ಹಸಿವು, ನಿರ್ಜಲೀಕರಣ, ಮತ್ತು ಅಪಘಾತಗಳು ಅಥವಾ ಆಘಾತ ಟರ್ಮಿನಲ್ ಗಾಯ ಪರಿಣಾಮವಾಗಿ ಸಾವು ಬರಬಹುದು.

ಸಾವು ಸಾಮಾನ್ಯವಾಗಿ ಮತ್ತು ನಿರ್ದಿಷ್ಟವಾಗಿ ಮಾನವರಿಗೆ, ಒಂದು ಕೆಟ್ಟ ಅಥವಾ ಅಹಿತಕರ ಸಂದರ್ಭವಾಗಿ ಪರಿಗಣಿಸಲಾಗುತ್ತದೆ.

ಮುದೇನೂರು ಸಂಗಣ್ಣ

ಮುದೇನೂರು ಸಂಗಣ್ಣ (ಮಾರ್ಚ್ ೧೭, ೧೯೨೭ – ಅಕ್ಟೋಬರ್ ೨೬, ೨೦೦೮) ‘ಜಾನಪದ ಜಂಗಮ’ರೆಂದು ಪ್ರಖ್ಯಾತಿ ಪಡೆದಿದ್ದು ಜಾನಪದ ಮತ್ತು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಮೂಲ್ಯ ಸೇವೆ ಸಲ್ಲಿಸಿದವರಾಗಿದ್ದಾರೆ.

ರಾ.ಶಿವರಾಂ

'ರಾ.ಶಿ.' ಎಂದೇ ಪ್ರಸಿದ್ದರಾಗಿರುವ ರಾಮಸ್ವಾಮಯ್ಯ ಶಿವರಾಂ(೧೯೦೪ - ೧೯೮೪) ರವರು ಕನ್ನಡ ಸಾಹಿತ್ಯದ ಹೆಸರಾಂತ ಹಾಸ್ಯ ಲೇಖಕರಲ್ಲಿ ಒಬ್ಬರು. ವೃತ್ತಿಯಿಂದ ವೈದ್ಯರಾದರೂ ಕೊರವಂಜಿ ಪತ್ರಿಕೆಯ ಸ್ಥಾಪಕರೂ ,ಸಂಪಾದಕರೂ ಆಗಿದ್ದರು.

ವಸ್ತುಸಂಗ್ರಹಾಲಯ

ವಸ್ತುಸಂಗ್ರಹಾಲಯವು ಸಾಂಸ್ಕೃತಿಕ, ವೈಜ್ಞಾನಿಕ, ಚಾರಿತ್ರಿಕ ಅಥವಾ ಆಲಂಕಾರಿಕ ಮೌಲ್ಯವುಳ್ಳ ವಸ್ತುಗಳನ್ನು ಸಂಗ್ರಹಿಸುವ, ರಕ್ಷಿಸುವ, ಅಧ್ಯಯನ ಮಾಡುವ, ಪ್ರದರ್ಶಿಸುವ ಮತ್ತು ಶೈಕ್ಷಣಿಕ ಉಪಯೋಗಕ್ಕೆ ಒದಗಿಸುವ ಒಂದು ಸಂಸ್ಥೆ (ಮ್ಯೂಸಿಯಮ್).

ವಸ್ತುಗಳನ್ನು ಸಂಗ್ರಹಿಸುವ ಮಾನವನ ಆಸಕ್ತಿ ಅವನಷ್ಟೇ ಪ್ರಾಚೀನ. ವಸ್ತುಸಂಗ್ರಹಾಲಯ ಎಂಬ ಪದವನ್ನು ಇಂಗ್ಲಿಷಿನ ಮ್ಯೂಸಿಯಮ್ ಎಂಬುದಕ್ಕೆ ಸಂವಾದಿಯಾಗಿ ಬಳಸಲಾಗುತ್ತದೆ. ಇದು ಗ್ರೀಕ್ ಭಾಷೆಯ ಮ್ಯೂಸಿಯನ್‍ನಿಂದ ಬಂದಿದೆ. ಇದಕ್ಕೆ ಮ್ಯೂಸ್ ದೇವತೆಗಳ ಆಸನ ಎಂಬ ಅರ್ಥವಿದೆ. ಇದು ಮೊದಲು ಲಲಿತಕಲೆ ಮತ್ತು ವಿಜ್ಞಾನ ದೇವತೆಗಳಿಗೆ ಅರ್ಪಿಸಿದ ಪವಿತ್ರ ಸ್ಥಳವಾಗಿತ್ತು. ಅನಂತರ ಭಕ್ತರ ಹರಕೆ ಮತ್ತು ಕೊಡುಗೆ ವಸ್ತುಗಳನ್ನಿಡುವ ಸ್ಥಳವಾಯಿತು; ಇಂಥ ಸ್ಥಳಗಳನ್ನು ಪುರಾತತ್ತ್ವ ಸಂಶೋಧಕರು ಪತ್ತೆಮಾಡಿದ್ದಾರೆ. ಸೂರ್ಯಾರಾಧಕ ರಾಜ ಅಮೆನ್ಹೋಟೆಪ್ Iಗಿ (ಕ್ರಿ.ಪೂ. ಸು. 1379-62) ಈಜಿಪ್ಟಿನ ತನ್ನ ರಾಜಧಾನಿ ಟೆಲ್-ಎಲ್-ಅಮಾರ್ನದಲ್ಲಿ ಅವನ ವಂಶಜರು ಮತ್ತು ಜನರು ನೀಡಿದ ಕೊಡುಗೆಗಳ ಸಂಗ್ರಹವಿದ್ದ ಬೃಹತ್ ಗ್ರಂಥಾಲಯವನ್ನು ನಿರ್ಮಿಸಿದ್ದ. ಕ್ರಿ.ಪೂ. 3ನೆಯ ಶತಮಾನದವರೆಗೂ ಮ್ಯೂಸಿಯಮ್ ಪದ ಖಚಿತವಾಗಿ ಬಳಕೆಯಾಗಿರಲಿಲ್ಲ. ಟಾಲಮಿ ಸಾಟರ್, ವೈಜ್ಞಾನಿಕ ಅಧ್ಯಯನಕ್ಕಾಗಿ ಅಲೆಕ್ಸಾಂಡ್ರಿಯದಲ್ಲಿ ಗ್ರಂಥಾಲಯವೊಂದನ್ನು ಸ್ಥಾಪಿಸಿದಾಗ ಇದರ ಮೊದಲ ಪ್ರಯೋಗ ಖಚಿತವಾಗಿ ಆಯಿತು. ಇದು ಇಂದಿನ ಸಸ್ಯ ಮತ್ತು ಪ್ರಾಣಿ ಉದ್ಯಾನಗಳಲ್ಲಿ ಇರುವಂಥ ಪ್ರಾಕ್‍ರೂಪದ ಸಸ್ಯ, ಪ್ರಾಣಿ ಸಂಗ್ರಹಗಳ ಕಟ್ಟಡವಾಗಿತ್ತು. ಇದು ಮೂರು ಶತಮಾನಗಳ ಕಾಲ ಬೇರೆ ಕಡೆಯ ವಿಜ್ಞಾನ, ತತ್ತ್ವಶಾಸ್ತ್ರ, ಸಾಹಿತ್ಯ ಮತ್ತು ಕಲೆಗಳ ವಿದ್ವಾಂಸರನ್ನು ಅಲೆಕ್ಸಾಂಡ್ರಿಯದತ್ತ ಆಕರ್ಷಿಸಿತು. ಸರಿಸುಮಾರು ಇದೇ ವೇಳೆಗೆ ಗ್ರೀಸ್‍ನಲ್ಲಿ ಯಾವುದೇ ಕಲಾಕೃತಿಗಳು ಜನರ ಸ್ವತ್ತಾಗಿದ್ದುವು. ಅಥೆನ್ಸ್‌ನ ಅಕ್ರೋಪೊಲಿಸ್ ಕಟ್ಟಡದಲ್ಲಿನ ಚಿತ್ರಶಾಲೆ ಸಾರ್ವಜನಿಕರಿಗೆ ಮುಕ್ತವಾಗಿ ತೆರೆದಿತ್ತು. ಕೆತ್ತನೆಗಳು, ಮೂರ್ತಿಶಿಲ್ಪಗಳು ದೇವಾಲಯಗಳಲ್ಲಿ ನಿರಂತರವಾಗಿ ಪ್ರದರ್ಶಿತವಾಗುತ್ತಿದ್ದುವು.

ರೋಮ್‍ನಲ್ಲಿ 2ನೆಯ ಪಾಲ್, 2ನೆಯ ಜ್ಯೂಲಿಯಸ್, 10ನೆಯ ಲಿಯೋ ಮುಂತಾದವರು ಮಧ್ಯಯುಗದಲ್ಲಿ ವಸ್ತುಸಂಗ್ರಹಣೆಗೆ ಒತ್ತುನೀಡಿದರು. ಇಟಲಿ ಮತ್ತು ರೋಮ್‍ಗಳ ಅಪರೂಪದ ವಸ್ತುಗಳನ್ನು ಶ್ರೀಮಂತ ಮೆಡಿಸಿ ಕುಟುಂಬ ಫ್ಲಾರೆನ್ಸ್‍ನಲ್ಲಿ ಸಂಗ್ರಹಿಸಿತು. ಇದನ್ನು ಗ್ಯಾಲರಿಯಾ ಎನ್ನತ್ತಿದ್ದರು. 15ನೆಯ ಶತಮಾನದಲ್ಲಿ ಮ್ಯೂಸೊ ಮತ್ತೆ ಬಳಕೆಗೆ ಬಂದಿತು. ಇಂಗ್ಲೆಂಡ್‍ನಲ್ಲಿ ವೇಲ್ಸ್‍ನ ರಾಜಕುಮಾರ 1ನೆಯ ಚಾಲ್ರ್ಸ್ (1600-49) ನಿಂದ ವಸ್ತುಸಂಗ್ರಹ ಆರಂಭವಾಯಿತು. ಅನಂತರದ ಅಂತರ್ ಯುದ್ಧದಲ್ಲಿ ಇದು ನಾಶವಾಯಿತು. ಈ ಸಂಗ್ರಹವನ್ನು 2ನೆಯ ಚಾಲ್ರ್ಸ್ (1630-85) ಮತ್ತೆ ಮುಂದುವರಿಸಿದ. ದುರದೃಷ್ಟವಶಾತ್ ಇದು ವೈಟ್‍ಹಾಲ್ ಅಗ್ನಿದುರಂತದಲ್ಲಿ ನಾಶವಾಯಿತು(1689).

ಫ್ರಾನ್ಸ್‌ನಲ್ಲಿ 1ನೆಯ ಫ್ರಾನ್ಸಿಸ್ (1494-1547), ಸ್ಪೇನ್‍ನಲ್ಲಿ ಸ್ಪ್ಯಾನಿಷ್ ಆಸ್ಟ್ರಿಯನ್ ರಾಜ 5ನೆಯ ಚಾಲ್ರ್ಸ್ (1500-58) ಅಪರೂಪದ ವಸ್ತುಸಂಗ್ರಹಗಳಿಗೆ ತೊಡಗಿದರು. 17ನೆಯ ಶತಮಾನದಲ್ಲಿ ಆಧುನಿಕ ಸ್ವರೂಪದ ವಸ್ತುಸಂಗ್ರಹಾಲಯ ಪರಿಕಲ್ಪನೆ ಮೂಡತೊಡಗಿತು. ವಿವಿಧ ಕ್ಷೇತ್ರಗಳ, ತಾಂತ್ರಿಕ, ನೈಸರ್ಗಿಕ, ಕಲಾತ್ಮಕ ಸಂಗ್ರಹಗಳಿಗೆ ಆಸಕ್ತರು ಮುಂದಾದರು. ಸಮುದ್ರಯಾನದ ಹೊಸ ಮಾರ್ಗಗಳು ಮತ್ತು ವಿಧಾನಗಳು ತಿಳಿದ ಮೇಲೆ ಉಷ್ಣವಲಯದ ಅಪರೂಪದ ಹಕ್ಕಿ, ಪ್ರಾಣ, ಸಸ್ಯ, ಶಿಲೆ ಹಾಗೂ ಕೀಟಗಳನ್ನು ಸಂಗ್ರಾಹಕರು ಕೂಡಿಡತೊಡಗಿ ದರು. ಇಂಥ ಸಂಗ್ರಹಗಳನ್ನು ಪ್ರಾಚೀನಾನ್ವೇಷಕ ಎಲಿಯಾಸ್ ಆಶ್‍ಮೋಲ್ (1617-92) ಎಂಬಾತ ತನ್ನ ಡಚ್ ಸಂಬಂಧಿ ಜಾನ್ ಟ್ರೆಡೆಸ್ಕಾಂಟ್‍ನಿಂದ ಬಳುವಳಿಪಡೆದು ಆಕ್ಸ್‍ಫರ್ಡ್ ವಿಶ್ವವಿದ್ಯಾಲಯಕ್ಕೆ ನೀಡಿದ. ಇದನ್ನು ಬಳಸಿಕೊಂಡು ಆಕ್ಸ್‍ಫರ್ಡ್ ವಿಶ್ವವಿದ್ಯಾಲಯ ಆಶ್‍ಮೋಲಿಯನ್ ಮ್ಯೂಸಿಯಮ್ ಅನ್ನು ಸ್ಥಾಪಿಸಿತು(1683). ಇಂದು ಇದು ಪ್ರಪಂಚಪ್ರಸಿದ್ಧವಾಗಿದೆ. ಇದು ಇಂಗ್ಲೆಂಡ್‍ನ ಮೊದಲನೆಯ ಸಾರ್ವಜನಿಕ ಮ್ಯೂಸಿಯಮ್. ಇಂಗ್ಲೆಂಡ್‍ನ ವೈದ್ಯ ಹಾನ್ಸ್ ಸ್ಲೋನ್ (1666-1753) ಪುಸ್ತಕ, ನೈಸರ್ಗಿಕ ವಸ್ತುಗಳು, ಗಣಿತ ಉಪಕರಣ, ಅಮೂಲ್ಯ ಹರಳು, ಖನಿಜ, ನಾಣ್ಯ, ಪದಕ ಮುಂತಾದ 69,352 ವಸ್ತುಗಳನ್ನು 1735ರಲ್ಲಿ ಕಲೆಹಾಕಿ, ತನ್ನ ತರುವಾಯ ಇದು ಸರ್ಕಾರಕ್ಕೆ ಸೇರಿ ಸಾರ್ವಜನಿಕಗೊಳ್ಳಬೇಕೆಂದು ಉಯಿಲು ಬರೆದಿದ್ದ. ಅನಂತರ ಈ ವಸ್ತುಗಳಿಗೆ 20,000 ಪೌಂಡ್‍ಗಳನ್ನು ಪರಿಹಾರವಾಗಿ ನೀಡಿದ ಸರ್ಕಾರ ಬ್ರಿಟಿಷ್ ಮ್ಯೂಸಿಯಮ್ ಸ್ಥಾಪಿಸಿತು. ಸರ್ಕಾರ ನೀಡಿದ ಹಣ, ಹಾನ್ಸ್ ವ್ಯಯಿಸಿದ ವೆಚ್ಚದ ಕಾಲುಭಾಗ ಮಾತ್ರವಾಗಿತ್ತು. ಅಮೆರಿಕದಲ್ಲಿ ಯುರೋಪ್‍ನ ಪ್ರಭಾವದಿಂದ ವಸ್ತುಸಂಗ್ರ ಹಣೆ ಆರಂಭವಾಯಿತು. ಹಾರ್ವರ್ಡ್ ಅಪರೂಪದ ವಸ್ತುಗಳನ್ನು ಸಂಗ್ರಹಿಸಿದ್ದ. ಇದು ಬೆಂಕಿಗೆ ಆಹುತಿಯಾಯ್ತು(1760). ಚಾಲ್ರ್ಸ್‍ಟೌನ್‍ನ ಲೈಬ್ರರಿ ಸೊಸೈಟಿಯು ದಕ್ಷಿಣ ಕರೋಲಿನದಲ್ಲಿ ನೈಸರ್ಗಿಕ ಇತಿಹಾಸದ ವಸ್ತುಸಂಗ್ರಹವನ್ನು ಆರಂಭಿಸಿದ ಮೇಲೆ, ಅಂದರೆ 1773ರಲ್ಲಿ, ಅಮೆರಿಕ ದಲ್ಲಿ ಮ್ಯೂಸಿಯಮ್ ಆರಂಭವಾಯಿತು.

ಪ್ರಪಂಚದ ಎಲ್ಲ ದೇಶಗಳ ಮಹಾನಗರಗಳಲ್ಲಿಯೂ ಇಂದು ವಸ್ತುಸಂಗ್ರಹಾಲಯಗಳು ಸರ್ವೇಸಾಮಾನ್ಯವಾಗಿವೆ. ಪ್ರಪಂಚಪ್ರಸಿದ್ಧವಾದ ವಸ್ತುಸಂಗ್ರಹಾಲಯಗಳನ್ನು ಇಲ್ಲಿ ಗಮನಿಸಬಹುದು. ಉತ್ತರ ಆಫ್ರಿಕದ ಲೆ-ಬಾರ್ಡೊ ನ್ಯಾಷನಲ್ ಮ್ಯೂಸಿಯಮ್(1888), ಟ್ಯುನಿಶಿಯ, ಆಫ್ರಿಕದ ಸಾಂಸ್ಕøತಿಕ ಕಲಾ ಸಂಪತ್ತನ್ನು ಪರಿಚಯಿಸುತ್ತದೆ. ಕೈರೋದ ಈಜಿಪ್ಶಿಯನ್ ಮ್ಯೂಸಿಯಮ್ (1900) ಈಜಿಪ್ಟ್ ಸಂಸ್ಕøತಿಯ, ಪಿರಮಿಡ್ ಉತ್ಖನನದಲ್ಲಿ ದೊರೆತ ಅಮೂಲ್ಯ ವಸ್ತುಗಳ ಅಪೂರ್ವ ಸಂಗ್ರಹಗಳನ್ನು ಹೊಂದಿದೆ. ಪಶ್ಚಿಮ ಆಫ್ರಿಕದ ನೈಜೀರಿಯದಲ್ಲಿನ ಬೆನಿನ್ ಮ್ಯೂಸಿಯಮ್(1960), ನಿಯಾಮೆಯ ನ್ಯಾಷನಲ್ ಮ್ಯೂಸಿಯಮ್, ಘಾನ ನ್ಯಾಷನಲ್ ಮ್ಯೂಸಿಯಮ್, ಆಕ್ರಾ, ಅಬಿಜಾನ್‍ನ ನ್ಯಾಷನಲ್ ಮ್ಯೂಸಿಯಮ್ ಆಫ್ ದಿ ಐವರಿಕೋಸ್ಟ್-ಇವು ಆಫ್ರಿಕದ ಜನ-ಸಂಸ್ಕøತಿಯನ್ನು ಪ್ರತಿಬಿಂಬಿಸುತ್ತವೆ. ಪೂರ್ವ ಆಫ್ರಿಕದ ಕಂಪಾಲದ ನ್ಯಾಷನಲ್ ಮ್ಯೂಸಿಯಮ್ ಆಫ್ ಉಗಾಂಡ (1908) ಆಫ್ರಿಕನ್ ಮೂಲ ನಿವಾಸಿಗಳ ಸಂಗೀತ ಉಪಕರಣಗಳಿಗೆ ಪ್ರಸಿದ್ಧವಾಗಿದೆ. ಕೀನ್ಯದ ನ್ಯಾಷನಲ್ ಮ್ಯೂಸಿಯಮ್ ವನ್ಯಜೀವಿ ಸಂಗ್ರಹವನ್ನು ಹೊಂದಿದೆ. ನ್ಯಾಷನಲ್ ಮ್ಯೂಸಿಯಮ್ ಆಫ್ ಟ್ಯಾಂಜನೀಯ (1940) ಪುರಾತತ್ತ್ವ ಉತ್ಖನನದ ವಸ್ತುಗಳನ್ನು ಹೊಂದಿದೆ. ದಕ್ಷಿಣ ಆಫ್ರಿಕದ ಜಿಂಬಾಬ್ವೆಯಲ್ಲಿ ನಾಲ್ಕು ರಾಷ್ಟ್ರೀಯ ವಸ್ತು ಸಂಗ್ರಹಾಲಯಗಳಿವೆ. ದಕ್ಷಿಣ ಆಫ್ರಿಕದ ನ್ಯಾಷನಲ್ ಮ್ಯೂಸಿಯಮ್‍ನಲ್ಲಿ ಜುರಾಸಿಕ್ ಕಾಲದ ಬೃಹತ್ ಪ್ರಾಣಿಗಳ (ಡೈನೊಸಾರ್) ಅವಶೇಷಗಳಿವೆ.

ಜೋರ್ಡಾನಿನ ನ್ಯಾಷನಲ್ ಆರ್ಕಿಯಲಾಜಿಕಲ್ ಮ್ಯೂಸಿಯಮ್ (1979), ಇಸ್ರೇಲಿನ ಬೆಜಾಲೆಲ್ ನ್ಯಾಷನಲ್ ಆರ್ಟ್ ಮ್ಯೂಸಿಯಮ್ (1906)-ಇವು ಯಹೂದಿಗಳ ಕಲಾ ಸಂಗ್ರಹಾಲಯಗಳಾಗಿವೆ. ಯಾದ್ ವಾಶೆಮ್(1953) ಹಿಟ್ಲರ್‍ನ ಸಾಮೂಹಿಕ ಹತ್ಯೆಗೆ (ಹೋಲುಕಾಸ್ಟ್) ಬಲಿಯಾದವರ ಸ್ಮರಣೆಯ ಮೂರು ಮ್ಯೂಸಿಯಮ್‍ಗಳಲ್ಲಿ ದೊಡ್ಡದು. ಇಲ್ಲಿ ಹಿಟ್ಲರ್‍ನ ಚಿತ್ರಹಿಂಸೆಯ ಪ್ರತಿಕೃತಿಗಳಿವೆ. ಪಾಕಿಸ್ತಾನದ ಲಾಹೋರ್ ಮ್ಯೂಸಿಯಮ್(1864) ಬೃಹತ್ತಾದುದು. ಕರಾಚಿಯ ನ್ಯಾಷನಲ್ ಮ್ಯೂಸಿ ಯಮ್ ಆಫ್ ಪಾಕಿಸ್ತಾನ್(1950), ಹರಪ್ಪ ಮತ್ತು ಮೊಹೆಂಜೊದಾರೊ ಗಳಲ್ಲಿ ದೊರೆತ ಸಿಂಧೂ ಬಯಲಿನ ನಾಗರಿಕತೆಯ ಉತ್ಖನನದ ಅಪೂರ್ವ ವಸ್ತುಗಳ ಸಂಗ್ರಹಾಲಯವಾಗಿದೆ.

ಚೀನದಲ್ಲಿ ಎರಡು ಪ್ರಮುಖ ವಸ್ತುಸಂಗ್ರಹಾಲಯಗಳಿವೆ. ಬೀಜಿಂಗ್‍ನ ಪ್ಯಾಲೇಸ್ ಮ್ಯೂಸಿಯಮ್‍ನಲ್ಲಿ (1925) 900,000 ಚಾರಿತ್ರಿಕ ಮತ್ತು ಸಾಂಸ್ಕøತಿಕ ವಸ್ತುಗಳ ಪ್ರದರ್ಶನವಿದೆ. ಷಾಂಗೈ ಮ್ಯೂಸಿಯಮ್ ಆಫ್ ಆರ್ಟ್ ಅಂಡ್ ಹಿಸ್ಟರಿ (1952) ಚೀನದ ಮತ್ತೊಂದು ಮುಖ್ಯ ವಸ್ತುಸಂಗ್ರಹಾಲಯ. ಚೀನದ ಸಮಗ್ರ ಕಲೆ-ಇತಿಹಾಸದ ಚಿತ್ರಣ ಇಲ್ಲಿದೆ. ಜಪಾನಿನ ಟೋಕಿಯೋ ನ್ಯಾಷನಲ್ ಮ್ಯೂಸಿಯಮ್(1871) ಅತ್ಯಂತ ದೊಡ್ಡ ಮತ್ತು ಹಳೆಯ ವಸ್ತುಸಂಗ್ರಹಾಲಯ. ಹಿರೋಷಿಮ-ನಾಗಾಸಾಕಿಯ ಅಣುಬಾಂಬ್ ದುರಂತದ ಕಥೆಯ ಪ್ರದರ್ಶನವೂ ಇಲ್ಲಿದೆ. ಜಪಾನ್ ಫೋಕ್-ಕ್ರಾಫ್ಟ್ ಮ್ಯೂಸಿಯಮ್(1936) ಜಪಾನೀ ಜನಪದರ ಸಾಂಸ್ಕøತಿಕ ಸಂಪತ್ತಿನ ಜೀವಂತ ದಾಖಲೆಯಾಗಿದೆ.

ಫಿಲಿಪೀನ್ಸ್‌ನ ಎರಡು ಪ್ರಮುಖ ವಸ್ತುಸಂಗ್ರಹಾಲಯಗಳು ಮನಿಲದಲ್ಲಿವೆ. ನ್ಯಾಷನಲ್ ಮ್ಯೂಸಿಯಮ್ ಆಫ್ ದಿ ಫಿಲಿಪೀನ್ಸ್(1901) ಚರಿತ್ರೆ, ವಿಜ್ಞಾನ ಮತ್ತು ಪ್ರಾಕೃತಿಕ ವಸ್ತುಸಂಗ್ರಹಾಲಯವಾಗಿದೆ. ಏಷ್ಯದ ಅಮೂಲ್ಯ ವಸ್ತುಸಂಗ್ರಹಗಳು ಇಲ್ಲಿವೆ. ಇಂಡೊನೇಷ್ಯದ ನ್ಯಾಷನಲ್ ಮ್ಯೂಸಿಯಮ್ ಜಕಾರ್ತದಲ್ಲಿದೆ(1868). ಅಲ್ಲಿನ ಚರಿತ್ರೆ, ಕಲೆ, ಸಂಸ್ಕøತಿಯ ಪ್ರದರ್ಶನ ಇಲ್ಲಿದೆ.

ಕೊರಿಯದ ಸಿಯೋಲ್‍ನ ನ್ಯಾಷನಲ್ ಮ್ಯೂಸಿಯಮ್ ಆಫ್ ಕೊರಿಯ(1915), ಆ ದೇಶದ ಸಮಗ್ರ ಇತಿಹಾಸ, ಕಲೆ, ಸಂಸ್ಕøತಿಯನ್ನು ಪರಿಚಯಿಸುತ್ತದೆ. ಜಾನಪದಕ್ಕೆ ಮೀಸಲಾದ ಎರಡು ವಿಶಿಷ್ಟ ವಸ್ತುಸಂಗ್ರಹಾಲಯಗಳು ಕೊರಿಯದಲ್ಲಿದ್ದು ಇವು ಪ್ರಪಂಚಪ್ರಸಿದ್ಧವಾಗಿವೆ. ನ್ಯಾಷನಲ್ ಫೋಕ್‍ಲೋರ್ ಮ್ಯೂಸಿಯಮ್ ಮತ್ತು ಕೊರಿಯನ್ ಫೋಕ್ ವಿಲೇಜ್(1974)-ಇವು ಕೊರಿಯದ ಜನಪದ ಸಂಸ್ಕøತಿಯನ್ನು ಸಮಗ್ರವಾಗಿ ಪ್ರತಿಬಿಂಬಿಸುತ್ತದೆ.

ಆಸ್ಟ್ರೇಲಿಯದಲ್ಲಿ ಕೆಲವು ವಿಶಿಷ್ಟ ವಸ್ತುಸಂಗ್ರಹಾಲಯಗಳಿವೆ. ಇವುಗಳಲ್ಲಿ ಸಿಡ್ನಿಯಲ್ಲಿರುವ ಆಸ್ಟ್ರೇಲಿಯನ್ ಮ್ಯೂಸಿಯಮ್(1828) ಅತ್ಯಂತ ಹಳೆಯದು. ಆಸ್ಟ್ರೇಲಿಯ ಜನ-ಜೀವನ, ಕಲೆ ಸಾಹಿತ್ಯ, ಚರಿತ್ರೆಗಳನ್ನು ಇದು ಪ್ರದರ್ಶಿಸುತ್ತದೆ. ಕ್ಯಾನ್‍ಬೆರದ ಆಸ್ಟ್ರೇಲಿಯನ್ ವಾರ್ ಮೆಮೋರಿ ಯಲ್(1979) ಆಸ್ಟ್ರೇಲಿಯದ ಮಿಲಿಟರಿ ಚರಿತ್ರೆಗೆ ಸಂಬಂಧಿಸಿದ್ದು, ಪ್ರಾಚೀನ ಮತ್ತು ಆಧುನಿಕ ಸಮರೋಪಕರಣಗಳನ್ನು ಪರಿಚಯಿಸುತ್ತದೆ. ಆಸ್ಟ್ರೇಲಿಯನ್ ನ್ಯಾಷನಲ್ ಗ್ಯಾಲರಿ(1982) ಮತ್ತೊಂದು ಪ್ರಮುಖ ವಸ್ತುಸಂಗ್ರಹಾಲಯ. ಇಲ್ಲಿ ಆಸ್ಟ್ರೇಲಿಯನ್ ಮೂಲ ನಿವಾಸಿಗಳ ಬದುಕು-ಸಂಸ್ಕøತಿಯ ಪೂರ್ಣ ಚಿತ್ರಣ ದೊರಕುತ್ತದೆ. ನ್ಯಾಷನಲ್ ಗ್ಯಾಲರಿ ಆಫ್ ವಿಕ್ಟೋರಿಯ(1861) ಪ್ರಾಕೃತಿಕ ವಸ್ತುಗಳಿಗೆ ಸಂಬಂಧಿಸಿದ ಮತ್ತೊಂದು ಆಸ್ಟ್ರೇಲಿಯನ್ ವಸ್ತುಸಂಗ್ರಹಾಲಯವಾಗಿದೆ.

ನ್ಯೂಜಿಲೆಂಡ್‍ನ ಆಕ್ಲೆಂಡ್ ಇನ್‍ಸ್ಟಿಟ್ಯೂಟ್ ಆ್ಯಂಡ್ ಮ್ಯೂಸಿಯಮ್ (1852), ಆಕ್ಲೆಂಡ್ ಸಿಟಿ ಆರ್ಟ್ ಗ್ಯಾಲರಿಗಳು(1888) ನ್ಯೂಜಿಲೆಂಡ್ ಜನಜೀವನದ ಪರಿಪೂರ್ಣ ವಿವರಗಳನ್ನು ನೀಡುತ್ತವೆ. ವೆಲ್ಲಿಂಗ್‍ಟನ್‍ನ ನ್ಯಾಷನಲ್ ಹಿಸ್ಟರಿ ಮ್ಯೂಸಿಯಮ್(1865) ಮಾನವ ಮತ್ತು ನೈಸರ್ಗಿಕ ವಸ್ತು ಇತಿಹಾಸಕ್ಕೆ ಸಂಬಂಧಿಸಿದೆ. ಕ್ರೈಸ್ಟ್‍ಚರ್ಚ್‍ನ ರಾಬರ್ಟ್ ಮ್ಯಾಕ್‍ಡಗಾಲ್ ಆರ್ಟ್ ಗ್ಯಾಲರಿ(1932) ನ್ಯೂಜಿಲೆಂಡಿನ ಕಲಾ ಪರಂಪರೆಯನ್ನು ತೆರೆದು ತೋರಿಸುತ್ತದೆ.

ಕೆನಡ ದೇಶ ವಸ್ತುಸಂಗ್ರಹಾಲಯಗಳಿಗೆ ಪ್ರಸಿದ್ಧವಾಗಿದ್ದು, ಇಲ್ಲಿ 1,500 ವಸ್ತುಸಂಗ್ರಹಾಲಯಗಳಿವೆ. ನ್ಯಾಷನಲ್ ಮ್ಯೂಸಿಯಮ್ ಆಫ್ ಮ್ಯಾನ್(1957) ಮಾನವೇತಿಹಾಸದ ಚಿತ್ರಣ ನೀಡುವ ಆಕರ್ಷಕ ವಸ್ತುಸಂಗ್ರಹಾಲಯ. ನ್ಯಾಷನಲ್ ಮ್ಯೂಸಿಯಮ್ ಆಫ್ ನ್ಯಾಚುರಲ್ ಸೈನ್ಸ್(1957) ನೈಸರ್ಗಿಕ ಸಸ್ಯ, ಪ್ರಾಣಿ, ಖನಿಜಗಳಿಗೆ ಸಂಬಂಧಿಸಿದ ಅಪೂರ್ವ ವಸ್ತುಸಂಗ್ರಹಾಲಯ. ಕೆನಡದಲ್ಲಿ ಹೆಚ್ಚಾಗಿ ಕಲಾ ಗ್ಯಾಲರಿಗಳು ಕಂಡುಬರುತ್ತವೆ. ಇವುಗಳಲ್ಲಿ ಮಾಂಟ್ರಿಯಲ್ ಮ್ಯೂಸಿಯಮ್ ಆಫ್ ಆಟ್ರ್ಸ್ (1860), ಆರ್ಟ್ ಗ್ಯಾಲರಿ ಆಫ್ ಒಂಟಾರಿಯೊ(1900), ವಾಂಕೋವರ್ ಆರ್ಟ್ ಗ್ಯಾಲರಿ(1931), ರಾಯಲ್ ಒಂಟಾರಿಯೊ ಮ್ಯೂಸಿಯಮ್ (1912), ಮುಖ್ಯವಾದುವು. ಕೆನಡದ ದೇಶೀ ಸಂಸ್ಕøತಿಯನ್ನು ಪ್ರದರ್ಶಿಸುವ ವಿಕ್ಟೋರಿಯದ ಬ್ರಿಟಿಷ್ ಕೊಲಂಬಿಯ ಪ್ರೊವಿನ್ಶಿಯಲ್ ಮ್ಯೂಸಿಯಮ್ (1886), ಗ್ಲೆನ್ ಬೊ ಮ್ಯೂಸಿಯಮ್(1966) ಈ ಕಾರಣದಿಂದ ವಿಶಿಷ್ಟವೆನಿಸಿವೆ.

ಅಮೆರಿಕದ ದಕ್ಷಿಣ ಹಾಗೂ ಕೇಂದ್ರ ಭಾಗಗಳಲ್ಲಿ ಹಲವಾರು ಪ್ರಮುಖ ಮ್ಯೂಸಿಯಮ್‍ಗಳಿವೆ. ಮೆಕ್ಸಿಕೋದ ನ್ಯಾಷನಲ್ ಮ್ಯೂಸಿಯಮ್ ಆಫ್ ಆಂತ್ರೊಪಾಲಜಿ(1964) ಮಾನವಶಾಸ್ತ್ರ, ಮನುಕುಲ ವಿವರಣಾ ಶಾಸ್ತ್ರಗಳಿಗೆ ಸಂಬಂಧಿಸಿದ ವಿಶಿಷ್ಟ ವಸ್ತುಸಂಗ್ರಹಾಲಯ ವೆನಿಸಿದೆ. ಚಿಲಿಯ ಆರ್ಕಿಯಾಲಜಿಕಲ್ ಮ್ಯೂಸಿಯಮ್ ಆಫ್ ಲಾ ಸೆರೆನ(1943), ಲೀಮದ ಆರ್ಕಿಯಾಲಜಿಕಲ್ ಮ್ಯೂಸಿಯಮ್‍ಗಳು, ಪುರಾತತ್ತ್ವ ವಿಜ್ಞಾನಕ್ಕೆ ಸಂಬಂಧಿಸಿದ, ಪ್ರಾಗಿತಿಹಾಸದ ವಸ್ತುಗಳ ಸಂಗ್ರಹವನ್ನು ಹೊಂದಿವೆ. ಪ್ರಪಂಚದ ವಿಶಿಷ್ಟ ವಸ್ತುಸಂಗ್ರಹಾಲಯಗಳಲ್ಲಿ ಕೊಲಂಬಿಯದ ಮ್ಯೂಸಿಯಮ್ ಆಫ್ ಗೋಲ್ಡ್(1939) ಉಲ್ಲೇಖಾರ್ಹವಾದುದು. ಇಲ್ಲಿ ವಿವಿಧ ವಿನ್ಯಾಸಗಳ, ವಿವಿಧ ಜನಸಮುದಾಯಗಳಲ್ಲಿ ಪ್ರಚಲಿತವಿರುವ ರಾಜ-ಮಹಾರಾಜ ಮನೆತನಗಳ ಅಮೂಲ್ಯ ಚಿನ್ನಾಭರಣಗಳನ್ನು ಮಾತ್ರ ಪ್ರದರ್ಶಿಸಲಾಗಿದೆ. ಬ್ಯೂನಸ್‍ಐರಿಸ್‍ನಲ್ಲಿರುವ ಆರ್ಜೆಂಟೈನ್ ಮ್ಯೂಸಿಯಮ್ ಆಫ್ ನ್ಯಾಚುರಲ್ ಸೈನ್ಸ್(1823), ಶೀತ ಮತ್ತು ಉಷ್ಣವಲ ಯಗಳ ಸಸ್ಯ, ಪ್ರಾಣಿ, ಕೀಟ, ಪಕ್ಷಿ ಇವೇ ಮುಂತಾದವುಗಳ ಸಂಗ್ರಹಕ್ಕೆ ಮೀಸಲಾಗಿದೆ. ರಿಯೋ-ಡಿ-ಜಿನೈರೋದ ನ್ಯಾಷನಲ್ ಮ್ಯೂಸಿಯಮ್ ಆಫ್ ಬ್ರಜಿಲ್(1818) ಗ್ರೀಸ್‍ನ ಈಜಿಪ್ಟ್ ಉತ್ಖನನದ ಅಪೂರ್ವ ವಸ್ತು-ವಿಷಯಗಳ ಅಮೂಲ್ಯ ಸಂಗ್ರಹಗಳನ್ನು ಪ್ರದರ್ಶಿಸುತ್ತದೆ. ಇವುಗಳಲ್ಲದೆ ಮೆಕ್ಸಿಕೋದ ನ್ಯಾಷನಲ್ ಮ್ಯೂಸಿಯಮ್ ಆಫ್ ಹಿಸ್ಟರಿ (1825), ನ್ಯಾಷನಲ್ ಹಿಸ್ಟರಿ ಮ್ಯೂಸಿಯಮ್ ಆಫ್ ಅರ್ಜೆಂಟೀನ (1889), ನ್ಯಾಷನಲ್ ಹಿಸ್ಟರಿ ಮ್ಯೂಸಿಯಮ್ ಆಫ್ ಬ್ರಜಿಲ್ (1922) - ಇವು ಚಾರಿತ್ರಿಕ ವಸ್ತು-ವಿಷಯಗಳನ್ನು ದಾಖಲಾತಿ ಮಾಡಿರುವ ಹೆಸರಾಂತ ವಸ್ತುಸಂಗ್ರಹಾಲಯಗಳೆನಿಸಿವೆ. ಮೆಕ್ಸಿಕೋದ ಪ್ಯಾಲೇಸ್ ಆಫ್ ಫೈನ್ ಆರ್ಟ್ಸ್, ಲಲಿತ ಕಲೆಗಳಿಗೆ ಸಂಬಂಧಿಸಿದ ಹೆಸರಾಂತ ವಸ್ತುಸಂಗ್ರಹಾಲಯ ಎನಿಸಿದೆ.

ಇಂಗ್ಲೆಂಡಿನ ಸೌತ್ ಕೆನ್‍ಸಿಂಗ್‍ಟನ್‍ನ ನ್ಯಾಷನಲ್ ಹಿಸ್ಟರಿ ಮ್ಯೂಸಿಯಮ್‍ನಲ್ಲಿ 40 ಮಿಲಿಯನ್ ಸಂಖ್ಯೆಯ ಅಪೂರ್ವ ವಸ್ತುಗಳಿವೆ. ಇದು ಯುರೋಪಿನ ದೊಡ್ಡ ವಸ್ತುಸಂಗ್ರಹಾಲಯಗಳಲ್ಲಿ ಒಂದು. ಲಂಡನ್ನಿನ ಬ್ರಿಟಿಷ್ ಮ್ಯೂಸಿಯಮ್‍ನಲ್ಲಿರುವ ರೊಸೆಟ್ಟಾ ಶಿಲೆ ಹಾಗೂ ಎಲ್ಜಿಲ್ ಅಮೃತಶಿಲೆಗಳು ಆಸಕ್ತರ ಗಮನ ಸೆಳೆಯುವ ಅಪೂರ್ವ ವಸ್ತುಗಳಾಗಿದ್ದು, ಇವುಗಳನ್ನು ಅಥೆನ್ಸ್‍ನ ಪಾರ್ಥೆನಾನ್‍ನಿಂದ ಪಡೆಯಲಾಯಿತು. ಮಾನವೇತಿಹಾಸದ ಅರಿವು ಮೂಡಿಸುವ ಮ್ಯೂಸಿಯಮ್ ಆಫ್ ಮ್ಯಾನ್ ಕೈಂಡ್ ಬ್ರಿಟನ್ನಿನ ಇನ್ನೊಂದು ಪ್ರತಿಷ್ಠಿತ ವಸ್ತುಸಂಗ್ರಹಾಲಯವಾಗಿದೆ. ರಷ್ಯದ ಸ್ಟೇಟ್ ಹಿಸ್ಟಾರಿಕಲ್ ಮ್ಯೂಸಿಯಮ್(1873) ರಷ್ಯನ್ ಜನ ಸಂಸ್ಕøತಿ, ಚರಿತ್ರೆಗಳಿಗೆ ಮೀಸಲಾಗಿದೆ.

ಕಲೆ, ಸಂಸ್ಕøತಿ, ಚರಿತ್ರೆ, ಪ್ರಕೃತಿಗಳಿಗೆ ಸಂಬಂಧಿಸಿದ ಸಾಮಾನ್ಯ ವಸ್ತುಸಂಗ್ರಹಾಲಯ ಗಳಲ್ಲದೆ ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿದ ವಿಶೇಷ ವಸ್ತುಸಂಗ್ರಹಾಲಯಗಳು ಪ್ರಪಂಚಾದ್ಯಂತ ಕಂಡುಬರುತ್ತವೆ. ಮಕ್ಕಳ ವಸ್ತುಸಂಗ್ರಹಾಲಯಗಳು, ವಿಜ್ಞಾನ-ತಂತ್ರಜ್ಞಾನ, ಸಾರಿಗೆ, ಸಮುದ್ರ ವಿಜ್ಞಾನ, ಖಗೋಳ ಮುಂತಾದ ಸಂಗತಿಗಳಿಗೆ ಸಂಬಂಧಿಸಿದ ವಸ್ತುಸಂಗ್ರಹಾಲಯಗಳಿವೆ. ವೈಜ್ಞಾನಿಕ ವಸ್ತು ವಿವರಗಳ ಮೊದಲ ವಸ್ತುಸಂಗ್ರಹಾಲಯ ಆರಂಭವಾದುದು ಲಂಡನ್ನಿನಲ್ಲಿ. ಲಂಡನ್ನಿನ ಸೈನ್ಸ್ ಮ್ಯೂಸಿಯಮ್(1853) ಪ್ರಪಂಚಾದ್ಯಂತ ಈ ಬಗೆಯ ವಸ್ತುಸಂಗ್ರಹ ಮಾಹಿತಿಗಳಿಗೆ ಪ್ರೇರೇಪಣೆ ನೀಡಿತು. ಇಂಥ ಪ್ರಸಿದ್ಧ ವಸ್ತುಸಂಗ್ರಹಾಲ ಯಗಳಲ್ಲಿ ಆಸ್ಟ್ರೇಲಿಯದ ಕ್ವೀನ್ಸ್‍ಲೆಂಡ್ ಮ್ಯೂಸಿಯಮ್(1855), ಬ್ರಿಸ್ಬೇನ್, ಮಾಸ್ಕೋದ ಪಾಲಿಟೆಕ್ನಿಕಲ್ ಮ್ಯೂಸಿಯಮ್(1872), ಮ್ಯೂನಿಚ್‍ನ ಚೆಚೆಸ್ ಮ್ಯೂಸಿಯಮ್(1903), ಬಾರ್ಸಿಲೋನದ ಮ್ಯೂಸಿಯಮ್ ಆಫ್ ಸೈನ್ಸ್, ಇಟಲಿಯ ಲಿಯೊನಾರ್ಡೊ ಡ ವಿಂಚಿ ನ್ಯಾಷನಲ್ ಮ್ಯೂಸಿಯಮ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ, ಮಿಲಾನ್ (1949), ನ್ಯಾಷನಲ್ ಮಾರಿಟೈಮ್ ಮ್ಯೂಸಿಯಮ್, ಬ್ರಿಟನ್, ನ್ಯೂಜಿಲೆಂಡಿನ ಮ್ಯೂಸಿಯಮ್ ಆಫ್ ಟ್ರಾನ್ಸ್‍ಪೋರ್ಟ್ ಆ್ಯಂಡ್ ಟೆಕ್ನಾಲಜಿ(1964) ಆಕ್ಲೆಂಡ್, ಕೆನಡದ ಟೊರೆಂಟೋದಲ್ಲಿನ ಒಂಟಾರಿಯೋ ಸೈನ್ಸ್ ಸೆಂಟರ್(1964), ಟೋಕಿಯೋದ ನ್ಯಾಷನಲ್ ಸೈನ್ಸ್ ಮ್ಯೂಸಿಯಮ್(1964), ಫಿಲಿಪೀನ್ಸ್‍ನ ಮ್ಯೂಸಿಯಮ್ ಆಫ್ ಆಟ್ರ್ಸ್ ಆ್ಯಂಡ್ ಸೈನ್ಸ್, ಕೆನಡದ ನ್ಯಾಷನಲ್ ಮ್ಯೂಸಿಯಮ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ (1966), ಪಾಕಿಸ್ತಾನದ ನ್ಯಾಷನಲ್ ಮ್ಯೂಸಿಯಮ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ (1976), ಲಾಹೋರ್., ಸಿಂಗಪುರದ ಸೈನ್ಸ್ ಸೆಂಟರ್ (1977)-ಇವು ಅತ್ಯಂತ ಪ್ರಸಿದ್ಧವಾಗಿವೆ.

ಮಕ್ಕಳಿಗಾಗಿ ಮೀಸಲಾಗಿರುವ ವಸ್ತುಸಂಗ್ರಹಾಲಯಗಳಲ್ಲಿ ಬ್ರೂಕ್ಲಿನ್ ಚಿಲ್ಡ್ರನ್ ಮ್ಯೂಸಿಯಮ್-ನ್ಯೂಯಾರ್ಕ್, ಬಾಸ್ಟನ್‍ನ ಚಿಲ್ಡ್ರನ್ಸ್ ಮ್ಯೂಸಿಯಮ್, ಮಾಂಟ್ ರೈಂಟ್ ಚಿಲ್ಡ್ರನ್ಸ್ ಮ್ಯೂಸಿಯಮ್-ಆಲ್ಜಿಯರ್ಸ್-ಅತ್ಯಂತ ಪ್ರಸಿದ್ಧವಾದವು. ಭಾರತದಲ್ಲೂ ಇಂಥ ಒಂದು ವಸ್ತುಸಂಗ್ರಹಾಲಯವನ್ನು ನವದೆಹಲಿಯಲ್ಲಿ ಮೊದಲು ಆರಂಭಿಸಲಾಯಿತು. ನ್ಯಾಷನಲ್ ಚಿಲ್ಡ್ರನ್ಸ್ ಮ್ಯೂಸಿಯಮ್ ಎಂಬ ಹೆಸರಿನಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ. ಇದರ ಪ್ರೇರೇಪಣೆಯಿಂದ ಕೊಲ್ಕತ್ತದಲ್ಲಿ ನೆಹ್ರೂ ಚಿಲ್ಡ್ರನ್ಸ್ ಮ್ಯೂಸಿಯಮ್ ಮಕ್ಕಳಿಗಾಗಿಯೇ ಸ್ಥಾಪಿತವಾಗಿದೆ.

ಸುದರ್ಶನ ದೇಸಾಯಿ

ಸುದರ್ಶನ ದೇಸಾಯಿ ಇವರು ಧಾರವಾಡ ದಲ್ಲಿ ನೆಲೆಸಿದ ಪ್ರಸಿದ್ಧ ಕಾದಂಬರಿಕಾರರು. ಅವರ ಸಾಹಿತ್ಯರಚನೆ ಕೆಳಗಿನಂತಿದೆ.

ಹಕ್ಕು ನಿರಾಕರಣೆ (ಡಿಸ್‌ಕ್ಲೈಮರ್)

ಹಕ್ಕು ನಿರಾಕರಣೆ ಎಂದರೆ ಸಾಮಾನ್ಯವಾಗಿ ಹಕ್ಕುಗಳು ಮತ್ತು ಭಾದ್ಯತೆಗಳ ವ್ಯಾಪ್ತಿಯನ್ನು ನಿರ್ದಿಷ್ಟಪಡಿಸುವ ಅಥವಾ ನಿರ್ಬಂಧಿಸುವುದಕ್ಕೆ ಉದ್ದೇಶಿತವಾದ ಯಾವುದೇ ಹೇಳಿಕೆಯಾಗಿರಬಹುದು, ಅದು ಒಂದು ಕಾನೂನು ಸಮ್ಮತ ಎಂದು ಪರಿಗಣಿಸಲ್ಪಟ್ಟ ಸಂಬಂಧಗಳಲ್ಲಿ ಪಕ್ಷಗಳಿಂದ ಆಚರಣೆಗೆ ತರಲ್ಪಡುತ್ತದೆ. ಕಾನೂನುಬದ್ಧವಾಗಿ ಕ್ರಿಯಶೀಲವಾದ ಭಾಷೆಗಳ ಇತರ ಶಬ್ದಗಳಿಗೆ ವ್ಯತಿರಿಕ್ತವಾಗಿ, ಹಕ್ಕು ನಿರಾಕರಣೆ ಎಂಬ ಶಬ್ದವು ಸಾಮಾನ್ಯವಾಗಿ ಕೆಲವು ಹಂತಗಳ ಅನಿರ್ದಿಷ್ಟತೆ, ತ್ಯಜಿಸುವಿಕೆ, ಅಥವಾ ಸಮಸ್ಯೆಗಳನ್ನು ಹೊಂದಿರುವ ಸನ್ನಿವೇಶಗಳನ್ನು ವ್ಯಕ್ತಪಡಿಸುತ್ತವೆ.

ಒಂದು ಹಕ್ಕು ನಿರಾಕರಣಾ ದಾಖಲೆಯು ಒಂದು ಒಪ್ಪಂದದ ಭಾಗವಾಗಿ ಪರಸ್ಪರವಾಗಿ-ಒಪ್ಪಿಕೊಳ್ಳಲ್ಪಟ್ಟ ಮತ್ತು ಖಾಸಗಿಯಾಗಿ-ತಯಾರಿಸಲ್ಪಟ್ಟ ನಿಯಮಗಳು ಮತ್ತು ನಿಬಂಧನೆಗಳನ್ನು ನಿರ್ದಿಷ್ಟವಾಗಿಸಬಹುದು; ಅಥವಾ ಸಂರಕ್ಷಣೆಯ ಒಂದು ಕರ್ತವ್ಯಕ್ಕೆ ಬದ್ಧವಾಗಿ ಅಸಂಗತವಾದ ಹಾನಿ ಅಥವಾ ಕೇಡಿನ ಸಮಸ್ಯೆಯನ್ನು ತಪ್ಪಿಸುವ ಕರ್ತವ್ಯವನ್ನು ನಿಭಾಯಿಸುವ ಸಲುವಾಗಿ ಸಾಮಾನ್ಯ ಜನರಿಗೆ (ಅಥವಾ ಇತರ ವರ್ಗದ ಜನರಿಗೆ) ಎಚ್ಚರಿಕೆಗಳು ಅಥವಾ ನಿರೀಕ್ಷಣಗಳನ್ನು ನಿರ್ದಿಷ್ಟಪಡಿಸಬಹುದು. ಕೆಲವು ಹಕ್ಕು ನಿರಾಕರಣೆಗಳು ಒಂದು ಹಾನಿ ಅಥವಾ ಕೇಡಿನ ಪರಿಸ್ಥಿತಿಗಳು ಈ ಮುಂಚೆಯೇ ಅನುಭವಿಸಲ್ಪಟ್ಟ ಸಂದರ್ಭದಲ್ಲಿ ಹಾನಿಗಳನ್ನು ನಿರ್ಬಂಧಿಸುವ ಉದ್ದೇಶವನ್ನು ಹೊಂದಿರುತ್ತವೆ. ಅದಕ್ಕೆ ಜೊತೆಯಾಗಿ, ಕೆಲವು ವಿಧದ ಹಕ್ಕು ನಿರಾಕರಣಾ ಹೇಳಿಕೆಗಳು ಹಕ್ಕು ನಿರಾಕರಣಾದಾರನಿಗೆ ನೀಡಬೇಕಾದ ಒಂದು ಹಕ್ಕಿನ ಅಥವಾ ಭಾದ್ಯತೆಯ ಐಚ್ಛಿಕ ತ್ಯಜಿಸುವಿಕೆಯನ್ನು ಪ್ರತಿನಿಧಿಸುತ್ತವೆ.

ಹಕ್ಕು ನಿರಾಕರಣೆಗಳು ತಮ್ಮ ಏಕಪ್ರಕಾರತೆಯಲ್ಲಿ ವಿಭಿನ್ನತೆಯನ್ನು ಹೊಂದಿರುತ್ತವೆ. ಕೆಲವು ಹಕ್ಕು ನಿರಾಕರಣೆಗಳು ನಿರ್ದಿಷ್ಟವಾದ ಸಂಗತಿ ಮತ್ತು ಒಳಗೊಳ್ಳಲ್ಪಟ್ಟ ಪಕ್ಷಗಳ ಮೇಲೆ ಅವಲಂಬಿತವಾಗಿ ಬದಲಾಗುತ್ತವೆ, ಹಾಗೆಯೇ ಇತರ ವಿಧದ ಹಕ್ಕು ನಿರಾಕರಣೆಗಳು ಕಚೇರಿಯ ಅಧಿಕಾರಿಯ ಅನುಮತಿಯ ಹೊರತಾಗಿ, ವಿರಳವಾಗಿ ಬದಲಾಯಿಸಲ್ಪಡುವ ಅಥವಾ ಯಾವತ್ತಿಗೂ ಬದಲಾಯಿಸಲಾಗದ ಒಂದು ಏಕಪ್ರಕಾರದ ಮತ್ತು ಅನುಷ್ಠಾನಗೊಳಿಸಲ್ಪಟ್ಟ ನಿಯಮಗಳಿಗೆ ಕಟ್ಟುನಿಟ್ಟಾಗಿ ಬದ್ಧವಾಗಿರುತ್ತವೆ. ಈ ವಿಧ್ಯುಕ್ತವಾದ ಹಕ್ಕು ನಿರಾಕರಣ ಹೇಳಿಕೆಗಳಲ್ಲಿ ಕೆಲವು ಹೇಳಿಕೆಗಳು ಉದ್ದಿಮೆಯ ನಿಯಂತ್ರಣ, ಒಂದು ಸುರಕ್ಷಿತವಾದ ಹಾರ್ಬರ್‌ನ ಸುರಕ್ಷತೆಯ ಪರಿಮಿತಿಗೆ, ಮತ್ತು ಒಂದು ಕಾನೂನುಬದ್ಧ ವಿವಾದದ ಸಂದರ್ಭದಲ್ಲಿ ನಕಾರಾತ್ಮಕವಾದ ಒಂದು ನಿರ್ದಿಷ್ಟವಾದ ಷರತ್ತು ಅಥವಾ ದಾಖಲೆಯ ನಿರ್ದಿಷ್ಟವಾದ ಶಬ್ದಗಳ ಸಂದರ್ಭಗಳಿಗೆ ಅನುಸಾರವಾಗಿರುತ್ತವೆ. (ಉದಾಹರಣೆಗೆ ಇವುಗಳನ್ನು ನೋಡಿ, ಉತ್ಪನ್ನದ ಭಾದ್ಯತೆ, ವಿಷತ್ವದ ಷರತ್ತು, ನಿರಂತತೆಯ ವಿರುದ್ಧದ ತತ್ವ, ಸಾರ್ವಜನಿಕ ಆರೋಗ್ಯ ಸಿಗಾರೆಟ್ ಸೇದುವಿಕೆಯ ಶಾಸನ (ಕಾಯಿದೆ)).

ಒಂದು ಕಾನೂನುಬದ್ಧವಾಗಿ ನಿರ್ಬಂಧಿಸುವ ಒಪ್ಪಂದದಲ್ಲಿ ಒಂದು ಹಕ್ಕು ನಿರಾಕರಣೆಯ ಹೇಳಿಕೆಯು, ಹಕ್ಕು ನಿರಾಕರಣೆ ಷರತ್ತುಗಳು ಅಂಗೀಕರಿಸಲ್ಪಡುತ್ತವೆ ಮತ್ತು ಒಂದು ಕಾನೂನಿನ ವಿವಾದದಲ್ಲಿ ಚಾಲನೆಗೆ ತರಲ್ಪಡುತ್ತವೆ ಎಂಬುದರ ಬಗ್ಗೆ ಅವಶ್ಯಕವಾದ ಖಾತರಿಯನ್ನು ನೀಡುವುದಿಲ್ಲ. ಅಲ್ಲಿ ಒಂದು ಹಕ್ಕು ನಿರಾಕರಣೆಯನ್ನು ಪೂರ್ತಿಯಾಗಿ ಅಥವಾ ಭಾಗಶಃ ಅನೂರ್ಜಿತ ಎಂಬುದಾಗಿ ಭಾವಿಸುವ ಹಲವಾರು ಇತರ ಪರಿಗಣನೆಗಳಿವೆ.

ಹಾರ್ವರ್ಡ್ ವಿಶ್ವವಿದ್ಯಾನಿಲಯ

ಹಾರ್ವರ್ಡ್ ವಿಶ್ವವಿದ್ಯಾನಿಲಯ' (ಅಧಿಕೃತವಾಗಿ ದಿ ಪ್ರೆಸಿಡೆಂಟ್ ಅಂಡ್ ಫೆಲೋಸ್ ಆಫ್ ಹಾರ್ವರ್ಡ್ ಕಾಲೇಜ್ ) ಎಂಬುದು ಕೇಂಬ್ರಿಡ್ಜ್, ಮಸಾಚ್ಯೂಸೆಟ್ಸ್' ನಲ್ಲಿ ನೆಲೆಯಾಗಿರುವ ಒಂದು ಖಾಸಗಿ ವಿಶ್ವವಿದ್ಯಾಲಯ, ಜೊತೆಗೆ ಇದು ಐವಿ ಲೀಗ್ ನ ಸದಸ್ಯ. ಮಸಾಚ್ಯೂಸೆಟ್ಸ್ ವಸಾಹತು ಶಾಸನ ಸಭೆಯಿಂದ 1636ರಲ್ಲಿ ಸ್ಥಾಪನೆಗೊಂಡ ಹಾರ್ವರ್ಡ್ ಅಮೆರಿಕ ಸಂಯುಕ್ತ ಸಂಸ್ಥಾನದ ಮೊದಲ ಕಾರ್ಪೋರೇಶನ್ ಆಗಿರುವುದರ ಜೊತೆಗೆ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಉನ್ನತ ಶಿಕ್ಷಣಕ್ಕಿರುವ ಅತ್ಯಂತ ಹಳೆಯ ಸಂಸ್ಥೆಯಾಗಿದೆ.ವಿಶ್ವವಿದ್ಯಾಲಯವು ಪ್ರಸಕ್ತ ಹತ್ತು ಪ್ರತ್ಯೇಕ ಶೈಕ್ಷಣಿಕ ಘಟಕಗಳನ್ನು ಒಳಗೊಂಡಿದೆ.

ಹಾರ್ವರ್ಡ್ ವಿಶ್ವದಲ್ಲಿ ಯಾವುದೇ ಶಿಕ್ಷಣ ಸಂಸ್ಥೆಗಿಂತ ಅತ್ಯಂತ ಹೇರಳವಾಗಿ ಹಣಕಾಸಿನ ದತ್ತಿಯನ್ನು ಹೊಂದಿದೆ. ಇದು ಸೆಪ್ಟೆಂಬರ್ 2009ರ ಹೊತ್ತಿಗೆ $26 ಶತಕೋಟಿಯಷ್ಟಿತ್ತು. ಹಾರ್ವರ್ಡ್ ಹಲವಾರು ಮಾಧ್ಯಮಗಳು ಹಾಗೂ ಶೈಕ್ಷಣಿಕ ಶ್ರೇಯಾಂಕಗಳಲ್ಲಿ ಒಂದು ಪ್ರಮುಖ ಶೈಕ್ಷಣಿಕ ಸಂಸ್ಥೆಯೆಂದು ಸುಸಂಗತವಾಗಿ ಅಗ್ರಸ್ಥಾನವನ್ನು ಗಳಿಸಿದೆ.

ಇತರ ಭಾಷೆಗಳು

This page is based on a Wikipedia article written by authors (here).
Text is available under the CC BY-SA 3.0 license; additional terms may apply.
Images, videos and audio are available under their respective licenses.