ಅರ್ಜೆಂಟೀನ

ಅರ್ಜೆಂಟೀನ ದಕ್ಷಿಣ ಅಮೇರಿಕ ಖಂಡದಲ್ಲಿರುವ ೨ನೇ ದೊಡ್ಡ ದೇಶ ಹಾಗು ಪ್ರಪಂಚದ ೮ನೇ ದೊಡ್ಡ ದೇಶ.https://simple.wikipedia.org/wiki/Argentina ದಕ್ಷಿಣ ಅಮೆರಿಕದ ರಾಜ್ಯಗಳಲ್ಲಿ ಒಂದು (೩೫೦-೫೫೦ ದಕ್ಷಿಣ ಅಕ್ಷಾಂಶ, ೫೪೦೨೨°-೭೩೦೩೦° ಪಶ್ಚಿಮ ರೇಖಾಂಶ). ಉತ್ತರದಲ್ಲಿ ಬೊಲಿವಿಯ, ಪರಗ್ವೆ, ಪಶ್ಚಿಮದಲ್ಲಿ ಚಿಲಿ, ಪೂರ್ವ ಮತ್ತು ಈಶಾನ್ಯದಲ್ಲಿ ಬ್ರೆಜಿಲ್ ಮತ್ತು ಉರುಗ್ವೆ ದೇಶಗಳೂ ದಕ್ಷಿಣ ಮತ್ತು ಪೂರ್ವದಲ್ಲಿ ದಕ್ಷಿಣ ಅಂಟ್ಲಾಂಟಿಕ್ ಸಾಗರ ಸುತ್ತುವರೆದಿರುವ ಈ ದೇಶದ ವಿಸ್ತೀರ್ಣ ೨,೭೮೦,೪೦೦.ಚ.ಕಿಮೀ. ಜನಸಂಖ್ಯೆ ೪೦,೧೧೭,೦೯೬ (೨೦೧೦).http://www.worldometers.info/world-population/argentina-population/ ಉತ್ತರಕ್ಕೆ ಸ್ವಲ್ಪ ವಿಶಾಲವಾಗಿದ್ದು ದಕ್ಷಿಣಕ್ಕೆ ಹೋದಂತೆ ಇಕ್ಕಟ್ಟಾಗುತ್ತ ಹೋಗುತ್ತದೆ. ರಾಜಧಾನಿ ಬ್ಯೂನೆಸ್ ಐರಿಸ್. ಇದರ ಜನಸಂಖ್ಯೆ ೧೨,೪೩೧,೦೦೦. ಶೇ 89ರಷ್ಟು ಜನ ನಗರಗಳಲ್ಲಿ ವಾಸಿಸುತ್ತಾರೆ. ಉಳಿದ ಜನ ಹಳ್ಳಿಗಳಲ್ಲಿ ವಾಸವಾಗಿದ್ದಾರೆ. ಪ್ರತಿ ಸಾವಿರಕ್ಕೆ ಜನನ ಮರಣ ದರಗಳು ಕ್ರಮವಾಗಿ ೨೯ ಮತ್ತು ೯ ಆಗಿವೆ. ಈ ದೇಶದ ಜನ ವಿದ್ಯಾವಂತರು. ಅಕ್ಷರಸ್ಥರ ಸಂಖ್ಯೆ ಶೇ ೮೭ರಷ್ಟಿದೆ. ಒಕ್ಕಲುತನದಲ್ಲಿ ತೊಡಗಿದವರ ಸಂಖ್ಯೆ ಶೇ ೨೫ ರಷ್ಟು ಮಾತ್ರ. ಆದರೂ ಇದು ಕೃಷಿ ಪ್ರಧಾನ ರಾಷ್ಟ್ರ. ಇಲ್ಲಿನ ನಾಣ್ಯ ಪೆಸೊ. ಮುಖ್ಯ ಬೆಳೆಗಳು ಗೋದಿ, ಮೆಕ್ಕೆಜೋಳ, ರೈ, ಓಟ್ಸ್ ಮತ್ತು ಅಗಸೆನಾರು. ಈ ದೇಶದ ಪಶ್ಚಿಮ ಆಂಡೀಸ್ ಪರ್ವತ ಉತ್ತರ ದಕ್ಷಿಣವಾಗಿ ಹಬ್ಬಿದೆ. ಬಹಳ ಎತ್ತರವಾಗಿರುವುದರಿಂದ ಹಿಮಾವೃತವಾಗಿರುತ್ತದೆ. ಉತ್ತರ ಭಾಗದಲ್ಲಿ ಅರಣ್ಯ ಪ್ರದೇಶವಿದೆ. ನೈಋತ್ಯಕ್ಕೆ ಫಲವತ್ತಾದ ಪಂಪಾಸ್ ಹುಲ್ಲುಗಾವಲು, ದಕ್ಷಿಣಕ್ಕೆ ಮರುಭೂಮಿ. ೧೫೮೦ರಲ್ಲಿ ಸ್ಪೇನ್ ದೇಶದವರು ಇದನ್ನು ಆಕ್ರಮಿಸಿಕೊಂಡರು. ಈ ವಸಾಹತುಗಾರರು ಇಲ್ಲಿಗೆ ಬಂದಕೂಡಲೆ ಇಲ್ಲಿಯ ಜನ ಬೆಳ್ಳಿಯ ಆಭರಣಗಳನ್ನು ಧರಿಸುವುದನ್ನು ಕಂಡು ಇಲ್ಲಿ ಬೆಳ್ಳಿ ಸಿಗಬಹುದೆಂದು ತಿಳಿದು ಇದನ್ನು ಬೆಳ್ಳಿಯ ನಾಡೆಂದು ಕರೆದರು. ಸ್ವಲ್ಪ ಕಾಲಾನಂತರ, ಬೆಳ್ಳಿ ಹೊರದೇಶಗಳಿಂದ ಆಮದಾಗುತ್ತಿದೆ ಎಂಬುದು ತಿಳಿದುಬಂತು.

ಬೌಗೋಳಿಕ

ಈ ದೇಶವನ್ನು ಸ್ವಾಭಾವಿಕವಾಗಿ ನಾಲ್ಕು ಭಾಗಗಳಾಗಿ ವಿಂಗಡಿಸಬಹುದು. ೧ ಉತ್ತರದ ಜಾಕೊ ಪ್ರದೇಶ ೨ ಪಂಪಾಸ್ ಹುಲ್ಲುಗಾವಲು ಪ್ರದೇಶ ೩ ಪೂರ್ವದ ಜಾಕೋ, ಪಂಪಾಸ್ ಮತ್ತು ಆಂಡೀಸ್ ಪರ್ವತಗಳ ಮಧ್ಯಭಾಗ ೪ ಪಟಗೋನಿಯದ ತಪ್ಪಲು ಪ್ರದೇಶ

ಉತ್ತರದ ಜಾಕೊ ಪ್ರದೇಶ

ಪಶ್ಚಿಮಕ್ಕಿರುವ ಪರ್ವತಗಳ ತಪ್ಪಲಿನಿಂದ ಪೂರ್ವಕ್ಕಿರುವ ಪರಗ್ವೆ ನದಿಯ ಬಯಲಿನವರೆಗೆ ಹಬ್ಬಿ ಹೆಚ್ಚಾಗಿ ಅರಣ್ಯದಿಂದ ತುಂಬಿದೆ. ವಾಣಿಜ್ಯ ಮಾರುತಗಳ ಭಾಗದಲ್ಲಿ ಬರುವುದರಿಂದ ಮಳೆಯಾಗುತ್ತದೆ. ಮಳೆ ಪೂರ್ವಕ್ಕೆ ಹೆಚ್ಚಾಗಿ, ಪಶ್ಚಿಮಕ್ಕೆ ಹೋದಂತೆ ಕಡಿಮೆಯಾಗುತ್ತ ಹೋಗುತ್ತದೆ. ಆದುದರಿಂದ ಪೂರ್ವಕ್ಕೆ ಕಾಡುಗಳು ಹೆಚ್ಚು ದಟ್ಟವಾಗಿ ಬೆಳೆದಿವೆ. ಸಮುದ್ರ ಸಮೀಪವಾಗಿರುವುದರಿಂದ ಹವೆ ಹಿತಕಾರಿಯಾಗಿದೆ. ನದಿಗಳು ಸದಾ ತಮ್ಮ ದಿಕ್ಕನ್ನು ಬದಲಿಸುತ್ತಿರುತ್ತವೆ. ಆದ್ದರಿಂದ ವಿದ್ಯುತ್ತು ಮತ್ತು ನೀರಿನ ಸೌಕರ್ಯ ಪಡೆಯುವುದು ಕಷ್ಟ. ವಸಾಹತುಗಾರರಿಗೆ ಇಲ್ಲಿನ ಮೂಲ ನಿವಾಸಿಗಳ ಭಯ ಹೆಚ್ಚು. ದಕ್ಷಿಣ ಭಾಗದಲ್ಲಿ ಅರಣ್ಯ ಪ್ರದೇಶ ಕಡಿಮೆ. ಕುರಿಗಳನ್ನೂ ಪರ್ವತಗಳ ತಳಭಾಗಗಳಲ್ಲಿ ದನಗಳನ್ನೂ ಸಾಕುತ್ತಾರೆ. ಈ ಸ್ವಾಭಾವಿಕ ಪ್ರದೇಶ ಒಕ್ಕಲುತನ ಮತ್ತು ಔದ್ಯೋಗಿಕ ಬೆಳವಣಿಗೆಗೆ ಯೋಗ್ಯವಾಗಿಲ್ಲ. ಕ್ವೆಬ್ರೊಕೊ ಎಂಬ ಜಾತಿಯ ಗಿಡ ಇಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಮರ ಬಹಳ ಗಟ್ಟಿ. ಹುಳು ಹತ್ತುವುದಿಲ್ಲ. ಪರಗ್ವೆ ನದಿಯ ದಡದಲ್ಲಿ ಕಟ್ಟಿಗೆಯ ಉದ್ಯೋಗ ನಡೆಯುತ್ತದೆ. ಇಲ್ಲಿ ದಟ್ಟ ಜನಸಾಂದ್ರತೆ ಇರುವ ಪಟ್ಟಣಗಳು ಬಹಳ ಕಡಿಮೆ.

ಪಂಪಾಸ್ ಹುಲ್ಲುಗಾವಲು ಪ್ರದೇಶ

Autódromo Eusebio Marcilla
ಪಂಪಾಸ್ ಹುಲ್ಲುಗಾವಲು

ಸಮಶೀತೋಷ್ಣವಲಯ ಭಾಗದಲ್ಲಿ ಸಮುದ್ರ ತೀರದಲ್ಲಿದೆ. ಹವಾಗುಣ ಬಹಳ ಸೌಮ್ಯ. ಹಿತಕರ, ಮೇಲಾಗಿ ಭೂಮಿ ಬಹಳ ಫಲವತ್ತಾಗಿರುವುದರಿಂದ ಆರ್ಜೆಂಟೀನದ ಜನದಟ್ಟಣೆಯ ಅತಿ ಮುಖ್ಯ ಪ್ರದೇಶವಾಗಿದೆ. ಬೇಸಗೆಯ ಸರಾಸರಿ ಶಾಖ ಪ್ರಮಾಣ ೮೦೦ ಫ್ಯಾ. ಮತ್ತು ಚಳಿಗಾಲದ ಸರಾಸರಿ ಶಾಖಪ್ರಮಾಣ ೬೦೦ ಫ್ಯಾ. ವಾಣಿಜ್ಯ ಮಾರುತಗಳಿಂದ ಬೇಸಗೆಯಲ್ಲಿ ೫೦"-೧೦೦".ಸೆಂ.ಮೀ ಮಳೆಯಾಗುತ್ತದೆ. ಪಶ್ಚಿಮಕ್ಕೆ ಹೋದಂತೆ ಮಳೆಯ ಪ್ರಮಾಣ ಕಡಿಮೆ ಆಗುತ್ತ ಹೋಗುತ್ತದೆ. ೪೦೦ ಅಕ್ಷಾಂಶದಿಂದ ದಕ್ಷಿಣಕ್ಕೆ ಎಂದರೆ ರಿಯೊ, ಕೊಲರಾಡೊ ಪ್ರಾಂತ್ಯದಿಂದ ದಕ್ಷಿಣಕ್ಕೆ ಮಳೆ ತೀರ ಕಡಿಮೆ. ಏಕೆಂದರೆ ಈ ಪ್ರದೇಶ ವಾಣಿಜ್ಯ ಪ್ರತಿ ಮಾರುತಗಳ ಪ್ರದೇಶದಲ್ಲಿದೆ. ಈ ಮಾರುತಗಳು ಆಂಡೀಸ್ ಪರ್ವತಗಳನ್ನು ದಾಟಿ ಬರುವಾಗ ತಮ್ಮ ತೇವಾಂಶವನ್ನು ಕಳೆದುಕೊಂಡಿರುತ್ತವೆ. ಇದನ್ನು ಪಂಪಾಸ್ ಪ್ರದೇಶವೆಂದು ಹೇಳಲಾಗುವುದಿಲ್ಲ. ನಿಜವಾದ ಪಂಪಾಸ್ ಪ್ರದೇಶವೆಂದರೆ ಬ್ಯೂನೆಸ್ ಐರಿಸ್ ಪ್ರಾಂತ್ಯ. ಇದು ಸಮುದ್ರಮಟ್ಟದಿಂದ ಸು. ೧೫೦ಮೀ ಎತ್ತರದಲ್ಲಿದೆ. ಇಲ್ಲಿ ಖನಿಜ ಸಂಪತ್ತು ಸಿಗುವುದಿಲ್ಲ. ಭೂಮಿ ಬಹಳ ಫಲವತ್ತಾಗಿರುವುದರಿಂದ ಒಕ್ಕಲುತನವೇ ಇಲ್ಲಿಯ ಮುಖ್ಯ ಉದ್ಯೋಗ. ಇಲ್ಲಿಯ ಮಳೆ ಮತ್ತು ಫಲವತ್ತಾದ ಭೂಮಿ ಒಕ್ಕಲುತನ ಮತ್ತು ನಿವಾಸಕ್ಕೆ ಅನುಕೂಲವಾದುದರಿಂದ ಸ್ಪೇನಿನಿಂದ ಬಂದ ವಲಸೆಗಾರರು ಇಲ್ಲೇ ನೆಲಸಿದರು. ವಾಸಕ್ಕೆ ಅಡಚಣೆಗಳೇನೋ ಇದ್ದವು. ಅದು ಕೇವಲ ಹುಲ್ಲುಗಾವಲು. ಚಿಗರೆ ಮುಂತಾದ ಕೆಲವು ಪ್ರಾಣಿಗಳ ಹೊರತು ಕೃಷಿಗೆ ಉಪಯುಕ್ತ ಪ್ರಾಣಿಗಳೇ ಇರಲಿಲ್ಲ. ಆದ್ದರಿಂದ ಬಿತ್ತಲು ಬೀಜಗಳನ್ನು, ವ್ಯವಸಾಯದ ಸಲುವಾಗಿ ಕುದುರೆಗಳನ್ನು, ದನಕರುಗಳನ್ನು ಇವರು ಮೊದಲು ತಮ್ಮ ದೇಶದಿಂದ ತರಬೇಕಾಯಿತು. ಅಲ್ಲದೆ ಇಲ್ಲಿಯ ಮೂಲನಿವಾಸಿಗಳ ಪ್ರತಿಭಟನೆ ಬಲವತ್ತರವಾಗಿತ್ತು. ಬರುಬರುತ್ತ ಇವರು ಪರಸ್ಪರ ಹೊಂದಿಕೊಂಡು ಬಾಳುವುದನ್ನು ಕಲಿತರು. ಒಕ್ಕಲುತನದಲ್ಲಿ ಈ ಮೂಲ ನಿವಾಸಿಗಳನ್ನು ಕೂಲಿಗಳಂತೆ ದುಡಿಸಿಕೊಳ್ಳಲು ಪ್ರಾರಂಭಿಸಿದರು. ತಂಪು ಭಾಗಗಳಲ್ಲಿ ಗೋದಿಯನ್ನು, ಸ್ವಲ್ಪ ಬೆಚ್ಚಗಿರುವ ಕಡೆಗಳಲ್ಲಿ ಗೋವಿನಜೋಳ ಮತ್ತು ತೀರ ತಂಪಾಗಿರುವ ಕಡೆ ತೋಕೆ ಗೋದಿ (ಓಟ್ಸ್) ಧಾನ್ಯಗಳನ್ನು ಬೆಳೆಯತೊಡಗಿದರು. ಈಗ ಆರ್ಜೆಂಟೀನ ತನ್ನ ಒಟ್ಟು ಗೋದಿ ಹುಟ್ಟುವಳಿಯ ¾ ಭಾಗವನ್ನು ರಫ್ತು ಮಾಡುತ್ತದೆ. ೧೮೭೦ರಿಂದ ಈ ಪ್ರದೇಶ ಭರದಿಂದ ಪ್ರಗತಿ ಹೊಂದುತ್ತಲಿದೆ. ಇದಕ್ಕೆ ಕಾರಣ ಪಶುಪಾಲನೆ, ಸಾಕುಪ್ರಾಣಿಗಳು. ಮೊದಲು ದನಗಳನ್ನು ತೊಗಲಿನ ಸಲುವಾಗಿ ಸಾಕುತ್ತಿದ್ದರು. ಆದರೆ ಈಗ ವೈಜ್ಞಾನಿಕ ಶೋಧನೆಗಳಿಂದ ಹಾಲು, ಬೆಣ್ಣೆ ಮತ್ತು ಮಾಂಸಗಳನ್ನು ತಯಾರಿಸಿ ಶಿತೀಕರಣ ಮಾಡಿ ಪರದೇಶಗಳಿಗೆ ರಫ್ತು ಮಾಡುತ್ತಾರೆ. ಒಕ್ಕಲುತನಕ್ಕಿಂತ ಈ ಉದ್ಯೋಗದಲ್ಲಿ ಹೆಚ್ಚು ಜನರಿದ್ದಾರೆ. ಇಲ್ಲಿಯ ಜನರು ಕುಟುಂಬ ಪ್ರಿಯರು. ಅವರದು ಅವಿಭಕ್ತಕುಟುಂಬಗಳು. ಒಂದೇ ಕುಟುಂಬದಲ್ಲಿ ಇನ್ನೂರು ಮುನ್ನೂರು ಜನ ವಾಸಿಸುತ್ತಾರೆ. ಇವರ ಮನೆಗಳು ದೊಡ್ಡ ರಾಜ ಮಹಲನ್ನು ಹೋಲುತ್ತವೆ. ಮನೆಯ ಸುತ್ತಲೂ ತೋಟಗಳು; ಅವುಗಳ ಆಚೆ ಸೇವಕರ ಮನೆಗಳು. ಇವರು ನಗರ ವಾಸಿಗಳು. ಮಹಿಳೆಯರು ಯುರೋಪಿನಲ್ಲಿ ಶಿಕ್ಷಣ ಪಡೆದು ಬರುತ್ತಾರೆ. ಆದರೂ ಹೆಚ್ಚಾಗಿ ಸಾರ್ವಜನಿಕ ರಂಗಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಮಧ್ಯಮ ವರ್ಗದ ಹೆಣ್ಣು ಮಕ್ಕಳು ಶಿಕ್ಷಕಿಯರಾಗಿ ಅಥವಾ ಕಾರಕೂನರಾಗಿ ಕೆಲಸ ಮಾಡುತ್ತಾರೆ. ಪ್ರತಿಯೊಂದು ದೃಷ್ಟಿಯಿಂದ ಈ ಪ್ರದೇಶ ಇಡೀ ದೇಶದಲ್ಲೇ ಅತಿ ಪ್ರಗತಿಪರಭಾಗವೆಂದು ಹೇಳಬಹುದು.

ಪೂರ್ವದ ಜಾಕೋ, ಪಂಪಾಸ್ ಮತ್ತು ಆಂಡೀಸ್ ಪರ್ವತಗಳ ಮಧ್ಯಭಾಗ

ಬೆಟ್ಟಗಳಿಂದ ಹಾಗೂ ಕೊಳ್ಳಗಳಿಂದ ಕೂಡಿದೆ. ಇದೊಂದು ಬರಡು ಪ್ರದೇಶ : ಕಾರಣ, ಆಗ್ನೇಯದಿಂದ, ಬೀಸುವ ವಾಣಿಜ್ಯ ಮಾರುತಗಳು ಇಲ್ಲಿಗೆ ಬರುವುದರೊಳಗಾಗಿ ತಮ್ಮ ತೇವಾಂಶವನ್ನು ಕಳೆದುಕೊಂಡಿರುತ್ತವೆ. ಕೇವಲ ೧೨-೧೫ಸೆಂ.ಮೀ ವರೆಗೆ ಮಳೆಯಾಗುತ್ತದೆ. ಅದೂ ಕೇವಲ ೩೦೦ ಯಿಂದ ೪೦೦ ಅಕ್ಷಾಂಶದವರೆಗೆ ಮಾತ್ರ. ೪೫೦ ಅಕ್ಷಾಂಶದಿಂದ ದಕ್ಷಿಣಕ್ಕೆ ಮಳೆಯೇ ಇಲ್ಲ. ೩೦೦ ರಿಂದ ೪೦೦ ಅಕ್ಷಾಂಶದ ನಡುವೆ ಚಳಿಗಾಲದಲ್ಲಿ ಮಳೆಯಾಗುವುದರಿಂದ ಮೆಡಿಟರೇನಿಯನ್ ವಾಯುಗುಣವಿದೆ. ದ್ರಾಕ್ಷಿ, ಕಿತ್ತಳೆ ಮುಂತಾದ ಹಣ್ಣುಗಳು ಮತ್ತು ಗೋದಿ ಬೆಳೆಯುತ್ತದೆ.https://www.thepacker.com/article/argentina-fresh-fruit-production-exports-headed-higher ಈ ಪ್ರದೇಶದ ಉತ್ತರಕ್ಕೆ ಉಷ್ಣವಲಯದಲ್ಲಿ ಕಬ್ಬು ಬೆಳೆಯುತ್ತಾರೆ. ಕಡಿಮೆ ಮಳೆಯಾಗುವ ಭಾಗಗಳಲ್ಲಿ ಮತ್ತು ಕೊಳ್ಳಗಳಲ್ಲಿ ಹುಲ್ಲು ಬೆಳೆಯುತ್ತಾರೆ. ಕಡಿಮೆ ಮಳೆಯಾಗುವ ಭಾಗಗಳಲ್ಲಿ ಮತ್ತು ಕೊಳ್ಳಗಳಲ್ಲಿ ಹುಲ್ಲು ಬೆಳೆಯುವುದರಿಂದ ದನಗಳನ್ನು ಸಾಕುತ್ತಾರೆ. ಮಾಂಸದ ಉತ್ಪಾದನೆಯೇ ಮುಖ್ಯ ಉದ್ಯೋಗ. ಈ ಪ್ರದೇಶದ ಮುಖ್ಯ ನಗರವೆಂದರೆ ಮೆಂಡೋಸಾ, ಬ್ಯೂನೆಸ್ ಐರಿಸ್ ಇಲ್ಲಿಗೆ ಒಂದು ರೈಲು ಮಾರ್ಗವಿದೆ.

ಪಟಗೋನಿಯದ ತಪ್ಪಲು ಪ್ರದೇಶ

Spegazzini Glacier Parque Nacional Los Glaciares Patagonia Argentina Luca Galuzzi 2005
ಪಟಗೋನಿಯ

ರಿಯೋಕೊಲರಾಡೊ ಪ್ರಾಂತ್ಯದಿಂದ ಖಂಡದ ದಕ್ಷಿಣ ತುದಿಯವರೆಗೆ ಹಬ್ಬಿದೆ. ದಕ್ಷಿಣಕ್ಕೆ ಬಂದಂತೆ ಬಹಳ ಇಕ್ಕಟ್ಟಾಗುತ್ತ ಹೋಗುತ್ತದೆ. ಸಂಪುರ್ಣ ಮರುಭೂಮಿ. ದಕ್ಷಿಣ ಅಮೆರಿಕದ ಸಮಶೀತೋಷ್ಣವಲಯದಲ್ಲಿದೆ. ಆಂಡೀಸ್ ಪರ್ವತಕ್ಕೆ ಹೊಂದಿಕೊಂಡಿರುವ ಪಶ್ಚಿಮ ಭಾಗದಲ್ಲಿ ಚಳಿಗಾಲದಲ್ಲಿ ಸ್ವಲ್ಪ ಮಳೆಯಾಗುವುದರಿಂದ ಕುರಿಗಳನ್ನು ಸಾಕುತ್ತಾರೆ. ಜನಸಂಖ್ಯೆ ಕೇವಲ 1ಳಿ ಲಕ್ಷ. ಕೆಲವೆಡೆಗಳಲ್ಲಿ ನೀರಾವರಿಯ ಸಹಾಯದಿಂದ ಒಕ್ಕಲುತನ ಮಾಡುತ್ತಾರೆ. ಸಮುದ್ರ ಮಟ್ಟದಿಂದ ೩೦೦-೯೦೦ ಮೀ ಎತ್ತರವಾಗಿದ್ದು ಅಲ್ಲಲ್ಲಿ ಗುಡ್ಡಗಳಿಂದ ಕೂಡಿದೆ. ಸಾಗುವಳಿಗೆ ಯೋಗ್ಯವಾದ ಪ್ರದೇಶ ಬಹಳ ಕಡಿಮೆ. ಅಭಿವೃದ್ಧಿ ಸಾಲದು. ಬೆಟ್ಟಗಳಲ್ಲಿ ಇತ್ತೀಚೆಗೆ ಎಣ್ಣೆಯನ್ನು ತೆಗೆಯುತ್ತಾರೆ. ಪಂಪಾಸ್ ಪ್ರದೇಶವೇ ಮುಖ್ಯ ಪ್ರಾಂತ್ಯ. ವ್ಯವಸಾಯವೇ ಪ್ರಧಾನ ಕಸಬು. ಬ್ಯೂನೆಸ್ ಐರಿಸ್ ಪ್ರಪಂಚದ ಪ್ರಮುಖ ನಗರದಲ್ಲಿ ಒಂದು. ರೋಜಾರಿಯೊದಲ್ಲಿ ಪ್ರಾಚೀನವಾದ ಒಂದು ವಿಶ್ವವಿದ್ಯಾಲಯವಿದೆ. ಈ ಪ್ರದೇಶದಲ್ಲಿ ಯುರೋಪ್ ಖಂಡದ ಎಲ್ಲ ಜನರೂ ಇದ್ದಾರೆ. ನಾಗರಿಕರಾಗಬೇಕೆನ್ನುವ ಎಲ್ಲರಿಗೂ ಸರ್ಕಾರ ಅನೇಕ ಬಗೆಯ ಸೌಲಭ್ಯಗಳನ್ನು ಒದಗಿಸಿದೆ. ಹೆಚ್ಚು ಸೌಲಭ್ಯಗಳಿರುವುದು ವಿಶೇಷವಾಗಿ ಇಟಾಲಿಯನ್ ಮತ್ತು ಸ್ಪ್ಯಾನಿಷ್ ಜನರಿಗೆ. ಇಲ್ಲಿ ೪೨೦೦೦ಕಿಮೀ ಉದ್ದದ ರೈಲುಮಾರ್ಗವಿದೆ. ಈ ದೇಶ ಶಿಕ್ಷಣರಂಗದಲ್ಲಿ ಬಹಳ ಪ್ರಗತಿಹೊಂದಿದೆ. ಆರು ವಿಶ್ವವಿದ್ಯಾನಿಲಯಗಳು, ಎರಡು ಸಾವಿರ ಮಾಧ್ಯಮಿಕ ಶಾಲೆಗಳು ಮತ್ತು ಹದಿನಾಲ್ಕು ಸಾವಿರ ಪ್ರಾಥಮಿಕ ಶಾಲೆಗಳು ಇವೆ. ಈ ದೇಶದಲ್ಲಿ ರೋಮನ್ ಕೆಥೊಲಿಕ್ ಪಂಥದವರೇ ಹೆಚ್ಚು. ಇಲ್ಲಿಯ ನಿರ್ಯಾತಗಳು ದಕ್ಷಿಣ ಅಮೆರಿಕದ ಒಟ್ಟು ನಿರ್ಯಾತದ ಶೇ ೧೨ ರಷ್ಟಿದೆ. ಇಲ್ಲಿಂದ ಗೋದಿ, ಗೋವಿನ ಜೋಳ, ಅಗಸೆ, ಮಾಂಸ ಮತ್ತು ಮಾಂಸದ ಪದಾರ್ಥಗಳು, ಉಣ್ಣೆ, ಚರ್ಮ, ಎಣ್ಣೆಕಾಳುಗಳು ರಫ್ತಾಗುವ ಮುಖ್ಯ ಪದಾರ್ಥಗಳು. ಇವುಗಳ ಪೈಕಿ ಶೇ ೨೩ರಷ್ಟು ಇಂಗ್ಲೆಂಡಿಗೆ, ಶೇ ೨೦ ರಷ್ಟು ಬ್ರಿಟಿಷ್ ರಾಜ್ಯಗಳಿಗೆ, ಶೇ ೧೧ ರಷ್ಟು ಜರ್ಮನಿಗೆ, ಶೇ ೭ ರಷ್ಟು ಇಟಲಿಗೆ, ಶೇ ೭ ರಷ್ಟು ಬ್ರೆಜಿಲ್ಗೆ ಮತ್ತು ಶೇ ೩೨ ರಷ್ಟು ಇತರ ರಾಷ್ಟ್ರಗಳಿಗೆ ಹೋಗುತ್ತವೆ. ಆಮದಾಗುವ ವಸ್ತುಗಳಲ್ಲಿ ಶೇ ೨೦ ರಷ್ಟು ಬ್ರಿಟಿಷ್ ರಾಷ್ಟ್ರಗಳಿಂದ, ಶೇ ೧೨ ರಷ್ಟು ಜರ್ಮನಿಯಿಂದ, ಶೇ ೮ರಷ್ಟು ಬ್ರೆಜಿಲ್ನಿಂದ, ಶೇ ೭ ರಷ್ಟು ವೆನಿಜೂಲದಿಂದ, ಶೇ ೭ ಜಪಾನಿನಿಂದ ಮತ್ತು ಶೇ ೪೬ರಷ್ಟು ಉಳಿದ ರಾಷ್ಟ್ರಗಳಿಂದ ಬರುತ್ತವೆ.

ಚರಿತ್ರೆ

José de San Martín (retrato, c.1828)
Portrait of General José de San Martin, Libertador of Argentina, Chile and Peru

೧೬ನೆಯ ಶತಮಾನದ ಮೊದಲ ದಶಕಗಳಲ್ಲಿ ಸ್ಪೇನ್ ಮತ್ತು ಪೋರ್ಚುಗಲ್ ದೇಶಗಳ ಸಾಹಸಿಗ ನಾವಿಕರು ದಕ್ಷಿಣ ಅಮೆರಿಕಕ್ಕೆ ಹೋಗಿ ಅಲ್ಲಿನ ದೇಶಗಳ ಸಂಪತ್ತನ್ನು ಸೂರೆಗೊಳ್ಳಲುಪಕ್ರಮಿಸಿದಾಗ ಪೆರು ಮುಂತಾದ ದೇಶಗಳಲ್ಲಿ ಅವರು ಕಂಡ ಬೆಳ್ಳಿ ಮತ್ತು ಚಿನ್ನದ ಗಣಿಗಳನ್ನಾಗಲಿ, ಬಹುಕಾಲದಿಂದ ಬೆಳೆದು ಬಂದಿದ್ದ ನಾಗರಿಕತೆಯನ್ನಾಗಲಿ ಆರ್ಜೆಂಟೀನದಲ್ಲಿ ಕಾಣಲಿಲ್ಲ. ಅಲ್ಲದೆ ಸಣ್ಣ ಸಣ್ಣ ಪಂಗಡಗಳನ್ನು ಮಾಡಿಕೊಂಡು ಅಲ್ಲಿ ವಾಸಿಸುತ್ತಿದ್ದ ಇಂಡಿಯನ್ನರಿಂದ ಪ್ರಬಲ ಪ್ರತಿಭಟನೆಯನ್ನೆದುರಿಸಬೇಕಾಯಿತು. ಜುಆನ್ ದ ಗಾರೆ ಎಂಬ ಸ್ಪೇನಿನ ಅಧಿಕಾರಿ ೧೫೮೦ರಲ್ಲಿ ಬ್ಯೂನೆಸ್ ಐರಿಸ್ ನಗರವನ್ನು ಸ್ಥಾಪಿಸಿ ಇಂಡಿಯನ್ನರ ಪ್ರಾಬಲ್ಯವನ್ನು ಮುರಿದ ಮೇಲೆ ಅರ್ಜೆಂಟೈನ ಸ್ಪೇನಿನ ಆಡಳಿತಕ್ಕೆ ಸೇರಿತೆನ್ನಬಹುದು. ೧೭೭೬ರಲ್ಲಿ ದಕ್ಷಿಣ ಅಮೆರಿಕದಲ್ಲಿ ಸ್ಪೇನಿಗೆ ಸೇರಿದ ದೇಶಗಳನ್ನೆಲ್ಲ ಒಂದು ಪ್ರಾಂತ್ಯವನ್ನಾಗಿ ಮಾಡಿದಾಗ ಬ್ಯೂನೆಸ್ ಐರಿಸ್ ಅದರ ರಾಜಧಾನಿಯಾಯಿತು. ನೆಪೋಲಿಯನ್ನನ ಕಾಲದಲ್ಲಿ ಬ್ರಿಟಿಷರು ದೇಶವನ್ನು ಸ್ವಾಧೀನಪಡಿಸಿಕೊಳ್ಳಲೆತ್ನಿಸಿ ವಿಫಲರಾದರು. ಈ ವಿಜಯದಿಂದ ಉತ್ತೇಜಿತರಾದ ಆರ್ಜೆಂಟೀನದ ಪ್ರಜೆಗಳು ಸ್ವಾತಂತ್ರ್ಯಕ್ಕಾಗಿ ಸ್ಪೇನಿನ ವಿರುದ್ಧ ಹೋರಾಡತೊಡಗಿದರು. ಕೊನೆಗೆ ೧೮೧೦ರಲ್ಲಿ ಪ್ರಜಾಧಿಪತ್ಯ ಸ್ಥಾಪಿತವಾಯಿತು. ಆದರೂ ಸುಲಭವಾಗಿ ದೊರೆತಿದ್ದ ಇಂಥ ಸಂಪದ್ಭರಿತ ದೇಶವನ್ನು ಬಿಟ್ಟು ಕೊಡಲು ಸ್ಪೇನ್ ಒಪ್ಪಲಿಲ್ಲ; ಹೋರಾಟ ಮುಂದುವರೆಯಿತು. ೧೮೪೨ರ ಕೊನೆಗೆ ಅರ್ಜೆಂಟೀನದ ಸ್ವಾತಂತ್ರ್ಯವನ್ನು ಸ್ಪೇನ್ ಒಪ್ಪಲೇಬೇಕಾಯಿತು. ಸ್ವಾತಂತ್ರ್ಯವನ್ನು ಗಳಿಸಿದರೂ ದೇಶದಲ್ಲಿ ಅಂತರ್ಯುದ್ಧಗಳು ನಡೆಯುತ್ತಲೇ ಬಂದವು. ನೆರೆ ದೇಶಗಳೊಂದಿಗೆ ಹೋರಾಟವೂ ನಡೆಯಿತು. ಇದು ೧೯ನೆಯ ಶತಮಾನದ ಉತ್ತರಾರ್ಧದಲ್ಲೆಲ್ಲ ನಡೆಯಿತು. ಚಿಲಿ ದೇಶದೊಂದಿಗೆ ನಡೆದ ಯುದ್ಧ ನಿಂತು, ಎರಡು ದೇಶಗಳ ಗಡಿಯ ಉಸ್ಪಲಾಟ ಕಣಿವೆಯಲ್ಲಿ, ಕ್ರೈಸ್ತನ ಬೃಹತ್ ಶಿಲಾವಿಗ್ರಹವೊಂದು ೧೯೦೨ರಲ್ಲಿ ಸ್ಧಾಪಿತವಾದಾಗ ನೆರೆ ದೇಶಗಳೊಡನೆ ಯುದ್ಧ ನಿಂತಿತೆನ್ನಬಹುದು. ದೇಶದ ರಾಜಕೀಯ ಪರಿಸ್ಥಿತಿ ಮಾತ್ರ ಮುಂದೂ ಸ್ಥಿಮಿತಕ್ಕೆ ಬರಲಿಲ್ಲ. ಸೈನ್ಯದ ಸಹಾಯದಿಂದ ನಿರಂಕುಶಪ್ರಭುತ್ವ ಮುಂದುವರಿಯಿತು. ಮೊದಲ ಮಹಾಯುದ್ಧದಲ್ಲಿ ಅರ್ಜೆಂಟೈನ ತಟಸ್ಥವಾಗುಳಿದರೂ ಎರಡನೆಯ ಮಹಾಯುದ್ಧದ ಕೊನೆಯ ಕಾಲದಲ್ಲಿ ಮಿತ್ರ ರಾಷ್ಟ್ರಗಳ ಪಕ್ಷವಹಿಸಿ ಹೋರಾಟಕ್ಕಿಳಿಯಬೇಕಾಯಿತು. ೧೯೪೫ರಲ್ಲಿ ಅದಕ್ಕೆ ವಿಶ್ವಸಂಸ್ಥೆಯ ಸದಸ್ಯತ್ವ ದೊರಕಿತು. ಸೈನ್ಯದ ಬೆಂಬಲ ಪಡೆದ ನಿರಂಕುಶಾಧಿಕಾರವಂತೂ ಇಂದಿಗೂ ಮುಂದುವರಿದಿದೆ.

ಸರ್ಕಾರ ಪದ್ಧತಿ

Congreso Nacional Argentino
ಅರ್ಜೆಂಟೀನ ಸಂಸತ್ತು

ಈ ದೇಶವನ್ನು ೨೨ ರಾಜಕೀಯ ವಿಭಾಗಗಳನ್ನಾಗಿ ವಿಂಗಡಿಸಿದ್ದಾರೆ. ಇಲ್ಲಿಯ ರಾಜ್ಯವ್ಯವಸ್ಥೆಯನ್ನು ಸಂಯುಕ್ತ ರಾಜ್ಯವ್ಯವಸ್ಥೆಯೆಂದು ಹೇಳಬಹುದು. ಪ್ರಾಂತ್ಯಗಳ ರಾಜ್ಯವ್ಯವಸ್ಥೆಯೇ ಬೇರೆ. ಇದೂ ಕೂಡ ಸಂವಿಧಾನದಲ್ಲಿ ಉಲ್ಲೇಖಿಸಲ್ಪಟ್ಟಿದೆ. ಆರ್ಜೆಂಟೀನದ ರಾಷ್ಟ್ರೀಯ ಸರ್ಕಾರದ ಕಾರ್ಯಾಂಗದ ಶ್ರೇಷ್ಠ ಅಧಿಕಾರಿಯಾದ ಅಧ್ಯಕ್ಷ ಪರೋಕ್ಷವಾಗಿ ಚುನಾಯಿಸಲ್ಪಡುತ್ತಾನೆ. ಉಪಾಧ್ಯಕ್ಷರೂ ಇದ್ದಾರೆ. ಇವರ ಅಧಿಕಾರಾವಧಿ ಆರು ವರ್ಷ. ಶಾಸನಾಂಗದಲ್ಲಿ ಸೆನೆಟ್ ಮತು ಪ್ರತಿನಿಧಿ ಸಭೆಯೆಂಬ ಎರಡು ಸಭೆಗಳಿವೆ. ಸೆನೆಟ್ ಸದಸ್ಯರನ್ನು ಪರೋಕ್ಷವಾಗಿಯೂ ಪ್ರತಿನಿಧಿ ಸಭೆಯ ಸದಸ್ಯರನ್ನು ನೇರವಾಗಿಯೂ ಆರಿಸಲಾಗುತ್ತದೆ. ಶಾಸಕರ ಅಧಿಕಾರಾವಧಿ ಆರು ವರ್ಷ. ಕಡೆಯದಾಗಿ, ಆರ್ಜೆಂಟೀನದಲ್ಲಿ ಸುಪ್ರೀಮ್ಕೋರ್ಟಿನ ಹಿರಿಯತನದಲ್ಲಿ ನ್ಯಾಯಾಂಗ ಇಲಾಖೆ ಕಾರ್ಯ ನಿರ್ವಹಿಸುವುದು.

Casa Rosada 2005-01-06
ಅರ್ಜೆಂಟೀನ ಅಧ್ಯಕ್ಷರ ಕಾರ್ಯಾಲಯ

ಆರ್ಜೆಂಟೀನ ಅಮೆರಿಕ ಸಂಸ್ಥಾನದ ಸರ್ಕಾರ ವ್ಯವಸ್ಥೆಯನ್ನು ರೂಪಿಸಿಕೊಂಡರೂ ಈ ರಾಷ್ಟ್ರದಲ್ಲಿ ಭದ್ರ ಸರ್ಕಾರಗಳೇರ್ಪಡಲು ಆತಂಕಗಳುಂಟಾಗಿವೆ. ಆಗಾಗ್ಗೆ ಸೈನಿಕ ಕ್ರಾಂತಿಗಳು ಸಂಭವಿಸುತ್ತಿವೆ. ಅಧಿಕಾರದ ಹೋರಾಟ ತೀವ್ರವಾಗಿ ನಡೆದಿದೆ. ೧೯೪೨ರಲ್ಲಿ ಸೈನಿಕ ಕ್ರಾಂತಿ ಸಂಭವಿಸಿತು. ಇದರ ಫಲವಾಗಿ ರಾಜಕೀಯ ಪಕ್ಷಗಳು ಕಾನೂನುಬಾಹಿರ ಸಂಸ್ಥೆಗಳಾದವು. ಚುನಾವಣೆಗಳು ರದ್ದಾದವು. ಚುನಾಯಿತ ಸಭೆಗಳಿಲ್ಲದಾದವು. ಈ ಸಂದರ್ಭದಲ್ಲಿ ಮಹತ್ತ್ವಾಕಾಂಕ್ಷೆಯ ವ್ಯಕ್ತಿ ಪೆರೋನ್ ಅಧಿಕಾರಕ್ಕೆ ಬಂದ. ೧೯೪೬ರಲ್ಲಿ ಅಧ್ಯಕ್ಷನಾಗಿ ಚುನಾಯಿಸಲ್ಪಟ್ಟ. ತನ್ನ ಅಧಿಕಾರವನ್ನು ಕಾಯ್ದುಕೊಳ್ಳಲು ಹೊಸ ಸಂವಿಧಾನವನ್ನು ರಚಿಸಿದ. ಈ ಪ್ರಕಾರವಾಗಿ ಅಧ್ಯಕ್ಷ ಎಷ್ಟು ಬಾರಿಯಾದರೂ ಚುನಾವಣೆಗೆ ನಿಲ್ಲಲು ಅವಕಾಶವಾಯಿತು. ವಾಸ್ತವವಾಗಿ ಪೆರೋನ್ ಸರ್ವಾಧಿಕಾರಿಯಾದ. ಇವನ ಹೆಂಡತಿ ಅನಧಿಕೃತ ರಾಜತಾಂತ್ರಿಕ ವ್ಯಕ್ತಿಯಾಗಿ ಪ್ರಸಿದ್ಧಿಗಳಿಸಿದಳು.

Tribunales 1
ಅರ್ಜೆಂಟೀನದ ಉಚ್ಚ ನ್ಯಾಯಾಲಯ

ಆರ್ಜೆಂಟೀನ ತನ್ನದೇ ಆದ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿದೆ. ಇಲ್ಲಿಯ ಬಹುಸಂಖ್ಯಾತ ಜನ ರೋಮನ್ ಕೆಥೊಲಿಕ್ ಪಂಥಕ್ಕೆ ಸೇರಿದವರು. ಸಂವಿಧಾನ ಸರ್ವರಿಗೂ ಧಾರ್ಮಿಕ ಸ್ವಾತಂತ್ರ್ಯ ಕೊಟ್ಟಿದೆ. ನೆರೆಹೊರೆಯ ದೊಡ್ಡ ರಾಷ್ಟ್ರಗಳೊಡನೆ ಹೆಚ್ಚಿನ ಸೌಹಾರ್ದವನ್ನು ಸಾಧಿಸಿದಲ್ಲಿ ದೇಶ ಆರ್ಥಿಕವಾಗಿ ಮುಂದುವರಿಯಲು ಸಾಕಷ್ಟು ಅವಕಾಶಗಳಿವೆ.

ಬಾಹ್ಯ ಸಂಪರ್ಕಗಳು

Government
Travel & tourism
Overview

ಉಲ್ಲೇಖಗಳು

Logo of SACN ದಕ್ಷಿಣ ಅಮೇರಿಕ ಖಂಡದ ದೇಶಗಳು
ಅರ್ಜೆಂಟೀನ | ಬೊಲಿವಿಯ | ಬ್ರೆಜಿಲ್ | ಚಿಲಿ | ಕೊಲೊಂಬಿಯ | ಎಕ್ವಡಾರ್ | ಗಯಾನ | ಪೆರಗ್ವೆ | ಪೆರು | ಸುರಿನಾಮ್ | ಉರುಗ್ವೆ | ವೆನೆಜುವೆಲಾ
ಉರುಗ್ವೆ

ಉರುಗ್ವೆ, ಅಧಿಕೃತವಾಗಿ ಉರುಗ್ವೆ ಪೂರ್ವ ಗಣರಾಜ್ಯ (República Oriental del Uruguay) ಆಗ್ನೇಯ ದಕ್ಷಿಣ ಅಮೇರಿಕದ ಅತಿಪುಟ್ಟ ಸ್ವತಂತ್ರದೇಶ ದೇಶ. ಇದರ ರಾಜಧಾನಿ ಮಾಂಟೆವಿಡಿಯೊ. ಇದರ ಉತ್ತರಕ್ಕೆ ಬ್ರೆಜಿಲ್, ಪಶ್ಚಿಮಕ್ಕೆ ಅರ್ಜೆಂಟೀನ, ಮತ್ತು ಆಗ್ನೇಯಕ್ಕೆ ಅಟ್ಲಾಂಟಿಕ್ ಮಹಾಸಾಗರಗಳಿವೆ.

೧೮೨೮ರಲ್ಲಿ ಬ್ರೆಜಿಲ್, ಅರ್ಜೆಂಟೀನ ಮತ್ತು ಸ್ಪೇನ್ಗಳ ಮಧ್ಯೆ ನಡೆದ ವಿವಾದದ ಪರಿಣಾಮವಾಗಿ ಈ ದೇಶ ಸೃಷ್ಟಿತವಾಯಿತು. ಸಾಂವಿಧಾನಿಕ ಪ್ರಜಾತಂತ್ರವಾಗಿರುವ ಈ ದೇಶ ರಾಷ್ಟ್ರಪತಿ ಪದ್ಧತಿಯ ಸರ್ಕಾರವನ್ನು ಹೊಂದಿದೆ.

ಇದರ ವಿಸ್ತೀರ್ಣ 1,77,508 ಚ.ಕಿ.ಮೀ. (68,536 ಚ.ಮೈ.). ಉತ್ತರದಲ್ಲಿ ಬ್ರೆಜಿಲ್, ದಕ್ಷಿಣದಲ್ಲಿ ರಿಯೊ ದೆ ಲಾ ಪ್ಲಾಟಾ ನದಿಯ ಅಳಿವೆ, ಪಶ್ಚಿಮದಲ್ಲಿ ಉರುಗ್ವೇ ನದಿ, ಪೂರ್ವದಲ್ಲಿ ಅಟ್ಲಾಂಟಿಕ್ ಸಾಗರ - ಇವು ದೇಶದ ಮೇರೆಗಳು.

ಚಿಲಿ

ದಕ್ಷಿಣ ಅಮೇರಿಕದ ಕರಾವಳಿಯುದ್ದಕ್ಕೂ ಪಟ್ಟಿಯಂತೆ ಆಂಡಿಸ್ ಪರ್ವತ ಮತ್ತು ಪೆಸಿಫಿಕ್ ಮಹಾಸಾಗರಗಳ ನಡುವೆ ಚಾಚಿರುವ ದೇಶವೇ ಚಿಲಿ. ಇದರ ಪೂರ್ವಕ್ಕೆ ಅರ್ಜೆಂಟೀನ, ಈಶಾನ್ಯಕ್ಕೆ ಬೊಲಿವಿಯಾ ಮತ್ತು ಉತ್ತರಕ್ಕೆ ಪೆರು ದೇಶಗಳಿವೆ.

ಜಲಪಾತ

ಜಲಪಾತಗಳು ಹರಿಯುತ್ತಿರುವ ನೀರು ಎತ್ತರದಿಂದ ದುಮುಕುವ ಒಂದು ಭೌಗೋಳಿಕ ಲಕ್ಷಣ. ಸಾಮಾನ್ಯವಾಗಿ ಬೆಟ್ಟಪ್ರದೇಶಗಳಲ್ಲಿ ಏರು ತಗ್ಗುಗಳಲ್ಲಿ ಹರಿಯುವ ನದಿಗಳು ಸೃಷ್ಟಿಸುತ್ತವೆ.ಜಲಪಾತಗಳು ಸಾಮಾನ್ಯವಾಗಿ ನದಿಯ ಮೇಲಿನ ಪಥವುಗಳಿಂದ ರಚನೆಯಾಗುತ್ತವೆ.ನೀರಿನ ರಭಸ, ಹಾಲ್ನೊರೆಯಂತಹ ಬಣ್ಣ, ಗಂಭೀರವಾದ ಸದ್ದು, ಹತ್ತಿರದ ಸ್ಥಳಗಳಲ್ಲಿ ತಂಪಾದ ನೀರಿನ ಚಿಕ್ಕ ಚಿಕ್ಕ ಹನಿಗಳ ಸಿಂಚನ, ಇವೆಲ್ಲವೂ ಜನರನ್ನು ಆಕರ್ಷಿಸುತ್ತವೆ.

ಕರ್ನಾಟಕದ ಹಲವು ಜಲಪಾತಗಳು

೮ಅಬ್ಬೆ ಜಲಪಾತ

ಇರುಪ್ಪು ಜಲಪಾತ

ಸುತನಬ್ಬಿ / ಹನುಮನ ಗುಂಡಿ ಜಲಪಾತ

ಹಿಡ್ಲುಮನೆ / ಹಿತ್ಲುಮನೆ ಜಲಪಾತ

ಗಗನಚುಕ್ಕಿ ಜಲಪಾತ (ಶಿವನ ಸಮುದ್ರ">ಶಿವನ ಸಮುದ್ರ)

ಭರಚುಕ್ಕಿ ಜಲಪಾತ (ಶಿವನ ಸಮುದ್ರ">ಶಿವನ ಸಮುದ್ರ)

ಹೆಬ್ಬೆ ಜಲಪಾತ

ಅಬ್ಬೆ ಜಲಪಾತ

ಮಾಗೋಡು ಜಲಪಾತ

ಸಿರಿಮನೆ ಜಲಪಾತRead more at: http://kannada.nativeplanet.com/travel-guide/beautiful-waterfalls-south-india-000035.html

ಉಲ್ಲೇಖಗಳು

Reflist http://www.kannadakavi.com/janapadajagattu/euuru/waterfalls.htm

ಜೂನ್ ೨೦

ಜೂನ್ ೨೦ - ಜೂನ್ ತಿಂಗಳ ಇಪ್ಪತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೭೧ನೇ ದಿನ (ಅಧಿಕ ವರ್ಷದಲ್ಲಿ ೧೭೨ ನೇ ದಿನ).

ಟೆಂಪ್ಲೇಟು:ಜೂನ್ ೨೦೧೯

ತಲಾವಾರು ಒಟ್ಟಾರೆ ಆಂತರಿಕ ಉತ್ಪನ್ನದ ಪಟ್ಟಿ

ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯವರು ತಯಾರಿಸಿರುವ ಪಟ್ಟಿಯ ಪ್ರಕಾರ ವಿವಿಧ ರಾಷ್ಟ್ರಗಳ ತಲಾವಾರು ಒಟ್ಟಾರೆ ಆಂತರಿಕ ಉತ್ಪನ್ನ ಇಂತಿದೆ.

ದಕ್ಷಿಣ ಅಮೇರಿಕ

ದಕ್ಷಿಣ ಅಮೇರಿಕ - ಪೆಸಿಫಿಕ್ ಸಾಗರದ ಪಶ್ಚಿಮ ಭಾಗದಲ್ಲಿ, ಮತ್ತು ಅಟ್ಲಾಂಟಿಕ್ ಸಾಗರದ ಉತ್ತರ ಭಾಗದಲ್ಲಿ ನೆಲೆಗೊಂಡಿರುವ ಖಂಡ. ಇದರ ಉತ್ತರ ಭಾಗಕ್ಕೆ ಉತ್ತರ ಅಮೇರಿಕ ಖಂಡ ಮತ್ತು ಕೆರಿಬ್ಬಿಯನ್ ಸಮುದ್ರವು ಇವೆ.

ಅಮೆರಿಗೊ ವೆಸ್ಪುಚಿ ಎಂಬ ಯೂರೋಪಿಯನ್ ನಾವಿಕ ಮೊದಲ ಬಾರಿಗೆ ಅಮೆರಿಕ ಖಂಡಗಳು "ಪೂರ್ವ ಇಂಡೀಸ್" ಅಲ್ಲ, ಒಂದು ವಿಶಿಷ್ಟ ಖಂಡ ಎಂದು ತಿಳಿಸಿಕೊಟ್ಟನು. ಈ ಕಾರಣದಿಂದ ಈ ಖಂಡಗಳನ್ನು ಇವನ ಹೆಸರನ್ನು ಆಧರಿಸಿ "ಅಮೆರಿಕ" ಎಂದು ಕರೆಯಲಾಗಿದೆ.

ದಕ್ಷಿಣ ಅಮೆರಿಕ ಖಂಡದ ವಿಸ್ತೀರ್ಣ ೧,೭೮,೪೦,೦೦೦ ಚದರ ಕಿ.ಮಿ. ಅಥವಾ ಭೂಮಿಯ ಶೇಕಡಾ ೩.೫% ರಷ್ಟು. ೨೦೦೫ರಲ್ಲಿ ಇದರ ಜನಸಂಖ್ಯೆ ಸುಮಾರು ೩೭,೧೦,೦೦,೦೦೦. ದಕ್ಷಿಣ ಅಮೆರಿಕ ಖಂಡದ ವಿಸ್ತೀರ್ಣವು ಏಷ್ಯಾ, ಆಫ್ರಿಕಾ, ಮತ್ತು ಉತ್ತರ ಅಮೆರಿಕ ಖಂಡಗಳ ನಂತರ ನಾಲ್ಕನೇ ಅತಿದೊಡ್ಡದಾಗಿದೆ. ಜನಸಂಖ್ಯೆ ದೃಷ್ಟಿಯಿಂದ ಇದಕ್ಕೆ ಐದನೆಯ ಸ್ಥಾನವಿದೆ.

ದನ

ದನಗಳು ದೊಡ್ಡ ಪಳಗಿಸಿದ ಗೊರಸುಳ್ಳ ಪ್ರಾಣಿಗಳ ಅತಿ ಸಾಮಾನ್ಯ ವಿಧ. ಅವು ಬೋವಿನಿ ಉಪಕುಟುಂಬದ ಒಂದು ಪ್ರಮುಖ ಆಧುನಿಕ ಸದಸ್ಯವಾಗಿವೆ, ಬೋಸ್ ಪ್ರಜಾತಿಯ ಅತಿ ವ್ಯಾಪಕ ಜಾತಿಯಾಗಿವೆ, ಮತ್ತು ಅತಿ ಸಾಮಾನ್ಯವಾಗಿ ಒಟ್ಟಾರೆಯಾಗಿ ಬೋಸ್ ಪ್ರೀಮಿಗೇನ್ಯೂಸ್ ಎಂದು ವರ್ಗೀಕರಿಸಲ್ಪಡುತ್ತವೆ. ದನಗಳನ್ನು ಮಾಂಸಕ್ಕಾಗಿ (ಗೋಮಾಂಸ ಮತ್ತು ವೀಲ್) ಜಾನುವಾರುಗಳಾಗಿ, ಹಾಲು ಮತ್ತು ಇತರ ಕ್ಷೀರೋತ್ಪನ್ನಗಳಿಗಾಗಿ ಹೈನು ಪ್ರಾಣಿಗಳಾಗಿ, ಮತ್ತು ಭಾರ ಎಳೆಯುವ ಪ್ರಾಣಿಗಳಾಗಿ (ಎತ್ತುಗಳು ಅಥವಾ ಗವ್ಯ ಪ್ರಾಣಿಗಳು) (ಬಂಡಿಗಳು, ನೇಗಿಲುಗಳು ಮತ್ತು ಇತ್ಯಾದಿಗಳನ್ನು ಎಳೆಯುವುದಕ್ಕಾಗಿ) ಬಳಸಲಾಗುತ್ತದೆ.

ದೇಶಗಳ ರಾಷ್ಟೀಯ ಉತ್ಪನ್ನದ ಪಟ್ಟಿ

ಈ ಲೇಖನದಲ್ಲಿ ದೇಶಗಳ ರಾಷ್ಟ್ರೀಯ ಉತ್ಪನ್ನಗಳನ್ನು ಪಟ್ಟಿ ಮಾಡಲಾಗಿದೆ. ಒಂದು ರಾಷ್ಟ್ರದಲ್ಲಿ ಒಂದು ವರ್ಷದ ಅವಧಿಯಲ್ಲಿ ಉತ್ಪಾದಿಸಲಾದ ಎಲ್ಲ ಅಂತಿಮ ಸರಕುಗಳ ಒಟ್ಟು ಮೌಲ್ಯ ಮತ್ತು ಆ ರಾಷ್ಟ್ರದಲ್ಲಿ ಅದೇ ಅವಧಿಯಲ್ಲಿ ಉತ್ಪಾದಿಸಲಾದ ಎಲ್ಲ ಸೇವಾ ವ್ಯವಹಾರಗಳ ಒಟ್ಟು ಮೌಲ್ಯಗಳೆರಡರ ಮೊತ್ತವು ಆ ರಾಷ್ಟ್ರದ ಒಟ್ಟಾರೆ ಆಂತರಿಕ ಉತ್ಪನ್ನ ಅಥವಾ ರಾಷ್ಟ್ರೀಯ ಉತ್ಪನ್ನವೆಂದು (ಜಿ.ಡಿ.ಪಿ.) ಕರೆಯಿಸಿಕೊಳ್ಳುವುದು. ಈ ಕೆಳಗೆ ಕೊಟ್ಟಿರುವ ಪಟ್ಟಿಗಳಲ್ಲಿ ಜಿಡಿಪಿಯನ್ನು ಕೊಳ್ಳುವ ಶಕ್ತಿಯ ಸಮಾನತೆಯ ಆಧಾರದ ಮೇಲೆ ಗಣಿಸಲಾಗಿದೆ. ಇಲ್ಲಿ ಮೂರು ವಿಭಿನ್ನ ಮೂಲಗಳು ತಯಾರಿಸಿರುವ ಪಟ್ಟಿಗಳನ್ನು ನೀಡಲಾಗಿದೆ.

ದೇಶಗಳ ವಿಸ್ತೀರ್ಣ ಪಟ್ಟಿ

ವಿಶ್ವದ ರಾಷ್ಟ್ರಗಳನ್ನು ಅವುಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ಸ್ಥಾನಬದ್ಧಗೊಳಿಸಿ ಕೆಳಕಂಡ ಪಟ್ಟಿಕೆಯಲ್ಲಿ ತೋರಿಸಲಾಗಿದೆ. ಈ ಪಟ್ಟಿಯಲ್ಲಿ ಸಾರ್ವಭೌಮ ರಾಷ್ಟ್ರಗಳು ಮತ್ತು ಸ್ವಯಮಾಡಳಿತ ಹೊಂದಿರುವ ಅವಲಂಬಿತ ಪ್ರಾಂತ್ಯಗಳು ಇವೆ. ಇಲ್ಲಿ ತೋರಿಸಿರುವ ವಿಸ್ತೀರ್ಣವು ದೇಶದ ಒಟ್ಟು ನೆಲ ಮತ್ತು ನಾಡಿನೊಳಗೆ ಇರುವ ಜಲಪ್ರದೇಶಗಳ (ಸರೋವರ, ನದಿ ಮತ್ತು ಜಲಾಶಯ) ವಿಸ್ತೀರ್ಣಗಳು ಸೇರಿವೆ. ಅಂಟಾರ್ಕಟಿಕದ ಹಲ ಪ್ರದೇಶಗಳ ಮೇಲೆ ನಾನಾ ರಾಷ್ಟ್ರಗಳು ಸಾಧಿಸುವ ಸ್ವಾಮ್ಯವನ್ನು ಇಲ್ಲಿ ಪರಿಗಣಿಸಲಾಗಿಲ್ಲ.

ಪೆರಗ್ವೆ

ಪೆರಗ್ವೆ, (ಅಧಿಕೃ‍ತವಾಗಿ ಪರಾಗ್ವೆ ಗಣರಾಜ್ಯ),ದಕ್ಷಿಣ ಅಮೆರಿಕದ ಸರಿಸುಮಾರು ಮಧ್ಯಭಾಗದಲ್ಲಿರುವ ಒಂದು ರಾಷ್ಟ್ರ. ಪೆರಗ್ವೆ ನದಿಯ ಎರಡೂ ದಂಡೆಗಳ ಮೇಲಿರುವ ಇದು ದಕ್ಷಿಣ ಮತ್ತು ನೈರುತ್ಯಗಳಲ್ಲಿ ಅರ್ಜೆಂಟೀನವನ್ನು, ಈಶಾನ್ಯದಲ್ಲಿ ಬ್ರೆಜಿಲ್ ದೇಶವನ್ನು ಮತ್ತು ವಾಯವ್ಯದಲ್ಲಿ ಬೊಲಿವಿಯ ದೇಶಗಳನ್ನು ಹೊಂದಿ ದಕ್ಷಿಣ ಅಮೆರಿಕ ಖಂಡದ ಹೃದಯ ಭಾಗದಲ್ಲಿದೆ. ಗ್ವರಾನಿ ಭಾಷೆಯಲ್ಲಿ ಇದರ ಅರ್ಥ "ದೊಡ್ಡ ನದಿಯಿಂದ" ಎಂದು. ಪರಾನ ನದಿಯೇ ಈ ದೊಡ್ಡ ನದಿ.

ಬೊಲಿವಿಯ

ಬೊಲಿವಿಯ ಗಣರಾಜ್ಯ (República de Bolivia), ಸಿಮೊನ್ ಬೊಲಿವಾರ್ನ ಸ್ಮರಣಾರ್ಥವಾಗಿ ಹೆಸರಿಡಲಾಗಿರುವ ದಕ್ಷಿಣ ಅಮೇರಿಕದ ಒಂದು ಭೂಆವೃತ ದೇಶ. ಇದರ ಉತ್ತರ ಮತ್ತು ಪೂರ್ವಗಳಿಗೆ ಬ್ರೆಜಿಲ್, ದಕ್ಷಿಣಕ್ಕೆ ಪರಾಗ್ವೆ ಮತ್ತು ಅರ್ಜೆಂಟೀನ, ಮತ್ತು ಪಶ್ಚಿಮಕ್ಕೆ ಚಿಲಿ ಮತ್ತು ಪೆರು ದೇಶಗಳಿವೆ.

ಬ್ಯೂನಸ್ ಐರಿಸ್

{{#if:|

ಬ್ಯೂನಸ್ ಐರಿಸ್ ಅಥವಾ ಬ್ವೇನೋಸ್ ಐರೇಸ್ ಅರ್ಜೆಂಟೀನ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಆರ್ಜೆಂಟೀನದ ಒಂದು ಪ್ರಾಂತ್ಯವೂ ಹೌದು. ಇದು ದಕ್ಷಿಣ ಅಮೇರಿಕ ಖಂಡದ ಆಗ್ನೇಯ ಭಾಗದಲ್ಲಿರುವ ಸಮುದ್ರ ತೀರದಲ್ಲಿ ಸ್ಥಿತವಾಗಿದೆ. ಬೃಹತ್ ಬ್ಯೂನಸ್ ಐರಿಸ್ ನಗರ ಪ್ರದೇಶವು ಸುಮಾರು ೧೩ ದಶಲಕ್ಷ ಜನಸಂಖ್ಯೆಯನ್ನು ಹೊಂದಿದೆ.

ಬ್ರೆಜಿಲ್

ದಕ್ಷಿಣ ಅಮೇರಿಕದ ಜನಸಂಖ್ಯೆ ಮತ್ತು ವಿಸ್ತೀರ್ಣಗಳ ಆಧಾರದ ಮೇಲೆ ಅತಿ ದೊಡ್ಡ ದೇಶ ಬ್ರೆಜಿಲ್. ಬ್ರೆಜಿಲ್ ದಕ್ಷಿಣ ಅಮೇರಿಕದ ಮಧ್ಯದಿಂದ ಅಟ್ಲಾಂಟಿಕ್ ಮಹಾಸಾಗರದ ವರೆಗೆ ಹಬ್ಬಿರುವ ಈ ದೇಶ ಯುರುಗ್ವೆ, ಅರ್ಜೆಂಟೀನ, ಪೆರಗ್ವೆ, ಬೊಲಿವಿಯಾ, ಪೆರು, ಕೊಲಂಬಿಯಾ, ವೆನೆಜುವೆಲಾ, ಗಯಾನಾ, ಸುರಿನಾಮ್, ಮತ್ತು ಫ್ರೆಂಚ್ ಗಯಾನಾಗಳ ಜೊತೆ ಗಡಿಯನ್ನು ಹೊಂದಿದೆ. ಈಕ್ವೆಡಾರ್ ಮತ್ತು ಚಿಲಿ ದೇಶಗಳನ್ನು ಹೊರತುಪಡಿಸಿ ದಕ್ಷಿಣ ಅಮೇರಿಕದ ಎಲ್ಲ ದೇಶಗಳ ಜೊತೆಯೂ ಗಡಿಯನ್ನು ಹೊಂದಿದೆ. ತನ್ನ ಬೃಹತ್ ನೈಸರ್ಗಿಕ ಸಂಪನ್ಮೂಲಗಳು ಮತ್ತು ಅಗ್ಗವಾದ ಕಾರ್ಮಿಕರ ದೆಸೆಯಿಂದ ದಕ್ಷಿಣ ಅಮೆರಿಕದ ಅತಿ ಪ್ರಮುಖ ಆರ್ಥಿಕ ಶಕ್ತಿ ಹಾಗೂ ಪ್ರಾದೇಶಿಕ ನಾಯಕತ್ವವಾಗಿ ಬೆಳೆದಿದೆ. ಪೋರ್ಚುಗಲ್ ದೇಶದ ವಸಾಹತು ಆಗಿದ್ದ ಕಾರಣ ಪೋರ್ಚುಗೀಸ್ ಬ್ರೆಜಿಲ್ ದೇಶದ ಅಧಿಕೃತ ಭಾಷೆಯಾಗಿದೆ. ಪ್ರಪಂಚದ ಎರಡನೇ ಅತಿ ದೊಡ್ಡ ಕ್ರೈಸ್ತ ಧರ್ಮೀಯರ ದೇಶವೂ ಇದಾಗಿದೆ.

ಮಾನವ ಅಭಿವೃದ್ಧಿ ಸೂಚ್ಯಂಕಕ್ಕನುಗುಣವಾಗಿ ರಾಷ್ಟ್ರಗಳ ಪಟ್ಟಿ

ರಾಷ್ಟ್ರಗಳು ತಮ್ಮ ಮಾನವ ಅಭಿವೃದ್ಧಿ ಸೂಚ್ಯಂಕಕ್ಕೆ ಅನುಗುಣವಾಗಿ ಉನ್ನತ, ಮಧ್ಯಮ ಮತ್ತು ನಿಮ್ನತಮ ಎಂಬೀ ಮೂರು ಗುಂಪುಗಳಲ್ಲಿ ಸ್ಥಾನ ಪಡೆಯುತ್ತವೆ.: (ಉನ್ನತ, ಮಧ್ಯಮ, ಮತ್ತು ನಿಮ್ನತಮ ಮಾನವ ಅಭಿವೃದ್ಧಿ).

ವೆನೆಜುವೆಲಾ

ವೆನೆಜುವೆಲಾ (ಮೂಲ ಉಚ್ಚರಣೆ: ವೆನೆಜ್ವೆಲಾ) ದಕ್ಷಿಣ ಅಮೇರಿಕ ಖಂಡದ ಉತ್ತರ ಭಾಗದಲ್ಲಿರುವ ಕೆರಿಬ್ಬಿಯನ್ ಸಮುದ್ರದ ಕರಾವಳಿ ದೇಶ. ಇದರ ದಕ್ಷಿಣಕ್ಕೆ ಬ್ರೆಜಿಲ್, ಪೂರ್ವಕ್ಕೆ ಗಯಾನ, ಮತ್ತು ಪಶ್ಚಿಮಕ್ಕೆ ಕೊಲಂಬಿಯಾ ದೇಶಗಳಿವೆ.

ಪೂರ್ವದಲ್ಲಿ ಸ್ಪೇನ್ ವಸಾಹತಾದ ವೆನೆಜುವೆಲಾ ಒಂದು ಸಂಯುಕ್ತ ಗಣರಾಜ್ಯ. ಗಯಾನ ಮತ್ತು ಕೊಲಂಬಿಯಾಗಳೊಂದಿಗೆ ಗಡಿವಿವಾದವನ್ನು ಹೊಂದಿರುವ ಇದು ಪೆಟ್ರೋಲಿಯಂ ಉದ್ಯಮ, ಜೀವ ವೈವಿಧ್ಯ, ಮತ್ತು ನೈಸರ್ಗಿಕ ಸೌಂದರ್ಯಗಳಿಗೆ ಹೆಸರಾಗಿದೆ.

ಸರೋವರ

ಭೂಪ್ರದೇಶದಿಂದ ಆವೃತವಾಗಿರುವ

ಪ್ರಮಾಣದ ಜಲಸಮೂಹಗಳಿಗೆ ಸರೋವರ ಎನ್ನುತ್ತಾರೆ. ಪ್ರಪಂಚದ ಬಹುಪಾಲು ಸರೋವರಗಳು ಸಿಹಿ ನೀರನ್ನು ಹೊಂದಿರುವವು. ಭೂಮಿಯ ಉತ್ತರ ಗೋಳಾರ್ಧದಲ್ಲಿ, ಅದರಲ್ಲೂ ಉತ್ತರ ಅಕ್ಷಾಂಶಗಳಲ್ಲಿ ಇವು ಹೆಚ್ಚಾಗಿ ಕಂಡುಬರುತ್ತವೆ. ಅತ್ಯಂತ ದೊಡ್ಡ ಸರೋವರಗಳು ಒಳಪ್ರದೇಶದ ಸಮುದ್ರಗಳೆಂದೂ ಕರೆಯಲ್ಪಡುತ್ತವೆ. ಶೇಕಡ ೬೦ಕ್ಕೂ ಹೆಚ್ಚು ಸರೋವರಗಳನ್ನು ಕೆನಡದಲ್ಲಿ ಕಾಣಬಹುದು. ಫಿನ್‌ಲ್ಯಾಡ್‌ ಸಾವಿರ ಸರೋವರಗಳ ಭೂಮಿಯೆಂದು ಕರೆಯಲ್ಪಟ್ಟಿದೆ. ಸರೋವರದ ನೀರು ನದಿಗಳು ಹರಿದಂತೆ ಹರಿಯುವುದಿಲ್ಲ.

ಮಾನವರು ವಿದ್ಯುಚ್ಛಕ್ತಿ ಉತ್ಪಾದನೆಗೆ, ಕುಡಿಯುವ ನೀರಿಗೆ, ಕೈಗಾರಿಕೆಗೆ ಮತ್ತಿತರ ಉಪಯೋಗಗಳಿಗೆ ಹಲವು ಸರೋವರಗಳನ್ನು ಕೃತಕವಾಗಿ ಕೂಡ ನಿರ್ಮಿಸಿದ್ದಾರೆ.

ಸ್ಪ್ಯಾನಿಷ್ ಭಾಷೆ

ಸ್ಪ್ಯಾನಿಷ್ ( español ) ಅಥವಾ ಕ್ಯಾಸ್ಟಿಲಿಯನ್ (castellano) ಸ್ಪೇನ್ನ ಉತ್ತರ ಭಾಗದ ಮೂಲದ ಒಂದು ರೊಮಾನ್ಸ್ ಭಾಷೆ. ಇಂದು ಇದು ಸ್ಪೇನ್ ಮತ್ತು ೨೧ ಇತರ ದೇಶಗಳ ಅಧಿಕೃತ ಭಾಷೆ. ಸಂಯುಕ್ತ ರಾಷ್ಟ್ರಗಳ ಸಂಸ್ಥೆಯ ೬ ಅಧಿಕೃತ ಭಾಷೆಗಳಲ್ಲಿ ಇದೂ ಒಂದು.

ಇತರ ಭಾಷೆಗಳು

This page is based on a Wikipedia article written by authors (here).
Text is available under the CC BY-SA 3.0 license; additional terms may apply.
Images, videos and audio are available under their respective licenses.